“7th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಜಾಹೀರಾತು ಪ್ರದರ್ಶನ ನಿಷೇಧ

 • ಸುದ್ದಿಯಲ್ಲಿ ಏಕಿದೆ? ಅನಧಿಕೃತ ಫ್ಲೆಕ್ಸ್, ಬ್ಯಾನರ್​ಗಳ ಹಾವಳಿ ತಡೆಯಲು ಮುಂದಿನ ಒಂದು ವರ್ಷದವರೆಗೆ ನಗರದಲ್ಲಿ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಲು ಬಿಬಿಎಂಪಿ ಕೌನ್ಸಿಲ್​ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಹಿನ್ನಲೆ:

 • ಹಲವು ವರ್ಷಗಳಿಂದ ಸಾಧ್ಯವಾಗದೇ ಇದ್ದ ಕೆಲಸವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು ಮಾಡಿ ತೋರಿಸಿದ್ದಾರೆ.
 • ಬೆಂಗಳೂರು ನಗರದ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ ಮಾಯವಾಗುವಂತೆ ಮಾಡಿದ ದಿನೇಶ್‌ ಮಹೇಶ್ವರಿ ಮೂಲತಃ ರಾಜಸ್ತಾನದವರು, ಖಡಕ್‌ ಸ್ವಭಾವ,ಕಾನೂನು ಪಾಲನೆ ವಿಷಯದಲ್ಲಿ ಎಳ್ಳಷ್ಟೂ ರಾಜೀ ಮಾಡಿಕೊಳ್ಳಲು ಬಿಡದ ಸ್ವಭಾವದವರು.ಇದ್ದಿದ್ದನ್ನು ಇದ್ದಂತೆ ನೇರವಾಗಿ ವಕೀಲರಿಗೆ ಮುಲಾಜಿಲ್ಲದೆ ತಿಳಿಸುವ ಮನೋಭಾವದ ಅವರು, 2018ರ ಫೆಬ್ರವರಿಯಿಂದ ಕರ್ನಾಟಕ ಹೈಕೋರ್ಟ್‌ನ ಸಿಜೆಯಾಗಿದ್ದಾರೆ.

ಕ್ರಿಮಿನಲ್‌ ಮೊಕದ್ದಮೆ:

 • ನಿಯಮ ಉಲ್ಲಂಘಿಸಿ ಜಾಹೀರಾತು ಪ್ರದರ್ಶನ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 6 ತಿಂಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. ಆದರೆ, ಈಗಾಗಲೇ ಅನುಮತಿ ನೀಡಿರುವ ಹಾಗೂ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ ನಿರ್ವಿುಸಲಾಗಿರುವ ಸ್ಕೈವಾಕ್, ಬಸ್ ಸ್ಟಾಪ್​ಗಳಲ್ಲಿ ಅಳವಡಿಸಿರುವ ಜಾಹೀರಾತುಗಳಿಗೆ ಈ ನಿರ್ಣಯ ಅನ್ವಯವಾಗುವುದಿಲ್ಲ.
 • ಹೊಸ ಜಾಹೀರಾತು ನೀತಿ ಜಾರಿ ಸಂಬಂಧ ಕರೆಯಲಾಗಿದ್ದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಜಾಹೀರಾತು ಪ್ರದರ್ಶನ ನಿಷೇಧದ ಕುರಿತು ಪಕ್ಷಾತೀತವಾಗಿ ಸದಸ್ಯರು ಬೆಂಬಲ ಸೂಚಿಸಿದರು. ಮುಂದಿನ 1 ವರ್ಷದವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಬೃಹತ್ ಹೋರ್ಡಿಂಗ್ ಸೇರಿ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ಹಾಗೂ ಫ್ಲೆಕ್ಸ್ ಮುದ್ರಣ ಘಟಕಗಳನ್ನು ನಿಷೇಧಿಸಲು ನಿರ್ಣಯ ಕೈಗೊಳ್ಳಲಾಯಿತು.
 • ಬಿಬಿಎಂಪಿ ಜಾಗ, ವಿವಿಧ ಇಲಾಖೆಗಳ ಜಾಗದಲ್ಲಿ ಅಳವಡಿಕೆ ಮಾಡಿರುವ ಹೋರ್ಡಿಂಗ್​ಗಳ ತೆರವಿನ ಹೊಣೆ ಬಿಬಿಎಂಪಿಯದ್ದು. ಆದರೆ, ಖಾಸಗಿ ಜಾಗದಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್​ಗಳನ್ನು ಜಾಗದ ಮಾಲೀಕರೇ ತೆರವು ಮಾಡಬೇಕು. ಅದಕ್ಕಾಗಿ ಆ.13ರಿಂದ 15 ದಿನ ಕಾಲಾವಕಾಶ ನೀಡಲು ನಿರ್ಧರಿಸಲಾಯಿತು. ಒಂದು ವೇಳೆ ತೆರವು ಮಾಡದಿದ್ದರೆ ಜಾಗದ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ 6 ತಿಂಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಲಾಯಿತು.
 • ಇತರ ನಗರಗಳಲ್ಲೂ ಒತ್ತಡ:
 • ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಎಲ್ಲ ಮಹಾನಗರಗಳಲ್ಲಿಯೂ ಫ್ಲೆಕ್ಸ್‌ ಹಾವಳಿ ಇದೆ. ಅನಧಿಕೃತ ಜಾಹೀರಾತುಗಳ ಪ್ರದರ್ಶನವೂ ನಡೆದಿದೆ. ಈ ನಗರಗಳಲ್ಲಿಯೂ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕೆಂಬ ಒತ್ತಡ ಜನರಿಂದ ಬರುತ್ತಿದೆ.

ನಿಷೇದಕ್ಕೆ ಕಾರಣಗಳು:

 • ಅಪಘಾತಕ್ಕೂ ಫ್ಲೆಕ್ಸ್‌ ಮೂಲ: ನಗರದ ಪ್ರಮುಖ ಹೆದ್ದಾರಿ ಬದಿಗಳಲ್ಲಿಯೇ ಫ್ಲೆಕ್ಸ್‌ ಹಾಕಿದ್ದರಿಂದಾಗಿ ರಸ್ತೆ ಅಪಘಾತಗಳು ಹೆಚ್ಚುವಂತೆ ಮಾಡಿದೆ. ಕೆಲವು ಕಡೆ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳನ್ನು ಮರೆ ಮಾಚುವಂತೆ ಫ್ಲೆಕ್ಸ್‌ ಹಾಕಿದ್ದು, ವಾಹನ ಸವಾರರಲ್ಲಿ ಗೊಂದಲ ಉಂಟು ಮಾಡಿದೆ.
 • ಸುಲಭ ಹಾಗೂ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರತಿಯೊಬ್ಬರು ಪ್ಲೆಕ್ಸ್‌ಗಳ ಮೋರೆ ಹೋಗಿರುವುದು ಮಹಾನಗರದಲ್ಲಿ ಸಾಮಾನ್ಯವಾಗಿದ್ದು, ಇದು ಸಾರ್ವಜನಿಕರಲ್ಲಿ ಕಿರಿ-ಕಿರಿ ಉಂಟು ಮಾಡಿದೆ
 • ಸ್ಮಾರಕಗಳ ನಗರ ಸೌಂದರ‍್ಯಕ್ಕೆ ಫ್ಲೆಕ್ಸ್‌ಗಳ ಭರಾಟೆ ತೊಡಕಾಗಿ ಪರಿಣಮಿಸಿದೆ
 • ಮುದ್ರಕರಿಂದ ಮನವಿ: ಕೌನ್ಸಿಲ್ ಸಭೆ ನಂತರ ಮೇಯರ್ ಅವರನ್ನು ಭೇಟಿ ಮಾಡಿದ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ಮುದ್ರಣ ಘಟಕಗಳ ಮಾಲೀಕರು, ಮುದ್ರಣ ಘಟಕಗಳನ್ನು ನಿಷೇಧಿಸದಂತೆ ಮನವಿ ಪತ್ರ ಸಲ್ಲಿಸಿದರು.
 • ಆದಾಯ ಬರುತ್ತಿಲ್ಲ: ಪ್ರತಿ ವರ್ಷ ಜಾಹೀರಾತು ಶುಲ್ಕದಿಂದ ಕೋಟ್ಯಂತರ ರೂ. ಆದಾಯದ ನಿರೀಕ್ಷೆ ಹೊಂದಿ ಬಜೆಟ್ ಮಂಡಿಸಲಾಗುತ್ತದೆ. ಆದರೆ, ಆದಾಯ ಸಂಗ್ರಹ ಮಾತ್ರ ಕಡಿಮೆಯಿದೆ. 2010-11ರಿಂದ 2015-16ರವರೆಗೆ 15 ಕೋಟಿ ರೂ. ಮಾತ್ರ ಆದಾಯ ಸಂಗ್ರಹಿಸಲಾಗಿದೆ. ಬೆಂಗಳೂರಿನ ಮಟ್ಟಿಗೆ ಇದು ತೀರಾ ಕಡಿಮೆ. ಅದ್ದರಿಂದ ಕಟ್ಟುನಿಟ್ಟಾಗಿ ಶುಲ್ಕ ವಸೂಲಿ ಮಾಡಬೇಕಿದೆ.
 • ಮದುವೆ ಆಹ್ವಾನವೂ ತೆರವು: ನಗರದ ಕಲ್ಯಾಣ ಮಂಟಪಗಳ ಬಳಿ ಹಾಗೂ ಮದುವೆಗೆ ಬರುವವರಿಗೆ ಮಾರ್ಗ ತಿಳಿಸಲು ರಸ್ತೆ ಬದಿಯಲ್ಲಿ ಅಳವಡಿಸುವ ಫ್ಲೆಕ್ಸ್​ಗಳಿಗೂ ನಿಷೇಧ ಹೇರುವುದು ಸೂಕ್ತ. ಶಾಪಿಂಗ್ ಮಾಲ್​ಗಳಲ್ಲೂ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಮೇಯರ್ ನಿರ್ದೇಶನ ನೀಡಿದರು.

ಅಕ್ರಮಗಳು

 • ಫ್ಲೆಕ್ಸ್ ಹಾಕಿ, ಕೇಸ್ ಹಾಕಿಸಿ: ಯಾರ ಮೇಲಾದರೂ ದ್ವೇಷವಿದ್ದರೆ, ಈಗ ಅವರ ಹೆಸರಿನಲ್ಲಿ ಫ್ಲೆಕ್ಸ್ ಹಾಕಿ ಪ್ರಕರಣ ದಾಖಲಾಗುವಂತೆ ಮಾಡಬಹುದು. ಒಂದು ವೇಳೆ ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಫ್ಲೆಕ್ಸ್ ಹಾಕಿಸಿ, ಅವರ ವಿರುದ್ಧವೇ ಪ್ರಕರಣ ದಾಖಲಾಗುವಂತೆ ಮಾಡಬಹುದು. ಈ ರೀತಿಯ ಅಕ್ರಮಗಳ ಬಗ್ಗೆಯೂ ಬಿಬಿಎಂಪಿ ಗಮನಹರಿಸಬೇಕು.

20 ಸಾವಿರ ಫ್ಲೆಕ್ಸ್ ತೆರವು

 • ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಈವರೆಗೆ ನಗರದಲ್ಲಿ 20,140 ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ತೆರವು ಮಾಡಲಾಗಿದೆ. 65 ಫ್ಲೆಕ್ಸ್ ಮುದ್ರಣ ಘಟಕಗಳನ್ನು ಮುಚ್ಚಿಸಲಾಗಿದೆ. 13 ಜನರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.
 • ಹೈಕೋರ್ಟ್ ಸೂಚನೆಗೂ ಮುನ್ನವೇ ಬಿಬಿಎಂಪಿ ನಿರಂತರವಾಗಿ ಅನಧಿಕೃತ ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ ಮಾಡುತ್ತಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ 94 ಸಾವಿರ ಫ್ಲೆಕ್ಸ್ ತೆರವು ಮಾಡಿ, 456 ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಪ್ರಕರಣಗಳು ವಿಚಾರಣಾ ಹಂತದಲ್ಲಿವೆ

2,500 ಅಕ್ರಮ ಹೋರ್ಡಿಂಗ್ಸ್

 • ನೂತನ ಜಾಹೀರಾತು ನೀತಿ ಜಾರಿಗೊಳಿಸುವ ಸಲುವಾಗಿ ಕಳೆದೊಂದು ವರ್ಷದಿಂದ ಹೋರ್ಡಿಂಗ್​ಗಳಲ್ಲಿ ಜಾಹೀರಾತು ಅಳವಡಿಕೆಗೆ ಅನುಮತಿ ನೀಡಿಲ್ಲ. ಬೆಂಗಳೂರಿನಲ್ಲಿನ 2,500ಕ್ಕೂ ಹೆಚ್ಚಿನ ಹೋರ್ಡಿಂಗ್ ಗಳು ಅಕ್ರಮವಾಗಿವೆ. ಆದರೂ, ಹೋರ್ಡಿಂಗ್ಸ್​ಗಳಲ್ಲಿ ಜಾಹೀರಾತು ಅಳವಡಿಕೆ ಮಾಡಿರುವವರಿಗೆ ದಂಡಸಹಿತ ಶುಲ್ಕ ಪಾವತಿಸುವಂತೆ 65 ಕೋಟಿ ರೂ. ಮೊತ್ತದ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ. ಅದೇ ರೀತಿ ಭಿತ್ತಿಪತ್ರ ಅಂಟಿಸಿದವರಿಗೂ ಶಿಕ್ಷೆ ವಿಧಿಸಲಾಗುವುದು

ಕೆಐಎ ಮಾದರಿ

 • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 4ರಿಂದ 5 ಚದರ ಕಿಮೀ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ ಅಳವಡಿಕೆಯಿಂದ 200 ಕೋಟಿ ರೂ. ಆದಾಯ ಬರುತ್ತಿದೆ. 800 ಚದರ ಕಿ.ಮೀ. ವ್ಯಾಪ್ತಿಯ ಬಿಬಿಎಂಪಿಯಲ್ಲಿ ಆದಾಯ ಕಡಿಮೆಯಿದೆ. ಕೆಐಎ ಮಾದರಿಯಲ್ಲಿ ಬಿಡ್ ಕರೆದು, ನಿಗದಿತ ಸ್ಥಳದಲ್ಲಿ ಮಾತ್ರ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಬೇಕು. ಖಾಸಗಿ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಬೇಡ.

ಪಾವಗಡ ಮಾದರಿ

 • ಸುದ್ದಿಯಲ್ಲಿ ಏಕಿದೆ? ನೀರಾವರಿ ಯೋಜನೆಗಳ ಭೂಸ್ವಾಧೀನಕ್ಕೂ ‘ಪಾವಗಡ ಸೋಲಾರ್‌ ಪಾರ್ಕ್‌ ಮಾದರಿ’ ಅನುಸರಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಅನುಸರಿಸಲು ಕಾರಣಗಳು

 • ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524ಅಡಿ ಎತ್ತರಿಸುವುದರಿಂದ ಮುಳುಗಡೆಯಾಗಲಿರುವ ಸಾವಿರಾರು ಎಕರೆಗೆ ಪರಿಹಾರ ಮತ್ತು ಮತ್ತು ಪುನರ್ವಸತಿ ಪ್ಯಾಕೇಜ್‌ಗೆ ಸಾವಿರಾರು ಕೋಟಿ ರೂ. ಹಣ ಭರಿಸುವುದು ಕಷ್ಟಸಾಧ್ಯ. ಇದನ್ನ ತಪ್ಪಿಸಲು ಪಾವಗಡ ಮಾದರಿ ಅನುಸರಿಸುವ ಚಿಂತನೆ ಆರಂಭಿಸಿದೆ.
 • ‘‘ಕೃಷ್ಣಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಡಿ ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪ ನೀರು ಸಂಗ್ರಹಣೆಗೆ ಜಲಾಶಯ ನಿರ್ಮಾಣ ಒಳಗೊಂಡಂತೆ ಎಲ್ಲ ಪ್ರಮುಖ ನೀರಾವರಿ ಯೋಜನೆಗಳಲ್ಲಿ ರೈತರ ಭೂಮಿ ಸ್ವಾಧೀನಕ್ಕೆ ಬದಲಾಗಿ ಯೋಜನೆಯಲ್ಲಿ ಭೂಮಾಲೀಕ ರೈತರನ್ನು ಪಾಲುದಾರರಾಗಿ ಮಾಡಿಕೊಳ್ಳುವ ಚಿಂತನೆ ನಡೆದಿದೆ’’
 • ‘‘ಕಾಲುವೆ, ಪಂಪ್‌ಹೌಸ್‌ ನಿರ್ಮಾಣ, ಜನರ ಸ್ಥಳಾಂತರ ಉದ್ದೇಶಕ್ಕೆ ಮಾತ್ರ ಭೂಸ್ವಾಧೀನ ಸೀಮಿತಗೊಳಿಸಲು ಯೋಚಿಸಲಾಗಿದೆ.
 • ಜಲಾಶಯಗಳಲ್ಲಿ ಮೂರು ತಿಂಗಳ ಕಾಲ ಮಾತ್ರ ನೀರು ನಿಲ್ಲಲಿದ್ದು, ಉಳಿದ 9 ತಿಂಗಳು ಈ ಭೂಮಿಯನ್ನು ಸಂಬಂಧಿಸಿದ ರೈತರೇ ಬಳಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ, ತಜ್ಞರ ಸಲಹೆ ಪಡೆದು ಕ್ರಮಕೈಗೊಳ್ಳಲಾಗುವುದು’’.

ಏನಿದು ಪಾವಗಡ ಮಾದರಿ?

 • ಪಾವಗಡದಲ್ಲಿ ಏಷ್ಯಾದ ಅತೀದೊಡ್ಡ ಸೋಲಾರ್‌ ಘಟಕ ಸ್ಥಾಪನೆ ವೇಳೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬದಲು ಪಾಲುದಾರರಾಗಿ ಮಾಡಿಕೊಳ್ಳಲಾಗಿದೆ. ಭೂಮಿಯು ರೈತರ ಹೆಸರಿನಲ್ಲೇ ಉಳಿದಿದ್ದು, ಬಳಕೆಗಾಗಿ ವಾರ್ಷಿಕ ಪ್ರತಿ ಎಕರೆಗೆ 25 ಸಾವಿರ ರೂ.ನಂತೆ ಹಣ ಪಾವತಿಸಲಾಗುತ್ತಿದೆ.

ಸಮ್ಮತಿ ಕಷ್ಟ

 • ಈ ಪಾವಗಡ ಮಾದರಿಯನ್ನು ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಅನ್ವಯ ಮಾಡಲು ರಾಜ್ಯ ಸರಕಾರ ಬಯಸಿದೆ. ಆದರೆ, ಪಾವಗಡದ ಭೂಮಿ ಮಳೆಯಾಶ್ರಿತ ಬರಡು ಭೂಮಿ. ಆದರೆ, ಬೇರೆಡೆ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಕ್ಕೆ ರೈತರು ಸಮ್ಮತಿಸುವುದು ಕಷ್ಟ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಕನ್ನಡಿಗ ವಿಶ್ವೇಶ್ವರಯ್ಯ ಹೆಸರು ನಾಮಕರಣ

 • ಸುದ್ದಿಯಲ್ಲಿ ಏಕಿದೆ? ರಾಷ್ಟ್ರ ರಾಜಧಾನಿಯ ಮೋತಿಭಾಗ್‌ ಮೆಟ್ರೊರೈಲ್ವೆ ನಿಲ್ದಾಣಕ್ಕೆ ಕನ್ನಡಿಗ ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಮೋತಿ ಭಾಗ್‌ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡಲಾಗಿದೆ.
 • ದೆಹಲಿ ಕರ್ನಾಟಕ ಸಂಘದ ಪಕ್ಕದಲ್ಲಿರುವ ಈ ನೂತನ ರೈಲ್ವೇ ನಿಲ್ದಾಣದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಯಿತು.

ಸರ್ ಎಂ .ವಿಶ್ವೇಶ್ವರಯ್ಯ

 • ಸರ್ ಎಂ.ವಿ.(ಸೆಪ್ಟೆಂಬರ್ 15, 1861 – ಏಪ್ರಿಲ್ 12, 1962) ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು.
 • ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ.
 • ಸರ್ ಎಮ್ ವಿಶ್ವೇಶ್ವರಯರವರು ಇಂಜಿನಿಯರ್, ರಾಜನೀತಿಜ್ಞ, ಮತ್ತು ವಿದ್ವಾಂಸರಾಗಿದ್ದರು. ಸರ್ ಎಂ.ವಿ. 1912-1918ರ ಅವಧಿಯಲ್ಲಿ ಮೈಸೂರು ದಿವಾನ್ ಆಗಿ ಸೇವೆ ಸಲ್ಲಿಸಿದರು. 1955 ರಲ್ಲಿ ಅವರು ಭಾರತ ರತ್ನ ಪ್ರಶಸ್ತಿ ಪಡೆದರು . ಸಾರ್ವಜನಿಕ ಒಳ್ಳೆಯತನಕ್ಕೆ ನೀಡಿದ ಕೊಡುಗೆಗಳಿಗಾಗಿ, ಬ್ರಿಟಿಷ್ ಇಂಡಿಯನ್ ಸಾಮ್ರಾಜ್ಯದ ಅವಧಿಯಲ್ಲಿ ಕಿಂಗ್ ಜಾರ್ಜ್ V ಅವರಿಂದ ನೈಟ್ ಕಮಾಂಡರ್ ಬಿರುದು ಪಡೆದರು

 ಸರ್ ಎಂವಿ ಕೆಲಸ ಮಾಡಿದ  ಕೆಲವು ಕಛೇರಿಗಳು

 • ಸಹಾಯಕ ಇಂಜಿನಿಯರ್, ಬಾಂಬೆ ಸರ್ಕಾರದ ಸೇವೆ [1884 ರಲ್ಲಿ]
 • ಮುಖ್ಯ ಇಂಜಿನಿಯರ್, ಹೈದರಾಬಾದ್ ರಾಜ್ಯ [ಅವರು ಏಪ್ರಿಲ್ 15, 1909 ರಿಂದ 7 ತಿಂಗಳು ಮಾತ್ರ ಸೇವೆ ಸಲ್ಲಿಸಿದರು]
 • ಮೈಸೂರು ರಾಜ್ಯದಲ್ಲಿ ಮುಖ್ಯ ಇಂಜಿನಿಯರ್ [ನವೆಂಬರ್ 15, 1909]. ಅವರು ರೈಲ್ವೆಯ ಕಾರ್ಯದರ್ಶಿಯಾಗಿದ್ದರು.
 • ಮೈಸೂರು ರಾಜ್ಯದಲ್ಲಿನ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರು
 • ಮೈಸೂರು ದಿವಾನ್. [1912 ರಿಂದ ಆರು ವರ್ಷಗಳವರೆಗೆ]
 • ಅಧ್ಯಕ್ಷ, ಭದ್ರಾವತಿ ಐರನ್ ವರ್ಕ್ಸ್
 • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
 • ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿಯ ಆಡಳಿತ ಮಂಡಳಿಯ ಸದಸ್ಯ [ಟಿಸ್ಕೊ]
 • ಬ್ಯಾಕ್ ಬೇ ವಿಚಾರಣೆ ಸಮಿತಿಯ ಸದಸ್ಯ, ಲಂಡನ್
 • ಭಾರತೀಯ ರಾಜ್ಯಗಳ ಭವಿಷ್ಯದ ಬಗ್ಗೆ ಶಿಫಾರಸುಗಳನ್ನು ಮಾಡಲು 1917 ರಲ್ಲಿ ರಚಿಸಲಾದ ಸಮಿತಿಯ ಸದಸ್ಯರು.
 • ಸರ್ ಎಂ.ವಿ. 1908 ರಲ್ಲಿ ನಿವೃತ್ತರಾದರು ಮತ್ತು ಮೈಸೂರು ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಅವರು ಮೈಸೂರನ್ನು ಸೇವೆಸಲ್ಲಿಸಲು ವಿಶ್ವೇಶ್ವರಯದ ಸೇವೆಗಳನ್ನು ಪಡೆಯಲು ಉತ್ಸುಕರಾಗಿದ್ದರು. ಅವರು ಮೈಸೂರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇರಿದರು ಏಕೆಂದರೆ ಅವರು ಸವಾಲಿನ ಅವಕಾಶಗಳನ್ನು ಬಯಸಿದ್ದರು. ಸರ್ ಎಂ.ವಿ. ಅವರ ಪ್ರಾಮಾಣಿಕತೆ, ಸಮಗ್ರತೆ, ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗೆ ಖ್ಯಾತಿಯನ್ನು ಗಳಿಸಿದ್ದರು. ಅವರು ರಾಜ್ಯದಲ್ಲಿ ಕಡ್ಡಾಯ ಶಿಕ್ಷಣವನ್ನು ಪರಿಚಯಿಸಿದರು, ನಂತರ ಇದು ಸ್ವತಂತ್ರ ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಯಾಗಿ ರೂಪುಗೊಂಡಿತು.

ಸರ್ ಎಂ.ವಿ – ಅಭಿವೃದ್ಧಿಯ ಮುಂದಾಳತ್ವ ವಹಿಸಿದ್ದ ದಾರ್ಶನಿಕ

 • ಅವರು ಜವಾಬ್ದಾರಿಯುತವಾದ ಕೆಲವು ವಿಷಯಗಳನ್ನು ಹೆಸರಿಸಲು:
 • ಕೃಷ್ಣರಾಜಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ ಅಥವಾ ಕೆ.ಆರ್.ಎಸ್ ಅಥವಾ ಬೃಂದಾವನ ತೋಟಗಳು . ಭಾರತದ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ನೂರ ಇಪ್ಪತ್ತು ಸಾವಿರ ಎಕರೆ ಭೂಮಿ ನೀರಾವರಿ. ಇದು ರೂ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಬಂಜರು ಮಂಡ್ಯ ಜಿಲ್ಲೆಯನ್ನು ಅನ್ನದ ಕಣಜವಾಗಿ ಬದಲಿಸಿದೆ, ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.
 • ಭದ್ರಾವತಿ ಐರನ್ ಮತ್ತು ಸ್ಟೀಲ್ ವರ್ಕ್ಸ್ – ಇದರ ಅಧ್ಯಕ್ಷರಾಗಿ ಅವರು ಅದನ್ನು ನಿರ್ನಾಮಗೊಳಿಸದಂತೆ ರಕ್ಷಿಸಿದರು.
 • ಮೈಸೂರು ಸ್ಯಾಂಡಲ್ ಆಯಿಲ್ ಫ್ಯಾಕ್ಟರಿ ಮತ್ತು ಮೈಸೂರು ಸೋಪ್ ಫ್ಯಾಕ್ಟರಿ
 • ಮೈಸೂರು ವಿಶ್ವವಿದ್ಯಾನಿಲಯ
 • ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಇದನ್ನು ಮೊದಲು ‘ದಿ ಬ್ಯಾಂಕ್ ಆಫ್ ಮೈಸೂರು’ ಎಂದು ಹೆಸರಿಸಲಾಯಿತು)
 • ಮೈಸೂರು ಮತ್ತು ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು
 • ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್
 • ಕನ್ನಡ ಸಾಹಿತ್ಯ ಪರಿಷತ್ ಅಥವಾ ಕನ್ನಡ ಸಾಹಿತ್ಯ ಅಕಾಡೆಮಿ
 • ಶ್ರೀ ಜಯಚಾಮರಾಜೇಂದ್ರ ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್,
 • 1903 ರಲ್ಲಿ ಖಾಡಕ್ವಾಸ್ಲಾ ಜಲಾಶಯದಲ್ಲಿ ಇನ್ಸ್ಟಾಲ್ ಮಾಡಿದ ಸ್ವಯಂಚಾಲಿತ, ವೀರ್ ವಾಟರ್ ಫ್ಲಡ್ಗೇಟ್ಗಳನ್ನು ಅವರು ವಿನ್ಯಾಸಗೊಳಿಸಿದರು.
 • ಅವರು ಕರ್ನಾಟಕದಲ್ಲಿ ನೀರಾವರಿ ವ್ಯವಸ್ಥೆಯನ್ನು ಜಾರಿಗೆ ತಂದರು.
 • ಶ್ರೀ ಜಯಚಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್.
 • ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಕೃಷಿ ವಿಜ್ಞಾನ ವಿಶ್ವವಿದ್ಯಾಲಯ).
 • ಸೆಂಚುರಿ ಕ್ಲಬ್
 • ವಿಶ್ವೇಶ್ವರಯ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು
Related Posts
National Current Affairs – UPSC/KAS Exams- 5th January 2019
Lokpal Topic: Polity and Governance IN NEWS: The government informed the Supreme Court  that a search committee had been constituted for zeroing in on eligible candidates for the Lokpal, and it ...
READ MORE
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮತ್ತೆ ಕರೆನ್ಸಿ ಎಮರ್ಜೆನ್ಸಿ! ನೋಟು ಅಮಾನ್ಯೀಕರಣದ ಆರಂಭಿಕ ದಿನಗಳಲ್ಲಾದಂತೆ ಈಗ ಮತ್ತೆ ಹಲವು ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದೆ. ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಕರ್ನಾಟಕ ಸೇರಿ 9ಕ್ಕೂ ಹೆಚ್ಚು ರಾಜ್ಯಗಳ ಎಟಿಎಂಗಳು ಖಾಲಿಯಾಗಿದ್ದು, ಹಣವಿಲ್ಲ ಎಂಬ ಬೋರ್ಡ್​ಗಳು ರಾರಾಜಿಸುತ್ತಿವೆ. ಕೇಂದ್ರ ಸರ್ಕಾರದ ಆರ್ಥಿಕ ಅವ್ಯವಸ್ಥೆಯೇ ...
READ MORE
Kodagu: The Coffee Land of Karnataka- To be the state’s R-Day Tableau
Karnataka will depict various stages of coffee-making, from plucking of beans to making of filter coffee, in a captivating tableau during the Republic Day parade From women plucking coffee beans to ...
READ MORE
“22nd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ತುಳು ಸಂಸ್ಕೃತಿ ಸುದ್ಧಿಯಲ್ಲಿ ಏಕಿದೆ ?ಜಗತ್ತಿನ ಅತಿ ದೊಡ್ಡ ಗಾಳಿಪಟ ಉತ್ಸವವ ಫ್ರಾನ್ಸ್‌ನ ಡೀಪಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ತುಳುನಾಡಿನ ಸಂಸ್ಕೃತಿ ರಾರಾಜಿಸಿದೆ. ಕರಾವಳಿಯ ಪಂಚೆ, ಮುಟ್ಟಾಲೆ, ಜುಬ್ಬಾಕ್ಕೆ ವಿದೇಶಿಯರು ಮಾರುಹೋಗಿದ್ದಾರೆ. ಸೆಪ್ಟೆಂಬರ್ 8ರಿಂದ 16ರವರೆಗೆ ಡೀಪಿ ನಗರದಲ್ಲಿ ಜರಗಿದ ಉತ್ಸವದಲ್ಲಿ 48 ದೇಶಗಳಿಂದ ...
READ MORE
“5th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸ್ವಚ್ಚ ಭಾರತ್‌’ ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿ ಅನುಷ್ಠಾನಗೊಂಡಿರುವ 'ಸ್ವಚ್ಚ ಭಾರತ್‌' ಯೋಜನೆಯ ನೈಜತೆ ತಿಳಿಯಲು 76ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ(ಎನ್‌ಎಸ್‌ಎಸ್‌)ಗೆ ಚಾಲನೆ ದೊರೆತಿದೆ. ಎಲ್ಲಿ ಮತ್ತು ಯಾವುದರ ಬಗ್ಗೆ ಮಾಹಿತಿ ಸಂಗ್ರಹ ? ದೇಶಾದ್ಯಂತ ಜು.1ರಿಂದ ಆರಂಭವಾಗಿರುವ ಸಮೀಕ್ಷೆ ಕರ್ನಾಟಕದಲ್ಲಿ ಸದ್ಯದಲ್ಲೇ ಅಧಿಕೃತವಾಗಿ ಕಾರ್ಯಾಚರಣೆ ನಡೆಸಲಿದೆ. ...
READ MORE
Karnataka Current Affairs – KAS/KPSC Exams- 11th & 12th July 2018
Drone begins mapping boundaries of properties The Survey Settlement and Land Records (SSLR) Department, in coordination with the Survey of India, has taken up a pilot initiative to map properties, with ...
READ MORE
Homeless rural residents of Karnataka will now get additional funds to build their houses In a first for the country, the State government has decided to dovetail funds meant for subsidised ...
READ MORE
Karnataka Current Affairs – KAS/KPSC Exams- 7th June 2018
Centre gives nod to subsidy for e-buses The Union government has given its nod to sanction subsidy to Bangalore Metropolitan Transport Corporation (BMTC) for these buses. However, the Centre’s nod has come ...
READ MORE
Karnataka Current Affairs – KAS/KPSC Exams – 5th Nov’17
Cauvery tribunal's term extended by six months The Centre has given a six-month extension to the Cauvery Water Disputes Tribunal (CWDT), which is looking into the dispute between Karnataka and Tamil ...
READ MORE
“1st ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾತ್ಸಲ್ಯ ವಾಣಿ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರಿಗೆ ದೂರವಾಣಿಯಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರಕಾರ ‘ವಾತ್ಸಲ್ಯ ವಾಣಿ- 104’ ಯೋಜನೆ ಜಾರಿಗೆ ತಂದಿತು. ಇದು ...
READ MORE
National Current Affairs – UPSC/KAS Exams- 5th January
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Kodagu: The Coffee Land of Karnataka- To be
“22nd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“5th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams- 11th &
Rural poor in state get MNREGA support to
Karnataka Current Affairs – KAS/KPSC Exams- 7th June
Karnataka Current Affairs – KAS/KPSC Exams – 5th
“1st ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *