“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಆಯುಷ್ಮಾನ್‌ಭವ 

ಸುದ್ಧಿಯಲ್ಲಿ ಏಕಿದೆ ?ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರ ಆರೋಗ್ಯ ಕಾಪಾಡುವ, ಜಗತ್ತಿನ ಅತಿ ದೊಡ್ಡ ಸರಕಾರ ಪ್ರಾಯೋಜಿತ ಹೆಲ್ತ್‌ ಕೇರ್‌ ಯೋಜನೆ ‘ಆಯುಷ್ಮಾನ್‌ ಭಾರತ್‌’ ಲೋಕಾರ್ಪಣೆಗೊಂಡಿತು.

 • ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ರಾಂಚಿಯಲ್ಲಿ ಉದ್ಘಾಟಿಸಿ, ”ಇದು ಬಡವರ ಸೇವೆಯ ನಿಟ್ಟಿನಲ್ಲಿ ಮಹತ್ವದ ಕ್ರಮ,” ಎಂದು ಬಣ್ಣಿಸಿದರು.

ಯಾಕೆ ಬೇಕು ಆಯುಷ್ಮಾನ್‌?

 • ಸಮೀಕ್ಷೆ ಪ್ರಕಾರ ದೇಶದ ಗ್ರಾಮೀಣ ಭಾಗದ 9% ಮತ್ತು ನಗರಗಳ 82% ಜನರಿಗೆ ಯಾವುದೇ ಆರೋಗ್ಯ ವಿಮೆ ಇಲ್ಲ.
 • ಗ್ರಾಮೀಣ ಭಾಗದ 24%, ನಗರದ 18 ಜನರು ಆಸ್ಪತ್ರೆ ಖರ್ಚು ನಿಭಾಯಿಸಲು ಸಾಲ ಮಾಡಬೇಕಾದ ಸ್ಥಿತಿ ಇದೆ.

ದುಡ್ಡೆಷ್ಟು ಬೇಕು?

 • ಇದು 6000 ಕೋಟಿ ರೂ. ಯೋಜನೆ. 60% ಕೇಂದ್ರದ ಪಾಲು, 40% ರಾಜ್ಯಗಳದ್ದು.

ಫಲಾನುಭವಿಗಳು ಯಾರು?

 • 2011ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಜನಗಣತಿಯಲ್ಲಿ ನೋಂದಣಿಯಾಗಿರುವ ಗ್ರಾಮೀಣ ಭಾಗದ ಜನರು
 • ವಾಸಿಸಲು ಮನೆ ಇಲ್ಲದವರು, ನಿರ್ಗತಿಕರು
 • ಕಡುಬಡವರು, ನಿರ್ಗತಿಕರು, ನಿರಾಶ್ರಿತರು
 • ಮಲಹೊರುವ ಪದ್ಧತಿಯಲ್ಲಿ ಭಾಗಿಯಾಗಿದ್ದವರು, ಅವರ ಕುಟುಂಬದವರು
 • ಪ್ರಾಚೀನ ಬುಡಕಟ್ಟು ಜನಾಂಗದವರು
 • ಜೀತಪದ್ಧತಿಯಿಂದ ಕಾನೂನುಬದ್ಧವಾಗಿ ಬಿಡುಗಡೆಗೊಂಡವರು
 • ಒಂದು ಕೋಣೆಯ ಮನೆ, ಕಚ್ಚಾಗೋಡೆ, ಕಚ್ಚಾಛಾವಣಿ ಹೊಂದಿರುವ ಮನೆಯಲ್ಲಿ ವಾಸಿಸುತ್ತಿರುವವರು
 • 18ರಿಂದ 59 ವರ್ಷದ ಒಳಗಿನ ಯಾವುದೇ ಸದಸ್ಯರಿಲ್ಲದೇ; ಕಿರಿಯರು ಮಾತ್ರ ಇರುವ ಕುಟುಂಬ – ಕುಟುಂಬಕ್ಕೆ ಮಹಿಳೆ ಯಜಮಾನಿಯಾಗಿದ್ದು, ಮನೆಯಲ್ಲಿ 16ರಿಂದ 59 ವರ್ಷದ ಯಾವುದೇ ಪುರುಷ ಸದಸ್ಯ ಇರದಿದ್ದರೆ
 • ಮನೆಯಲ್ಲಿ ಅಂಗವಿಕಲರಿದ್ದು, ಅವರಿಗೆ ವಯಸ್ಕ ಪೋಷಕರು ಇರದಿದ್ದರೆ
 • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ
 • 25 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಅನಕ್ಷರಸ್ಥರು
 • ಭೂಮಿರಹಿತ ಕೂಲಿ ಕಾರ್ವಿುಕರು

ಯಾರು ಫಲಾನುಭವಿಗಳಲ್ಲ

 • ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ಮೋಟಾರು ವಾಹನ ಹೊಂದಿರುವವರು
 • ತ್ರಿಚಕ್ರ, ನಾಲ್ಕು ಚಕ್ರಗಳ ಯಾಂತ್ರೀಕೃತ ಕೃಷಿ ಉಪಕರಣ ಹೊಂದಿದವರು
 • 50,000 ರೂ. ಗಿಂತ ಹೆಚ್ಚು ಕ್ರೆಡಿಟ್ ಲಿಮಿಟ್​ನ ಕಿಸಾನ್ ಕ್ರೆಡಿಟ್ ಕಾರ್ಡ್​ದಾರರು
 • ಸರ್ಕಾರಿ ಉದ್ಯೋಗಿಗಳು
 • ಸರ್ಕಾರದಲ್ಲಿ ನೋಂದಣಿಯಾಗಿರುವ ಕೃಷಿಯೇತರ ಉದ್ಯಮ ಹೊಂದಿರುವವರು
 • ಮಾಸಿಕ -ಠಿ; 10,000 ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು
 • ಆದಾಯ ತೆರಿಗೆ, ವೃತ್ತಿ ತೆರಿಗೆ ಪಾವತಿದಾರರು
 • ಮೂರು ಕೊಠಡಿಯ ಮನೆ, ಪಕ್ಕಾಗೋಡೆ, ಛಾವಣಿ ಹೊಂದಿರುವ ಮನೆಯಲ್ಲಿ ವಾಸ ಮಾಡುವವರು
 • ಫ್ರಿಜ್, ಲ್ಯಾಂಡ್​ಲೈನ್ ದೂರವಾಣಿ ಹೊಂದಿರುವವರು
 • 5 ಎಕರೆಗಿಂತ ಹೆಚ್ಚಿನ ನಿರಾವರಿ ಭೂಮಿ, ಕೃಷಿ ಉಪಕರಣಗಳನ್ನು ಹೊಂದಿರುವವರು
 • 5 ಎಕರೆಗಿಂತ ಹೆಚ್ಚು ಭೂಮಿ, ಕೃಷಿ ಉಪಕರಣಗಳನ್ನು ಹೊಂದಿರುವವರು

5 ಲಕ್ಷ ರೂ. ಕವರೇಜ್‌

 • ಸರಕಾರಿ/ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ಹಣ ಪಾವತಿಸಬೇಕಾಗಿಲ್ಲ.
 • ಒಂದು ಕುಟುಂಬಕ್ಕೆ 5 ಲಕ್ಷ ರೂ. ವಿಮೆ ಲಭ್ಯ
 • ಕುಟುಂಬದ ಗಾತ್ರ/ ವಯಸ್ಸಿಗೆ ಮಿತಿ ಇಲ್ಲ
 • ನೋಂದಣಿಯಾದ ದಿನದಿಂದಲೇ ಕವರೇಜ್‌
 • ದೇಶದ ಯಾವುದೇ ಭಾಗದಲ್ಲೂ ಚಿಕಿತ್ಸೆಗೆ ಅವಕಾಶ
 • ಅಲೋಪತಿ ಮಾತ್ರವಲ್ಲ ಆಯುಷ್‌ ಪದ್ಧತಿಗೂ ಅನ್ವಯ

ನೋಂದಣಿ ಅತ್ಯಂತ ಸುಲಭ

 • ನೋಂದಣಿಗೆ ಆಧಾರ್‌ ಕಾರ್ಡ್‌ ಬೇಕಾಗಿಲ್ಲ. ರೇಷನ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿಯೂ ಸಾಕು.
 • ಪ್ರತಿ ಕುಟುಂಬಕ್ಕೆ ವಾರ್ಷಿಕ ಪ್ರೀಮಿಯಂ ಮೊತ್ತ 2000 ರೂ.(ಇನ್ನೂ ಖಚಿತಗೊಂಡಿಲ್ಲ)

ಯಾವ ರಾಜ್ಯ ಕೈಜೋಡಿಸಿಲ್ಲ?

 • ತೆಲಂಗಾಣ, ಒಡಿಶಾ, ದಿಲ್ಲಿ, ಕೇರಳ, ಪಂಜಾಬ್‌ ]
 • 8735 ಆಸ್ಪತ್ರೆಗಳಲ್ಲಿ ಸೇವೆ ಲಭ್ಯ
 • 40000 ಕ್ಷೇಮ ಧಾಮಗಳ ಸ್ಥಾಪನೆ
 • 1354 ಚಿಕಿತ್ಸಾ ಪ್ಯಾಕೇಜ್‌ಗಳು

ಯೋಗ ಕಾಲೇಜಿಗೆ ಆಯುಷ್ಮಾನ್ಯತೆ

ಸುದ್ಧಿಯಲ್ಲಿ ಏಕಿದೆ ?ಉಜಿರೆಯ ಶ್ರೀ ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿಗೆ ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಸೆಂಟರ್ ಆಫ್ ಎಕ್ಸಲೆನ್ಸ್ ಮಾನ್ಯತೆ ನೀಡಿದೆ.

ಉದ್ದೇಶ

 • ಸಂಶೋಧನೆಗೆ ಅತ್ಯುತ್ತಮ ಸಂಸ್ಥೆ ಎಂದು ಗುರುತಿಸಿ, ಇನ್ನೂ ಹೆಚ್ಚಿನ ಸಂಶೋಧನೆಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಹಾಗೂ ಈ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಗೊಳಿಸಲು, ಅಗತ್ಯ ಅನುದಾನದೊಂದಿಗೆ ಆಯುಷ್ ಮಂತ್ರಾಲಯ ಈ ಮಾನ್ಯತೆ ನೀಡಿದೆ.

ಹಿನ್ನಲೆ

 • ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ 1986ರಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಕ್ಷೇತ್ರದಲ್ಲಿ ಪ್ರಾರಂಭಿಸಿದರು. ನಂತರ ಅಲ್ಲಿ ಚಿಕಿತ್ಸೆ ಪಡೆದ ಫಲಾನುಭವಿಗಳ ಅನುಭವಗಳಿಂದ ಪ್ರಭಾವಿತರಾಗಿ 1989ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಪದವಿ ನೀಡುವ ಮಹಾವಿದ್ಯಾಲಯವನ್ನು ಉಜಿರೆಯಲ್ಲಿ ಪ್ರಾರಂಭಿಸಿದರು.
 • 15 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜು ಇಂದು 120 ವಿದ್ಯಾರ್ಥಿಗಳ ಪ್ರವೇಶಾತಿ ಹೊಂದಿದೆ. ದೇಶ-ವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
 • ಈ ವಿದ್ಯಾಲಯ ಹಲವು ಪ್ರಥಮಗಳಿಗೆ ನಾಂದಿಹಾಡಿದ್ದು, 2010ರಲ್ಲಿ ಸ್ನಾತಕೋತ್ತರ ಪದವಿ ಆರಂಭವಾಗಿ, 2016ರಲ್ಲಿ ಪಿಎಚ್.ಡಿ ವಿಭಾಗದ ಪದವಿಗೆ ಸರ್ಕಾರ ಮತ್ತು ವಿವಿ ಅನುಮತಿ ಪಡೆದಿದೆ. ವಿದ್ಯಾರ್ಥಿಗಳಿಗೆ ಕಲಿಕಾ ಕೇಂದ್ರವಾಗಿ ಶಾಂತಿವನದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಈ ಕಾಲೇಜಿಗೆ ಬೆನ್ನೆಲುಬಾಗಿದೆ.
 • ರಾಜ್ಯಾದ್ಯಂತ ಈ ಚಿಕಿತ್ಸಾ ಪದ್ಧತಿಯನ್ನು ಸಾಮಾನ್ಯ ಜನರಿಗೂ ತಲುಪಿಸುವ ಉದ್ದೇಶದಿಂದ 2009ರಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ಸರ್ಕಾರಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿ ಹೊರರೋಗಿ ವಿಭಾಗ/ಘಟಕ ಪ್ರಾರಂಭಿಸಿ ಹಲವರಿಗೆ ಪ್ರಕೃತಿ ಚಿಕಿತ್ಸಾ ಸೌಲಭ್ಯ ಲಭಿಸುವಂತಾಗಿದೆ.

ಸಂಶೋಧನಾ ಕೇಂದ್ರ:

 • ಹೆಗ್ಗಡೆಯವರ ಆಶಯದಂತೆ, 2011ರಲ್ಲಿ ಶಾಂತಿವನದಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸಲಾಯಿತು. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ದೇಹ ಹಾಗೂ ಕಾಯಿಲೆ ನಿವಾರಣೆಯಲ್ಲಿ ಎಷ್ಟು ಪರಿಣಾಮಕಾರಿ ಎಂದು ಸಂಶೋಧನಾತ್ಮಕವಾಗಿ ಜಗತ್ತಿಗೆ ತೋರಿಸುವ ಉದ್ದೇಶದಿಂದ ಸಂಶೋಧನಾ ವಿಭಾಗವನ್ನು ಪ್ರಾರಂಭಿಸಲಾಯಿತು. ಅದಕ್ಕೆ ಬೇಕಾದ ಸುಸಜ್ಜಿತ ಉಪಕರಣಗಳೊಂದಿಗೆ ಸಂಶೋಧನಾ ಘಟಕದಲ್ಲಿ 40ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಯೋಜನೆ ಮಹತ್ವ ಏನು?

 • ಜೀವನಶೈಲಿಯಿಂದ ಬರುವ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಬೊಜ್ಜುತನ, ಮುಂತಾದ ವ್ಯಾಧಿಗಳಿಗೆ ಈ ಯೋಜನೆಯಲ್ಲಿ ಮುಂದಿನ ಮೂರು ವರ್ಷ ಕಾಲ ವಿಶೇಷ ಸಂಶೋಧನೆಗಳು ನಡೆಯಲಿವೆ. ಈ ಸಂಶೋಧನೆಗಳಿಗೆ ಅಗತ್ಯವಾದ ಅತ್ಯಾಧುನಿಕ ಆಸ್ಪತ್ರೆ, ಸಂಶೋಧನಾ ಉಪಕರಣಗಳು ಹಾಗೂ ತಜ್ಞ ಸಂಶೋಧನಾ ತಂಡವನ್ನು ನಿಯೋಜಿಸಲಿದೆ. ಈ ಸಂಶೊಧನೆಯು ವೈದ್ಯಕೀಯ ಕ್ಷೇತ್ರಕ್ಕೇ ಹೊಸ ದಿಕ್ಸೂಚಿ ನೀಡಲಿದೆ. ಈ ಸಂಶೋಧನಾ ಕೇಂದ್ರ ಪದವಿ, ಸ್ನಾತಕೊತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ.

ಐರಾವತ ಯೋಜನೆಗೆ ಚಾಲನೆ

ಸುದ್ಧಿಯಲ್ಲಿ ಏಕಿದೆ ?ಸಮಾಜ ಕಲ್ಯಾಣ ಇಲಾಖೆಯು ಟ್ಯಾಕ್ಸಿ ಕಂಪನಿಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಐರಾವತ’ ಯೋಜನೆಗೆ ಚಾಲನೆ ದೊರೆತಿದೆ.

 • ಸರ್ಕಾರ ಹಾಗೂ ಊಬರ್ ಕಂಪನಿ ನಡುವೆ ಒಡಂಬಡಿಕೆ ನೆರವೇರಿತು. ಒಟ್ಟು -ಠಿ;225 ಕೋಟಿ ಮೊತ್ತದ ಈ ಯೋಜನೆ ಊಬರ್​ನ -ಠಿ;25 ಕೋಟಿ ವೆಚ್ಚದ ಜತೆ ಅನುಷ್ಠಾನವಾಗಲಿದೆ.

ಐರಾವತ’ ಯೋಜನೆ

 • ಪರಿಶಿಷ್ಟ ಜಾತಿ-ಪಂಗಡದ ಫಲಾನುಭವಿಗಳಿಗೆ ಟ್ಯಾಕ್ಸಿ ಕಂಪನಿಗಳು ವಿವಿಧ ತರಬೇತಿ ನೀಡಿ, ಪ್ರಮಾಣ ಪತ್ರ ವಿತರಿಸುವ ಜತೆಗೆ ಉದ್ಯೋಗಕ್ಕೆ ವೇದಿಕೆ ಕಲ್ಪಿಸಿ ತನ್ನ ನೆಟ್​ವರ್ಕ್​ಗಳಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳಲಿವೆ.
 • ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸರ್ಕಾರದ ಸಹಾಯಧನಕ್ಕೆ ಪರಿಗಣಿಸಲಾಗುತ್ತದೆ.
 • ಫಲಾನುಭವಿಗಳಿಗೆ ಇನ್ನು ಮುಂದೆ ತರಬೇತಿ ಸಹಿತ ಅವರಿಗೆ ಹೆಚ್ಚಿನ ಆದಾಯದ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಅವರ ಕುಟುಂಬಕ್ಕೆ ಆದಾಯ ಹೆಚ್ಚಿ ಆರ್ಥಿಕವಾಗಿ ಸಬಲಗೊಳ್ಳಲು ಸಾಧ್ಯ.
 • ಮೊದಲ ಹಂತದಲ್ಲಿ ಹುಬ್ಬಳ್ಳಿ, ಮೈಸೂರು, ಮಂಗಳೂರು, ಬೆಂಗಳೂರಲ್ಲಿ ತರಬೇತಿ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ 2 ಮತ್ತು 3ನೇ ಹಂತದ ನಗರಗಳಿಗೆ ವಿಸ್ತರಿಸಲಾಗುತ್ತದೆ’.

ಯೋಜನೆ ಹೈಲೈಟ್ಸ್

# ಶೇ.10 ಮಹಿಳೆಯರಿಗೆ ಮೀಸಲು

# ಶೇ.10-15 ಎಲೆಕ್ಟ್ರಿಕ್ ವಾಹನ ಬಳಕೆಗೆ ಆದ್ಯತೆ

# ಮಹಿಳಾ ಫಲಾನುಭವಿಗೆ 6 ಲಕ್ಷ ರೂ.

# ಪರಿಶಿಷ್ಟ ಜಾತಿ ಯುವಕರಿಗೆ 3500 ವಾಹನ

# ಪರಿಶಿಷ್ಟ ವರ್ಗದವರಿಗೆ 1000 ವಾಹನ

# ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ವಾಹನ ಕೊಳ್ಳಲು 5 ಲಕ್ಷ ರೂ. ಅನುದಾನ

ವಿಲೇಜ್​ ರಾಕ್​ಸ್ಟಾರ್ಸ್​

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಸ್ಸಾಮಿ ಚಲನಚಿತ್ರ ‘ವಿಲೇಜ್​ ರಾಕ್​ಸ್ಟಾರ್ಸ್​’ ಈ ಬಾರಿಯ 91 ನೇ ಆಸ್ಕರ್​ ಅವಾರ್ಡ್​ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಆಸ್ಕರ್ ಪ್ರವೇಶ ಆಯ್ಕೆ ಸಮಿತಿ ಅಧ್ಯಕ್ಷ , ಕನ್ನಡಿಗ ಎಸ್​. ವಿ.ರಾಜೇಂದ್ರ ಸಿಂಗ್​ ಬಾಬು ಘೋಷಿಸಿದ್ದಾರೆ.

 • ವಿಲೇಜ್​ ರಾಕ್​ಸ್ಟಾರ್ಸ್​ ಸಿನಿಮಾವನ್ನು ರಿಮಾ ದಾಸ್ ನಿರ್ದೇಶನ ಮಾಡಿದ್ದಾರೆ. ಸಣ್ಣ ಹಳ್ಳಿಯ ಬಡ ಕುಟುಂಬದ 10 ವರ್ಷದ ಬಾಲಕಿ ಧನು ಎಂಬಾಕೆ ಗಿಟಾರ್​ ಕೊಂಡುಕೊಳ್ಳಬೇಕು. ತನ್ನದೇ ಒಂದು ಸಂಗೀತದ ತಂಡ ಕಟ್ಟಬೇಕು ಎಂದು ಕನಸು ಕಾಣುವ ಕಥಾವಸ್ತು ಚಿತ್ರದಲ್ಲಿದೆ.
 • ರಾಷ್ಟ್ರ ಪ್ರಶಸ್ತಿ ಪಡೆದ ಈ ಚಲನಚಿತ್ರ ಕಳೆದ ವರ್ಷ ಟೊರಾಂಟೋದಲ್ಲಿ ನಡೆದ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಂಡಿತ್ತು.
 • ಚಿತ್ರದಲ್ಲಿ ಬಡ ಬಾಲಕಿಯ ಪಾತ್ರದಲ್ಲಿ ಭನಿತಾ ದಾಸ್​ ನಟಿಸಿದ್ದು ಈಕೆ ರಿಮಾ ದಾಸ್​ ಅಕ್ಕನ ಮಗಳು. ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜಗತ್ತಿನ ಹಲವು ಕಡೆ ನಡೆದ ಫಿಲ್ಮ್​ ಫೆಸ್ಟಿವಲ್​ಗಳಲ್ಲಿ ಪ್ರದರ್ಶನಗೊಂಡು, ಚಿತ್ರದ ಎಡಿಟಿಂಗ್​, ಧ್ವನಿ ಮುದ್ರಣ ಸೇರಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
 • ಸಂಜಯ್​ಲೀಲಾ ಬನ್ಸಾಲಿಯವರ ಪದ್ಮಾವತ್​, ಅಲಿಯಾ ಭಟ್​ ಅವರ ರಾಝಿ, ರಾಣಿ ಮುಖರ್ಜಿಯವರ ಹಿಚ್ಕಿ, ವರುಣ್​ ಧವನ್​ರವರ ಅಕ್ಟೋಬರ್​, ಮಾಂಟೋ, ಲವ್​ ಸೋನಿಯಾ ಸಿನಿಮಾಗಳು ಈ ಬಾರಿಯ ಆಸ್ಕರ್​ ರೇಸ್​ನಲ್ಲಿದ್ದವು. ಅವುಗಳನ್ನೆಲ್ಲ ಹಿಂದಿಕ್ಕಿ ವಿಲೇಜ್ ರಾಕ್​ಸ್ಟಾರ್ಸ್​ ಆಯ್ಕೆಯಾಗಿದೆ.
 • ಎಸ್​. ವಿ.ರಾಜೇಂದ್ರ ಸಿಂಗ್​ ಬಾಬು ಅವರು ಭಾರತ ಫಿಲ್ಮ್ ಫೆಡರೇಶನ್​ನಿಂದ ಸಮಿತಿಗೆ ನೇಮಕಗೊಂಡಿದ್ದಾರೆ.

ಅಕಾಡೆಮಿ ಪ್ರಶಸ್ತಿಗಳ ಬಗ್ಗೆ

 • ಅಕಾಡೆಮಿ ಪ್ರಶಸ್ತಿಗಳು, “ಆಸ್ಕರ್ಸ್” ಎಂದು ಪ್ರಸಿದ್ಧವಾಗಿದೆ 24 ಕಲಾತ್ಮಕ ಮತ್ತು ತಾಂತ್ರಿಕ ಗೌರವಗಳ ಒಂದು ಗುಂಪಾಗಿದೆ, ಇದು US ಚಲನಚಿತ್ರೋದ್ಯಮದಲ್ಲಿ ಸಿನಿಮೀಯ ಸಾಧನೆಗಳ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಇದನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (ಎಎಮ್ಪಿಎಎಸ್) ವಾರ್ಷಿಕವಾಗಿ ನೀಡಲಾಗುತ್ತದೆ. ಪ್ರಶಸ್ತಿಯನ್ನು ಮೊದಲ ಬಾರಿಗೆ 1929 ರಲ್ಲಿ ಮಂಡಿಸಲಾಯಿತು. ವಿಜೇತರಿಗೆ ಅಕಾಡೆಮಿ ಅವಾರ್ಡ್ ಆಫ್ ಮೆರಿಟ್ (ಪ್ರಸಿದ್ಧ ಆಸ್ಕರ್ ಪ್ರಶಸ್ತಿ) ಎಂದು ಅಧಿಕೃತವಾಗಿ ಪ್ರತಿಮೆ ನೀಡಲಾಗಿದೆ.
Related Posts
Introduction Wind power is the conversion of wind energy into a useful form of energy Wind Energy is generated by harnessing the kinetic energy of atmospheric air Wind turbines work by transforming the ...
READ MORE
National Current Affairs – UPSC/KAS Exams- 6th February 2019
100% use of VVPAT for Lok Sabha polls: EC Topic: Polity and Governance In News: The Election Commission informed the Madras High Court that it had made it clear way back in ...
READ MORE
Karnataka Current Affairs – KAS/KPSC Exams – 4th March 2018
First Rashtrakoota Utsava held in Kalaburagi The department of Kannada and Culture and the Kalaburagi district administration is hosting a Rashtrakoota Utsava for the first time. The celebrations kicked off at Malakhedanalli, ...
READ MORE
Karnataka Current Affairs – KAS/KPSC Exams- 4th August 2018
Inland container yard work to begin soon at Kadakola Work on the proposed greenfield project for an inland container yard by Container Corporation of India Ltd. (Concor) at Kadakola, between Mysuru ...
READ MORE
Karnataka among 7 states selected for groundwater project
Karnataka is among seven states selected by the Union Water Resources Ministry for the World Bank-aided National Groundwater Management Improvement Scheme (NGMIS) on a pilot basis. Facing a sharp decline in ...
READ MORE
Karnataka Current Affairs – KAS/KPSC Exams – 15th April 2018
KLS GIT students win hackathon event Three teams of students from KLS Gogte Institute of Technology have won the first round of the “Smart India Hackathon-18”. The three teams comprised Kartik Kumar ...
READ MORE
World Trade Organisation - Nairobi meeting from December 15 to 18. India is likely to ratify the World Trade Organisation’s (WTO) Trade Facilitation Agreement (TFA), aimed at easing customs rules to expedite ...
READ MORE
Karnataka: Air ambulance service to be operational in Jan
Karnataka state will get its first air ambulance facility in the New Year. The Chief Minister Siddaramaiah formally launched the air ambulances on 16th Dec, commercial operations will begin in January ...
READ MORE
Karnataka Current Affairs – KAS/KPSC Exams- 15th August 2018
High Court: ‘Bengaluru’s rating will go up if...’ The High Court observed that the rating of Bengaluru will go up if the BBMP improves its rating by effectively discharging its functions. A ...
READ MORE
Karnataka – State to buy fodder from farmers
The state government will buy fodder from farmers to help them in the wake of the drought, Agriculture Minister Krishna Byre Gowda said on 6th Dec A government order in this ...
READ MORE
WIND ENERGY
National Current Affairs – UPSC/KAS Exams- 6th February
Karnataka Current Affairs – KAS/KPSC Exams – 4th
Karnataka Current Affairs – KAS/KPSC Exams- 4th August
Karnataka among 7 states selected for groundwater project
Karnataka Current Affairs – KAS/KPSC Exams – 15th
Trade Facilitation Agreement
Karnataka: Air ambulance service to be operational in
Karnataka Current Affairs – KAS/KPSC Exams- 15th August
Karnataka – State to buy fodder from farmers

Leave a Reply

Your email address will not be published. Required fields are marked *