23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಬ್ಲಡ್‌ ಮೂನ್‌

 • ಸುದ್ಧಿಯಲ್ಲಿ ಏಕಿದೆ?ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ.

ವಿಶೇಷತೆಯೇನು?

 • ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ನಿಮಿಷ ಕಾಣಿಸಲಿದೆ. ಇದು ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವೆಂದು ಗುರುತಿಸಲಾಗಿದೆ.
 • ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಕೊಂಡ ಬಳಿಕ ಚಂದ್ರನ ಬಣ್ಣ ನಸುಗೆಂಪು ಬಣ್ಣಕ್ಕೆ ತಿರುಗಲಿದೆ. ಜ.31 ರಂದು ಚಂದ್ರಗ್ರಹಣವಾಗಿದ್ದಾಗ ಇದೇ ರೀತಿ ಕಂಡುಬಂದಿತ್ತು. ಅಂದಿನ ಚಂದ್ರನನ್ನು ‘ಸೂಪರ್‌ ಬ್ಲಡ್‌ ಮೂನ್‌ ಎಂದು ಕರೆದರೆ, ಈ ಬಾರಿ ಗ್ರಹಣಕ್ಕೊಳಗಾಗುತ್ತಿರುವ ಚಂದ್ರನಿಗೆ ಬ್ಲಡ್‌ ಮೂನ್‌ ಎಂದು ಹೆಸರಿಸಲಾಗಿದೆ.
 • ಮಂಗಳ ಗ್ರಹವೂ ಚಂದ್ರನ ಸಮೀಪಕ್ಕೆ ಬರಲಿರುವುದು ಈ ಬಾರಿಯ ಚಂದ್ರಗ್ರಹಣದ ವಿಶೇಷ.
 • ಅತಿ ದೀರ್ಘಾವಧಿ ಕೆಂಪು ಚಂದ್ರ ಬಾನಂಗಳದಲ್ಲಿ ಗೋಚರಿಸುತ್ತಾನೆ. ನೂರು ವರ್ಷಗಳಿಗೊಮ್ಮೆ ನಭೋಮಂಡಲದಲ್ಲಿ ಇಂತಹದ್ದೊಂದು ಕೌತುಕ ಸಂಭವಿಸುತ್ತದೆ. ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ನೋಡಲು ಸಾಧ್ಯವಿದೆ. ಜತೆಗೆ ಸಮೀಪದಲ್ಲೇ ಬರುವ ಮಂಗಳ ಗ್ರಹವನ್ನೂ ನೋಡಬಹುದು.

ಎಲ್ಲೆಲ್ಲಿ ಸ್ಪಷ್ಟ ಗೋಚರ 

 • ದಕ್ಷಿಣ ಅಮೆರಿಕ, ಪೂರ್ವ ಆಫ್ರಿಕಾ, ಮಧ್ಯ ಪ್ರಾಚೀನ ಏಷ್ಯಾಖಂಡ, ಯೂರೋಪ್‌ಗಳಲ್ಲಿ ಕಾಣುತ್ತದೆ. ಗ್ರಹಣ ಕಾಲದಲ್ಲಿ ಚಂದ್ರನು ಕಾರ್ಗತ್ತಲಲ್ಲಿಮರೆಯಾಗುವ ಘಟನೆಗೆ ಉಂಬ್ರ ಎನ್ನುತ್ತಾರೆ.
 • ಈ ಸಮಯದಲ್ಲಿ ಕೆಲ ಹೊತ್ತು ಚಂದ್ರ ಕಾಣಿಸುವುದಿಲ್ಲ. ವಿಜ್ಞಾನದ ದೃಷ್ಟಿಯಿಂದಲೂ ಈ ಬಾರಿಯ ಚಂದ್ರಗ್ರಹಣ ಅತಿ ವಿಶೇಷವೆನಿಸಿದೆ.

ಅಂಗವಿಕಲರ ತಿದ್ದುಪಡಿ ಕಾಯಿದೆ

 • ಸುದ್ಧಿಯಲ್ಲಿ ಏಕಿದೆಕಳೆದ ವರ್ಷ ಏಪ್ರಿಲ್‌ನಲ್ಲಿಯೇ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ (ಆರ್‌ಪಿಡಬ್ಲ್ಯುಡಿ) ಜಾರಿಗೆ ಸೂಚಿಸಲಾಗಿದ್ದರೂ ಇಲ್ಲಿಯ ತನಕ ದೇಶದಲ್ಲಿ ಮೂರನೇ ಒಂದರಷ್ಟು ರಾಜ್ಯಗಳು ಮಾತ್ರ ಅದರ ನಿಯಮಗಳನ್ನು ಅಳವಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
 • ಇದುವರೆಗೆ 29ರಲ್ಲಿ ಕೇವಲ 10 ರಾಜ್ಯಗಳು ಆ ಬಗ್ಗೆ ಕ್ರಿಯಾಶೀಲವಾಗಿವೆ ಎಂಬ ಸಂಗತಿ ಆರ್‌ಪಿಡಬ್ಲ್ಯುಡಿ ಕುರಿತು ನಡೆದ ಮೊತ್ತಮೊದಲ 23 ರಾಜ್ಯಗಳ ರಾಷ್ಟೀಯ ಅಂಗವೈಕಲ್ಯ ಸಮಾಲೋಚನೆ ಸಭೆಯಲ್ಲಿ ಬೆಳಕಿಗೆ ಬಂದಿದೆ.
 • ತಿದ್ದುಪಡಿ ಜಾರಿಗೊಳಿಸದ ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ. ತೆಲಂಗಾಣ, ಒಡಿಶಾ, ಛತ್ತೀಸ್‌ಗಢ, ಬಿಹಾರ, ಗುಜರಾತ್‌, ಉತ್ತರ ಪ್ರದೇಶ ಹಾಗೂ ಮೇಘಾಲಯ ರಾಜ್ಯಗಳು ಮಾತ್ರ ತಿದ್ದುಪಡಿ ಕಾಯಿದೆ ಜಾರಿಗೆ ತಂದಿವೆ.

ಏನಿದು ಅಂಗವಿಕಲರ ತಿದ್ದುಪಡಿ ಕಾಯ್ದೆ ?

 • ತಿದ್ದುಪಡಿಯು ಅಂಗವೈಕಲ್ಯದ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ.3-4ರಷ್ಟು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.3-5ರಷ್ಟು ಮೀಸಲು ಹೆಚ್ಚಿಸುವ ಅವಕಾಶ ಮಾಡಿಕೊಟ್ಟಿದೆ.
 • ಅಂಗವೈಕಲ್ಯ ಮಾನದಂಡದ ವ್ಯಾಪ್ತಿಗೊಳಪಡುವ 6 ವರ್ಷದಿಂದ 18 ವರ್ಷದೊಳಗಿನ ಮಕ್ಕಳು ಉಚಿತ ಶಿಕ್ಷಣದ ಹಕ್ಕು ಪಡೆಯುತ್ತವೆ. ಅಂಗವೈಕಲ್ಯದ ವಿಧಗಳನ್ನು 7ರಿಂದ 21ಕ್ಕೆ ಏರಿಕೆ ಮಾಡಲಾಗಿದೆ.
 • ಮಾನಸಿಕ ರೋಗ, ಆಟಿಸಂ (ಸ್ವಮಗ್ನತೆ), ಆ್ಯಸಿಡ್‌ ದಾಳಿ, ಪಾರ್ಕಿನ್ಸನ್‌ ಕಾಯಿಲೆ ಮುಂತಾದ 14 ಕಾಯಿಲೆಗಳನ್ನು ತಿದ್ದುಪಡಿ ಕಾಯ್ದೆಗೆ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ

 • ಸುದ್ಧಿಯಲ್ಲಿ ಏಕಿದೆದೇಶಾದ್ಯಂತ ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಅವರು ಆರಂಭಿಸಿದ ‘ಸುಕನ್ಯಾ ಸಮೃದ್ಧಿ ಯೋಜನೆ’ಯನ್ನು ಮತ್ತಷ್ಟು ಜನರಿಗೆ, ಅದರಲ್ಲೂ ಬಡಜನತೆಗೆ ಕೈಗೆಟುಕುವಂತೆ ಮಾಡಲು ಸರಕಾರ ಮಹತ್ವದ ಕ್ರಮ ಕೈಗೊಂಡಿದೆ.
 • ಈ ಯೋಜನೆಯಡಿ ವಾರ್ಷಿಕ ಕಡ್ಡಾಯವಾಗಿ ಕಟ್ಟಬೇಕಾಗಿದ್ದ ಕನಿಷ್ಠ ಠೇವಣಿ ಮೊತ್ತವನ್ನು ಈವರೆಗೂ ಇದ್ದ 1,000 ರೂ.ನಿಂದ 250 ರೂ.ಗೆ ಇಳಿಸಲಾಗಿದೆ.

ಪ್ರಯೋಜನ

 • ಇದರೊಂದಿಗೆ ತೀರಾ ಕಡಿಮೆ ಆದಾಯದ ಜನರು ಸಹ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳ-2016′ಕ್ಕೆ ತಿದ್ದುಪಡಿ ತರುವ ಮೂಲಕ ಸರಕಾರ ಯೋಜನೆಯ ಷರತ್ತುಗಳನ್ನು ಸಡಿಲಗೊಳಿಸಿದೆ.
 • 2015ರ ಜನವರಿಯಲ್ಲಿ ಆರಂಭಿಸಲಾದ ಈ ಯೋಜನೆ, ಹೆಣ್ಣು ಮಕ್ಕಳ ಭವಿಷ್ಯ ಹಾಗೂ ಲಾಭದಾಯಕತೆ ದೃಷ್ಟಿಯಿಂದ ಭಾರಿ ಜನಪ್ರಿಯತೆ ಪಡೆದಿದೆ.

ಯೋಜನೆಯ ಸಂಕ್ಷಿಪ್ತ ವಿವರ 

 • ಹೆಣ್ಣು ಮಕ್ಕಳಿಗಾಗಿ ವಿಶೇಷ ಹೂಡಿಕೆ ಯೋಜನೆ, ಶಿಕ್ಷಣ, ಮದುವೆ ಮುಂತಾದ ಖರ್ಚುಗಳಿಗೆ ಅನುಕೂಲ
 • ಖಾತೆ ತೆರೆದು 21 ವರ್ಷದ ಬಳಿಕ ಮೆಚ್ಯೂರಿಟಿ
 • ಬಾಲಕಿಗೆ 18 ವರ್ಷ ತುಂಬಿದಾಗಲೂ ಅವಧಿಪೂರ್ವ ತೀರುವಳಿಗೆ ಅವಕಾಶ, ಪೋಸ್ಟ್‌ ಆಫೀಸ್‌, ಬ್ಯಾಂಕ್‌ನಲ್ಲಿ ಖಾತೆ ತೆರೆಯಬಹುದು
 • ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ, ಪ್ರಸ್ತುತ ತ್ರೈಮಾಸಿದಲ್ಲಿ 1% ಬಡ್ಡಿದರವಿದೆ.

ಖೇಲೋ ಇಂಡಿಯಾ ಸ್ಕಾಲರ್‌ಶಿಪ್‌

 • ಸುದ್ಧಿಯಲ್ಲಿ ಏಕಿದೆ? ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಹೀಗಾಗಿ ಕ್ರೀಡಾ ಇಲಾಖೆಯಡಿ ಬರುವ ಭಾರತೀಯ ಕ್ರೀಡಾ ಪ್ರಾಧಿಕಾರ ( ಎಸ್‌ಎಐ ) ಯುವ ಕ್ರೀಡಾಪಟುಗಳಿಗೆ ಸ್ಕಾಲರ್‌ಶಿಪ್ ನೀಡಲು 734 ಮಂದಿಯನ್ನು ಆಯ್ಕೆ ಮಾಡಿದೆ.
 • ಖೇಲೋ ಇಂಡಿಯಾಟ್ಯಾಲೆಂಟ್ ಐಡೆಂಟಿಫಿಕೇಷನ್ ಡೆವಲೆಪ್‌ಮೆಂಟ್ ಯೋಜನೆಯಡಿ ಭಾರತದ ಕ್ರೀಡಾ ಪ್ರಾಧಿಕಾರ ಈ ಪಟ್ಟಿಯನ್ನು ಅಂತಿಮ ಪಡಿಸಿದ್ದು, 385 ಯುವಕರು ಹಾಗೂ 349 ಯುವತಿಯರಿಗೆ ವಿದ್ಯಾರ್ಥಿ ವೇತನ ನೀಡಲಿದೆ.

ವಿಶೇಷತೆಯೇನು?

 • ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರನ್ನು ಒಳಗೊಂಡ ಎಸ್‌ಎಐನ ಉನ್ನತ ಮಟ್ಟದ ಸಮಿತಿ 734 ಯುವ ಕ್ರೀಡಾಪಟುಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಇವರಿಗೆ ವೇತನ ಸಿಗಲಿದ್ದು, ಜತೆಗೆ ಖೇಲೋ ಇಂಡಿಯಾದ ಮಾನ್ಯತೆ ಪಡೆದ ಅಕಾಡೆಮಿಗಳಲ್ಲಿ ಹಾಗೂ 21 ಇತರೆ ಅಕಾಡೆಮಿಗಳಲ್ಲಿ ಉಚಿತ ತರಬೇತಿ ಪಡೆಯಬಹುದು.
 • ಕ್ರೀಡಾಪಟುಗಳಿಗೆ ವಾರ್ಷಿಕವಾಗಿ2 ಲಕ್ಷ ರೂ. ದೊರೆಯಲಿದ್ದು, ಈ ಪೈಕಿ ಮೂರು ತಿಂಗಳಿಗೊಮ್ಮೆ 30 ಸಾವಿರ ರೂ. ಹಣ ಪಡೆಯಲಿದ್ದಾರೆ. ಆಟಗಾರರ ಖರ್ಚು ವೆಚ್ಚಗಳಿಗೆ, ಚಿಕ್ಕ ಪುಟ್ಟ ಅಪಘಾತಗಳಿಗೆ ಚಿಕಿತ್ಸೆ ಪಡೆಯಲು, ತಮ್ಮ ಕುಟುಂಬದವರನ್ನು ಭೇಟಿ ಮಾಡಲು ಹಾಗೂ ತಮ್ಮ ಖಾಸಗಿ ಪ್ರಯಾಣದ ಖರ್ಚುಗಳನ್ನು ನೋಡಿಕೊಳ್ಳಲು ಸಹಾಯವಾಗುತ್ತದೆ. ಇನ್ನು, ಮಾನ್ಯತೆ ಪಡೆದ ಅಕಾಡೆಮಿಗಳು ಅಥ್ಲೀಟ್‌ಗಳ ತರಬೇತಿ, ಬೋರ್ಡಿಂಗ್ ಹಾಗೂ ಪಂದ್ಯಾವಳಿಯ ಖರ್ಚುಗಳನ್ನು ನೋಡಿಕೊಳ್ಳುತ್ತದೆ.
 • ಆದರೆ, ಅಕಾಡೆಮಿ ಹಾಗೂ ಆಟಗಾರರ ಪ್ರದರ್ಶನ ವಿಮರ್ಶೆಗೊಳಲ್ಪಡಲಿದ್ದು, ಕಳಪೆ ಪ್ರದರ್ಶನ ನೀಡಿದ ಅಕಾಡೆಮಿಗಳನ್ನು ಖೇಲೋ ಇಂಡಿಯಾದ ಪಟ್ಟಿಯಿಂದ ಹೊರತೆಗೆಯುವ ಸಾಧ್ಯತೆಯಿದೆ. ಹಾಗೂ, ಅಗತ್ಯ ಗುಣಮಟ್ಟದ ಪ್ರದರ್ಶನ ನೀಡದ ಅಥ್ಲೀಟ್‌ಗಳನ್ನು ಹೊರಹಾಕಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ.

ಲಂಕೆಯಲ್ಲಿ ಭಾರತದ ನೆರವಿನ ಅಂಬ್ಯುಲೆನ್ಸ್‌ ಸೇವೆ

 • ಸುದ್ಧಿಯಲ್ಲಿ ಏಕಿದೆ?ಶ್ರೀಲಂಕಾದಲ್ಲಿನ ಭಾರತ ನೆರವಿನ ಅಂಬ್ಯುಲೆನ್ಸ್‌ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಜಾಫ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಮೂಲಕ ಮೋದಿ ಹೊಸ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ಶ್ರೀಲಂಕಾ ಪ್ರಧಾನಿ ರಣಲ್ ವಿಕ್ರಮ ಸಿಂಘೆ ಪಾಲ್ಗೊಂಡರು.
 • ಕಳೆದ ಬಾರಿಯ ಶ್ರೀಲಂಕಾ ಭೇಟಿ ವೇಳೆ, ತುರ್ತು ವೈದ್ಯಕೀಯ ಸೇವೆಗಳಲ್ಲಿ ಭಾರತ ಅಗತ್ಯ ಸೇವೆಗಳನ್ನು ಶ್ರೀಲಂಕಾದಲ್ಲಿ ನೀಡುತ್ತದೆ ಎಂದು ಘೋಷಿಸಲಾಗಿತ್ತು. ಭಾರತದ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು, ಸಮಯಕ್ಕೆ ಸರಿಯಾಗಿ ನೀಡಿದ ಭರವಸೆಯನ್ನು ಪೂರೈಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 • ಶ್ರೀಲಂಕಾದ ಉತ್ತಮ ಹಾಗೂ ಕೆಟ್ಟ ದಿನಗಳಲ್ಲಿ ಭಾರತದ ತುರ್ತು ಸೇವೆ, ವ್ಯವಸ್ಥೆ, ಸಹಕಾರಗಳು ಇದ್ದೇ ಇರುತ್ತದೆ. ದೇಶದ ಸಹಕಾರ ಕೇವಲ ಇದೊಂದೇ ವಿಚಾರಕ್ಕೆ ಸೀಮಿತವಾದುದಲ್ಲ. ಅಗತ್ಯವಿರುವ ಎಲ್ಲ ಸಂಗತಿಗಳಲ್ಲೂ ಭಾರತ ಹಾಗೂ ಶ್ರೀಲಂಕಾ ಪರಸ್ಪರ ಒಗ್ಗೂಡಿ ಕೆಲಸ ಮಾಡುವ ವಿಶ್ವಾಸವಿದೆ. ಶ್ರೀಲಂಕಾ ಭಾರತದ ಕೇವಲ ನೆರೆ ರಾಷ್ಟ್ರ ಮಾತ್ರ ಆಗಿಲ್ಲ. ದಕ್ಷಿಣ ಏಷ್ಯಾ ಹಾಗೂ ಹಿಂದೂ ಮಹಾಸಾಗರದಲ್ಲಿ ಭರವಸೆಯ ಪಾಲುದಾರವಾಗಿ ಶ್ರೀಲಂಕಾ ವಿಶೇಷ ಸ್ಥಾನ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 • ದೇಶದಲ್ಲಿ ಅನೇಕ ಹೊಸ ವಿಚಾರ, ಹೊಸತನಗಳು ಆರಂಭಗೊಳ್ಳುತ್ತಿದ್ದು, ಅಲ್ಲಿನ ಜನರು ಇದನ್ನು ಅನುಭವಿಸಬೇಕು. 2 ದೇಶದ ಜನರು ಇನ್ನಷ್ಟು ಹತ್ತಿರವಾಗುವ ಮೂಲಕ ಹೊಸತನವನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
 • ಶ್ರೀಲಂಕಾದ 2 ಭಾಗಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೊಂಡಿದ್ದು, ಕ್ರಮೇಣ ಉಳಿದ 7 ಭಾಗಗಳಿಗೂ ವ್ಯವಸ್ಥೆ ವಿಸ್ತರಣೆಗೊಳ್ಳಲಿದೆ.

 ಗಿರಿಂಕಾ ಯೋಜನೆ

 • ಸುದ್ಧಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ ರವಾಂಡಾ ದೇಶಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿನ ಬಡ ಕುಟುಂಬಕ್ಕೆ ವಿಶಿಷ್ಟ ಉಡುಗೊರೆ ನೀಡಲಿದ್ದಾರೆ. ರವಾಂಡಾ ಸರ್ಕಾರದ ಗಿರಿಂಕಾ ಯೋಜನೆಯಡಿ 200 ಹಸುಗಳನ್ನು ಅವರು ವಿತರಣೆ ಮಾಡಲಿದ್ದಾರೆ. ಅಲ್ಲಿನ ಸ್ಥಳೀಯ ತಳಿಗಳ ಹಸುಗಳನ್ನೇ ಉಡುಗೊರೆಯಾಗಿ ಭಾರತ ನೀಡಲಿದೆ. ಇದರ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ರವಾಂಡಾದ ಮಾದರಿ ಗ್ರಾಮ ರುರುರು ಎಂಬಲ್ಲಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.

ಕೃಷಿಯೇ ಆಧಾರ

 • ರವಾಂಡಾದಲ್ಲಿ ಶೇ. 80 ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಇವರ ಜೀವನದಲ್ಲಿ ಹಸುಗಳು ಮಹತ್ವದ ಪಾತ್ರ ವಹಿಸುತ್ತವೆ. ದೊಡ್ಡ ಮೊತ್ತದ ವಸ್ತುಗಳನ್ನು ಖರೀದಿಸುವಾಗ ಹಣದ ಬದಲು ಹಸುಗಳನ್ನೇ ನೀಡುವ ಪದ್ಧತಿ ರವಾಂಡಾದ ಹಲವೆಡೆ ರೂಢಿಯಲ್ಲಿವೆ.

ಏನಿದು ಗಿರಿಂಕಾ ಯೋಜನೆ?

 • ಒಂದು ಬಡ ಕುಟುಂಬಕ್ಕೆ ಒಂದು ಹಸು ಎಂಬ ಘೋಷವಾಕ್ಯದಲ್ಲಿ 2006ರಲ್ಲಿ ಈ ಯೋಜನೆ ಜಾರಿಗೆ ತರಲಾಯಿತು. ಈ ವರೆಗೆ ರವಾಂಡಾದ 5 ಲಕ್ಷ ಕುಟುಂಬ ಈ ಯೋಜನೆಯಿಂದ ಲಾಭ ಪಡೆದಿದೆ. ಅಲ್ಲಿನ ಅಧ್ಯಕ್ಷ ಪೌಲ್ ಕಾಗಮೆ ಸ್ವತಃ ಈ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
 • ಬಡ ಕುಟುಂಬಕ್ಕೆ ಒಂದು ಹಸುವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಹಸುವಿಗೆ ಹುಟ್ಟಿದ ಮೊದಲ ಹೆಣ್ಣುಕರುವನ್ನು ಮತ್ತೊಂದು ಬಡ ಕುಟುಂಬಕ್ಕೆ ಉಡುಗೊರೆಯಾಗಿ ನೀಡಬೇಕು. ಹೀಗೆ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ಬಡ ಕುಟುಂಬಗಳಿಗೆ ಆರ್ಥಿಕ ಬಲ ಹಾಗೂ ಸಮಾಜದಲ್ಲಿ ಉತ್ತಮ ಸಹಬಾಳ್ವೆಯ ವಾತಾವರಣ ನಿರ್ವಿುಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ರವಾಂಡಾಕ್ಕೆ ಭಾರತದ ಗೌರವ

 • ರವಾಂಡಾಕ್ಕೆ ಆರ್ಥಿಕ ಸಹಾಯ ನೀಡಲು ಹಸುಗಳನ್ನು ಉಡುಗೊರೆಯಾಗಿ ನೀಡುತ್ತಿಲ್ಲ. ಭಾರತೀಯ ಸಮುದಾಯವನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿರುವ ರವಾಂಡಾಕ್ಕೆ ಸಲ್ಲಿಸುತ್ತಿರುವ ಗೌರವ ಇದಾಗಿದೆ.

ಹಸು ಉಡುಗೊರೆ ಇಲ್ಲಿನ ಸಂಪ್ರದಾಯ

 • ರವಾಂಡಾದಲ್ಲಿ ಹಸುಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಹಸುಗಳನ್ನು ಉಡುಗೊರೆ ನೀಡುವುದು ಇಲ್ಲಿ ಗೌರವದ ಸಂಕೇತ. ವಿವಾಹಗಳಲ್ಲಿ ಡೌರಿ ರೂಪದಲ್ಲಿ ಹಾಗೂ ವಿಶೇಷ ಸಮಾರಂಭಗಳಲ್ಲಿ ಉಡುಗೊರೆಯಾಗಿ ಹಸುಗಳನ್ನು ನೀಡಲಾಗುತ್ತದೆ. ಇದು ಪ್ರೀತಿ ಹಾಗೂ ಸಮೃದ್ಧಿಯನ್ನು ಸೂಚಿಸುತ್ತದೆ ಎಂದು ಅಲ್ಲಿನ ಜನರು ನಂಬಿದ್ದಾರೆ.

ನಾಸಾ ಪಾರ್ಕರ್​ ಸೋಲಾರ್​ ಪ್ರೋಬ್

 • ಸುದ್ಧಿಯಲ್ಲಿ ಏಕಿದೆ?ನಾಸಾ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು ಸೂರ್ಯನ ವಿಪರೀತ ಬೇಗೆಗೆ ಕಾರಣ ತಿಳಿಯಲು , ಅದನ್ನು ವಿವರವಾಗಿ ಪರೀಕ್ಷಿಸಲು ಗಗನ ನೌಕೆಯನ್ನು ಕಳಿಸಲು ಮುಂದಾಗಿದೆ.
 • ಈ ನೌಕೆ ಸೂರ್ಯನ ಅತೀ ಸಮೀಪಕ್ಕೆ ಹೋಗಲಿದ್ದು ಉಳಿದೆಲ್ಲ ಬಾಹ್ಯಾಕಾಶ ಸಂಸ್ಥೆಗಳನ್ನೂ, ನೌಕೆಗಳನ್ನೂ ಮೀರಿಸುವ ಸಾಧನೆ ಇದಾಗಲಿದೆ.
 • ಸೋಲಾರ್​ ಕರೋನಾ ಮೂಲಕ ನಿರಂತರವಾಗಿ ಜ್ವಾಲೆ ಹೊರಸೂಸುತ್ತದೆ. ಸೂರ್ಯನ ಈ ಹೊರವಲಯದ ಸೂಕ್ಷ್ಮ ಅಧ್ಯಯನದಿಂದ ಸೌರ ಮಾರುತಗಳ ಬಗ್ಗೆಯೂ ಮಾಹಿತಿ ಕಲೆ ಹಾಕಬಹುದಾಗಿದ್ದು ಈ ನಿಟ್ಟಿನಲ್ಲಿ ನಾಸಾ ಗಗನನೌಕೆಯನ್ನು ಕಳಿಸಲು ಮುಂದಾಗಿದೆ.
 • ಸಂಶೋಧನೆಗಾಗಿ ನಾಸಾ ಪಾರ್ಕರ್​ ಸೋಲಾರ್​ ಪ್ರೋಬ್​ ಎಂಬ ಹೆಸರಿನ ಗಗನ ನೌಕೆಯನ್ನು ಸಿದ್ಧಪಡಿಸಿದ್ದು, ಸಣ್ಣ ಕಾರಿನ ಅಳತೆಯ ರೋಬಾಟ್​ ಮಾದರಿಯಲ್ಲಿದೆ. ಫ್ಲೋರಿಡಾ ಕೇಪ್​ವ್ಯಾನ್​ನಿಂದ ಲಾಂಚ್ ಮಾಡಲು ನಿರ್ಧರಿಸಿದೆ.
 • ಆ.6ರಂದು ದಿನಾಂಕ ನಿಗದಿ ಮಾಡಿದ್ದು ಸೋಲಾರ್​ ಪ್ರೋಬ್​ ಏಳು ವರ್ಷ ಅಲ್ಲಿಯೇ ಕಾರ್ಯಾಚರಣೆ ನಡೆಸಲಿದೆ. ಸೂರ್ಯನ ಕರೋನಾ ತಲುಪಲು ಸೌರ ಮೇಲ್ಮೈಯಿಂದಲೇ ಸುಮಾರು 8 ಮಿಲಿಯನ್​ ಮೈಲು ಪ್ರಯಾಣಿಸಬೇಕಾಗಿದೆ.
 • ಈ ಹಿಂದೆ 1976ರಲ್ಲಿ ಹೆಲಿಯೊಸ್ 2 ಎಂಬ ನೌಕೆ 27 ಮಿಲಿಯನ್​ ಮೈಲುಗಳಷ್ಟು ದೂರ ಸೂರ್ಯನ ಸಮೀಪಕ್ಕೆ ಹೋಗಿತ್ತು. ಅದಾದ ಬಳಿಕ ಈಗ ಸಿದ್ಧಪಡಿಸಿರುವ ಪಾರ್ಕರ್​ ಸೋಲಾರ್​ ಪ್ರೋಬ್​ ಮತ್ತೆ ಸೂರ್ಯನ ಅತಿ ಹತ್ತಿರ ತೆರಳಲಿದೆ.

ಸಾರ್ವಜನಿಕ ಆಡಳಿತ ಸೂಚ್ಯಂಕ

 • ಸುದ್ಧಿಯಲ್ಲಿ ಏಕಿದೆ?ದೇಶದ ದೊಡ್ಡ ರಾಜ್ಯಗಳ ಸಾರ್ವಜನಿಕ ಆಡಳಿತ ಸೂಚ್ಯಂಕ(ಪಿಎಐ)ದಲ್ಲಿ ಕರ್ನಾಟಕ ಈ ಬಾರಿ ನಾಲ್ಕನೇ ನಾಲ್ಕನೇ ಸ್ಥಾನ ಗಳಿಸಿದೆ. ನೆರೆಯ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ಮೊದಲೆರಡು ಸ್ಥಾನಗಳನ್ನು ಅಲಂಕರಿಸಿವೆ.
 • ಸಣ್ಣ ರಾಜ್ಯಗಳಿಗೆ ಹೋಲಿಸಿದರೆ ಹಿಮಾಚಲಪ್ರದೇಶ, ಗೋವಾ ಹಾಗೂ ಮಿಜೋರಾಮ್‌ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿವೆ. ಒಟ್ಟು ಹತ್ತು ವಿಭಾಗಗಳಲ್ಲಿ ರಾಜ್ಯಗಳ ಸಾಧನೆ ಆಧರಿಸಿ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ 2016ರಲ್ಲಿ ಮೂರನೇ ಸ್ಥಾನ ಹಾಗೂ 2017ನೇ ಸಾಲಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿತ್ತು.

ಪರಿಸರ ವಿಷಯದಲ್ಲಿ ಪ್ರಥಮ: 

 • ಒಟ್ಟಾರೆ ಸೂಚ್ಯಂಕದಲ್ಲಿ ಕೇರಳ ಮೊದಲ ಸ್ಥಾನ ಗಳಿಸಿದ್ದರೂ, ಕರ್ನಾಟಕ ನಾನಾ ಕ್ಷೇತ್ರಗಳಲ್ಲಿ ತನ್ನ ಸ್ಥಾನವನ್ನು ವೃದ್ಧಿಸಿಕೊಂಡಿದೆ. ಪರಿಸರ, ಪಾರದರ್ಶಕತೆ-ಉತ್ತರದಾಯಿತ್ವ ವಿಷಯದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ.
 • ಅಚ್ಚರಿಯೆಂದರೆ ಸಾಮಾಜಿಕ ಭದ್ರತೆ ವಿಚಾರದಲ್ಲಿ 16ನೇ ಸ್ಥಾನಕ್ಕೆ ಕುಸಿದಿದೆ.
Related Posts
Karnataka Current Affairs – KAS-KPSC Exams – 9th – 10th Feb 2018
Karnataka HC gets five more judges The Karnataka High Court will get five new additional judges. The President appointed Dixit Krishna Shripad, Shankar Ganapathi Pandit, Ramakrishna Devdas, Bhotanhosur Mallikarjuna Shyam Prasad and ...
READ MORE
Karnataka Current Affairs – KAS / KPSC Exams – 12th April 2017
Experts warn of ecological damage, oppose expansion of Tadadi port Marine experts and faculty of the Indian Institute of Science (IISc) have urged Prime Minister Narendra Modi not to grant environmental ...
READ MORE
Government Programme Made easy: Karnataka Polyhouse farming
What in News: Special package for polyhouse farming Agriculture Minister C. Krishna Byregowda has said a special package will be formulated to provide loans at lower rate of interest to construct polyhouses ...
READ MORE
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಮ್ಯಾಗ್ಸೆಸೆ ಪುರಸ್ಕಾರ  ಸುದ್ಧಿಯಲ್ಲಿ ಏಕಿದೆ? ‘ಏಷ್ಯಾದ ನೊಬೆಲ್ ’ ಎಂದೇ ಖ್ಯಾತಿ ಗಳಿಸಿರುವ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ಸೋನಂ ವಾಂಗ್​ಚುಕ್ ಮತ್ತು ಡಾ. ಭರತ್ ವಟವಾನಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಆಗಸ್ಟ್ 31ರಂದು ಫಿಲಿಪ್ಪೀನ್ಸ್ ನಲ್ಲಿ ನಡೆಯುವ ...
READ MORE
Karnataka Current Affairs – KAS / KPSC Exams – 15th June 2017
Bill to bring all varsities under one umbrella tabled The Karnataka State Universities Bill, 2017 — which seeks to bring all State universities under one umbrella — was tabled in the ...
READ MORE
Karnataka Current Affairs – KAS/KPSC Exams – 1st Jan 2019
BBMP declares all wards as ‘Open Defecation Free’ The Bruhat Bengaluru Mahanagara Palike (BBMP) has issued a public notice declaring areas under its jurisdiction as ‘Open Defecation Free’. The notice has ...
READ MORE
National Current Affairs – UPSC/KAS Exams – 29th May 2018
India launches 2nd IT corridor in China to gain access to big Chinese market India today (29th May) launched its second IT corridor in China to cash in on the burgeoning ...
READ MORE
GPS-Aided Geo Augmented Navigation (GAGAN) system
Satellite-based navigation system In News: The GPS-Aided Geo Augmented Navigation (GAGAN) system, which will offer seamless navigation to the aviation industry, was recently launched by the Civil Aviation Minister. GAGAN was develped ...
READ MORE
NationalCurrent Affairs – UPSC/KPSC Exams – 10th April 2018
Telangana govt launches Rs 8,000/acre investment support scheme for farmers As part of its electoral promise, the Telangana government has launched a first-of-its kind investment support scheme for all farmers who will ...
READ MORE
Karnataka Current Affairs – KAS / KPSC Exams – 19th June 2017
Piped gas to reach 65k houses by end of current financial year As many as 65,000 houses in the city are set to get piped natural gas (PNG) by the end ...
READ MORE
Karnataka Current Affairs – KAS-KPSC Exams – 9th
Karnataka Current Affairs – KAS / KPSC Exams
Government Programme Made easy: Karnataka Polyhouse farming
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka Current Affairs – KAS / KPSC Exams
Karnataka Current Affairs – KAS/KPSC Exams – 1st
National Current Affairs – UPSC/KAS Exams – 29th
GPS-Aided Geo Augmented Navigation (GAGAN) system
NationalCurrent Affairs – UPSC/KPSC Exams – 10th April
Karnataka Current Affairs – KAS / KPSC Exams

Leave a Reply

Your email address will not be published. Required fields are marked *