“26th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಬಿಸಿಯೂಟದ ಜತೆ ಇನ್ನು ಜೇನುತುಪ್ಪ

ಸುದ್ಧಿಯಲ್ಲಿ ಏಕಿದೆ ?ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಜೇನು ತುಪ್ಪವನ್ನೂ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಕೋರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಉದ್ದೇಶ

 • ದೇಶದ ಗ್ರಾಮೀಣ ಪ್ರದೇಶದಲ್ಲಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೃಷಿಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮೂಲಕ ವರಮಾನ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಜೇನು ಮಂಡಳಿಯ ಕೋರಿಕೆ ಮೇರೆಗೆ ಕೇಂದ್ರ ಕೃಷಿ ಸಚಿವಾಲಯ ಇಂಥದೊಂದು ಪ್ರಸ್ತಾವನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮುಂದಿಟ್ಟಿತ್ತು.
 • ಕೃಷಿ ಸಚಿವಾಲಯದ ಮನವಿ ಮೇರೆಗೆ ಬಿಸಿಯೂಟ ಯೋಜನೆಯಡಿ ಜೇನು ತುಪ್ಪ ಸೇರಿಸಲು ಸಚಿವಾಲಯ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ.

ಜೇನುತುಪ್ಪದಲ್ಲಿ ಏನೇನು ಇರುತ್ತದೆ?

 • ಜೇನು ತುಪ್ಪದಲ್ಲಿ ಕಾರ್ಬೋಹೈಡ್ರೇಟ್ಸ್, ಅಮಿನೋ ಆಮ್ಲದ ಜತೆಗೆ ಎ, , ಡಿ, ಬಿ-1, ಬಿ-2, ಬಿ-3 ನಿಯಾಸಿನ್‌ನಂಥ ಪ್ರೊಟೀನ್‌ ಅಂಶಗಳ ಜತೆಗೆ, ಸೋಡಿಯಂ, ಪೊಟ್ಯಾಷಿಯಂ, ಸತು ಸೇರಿದಂತೆ ಇತರೆ ಖನಿಜಾಂಶಗಳು ಹೇರಳವಾಗಿವೆ. ಇದು ಮಕ್ಕಳ ಆರೋಗ್ಯಕ್ಕೆ ಉತ್ತಮವ ಎಂದು ಕೇಂದ್ರ ಕೃಷಿ ಸಚಿವಾಲಯವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿರುವ ಪತ್ರದಲ್ಲಿ ವಿವರಿಸಿದೆ.

ಮಧ್ಯಾಹ್ನದ ಊಟ ಯೋಜನೆ

 • ಮಧ್ಯಾಹ್ನದ ಊಟ ಯೋಜನೆ ರಾಷ್ಟ್ರವ್ಯಾಪಿ ಶಾಲಾ-ವಯಸ್ಸಿನ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಭಾರತ ಸರಕಾರದ ಒಂದು ಆಹಾರ ಕಾರ್ಯಕ್ರಮವಾಗಿದೆ.
 • ಈ ಯೋಜನೆಯು ಸರ್ಕಾರಿ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆ, ಶಿಕ್ಷಣ ಖಾತರಿ ಯೋಜನೆ ಮತ್ತು ಪರ್ಯಾಯ ನವೀನ ಶಿಕ್ಷಣ ಕೇಂದ್ರಗಳು, ಸರ್ವ ಶಿಕ್ಷಾ ಅಭಿಯಾನ ಮತ್ತು ರಾಷ್ಟ್ರೀಯ ಮಕ್ಕಳ ಅಡಿಯಲ್ಲಿ ಬೆಂಬಲಿತವಾದ ಮದರ್ಸ ಮತ್ತು ಮ್ಯಾಕ್ಟಾಬ್ಗಳಲ್ಲಿ ಪ್ರಾಥಮಿಕ ಮತ್ತು ಮೇಲ್ಭಾಗದ ಪ್ರಾಥಮಿಕ ತರಗತಿಗಳಲ್ಲಿ ಮಕ್ಕಳಿಗೆ ಉಚಿತ ಊಟವನ್ನು ಒದಗಿಸುತ್ತದೆ.
 • ಕಾರ್ಮಿಕ ಇಲಾಖೆಯು ನಡೆಸುತ್ತಿರುವ ಲೇಬರ್ ಪ್ರಾಜೆಕ್ಟ್ ಶಾಲೆಗಳು.,265,000 ಶಾಲೆಗಳು ಮತ್ತು ಶಿಕ್ಷಣ ಗ್ಯಾರಂಟಿ ಯೋಜನೆ ಕೇಂದ್ರಗಳಲ್ಲಿ 120,000,000 ಮಕ್ಕಳಿಗೆ ಸೇವೆ ಸಲ್ಲಿಸುತ್ತಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿದೆ

ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ?ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ 2018ನೇ ಸಾಲಿಗೆ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಕಟಿಸಿದರು.

ಆಯ್ಕೆ ಮಾಡಿದ ಸಮಿತಿ

 • ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರ ಅಧ್ಯಕ್ಷತೆಯ ಸಮಿತಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಹುಣಸವಾಡಿ ರಾಜನ್, ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ ಈ ಸಮಿತಿಯ ಸದಸ್ಯರಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸದಸ್ಯ ಕಾರ್ಯದರ್ಶಿಗಳಾಗಿದ್ದರು.

ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ

 • ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಲಾಗುವ ಈ ಪ್ರಶಸ್ತಿ 5 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದ್ದು, ಗಾಂಧಿ ಜಯಂತಿ ದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
 • ಈವರೆಗೆ ಈ ಪ್ರಶಸ್ತಿಗೆ ಹಿರಿಯ ಗಾಂಧೀವಾದಿಗಳಾದ ಎಸ್.ಎನ್. ಸುಬ್ಬರಾವ್, ಹೋ. ಶ್ರೀನಿವಾಸಯ್ಯ, ಚನ್ನಮ್ಮ ಹಳ್ಳಿಕೇರಿ ಹಾಗೂ ಹೆಚ್.ಎಸ್. ದೊರೆಸ್ವಾಮಿ ಅವರು ಆಯ್ಕೆಯಾಗಿದ್ದರು.

ಪ್ರಸನ್ನ ಅವರಿಗೆ ಸಂದ ಪ್ರಶಸ್ತಿಗಳು:

 • ಪ್ರಸನ್ನ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ರಂಗಭೂಮಿ ಸೇವೆಗಾಗಿ ಕಲ್ಕತ್ತದ ನಂದಿಕಾರ್‌ ಪ್ರಶಸ್ತಿ, ಸಾಹಿತ್ಯಕ್ಕಾಗಿ ಚದುರಂಗ ಪ್ರಶಸ್ತಿ, ಕವಿತೆಗಾಗಿ ಪು.ತಿ.ನ.ಪ್ರಶಸ್ತಿ, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಬಿ.ವಿ.ಕಾರಂತ ಸಂಸ್ಮರಣೆ ಪ್ರಶಸ್ತಿ ಸಂದಿದೆ.

ಕಾಂಪೀಟ್ ವಿತ್ ಚೀನಾ’ ಯೋಜನೆ

ಸುದ್ಧಿಯಲ್ಲಿ ಏಕಿದೆ ?ಚೀನಾ ಜತೆ ಸ್ಪರ್ಧಿಸುವ ನಿಟ್ಟಿನಲ್ಲಿ ‘ಕಾಂಪೀಟ್ ವಿತ್ ಚೀನಾ’ ಯೋಜನೆಯನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ, ಪ್ರಸಕ್ತ ವರ್ಷದಲ್ಲಿ 500 ಕೋಟಿ ರೂ. ಹಾಗೂ ಮುಂದಿನ ವರ್ಷ 2,000 ಕೋಟಿ ರೂ. ಅನುದಾನವನ್ನು ಯೋಜನೆಗೆ ನೀಡಲು ನಿರ್ಧರಿಸಿದೆ.

 • ‘ಕಾಂಪೀಟ್ ವಿತ್​ ಚೀನಾ’ ಯೋಜನೆಯಡಿ ರಚಿಸಲಾದ ವಿಷನ್ ಗ್ರೂಪ್​ಗಳೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಯೋಜನೆ ಉದ್ದೇಶ

 • ಈ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್​ಗಳನ್ನು ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಿ ಸ್ಥಳೀಯ ಸಂಪನ್ಮೂಲಗಳ ಬಳಕೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
 • ಈ ಯೋಜನೆಯಡಿ ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳು, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳು, ಕೊಪ್ಪಳದಲ್ಲಿ ಆಟಿಕೆಗಳು, ಮೈಸೂರಿನಲ್ಲಿ ಪಿಸಿಬಿ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳು, ತುಮಕೂರಿನಲ್ಲಿ ಕ್ರೀಡೆ ಮತ್ತು ಫಿಟ್‍ನೆಸ್ ಉಪಕರಣಗಳ ತಯಾರಿಕಾ ಕ್ಲಸ್ಟರ್​ಗಳನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ.
 • ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ 2ನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುವವರಿಗೆ ಸರ್ಕಾರ ಎಲ್ಲ ರೀತಿಯಲ್ಲೂ ನೆರವು ನೀಡಲು ನಿರ್ಧಾರಿಸಿದೆ.

ಹಿನ್ನಲೆ

 • ಕರ್ನಾಟಕ ಸಹಿತ ಭಾರತದ ಮಾರುಕಟ್ಟೆಯ ಬಹುಭಾಗ ಆಕ್ರಮಿಸಿರುವ ಚೀನಾ ಉತ್ಪಾದಿತ ವಸ್ತುಗಳಿಂದಾಗಿ ದೇಶೀಯ ಉದ್ದಿಮೆಗಳು ಮುಚ್ಚುವ ಸ್ಥಿತಿಗೆ ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ‘ಚೀನಾದೊಂದಿಗೆ ಸ್ಪರ್ಧೆ (ಕಾಂಪೀಟ್ ವಿತ್ ಚೀನಾ) ಎಂಬ ವಿನೂತನ ಯೋಜನೆಯನ್ನು ಘೋಷಿಸಿದೆ.
 • ಚೀನಾ ವಸ್ತುಗಳಿಗೆ ತೀವ್ರ ಸ್ಪರ್ಧೆ ನೀಡುವಂಥ ಉತ್ಪನ್ನಗಳನ್ನು ಕರ್ನಾಟಕದಲ್ಲಿಯೇ ತಯಾರಿಸುವ ಯೋಜನೆ ಇದಾಗಿದೆ. ಬಹುಬೇಡಿಕೆ ಇರುವ ಉತ್ಪನ್ನಗಳ ಬಿಡಿಭಾಗಗಳನ್ನು ಹಳ್ಳಿಗಳ ಮಟ್ಟದಲ್ಲಿ ಉತ್ಪಾದಿಸಿ ಅವುಗಳನ್ನು ತಾಲೂಕು ಮಟ್ಟದಲ್ಲಿ ಜೋಡಣೆ ಮಾಡಲಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಮಾಲ್​ಗಳನ್ನು ತೆರೆದು, ಈ ವಸ್ತುಗಳನ್ನು ಮಾರಾಟ ಮಾಡುವುದು ಈ ಯೋಜನೆಯ ಒಟ್ಟಾರೆ ತಿರುಳು.
 • ಈ ಉದ್ದೇಶಕ್ಕಾಗಿ ಜಿಲ್ಲೆಗಳಲ್ಲಿ ಪ್ಲಗ್ ಆಂಡ್ ಪ್ಲೇಕೈಗಾರಿಕಾ ಶೆಡ್ಗಳನ್ನು ನಿರ್ವಿುಸುವುದು ಹಾಗೂ ಯೋಜನೆಗೆ ಪೂರಕವಾಗಿ ಮಾನವ ಸಂಪನ್ಮೂಲ ವೃದ್ಧಿಗೊಳಿಸಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.
 • ಕರ್ನಾಟಕದ ಯಶಸ್ವಿ ಉದ್ಯಮಿಗಳ ನೇತೃತ್ವದಲ್ಲಿ ಪ್ರತಿ ಕಾರ್ಯಕ್ರಮಕ್ಕೂ ಯೋಜನಾ ಗುರಿ ಘಟಕ (ಪ್ರೋಗ್ರಾಂ ಮಿಷನ್ ಯೂನಿಟ್) ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ

ಕಳಂಕಿತರ ಅಂಕುಶಕ್ಕೆ ಕಾಯ್ದೆ

ಸುದ್ಧಿಯಲ್ಲಿ ಏಕಿದೆ ?ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಪೀಠಗಳು ನಿರ್ಬಂಧಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಸಂಸತ್ತು ಕಾನೂನು ರೂಪಿಸಬೇಕೆಂದು ಹೇಳಿದೆ.

 • ಪ್ರಜಾಪ್ರಭುತ್ವದ ಹಿತಾಸಕ್ತಿಗಾಗಿ, ಗಂಭೀರ ಅಪರಾಧಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಜನಪ್ರತಿನಿಧಿಗಳ ಚುನಾವಣೆ ಸ್ಪರ್ಧೆಗೆ ಸಂಸತ್​ನಲ್ಲೇ ಕಡಿವಾಣ ಹಾಕಬೇಕು. ಕೋರ್ಟು ಲಕ್ಷ್ಮಣರೇಖೆಯನ್ನು ದಾಟುವುದಿಲ್ಲ ಎಂದು ಸಂವಿಧಾನಪೀಠ ಹೇಳಿತಾದರೂ, ಅಭ್ಯರ್ಥಿಗಳು ಹಾಗೂ ಟಿಕೆಟ್ ನೀಡಿದ ಪಕ್ಷವೇ ಆರೋಪಿ ಅಭ್ಯರ್ಥಿಯ ಅಪರಾಧ ಹಿನ್ನೆಲೆ ಕುರಿತಂತೆ ಕನಿಷ್ಠ ಮೂರು ಬಾರಿ ಪ್ರಮುಖ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು ಎಂದು ಸೂಚಿಸಿತು.
 • ಸಾರ್ವಜನಿಕ ಹಿತಾಸಕ್ತಿ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಪೀಠ ಈ ಆದೇಶ ನೀಡಿದೆ. ಇದರಿಂದ ಮೇಲ್ನೋಟಕ್ಕೆ ಆರೋಪಿ ಜನಪ್ರತಿನಿಧಿಗಳು ನಿರಾಳರಾಗುವಂತಿದ್ದರೂ ಸಾರ್ವಜನಿಕವಾಗಿ ಅಭ್ಯರ್ಥಿಗಳ ಅಪರಾಧ ಬಹಿರಂಗಪಡಿ ಸುವ ನಿರ್ದೇಶನ, ಸಂಸತ್​ಗೆ ಕಾನೂನು ರಚಿಸುವ ಸಲಹೆ ಮೂಲಕ ಆದೇಶ ದೂರಗಾಮಿ ಮಹತ್ವ ಪಡೆದುಕೊಂಡಿದೆ.
 • ಆಪಾದಿತ ಅಥವಾ ಕಳಂಕಿತ ಜನಪ್ರತಿನಿಧಿಗಳು ಅಥವಾ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿರಬಾರದೆನ್ನುವುದು ಜನಪ್ರತಿನಿಧಿ ಕಾಯ್ದೆಯ ಆಶಯವೂ ಆಗಿದೆ. ಲಿಲ್ಲಿ ಥಾಮಸ್ ಪ್ರಕರಣದಲ್ಲೂ ಈ ಕುರಿತು ಆದೇಶವಿದೆ.

ಮುಂದೇನು?

 • ಸುಪ್ರೀಂಕೋರ್ಟ್ ಆದೇಶ ಪರಿಗಣಿಸಿ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಮುಂದಾಗಬಹುದು
 • ಕಾಯ್ದೆ ರಚನೆಗೆ ಮೊದಲು ಕಾನೂನು ಆಯೋಗ, ತಜ್ಞರು ಮತ್ತು ರಾಜಕೀಯ ಪಕ್ಷಗಳ ಸಲಹೆ ಕೇಳಬಹುದು.

ಆಯೋಗಕ್ಕೆ ನಿರ್ದೇಶನ

 • ಅಪರಾಧ ಹಿನ್ನೆಲೆ ಕುರಿತು ಅಭ್ಯರ್ಥಿಗಳು ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಬೇಕು.
 • ಅಭ್ಯರ್ಥಿಯ ವಿರುದ್ಧ ಬಾಕಿ ಇರುವ ಎಲ್ಲ ಅಪರಾಧ ಪ್ರಕರಣಗಳ ವಿವರಗಳು ದಪ್ಪ ಅಕ್ಷರಗಳಲ್ಲಿರಬೇಕು.
 • ಸ್ಪರ್ಧೆ ವೇಳೆ ಅಪರಾಧ ಹಿನ್ನೆಲೆ ಕುರಿತು ಕಡ್ಡಾಯವಾಗಿ ಪಕ್ಷಕ್ಕೆ ಮಾಹಿತಿ ನೀಡಬೇಕು.
 • ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಕುರಿತು ಎಲ್ಲ ಪಕ್ಷಗಳು ವೆಬ್​ಸೈಟ್​ನಲ್ಲಿ ಮಾಹಿತಿ ನೀಡಬೇಕು.
 • ನಾಮಪತ್ರ ಸಲ್ಲಿಕೆಯಾದ ಮೇಲೆ ಆಯಾ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಕುರಿತು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಕನಿಷ್ಠ 3 ಬಾರಿ ಅತಿ ಹೆಚ್ಚು ಪ್ರಸರಣ ಇರುವ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು. ಪತ್ರಿಕೆಗಳಲ್ಲಿ ಕಡ್ಡಾಯವಾಗಿ ಪ್ರಮಾಣಪತ್ರದ ವಿವರದ ಜಾಹೀರಾತು ನೀಡಬೇಕು.

ಹಾಲಿ ಇರುವ ನಿಯಮವೇನು?

 • ಗಂಭೀರ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಣೆಯಾಗಿ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ಪ್ರಕಟವಾದಲ್ಲಿ ಆ ಜನಪ್ರತಿನಿಧಿಯ ಸದಸ್ಯತ್ವ ರದ್ದಾಗುತ್ತದೆ. ಮುಂದಿನ 6 ವರ್ಷ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ.

ಸರ್ಕಾರಕ್ಕೆ ಸುಪ್ರೀಂ ಸಲಹೆ

 • ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವವರ ರಾಜಕೀಯ ಪ್ರವೇಶಕ್ಕೆ ನಿರ್ಬಂಧ ಹೇರಬೇಕು.
 • ಸುಳ್ಳು ಪ್ರಕರಣಗಳ ಮೂಲಕ ರಾಜಕೀಯ ಷಡ್ಯಂತ್ರ ನಡೆಸುವುದನ್ನೂ ನಿಯಂತ್ರಿಸಬೇಕು.
 • ರಾಜಕೀಯ ಹಾಗೂ ಆಡಳಿತ ಶುದ್ಧಿಗಾಗಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಧನಾತ್ಮಕ ಹೆಜ್ಜೆ ಇಡಬೇಕು.
 • ಅಪರಾಧ ಹಿನ್ನೆಲೆಯಿಲ್ಲದ ಆಯ್ಕೆಯನ್ನು ಮತದಾರನಿಗೆ ನೀಡುವುದು ವ್ಯವಸ್ಥೆಯ ಜವಾಬ್ದಾರಿ, ಮತದಾರನ ಹಕ್ಕು ಕಾಪಾಡುವುದು ಸರ್ಕಾರದ ಕರ್ತವ್ಯ.

ನೇಪಾಳದ ರಾಯಭಾರಿ

ಸುದ್ಧಿಯಲ್ಲಿ ಏಕಿದೆ ?ಮಾಜಿ ಸಂಸತ್‌ ಸದ್ಯಸ್ಯೆ ಮತ್ತು ಬಾಲಿವುಡ್‌ ನಟಿ ಜಯಪ್ರದಾ ಅವರನ್ನು ನೇಪಾಳ ಸರ್ಕಾರ ಸೌಹಾರ್ಧದ ರಾಯಭಾರಿಯನ್ನಾಗಿ ನೇಮಿಸಿದೆ.

 • ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿ ನೇಮಿಸುವ ಪ್ರಸ್ತಾವವನ್ನು ನೇಪಾಳದ ಸಂಸತ್​ನಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು.
 • ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನಾಮನಿರ್ದೇಶನಗೊಂಡಾಗ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಮತ್ತು ನೇಪಾಳದ ಪ್ರವಾಸೋದ್ಯಮವನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ ಎಂದು ಆಯ್ಕೆಗೂ ಮುನ್ನ ನಿರೀಕ್ಷೆ ಹೊಂದಲಾಗಿತ್ತು
 • ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ರಾಯಭಾರಿಯಾಗಿರಲಿದ್ದಾರೆ. ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನೇಪಾಳಕ್ಕೆ ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ. ನೇಪಾಳ ಪ್ರವಾಸೋದ್ಯಮಕ್ಕೆ ಭಾರತ ಪ್ರಮುಖ ಗ್ರಾಹಕ ರಾಷ್ಟ್ರವಾಗಿದೆ.
 • ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನೇಪಾಳ 2020ರ ವರ್ಷವನ್ನು ‘ವಿಸಿಟ್​ ನೇಪಾಳ ಇಯರ್​’ (ನೇಪಾಳ ಭೇಟಿ ವರ್ಷ) ಎಂದು ಆಚರಿಸಲು ನಿರ್ಧರಿಸಿದೆ. ಸುಮಾರು 20 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ಗುರಿಯನ್ನು ಹೊಂದಿದೆ

ಖೇಲ್​ರತ್ನ ಪ್ರದಾನ

ಸುದ್ಧಿಯಲ್ಲಿ ಏಕಿದೆ ?ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್​ಲಿಫ್ಟರ್ ಮೀರಾಬಾಯಿ ಚಾನು, ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಯಿಂದ ಪುರಸ್ಕೃತರಾದರು. 2018ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರದಾನ ಮಾಡಿದರು

ರಾಜೀವ್ ಗಾಂಧಿ ಖೇಲ್ ರತ್ನ ಬಗ್ಗೆ

 • ಇದು ಭಾರತದ ಗಣರಾಜ್ಯದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. 1984 ರಿಂದ 1989 ರ ವರೆಗೆ ಭಾರತದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.  ಇದನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ವಾರ್ಷಿಕವಾಗಿ ನೀಡಲಾಗುತ್ತದೆ.
 • ಸಚಿವಾಲಯವು ರಚಿಸಿದ ಕಮಿಟಿಯಿಂದ ಸ್ವೀಕರಿಸಲ್ಪಟ್ಟವರು / ಆಯ್ಕೆಯಾಗುತ್ತಾರೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ “ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಮತ್ತು ಅತ್ಯುತ್ತಮ ಪ್ರದರ್ಶನ” ಗಳಿಸಲು ಗೌರವಿಸಲಾಗುತ್ತದೆ. 2018 ರ ಹೊತ್ತಿಗೆ ಈ ಪ್ರಶಸ್ತಿಯು ಪದಕ , ಪ್ರಮಾಣಪತ್ರ ಮತ್ತು ₹ 7.5 ಲಕ್ಷ (US $ 10,000) ನ ನಗದು ಬಹುಮಾನವನ್ನು ಒಳಗೊಂಡಿದೆ.
 • 1991-1992ರಲ್ಲಿ ಸ್ಥಾಪಿಸಲಾಯಿತು, ಒಂದು ವರ್ಷದ ಕ್ರೀಡಾಪಟುವಿನ ಮೂಲಕ ಈ ಪ್ರಶಸ್ತಿಯನ್ನು ನೀಡಲಾಯಿತು. 2014 ರ ಪ್ರಶಸ್ತಿ ಆಯ್ಕೆ ಸಮಿತಿಯಿಂದ ನೀಡಲಾದ ಸಲಹೆಗಳ ಆಧಾರದ ಮೇಲೆ, ಫೆಬ್ರವರಿ 2015 ರಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಕಾರ್ಯಕ್ಷಮತೆಯನ್ನು ಪರಿಗಣಿಸಲು ಸಚಿವಾಲಯವು ಮಾನದಂಡವನ್ನು ಪರಿಷ್ಕರಿಸಿದೆ.

ಆಧಾರ್‌ ಸಿಂಧುತ್ವ

ಸುದ್ಧಿಯಲ್ಲಿ ಏಕಿದೆ ?ಖಾಸಗಿ ತನ್ನಕ್ಕೆ ಧಕ್ಕೆ ಸೇರಿದಂತೆ ಹಲವು ಆಕ್ಷೇಪಣೆಗಳಿಂದ ವಿವಾದಕ್ಕೆ ಗುರಿಯಾಗಿರುವ ಆಧಾರ್‌ ಯೋಜನೆ ಸಾಂವಿಧಾನಿಕ ಸಿಂಧುತ್ವ ಹೊಂದಿದಯೇ ಇಲ್ಲವೇ ಎಂಬುದನ್ನು ಸುಪ್ರೀಂ ಕೋರ್ಟ್‌ ನಿರ್ಧರಿಸಲಿದೆ.

 • ಆಧಾರ್‌ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾದ 27 ಅರ್ಜಿಗಳ ವಿಚಾರಣೆ ಪೂರೈಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಮಹತ್ವದ ತೀರ್ಪು ಪ್ರಕಟಿಸಲಿದೆ.

ಹಿನ್ನಲೆ

 • ಬೆರಳಚ್ಚು, ಕಣ್ಣಿನ ಸ್ಕ್ಯಾ‌ನ್‌ ಸೇರಿದಂತೆ ನಾಗರಿಕರ ಖಾಸಗಿ ಮಾಹಿತಿಗಳನ್ನು ಆಧಾರ್‌ ಯೋಜನೆಯಡಿ ಸಂಗ್ರಹಿಸುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. 2017ರ ತೀರ್ಪಿನಲ್ಲಿ ವ್ಯಕ್ತಿಗಳ ಖಾಸಗಿತನವನ್ನು ಅವರ ಮೂಲಭೂತ ಹಕ್ಕೆಂದು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದರಿಂದ, ಆಧಾರ್‌ ವಿಷಯದಲ್ಲಿನ ತೀರ್ಪು ಕುತೂಹಲ ಮೂಡಿಸಿದೆ. ಜತೆಗೆ ಸರಕಾರ ಹಲವು ಯೋಜನೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವ ಹಿನ್ನೆಯಲ್ಲೂ ಸುಪ್ರೀಂ ತೀರ್ಪು ಮಹತ್ವ ಪಡೆದಿದೆ.

ಆಧಾರ್​ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

 • ಆಧಾರ್‌ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ, ಆಧಾರ್ ದಾಖಲಾತಿಗಾಗಿ ಕೇವಲ ಕನಿಷ್ಠ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
 • ಆಧಾರ್ ದೇಶದ ಸಾಮಾನ್ಯ ನಾಗರಿಕರ ಗುರುತಾಗಿದೆ. ಆಧಾರ್‌ ಕಾರ್ಡ್‌ಗೂ ಗುರುತಿಗೂ ವ್ಯತ್ಯಾಸವಿದೆ. ಬಯೋಮೆಟ್ರಿಕ್‌ ಮಾಹಿತಿಯನ್ನು ಒಂದು ಬಾರಿ ಸಂಗ್ರಹ ಮಾಡಿದರೆ ಅದು ವ್ಯವಸ್ಥೆಯಲ್ಲೇ ಉಳಿಯಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
 • ಆಧಾರ್​ನ ದತ್ತಾಂಶಗಳ ರಕ್ಷಣೆಯನ್ನೂ ಸುಪ್ರೀಂ ಕೋರ್ಟ್ ಪ್ರತಿಪಾದಿಸಿತು. ಈ ಕುರಿತು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದಿತು. ಅಲ್ಲದೆ,  ಬಯೋಮೆಟ್ರಿಕ್​ ದತ್ತಾಂಶವನ್ನು ಅನುಮತಿ ಇಲ್ಲದೆ ಯಾರೊಂದಿಗೂ, ಯಾವುದೇ ಏಜನ್ಸಿಗೂ ನೀಡುವಂತಿಲ್ಲ ಎಂದು ಕೋರ್ಟ್​ ಸೂಚನೆ ನೀಡಿದೆ.
 • ಆಧಾರ್ ಕಾಯ್ದೆಯ ಸೆಕ್ಷನ್ 57 ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.
 • ಜತೆಗೆ, ಕೇಂದ್ರ ಸರಕಾರ ಶೀಘ್ರದಲ್ಲೇ ದೃಢವಾದ ಮಾಹಿತಿ ಸಂರಕ್ಷಣಾ ಕಾನೂನನ್ನು ಜಾರಿಗೆ ತರಬೇಕು. ಹಾಗೆ, ಅಕ್ರಮ ವಾಸಿಗಳಿಗೆ ಆಧಾರ್ ಕಾರ್ಡ್ ಸಿಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಮೋದಿ ಸರಕಾರಕ್ಕೆ ತಿಳಿಸಿದೆ.
 • ದೇಶದೊಳಗೆ ನುಸುಳುವ ಅಕ್ರಮ ವಲಸಿಗರು ಆಧಾರ ಪಡೆಯಲು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅದು ತಿಳಿಸಿದೆ.

AADHAR CARD ಯಾವುದಕ್ಕೆ ಕಡ್ಡಾಯ, ಯಾವುದಕ್ಕೆ ಕಡ್ಡಾಯವಲ್ಲ?

 • ಆಧಾರ್ ಕಾರ್ಡ್ ಯಾವುದಕ್ಕೆ ಕಡ್ಡಾಯ
 • ಪಾನ್‌ ಕಾರ್ಡ್ ಲಿಂಕ್
 • ಸರಕಾರಿ ಯೋಜನೆಗಳು
 • ಆಧಾರ್ ಕಾರ್ಡ್ ಯಾವುದಕ್ಕೆ ಕಡ್ಡಾಯವಿಲ್ಲ
 • ಸಿಮ್ ಕಾರ್ಡ್ ( ಮೊಬೈಲ್ ಕಂಪನಿಗಳು )
 • ಬ್ಯಾಂಕ್ ಅಕೌಂಟ್ ಓಪನ್ ಮಾಡಲು
 • ಶಾಲೆಗೆ ದಾಖಲಾತಿ
 • ಯುಜಿಸಿ
 • ನೀಟ್‌ ಪರೀಕ್ಷೆ
 • ಸಿಬಿಎಸ್‌ಇ ಪರೀಕ್ಷೆ
Related Posts
Indian Regional Navigation Satellite System
IRNSS is an independent regional navigation satellite system being developed by India. It is designed to provide accurate position information service to users in India as well as the region ...
READ MORE
Karnataka Current Affairs – KAS/KPSC Exams- 11th September 2018
Draft Charter of Patients’ Rights released If the draft Charter of Patients’ Rights released by the Union Ministry of Health and Family Welfare comes into force, patients will not just have ...
READ MORE
Karnataka Current Affairs – KAS/KPSC Exams-15th January 2019
No. of out-of-school children up 3-fold to over 44,000 in State The Department of Primary and Secondary Education has identified over 44,000 out-of-school children (OOSC) in the State. While the survey for ...
READ MORE
“16th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಪೂರ್ಣ ಪ್ರಮಾಣದ ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (ಜಿಎಸ್ಡಿಪಿ) ಯನ್ನು ಪ್ರಾರಂಭಿಸಿತು. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ 2021 ರ ವೇಳೆಗೆ 30 ಕೋರ್ಸ್ಗಳ ...
READ MORE
Kawal Tiger Reserve in Andhra Pradesh has become more a safe zone for resurgent Maoists than tigers In the current phase of its resurgence, Maoist activity in the district is confined ...
READ MORE
Karnataka Current Affairs – KAS / KPSC Exams – 15th June 2017
Bill to bring all varsities under one umbrella tabled The Karnataka State Universities Bill, 2017 — which seeks to bring all State universities under one umbrella — was tabled in the ...
READ MORE
The 14th Indo-Asean summit and the East Asia forum.
Why in News: Prime Minister Narendra Modi arrived in Vientiane, Laos on Wednesday to attend two important meetings – the 14th Indo-Asean summit and the East Asia forum. Here is what you ...
READ MORE
National Current Affairs – UPSC/KAS Exams- 25th Feb 2019
Ordinance clamps down on unregulated deposits Topic: Economy In News: In a bid to clamp down on Ponzi and fake deposit schemes, the government has, through an ordinance, banned unregulated deposit schemes. More ...
READ MORE
National Current Affairs – UPSC/KAS Exams- 27th December 2018
Andhra Pradesh, Telangana to have separate High Courts Topic: Polity and Governance IN NEWS:  Following a Supreme Court order to the Centre to notify the bifurcation of the Andhra Pradesh and Telangana ...
READ MORE
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮತ್ತೆ ಕರೆನ್ಸಿ ಎಮರ್ಜೆನ್ಸಿ! ನೋಟು ಅಮಾನ್ಯೀಕರಣದ ಆರಂಭಿಕ ದಿನಗಳಲ್ಲಾದಂತೆ ಈಗ ಮತ್ತೆ ಹಲವು ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದೆ. ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಕರ್ನಾಟಕ ಸೇರಿ 9ಕ್ಕೂ ಹೆಚ್ಚು ರಾಜ್ಯಗಳ ಎಟಿಎಂಗಳು ಖಾಲಿಯಾಗಿದ್ದು, ಹಣವಿಲ್ಲ ಎಂಬ ಬೋರ್ಡ್​ಗಳು ರಾರಾಜಿಸುತ್ತಿವೆ. ಕೇಂದ್ರ ಸರ್ಕಾರದ ಆರ್ಥಿಕ ಅವ್ಯವಸ್ಥೆಯೇ ...
READ MORE
Indian Regional Navigation Satellite System
Karnataka Current Affairs – KAS/KPSC Exams- 11th September
Karnataka Current Affairs – KAS/KPSC Exams-15th January 2019
“16th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Kawal Tiger Reserve – adobe of maoists
Karnataka Current Affairs – KAS / KPSC Exams
The 14th Indo-Asean summit and the East Asia
National Current Affairs – UPSC/KAS Exams- 25th Feb
National Current Affairs – UPSC/KAS Exams- 27th December
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *