“13th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ಜನಪ್ರತಿನಿಧಿ (ತಿದ್ದುಪಡಿ) ವಿಧೇಯಕ-2017’ 

 • ಸುದ್ದಿಯಲ್ಲಿ ಏಕಿದೆ? ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ‘ಜನಪ್ರತಿನಿಧಿ (ತಿದ್ದುಪಡಿ) ವಿಧೇಯಕ-2017’ ಸಂಸತ್ತಿನ ಅನುಮೋದನೆ ಪಡೆಯುವುದರೊಂದಿಗೆ ಭಾರತದಲ್ಲಿ ಅನಿವಾಸಿ ಭಾರತೀಯರ (ಎನ್‌ಆರ್‌ಐ) ‘ಪ್ರಾಕ್ಸಿ’ ವೋಟಿಂಗ್‌ ಕಾನೂನುಬದ್ಧವಾಗಿದೆ.
 • ಇದರೊಂದಿಗೆ ವಿದೇಶದಲ್ಲಿರುವ ಸುಮಾರು ಒಂದು ಕೋಟಿಗೂ ಹೆಚ್ಚು ಎನ್‌ಆರ್‌ಐಗಳ ಮತದಾನ ಸರಳವಾಗಿದೆ.

ಏನಿದು ಪ್ರಾಕ್ಸಿ ವೋಟಿಂಗ್?‌

 • ಎನ್‌ಆರ್‌ಐಗಳು ತಮ್ಮ ಮೂಲ ಕ್ಷೇತ್ರದ ಯಾವುದೇ ವ್ಯಕ್ತಿಯನ್ನು ತಮ್ಮ ಪರವಾಗಿ ಮತ ಚಲಾವಣೆ ಮಾಡಲು ನಾಮನಿರ್ದೇಶನ ಮಾಡುವುದೇ ಪ್ರಾಕ್ಸಿ ವೋಟಿಂಗ್‌.
 • ಇದುವರೆಗೂ ಎನ್‌ಆರ್‌ಐಗಳು ತಾವು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಕ್ಷೇತ್ರದಲ್ಲಿ ಖುದ್ದಾಗಿ ಮತದಾನ ಮಾಡಬೇಕಿತ್ತು. ಇದರಿಂದ ವಿದೇಶದಿಂದ ತವರಿಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ ಮತದಾರರ ಮತಗಳು ವ್ಯರ್ಥವಾಗುತ್ತಿದ್ದವು.
 • ಹೀಗಾಗಿ ಪ್ರತಿಯೊಬ್ಬ ಅನಿವಾಸಿ ಭಾರತೀಯರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸರಕಾರ ಈ ವಿಧೇಯಕ ಮಂಡಿಸಿದೆ.

ಮಹತ್ವ ಏಕೆ?

 • 543 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1.1 ಕೋಟಿ ಎನ್‌ಆರ್‌ಐಗಳಿದ್ದಾರೆ (ಪ್ರತಿ ಕ್ಷೇತ್ರದಲ್ಲಿ ಸರಾಸರಿ 21,000)
 • ಜತೆಗೆ ಎನ್‌ಆರ್‌ಐಗಳು ಭಾರತದಲ್ಲಿರುವ ತಮ್ಮ ಕುಟುಂಬ, ಸಂಬಂಧಿಕರನ್ನು ಪ್ರಭಾವಿಸಬಹುದು
 • ಗೆಲುವಿನ ಅಂತರ ಕಡಿಮೆಯಾದ ಸಂದರ್ಭದಲ್ಲಿ ಪ್ರತಿ ಮತಕ್ಕೂ ಹೆಚ್ಚಿನ ಮೌಲ್ಯ.

ಜನಪ್ರತಿನಿಧಿ ಕಾಯಿದೆ, 1950 (ವಿಭಾಗ 20 ಎ):

 • ಸೆಕ್ಷನ್ 20 ಎ ಭಾರತದ ಹೊರಗೆ ವಾಸಿಸುವ ಭಾರತದ ನಾಗರಿಕರಿಗೆ ವಿಶೇಷ ನಿಬಂಧನೆಗಳನ್ನು ಇಡುತ್ತದೆ. ಅವು ಹೀಗಿವೆ:
 • ಈ ಅಧಿನಿಯಮದಲ್ಲಿ ಇರುವ ಪ್ರತಿಯೊಂದನ್ನು ಹೊರತುಪಡಿಸಿ, ಭಾರತದ ಪ್ರತಿಯೊಂದು ನಾಗರಿಕರೂ,
 • ಯಾರ ಹೆಸರನ್ನು ಚುನಾವಣಾ ರೋಲ್ನಲ್ಲಿ ಸೇರಿಸಲಾಗಿಲ್ಲವೊ ;
 • ಯಾವುದೇ ದೇಶದ ನಾಗರೀಕತೆಯನ್ನು ಯಾರು ಪಡೆದಿಲ್ಲವೊ ಮತ್ತು
 • ಅವರ ಉದ್ಯೋಗ, ಶಿಕ್ಷಣಕ್ಕಾಗಿ ಭಾರತದಿಂದ ಹೊರಗುಳಿದಿರುವರೋ (ತಾತ್ಕಾಲಿಕವಾಗಿ ಅಥವಾ ಇಲ್ಲದಿದ್ದರೂ)
 • ಭಾರತದ ಸಾಮಾನ್ಯ ನಿವಾಸದ ಸ್ಥಳದಿಂದ ಹೊರಗುಳಿದಿರುವ ಅವರು, ಅವರ ಕ್ಷೇತ್ರದ ಚುನಾವಣಾ ರೋಲ್ನಲ್ಲಿ ತನ್ನ ಹೆಸರನ್ನುತನ್ನ ಪಾಸ್ಪೋರ್ಟ್ನಲ್ಲಿ ಹೇಳಿದ ನಿವಾಸದ ಸ್ಥಳದ ವಿಳಾಸ  ನೋಂದಾಯಿಸಿಕೊಳ್ಳುವ ಅರ್ಹತೆ ಹೊಂದಬೇಕು.
 • ಉಪ-ವಿಭಾಗ (1) ರಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳ ಹೆಸರು ಚುನಾವಣಾ ರೋಲ್ನಲ್ಲಿ ನೋಂದಾಯಿಸಲ್ಪಡಬೇಕು ಮತ್ತು ಉಪ-ವಿಭಾಗ (1) ಅಡಿಯಲ್ಲಿ ಚುನಾವಣಾ ರೋಲ್ನಲ್ಲಿ ವ್ಯಕ್ತಿಯ ನೋಂದಾಯಿಸುವ ವಿಧಾನ ಮತ್ತು ಪ್ರಕ್ರಿಯೆಯನ್ನು ಸೂಚಿಸಲಾಗುತ್ತದೆ.
 • ಈ ವಿಭಾಗದ ಅಡಿಯಲ್ಲಿ ನೋಂದಣಿಯಾದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಮತವನ್ನು ಚಲಾಯಿಸಲು ಅರ್ಹರಾಗಿದ್ದರೆ, ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಬೇಕು.

ಇಂಟರ್‌ನೆಟ್‌ ಡೊಮೇನ್‌

 • ಸುದ್ದಿಯಲ್ಲಿ ಏಕಿದೆ? ಅಂತರ್ಜಾಲ ನಿರ್ದಿಷ್ಟ ಹೆಸರು ಮತ್ತು ಸಂಖ್ಯೆಯ ಕಾರ್ಪೊರೇಷನ್‌ (ಐಸಿಎಎನ್‌ಎನ್‌) ಈಗ ಪ್ರಾಯೋಗಿಕವಾಗಿ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ.
 • ಕನ್ನಡ ಸೇರಿದಂತೆ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್‌ನೆಟ್‌ ಡೊಮೇನ್‌ ಅಳವಡಿಕೆಗೆ ಮುಂದಾಗಿದೆ.
 • ಇಂಟರ್‌ನೆಟ್ ಡೊಮೇನ್‌ ನೇಮ್‌ ಸಿಸ್ಟಮ್‌ (ಡಿಎನ್‌ಎಸ್‌) ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದೆ.

ಯಾವ ಭಾಷೆಗಳಲ್ಲಿ ಡೊಮೇನ್ ಬರಲಿದೆ?

 • ಸದ್ಯಕ್ಕೆ ಕನ್ನಡ, ಬೆಂಗಾಳಿ, ದೇವನಗರಿ, ಗುಜರಾತಿ, ಗುರುಮುಖಿ, ಮಲಯಾಳಂ, ಒರಿಯಾ, ತಮಿಳು, ತೆಲುಗು ಭಾಷೆಗಳಲ್ಲಿ ಡೊಮೇನ್‌ ಬರಲಿದೆ.

ಉಪಯೋಗವೇನು?

 • ಅಂತರ್ಜಾಲ ಈಗ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಕೇವಲ ಅಕ್ಷರಸ್ಥರು ಮಾತ್ರವಲ್ಲ, ಅನಕ್ಷರಸ್ಥರು ಅಥವಾ ಇಂಗ್ಲಿಷ್‌ ಜ್ಞಾನ ಇಲ್ಲದಿರುವವರು ಅಂತರ್ಜಾಲ ಬಳಕೆ ಮಾಡುತ್ತಿರುವುದು ಹೆಚ್ಚಾಗಿದೆ.
 • ಇಂಗ್ಲಿಷ್‌ ಬಾರದಿವರು ಪ್ರಾದೇಶಿಕ ಭಾಷೆಗಳಲ್ಲಿ ಟೈಪ್‌ ಮಾಡಿದರೆ ಅದು ಫೆಚ್‌ ಮಾಡಲಿದೆ.
 • ಸದ್ಯ ಶೇಕಡ 52ರಷ್ಟು ಮಂದಿ ಅಂತರ್ಜಾಲ ಬಳಕೆ ಮಾಡುತ್ತಿದ್ದಾರೆ. ಉಳಿದ ಶೇಕಡ 48 ಮಂದಿ ಇಂಗ್ಲಿಷ್‌ ಬಾಷೆ ಬಳಕೆ ಮಾಡುತ್ತಿಲ್ಲ. ಇವರಿಗೆ ನೆರವಾಗಲೆಂದು ಪ್ರಾದೇಶಿಕ ಭಾಷೆಗಳಲ್ಲಿ ಡೊಮೇನ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
 • ಗೂಗಲ್ ಮತ್ತು ಇತರೆ ಸರ್ಚ್‌ ಎಂಜಿನ್‌ಗಳಲ್ಲಿ ಈಗಾಗಲೇ ಸ್ಥಳೀಯ ಭಾಷೆಗಳು ಲಭ್ಯವಾಗುತ್ತಿದೆ. ಇದರ ಆಧಾರದ ಮೇಲೆ ಡೊಮೇನ್‌ಗಳಿಗೂ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ

ಇಂಟರ್ನೆಟ್ ಡೊಮೇನ್ ಎಂದರೇನು?

 • ಡೊಮೇನ್ ಹೆಸರು ಒಂದು ಗುರುತಿಸುವ ಸ್ಟ್ರಿಂಗ್ ಆಗಿದೆ, ಅದು ಇಂಟರ್ನೆಟ್ನಲ್ಲಿ ಆಡಳಿತಾತ್ಮಕ ಸ್ವಾಯತ್ತತೆ, ಅಧಿಕಾರ ಅಥವಾ ನಿಯಂತ್ರಣದ ಕ್ಷೇತ್ರವನ್ನು ವ್ಯಾಖ್ಯಾನಿಸುತ್ತದೆ. ಡೊಮೈನ್ ನೇಮ್ ಸಿಸ್ಟಮ್ (ಡಿಎನ್ಎಸ್) ನ ನಿಯಮಗಳು ಮತ್ತು ಕಾರ್ಯವಿಧಾನಗಳಿಂದ ಡೊಮೈನ್ ಹೆಸರುಗಳು ರೂಪುಗೊಳ್ಳುತ್ತವೆ.
 • ಡಿಎನ್ಎಸ್ನಲ್ಲಿ ನೋಂದಾಯಿತವಾಗಿರುವ ಯಾವುದೇ ಹೆಸರು ಡೊಮೇನ್ ಹೆಸರು. ಡೊಮೇನ್ ಹೆಸರುಗಳನ್ನು ವಿವಿಧ ನೆಟ್ವರ್ಕಿಂಗ್ ಸಂದರ್ಭಗಳಲ್ಲಿ ಮತ್ತು ಅಪ್ಲಿಕೇಶನ್-ನಿರ್ದಿಷ್ಟ ಹೆಸರಿಸುವಿಕೆ ಮತ್ತು ವಿಳಾಸ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
 • ಸಾಮಾನ್ಯವಾಗಿ, ಒಂದು ಡೊಮೇನ್ ಹೆಸರು ಅಂತರ್ಜಾಲವನ್ನು ಪ್ರವೇಶಿಸಲು ಬಳಸಲಾಗುವ ವೈಯಕ್ತಿಕ ಕಂಪ್ಯೂಟರ್, ವೆಬ್ ಸೈಟ್ ಅನ್ನು ಹೋಸ್ಟ್ ಮಾಡುವ ಸರ್ವರ್ ಕಂಪ್ಯೂಟರ್, ಅಥವಾ ವೆಬ್ ಸೈಟ್ ಅಥವಾ ಅಂತರ್ಜಾಲದ ಮೂಲಕ ಸಂವಹಿಸುವ ಯಾವುದೇ ಇತರ ಸೇವೆಗಳಂತಹ ಇಂಟರ್ನೆಟ್ ಪ್ರೊಟೊಕಾಲ್ (ಐಪಿ) ಸಂಪನ್ಮೂಲವನ್ನು ಪ್ರತಿನಿಧಿಸುತ್ತದೆ

ಜಗತ್ತಿನ ಸಿರಿವಂತ ತಾಣ

 • ಸುದ್ದಿಯಲ್ಲಿ ಏಕಿದೆ? ಜಗತ್ತಿನ ಸಿರಿವಂತ ತಾಣಗಳ ಪಟ್ಟಿಯಿಂದ ಕತಾರ್‌ ಹಿಂದೆ ಸರಿಯುತ್ತಿದ್ದು, ಅದರ ಸ್ಥಾನವನ್ನು ಆಕ್ರಮಿಸಿಕೊಳ್ಳುವತ್ತ ಚೀನಾದ ಮಕಾವ್ ಹೆಜ್ಜೆಯಿಡುತ್ತಿದೆ.
 • 2020ರ ವೇಳೆಗೆ ಐಎಂಎಫ್ ಅಂದಾಜಿನ ಪ್ರಕಾರ ಮಕಾವ್‌ನ ಪ್ರತಿ ವ್ಯಕ್ತಿಯ ಆದಾಯ 143,116 ಡಾಲರ್‌ (ಅಂದಾಜು 98.8 ಲಕ್ಷ ರೂ.) ತಲುಪುವ ನಿರೀಕ್ಷೆಯಿದೆ.
 • ಚೀನಾದ ಸುಪರ್ದಿಗೆ ಪೋರ್ಚುಗಲ್‌ನಿಂದ ಎರಡು ದಶಕಗಳ ಹಿಂದೆ ಮಕಾವ್ ಮರಳಿದ್ದು, ಶೀಘ್ರಗತಿಯ ಆರ್ಥಿಕ ಬೆಳವಣಿಗೆ ದಾಖಲಿಸುವ ಜತೆಗೆ ಎಲ್ಲ ರೀತಿಯ ಅಭಿವೃದ್ಧಿಯನ್ನೂ ಹೊಂದಿದೆ.
 • ಮಕಾವ್‌ನಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ವ್ಯವಸ್ಥಿತವಾದ ಮತ್ತು ಕಾನೂನುಬದ್ಧ ಕ್ಯಾಸಿನೋ ಉದ್ಯಮವಿದ್ದು, ಅತ್ಯಂತ ಹೆಚ್ಚು ಆದಾಯ ತರುತ್ತಿದೆ.
 • ಪ್ರಸ್ತುತ ಕತಾರ್ ಅತ್ಯಂತ ಹೆಚ್ಚು ಆದಾಯ ಹೊಂದಿರುವ ನಗರವಾಗಿದ್ದು, ಶೀಘ್ರದಲ್ಲೇ ಆ ಸ್ಥಾನವನ್ನು ಮಕಾವ್ ತಲುಪಲಿದೆ. ಜನರ ತಲಾ ಆದಾಯ ಏರಿಕೆಯ ಜತೆಗೆ ಸರಕಾರಕ್ಕೂ ಅತ್ಯಧಿಕ ಪ್ರಮಾಣದಲ್ಲಿ ಆದಾಯ ದೊರೆಯುತ್ತಿದೆ.
 • ಕತಾರ್‌ ಮತ್ತು ಮಕಾವ್ ಮಧ್ಯೆ ಪ್ರಸ್ತುತ ಆದಾಯ ಮಿತಿಯಲ್ಲಿ ಸ್ಪರ್ಧೆ ಇದ್ದು, ಜಿಡಿಪಿ ಏರಿಕೆಯ ಜತೆಗೆ ತಲಾ ಆದಾಯದಲ್ಲೂ ಏರಿಕೆಯಾಗಿ ಎರಡೂ ನಗರಗಳ ಮಧ್ಯದ ಅಂತರ ಕಡಿಮೆಯಾಗುತ್ತಿದೆ.
 • ಕತಾರ್ ಬೆಳವಣಿಗೆ ಸ್ಥಿರವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಸಿರಿವಂತ ನಗರದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ನಂತರ ಸ್ಥಾನದಲ್ಲಿ ಲುಕ್ಸಂಬರ್ಗ್‌, ಐರ್ಲೆಂಡ್ ಮತ್ತು ನಾರ್ವೆ ಇದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 

 • ಸುದ್ದಿಯಲ್ಲಿ ಏಕಿದೆ?”ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವತಿಯಿಂದ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 50 ಉಡಾವಣೆಗಳನ್ನು ನಡೆಸಲಾಗುವುದು” ಎಂದು ಸಂಸ್ಥೆಯ ಅಧ್ಯಕ್ಷ ಕೆ.ಶಿವನ್‌ ಹೇಳಿದರು.

ಚಂದ್ರಯಾನ-2 

 • ‘ಚಂದ್ರಯಾನ-2’ ಯೋಜನೆ ಆಗಸ್ಟ್‌ನಲ್ಲಿ ಕಾರ್ಯಗತಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದೆ. ಪ್ರಮುಖವಾಗಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಇಳಿಸುವಾಗ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳು ಮತ್ತು ಇಂಧನ ಕ್ಷಮತೆಯ ಬಗ್ಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ನೌಕೆಯನ್ನು ಉಡಾವಣೆ ಮಾಡಿ 30ರಿಂದ 35 ದಿನಗಳಲ್ಲಿ ಚಂದ್ರನ ಕಕ್ಷೆಗೆ ತಲುಪಲಿದೆ.
 • ಚಂದ್ರನ ಕಕ್ಷೆಗೆ ತಲುಪಿದ ಬಳಿಕ ನೌಕೆಯಿಂದ ರೋವರ್‌ ಅನ್ನು ಹೊತ್ತ ಲ್ಯಾಂಡರ್‌ ಪ್ರತ್ಯೇಕಗೊಂಡು, ಮೊದಲೇ ಗೊತ್ತು ಮಾಡಿದ ಸ್ಥಳದಲ್ಲಿ ಇಳಿಯಲಿದೆ. ಆರು ಗಾಲಿಗಳ ರೋವರ್‌ ಚಲಿಸಿ ಚಂದ್ರನ ಮೇಲ್ಮೈನ ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತದೆ. ರೋವರ್‌ ಅನ್ನು ಭೂಮಿಯಿಂದಲೇ ಕಮಾಂಡ್‌ ಮಾಡಿ ನಿಯಂತ್ರಿಸಲಾಗುತ್ತದೆ”

ಯೋಜನೆ ಉದ್ದೇಶ

 • ಚಂದ್ರನಲ್ಲಿ ಲಭ್ಯವಿದೆ ಎನ್ನಲಾದ ಹೀಲಿಯಂ-3 ಪರಮಾಣು ಮತ್ತು ನೀರನ್ನು ಅನ್ವೇಷಿಸಲು ಚಂದ್ರಯಾನ-2 ಮಿಷನ್ ಸಿದ್ಧತೆ ನಡೆಸಿದೆ. ಈ ಮಿಷನ್​ನಲ್ಲಿ ವಿಶೇಷ ರೋವರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಲಿದ್ದು, ಇದು ಚಂದ್ರನಲ್ಲಿ ನೀರು ಮತ್ತು ಹೀಲಿಯಂ-3ರ ಸೆಲೆ ಹುಡುಕುತ್ತ ನೂರಾರು ಸ್ಯಾಂಪಲ್​ಗಳನ್ನು ಪರೀಕ್ಷಿಸಲಿದೆ.
 • ಇಸ್ರೋ ರೋವರ್ ಇಳಿಸಲು ಉದ್ದೇಶಿಸಿರುವ ಚಂದ್ರನ ಪ್ರದೇಶಕ್ಕೆ ಈ ಹಿಂದೆ ಬೇರಾವ ದೇಶಗಳೂ ಹೆಜ್ಜೆ ಹಾಕಿಲ್ಲ ಹೀಗಾಗಿ ಈ ಪ್ರದೇಶವನ್ನು ವರ್ಜಿನ್ ಪ್ರದೇಶ ಎಂದೇ ಕರೆಯಲಾಗಿದೆ. ಚಂದ್ರನ ದಕ್ಷಿಣ ಭಾಗದಲ್ಲಿರುವ ಈ ಪ್ರದೇಶದಲ್ಲಿ ಅಣು ಇಂಧನ (ಹೀಲಿಯಂ-3) ಹೇರಳವಾಗಿರುವ ಸುಳಿವಿದೆ. ಈ ಯೋಜನೆಗೆ ಭಾರತ ಸರ್ಕಾರ -ಠಿ; 830 ಕೋಟಿ ವಿನಿಯೋಗಿಸುತ್ತಿದೆ.

ಹಿನ್ನೆಲೆ-ಮುನ್ನೆಲೆ

 • ಚಂದ್ರನ ಕುರಿತು ಭಾರತದ ಮೊದಲ ಮಿಷನ್ ‘ಚಂದ್ರಯಾನ-1ನ್ನು’ 2008ರ ಅಕ್ಟೋಬರ್​ನಲ್ಲಿ ಕಕ್ಷೆಗೆ ಸೇರಿಸಲಾಗಿತ್ತು. ಇದು ಚಂದ್ರನನ್ನು 3400ಕ್ಕೂ ಹೆಚ್ಚು ಸುತ್ತು ಪ್ರದಕ್ಷಿಣೆ ಹಾಕಿ ನಾಶಗೊಂಡಿತ್ತು.
 • ಚಂದ್ರಯಾನ-2 ಮಿಷನ್​ನಲ್ಲಿ ಆರ್ಬಿಟರ್, ಲ್ಯಾಂಡರ್ ಹಾಗೂ ಆಯತಾಕಾರದ ರೋವರ್ ಗಳನ್ನು ಒಳಗೊಂಡಿದೆ.ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುವ 6 ಚಕ್ರದ ವಾಹನ ಇದಾಗಿದ್ದು, ತನ್ನ ಸುತ್ತಲಿನ 400 ಮೀಟರ್ ಪ್ರದೇಶವನ್ನು 14 ದಿನದಲ್ಲಿ ಪರೀಕ್ಷಿಸಬಲ್ಲದು. ಈ ರೋವರ್ ಫೋಟೋ ತೆಗೆದು ಲ್ಯಾಂಡರ್​ಗೆ ರವಾನಿಸುತ್ತದೆ. ಲ್ಯಾಂಡರ್ ಇಸ್ರೋಗೆ ರವಾನಿಸುತ್ತದೆ.

ಆದಿತ್ಯ-1

 • ”ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ‘ಆದಿತ್ಯ-1′ ನೌಕೆಯನ್ನು ಉಡಾವಣೆ ಮಾಡಲಾಗುತ್ತದೆ. ಈ ನೌಕೆ ಸೂರ್ಯನ ಹೊರ ಪದರದಲ್ಲಿ ನೆಲೆ ನಿಂತು, ಸೌರಮಂಡಲದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಅಧ್ಯಯನ ನಡೆಸುತ್ತದೆ. ಪ್ರಮುಖವಾಗಿ ಸೌರ ಮಾರುತ ಮತ್ತು ಅದರಿಂದ ಭೂಮಿಯ ಮೇಲಾಗುವ ಪರಿಣಾಮಗಳನ್ನು ಅಲ್ಟ್ರಾ ವಯೋಲೆಟ್‌ ಇಮೇಜರ್‌ನಿಂದ ಗ್ರಹಿಸಲಿದೆ’

ಎಸ್‌ಎಸ್‌ಎಲ್‌ವಿ ಉಡಾವಣೆ

 • ”ಸಣ್ಣ ಸಣ್ಣ ಉಪಗ್ರಹಗಳನ್ನು ಸೇರಿಸುವ ಸಲುವಾಗಿ ಪುಟ್ಟ ಬಾಹ್ಯಾಕಾಶ ಉಡಾವಣಾ ವಾಹಕಗಳ (ಎಸ್‌ಎಸ್‌ಎಲ್‌ವಿ) ಪರೀಕ್ಷೆಯನ್ನು 2019ರ ಮೇ ಅಥವಾ ಜೂನ್‌ನಲ್ಲಿ ನಡೆಸಲಾಗುವುದು.
 • ಸಣ್ಣ ಉಪಗ್ರಹಗಳ ಉಡಾವಣೆಗೆ ದೇಶ, ವಿದೇಶಗಳಿಂದ ಭಾರಿ ಬೇಡಿಕೆಯಿದೆ.
 • ಪಿಎಸ್‌ಎಲ್‌ವಿ ಉಡಾವಣಾ ವಾಹಕಗಳ ನಿರ್ಮಾಣಕ್ಕೆ 45 ದಿನಗಳನ್ನು ತೆಗೆದುಕೊಂಡರೆ, ಎಸ್‌ಎಸ್‌ಎಲ್‌ವಿಗಳನ್ನು ನಿರ್ಮಿಸಲು ಕೇವಲ 72ರಿಂದ 74 ಗಂಟೆಗಳು ಸಾಕು.
 • ಇದರ ನಿರ್ಮಾಣ ಮತ್ತು ಉಡಾವಣಾ ವೆಚ್ಚ ಸಹ ಕಡಿಮೆ.
 • ಇದರ ಒಟ್ಟು ತೂಕ 500ರಿಂದ 700 ಕೆ.ಜಿ.ಗಳಷ್ಟಿದ್ದು, ಇದು ಹೊಸ ತಲೆಮಾರಿನ ಉಡಾವಣಾ ವಾಹಕವಾಗಿದೆ”

‘ಇಸ್ರೊ ಟಿವಿ ಚಾನೆಲ್‌’

 • ”ಇಸ್ರೊದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಜನರಿಗೆ ತಿಳಿಸಿಕೊಡಲು ಟಿವಿ ಚಾನೆಲ್‌ ಆರಂಭಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯ ಮಾಹಿತಿ ನೀಡಸುವ ಸಲುವಾಗಿ ಪ್ರಾದೇಶಿಕ ಭಾಷೆಯಲ್ಲೇ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು.
 • ನಾಲ್ಕು ತಿಂಗಳಲ್ಲಿ ಹೊಸ ಚಾನೆಲ್‌ ಪ್ರಾರಂಭವಾಗಲಿದೆ”

ಬೈನಾ ಆಪರೇಷನ್

 • ಸುದ್ದಿಯಲ್ಲಿ ಏಕಿದೆ? ಗೋವಾ ವಾಸ್ಕೊ ಬೈನಾದಲ್ಲಿರುವ ಅಕ್ರಮ ಗುಡಿಸಲುಗಳ ವಿರುದ್ಧ ಕ್ರಮ ಕೈಗೊಳ್ಳಲು ಗೋವಾ ಕರಾವಳಿ ವಲಯ ಪ್ರಾಧಿಕಾರಕ್ಕೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ.
 • ಬೈನಾ ಬೀಚ್​ನಲ್ಲಿರುವ ಮನೆಗಳು ಅಕ್ರಮ ಎಂದು ಹಸಿರು ಪೀಠ ಹೇಳಿದೆ. ಇದರಿಂದಾಗಿ ಮತ್ತೆ ಬೈನಾ ಆಪರೇಷನ್ ಕಾರ್ಯಾಚರಣೆ ನಡೆಯುವ ಆತಂಕ ಅಲ್ಲಿನ ಕನ್ನಡ ನಿವಾಸಿಗಳಿಗೆ ಎದುರಾಗಿದೆ.

ಹಿನ್ನೆಲೆ

 • ಗೋವಾ ಸರ್ಕಾರವು ಬೈನಾದಲ್ಲಿರುವ ಮನೆಗಳು ಅಕ್ರಮವಾಗಿದ್ದು, ಈ ಮನೆಗಳನ್ನು ತೆರವುಗೊಳಿಸುವುದಾಗಿ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೈನಾ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.
 • ವಿಚಾರಣೆ ಬಳಿಕ ರಾಷ್ಟ್ರೀಯ ಹಸಿರು ಪೀಠವು, ಬೈನಾದಲ್ಲಿ ಯಾವುದೇ ಮನೆಗಳ ನಿರ್ವಣದ ವೇಳೆ ಪರವಾನಗಿ ಪಡೆದಿಲ್ಲ. ಮನೆಗಳ ನಿರ್ಮಾಣ ಕಾನೂನು ಬಾಹಿರ ಎಂದು ನ್ಯಾಯಾಲಯಕ್ಕೆ ಕಂಡು ಬಂದಿದೆ. ಅಲ್ಲದೆ, ಬೈನಾ ಪ್ರದೇಶವು ನೋ ಡೆವಲಪ್​ವೆುಂಟ್ ಜೋನ್ ಹಾಗೂ ಸರ್ಕಾರಿ ಭೂಮಿಯಾಗಿದೆ ಎಂದು ಹಸಿರುಪೀಠವು ಅಭಿಪ್ರಾಯಪಟ್ಟಿದೆ.
 • ಈ ಹಿನ್ನೆಲೆಯಲ್ಲಿ ಬೈನಾದಲ್ಲಿರುವ ಅಕ್ರಮ ಮನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೋವಾ ಕರಾವಳಿ ವಲಯ ಪ್ರಾಧಿಕಾರಕ್ಕೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ.

ನಾರಿ ಸ್ವಾಟ್

 • ಸುದ್ದಿಯಲ್ಲಿ ಏಕಿದೆ? ಚಟುವಟಿಕೆಗಳ ನಿಗ್ರಹಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಮಹಿಳಾ ಸಶಸ್ತ್ರ ತಂಡವೊಂದು ದೆಹಲಿ ಪೊಲೀಸ್ ವಿಭಾಗಕ್ಕೆ ಸೇರ್ಪಡೆಯಾಗಿದೆ.
 • ವಿಶೇಷ ಶಸ್ತ್ರ ಹಾಗೂ ತಂತ್ರಗಳ ತಂಡ (Special Weapons and Tactics (SWAT)) ಎಂದು ಕರೆಯಿಸಿಕೊಳ್ಳುವ ಇದರಲ್ಲಿ 36 ಮಹಿಳಾ ಕಮಾಂಡೊಗಳಿದ್ದಾರೆ.
 • ಈಶಾನ್ಯ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಯುವ ಅಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ 15 ತಿಂಗಳು ವಿಶೇಷ ತರಬೇತಿಯನ್ನು ನೀಡಲಾಗಿದೆ.
 • ಕಠಿಣ ಸಂದರ್ಭಗಳಲ್ಲಿ ಎದೆಗುಂದದೆ ದಾಳಿ ನಡೆಸುವುದು, ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ ಹಾಗೂ ಇತರ ತರಬೇತಿಗಳನ್ನು ಗೃಹ ಸಚಿವಾಲಯ ನೀಡಿದೆ.

ಶಸ್ತ್ರ ರಹಿತ ಸಮರಕ್ಕೂ ಸಿದ್ಧ!

 • ಸ್ವಾಟ್ ತಂಡದ ಯುವತಿಯರಿಗೆ ಅತ್ಯಾಧುನಿಕ ಶಸ್ತ್ರಗಳಾದ ಎಂಪಿ5 ಸಬ್​ವುಷೀನ್ ಗನ್, ಗ್ಲಾಕ್ 21 ಪಿಸ್ತೂಲ್​ಗಳನ್ನು ನೀಡಲಾಗಿದೆ. ಇವುಗಳನ್ನು ಬಳಸುವಲ್ಲಿ ನೈಪುಣ್ಯತೆಯನ್ನು ತಂಡ ಸಾಧಿಸಿದೆ.
 • ಕಾರ್ಯಾಚರಣೆ ವೇಳೆ ಕೆಲವೊಮ್ಮೆ ಶಸ್ತ್ರಗಳಿಲ್ಲದೆ ಶತ್ರುವನ್ನು ಎದುರಿಸುವ ಅಥವಾ ದಾಳಿ ನಡೆಸುವ ಅಗತ್ಯತೆ ಉದ್ಭವಿಸುತ್ತದೆ. ಅಂಥ ಕಠಿಣ ಸಂದರ್ಭಗಳಿಗಾಗಿಯೇ ‘ ಕ್ರಾವ್ ಮಗಾ ’ ಸಮರ ಕಲೆ ತರಬೇತಿಯನ್ನು ಸ್ವಾಟ್ ಮಹಿಳಾ ಕಮಾಂಡೊಗಳಿಗೆ ನೀಡಲಾಗಿದೆ.

ಏನಿದು ಕ್ರಾವ್ ಮಗಾ?

 • ಬಾಕ್ಸಿಂಗ್, ಕುಸ್ತಿ, ಕರಾಟೆ, ಜುಡೊ ಸಮರಕಲೆಗಳ ಸಮ್ಮಿಶ್ರಿತ ರೂಪವೇ ಈ ಕ್ರಾವ್ ಮಗಾ. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಇದನ್ನು 1955ರಲ್ಲಿ ಅಭಿವೃದ್ಧಿಪಡಿಸಿತು. ಆಕ್ರಮಣ ಹಾಗೂ ಆತ್ಮರಕ್ಷಣೆಯ ಎರಡೂ ಪಟ್ಟುಗಳನ್ನು ಕ್ರಾವ್ ಮಗಾ ಹೊಂದಿದೆ.

‘ಟಚ್ ದಿ ಸನ್’ 

 • ಸುದ್ದಿಯಲ್ಲಿ ಏಕಿದೆ? ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಸೂರ್ಯನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ಆರಂಭಿಸಿರುವ ‘ಟಚ್ ದಿ ಸನ್ ಹೆಸರಿನ ಸೂರ್ಯ ಶಿಕಾರಿ ಯೋಜನೆಯ ಮೊದಲ ಹೆಜ್ಜೆಯಾಗಿ ಪಾರ್ಕರ್ ಸೋಲಾರ್ ಪ್ರೋಬ್ ಹೆಸರಿನ ನೌಕೆ ಯಶಸ್ವಿಯಾಗಿ ನಭ ಸೇರಿದೆ.
 • ಏಳು ವರ್ಷಗಳ ಅವಧಿಯ ಸೂರ್ಯ ‘ಸ್ಪರ್ಶ’ ಮಹಾಯಾನವನ್ನು ನಾಸಾದ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆ ಆರಂಭಿಸಿದೆ.
 • ಅಮೆರಿಕ ಕೇಪ್‌ ಕನವೆರಾಲ್‌ ವಾಯುಪಡೆ ಕೇಂದ್ರದಲ್ಲಿರುವ ಬಾಹ್ಯಾಕಾಶ ಉಡಾವಣಾ ಸಂಕೀರ್ಣ 37ರಿಂದ ಮಧ್ಯಾಹ್ನ 1 ಗಂಟೆ 1 ನಿಮಿಷಕ್ಕೆ ಸರಿಯಾಗಿ ನೌಕೆಯ ಉಡಾವಣೆ ನಡೆಯಿತು.
 • ಯುನೈಟೆಡ್‌ ಲಾಂಚ್‌ ಅಲಯನ್ಸ್‌ ಡೆಲ್ಟಾ 4 ರಾಕೆಟ್‌ ಬೆಂಕಿ ಜ್ವಾಲೆಗಳನ್ನು ಹಿಂದಕ್ಕೆ ಚಿಮ್ಮುತ್ತಾ ನಭೋಮಂಡಲವನ್ನು ಬೇಧಿಸುತ್ತಾ ಮುನ್ನುಗ್ಗಿತು. ನೌಕೆ ಮತ್ತು ವಾಹಕಗಳೆರಡೂ ಸುಸ್ಥಿತಿಯಲ್ಲಿ ಮುನ್ನಡೆಯುತ್ತಿವೆ ಎಂದು ನಾಸಾ ಹೇಳಿದೆ.
 • ನಿಗದಿಯಾಗಿದ್ದ ಈ ಉಡಾವಣೆ ತಾಂತ್ರಿಕ ಕಾರಣಗಳಿಂದಾಗಿ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿತ್ತು.

ಪ್ರಮುಖ ಹೆಜ್ಜೆಗಳು

 • ಅಕ್ಟೋಬರ್‌: ರಾಕೆಟ್‌ ಶುಕ್ರ ಗ್ರಹ ದಾಟಲಿದೆ
 • ನವೆಂಬರ್‌: ಸೂರ್ಯನ ಕೇಂದ್ರದಿಂದ 150 ಲಕ್ಷ ಮೈಲು ಅಂತರದ ಕಕ್ಷಾ ಪಥದಲ್ಲಿ ನೌಕೆ ಸ್ಥಾಪನೆ
 • ಡಿಸೆಂಬರ್‌: ಸೋಲಾರ್‌ ಪಾರ್ಕರ್‌ನಿಂದ ಮೊದಲ ಸೂರ್ಯ ಮಾಹಿತಿ ರವಾನೆ ನಿರೀಕ್ಷೆ.
 • 6 ದಶಕಗಳ ಹಿಂದಿನ ಕನಸು, ಕೋಟ್ಯಂತರ ಗಂಟೆಗಳ ಪರಿಶ್ರಮ
 • ಕೇವಲ ವೈಜ್ಞಾನಿಕ ಕಲ್ಪನೆಯಂತಿದ್ದ ಕಥಾನಕವೀಗ ಆಗಿದೆ ನನಸು
 • 61 ಲಕ್ಷ ಕಿ.ಮೀ. ಸನಿಹಕ್ಕೆ
 • 24 ಬಾರಿ ಸೂರ್ಯನನ್ನು ಪರಿಭ್ರಮಿಸುವ ನೌಕೆ ಪ್ರತಿ ಸುತ್ತಿನಲ್ಲೂ ಸ್ವಲ್ಪ ಹೊತ್ತು ಸೂರ್ಯನಿಗೆ 61,15,507 ಕಿ.ಮೀ. ಹತ್ತಿರ ಬರಲಿದೆ. ಸೂರ್ಯನ ಇಷ್ಟು ಹತ್ತಿರಕ್ಕೆ ಹಿಂದೆಂದೂ ಹೋದದ್ದಿಲ್ಲ.
 • ನಾಸಾ ನಿರ್ಮಿತ ‘ಪಾರ್ಕರ್‌ ಸೋಲಾರ್‌ ಪ್ರೋಬ್‌’ ನೌಕೆ ಸೂರ್ಯನ ಹೊರಾವರಣ (ಕರೋನ) ಅಧ್ಯಯನವನ್ನೇ ಪ್ರಧಾನ ಉದ್ದೇಶವಾಗಿ ಹೊಂದಿದ್ದು, ಇದರಿಂದ ಭೂಮಿ ಮಾತ್ರವಲ್ಲ ಇಡೀ ಸೌರ ಮಂಡಲದ ಅನೇಕ ರಹಸ್ಯಗಳು ಬೇಧಿಸಲ್ಪಡುವ ನಿರೀಕ್ಷೆ ಇದೆ. ಜತೆಗೆ ಸೌರ ಗಾಳಿಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೂ ಪರಿಹಾರ ದೊರೆಯುವ ಆಶಾವಾದವಿದೆ.

ಯೋಜನೆಯ ಪ್ರಮುಖ ಉದ್ದೇಶ

 • ಸೂರ್ಯನ ಹೊರಾವರಣದ ನಿಗೂಢತೆ ಬೇಧಿಸುವುದು
 • ಭೂಮಿಯತ್ತ ಧಾವಿಸುವ ಉಷ್ಣ ಗಾಳಿ, ಭೂಕಾಂತೀಯ ಬಿರುಗಾಳಿಯ ಬಗ್ಗೆ ತಿಳಿವಳಿಕೆ
 • ಉಪಗ್ರಹಗಳು, ಗಗನಯಾತ್ರಿಗಳ ಮೇಲೆ ಸೌರಗಾಳಿ ಪರಿಣಾಮ ಅಧ್ಯಯನ
 • ಪ್ರಕೃತಿ ವಿಕೋಪಗಳನ್ನು ಗ್ರಹಿಸುವುದು, ವಿದ್ಯುತ್‌ ಗ್ರಿಡ್‌, ಎಲೆಕ್ಟ್ರಾನಿಕ್‌ ಸಾಮಗ್ರಿಗಳ ಮೇಲೆ ಆಗುವ ಹಾನಿ ತಪ್ಪಿಸುವ ಪ್ರಯತ್ನ

ಉಡಾವಣೆ ಮುಂದೂಡಿದ್ದೇಕೆ?

 • ಡೆಲ್ಟಾ-4 ಬೃಹತ್‌ ನೌಕೆಯ ಮೇಲೆ ಬಿಡುಗಡೆ ಮಿತಿಯನ್ನು ಮೀರಿದ ಅನಿಲ ಹೀಲಿಯಂ ಸಂವೇದಕದ ಎಚ್ಚರಿಕೆ ಕಾರಣ ಉಡಾವಣೆಯನ್ನು ಸ್ಥಗಿತಗೊಳಿಸಲಾಯಿತು. ನೌಕೆ ಉಡಾವಣೆಗೆ ವಾತಾವರಣ ಕನಿಷ್ಠ ಶೇ.60ರಷ್ಟು ಅನುಕೂಲಕರವಾಗಿರಬೇಕು ಎಂದು ಯುನೈಟೆಡ್‌ ಲಾಂಚ್‌ ಅಲೈಯನ್ಸ್‌(ಯುಎಲ್‌ಎ) ತಿಳಿಸಿದೆ.

ನೌಕೆಯೇಕೆ ಕರಗುವುದಿಲ್ಲ?

 • ಸುಮಾರು 1,370 ಡಿ.ಸೆ. ಉಷ್ಣತೆ ಇರುವ ಸೂರ್ಯನ ಹತ್ತಿರದ ವಾತಾವರಣಕ್ಕೆ ನೌಕೆ ತಲುಪಿದರೂ ನೌಕೆಯಲ್ಲಿ ಅಳವಡಿಸಿರುವ ತಂಪು ವ್ಯವಸ್ಥೆಯು ನೌಕೆಯ ಸೌರ ಫಲಕಗಳನ್ನು ರಕ್ಷಿಸುವ ಜತೆಗೆ ನೌಕೆಯ ತಾಪಮಾನವನ್ನು 29 ಡಿ.ಸೆ. ನಲ್ಲಿ ಇರಿಸುತ್ತದೆ.

ಏಷ್ಯಾದಲ್ಲೇ ಸುಸಜ್ಜಿತ ಕೋರ್ಟ್ ಸಂಕೀರ್ಣ 

 • ಸುದ್ದಿಯಲ್ಲಿ ಏಕಿದೆ? ತಾಲೂಕು ಮಟ್ಟದಲ್ಲಿರುವ ಕೋರ್ಟ್ ಕಟ್ಟಡಗಳಲ್ಲಿ ದೇಶದಲ್ಲೇ ಅತ್ಯಂತ ದೊಡ್ಡದು ಮತ್ತು ಆಧುನಿಕ ಸೌಲಭ್ಯ ಹೊಂದಿರುವ ಹೆಗ್ಗಳಿಕೆಯೊಂದಿಗೆ ‘ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ’ ಲೋಕಾರ್ಪಣೆಗೊಳ್ಳಲಿದೆ.

ಸಂಕೀರ್ಣದ ವಿಶೇಷತೆ

 • 5.15 ಎಕರೆ ಜಾಗ, 122 ಕೋಟಿ ರೂ. ವೆಚ್ಚದಲ್ಲಿ ನಿರ್ವಿುತ 7 ಮಹಡಿಯ ಕಟ್ಟಡ.
 • ಮೊದಲ ಮಹಡಿಯಲ್ಲಿ ಜೆಎಂಎಫ್​ಸಿ, 2ನೇ ಮಹಡಿಯಲ್ಲಿ ಸಿವಿಲ್ ನ್ಯಾಯಾಲಯ, 3ನೇ ಮಹಡಿಯಲ್ಲಿ ಸೀನಿಯರ್ ಸಿವಿಲ್, 4ನೇ ಮಹಡಿಯಲ್ಲಿ ಡಿಸ್ಟ್ರಿಕ್ಟ್ ನ್ಯಾಯಾಲಯಗಳಿವೆ.
 • 5 ನೇ ಮಹಡಿಯನ್ನು ವಕೀಲರ ಸಂಘಕ್ಕೆ ತಾತ್ಕಾಲಿಕವಾಗಿ ಬಿಟ್ಟುಕೊಡಲಾಗಿದೆ. ನ್ಯಾಯಾಲಯ ಸಂಕೀರ್ಣದ ಪಕ್ಕ ವಕೀಲರ ಸಂಘದ ನೂತನ ಕಟ್ಟಡ ನಿರ್ವಣಗೊಳ್ಳಲಿದೆ.
 •  ನ್ಯಾಯಾಲಯ ಸಂಕೀರ್ಣದಲ್ಲಿ ಇದೇ ಮೊದಲ ಬಾರಿಗೆ ಬಂದೀಖಾನೆ ನಿರ್ವಿುಸಲಾಗಿದೆ. ಪ್ರತಿ ಮಹಡಿಯಲ್ಲಿ ಒಂದು ಬಂದೀಖಾನೆ ಇದೆ. ಆರೋಪಿಗಳ ವಿಚಾರಣೆ ಮರುದಿನಕ್ಕೆ ಮುಂದೂಡಲಾಗಿದ್ದರೆ ಇದರಲ್ಲೇ ಇರಲು ವ್ಯವಸ್ಥೆ ಮಾಡಲಾಗಿದೆ.
 •  ನ್ಯಾಯಾಲಯ ಸಂಕೀರ್ಣ ಸಂಪೂರ್ಣವಾಗಿ ಹವಾನಿಯಂತ್ರಿತ ವ್ಯವಸ್ಥೆಗೆ ಒಳಪಟ್ಟಿದೆ.
 • ಇಡೀ ಏಷ್ಯಾದಲ್ಲಿ ಇಂಥ ಸೌಲಭ್ಯ ಇರುವ ಮೊದಲ ನ್ಯಾಯಾಲಯ ಸಂಕೀರ್ಣ ಎಂಬ ಹೆಗ್ಗಳಿಕೆ.
Related Posts
National Current Affairs – UPSC/KAS – 27th June 2018
Government may bail out undertial women The Ministry of Women and Child Development (MWCD) has launched its report titled ‘Women in Prisons’. Aim It aims to build an understanding of the various challenges ...
READ MORE
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌ ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಬೇಕೇ? ಅದು ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ, ಆ ಜಾಗ ಸರ್ಕಾರಕ್ಕೇ ಸೇರಿದ್ದೇ,  ಗೋಮಾಳವೇ, ಅದು ಒತ್ತುವರಿ ಜಾಗವೇ ಎಂಬ ವಿವರಗಳನ್ನು ತಿಳಿದುಕೊಳ್ಳಲು ಕಂದಾಯ ಇಲಾಖೆ ಪರಿಚಯಿಸಿರುವ ‘ದಿಶಾಂಕ್‌’ ...
READ MORE
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಭ್ರಷ್ಟಾಚಾರ ತಡೆಗೆ ಬಲಿಷ್ಠ ಕಾಯ್ದೆ ಸುದ್ಧಿಯಲ್ಲಿ ಏಕಿದೆ?30 ವರ್ಷಗಳ ನಂತರ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಲಂಚ ಪಡೆಯುವವರ ಜತೆಗೆ ಲಂಚ ನೀಡುವವರಿಗೂ 3ರಿಂದ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನು ಬಿಗಿಗೊಳಿಸಲಾಗಿದೆ. ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ...
READ MORE
National Current Affairs – UPSC/KAS Exams- 27th July 2018
Changing  the name of the State Why in news? The West Bengal Assembly passed a resolution to change the name of the State as ‘Bangla’ in three languages — Bengali, English and ...
READ MORE
Karnataka Current Affairs – KAS / KPSC Exams – 19th June 2017
Piped gas to reach 65k houses by end of current financial year As many as 65,000 houses in the city are set to get piped natural gas (PNG) by the end ...
READ MORE
“7th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಜಾಹೀರಾತು ಪ್ರದರ್ಶನ ನಿಷೇಧ ಸುದ್ದಿಯಲ್ಲಿ ಏಕಿದೆ? ಅನಧಿಕೃತ ಫ್ಲೆಕ್ಸ್, ಬ್ಯಾನರ್​ಗಳ ಹಾವಳಿ ತಡೆಯಲು ಮುಂದಿನ ಒಂದು ವರ್ಷದವರೆಗೆ ನಗರದಲ್ಲಿ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಲು ಬಿಬಿಎಂಪಿ ಕೌನ್ಸಿಲ್​ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಿನ್ನಲೆ: ಹಲವು ವರ್ಷಗಳಿಂದ ಸಾಧ್ಯವಾಗದೇ ಇದ್ದ ಕೆಲಸವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ...
READ MORE
DOWNLOAD KPSC MAINS 2014 PAPER CLICK HERE
READ MORE
National Current Affairs – UPSC/KAS Exams- 19th March 2019
Japan to make crater on asteroid Topic: Science and Technology In News: Japan’s space agency said that its Hayabusa2 spacecraft will drop an explosive on an asteroid to make a crater and ...
READ MORE
National Current Affairs – UPSC/KAS Exams- 9th March 2019
Aravalli range Topic: Environment and Ecology In News: The Supreme Court on Friday cautioned the Haryana government against doing “anything” to harm the ecologically fragile Aravalli range. More on the Topic: Aravalli is a ...
READ MORE
IMD urges govt to encourage farmers to register on portal
The officials of the India Meteorological Department (IMD) on Tuesday met the state government officials and urged them to speed up the process of making farmers register on M-Kisan portal. Union ...
READ MORE
National Current Affairs – UPSC/KAS – 27th June
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
National Current Affairs – UPSC/KAS Exams- 27th July
Karnataka Current Affairs – KAS / KPSC Exams
“7th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
KPSC Mains Paper
National Current Affairs – UPSC/KAS Exams- 19th March
National Current Affairs – UPSC/KAS Exams- 9th March
IMD urges govt to encourage farmers to register

Leave a Reply

Your email address will not be published. Required fields are marked *