“11th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಸರ್ದಾರ್‌ ಪಟೇಲ್‌ ಪ್ರತಿಮೆ

ಸುದ್ಧಿಯಲ್ಲಿ ಏಕಿದೆ ?ಭಾರತದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭ ಬಾಯಿ ಪಟೇಲ್‌ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ 31ಕ್ಕೆ ಅನಾವರಣಗೊಳಿಸಲಿದ್ದಾರೆ.

 • ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನಲಾದ ಸರ್ದಾರ್‌ ಪಟೇಲ್‌ ಪ್ರತಿಮೆಯು 182 ಮೀಟರ್‌ ಎತ್ತರವಿದೆ. ಪ್ರತಿಮೆಯು ರಾಷ್ಟ್ರದ ಏಕತೆ ಮತ್ತು ಪರಿಪೂರ್ಣತೆಯ ಪ್ರತೀಕ
 • ಬಿಜೆಪಿ ರಾಷ್ಟ್ರಾದ್ಯಂತ ಉಕ್ಕು, ಮಣ್ಣು ಮತ್ತು ನೀರನ್ನು ಸಂಗ್ರಹಿಸಿ ನಿರ್ಮಿಸಿದ ಪ್ರತಿಮೆಯಿದು ಎಂದು ರೂಪಾನಿ ಹೇಳಿದ್ದಾರೆ. 2013ರಲ್ಲಿ ಅಂದಿನ ಗುಜರಾತ್‌ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ನಿರ್ಮಾಣದ ಘೋಷಣೆ ಮಾಡಿದ್ದರು.
 • ಪ್ರತಿಮೆಯು ಸರ್ದಾರ್‌ ಪಟೇಲ್‌ ರಾಷ್ಟ್ರಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಬಿಂಬಿಸುತ್ತದೆ.

ಏಕತೆ ಪ್ರತಿಮೆ ಬಗ್ಗೆ

 • ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕ ವಲ್ಲಭಭಾಯಿ ಪಟೇಲ್ರವರ  ಭಾರತದ ರಾಜ್ಯವಾದ ಗುಜರಾತ್ನಲ್ಲಿ ನೆಲೆಗೊಂಡಿರುವ ನಿರ್ಮಾಣದ ಹಂತದಲ್ಲಿರುವ  ಸ್ಮಾರಕ ಕಟ್ಟಡವಾಗಿದೆ. ಯೋಜಿತ ಎತ್ತರವು 182 ಮೀಟರ್ (597 ಅಡಿ) ಎತ್ತರದಲ್ಲಿದ್ದು, ನರ್ಮದಾ ಅಣೆಕಟ್ಟು , 3.2 ಕಿಮೀ (0 ಮೈಲಿ) ದೂರದಲ್ಲಿ ಗುಜರಾತ್ನ ವಡೋದಾರ ಸಮೀಪವಿರುವ ಸಾದು ಬೆಟ್ ಎಂಬ ನದಿ ದ್ವೀಪದಲ್ಲಿದೆ. ಈ ಪ್ರತಿಮೆಯು ಸುಮಾರು 20,000 ಚದರ ಮೀಟರ್ಗಳನ್ನು ಆಕ್ರಮಿಸುತ್ತದೆ ಮತ್ತು 12 ಚದರ ಕಿಮೀ ಕೃತಕ ಸರೋವರದ ಸುತ್ತ ಸುತ್ತುತ್ತದೆ. ಅದು ಪೂರ್ಣಗೊಂಡಾಗ ಇದು ಪ್ರಪಂಚದ ಅತಿ ಎತ್ತರದ ಪ್ರತಿಮೆಯಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟ್ (ಎಸ್.ವಿ.ಪಿ.ಆರ್.ಇ.ಟಿ.ಟಿ) ವಿಶೇಷ ಉದ್ದೇಶದ ವಾಹನವನ್ನು ಗುಜರಾತ್ ಸರ್ಕಾರವು ಸ್ಥಾಪಿಸಿತು ಮತ್ತು ಡಿಸೆಂಬರ್ 2013 ರಿಂದ ಭಾರತದಾದ್ಯಂತ ವಿಸ್ತಾರ ಕಾರ್ಯಕ್ರಮವನ್ನು ನಡೆಸಲಾಯಿತು.

ಹಿನ್ನೆಲೆ

 • 2014 ರ ಅಕ್ಟೋಬರ್ನಲ್ಲಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರೀಯ ಒಕ್ಕೂಟ ದಿನವಾಗಿ ಅಕ್ಟೋಬರ್ 31 ರಂದು ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಘೋಷಿಸಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ

 • ಜನನ: ಅಕ್ಟೋಬರ್ 31, 1875 ಗುಜರಾತ್ನ ಕರಮ್ಸಂಡ್ನಲ್ಲಿ. ಅವರನ್ನು ಭಾರತದ ಐರನ್ ಮ್ಯಾನ್ ಅಥವಾ ಭಾರತದ ಬಿಸ್ಮಾರ್ಕ್ ಎಂದು ಕರೆಯುತ್ತಾರೆ. ವೃತ್ತಿಯಿಂದ ಅವರು ನ್ಯಾಯವಾದಿಯಾಗಿದ್ದರು ಮತ್ತು ಯಶಸ್ವಿಯಾಗಿ ಕಾನೂನುಗಳನ್ನು ಅಭ್ಯಾಸ ಮಾಡಿದರು. ನಂತರ ಅವರು ಕಾನೂನಿನ ಅಭ್ಯಾಸವನ್ನು ತೊರೆದರು ಮತ್ತು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಚಳವಳಿಯಲ್ಲಿ ಸೇರಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುಜರಾತ್ನಲ್ಲಿ ಬರ್ಡೋಲಿ ಮತ್ತು ಖೇಡಾದಲ್ಲಿ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿಯ ತತ್ವಗಳ ಮೇಲೆ ಕೃಷಿಕರ ಚಳುವಳಿಗಳನ್ನು ಆಯೋಜಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 1947-49ರ ಅವಧಿಯಲ್ಲಿ ಭಾರತದೊಂದಿಗೆ 500 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳ ಏಕೀಕರಣದಲ್ಲಿ ಭಾರತಕ್ಕೆ ಅವರ ದೊಡ್ಡ ಕೊಡುಗೆಯಾಗಿತ್ತು. ಆಧುನಿಕ ಅಖಿಲ ಭಾರತ ಸೇವೆಗಳನ್ನು ಸ್ಥಾಪಿಸಲು ಭಾರತದ ನಾಗರಿಕ ಸೇವಕರ ಪೋಷಕ ಸಂತನೆಂದು ಅವರು ನೆನಪಿಸಿಕೊಳ್ಳುತ್ತಾರೆ….

‘ಆಧಾರ್‌ ಸಂಹಿತೆ’

ಸುದ್ಧಿಯಲ್ಲಿ ಏಕಿದೆ ?ಆಧಾರ್‌ ಮಾಹಿತಿ ಸೋರಿಕೆ ಹಾಗೂ ದುರ್ಬಳಕೆ ತಡೆಯುವ ದೃಷ್ಟಿಯಿಂದ ಕಟ್ಟುನಿಟ್ಟಿನ ಆಧಾರ್‌ ಸಂಹಿತೆ ಅಳವಡಿಸಿಕೊಳ್ಳಲು ಎಲ್ಲ ಇಲಾಖೆಗಳಿಗೆ ರಾಜ್ಯ ಸರಕಾರ ನಿರ್ದೇಶನ ನೀಡಿದೆ.

ಏಕೆ ಬೇಕು ಆಧಾರ್ ಸಂಹಿತೆ ?

 • ರಾಜ್ಯದಲ್ಲಿ ಸರಕಾರಿ ಸೇವೆಯಲ್ಲಿ ಈಗಾಗಲೇ ಆಧಾರ್‌ ಬಳಕೆಯಿದೆ. ಆದರೆ, ಈ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳಲು ಹೊಣೆಗಾರಿಕೆಯ ಪ್ರದರ್ಶನವಾಗಿಲ್ಲ. ನಾನಾ ಇಲಾಖೆಗಳಲ್ಲಿ ಆಧಾರ್‌ನ ಮಹತ್ವ ಹಾಗೂ ಅದರ ಮಾಹಿತಿಯನ್ನೇಕೆ ಗೌಪ್ಯವಾಗಿಡಬೇಕು ಎಂಬ ತಿಳಿವಳಿಕೆಯೂ ಇಲ್ಲ. ಆಧಾರ್‌ ವಿಚಾರದಲ್ಲಿ ಸರಕಾರದ ಮಟ್ಟದಲ್ಲಿ ಇಷ್ಟೊಂದು ಅಜ್ಞಾನ ಮನೆ ಮಾಡಿದೆ
 • ಸರಕಾರದಿಂದ ಏನೇ ಸೌಕರ್ಯ ಪಡೆಯಬೇಕಿದ್ದರೂ ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವೆಂದು ಒತ್ತಡ ಹೇರಲಾಗುತ್ತಿದೆ. ಎಷ್ಟೋ ಇಲಾಖೆಗಳಲ್ಲಿ ಇದರ ನೈಜ ಉದ್ದೇಶದ ಬಗ್ಗೆಯೇ ಸ್ಪಷ್ಟತೆ ಇಲ್ಲದ್ದರಿಂದ ಆಧಾರ್‌ನಿಂದ ಪ್ರಯೋಜನ ಆಗುವುದರ ಬದಲು ಸಮಸ್ಯೆಯೇ ಹೆಚ್ಚುತ್ತಿದೆ.

ಕೇಂದ್ರ ಸರಕಾರದ ಸೂಚನೆ ಅನುಸಾರ ರಾಜ್ಯದಲ್ಲೂ ಅಗತ್ಯ ಸೇವೆಗಳಿಗೆ ಆಧಾರ್‌ ಜೋಡಣೆ ಮಾಡಲಾಗಿದೆ. ಅನಿಲ ಸಿಲಿಂಡರ್‌, ಸಬ್ಸಿಡಿ ಅಕ್ಕಿ ವಿತರಣೆ, ಇನ್‌ಪುಟ್‌ ಸಬ್ಸಿಡಿ ಪಾವತಿ ಈ ಪೈಕಿ ಪ್ರಮುಖವಾಗಿವೆ. ಇದರ ಹೊರತಾಗಿಯೂ ಹತ್ತು ಹಲವು ಯೋಜನೆಗಳ ಸಂಬಂಧ ಆಧಾರ್‌ ಆಶ್ರಯಿಸಲು ಉತ್ಸಾಹ ತೋರಿದ್ದರಿಂದಲೇ ಅಪಾಯ ಎದುರಾಗುವಂತಾಗಿತ್ತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನರ ಆಧಾರ್‌ ಮಾಹಿತಿ ಸೋರಿಕೆಯಾಗುವ ಎಲ್ಲ ಸಾಧ್ಯತೆಯೂ ಇತ್ತು. ಇದನ್ನು ಸರಿಪಡಿಸಿಕೊಳ್ಳಲು ಇದೀಗ ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಮಾಣ ಪತ್ರ : 
ಸದ್ಯಕ್ಕೆ ಪುಸ್ತಕ ಮತ್ತು ಪೇಪರ್‌ನಲ್ಲಿ ಆಧಾರ್‌ ವಿವರ ಬರೆದುಕೊಳ್ಳುವ ವಿಧಾನವಿದ್ದು, ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಬಹುತೇಕ ಯೋಜನೆಗಳಲ್ಲಿ ಆಧಾರ್‌ ಬಳಸುತ್ತಿರುವುದು ಏಕೆಂಬ ವಿವರಣೆಯಿಲ್ಲ. ಆಧಾರ್‌ ನಂಬರ್‌ ಸಂಗ್ರಹದಿಂದ ಯಾವೆಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂಬುದೂ ಸ್ಪಷ್ಟವಾಗಿಲ್ಲ. ಇದರಿಂದ ಪ್ರಯೋಜನವಾದಂತೆ ಕಾಣುತ್ತಿಲ್ಲವೆಂಬ ಆಪಾದನೆಯಿತ್ತು. ಹಾಗಾಗಿ ಸರಕಾರಿ ಸೇವೆ ಒದಗಿಸಲು ನಾಗರಿಕರಿಂದ ಆಧಾರ್‌ ಮಾಹಿತಿ ತೆಗೆದುಕೊಳ್ಳುವಾಗ ಅವರ ಒಪ್ಪಿಗೆಯೂ ಕಡ್ಡಾಯ. ಈ ಉದ್ದೇಶಕ್ಕೆ ನಿಗದಿತ ಪ್ರಮಾಣ ಪತ್ರದ ನಮೂನೆ ತಯಾರಿಸುವಂತೆ ಸಿಎಸ್‌ ಸೂಚಿಸಿದ್ದಾರೆ.

ಅಸ್ತವ್ಯಸ್ತ ಡೇಟಾಬೇಸ್‌:  ಬಹುತೇಕ ಇಲಾಖೆಗಳಿಗೆ ಆಧಾರ್‌ ಡೇಟಾಬೇಸ್‌ ಅಳವಡಿಕೆ ಹೇಗೆಂಬುದೇ ಗೊತ್ತಿಲ್ಲ. ನಾನಾ ತಂತ್ರಾಂಶಗಳಲ್ಲಿ ಆಧಾರ್‌ ಸಂಖ್ಯೆ ಜೋಡಿಸಿದಾಗ ಅಂಕಿ, ಅಂಶಗಳಲ್ಲಿ ವ್ಯತ್ಯಾಸವಾಗಿತ್ತು. ಹಲವು ಸಂದರ್ಭದಲ್ಲಿ 12 ಅಂಕಿಗಳಿಗಿಂತ ಹೆಚ್ಚು ಅಥವಾ ಕಡಿಮೆ ಅಂಕಿ ನಮೂದಾಗಿತ್ತು. ಆಧಾರ್‌ ಸಂಖ್ಯೆಗೂ ಫಲಾನುಭವಿಗಳ ಹೆಸರಿಗೂ ಹೊಂದಾಣಿಕೆಯಾಗದ ನಿದರ್ಶನಗಳೂ ಇವೆ. ವೆಬ್‌ಸೈಟ್‌ಗಳಲ್ಲಿ ಆಧಾರ್‌ ಮಾಹಿತಿ ತೋರಿಸುವಾಗ ಅದರ ಸಂಖ್ಯೆಯನ್ನು ಪೂರ್ತಿಯಾಗಿ ಮುದ್ರಿಸಬಾರದು ಎನ್ನುವುದೂ ಇಲಾಖೆಗಳಿಗೆ ಅರಿವಿಲ್ಲ ಎಂಬುದೂ ಸರಕಾರದ ಗಮನಕ್ಕೆ ಬಂದಿದೆ.

ಅನುಮೋದನೆ ಕಡ್ಡಾಯ :  ನಾನಾ ಇಲಾಖೆಗಳಲ್ಲಿ ಆಧಾರ್‌ ಮಾಹಿತಿ ಪಡೆಯುವುದು ಅವಶ್ಯಕವಾದರೆ ಈ ಕುರಿತ ಸಕಾರಣದೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (ಡಿಪಿಎಆರ್‌/ಇ-ಆಡಳಿತ) ಪ್ರಸ್ತಾವನೆ ಸಲ್ಲಿಸಬೇಕು. ಎಲ್ಲ ಇಲಾಖೆಗಳಲ್ಲೂ ಈ ಸಂಬಂಧ ಅಧಿಸೂಚನೆ ಹೊರಡಿಸಬೇಕು. ಅದನ್ನು ಪರಿಶೀಲಿಸುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅನುಮೋದನೆ ನೀಡಲಿದೆ. ಕೇಂದ್ರದ ಆಧಾರ್‌ ಅಧಿನಿಯಮ ಹಾಗೂ ರಾಜ್ಯದ ಆಧಾರ್‌ ಅಧಿನಿಯಮದ ಅಡಿ ಇದು ಸರಿ ಹೊಂದುತ್ತದೆಯೇ ಎನ್ನುವುದನ್ನು ಈ ಹಂತದಲ್ಲಿ ಖಾತರಿ ಪಡಿಸಿಕೊಳ್ಳಲಾಗುವುದು. ಅದಾದ ಬಳಿಕವೇ ಆಧಾರ್‌ ಜೋಡಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ.

ಅನಿಲ ಭಾಗ್ಯ

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಗೆ ಪೂರಕವಾಗಿ ಜಾರಿಗೊಳಿಸುತ್ತಿರುವ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಬೆಂಬಲ ನೀಡುವಂತೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ರಾಜ್ಯ ಸರ್ಕಾರ ಕೋರಿದೆ.

 • ”ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಉಚಿತ ಎಲ್‌.ಪಿ.ಜಿ. ಪಡೆಯಲು ಆಯ್ಕೆಯಾಗದ ಬಡವರಿಗೆ ಉಚಿತ ಎಲ್‌.ಪಿ.ಜಿ. ಸಂಪರ್ಕ, ಎರಡು ಉಚಿತ ರೀಫಿಲ್‌ ಗಳನ್ನು ನೀಡುವುದಕ್ಕಾಗಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ರೂಪಿಸಲಾಗಿದೆ. ಮುಂದಿನ 18 ರಿಂದ 24 ತಿಂಗಳುಗಳಲ್ಲಿ 30 ಲಕ್ಷ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಸ್ತರಿಸಲು ಉದ್ದೇಶಿಸಲಾಗಿದೆ,”
 • ”ಕರ್ನಾಟವನ್ನು ಸೀಮೆ ಎಣ್ಣೆ ಮುಕ್ತ ಮಾಡುವ ಗುರಿ ಸಾಧಿಸಲು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ತಿಂಗಳಿಗೆ ಕನಿಷ್ಠ 5 ರಿಂದ 2 ಲಕ್ಷ ಹೊಸ ಸಂಪರ್ಕಗಳನ್ನು ಒದಗಿಸುವ ಅಗತ್ಯವಿದೆ. ಸರ್ಕಾರದಿಂದ ಭದ್ರತಾ ಠೇವಣಿಯನ್ನು ವಿತರಕರಿಗೆ ಪಾವತಿಸಲೂ ಅವಕಾಶ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ತೈಲ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.

ಮುಖ್ಯಮಂತ್ರಿ ಅನಿಲ ಭಾಗ್ಯ

 • ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (ಎಲ್ಪಿಜಿ), ಒಲೆ ವಿತರಿಸುವ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ

ಎಲ್ಲಿ ಅರ್ಜಿ ಸಲ್ಲಿಸುವುದು?

 • ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಹೊಂದದಿರುವ ಬಿಪಿಎಲ್ ಕುಟುಂಬದವರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಸೌಲಭ್ಯಗಳೇನು?

 • ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಂಡ ನಂತರ ಅರ್ಜಿದಾರರಿಗೆ 2 ಕೆ.ಜಿ ಸಿಲಿಂಡರ್‌, ಒಲೆ, ರೆಗ್ಯುಲೇಟರ್ ವಿತರಣೆ ಮಾಡಲಾಗುವುದು. ಈ ಯೋಜನೆ ಅಡಿ ಫಲಾನುಭವಿಗಳು ಎರಡು ಬಾರಿ ಉಚಿತವಾಗಿ ಸಿಲಿಂಡರ್ ಭರ್ತಿ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಯಾಕೆ?

 • ಕೇಂದ್ರ ಸರ್ಕಾರ ಜಾರಿ ಮಾಡಿರುವ ‘ಉಜ್ವಲ ಯೋಜನೆ’ ಅಡಿಯಲ್ಲಿ ಸಿಲಿಂಡರ್ ಮತ್ತು ಅನಿಲ ಸಂಪರ್ಕ ಪಡೆದವರಿಗೆ ಉಚಿತವಾಗಿ ಒಲೆ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ಉಜ್ವಲ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ‍ಪ್ರತ್ಯೇಕವಾಗಿಯೇ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅರ್ಹತಾ ಮಾನದಂಡ ಏನು?

 1. 18 ವರ್ಷ ಮೇಲ್ಪಟ್ಟ ಮಹಿಳೆಯಾಗಿರಬೇಕು.
 2. ಆಯಾ ರಾಜ್ಯ ಸರ್ಕಾರದೊಂದಿಗೆ ನೋಂದಾಯಿಸಲ್ಪಟ್ಟಿರುವ ಬಿಪಿಎಲ್ ಕುಟುಂಬ/ಕುಟುಂಬ/ಘಟಕ 3. ನಕಲು ಮತ್ತು ತಪ್ಪು ನಿರ್ವಹಣೆ ತಪ್ಪಿಸಲು ಪ್ರಸ್ತುತ ನೋಂದಾಯಿತ SECC-2011 ಡೇಟಾ (ಗ್ರಾಮೀಣ)
 3. ಎಲ್ಪಿಜಿ ಸಂಪರ್ಕಗಳನ್ನು ಮಹಿಳಾ ಫಲಾನುಭವಿಗಳಿಗೆ ನೀಡಲಾಗುವುದು ಮತ್ತು ಅವರ ಹೆಸರಿನಲ್ಲಿ ನೋಂದಾಯಿಸಲಾಗುವುದು.
 4. ಬಿಪಿಎಲ್ ಕುಟುಂಬಗಳಿಗೆ ರೂ. 1,600 ವರೆಗೆ ಹಣಕಾಸಿನ ನೆರವು ನೀಡಲು ಯೋಜನೆ ಭರವಸೆ ನೀಡಿದೆ.

7-ಸಿ ಸೂತ್ರ

ಸುದ್ಧಿಯಲ್ಲಿ ಏಕಿದೆ ?ಎಲೆಕ್ಟ್ರಿಕ್‌ ವಾಹನಗಳು ಮತ್ತು ಸ್ಮಾರ್ಟ್‌ ಚಾರ್ಜಿಂಗ್‌ ಸೌಲಭ್ಯಗಳನ್ನು ಹೆಚ್ಚಿಸುವಂಥ ಹೂಡಿಕೆಗಳಿಗೆ ಸರಕಾರ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತಮ ಸಂಚಾರ ನಿರ್ವಹಣೆಗೆ ‘7-ಸಿ’ಗಳ ಸೂತ್ರವನ್ನೂ ಮುಂದಿಟ್ಟಿದ್ದಾರೆ.

 • ನೀತಿ ಆಯೋಗ ಏರ್ಪಡಿಸಿರುವ ಜಾಗತಿಕ ಮೊಬಿಲಿಟಿ ಶೃಂಗಸಭೆ ಮೂವ್‌ ಉದ್ದೇಶಿಸಿ ಮಾತನಾಡಿದ ಅವರು, ”ಉತ್ತಮ ಸಂಚಾರ ವ್ಯವಸ್ಥೆಗೆ ‘7-ಸಿ’ ಸೂತ್ರವನ್ನು ಅನುಸರಿಸಬೇಕು. Commonn(ಸಾಮಾನ್ಯ ಸಂಚಾರ), Connected(ಸಂಪರ್ಕ), convenient(ಸುಗಮ), congestion- free(ದಟ್ಟಣೆ ರಹಿತ), chargedd(ಮರುಬಳಕೆ), clean(ಸ್ವಚ್ಛ) cutting edge(ಕೊರತೆ ಇಲ್ಲದ) ಸಂಚಾರ ವ್ಯವಸ್ಥೆಯು ಭವಿಷ್ಯದ ದಿನಗಳಲ್ಲಿ ಭಾರತಕ್ಕೆ ಬೇಕು,” ಎಂದರು.
 • ”ಹವಾಮಾನ ವೈಪರೀತ್ಯ ನಿಗ್ರಹಿಸಲು ತೈಲದ ಅವಲಂಬನೆ ಇಳಿಸಲು ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಬೇಕಾಗಿದೆ. ಹವಾಮಾನ ವೈಪರೀತ್ಯ ತಡೆಗೆ ಪರಿಸರಸ್ನೇಹಿ ಇ-ವ್ಯವಸ್ಥೆಯು ಉತ್ತಮ ಸಾಧನ. ಕಾರು ಹೊರತಾಗಿ ಸ್ಕೂಟರ್‌, ರಿಕ್ಷಾಗಳಲ್ಲೂ ಇದು ವ್ಯಾಪಕ ಬಳಕೆ ಆಗಬೇಕು. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಬೇಕಾಗಿದೆ,”.
 • ಕಳೆದ ವರ್ಷ 2,000 ವಾಹನಗಳು ಮಾರಾಟವಾಗಿವೆ. ಮುಂದಿನ 5 ವರ್ಷಗಳಲ್ಲಿ ಒಟ್ಟು ವಾಹನಗಳ ಮಾರಾಟದಲ್ಲಿ ಶೇ.15ರಷ್ಟು ಇ-ವಾಹನಗಳ ಪಾಲಿರಬೇಕು.

 ‘ದಿ ಪ್ರೈಸ್‌ ಆಫ್‌ ಫ್ರೀ’

ಸುದ್ಧಿಯಲ್ಲಿ ಏಕಿದೆ ?ಮಕ್ಕಳ ಹಕ್ಕುಗಳ ಹೋರಾಟಗಾರ, ನೊಬೆಲ್‌ ಪುರಸ್ಕೃತ ಭಾರತೀಯ ಕೈಲಾಶ್‌ ಸತ್ಯಾರ್ಥಿ ಅವರ ಮಕ್ಕಳ ರಕ್ಷಣೆಯ ಕಾರ್ಯಚಟುವಟಿಕೆಗಳನ್ನು ಒಳಗೊಂಡ ಪ್ರಶಸ್ತಿ ವಿಜೇತ ಸಾಕ್ಷ್ಯ ಚಿತ್ರವನ್ನು ಅಮೆರಿಕದ ವೀಡಿಯೋ ಶೇರಿಂಗ್‌ ವೆಬ್‌ಸೈಟ್‌ ಯೂಟ್ಯೂಬ್‌ ಖರೀದಿಸಿದೆ.

 • ಈ ಮೂಲಕ ಬಾಲ ಕಾರ್ಮಿಕತೆಯನ್ನು ಅಂತ್ಯಗೊಳಿಸುವುದಕ್ಕಾಗಿ ಅವರು ನಡೆಸಿದ ನಿರಂತರ ಹೋರಾಟವನ್ನು ಜಗತ್ತಿನ ಮುಂದೆ ತೆರೆದಿಡಲಿದೆ. ದಿ ಪ್ರೈಸ್‌ ಆಫ್‌ ಫ್ರೀ ಎಂಬ ಹೆಸರಿನ ಈ ಸಾಕ್ಷ್ಯ ಚಿತ್ರವನ್ನು ಡೆರೆಕ್‌ ಡೊನೀನ್‌ ನಿರ್ದೇಶಿಸಿದ್ದು, ಸತ್ಯಾರ್ಥಿ ಮತ್ತು ಅವರ ತಂಡ ಮಕ್ಕಳ ರಕ್ಷಣೆಗಾಗಿ ನಡೆಸಿದ ಗುಪ್ತ ದಾಳಿಗಳು ಮತ್ತು ಇತರ ಕಾರ್ಯಾಚರಣೆಗಳನ್ನು ಚಿತ್ರೀಕರಿಸಿದೆ.
 • ಚಿತ್ರವು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಸತ್ಯಾರ್ಥಿ ಅವರ ಕೆಲಸವನ್ನು ಮುಂದಿನ ಪೀಳಿಗೆಗೂ ಹಂಚುವ ಪ್ರಯತ್ನ ಇದೆಂದು ಯೂಟ್ಯೂಬ್‌ ಹೇಳಿದೆ.

ತೈಲ ದರ

ಸುದ್ಧಿಯಲ್ಲಿ ಏಕಿದೆ ?ಪೆಟ್ರೋಲ್‌-ಡೀಸೆಲ್‌ನ ಮೂಲ ಯಾವುದು ಕೊಲ್ಲಿ ರಾಷ್ಟ್ರಗಳೇ ಥಟ್ಟನೆ ನೆನಪಾಗುವುದು ಸಹಜ. ಆದರೆ ಕಳೆದ ವರ್ಷ ಜಗತ್ತಿನಲ್ಲೇ ಅತಿ ಹೆಚ್ಚು ತೈಲವನ್ನು ಉತ್ಪಾದಿಸಿದ ದೇಶ ಅಮೆರಿಕ!

 • ಹಿಂದೊಮ್ಮೆ ತೈಲ ಆಮದು ರಾಷ್ಟ್ರವಾಗಿದ್ದ ಅಮೆರಿಕ ಕಳೆದ ಹತ್ತು ವರ್ಷಗಳಿಂದ ತೈಲೋತ್ಪಾದನೆಯಲ್ಲಿ ಭಾರಿ ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಸೌದಿ ಅರೇಬಿಯಾವನ್ನೂ ಹಿಂದಿಕ್ಕಿ ಅತಿ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ತೈಲ ಆಮದಿನಲ್ಲೂ ಅದು ಚೀನಾ ನಂತರ ಎರಡನೇ ಸ್ಥಾನದಲ್ಲಿದೆ. ತೈಲದ ಆಮದು-ರಫ್ತು ಎರಡೂ ವಿಭಾಗಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿರುವುದು ಗಮನಾರ್ಹ.
 • ಚೀನಾ, ಜಪಾನ್‌, ಜರ್ಮನಿ ಮುಂತಾದ ಪ್ರಮುಖ ತೈಲ ಆಮದು ರಾಷ್ಟ್ರಗಳಿಗೆ ಇಲ್ಲದ ಈ ಅನುಕೂಲ ಅಮೆರಿಕಕ್ಕೆ ಇದೆ. ಹೀಗಾಗಿ ಜಾಗತಿಕ ಕಚ್ಚಾ ತೈಲದ ದರಗಳ ಮೇಲೆ ಅಮೆರಿಕ ಹಾಗೂ ಇತರ ರಾಷ್ಟ್ರಗಳ ಜತೆಗೆ ಅದರ ಸಂಬಂಧ ಕೂಡ ಪ್ರಭಾವ ಬೀರುತ್ತಿದೆ. ಇದು ಭಾರತ, ಚೀನಾ, ಜಪಾನ್‌ ಇತ್ಯಾದಿ ದೇಶಗಳಲ್ಲೂ ದರಗಳ ಏರಿಳಿತಕ್ಕೆ ಕಾರಣಗಳಲ್ಲೊಂದಾಗಿದೆ.
 • ಮುಂದಿನ 5 ವರ್ಷಗಳ ಕಾಲ ಅಮೆರಿಕ ತೈಲ ಉದ್ಯಮ ವಲಯದಲ್ಲಿ ತನ್ನ ಪ್ರಾಬಲ್ಯತ ಮುಂದುವರಿಸಲಿದೆ ಎಂದು ಇಂಟರ್‌ನ್ಯಾಶನಲ್‌ ಎನರ್ಜಿ ಏಜೆನ್ಸಿ ತಿಳಿಸಿದೆ. ಈಗ ಒಂದು ಕಡೆ ಚೀನಾ-ಅಮೆರಿಕದ ವಾಣಿಜ್ಯ ಸಮರದ ಪರಿಣಾಮ ಡಾಲರ್‌ ಅಬ್ಬರ ಇದ್ದರೆ, ರೂಪಾಯಿ ಕುಸಿತದಿಂದ ತೈಲದ ಆಮದು ಭಾರತಕ್ಕೆ ತುಟ್ಟಿಯಾಗುತ್ತಿದೆ.
 • ಕಳೆದ ನಾಲ್ಕು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಇಳಿಕೆಗೆ ಒಪೆಕ್‌ಯೇತರ ರಾಷ್ಟ್ರಗಳ ಉತ್ಪಾದನೆ ಹೆಚ್ಚಳವಾಗಿರುವುದು, ಮುಖ್ಯವಾಗಿ ಅಮೆರಿಕದ ತೈಲೋತ್ಪಾದನೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿರುವುದು ಕಾರಣ.

ಇರಾನ್‌ ವಿರುದ್ಧದ ಅಮೆರಿಕದ ನಿರ್ಬಂಧ ಪರಿಣಾಮ 

 • ಅಮೆರಿಕವು ಇರಾನ್‌ ವಿರುದ್ಧ ಮುಂಬರುವ ನವೆಂಬರ್‌ನಿಂದ ಅನ್ವಯವಾಗುವಂತೆ ನಿರ್ಬಂಧಗಳನ್ನು ಹೇರಿದೆ. ಚೀನಾ-ಅಮೆರಿಕ ವಾಣಿಜ್ಯ ಸಮರದಿಂದ ಡಾಲರ್‌ ಬಲ ಹೆಚ್ಚಾಗಿ, ರೂಪಾಯಿ ಬಸವಳಿದಿದ್ದರೆ, ಇರಾನ್‌ ವಿರುದ್ಧದ ನಿರ್ಬಂಧ ಕೂಡ ತೈಲ ದರ ಏರಿಕೆಗೆ ಪ್ರಭಾವ ಬೀರಿದೆ.
 • ಇಂಟರ್‌ನ್ಯಾಶನಲ್‌ ಎನರ್ಜಿ ಏಜೆನ್ಸಿಯ ಮುನ್ನೋಟದ ಪ್ರಕಾರ ಮುಂದಿನ 5 ವರ್ಷಗಳ ಕಾಲ, ವಿಶ್ವದ ತೈಲ ಬೇಡಿಕೆಯಲ್ಲಿ ಸಾಕಷ್ಟನ್ನು ಅಮೆರಿಕ ಪೂರೈಸಲಿದೆ. 2023ರ ವೇಳೆಗೆ ಅದು ದಿನಕ್ಕೆ 50 ಲಕ್ಷ ಬ್ಯಾರೆಲ್‌ ತೈಲ ರಫ್ತು ಮಾಡುವ ನಿರೀಕ್ಷೆ ಇದೆ. ಆದರೆ ಹೂಡಿಕೆಯ ಪ್ರಮಾಣ ಇಳಿದರೆ ಈ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
 • ಶೆಲ್‌ ಆಯಿಲ್‌ ಕ್ರಾಂತಿ
  ಕೊಲ್ಲಿ ರಾಷ್ಟ್ರಗಳಿಂದ ತೈಲ ಸರಬರಾಜಿನಲ್ಲಿ ಉಂಟಾಗುತ್ತಿದ್ದ ವ್ಯತ್ಯಯ, ಹೆಚ್ಚುತ್ತಿದ್ದ ಬೇಡಿಕೆ, ತೈಲ ದರದ ಏರಿಕೆಯ ಪರಿಣಾಮ ಉಂಟಾಗುತ್ತಿದ್ದ ಅರ್ಥಿಕ ಹಿಂಜರಿತದ ಸಮಸ್ಯೆ ಅಮೆರಿಕ್ಕೆ ಸಮಸ್ಯೆಯಾಗಿ ಪರಿಣಮಿಸಿತ್ತು. ಆದರೆ ಆಧುನಿಕ ತಂತ್ರಜ್ಞಾನದ ನೆರವಿನಿಂದ ಅಮೆರಿಕ ತನ್ನ ತೈಲ ಹಾಗೂ ನೈಸರ್ಗಿಕ ಅನಿಲ ಸಂಪತ್ತನ್ನು ಬಗೆದು ಬಳಸಲು ಆರಂಭಿಸಿತು. ಈ ಮಹತ್ವದ ಬದಲಾವಣೆಯನ್ನು ಶೆಲ್‌ ಕ್ರಾಂತಿ ಎಂದು ಬಣ್ಣಿಸಲಾಗುತ್ತಿದೆ. 2008ರ ನಂತರ ಆರ್ಥಿಕ ಹಿಂಜರಿತದಿಂದ ಬಲು ಬೇಗ ಚೇತರಿಸಿಕೊಳ್ಳಲೂ ಶೆಲ್‌ ತೈಲೋತ್ಪಾದನೆ ಕಾರಣವಾಗಿತ್ತು.
 • 2014ರಲ್ಲಿ ತೈಲ ದರ ಕುಸಿತ ಯಾಕೆ?
  ಕಳೆದ 2000-2008ರಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 25 ಡಾಲರ್‌ನಿಂದ 100ರ ಗಡಿ ದಾಟಿತ್ತು. 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ನಂತರ ದರ ಕುಸಿಯಿತು. ನಂತರ ಚೇತರಿಸುತ್ತ 2013-14ರ ವೇಳೆಗೆ ಮತ್ತೆ 100 ಡಾಲರ್‌ನ ಗಡಿ ದಾಟಿತ್ತು.
 • ನಂತರ ಮತ್ತೊಂದು ಸುತ್ತಿನ ದರ ಕುಸಿತ ದಾಖಲಾಯಿತು. ಇದಕ್ಕೆ ಅಮೆರಿಕ ಮತ್ತು ಕೆನಡಾದಲ್ಲಿ ತೈಲೋತ್ಪಾದನೆಯ ಹೆಚ್ಚಳವೂ ಒಂದು ಕಾರಣ. ಈ ಸ್ಪರ್ಧೆಗೆ ಪ್ರತಿಯಾಗಿ ಸೌದಿ ಅರೇಬಿಯಾ ತನ್ನ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳಲು ತಾನೂ ದರವನ್ನು ತಗ್ಗಿಸಿತ್ತು. ಇದರಿಂದ ಭಾರತದಂಥ ತೈಲ ಆಮದು ರಾಷ್ಟ್ರಕ್ಕೆ ಅನುಕೂಲವಾಗಿತ್ತು.

  2017ರಲ್ಲಿ ಟಾಪ್‌ 5 ತೈಲೋತ್ಪಾದಕ ರಾಷ್ಟ್ರಗಳು/ ಉತ್ಪಾದನೆ 
  (ದಿನಕ್ಕೆ ದಶಲಕ್ಷ ಬ್ಯಾರೆಲ್‌ಗಳಲ್ಲಿ ಉತ್ಪಾದನೆ)
  ಅಮೆರಿಕ : 15.6
  2. ಸೌದಿ ಅರೇಬಿಯಾ: 12.1
  3. ರಷ್ಯಾ: 11.2
  4. ಕೆನಡಾ : 5.0
  5. ಚೀನಾ : 4.8
  ಟಾಪ್‌ 5 ತೈಲ ಆಮದುದಾರ ರಾಷ್ಟ್ರಗಳು 
  1. ಚೀನಾ
  2. ಅಮೆರಿಕ
  3. ಜಪಾನ್‌
  4. ಭಾರತ
  5. ದಕ್ಷಿಣ ಕೊರಿಯಾ.

Related Posts
National Current Affairs – UPSC/KAS Exams- 14th July 2018
Swachh Survekshan Grameen, 2018 Why in news? The Centre has launched the Swachh Survekshan Grameen, 2018, a nationwide survey of rural India to rank the cleanest and dirtiest States and districts on ...
READ MORE
GDP grows at 7.3% in September quarter
Gross Domestic Product was 7.6 per cent in the second quarter of the last fiscal. The Indian economy grew at 7.3 per cent in the September quarter of current fiscal, up ...
READ MORE
The first step has been taken towards removal of Karnataka Lokayukta Y. Bhaskar Rao by the Opposition Bharatiya Janata Party and Janata Dal (Secular). They submitted separate petitions to Legislative Assembly ...
READ MORE
Man-made water crisis in Karnataka: KPSC/KAS 2016 Challengers
Irrigation projects in Karnataka poorly executed, says CWC The Central Water Commission (CWC), which studied the drought situation in Karnataka, has taken a serious note of ‘poor execution’ of Centrally funded ...
READ MORE
National International Current Affairs – UPSC/KAS Exams – 28th June 2018
Higher Education Commission Setting the ball rolling for major reforms in higher education, the Centre has placed in the public domain a draft Bill for a Higher Education Commission of India ...
READ MORE
KARNATAKA – CURRENT AFFAIRS – KAS / KPSC EXAMS – 23rd MARCH 2017
Karnataka Govt: Over-exploitation pushed down water table in 143 taluks   On 22nd March, the government presented a grim picture of the water situation. Groundwater levels in 143 of the total 176 ...
READ MORE
For import of an aircraft following steps were necessary till now For remittance of funds for import of aircraft, the approval of the ministry was mandatory. Scheduled Operators (airlines) and Regional Scheduled ...
READ MORE
Karnataka Current Affairs – KAS/KPSC Exams- 4th September 2018
Karnataka govt announces Rs 50 lakh grant for startups The Karnataka government announced a grant worth Rs 50 lakh for startups providing solutions for rural development in the state. To encourage any ...
READ MORE
Bellandur Lake: British firm offers to revive the lake in 6 months
As the froth in Bellandur and Varthur lakes evoke shock and disgust from citizens, an 18-member expert committee formed to chalk out a solution had noticed that there were “too ...
READ MORE
National Current Affairs – UPSC/KAS Exams- 22nd November 2018
Manipur Sangai Festival Topic: Art and Culture IN NEWS: The annual Sangai Festival was celebrated in northeastern state of Manipur. It is grandest festival of state named after state animal, Sangai, ...
READ MORE
National Current Affairs – UPSC/KAS Exams- 14th July
GDP grows at 7.3% in September quarter
Lokayukta’s removal
Man-made water crisis in Karnataka: KPSC/KAS 2016 Challengers
National International Current Affairs – UPSC/KAS Exams –
KARNATAKA – CURRENT AFFAIRS – KAS / KPSC
Relaxed norms for aircraft import
Karnataka Current Affairs – KAS/KPSC Exams- 4th September
Bellandur Lake: British firm offers to revive the
National Current Affairs – UPSC/KAS Exams- 22nd November

Leave a Reply

Your email address will not be published. Required fields are marked *