“8th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ಕಲ್ಯಾಣ ಕೇಂದ್ರ’ 

 • ಸುದ್ದಿಯಲ್ಲಿ ಏಕಿದೆ?  ಪರಿಶಿಷ್ಟರ ದುಃಖ -ದುಮ್ಮಾನಗಳಿಗೆ ದನಿಯಾಗಬಲ್ಲ 24/7 ಮಾದರಿಯಲ್ಲಿ ಕಾರ್ಯಾಚರಿಸುವ ಸಹಾಯವಾಣಿಗೆ ಸಮಾಜ ಕಲ್ಯಾಣ ಇಲಾಖೆ ಚಾಲನೆ ನೀಡಿದೆ. ನಗರದ ಯವನಿಕ ಆವರಣದಲ್ಲಿ ಸ್ಥಾಪಿಸಿರುವ ಕಲ್ಯಾಣ ಕೇಂದ್ರಸಹಾಯವಾಣಿಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಉದ್ಘಾಟಿಸಿದರು.

ಏಕೆ ಈ ಕಲ್ಯಾಣ ಕೇಂದ್ರ?

 • ಪರಿಶಿಷ್ಟ ವ್ಯಕ್ತಿಗಳು ದೂರವಾಣಿ ಕರೆ ಅಥವಾ ವ್ಯಾಟ್ಸ್‌ ಆ್ಯಪ್‌ ಮೂಲಕ ದೂರು ದಾಖಲಿಸಬಹುದು. ತಮಗಾದ ಅನ್ಯಾಯ ಅಥವಾ ಸರಕಾರಿ ಸವಲತ್ತು ತಪ್ಪಿದ್ದಕ್ಕೆ ದೂರು ನೀಡಬಹುದು. ದೂರು ದಾಖಲಿಸಿ ಅವುಗಳನ್ನು ಸಂಬಂಧಿಸಿದ ಅಧಿಕಾರಿಗೆ ವರ್ಗಾಯಿಸಲಾಗುತ್ತದೆ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಇತ್ಯರ್ಥ ಕಾಣುವ ರೀತಿ ಆಯಾ ಅಧಿಕಾರಿಗಳೇ ಖುದ್ದು ದೂರಿಗೆ ಪರಿಹಾರವನ್ನು ಅಹವಾಲುದಾರನಿಗೆ ತಿಳಿಸಲಾಗುತ್ತದೆ.
 • ಕ್ಲಿಷ್ಟ ಹಾಗೂ ನೀತಿ ನಿರೂಪಣಾ ದೂರುಗಳನ್ನು ಸಚಿವರ ಹಂತದಲ್ಲಿ ಇತ್ಯರ್ಥಕ್ಕೂ ಸಹಾಯವಾಣಿ ನೆರವಿಗೆ ಬರಲಿದೆ. ಕೋರ್ಟ್‌ ಕಟ್ಲೆ ಉಳ್ಳ ಪ್ರಕರಣಗಳನ್ನು ಕೇಂದ್ರದ ಹೊರಗೆ ನಿವಾರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ.
 • 3 ಪಾಳಿಯಲ್ಲಿ ಸಿಬ್ಬಂದಿ ಕೆಲಸ: ಸಹಾಯವಾಣಿಗೆ ಬರುವ ದೂರುಗಳನ್ನು ನೇರವಾಗಿ ಕಂಪ್ಯೂಟರ್‌ಗೆ ದಾಖಲಿಸಿ ಅಧಿಕಾರಿಗಳಿಗೆ ರವಾನಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಥ ಕರೆಗಳನ್ನು ಸ್ವೀಕರಿಸಿ ದೂರುದಾರನಿಗೆ ಮಾರ್ಗದರ್ಶನ ಮಾಡಲು ಮೂರು ಪಾಳಿಯಲ್ಲಿ ಒಟ್ಟು 22 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇವರ ಉಸ್ತುವಾರಿಗೆ ವ್ಯವಸ್ಥಾಪಕರೊಬ್ಬರನ್ನು ನಿಯೋಜಿಸಲಾಗಿದೆ. ಈತ ಇಲಾಖೆಯ ಅಧಿಕಾರಿಯೊಬ್ಬರೊಂದಿಗೆ ಸತತ ಸಂಪರ್ಕದಲ್ಲಿದ್ದು, ತುರ್ತು ದೂರುಗಳಿಗೆ ಆಯಾ ದಿನವೇ ಪರಿಹಾರ ಒದಗಿಸಲು ನೆರವಾಗಲಿದ್ದಾರೆ.
 • ಸಹಾಯವಾಣಿ ಕೇಂದ್ರವನ್ನು ನಿರ್ವಹಿಸುವ ಹೊಣೆಯನ್ನು ಬೆಂಗಳೂರು ಮೂಲದ ಜಿಎಸ್‌ ಮ್ಯಾನೇಜ್‌ಮೆಂಟ್‌ ಕಂಪನಿಗೆ ವಹಿಸಲಾಗಿದೆ. ಈ ಕಂಪನಿ ತನ್ನ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಿದೆ. ‘‘ದೂರುಗಳ ದಾಖಲು, ನಿರ್ವಹಣೆ, ಪರಿಹಾರ ಸೂಚಿಸುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ.

ಎಫ್‌ಆರ್‌ಡಿಐ ವಿಧೇಯಕ

ಸುದ್ದಿಯಲ್ಲಿ ಏಕಿದೆ? ತೀವ್ರ ವಿವಾದಕ್ಕೀಡಾಗಿದ್ದ ಎಫ್‌ಆರ್‌ಡಿಐ ವಿಧೇಯಕವನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಹಿಂತೆಗೆದುಕೊಂಡಿದೆ.

 • ಹಿಂಪಡೆಯಲು  ಕಾರಣವೇನು ? ವಿಧೇಯಕದಲ್ಲಿನ ‘ಬೈಲಾ-ಇನ್‌’ ನಿಯಮಾವಳಿಗಳು ವಿವಾದಕ್ಕೆ ಸಿಲುಕಿತ್ತು. ಇದರಿಂದ ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭ ಬಳಕೆದಾರರ ಠೇವಣಿಯನ್ನು ಸರಕಾರವು ತಾತ್ಕಾಲಿಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಇದರಿಂದ ಗ್ರಾಹಕರ ಠೇವಣಿಯ ಸುರಕ್ಷಿತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಲಾಗಿತ್ತು.
 • ಸರಕಾರ, ಗ್ರಾಹಕರ ಹಣ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸಂಪೂರ್ಣ ಸುರಕ್ಷಿತ ಎಂದು ಸ್ಪಷ್ಟನೆ ನೀಡಿದರೂ, ವಿವಾದ ತಣ್ಣಗಾಗಿರಲಿಲ್ಲ. ಇವೆಲ್ಲದರ ಪರಿಣಾಮ ವಿಧೇಯಕವನ್ನೇ ಸರಕಾರ ಇದೀಗ ಹಿಂತೆಗೆದುಕೊಂಡಿದೆ.

ಜನರಲ್ಲಿದ್ದ ಆತಂಕವೇನು?

 • ಯಾವುದಾದರೂ ಬ್ಯಾಂಕ್‌ ದಿವಾಳಿಯಾದಾಗ ಬ್ಯಾಂಕ್‌ಗಳು ನಷ್ಟವನ್ನು ತಡೆಯಲು ಠೇವಣಿದಾರರ ಹಣವನ್ನೂ ಬಳಸಬಹುದು ಎಂಬ ವದಂತಿ ಹಬ್ಬಿ ಜನರಲ್ಲಿ ಆತಂಕ ಉಂಟಾಗಿತ್ತು. ವಿಧೇಯಕ ವಿರುದ್ಧ ಆನ್‌ಲೈನ್‌ ಅಭಿಯಾನವೊಂದಕ್ಕೆ 70 ಸಾವಿರ ಸಹಿ ಸಂಗ್ರಹವಾಗಿತ್ತು. ಆತಂಕಿತ ಜನ ಎಟಿಎಂಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಗದು ಹಿಂತೆಗೆತವನ್ನೂ ಮಾಡಿದ್ದರೆಂದು ವರದಿಯಾಗಿತ್ತು.
 • ವಿಧೇಯಕವು ಬ್ಯಾಂಕ್‌ಗಳ ದಿವಾಳಿ ಪ್ರಕ್ರಿಯೆಗಳ ಸುಧಾರಣೆಗೆ ಸಂಬಂಧಿಸಿತ್ತು. ಇದಕ್ಕಾಗಿ ಪ್ರತ್ಯೇಕ ಪ್ರಾಧಿಕಾರದ ರಚನೆಗೂ ಅವಕಾಶ ಕಲ್ಪಿಸಿತ್ತು. ವಿಧೇಯಕದ ಪ್ರಕಾರ, ಬ್ಯಾಂಕ್‌ ವಿಫಲವಾದಾಗ ಗ್ರಾಹಕರಿಗೆ ಠೇವಣಿ ವಿಮೆ ಕಲ್ಪಿಸಿದ್ದರೂ. ಮೊತ್ತ ಎಷ್ಟು ಎಂಬ ಸ್ಪಷ್ಟತೆ ಇರಲಿಲ್ಲ. ಸದ್ಯಕ್ಕೆ ಬ್ಯಾಂಕ್‌ಗಳಲ್ಲಿ ಗ್ರಾಹಕರ ಠೇವಣಿಗೆ 1 ಲಕ್ಷ ರೂ. ತನಕ ವಿಮೆ ಸೌಕರ್ಯವಿದೆ.

FRDI ಬಿಲ್ (ಹಣಕಾಸು ನಿರ್ಣಯ ಮತ್ತು ಠೇವಣಿ ವಿಮಾ ಮಸೂದೆ, 2017)

ಉದ್ದೇಶಗಳು:

 • ಹಣಕಾಸಿನ ತೊಂದರೆಯಲ್ಲಿರುವ ಕೇಂದ್ರ ಸರ್ಕಾರವು ತಿಳಿಸುವಂತೆ ಆರ್ಬಿಐ, ಸೆಬಿ, ಐಆರ್ಡಿಎ, ಪಿಎಫ್ಆರ್ಡಿಎ ಅಥವಾ ಯಾವುದೇ ಇತರ ಅಧಿಕಾರದಿಂದ ನಿಯಂತ್ರಿಸಲ್ಪಟ್ಟಿರುವ ಹಣಕಾಸು ಸಂಸ್ಥೆಯ ಆರಂಭಿಕ ಗುರುತನ್ನು ಖಾತರಿಪಡಿಸುವುದು ಎಫ್ಡಿಐ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ದೇಶದಲ್ಲಿನ ಠೇವಣಿದಾರರು ಮತ್ತು ಇಡೀ ಆರ್ಥಿಕತೆಯ ಮೇಲೆ ಅಂತಹ ಆರ್ಥಿಕ ತೊಂದರೆಗಳ ಪರಿಣಾಮವನ್ನು ಕಡಿಮೆ ಮಾಡಲು ರೆಸಲ್ಯೂಶನ್ ಯಾಂತ್ರಿಕ ವ್ಯವಸ್ಥೆ.
 • ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸಿನ ಸೇವಾ ಪೂರೈಕೆದಾರರ ನಡುವೆ ಶಿಸ್ತಿನ ಮನವೊಲಿಸಲು, ತೊಂದರೆಗೀಡಾದ ಅಸ್ತಿತ್ವಗಳನ್ನು ಜಾಮೀನು ಮಾಡಲು ಸಾರ್ವಜನಿಕ ಹಣದ ಬಳಕೆಯನ್ನು ಸೀಮಿತಗೊಳಿಸುವ ಮೂಲಕ.
 • ರಿಸೆಟ್ ಠೇವಣಿದಾರರ ಪ್ರಯೋಜನಕ್ಕಾಗಿ ಠೇವಣಿ ವಿಮೆಯ ಪ್ರಸ್ತುತ ಚೌಕಟ್ಟನ್ನು ಬಲಪಡಿಸಲು ಮತ್ತು ಸುಗಮಗೊಳಿಸಲು.
 • ತೊಂದರೆಗೀಡಾದ ಹಣಕಾಸು ಘಟಕಗಳನ್ನು ಪರಿಹರಿಸುವಲ್ಲಿ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಇದು ಪ್ರಯತ್ನಿಸುತ್ತದೆ.

ಬಿಲ್ನ ಲಕ್ಷಣಗಳು:

ರೆಸಲ್ಯೂಶನ್ ನಿಗಮ ಸ್ಥಾಪನೆ:

 1. ಬಿಲ್ ಹಣಕಾಸು ನಿಗಮಗಳನ್ನು ಮೇಲ್ವಿಚಾರಣೆ ಮಾಡಲು, ವಿಫಲತೆಯ ಅಪಾಯವನ್ನು ನಿರೀಕ್ಷಿಸಬಹುದು, ಸರಿಪಡಿಸುವ ಕ್ರಮ ತೆಗೆದುಕೊಳ್ಳಲು ಮತ್ತು ಅಂತಹ ವೈಫಲ್ಯದ ಸಂದರ್ಭದಲ್ಲಿ ಅವುಗಳನ್ನು ಪರಿಹರಿಸಲು ನಿರ್ಣಯ ಕಾರ್ಪೊರೇಷನ್ ಅನ್ನು ಸ್ಥಾಪಿಸುತ್ತದೆ.
 2. ಬ್ಯಾಂಕ್ ವೈಫಲ್ಯದ ಸಂದರ್ಭದಲ್ಲಿ ಕಾರ್ಪೊರೇಷನ್ ನಿರ್ದಿಷ್ಟ ಮಿತಿಗೆ ಠೇವಣಿ ವಿಮಾವನ್ನು ಸಹ ಒದಗಿಸುತ್ತದೆ.
 3. ನಿರ್ಣಯ ಕಾರ್ಪೊರೇಷನ್ ಅಥವಾ ಸೂಕ್ತ ಆರ್ಥಿಕ ವಲಯ ನಿಯಂತ್ರಕವು ಹಣಕಾಸಿನ ಸಂಸ್ಥೆಗಳಿಗೆ ಐದು ವಿಭಾಗಗಳಡಿಯಲ್ಲಿ ವರ್ಗೀಕರಿಸಬಹುದು, ಇದು ವೈಫಲ್ಯದ ಅಪಾಯವನ್ನು ಆಧರಿಸಿರುತ್ತದೆ. ಅಪಾಯವನ್ನು ಹೆಚ್ಚಿಸುವ ಸಲುವಾಗಿ ಈ ವರ್ಗಗಳು:
 4. a) ಕಡಿಮೆ: ವೈಫಲ್ಯದ ಸಂಭವನೀಯತೆ ಗಣನೀಯವಾಗಿ ಸ್ವೀಕಾರಾರ್ಹ ಮಟ್ಟಕ್ಕಿಂತ ಕೆಳಗಿರುತ್ತದೆ
 5. b) ಮಧ್ಯಮ: ವೈಫಲ್ಯದ ಸಂಭವನೀಯತೆ ಸ್ವೀಕಾರಾರ್ಹ ಮಟ್ಟಕ್ಕಿಂತ ಕಡಿಮೆ ಇದೆ
 6. c) ಮೆಟೀರಿಯಲ್: ವೈಫಲ್ಯದ ಸಂಭವನೀಯತೆ ಸ್ವೀಕಾರಾರ್ಹ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ
 7. d) ಸನ್ನಿಹಿತ: ವೈಫಲ್ಯದ ಸಂಭವನೀಯತೆ ಸ್ವೀಕಾರಾರ್ಹ ಮಟ್ಟಕ್ಕಿಂತ ಗಣನೀಯವಾಗಿ
 8. e) ಕ್ರಿಟಿಕಲ್: ವೈಫಲ್ಯದ ಅಂಚಿನಲ್ಲಿ ಸೇವೆ ಒದಗಿಸುವವರು
 9. ವಿಮರ್ಶಾ ನಿಗಮವನ್ನು ಹಣಕಾಸು ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಡಲಾಗುತ್ತದೆ. ಅದನ್ನು ಒಮ್ಮೆ ‘ವಿಮರ್ಶಾತ್ಮಕ’ ಎಂದು ವರ್ಗೀಕರಿಸಲಾಗುತ್ತದೆ. ಇದು ಒಂದು ವರ್ಷದೊಳಗೆ ಸಂಸ್ಥೆಯನ್ನು ಪರಿಹರಿಸುತ್ತದೆ (ಇನ್ನೊಂದು ವರ್ಷ ವಿಸ್ತರಿಸಬಹುದು).

ನಿರ್ಣಯದ ಮೇಲೆ ಸಮಯ ಮಿತಿ:

 1. ಒಂದು ವ್ಯಾಪ್ತಿಯ ಸೇವಾ ಪೂರೈಕೆದಾರರ ನಿರ್ಣಯದ ಯಾವುದೇ ಪ್ರಕ್ರಿಯೆಯು ಎರಡು ವರ್ಷಗಳ ಅವಧಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ, ಅಂತಹ ಘಟಕವು ಕಾರ್ಯಸಾಧ್ಯತೆಯ ಅಪಾಯದ ಅಪಾಯದಲ್ಲಿದೆ ಎಂದು ವರ್ಗೀಕರಿಸಲಾಗಿದೆ.
 2. ಆದಾಗ್ಯೂ, ಎರಡು ವರ್ಷಗಳ ಅಂತಹ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಬಹುದು.

ಗೋಲ್ ಮೀನು

 • ಸುದ್ದಿಯಲ್ಲಿ ಏಕಿದೆ ? ಮಹಾರಾಷ್ಟ್ರದ ಪಾಲ್ಗಾರ್ ಬಳಿ ಮೀನು ಹಿಡಿಯಲು ಹೋದ ಇಬ್ಬರು ಸಹೋದರರಿಗೆ ಗೋಲ್ ಮೀನು ದೊರೆತಿದ್ದು, ಈ ಒಂದೇ ಮೀನಿನಿಂದ ಅವರಿಗೆ 5.5 ಲಕ್ಷ ರೂ. ಸಿಕ್ಕಿದೆ.

ಗೋಲ್ ಮೀನಿನ ಬಗ್ಗೆ ಒಂದಿಷ್ಟು ಮಾಹಿತಿ

 • ಬ್ಲಾಕ್‌ ಸ್ಪಾಟೆಡ್ ಕ್ರೋಕರ್ ಎಂಬ ಹೆಸರಿನ ಈ ಮೀನಿನ ವೈಜ್ಞಾನಿಕ ಹೆಸರು ಪ್ರೊಟೋನಿಬಿಯಾ ಡಯಾಕ್ಯಾಂಥಸ್. ಇದನ್ನು ಚಿನ್ನದ ಹೃದಯವುಳ್ಳ ಮೀನು ಎಂದು ಸಹ ಕರೆಯುತ್ತಾರೆ. ಇನ್ನು, ಗೋಲು ಮೀನು ಅನೇಕ ಬೆಲೆ ಶ್ರೇಣಿಗಳಲ್ಲಿ ಲಭ್ಯವಿದ್ದು, ಕಡಿಮೆ ಬೆಲೆಯ ಮೀನುಗಳನ್ನು ಸ್ಥಳೀಯ ಮೀನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
 • ಅಧಿಕ ಬೆಲೆಯ ಮೀನನ್ನು ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ, ಹಾಂಗ್‌ಕಾಂಗ್ ಹಾಗೂ ಜಪಾನ್‌ ರಾಷ್ಟ್ರಗಳಿಗೆ ಮಾರಾಟ ಮಾಡಲಾಗುತ್ತದೆ.

ಮಹತ್ವ

 • ಗೋಲು ಮೀನಿನ ಚರ್ಮದಲ್ಲಿ ಉತ್ತಮ ಗುಣಮಟ್ಟದ ಪ್ರಾಣಿಯ ಪ್ರೋಟೀನ್ ಹೊಂದಿದ್ದು, ಇದರಿಂದ ಆಹಾರ, ಕಾಸ್ಮೆಟಿಕ್ಸ್ ಹಾಗೂ ಔಷಧವನ್ನು ತಯಾರು ಮಾಡುತ್ತಾರೆ. ಅಲ್ಲದೆ, ಮೀನಿನ ರೆಕ್ಕೆಯಿಂದಲೂ ಬಹಳಷ್ಟು ಉಪಯೋಗವಿದ್ದು, ಹೀಗಾಗಿ ಗೋಲು ಮೀನಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ.
 • ಗೋಲು ಮೀನು ಹಿಂದೂ ಮಹಾಸಾಗರ ಹಾಗೂ ಫೆಸಿಫಿಕ್ ಮಹಾಸಾಗರದಲ್ಲಿ ವಾಸ ಮಾಡುತ್ತವೆ. ಜತೆಗೆ, ಪರ್ಶಿಯನ್ ಗಲ್ಫ್‌ ರಾಷ್ಟ್ರಗಳು, ಪಾಕ್, ಭಾರತ, ಬಾಂಗ್ಲಾದೇಶ, ಬರ್ಮಾದಿಂದ ಹಿಡಿದು ಉತ್ತರದ ಜಪಾನ್‌ವರೆಗೆ ದೊರೆಯುತ್ತದೆ. ಅಲ್ಲದೆ, ಪಪುವಾ ನ್ಯೂ ಗಿನಿಯಿಂದ ಉತ್ತರದ ಆಸ್ಟ್ರೇಲಿಯಾದವರೆಗೂ ಸಿಗುತ್ತದೆ.

ನದಿ ಜೋಡಣೆ ಯೋಜನೆ

 • ಸುದ್ದಿಯಲ್ಲಿ ಏಕಿದೆ? ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು ಅದರ ಹರಿವಿನ ಪಥ ಜೋಡಣೆ ಮೂಲಕ ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯುಂಟು ಮಾಡುವ ನಿರೀಕ್ಷೆಯೊಂದಿಗೆ ಕೇಂದ್ರ ಸರಕಾರ ಕೈಗೊಂಡಿರುವ ಐದು ನದಿಗಳ ಜೋಡಣೆ ಯೋಜನೆಗಳಿಗೆ ಚಾಲನೆ ದೊರೆಯಲಿದೆ.
 • ವಿಶ್ವಬ್ಯಾಂಕ್‌ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಸಾಲ ನೆರವಿನ 2 ಲಕ್ಷ ಕೋಟಿ ರೂ. ವೆಚ್ಚದ ಈ ಬೃಹತ್‌ ಯೋಜನೆ ಕಾಮಗಾರಿ ವೇಗ ಪಡೆಯಲಿದೆ ಎಂದು ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.
 • ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
 • ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಗೆ ಮೊದಲ ಹಂತದ ಐದು ನದಿಗಳ ಜೋಡಣೆಯಿಂದ ಲಾಭವಾಗಲಿದೆ. ಗೋದಾವರಿ-ಕಾವೇರಿ, ಪಾರ್‌-ತಾಪಿ-ನರ್ಮದಾ, ಕ್ವೆನ್‌-ಬೆಟ್ವಾ, ದಮನ್‌ಗಂಗಾ-ಪಿಂಜಾಲ್‌, ಪಾರ್‌ಬತಿ-ಕಾಳಿಸಿಂಧ್‌-ಚಂಬಲ್‌ ನದಿ ಜೋಡಣೆ ಯೋಜನೆಗಳ ಕುರಿತು ಯೋಜನಾ ಕಾರ‍್ಯಸಾಧ್ಯತೆ ವರದಿ ಸಿದ್ಧಗೊಂಡಿದ್ದು ಸದ್ಯದಲ್ಲೇ ರಾಜ್ಯಗಳ ನಡುವೆ ಒಪ್ಪಂದ ಏರ್ಪಡಲಿದೆ.
 • ಯೋಜನೆ ಸಾಕಾರಕ್ಕೆ ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುವುದರ ಜತೆಗೆ ಖಾಸಗಿ ಹೂಡಿಕೆದಾರರನ್ನೂ ಆಕರ್ಷಿಸಲಿದೆ
 • ವಿವಾದ ಇತ್ಯರ್ಥ: ನದಿ ಜೋಡಣೆಯಿಂದ ಕರ್ನಾಟಕ-ತಮಿಳುನಾಡು ನಡುವಿನ ಜಲ ವಿವಾದ ಶಾಶ್ವತವಾಗಿ ಬಗೆಹರಿಯುತ್ತದೆ.
 • ಗೋದಾವರಿಯ ಹಿನ್ನೀರು ಕೃಷ್ಣಾಕ್ಕೆ ಹರಿಯುತ್ತದೆ. ಕೃಷ್ಣಾ ನದಿಯನ್ನು ಪೆನ್ನಾರ್‌ ನದಿ ಮೂಲಕ ಕಾವೇರಿಗೆ ಜೋಡಿಸಲಾಗುತ್ತದೆ. ಇದರಿಂದ ಈ ಕೊಳ್ಳದಲ್ಲಿ 3,000 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿಯಲಿದೆ. 40 ಟಿಎಂಸಿಗಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ಸಂಘರ್ಷವೂ ಕೊನೆಯಾಗಲಿದೆ

ಹೊಸ ಆ್ಯಂಡ್ರಾಯ್ಡ್​ -9: ಪೈ

 • ಸುದ್ದಿಯಲ್ಲಿ ಏಕಿದೆ? ಗೂಗಲ್​ ಹೊಸ ಆಪರೇಟಿಂಗ್​ ಸಿಸ್ಟಂ ಆ್ಯಂಡ್ರಾಯ್ಡ್​ -9 ‘ಪೈ’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆ್ಯಂಡ್ರಾಯ್ಡ್​-9 ಅತ್ಯಂತ ಸ್ಮಾರ್ಟ್​ ಆಗಿ (ಜಾಣ್ಮೆಯಿಂದ) ಬಳಸುವವರ ಇಚ್ಛೆಗೆ ತಕ್ಕಂತೆ ಅತ್ಯಂತ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ.

ವಿಶೇಷತೆ

 • ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (ಕೃತಕ ಬುದ್ಧಿಮತ್ತೆ) ಎಂಬ ತಂತ್ರಜ್ಞಾನ ಹೊಂದಿರುವ ಈ ಆವೃತ್ತಿಯು ಫೋನ್​ ಬಳಕೆದಾರರ ಬಯಕೆಗೆ ತಕ್ಕಂತೆ ವರ್ತಿಸುತ್ತದೆ. ಬಳಕೆದಾರರ ಅಭಿರುಚಿ ಗ್ರಹಿಸಿ, ಅವರಿಂದಲೇ ಮೊದಲೇ ಮಾಹಿತಿ ಪಡೆದು ಅದರ ಆಧಾರದಲ್ಲಿಯೇ ಕಾರ್ಯನಿರ್ವಹಿಸುವುದು ಆ್ಯಂಡ್ರಾಯ್ಡ್​-9ನ ಪ್ರಮುಖ ವಿಶೇಷತೆ.
 • ಬ್ಯಾಟರಿಯನ್ನು ಸ್ವಯಂ ನಿಯಂತ್ರಿಸಿಕೊಳ್ಳುವ ಗುಣವುಳ್ಳ ಈ ಆ್ಯಂಡ್ರಾಯ್ಡ್​, ಬಳಕೆದಾರರು ಆ್ಯಪ್​ಗಳಿಗೆ ನೀಡುವ ಪ್ರಾಶಸ್ತ್ಯದ ಆಧಾರದ ಮೇಲೆ ನಿರ್ದಿಷ್ಟ ಆ್ಯಪ್​ಗಳಿಗೆ ಶಕ್ತಿ ಪೂರೈಸುತ್ತದೆ. ಅಲ್ಲದೆ, ಇದೇ ಆಧಾರದಲ್ಲೇ ಸ್ಕ್ರೀನ್​ನ ಬ್ರೈಟ್​ನೆಸ್​ ಅನ್ನು ಸ್ವಯಂಚಾಲಿತವಾಗಿಯೇ ನಿಯಂತ್ರಿಸುತ್ತದೆ.
 • ನೀವು ಫೋನ್​ನಲ್ಲಿ ಯಾವ ಆ್ಯಪ್​ ಅಥವಾ ಏನನ್ನು ಬಳಸಲು, ಹುಡುಕಲು ಬಯಸುತ್ತೀರೋ ಅದನ್ನು ಮೊದಲಿಗೇ ಗ್ರಹಿಸುವ ಈ ಆವೃತ್ತಿ ಅದಕ್ಕೆ ತಕ್ಕ ಪ್ರೋಗ್ರಾಂಗಳನ್ನು ಸ್ಕ್ರೀನ್​ ಮೇಲೆ ಬಿತ್ತರಿಸುತ್ತದೆ. ಬಳಕೆದಾರರಿಗೆ ಹೆಚ್ಚು ಶ್ರಮ ನೀಡದೇ ಇದು ಕಾರ್ಯ ನಿರ್ವಹಿಸುತ್ತದೆ.

ಯಾವ ಫೋನಿನಲ್ಲಿ ಲಭ್ಯವಿದೆ ?

 • ಈಗ ಬಿಡುಗಡೆಯಾಗಿರುವ ಆ್ಯಂಡ್ರಾಯ್ಡ್​-9 ಆವೃತ್ತಿಯು ಫಿಕ್ಸೆಲ್​​ ಫೋನ್​ಗಳಲ್ಲಿ ಮಾತ್ರ ಅಳವಡಿಕೆಯಾಗಿದೆ. ಇದಲ್ಲದೆ, ಬಿಟಾ ಪ್ರೋಗ್ರಾಮ್​ ಹೊಂದಿರುವ ಸೋನಿ ಮೊಬೈಲ್​, ಕ್ಸಿಯೋಮಿ, ಎಚ್​ಎಂಡಿ ಗ್ಲೋಬಲ್​, ಓಪ್ಪೋ, ವಿವೋ, ಒನ್​ಪ್ಲಸ್​ ಮೊಬೈಲ್​ಗಳಿಗೂ ಹೊಂದಲಿದೆ.

‘ಪೈ’ ಎಂಬ ಹೆಸರು ಬಂದಿದ್ದು ಏಕೆ?

 • ಗೂಗಲ್​ ಈಗಾಗಲೇ ತನ್ನ ಈ ಹಿಂದಿನ ಆವೃತ್ತಿಗಳಿಗೆ ಇಂಗ್ಲಿಷ್​ನ ವರ್ಣ ಮಾಲೆಯ A ನಿಂದ 0 ವರೆಗೆ ಸಿಹಿ ತಿನಿಸುಗಳ ಹೆಸರುಗಳನ್ನೇ ನಾಮಕಾರಣ ಮಾಡಿದೆ. ಈಗ P ಸರದಿ ಅದಕ್ಕಾಗಿಯೇ P ನಿಂದ ಬರುವ ಪೈ(ಸಿಹಿಯನ್ನೇ ತುಂಬಿಕೊಂಡ ಒಂದು ಬಗೆಯ ತಿನಿಸು) ಎಂದು ನಾಮಕರಣ ಮಾಡಿದೆ.
Related Posts
“3rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮತಗಟ್ಟೆ ಮಾಹಿತಿಗೆ ಚುನಾವಣಾ ಆ್ಯಪ್! ನಿಮ್ಮ ಹಕ್ಕು ಚಲಾಯಿಸುವ ಮತಗಟ್ಟೆ ಎಲ್ಲಿದೆ? ಅದನ್ನು ತಲುಪುವ ಮಾರ್ಗ ಯಾವುದು? ಸಂಚಾರ ದಟ್ಟಣೆ ಕಿರಿಕಿರಿ ಇಲ್ಲದೆ ಸುಲಭವಾಗಿ ತಲುಪಲು ಇರುವ ಮಾರ್ಗಗಳು ಯಾವುವು? ಸರತಿಯಲ್ಲಿ ಎಷ್ಟು ಜನರಿದ್ದಾರೆ? ಇಂತಹ ಹಲವು ಮಾಹಿತಿಯನ್ನು ಈಗ ಬೆರಳ ತುದಿಯಲ್ಲೇ ...
READ MORE
Karnataka Current Affairs – KAS/KPSC Exams – 28th October 2018
Harvesters make it easy for farmers Agricultural fields which otherwise would have been left unploughed are being cultivated now Agricultural fields that otherwise would have been left uncultivated are being worked on ...
READ MORE
Karnataka Current Affairs – KAS/KPSC Exams – 4th March 2018
First Rashtrakoota Utsava held in Kalaburagi The department of Kannada and Culture and the Kalaburagi district administration is hosting a Rashtrakoota Utsava for the first time. The celebrations kicked off at Malakhedanalli, ...
READ MORE
Karnataka Current Affairs – KAS/KPSC Exams- 4th April 2018
'Year of Wild' campaign brings profit to tourism dept By promoting Karnataka as a tourism-friendly destination under the theme of 'Year of the Wild', in 2017- 18, the state has seen ...
READ MORE
Karnataka Current Affairs – KAS/KPSC Exams – 19th June 2018
Kharif sowing picking up in Ballari Following good rainfall, sowing, particularly in the rain-fed areas of Ballari district, is picking up. As on 18th June, the sowing percentage during the current ...
READ MORE
The government is striving to introduce five more labour reform legislations in the winter session of Parliament, including the bills to introduce a new wage and industrial relations code and ...
READ MORE
Two reports released on Thursday, one at the global level and the other India-specific, say the country is on track to meet only two (under-five overweight and exclusive breastfeeding rates) ...
READ MORE
Urban Governance & Constitution of a District Planning
The reality of urban governance in Karnataka and in India general, in the context of a local government, stands in contrast to the philosophy of the Constitution. The colonial authoritarian structure of city governance continues to ...
READ MORE
Urban Development-Sanitation (Including Sewerage and Drainage)
The Ministry of Urban Development, GOI brought out a National Sanitation Policy in 2008. The vision for urban sanitation in India is set forth thus:“All Indian cities and towns become totally sanitized, healthy and ...
READ MORE
Karnataka Govt to introduce public health courses for non-medical staff
The state government is all set to introduce postgraduate and short-term courses in public health for non-medical staff working in various government hospitals across the state. The Department of Health and ...
READ MORE
“3rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams – 28th
Karnataka Current Affairs – KAS/KPSC Exams – 4th
Karnataka Current Affairs – KAS/KPSC Exams- 4th April
Karnataka Current Affairs – KAS/KPSC Exams – 19th
Labour reform bills to be introduced
State of nutrition in the country
Urban Governance & Constitution of a District Planning
Urban Development-Sanitation (Including Sewerage and Drainage)
Karnataka Govt to introduce public health courses for

Leave a Reply

Your email address will not be published. Required fields are marked *