“19th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಸಫಾರಿ ಭಾಗ್ಯ

ಸುದ್ದಿಯಲ್ಲಿ ಏಕಿದೆ ?ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಕೆಲವೇ ದಿನಗಳಲ್ಲಿ ಹುಲಿ ಮತ್ತು ಸಿಂಹಗಳನ್ನು ಸಮೀಪದಿಂದ ನೋಡುವ ಭಾಗ್ಯ ಸಿಗಲಿದೆ.

 • ಹಂಪಿ ಬಳಿ ಇರುವ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ನಲ್ಲಿ ಹುಲಿ ಮತ್ತು ಸಿಂಹ ಸಫಾರಿ ಕೇಂದ್ರ ನವೆಂಬರ್‌ನಿಂದ ಆರಂಭವಾಗಲಿದೆ.
 • ಈಗಾಗಲೇ ಬೆಂಗಳೂರಿನ ಬನ್ನೇರುಘಟ್ಟ ಮತ್ತು ಶಿವಮೊಗ್ಗದ ತಾವರೆಕೊಪ್ಪದಲ್ಲಿ ಇಂತಹ ಸಫಾರಿ ಕೇಂದ್ರಗಳಿವೆ. ವಾಜಪೇಯಿ ಪಾರ್ಕ್‌ನಲ್ಲಿ ತಲೆ ಎತ್ತಲಿರುವ ಸಫಾರಿ ಕೇಂದ್ರ ರಾಜ್ಯದಲ್ಲಿ 3ನೇಯದು ಎಂಬ ಹಿರಿಮೆಗೆ ಪಾತ್ರವಾಗಲಿದೆ.
 • ಮೈಸೂರಿನಿಂದ ಎರಡು ಹುಲಿ ಮತ್ತು ಎರಡು ಸಿಂಹ, ಬನ್ನೇರುಘಟ್ಟದಿಂದ ಎರಡು ಹುಲಿ ಮತ್ತು ಎರಡು ಸಿಂಹ ತರಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಂಪಿಯ ಅನತಿ ದೂರದಲ್ಲಿನ ಕಮಲಾಪುರ ಬಳಿಯ ಸುಮಾರು 150 ಹೆಕ್ಟೇರ್‌ ಪ್ರದೇಶದಲ್ಲಿ ಈ ಪಾರ್ಕ್‌ ಇದೆ. ಸುಮಾರು 30 ಹೆಕ್ಟೇರ್‌ ಪ್ರದೇಶದಲ್ಲಿ ಜಿಂಕೆ ಸೇರಿದಂತೆ ಇತರ ಪ್ರಾಣಿಗಳ ಸಫಾರಿ ಕೇಂದ್ರ ಆರಂಭಿಸಲಾಗಿದೆ.

ಹೋಲ್ಡಿಂಗ್‌ ಹೌಸ್‌ ವ್ಯವಸ್ಥೆ ಮಾಡಲಾಗಿದೆ

 • ಸಫಾರಿ ಕೇಂದ್ರದ ಸುತ್ತಲೂ ಸುಮಾರು 16 ಅಡಿ ಎತ್ತರದ ತಂತಿ ಬೇಲಿ ವ್ಯವಸ್ಥೆ ಮಾಡಲಾಗಿದೆ. ಹುಲಿ ಮತ್ತು ಸಿಂಹಗಳಿಗೆ ಎಂಟು ಹೋಲ್ಡಿಂಗ್‌ ಹೌಸ್‌ ನಿರ್ಮಿಸಲಾಗಿದೆ.
 • ಸಫಾರಿಗೆ ಹೋಗುವ ಪ್ರವಾಸಿಗರಿಗೆ ಹುಲಿ ಮತ್ತು ಸಿಂಹ ಕಾಣುವ ಮಾದರಿಯಲ್ಲಿ ಬ್ರೆಕಲ್‌(ಬಯಲು) ಪ್ರದೇಶವನ್ನು ಒದಗಿಸಲಾಗಿದೆ. ಹುಲಿ ಸಫಾರಿ ಕೇಂದ್ರದ ಒಳಗಡೆ 3 ಕಿ.ಮೀ. ಮತ್ತು ಸಿಂಹ ಸಫಾರಿ ಕೇಂದ್ರದಲ್ಲಿ 3 ಕಿ.ಮೀ.ಸಫಾರಿ ಮಾಡಲು ಟ್ರಕ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಫಾರಿಗೆ 14 ಆಸನಗಳುಳ್ಳ ಒಂದು ವಾಹನ ತರಿಸಲಾಗಿದೆ.
 • ಉತ್ಸವದ ಸಂದರ್ಭದಲ್ಲಿ ಚಾಲನೆ:ಮೃಗಾಲಯ ಪ್ರಾಧಿಕಾರ ನವೆಂಬರ್‌ನಲ್ಲಿ ನಡೆಯುವ ಹಂಪಿ ಉತ್ಸವ ಸಂದರ್ಭದಲ್ಲಿ ಹುಲಿ ಮತ್ತು ಸಿಂಹಗಳ ಸಫಾರಿ ಕೇಂದ್ರಕ್ಕೆ ಚಾಲನೆ ನೀಡಲಿದೆ

ನವೆಂಬರ್ 3ರಿಂದ 5ರವರೆಗೆ ಹಂಪಿ ಉತ್ಸವ

 • ನವೆಂಬರ್‌ 3ರಿಂದ 5ರವರೆಗೆ ಮೂರು ದಿನಗಳ ಕಾಲ ಪ್ರತಿ ವರ್ಷದಂತೆ ಅದ್ಧೂರಿಯಾಗಿ ಹಂಪಿ ಉತ್ಸವ ನೆರವೇರಲಿದೆ, ಉತ್ಸವದ ಯಶಸ್ವಿಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿ ಉತ್ಸವಕ್ಕೆಂದೇ 10ಕೋಟಿ ರೂ,ಗಳ ಅನುದಾನವನ್ನು ತೆಗೆದಿರಿಸುತ್ತಿತ್ತು, ಆದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಜೆಟ್ ನಲ್ಲಿ ಹಂಪಿ ಉತ್ಸವಕ್ಕೆ ಯಾವುದೇ ಅನುದಾನವನ್ನು ತೆಗೆದಿರಿಸಿರಲಿಲ್ಲ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಂಪನ್ಮೂಲ ಕ್ರೋಢೀಕರಿಸಿ ಹಂಪಿ ಉತ್ಸವ ನೆರವೇರಿಸುವುದಾಗಿ ಹಂಪಿ ಉತ್ಸವ ನಡೆಯಲಿದೆ

‘ಭೂಸ್ತರ ಭಂಗ’ 

ನದಿ, ಬಾವಿಗಳು ಬತ್ತಲು ಆರಂಭಿಸಿವೆ, ಈ ವೈಪರೀತ್ಯಕ್ಕೆ ಕಾರಣವೇನು?

 • ಭೂಮಿ ಮೇಲೆ ಎಷ್ಟೇ ಬಿಸಿಲು- ಶಾಖವಿದ್ದರೂ ನೀರು ಇಷ್ಟೊಂದು ಪ್ರಮಾಣದಲ್ಲಿ ಆವಿಯಾಗುವುದಿಲ್ಲ. ಅಂತರ್ಜಲ ಮಿತಿಮೀರಿ ಬಳಸಿರುವುದು ಜಲಮೂಲ ಬತ್ತಲು ಪ್ರಮುಖ ಕಾರಣ. ಮಣ್ಣಿನಲ್ಲಿ ನೀರಿನ ಒರತೆ ಪ್ರಮಾಣ ಸಂಪೂರ್ಣ ಕುಗ್ಗಿದೆ. ಮಣ್ಣು ಧಾರಣಾ ಶಕ್ತಿ ಕಳೆದುಕೊಂಡಿದೆ. ಪಶ್ಚಿಮಘಟ್ಟದಲ್ಲಿ ಭೂ ಸ್ತರ ಭಂಗ ಸಂಭವಿಸಿದ್ದರೆ ಹೀಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇದರ ವೈಜ್ಞಾನಿಕ ವಿಶ್ಲೇಷಣೆ ಹೇಗೆ?

 • ಇತ್ತೀಚಿನ ಭಾರಿ ಮಳೆಗೆ ಅಲ್ಲಲ್ಲಿ ವಿಪರೀತ ಭೂಕುಸಿತ ಉಂಟಾಯಿತು. ಇದೊಂದು ಸುಳಿವು. ಈ ಹಿನ್ನೆಲೆಯಲ್ಲಿ ನೋಡಿದಾಗ 65 ಮಿಲಿಯನ್ ವರ್ಷಗಳ ಹಿಂದೆ ಭೂಖಂಡ ಬೇರ್ಪಟ್ಟು, ಭೂ ಸ್ತರ ಭಂಗವಾಗಿ (ಫಾಲ್ಟಿಂಗ್ ಪ್ರೊಸೆಸ್) ರತ್ನಗಿರಿಯಿಂದ ಕೇರಳವರೆಗೆ ಪಶ್ಚಿಮಘಟ್ಟ ಸೃಷ್ಟಿಯಾಗಿದೆ.
 • ಇಲ್ಲಿ ನಾನಾ ರೀತಿಯ ಫಾಲ್ಟಿಂಗ್ ಏರ್ಪಟ್ಟಿದೆ. ಆ ಪ್ರಕ್ರಿಯೆ ಮತ್ತೆ ಸಕ್ರಿಯವಾದಂತೆ ಕಾಣಿಸುತ್ತದೆ. ಫಾಲ್ಟಿಂಗ್ ಎಂದರೆ ಭೂಮಿಯ ಆಳದಲ್ಲಿ ಶಿಲಾಪದರಗಳು ಅಸ್ಥಿರಗೊಳ್ಳುವುದು. ಇದು ಒಮ್ಮೆ ಅಸ್ಥಿರಗೊಂಡರೆ ನೀರನ್ನು ತನ್ನೊಳಗೆ ಆಳಕ್ಕೆ ತೆಗೆದುಕೊಳ್ಳುತ್ತದೆ.
 • ಶಿಲಾಪದರಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದರಿಂದ ಟೊಳ್ಳು ಸೃಷ್ಟಿಯಾಗಿ ಆ ಜಾಗಕ್ಕೆ ನೀರು ತುಂಬುತ್ತದೆ. ಆಗ ಭೂಮಿಯ ಮೇಲ್ಭಾಗದಲ್ಲಿ ನೀರು ನಿಲ್ಲುವುದಿಲ್ಲ. ಈ ಕಾರಣವನ್ನು ನಾವು ಮುಖ್ಯವಾಗಿ ದೃಢೀಕರಿಸಬಹುದು. ಹಾಗೆ ಭೂಮಿಯ ಆಳದ ಶಿಲಾಪದರ ಸೇರಿದ ನೀರು ವ್ಯರ್ಥವಲ್ಲ. ಬೇಕಾದ ಸಮಯಕ್ಕೆ ಸಿಗುವುದಿಲ್ಲ, ಅಷ್ಟೇ.

ಅಂತರ್ಜಲ ಪ್ರಕ್ರಿಯೆ ಹೇಗೆ?

 • ಸಾಮಾನ್ಯವಾಗಿ ಮಳೆಯಾದಾಗ ನದಿ, ಕೆರೆ, ಬಾವಿಗಳಲ್ಲಿ ನೀರು ಇಂಗಿ, ಬಳಿಕ ಜಿನುಗುತ್ತದೆ. ಇದೊಂದು ‘ರೀಸೈಕಲಿಂಗ್ ಸಿಸ್ಟಂ’. ಈ ಜಿನುಗುವ ಪ್ರಕ್ರಿಯೆಯಿಂದ ನದಿ, ಬಾವಿ, ಕೆರೆಗಳಲ್ಲಿ ನೀರು ಹೆಚ್ಚುತ್ತದೆ. ಈ ವರ್ಷ ದೊಡ್ಡ ಮಳೆಯಾಗಿದೆ. 30-40 ವರ್ಷ ಹಿಂದೆ ಇಂಥ ದೊಡ್ಡ ಮಳೆಯಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾದಂತೆ ಭೂಮಿ ಒಳಪದರದ ಮಣ್ಣು ಒಣಗುತ್ತದೆ. ಭೂಮಿಯಲ್ಲಿ ಅಂತರ್ಜಲ ಮಟ್ಟ ಕ್ರಮೇಣ ಕುಗ್ಗುವುದರಿಂದ ಭೂತಳದಲ್ಲಿ ದೊಡ್ಡ ಅಂತರ ಸೃಷ್ಟಿಯಾಗುತ್ತದೆ. ಈ ಅಂತರ ಏರ್ಪಟ್ಟಾಗ ಎಷ್ಟೇ ಮಳೆ ಬಂದರೂ ನೀರನ್ನು ಶೇಖರಿಸಿಕೊಳ್ಳಲು ಭೂಮಿಗೆ ಸಾಧ್ಯವಾಗುವುದಿಲ್ಲ.

ಈ ಸಮಸ್ಯೆಗೆ ಪರಿಹಾರವಿದೆಯೇ?

 • ಪ್ರಕೃತಿಯ ನಡೆಗೆ ತಡೆ ಸಾಧ್ಯವಿಲ್ಲ. ವಿಜ್ಞಾನ ಸೇರಿದಂತೆ ಯಾವ ಶಕ್ತಿಯಿಂದಲೂ ಆಗದು. ಭೂಮಿಯಲ್ಲಿ ಭೂಕಂಪ, ಭೂ ಕುಸಿತ, ಜ್ವಾಲಾಮುಖಿ ಏನೇನೋ ಸಂಭವಿಸುತ್ತದೆ.

ಇದನ್ನು ತಡೆಯಲು ಹೇಗೆ ಸಾಧ್ಯ?

 • ಸದ್ಯಕ್ಕೆ ವೆಂಟೆಡ್ ಡ್ಯಾಂಗಳ ಗೇಟ್ ಬಂದ್ ಮಾಡಿ ನೀರನ್ನು ಶೇಖರಿಸುವ ಕೆಲಸವಾಗಬೇಕು.

ಇಷ್ಟು ಮಳೆಯಾದರೂ ನೀರಿಗೆ ಕೊರತೆ ಹೇಗೆ?

 • ಈ ಬಾರಿ ಕಂಡುಕೇಳರಿಯದ ರೀತಿಯಲ್ಲಿ ಮಳೆಯಾಗಿದ್ದು, ಭೂಕುಸಿತ ಸಂಭವಿಸಿದೆ. ಇಂಥ ಸಂದರ್ಭಗಳಲ್ಲಿ ವಿಪರೀತ ಮಳೆಯಾದ 10 ದಿನಗಳಲ್ಲಿ ನೀರು ವೇಗವಾಗಿ ಭೂತಳ ಸೇರುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರ ಆಗುವುದಿಲ್ಲ. ಈ ಮಳೆ ಪರಿಣಾಮ ಈ ಬಾರಿ ನೀರಿಗೆ ಸಮಸ್ಯೆ ಇಲ್ಲ ಎಂಬ ಆಲೋಚನೆ ಇದ್ದರೆ ಅದು ಭ್ರಮೆ. ಈಗಾಗಲೇ ನದಿ, ಬಾವಿಗಳು ಬರಿದಾಗುತ್ತಿವೆ. ಡಿಸೆಂಬರ್-ಜನವರಿಯ ಪರಿಸ್ಥಿತಿ ಕಾಣುತ್ತಿದೆ. ಇದು ಜೀವಿಗಳಿಗೆ ಅಪಾಯದ ಮುನ್ಸೂಚನೆ ಖಂಡಿತ ಹೌದು.

ನದಿಗಳು ದಿಢೀರನೇ ಬತ್ತಲು ಕಾರಣ?

 • ಮೇ ಅಂತ್ಯದಲ್ಲಿ ಒಂದೇ ದಿನ ಎಂಟು ಗಂಟೆ ಅವಧಿಯಲ್ಲಿ 414 ಮಿ.ಮೀ. ಮಳೆ ಸುರಿದಿರುವುದನ್ನು ಸುರತ್ಕಲ್‌ಎನ್‌ಐಟಿಕೆ ಹವಾಮಾನ ಪರೀಕ್ಷಾ ವ್ಯವಸ್ಥೆ ದಾಖಲಿಸಿದೆ. ಅಂದರೆ ಕರಾವಳಿಯಲ್ಲಿ ಸಾಮಾನ್ಯವಾಗಿ ಒಂದು ತಿಂಗಳು ಸುರಿಯುವ ಮಳೆ ಈ ಬಾರಿ ಒಂದೇ ದಿನ ಸುರಿದಿದೆ. ಅಧಿಕ ಸಾಂಧ್ರತೆ ಮಳೆ ಸಂದರ್ಭ ಶೇ.90 ನೀರು ಹರಿದು ಸಮುದ್ರ ಸೇರುತ್ತದೆ. ಶೇ.10 ಮಾತ್ರ ಭೂಮಿಯಲ್ಲಿ ಇಂಗುತ್ತದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದಲ್ಲಿ ಸುರಿಯುವ ಮಳೆಯಿಂದ ಮಾತ್ರ ನೀರು ಅಧಿಕ ಪ್ರಮಾಣದಲ್ಲಿ ಭೂಮಿಗೆ ಇಂಗುತ್ತದೆ.

ಇಂಥ ಪರಿಸ್ಥಿತಿಯ ಹಿಂದೆ ಮಾನವನ ಪಾತ್ರವೇನು?

 • ಅಧಿಕ ಪ್ರಮಾಣದಲ್ಲಿ ನಡೆಯುತ್ತಿರುವ ಕಾಡು ನಾಶ, ಕಾಂಕ್ರೀಟೀಕರಣ, ಜಲಮಾರ್ಗಗಳು ಮುಚ್ಚಿರುವುದು ಹೆಚ್ಚಿನ ನಷ್ಟ ತಂದೊಡ್ಡಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ದಾಖಲೆ ಪ್ರಮಾಣದಲ್ಲಿ ಮಳೆಯಾದರೂ ಅಲ್ಪಾವಧಿಯಲ್ಲೇ ನದಿ, ಹಳ್ಳ, ಕೊಳಗಳ ನೀರು ಬಸಿದುಹೋಗುತ್ತಿದೆ.
 • ಪ್ರಕೃತಿಯ ಸಹಜ ರಚನೆಗಳಿಗೆ ಮನುಷ್ಯ ನಿರಂತರ ಅಡ್ಡಿಪಡಿಸುತ್ತಿರುವುದೇ ಈ ಪರಿಸ್ಥಿತಿಗೆ ಮುಖ್ಯ ಕಾರಣ. ಗರಿಷ್ಠ ಪ್ರಮಾಣದಲ್ಲಿ ಅಂತರ್ಜಲ ಬಳಕೆ ನಡೆಯುತ್ತಿದೆ. ಕೈಗಾರಿಕೆ, ಕೃಷಿ ಸಹಿತ ವಿವಿಧ ಕಾರಣಗಳಿಗೆ ನಿರಂತರ ಪಂಪಿಂಗ್ ನಡೆಯುತ್ತಿದೆ. ಪರಿಸ್ಥಿತಿ ನಿಬಾಯಿಸಲು ನಾವು ಈಗಲೇ ಒಂದು ಗಂಭೀರ ಪ್ರಯತ್ನ ನಡೆಸುವುದು ಆವಶ್ಯ. ಕಳೆದ 30 ವರ್ಷದ ಪರಿಸ್ಥಿತಿ ಅವಲೋಕಿಸಿದರೆ ಉಪ್ಪಿನಂಗಡಿಯಲ್ಲಿ ನದಿಯಲ್ಲಿ ಇರುವ ನೀರಿನ ವೇಗ ಬಂಟ್ವಾಳ ತಲುಪುವಾಗ ಇರುವುದಿಲ್ಲ.

ಪರಿಹಾರದ ಭಾಗವಾಗಿ ಏನು ಮಾಡಬಹುದು?

 • ದಕ್ಷಿಣ ಕನ್ನಡದ ಭೂಭಾಗ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಪರಿಹಾರವಾಗಿ ಅಗತ್ಯಕ್ಕೆ ತಕ್ಕಂತೆ ವೆಂಟೆಡ್ ಡ್ಯಾಂಗಳನ್ನು ನಿರ್ವಹಿಸಬಹುದು. ಇತರ ಸ್ಥಳಗಳಲ್ಲಿ ಇರುವಂತೆ ಇಲ್ಲಿ ಡ್ಯಾಂಗಳಲ್ಲಿ ಅಧಿಕ ನೀರು ಸಂಗ್ರಹಿಸಲು ಅವಕಾಶವಿಲ್ಲ. ಸ್ಥಳಾವಕಾಶದ ಕೊರತೆ ಇರುವುದು ಹಾಗೂ ಅಧಿಕ ನೀರು ಸಂಗ್ರಹಿಸಿದರೆ ಜನವಸತಿ ಪ್ರದೇಶ ಮುಳುಗಡೆ ಸಾಧ್ಯತೆ ಇಲ್ಲಿದೆ. ಪರಿಸರದ ಮೇಲೆ ಮಾನವನ ದೌರ್ಜನ್ಯ ನಿಲ್ಲಬೇಕು.

ಅನುತ್ಪಾದಕ ಆಸ್ತಿ 

ಸುದ್ದಿಯಲ್ಲಿ ಏಕಿದೆ ?ಮಿತಿಮೀರುತ್ತಿರುವ ಅನುತ್ಪಾದಕ ಆಸ್ತಿಗಳ (ಎನ್​ಪಿಎ) ಪ್ರಮಾಣದ ಕುರಿತು ವಿವರವಾದ ಚಿತ್ರಣವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ.

 • ಬ್ಯಾಂಕಿಂಗ್ ಕಾರ್ಯದರ್ಶಿ ರಾಜೀವ್ ಕುಮಾರ್, ‘ಕಳೆದ ತ್ರೖೆಮಾಸಿಕದಲ್ಲಿ ಎನ್​ಪಿಎ ಪ್ರಮಾಣ ಇಳಿಕೆಯಾಗಿದ್ದು, 21,000 ಕೋಟಿ ರೂ. ಆಗಿದೆ. 2018-19ನೇ ಹಣಕಾಸು ಸಾಲಿನ ಮೊದಲ ತ್ರೖೆಮಾಸಿಕದಲ್ಲಿ ಬ್ಯಾಂಕ್​ಗಳು 36,551 ಕೋಟಿ ರೂ. ಸಾಲ ಮರುಪಾವತಿ ಮಾಡಿವೆ. ಇನ್ನು ಹೆಚ್ಚು ವೇಗವಾಗಿ ಮರುಪಾವತಿ ಹಾಗೂ ವಸೂಲಾತಿ ಕ್ರಮಗಳು ಜರುಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನ್-ಪರ್ಫಾರ್ಮಿಂಗ್ ಆಸ್ತಿ (ಎನ್ಪಿಎ) ಎಂದರೇನು?

 • ಬ್ಯಾಂಕಿನಿಂದ ನೀಡಲ್ಪಟ್ಟ ಸಾಲವನ್ನು ಅದರ ಆಸ್ತಿಯೆಂದು ಪರಿಗಣಿಸಲಾಗುತ್ತದೆ ಎಂದು ನೀವು ಗಮನಿಸಬಹುದು. ಹಾಗಾಗಿ ಪ್ರಮುಖ ಮೊತ್ತ ಅಥವಾ ಬಡ್ಡಿ ಅಥವಾ ಸಾಲಗಳ ಎರಡೂ ಅಂಶಗಳು ಸಾಲದಾತನಿಗೆ (ಬ್ಯಾಂಕ್) ಸೇವೆ ಸಲ್ಲಿಸುತ್ತಿಲ್ಲವಾದರೆ, ಅದನ್ನು ಒಂದು ನಾನ್-ಪರ್ಫಾರ್ಮಿಂಗ್ ಆಸ್ತಿ (ಎನ್ಪಿಎ) ಎಂದು ಪರಿಗಣಿಸಲಾಗುತ್ತದೆ.
 • ನಿಗದಿತ ಅವಧಿಯವರೆಗೆ ಅದರ ಹೂಡಿಕೆದಾರರಿಗೆ ಆದಾಯವನ್ನು ನೀಡುವ ನಿಲ್ಲುವ ಯಾವುದೇ ಆಸ್ತಿಯನ್ನು ನಾನ್-ಪರ್ಫಾರ್ಮಿಂಗ್ ಆಸ್ತಿ (ಎನ್ಪಿಎ) ಎಂದು ಕರೆಯಲಾಗುತ್ತದೆ.
 • ಸಾಮಾನ್ಯವಾಗಿ, ನಿರ್ದಿಷ್ಟಪಡಿಸಿದ ಸಮಯವು ಬಹುತೇಕ ದೇಶಗಳಲ್ಲಿ ಮತ್ತು ವಿವಿಧ ಸಾಲ ಸಂಸ್ಥೆಗಳಲ್ಲಿ 90 ದಿನಗಳು. ಇದು ಹಣಕಾಸು ಸಂಸ್ಥೆ ಮತ್ತು ಸಾಲಗಾರರಿಂದ ಒಪ್ಪಿಕೊಂಡಿರುವ ನಿಯಮಗಳು ಮತ್ತು ಷರತ್ತುಗಳೊಂದಿಗೆ ಬದಲಾಗಬಹುದು.

ಎನ್ಪಿಎಗಳಿಗೆ ಸಂಭವನೀಯ ಕಾರಣಗಳು ಯಾವುವು?

 • ಸಂಬಂಧವಿಲ್ಲದ ವ್ಯಾಪಾರ / ವಂಚನೆಗೆ ಹಣವನ್ನು ವಿತರಿಸುವುದು.
 • ಶ್ರದ್ಧೆಯಿಂದಾಗಿ ಕುಸಿದಿದೆ.
 • ವ್ಯವಹಾರ / ನಿಯಂತ್ರಕ ಪರಿಸರದಲ್ಲಿ ಬದಲಾವಣೆಗಳಿಂದಾಗಿ ಉದ್ಯೋಗದ ನಷ್ಟಗಳು.
 • ನೈತಿಕತೆಯ ಕೊರತೆ, ವಿಶೇಷವಾಗಿ ಸಾಲಗಳನ್ನು ಬರೆದ ಸರ್ಕಾರಿ ಯೋಜನೆಗಳ ನಂತರ.
 • 2011 ರ ನಂತರ ಇಡೀ ಆರ್ಥಿಕತೆಯ ಸಾಮಾನ್ಯ ಕುಸಿತವು ಭಾರತೀಯ ಆರ್ಥಿಕತೆಯ ಕುಸಿತಕ್ಕೆ ಕಾರಣವಾಯಿತು, ಇದು ಎನ್ಪಿಎಗಳ ಬೆಳವಣಿಗೆಗೆ ಕಾರಣವಾಯಿತು.
 • ನಿರ್ದಿಷ್ಟ ಕೈಗಾರಿಕಾ ವಿಭಾಗದಲ್ಲಿ ಇಳಿಮುಖವಾಗುವುದು, ಆ ಪ್ರದೇಶದಲ್ಲಿನ ಕಂಪೆನಿಗಳು ಶಾಖವನ್ನು ಹೊಂದುತ್ತವೆ ಮತ್ತು ಕೆಲವರು ಎನ್ಪಿಎಗಳಾಗಬಹುದು.
 • ಬೃಹತ್ ಅವಧಿಯಲ್ಲಿ ಮತ್ತು ಸಾಲದ ಸಮಯದಲ್ಲಿ ಕಾರ್ಪೋರೇಟ್ ಯೋಜಿತ ವಿಸ್ತರಣೆ ಕಡಿಮೆ ದರದಲ್ಲಿ ತೆಗೆದುಕೊಂಡ ನಂತರ ಹೆಚ್ಚಿನ ದರದಲ್ಲಿ ಸೇವೆಯುಳ್ಳದ್ದಾಗಿದೆ, ಆದ್ದರಿಂದ, ಎನ್ಪಿಎಗಳಿಗೆ ಕಾರಣವಾಗುತ್ತದೆ.
 • ಕಾರ್ಪೋರೇಟ್ಗಳಿಂದ ದುರ್ಬಲ-ಆಡಳಿತದಿಂದಾಗಿ , ಉದಾಹರಣೆಗೆ, ಉದ್ದೇಶಪೂರ್ವಕ ದೋಷಪೂರಿತರು
 • ತಪ್ಪು ಆಡಳಿತ ಮತ್ತು ನೀತಿ ಪಾರ್ಶ್ವವಾಯು ಕಾರಣದಿಂದಾಗಿ ಯೋಜನೆಗಳ ಸಮಯ ಮತ್ತು ವೇಗವನ್ನು ಅಡ್ಡಿಪಡಿಸುತ್ತದೆ, ಆದ್ದರಿಂದ, ಸಾಲಗಳು ಎನ್ಪಿಎಗಳಾಗುತ್ತವೆ. ಉದಾಹರಣೆಗೆ ಇನ್ಫ್ರಾಸ್ಟ್ರಕ್ಚರ್ ಸೆಕ್ಟರ್.
 • ಯಾವುದೇ ನಿರ್ದಿಷ್ಟ ಮಾರುಕಟ್ಟೆಯ ವಿಭಾಗದಲ್ಲಿ ತೀವ್ರ ಸ್ಪರ್ಧೆ . ಉದಾಹರಣೆಗೆ ಭಾರತದಲ್ಲಿ ಟೆಲಿಕಾಂ ವಲಯ.
 • ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಪರಿಸರ ಕಾರಣಗಳಿಂದಾಗಿ ಭೂ ಸ್ವಾಧೀನದಲ್ಲಿ ವಿಳಂಬ.
 • ಋಣಭಾರವನ್ನು ನೀಡುವ ಒಂದು ಪಾರದರ್ಶಕ ವಿಧಾನವಾದ ಕೆಟ್ಟ ಸಾಲ ವಿಧಾನ.
 • ಪ್ರವಾಹ, ಬರ / ಜಲಕ್ಷಾಮ, ಭೂಕಂಪಗಳು, ಸುನಾಮಿ ಮುಂತಾದ ನೈಸರ್ಗಿಕ ಕಾರಣಗಳಿಂದ .
 • ಡಂಪಿಂಗ್ ಕಾರಣದಿಂದಾಗಿ ಅಗ್ಗದ ಆಮದು ದೇಶೀಯ ಕಂಪೆನಿಗಳ ವ್ಯಾಪಾರ ನಷ್ಟಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ಭಾರತದಲ್ಲಿ ಉಕ್ಕು ವಲಯ.

ಎನ್ಪಿಎಗಳ ಪರಿಣಾಮ ಏನು?

 • ಸಾಲಗಾರರು ಲಾಭಾಂಶಗಳನ್ನು ಕಡಿಮೆ ಮಾಡುತ್ತಾರೆ.
 • ಬ್ಯಾಂಕಿಂಗ್ ವಲಯದ ಒತ್ತಡವು ಇತರ ಯೋಜನೆಗಳಿಗೆ ನಿಧಿಸಂಸ್ಥೆಗೆ ಕಡಿಮೆ ಹಣವನ್ನು ನೀಡುತ್ತದೆ, ಆದ್ದರಿಂದ ದೊಡ್ಡ ರಾಷ್ಟ್ರೀಯ ಆರ್ಥಿಕತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
 • ಲಾಭಾಂಶವನ್ನು ನಿರ್ವಹಿಸಲು ಬ್ಯಾಂಕುಗಳು ಹೆಚ್ಚಿನ ಬಡ್ಡಿದರವನ್ನು ಹೊಂದಿವೆ.
 • ಉತ್ತಮ ಯೋಜನೆಗಳಿಂದ ಕೆಟ್ಟ ಯೋಜನೆಗಳಿಗೆ ಹಣವನ್ನು ಮರುನಿರ್ದೇಶಿಸಲಾಗುತ್ತಿದೆ.
 • ಹೂಡಿಕೆಗಳು ಅಂಟಿಕೊಂಡಿರುವ ಕಾರಣ, ಅದು ನಿರುದ್ಯೋಗಕ್ಕೆ ಕಾರಣವಾಗಬಹುದು.
 • ಸಾರ್ವಜನಿಕ ವಲಯದ ಬ್ಯಾಂಕುಗಳ ವಿಷಯದಲ್ಲಿ, ಬ್ಯಾಂಕುಗಳ ಕೆಟ್ಟ ಆರೋಗ್ಯವು ಷೇರುದಾರನಿಗೆ ಕೆಟ್ಟ ಲಾಭವನ್ನು ನೀಡುತ್ತದೆ ಅಂದರೆ ಇದರರ್ಥ ಭಾರತ ಸರ್ಕಾರವು ಲಾಭಾಂಶವಾಗಿ ಕಡಿಮೆ ಹಣವನ್ನು ಪಡೆಯುತ್ತದೆ. ಆದ್ದರಿಂದ ಇದು ಸಾಮಾಜಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಹಣದ ಸುಲಭ ನಿಯೋಜನೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಸಾಮಾಜಿಕ ಮತ್ತು ರಾಜಕೀಯ ವೆಚ್ಚದಲ್ಲಿ ಫಲಿತಾಂಶವನ್ನು ನೀಡುತ್ತದೆ.
 • ಹೂಡಿಕೆದಾರರು ಸರಿಯಾದ ಆದಾಯವನ್ನು ಪಡೆಯುವುದಿಲ್ಲ.
 • ಬ್ಯಾಂಕುಗಳು ಮತ್ತು ಸಾಂಸ್ಥಿಕ ಕ್ಷೇತ್ರದ ಭಾರತೀಯ ಗುಣಲಕ್ಷಣಗಳ ಬ್ಯಾಲೆನ್ಸ್ ಶೀಟ್ ಸಿಂಡ್ರೋಮ್ ಬ್ಯಾಲೆನ್ಸ್ ಶೀಟ್ಗೆ ಒತ್ತು ನೀಡಿದೆ ಮತ್ತು ಹೂಡಿಕೆಯ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತದೆ.
 • ಎನ್ಪಿಎಗಳು ಸಂಬಂಧಪಟ್ಟ ಪ್ರಕರಣಗಳು ನ್ಯಾಯಾಂಗಕ್ಕೆ ಈಗಾಗಲೇ ಬಾಕಿ ಇರುವ ಪ್ರಕರಣಗಳಿಗೆ ಹೆಚ್ಚಿನ ಒತ್ತಡವನ್ನುಂಟುಮಾಡುತ್ತವೆ.

ಬ್ಯಾಂಕಿಂಗ್ ವ್ಯವಸ್ಥೆ ಶುದ್ಧೀಕರಣಕ್ಕೆ ಎನ್​ಡಿಎ ಕ್ರಮಗಳು

# ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಪುನಶ್ಚೇತನಕ್ಕೆ ‘ಇಎಎಸ್​ಇ’ ಅಜೆಂಡಾ

# 50 ಕೋಟಿ ರೂ. ಅಧಿಕ ಸಾಲ ಪಡೆದವರ ಪಾಸ್​ಪೋರ್ಟ್​ನ ಪೂರ್ಣ ಮಾಹಿತಿ ಸಂಗ್ರಹ

# ಬ್ಯಾಂಕ್​ಗಳಿಗೆ ನೇಮಕಾತಿ ವೇಳೆ ಪಾರದರ್ಶಕತೆ

# ಮುದ್ರಾ ಯೋಜನೆ ಮತ್ತು ಇತರ ಸಣ್ಣ, ಮಧ್ಯಮ ಉದ್ದಿಮೆಗಳಿಗೆ ಸಾಲ ನೀಡುವ ಯೋಜನೆಗೆ ಫಿನ್​ಟೆಕ್ ಉದ್ಯಮಿಮಿತ್ರ ಪೋರ್ಟಲ್

# ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಜಾರಿಗೆ.

ಎನ್​ಡಿಎ ಸುಧಾರಣೆ ಕ್ರಮಗಳಿಗೆ ಸಿಕ್ಕ ಫಲ

# ಎನ್​ಪಿಎ ಪ್ರಮಾಣ ಏರಿಕೆಗೆ ಕಡಿವಾಣ, 2019ರ ಮೊದಲ ತ್ರೖೆಮಾಸಿಕದಲ್ಲಿ ಅಂದಾಜು -ಠಿ; 21,000 ಕೋಟಿ ಇಳಿಕೆ.

# ಚಾಲ್ತಿ ಮತ್ತು ಉಳಿತಾಯ ಖಾತೆ ಅನುಪಾತ (ಸಿಎಎಸ್​ಎ)ದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಪಾಲು 38.5% (2015ರ ಮಾರ್ಚ್ ) ನಿಂದ 38%ಗೆ (2018ರ ಜೂನ್)ಏರಿಕೆ.

# ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ (ಮೊದಲ ತ್ರೖೆಮಾಸಿಕದಲ್ಲಿ ಶೇ. 8.2)

# ವಿಶ್ವದ 6ನೇ ದೊಡ್ಡ ಆರ್ಥಿಕತೆ ಎಂಬ ಶ್ರೇಯ.

ಜನ್ಮಾಚರಣೆ ಲಾಂಛನ ಬಿಡುಗಡೆ

ಸುದ್ದಿಯಲ್ಲಿ ಏಕಿದೆ ?ಮಹಾತ್ಮ ಗಾಂಧಿ ಅವರ 150ನೇ ಜನ್ಮವರ್ಷಾಚರಣೆಯ ಲಾಂಛನವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಂಗಳವಾರ ಬಿಡುಗಡೆ ಮಾಡಿದ್ದಾರೆ.

 • ಮಹಾತ್ಮ ಗಾಂಧಿ ಅವರ 150ನೇ ಜನ್ಮವರ್ಷಾಚರಣೆಯ ಅಂಗವಾಗಿ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 • ಈಗಾಗಲೇ ಸೆಪ್ಟೆಂಬರ್‌ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಯೇ ಸೇವೆ ಎಂಬ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದು, ಇದು ಅಕ್ಟೋಬರ್‌ 2ರವರೆಗೆ ಮುಂದುವರಿಯಲಿದೆ.
 • ಸ್ವಚ್ಛತೆ ನಿಟ್ಟಿನಲ್ಲಿ ಹೆಚ್ಚಿನ ಸಾರ್ವಜನಿಕರನ್ನು ಪ್ರೇರೇಪಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
 • ಈ ವರ್ಷ ಸ್ವಚ್ಛ ಭಾರತ ಯೋಜನೆಯ ನಾಲ್ಕನೇ ವರ್ಷಾಚರಣೆ ಸಹ ಆಗಿದೆ. ‘ಸ್ವಚ್ಛತೆಯೇ ಸೇವೆ’ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡು, ಈ ಅಭಿಯಾನದ ಅವಧಿಯಲ್ಲಿ ಕನಿಷ್ಠ ಆರು ಗಂಟೆಗಳ ಶ್ರಮದಾನದಲ್ಲಿ ತೊಡಗುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಸ್ವಚಾತಾ ಹೀ ಸೇವಾ  ಪ್ರಚಾರ

 • ಈ ಅಭಿಯಾನವನ್ನು ಕೇಂದ್ರ ಸರಕಾರವು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದಿಂದ ಸಂಯೋಜಿಸಿದ್ದು, ಸ್ವಾಚ್ ಭಾರತ್ ಮಿಷನ್ಗೆ ಸಚಿವಾಲಯವನ್ನು ನಡೆಸುತ್ತಿದೆ. ಜನರನ್ನು ಸಜ್ಜುಗೊಳಿಸಲು ಮತ್ತು ಶುದ್ಧ ಭಾರತಕ್ಕಾಗಿ ಮಹಾತ್ಮ ಗಾಂಧಿಯವರ ಕನಸುಗೆ ನೈರ್ಮಲ್ಯಕ್ಕಾಗಿ ಜನ ಆಂದೋಲನವನ್ನು (ಸಮೂಹ ಚಳವಳಿಯನ್ನು) ಬಲಪಡಿಸುವುದು ಇದರ ಗುರಿಯಾಗಿದೆ .
 • ಸ್ವಚ್ಛತೆ ಮತ್ತು ಶೌಚಾಲಯಗಳನ್ನು ನಿರ್ಮಿಸಲು ಮತ್ತು ತಮ್ಮ ಪರಿಸರದಲ್ಲಿ ತೆರೆದ ಮಲವಿಸರ್ಜನೆ ಮುಕ್ತಗೊಳಿಸಲು ಶ್ರಮ ದಾನ (ಸ್ವಯಂಪ್ರೇರಿತ ಕೆಲಸ) ಕೈಗೊಳ್ಳಲು ಎಲ್ಲಾ ಹಂತಗಳ ಜನರ ದೊಡ್ಡ ಪ್ರಮಾಣದ ಸಮೂಹವನ್ನು ಇದು ನೋಡುತ್ತದೆ. ಸಾರ್ವಜನಿಕ ಮತ್ತು ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸುವ ಗುರಿ ಇರುತ್ತದೆ.

ದೇಶೀ ರಕ್ಷಣಾ ಉಪಕರಣ ಖರೀದಿ

ಸುದ್ದಿಯಲ್ಲಿ ಏಕಿದೆ ?ಮಹತ್ವದ ನಿರ್ಧಾರವೊಂದರಲ್ಲಿ 9,100 ಕೋಟಿ ರೂ. ವೆಚ್ಚದ ಸ್ವದೇಶಿ ರಕ್ಷಣಾ ಉಪಕರಣ ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಖರೀದಿ ಸಮಿತಿ ಒಪ್ಪಿಗೆ ಸೂಚಿಸಿದೆ.

 • ಸ್ವದೇಶಿ ಉಪಕರಣ ಮತ್ತು ರಕ್ಷಣಾ ಸಲಕರಣೆಗಳ ಖರೀದಿಗೆ ಸಮಿತಿ ಸಮ್ಮತಿಸಿದ್ದು, ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
 • ಆಕಾಶ್ ಕ್ಷಿಪಣಿಗೆ ಭಾರತ್‌ ಡೈನಾಮಿಕ್ಸ್ ಲಿ.ನಿಂದ ಸ್ವದೇಶಿ ನಿರ್ಮಿತ ಉಪಕರಣ ಹಾಗು ಟಿ90 ಟ್ಯಾಂಕ್‌ಗಳಿಗೆ ಅಂಡರ್‌ ವಾಟರ್ ಬ್ರೀಥಿಂಗ್ ಅಪರೇಟಸ್ (ಐಯುಡಬ್ಲ್ಯೂಬಿಎ)ಯ ವಿನ್ಯಾಸ ಮತ್ತು ಅಭಿವೃದ್ಧಿಪಡಿಸುವುದು ಸೇರಿದೆ.
 • ಆಕಾಶ್ ಕ್ಷಿಪಣಿಗಳ ಮತ್ತಷ್ಟು ಬಲವರ್ಧನೆ ಹಾಗು ಮತ್ತಷ್ಟು ಪ್ರಬಲವನ್ನಾಗಿ ರೂಪಿಸಲು ಇದರಿಂದ ಸಾಧ್ಯವಾಗುತ್ತದೆ. ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದರಿಂದ ವಿವಿಧ ಸಂದರ್ಭದಲ್ಲಿ ಬಳಸಲು ಅನುಕೂಲವಾಗಲಿದೆ.
 • ಐಯುಡಬ್ಲ್ಯೂಬಿಎ ವ್ಯವಸ್ಥೆಯನ್ನು ಟ್ಯಾಂಕ್‌ಗಳು ಸೇಫ್ಟಿ ಗೇರ್ ಮತ್ತು ತುರ್ತು ಸಂದರ್ಭದಲ್ಲಿ ಪರಾರಿಯಾಗಲು ಹಾಗು ಹೆಚ್ಚು ನೀರಿರುವ ಪ್ರದೇಶದಲ್ಲಿ ಸುಲಲಿತವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ.
 • ಜತೆಗೆ ಟಿ20 ಟ್ಯಾಂಕ್‌ಗಳಿಗೆ ನಿರ್ದೇಶಿತ ಕ್ಷಿಪಣಿ ಗುರಿ ವ್ಯವಸ್ಥೆಯನ್ನು ಕೂಡ ಡಿಆರ್‌ಡಿಒ ಮೂಲಕ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲು ಸಮಿತಿ ಸಮ್ಮತಿ ಸೂಚಿಸಿದೆ.

ಆಕಾಶ್ ಕ್ಷಿಪಣಿ ಬಗ್ಗೆ

 • ಆಕಾಶ್ ಮಧ್ಯ-ಶ್ರೇಣಿಯ ಮೇಲ್ಮೈ-ಟು-ಏರ್ ಕ್ಷಿಪಣಿ (SAM) ಆಗಿದೆ. ಇದು ಮಧ್ಯಮ ಶ್ರೇಣಿಯ ಪರಮಾಣು ಸಾಮರ್ಥ್ಯವನ್ನು ಸೂಪರ್ಸಾನಿಕ್ ಕ್ಷಿಪಣಿಯಾಗಿದೆ.
 • ಇಂಟಿಗ್ರೇಟೆಡ್ ಗೈಡೆಡ್-ಮಿಸೈಲ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಐಜಿಎಂಡಿಪಿ) ಅಡಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ
 • ವೈಶಿಷ್ಟ್ಯಗಳು: ಕ್ಷಿಪಣಿ ಮ್ಯಾಕ್ 8 ರಿಂದ 3.5 ರವರೆಗೆ ಸೂಪರ್ಸಾನಿಕ್ ವೇಗವನ್ನು ಹೊಂದಿದೆ. ಇದು ಬಹು ಗುರಿಯಾಗಿದೆ, ಬಹು ನಿರ್ದೇಶನ, ಎಲ್ಲಾ ಹವಾಮಾನ ವಾಯು-ರಕ್ಷಣಾ ವ್ಯವಸ್ಥೆ, ಕಣ್ಗಾವಲು ಮತ್ತು ರೇಡಾರ್ಗಳನ್ನು ಪತ್ತೆಹಚ್ಚುವಿಕೆ. …
 • ಇದು 60 ಕೆ.ಜಿ.ಗಳ ವಾರ್ಹೆಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವೈಮಾನಿಕ ಗುರಿಗಳನ್ನು ಸುಮಾರು 25 ಕಿ.ಮೀ ವ್ಯಾಪ್ತಿಯಲ್ಲಿ ತೊಡಗಿಸಬಹುದು. ಇದು 18 ಕಿ.ಮೀ ಎತ್ತರ ಮತ್ತು 30 ಮೀಟರ್ಗಳಷ್ಟು ಎತ್ತರಕ್ಕೆ ತಲುಪಬಹುದು.
 • ಇದು ರಾಮ್ಜೆಟ್-ರಾಕೆಟ್ ಪ್ರೊಪಲ್ಶನ್ ಸಿಸ್ಟಮ್ (ಆರ್ಆರ್ಪಿಎಸ್) ನಿಂದ ಶಕ್ತಿಯನ್ನು ಹೊಂದುತ್ತದೆ. ಇದು ಯಾವುದೇ ಕ್ಷಿಪಣಿ ಇಲ್ಲದೆ ಸೂಪರ್ಸಾನಿಕ್ ವೇಗದಲ್ಲಿ ಗುರಿಯನ್ನು ತಡೆಗಟ್ಟಲು ಕ್ಷಿಪಣಿಗೆ ಒತ್ತಡವನ್ನು ನೀಡುತ್ತದೆ.
 • ಇದು ಕ್ರೂಸ್ ಕ್ಷಿಪಣಿಗಳು, ಫೈಟರ್ ಜೆಟ್ಗಳು, ಮಾನವರಹಿತ ವಾಯು ವಾಹನಗಳು (UAV) ಮತ್ತು ಗಾಳಿ-ಮೇಲ್ಮೈ ಕ್ಷಿಪಣಿಗಳು ಮುಂತಾದ ವೈಮಾನಿಕ ಗುರಿಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ
 • ಜುಲೈ 2015 ರಲ್ಲಿ ಕ್ಷಿಪಣಿಗಳನ್ನು ಔಪಚಾರಿಕವಾಗಿ IAF ಗೆ ಸೇರಿಸಲಾಯಿತು…

ಸೆಲ್ಫಿ ಟವರ್

ಸುದ್ದಿಯಲ್ಲಿ ಏಕಿದೆ ?ಸೂಗಮ್ ತಾಲೂಕಿನ ನಡಾಬೆಟ್‌ನಿಂದ 25 ಕಿ.ಮೀ. ದೂರದಲ್ಲಿರುವ ಭಾರತ-ಪಾಕ್ ಗಡಿ ಪ್ರದೇಶದ ಶೂನ್ಯ ಬಿಂದುವಿನಲ್ಲಿ, ಪ್ರವಾಸಿಗರಿಗಾಗಿ ಮೂರು ಅಂತಸ್ತಿನ ಸೆಲ್ಫಿ ಟವರ್ ನಿರ್ಮಿಸಲು ಗಡಿ ಸುರಕ್ಷತಾ ಪಡೆ ಮುಂದಾಗಿದೆ. ಇದು ಪಾಕಿಸ್ತಾನದ ಗಡಿಬೇಲಿಯಿಂದ ಕೇವಲ 150ಮೀಟರ್ ದೂರವಿರಲಿದೆ.

 • ವಾಘಾ ಸದಾ ಮಿಲಿಟರಿ ಚಟುವಟಿಕೆಗಳಲ್ಲಿ ವ್ಯಸ್ತವಾದ, ದೇಶಭಕ್ತಿಯ ಸಂಗೀತ ಮೊಳಗುವ ಪ್ರದೇಶ. ನಡಾಬೆಟ್‌ನಲ್ಲಿನ ಶೂನ್ಯಬಿಂದು ಸ್ಮರಣೀಯ ಚಿತ್ರಗಳನ್ನು ಕ್ಲಿಕ್ಕಿಸಲು ಹೇಳಿ ಮಾಡಿಸಿದಂತಹ ತಾಣ. ಗಡಿಬೇಲಿಯ ಬಳಿಯ ಸೆಲ್ಫಿ ಟವರ್ ಏರಿ ಪಾಕಿಸ್ತಾನದ ನಾಗರ್ಪಾರ್ಕರ್ ಜಿಲ್ಲೆಯ ಬಲೋತ್ರಾ ಗ್ರಾಮವನ್ನು ಸಹ ಸೆರೆಹಿಡಿಯಬಹುದು.
 • ಕಳೆದೆರಡು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಸರಕಾರವಿಲ್ಲಿ ಸೀಮಾ ದರ್ಶನಕಾರ್ಯಕ್ರಮವನ್ನು ಆಯೋಜಿಸಿತ್ತು. ಅಂದಿನಿಂದ ಪ್ರವಾಸಿಗರು ಶೂನ್ಯ ಬಿಂದು-960ಗೆ ಭೇಟಿ ನೀಡುತ್ತಲೇ ಇದ್ದಾರೆ. ಪ್ರತಿದಿನ ಕನಿಷ್ಠ 500 ಪ್ರವಾಸಿಗರು ಭೇಟಿ ನೀಡಿದರೆ, ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 2,000 ದಾಟುತ್ತದೆ.

Related Posts
India’s rotavirus vaccine launched
What  Country’s first, indigenous rotavirus vaccine launched The Rotavirus vaccine was developed indigenously, under a public-private partnership between the Ministry of Science Technology and the Health Ministry. Why to combat diarrhoeal deaths. How As given in ...
READ MORE
“4th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ತೈಲ ಸ್ವಾವಲಂಬನೆ ಸುದ್ದಿಯಲ್ಲಿ ಏಕಿದೆ? ಭಾರತ ಅಳೆದೂ ತೂಗಿ ಭೂಗತ ತೈಲ ಸಂಗ್ರಹಾಗಾರ ನಿರ್ವಿುಸಲು ಮುಂದಾಗಿದೆ. ಯುದ್ಧವಿರಬಹುದು, ಅಥವಾ ತೈಲ ಬಿಕ್ಕಟ್ಟಿನಂತಹ ಇತರ ಸಂದರ್ಭ ಬಂದಾಗ ನೆರವಿಗೆ ಬರುವ ಭೂಗತ ಕೇವರ್ನ್​ಗಳನ್ನು ದೇಶದ ಮೂರು ಕಡೆ ಪ್ರಸ್ತುತ ನಿರ್ವಿುಸಲಾಗಿದೆ ಅದರಲ್ಲಿ ಎರಡು ಇರುವುದು ಕರ್ನಾಟಕದಲ್ಲಿ. ಇನ್ನೊಂದು ...
READ MORE
NammaKPSC ClassRoom: What and Why Kirishi Bhagya
Why Kirishi Bhagya In India, it is estimated that about 6, 000 million tons of top soil are lost annually along with valuable plant nutrients. This along with inappropriate nutrient management practices ...
READ MORE
Karnataka: SC stay on ‘Made Snana’ to continue
The Supreme Court on 24th March ordered that the stay granted on ritual ‘Made Snana’ performed by people from Malekudiya community in Dakshina Kannada district and elsewhere would continue till ...
READ MORE
Karnataka Current Affairs – KAS / KPSC Exams – 3rd May 2017
Third regional PPVFRA centre to begin functioning The third regional centre of Protection of Plant Varieties and Farmers’ Rights Authority (PPVFRA), established by the Union government will commence functioning on the ...
READ MORE
“9th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆರೋಗ್ಯವಾಣಿ ಸುದ್ದಿಯಲ್ಲಿ ಏಕಿದೆ ?  ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯವಾಣಿ 104 ಕಾರ್ಯ ಯೋಜನೆಗೆ ಮನಸೋತ ಕೇಂದ್ರ ಸರಕಾರ, ಅದನ್ನು ರಾಷ್ಟ್ರಮಟ್ಟದಲ್ಲಿ ‘ಆರೋಗ್ಯವಾಣಿ 1104’ ಮೂಲಕ ಪರಿಚಯಿಸಿ ಒಂದೇ ಸೂರಿನಡಿ ತುರ್ತು ಆರೋಗ್ಯ ಮಾಹಿತಿ ನೀಡಲು ಮುಂದಾಗಿದೆ. ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ...
READ MORE
Karnataka Current Affairs – KAS/KPSC Exams-15th December 2018
NCBS scientists study carbon cycle in rainforests In the backdrop of climate change, the National Centre for Biological Sciences, a subsidiary of Tata Institute of Fundamental Research, has taken up a study ...
READ MORE
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಮ್ಯಾಗ್ಸೆಸೆ ಪುರಸ್ಕಾರ  ಸುದ್ಧಿಯಲ್ಲಿ ಏಕಿದೆ? ‘ಏಷ್ಯಾದ ನೊಬೆಲ್ ’ ಎಂದೇ ಖ್ಯಾತಿ ಗಳಿಸಿರುವ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ಸೋನಂ ವಾಂಗ್​ಚುಕ್ ಮತ್ತು ಡಾ. ಭರತ್ ವಟವಾನಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಆಗಸ್ಟ್ 31ರಂದು ಫಿಲಿಪ್ಪೀನ್ಸ್ ನಲ್ಲಿ ನಡೆಯುವ ...
READ MORE
Everything you need to know about – “Great Canara Trail”
What is Great Canara Trail A section of the trail a 108 km route from Ulavi to Castlerock, falling within the ambit of Dandeli-Anshi Tiger Reserve is being readied, with the ...
READ MORE
Karnataka: Bill passed to allow Kambala
How the bill was passed? A bill to legalise traditional buffalo race "Kambala" and bullock cart races in Karnataka was passed by the state Assembly on 13th Feb with all parties backing ...
READ MORE
India’s rotavirus vaccine launched
“4th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
NammaKPSC ClassRoom: What and Why Kirishi Bhagya
Karnataka: SC stay on ‘Made Snana’ to continue
Karnataka Current Affairs – KAS / KPSC Exams
“9th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams-15th December 2018
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Everything you need to know about – “Great
Karnataka: Bill passed to allow Kambala

Leave a Reply

Your email address will not be published. Required fields are marked *