“2nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಆರೋಗ್ಯ ಸೇವೆ

 • ಸುದ್ಧಿಯಲ್ಲಿ ಏಕಿದೆ ? ಕಾಡನ್ನೇ ನಂಬಿಕೊಂಡು ಬದುಕು ನಡೆಸುವ ಬುಡಕಟ್ಟು ಜನರಿಗಾಗಿ ರಾಜ್ಯ ಸರಕಾರ ಸಂಚಾರಿ ಆರೋಗ್ಯ ಘಟಕ ಸೇವೆಯನ್ನು ಪ್ರಾರಂಭಿಸಿದೆ.

ಯಾರು ಜಾರಿಗೆ ತರುತ್ತಾರೆ ?

 • ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಆರೋಗ್ಯ ಸೇವೆ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ.

ಉದ್ದೇಶ

 • ಉಚಿತ ಆರೋಗ್ಯ ಸೇವೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಆದಿವಾಸಿಗಳ ಮನೆಮನೆ ಬಾಗಿಲಿಗೆ ಹೋಗಲಿರುವ ವಾಹನ ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲಿದೆ.
 • ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಪರಿಶಿಷ್ಟ ಪಂಗಡಗಳ ಇಲಾಖೆ ಈ ಆರೋಗ್ಯ ಸೇವೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, 8 ಕೋಟಿ ವೆಚ್ಚದಲ್ಲಿ 16 ವಾಹನಗಳನ್ನು ಇದಕ್ಕಾಗಿ ಮೀಸಲಾಗಿರಸಲಾಗಿದೆ.
 • 8 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದ್ದು, ಮೊದಲ ಹಂತದಲ್ಲಿ ಕೊಡಗು,ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ.
 • ಆರೋಗ್ಯ ಘಟಕಗಳು ಪ್ರತಿದಿನ 2 ಗ್ರಾಮಗಳಿಗೆ ಭೇಟಿ ನೀಡಲಿದ್ದು, ಪ್ರತಿ ಘಟಕದಲ್ಲಿ ಓರ್ವ ವೈದ್ಯರು ಮತ್ತು ನರ್ಸ್ ಇರುತ್ತಾರೆ.

ನೂತನ ಶಿಕ್ಷಣ ನೀತಿ

 • ಸುದ್ಧಿಯಲ್ಲಿ ಏಕಿದೆ ? ಡಾ.ಕೆ. ಕಸ್ತೂರಿರಂಗನ್‌ ವರದಿಯಲ್ಲಿ ಪ್ರಸ್ತಾಪಿತವಾದ ಹೊಸ ಶಿಕ್ಷಣ ನೀತಿ ಜಾರಿಗೆ ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ.
 • ವರದಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಶಿಕ್ಷಣ ಪರಿಷತ್‌ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವರದಿ ಅನುಷ್ಠಾನದ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
 • ”ತಾಂತ್ರಿಕ ಶಿಕ್ಷಣ, ಶಿಕ್ಷಕರ ತರಬೇತಿ, ವಿಶ್ವವಿದ್ಯಾಲಯ ಶಿಕ್ಷಣ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ವಿವಿ ಕುಲಪತಿಗಳು, ತಜ್ಞರ ಜತೆಗೆ ಸಮಾಲೋಚನೆ ನಡೆಸಬೇಕಾದ ಅಗತ್ಯವಿದೆ,”.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)

 • ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ನು ರೂಪಿಸಲು ಬಾಹ್ಯಾಕಾಶ ವಿಜ್ಞಾನಿ ಕೆ ಕಸ್ತೂರಿರಂಗನ್ ನೇತೃತ್ವದ ಹೊಸ ಒಂಬತ್ತು-ಸದಸ್ಯರ ಸಮಿತಿಯನ್ನು ಮಾನವ ಸಂಪನ್ಮೂಲ ಸಚಿವಾಲಯ ರಚಿಸಿದೆ ಫಲಕದ ಇತರ ಸದಸ್ಯರು ವ್ಯಾಪಕ ಹಿನ್ನೆಲೆಗಳಿಂದ ಆಯ್ದ ತಜ್ಞರು ಮತ್ತು ಶಿಕ್ಷಣ ತಜ್ಞರು ಸೇರಿದ್ದಾರೆ.
 • ಕೇರಳದ ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳನ್ನು 100% ಸಾಕ್ಷರತೆಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಐಎಎಸ್ ಅಧಿಕಾರಿ ಕೆ.ಜೆ. ಅಲ್ಫೋನ್ಸ್ ಕನಮಠಂ ಸಮಿತಿ ಈ ಸಮಿತಿಯಲ್ಲಿ ಸೇರಿದೆ. ಸಮಿತಿಯ ಮತ್ತೊಂದು ಸದಸ್ಯರು ರಾಮ್ ಶಂಕರ್ ಕುರೆಲ್ ಆಗಿದ್ದಾರೆ, ಅವರು ಕೃಷಿ ವಿಜ್ಞಾನ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರು ಮಧ್ಯಪ್ರದೇಶದ ಮಾಹೋ, ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ವಿಜ್ಞಾನದ ಉಪಕುಲಪತಿಯಾಗಿದ್ದಾರೆ. ಕರ್ನಾಟಕ ರಾಜ್ಯ ಇನ್ನೋವೇಷನ್ ಕೌನ್ಸಿಲ್ನ ಮಾಜಿ ಸದಸ್ಯ ಕಾರ್ಯದರ್ಶಿ ಎ.ಕೆ.ಶ್ರೀಧರ್, ಭಾಷಾ ಸಂವಹನದ ಪರಿಣಿತ ಡಾ. ಮಝಾರ್ ಆಸಿಫ್, ಗುವಾಹಾಟಿ ವಿಶ್ವವಿದ್ಯಾಲಯದ ಪರ್ಷಿಯನ್ ಪ್ರೊಫೆಸರ್, ಕ್ರಿಶನ್ ಮೋಹನ್ ತ್ರಿಪಾಠಿ, ಮಾಜಿ ಶಿಕ್ಷಣ ನಿರ್ದೇಶಕ, ಟಿ.ವಿ. ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ  ಗಣಿತಜ್ಞ ಮಂಜುಲ್ ಭಾರ್ಗವ ಮತ್ತು ಮುಂಬೈನ ಎಸ್ಎನ್ಡಿಟಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ವಸುಧ ಕಾಮತ್.
 • ಸಮಿತಿಯ ಸದಸ್ಯರು ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ದೇಶದ ವಿಭಿನ್ನ ವಿಭಾಗಗಳು ಮತ್ತು ಪ್ರದೇಶಗಳಿಗೆ ಸೇರಿದ್ದಾರೆ.

 ಹಿನ್ನೆಲೆ

 • 2015 ರಲ್ಲಿ, ನರೇಂದ್ರ ಮೋದಿ ಸರಕಾರ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ಎಸ್.ಆರ್. ಸುಬ್ರಹ್ಮಣ್ಯನ್ ನೇತೃತ್ವದಲ್ಲಿ ಒಂದು ಹೊಸ ಶಿಕ್ಷಣ ನೀತಿಯನ್ನು ಚಾಕ್ ಮಾಡಲು ನಿರ್ಧರಿಸಿದೆ. ಈ ಸಮಿತಿಯು ತನ್ನ ವರದಿಯನ್ನು ಮೇ 2016 ರಲ್ಲಿ ಸಲ್ಲಿಸಿದೆ. ಸಮಿತಿಯು ತನ್ನ ವರದಿಯನ್ನು 90 ಸಂಪುಟಗಳೊಂದಿಗೆ ಎರಡು ಸಂಪುಟಗಳಲ್ಲಿ ಪ್ರಸ್ತುತಪಡಿಸಿದೆ. ಶಿಕ್ಷಣದಲ್ಲಿನ ಇತರ ಪ್ರಮುಖ ಹಿಂದಿನ ಸಮಿತಿಗಳಲ್ಲಿ ಉನ್ನತ ಶಿಕ್ಷಣದ ಬಗ್ಗೆ ರಾಧಾಕೃಷ್ಣನ್ ಕಮೀಷನ್ (1948-49) ಸೇರಿದ ಮಾಧ್ಯಮಿಕ ಶಿಕ್ಷಣ ಮತ್ತು ಕೊಥಾರಿ ಆಯೋಗ (1964-66) ಮುದಲಿಯಾರ್ ಕಮಿಷನ್ (1952 ).
 • ಕೋಠಾರಿ ಆಯೋಗವು ಶಿಕ್ಷಣದ ಅಭಿವೃದ್ಧಿಯ ಬಗ್ಗೆ ಎಲ್ಲ ಹಂತಗಳಲ್ಲಿ ಮತ್ತು ಎಲ್ಲ ವಿಷಯಗಳಲ್ಲಿಯೂ ಸಲಹೆ ನೀಡಲು ಆದೇಶವನ್ನು ಹೊಂದಿತ್ತು. ಕೊಥಾರಿ ಆಯೋಗದ ವರದಿಯನ್ನು 1968 ರ ಶಿಕ್ಷಣ ನೀತಿಯನ್ನು ರೂಪಿಸಲು ಬಳಸಲಾಯಿತು.

ಎಸ್‌ಸಿ ಎಸ್‌ಟಿ ಕಾಯಿದೆ

 • ಸುದ್ದಿಯಲ್ಲಿ ಏಕಿದೆ ? ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1989ರ ಕೆಲವು ಪ್ರಸ್ತಾವನೆಗಳನ್ನು ಬದಲಾಯಿಸಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪಿಗೆ ವ್ಯತಿರಿಕ್ತವಾಗಿ ಕೇಂದ್ರ ಸರಕಾರವು ಕಾಯಿದೆಯ ಹಳೆ ಕಾಯಿದೆಯನ್ನೇ ಮುಂದುವರಿಸಲು ನಿರ್ಧರಿಸಿದೆ.

ಏನಿದು ಪ್ರಕರಣ?

 • ಅಟ್ರಾಸಿಟಿ ಕಾಯ್ದೆ ಪ್ರಕರಣದಲ್ಲಿ ಎಫ್​ಐಆರ್ ಆದ ಕೂಡಲೇ ಆರೋಪಿಯನ್ನು ಬಂಧಿಸಬೇಕಿಲ್ಲ. ಪ್ರಾಥಮಿಕ ತನಿಖೆ ಬಳಿಕ ಬಂಧಿಸಬಹುದೆಂದು ಮಾ.20ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬಳಿಕ ದೇಶಾದ್ಯಂತ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಯಾಗಿ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಒತ್ತಡ ಹೆಚ್ಚಾಗಿತ್ತಾದರೂ ಈ ಸಂಬಂಧ ಕೇಂದ್ರ ಸರ್ಕಾರ ಆಸಕ್ತಿ ತೋರಿರಲಿಲ್ಲ.

ಸುಪ್ರೀಂ ಹೇಳಿದ್ದೇನು

 • ದಲಿತ ದೌರ್ಜನ್ಯ ತಡೆ ಕಾಯಿದೆ ದುರುಪಯೋಗ ತಡೆ ಅಗತ್ಯ.
 • ದೂರು ಬಂದಿದೆ ಎಂಬ ಕಾರಣಕ್ಕೆ ತಕ್ಷಣವೇ ಬಂಧಿಸುವಂತಿಲ್ಲ, ಕಾರಣಗಳನ್ನು ತಿಳಿದುಕೊಳ್ಳಬೇಕು.
 • ಅಧಿಕಾರಿಗಳ ಮೇಲೆ ದೌರ್ಜನ್ಯದ ಆರೋಪ ಬಂದಾಗ ಎಸ್‌ಪಿ ಮಟ್ಟದ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಕ್ರಮ ಕೈಗೊಳ್ಳುವಂತಿಲ್ಲ.
 • ಮೇಲ್ನೋಟಕ್ಕೆ ಆರೋಪ ಸಾಬೀತಾಗದಿದ್ದರೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ.

ಬದಲಾವಣೆ ಏನಾಗಲಿದೆ?

 • ದೌರ್ಜನ್ಯದ ದೂರುಗಳು ಬಂದಾಗ ಪ್ರಾಥಮಿಕ ತನಿಖೆ ಇಲ್ಲದೆಯೇ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು.
 • ಹಿರಿಯ ಅಧಿಕಾರಿಗಳ ಅನುಮತಿ ಅನಗತ್ಯ.
 • ಕೋರ್ಟ್‌ಗಳು ನಿರೀಕ್ಷಣಾ ಜಾಮೀನು ನೀಡುವಂತಿಲ್ಲ.

ಕ್ಲೀನ್ ಮೈ ಕೋಚ್ ಸೌಲಭ್ಯ

 • ಸುದ್ದಿಯಲ್ಲಿ ಏಕಿದೆ ? ರೈಲ್ವೆ ಬೋಗಿ ಮತ್ತು ಶೌಚ ಗೃಹಕ್ಕೆ ಅಂಟಿಕೊಂಡ ಗಬ್ಬುನಾರುವಿಕೆಯ ಹಣೆಪಟ್ಟಿಯನ್ನು ಕಳಚಲು ಭಾರತೀಯ ರೈಲ್ವೆ ಏಳು ಹಂತದ ಕ್ರಮ ಅಳವಡಿಸಿ ಕೊಂಡಿದೆ. ರೈಲಿನೊಳಗಿನ ಸ್ವಚ್ಛತೆ ಕುರಿತಂತೆ ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಲಾಗುತ್ತಿದೆ. 210 ರೈಲುಗಳಲ್ಲಿ ಇದು ಜಾರಿಯಲ್ಲಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಏಳು ಕ್ರಮಗಳು

 • ಬೋಗಿ ಮತ್ತು ಬೋಗಿಯ ಎರಡೂ ಬದಿಗಿರುವ ಶೌಚಗೃಹಗಳ ಸ್ವಚ್ಛತೆಗೆ ಯಂತ್ರಗಳ ಬಳಕೆ.
 • ಶೌಚಗೃಹ, ಬೋಗಿ ಒಳಗೆ ನಡೆದಾಡುವ ಮಾರ್ಗ, ಬಾಗಿಲ ಬಳಿ ಪಡಸಾಲೆ, ಪ್ರಯಾಣಿಕರ ಆಸನದ ಕಳೆಗೆ ಮತ್ತು ಮುಂಭಾಗದಲ್ಲಿ ನೈರ್ಮಲ್ಯ ಕಾಪಾಡುವ ಕೆಲಸವನ್ನು ಆನ್ ಬೋರ್ಡ್ ಹೌಸ್ಕೀಪಿಂಗ್ ಸರ್ವೀಸ್​ಗೆ (ಒಬಿಎಚ್​ಎಸ್) ಗುತ್ತಿಗೆ ನೀಡಲಾಗಿದೆ. ಇದು ರಾಜಧಾನಿ, ಶತಾಬ್ದಿ ಮತ್ತು ದೂರ ಪ್ರಯಾಣದ ಸುಮಾರು 1000 ದ್ವಿಮುಖ ಸಂಚಾರದ ರೈಲುಗಳಲ್ಲಿ ಜಾರಿಯಲ್ಲಿದೆ.
 • ಕ್ಲೀನ್ ಮೈ ಕೋಚ್ ಯೋಜನೆ ಪರಿಚಯಿಸಲಾಗಿದ್ದು, ಪ್ರಯಾಣಿಕರು ಎಸ್​ಎಂಎಸ್ ಅಥವಾ ಆಪ್ ಮೂಲಕ ಇಲ್ಲವೆ ಇಂಟರ್​ನೆಟ್ ಮೂಲಕ ಸ್ವಚ್ಛತೆಗೆ ಕೋರಿಕೆ ಕಳುಹಿಸಬಹುದು.
 • ಕೋಚ್ ಮಿತ್ರ ಸೇವೆ 900 ದ್ವಿಮುಖ ಸಂಚಾರದ ರೈಲುಗಳಲ್ಲಿ ಜಾರಿಯಲ್ಲಿದೆ. ಬೋಗಿಗಳಲ್ಲಿ ಮೂಲಸೌಕರ್ಯಗಳ ಬಗ್ಗೆ ಇದರ ಮೂಲಕ ಸಂವಹನ ನಡೆಸಬಹುದು.
 • ‘ಕ್ಲೀನ್ ರೈಲ್ವೆ ನಿಲ್ದಾಣ’ (ಸಿಟಿಎಸ್) ಯೋಜನೆಯಲ್ಲಿ ರೈಲು ನಿಲುಗಡೆ ನೀಡುವ ನಿಲ್ದಾಣಗಳಲ್ಲಿ ಆಯ್ದ ಕಡೆ ಯಾಂತ್ರೀಕೃತವಾಗಿ ಶೌಚಗೃಹವನ್ನು ಸ್ವಚ್ಛ ಮಾಡಲಾಗುತ್ತದೆ.
 • ಏಸಿ ಕೋಚ್​ಗಳಲ್ಲಿರುವ ಕಸದ ಡಬ್ಬಿಯನ್ನು ಸ್ಲೀಪರ್ ದರ್ಜೆ ಬೋಗಿಗಳಿಗೂ ನೀಡಲಾಗಿದೆ. ಶೌಚಗೃಹದಲ್ಲಿ ಮಗ್​ಗಳನ್ನು ಇರಿಸಲಾಗಿದೆ.
 • ಜೈವಿಕ ಶೌಚಗೃಹಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಗಾಳಿ-ಬೆಳಕು ಬರಲು ಅವಕಾಶ ಕಲ್ಪಿಸಲಾಗಿದೆ ಮತ್ತು ಕಸದ ಡಬ್ಬಿಯನ್ನೂ ಇರಿಸಲಾಗಿದೆ. ಜೈವಿಕ ಶೌಚಗೃಹಗಳ ಬಳಕೆ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿವೆ.

ಕ್ಲೀನ್ ಮೈ ಕೋಚ್ ನ ಹಿನ್ನಲೆ

 • ಭಾರತೀಯ ರೈಲ್ವೆ ಶುಚಿತ್ವವನ್ನು ಸ್ವಚ್ಚ ರೈಲು ಮತ್ತು ಸ್ವಾಯತ್ತ ರೈಲ್ವೆ ಸ್ವಾಮ್ಯದ ಡಿಜಿಟಲ್ ಇಂಡಿಯಾ ಪ್ರೋಗ್ರಾಂಗೆ ಅನುಗುಣವಾಗಿ ಆನ್ಲೈನ್ ​​ಕ್ಲೀನ್ ಮೈ ಕೋಚ್ ಸೇವೆಯನ್ನು ಪ್ರಾರಂಭಿಸಿದ್ದಾರೆ. ಆನ್ಲೈನ್ ​​ಸೇವೆ ಪ್ರಯಾಣಿಕರು ತಮ್ಮ ಕಂಪಾರ್ಟ್ಮೆಂಟುಗಳನ್ನು ಎಸ್ಎಂಎಸ್ ಕಳುಹಿಸುವುದರ ಮೂಲಕ ಅಥವಾ ಗೊತ್ತುಪಡಿಸಿದ ವೆಬ್ಸೈಟ್ನಿಂದ ಅಥವಾ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸ್ವಚ್ಛಗೊಳಿಸಲು ಅನುಮತಿಸುತ್ತದೆ.
 • 2016-17 ರ ರೈಲ್ವೇ ಬಜೆಟ್ ಭಾಷಣದಲ್ಲಿ ರೈಲ್ವೇ ಮಂತ್ರಿಯವರು ಈ ಸೇವೆಯನ್ನು ಘೋಷಿಸಿದರು

ರೆಪೋ ದರ

 • ಸುದ್ದಿಯಲ್ಲಿ ಏಕಿದೆ? ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕುವ ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಕ್ರಮದಿಂದಾಗಿ ದೇಶದ ಬ್ಯಾಂಕ್ ಗ್ರಾಹಕರೀಗ ಹೆಚ್ಚಿನ ಬಡ್ಡಿ ತೆರಲು ಅಣಿಯಾಗಬೇಕಿದೆ. ಮಾರುಕಟ್ಟೆಯ ಸ್ಥಿರತೆಗಾಗಿ ರೆಪೋ ದರವನ್ನು ಆರ್​ಬಿಐ 25 ಮೂಲಾಂಶ ಏರಿಕೆ ಮಾಡಿರುವುದರಿಂದಾಗಿ ಗೃಹ, ವಾಹನ ಸಹಿತ ಎಲ್ಲ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳಗೊಂಡು ಇಎಂಐ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ
 • ಹಣದುಬ್ಬರ ಕಾರಣ: ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 2 ಇರಲಿದೆ ಎಂದು ಆರ್​ಬಿಐ ಅಂದಾಜಿಸಿದೆ. ಅಕ್ಟೋಬರ್-ಡಿಸೆಂಬರ್ ವೇಳೆಗೆ ಇದು ಶೇ. 4.8ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಶೇ. 4.7 ದಾಖಲಾಗಬಹುದು ಎಂದು ಹೇಳಲಾಗಿತ್ತು. ಕನಿಷ್ಠ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಏರಿಕೆ ಮಾಡಿರುವ ಕಾರಣ ಆಹಾರ, ಧಾನ್ಯಗಳ ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ಆರ್​ಬಿಐ ಅಭಿಪ್ರಾಯ ವ್ಯಕ್ತಪಡಿಸಿದೆ. ಜೂನ್​ನಲ್ಲಿ ಹಣದುಬ್ಬರ ಶೇ. 5ಕ್ಕೆ ಏರಿಕೆಯಾಗಿತ್ತು.

ಏನಿದು ರೆಪೋ?

 • ಬ್ಯಾಂಕುಗಳಿಗೆ ಆರ್​ಬಿಐ ನೀಡುವ ಸಾಲದ ಬಡ್ಡಿದರಕ್ಕೆ ರೆಪೋ ಎನ್ನಲಾಗುತ್ತದೆ. ಬ್ಯಾಂಕುಗಳು ಇಟ್ಟಿರುವ ಠೇವಣಿಗೆ ಆರ್​ಬಿಐ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೋ ಎನ್ನಲಾಗುತ್ತದೆ.
 • ರೆಪೋ ದರ ಏರಿಕೆಯಾದಲ್ಲಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ರೆಪೋ ದರ ಇಳಿಕೆಯಾದರೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡುತ್ತವೆ.

ಠೇವಣಿ ಬಡ್ಡಿದರ ಏರಿಕೆ?

 • ಒಂದೆಡೆ ಸಾಲದ ಮೇಲಿನ ಬಡ್ಡಿದರ ಏರಿದರೆ, ಮತ್ತೊಂದೆಡೆ ಗ್ರಾಹಕರ ಠೇವಣಿ ಮೇಲಿನ ಬಡ್ಡಿ ಏರಿಕೆಯಾಗುವ ಸಾಧ್ಯತೆಯಿದೆ.

ಪರಿಣಾಮ ಏನು?

 • ಆರ್​ಬಿಐ ರೆಪೋ ದರ ಹೆಚ್ಚಿಸಿದಂತೆ ಬ್ಯಾಂಕುಗಳೂ ಬಡ್ಡಿದರವನ್ನು ಹೆಚ್ಚಳ ಮಾಡುತ್ತವೆ. ಉದಾಹರಣೆ-ಪ್ರಸ್ತುತ ಶೇ. 5 ಬಡ್ಡಿದರದಲ್ಲಿ 20 ವರ್ಷದ ಅವಧಿಗೆ 1 ಲಕ್ಷ ರೂ. ಸಾಲ ಪಡೆದಿದ್ದರೆ 868 ರೂ. ಇಎಂಐ ಬರುತ್ತದೆ. ಬಡ್ಡಿದರ ಶೇ. 8.75 ಆದರೆ ಇಎಂಐ 884 ರೂ.ಗೆ ಏರಿಕೆಯಾಗುತ್ತದೆ. ಬಡ್ಡಿದರ ಶೇ. 9ಕ್ಕೆ ಏರಿಕೆಯಾದರೆ ಇಎಂಐ 900 ರೂ.ಗೆ ಹೆಚ್ಚಳವಾಗುತ್ತದೆ.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆ

 • ಸುದ್ದಿಯಲ್ಲಿ ಏಕಿದೆ? ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳಿಗೆ ಇದು ಅನ್ವಯವಾಗಲಿದೆ.

ಹಿನ್ನಲೆ

 • ಜಮ್ಮು-ಕಾಶ್ಮೀರದ ಕಥುವಾ ಮತ್ತು ಉತ್ತರಪ್ರದೇಶದ ಉನ್ನಾವೋದಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದ ಅತ್ಯಾಚಾರದ ಘಟನೆಗಳು ಭಾರಿ ತಲ್ಲಣ ಮೂಡಿಸಿದವು. ಮಕ್ಕಳ ಮೇಲೆ ಇಂಥ ದೌರ್ಜನ್ಯ ಎಸಗುವ ವಿಕೃತಕಾಮಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಜನಾಗ್ರಹವೂ ತೀವ್ರಗೊಂಡಿತು.
 • ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ಈ ಸಂಬಂಧ ಏಪ್ರಿಲ್ 21ರಂದು ಸುಗ್ರಿವಾಜ್ಞೆ ಹೊರಡಿಸಿತ್ತು. ಪ್ರಸಕ್ತ, ಅಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದು ಲೋಕಸಭೆಯಲ್ಲಿ ಅನುಮೋದನೆಯನ್ನೂ ಪಡೆದಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕಾಮುಕರಿಗೆ ಇನ್ನು ಮರಣದಂಡನೆ ಜಾರಿಯಾಗಲಿದೆ.
 • ಸುಗ್ರೀವಾಜ್ಞೆ ಅನ್ವಯ : ಈಗಾಗಲೇ ಎರಡು ರಾಜ್ಯಗಳ ನ್ಯಾಯಾಲಯಗಳು ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಘೋಷಿಸಿವೆ. ಅಲ್ಲದೆ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಈ ಸುಗ್ರಿವಾಜ್ಞೆಯನ್ನು ಅನುಸರಿಸಿ ಸ್ವತಂತ್ರ ಮಸೂದೆ ರಚಿಸಿದ್ದು, ಕೇಂದ್ರ ಸರ್ಕಾರದ ಅನುಮೋದನೆಗೆ ಕಾಯುತ್ತಿವೆ ಎಂಬುದು ಗಮನಾರ್ಹ.
 • 12 ವರ್ಷದೊಳಗಿನ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಗಲ್ಲು ವಿಧಿಸುವ ಸಂಬಂಧದ ಮಸೂದೆಯನ್ನು ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಕೂಡ ಅಂಗೀಕರಿಸಿವೆ.

ಸಮಾಜವಿಜ್ಞಾನಿಗಳು ಹೇಳುವುದೇನು?

 • ನಿಜಕ್ಕೂ ಇಂಥದ್ದೊಂದು ಕಾಯ್ದೆಯ ಅವಶ್ಯಕತೆ ಇತ್ತು. ಏನೂ ತಿಳಿಯದ ಮುಗ್ಧ ಮಕ್ಕಳ ಮೇಲೆ ಅತ್ಯಾಚಾರದ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇವೆ. 6-8 ವರ್ಷದ ಹೆಣ್ಣುಮಕ್ಕಳಿಗೆ ಚಾಕ್​ಲೇಟ್ ಆಸೆ ತೋರಿಸಿಯೋ, ಬೆದರಿಸಿಯೋ ದೌರ್ಜನ್ಯ ನಡೆಸುವ ಕಾಮುಕರಿಗೆ ಉಗ್ರ ಶಿಕ್ಷೆ ಆಗಲೇಬೇಕು.
 • ಈ ಮಕ್ಕಳು ಘಟನೆ ಬಗ್ಗೆ ಬಾಯಿ ಬಿಡುವ ಸಾಧ್ಯತೆ ಕಡಿಮೆ ಎಂದು ಭಾವಿಸಿ ದುರುಳರು ಇಂಥ ಕೃತ್ಯಗಳಿಗೆ ಮುಂದಾಗುತ್ತಾರೆ. ಬಾಲ್ಯದಲ್ಲೇ ಜೀವನ ನರಕವಾಗಿಸುವ ಇಂಥ ಕೃತ್ಯಕ್ಕೆ ಮರಣದಂಡನೆ ಸರಿಯಾದ ಶಿಕ್ಷೆಯಾಗಿದ್ದು, ಶಿಕ್ಷೆಯ ಭಯದಿಂದಲಾದರೂ ಮುಂಬರುವ ದಿನಗಳಲ್ಲಿ ಈ ಬಗೆಯ ಘಟನೆಗಳು ತಗ್ಗುವ ಸಾಧ್ಯತೆ ಇದೆ ಎನ್ನುತ್ತಾರೆ ಸಮಾಜವಿಜ್ಞಾನಿಗಳು.

ರಾಜಸ್ಥಾನದಲ್ಲಿನ ಸ್ಥಿತಿ

 • ರಾಜಸ್ಥಾನ ಸರ್ಕಾರ ಅಪರಾಧ ಕಾಯ್ದೆ(ರಾಜಸ್ಥಾನ ತಿದ್ದುಪಡಿ)ಗೆ ಈ ವರ್ಷದ ಮಾರ್ಚ್​ನಲ್ಲಿ ಅಂಗೀಕಾರ ಪಡೆದುಕೊಂಡಿದೆ. ಇದು ಸೆಕ್ಷನ್ 376ಎಎ(12 ವರ್ಷದವರೆಗಿನ ಬಾಲಕಿಯರ ಮೇಲೆ ಅತ್ಯಾಚಾರ) ಮತ್ತು ಸೆಕ್ಷನ್ 376ಡಿಡಿ(12 ವರ್ಷದವರೆಗಿನ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ) ಒಳಗೊಂಡಿದ್ದು, ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ.

ಫಾಸ್ಟ್​ಟ್ರಾ್ಯಕ್ ಕೋರ್ಟ್ ಶೀಘ್ರ

 • ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ದೇಶಾದ್ಯಂತ ಫಾಸ್ಟ್ ಟ್ರಾ್ಯಕ್ ಕೋರ್ಟ್​ಗಳ ಸ್ಥಾಪನೆ ಮತ್ತು ಅಂಥ ಪ್ರಕರಣಗಳಿಗೆ ಸಂಬಂಧಿತ ತನಿಖೆಗೆ ನೆರವಾಗುವ ಮೂಲಭೂತ ಸೌಕರ್ಯ ವೃದ್ಧಿಗೆ ಕಾನೂನು ಸಚಿವಾಲಯ ಕೇಂದ್ರ ಸರ್ಕಾರಕ್ಕೆ ಕಾನೂನು ಪ್ರಸಾವನೆ ಸಲ್ಲಿಸಿದೆ. 12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿನ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಕೇಂದ್ರ ಸರ್ಕಾರದ ನೂತನ ಸುಗ್ರೀವಾಜ್ಞೆಯ ಭಾಗವಾಗಿ ಈ ಯೋಜನೆ ಜಾರಿಯಾಗಲಿದೆ. ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರೆತ ಬಳಿಕ ಅನುಷ್ಠಾನದ ರೂಪ ಪಡೆದುಕೊಳ್ಳಲಿದೆ.
Related Posts
Karnataka Current Affairs – KAS/KPSC Exams – 16th October 2018
Now, Aadhaar to check truant govt doctors In a major reform, the state government will introduce an Aadhaar-based attendance system to check absenteeism of doctors and paramedics at government colleges and ...
READ MORE
National Current Affairs – UPSC/KAS Exams- 9th November 2018
Strategic Petroleum Reserves Topic: Indian Economy IN NEWS: The Union Cabinet has approved the filling of Padur Strategic Petroleum Reserves(SPR) at Padur, Karnataka by overseas National Oil Companies (NOCs). The filling ...
READ MORE
National Current Affairs – UPSC/KAS – 2nd November 2018
Veer Surendra Sai Airport, Jharsuguda Topic: Modern Indian History IN NEWS: The Union Cabinet chaired by Prime Minister Shri Narendra Modi has approved renaming of Jharsuguda Airport, Odisha as “Veer Surendra Sai ...
READ MORE
Gavel and scales
Towards restorative criminal justice Purpose for which crminal justice was set up : securing life and property. Issues with the way criminal justice is designed and administered today No deterrance- because of the ...
READ MORE
Testing ranges for missiles
 Floating test-range for missile defence system India is building a unique floating testing range — a huge ship — to overcome the limitations imposed by the land mass for carrying out ...
READ MORE
Karnataka Current Affairs – KAS/KPSC Exams – 5th March 2018
62,381 more voters on Mysuru’s revised electoral list As many as 62,381 voters have been included in Mysuru district in the special summary revision of voters held till February 28. D. Randeep, ...
READ MORE
Measles-Rubella vaccine drive launched; to cover 1.65 cr kids
The Union government on Sunday launched the first phase of the all India Measles and Rubella (MR) vaccine immunisation campaign from Bengaluru for the four states of Karnataka, Tamil Nadu, ...
READ MORE
United Nations Environment Programme (UNEP) report is titled “Biodegradable Plastics and Marine Litter: Misconceptions, Concerns and Impacts on Marine Environments” Toys, athletic goods, and household goods sectors used the largest amount ...
READ MORE
Karnataka Current Affairs – KAS / KPSC Exams – 12th Sep 2017
Chittoor cop first Indian woman to scale Mt. Elbrus Chittoor district Additional Superintendent of Police G.R. Radhika created a record by scaling Mount Elbrus, the highest mountain in Russia and in ...
READ MORE
National Current Affairs – UPSC/KAS Exams- 26th & 27th August 2018
Railways to mark Gandhi’s 150th birth anniversary All coaches of the Indian Railways will now display the logo of the Swachch Bharat project and the national flag as part of the ...
READ MORE
Karnataka Current Affairs – KAS/KPSC Exams – 16th
National Current Affairs – UPSC/KAS Exams- 9th November
National Current Affairs – UPSC/KAS – 2nd November
Towards restorative criminal justice
Testing ranges for missiles
Karnataka Current Affairs – KAS/KPSC Exams – 5th
Measles-Rubella vaccine drive launched; to cover 1.65 cr
United Nations Environment Programme (UNEP) report on plastics
Karnataka Current Affairs – KAS / KPSC Exams
National Current Affairs – UPSC/KAS Exams- 26th &

Leave a Reply

Your email address will not be published. Required fields are marked *