14th & 15th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಆರೋಗ್ಯ ಕರ್ನಾಟಕ ಯೋಜನೆ

 • ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತಂದಿರುವಸಮಗ್ರ ಆರೋಗ್ಯ ಕರ್ನಾಟಕಯೋಜನೆ ವ್ಯಾಪ್ತಿಯಿಂದ ಹಲವು ವರ್ಗಗಳನ್ನು ಹೊರಗಿಟ್ಟಿರುವುದರಿಂದ ಇದು ಕನ್ನಡಿಯೊಳಗಿನ ಗಂಟಿನಂತಾಗಿದೆ.

ಉದ್ದೇಶ

 • ಸರಕಾರದ ಎಲ್ಲ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಒಂದೇ ಆರೋಗ್ಯ ಯೋಜನೆ ಇರಬೇಕೆಂದು ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿದೆ.
 • ಆದರೆ ಈ ಯೋಜನೆಯಿಂದ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರು, ಇಎಸ್‌ಐ ಯೋಜನೆ ಫಲಾನುಭವಿಗಳು, ಕೇಂದ್ರ ಸರಕಾರಿ ನಿವೃತ್ತ ನೌಕರರು ಹಾಗೂ ಆರೋಗ್ಯವಿಮೆ ಸೌಲಭ್ಯ ಪಡೆಯುತ್ತಿರುವ ಖಾಸಗಿ ಕಂಪನಿ ಉದ್ಯೋಗಿಗಳನ್ನು ಹೊರಗಿಡಲಾಗಿದೆ.
 • ಆದರೆ ನಿವೃತ್ತ ಸರಕಾರಿ ನೌಕರರಿಗೆ ಸೌಲಭ್ಯ ದೊರೆಯಲಿದೆ.

New

ಒಬ್ಬರಿಗೆ ಒಂದೇ ವಿಮೆ 

 • ಒಬ್ಬರಿಗೆ ಒಂದೇ ವಿಮೆ ಸೌಲಭ್ಯ ಸಿಗಬೇಕು. ಈಗಾಗಲೇ ವಿಮೆ ಸೌಲಭ್ಯ ಪಡೆಯುತ್ತಿರುವವರಿಗಿಂತ ಇಲ್ಲದವರಿಗೆ ಯೋಜನೆ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.ಈ ಮೊದಲು ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಆರೋಗ್ಯ ವಿಮೆಗಳು ಜಾರಿಯಲ್ಲಿದ್ದು, ಒಬ್ಬರೇ 3-4 ಯೋಜನೆಗಳ ಲಾಭ ಪಡೆಯುತ್ತಿದ್ದರು. ಇಲ್ಲದವರು ಯಾವುದೇ ಯೋಜನೆ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸರಕಾರ ಎಲ್ಲರಿಗೂ ಸಮಾನ ರೀತಿಯಲ್ಲಿ ಆರೋಗ್ಯ ಸೇವೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತಾಗಬೇಕು ಎಂಬ ಕಾರಣಕ್ಕೆ ಯಶಸ್ವಿನಿ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ತ್ಯ ಬಿಮಾ ಯೋಜನೆ, ಹಿರಿಯ ನಾಗರಿಕರ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ, ಮುಖ್ಯಮಂತ್ರಿ ಸಾಂತ್ವಾನ ಹರೀಶ್‌ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆ ಸೇರಿದಂತೆ ಸರಕಾರದ ಎಲ್ಲಾ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಆರೋಗ್ಯ ಕರ್ನಾಟಕಯೋಜನೆಯನ್ನು ಜಾರಿಗೆ ತಂದಿದೆ.

ಬಿಪಿಎಲ್‌ ಮತ್ತು ಎಪಿಎಲ್‌ 

 • ಆರೋಗ್ಯ ಕರ್ನಾಟಕ ಯೋಜನೆಯಡಿ ಅರ್ಹತಾ ರೋಗಿ ಮತ್ತು ಸಾಮಾನ್ಯ ರೋಗಿ ಎಂದು ಎರಡು ವರ್ಗಗಳಲ್ಲಿ ಚಿಕಿತ್ಸೆ ನೀಡಲಾಗುವುದು.
 • ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ 2013ರಡಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಅರ್ಹತಾ ರೋಗಿಗಳಿಗೆ ಬಹುತೇಕ ಉಚಿತ ಚಿಕಿತ್ಸೆ ದೊರೆಯಲಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರದ, ಎಪಿಎಲ್‌ ಪಡಿತರರು ಅಥವಾ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ಸಾಮಾನ್ಯ ರೋಗಿಗಳಿಗೆ ಯೋಜನೆಯ ಪ್ಯಾಕೇಜ್‌ ದರದ ಶೇ.30ರಷ್ಟನ್ನು ಸರಕಾರ ಭರಿಸುತ್ತದೆ.
 • ಉಳಿದ ವೆಚ್ಚವನ್ನು ರೋಗಿ ಭರಿಸಬೇಕು. ಎಪಿಎಲ್‌/ಬಿಪಿಎಲ್‌ ಇಲ್ಲದವರು/ ಈ ಎರಡೂ ಕಾರ್ಡ್‌ ಇಲ್ಲದವರು ಆರೋಗ್ಯ ಕಾರ್ಡ್‌ ಪಡೆಯುವವರೆಗೂ ಆಧಾರ್‌ ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆಯಬಹುದು.

ಯಶಸ್ವಿನಿ ಸದಸ್ಯರಿಗೆ ನಷ್ಟ 

 • ಯಶಸ್ವಿನಿ ಯೋಜನೆಯಡಿ ಪ್ರತಿ ಸದಸ್ಯರಿಗೆ 2 ಲಕ್ಷ ರೂ.ವರೆಗೆ ವೆಚ್ಚ ಭರಿಸಲಾಗುತ್ತಿತ್ತು. ಆರೋಗ್ಯ ಕರ್ನಾಟಕದಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 50 ಲಕ್ಷ ರೂ. ವರೆಗೆ ವೆಚ್ಚ ಸಿಗಲಿದೆ.
 • ಆರೋಗ್ಯ ಕರ್ನಾಟಕದಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಇದ್ದರೆ ಎಪಿಎಲ್‌ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.30 ರಷ್ಟನ್ನು ಮಾತ್ರ ಸರಕಾರ ಭರಿಸುತ್ತದೆ.

ನಿವೃತ್ತ ಸರಕಾರಿ ನೌಕರರಿಗೆ ಲಭ್ಯ 

 • ರಾಜ್ಯ ನಿವೃತ್ತ ಸರಕಾರಿ ನೌಕರರಿಗೆ ಆರೋಗ್ಯ ಕರ್ನಾಟಕ ಯೋಜನೆ ಸೌಲಭ್ಯ ಸಿಗಲಿದೆ. ಈ ಯೋಜನೆಯಡಿ ನೋಂದಾಯಿಸಿಕೊಂಡು ಚಿಕಿತ್ಸೆ ಸೌಲಭ್ಯ ಪಡೆಯಬಹುದು. ಆದರೆ, ಕೇಂದ್ರ ಸರಕಾರಿ ನಿವೃತ್ತ ನೌಕರರಿಗೆ ಸಿಜಿಎಚ್‌ಎಸ್‌ ಯೋಜನೆ ಜಾರಿ ಮಾಡಿರುವುದರಿಂದ ಅವರಿಗೆ ಆರೋಗ್ಯ ಕರ್ನಾಟಕ ಯೋಜನೆ ಸಿಗುವುದಿಲ್ಲ.

ತಿದ್ದುಪಡಿ ತಂದು ಯೋಜನೆ ವ್ಯಾಪ್ತಿಗೆ 

 • ವೈದ್ಯಕೀಯ ಹಾಜರಾತಿ ನಿಯಮಗಳಿಗೆ ತಿದ್ದುಪಡಿ ತಂದು ಸರಕಾರಿ ನೌಕರರು ಹಾಗೂ ಶಾಸನ ಸಭೆ ಸದಸ್ಯರನ್ನು ಈ ಯೋಜನೆಗೆ ಸೇರಿಸಲು ಚಿಂತನೆ ನಡೆದಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.

ಮಿತವ್ಯಯದ ಕ್ರಮ

 • ಸುದ್ದಿಯಲ್ಲಿ ಏಕಿದೆ ? ಭದ್ರತಾಪಡೆಗಳ ವೆಚ್ಚ ಉಳಿತಾಯದ ಕ್ರಮವಾಗಿ ದೇಶದ ಹಲವೆಡೆ ಸ್ಥಾಪಿಸಲಾಗಿರುವ ಸೇನಾ ಶಿಬಿರಗಳನ್ನು (ಕಂಟೋನ್ಮೆಂಟ್‌) ರದ್ದುಪಡಿಸುವ ಬಗ್ಗೆ ಭಾರತೀಯ ಸೇನೆಚಿಂತನೆ ನಡೆಸಿದೆ
 • 250 ವರ್ಷಗಳ ಹಿಂದೆ ಬ್ರಿಟಿಷರು ಮೊದಲ ಶಿಬಿರವನ್ನು ಬಾರಕ್‌ಪುರದಲ್ಲಿ ಸ್ಥಾಪಿಸಿದ್ದರು. ಬಳಿಕ ಕ್ರಮೇಣ ಸೇನಾಪಡೆಯ ಶಿಬಿರಗಳು ದೇಶಾದ್ಯಂತ ವಿಸ್ತರಣೆಯಾಗಿ, ಪ್ರಸ್ತುತ ಒಟ್ಟು 62 ಸ್ಥಳಗಳಲ್ಲಿ ನೆಲೆ ಹೊಂದಿವೆ.
 • ಕಂಟೋನ್ಮೆಂಟ್‌ ಪ್ರದೇಶಗಳ ಒಳಗಿನ ಭಾಗಗಳನ್ನು ವಿಶೇಷ ಮಿಲಿಟರಿ ಠಾಣೆಗಳಾಗಿ ಪರಿವರ್ತಿಸಿ ಸೇನೆಯ ಸಂಪೂರ್ಣ ನಿಯಂತ್ರಣಕ್ಕೆ ನೀಡಬಹುದು. ದಂಡು ವ್ಯಾಪ್ತಿಯಲ್ಲಿ ಬರುವ ಉಳಿದ ನಾಗರಿಕ ವಸತಿ ಪ್ರದೇಶಗಳನ್ನು ನಿರ್ವಹಣೆಗಾಗಿ ಸ್ಥಳೀಯಾಡಳಿತಗಳಿಗೆ ಬಿಟ್ಟುಕೊಡಬಹುದು ಎಂದು ಸೇನೆ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದೆ.
 • ದಂಡು ಪ್ರದೇಶಗಳ ವಾರ್ಷಿಕ ನಿರ್ವಹಣೆಗಾಗಿ ದೇಶದ ರಕ್ಷಣಾ ಬಜೆಟ್ ಮೇಲೆ ಬೀಳುತ್ತಿರುವ ಒತ್ತಡವನ್ನು ಈ ಮೂಲಕ ನಿವಾರಿಸಬಹುದು. ಸದ್ಯ ದಂಡು ಪ್ರದೇಶಗಳ ನಿರ್ವಹಣೆಗಾಗಿಯೇ ವಾರ್ಷಿಕ 476 ಕೋಟಿ ರೂ ವೆಚ್ಚವಾಗುತ್ತಿದೆ. ಹೀಗಾಗಿ ಸ್ಥಳೀಯಾಡಳಿತಗಳಿಗೆ ವರ್ಗಾಯಿಸುವ ಮೂಲಕ ಭೂ ನಿರ್ವಹಣೆ ಮತ್ತು ಅತಿಕ್ರಮಣ ತಡೆ ಕ್ರಮಗಳನ್ನು ಸರಳೀಕರಿಸಬಹುದು ಎಂದು ಸೇನೆಯ ಉನ್ನತಾಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.
 • ಈ ಕುರಿತು ಸಾಧ್ಯತಾ ಅಧ್ಯಯನ ನಡೆಸುವಂತೆ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಈಗಾಗಲೇ ಆದೇಶಿಸಿದ್ದು, ಸೆಪ್ಟೆಂಬರ್‌ ಹೊತ್ತಿಗೆ ಈ ಅಧ್ಯಯನ ಪೂರ್ಣಗೊಳ್ಳಲಿದೆ. ‘ದಂಡು ಪ್ರದೇಶಗಳನ್ನು ರದ್ದುಪಡಿಸುವ ಪ್ರಸ್ತಾವ ಹೊಸದೇನಲ್ಲ.
 • 2015ರಲ್ಲೇ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ರಕ್ಷಣಾ ಕಾರ್ಯದರ್ಶಿಗಳ ಅಧ್ಯಕ್ಷತೆಯ ಈಗಾಗಲೇ ಒಂದು ತಂಡ ಅಧ್ಯಯನ ನಡೆಸಿದೆ. ಮೌ, ಲಖನೌ, ಅಲ್ಮೋರಾ, ಅಹ್ಮದ್‌ನಗರ, ಫಿರೋಜ್‌ಪುರ್‌ ಮತ್ತು ಯೋಲ್ ಕಂಟೋನ್ಮೆಂಟ್‌ಗಳನ್ನು ನಾಗರಿಕ ಬಳಕೆಗೆ ಬಿಟ್ಟುಕೊಡಲು ಉದ್ದೇಶಿಸಲಾಗಿದೆ. ಯೋಲ್‌ನಲ್ಲಿ ಈಗಾಗಲೇ ಈ ಪ್ರಕ್ರಿಯೆ ಆರಂಭಿಸಲಾಗಿದೆ’

ವ್ಯಾಪಕ ಟೀಕೆಗಳು

 • ಆದರೆ ಈ ಕ್ರಮ ಹಲವು ವಿವಾದಗಳಿಗೆ ಕಾರಣವಾಗಲಿದೆ. ಯಾಕೆಂದರೆ ಹಿಂದೆಯೂ ಈ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಪ್ರಭಾವಿ ಬಿಲ್ಡರ್‌ಗಳು, ರಾಜಕಾರಣಿಗಳು ಸೇನೆಯ ದಂಡು ಪ್ರದೇಶಗಳ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ದಿಲ್ಲಿ, ಮುಂಬಯಿ, ಲಖನೌ, ಕೋಲ್ಕತ, ಅಂಬಾಲಾ ಮತ್ತು ಇತರ ಪ್ರಮುಖ ನಗರ ಪ್ರದೇಶಗಳಲ್ಲಿ ಈಗಾಗಲೇ ಭೂಮಿಯ ತೀವ್ರ ಕೊರತೆ ಉಂಟಾಗಿದ್ದು ರಿಯಲ್ ಎಸ್ಟೇಟ್‌ ಉದ್ಯಮ ಕಂಗೆಟ್ಟಿದೆ.
 • ಎಲ್ಲ 62 ಕಂಟೋನ್ಮೆಂಟ್‌ ಪ್ರದೇಶಗಳಲ್ಲಿ ಮುಚ್ಚಲಾದ ಎಲ್ಲ ರಸ್ತೆಗಳನ್ನು ಸಾರ್ವಜನಿಕ ಬಳಕೆಗೆ ತೆರೆಯುವಂತೆ ರಕ್ಷಣಾ ಸಚಿವಾಲಯದ ನಿರ್ಧಾರವನ್ನು ಮಿಲಿಟರಿ ಸಮುದಾಯದ ಬಹುಮಂದಿ ಈಗಾಗಲೇ ವಿರೋಧಿಸಿದ್ದಾರೆ.
 • ರಕ್ಷಣಾ ಸಚಿವಾಲಯದ ಅಧೀನದಲ್ಲಿ ದೇಶಾದ್ಯಂತ ಒಟ್ಟು3 ಲಕ್ಷ ಎಕರೆ ಭೂಮಿಯಿದ್ದು, ಈ ಪೈಕಿ ಸುಮಾರು 2 ಲಕ್ಷ ಎಕರೆ ಭೂಮಿ 19 ರಾಜ್ಯಗಳಲ್ಲಿರುವ 62 ಕಂಟೋನ್ಮೆಂಟ್‌ಗಳ ವ್ಯಾಪ್ತಿಗೆ ಸೇರಿದೆ.
 • ಬಹುತೇಕ ಕಂಟೋನ್ಮೆಂಟ್‌ಗಳು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾಗಿದ್ದು, ಜನವಸತಿ ಪ್ರದೇಶ ಅಥವಾ ಪಟ್ಟಣಗಳ ಹೊರವಲಯದಲ್ಲಿವೆ.
 • ಆದರೆ ಇದೀಗ ನಗರೀಕರಣದ ಭರಾಟೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಟೋನ್ಮೆಂಟ್‌ ಪ್ರದೇಶಗಳು ನಗರಗಳ ಒಳಗೆ ಬಂದುಬಿಟ್ಟಿವೆ.
 • ಸ್ವಾತಂತ್ರ್ಯದ ಬಳಿಕ ಕಂಟೋನ್ಮೆಂಟ್‌ ಸ್ಥಾಪನೆಯ ಕಲ್ಪನೆಯಿಂದ ಸೇನೆ ಕ್ರಮೇಣ ದೂರ ಸರಿದಿದೆ. ಕಂಟೋನ್ಮೆಂಟ್‌ ಪ್ರದೇಶಗಳಲ್ಲಿ ಸೇನಾ ಸಿಬ್ಬಂದಿಗಳು ಮತ್ತು ನಾಗರಿಕ ಅಧಿಕಾರಿಗಳ ನಡುವೆ ಘರ್ಷಣೆ ಆಗಾಗ ನಡೆಯುತ್ತಲೇ ಇರುತ್ತವೆ.
 • ಕಂಟೋನ್ಮೆಂಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಹಲವು ಅರೆಮಿಲಿಟರಿ ಸಮಿತಿಗಳು ಮತ್ತು ಸಿಎಜಿ ವರದಿಗಳು ಪ್ರತಿಕೂಲವಾಗಿವೆ. ವಿಶೇಷ ಕಂಟೋನ್ಮೆಂಟ್‌ ಕಾಯ್ದೆಯ ಅಡಿಯಲ್ಲಿ ಈ ದಂಡು ಪ್ರದೇಶಗಳು ತಮ್ಮದೇ ಆದ ಕಾನೂನು ಮತ್ತು ಆಡಳಿತ ವ್ಯವಸ್ಥೆ ಹೊಂದಿವೆ. ಈ ಅವಕಾಶಗಳನ್ನೇ ದುರುಪಯೋಗಪಡಿಸಿಕೊಂಡು ಅನಧಿಕೃತ ನಿರ್ಮಾಣ, ಅತಿಕ್ರಮಣ ಹಾಗೂ ಅಕ್ರಮ ಲೀಸ್‌ಗಳಂತಹ ಪ್ರಕರಣಗಳು ನಡೆದಿವೆ.
 • ಲೀಸ್‌ಗಳ ಅವಧಿ ಮುಗಿದಿದ್ದಲ್ಲಿ ಭಾರತ ಸರಕಾರ ಈ ಭೂಮಿಗಳನ್ನು ವಶಪಡಿಸಿಕೊಂಡು ಸೇನೆಯ ಮೂಲಸೌಕರ್ಯ ವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ.
 • ಕಂಟೋನ್ಮೆಂಟ್‌ ವ್ಯಾಪ್ತಿ ಒಳಗೆ ವಾಸಿಸುತ್ತಿರುವ ಜನತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
 • ‘ಜಿಎಸ್‌ಟಿ ಜಾರಿಯೊಂದಿಗೆ ಕಂಟೋನ್ಮೆಂಟ್‌ಗಳ ವ್ಯಾಪ್ತಿಯಲ್ಲಿ ಟೋಲ್‌ ಸಂಗ್ರಹಣಾ ವ್ಯವಸ್ಥೆಯೂ ರದ್ದಾಗಿದೆ. ಹೀಗಾಗಿ ಕಂಟೋನ್ಮೆಂಟ್‌ಗಳ ನಿರ್ವಹಣೆಗೆ ನಿಧಿಯ ಕೊರತೆಯೂ ಕಾಡುತ್ತಿದೆ. ಅಲ್ಲದೆ ರಾಜ್ಯ ಸರಕಾರಗಳು ಜಿಎಸ್‌ಟಿ ಆದಾಯವನ್ನು ಕಂಟೋನ್ಮೆಂಟ್‌ ಮಂಡಳಿಗಳ ಜತೆ ಹಂಚಿಕೊಳ್ಳಲು ನಿರಾಕರಿಸುತ್ತಿವೆ’ .

ಕಳಿಂಗಾ ಇನ್​ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್

 • ಸುದ್ದಿಯಲ್ಲಿ ಏಕಿದೆ? ಕಳಿಂಗಾ ಇನ್​ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್​ನಲ್ಲಿ (ಕೆಐಎಸ್​ಎಸ್) ಉತ್ಕಲ್​ವುಣಿ ಪಂಡಿತ್ ಗೋಪಬಂಧು ದಾಸ್ ಚೇರ್ ಮತ್ತು ಸಂಶೋಧನಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿ ಮತ್ತು ದಿ ಸಮಾಜ ಪತ್ರಿಕೆಯ ಬೋರ್ಡ್ ಆಫ್ ಮ್ಯಾನೇಜ್​ವೆುಂಟ್ ಅಧ್ಯಕ್ಷ ದೀಪಕ್ ಮಾಳ್ವಿಯಾ ಕೇಂದ್ರ ಉದ್ಘಾಟಿಸಿದರು.
 • ವಿದ್ಯಾರ್ಥಿಗಳು ಲೋಕೋಪಕಾರಿ ವ್ಯಕ್ತಿಗಳ ಬಗ್ಗೆ ಸಂಶೋಧನೆ ನಡೆಸಲು ಸಹಕಾರಿಯಾಗಲಿದೆ. ಸಂಶೋಧನಾ ಕೇಂದ್ರ ಲೋಕ ಸೇವಕ ಮಂಡಲದ ಮೌಲ್ಯ ಮತ್ತು ಸಾಮಾಜಿಕ ಕಳಕಳಿ ಪ್ರತಿಪಾದಿಸಲಿದೆ.

ಗೋಪಬಂಧು ದಾಸ್ ಬಗ್ಗೆ

 • ಗೋಪಬಂಧು ದಾಸ್ ಒರಿಸ್ಸಾದ ಹೆಮ್ಮೆ. ಶಿಕ್ಷಣದ ಬಗ್ಗೆ ಅತಿ ಹೆಚ್ಚಿನ ಕಾಳಜಿ ಹಾಗೂ ಪ್ರೀತಿ ಹೊಂದಿದ್ದ ಇವರು 1909ರಲ್ಲೇ ಸತ್ಯಬದಿಯಲ್ಲಿ ಬಾಕುಲ್ ಬನಾ ವಿದ್ಯಾಲಯ ಪ್ರಾರಂಭಿಸಿದ್ದರು. ಅವಕಾಶ ವಂಚಿತರ ಅಭಿವೃದ್ಧಿ ಮತ್ತು ಎಲ್ಲ ಮಗುವಿಗೂ ಶಿಕ್ಷಣ ಗೋಪಬಂಧು ದಾಸ್ ಅವರ ಜೀವನ ಗುರಿಯಾಗಿತ್ತು.
 • ಇದೇ ಮಾರ್ಗದಲ್ಲಿ ಕೆಐಎಸ್​ಎಸ್ ನಡೆಯುತ್ತಿದ್ದು, ಶಿಕ್ಷಣದ ಮೂಲಕ ಅವಕಾಶವಂಚಿತ ಮಕ್ಕಳ ಸಬಲೀಕರಣ ಮಾಡುತ್ತಿದೆ. ಸಂಶೋಧನಾ ಕೇಂದ್ರದ ಮೂಲಕ ಗೋಪಬಂಧು ಅವರ ಜೀವನದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ಅಗ್ರಿ ಇಂಟೆಕ್ಸ್ 2018

 • ಸುದ್ದಿಯಲ್ಲಿ ಏಕಿದೆ? ಕಳೆದ ಹಲವು ದಶಕಗಳಿಂದ ವಿಶ್ವದ ನೂರಕ್ಕೂ ಅಧಿಕ ರಾಷ್ಟ್ರಗಳಲ್ಲಿ ಛಾಪು ಮೂಡಿಸಿರುವ ಸ್ವೀಡನ್ ಮೂಲದ ಹಸ್ಕ್​ವರ್ನಾ ಕಂಪನಿ ಭಾರತದಲ್ಲೂ ಕೃಷಿ, ಕೈತೋಟಕ್ಕೆ ಬಳಸುವ ಉತ್ಪನ್ನಗಳನ್ನು ಪ್ರದರ್ಶಿಸಿದೆ.
 • ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಕೊಡಿಶಿಯಾ ಟ್ರೇಡ್ ಫೇರ್ ಕಾಂಪ್ಲೆಕ್ಸ್​ನಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಕೃಷಿ ಮೇಳ ಅಗ್ರಿ ಇಂಟೆಕ್ಸ್ 2018 ನಡೆಯುತ್ತಿದ್ದು, ಆಹಾರ ಸಂಸ್ಕರಣೆ, ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನ, ಉಪಕರಣಗಳನ್ನು ಕೃಷಿಕರಿಗೆ ಪರಿಚಯಿಸುವುದು ಮೇಳದ ಉದ್ದೇಶವಾಗಿದೆ.
 • ಇಲ್ಲಿ ಮಳಿಗೆ ಸಂಖ್ಯೆ 30 ಹಾಗೂ 35ರಲ್ಲಿ ಕೃಷಿ, ಕೈತೋಟ ಹಾಗೂ ಮರ ಕಡಿಯುವ ಆಧುನಿಕ ಉತ್ಪನ್ನಗಳನ್ನು ಹಸ್ಕ್​ವರ್ನಾ ಪ್ರದರ್ಶನಕ್ಕಿರಿಸಿದೆ.
 • ಪ್ರದರ್ಶನದ ಜತೆಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಉತ್ಪನ್ನಗಳ ಕಾರ್ಯವೈಖರಿ ತಿಳಿದುಕೊಳ್ಳಲು ಲೈವ್ ಡೆಮೋ, ಸಿಮ್ಯುಲೇಷನ್​ಗಳನ್ನೂ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ, ಇಂಜಿನಿಯರಿಂಗ್ ಉತ್ಪನ್ನಗಳು ರೈತರಿಗೆ ದೊರಕಿದಲ್ಲಿ ಕೃಷಿ ಉತ್ಪಾದನೆ ಅಧಿಕವಾಗಲಿದೆ ಎನ್ನುವುದು ಹಸ್ಕ್​ವರ್ನಾ ಅಭಿಪ್ರಾಯವಾಗಿದೆ.
 • ಈ ಹಿನ್ನೆಲೆಯಲ್ಲೇ ಭಾರತದ ಭೌಗೋಳಿಕ ಪ್ರದೇಶಕ್ಕೆ ಸರಿಹೊಂದುವಂತಹ ಗುಣಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸಿದೆ. ಪ್ರಸ್ತುತ ಚೆನ್ನೈನಲ್ಲಿ ಹಸ್ಕ್​ವರ್ನಾ ಇಂಡಿಯಾ ಸ್ಥಾಪಿತವಾಗಿದ್ದು, ದೇಶಾದ್ಯಂತ 100 ಡೀಲರ್​ಗಳನ್ನು ಈಗಾಗಲೇ ಹೊಂದಿದೆ. ಮಾರುಕಟ್ಟೆ ಅಧ್ಯಯನ ನಡೆಸಿ ಕೃಷಿಕರಿಗೆ ಅಗತ್ಯವಿರುವ ಹಲವು ಉತ್ಪನಗಳನ್ನು ಪರಿಚಯಿಸಿದೆ.
 • ಚೈನ್​ಸಾ, ಬ್ರಷ್ ಕಟ್ಟರ್ಸ್, ಟ್ರಿಮ್ಮರ್ಸ್, ಬ್ಲೋವರ್ಸ್, ಮಿಸ್ಟರ್ಸ್, ಸ್ಪೇಯರ್ಸ್, ರೈಡ್ ಆನ್ ಮೂವರ್ಸ್, ವಾಕ್ ಬಿಹೈಂಡ್ ಲಾನ್ ಮೂವರ್ಸ್ ಮತ್ತು ರೋಬಾಟಿಕ್ ಮೂವರ್ಸ್ ಹೀಗೆ ಹೈ ಎಂಡ್ ಪವರ್ ಉತ್ಪನ್ನಗಳನ್ನು ಹಸ್ಕ್​ವರ್ನಾ ಉತ್ಪಾದಿಸುತ್ತಿದೆ. ಈ ಉತ್ಪನ್ನಗಳು ಪೆಟ್ರೋಲ್ ಇಂಜಿನ್ ಅಥವಾ ಬ್ಯಾಟರಿ ಚಾಲಿತವಾಗಿದ್ದು, ಉತ್ಪನ್ನಗಳಿಗೆ ರಕ್ಷಣಾ ಕವಚ, ಬಿಡಿಭಾಗಗಳನ್ನೂ ತಯಾರಿಸುತ್ತಿದೆ.
 • ಕೃಷಿ ಯೋಜನೆಗಳ ಮೂಲಕ ಸಬ್ಸಿಡಿ ದರದಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡುವುದು ಕಂಪನಿಯ ಉದ್ದೇಶವಾಗಿದೆ. ಹೀಗಾಗಿ ರೈತರಿಗೆ ಕೈಗೆಟಕುವ ದರದಲ್ಲಿ ಹೊಸ ಉತ್ಪನ್ನಗಳು ದೊರೆಯಬೇಕು ಎನ್ನುವ ದೃಷ್ಟಿಯಿಂದ ಹಸ್ಕ್​ವರ್ನಾ ಸರ್ಕಾರಗಳ ಜತೆ ಚರ್ಚೆ ನಡೆಸುತ್ತಿದೆ.

ಜೈ ಜಗನ್ನಾಥ

 • ಸುದ್ದಿಯಲ್ಲಿ ಏಕಿದೆ? ಅಹಮದಾಬಾದ್​ನ ಜಗನ್ನಾಥ ದೇವಸ್ಥಾನದಿಂದ ಆರಂಭಗೊಂಡ ಈ ಬಾರಿಯ 141ನೇ ರಥ ಯಾತ್ರೆಯ ‘ಮಂಗಳ ಆರತಿ’ಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸಿದ್ದರು

ರಥಯಾತ್ರೆ ಇತಿಹಾಸ

 • ಹನ್ನೆರಡನೇ ಶತಮಾನದಿಂದಲೂ ನಡೆದುಕೊಂಡು ಬಂದಿರುವ ಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರಾರಿಗೆ ಮೂರು ಬೃಹತ್ ಮರದ ರಥಗಳನ್ನು ನಿರ್ವಿುಸಿ ಭಕ್ತರು ಎಳೆಯುತ್ತಾರೆ.
 • ಒಡಿಶಾದಲ್ಲಿ ಜಗನ್ನಾಥ ದೇವಸ್ಥಾನದಿಂದ 3 ಕಿ.ಮೀ. ದೂರದ ಗುಂಡಿಚಾ ದೇವಸ್ಥಾನವರೆಗೆ ಮೂರು ರಥಗಳನ್ನು ಎಳೆಯಲಾಗುತ್ತದೆ. ಲಕ್ಷಾಂತರ ಭಕ್ತರು ಜಗನ್ನಾಥ ದೇವರನ್ನು ಸ್ಮರಿಸುತ್ತಾ ರಥ ಎಳೆಯುತ್ತಾರೆ.
 • ಕಳೆದ ಬಾರಿ ಗೋಪಾಲಕನಾಗಿ ಜಗನ್ನಾಥ ದೇವರಿಗೆ ಅಲಂಕಾರ ಮಾಡಲಾಗಿತ್ತು. ಈ ಬಾರಿ ರಾಜನಂತೆ ಅಲಂಕರಿಸಲಾಗುತ್ತಿರುವುದು ವಿಶೇಷ.
Related Posts
Karnataka Current Affairs – KAS/KPSC Exams – 2nd Oct 2017
Green nod to Karnataka's Rs 1,561-cr Harohalli industrial park The Centre has given its green light to the combined development of Harohalli industrial zone in Ramnagara district of Karnataka entailing an ...
READ MORE
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಂಬಳ ಸುದ್ಧಿಯಲ್ಲಿ ಏಕಿದೆ ? ಕಂಬಳ ಹಾಗೂ ಇತರೆ ಗೂಳಿ ಮತ್ತು ಎತ್ತಿನ ಗಾಡಿ ಸ್ಪರ್ಧೆಗಳಿಗೆ ಅನುಮತಿ ನೀಡಿದ್ದ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ್ದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ - 2017ಕ್ಕೆ ಪೆಟಾ ಮತ್ತೆ ತಗಾದೆ ತೆಗೆದಿದೆ. ರಾಜ್ಯ ...
READ MORE
Karnataka Current Affairs – KAS/KPSC Exams – 9th March 2018
‘RERA has registered 1,331 projects in Karnataka’ The Karnataka Real Estate Regulatory Authority (Karnataka RERA) has successfully registered 1,331 projects out of 1,982 applications in the last seven months in the ...
READ MORE
National Current Affairs – UPSC/KAS Exams – 5th November 2018
Water ATMs may help in bridging safe water gap For thousands of communities across India, the process of getting drinking water is now the same as the process of getting cash: ...
READ MORE
Aviation MRO in the country is currently worth $ 700 million and is set to reach $ 2 billion by 2020 Maintenance, repair and operations(MRO)  involves fixing any sort of mechanical, ...
READ MORE
Karnataka Current Affairs – KAS/KPSC Exams – 25th – 26th Oct 2017
Kittur Fort to become tourist spot Kittur Utsav that celebrates Queen Kittur Channamma’s victory over the East India company’s troupes in 1824, was organised in Channammana Kittur on Monday. The three-day ...
READ MORE
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚಾಲ್ತಿ ಖಾತೆ ಕೊರತೆ ಸುದ್ದಿಯಲ್ಲಿ ಏಕಿದೆ? ಭಾರತದ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ)ದಲ್ಲಿ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ. 5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಚಾಲ್ತಿ ಖಾತೆ ಕೊರತೆಗೆ ಕಾರಣಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಹಿನ್ನಡೆ ...
READ MORE
19th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ರಾಷ್ಟ್ರೀಯ ಉದ್ಯಾನ: ಸುರಕ್ಷತಾ ವಲಯದಲ್ಲಿ ಗಣಿಗಾರಿಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದಲ್ಲಿರುವ ರಾಗಿಹಳ್ಳಿ ಬಳಿ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ವೃಕ್ಷಾ ಪ್ರತಿಷ್ಠಾನ ಆರೋಪಿಸಿದೆ. ‘ರಾಗಿಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ...
READ MORE
National Current Affairs – UPSC/KAS Exams- 3rd November 2018
Turga Pumped Storage in West Bengal Topic: Infrastructure Development IN NEWS: India and Japan  signed a loan agreement of Rs 1,817 crore for the construction of the Turga Pumped Storage in West ...
READ MORE
National Current Affairs – UPSC/KAS Exams- 20th September 2018
Southern Zonal Council  Why in news? The 28th meeting of the Southern Zonal Council was recently held under the Chairmanship of the Union Home Minister Shri Rajnath Singh in Bengaluru. About zonal councils Zonal ...
READ MORE
Karnataka Current Affairs – KAS/KPSC Exams – 2nd
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams – 9th
National Current Affairs – UPSC/KAS Exams – 5th
Maintenance, repair and operations(MRO) industry
Karnataka Current Affairs – KAS/KPSC Exams – 25th
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
19th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
National Current Affairs – UPSC/KAS Exams- 3rd November
National Current Affairs – UPSC/KAS Exams- 20th September

Leave a Reply

Your email address will not be published. Required fields are marked *