“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಪುರಂದರದಾಸರು

 • ಸುದ್ದಿಯಲ್ಲಿ ಏಕಿದ್ದಾರೆ? ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ.
 • ಪುರಂದರದಾಸರ ಹುಟ್ಟೂರು ಮಲೆಸೀಮೆ ಎಂಬ ಬಗ್ಗೆ 2012ರಲ್ಲಿ ಪ್ರಥಮ ಬಾರಿಗೆ ಇತಿಹಾಸದ ಕುರುಹುಗಳನ್ನು ಕಲೆಹಾಕುತ್ತ ವಿಶೇಷದಲ್ಲಿ ಸ್ಥಳನಾಮ, ಕೀರ್ತನೆಗಳಲ್ಲಿ ಬಳಸಿದ ಭಾಷೆ ಸೇರಿದಂತೆ ಹಲವು ಅಂಶಗಳೊಂದಿಗೆ ವಿಸ್ತೃತ ವರದಿ ಪ್ರಕಟಿಸಿತ್ತು. ನಂತರ ಸರಕಾರ ಪುರಂದರದಾಸರ ಹುಟ್ಟೂರಿನ ಬಗ್ಗೆ ಅಧ್ಯಯನ ನಡೆಸಲು 5 ಜನರ ಸಮಿತಿ ರಚಿಸಿತ್ತು.
 • ಹಂಪಿ ವಿಶ್ವವಿದ್ಯಾಲಯ ನೇಮಕ ಮಾಡಿದ್ದ ಈ ತಂಡದಲ್ಲಿ ಹಿರಿಯ ಸಂಗೀತ ವಿದ್ವಾಂಸ, ಪದ್ಮಭೂಷಣ ಆರ್‌.ಕೆ.ಪದ್ಮನಾಭ್‌, ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌, ವಿದ್ವಾಂಸ ಎ.ವಿ.ನಾವಡ, ವೀರಣ್ಣ ರಜೋರಾ, ಅರಳುಮಲ್ಲಿಗೆ ಪಾರ್ಥಸಾರಥಿ ಇದ್ದು, ಶಿವಾನಂದ ವಿರಕ್ತಮಠ ಸಂಚಾಲಕರಾಗಿದ್ದರು.
 • ಈ ಸಮಿತಿ ಪುಣೆ ಸಮೀಪ ಇರುವ ಪುರಂದರಗಡ ಮತ್ತು ತೀರ್ಥಹಳ್ಳಿ ತಾಲೂಕಿನ ಆರಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸಿತ್ತು.
 • ಇದುವರೆಗೂ ಪುರಂದರದಾಸರ ಹುಟ್ಟೂರು ಎಂದು ನಂಬಿದ್ದ ಪುಣೆ ಬಳಿ ಇರುವ ಪುರಂದರಗಡದಲ್ಲಿ ಊರಿನ ಹೆಸರಿನಲ್ಲಿ ಪುರಂದರ ಎಂಬ ಪದ ಬಿಟ್ಟರೆ ಪುರಂದರದಾಸರಿಗೆ ಸಂಬಂಧಿಸಿದ ಸಣ್ಣ ಐತಿಹ್ಯಗಳೂ ಸಿಕ್ಕಲಿಲ್ಲ. ಆದರೆ, ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಐತಿಹಾಸಿಕ ಸಂಗತಿಗಳು ಈ ಸಮಿತಿಗೆ ಲಭಿಸಿವೆ.

ಏನೆಲ್ಲ ಆಧಾರ ಸಿಕ್ಕಿತು?

 • ಇತಿಹಾಸದಲ್ಲಿ ಕ್ರಿ.ಶ.8ನೇ ಶತಮಾನದಲ್ಲೇ ಆರಗದ ಉಲ್ಲೇಖವಿದೆ. ಕ್ರಿ.ಶ.ಸುಮಾರು 10ರಿಂದ 17ನೇ ಶತಮಾನದವರೆಗೆ ವೇಂಟೆ, ಕಂಪಣ, ರಾಜ್ಯ, ಪುರ, ಪುತ್ತನ ಶೀರ್ಷಿಕೆಯಲ್ಲಿ ಆರಗ ಮಲೆರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಅರಸರು, ಕೆಳದಿ ಅರಸರು ಆರಗದಲ್ಲಿ ಆಡಳಿತ ನಡೆಸಿದ್ದರು. ಆರಗ ಪ್ರಾಂತ್ಯದ ಹಲವು ಕುಟುಂಬಗಳಿಗೆ ವಿಠಲನೇ ಆರಾಧ್ಯ ದೈವವಾಗಿದ್ದ.
 • ಆರಗದ ವೈಷ್ಣವರ ಹೆಸರಿನ ಮುಂದೆ ನಾಯಕ ಎಂಬ ಉಪನಾಮ ಸಾಮಾನ್ಯವಾಗಿತ್ತು. ಹೀಗೆ ಸಾಮಾನ್ಯವಾದ ಉಪನಾಮ ಸೇರಿಕೊಂಡಿದ್ದರಿಂದಲೇ ವರದಪ್ಪನಾಯಕನ ಮಗ ಶ್ರೀನಿವಾಸನಿಗೂ ನಾಯಕ ಎಂಬ ಉಪನಾಮ ಮುಂದುವರಿದಿದೆ ಎಂಬ ವಾದವಿದೆ.
 • ವರದಪ್ಪನಾಯಕ ವರ್ತಕನಾಗಿದ್ದು ಮಗ ಶ್ರೀನಿವಾಸನಾಯಕ ಕೂಡ ಇದೇ ವ್ಯವಹಾರ ಮುಂದುವರಿಸಿದ್ದ. ಈ ಅವಧಿಯಲ್ಲಿ ಆರಗ ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿದ್ದನ್ನು ಇತಿಹಾಸ ಹೇಳುತ್ತದೆ. ವರ್ತಕರಿಗಾಗಿಯೇ ವಿಶಾಲ ಜಾಗದ ವ್ಯವಸ್ಥೆ ಮಾಡಿದ್ದು, ಈಗಲೂ ಇಲ್ಲಿ ಕೇಶವಪುರ, ವರ್ತೇಕೇರಿ, ವಿಠಲಗುಡಿ, ಕಾಳಮ್ಮನಗುಡಿ ಎಂಬ ಊರುಗಳಿವೆ. ಗೋಪಿನಾಥ ಹೊಳೆ, ಅರುಣಗಿರಿ ಲಕ್ಷ್ಮೇವೆಂಕಟರಮಣ ದೇವಸ್ಥಾನವೂ ಇದೆ. ದಾಸರಿಗೆ ಉಂಬಳಿಯಾಗಿ ನೀಡಿದ್ದ ಗದ್ದೆಗಳ ಕಾರಣ ಈ ಭಾಗದಲ್ಲಿ ದಾಸನಗದ್ದೆ ಎಂಬ ಎರಡು ಊರುಗಳಿವೆ.
 • ಪುರಂದರರ ಕೀರ್ತನೆಗಳಲ್ಲಿ ಮಲೆಸೀಮೆಯ ಭಾಷೆ ಹೆಚ್ಚಾಗಿ ಬಳಕೆಯಾಗಿದೆ. ‘ಮಾಡು’, ‘ಮೀಯು’ ಪದಗಳು ಅಚ್ಚ ಮಲೆನಾಡಿನ ಭಾಗದವು. ಪುರಂದರದಾಸರ ಪತ್ನಿಯ ಊರು ಹಾಸನ ಜಿಲ್ಲೆಯ ಬೇಲೂರು. ಇಂದಿಗೂ ಸರಸ್ವತಿಯ ವಂಶಸ್ಥರು ಇಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀನಿವಾಸನಾಯಕ ಚಿನ್ನ, ವಜ್ರ, ವೈಢೂರ‍್ಯದ ವ್ಯಾಪಾರ ಮಾಡುತ್ತಿದ್ದರೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಇದರಿಂದಲೇ ಅವರು ಶ್ರೇಷ್ಠ ದಾಸರಾಗಲು ಸಾಧ್ಯವಾಯಿತು.
 • 1484ರಲ್ಲಿ ಜನಿಸಿದ ಪುರಂದರದಾಸರು 1564ರಲ್ಲಿ ಕಾಲವಾದರು. ವಿಜಯನಗರಕ್ಕೆ ತೆರಳಿದ ಶ್ರೀನಿವಾಸ ನಾಯಕನಿಗೆ ವ್ಯಾಸರಾಯರು ಹರಿದಾಸ ದೀಕ್ಷೆ ಮತ್ತು ಪುರಂದರ ವಿಠಲಅಂಕಿತ ನೀಡಿದರು. 5ಲಕ್ಷ ಕೀರ್ತನೆ ಬರೆಯುವ ಆಶಯವಿದ್ದ ಪುರಂದರದಾಸರು 75 ಲಕ್ಷ ಕೀರ್ತನೆ ಬರೆದಿದ್ದು, ಉಳಿದ 25 ಸಾವಿರ ಕೀರ್ತನೆಗಳನ್ನು ಇವರ ಮಗ ಮಧ್ವಪದಾಸರು ಬೆರೆದರು ಎಂಬ ಪ್ರತೀತಿ ಇದೆ. ಅವರ ಕೀರ್ತನೆಗಳಲ್ಲಿ ತಿರುಪತಿ, ಶ್ರೀರಂಗ, ಕಳಸ, ಬೇಲೂರು, ನಂಜನಗೂಡು, ಶ್ರೀರಂಗಪಟ್ಟಣ, ಉಡುಪಿ, ಪಂಡರಾಪುರ ಸಂದರ್ಶಿಸಿದ ಪ್ರಸ್ತಾಪವೂ ಸಿಕ್ಕುತ್ತದೆ.

ಇಂಡಿಯಾ ಫಸ್ಟ್‌ ನೀತಿ

 • ಸುದ್ದಿಯಲ್ಲಿ ಏಕಿದೆ? ದೇಶದಲ್ಲಿ ದಿನೇದಿನೇ ಅಗಾಧವಾಗಿ ಬೆಳೆಯುತ್ತಿರುವ ಇ-ಕಾಮರ್ಸ್‌ ವಲಯದ ಸುಧಾರಣೆಗೆ ಕೇಂದ್ರ ಸರಕಾರ ಮುಂದಾಗಿದ್ದು, ಇದರಲ್ಲಿ ಭಾರತದ ಪ್ರಾಬಲ್ಯವನ್ನು ವೃದ್ಧಿಸಲು ಹೊಸ ನೀತಿಯನ್ನು ರೂಪಿಸುತ್ತಿದೆ.
 • ಇ- ಕಾಮರ್ಸ್‌ ನೀತಿಯನ್ನು ಜಾರಿಗೊಳಿಸಲು ಮುಂದಾಗಿದ್ದು, ನಿಗದಿತ ದಿನಾಂಕದ ಬಳಿಕ, ರಿಯಾಯಿತಿ ದರದಲ್ಲಿ ಆನ್‌ಲೈನ್‌ನಲ್ಲಿ ವಸ್ತಗಳನ್ನು ಮಾರಾಟ ಮಾಡಬಾರದು. ನೀತಿ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು ಸಾರ್ವಜನಿಕರ ಅಭಿಪ್ರಾಯಕ್ಕೂ ಬಿಡಲಾಗುತ್ತದೆ. ಇದರಿಂದ ಅಮಜಾನ್‌ ಹಾಗೂ ಫ್ಲಿಪ್‌ ಕಾರ್ಟ್‌ನಂತಹ ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿ ಉತ್ಪನ್ನಗಳ ರಿಯಾಯಿತಿ ಬೆಲೆ ಇಲ್ಲವಾಗಲಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

ಕಾರಣಗಳೇನು?

 • ಭಾರತದ ಸಣ್ಣ ಹಾಗೂ ಮಧ್ಯಮ ವರ್ಗದ ಉತ್ಪನ್ನಗಳ ಸಂಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಭಾರತೀಯ ಇ-ಕಾಮರ್ಸ್‌ ಮಾರುಕಟ್ಟೆ ಪ್ರಸ್ತುತ 25 ಬಿಲಿಯನ್‌ ಡಾಲರ್‌ನಷ್ಟು ಮೌಲ್ಯಯುತವಾಗಿದ್ದು, ಮುಂದಿನ 10 ವರ್ಷದಲ್ಲಿ 200 ಬಿಲಿಯನ್‌ ಡಾಲರ್ ಮೌಲ್ಯ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
 • ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತೀಯ ಇ-ಕಾಮರ್ಸ್‌ಗೆ ಜಾಗತಿಕ ಮಟ್ಟದಲ್ಲಿ ಹೂಡಿಕೆಯ ಹರಿವು ಕಂಡು ಬರುತ್ತಿದ್ದು, ವಿಶ್ವಮಟ್ಟದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಅಲಿಬಾಬ, ಸಾಫ್ಟ್‌ಬ್ಯಾಂಕ್‌, ಟೈಗರ್‌ ಗ್ಲೋಬಲ್‌ ಹಾಗೂ ವಾಲ್‌ಮರ್ಟ್‌ ಸಂಸ್ಥೆಗಳು ಹೂಡಿಕೆಗೆ ಸಿದ್ಧವಾಗಿವೆ.
 • ಹೊಸ ನೀತಿಯ ರಚನೆಯಿಂದ ಆಯಾ ಸಂಸ್ಥೆಗಳು ತಮ್ಮದೇ ಆದ ಪೋರ್ಟಲ್‌ನ್ನು ರಚಿಸಿಕೊಳ್ಳಲು ಅನುಕೂಲವಾಗಲಿದೆ. ಭಾರತದಲ್ಲಿ ತಯಾರಾದ ವಸ್ತುಗಳನ್ನು ಶೇ.100ದಷ್ಟು ಮಾರಾಟ ಮಾಡಲು ಈ ಪಾಲಿಸಿ ಹೆಚ್ಚು ಅನುಕೂಲವಾಗಲಿದೆ.
 • ಹೊಸ ನೀತಿಯ ಪ್ರಕಾರ, ಮಾರಾಟಗಾರರು ರಿಯಾಯಿತಿ ಘೋಷಿಸಲಿದ್ದಾರೆ. ಆನ್‌ಲೈನ್ ಮಾರಾಟ ಮಾಡುವ ಕಂಪನಿಗಳಲ್ಲ ಎಂದು ತಿಳಿದು ಬಂದಿದೆ.
 • ಆನ್‌ಲೈನ್‌ ವ್ಯವಹಾರದ ಹೆಸರಲ್ಲಿ ಹೆಚ್ಚುತ್ತಿರುವ ಅಕ್ರಮಗಳ ತಡೆಗೆ ಹೊಸ ನೀತಿ ರೂಪಿಸಲಾಗುತ್ತಿದೆ.

ದರಗಳ ಮೇಲೆ ಪ್ರಭಾವಕ್ಕೆ ನಿಯಂತ್ರಣ

 • ಇ-ಕಾಮರ್ಸ್‌ ನೀತಿಯ ಕರಡಿನ ಪ್ರಮುಖಾಂಶಗಳಲ್ಲಿ ಆನ್‌ಲೈನ್‌ ವಲಯದ ಕಂಪನಿಗಳ ಸಮೂಹವು ತನ್ನ ಅಧೀನ ಕಂಪನಿ ಅಥವಾ ಸಂಬಂಧವಿರುವ ಕಂಪನಿಯ ಮೂಲಕ ಭಾರಿ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಿ, ಮಾರುಕಟ್ಟೆಯಲ್ಲಿ ದರಗಳ ಮೇಲೆ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ದಿಗ್ಗಜ ಆನ್‌ಲೈನ್‌ ಕಂಪನಿಯೊಂದು ತನ್ನ ಅಧೀನ ಕಂಪನಿಯೊಂದರ ಮೂಲಕ ಮೊಬೈಲ್‌, ಫ್ರಿಡ್ಜ್‌, ವಾಷಿಂಗ್‌ ಮೆಶೀನ್‌ ಇತ್ಯಾದಿಗಳನ್ನು ವ್ಯಾಪಕವಾಗಿ ಖರೀದಿಸಿ, ಮಾರುಕಟ್ಟೆಯ ದರದ ಮೇಲೆ ಪ್ರಭಾವ ಬೀರುವಂತೆ, ಅಗ್ಗದ ದರದಲ್ಲಿ ಮಾರಾಟ ಮಾಡುವ ಪದ್ಧತಿಗೆ ನಿರ್ಬಂಧ ಅನ್ವಯವಾಗಲಿದೆ. ಇ-ಕಾಮರ್ಸ್‌ ದೈತ್ಯ ಕಂಪನಿಗಳ ರಿಟೇಲ್‌ ತಂತ್ರಗಾರಿಕೆಗೆ ಅಂಕುಶ ಬೀಳಲಿದೆ.
 • ಕಂಪನಿಗಳು ತಮ್ಮ ಅಧೀನ ಕಂಪನಿ ಅಥವಾ ಸಂಬಂಧಿಸಿದ ಕಂಪನಿಗಳ ಮೂಲಕ ಬ್ರ್ಯಾಂಡೆಡ್‌ ಸ್ಮಾರ್ಟ್‌ಫೋನ್‌, ವೈಟ್‌ ಗೂಡ್ಸ್‌, ಫ್ಯಾಷನ್‌ ವಸ್ತುಗಳನ್ನು , ದರಗಳ ಮೇಲೆ ಪ್ರಭಾವ ಬೀರುವಂತೆ ಖರೀದಿಸಿಟ್ಟುಕೊಳ್ಳುವಂತಿಲ್ಲ ಎಂದು ಕರಡು ನೀತಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಸಲಹೆಯನ್ನು ಗಂಭೀರವಾಗಿ ಸರಕಾರ ಪರಿಗಣಿಸಿದರೆ, ಇ-ಕಾಮರ್ಸ್‌ ದಿಗ್ಗಜರ ರಿಟೇಲ್‌ ದರ ತಂತ್ರಗಾರಿಕೆಗೆ ಹೊಡೆತ ಬೀಳಲಿದೆ.

ದೇಶೀಯ ಉತ್ಪಾದನೆಗೆ ಭಾರಿ ಉತ್ತೇಜನ

 • ಕರಡು ನೀತಿಯ ಪ್ರಕಾರ ಭಾರತೀಯ ಮೂಲದ ಆನ್‌ಲೈನ್‌ ಕಂಪನಿಗಳಿಗೆ ಶೇ.100ರಷ್ಟು ದೇಶೀಯವಾಗಿ ಉತ್ಪಶಾದಿಸಿದ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಬೇಕು. ಈ ರಿಯಾಯಿತಿಯು ವಿದೇಶಿ ಮೂಲದ ಇ-ಕಾಮರ್ಸ್‌ ಕಂಪನಿಗಳಿಗೆ ಹಾಗೂ ವಿದೇಶಿ ಹೂಡಿಕೆಯ ಪ್ರಾಬಲ್ಯ ಹೊಂದಿರುವ ಕಂಪನಿಗಳಿಗೆ ಸಿಗಲಾರದು.

ಭಾರತೀಯ ಸ್ಥಾಪಕರಿಗೇ ಅಧಿಕಾರ

 • ಶೇ.49 ಮೀರದಂತೆ ವಿದೇಶಿ ಹೂಡಿಕೆ ಹೊಂದಿರುವ ಇ-ಕಾಮರ್ಸ್‌ ಕಂಪನಿಗಳಲ್ಲಿ ಭಾರತೀಯ ಮೂಲದ ಸ್ಥಾಪಕರಿಗೆ ಹೆಚ್ಚಿನ ಹಕ್ಕು, ಅಧಿಕಾರ ಒದಗಿಸಲೂ ಕರಡು ಅವಕಾಶ ಕಲ್ಪಿಸಿದೆ. ಹಾಗೂ ಭಾರತೀಯ ಆಡಳಿತಮಂಡಳಿಯೇ ಕಂಪನಿಯನ್ನು ನಿಯಂತ್ರಿಸಲಿದೆ.

ಕಠಿಣ ನಿಯಂತ್ರಕ ವ್ಯವಸ್ಥೆ

 • ಇ-ಕಾಮರ್ಸ್‌ ವಲಯದಲ್ಲಿ ಅಹವಾಲುಗಳನ್ನು ಹಾಗೂ ವಿದೇಶಿ ಹೂಡಿಕೆ ಕುರಿತ ವಿವಾದಗಳನ್ನು ನಿರ್ವಹಿಸಲು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗ ತೆರೆಯಲು ಶಿಫಾರಸು ಮಾಡಲಾಗಿದೆ. ಇ-ಕಾಮರ್ಸ್‌ ಕಂಪನಿಗಳ ಸ್ವಾಧೀನ-ವಿಲೀನ ಪ್ರಕ್ರಿಯೆಗಳಲ್ಲಿ ಕಾಂಪಿಟೇಶನ್‌ ಕಮೀಶನ್‌ ಇತ್ಯಾದಿ ನಿಯಂತ್ರಕ ವ್ಯವಸ್ಥೆಗಳು ಕೂಲಂಕುಷ ನಿಗಾ ವಹಿಸಬೇಕು ಎಂದು ತಿಳಿಸಿದೆ. ಇತ್ತೀಚೆಗೆ ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ ಖರೀದಿಯ ಡೀಲ್‌ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ. ಡಿಜಿಟಲ್‌ ಎಕಾನಮಿಯನ್ನು ನಿಯಂತ್ರಿಸಲು ಪ್ರತ್ಯೇಕ ಹಾಗೂ ಒಂದೇ ಪ್ರಾಧಿಕಾರದ ಅಗತ್ಯ ಇದೆ ಎಂದಿದೆ.

ಭಾರಿ ದರ ಕಡಿತಕ್ಕೆ ಅವಧಿ

 • ಇ-ಕಾಮರ್ಸ್‌ ಕಂಪನಿಗಳು ಘೋಷಿಸುವ ಭಾರಿ ದರ ಕಡಿತಗಳಿಗೆ ನಿರ್ದಿಷ್ಟ ಗರಿಷ್ಠ ಅವಧಿಯನ್ನು ನಿಗದಿಪಡಿಸಬೇಕು. ಇದರಿಂದ ಮಾರುಕಟ್ಟೆಯಲ್ಲಿ ದರ ನಿಯಂತ್ರಣ ಸಾಧ್ಯ ಎಂದು ಸಲಹೆ ಮಾಡಿದೆ.

ಡೇಟಾ ಸಂಗ್ರಹ

 • ಸರಕಾರ ಇ-ಕಾಮರ್ಸ್‌ ಕಂಪನಿಗಳ ಡೇಟಾ ಸಂಗ್ರಹಕ್ಕೂ ವ್ಯವಸ್ಥೆ ಕಲ್ಪಿಸುತ್ತಿದೆ. ಕಂಪನಿಗಳ ವಹಿವಾಟು, ಗ್ರಾಹಕರು ಇತ್ಯಾದಿ ವಿವರಗಳು ಇದರಲ್ಲಿ ಲಭ್ಯವಾಗಲಿದ್ದು, ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಗತ್ಯ ಇದ್ದಾಗ ಭಾರತ ಸರಕಾರ ಈ ವಿವರಗಳನ್ನು ಪರಿಶೀಲಿಸಲಿದೆ. ಇ-ಕಾಮರ್ಸ್‌ ಕಂಪನಿಗಳಿಗೆ ಜಿಎಸ್‌ಟಿ ಸರಳಗೊಳಿಸಲೂ ಸಲಹೆ ನೀಡಿದೆ.

ಭ್ರಷ್ಟಾಚಾರ ತಡೆ (ತಿದ್ದುಪಡಿ) ವಿಧೇಯಕ

 • ಸುದ್ದಿಯಲ್ಲಿ ಏಕಿದೆ? ದೇಶಾದ್ಯಂತ ಇನ್ನು ಮುಂದೆ ಲಂಚ ಸ್ವೀಕಾರ ಮಾತ್ರವಲ್ಲ ಲಂಚ ಕೊಡುವುದೂ, ಲಂಚದ ಆಮಿಷ ಒಡ್ಡುವುದು ಸಹ ಶಿಕ್ಷಾರ್ಹ ಅಪರಾಧವಾಗಲಿದೆ. ಲಂಚ ನೀಡಿದವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಜತೆಗೆ ದಂಡ ಬೀಳಲಿದೆ.
 • ದೇಶಾದ್ಯಂತ ಸರಕಾರಿ ಕಚೇರಿಗಳಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಮಂಡಿಸಿದ ಭ್ರಷ್ಟಾಚಾರ ತಡೆ (ತಿದ್ದುಪಡಿ) ವಿಧೇಯಕ –1988′ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದ್ದು, ಜು.26ರಿಂದಲೇ ಅನ್ವಯವಾಗುವಂತೆ ಕಠಿಣ ಕಾನೂನು ದೇಶಾದ್ಯಂತ ಜಾರಿಗೆ ಬಂದಿದೆ.
 • ಶಿಕ್ಷೆ ಪ್ರಮಾಣ ಏರಿಕೆ: ಪರಿಷ್ಕೃತ ಕಾಯಿದೆಯಲ್ಲಿ ಲಂಚ ಪಡೆದ ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆ ಬೀಳಲಿದೆ. ಸೆರೆವಾಸವನ್ನು 7 ವರ್ಷಕ್ಕೆ ವಿಸ್ತರಿಸಲೂ ಅವಕಾಶವಿದೆ.
 • ವಾಣಿಜ್ಯ ಸಂಘಟನೆಗಳಿಗೂ ಬಿಸಿ: ಹೊಸ ಕಾಯಿದೆಯು ವಾಣಿಜ್ಯ ಸಂಘಟನೆಗಳಿಗೂ ಅನ್ವಯಿಸಲಿದೆ. ಅಂದರೆ ಯಾವುದೇ ವಾಣಿಜ್ಯ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿ, ಸರಕಾರಿ ಉದ್ಯೋಗಿಗೆ ಲಂಚ ಕೊಟ್ಟರೆ ಅಥವಾ ಲಂಚ ನೀಡುವ ಆಮಿಷವನ್ನು ಒಡ್ಡಿದರೆ, ಅಂತಹ ಸಂಘಟನೆಯನ್ನೇ ತಪ್ಪಿತಸ್ಥ ಎಂದು ಗುರುತಿಸಿ ಕ್ರಮ ಜರುಗಿಸಲು ಅವಕಾಶವಿದೆ.
 • ಸುಮಾರು 30 ವರ್ಷಗಳ ಹಳೆಯ ಕಾಯಿದೆಯಲ್ಲಿ ಲಂಚ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಉತ್ತೇಜಿಸುವವರ ವಿರುದ್ಧ ಕ್ರಮಕ್ಕೆ ಯಾವುದೇ ನಿಯಮಗಳಿರಲಿಲ್ಲ.
 • 2 ವರ್ಷ ಡೆಡ್‌ಲೈನ್‌:ಯಾವುದೇ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು 2 ವರ್ಷದ ಕಾಲಮಿತಿಯಲ್ಲಿ ಮುಗಿಸಲು ಹೊಸ ಕಾಯಿದೆಯಲ್ಲಿ ಗಡುವು ವಿಧಿಸಲಾಗಿದೆ.

ಅಮಾಯಕರಿಗೆ ರಕ್ಷಣೆ 

 • ಹೊಸ ಕಾಯಿದೆ ಪ್ರಕಾರ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಪೊಲೀಸರು, ಸಿಬಿಐ ಅಥವಾ ತನಿಖಾ ಸಂಸ್ಥೆಗಳು ಶಂಕೆಯ ಮೇರೆಗೆ ಏಕಾಏಕಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ತನಿಖೆ ನಡೆಸುವ ಮುನ್ನ ಸಂಬಂಧಪಟ್ಟ ಮೇಲಾಧಿಕಾರಿಗಳು ಅಥವಾ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗುಮಾನಿ ಮೇರೆಗೆ ಅಮಾಯಕರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಶೋಷಿಸುವುದನ್ನು ತಡೆಯಲು ಈ ನಿಯಮ ಸೇರಿಸಲಾಗಿದೆ. ನಿವೃತ್ತ ಅಧಿಕಾರಿಗಳಿಗೂ ಹೊಸ ನಿಯಮ ಅನ್ವಯವಾಗಲಿದೆ. ಆದರೆ, ರೆಡ್‌ ಹ್ಯಾಂಡೆಡ್‌ ಆಗಿ ಸಿಕ್ಕಿಬಿದ್ದ ಪ್ರಕರಣಗಳಲ್ಲಿ ಪೂರ್ವಾನುಮತಿ ನಿಯಮ ಅನ್ವಯಿಸುವುದಿಲ್ಲ.

ಸ್ನೇಕ್‌ ಬೋಟ್‌ ರೇಸ್‌

 • ಸುದ್ದಿಯಲ್ಲಿ ಏಕಿದೆ? ಶತಮಾನಗಳಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಾ ಬಂದಿರುವ ಕೇರಳದ ಪ್ರಖ್ಯಾತ ಸ್ನೇಕ್‌ ಬೋಟ್‌ ರೇಸ್‌ ಇನ್ನು ಮುಂದೆ ಹೊಸ ಅವತಾರದಲ್ಲಿ ಜನಮನ ಸೂರೆಗೈಯಲಿದೆ. ಸಾಂಪ್ರದಾಯಿಕ ಬೋಟ್‌ ರೇಸ್‌ ಸ್ಪರ್ಧೆಯನ್ನು ಈ ವರ್ಷದಿಂದಲೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಮಾದರಿಯಲ್ಲಿ ಆಡಿಸಲು ಕೇರಳ ಸರಕಾರ ತೀರ್ಮಾನಿಸಿದೆ.
 • ಕೇರಳ ಪ್ರವಾಸೋದ್ಯೋಮ ಇಲಾಖೆ ಹೊಸ ಮಾದರಿಗೆ ಚಾಂಪಿಯನ್ಸ್‌ ಬೋಟ್‌ ಲೀಗ್‌ (ಸಿಬಿಎಲ್‌)’ ಎಂದು ನಾಮಕರಣ ಮಾಡಿದೆ. ಕೇರಳದ ಹಿನ್ನೀರಿನಲ್ಲಿ 13 ಸ್ಥಳಗಳಲ್ಲಿ ಲೀಗ್‌ ಮಾದರಿಯಲ್ಲಿ 13 ರೇಸ್‌ ನಡೆಯಲಿವೆ. ಆಗಸ್ಟ್‌ 11ರಿಂದ ನವೆಂಬರ್‌ 1ರ ತನಕ ಸ್ಪರ್ಧೆ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಕಡಕ್ಕಂಪಳ್ಳಿ ಸುರೇಂದ್ರನ್‌ ಮಂಗಳವಾರ ವಿವರ ಒದಗಿಸಿದ್ದಾರೆ.

ಸ್ಪರ್ಧೆ ಹೇಗೆ?

 • ಲೀಗ್‌ನಲ್ಲಿ ಪ್ರತಿಯೊಂದು ತಾಣದಲ್ಲಿ ಮೊದಲ ಮೂರು ಸ್ಥಾನ ಗಳಿಸುವ ತಂಡಗಳು ಅನುಕ್ರಮವಾಗಿ 5 ಲಕ್ಷ, 3 ಲಕ್ಷ ಹಾಗೂ 1 ಲಕ್ಷ ರೂಪಾಯಿ ಬಹುಮಾನ ಗಿಟ್ಟಿಸುತ್ತವೆ. ಅಲ್ಲದೆ, ಲೀಗ್‌ಗೆ ಅರ್ಹತೆ ಗಳಿಸುವ ಪ್ರತಿಯೊಂದು ತಂಡ ಪ್ರತಿ ತಾಣದಲ್ಲಿ 4 ಲಕ್ಷ ರೂಪಾಯಿ ಬೋನಸ್‌ ಗಳಿಸುತ್ತವೆ.

ಚಾಂಪಿಯನ್‌ಗೆ 25 ಲಕ್ಷ

 • ಸಿಬಿಎಲ್‌ನಲ್ಲಿ ಚಾಂಪಿಯನ್‌ ಪಟ್ಟಕ್ಕೇರುವವರಿಗೆ 25 ಲಕ್ಷ ರೂಪಾಯಿ ಬಹುಮಾನ ಗಿಟ್ಟಿಸಲಿದ್ದರೆ, ರನ್ನರ್‌ಅಪ್‌ಗೆ 15 ಹಾಗೂ ದ್ವಿತೀಯ ರನ್ನರ್‌ಅಪ್‌ಗೆ 10 ಲಕ್ಷ ರೂಪಾಯಿ ಬಹುಮಾನ ಸಿಗುತ್ತದೆ. ಪ್ರತಿಯೊಂದು ರೇಸ್‌ಗೆ ಕನಿಷ್ಠಪಕ್ಷ 5 ಸಾವಿರದಿಂದ 1 ಸಾವಿರ ಜನ ಭೇಟಿ ನೀಡಲಿದ್ದಾರೆ ಎಂಬ ಆತ್ಮವಿಶ್ವಾಸ ಪ್ರವಾಸೋದ್ಯಮ ಇಲಾಖೆಯದ್ದು.

ನ್ಯಾಟೋ ಸ್ಥಾನಮಾನ

 • ಸುದ್ದಿಯಲ್ಲಿ ಏಕಿದೆ? ಭಾರತದ ಜತೆ ಗರಿಷ್ಠ ರಕ್ಷಣಾ ತಂತ್ರಜ್ಞಾನ ಹಂಚಿಕೊಳ್ಳು ವುದಕ್ಕೆ ಅನುಕೂಲವಾಗಲೆಂದು ವಾಣಿಜ್ಯ ಕಾರ್ಯತಂತ್ರದ ಎಸ್​ಟಿಎ-1 ಸ್ಥಾನಮಾನವನ್ನು ಅಮೆರಿಕ ಮಂಜೂರು ಮಾಡಿದೆ. ಇದರಿಂದ ಅಮೆರಿಕದ ಜತೆ ವಾಣಿಜ್ಯ ವ್ಯವಹಾರ ನಡೆಸುವ ಉತ್ತರ ಅಟ್ಲಾಂಟಿಕ್ ಒಪ್ಪಂದ ಒಕ್ಕೂಟದ (ನ್ಯಾಟೋ) ಸದಸ್ಯ ರಾಷ್ಟ್ರಗಳ ಮಟ್ಟಕ್ಕೆ ಭಾರತದ ಸ್ಥಾನ ಏರಿದೆ.
 • ರಾಜಧಾನಿ ದೆಹಲಿ ಮೇಲೆ ವಾಯು ಮಾರ್ಗದ ಮೂಲಕ ನಡೆಯಬಹುದಾದ ಸಂಭವನೀಯ ವೈಮಾನಿಕ, ಕ್ಷಿಪಣಿ, ಡ್ರೋನ್ ದಾಳಿಯನ್ನು ಧ್ವಂಸಗೊಳಿಸುವ ಅಮೆರಿಕ ನಿರ್ವಿುತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಬೆನ್ನಿಗೆ ಭಾರತಕ್ಕೆ ಎಸ್​ಟಿಎ-1 ಸ್ಥಾನಮಾನ ದೊರಕಿರುವುದು ಮಹತ್ವ ಬೆಳವಣಿಗೆ ಯಾಗಿದೆ.
 • ಅಮೆರಿಕ ಎಸ್​ಟಿಎ-1 ಸ್ಥಾನಮಾನವನ್ನು 36 ರಾಷ್ಟ್ರಗಳಿಗೆ ನೀಡಿದೆ. ಈ ಪೈಕಿ ಬಹುತೇಕ ನ್ಯಾಟೋ ಸದಸ್ಯ ದೇಶಗಳಿದ್ದು, ಆಪ್ತವಾಗಿರುವ ನ್ಯಾಟೋಯೇತರ ಕೆಲವು ರಾಷ್ಟ್ರಗಳು ಇವೆ.

ಸ್ಥಾನಮಾನದ ಪರಿಣಾಮ

 • ಭಾರತಕ್ಕೆ ರಫ್ತಾಗುವ ಅತ್ಯಾಧುನಿಕ ರಕ್ಷಣಾ, ರಕ್ಷಣೇತರ ಉತ್ಪನ್ನಗಳಿಗೆ ಹತ್ತು ಹಲವು ಪರವಾನಗಿಯನ್ನು ಪಡೆಯಬೇಕಾದ ಅಗತ್ಯ ಇರುವುದಿಲ್ಲ. ವಾಣಿಜ್ಯ ವ್ಯವಹಾರ ಸುಗಮವಾಗಲಿದೆ.

ಇಂಡೋ-ಪೆಸಿಫಿಕ್ ಆರ್ಥಿಕ ಮುನ್ನೋಟ

 • ಚೀನಾದ ವಲಯ ಮತ್ತು ರಸ್ತೆ ಯೋಜನೆಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇಂಡೋ-ಪೆಸಿಫಿಕ್ ಆರ್ಥಿಕ ಮುನ್ನೋಟವನ್ನು ಇಂಡೋ-ಪೆಸಿಫಿಕ್ ಬಿಜಿನೆಸ್ ವೇದಿಕೆಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಹಿಂದುಮಹಾಸಾಗರ ಮತ್ತು ಶಾಂತ ಸಾಗರದ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಇಂಧನ, ಡಿಜಿಟಲ್ ಆರ್ಥಿಕತೆಗೆ ಉತ್ತೇಜನ ನೀಡುವ ಅನೇಕ ಉಪಕ್ರಮಗಳಿವೆ.

ವಿಶೇಷ ಒಪ್ಪಂದಕ್ಕೆ ಸೋಪಾನ

 • ಸಂಹವನ, ಸ್ಪರ್ಧಾತ್ಮಕತೆ ಮತ್ತು ಭದ್ರತಾ ಒಪ್ಪಂದ (ಸಿಒಎಂಸಿಎಎಸ್​ಎ)ಕ್ಕೆ ಭಾರತ ಮುಂದಡಿ ಇರಿಸಲು ಎಸ್​ಟಿಎ-1 ಸ್ಥಾನಮಾನ ಸೋಪಾನ ಆಗಲಿದೆ. ಅಮೆರಿಕ ಸಿಒಎಂಸಿಎಎಸ್​ಎ ಒಪ್ಪಂದವನ್ನು ರಕ್ಷಣಾ ವಿಷಯದಲ್ಲಿ ಪರಮಾಪ್ತವಾಗಿರುವ ರಾಷ್ಟ್ರಗಳ ಜತೆ ಮಾತ್ರ ಮಾಡಿಕೊಳ್ಳುತ್ತದೆ.
 • ಈ ಒಪ್ಪಂದ ಏರ್ಪಟ್ಟರೆ ಭಾರತಕ್ಕೆ ಅತ್ಯಂತ ಹೆಚ್ಚಿನ ಸುರಕ್ಷಾ ಕ್ರಮಗಳಿರುವ ರಕ್ಷಣಾ ಸಂವಹನ ಸಾಧನಗಳು ದೊರೆಯಲಿವೆೆ. ಆದರೆ, ಈ ಒಪ್ಪಂದಕ್ಕೆ ಸಹಿ ಹಾಕಿದರೆ ಅತಿ ಸೂಕ್ಷ್ಮವಾದ ರಕ್ಷಣಾ ಮಾಹಿತಿ ಅಮೆರಿಕಕ್ಕೆ ದೊರೆಯುತ್ತದೆ ಎಂಬ ಆತಂಕ ಭಾರತಕ್ಕೆ ಇದೆ.

ನ್ಯಾಟೋ

 • ಉತ್ತರ ಅಟ್ಲಾಂಟಿಕ್ ಒಕ್ಕೂಟ ಒಪ್ಪಂದವನ್ನು ನ್ಯಾಟೋ ಎಂದರೆ ಅದು ಉತ್ತರ ಅಟ್ಲಾಂಟಿಕ್ ಒಕ್ಕೂಟ ಎಂದೂ ಸಹ ಕರೆಯಲ್ಪಡುತ್ತದೆ. ಇದು ಉತ್ತರ ಅಟ್ಲಾಂಟಿಕ್ ಒಪ್ಪಂದದ ಆಧಾರದ ಮೇಲೆ ಒಂದು ಅಂತರಸರ್ಕಾರಿ ಮಿಲಿಟರಿ ಮೈತ್ರಿಯಾಗಿದ್ದು 4 ಏಪ್ರಿಲ್ 1949 ರಂದು ಸಹಿ ಹಾಕಲ್ಪಟ್ಟಿತು.
 • ಸಂಘಟನೆಯು ಸದಸ್ಯರ ರಾಜ್ಯಗಳು ಒಂದು ಸದಸ್ಯರಲ್ಲದ ಬಾಹ್ಯ ಪಕ್ಷದ ಆಕ್ರಮಣಕ್ಕೆ ಪ್ರತಿಯಾಗಿ ಪರಸ್ಪರ ರಕ್ಷಣೆಗೆ ಒಪ್ಪಿಗೆ ಸೂಚಿಸುತ್ತದೆ. ನ್ಯಾಟೋ ಪ್ರಧಾನ ಕಚೇರಿಯು ಹರೆನ್, ಬ್ರಸೆಲ್ಸ್, ಬೆಲ್ಜಿಯಂನಲ್ಲಿದೆ, ಅಲ್ಲಿ ಸುಪ್ರೀಂ ಅಲೈಡ್ ಕಮಾಂಡರ್ ವಾಸಿಸುತ್ತಿದ್ದಾರೆ.
Related Posts
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಯುಷ್ಮಾನ್‌ಭವ  ಸುದ್ಧಿಯಲ್ಲಿ ಏಕಿದೆ ?ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರ ಆರೋಗ್ಯ ಕಾಪಾಡುವ, ಜಗತ್ತಿನ ಅತಿ ದೊಡ್ಡ ಸರಕಾರ ಪ್ರಾಯೋಜಿತ ಹೆಲ್ತ್‌ ಕೇರ್‌ ಯೋಜನೆ 'ಆಯುಷ್ಮಾನ್‌ ಭಾರತ್‌' ಲೋಕಾರ್ಪಣೆಗೊಂಡಿತು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ...
READ MORE
GDP grows at 7.3% in September quarter
Gross Domestic Product was 7.6 per cent in the second quarter of the last fiscal. The Indian economy grew at 7.3 per cent in the September quarter of current fiscal, up ...
READ MORE
Karnataka Current Affairs – KAS/KPSC Exams- 24th Nov 2017
Bill passed to preserve Chalukya sites The Legislative Assembly on 23rd Nov passed the Chalukya’s Heritage Area Management Authority Bill, 2017, for conservation of Chalukya heritage area of Badami, Ihole and ...
READ MORE
Karnataka Current Affairs – KAS/KPSC Exams- 6th August 2018
Waste processing plants still working at a quarter of their capacity Four months after the High Court of Karnataka directed the Bruhat Bengaluru Mahanagara Palike (BBMP) to revive all seven compost-based ...
READ MORE
“30th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ನೃಪತುಂಗ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ?ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೀಡುವ 2018ನೇ ಸಾಲಿನ 'ನೃಪತುಂಗ ಸಾಹಿತ್ಯ ಪ್ರಶಸ್ತಿ'ಗೆ ಕವಿ ಡಾ. ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನುಬಳಿಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸಿದ್ದಲಿಂಗಯ್ಯ ಅವರನ್ನು ಸರ್ವಾನುಮತದಿಂದ ...
READ MORE
Urban Development: Jawaharlal Nehru National Urban Renewal Mission (JNNURM)
The Mission aims at creating economically productive, efficient, equitable and responsive cities. It is being implemented in the cities of Bengaluru and Mysuru in Karnataka with KUIDFC as the Nodal Agency. The ...
READ MORE
Rural Development – Rural Water Supply – KAS/KPSC Exams
Introduction The norm for providing potable drinking water is 55 litres per capita per day (LPCD) with a provision of 3 litres for drinking, 5 litres for cooking, 15 litres for ...
READ MORE
National Current Affairs – UPSC/KAS Exams- 7th February 2019
RBI unlikely to transfer contingency fund to govt. Topic: Economy In News: The Reserve Bank of India (RBI) is unlikely to give in to the government’s demand of transferring funds that was ...
READ MORE
Karnataka: Railways instals PoS machines at 73 reservation counters
The railways have started installing point of sale (PoS) machines at as many as 73 reservation counters. The facility will also be made available at parcel counters, where payments can be ...
READ MORE
Karnataka – State to buy fodder from farmers
The state government will buy fodder from farmers to help them in the wake of the drought, Agriculture Minister Krishna Byre Gowda said on 6th Dec A government order in this ...
READ MORE
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
GDP grows at 7.3% in September quarter
Karnataka Current Affairs – KAS/KPSC Exams- 24th Nov
Karnataka Current Affairs – KAS/KPSC Exams- 6th August
“30th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Urban Development: Jawaharlal Nehru National Urban Renewal Mission
Rural Development – Rural Water Supply – KAS/KPSC
National Current Affairs – UPSC/KAS Exams- 7th February
Karnataka: Railways instals PoS machines at 73 reservation
Karnataka – State to buy fodder from farmers

4 thoughts on ““1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ””

 1. Dear Team,
  You Are Doing a Great Work. Fantastic!.
  Please Post Model Questions and Answers also.

  This would be a great Help to the rural peoples.
  Thanks,

  Santosh Kambale
  9916026232

Leave a Reply

Your email address will not be published. Required fields are marked *