“14th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ವಾಸಯೋಗ್ಯ ನಗರಗಳ ಪಟ್ಟಿ

 • ಸುದ್ದಿಯಲ್ಲಿ ಏಕಿದೆ? ನಗರ ಯೋಜನೆ ಮತ್ತು ನಿರ್ವಹಣೆಗೆ ಉತ್ತೇಜಿಸುವ ಸಲುವಾಗಿ ಹಾಗೂ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದ ಜೀವನ ನಿರ್ವಹಣೆ ಗುಣಮಟ್ಟವನ್ನು ನಗರಗಳು ಅಳವಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ‘ವಾಸಯೋಗ್ಯ ಸೂಚ್ಯಂಕ’ ಬಿಡುಗಡೆ ಮಾಡಿದೆ.
 • ಮಹಾರಾಷ್ಟ್ರದ ಪುಣೆ ಪ್ರಥಮ ಸ್ಥಾನದಲ್ಲಿದೆ.
 • 2017ರ ಜೂನ್​ನಲ್ಲಿ ಸಚಿವಾಲಯ ದೇಶಾದ್ಯಂತ ನಗರಗಳಿಗೆ ರ‍್ಯಾಂಕಿಂಗ್ ನೀಡಲು ನಿರ್ಧರಿಸಿತು. ಈ ವರ್ಷದ ಜನವರಿ 19ರಂದು ಒಟ್ಟು 111 ನಗರಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ಆರಂಭಿಸಲಾಗಿತ್ತು.
 • ಸಾಂಸ್ಥಿಕ, ಸಾಮಾಜಿಕ, ಆರ್ಥಿಕ, ಭೌತಿಕ ಅಭಿವೃದ್ಧಿ ಪರಿಗಣಿಸಿ ನಗರಗಳಿಗೆ ರ‍್ಯಾಂಕಿಂಗ್ ನೀಡಲಾಗಿದೆ. ಪ್ರತಿ ನಗರಗಳನ್ನು ಒಟ್ಟು 15 ವರ್ಗಗಳ ಹಾಗೂ 78ನ ಮಾನದಂಡಗಳ ಅನುಸಾರ ಮೌಲ್ಯಮಾಪನ ಮಾಡಲಾಗಿದೆ.

ಕರ್ನಾಟಕ ಟಾಪ್ 10ರಲ್ಲಿಲ್ಲ

 • ರಾಜ್ಯದಿಂದ ಒಟ್ಟು 7 ನಗರವನ್ನು ವಾಸಯೋಗ್ಯ ರ‍್ಯಾಂಕಿಂಗ್ ಮೌಲ್ಯ ಮಾಪನಕ್ಕಾಗಿ ಆಯ್ಕೆ ಮಾಡಲಾಗಿತ್ತು. ಅದು ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೆಂಗಳೂರು, ತುಮಕೂರು ಮತ್ತು ಮಂಗಳೂರು.

ಮೌಲ್ಯಮಾಪನ ಹೇಗಾಯಿತು?

 • ನಗರ ಆಡಳಿತ ಅಧಿಕಾರಿಗಳಿಗೆ ರಾಷ್ಟ್ರೀಯ ಓರಿಯಂಟೇಷನ್ ಕಾರ್ಯಾಗಾರ ನಡೆಸಲಾಗಿತ್ತು. ಇದರಲ್ಲಿ ಮೌಲ್ಯಮಾಪನದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಬಳಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸಚಿವಾಲಯದಿಂದ 33 ರಾಜ್ಯ ಮಟ್ಟದ ಕಾರ್ಯಾಗಾರವನ್ನು ನಡೆಸಲಾಯಿತು.
 • ನಗರಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಚಿವಾಲಯಕ್ಕೆ ಮಾಹಿತಿ ನೀಡಲು ಡಾಟಾ ಎಂಟ್ರಿ ಪೋರ್ಟಲ್ ರಚಿಸಲಾಗಿತ್ತು. 60,000 ಸ್ಥಳೀಯರ ಅಭಿ ಪ್ರಾಯ ಹೊಂದಿರುವ ಸುಮಾರು 10,000 ದಾಖಲೆಗಳನ್ನು ಪ್ರತಿ ನಗರಗಳು ಸಲ್ಲಿಸಿವೆ. ಅದರನ್ವಯ ರ‍್ಯಾಂಕಿಂಗ್ ನೀಡಲಾಗಿದೆ.

ಸೂಚ್ಯಂಕಕ್ಕೆ ಆಧಾರವಾದ ಪರಾಮರ್ಶನ ಅಂಶಗಳು:

 • ಆಡಳಿತ, ಅಸ್ಮಿತೆ ಮತ್ತು ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಸುರಕ್ಷತೆ, ಆರ್ಥಿಕತೆ-ಉದ್ಯೋಗ, ವಸತಿ ವ್ಯವಸ್ಥೆ, ಸಾರ್ವಜನಿಕರಿಗೆ ಮುಕ್ತ ಪ್ರದೇಶ, ಮಿಶ್ರಭೂಮಿ, ವಿದ್ಯುತ್‌-ನೀರು ಪೂರೈಕೆ, ಸಾರಿಗೆ ಮತ್ತು ಸಂಚಾರ, ಘನ ತ್ಯಾಜ್ಯ ನಿರ್ವಹಣೆ. ಮಾಲಿನ್ಯ ಪ್ರಮಾಣ, ಕೈಗಾರಿಕೆ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ಮೂಲ ಸೌಕರ್ಯ, ಭೌತಿಕ ಮೂಲ ಸೌಕರ್ಯ.
 • ಸಮೀಕ್ಷೆಗೆ ಒಳಪಡಿಸಿದ 111 ನಗರಗಳ ಪೈಕಿ ಉತ್ತರ ಪ್ರದೇಶದ ರಾಂಪುರ ಕೊನೆಯ ಸ್ಥಾನ ಪಡೆದಿದೆ. ರಾಷ್ಟ್ರರಾಜಧಾನಿ ದಿಲ್ಲಿಗೆ 65ನೇ ಸ್ಥಾನ ಲಭ್ಯವಾಗಿದ್ದರೆ, ಕೋಲ್ಕತಾ ಮಾತ್ರ ಸ್ಪರ್ಧೆಯಿಂದ ಹೊರಗುಳಿದಿತ್ತು.

ಭಾರತದ ಮೊದಲ ವಂಶವಾಹಿ ಬ್ಯಾಂಕ್

 • ಸುದ್ದಿಯಲ್ಲಿ ಏಕಿದೆ? ಅಳಿವಿನಂಚಿನಲ್ಲಿರುವ ಮತ್ತು ಸಂರಕ್ಷಿತ ಪ್ರಾಣಿಗಳ ಸಂರಕ್ಷಣೆಯ ಮಹತ್ವದ ಹೆಜ್ಜೆಯಾಗಿ, ಭಾರತ ತನ್ನ ಮೊದಲ ವೈಜ್ಞಾನಿಕ ಮತ್ತು ಆಧುನಿಕ ರಾಷ್ಟ್ರೀಯ ವನ್ಯ ಜೀವಿಗಳ ವಂಶವಾಹಿ ಸಂಪನ್ಮೂಲ ಬ್ಯಾಂಕ್ ಅನ್ನು ತೆಲಂಗಾಣದ ಹೈದರಾಬಾದ್ನಲ್ಲಿ ಸ್ಥಾಪಿಸಿದೆ .
 • ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಸಂಶೋಧನಾ ವಿಭಾಗದ ಸಂಶೋಧನಾ ಘಟಕವಾದ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆ ಪ್ರಯೋಗಾಲಯ (Conservation of Endangered Species-LaCONES)ದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವರಾದ ಹರ್ಷ ವರ್ಧನ್ ಈ ಬ್ಯಾಂಕ್‌ನ್ನು ಲೋಕಾರ್ಪಣೆಗೊಳಿಸಿದರು.

ವಂಶ ವಾಹಿನಿ ಬ್ಯಾಂಕ್ ನ ಸ್ಥಾಪನೆ ಏಕೆ ಮಾಡಲಾಗಿದೆ?

 • ಆನುವಂಶಿಕ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲು ಈ ಬ್ಯಾಂಕ್‌ನಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.
 • ಅಳಿವಿನಂಚಿನಲ್ಲಿರುವ ಪ್ರಾಣಿ ತಳಿಗಳ ಪುನರುತ್ಥಾನಗೊಳಿಸುವುದಕ್ಕಾಗಿ ಈ ವಂಶವಾಹಿಗಳನ್ನು ಉಪಯೋಗಿಸಬಹುದು.
 • ಜೆನೆಟಿಕ್ ರಿಸೋರ್ಸ್ ಬ್ಯಾಂಕ್ ಭಾರತೀಯ ಮೂಲದ ಆನುವಂಶಿಕ ವಸ್ತುಗಳನ್ನು ಸಂಗ್ರಹಿಸುತ್ತದೆ. ಇದು ಭಾರತದ ಜೀವವೈವಿಧ್ಯ ಮತ್ತು ಪರಿಸರವನ್ನು ರಕ್ಷಿಸುವಲ್ಲಿ ಇದು ಸಹಾಯ ಮಾಡಲಿದೆ.
 • ಕೆಲ ವರ್ಷಗಳ ಹಿಂದೆ ದೇಶದಲ್ಲಿ ಕೇವಲ ಆರು ಇಲಿಮೂತಿ ಜಿಂಕೆ (ಮೌಸ್ ಡೀರ್‌) ಗಳಿದ್ದವು. ಇಂದು ಭಾರತದಲ್ಲಿ ಮೌಸ್ ಡೀರ್‌ಗಳ ಸಂಖ್ಯೆ 300 ಕ್ಕಿಂತ ಹೆಚ್ಚಾಗಲು ವಂಶವಾಹಿ ಸಂಪನ್ಮೂಲ ಸಂರಕ್ಷಣೆ ಸಹಾಯಮಾಡಿದೆ.

ನ್ಯಾಷನಲ್ ವೈಲ್ಡ್ಲೈಫ್ ಜೆನೆಟಿಕ್ ರಿಸೋರ್ಸ್ ಬ್ಯಾಂಕ್

 • ನ್ಯಾಷನಲ್ ವೈಲ್ಡ್ಲೈಫ್ ಜೆನೆಟಿಕ್ ರಿಸೋರ್ಸ್ ಬ್ಯಾಂಕ್ ಪ್ರಾಣಿಗಳ ಪ್ರಭೇದವನ್ನು ವಾಸ್ತವಿಕವಾಗಿ ಪುನರುತ್ಥಾನಗೊಳಿಸಲು ಉಪಯೋಗಿಸಬಹುದಾದ ಆನುವಂಶಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.
 • ಇದು ಭಾರತದಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಜಾತಿಗಳ ಜೀವಕೋಶ ಕೋಶಗಳು, ಗ್ಯಾಮೆಟ್ಗಳು ಮತ್ತು ಭ್ರೂಣಗಳನ್ನು ಕ್ರಯೋಪ್ರೆಸರ್ವ್ ಮಾಡುತ್ತದೆ. ಕ್ರೈಯೊಜೆನಿಕ್ ಸಂರಕ್ಷಣೆಗಾಗಿ, CCMB- ಲಾಕಾನ್ಸ್ನಲ್ಲಿನ ಸಂಶೋಧಕರು ದ್ರವರೂಪದ ನೈಟ್ರೋಜನ್ ಅನ್ನು ಬಳಸುತ್ತಾರೆ, ಅದು ಮೈನಸ್ 195 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗುತ್ತದೆ
 • ಇದು ಕೃತಕ ಸಂತಾನೋತ್ಪತ್ತಿಯನ್ನು ತೆಗೆದುಕೊಳ್ಳುವ ಮೂಲಕ, ವಿಕಾಸ ಜೀವಶಾಸ್ತ್ರ ಮತ್ತು ವನ್ಯಜೀವಿ ಔಷಧಿಗಳಲ್ಲಿನ ಅಧ್ಯಯನಗಳನ್ನು ನಡೆಸುವ ಮೂಲಕ ಕಾಡು ಜೀವ ಸಂರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ. ಹೀಗಾಗಿ, ಇದು ಭಾರತದ ಜೀವವೈವಿಧ್ಯ ಮತ್ತು ಪರಿಸರವನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ಈ ಬ್ಯಾಂಕ್ ಭಾರತೀಯ ಕಾಡು ಪ್ರಾಣಿಗಳ 23 ಜಾತಿಗಳ ತಳಿ ಸಂಪನ್ಮೂಲಗಳನ್ನು ಸಂಗ್ರಹಿಸಿದೆ ಮತ್ತು ಸಂರಕ್ಷಿಸಿದೆ.

ಹಿನ್ನೆಲೆ

 • ಈ ಸೌಕರ್ಯವನ್ನು ಅಭಿವೃದ್ಧಿಪಡಿಸಲು, ಫ್ರಾನ್ಸಿನ್ ಝೂ, ಯುಎಸ್ನ ಸ್ಯಾನ್ ಡೀಗೊ ಝೂ, ಯು.ಎಸ್.ನ ವಿವರವಾದ ಅಧ್ಯಯನವನ್ನು ಸಿಸಿಬಿ ಸಂಶೋಧಕರು ನಡೆಸಿದರು. ಇದು ಜೀವಕೋಶದ ಸಂಸ್ಕೃತಿಗಳು, ಊಸೈಟ್ಸ್ , ಸ್ಪರ್ಮ್ಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಭ್ರೂಣಗಳ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯ ಜೆನಿಟಿಕ್ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟದೆ.
 • CCMB- ಲಾಕನ್ಸ್ ಎಂಬುದು ಭಾರತದಲ್ಲಿ ಮಾತ್ರ ಪ್ರಯೋಗಾಲಯವಾಗಿದೆ, ಅದು ಸಂಗ್ರಹ ಮತ್ತು ವಿಧಾನಗಳ ಅಭಿವೃದ್ಧಿಶೀಲ ವಿಧಾನಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ವನ್ಯಜೀವಿ ಪ್ರಾಣಿಗಳಿಂದ ಸೀಮೆನ್ ಮತ್ತು ಊಸೈಟ್ಗಳನ್ನು ಬೆಳೆಸುತ್ತದೆ ಮತ್ತು ಬ್ಲ್ಯಾಕ್ಬಕ್, ಮಚ್ಚೆಯುಳ್ಳ ಜಿಂಕೆ ಮತ್ತು ಪಾರಿವಾಳಗಳನ್ನು ಯಶಸ್ವಿಯಾಗಿ ಪುನರುತ್ಪಾದಿಸುತ್ತದೆ.
 • ಕಾಡು ಪ್ರಾಣಿಗಳ ಭಾಗಗಳನ್ನು ಮತ್ತು ಅವಶೇಷಗಳಿಂದ ಗುರುತಿಸಲು ಲ್ಯಾಕೋನೆಸ್ ಸಾರ್ವತ್ರಿಕ ಡಿಎನ್ಎ ಆಧಾರಿತ ಮಾರ್ಕರ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳ 250 ಕ್ಕಿಂತ ಹೆಚ್ಚಿನ ಜಾತಿಗಳ ಡಿಎನ್ಎ ಬ್ಯಾಂಕಿಂಗ್ ಅನ್ನು ಹೊಂದಿದೆ.

ಹಸಿರು ನಂಬರ್​ಪ್ಲೇಟ್

 • ಸುದ್ದಿಯಲ್ಲಿ ಏಕಿದೆ? ಇಲೆಕ್ಟ್ರಿಕ್ ವಾಹನಗಳಿಗೆ ಹಸಿರು ಬಣ್ಣದ ನಂಬರ್ ಪ್ಲೇಟ್ ಅಳವಡಿಸುವುದನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.
 • ನೀಲಿ, ಕೇಸರಿ ಸ್ಟಿಕ್ಕರ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳ ಇಂಧನ ಗುರುತಿಸುವ ಉದ್ದೇಶದಿಂದ ಪ್ರತ್ಯೇಕ ಸ್ಟಿಕ್ಕರ್ ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ಸಮ್ಮತಿಸಿವೆ.
 • ಪೆಟ್ರೋಲ್ ಹಾಗೂ ಸಿಎನ್​ಜಿ ವಾಹನಗಳಿಗೆ ತಿಳಿ ನೀಲಿ ಬಣ್ಣ ಹಾಗೂ ಡೀಸೆಲ್ ವಾಹನಗಳಿಗೆ ಕೇಸರಿ ಬಣ್ಣದ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಈ ಸ್ಟಿಕ್ಕರ್​ಗಳ ಮೇಲೆ ಹೊಲೋಗ್ರಾಮ್ ಕೂಡ ಇರಲಿದೆ.
 • ಈ ಸ್ಟಿಕ್ಕರ್​ಗಳ ಮೂಲಕ ವಾಹನ ಹಾಗೂ ಮಾಲಿನ್ಯ ನಿಯಂತ್ರಿಸುವುದು ಸರ್ಕಾರದ ಆಲೋಚನೆಯಾಗಿದೆ.
 • ವಿದೇಶಗಳಲ್ಲಿನ ಕೆಲ ನಗರಗಳಲ್ಲಿಯೂ ಈ ವ್ಯವಸ್ಥೆಯಿದೆ. ಸೆಪ್ಟೆಂಬರ್ 30ರೊಳಗೆ ಈ ಯೋಜನೆಯನ್ನು ಜಾರಿಗೊಳಿಸಬೇಕಿದೆ.

ಮಾನವರಹಿತ ನೌಕೆ ವಿನ್ಯಾಸ ಮತ್ತು ಜೋಡಣೆ ಕೇಂದ್ರ

 • ಸುದ್ದಿಯಲ್ಲಿ ಏಕಿದೆ? ಬೇಲೂರಿನಲ್ಲಿರುವ ವೈಮಾಂತರಿಕ್ಷ ಪ್ರಯೋಗ ಶಾಲೆ (ಎನ್‌ಎಎಲ್‌) ಆವರಣದಲ್ಲಿ ನೂತನ ಸಣ್ಣ ಮತ್ತು ಅತಿ ಸಣ್ಣ ಮಾನವರಹಿತ ನೌಕೆ (ಯುಎವಿ) ವಿನ್ಯಾಸ ಮತ್ತು ಜೋಡಣೆ ಕೇಂದ್ರವನ್ನು ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್‌ನ (ಸಿಎಸ್‌ಐಆರ್‌) ಉಪಾಧ್ಯಕ್ಷರು ಆಗಿರುವ ಡಾ.ಹರ್ಷವರ್ಧನ್‌ ಉದ್ಘಾಟಿಸಿದರು
 • ಇತ್ತೀಚಿನ ವರ್ಷಗಳಲ್ಲಿ ಡ್ರೋನ್‌ ಮತ್ತು ಯುವವಿಗಳ ಬಳಕೆ ನಾಗರೀಕ ಮತ್ತು ರಕ್ಷಣಾ ವಲಯದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅದಕ್ಕೆಂದೆ ಎನ್‌ಎಎಲ್‌ನಲ್ಲಿರುವ ಈ ವಿಭಾಗಕ್ಕೆ ಆದ್ಯತೆ ನೀಡಿ ಪ್ರತ್ಯೇಕವಾಗಿ ಹೆಚ್ಚುವರಿ ಸ್ಥಳಾವಕಾಶ ನೀಡಲಾಗಿದೆ.
 • ಕಂಪ್ಯೂಟರ್‌ನಲ್ಲಿ ಪ್ರಾಥಮಿಕ ಹಂತದ ವಿನ್ಯಾಸದಿಂದ ಹಿಡಿದು ಸಿದ್ಧಗೊಂಡ ಯುಎವಿ ಟೆಸ್ಟಿಂಗ್‌ ಹಂತದವರೆಗಿನ ಮತ್ತಷ್ಟು ಅಭಿವೃದ್ಧಿ ಮತ್ತು ಸಂಶೋಧನೆ ಆಗಬೇಕು ಎನ್ನುವ ಉದ್ದೇಶವಿದೆ. ಯುದ್ಧ ವಿಮಾನ, ಲಘು ವಿಮಾನ ಸರಸ್‌ ಅಭಿವೃದ್ಧಿಗೆ ನೀಡಿದಷ್ಟೇ ಮಹತ್ವವನ್ನು ಯುಎವಿ ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡಲಾಗುತ್ತಿದೆ

ಯುಎವಿ ಉಪಯೋಗಗಳು

 • ಗಣಿಗಳು ಸೇರಿದಂತೆ ವಿವಿಧ ರೀತಿಯ ಸ್ಥಳಗಳ ಪರಿಶೀಲನೆ, ಮೌಲ್ಯಮಾಪನ ಮಾಡಲು ಸುಚನ್‌ ಯುಎವಿಯನ್ನು ಬಳಕೆ ಮಾಡಲಾಗಿದೆ.
 • ಇದರಿಂದ ಒಂದು ತಿಂಗಳ ಕೆಲಸ, ಕೇವಲ ಒಂದೇ ದಿನದಲ್ಲಿ ಆಗುತ್ತಿದೆ. ಜತೆಗೆ ನಿಖರತೆ ಮತ್ತು ಗುಣಮಟ್ಟವೂ ಹೆಚ್ಚಿದೆ.
 • ದೇಶದ ಮಾನವ ಸಂಪನ್ಮೂಲ, ಕೆಲಸದ ಅವಧಿ ಉಳಿತಾಯವಾಗುತ್ತಿದೆ.
 • ಈ ಮೂಲಕ ಕಡಿಮೆ ವೆಚ್ಚ ಮತ್ತು ಅವಧಿಯಲ್ಲಿ ಹೆಚ್ಚು ಕೆಲಸ ತೆಗೆಯಲು ಸಾಧ್ಯವಾಗುತ್ತಿದೆ

ಜಪಾನ್ ಪಟ್ಟಣಕ್ಕೆ ಲಕ್ಷ್ಮೀ ಹೆಸರು

 • ಸುದ್ದಿಯಲ್ಲಿ ಏಕಿದೆ? ಜಪಾನ್ ರಾಜಧಾನಿ ಟೋಕಿಯೊ ಸಮೀಪ ಇರುವ ಕಿಚಿಜೊಯಿ ಎಂಬ ಪಟ್ಟಣಕ್ಕೆ ಹಿಂದು ದೇವತೆ ಲಕ್ಷ್ಮೀ ಹೆಸರನ್ನು ಇರಿಸಲಾಗಿದೆ.
 • ಕಿಚಿಜೊಯಿ ಎಂದರೆ ಜಪಾನ್ ಸಂಸ್ಕೃತಿಯಲ್ಲಿ ಲಕ್ಷ್ಮೀ ದೇವಾಲಯ ಎಂದರ್ಥ. ಹೀಗಾಗಿ ಈ ಪಟ್ಟಣಕ್ಕೆ ಲಕ್ಷ್ಮೀ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಜಪಾನ್ ಕಾನ್ಸುಲ್ ಜನರಲ್ ತಕಯುಕಿ ಕಿಟಗಾವಾ ಸಂವಾದದಲ್ಲಿ ಹೇಳಿದರು.
 • ಉಭಯ ದೇಶಗಳ ಸಾಮ್ಯತೆ ಬಗ್ಗೆ ಮಾತನಾಡಿದ ಕಿಟಗಾವಾ, ಜಪಾನ್ ಮತ್ತು ಭಾರತದ ಸಂಸ್ಕೃತಿಯಲ್ಲಿ ಹೋಲಿಕೆ ಇದೆ.
 • ಇದಕ್ಕೆ ಹಿಂದು ದೇವರುಗಳಿಗೆ ಜಪಾನ್​ನಲ್ಲಿ ದೇವಾಲಯಗಳಿರುವುದೆ ಸಾಕ್ಷಿ ಎಂದರು. ಜಪಾನಿ ಭಾಷೆಯ ಮೇಲೆ ಸಂಸ್ಕೃತದ ಪ್ರಭಾವ ಇದೆ. ಸಂಸ್ಕೃತದ ಅನೇಕ ಶಬ್ದಗಳು ಜಪಾನ್ ಭಾಷೆಯಲ್ಲೂ ಇವೆ. ಜಪಾನ್​ನಲ್ಲಿ ಅಕ್ಕಿ ಮತ್ತು ವಿನೆಗರ್​ನಿಂದ ಸುಶಿ ಅಥವಾ ಶಾರಿ ಎಂಬ ಖಾದ್ಯ ತಯಾರಿಸುತ್ತಾರೆ. ಇದು ಸಂಸ್ಕೃತ ಶಬ್ದ ಝಾಲಿಯಿಂದ ಪಡೆದದ್ದಾಗಿದೆ. ಝಾಲಿ ಎಂದರೆ ಅಕ್ಕಿ ಎಂಬ ಅರ್ಥವೂ ಇದೆ
Related Posts
Karnataka Current Affairs – KAS/KPSC Exams – 21st Feb 2018
Govt rolls out Anila Bhagya for free LPG The state government on 20th Feb launched one more Bhagya scheme - Anila Bhagya (free LPG connections to BPL families) - ahead of ...
READ MORE
Karnataka Budget 2017- 2018 – Highlights
Siddaramaiah, who presented the state budget proposals for 2017-18 in the Assembly on 15th March, tried to explain the financial constraints his government faces because of a sluggish economy. This has ...
READ MORE
Karnataka Current Affairs – KAS / KPSC Exams – 14th April
More seats for State students in PG medical, dental courses Nearly 64% of the total 2,281 postgraduate medical seats and 55.54% of the 929 postgraduate dental seats in the State have ...
READ MORE
National Current Affairs – UPSC/KAS Exams- 21st September 2018
Sex offenders’ registry launched with 4.4 lakh entries Why in news? India became the ninth country in the world to have a National Database on Sexual Offenders (NDSO), accessible only to law ...
READ MORE
Karnataka Current Affairs – KAS/KPSC Exams – 27th-28th Dec 2017
3,515 Karnataka farmers committed suicide in five years As many as 3,515 farmers in Karnataka committed suicide between April 2013 and November 2017, out of which 2,525 were due to drought ...
READ MORE
Sewage Treatment Plant in Kolar District
Why in News: The first Sewage Treatment Plant using latest technology called the Sequential Batch Reactor Technology has been commissioned by the Karnataka Urban Water Supply and Drainage Board at Malur ...
READ MORE
National Current Affairs – UPSC/KAS Exams- 10th January 2019
The New Delhi International Arbitration Centre Bill Topic: Polity and Governance IN NEWS: The Lok Sabha has passed the New Delhi International Arbitration Centre Bill to set up a revamped International Arbitration ...
READ MORE
The IS claims to be more than a militant group, selling itself as a government for the world’s Muslims that provides a range of services in the territory it controls. The ...
READ MORE
Karnataka Current Affairs – KAS / KPSC Exams – 15th April 2017
Eco-sensitive zones around state forest patches being redefined The state forest department and the Ministry of Environment and Forests and Climate Change (MoEFCC) are now redefining the boundaries of eco-sensitive zones ...
READ MORE
India signs MoU with Republic of Korea - bilateral air service cooperation India has signed  a Memorandum of Understanding with South Korea or Republic of Korea (RoK) after negotiations to enhance bilateral ...
READ MORE
Karnataka Current Affairs – KAS/KPSC Exams – 21st
Karnataka Budget 2017- 2018 – Highlights
Karnataka Current Affairs – KAS / KPSC Exams
National Current Affairs – UPSC/KAS Exams- 21st September
Karnataka Current Affairs – KAS/KPSC Exams – 27th-28th
Sewage Treatment Plant in Kolar District
National Current Affairs – UPSC/KAS Exams- 10th January
Islamic State losing support
Karnataka Current Affairs – KAS / KPSC Exams
India- South Korea

Leave a Reply

Your email address will not be published. Required fields are marked *