“6th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ಜನತಾ ದರ್ಶನ’

ಸುದ್ಧಿಯಲ್ಲಿ ಏಕಿದೆ?ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಜನರು ನೇರವಾಗಿ ಬರುವಂತಿಲ್ಲ. ಜಿಲ್ಲೆಯ ಮಟ್ಟದಲ್ಲಿ ಪರಿಹಾರ ಸಿಗದೇ ಇದ್ದರೆ ಮಾತ್ರ ಬರಬೇಕೆಂಬ ನಿಯಮಗಳನ್ನು ರೂಪಿಸಲಾಗಿದೆ.

ಏಕೆ ಈ ನಿರ್ಧಾರ ?

 • ಸಿಎಂ ಜನತಾ ದರ್ಶನಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಆಗಮಿಸುವುದಾದರೆ ಆಡಳಿತ ಯಂತ್ರ, ಅಧಿಕಾರಿ ವರ್ಗ ಏಕಿರಬೇಕು ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಜತೆಗೆ, ಎಲ್ಲರನ್ನು ಭೇಟಿ ಮಾಡಿ ಅವರ ಮನವಿಗಳನ್ನು ಆಲಿಸುವುದು ಸಿಎಂ ಪಾಲಿಗೆ ಸವಾಲಾಗಿದೆ.
 • ಈ ಹಿನ್ನೆಲೆಯಲ್ಲಿ ಜನತಾ ದರ್ಶನಕ್ಕೆ ವ್ಯವಸ್ಥಿತ ಚೌಕಟ್ಟು ನಿರ್ಮಾಣ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿದೆ.
 • ಸಾರ್ವಜನಿಕರು ಇನ್ನು ಮುಂದೆ ತಮ್ಮ ದೂರು, ದುಮ್ಮಾನಗಳಿಗೆ ಪರಿಹಾರ ಬಯಸಿ ನೇರವಾಗಿ ಸಿಎಂ ಬಳಿಗೆ ಬರುವ ಬದಲು ಸಂಬಂಧಪಟ್ಟ ಕಚೇರಿ, ಅಧಿಕಾರಿಗಳಿಗೆ ಅರ್ಜಿ, ಮನವಿ ಅಥವಾ ದೂರು ಸಲ್ಲಿಸಬೇಕು.
 • 30 ದಿನಗಳೊಳಗೆ ಪರಿಹಾರ ಸಿಗದಿದ್ದರೆ ಜನತಾ ದರ್ಶನದಲ್ಲಿ ಸಿಎಂ ಭೇಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
 • ಸಾರ್ವಜನಿಕರು ಅರ್ಜಿ, ಮನವಿಗಳನ್ನು ಸಂಬಂಧಪಟ್ಟ ಕಚೇರಿ, ಅಧಿಕಾರಿಗೆ ಸಲ್ಲಿಸಬೇಕು. ಮನವಿಗೆ ಸಂಬಂಧಪಟ್ಟವರಿಂದ ಕಾಲಮಿತಿಯಲ್ಲಿ ಪರಿಹಾರ ಸಿಗದಿದ್ದರೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಜನತಾ ದರ್ಶನದಲ್ಲಿ ಸಿಎಂ ಭೇಟಿ ಮಾಡಬಹುದು.
 • ಇದರಿಂದ ಸಂಬಂಧಪಟ್ಟ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಲು ಅನುಕೂಲವಾಗುತ್ತದೆ. ಜತೆಗೆ, ಜನತಾ ದರ್ಶನದ ಅಹವಾಲುಗಳಿಗೆ ಸೂಕ್ತ ಸ್ಪಂದನೆ ಮಾಡಬಹುದು ಹಾಗೂ ಅಧಿಕಾರಿಗಳಲ್ಲಿ ಉತ್ತರಧಾಯಿತ್ವ ನಿರೀಕ್ಷಿಸಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿದೇಶ ಪ್ರವಾಸಕ್ಕೆ ಪರಿಷ್ಕೃತ ಮಾರ್ಗಸೂಚಿ

ಸುದ್ಧಿಯಲ್ಲಿ ಏಕಿದೆ?ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳಲು ಸರಕಾರಿ ಅಧಿಕಾರಿಗಳು ಇನ್ನುಮುಂದೆ ಸಾಕಷ್ಟು ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್‌) ಇಲಾಖೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಹಿನ್ನೆಲೆ

 • ಕೆಲವು ಅಧಿಕಾರಿಗಳು ನೇರವಾಗಿ ಸಿಎಂಗೆ ಪ್ರಸ್ತಾವನೆ ಸಲ್ಲಿಸಿ, ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿಪಿಎಆರ್‌ ಕಾರ್ಯದರ್ಶಿ ಅಂಜುಂ ಪವೇಜ್‌ ಪರಿಷ್ಕೃತ ಮಾರ್ಗಸೂಚಿ ಒಳಗೊಂಡ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ ?

 • ಅಧಿಕೃತ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಆಯಾ ಇಲಾಖಾ ಸಚಿವರ ಅನುಮೋದನೆ ಪಡೆದು ನಿಗದಿತ ನಮೂನೆಯಲ್ಲಿ ಕಡತವನ್ನು ಡಿಪಿಎಆರ್‌ಗೆ ಸಲ್ಲಿಸಬೇಕು. ಡಿಪಿಎಆರ್‌ ಮೂಲಕವೇ ಪ್ರಸ್ತಾವನೆಯನ್ನು ಸಿಎಂಗೆ ಸಲ್ಲಿಸಬೇಕು. ತಂಡದಲ್ಲಿ ಪ್ರವಾಸಕ್ಕೆ ತೆರಳುವುದಾದರೆ ನಿಯೋಗದ ಪೂರ್ಣ ಮಾಹಿತಿಯನ್ನೂ ಒದಗಿಸಬೇಕು. ಜತೆಗೆ, ಪ್ರವಾಸದ ಉದ್ದೇಶ, ಅದರಿಂದ ಸರಕಾರ ಮತ್ತು ಅಧಿಕಾರಿಗೆ ಆಗುವ ಅನುಕೂಲ, ಉದ್ದೇಶಿತ ಪ್ರವಾಸದ ಅನುಭವ ಬಳಕೆಯಿಂದ ಸರಕಾರಕ್ಕೆ ಆಗುವ ಪ್ರತಿಫಲದ ಬಗ್ಗೆ ವಿವರಣೆ ಸಲ್ಲಿಸುವುದೂ ಕಡ್ಡಾಯ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
 • ಸಚಿವರ ನೇತೃತ್ವದ ನಿಯೋಗದಲ್ಲಿ ಅಧಿಕಾರಿಗಳು ಪ್ರವಾಸ ಕೈಗೊಳ್ಳುವುದಾದರೆ ಅದಕ್ಕೆ ಕೇಂದ್ರ ವಿದೇಶಾಂಗ ಸಚಿವಾಲಯದ ಅನುಮೋದನೆ ಅತ್ಯಗತ್ಯ. ವಿದೇಶ ಪ್ರವಾಸ ಸಂದರ್ಭದಲ್ಲಿ ಸಾರಿಗೆ, ವಸತಿ ವೆಚ್ಚ ಹಾಗೂ ವಿದೇಶಿ ಆತಿಥ್ಯ ಸ್ವೀಕರಿಸುವ ಪ್ರಸ್ತಾವನೆ ಇದ್ದಲ್ಲಿ ಕೇಂದ್ರ ಗೃಹ ಸಚಿವಾಲಯದೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆಯಬೇಕಿರುತ್ತದೆ.
 • ಅಖಿಲ ಭಾರತ ಸೇವೆಯ ಅಧಿಕಾರಿಗಳು ಕೇಂದ್ರ ವೃಂದ ನಿಯಂತ್ರಣ ಪ್ರಾಧಿಕಾರದಿಂದ ಕೇಡರ್‌ ಕ್ಲಿಯರೆನ್ಸ್‌ಪಡೆಯಬೇಕು. ಹೀಗಾಗಿ, ಅಧಿಕೃತ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಅನುಮತಿ ಪ್ರಕ್ರಿಯೆಗೆ ಕನಿಷ್ಟ ಮೂರು ವಾರಗಳ ಕಾಲಾವಕಾಶ ಬೇಕಾಗಲಿದ್ದು, ಸಾಕಷ್ಟು ಮುಂಚಿತವಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಜ್ಯಕ್ಕೆ ಆಯುಷ್ಮಾನ್​ಭವ

ಸುದ್ಧಿಯಲ್ಲಿ ಏಕಿದೆ ?ಕಡು ಬಡವರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಜಾರಿ ವಿಚಾರದಲ್ಲಿನ ಗೊಂದಲ ಬಹುತೇಕ ಬಗೆಹರಿದಿದೆ.

 • ಈ ಯೋಜನೆ ಜಾರಿಯಿಂದ ರಾಜ್ಯದ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎಂಬ ವೈದ್ಯರ ಅಭಿಪ್ರಾಯದ ಹಿನ್ನೆಲೆಯಲ್ಲಿ ಯೋಜನೆ ವಿಲೀನಗೊಳಿಸಿ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಎರಡೂ ಹೆಸರಿನಲ್ಲಿ ಆರೋಗ್ಯ ಸೇವೆ ನೀಡುವ ನಿರ್ಧಾರಕ್ಕೆ ಬರಲಾಗಿದೆ.
 • ಈ ಕುರಿತು ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ಏಕೀಕೃತ ಯೋಜನೆ ಜಾರಿಯಾದಲ್ಲಿ ರಾಜ್ಯ ಸರ್ಕಾರ 800 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 300 ಕೋಟಿ ರೂ. ವಿನಿಯೋಗ ಮಾಡಲಿವೆ.

11 ರಾಜ್ಯದಲ್ಲಿ ಪ್ರಾಯೋಗಿಕ ಜಾರಿ

 • 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಈವರೆಗೆ 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆಯುಷ್ಮಾನ್ ಭಾರತ ಯೋಜನೆಗೆ ಕೈ ಜೋಡಿಸಲು ಸಮ್ಮತಿ ಸೂಚಿಸಿವೆ. ಒಡಿಶಾ ಈ ಯೋಜನೆಯಿಂದ ಹೊರತಾಗಿದ್ದು, ಕರ್ನಾಟಕ ಸೇರಿ 6 ರಾಜ್ಯಗಳು ಯೋಜನೆಗೆ ಒಳಪಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
 • ಮೊದಲ ಹಂತದಲ್ಲಿ ಛತ್ತೀಸ್​ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ಆಯ್ಕೆಯಾಗಿವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ದೆಹಲಿ ಹೊರಗುಳಿದಿವೆ.

ಯಾವಾಗ ಜಾರಿ?

 • ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಘೋಷಿಸಿರುವ ಆಯುಷ್ಮಾನ್ ಭಾರತ್ ಯೋಜನೆ ಸೆ.25ಕ್ಕೆ ದೀನ್ ದಯಾಳ್ ಉಪಾಧ್ಯಾಯ ಜಯಂತಿಯಂದು ಹನ್ನೊಂದು ರಾಜ್ಯದಲ್ಲಿ ಆರಂಭವಾಗಲಿದೆ.

ಫಲಾನುಭವಿಗಳು

 • ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಎಪಿಎಲ್ ಕಾರ್ಡ್​ದಾರರಿಗೆ ಶೇ.30 ವೆಚ್ಚವನ್ನು ಸರ್ಕಾರ ಪಾವತಿಸುತ್ತದೆ. ಆದರೆ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್​ದಾರರಿಗಷ್ಟೇ ವೈದ್ಯಕೀಯ ಸೇವೆ ಸಿಗುತ್ತದೆ.

ಪ್ಯಾಕೇಜ್ ವ್ಯವಸ್ಥೆ

 • ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಚಿಕಿತ್ಸಾ ವೆಚ್ಚವನ್ನು ಪ್ಯಾಕೇಜ್ ರೂಪದಲ್ಲಿಯೇ ಭರಿಸಲಾಗುತ್ತದೆ. ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ನಿಗದಿ ಮಾಡಬಹುದಾಗಿದೆ. ರಾಜ್ಯ ಸರ್ಕಾರ ವೆಚ್ಚ ಭರಿಸುವುದರಿಂದ ದರ ನಿಗದಿ ಮಾಡುವ ಅಧಿಕಾರ ನೀಡಲಾಗಿದೆ.
 • ಆರೋಗ್ಯ ಕರ್ನಾಟಕ ಯೋಜನೆಯಡಿ ಸಹ ಪ್ಯಾಕೇಜ್ ವ್ಯವಸ್ಥೆ ರೂಪಿಸಲಾಗಿದ್ದು, ಹೃದ್ರೋಗ ಚಿಕಿತ್ಸೆಗೆ (65 ಸಾವಿರ ರೂ), ಮಂಡಿಚಿಪ್ಪು ಬದಲಾವಣೆ (ನೀ ರಿಪ್ಲೇಸ್​ವೆುಂಟ್) ಚಿಕಿತ್ಸೆಗೆ (65 ಸಾವಿರ ರೂ), ಕಣ್ಣಿನ ನರ ಚಿಕಿತ್ಸೆ (8 ಸಾವಿರ ರೂ.) ಸೇರಿದಂತೆ ವಿವಿಧ ಚಿಕಿತ್ಸೆಗೆ ದರ ನಿಗದಿ ಮಾಡಲಾಗಿದೆ.

ಪ್ರತ್ಯೇಕ ಕಾರ್ಡ್ ಬೇಕಿಲ್ಲ

 • ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಫಲಾನುಭವಿಗಳು ಸೇವೆ ಪಡೆಯಲು 10 ರೂ. ಪಾವತಿಸಿ ಹೆಲ್ತ್ ಕಾರ್ಡ್ ಪಡೆದುಕೊಳ್ಳಬೇಕು. ಸದ್ಯ ಪಡಿತರ ಚೀಟಿ ತೋರಿಸಿದರೂ ಚಿಕಿತ್ಸೆ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಲು ಆಧಾರ್ ಕಾರ್ಡ್ ವಿನಾಯಿತಿ ಸಹ ನೀಡಲಾಗಿದೆ. ಪಡಿತರ ಚೀಟಿ, ಚಾಲನಾ ಪರವಾನಿಗೆ, ಚುನಾವಣಾ ಗುರುತಿನ ಚೀಟಿ ತೋರಿಸಿ ಸೇವೆ ಪಡೆದುಕೊಳ್ಳಬಹುದಾಗಿದೆ. ಪ್ರತ್ಯೇಕ ಕಾರ್ಡ್ ಪಡೆಯಬೇಕಿಲ್ಲ.

ಆಯುಷ್ಮಾನ್ ಭಾರತ್ ವಿಶೇಷತೆ

 • ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವೈದ್ಯಕೀಯ ಸೇವಾ ವೆಚ್ಚ ಲಭ್ಯ
 • ದೇಶದ 50 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಗುರಿ
 • ದೇಶದಲ್ಲಿ ನೋಂದಾಯಿತ ಯಾವುದೇ ಸರ್ಕಾರಿ/ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡದೆ ಚಿಕಿತ್ಸೆ ಸಿಗುತ್ತೆ
 • ಫಲಾನುಭವಿಗಳು ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆ ಎರಡೂ ಕಡೆ ಸೇವೆ ಪಡೆಯಬಹುದು
 • ಮುಂಚಿತವಾಗಿಯೇ ಚಿಕಿತ್ಸಾ ವೆಚ್ಚದ ಪ್ಯಾಕೇಜ್ ನಿಗದಿ ಮಾಡಿದ್ದರಿಂದ ಹೆಚ್ಚುವರಿ ಹಣ ಸುಲಿಗೆಗೆ ಬ್ರೇಕ್
 • ನೋಂದಾಯಿತ ಆಸ್ಪತ್ರೆಯ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ
 • ವಿಮಾ ಕಂಪನಿಗಳ ಪ್ರೀಮಿಯಂ ಪಾವತಿ ವೆಚ್ಚ ಕೇಂದ್ರ ಮತ್ತು ರಾಜ್ಯಕ್ಕೆ ನಿಗದಿಯಂತೆ ಹಂಚಿಕೆ
 • ಯೋಜನೆಯ ವ್ಯವಸ್ಥಿತ ಜಾರಿಗೆ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನಾ ಮಂಡಳಿ ರಚನೆ

ಅನನುಕೂಲ

 • ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿಗದಿಪಡಿಸಿರುವ ಪ್ಯಾಕೇಜ್ ದರ ಕಡಿಮೆ
 • ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶದಿಂದ ಸರ್ಕಾರಿ ಆಸ್ಪತ್ರೆಯತ್ತ ರೋಗಿಗಳು ಬರದಿರಬಹುದು
 • ಆರ್ಥಿಕ ನೆರವಿನಲ್ಲಿ ಕೇಂದ್ರದ ಪಾಲು ಕಡಿಮೆಯಿದ್ದರೂ ಪೂರ್ಣ ಕ್ರೆಡಿಟ್ ಹೋಗುತ್ತದೆ. ನಕಲಿ ಗುರುತಿನ ಚೀಟಿ ಸೃಷ್ಟಿಸಿ ವೈದ್ಯ ಸೇವೆ ಪಡೆಯುವ ಸಾಧ್ಯತೆ.

ಆರೋಗ್ಯ ಕರ್ನಾಟಕ ಸೇವೆ

 • ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಆದ್ಯತೆ. ವೈದ್ಯರ ಶಿಫಾರಸಿನ ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
 • 1.34 ಕೋಟಿ ಕುಟುಂಬಗಳಿಗೆ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ರಕ್ಷಣೆ
 • ವೈದ್ಯಕೀಯ ಪ್ಯಾಕೇಜ್ ದರದಲ್ಲಿ ಹೆಚ್ಚಳ, ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ
 • ಬಿಪಿಎಲ್ ಕಾರ್ಡ್ ಮಾನದಂಡ ಹಿನ್ನೆಲೆ ಯಲ್ಲಿ ಬಡವರಿಗೆ ಸಿಗಲಿದೆ ಯೋಜನೆ ಫಲ
 • ಎಪಿಎಲ್ ಕಾರ್ಡ್​ದಾರರಿಗೂ ಯೋಜನೆಯ ಪ್ಯಾಕೇಜ್ ದರದ ಶೇ.30 ಪಾವತಿಸಬಹುದು.
 • ಯೋಜನೆ ಅಡಿ 1516 ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆ.
 • ಪಡಿತರ ಚೀಟಿ ತೋರಿಸಿಯೂ ಆರೋಗ್ಯ ಸೇವೆ ಪಡೆದುಕೊಳ್ಳುವ ವ್ಯವಸ್ಥೆ.

ಅನನುಕೂಲ

 • ಚಿಕಿತ್ಸಾ ವೆಚ್ಚ 2 ಲಕ್ಷ ರೂ. ಮೀರಿದರೆ ರೋಗಿಯೇ ಹೆಚ್ಚುವರಿ ವೆಚ್ಚ ಭರಿಸಬೇಕು.
 • ರೋಗಿ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ.

ಸೆಕ್ಷನ್ 377 

ಸುದ್ಧಿಯಲ್ಲಿ ಏಕಿದೆ?ವಿವಾದಿತ ಐಪಿಸಿ ಸೆಕ್ಷನ್ 377 ರದ್ದತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ.

 • ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಅರ್ಜಿ ವಿಚಾರಣೆ ನಡೆಸಿ ಜು.17ರಂದು ತೀರ್ಪು ಕಾಯ್ದಿರಿಸಿತ್ತು. ಸಂವಿಧಾನ ಪೀಠ ನೀಡುವ ಆದೇಶ ಭಾರತದಲ್ಲಿ ಸಲಿಂಗ ಕಾಮದ ಭವಿಷ್ಯವನ್ನು ನಿರ್ಧರಿಸಲಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದಂತೆ ತೀರ್ಪಿನಲ್ಲಿ ಐಪಿಸಿ ಸೆಕ್ಷನ್ 377ರ ಅಗತ್ಯ ಹಾಗೂ ಸಲಿಂಗ ಕಾಮದ ಅಪರಾಧೀಕರಣದ ಬಗ್ಗೆ ಮಾತ್ರ ಉಲ್ಲೇಖವಿರಲಿದೆ.
 • ಐಪಿಸಿ ಸೆಕ್ಷನ್ 377ನ್ನು ರದ್ದುಪಡಿಸಲು ವಿರೋಧ ಅಥವಾ ಪರವಾದ ಅಭಿಪ್ರಾಯ ತಿಳಿಸದೇ ನ್ಯಾಯಪೀಠದ ಆದೇಶ ಗೌರವಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಕೋರ್ಟ್ ಆದೇಶದ ಮೇಲೆ ಎಲ್​ಜಿಬಿಟಿ ಸಮುದಾಯ ಅತಿಯಾದ ನಿರೀಕ್ಷೆ ಇರಿಸಿಕೊಂಡಿದೆ.

ದಶಕಗಳ ಹೋರಾಟ

 • ಐಪಿಸಿ ಸೆಕ್ಷನ್ 377 ರದ್ದುಪಡಿಸಿ 2009ರಲ್ಲಿ ದೆಹಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ 2013ರಲ್ಲಿ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿತ್ತು. ಪರಿಶೀಲನಾ ಅರ್ಜಿ ಕೂಡ ಸುಪ್ರೀಂ ಕೋರ್ಟ್ ನಲ್ಲಿ ವಜಾಗೊಂಡಿತ್ತು.
 • ಖಾಸಗಿತನವೂ ಸಂವಿಧಾನದ ಹಕ್ಕು ಎಂದು ತೀರ್ಪು ಬಂದ ಬಳಿಕ ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿ, ಸಂವಿಧಾನ ಪೀಠದಿಂದ ವಿಚಾರಣೆಗೆ ನಿರ್ಧರಿಸಿತ್ತು. ಈಗಾಗಲೇ ಐರೋಪ್ಯ ದೇಶಗಳಲ್ಲಿ ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಲಾಗಿದೆ. ಆದರೆ ಸಲಿಂಗ ಮದುವೆಗೆ ಎಲ್ಲ ದೇಶಗಳು ಇನ್ನೂ ಮಾನ್ಯತೆ ನೀಡಿಲ್ಲ. ಭಾರತದಲ್ಲಿ ಸಲಿಂಗಿ ಮದುವೆಗೆ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಸೆಕ್ಷ ನ್‌ 377

 • ಯಾವುದೇ ಗಂಡು, ಹೆಣ್ಣು ಅಥವಾ ಪ್ರಾಣಿಯ ಜತೆಗೆ ನಿಸರ್ಗದ ವಿರುದ್ಧವಾಗಿ ಸ್ವಯಂ ಪ್ರೇರಣೆಯಿಂದಲೂ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧ ಎಂದು ಐಪಿಸಿ 377 ಸೆಕ್ಷ ನ್‌ ಹೇಳುತ್ತದೆ. ಈ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ ಇದೆ.

ಹಿನ್ನೆಲೆ

 • 2009ರಲ್ಲಿ ದೆಹಲಿಯ ಹೈಕೋರ್ಟ್​ ಪರಸ್ಪರ ಒಪ್ಪಿಗೆ ಪಡೆದ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಅಲ್ಲದೆ, 377 ಕಾಯಿದೆ ಸಂವಿಧಾನ ವಿಧಿ 21, 14 ಮತ್ತು 15ರ ಉಲ್ಲಂಘನೆ ಎಂದು ಹೇಳಿತ್ತು.
 • 2013ರಲ್ಲಿಯೇ ಸುಪ್ರೀಂ ಕೋರ್ಟ್​ ‘ಕಾನೂನುಬದ್ಧವಾಗಿ ಸಮರ್ಥನೀಯವಲ್ಲ’ ದ ಪ್ರಕರಣವೆಂದು ಹೈಕೋರ್ಟ್​ ತೀರ್ಪನ್ನು ತಳ್ಳಿಹಾಕಿತ್ತು

ಪಿಂಚಣಿ, ಜನಧನಕ್ಕೆ ಇನ್ನಷ್ಟು ರಿಯಾಯಿತಿ

ಸುದ್ಧಿಯಲ್ಲಿ ಏಕಿದೆ ?ಅಟಲ್ ಪಿಂಚಣಿ ಹಾಗೂ ಜನಧನ ಯೋಜನೆಯ ಸವಲತ್ತುಗಳನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಾಡಲಾದ ಬದಲಾವಣೆಗಳು ಯಾವುವು?

 • ಜನಧನ ಯೋಜನೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 32.41 ಖಾತೆಗಳನ್ನು ತೆರೆದು 81,200 ಕೋಟಿ ರೂ. ಠೇವಣಿ ಇಡಲಾಗಿದೆ. ಮೊದಲು ಕುಟುಂಬಕ್ಕೊಂದು ಖಾತೆ ಎನ್ನುವ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಈಗ ಪ್ರತಿಯೊಬ್ಬ ವ್ಯಕ್ತಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಯೋಜನೆ ವ್ಯಾಪ್ತಿಗೆ ಬರಲು 18ರಿಂದ 65 ವರ್ಷದವರೆಗಿನ ಜನರಿಗೆ ಅವಕಾಶ ನೀಡಲಾಗಿದೆ.
 • ಪ್ರತಿ ಖಾತೆಯಲ್ಲಿನ ಓವರ್​ಡ್ರಾಫ್ಟ್ ಮೊತ್ತವನ್ನು 5 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳಿಗೆ ಏರಿಸಲು ನಿರ್ಧರಿಸಲಾಗಿದೆ.
 • ಪ್ರತಿ ಖಾತೆ ಮೇಲೆ ನೀಡುತ್ತಿದ್ದ ಅಪಘಾತ ವಿಮೆಯನ್ನು 30 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
 • ಆರ್ಥಿಕ ಸಬಲೀಕರಣ ಯೋಜನೆಯ ಭಾಗವಾಗಿ ಅಟಲ್ ಪಿಂಚಣಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ನೋಂದಣಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ಮೂಲಕ ಯಾವುದೇ ಉದ್ಯೋಗಿಗಳು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಸದ್ಯಕ್ಕೆ ಯಾವುದೇ ಕಾಲಮಿತಿಯನ್ನೂ ನಿಗದಿಪಡಿಸಿಲ್ಲ

ಪ್ರಮುಖ ನಿರ್ಣಯಗಳು

 • ಅಮೃತಸರ್, ಬೋಧಗಯಾ, ನಾಗ್ಪುರ, ಸಂಬಲಾಪುರ, ಸಮೌರ್, ವಿಶಾಖಪಟ್ಟಣಂ ಹಾಗೂ ಜಮ್ಮುವಿನಲ್ಲಿ ಹೊಸ ಐಐಎಂ ಸ್ಥಾಪನೆಗೆ 3775.42 ಕೋಟಿ ರೂ.
 • ಕರ್ನಾಟಕ ಸೇರಿ 21 ರಾಜ್ಯಗಳಲ್ಲಿ ಚಾಲನೆಯಲ್ಲಿರುವ ಪ್ರೊಜೆಕ್ಟ್ ಟೈಗರ್ ಹಾಗೂ ಎಲಿಫಂಟ್ ಯೋಜನೆಗೆ 1731.72 ಕೋಟಿ ರೂ.

ಅಟಲ್ ಪಿಂಚಣಿ ಯೋಜನೆಯ ಬಗ್ಗೆ

 • ಸಚಿವಾಲಯ / ಇಲಾಖೆ: ಹಣಕಾಸು ಸಚಿವಾಲಯ
 • ಉದ್ದೇಶ: ಅಸಂಘಟಿತ ವಲಯದಲ್ಲಿನ ಕಾರ್ಮಿಕರ ನಡುವಿನ ದೀರ್ಘಾಯುಷ್ಯ ಅಪಾಯಗಳನ್ನು ಪರಿಹರಿಸಲು ಮತ್ತು ತಮ್ಮ ನಿವೃತ್ತಿಗಾಗಿ ಸ್ವಯಂಪ್ರೇರಣೆಯಿಂದ ಉಳಿಸಲು ಕಾರ್ಮಿಕರನ್ನು ಅಸಂಘಟಿತ ವಲಯದಲ್ಲಿ ಪ್ರೋತ್ಸಾಹಿಸಲು
 • ಯೋಜನೆ: ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಯ ಸದಸ್ಯರಾಗಿಲ್ಲದ ಎಲ್ಲಾ ಬ್ಯಾಂಕ್ ಖಾತೆದಾರರಿಗೆ ಅಟಲ್ ಪಿಂಚಣಿ ಯೋಜನೆ (APY) ತೆರೆದಿರುತ್ತದೆ.
 • ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್ಡಿಎ) ನಿರ್ವಹಿಸುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಗೆ ಸೇರುವ ಮತ್ತು ಯಾವುದೇ ಕಾನೂನುಬದ್ಧ ಸಾಮಾಜಿಕ ಭದ್ರತಾ ಯೋಜನೆಯ ಸದಸ್ಯರಲ್ಲದ ಅಸಂಘಟಿತ ವಲಯದ ಎಲ್ಲಾ ನಾಗರಿಕರ ಮೇಲೆ ಎಪಿವೈ ಗಮನಹರಿಸುತ್ತದೆ.
 • ಈಗ ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು APY ಯನ್ನು ಸಹ ನೀಡಬಹುದು (ಜನವರಿ 2018 ರಲ್ಲಿ ಬದಲಾಯಿಸಲಾಗಿದೆ)
 • ಚಂದಾದಾರರ ಕೊಡುಗೆ ಅವರ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ
 • ಚಂದಾದಾರರು ರೂ. 60 ವರ್ಷ ವಯಸ್ಸಿನಲ್ಲಿ, ತಮ್ಮ ಕೊಡುಗೆಗಳನ್ನು ಅವಲಂಬಿಸಿ 1K / 2K / 3K / 4K / 5K ತಿಂಗಳಿಗೆ.
 • ಚಂದಾದಾರರ ಕೊಡುಗೆಗಳಲ್ಲಿ 50% ಅಥವಾ ರೂ. 2015 ರ ಡಿಸೆಂಬರ್ 31 ರ ಮೊದಲು 2015 ರ ಡಿಸೆಂಬರ್ 31 ರ ಮೊದಲು NPS ಗೆ ಸೇರಿಕೊಳ್ಳುವ ಮತ್ತು 2015 ರಿಂದ 16 ರವರೆಗೆ 2019-20 ರವರೆಗೆ 5 ವರ್ಷಗಳಿಗೊಮ್ಮೆ, ಪ್ರತಿ ಅರ್ಹ ಚಂದಾದಾರ ಖಾತೆಗೆ, ವರ್ಷಕ್ಕೆ 1000, ಯಾವುದು ಕಡಿಮೆಯಾದರೂ, ಆದಾಯ ತೆರಿಗೆದಾರರು
 • 60 ನೇ ವಯಸ್ಸಿಗೆ ಮುಂಚಿತವಾಗಿ ಈ ಯೋಜನೆಗೆ ಯಾವುದೇ ನಿರ್ಗಮನವಿಲ್ಲ. ಚಂದಾದಾರರ ಮರಣದ ಸಂದರ್ಭದಲ್ಲಿ, ಚಂದಾದಾರರ ಸಂಗಾತಿಗೆ ಅವನು ಅಥವಾ ಅವಳ ಸಾವಿನ ತನಕ ಅದೇ ರೀತಿಯ ಪಿಂಚಣಿಗೆ ಅರ್ಹತೆ ನೀಡಲಾಗುವುದು.

ವಾಸ್ತವಿಕ ಮಾಹಿತಿ:

 • APY ಯ ಸೇರುವ ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು .
 • APY ಅಡಿಯಲ್ಲಿ ಚಂದಾದಾರರ ಕನಿಷ್ಟ ಅವಧಿ 20 ವರ್ಷ ಅಥವಾ ಹೆಚ್ಚಿನದಾಗಿರುತ್ತದೆ.
 • 2015 ರಲ್ಲಿ ಪ್ರಾರಂಭಿಸಲಾಗಿದೆ
 • Swavalamban ಯೋಜನೆಯ ಅಸ್ತಿತ್ವದಲ್ಲಿರುವ ಚಂದಾದಾರರು ಸ್ವಯಂಚಾಲಿತವಾಗಿ APY ಗೆ ವಲಸೆ ಹೋಗುತ್ತಾರೆ, ಅವರು ಹೊರಗುಳಿಯುವುದನ್ನು ಹೊರತುಪಡಿಸಿ
 • ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ನಿರ್ವಹಿಸುತ್ತದೆ
 • APY ನ ಪ್ರಯೋಜನಗಳನ್ನು ಪಡೆಯಲು ಆಧಾರ್ಗೆ ಕಡ್ಡಾಯವಾಗಿದೆ
 • 11.41 ಎಪಿವೈ ಖಾತೆಗಳೊಂದಿಗೆ ಉತ್ತರ ಪ್ರದೇಶವು ಬಿಹಾರ (8.87 ಲಕ್ಷ ಚಂದಾದಾರರು) ಮತ್ತು ತಮಿಳುನಾಡು (6.60 ಲಕ್ಷ) ನಂತರದ ಸ್ಥಾನದಲ್ಲಿದೆ.
Related Posts
National Current Affairs – UPSC/KAS Exams – 22nd May 2018
International Day for Biological Diversity – 22nd May The United Nations has proclaimed May 22 The International Day for Biological Diversity (IDB) to increase understanding and awareness of biodiversity issues. When first ...
READ MORE
 The Cabinet Committee on Economic Affairs (CCEA) has given its approval for creation of buffer stock of pulses. Background: Although India is the highest producer of pulses in the world, its ...
READ MORE
∗ Gene theft or DNA theft is the act of acquiring the genetic material of another human being, often from a public place, without his or her permission. ∗ The DNA ...
READ MORE
New mobile app to help fishermen
An app under the aegis of the Central Marine Fisheries Research Institute (CMFRI) has been developed to aid fishermen to increase their catch and reduce the cost of operations, the ...
READ MORE
“29th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಭೂಗತ ತೈಲ ಸಂಗ್ರಹ ಘಟಕ ಸುದ್ದಿಯಲ್ಲಿ ಏಕಿದೆ?  ಖಾಸಗಿ ಸಹಭಾಗಿತ್ವದಲ್ಲಿ ಉಡುಪಿಯ ಕಾಪು ಸಮೀಪವಿರುವಪಡೂರಿನಲ್ಲಿ ಭೂಗತ ಕಚ್ಚಾ ತೈಲ ಸಂಗ್ರಹ ಘಟಕನಿರ್ಮಾಣಕ್ಕೆ ಕೇಂದ್ರ ಸರಕಾರ ತಾತ್ವಿಕ ಅನುಮೋದನೆ ನೀಡಿದೆ.  ಮಂಗಳೂರಿನಲ್ಲಿ ಈಗಾಗಲೇ 1.5 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲ ಸಂಗ್ರಹ ಘಟಕ ಸ್ಥಾಪಿಸಲಾಗಿದ್ದು, ಇದೀಗ ...
READ MORE
Urban Development: Jawaharlal Nehru National Urban Renewal Mission (JNNURM)
The Mission aims at creating economically productive, efficient, equitable and responsive cities. It is being implemented in the cities of Bengaluru and Mysuru in Karnataka with KUIDFC as the Nodal Agency. The ...
READ MORE
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಮ್ಯಾಗ್ಸೆಸೆ ಪುರಸ್ಕಾರ  ಸುದ್ಧಿಯಲ್ಲಿ ಏಕಿದೆ? ‘ಏಷ್ಯಾದ ನೊಬೆಲ್ ’ ಎಂದೇ ಖ್ಯಾತಿ ಗಳಿಸಿರುವ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ಸೋನಂ ವಾಂಗ್​ಚುಕ್ ಮತ್ತು ಡಾ. ಭರತ್ ವಟವಾನಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಆಗಸ್ಟ್ 31ರಂದು ಫಿಲಿಪ್ಪೀನ್ಸ್ ನಲ್ಲಿ ನಡೆಯುವ ...
READ MORE
RNTCP or the Revised National Tuberculosis Control Program is the state-run tuberculosis control initiative of the Government of India. It incorporates the principles of directly observed treatment-shortcourse (DOTS), the global TB ...
READ MORE
Karnataka Current Affairs – KAS/KPSC Exams – 28th Nov 2017
1,07,354 BPL beneficiaries to get LPG connection Minister for Social Welfare and district in-charge H. Anjaneya has said that below poverty line and anthodaya card holders would be given free LPG ...
READ MORE
Atal Innovation Mission
The Atal Innovation Mission (AIM)was set up under NITI. In the budget for 2014-15, Rs 150 crore was allotted for the innovation mission, which will replace the National Innovation Council, a ...
READ MORE
National Current Affairs – UPSC/KAS Exams – 22nd
Long term measures to increase production of pulses
GENE THEFT
New mobile app to help fishermen
“29th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Urban Development: Jawaharlal Nehru National Urban Renewal Mission
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
TB treatment programme – Issues
Karnataka Current Affairs – KAS/KPSC Exams – 28th
Atal Innovation Mission

Leave a Reply

Your email address will not be published. Required fields are marked *