“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಡ್ರೋನ್‌ ಬಳಕೆ

 • ಸುದ್ದಿಯಲ್ಲಿ ಏಕಿದೆ? ನಗರದ ವಾಹನ ದಟ್ಟಣೆಯನ್ನು ಸರಾಗಗೊಳಿಸಲು ಡ್ರೋನ್‌ ಮೂಲಕ ಮಾಹಿತಿ ಸಂಗ್ರಹಿಸಿ, ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಕಾರಣವೇನು?

 • ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ನಿಬಿಡ ಸ್ಥಳಗಳಲ್ಲಿನ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ಸಿಗ್ನಲ್‌ ವ್ಯವಸ್ಥೆ ಇದ್ದರೂ, ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ.
 • ವಾಹನಗಳ ಸಾಂದ್ರತೆಯ ನಿಖರ ಮಾಹಿತಿ ಕೊರತೆಯಿಂದಾಗಿ ಸಮಸ್ಯೆ ಹಾಗೆಯೇ ಉಳಿದಿದೆ. ಇದಕ್ಕೀಗ ಪರಿಹಾರ ಕಂಡುಕೊಳ್ಳಲು ದಟ್ಟಣೆ ಹೆಚ್ಚಾಗುವ ಜಾಗದಲ್ಲಿ ಡ್ರೋನ್‌ ಮೂಲಕ ಚಿತ್ರೀಕರಣ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಅದನ್ನು ಸಂಚಾರ ನಿಯಂತ್ರಣ ಕೇಂದ್ರದಲ್ಲಿ ವಿಶ್ಲೇಷಿಸಿ ಹೊಸ ವ್ಯವಸ್ಥೆ ರೂಪಿಸುವ ಯೋಜನೆ ಇದೆ.
 • ಬೆಂಗಳೂರಿನಲ್ಲಿ 65 ಲಕ್ಷ ವಾಹನಗಳಿದ್ದು, ಒಳ ಭಾಗದಲ್ಲಿ 25 ಲಕ್ಷಕ್ಕಿಂತಲೂ ಅಧಿಕ ವಾಹನಗಳು ಸಂಚರಿಸುತ್ತಿವೆ. ಆದರೆ, ಅದಕ್ಕೆ ಪೂರಕವಾಗಿ ರಸ್ತೆ ಜಾಲಗಳಿಲ್ಲ. ಹೀಗಾಗಿ ಸರಾಸರಿ ವೇಗ 10 ಕಿ.ಮೀಗಿಂತಲೂ ಕಡಿಮೆ ಇದೆ. ಇದು ನಷ್ಟಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಜಂಕ್ಷನ್‌ಗಳ ವಾಹನ ದಟ್ಟಣೆ ನಿವಾರಣೆಗೆ ಹೊಸ ವ್ಯವಸ್ಥೆ ಅಳವಡಿಸುವುದು ಅನಿವಾರ್ಯವಾಗಿದೆ.
 • ಕೆ ಸ್ಟೆಫ್ಸ್‌ ಮುಂದಾಳತ್ವ: ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕೆ-ಸ್ಟೆಫ್ಸ್‌ ಮುಂದಾಳತ್ವದಲ್ಲಿ ‘ಡ್ರೋನ್‌ ಚಿತ್ರೀಕರಣ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಮೂರು ತಿಂಗಳ ಕಾಲ ಹೊಸ ದಿಲ್ಲಿ ಮೂಲದ ಖಾಸಗಿ ಕಂಪನಿ ಆಮ್ನಿಪ್ರೆಸೆಂಟ್‌ತಂತ್ರಜ್ಞರು ಟ್ರಾಫಿಕ್‌ ಡೇಟಾವನ್ನು ಸಿದ್ಧಪಡಿಸಲಿದ್ದಾರೆ. ಯೋಜನೆ ಜಾರಿಗೆ ಸರಕಾರ ಒಪ್ಪಿಗೆ ಸೂಚಿಸಿದ್ದು, ಹತ್ತು ದಿನಗಳಲ್ಲಿ ಅಧಿಕೃತವಾಗಿ ಕೆಲಸ ಆರಂಭವಾಗಲಿದೆ. ಇದರ ಮೇಲ್ವಿಚಾರಣೆಯನ್ನು ಕೆ-ಸ್ಟೆಫ್ಸ್‌ ವಹಿಸಲಿದೆ.
 • ”ಆಂಧ್ರದಲ್ಲಿ ಇಂಥ ಪ್ರಯೋಗ ಯಶಸ್ವಿಯಾಗಿದೆ. ದಟ್ಟಣೆ ಸ್ಥಳಗಳಲ್ಲಿ ಡ್ರೋಣ್‌ ಬಳಕೆಯಿಂದಾಗಿ ಶೇ.20ರಷ್ಟು ಟ್ರಾಫಿಕ್‌ ಸುಧಾರಿಸಿದೆ. ವಾಹನ ಸವಾರರಲ್ಲೂ ಜಾಗೃತಿ ಮೂಡಿದ್ದು, ತಪ್ಪು ಮಾಡಿದರೆ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರ ಸದಾ ಇರುತ್ತದೆ. ರಾಜ್ಯದ ಸಲಹೆ ಮೇರೆಗೆ ಬೆಂಗಳೂರಿನಲ್ಲೂ ಪ್ರಾಯೋಗಿಕ ಕೆಲಸ ಆರಂಭಿಸಲಿದ್ದೇವೆ”
 • ಬಹುವಿಧ ಬಳಕೆಗೆ ಚಿಂತನೆ: ಡ್ರೋನ್‌ ಅನ್ನು ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣಗಳ ಪತ್ತೆಗೂ ಬಳಸಿಕೊಳ್ಳಬಹುದು. ವಾಹನಗಳ ವೇಗ, ಅಡ್ಡಾದಿಡ್ಡಿ ಚಾಲನೆ, ಅಪಘಾತದ ಕುರಿತು ಮಾಹಿತಿ ಸಂಗ್ರಹ ಸಾಧ್ಯವಿದೆ. ಕಾನೂನು ಸುವ್ಯವಸ್ಥೆಗೂ ಬಳಸಿಕೊಳ್ಳುವ ಉದ್ದೇಶವಿದೆ. ಅಗ್ನಿ ಅನಾಹುತ ಸೇರಿದಂತೆ ನಾನಾ ದುರಂತಗಳ ತಡೆಗೆ ಇದರಿಂದ ಅನುಕೂಲವಾಗಲಿದೆ.

ನಿಯಮಾವಳಿಗಳು

 • ಡ್ರೋನ್‌ ಬಳಸುವ ಮುನ್ನ ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. 200 ಮೀ. ಎತ್ತರಕ್ಕಿಂತ ಹೆಚ್ಚು ಮೇಲ್ಮಟ್ಟಕ್ಕೆ ಹಾರಿಸುವಂತಿಲ್ಲ.
 • ವಿಮಾನ ನಿಲ್ದಾಣ, ಸೇನಾ ಪ್ರದೇಶ, ಆಡಳಿತ ಸೌಧದ ಆವರಣದಲ್ಲಿ ಹಾರಾಟ ಮಾಡದಂತೆ ಡಿಜಿಸಿಎ ನಿರ್ಬಂಧ ವಿಧಿಸಿದೆ.
 • ಇದರಿಂದ ಒಮ್ಮೆಲೆ ಇಡೀ ನಗರದ ಸಂಚಾರ ದತ್ತಾಂಶವನ್ನು ಪಡೆಯಲಾಗದು. ಆದರೂ, ನಾನಾ ಕಡೆಗಳಲ್ಲಿ ಡ್ರೋಣ್‌ ಸಾಧನ ಬಳಸಿಕೊಳ್ಳಲು ಅವಕಾಶ ಇರುವುದರಿಂದ ಭವಿಷ್ಯದಲ್ಲಿ ರಾಜಧಾನಿಯ ಟ್ರಾಫಿಕ್‌ ಹಾಗೂ ಕಾನೂನು ಸುವ್ಯವಸ್ಥೆ ಡ್ರೋನ್‌ ಕಣ್ಗಾವಲಿನಲ್ಲಿ ನಡೆಯಲಿದೆ.

ನಾನಾ ಇಲಾಖೆಗಳ ಸೇವೆಗೆ ಒಪ್ಪಿಗೆ: ಡ್ರೋನ್‌ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣದ ನಕ್ಷೆ ಹಾಗೂ ಆಸ್ತಿತೆರಿಗೆ ನಿಗದಿ ಸಾಧ್ಯವಾಗಿದೆ. ಇದನ್ನು ಬಿಬಿಎಂಪಿಗೂ ಅನ್ವಯಿಸಿ ತೆರಿಗೆ ಸೋರಿಕೆ ತಡೆಗಟ್ಟಬಹುದು. ನಗರಾಭಿವೃದ್ಧಿ, ಕೃಷಿ, ಅರಣ್ಯ ಇಲಾಖೆಗಳಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ. ಈ ಕುರಿತು ಸಂಶೋಧನೆಗಳಿಗೆ ಸರಕಾರ ಅಗತ್ಯ ಸಹಕಾರ ನೀಡಲಿದೆ

ಯೋಗ ಕಡ್ಡಾಯ

 • ಸುದ್ದಿಯಲ್ಲಿ ಏಕಿದೆ ? ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಯೋಗವನ್ನು ಕಡ್ಡಾಯ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.
 • ‘‘ಪ್ರಸ್ತುತ ಕೆಲವು ಕಾಲೇಜುಗಳಲ್ಲಿ ಯೋಗ ತರಗತಿ, ಕೋರ್ಸ್‌ಗಳು ನಡೆಯುತ್ತಿವೆ. ಇನ್ನುಮುಂದೆ ಎಲ್ಲ ಕಾಲೇಜುಗಳಲ್ಲೂ ಯೋಗವನ್ನು ಕಡ್ಡಾಯ ಮಾಡಲು ತೀರ್ಮಾನಿಸಲಾಗಿದೆ. ಯೋಗ ಕಡ್ಡಾಯದ ಈ ತೀರ್ಮಾನದ ರೂಪುರೇಷೆ ನಿರ್ಧರಿಸಲು ಸಮತಿ ರಚಿಸಲಾಗುವುದು’’
 • ‘‘ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಅಧ್ಯಾಪಕರ ಭರ್ತಿ ಜತೆಗೆ, ಮೂಲಸೌಕರ್ಯ ಸುಧಾರಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಕಾಲೇಜು ಈ ಸಂಬಂಧ ಮುಂದಿನ 15 ದಿನಗಳೊಳಗೆ ಬೇಡಿಕೆ ಪಟ್ಟಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ’’.

ವಿವಿಗಳಿಂದ ಗ್ರಾಮಗಳ ದತ್ತು

 • ‘‘ ಪ್ರತಿಯೊಂದು ವಿಶ್ವವಿದ್ಯಾಲಯವೂ ಈ ವರ್ಷದಿಂದಲೇ ಕನಿಷ್ಟ ಐದು ಹಳ್ಳಿಗಳನ್ನು ದತ್ತು ಪಡೆಯಬೇಕು. ಅಲ್ಲಿನ ಪರಿಸರ ಸ್ವಚ್ಛತೆ ಜತೆಗೆ, ಸಂಬಂಧಿತ ಗ್ರಾಮದ ಜನರನ್ನು ಒಗ್ಗೂಡಿಸಿ ಅವರು ಮಾಡುವ ಕೆಲಸಕ್ಕೆ ನೆರವು, ಮಾರ್ಗದರ್ಶನ ಮಾಡಬೇಕು. ಈ ಉದ್ದೇಶಕ್ಕೆ ಸರಕಾರದ ನಾನಾ ಇಲಾಖೆಗಳ ಸಹಯೋಗ ಪಡೆಯಬೇಕು ಎಂಬ ತೀರ್ಮಾನವನ್ನು ಕುಲಪತಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ’’.

ರೋಸ್ಟರ್‌ ಪದ್ಧತಿ

 • ಸುದ್ದಿಯಲ್ಲಿ ಏಕಿದೆ? ರಾಜ್ಯದ ಮುಜರಾಯಿ ದೇವಾಲಯಗಳ ಕಾಣಿಕೆ ಹುಂಡಿ ಹಣದಲ್ಲಿ ಟ್ರಸ್ಟಿಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಶಾಲೆಗಳಲ್ಲೂ ಮೆರಿಟ್‌ ಹಾಗೂ ರೋಸ್ಟರ್‌ ಕಡ್ಡಾಯ ಮಾಡುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಕೈಗೊಂಡಿದೆ.
 • ರಾಜ್ಯದ ನಾನಾ ಮುಜರಾಯಿ ದೇವಾಲಯಗಳ ಮೇಲುಸ್ತುವಾರಿ ಟ್ರಸ್ಟ್‌ಗಳು ನಡೆಸುತ್ತಿರುವ ಶಾಲೆಗಳಲ್ಲಿ ಶಿಕ್ಷಕರು ಮತ್ತಿತರ ನೇಮಕದಲ್ಲಿ ಇನ್ನುಮುಂದೆ ಅರ್ಹತೆ ಹಾಗೂ ಮೀಸಲು ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.
 • ”ರಾಜ್ಯದಲ್ಲಿ ವಿಶೇಷವಾಗಿ, ಉಡುಪಿ, ದಕ್ಷಿಣ ಕನ್ನಡ, ತುಮಕೂರು ಮತ್ತಿತರ ಭಾಗಗಳಲ್ಲಿ ಮುಜರಾಯಿ ದೇವಾಲಯ ಟ್ರಸ್ಟ್‌ಗಳು ನಡೆಸುತ್ತಿರುವ ಶಾಲೆಗಳು ಮುಜರಾಯಿ ಇಲಾಖೆ ಅಧೀನದಲ್ಲೂ ಇಲ್ಲ, ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲೂ ಇಲ್ಲ. ಈ ಶಾಲೆಗಳ ಶಿಕ್ಷಕರ ನೇಮಕದಲ್ಲಿ ಸರಕಾರದ ನಿಯಮಾವಳಿ ಪಾಲನೆಯಾಗಿಲ್ಲ.
 • ಈ ಗೊಂದಲ ಸರಿಪಡಿಸಲು ಧಾರ್ಮಿಕ ದತ್ತಿ ಕಾನೂನಿನ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಈ ಶಾಲೆಗಳಲ್ಲೂ ಮೆರಿಟ್‌ ಮತ್ತು ರೋಸ್ಟರ್‌ ಕಡ್ಡಾಯಕ್ಕೆ ತೀರ್ಮಾನಿಸಲಾಯಿತು

ಕೃಷಿ ಸ್ಟಾರ್ಟ್‌ಅಪ್‌ ಪೋಷಣೆ ಕೇಂದ್ರ

 • ಸುದ್ದಿಯಲ್ಲಿ ಏಕಿದೆ? ದೇಶದಲ್ಲೇ ಮೊದಲ ಬಾರಿಗೆ 10 ಕೋಟಿ ರೂ.ಗಳ ಮೊತ್ತದ ಕೃಷಿ ಸ್ಟಾರ್ಟ್‌ಅಪ್‌ ನಿಧಿ ರಚಿಸಿ ಕೃಷಿ, ತೋಟಗಾರಿಕೆ, ಹೈನೋದ್ಯಮ ಕ್ಷೇತ್ರಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದ್ದು, ಈ ನವೋದ್ಯಮಗಳ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲಲು ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಇನ್‌ ಅಗ್ರಿಕಲ್ಚರ್‌ಎಂಬ ಕೇಂದ್ರವನ್ನು ಬೆಂಗಳೂರು ಕೃಷಿ ವಿ.ವಿ. ಆವರಣದಲ್ಲಿ ಸ್ಥಾಪನೆ ಮಾಡಲು ಸಂಪುಟ ನಿರ್ಧರಿಸಿದೆ

ಕೃಷಿ ಭೂಮಿ ಖರೀದಿ 

 • ಸುದ್ದಿಯಲ್ಲಿ ಏಕಿದೆ? ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿಸಲು ಕೃಷಿಕರೇತರರಿಗೆ ವಿಧಿಸಿರುವ ವಾರ್ಷಿಕ 25 ಲಕ್ಷ ರೂ.ಗಳ ಆದಾಯ ಮಿತಿಯನ್ನು ಸಂಪೂರ್ಣ ರದ್ದುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಚಿಂತನೆ ನಡೆಸಿದೆ.
 • ಒಂದು ವೇಳೆ ಇದು ಅನುಷ್ಠಾನಗೊಂಡರೆ, ಭವಿಷ್ಯದಲ್ಲಿ ಕೃಷಿ ಕುಟುಂಬದ ಹಿನ್ನೆಲೆಯೇ ಇಲ್ಲದ ಕೋಟ್ಯಧಿಪತಿಗಳು ಕೂಡ ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿಸಲು ಸುಲಭ ರಹದಾರಿ ದೊರೆಯುವಂತಾಗುತ್ತದೆ. ಉಳ್ಳವರನ್ನು ಕೃಷಿಯೆಡೆಗೆ ಆಕರ್ಷಿಸಲು ಹಾಗೂ ರಿಯಲ್‌ ಎಸ್ಟೇಟ್‌ ಚಟುವಟಿಕೆಗೆ ಉತ್ತೇಜನ ನೀಡಲು ಇಂಥದ್ದೊಂದು ಆಲೋಚನೆ ನಡೆಸಿದ್ದಾರೆ

ಕಾರಣಗಳು

 • ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನುಗಳು ಕೃಷಿ ಭೂಮಿ ಖರೀದಿಗೆ ಹೆಚ್ಚು ನಿರ್ಬಂಧ ಹೇರುತ್ತಿರುವುದರಿಂದ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗಿದೆ. ಮುಖ್ಯವಾಗಿ ಬೆಂಗಳೂರು ಸುತ್ತಮುತ್ತ ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಆದರೆ ಇದೇ ಹೊತ್ತಲ್ಲಿ ನೆರೆಯ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಕೈಗಾರಿಕೆಗಳಿಗೆ ನೆಚ್ಚಿನ ತಾಣವಾಗಿ ಪರಿಣಮಿಸಿದೆ. ರಾಜ್ಯವೂ ಕೈಗಾರಿಕೆಗಳನ್ನು ಆಕರ್ಷಿಸಬೇಕು ಎಂದಾದರೆ, ಆದಾಯ ಮಿತಿ ರದ್ದುಗೊಳಿಸುವುದೇ ಮಾರ್ಗ

ಕಾಯಿದೆ ಏನು ಹೇಳುತ್ತದೆ?

 • ಕೃಷಿ ಭೂಮಿ ಖರೀದಿಗೆ ಸಂಬಂಧಿಸಿ ದೇಶದಲ್ಲೇ ಅತ್ಯಂತ ವಿಶಿಷ್ಟವೆನಿಸಿದ ಭೂ ಸುಧಾರಣೆ ಕಾಯಿದೆಯನ್ನು ರಾಜ್ಯ ಹೊಂದಿದೆ. 1974ರಲ್ಲಿ ಜಾರಿಗೆ ಬಂದ ಕರ್ನಾಟಕ ಭೂ ಸುಧಾರಣೆ ಕಾಯಿದೆ 1961 ಪ್ರಕಾರ ರಾಜ್ಯದಲ್ಲಿ ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸಬೇಕು ಎಂದರೆ ಅವರ ವಾರ್ಷಿಕ ಆದಾಯ 12 ಸಾವಿರ ರೂ. ಮೀರುವಂತಿರಲಿಲ್ಲ.
 • 1991ರಲ್ಲಿ ಈ ಕಾಯಿದೆಗೆ ತಿದ್ದುಪಡಿ ತಂದು ಆದಾಯ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಯಿತು. ಬಳಿಕ 1995ರಲ್ಲಿ ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಆದಾಯ ಮಿತಿ 2 ಲಕ್ಷ ರೂ. ಆಯಿತು.
 • 2015ರಲ್ಲಿ ಇದಕ್ಕೆ ಮತ್ತೆ ತಿದ್ದಪಡಿ ತಂದು ಆದಾಯ ಮಿತಿಯನ್ನು 25 ಲಕ್ಷ ರೂ.ಗೆ ಏರಿಸಲಾಯಿತು.

ಆದಾಯ ಮಿತಿ ಏಕೆ ಇರಬೇಕು?

 • ಕೃಷಿ ಭೂಮಿ ಖರೀದಿಗೆ ಆದಾಯ ಮಿತಿಯಂತಹ ಕಾನೂನು ತೊಡಕಿರುವುದರಿಂದಲೇ ಕೃಷಿ ಭೂಮಿ ಸಾಕಷ್ಟು ಪ್ರಮಾಣದಲ್ಲಿ ಉಳಿದಿದೆ. ಇಲ್ಲದಿದ್ದರೆ ಹಣವಿರುವ ಎಲ್ಲರೂ ಕೃಷಿ ಭೂಮಿಯನ್ನು ಖರೀದಿ ಮಾಡುತ್ತಿದ್ದರು. ಇದರಿಂದ ಕೃಷಿ ಉತ್ಪನ್ನ ಕಡಿಮೆಯಾಗುತ್ತಿತ್ತು ಹಾಗೂ ರೈತರು ಬೀದಿಗೆ ಬೀಳುತ್ತಿದ್ದರು ಎಂಬುದು ಈ ಕಾಯಿದೆಯ ಪರವಾಗಿರುವವರ ವಾದ.

ಸರಕಾರದ ಹೊಸ ಚಿಂತನೆ ಏನು?

 • ಆದಾಯ ಮಿತಿ ರದ್ದುಗೊಳಿಸಿದರೆ ಕೃಷಿಗೆ ಎಲ್ಲರನ್ನೂ ಆಕರ್ಷಿಸಬಹುದು. ಕೃಷಿ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿರುವ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ, ಪಂಜಾಬ್‌, ಹರಿಯಾಣದಲ್ಲೂ ಕೃಷಿ ಭೂಮಿಯ ವರ್ಗಾವಣೆಗೆ, ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲ.
 •  ಮಿತಿ ರದ್ದಾದರೆ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಮತ್ತಷ್ಟು ಚುರುಕಾಗುತ್ತದೆ.

ಹಿಂದುಳಿದ ವರ್ಗಗಳ ಆಯೋಗ

 • ಸುದ್ದಿಯಲ್ಲಿ ಏಕಿದೆ? ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಸ್ಥಾನಮಾನ ನೀಡುವ ಮಹತ್ವದ ವಿಧೇಯಕವು ಲೋಕಸಭೆಯಲ್ಲಿ ಮೂರನೇ ಎರಡಂಶಕ್ಕಿಂತಲೂ ಅಧಿಕ ಬಹುಮತದಿಂದ ಅನುಮೋದನೆಗೊಂಡಿದೆ.
 • ಸಂವಿಧಾನ (ತಿದ್ದುಪಡಿ) ವಿಧೇಯಕ 2017′ಕ್ಕೆ ರಾಜ್ಯಸಭೆಯಲ್ಲಿ ಸೂಚಿಸಲಾಗಿದ್ದ ತಿದ್ದುಪಡಿಗಳನ್ನು ಅಧಿಗಮಿಸಿ, ಲೋಕಸಭೆಯಲ್ಲಿ ಅಂಗೀಕಾರ ಮಾಡಿರುವುದು ವಿಶೇಷ.
 • ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಆಯೋಗವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿದೆ .
 • ಇದು ಹಿಂದುಳಿದ ವರ್ಗಗಳ ಕಾಯ್ದೆ, 1993 ರ ರಾಷ್ಟ್ರೀಯ ಆಯೋಗದ ನಿಬಂಧನೆಗಳ ಅನುಸಾರ ಸ್ಥಾಪಿಸಲ್ಪಟ್ಟಿತು.
 • ಸಂವಿಧಾನಾತ್ಮಕ ಸ್ಥಾನಮಾನ: 2017 ರಲ್ಲಿ, ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲು ಕೋರಿರುವ ಮಸೂದೆ ಸಂಸತ್ತಿನಲ್ಲಿ ಅನುಮೋದನೆಗೊಂಡಿದೆ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ NCBC ಮಸೂದೆಯು ಲೇಖನ 338B ಯನ್ನು ಸೇರಿಸುತ್ತದೆ

ಹಿನ್ನಲೆ

 • ಇಂದ್ರ ಸಾಹ್ನಿ & ಓರ್ಸ್. ಭಾರತದ ಒಕ್ಕೂಟ: ಇಂದ್ರಾ ಸಾಹ್ನಿ & ಅದರ್ಸ್ನ ಆಯೋಗವು ಭಾರತದ ಸರ್ವೋಚ್ಚ ನ್ಯಾಯಾಲಯವು ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಗಳನ್ನು ಕಮಿಷನ್ ಅಥವಾ ಟ್ರಿಬ್ಯೂನಲ್ನ ಸ್ವರೂಪದಲ್ಲಿ ಸೇರಿಸಿಕೊಳ್ಳುವುದು, ಪರಿಶೀಲಿಸುವುದು ಮತ್ತು ಅತಿಯಾದ ಸೇರ್ಪಡೆಯ ಸೇರ್ಪಡೆಗಾಗಿ ದೂರುಗಳನ್ನು ಸಲ್ಲಿಸುವುದಕ್ಕಾಗಿ ಶಿಫಾರಸು ಮಾಡುವುದು ಎಂದು ತೀರ್ಪು ನೀಡಿತು. ಮತ್ತು ಒಬಿಸಿಗಳ ಪಟ್ಟಿಯಲ್ಲಿ ಸೇರಿಕೊಳ್ಳುವುದು. ಸಂವಿಧಾನವು ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕವನ್ನು ಮಾತ್ರ ಗುರುತಿಸಿದೆ – ಮತ್ತು ಆರ್ಥಿಕತೆ – ಹಿಂದುಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿತು.

ಸಂಯೋಜನೆ:

 • ಆಯೋಗವು ಐದು ಸದಸ್ಯರನ್ನು ಒಳಗೊಂಡಿರುತ್ತದೆ:
 • ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ನ ನ್ಯಾಯಾಧೀಶರಾಗಿದ್ದ ಅಥವಾ ಒಬ್ಬ ಅಧ್ಯಕ್ಷೆ;
 • ಸಾಮಾಜಿಕ ವಿಜ್ಞಾನಿ;
 • ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ವಿಶೇಷ ಜ್ಞಾನ ಹೊಂದಿರುವ ಇಬ್ಬರು ವ್ಯಕ್ತಿಗಳು;
 • ಭಾರತದ ಸರ್ಕಾರದ ಕಾರ್ಯದರ್ಶಿ ಹುದ್ದೆಗೆ ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದ ಅಥವಾ ಒಬ್ಬ ಸದಸ್ಯ-ಕಾರ್ಯದರ್ಶಿ.
 • ಅವರ ಪದವಿಯು ಮೂರು ವರ್ಷಗಳದ್ದಾಗಿದೆ

ಕಾರ್ಯಗಳು:

 • ಆಯೋಗವು ಉದ್ಯೋಗ ಮೀಸಲಾತಿ ಉದ್ದೇಶಕ್ಕಾಗಿ ಹಿಂದುಳಿದಂತೆ ಸೂಚಿಸಲಾದ ಸಮುದಾಯಗಳ ಪಟ್ಟಿಗಳನ್ನು ಮತ್ತು ಹೊರಗಿಡುವಿಕೆಗಳನ್ನು ಒಳಗೊಳ್ಳುತ್ತದೆ ಮತ್ತು ಕೇಂದ್ರ ಸರ್ಕಾರಕ್ಕೆ ಅಗತ್ಯವಾದ ಸಲಹೆ ನೀಡುವಿಕೆಯನ್ನು ಪರಿಗಣಿಸುತ್ತದೆ
 • ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಆಯೋಗವು ಇನ್ನೂ ಹಿಂದುಳಿದ ವರ್ಗಗಳ ವ್ಯಕ್ತಿಗಳ ಕುಂದುಕೊರತೆಗಳನ್ನು ಪರಿಶೀಲಿಸಲು ಇನ್ನೂ ಅಧಿಕಾರ ಹೊಂದಿಲ್ಲ.

ಆಯೋಗದ ವರದಿ

 • ಎನ್ಸಿಬಿಸಿ ವಾರ್ಷಿಕ ವರದಿಯನ್ನು ಕೇಂದ್ರ ಸರಕಾರಕ್ಕೆ ಹಿಂದಿನ ವರ್ಷದಲ್ಲಿ ಅದರ ಚಟುವಟಿಕೆಗಳ ಪೂರ್ಣ ಮಾಹಿತಿಯನ್ನು ಸಲ್ಲಿಸುತ್ತದೆ.
 • ಕೇಂದ್ರ ಸರ್ಕಾರವು ಪ್ರತಿ ಹೌಸ್ ಆಫ್ ಪಾರ್ಲಿಮೆಂಟ್ಗೂ ಮುಂಚಿತವಾಗಿ ಈ ವರದಿಯನ್ನು ಮಂಡಿಸುತ್ತದೆ.
 • ಅಂತಹ ಯಾವುದೇ ಸಲಹೆಯನ್ನು ಒಪ್ಪಿಕೊಳ್ಳದಿರುವ ಕಾರಣಗಳನ್ನು ಕೂಡಾ ಮೆಮೊರಾಂಡಮ್ ಒಳಗೊಂಡಿದೆ.

ಆಯೋಗಕ್ಕೆ ಆನೆ ಬಲ

 • ‘ಎನ್‌ಸಿಬಿಸಿ’ಗೆ ಸಂವಿಧಾನಿಕ ಸ್ಥಾನಮಾನ ದೊರೆತರೆ, ಯಾವುದೇ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಸಿವಿಲ್‌ ಕೋರ್ಟ್‌ನಷ್ಟೇ ಅಧಿಕಾರ ಪ್ರಾಪ್ತಿಯಾಗಲಿದೆ.
 • ಸಂವಿಧಾನ ಮತ್ತು ಇತರ ಕಾನೂನುಗಳಲ್ಲಿ ಹಿಂದುಳಿದ ವರ್ಗಗಗಳಿಗೆ ನೀಡಲಾಗಿರುವ ಸವಲತ್ತುಗಳು ಹಾಗೂ ಭದ್ರತಾ ನಿಯಮಗಳ ಅನುಷ್ಠಾನ ಕಾಯ್ದುಕೊಳ್ಳುವುದು ‘ಎನ್‌ಸಿಬಿಸಿ’ಯ ಕರ್ತವ್ಯವಾಗಿದೆ. ಜತೆಗೆ, ಸಾಂವಿಧನಿಕ ಹಕ್ಕುಗಳ ಉಲ್ಲಂಘನೆ ಕುರಿತ ಪ್ರಕರಣಗಳ ತನಿಖೆಯ ಹೊಣೆಯನ್ನೂ ಆಯೋಗ ಹೊಂದಿದೆ.

ನ್ಯಾಷನಲ್‌ ಡಿಫೆನ್ಸ್‌ ಆಥರೈಜೇಷನ್‌ ಆ್ಯಕ್ಟ್‘ (ಎನ್‌ಡಿಎಎ) 

 • ಸುದ್ದಿಯಲ್ಲಿ ಏಕಿದೆ? ಮಿತ್ರ ದೇಶ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಭಾರತದ ಮೇಲೆ ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಸಂಸತ್ತು ನ್ಯಾಷನಲ್‌ ಡಿಫೆನ್ಸ್‌ ಆಥರೈಜೇಷನ್‌ ಆ್ಯಕ್ಟ್‘ (ಎನ್‌ಡಿಎಎ) ವಿಧೇಯಕವನ್ನು ಅಂಗೀಕರಿಸಿದೆ.
 • ಭಾರತವು ರಷ್ಯಾದಿಂದ 450 ಶತಕೋಟಿ ಡಾಲರ್‌ ವೆಚ್ಚದಲ್ಲಿ ಅತ್ಯಾಧುನಿಕ ಎಸ್‌-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದು ಅಮೆರಿಕವನ್ನು ಕೆರಳಿಸಿತ್ತು. ಇದಕ್ಕೆ ಎದಿರೇಟು ನೀಡಲು ರಷ್ಯಾ ಜತೆ ಸೇನಾ ವಹಿವಾಟು ನಡೆಸುವ ರಾಷ್ಟ್ರಗಳ ಮೇಲೆ ನಿರ್ಬಂಧಗಳನ್ನು ಹೇರುವ ಅಂಶಗಳನ್ನು ಒಳಗೊಂಡ ಕೌಂಟರಿಂಗ್‌ ಅಮೆರಿಕಾಸ್‌ ಅಡ್ವರ್‌ಸರೀಸ್‌ ಥ್ರೂ ಸ್ಯಾಂಕ್ಷನ್ಸ್‌ ಆ್ಯಕ್ಟ್‘ (ಸಿಎಎಟಿಎಸ್‌ಎ) ಕಾಯಿದೆಯನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಜಾರಿಗೆ ತಂದಿತ್ತು. ಈಗ ಸಂಸತ್ತಿನ ಅಂಗೀಕಾರ ಪಡೆದಿರುವ ಎನ್‌ಡಿಎಎ ವಿಧೇಯಕವು ಸಿಎಎಟಿಎಸ್‌ಎ ಕಾಯಿದೆಯಲ್ಲಿ ಕೆಲವು ನಿಯಮಗಳನ್ನು ಸಡಿಲಿಸಲಿದೆ. ಹೀಗಾಗಿ ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅನುಕೂಲವಾಗಲಿದೆ. ಹಾಗೆಯೇ ಅಮೆರಿಕದ ಜತೆಗೂ ರಕ್ಷಣಾ ಬಂಧವನ್ನು ವೃದ್ಧಿಸಿಕೊಳ್ಳಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಏನಿದು ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ?

 • ವಿಶ್ವದ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಇದಾಗಿದೆ. ಅಮೆರಿಕ, ಚೀನಾ, ರಷ್ಯಾ ಸಹಿತ ಬೆರಳೆಣಿಕೆಯ ರಾಷ್ಟ್ರಗಳ ಬಳಿ ಮಾತ್ರ ಇಂಥ ಕ್ಷಿಪಣಿ ವ್ಯವಸ್ಥೆ ಇದೆ. ರಷ್ಯಾದಿಂದ ಇದನ್ನು ಖರೀದಿಸಲು ಭಾರತ ಮಾತುಕತೆ ನಡೆಸುತ್ತಿದೆ.

ಬರ್ಮುಡಾ ಟ್ರಯಾಂಗಲ್​ ಮಿಸ್ಟರಿ

 • ಸುದ್ದಿಯಲ್ಲಿ ಏಕಿದೆ? ವಿಜ್ಞಾನಿಗಳಿಗೆ ಅಕ್ಷರಶಃ ತಲೆ ನೋವಾಗಿ ಪರಿಣಮಿಸಿದ್ದ ಹಾಗೂ ಇದುವರೆಗೂ 75ಕ್ಕೂ ಹೆಚ್ಚು ವಿಮಾನಗಳು, ಸಾವಿರಾರು ಜನ ನಾಪತ್ತೆಯಾಗಿರುವ ಬರ್ಮುಡಾ ಟ್ರಯಾಂಗಲ್​ ಮಿಸ್ಟರಿಗೆ ಕಾರಣ ದೊರೆತಿದೆ.
 • ಬರ್ಮುಡಾ ಟ್ರಯಾಂಗಲ್​ ಮಿಸ್ಟರಿಯನ್ನು ಹುಡುಕುತ್ತಾ ಹೊರಟ ಎಷ್ಟೋ ಮಂದಿ ಇಲ್ಲಿಯವರೆಗೆ ನಾಪತ್ತೆಯಾಗಿದ್ದರೂ, ಕೆಲ ವಿಜ್ಞಾನಿಗಳು ಅಲ್ಲಿ ವಿಮಾನಗಳು, ಹಡಗುಗಳು ನಾಪತ್ತೆಯಾಗಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿದ್ದಾರೆ.
 • ಬರ್ಮುಡಾ ಟ್ರಯಾಂಗಲ್​ನಲ್ಲಿ ನಾಪತ್ತೆಯಾದ ವಿಮಾನಗಳು ಮತ್ತು ಮುಳುಗುವ ಹಡಗುಗಳ ಅವಶೇಷಗಳು ಇದುವರೆಗೆ ಪತ್ತೆಯಾಗಿರುವುದು ಅಪರೂಪವಾಗಿದ್ದು, ಇದಕ್ಕೆಲ್ಲಾ 100 ಅಡಿಯ ರಕ್ಕಸ ಅಲೆಗಳೇ ಕಾರಣ ಎಂದು ಸೌತಾಂಪ್ಟನ್​ ಮೂಲದ ಸಂಶೋಧಕರು ಹೇಳಿದ್ದಾರೆ.

100 ಅಡಿ ಬಂದರೆ ಹಡಗು ಮುಳುಗುತ್ತೆ!

2

 • ಈ ಸಂಶೋಧಕರು 1918ರ ವಿಶ್ವ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೆರಿಕ ಸೇನೆಗೆ ತೈಲ ಪೂರೈಸುತ್ತಿದ್ದ ಯುಎಸ್​ಎಸ್​​ ಸೈಕ್ಲೋಪ್ಸ್​ ಹಡಗಿನ ಮಾದರಿಯನ್ನ ನಿರ್ಮಾಣ ಮಾಡಿದ್ದರು. ಈ ಹಡಗನ್ನ ಒಳಾಂಗಣ ಸಿಮ್ಯುಲೇಟರ್​ ಹೊಂದಿರೋ ಬೃಹತ್​ ನೀರಿನಲ್ಲಿ ಚಲಿಸುವಂತೆ ಮಾಡಿದ್ರು. ಸಿಮ್ಯುಲೇಟರ್​ಗಳನ್ನ ಬಳಸಿ 100 ಅಡಿ ಎತ್ತರದ ಅಲೆಗಳನ್ನ ಸೃಷ್ಟಿಸಿದ್ರು. ಆಗ ಹಡಗು ಮುಳುಗಿ ಹೋಗಿದೆ ಅಂತಾ ಸಂಶೋಧಕರು ಹೇಳಿದ್ದಾರೆ.
 • ಇದಕ್ಕೂ ಮುಂಚೆ, ಕೆಲವರು ಬರ್ಬುಡಾ ಟ್ರಯಾಂಗಲ್​ನಲ್ಲಿ ಇದ್ದಕ್ಕಿದ್ದಂತೆ ವಿಮಾನಗಳು, ಹಡಗುಗಳು ನಾಪತ್ತೆಯಾಗುವುದಕ್ಕೆ ಏಲಿಯನ್​ಗಳು ಕಾರಣ ಎಂದರೆ, ಕೆಲವರು ಸಮುದ್ರದಲ್ಲಿರುವ ನಿಗೂಢ ಜೀವಿಗಳು ಕಾರಣ ಎಂದು ಹೇಳುತ್ತಿದ್ದರು. ಆದರೆ, ಇದಕ್ಕೆ ಪೂರಕವಾಗಿ ಯಾರೂ ಯಾವ ದಾಖಲೆಗಳನ್ನು ಒದಗಿಸಿರಲಿಲ್ಲ.

ರಕ್ಕಸ ಅಲೆ ಏಳಲು ಕಾರಣವೇನು?

1

 • ಬರ್ಮುಡಾ ಟ್ರಯಾಂಗಲ್​ ಫ್ಲೋರಿಡಾ, ಪೋರ್ಟೋರಿಕೋ ಮತ್ತು ಬರ್ಮುಡಾ ಪ್ರದೇಶಗಳ ನಡುವೆ ಇದೆ. ಈ ಸಮುದ್ರದಲ್ಲಿ ನಾನಾ ದಿಕ್ಕುಗಳಿಂದ ಮಾರುತಗಳು ಬೀಸುತ್ತವೆ. ಈ ರೀತಿ ವಿವಿಧ ದಿಕ್ಕುಗಳಿಂದ ಮಾರುತಗಳು ಬೀಸುವುದರಿಂದ ನಾನಾ ದಿಕ್ಕಿಗೆ ಚಲಿಸುತ್ತಿದ್ದ ಅಲೆಗಳ ಮೇಲೆ ಪ್ರಭಾವ ಬೀರಿ, ಈ ರೀತಿಯ ರಕ್ಕಸ ಅಲೆಗಳು ಏಳುವುದಕ್ಕೆ ಕಾರಣವಾಗುತ್ತದೆ.
 • ಈ ರಕ್ಕಸ ಅಲೆಗಳಿಗೆ ಸಿಲುಕುವ ಹಡಗುಗಳು, ಅಲೆಗಳ ಹೊಡೆತ ತಾಳಲಾರದೆ ಮುಳುಗಿ ಹೋಗುವ ಜತೆಗೆ, ಅಪಘಾತವಾದ ಸಮುದ್ರದಿಂದ ಬಹುದೂರಕ್ಕೆ ಸಾಗುತ್ತವೆ. ಹೀಗಾಗಿಯೇ ಹಡಗುಗಳು, ವಿಮಾನಗಳ ಅವಶೇಷಗಳು ಸಿಗುತ್ತಿಲ್ಲ ಎಂದು ಅಂತಾ ಸಂಶೋಧಕರು ಹೇಳಿದ್ದಾರೆ.

ಗುರುತ್ವಾಕರ್ಷಣ ಶಕ್ತಿ ವ್ಯತ್ಯಯ?

 • ವರ್ಷದ ಹಿಂದೆ ಕೊಲಾರಾಡೋ ವಿವಿಯ ವಿಜ್ಞಾನಿಗಳು, ಬರ್ಮುಡಾ ಟ್ರಯಾಂಗಲ್​ನಲ್ಲಿ ಅಷ್ಟಕೋನಾಕೃತಿಯ ಕೆಲವು ಪ್ರದೇಶಗಳಿದ್ದು, ಇಲ್ಲಿ ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಭಾರಿ ಏರುಪೇರಾಗುತ್ತದೆ. ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಆಗುವ ಏರುಪೇರಿನಿಂದ ಈ ಪ್ರದೇಶದಲ್ಲಿ ಗುರುತ್ವಾಕರ್ಷಣ ಶಕ್ತಿಯಲ್ಲಿ ವ್ಯತ್ಯಯವಾಗುತ್ತದೆ. ಹೀಗಾಗಿ ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ನಾಪತ್ತೆಯಾಗಲು ಕಾರಣ ಎಂದಿದ್ದರು. ಇದಕ್ಕೆ ಉಪಗ್ರಹ ಚಿತ್ರಗಳನ್ನೂ ಕೂಡ ಸಾಕ್ಷ್ಯವಾಗಿ ನೀಡಿದ್ದರು. ಈ ವಿಜ್ಞಾನಿಗಳು ಹೇಳಿದ್ದ ಕಾರಣಗಳ ಜತೆಗೆ ಈಗ ಸಿಮ್ಯುಲೇಟರ್​ಗಳನ್ನ ಬಳಸಿ ಅದೇ ರೀತಿಯ ಸಮುದ್ರದ ಅಲೆಗಳನ್ನ ಸೃಷ್ಟಿಸಿ, ಸಂಶೋಧನೆ ನಡೆಸಿದ್ದಾರೆ.
 • ಸದ್ಯ ಬರ್ಮುಡಾ ಟ್ರಯಾಂಗಲ್​ನಲ್ಲಿ ವಿಮಾನಗಳು, ಹಡಗುಗಳ ನಾಪತ್ತೆಯಾಗುವ ಕುರಿತು ಎರಡು ವೈಜ್ಞಾನಿಕ ಕಾರಣಗಳು ಸಿಕ್ಕಿದ್ದರೂ, ಈ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ.
Related Posts
National Current Affairs – UPSC/KAS Exams – 30th November 2018
South Asia Youth Peace Conference Topic: International Affairs IN NEWS: South Asia Youth Peace Conference as part of Celebrating 150th birth anniversary of Mahatma Gandhi, inaugurated in the capital. The Conference is ...
READ MORE
India-UAE ties: A roadmap for deeper cooperation
In a departure from protocol, Prime Minister Narendra Modi received Abu Dhabi’s Crown Prince Sheikh Mohamed bin Zayed Al Nahyan at the airport as he arrived in New Delhi for ...
READ MORE
National Current Affairs – UPSC/KAS Exams- 27th July 2018
Changing  the name of the State Why in news? The West Bengal Assembly passed a resolution to change the name of the State as ‘Bangla’ in three languages — Bengali, English and ...
READ MORE
National Current Affairs – UPSC/KAS Exams- 4th September 2018
What India, Cyprus vow to curb money laundering Why in news? India and Cyprus signed two agreements on combating money laundering and cooperation in the field of environment as President Ram Nath ...
READ MORE
Almost nine percent of popular apps downloaded from Google Play interact with websites that could compromise users’ security and privacy, according to a new University of California, Riverside study.   The team ...
READ MORE
Karnataka Current Affairs – KAS/KPSC Exams – 17th March 2018
State govt. tells HC it has powers to recognise a community as minority The State government on 15th March claimed it has the powers, not only to consider the demand for ...
READ MORE
Karnataka Current Affairs – KAS/KPSC Exams – 11th Dec 2017
Govt. shelves plan to involve private developers in housing project The State government, which plans to construct one lakh houses for the poor in Bengaluru, has decided to drop the revenue-sharing ...
READ MORE
Karnataka: Doctors want govt to mandate hypothyroidism test for newborns
What is congenital hypothyroidism? Congenital hypothyroidism (CHT) is a condition resulting from an absent or under-developed thyroid gland (dysgenesis) or one that has developed but cannot make thyroid hormone because of ...
READ MORE
Karnataka Current Affairs – KAS/KPSC Exams – 5th April 2018
Udupi man wins silver medal, brings laurels to country Gururaja Poojary, a sportsperson from Udupi district, has brought laurels to the country by winning a silver medal in the Gold Coast ...
READ MORE
Karnataka Current Affairs – KAS / KPSC Exams – 13th September 2017
Atal Tinkering Lab opened An Atal Tinkering Laboratory (ATL) was opened at a private school in the city on 12th Sep. B.N. Suresh, former director of Vikram Sarabhai Space Centre, inaugurated the ...
READ MORE
National Current Affairs – UPSC/KAS Exams – 30th
India-UAE ties: A roadmap for deeper cooperation
National Current Affairs – UPSC/KAS Exams- 27th July
National Current Affairs – UPSC/KAS Exams- 4th September
Safety concerns of apps
Karnataka Current Affairs – KAS/KPSC Exams – 17th
Karnataka Current Affairs – KAS/KPSC Exams – 11th
Karnataka: Doctors want govt to mandate hypothyroidism test
Karnataka Current Affairs – KAS/KPSC Exams – 5th
Karnataka Current Affairs – KAS / KPSC Exams

Leave a Reply

Your email address will not be published. Required fields are marked *