“18th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಪಕ್ಷಿಧಾಮ ರಂಗನತಿಟ್ಟು

 • ಸುದ್ಧಿಯಲ್ಲಿ ಏಕಿದೆ?ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆಆರ್​ಎಸ್​ ಜಲಾಶಯಕ್ಕೆ ವಿಪರೀತ ನೀರು ಹರಿದುಬರುತ್ತಿದೆ. ಜಲಾಶಯದಿಂದ ನಿತ್ಯ 25 ಕ್ಯೂಸೆಕ್ಸ್ ಅಡಿ​ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಜಲಾವೃತಗೊಂಡಿದೆ.

ರ೦ಗನತಿಟ್ಟು ಪಕ್ಷಿಧಾಮ ಬಗ್ಗೆ

 • ರ೦ಗನತಿಟ್ಟು ಪಕ್ಷಿಧಾಮ ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ.ಕೇವಲ 67 ಚದುರ ಕಿಲೋಮೀಟರ್ ವಿಸ್ತೀರ್ಣದ ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ  ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ.  ರ೦ಗನತಿಟ್ಟು ಚರಿತ್ರಾಳ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ

ಶಾಲಾ ಮಕ್ಕಳಿಗೆ ವಿಮೆ

 • ಸುದ್ಧಿಯಲ್ಲಿ ಏಕಿದೆ ?ಹಠಾತ್ ಎದುರಾಗುವ ಸಮಸ್ಯೆ ಗಳಿಗೆ ಹಣ ಹೊಂದಿಸಲು ಪಾಲಕರ ಪರದಾಟ ಮತ್ತು ಅವಘಡ,ಅಪಘಾತಗಳಂತಹ ಎಡವಟ್ಟುಗಳನ್ನು ನಿಭಾಯಿಸಲು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್​ಸಿಇ) ಸರಳ ಮಾರ್ಗವೊಂದನ್ನು ಹುಡುಕಿ, ಅನುಷ್ಠಾನಕ್ಕೆ ತರಲು ಸ್ಪಷ್ಟ ಸುತ್ತೋಲೆ ಹೊರಡಿಸಿದೆ.
 • ರಾಷ್ಟ್ರ ವ್ಯಾಪ್ತಿಯ ಎಲ್ಲ 2,100 ಶಾಲೆಗಳ ನರ್ಸರಿಯಿಂದ  12ನೇ ತರಗತಿವರೆಗಿನ ಸುಮಾರು 25 ಲಕ್ಷ ಮಕ್ಕಳಿಗೆ ವಿಮಾ ಸೌಲಭ್ಯ ಕಲ್ಪಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿದೆ

ಏಕೆ ಈ ನಿರ್ಧಾರ?

 • ಮಕ್ಕಳು ಆಟವಾಡುವಾಗ ಬಿದ್ದು ಕೈ ಕಾಲು ಮುರಿದುಕೊಳ್ಳುವುದು, ಶಾಲೆ-ಕಾಲೇಜಿಗೆ ಹೋಗುವಾಗ ಅಪಘಾತಕ್ಕೆ ಈಡಾಗುವುದು, ಹಾವು ಕಚ್ಚಿ ಮೃತಪಡುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ನಗರ ಪ್ರದೇಶದಲ್ಲಿ ಕುರಿಮಂದೆಯಂತೆ ತುಂಬಿದ ಶಾಲಾ ವಾಹನ, ಆಟೋಗಳ ಅವಗಡಗಳೇನೂ ಕಮ್ಮಿ ಇಲ್ಲ. ಇಂತಹ ಸಂದರ್ಭ ಗಳಲ್ಲಿ ಮಕ್ಕಳು ಅನುಭವಿಸುವ ನೋವು ಒಂದೆಡೆಯಾದರೆ, ಹಠಾತ್ ಎದುರಾಗುವ ಸಮಸ್ಯೆ ಗಳಿಗೆ ಹಣ ಹೊಂದಿಸಲು ಪಾಲಕರ ಪರದಾಟ ಮತ್ತೊಂದೆಡೆ.
 • ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ 2018- 19ನೇ ಸಾಲಿನಲ್ಲಿ ನಡೆಸುವ 64ನೇ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ವಿಮೆ ಕಡ್ಡಾಯಗೊಳಿಸಿದೆ.
 • ಈ ಬಾರಿಯ ಕ್ರೀಡೆಯಲ್ಲಿ ಭಾಗವಹಿಸುವ ಮುನ್ನ ವಿಮಾ ದಾಖಲೆ ಸಲ್ಲಿಸಲೇಬೇಕೆಂದು ಸೂಚಿಸಿದ್ದು, ದಾಖಲೆ ಪರೀಕ್ಷಿಸಿ ದೃಢೀಕರಿಸಿದ ನಂತರವೇ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ.
 • ಯಾವ ಸೌಲಭ್ಯ?: ಆರೋಗ್ಯ, ಅಪಘಾತ ಮತ್ತು ಪ್ರಯಾಣ ವೇಳೆ ಸಂಭವಿಸಬಹುದಾದ ಅವಗಡಗಳಿಗೆ ಅನ್ವಯಿಸುವಂತೆ ಒಂದು ಲಕ್ಷ ರೂಪಾಯಿ ವಿಮಾ ಪರಿಹಾರ ಸಿಗುವ ಕಾಂಬೋ ಇನ್ಶುರೆನ್ಸ್ ಪ್ಲ್ಯಾನ್ ಅಳವಡಿಸಿಕೊಳ್ಳುವಂತೆ ಕೌನ್ಸಿಲ್ ನಿರ್ದೇಶನ ನೀಡಿದೆ. ಮಕ್ಕಳಿಗೆ ಈ ರೀತಿಯ ವಿಮೆ ಮಾಡಿಸುವುದರಿಂದ ವಿಪತ್ತು ಮತ್ತು ಅಪಘಾತ ಸಂದರ್ಭಗಳಲ್ಲಿ ಪಾಲಕರಿಗೆ ಆರ್ಥಿಕ ಹೊರೆ ಕಡಿಮೆ ಆಗುತ್ತದೆ ಎಂದು ಕೌನ್ಸಿಲ್ ಅಭಿಪ್ರಾಯಪಟ್ಟಿದೆ.
 • ಮನೆಯಿಂದ ಶಾಲೆಗೆ ಹೋಗುವಾಗ, ಶಾಲೆಯಿಂದ ಮನೆಗೆ ಹಿಂದಿರುಗುವಾಗ, ಆಟದ ಮೈದಾನದಲ್ಲಿ ಏನಾದರೂ ಅನಾಹುತ ಸಂಭವಿಸಿದಲ್ಲಿ ವಿಮಾ ಪರಿಹಾರ ದೊರೆಯಲಿದೆ.

ಸ್ವಚ್ಛ ರೈಲು ನಿಲ್ದಾಣ

 • ಸುದ್ಧಿಯಲ್ಲಿ ಏಕಿದೆ ?ದೇಶದ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ ಹಾಗೂ ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳ ಕುರಿತು ಭಾರತೀಯ ರೈಲ್ವೆ 2018ನೇ ಸಾಲಿನಲ್ಲಿ ಮೂರನೇ ವ್ಯಕ್ತಿಯಿಂದ (ಥರ್ಡ್ ಪಾರ್ಟಿ) ನಡೆಸಿದ್ದ ಸಮೀಕ್ಷೆಯಲ್ಲಿ ಎ1 ವಿಭಾಗದ ರ್ಯಾಂಕಿಂಗ್​ನಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ 11ನೇ ಸ್ಥಾನದಲ್ಲಿದೆ.
 • ವಾರ್ಷಿಕ 50 ಕೋಟಿ ರೂ. ಆದಾಯವಿರುವ ಎ1 ವಿಭಾಗದ ಒಟ್ಟು 75 ರೈಲು ನಿಲ್ದಾಣಗಳು ಹಾಗೂ 6ರಿಂದ 50 ಕೋಟಿ ರೂ. ಆದಾಯವಿರುವ ಮೂರು ವಿಭಾಗಗಳ 332 ರೈಲು ನಿಲ್ದಾಣಗಳಲ್ಲಿ ನಿಲ್ದಾಣದಲ್ಲಿನ ಸ್ವಚ್ಛತೆ, ಶೌಚಗೃಹಗಳ ನಿರ್ವಹಣೆ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಿದೆ. ಇದರಲ್ಲಿ ರಾಜ್ಯದ ಹಲವು ರೈಲು ನಿಲ್ದಾಣಗಳಿಗೆ ಉತ್ತಮ ರ‍್ಯಾಂಕಿಂಗ್ ದೊರೆತಿದ್ದರೆ, ಹಲವು ನಿಲ್ದಾಣಗಳು ಹಿಂದೆಬಿದ್ದಿವೆ.
 • ಎ1 ವಿಭಾಗದಲ್ಲಿ ಬೆಂಗಳೂರು ನಗರ ನಿಲ್ದಾಣ 11ನೇ ರ್ಯಾಂಕ್ ಪಡೆದಿದ್ದರೆ, ಯಶವಂತಪುರ ರೈಲು ನಿಲ್ದಾಣ 28ನೇ ಸ್ಥಾನ ಪಡೆದಿದೆ. ಎ ವಿಭಾಗದಲ್ಲಿ ಮೈಸೂರು ನಿಲ್ದಾಣ 9ನೇ ರ್ಯಾಂಕ್, ಮಂಗಳೂರು ಸೆಂಟ್ರಲ್ 48ನೇ ರ್ಯಾಂಕ್ ಪಡೆದಿದ್ದು, ವಿಭಾಗದಲ್ಲಿನ 332 ರೈಲು ನಿಲ್ದಾಣದಲ್ಲಿ 310ನೇ ರ್ಯಾಂಕ್ ಪಡೆದ ಕಲಬುರಗಿ ರೈಲು ನಿಲ್ದಾಣ ಹಿಂದೆ ಬಿದ್ದಿದೆ.
 • ಹೊಸಪೇಟೆ ರೈಲು ನಿಲ್ದಾಣ 68ನೇ ರ್ಯಾಂಕ್, ದಾವಣಗೆರೆ ನಿಲ್ದಾಣ -74, ಮಂಗಳೂರು ಜಂಕ್ಷನ್- 90, ಕೆಂಗೇರಿ ನಿಲ್ದಾಣ-112, ರಾಯಚೂರು ನಿಲ್ದಾಣ-121, ಬೆಳಗಾವಿ ನಿಲ್ದಾಣ-154, ಧಾರವಾಡ ನಿಲ್ದಾಣ -169, ಯಾದಗಿರಿ-182, ಬಳ್ಳಾರಿ ನಿಲ್ದಾಣ 210ನೇ ರ್ಯಾಂಕ್ ಪಡೆದಿವೆ. ಸಮೀಕ್ಷಾ ತಂಡ ಎಲ್ಲ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಶೌಚಗೃಹ ಸ್ಥಿತಿಗತಿ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆಗಾಗಿ ಕೈಕೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿತ್ತು. ಪ್ರತಿಯೊಂದು ನಿಲ್ದಾಣದಲ್ಲಿ 300 ಪ್ರಯಾಣಿಕರ ಅಭಿಪ್ರಾಯ ಪಡೆದು ರ್ಯಾಂಕ್ ಪಟ್ಟಿ ಸಿದ್ಧಪಡಿಸಿದೆ.
 • ಸಮೀಕ್ಷಾ ವರದಿಯಲ್ಲಿ 1 ವಿಭಾಗದಲ್ಲಿ ಜೋಧಪುರ ರೈಲು ನಿಲ್ದಾಣ ಮೊದಲ ರ್ಯಾಂಕ್, ಜೈಪುರ 2ನೇ ಮತ್ತು ತಿರುಪತಿ 3ನೇ ರ್ಯಾಂಕ್ ಪಡೆದಿವೆ. ಎ ವಿಭಾಗದಲ್ಲಿ ಮಾರವಾರ್ ನಿಲ್ದಾಣ ಮೊದಲ ಸ್ಥಾನ, ಪುಲೇರಾ ನಿಲ್ದಾಣ 2ನೇ ಮತ್ತು ವಾರಂಗಲ್ ರೈಲು ನಿಲ್ದಾಣ 3ನೇ ಸ್ಥಾನ ಪಡೆದಿವೆ.
 • ಸಮೀಕ್ಷೆ ನಂತರದಲ್ಲಿ ಕಳಪೆ ನಿರ್ವಹಣೆಯಿರುವ ರೈಲು ನಿಲ್ದಾಣಗಳ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಾರತೀಯ ರೈಲ್ವೆ ಅಧಿಕಾರಿಗಳು ಚಿಂತನೆ ನಡೆಸಿದ್ದು, ಅಗತ್ಯ ಕ್ರಮಕ್ಕೆ ಆಯಾ ನಿಲ್ದಾಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಲಬುರಗಿ, ಬಳ್ಳಾರಿ ಕೊನೆಯ ಸ್ಥಾನ

 • ಸ್ವಚ್ಛತೆಯಲ್ಲಿ ಸುಧಾರಣೆ ಕಾಣದ ಬಳ್ಳಾರಿ ನಿಲ್ದಾಣ 210ನೇ ಹಾಗೂ ಕಲಬುರಗಿ ರೈಲು ನಿಲ್ದಾಣ 310ನೇ ಸ್ಥಾನದಲ್ಲಿವೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಸ್ವಚ್ಛತೆ ಕೊರತೆ ಎದುರಿಸುತ್ತಿದ್ದ 10 ರೈಲು ನಿಲ್ದಾಣಗಳ ಪಟ್ಟಿಯಲ್ಲಿ ರಾಯಚೂರು ಇತ್ತು. ಈ ಬಾರಿ ಸ್ವಚ್ಛ ನಿಲ್ದಾಣಗಳ ಪಟ್ಟಿಯಲ್ಲಿ 121ನೇ ಸ್ಥಾನ ಪಡೆದಿದ್ದು, ಉತ್ತಮ ಸಾಧನೆ ತೋರಿದೆ.

ಗಣೇಶಮೂರ್ತಿ ಎತ್ತರ 5 ಅಡಿಗೆ ನಿರ್ಬಂಧ

 • ಸುದ್ಧಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಣೇಶ ಮೂರ್ತಿ ಎತ್ತರ ಗರಿಷ್ಠ ಐದು ಅಡಿ ಇರಬೇಕು ಎಂಬ ನಿರ್ಬಂಧ ವಿಧಿಸಿದೆ.

ಏಕೆ ಈ ನಿರ್ಬಂಧ?

 • ಮಣ್ಣಿನ ಮೂರ್ತಿಗಳನ್ನು ವಿಸರ್ಜನೆ ಮಾಡುವಾಗ ಹೆಚ್ಚು ತ್ಯಾಜ್ಯ ಉಂಟಾಗುತ್ತಿದೆ. ಇದರಿಂದಾಗಿ ಜಲಮೂಲಗಳಿಗೆ ಹಾನಿಯಾಗುತ್ತಿದೆ. ಹೀಗಾಗಿ ಎತ್ತರವನ್ನು 5 ಅಡಿಗೆ ಸೀಮಿತಗೊಳಿಸಲಾಗಿದೆ. ಈ ಕುರಿತು ಮಂಡಳಿಯು ಆದೇಶ ಹೊರಡಿಸಿದ್ದು, ಎಲ್ಲ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ.

ತ್ಯಾಜ್ಯ ವಿಲೇವಾರಿಯ ಸವಾಲು

 • ಬೆಂಗಳೂರಿನಲ್ಲಿ ಬಿಬಿಎಂಪಿಯು ಟ್ಯಾಂಕರ್‌ಗಳಲ್ಲಿ ಮೂರ್ತಿಗಳ ವಿಸರ್ಜನೆಗೆ ಏರ್ಪಾಟು ಮಾಡುತ್ತದೆ. ಪ್ರತಿ ವಾರ್ಡ್‌ಗಳಿಗೆ ತೆರಳುವ ಸಿಬ್ಬಂದಿ ಮೂರ್ತಿಗಳನ್ನು ವಿಸರ್ಜಿಸಿ ಅದರ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ. ಎತ್ತರವಿರುವ ಮೂರ್ತಿಗಳು ಭಾರವಾಗಿದ್ದು, ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುತ್ತವೆ. ಇದನ್ನು ವಿಲೇವಾರಿ ಮಾಡುವುದು ಕಷ್ಟವಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
 • ನಗರದಲ್ಲಿ ಕೆಲ ಕಲ್ಯಾಣಿಗಳಲ್ಲೂ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೂ ಎತ್ತರದ ಮೂರ್ತಿಗಳಿಂದ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗಿ ಕಲ್ಯಾಣಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಮೂರ್ತಿಯ ಎತ್ತರಕ್ಕೆ ಕಡಿವಾಣ ಹಾಕಲೇಬೇಕಾಗಿದೆ
 • 5 ಅಡಿ ಎತ್ತರದ ಮೂರ್ತಿ ತಯಾರಿಸಲು 70ರಿಂದ 80 ಕೆ.ಜಿ ಮಣ್ಣು ಬೇಕಾಗುತ್ತದೆ. 5 ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗೆ 100 ಕೆ.ಜಿ.ಗೂ ಅಧಿಕ ಮಣ್ಣು ಬೇಕಾಗುತ್ತದೆ. ಇಂತಹ ಮೂರ್ತಿಗಳನ್ನು ವಿಸರ್ಜಿಸುವುದು ಸುಲಭವಲ್ಲ

ಸೂರ್ಯಶಿಕಾರಿ

 • ಸುದ್ಧಿಯಲ್ಲಿ ಏಕಿದೆ ?ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇತ್ತೀಚೆಗೆ ಸೂರ್ಯನ ಹೊರಮೈ ಅಧ್ಯಯನಕ್ಕೆ ಸೋಲಾರ್ ಪಾರ್ಕರ್ ಪ್ರೋಬ್ ನೌಕೆ ಉಡಾವಣೆ ಮಾಡಿರುವ ಬೆನ್ನಲ್ಲೇ ಭಾರತದ ಇಸ್ರೋ ಕೂಡ ‘ಸೂರ್ಯಶಿಕಾರಿ’ಗೆ ಸಜ್ಜಾಗುತ್ತಿದೆ.
 • ಮಹತ್ವಾಕಾಂಕ್ಷೆಯ ‘ಆದಿತ್ಯ – ಎಲ್1’ ಉಪಗ್ರಹವನ್ನು 2019-2020ರ ನಡುವೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸಿದೆ.
 • ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಹ್ಯಾಲೊ ಕಕ್ಷೆಗೆ ಉಪಗ್ರಹವನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ.
 • ಸೂರ್ಯನ ವಾತಾವರಣದಲ್ಲಿ ಗುರುತಿಸಲ್ಪಡುವ ಲ್ಯಾಗ್ರೇಂಗಿಯನ್ ಪಾಯಿಂಟ್ 1 (ಎಲ್1) ಸುತ್ತ ನೌಕೆ ಸುತ್ತಲಿದೆ. ಗ್ರಹಣ ಕಾಲದ ಅಡಚಣೆ ಅಥವಾ ಇನ್ಯಾವುದೇ ಸೂರ್ಯನ ಕಣಗಳು ಉಪಗ್ರಹಕ್ಕೆ ಅಪ್ಪಳಿಸುವ ಅಪಾಯ ಈ ಕಕ್ಷೆಯಲ್ಲಿ ತೀರಾ ಕಡಿಮೆ. 24 ತಾಸು ಸೂರ್ಯನ ಮೇಲೆ ನಿಗಾ ಇರಿಸಲು ಈ ಕಕ್ಷೆ ಸಹಕಾರಿ. ಹಾಗಾಗಿ ಇಲ್ಲಿ ಉಪಗ್ರಹ ಇರಿಸಿ, ಅಧ್ಯಯನ ನಡೆಸಲು ಇಸ್ರೋ ವಿಜ್ಞಾನಿಗಳ ತಂಡ ನಿರ್ಧರಿಸಿದೆ.
 • ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ-ಎಕ್ಸ್​ಎಲ್ ಮೂಲಕ ಉಪಗ್ರಹ ಉಡಾವಣೆಯಾಗಲಿದೆ.

ತಾಪಮಾನ ಏರುಪೇರು ಅಧ್ಯಯನ

 • ಸೂರ್ಯನ ಹೊರಮೈ ಪ್ರದೇಶ ‘ಕೊರೊನಾ’ ಅಧ್ಯಯನ ನಡೆಸಲು ಇಸ್ರೋ ನಿರ್ಧರಿಸಿದೆ. ಸೂರ್ಯನ ಕೇಂದ್ರ ಬಿಂದುವಿಗಿಂತ ಹೊರಮೈ ಶಾಖ ಹೆಚ್ಚು ತೀವ್ರ. ಕೇಂದ್ರ ಬಿಂದು ಸುಮಾರು 85 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿದ್ದರೆ, ಕೊರೊನಾ ತಾಪಮಾನ ಅಂದಾಜು 10 ಲಕ್ಷ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ತಾಪಮಾನ ಏರುಪೇರು ಹೇಗೆ ಸಾಧ್ಯ? ಎಂಬುದೇ ಅಧ್ಯಯನದ ಪ್ರಮುಖ ವಿಷಯ.

ಸವಾಲಿನ ಯೋಜನೆ

 • ಸೂರ್ಯನ ದ್ಯುತಿಗೋಳ (ಎಕ್ಸ್ ಕಿರಣಗಳು), ವರ್ಣಗೋಳ (ಅಲ್ಟ್ರಾ ವೈಲೆಟ್ ಕಿರಣಗಳು), ಕೊರೊನಾಗಳ ಜಂಟಿ ಅಧ್ಯಯನವನ್ನು ಆದಿತ್ಯ ಎಲ್-1 ನಡೆಸಲಿದೆ. ಎಲ್-1 ಕಕ್ಷೆಗೆ ಬಂದು ಸೇರುವ ಸೂರ್ಯ ಹೊರಸೂಸುವ ವಿವಿಧ ಬಗೆಯ ಕಣಗಳನ್ನು ಪರಿಶೀಲಿಸಲಾಗುತ್ತದೆ. ಎಲ್-1 ಸುತ್ತಲಿನ ಹಾಲೊ ಕಕ್ಷೆಯ ಆಯಸ್ಕಾಂತೀಯ ಪ್ರದೇಶದ ಪ್ರಭಾವವನ್ನು ಉಪಗ್ರಹ ಸೂಕ್ಷ್ಮವಾಗಿ ಗಮನಿಸಲಿದೆ. ಸೂರ್ಯನ ಗುರುತ್ವಾಕರ್ಷಣ ಮತ್ತು ಆಯಸ್ಕಾಂತೀಯ ಪ್ರಭಾವಕ್ಕೆ ಒಳಗಾಗದೇ ಉಪಗ್ರಹವು ಅಧ್ಯಯನ ಕೈಗೊಳ್ಳಬೇಕಿರುವುದು ಸವಾಲಿನ ಸಂಗತಿಯಾಗಿದೆ.
Related Posts
Karnataka Current Affairs – KAS/KPSC Exams- 21st September 2018
‘Masked’ bonded labour casts a shadow on State A “hidden crime” and rampant in unorganised sectors, bonded labour and its prevalence may be grossly underestimated in the State, according to a ...
READ MORE
MLA absenteeism the norm at successive Assembly sessions
The State Assembly Secretariat reveals a stellar performance by just three MLAs, all from the Congress S. Rafeeq Ahmed of Tumakuru city, B.M. Nagaraja of Siraguppa, and Prasanna Kumar K.B. ...
READ MORE
Karnataka Current Affairs – KAS/KPSC Exams- 12th September 2018
Karnataka HC permits testing of K-C valley water supply system The Karnataka High Court permitted the State government and its agencies to temporarily conduct a trial run of the system which ...
READ MORE
Get ready for the Budget 2018
Expected big news - Budget expected to focus on direct taxes While there are unlikely to be any major changes in indirect tax as most of them are now under the ...
READ MORE
Karnataka Economy: Bengaluru Water Supply and Sewerage Board (BWSSB)
Bengaluru Water Supply and Sewerage Board is an autonomous body formed by the State legislature under Bengaluru Water supply and Sewerage Board Act on 10-09-1964 for Water Supply & Sewage ...
READ MORE
19 private hospitals barred from serving patients under government schemes
The state government will cancel the empanelment of 19 private hospitals, including some top corporate facilities, for refusing to serve patients under public healthcare schemes in protest against the non-payment ...
READ MORE
Karnataka Current Affairs – KAS/KPSC Exams – 20th June 2018
BBMP to cut dependence on garbage contractors The Bruhat Bengaluru Mahanagara Palike (BBMP) has learnt the hard way that it cannot depend on garbage contractors who rent out transport vehicles for ...
READ MORE
Antibiotic resistance simply put is when infection-causing bacteria is not killed by an antibiotic that was effective earlier, the bacteria continue to thrive. Treatment options shrink further when multiple antibiotics fail ...
READ MORE
Karnataka-Comprehensive Area Scheme (CSA)
In an effort to help government-run transport entities, the Karnataka State Transport Authority (KSTU) has come out with a Comprehensive Area Scheme (CSA) for the entire state that bans new ...
READ MORE
Karnataka Govt to introduce public health courses for non-medical staff
The state government is all set to introduce postgraduate and short-term courses in public health for non-medical staff working in various government hospitals across the state. The Department of Health and ...
READ MORE
Karnataka Current Affairs – KAS/KPSC Exams- 21st September
MLA absenteeism the norm at successive Assembly sessions
Karnataka Current Affairs – KAS/KPSC Exams- 12th September
Get ready for the Budget 2018
Karnataka Economy: Bengaluru Water Supply and Sewerage Board
19 private hospitals barred from serving patients under
Karnataka Current Affairs – KAS/KPSC Exams – 20th
Antibiotic resistance
Karnataka-Comprehensive Area Scheme (CSA)
Karnataka Govt to introduce public health courses for

Leave a Reply

Your email address will not be published. Required fields are marked *