20th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಮೇಘಾಲಯನ್‌ ಯುಗ

 • ಸುದ್ಧಿಯಲ್ಲಿ ಏಕಿದೆ? ಇದೇನಿದುಮೇಘಾಲಯನ್‌ ಯುಗ ಎಂಬ ಅಚ್ಚರಿಯೇ? ಹೌದು, ನಾವೀಗ ಜೀವಿಸುತ್ತಿರುವುದು ಮೇಘಾಲಯನ್‌ ಯುಗದಲ್ಲಿ. ಮೇಘಾಲಯನ್‌ ಯುಗವು 4,200 ವರ್ಷಗಳ ಹಿಂದೆ ಆರಂಭಗೊಂಡಿದೆ. ಹೀಗೆಂದು ವಿಜ್ಞಾನಿಗಳೇ ಷರಾ ಬರೆದಿದ್ದಾರೆ.
 • ಭೂವಿಜ್ಞಾನಿಗಳು ಸೃಷ್ಟಿಸಿರುವ ಭೂಮಿಯ ಭೂವೈಜ್ಞಾನಿಕ ಇತಿಹಾಸದ ಹೊಸ ಅಧ್ಯಾಯವೇ ಮೇಘಾಲಯನ್‌ ಯುಗ.
 • ನಾವೀಗ ಹೊಲೊಸಿನ್‌ನಲ್ಲಿ ಜೀವಿಸುತ್ತಿದ್ದೇವೆ.
 • ಹೊಲೊಸಿನ್‌ ಎಂಬುದು 11,700 ವರ್ಷಗಳ ಹಿಂದೆ ಏನೇನಾಯ್ತು ಎಂಬುದನ್ನು ಪ್ರತಿಬಿಂಬಿಸುವ ದೀರ್ಘಾವಧಿ ಭಾಗವಾಗಿದೆ. ಈ ಹೊಲೊಸಿನ್‌ಅನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಗ್ರೀನ್‌ಲ್ಯಾಂಡಿಯನ್‌ 2. ನಾರ್ಥ್‌ಗ್ರಿಪ್ಪಿಯನ್‌ ಮತ್ತು 3. ಮೇಘಾಲಯನ್‌ ಯುಗ.
 • 6 ಶತಕೋಟಿ ವರ್ಷಗಳ ಅಸ್ತಿತ್ವದ ಭೂಮಿಯನ್ನು ನಿರ್ದಿಷ್ಟ ಅವಧಿಗೆ ತಕ್ಕಂತೆ ವಿಭಾಗ ಮಾಡಲಾಗಿದೆ. ಪ್ರತಿ ವಿಭಾಗವು ಭೂಗೋಳ ಖಂಡಗಳ ವಿಭಜನೆ, ಹವಾಮಾನ ಬದಲಾವಣೆ ಮತ್ತು ನಿರ್ದಿಷ್ಟ ರೀತಿಯ ಪ್ರಾಣಿಗಳು ಮತ್ತು ಸಸ್ಯಗಳ ಉಗಮ ಇತ್ಯಾದಿಗಳನ್ನು ಮಾನದಂಡದಲ್ಲಿಟ್ಟುಕೊಂಡು ಮಾಡಿದ್ದಾಗಿದೆ.
 • ಹೊಲೊಸಿನ್‌ ಇಪೊಕ್‌ನ ಮೂರು ಯುಗಗಳು ನದಿ ತೀರದಲ್ಲಿ, ನೀರಿನ ಆಳದಲ್ಲಿ, ಮಂಜುಗಡ್ಡೆಯಲ್ಲಿ ಮತ್ತು ಪಾರದರ್ಶಕ ಹರಳಿನ ರೂಪದ ಕ್ಯಾಲ್ಸಿಯಂ ಕಾರ್ಬೋನೇಟ್‌ ಖನಿಜಗಳಲ್ಲಿ ಸಿಕ್ಕಿದ ಅಪರೂಪದ ಸಂಪತ್ತುಗಳನ್ನು ಪ್ರತಿನಿಧಿಸುತ್ತವೆ.

ಮೂರು ಯುಗಗಳ ವಿವರ 
1. ಗ್ರೀನ್‌ಲ್ಯಾಂಡಿಯನ್‌: 11,700 ವರ್ಷಗಳ ಹಿಂದೆ ಪೂರ್ವ ಹೊಲೊಸಿನ್‌ ಹಸಿರು ಯುಗ ಅಂದರೆ ಅರ್ಲಿ ಹೊಲೊಸಿನ್‌ ಗ್ರೀನ್‌ಲ್ಯಾಂಡಿಯನ್‌ ಏಜ್‌ (Early Holocene Greenlandian Age) ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.
2. ನಾರ್ಥ್‌ಗ್ರಿಪ್ಪಿಯನ್‌: 8,300 ವರ್ಷಗಳ ಹಿಂದೆ ಮಧ್ಯಮ ಹೊಲೊಸಿನ್‌ ಉತ್ತರ ಗ್ರಿಪ್ಪಿಯನ್‌ ಯುಗ ಆರಂಭಗೊಂಡಿತು. ಇದನ್ನು ಮಿಡಲ್‌ ಹೊಲೊಸಿನ್‌ ನಾರ್ಥ್‌ಗ್ರಿಪ್ಪಿಯನ್‌ ಏಜ್‌ (Middle Holocene Northgrippian Age) ಎಂದು ಗುರುತಿಸಲಾಗಿದೆ.
3. ಮೇಘಾಲಯನ್‌: ಪ್ರಸ್ತುತ 4,200 ವರ್ಷಗಳ ಹಿಂದೆ ಆರಂಭಗೊಂಡಿದ್ದೇ ಮೇಘಾಲಯನ್‌ ಯುಗ.

 • ಈ ಮೂರು ಯುಗಗಳಿಗೆ ಅಂತಾರಾಷ್ಟ್ರೀಯ ಆಯೋಗವು ಮನ್ನಣೆ ನೀಡಿದೆ. ಪ್ರಸಿದ್ಧ ಇಂಟರ್‌ನ್ಯಾಷನಲ್‌ ಕ್ರೋನೊಸ್ಟ್ರೆಟಿಗ್ರಾಫಿಕ್‌ ಚಾರ್ಟ್‌ನ ಭೂವಿಜ್ಞಾನ ಇತಿಹಾಸ ವಿಭಾಗದಲ್ಲಿ ಹೊಸ ಸಂಶೋಧನೆಯನ್ನು ಸೇರಿಸಲಾಗಿದೆ.

ಮೇಘಾಲಯ ಎಂದು ಹೆಸರು ಬಂದಿದ್ದು ಹೇಗೆ? 

 • ಈ ಎಲ್ಲ ಸಂಶೋಧನೆಗೆ ಮೂಲ ಭಾರತದ ಮೇಘಾಲಯದ ಗುಹೆಯೊಂದರಲ್ಲಿ ಪತ್ತೆಯಾದ ಸ್ಟ್ಯಾಲಾಗ್ಮಿಟ್‌. (*ಸ್ಟ್ಯಾಲಾಗ್ಮಿಟ್‌, ಅಂದರೆ ಗುಹೆಯೊಳಗೆ ತೊಟ್ಟಿಕ್ಕುವ ಕ್ಯಾಲ್ಸಿಯಂ ಲವಣಯುಕ್ತ ನೀರಿನ ಹನಿಗಳಿಂದ ಉದ್ಭವವಾಗುವ ದಿಬ್ಬ) ಹಾಗಾಗಿ ಇದಕ್ಕೆ ಮೇಘಾಲಯನ್‌ ಯುಗ ಎಂದು ಹೆಸರಿಸಲಾಗಿದೆ.
 • ಈ ದಿಬ್ಬವು ಸುಮಾರು 4,200 ವರ್ಷಗಳ ಹಿಂದಿನ ಹವಾಮಾನ ಸಂಬಂಧಿತ ಅಚ್ಚರಿಯ ಅಂಶಗಳನ್ನು ಹೇಳುತ್ತಿದೆ. ಮೇಘಾಲಯನ್‌ ಯುಗ ಆರಂಭಗೊಂಡಂದಿನಿಂದ ಇಲ್ಲಿಯವರೆಗಿನ ಹವಾಮಾನ ಬದಲಾವಣೆಯ ಅಂಶಗಳು ಇದರಲ್ಲಿ ಅಡಕವಾಗಿದ್ದು ಭಾರಿ ಕುತೂಹಲ ಮೂಡಿಸಿದೆ.
 • ಈಜಿಪ್ಟ್‌ನಿಂದ ಚೀನಾವರೆಗಿನ ಕೃಷಿ ನಾಗರಿಕತೆಯನ್ನು ಧ್ವಂಸಗೊಳಿಸಿದ ಭೀಕರ ಜಾಗತಿಕ ಬರಗಾಲದೊಂದಿಗೆ ಮೇಘಾಲಯನ್‌ ಯುಗ ಆರಂಭಗೊಂಡಿತು ಎಂಬ ವಿಚಾರವು ಈ ದಿಬ್ಬದಿಂದ ಬಹಿರಂಗಗೊಂಡಿದೆ.
 • ಮೇಘಾಲಯನ್‌ ಯುಗ ಅತ್ಯಂತ ವಿಶಿಷ್ಟವಾದದ್ದು. ಏಕೆಂದರೆ ಭೂಮಿಯ ಭೂವೈಜ್ಞಾನಿಕ ಇತಿಹಾಸದಲ್ಲಿ ಇದೊಂದು ಮೊದಲ ಮಧ್ಯಂತರ ವಿರಾಮ. ಹವಾಮಾನ ಬದಲಾವಣೆಯಿಂದ ಕೃಷಿ ನಾಗರಿಕತೆ ಪುನಃ ನಿರ್ಮಾಣಗೊಳ್ಳುವ ಹೆಣಗಾಟದ ಹಂತದ ಮಹತ್ವದ ಭಾಗವಾಗಿದೆಎಂಬುದು ಅಂತಾರಾಷ್ಟ್ರೀಯ ಭೂವೈಜ್ಞಾನಿಕ ವಿಜ್ಞಾನಗಳ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಸ್ಟಾನ್ಲೇ ಫಿನ್ನಿ ಅವರ ಅಭಿಪ್ರಾಯ.
 • ಮೇಘಾಲಯದಲ್ಲಿ ಪತ್ತೆಯಾದ ಅಪರೂಪದ ದಿಬ್ಬದಿಂದ 7 ಖಂಡಗಳ ಹವಾಮಾನ ಸಂಚಯಗಳನ್ನು ಕಂಡುಕೊಳ್ಳಬಹುದಾಗಿದೆ.
 • 200 ವರ್ಷಗಳ ಭೀಕರ ಬರ ಮಾನವ ವಲಸೆಗೆ ಕಾರಣವಾಯಿತು. ಈಜಿಪ್ಟ್‌, ಗ್ರೀಸ್‌, ಸಿರಿಯಾ, ಪ್ಯಾಲೆಸ್ತೀನ್‌, ಮೆಸಪೊಟೆಮಿಯಾ, ಸಿಂಧೂ ನದಿ ಮತ್ತು ಯಾಂಗ್‌ತಾಜ್‌ ನದಿ ತೀರದ ನಾಗರಿಕತೆಗಳು ಜೀವನಕ್ಕಾಗಿ ವಲಸೆ ಹಾದಿ ಹಿಡಿದವು. ಜಾಗತಿಕ ಹವಾಮಾನ ಬದಲಾವಣೆಯು ಸಾಗರ ಮತ್ತು ವಾಯುಮಂಡಲದ ಪರಿಚಲನೆಯನ್ನು ಕೆರಳಿಸಿತು ಎಂಬ ವಿಚಾರವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ

 • ಸುದ್ಧಿಯಲ್ಲಿ ಏಕಿದೆ?ಉತ್ತಮ ಮಳೆಯಾದ ವರ್ಷದಲ್ಲಿ ತಮಿಳುನಾಡಿಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಅತಂತ್ರ ಸ್ಥಿತಿಗೆ ತಲುಪಿದೆ. ವಿಸ್ತ್ರತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದ ಬಳಿಕವೂ ಸಮರ್ಥ ಕಾನೂನು ಹೋರಾಟ ನಡೆಸದ ಕಾರಣ ರಾಜ್ಯಕ್ಕೆ ಐತಿಹಾಸಿಕ ಹಿನ್ನಡೆಯಾಗಿದೆ.
 • ಈ ಬಾರಿ ಕಾವೇರಿ ಕಣಿವೆಯಲ್ಲಿ ಭರ್ಜರಿ ಮಳೆ ಆಗುತ್ತಿರುವುದರಿಂದ ತಮಿಳುನಾಡಿನತ್ತ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಭವಿಷ್ಯದಲ್ಲಾದರೂ ಇಂಥ ಸನ್ನಿವೇಶದಲ್ಲಿ ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳಲು ಮೇಕೆದಾಟು ಡ್ಯಾಮ್‌ನ ಅವಶ್ಯಕತೆಯಿದೆ. ಆದರೆ, ಸದ್ಯಕ್ಕೆ ಈ ಯೋಜನೆ ಅನುಷ್ಠಾನ ಅನುಮಾನವಾಗಿದೆ.
 • ಮೇಕೆದಾಟಿನಲ್ಲಿ ಜಲಾಶಯ ನಿರ್ಮಿಸಿದರೆ5 ಟಿಎಂಸಿ ನೀರು ಸಂಗ್ರಹಿಸಬಹುದು. ಇದರಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನೂ ಪರಿಹರಿಸಿಕೊಳ್ಳಬಹುದು. ಹಾಗಾಗಿ ಕಳೆದ ಸರಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ 5,912 ಕೋಟಿ ರೂ. ಪ್ರಸ್ತಾವನೆ ತಯಾರಿಸಲಾಗಿತ್ತು. 2017ರ ಫೆಬ್ರವರಿಯಲ್ಲಿ ಸಚಿವ ಸಂಪುಟವೂ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಪ್ರಸ್ತಾವಕ್ಕೆ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಅನುಮತಿ ಅಗತ್ಯ. 4,996 ಹೆಕ್ಟೇರ್‌ ಅರಣ್ಯ ನಾಶವಾಗುವುದರಿಂದ ಕೇಂದ್ರ ಪರಿಸರ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು
 • ಮೇಕೆದಾಟು ಜಲಾಶಯ ನಿರ್ಮಾಣವಾದರೆ ಕಾವೇರಿ ಸಂಘರ್ಷ ಬಹುತೇಕ ಇತ್ಯರ್ಥವಾಗುತ್ತದೆ. ಇದೇ ಕಾರಣಕ್ಕೆತಮಿಳುನಾಡು ತಕರಾರು ತೆಗೆದಿದೆ. ಜಲ ವರ್ಷದ ಕ್ಯಾಲೆಂಡರ್‌ನಂತೆ ಜೂನ್‌ನಿಂದ ಮೇ ವರೆಗೆ ಪ್ರತಿ ತಿಂಗಳೂ ನಿಗದಿ ಪಡಿಸಿದಷ್ಟು ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಮಳೆ ಕೊರತೆಯಾದರೆ ಈ ಗುರಿ ತಲುಪುವುದು ಸವಾಲು. ವಾಡಿಕೆಗಿಂತ ಅಧಿಕ ಮಳೆಯಾದಾಗ ಹೆಚ್ಚುವರಿ ನೀರು ತಮಿಳುನಾಡು ಪಾಲಾಗುತ್ತದೆ. ಕಳೆದ 10 ವರ್ಷದಲ್ಲಿ 1,100 ಟಿಎಂಸಿಗೂ ಅಧಿಕ ನೀರು ಹರಿದು ಹೋಗಿದೆ. ಈ ಪೈಕಿ 2007-08 ರಲ್ಲಿ 63 ಟಿಎಂಸಿ ಹೆಚ್ಚುವರಿಯಾಗಿ ಹೋಗಿತ್ತು. ಈ ಬಾರಿಯೂ ಜೂನ್‌, ಜುಲೈ ಕೋಟಾಕ್ಕಿಂತ 20 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದಿದೆ.
 • ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದರೆ ಹಿಂಗಾರಿನಲ್ಲಿ ಕೊರತೆಯಾಗುತ್ತದೆ. ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಪಕ್ಕದ ರಾಜ್ಯಕ್ಕೆ ನಿಗದಿತ ಪ್ರಮಾಣದ ನೀರು ಕೊಡುವುದು ಕಷ್ಟವಾಗುತ್ತದೆ. ಜನವರಿಯಿಂದ ಮೇ ವರೆಗಿನ ಮುಂಗಾರು ಪೂರ್ವ ಅವಧಿಯಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಒಟ್ಟಾರೆಯಾಗಿ ಮುಂಗಾರಿನಲ್ಲಿ ವಾಡಿಕೆಯ ಶೇ.70, ಹಿಂಗಾರಿನಲ್ಲಿ ಶೇ.18 ಹಾಗೂ ಮುಂಗಾರು ಪೂರ್ವದಲ್ಲಿ ಶೇ.14 ರಷ್ಟು ಮಳೆಯಾಗುತ್ತದೆ. ಅದರಲ್ಲೂ ಕಾವೇರಿ ಪಾತ್ರದ ಜಲಾಶಯಗಳ ಮೇಲ್ಭಾಗದಲ್ಲಿ ವಾಡಿಕೆಯ ಶೇ.55 ರಷ್ಟು ಮಳೆ ಜೂನ್‌, ಜುಲೈನಲ್ಲೇ ಬೀಳುತ್ತದೆ.

ಅನುಕೂಲವೇನು? 

 • ವಾಸ್ತವ ಹೀಗಿರುವಾಗ ತಮಿಳುನಾಡಿಗೆ ಹೆಚ್ಚುವರಿಯಾಗಿ ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳಲು ಮೇಕೆದಾಟಿನಲ್ಲಿ ಸಮಾನಾಂತರ ಜಲಾಶಯ ತಲೆಯೆತ್ತಿ ನಿಂತರೆ ಒಳ್ಳೆಯದು.
 •  ಸಂಗ್ರಹಿಸಿಕೊಂಡ ನೀರನ್ನು ತಿಂಗಳವಾರು ನಿಗದಿತ ಪ್ರಮಾಣದಂತೆ ಬಿಡುಗಡೆ ಮಾಡಲು ನೆರವಾಗುತ್ತದೆ.
 • ತಮಿಳುನಾಡಿಗೆ ನೀರು ಕೊಟ್ಟ ಬಳಿಕವೂ ಉಳಿದುಕೊಂಡರೆ ರಾಜ್ಯವೇ ಅದನ್ನು ಬಳಸಿಕೊಳ್ಳಬಹುದು.
 • ವಿದ್ಯುತ್‌ ಉತ್ಪಾದನೆ ಮಾಡಬಹುದು.
 • ರಾಜ್ಯದಲ್ಲಿ ಕಾವೇರಿ ಕಣಿವೆ ವ್ಯಾಪ್ತಿಯ ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರ, ಕಬಿನಿ ಜಲಾಶಯಗಳ ಲೈವ್‌ ಸ್ಟೋರೇಜ್‌ ಸಾಮರ್ಥ್ಯ‌ 104.55 ಟಿಎಂಸಿ. ತಮಿಳುನಾಡಿನ ಮೆಟ್ಟೂರು ಡ್ಯಾಮ್‌ನಲ್ಲಿ 93.47 ಟಿಎಂಸಿ ಸಂಗ್ರಹಿಸಬಹುದು.
 • ಅಧಿಕ ಮಳೆಯಾದ ವರ್ಷದಲ್ಲಿ ಈ ಜಲಾಶಯವೂ ಭರ್ತಿಯಾದಾಗ ತಮಿಳುನಾಡಿಗೂ ಪ್ರಯೋಜನವಾಗದು. ಈ ದೃಷ್ಟಿಯಿಂದ ನೋಡಿದರೆ ಮೇಕೆದಾಟಿನಲ್ಲಿ ಡ್ಯಾಮ್‌ ನಿರ್ಮಿಸಿದರೆ ಉಭಯ ರಾಜ್ಯಗಳಿಗೂ ಲಾಭ ನಿಶ್ಚಿತ.
Related Posts
16th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಸ್ವಚ್ಛ ಗ್ರಾಮ ಸಮೀಕ್ಷೆ ಸುದ್ಧಿಯಲ್ಲಿ ಏಕಿದೆ? ನಗರ ಪ್ರದೇಶಗಳಲ್ಲಿ ಸ್ವಚ್ಛ ಸರ್ವೆಕ್ಷಣೆ ನಡೆಸಿದ್ದ ಕೇಂದ್ರ ಸರ್ಕಾರ ಗ್ರಾಮೀಣ ಭಾರತದಲ್ಲಿಯೂ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ದೇಶದ ಎಲ್ಲ ಜಿಲ್ಲೆಗಳಲ್ಲಿ ಸ್ವತಂತ್ರ ಸಂಸ್ಥೆಯಿಂದ ಆಗಸ್ಟ್ 1ರಿಂದ 31ರವರೆಗೆ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಯ ಫಲಿತಾಂಶವನ್ನು ಅಕ್ಟೋಬರ್ 2ರಂದು ...
READ MORE
Karnataka will launch special drive to curb narcotics menace
Home Minister G Parameshwara said that a special drive would be launched throughout the state to check the narcotics menace. Responding to a calling attention notice tabled by Ramachandra Gowda (BJP) in ...
READ MORE
National Current Affairs – UPSC/KAS Exams- 2nd January 2019
U.S., Israel officially quit UNESCO Topic: International Relations IN NEWS: The U.S. and Israel officially quit the UN’s educational, scientific and cultural agency (UNESCO) at the stroke of midnight, the culmination of ...
READ MORE
The process of getting fish-catch data related to inland fisheries is expected to get revolutionised with the development of a mobile-based application.The app, which has been developed by the Central ...
READ MORE
NammaKPSC classroom for KPSC challengers-Changes in AnnaBhagya Scheme
What should you focus on? Name of the scheme Beneficiaries Salient features Any new changes to the existing scheme For mains: Its challenges and benifits One more kg of free rice for poor in state The state ...
READ MORE
Karnataka Current Affair – KAS/KPSC Exams – 1st October 2018
Good Samaritan Bill gets President’s nod President Ram Nath Kovind has given his assent to the Karnataka Good Samaritan and Medical Professional (Protection and Regulation During Emergency Situations) Bill, 2016. The President gave assent ...
READ MORE
National Current Affairs – UPSC/KAS Exams- 16th September 2018
National AIDS Control Organisation (NACO) study on AIDS Why in news? According to figures released by National AIDS Control Organisation (NACO) it said it would not be an easy battle to end ...
READ MORE
Amur falcon
Scientific name Falco amurensis Conservation status IUCN- Least Concern Conservation efforts in Nagaland, India Introduction Amur Falcon is a small raptor of the falcon family.Its a small, slender, pigeon-sized bird of prey, and is noteworthy for undertaking ...
READ MORE
Kodagu chosen for pilot study of National Forest Monitoring System
Forest Survey of India (FSI) has chosen Kodagu in Karnataka to implement the theoretical model of the National Forest Monitoring System (NFMS). E Vikram, deputy director, FSI, Deharadun on 2nd March ...
READ MORE
Karnataka: Landowners declare their sandalwood trees
There has been a rise in availability of sandalwood on private properties across Mysuru division, with more landowners coming forward to ‘declare’ and ‘sell’ the prized trees. This is the result ...
READ MORE
16th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka will launch special drive to curb narcotics
National Current Affairs – UPSC/KAS Exams- 2nd January
Fishery Friends- Karnataka
NammaKPSC classroom for KPSC challengers-Changes in AnnaBhagya Scheme
Karnataka Current Affair – KAS/KPSC Exams – 1st
National Current Affairs – UPSC/KAS Exams- 16th September
Amur falcon
Kodagu chosen for pilot study of National Forest
Karnataka: Landowners declare their sandalwood trees

Leave a Reply

Your email address will not be published. Required fields are marked *