ಪ್ರವಾಸೋದ್ಯಮದಲ್ಲಿ ಪ್ರಾಚ್ಯವಸ್ತು ವಿಲೀನ
- ಸುದ್ದಿಯಲ್ಲಿ ಏಕಿದೆ ? ರಾಜ್ಯದ ಪ್ರವಾಸಿ ತಾಣಗಳಲ್ಲಿರುವ ಇತಿಹಾಸ ಪಳೆಯುಳಿಕೆಗಳಾದ ಸ್ಮಾರಕಗಳ ರಕ್ಷಣೆ ಹಾಗೂ ಆ ಸ್ಥಳದ ಅಭಿವೃದ್ಧಿ ಕೈಗೊಳ್ಳಲು ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರಾ ಇಲಾಖೆಯನ್ನು ಸರ್ಕಾರ ಪ್ರವಾಸೋದ್ಯಮ ಇಲಾಖೆಯಲ್ಲಿ ವಿಲೀನಗೊಳಿಸಿದೆ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿದ್ದ ಪರಂಪರಾ ಇಲಾಖೆಯನ್ನು ವಿಲೀನ ಗೊಳಿಸಿ ಪ್ರವಾಸೋದ್ಯಮ ಇಲಾಖೆ ಆದೇಶ ಹೊರಡಿಸಿದೆ.
- ಸ್ಮಾರಕಗಳ ರಕ್ಷಣೆ ಹಾಗೂ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಹೊಣೆಯನ್ನು ಎರಡು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಮೆ.ಇನ್ಟ್ಯಾಚ್ ಮತ್ತು ಮೆ.ಐಎಚ್ ಸಿಎನ್ ಸಂಸ್ಥೆಗೆ ಸ್ಮಾರಕ ರಕ್ಷಣೆ ಹಾಗೂ ಪ್ರವಾಸಿ ಸ್ಥಳದ ಅಭಿವೃದ್ದಿಗೆ ಮಾಸ್ಟರ್ ಫ್ಲಾನ್ ತಯಾರಿಸುವಂತೆ ಸೂಚನೆ ನೀಡಿದೆ.
- ರಾಜ್ಯದ ಬಹುತೇಕ ಸ್ಮಾರಕಗಳು ಪ್ರವಾಸಿ ತಾಣದಲ್ಲಿವೆ. ಮೊದಲು ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿತ್ತು. ಸ್ಥಳ ಅಭಿವೃದ್ಧಿ ಪ್ರವಾಸೋದ್ಯಮ ಇಲಾಖೆಗೆ ಬರುತ್ತಿತ್ತು.
ಕಾರಣ
- 3 ಇಲಾಖೆಗಳ ಸಮನ್ವಯತೆ ಮೂಲಕ ಅಭಿವೃದ್ಧಿ ಕೆಲಸ ನಡೆಯಬೇಕಿತ್ತು. ಅನುದಾನ ಕೊರತೆಯಿಂದ ವಿಳಂಬ ವಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ವಿಲೀನ ಮಾಡಿದೆ.
ಸ್ತ್ರೀ ಶಕ್ತಿ!
- ಸುದ್ದಿಯಲ್ಲಿ ಏಕಿದೆ? ಪಂಚಾಯತ್ ರಾಜ್ ಸಂಸ್ಥೆಗಳ ಮಾದರಿಯಲ್ಲಿಯೇ ಇದೇ ಮೊದಲ ಬಾರಿ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಮಹಿಳೆಯರಿಗೆ ಶೇ.50ರಷ್ಟು ಮೀಸಲು ಕಲ್ಪಿಸಲಾಗಿದೆ.
- ಹಾಗಾಗಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲೂ ಪುರುಷರಿಗೆ ಸರಿಸಮನಾಗಿ ಮಹಿಳಾ ಕೌನ್ಸಿಲರ್ಗಳು/ ಕಾರ್ಪೋರೇಟರ್ಗಳು ಆಯ್ಕೆಯಾಗಲಿದ್ದಾರೆ.
- ಇದುವರೆಗೆ ಶೇ.33ರಷ್ಟು ಮಹಿಳಾ ಮೀಸಲು ಇತ್ತು.
- ಇದೇ ಮೊದಲ ಬಾರಿಗೆ ರಾಜ್ಯ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.50ರವರೆಗೂ ಮಹಿಳೆಯರಿಗೆ ಮೀಸಲು ದೊರೆಯುತ್ತಿದೆ. ಕಾಯ್ದೆಯ ತಿದ್ದುಪಡಿ ಅನ್ವಯ ಮಹಿಳಾ ಮೀಸಲು ಶೇ.50 ಮೀರುವ ಹಾಗಿಲ್ಲ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಶೇ.50ಕ್ಕಿಂತಲೂ ಕಡಿಮೆ ಇರುವ ಹಾಗಿಲ್ಲ. ಹಾಗಾಗಿ, ಅಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆಯಾಗಲು ಸಾಧ್ಯವಾಗುತ್ತದೆ.
- ಕರ್ನಾಟಕದಲ್ಲಿ ಗ್ರಾಮೀಣ ಹಾಗೂ ನಗರ ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಪ್ರಾತಿನಿಧ್ಯ ದೊರಕಿ ಎರಡೂವರೆ ದಶಕಗಳೇ ಆಗಿವೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಪಂಚಾಯತ್ ರಾಜ್ನಲ್ಲಿ ಈ ಪ್ರಮಾಣ ಶೇ.50ರಷ್ಟು ವರ್ಷಗಳೇ ಸಂದಿವೆ.
- ನಗರಾಡಳಿತದಲ್ಲಿ ಮಾತ್ರ ಈ ಪ್ರಮಾಣ ಈ ಚುನಾವಣೆಯಿಂದ ಹೆಚ್ಚಿದ್ದು, ಪ್ರಾತಿನಿಧ್ಯಕ್ಕೆ ಸಮಾನತೆಯ ಸೊಬಗು ಬಂದಿದೆ.
ಉಪಯೋಗಗಳು
- ಕರ್ನಾಟಕದಲ್ಲಿ ಸದ್ಯವೇ ಅವಧಿ ಮುಗಿಯಲಿರುವ ಸ್ಥಳೀಯ ಸಂಸ್ಥೆಗಳ ಮೊದಲ ಹಂತದಲ್ಲಿ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.29ರಂದು ಚುನಾವಣೆ ಘೋಷಣೆಯಾಗಲಿದ್ದು, ಒಟ್ಟು 2574 ಸದಸ್ಯರು ಆಯ್ಕೆಯಾಗಲಿದ್ದಾರೆ. ಈ ಪೈಕಿ ಮಹಿಳೆಯರಿಗೆ ಶೇ.50ವರೆಗೂ ಮೀಸಲು ದೊರೆಯುವುದರಿಂದ ಈ ಬಾರಿ 1000ದವರೆಗೂ ಮಹಿಳೆಯರು ಪ್ರಾತಿನಿಧ್ಯ ಪಡೆಯಬಹುದು.
ಎಲ್ಲೆಲ್ಲಿದೆ 50% ಮೀಸಲು?
- ಆಂಧ್ರಪ್ರದೇಶ, ಅಸ್ಸಾಮ್, ಬಿಹಾರ, ಚತ್ತೀಸ್ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತ್ರಿಪುರಾ, ತೆಲಂಗಾಣ.
ಸಂವಿಧಾನ ವಿಧಿ 35ಎ
- ಸುದ್ದಿಯಲ್ಲಿ ಏಕಿದೆ? ಜಮ್ಮು- ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ಕಲ್ಪಿಸಿರುವ ಸಂವಿಧಾನ ವಿಧಿ 35ಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಪ್ರತಿಭಟನೆ ಜೋರಾಗಿದೆ.
ಏನಿದು ವಿಧಿ 35ಎ?
- ಭಾರತೀಯ ಸಂವಿಧಾನದ ವಿಧಿ370, ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡುತ್ತದೆ. ಭಾರತೀಯ ಸಂವಿಧಾನದ ವಿಧಿ 35A ರಾಜ್ಯದ ಶಾಶ್ವತ ನಾಗರಿಕರು ಯಾರು ಎಂದು ನಿರ್ಧರಿಸುವ ಅಧಿಕಾರವನ್ನು ಜಮ್ಮು – ಕಾಶ್ಮೀರ ವಿಧಾನಸಭೆಗೆ ನೀಡಲಾಗಿದೆ.
- ಸರ್ಕಾರಿ ಕೆಲಸಗಳಿಗೆ ನೇಮಕಾತಿ, ವಿದ್ಯಾರ್ಥಿವೇತನ, ಸಾರ್ವಜನಿಕ ಹಾಗೂ ಕಲ್ಯಾಣಾಭಿವೃದ್ಧಿ ಯೋಜನೆಗಳಲ್ಲಿ ಜಮ್ಮು- ಕಾಶ್ಮೀರ ನಿವಾಸಿಗಳಿಗೆ ವಿಶೇಷ ಮೀಸಲಾತಿ ನೀಡಲಾಗುತ್ತಿದೆ. ಹೊರರಾಜ್ಯದವರು ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿಸಲು ಅವಕಾಶವಿಲ್ಲ.
ಸುಪ್ರೀಂನಲ್ಲಿರುವ ಅರ್ಜಿ ಏನು?
- ಜಮ್ಮು- ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ಸಿಂಧುತ್ವ ಪ್ರಶ್ನಿಸಿ ನಾಲ್ಕು ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿವೆ.
- ವಿ ದಿ ಸಿಟಿಜನ್ಸ್ ಹೆಸರಿನ ಎನ್ಜಿಒ ಸಲ್ಲಿಸಿರುವ ಅರ್ಜಿಯಲ್ಲಿ ಉಳಿದ ಮೂರು ಅರ್ಜಿಗಳನ್ನು ವಿಲೀನಗೊಳಿಸಿ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ‘
- ವಿಧಿ 35ಎ ಕಾನೂನಾತ್ಮಕವಾಗಿ ಜಾರಿಯಾಗಿರುವಂಥದ್ದಲ್ಲ. 1954ರಲ್ಲಿ ರಾಷ್ಟ್ರಪತಿ ಆದೇಶದ ಮೇರೆಗೆ 35ಎ ಅನ್ವಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ಸಿಕ್ಕಿದೆ. ಸಂಸತ್ತಿನಲ್ಲಿ ವಿಧಿ 35ಎ ಮಂಡನೆಯಾಗಿಲ್ಲ. ಸಂವಿಧಾನ ಪ್ರತಿಯ ಅನುಬಂಧದಲ್ಲಿ ರಾಷ್ಟ್ರಪತಿಗಳ 1954ರ ಆದೇಶದ ಉಲ್ಲೇಖವಿದೆ. ವಿಧಿ 35ಎ ಒಂದು ತಿದ್ದುಪಡಿ ಕೂಡ ಅಲ್ಲ ’ ಎಂದು ಎನ್ಜಿಒ ಅರ್ಜಿಯಲ್ಲಿ ಹೇಳಿದೆ.
ಆರ್ಥಿಕ ಅಪರಾಧ ತಡೆ ಕಾಯ್ದೆ
- ಸುದ್ದಿಯಲ್ಲಿ ಏಕಿದೆ? ಸಾವಿರಾರು ಕೋಟಿ ರೂ.ಗಳ ಆರ್ಥಿಕ ಅಪರಾಧ ಎಸಗಿ, ಕಾನೂನು ಕ್ರಮಗಳಿಂದ ಪಾರಾಗಲು ವಿದೇಶದಲ್ಲಿ ನೆಲೆಸುವ ಅಪರಾಧಿಗಳಿಗೆ ಕಡಿವಾಣ ಹಾಕುವ ಫಿಜಿಟಿವ್ ಎಕನಾಮಿಕ್ ಅಫೆಂಡರ್ಸ್ ಕಾಯ್ದೆ 2018ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.
ಯಾರು ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್?
- 100 ಕೋಟಿ ರೂ. ಅಥವಾ ಅಧಿಕ ಮೊತ್ತದ ವ್ಯವಹಾರದಲ್ಲಿ ಆರೋಪಿ/ಅಪರಾಧಿಯಾಗಿದ್ದು, ಆತನ ವಿರುದ್ಧ ಹಲವು ಬಾರಿ ಬಂಧನ ವಾರಂಟ್ ಜಾರಿಯಾಗಿದ್ದರೂ, ಕಾನೂನು ಕ್ರಮ ತಪ್ಪಿಸಿ ಕೊಳ್ಳಲು ವಿದೇಶದಲ್ಲಿ ನೆಲೆಸಿರುವವರು ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ (ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳು) ಎಂದು ಕರೆಸಿಕೊಳ್ಳುತ್ತಾರೆ.
- ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿಯನ್ನು ಈ ಪಟ್ಟಿಗೆ ಸೇರಿಸಲಾಗಿದೆ.
- ಕಳೆದ ಜುಲೈನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿಧೇಯಕ ಅನುಮೋದನೆ ಪಡೆದಿತ್ತು.
ಕಾಯ್ದೆಯಲ್ಲಿನ ಪ್ರಮುಖ ಅಂಶ: –
# ಆರೋಪಿಯನ್ನು ಫಿಜಿಟಿವ್ ಎಕನಾಮಿಕ್ ಅಫೆಂಡರ್ ಎಂದು ಘೋಷಿಸಲು ವಿಶೇಷ ಕೋರ್ಟ್ ಸ್ಥಾಪನೆ.
# ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಆಸ್ತಿಗಳ ಮುಟ್ಟುಗೋಲು.
# ಆಸ್ತಿಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ, ಆಸ್ತಿಗಳ ಮಾರಾಟಕ್ಕೂ ಆತನಿಗೆ ಅಧಿಕಾರ.
# ಅಪರಾಧಿಯಿಂದ ಪೌರತ್ವ ಹಕ್ಕುಗಳನ್ನು ಕಿತ್ತುಕೊಳ್ಳುವುದು.
ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕಾರ್ಯಾರಂಭ
- ಸುದ್ದಿಯಲ್ಲಿ ಏಕಿದೆ? ಏರ್ಟೆಲ್ ಮತ್ತು ಪೇಟಿಎಂ ಕಂಪನಿಗಳ ನಂತರ ಪೇಮೆಂಟ್ಸ್ ಬ್ಯಾಂಕ್ ಪರವಾನಗಿ ಪಡೆದ ಮೂರನೇ ಸಂಸ್ಥೆ ಇಂಡಿಯಾ ಪೋಸ್ಟ್. ಇದರ ಎರಡು ಶಾಖೆಗಳು ಈಗಾಗಲೇ ಕಾರ್ಯನಿರತವಾಗಿದ್ದು, 648 ಶಾಖೆಗಳು ದೇಶಾದ್ಯಂತದ ಪ್ರತಿ ಜಿಲ್ಲೆಯಲ್ಲೂ ಕಾರ್ಯಾರಂಭ ಮಾಡಲಿವೆ.
- ಈ ವರ್ಷಾಂತ್ಯದ ವೇಳೆಗೆ ದೇಶದ 55 ಲಕ್ಷ ಅಂಚೆ ಕಚೇರಿ ಶಾಖೆಗಳು ಇದರ ಸೇವಾವ್ಯಾಪ್ತಿಗೆ ಬರಲಿವೆ.
ಪೇಮೆಂಟ್ಸ್ ಬ್ಯಾಂಕ್ ಪರಿಕಲ್ಪನೆ
- ಪೇಮೆಂಟ್ಸ್ ಬ್ಯಾಂಕ್ಗಳು ಪ್ರತಿ ಗ್ರಾಹಕರಿಂದ ಗರಿಷ್ಠ 1 ಲಕ್ಷ ರೂ. ಠೇವಣಿ ಸ್ವೀಕರಿಸಬಹುದಾಗಿದೆ.. ಇದರಿಂದಾಗಿ ಗ್ರಾಹಕರು ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಮತ್ತು ಯಾವುದೇ ಬ್ಯಾಂಕ್ ಖಾತೆಯಿಂದ ಹಣ ಸ್ವೀಕರಿಸಲು ಸಾಧ್ಯವಾಗಲಿದೆ.
- ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಂಬಂಧಿತ ದಿನಗೂಲಿ/ವೇತನಗಳು, ಅನುದಾನಗಳು, ಪಿಂಚಣಿ ಇತ್ಯಾದಿಗಳ ವಿತರಣೆಗೂ ಸರ್ಕಾರ ಪೇಮೆಂಟ್ ಬ್ಯಾಂಕ್ ಬಳಸಿಕೊಳ್ಳಲಿದೆ.
ಐಪಿಪಿಬಿ ವೈಶಿಷ್ಟ್ಯ
- ದೇಶಾದ್ಯಂತ ಹಬ್ಬಿರುವ 55 ಲಕ್ಷ ಅಂಚೆ ಕಚೇರಿ ಶಾಖೆಗಳು ಐಪಿಪಿಬಿಯ ಕಾರ್ಯಜಾಲಕ್ಕೆ ಬರುತ್ತವೆ. ಹಳ್ಳಿಹಳ್ಳಿಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆ ಲಭ್ಯವಾಗಲಿದೆ. ಸುಮಾರು 17 ಕೋಟಿಯಷ್ಟಿರುವ ಅಂಚೆ ಉಳಿತಾಯ ಬ್ಯಾಂಕ್ (ಪೋಸ್ಟಲ್ ಸೇವಿಂಗ್ಸ್ ಬ್ಯಾಂಕ್- ಪಿಎಸ್ಬಿ) ಖಾತೆಗಳು ಐಪಿಪಿಬಿ ಖಾತೆಯೊಂದಿಗೆ ವಿಲೀನಗೊಳ್ಳಲಿದೆ.
- ಗ್ರಾಮೀಣ ಜನರು ಮೊಬೈಲ್ ಆಪ್ ಮೂಲಕ ಅಥವಾ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆ ಒದಗಿಸಲು ಈ ಕ್ರಮ ಮಹತ್ವದ್ದಾಗಿದೆ.
- ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಮನೆಬಾಗಿಲಲ್ಲೇ ಲಭ್ಯವಾಗಲಿದೆ. ಅಂಚೆ ಕಚೇರಿಗಳಲ್ಲಿ ಸ್ಥಾಪಿಸಲಾಗಿರುವ 3,250 ಪ್ರವೇಶ ತಾಣಗಳು (ಅ್ಚಠಠ ಟಟಜ್ಞಿಠಿಠ) ಮತ್ತು ಗ್ರಾಮೀಣ-ನಗರ ಪ್ರದೇಶಗಳಲ್ಲಿ ಸುಮಾರು 11,000 ಅಂಚೆಪೇದೆಗಳನ್ನು ಸಜ್ಜುಗೊಳಿಸಲಾಗಿದೆ.
ಐಪಿಪಿಬಿ ಆಪ್
- ಆ. 21ರಂದೇ ಐಪಿಪಿಬಿ ಆಪ್ಗೂ ಚಾಲನೆ ಸಿಗುವ ನಿರೀಕ್ಷೆಯಿದ್ದು, ಫೋನ್ ರೀಚಾರ್ಜ್ ಮತ್ತು ಬಿಲ್, ವಿದ್ಯುಚ್ಛಕ್ತಿ ಬಿಲ್, ಡಿಟಿಎಚ್ ಸೇವೆ, ಕಾಲೇಜು ಶುಲ್ಕ ಪಾವತಿ (ನ್ಯಾಷನಲ್ ಪೇಮೆಂಟ್ಸ್ ಕಾಪೋರೇಷನ್ ಆಫ್ ಇಂಡಿಯಾದ ‘ಭಾರತ್ ಬಿಲ್’ ಪೇಮೆಂಟ್ಸ್ ವ್ಯವಸ್ಥೆಯಲ್ಲಿ ಇವೆಲ್ಲ ಲಭ್ಯವಿವೆ) ಸಹಿತ ಸುಮಾರು 100 ಸಂಸ್ಥೆಗಳ ಸೇವಾಸೌಲಭ್ಯಗಳಿಗೆ ಹಣ ಪಾವತಿಸಲು ಗ್ರಾಹಕರಿಗೆ ಈ ಆಪ್ ಅನುವುಮಾಡಿಕೊಡಲಿದೆ.
ಕಾರ್ಯತಂತ್ರ ವ್ಯಾಪಾರ ಅಧಿಕಾರ -1(ಎಸ್ಟಿಎ-1)
- ಸುದ್ದಿಯಲ್ಲಿ ಏಕಿದೆ ? ಕೇವಲ ನ್ಯಾಟೊ ಒಕ್ಕೂಟದ ರಾಷ್ಟ್ರಗಳಿಗೆ ಸೀಮಿತವಾಗಿದ್ದ ಕಾರ್ಯತಂತ್ರ ವ್ಯಾಪಾರ ಅಧಿಕಾರ -1(ಎಸ್ಟಿಎ-1) ಮಾನ್ಯತೆಯನ್ನು ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಭಾವ ತಗ್ಗಿಸುವ ಉದ್ದೇಶದಿಂದ ಅಮೆರಿಕ ಭಾರತಕ್ಕೆ ನೀಡಿದೆ.
- ಇದರಿಂದಾಗಿ ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅಮೆರಿಕ ನಿರ್ವಿುತ ಅತ್ಯಾಧುನಿಕ ಉತ್ಪನ್ನಗಳನ್ನು ಭಾರತ ಹೊಂದಬಹುದಾಗಿದೆ.
- ಅಮೆರಿಕ ಸರ್ಕಾರದಿಂದ ಎಸ್ಟಿಎ-1 ಮಾನ್ಯತೆ ಬಗೆಗಿನ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕಾರಣಗಳು
- ದಕ್ಷಿಣ ಚೀನಾ ಸಮುದ್ರ ಹಾಗೂ ಡೋಕ್ಲಾಂ ಬಿಕ್ಕಟ್ಟಿನಲ್ಲಿ ಅಧಿಪತ್ಯ, ತನ್ನ ಮಧ್ಯಸ್ಥಿಕೆಯಲ್ಲಿ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವೆ ಭಿನ್ನಮತ ಶಮನಗೊಳಿಸಿದ ಚೀನಾ ಪ್ರಭಾವಶಾಲಿಯಾಗುತ್ತಿರುವುದು ಅಮೆರಿಕದ ನಿದ್ದೆಗೆಡಿಸಿದೆ. ರಷ್ಯಾ ಬೆಂಬಲ ಹೆಚ್ಚಿದರೆ ಭವಿಷ್ಯದಲ್ಲಿ ಏಷ್ಯಾದಲ್ಲಿ ಅಧಿಪತ್ಯ ಸಾಧಿಸಿ, ಬಳಿಕ ತನಗೆ ಸೆಡ್ಡು ಹೊಡೆಯಲು ಚೀನಾ ಎದುರು ನಿಲ್ಲುತ್ತದೆ ಎಂದು ಅಮೆರಿಕ ಚೆನ್ನಾಗಿ ಅರಿತಿದೆ. ಹಾಗಾಗಿ ಭಾರತಕ್ಕೆ ಎಸ್ಟಿಎ-1 ಮಾನ್ಯತೆ ನೀಡುವ ಮೂಲಕ ಏಷ್ಯಾದಲ್ಲಿಯೇ ಚೀನಾ ಪ್ರಭಾವವನ್ನು ಚಿವುಟಿ ಹಾಕಲು ಅಮೆರಿಕ ಹೆಣೆದಿರುವ ತಂತ್ರವಿದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಮೂರನೇ ರಾಷ್ಟ್ರ ಭಾರತ : ಜಪಾನ್, ದಕ್ಷಿಣ ಕೊರಿಯಾ ಬಳಿಕ ಎಸ್ಟಿಎ-1 ಮಾನ್ಯತೆ ಪಡೆದ ಏಷ್ಯಾದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ.
- ಹಾಂಕಾಂಗ್, ಮಾಲ್ಟಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ತೈವಾನ್, ಇಸ್ರೇಲ್ ಪ್ರಸ್ತುತ ಎಸ್ಟಿಎ-2 ಮಾನ್ಯತೆ ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಭಾರತಕ್ಕೆ ಮಾತ್ರ ಎಸ್ಟಿಎ-1ಗೆ ಬಡ್ತಿ ಸಿಕ್ಕಿದೆ.
ಎನ್ಎಸ್ಜಿ ಸದಸ್ಯತ್ವ ಇನ್ನೂ ಹತ್ತಿರ?
- ಪರಮಾಣು ಪೂರೈಕೆದಾರರ ಸಮೂಹ (ಎನ್ಎಸ್ಜಿ) ಸದಸ್ಯತ್ವಕ್ಕಾಗಿ ಎದುರು ನೋಡುತ್ತಿರುವ ಬೆನ್ನಲ್ಲೇ ಎಸ್ಟಿಎ-1 ಮಾನ್ಯತೆ ಭಾರತದ ಪಾಲಾಗಿದೆ. ಚೀನಾ ಹೇರುತ್ತಿರುವ ತಾಂತ್ರಿಕ ಅಡೆತಡೆಗಳ ಕಾರಣದಿಂದಾಗಿ ವಿಳಂಬವಾಗುತ್ತಿರುವ ಎನ್ಎಸ್ಜಿ ಸದಸ್ಯತ್ವ ಶೀಘ್ರವೇ ಭಾರತಕ್ಕೆ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ.
- ವಿಶ್ವದಲ್ಲಿ ಭಾರತದ ಹೊರತಾಗಿ 36 ರಾಷ್ಟ್ರಗಳು ಎಸ್ಟಿಎ-1 ಮಾನ್ಯತೆ ಹೊಂದಿವೆ. ಭಾರತದ ಜತೆಗೆ ಸ್ನೇಹದ ಬಯಕೆ ಮತ್ತು ಅಮೆರಿಕದ ಒತ್ತಡದಿಂದ ಎನ್ಎಸ್ಜಿ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಚೀನಾ ಮೇಲೆ ಒತ್ತಡ ಹೇರಬಹುದು. ಆಗ ಅನಿವಾರ್ಯವಾಗಿ ಚೀನಾ , ತನ್ನ ಪಾಕ್ ಪರವಾದ ನಿಲುವು ಬದಿಗೊತ್ತಿ ಭಾರತದ ಎನ್ಎಸ್ಜಿ ಸದಸ್ಯತ್ವ ಕನಸಿಗೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ ಎನ್ನಲಾಗುತ್ತಿದೆ.
ಉಪಯೋಗಗಳು
- ಅಮೆರಿಕದ ಸ್ಟ್ರಾಟೆಜಿಕ್ ಟ್ರೇಡ್ ಆಥರೈಸೇಷನ್ -1 ದೇಶಗಳ ಪಟ್ಟಿಯಲ್ಲಿ ಭಾರತವನ್ನು ಇರಿಸುವ ನಿರ್ಧಾರವು, ಹೈಟೆಕ್ ಐಟಂಗಳ ರಫ್ತುವನ್ನು ಸರಾಗಗೊಳಿಸುತ್ತದೆ.
- ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಭದ್ರತೆ ಮತ್ತು ಆರ್ಥಿಕ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ.
- ರಕ್ಷಣಾ ಪಾಲುದಾರಿಕೆಯನ್ನು ಹೆಚ್ಚಿಸುತ್ತದೆ
- ಇದು ಹೆಚ್ಚು ಸೂಕ್ಷ್ಮ ರಕ್ಷಣಾ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಲು ಅವಕಾಶ ನೀಡುತ್ತದೆ
- ಎಸ್.ಎಸ್.ಎ -1 ಭಾರತದ ರಕ್ಷಣಾ ವ್ಯವಸ್ಥೆಗಳಿಗೆ ಮತ್ತು ಇತರ ಹೈಟೆಕ್ ಉತ್ಪನ್ನಗಳಿಗೆ ಹೆಚ್ಚಿನ ಪೂರೈಕೆ ಸರಪಳಿ ಸಾಮರ್ಥ್ಯವನ್ನು ಒದಗಿಸುತ್ತದೆ
ಔಷಧ ನಿಷೇಧ
- ಸುದ್ದಿಯಲ್ಲಿ ಏಕಿದೆ ? ಔಷಧ ತಾಂತ್ರಿಕ ಸಲಹಾ ಮಂಡಳಿಯ (ಡಿಟಿಎಬಿ) ಉಪಸಮಿತಿ ಶಿಫಾರಸಿನ ಕಾರಣ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುವ 300 ಕ್ಕೂ ನಿಗದಿತ ಪ್ರಮಾಣದ ಸಂಯೋಜಿತ (ಎಫ್ಡಿಸಿ) ಔಷಧಗಳು ಶೀಘ್ರ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.
- ಅಬ್ಬೋಟ್, ಪಿರಾಮಲ್, ಮ್ಯಾಕ್ಲಿಯೊಡ್ಸ್, ಸಿಪ್ಲಾ, ಲುಪಿನ್ ಸೇರಿ ಹಲವು ಕಂಪನಿಗಳ 343ಎಫ್ಡಿಸಿ ಔಷಧಗಳ ಕರಡು ಪಟ್ಟಿ ಸಿದ್ಧವಾಗಿದೆ. ಇವುಗಳ ತಯಾರಿಕೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸುವ ತೀರ್ವನವನ್ನು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೊಂದು ವಾರದಲ್ಲಿ ಕೈಗೊಳ್ಳಲಿದೆ.
- ಭಾರತದ ಒಟ್ಟಾರೆ ಔಷಧ ಮಾರುಕಟ್ಟೆಯಲ್ಲಿ ವಾರ್ಷಿಕವಾಗಿ ಅಂದಾಜು 3 ಸಾವಿರ ಕೊಟಿಯಷ್ಟು ಎಫ್ಡಿಸಿ ಔಷಧಗಳು ಬಿಕರಿಯಾಗುತ್ತವೆ.
ನಿಷೇಧ ಏಕೆ?:
- ಅಸುರಕ್ಷಿತ ಮತ್ತು ಅಡ್ಡಪರಿಣಾಮ ಬೀರುತ್ತವೆ ಎಂಬ ಕಾರಣಕ್ಕೆ ಸರಿಸುಮಾರು 349 ಎಫ್ಡಿಸಿ ಔಷಧಗಳನ್ನು ಕೇಂದ್ರ ಸರ್ಕಾರ 2016ರಲ್ಲಿ ನಿಷೇಧಿಸಿತ್ತು.
- ಇದನ್ನು ಪ್ರಶ್ನಿಸಿ ಔಷಧ ತಯಾರಕಾ ಸಂಸ್ಥೆಗಳು ದೆಹಲಿ ಹೋಕೋರ್ಟ್ ಮೊರೆ ಹೋಗಿದ್ದವು. ಪರಿಣಾಮ ಹೈಕೋರ್ಟ್, ಸರ್ಕಾರದ ಆದೇಶವನ್ನು ವಜಾ ಮಾಡಿತು. ನಂತರ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಹೋಯಿತು. ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್, ಎಫ್ಡಿಸಿಯಲ್ಲಿ ಯಾವ್ಯಾವ ಔಷಧಗಳನ್ನು ನಿಷೇಧಿಸಬಹುದು ಮತ್ತು ನಿಷೇಧಿಸಲು ಏನು ಕಾರಣ ಎಂಬುದರ ವರದಿ ನೀಡುವಂತೆ ಸೂಚಿಸಿತ್ತು.
- ಇದರ ಅನ್ವಯ ಡಿಟಿಎಬಿ ಉಪಸಮಿತಿ ಔಷಧ ತಯಾರಿಕಾ ಕಂಪನಿಗಳ ಅಹವಾಲನ್ನೂ ಆಲಿಸಿ 349 ಎಫ್ಡಿಸಿ ಔಷಧಗಳಲ್ಲಿ ಆರನ್ನು ಕೈಬಿಟ್ಟು 343 ಔಷಧಗಳನ್ನು ನಿಷೇಧಿಸಲು ಶಿಫಾರಸು ಮಾಡಿದೆ.
ಯಾವ್ಯಾವ ಔಷಧ ನಿಷೇಧ?
- ಕೆಮ್ಮಿನ ಔಷಧ ಕೋರೆಕ್ಸ್ ಕಾಫ್ ಸಿರಪ್, ನೋವು ನಿವಾರಕ ಮತ್ತು ಫ್ಲೂ ಜ್ವರಕ್ಕೆ ನೀಡುವ ಪೆನ್ಸೆಡಿಲ್, ಸಾರಿಡಾನ್, ಡಿ’ಕೋಲ್ಡ್ ಟೋಟಲ್, ವಿಕ್ಸ್ ಆಕ್ಷನ್ 500, ಮಧುಮೇಹ ನಿಯಂತ್ರಣಕ್ಕೆ ಬಳಸುವ ಹಲವು ಔಷಧಗಳು.
ಸಮಸ್ಯೆ ಏನು?
- ಎಫ್ಡಿಸಿ ಔಷಧಗಳ ಅರ್ಧದಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ವಿಶ್ವದ ದೊಡ್ಡ ಮಾರುಕಟ್ಟೆಗಳಲ್ಲಿ ಭಾರತವು ಒಂದು. 2016 ರ ಮಾರ್ಚ್ನಲ್ಲಿ ಡ್ರಗ್ಸ್ ಮತ್ತು ಕಾಸ್ಮೆಟಿಕ…
- ಕಾಯ್ದೆಯ ಸೆಕ್ಷನ್ 26 ಎ ಅಡಿಯಲ್ಲಿ 344 ಎಫ್ಡಿಸಿ ಔಷಧಿಗಳ ಮೇಲೆ ನಿಷೇಧ ಹೇರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧಿಸಿದೆ. ಕೊಕೇಟ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ನಿಷೇಧವನ್ನು ವಿಧಿಸಲಾಯಿತು. ಈ ಔಷಧಿಗಳು ಸೂಕ್ಷ್ಮಜೀವಿಯ ವಿರೋಧಿ ಪ್ರತಿರೋಧವನ್ನು ಉಂಟುಮಾಡುತ್ತವೆ ಮತ್ತು ಹೆಚ್ಚಿನ ವಿಷತ್ವದಿಂದ ಅಂಗ-ವಿಫಲತೆಯನ್ನು ಉಂಟುಮಾಡಬಹುದು ಎಂಬ ಭಯದಿಂದಾಗಿ ಇದು ವಿಧಿಸಲ್ಪಟ್ಟಿತು.
- ಇದು ಔಷಧಿಗಳ ದುರುಪಯೋಗವನ್ನು ತಡೆಯುವ ಗುರಿಯನ್ನು ಹೊಂದಿದೆ. ಹೇಗಾದರೂ, ಔಷಧೀಯ ಕಂಪನಿಗಳು ಯಾವುದೇ ಹಿಂದಿನ ವಿಚಾರಣೆ ಅವರಿಂದ ಮಾಡಲಾಗುವುದಿಲ್ಲ ಅಥವಾ ಕೇಂದ್ರ ಸರ್ಕಾರವು ನಿಷೇಧಿಸುವ ಮೊದಲು ಹೊರಡಿಸಿದ ಸೂಚನೆ ಸೂಚನೆ ಎಂದು ವಾದಿಸುತ್ತಾರೆ. ಈ ಔಷಧಿಗಳನ್ನು ಅದೇ ಸಂಯೋಜನೆಯಲ್ಲಿ ಇತರ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ
ಸ್ಥಿರ ಡೋಸ್ ಸಂಯೋಜನೆಯ ಔಷಧ ಯಾವುದು?
- ಕಾಂಬಿನೇಶನ್ ಡ್ರಗ್ಸ್ ಅಥವಾ ಸ್ಥಿರ ಡೋಸ್ ಸಂಯೋಜನೆ (ಎಫ್ಡಿಸಿ) ಔಷಧಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ಕ್ರಿಯಾತ್ಮಕ ಔಷಧೀಯ ಪದಾರ್ಥಗಳನ್ನು ಒಂದೇ ಔಷಧಿ ರೂಪಿಸಲು ಸ್ಥಿರ ಪ್ರಮಾಣದಲ್ಲಿ ಸಂಯೋಜಿಸಿವೆ.
ಪ್ರತಿಜೀವಕ ಪ್ರತಿರೋಧ ಏನು?
- ಪ್ರತಿಜೀವಕ ಔಷಧದ ಪರಿಣಾಮಗಳನ್ನು ತಡೆದುಕೊಳ್ಳುವ ರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ಸಾಮರ್ಥ್ಯವು ಪ್ರತಿಜೀವಕ ನಿರೋಧಕ ಶಕ್ತಿಯಾಗಿದೆ.
- ಪ್ರತಿಜೀವಕಗಳ ವಿವೇಚನಾರಹಿತವಾದ ಪ್ರಿಸ್ಕ್ರಿಪ್ಷನ್ ಮತ್ತು ಜಾರಿ ಕಾನೂನುಗಳ ಸಡಿಲತೆಯು ಆಂಟಿಮೈಕ್ರೊಬಿಯಲ್ ಪ್ರತಿರೋಧದ ಮುಖ್ಯ ಕಾರಣಗಳಾಗಿವೆ.
ದೀನದಯಾಳ್ ಜಂಕ್ಷನ್
- ಸುದ್ದಿಯಲ್ಲಿ ಏಕಿದೆ? ಉತ್ತರ ಪ್ರದೇಶದ ಮುಘಲ್ಸರಾಯ್ ರೈಲು ನಿಲ್ದಾಣಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಹೆಸರನ್ನು ಮರುನಾಮಕರಣ ಮಾಡಲಾಗಿದೆ.
- ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಮುಘಲ್ಸರಾಯ್ ರೈಲು ನಿಲ್ದಾಣ 1862ರಲ್ಲಿ ಬ್ರಿಟಿಷರ ಆಡಳಿತದಲ್ಲಿ ನಿರ್ಮಾಣ ವಾಗಿದೆ. ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿ (2016-17) ಅಂಗವಾಗಿ ಉತ್ತರ ಪ್ರದೇಶ ಸರ್ಕಾರ ಇದಕ್ಕೆ ಉಪಾಧ್ಯಾಯರ ಹೆಸರನ್ನು ಇರಿಸಲುಕಳೆದ ವರ್ಷ ಜೂನ್ನಲ್ಲಿ ತೀರ್ವನಿಸಿತ್ತು.
- ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರು, ಲಖನೌದಿಂದ ಪಟನಾಗೆ 1968ರ ಫೆ. 11ರಂದು ರೈಲಿನಲ್ಲಿ ತೆರಳುತ್ತಿದ್ದರು. ಆದರೆ, ಮಾರ್ಗ ಮಧ್ಯದಲ್ಲೇ ಅವರು ನಿಗೂಢವಾಗಿ ಮೃತಪಟ್ಟಿದ್ದರು. ಮುಘಲ್ಸರಾಯ್ ನಿಲ್ದಾಣ ಬಳಿ ಅವರ ಶವ ಪತ್ತೆಯಾಯಿತು. ಹೀಗಾಗಿ ಮುಘಲ್ಸರಾಯ್ ನಿಲ್ದಾಣಕ್ಕೆ ಅವರ ಹೆಸರನ್ನು ಇರಿಸಬೇಕು ಎಂದು ಬಿಜೆಪಿ, ಆರ್ಎಸ್ಎಸ್ ಒತ್ತಾಯಿಸಿತ್ತು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್
- ಸುದ್ದಿಯಲ್ಲಿ ಏಕಿದೆ? ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಸ್ಪೇನ್ನ ಕರೊಲಿನಾ ಮರಿನ್ ವಿರುದ್ಧ ನೇರ ಸೆಟ್ಗಳಲ್ಲಿ ಸೋಲನುಭವಿಸಿದ ಭಾರತದ ಪಿ.ವಿ.ಸಿಂಧು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.
- ಕ್ಯಾರೋಲಿನಾ ಮರಿನ್ ವಿರುದ್ಧ 21- 19, 21-10ರ ನೇರ ಸೆಟ್ಗಳಿಂದ ಸೋತು ಎರಡನೇ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
- ಕಳೆದ ರಿಯೋ ಒಲಂಪಿಕ್ಸ್ ಫೈನಲ್ ಪಂದ್ಯದಲ್ಲಿ ಇದೇ ಕ್ಯಾರೋಲಿನಾ ಮರಿನ್ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಈ ಬಾರಿಯ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ರಿಯೋ ಫೈನಲ್ ಫಲಿತಾಂಶವೇ ಮರುಕಳಿಸಿದಂತಾಗಿದೆ.
ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ
- ಸುದ್ದಿಯಲ್ಲಿ ಏಕಿದೆ? ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ಗೆ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.
- ಈ ಮೂಲಕ ಗೀತಾ ಮಿತ್ತಲ್ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ಗೆ ನೇಮಕವಾದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
- ಗೀತಾ ಮಿತ್ತಲ್ ಅವರು ಪ್ರಸ್ತುತ ದೆಹಲಿ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿದ್ದು, ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವರಿ ಪಡೆದಿರುವ ಗೀತಾ ಅವರು 1981ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. 2004ರ ಜುಲೈನಲ್ಲಿ ಅವರನ್ನು ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಇವರು 2018ನೇ ಸಾಲಿನಲ್ಲಿ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿ ಪಡೆದಿದ್ದಾರೆ.
ಎಚ್ಎಎಲ್
- ಸುದ್ದಿಯಲ್ಲಿ ಏಕಿದೆ? ಮಹತ್ವಾಕಾಂಕ್ಷೆಯ ಲಘು ಸಮರ ವಿಮಾನ(ಎಲ್ಸಿಎ)ವನ್ನು ದೇಶೀಯವಾಗಿಯೇ ಉತ್ಪಾದಿಸುವ ಯೋಜನೆಯ ವೆಚ್ಚ ಮತ್ತು ವಿಳಂಬ ನಿಯಂತ್ರಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಲಘು ಸಮರ ವಿಮಾನ ಯೋಜನೆಯನ್ನು ನಿರ್ವಹಿಸುತ್ತಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ಬೆಂಗಳೂರು ವಿಭಾಗವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲು ಮುಂದಾಗಿದೆ.
- ಎಲ್ಸಿಎ ಯೋಜನೆಯ ಮುಂದಿನ ಹಂತ ಅಂದರೆ ಎಂಕೆ2 ಮಾದರಿಯ ನಿರ್ಮಾಣ ಕಾರ್ಯ ಅನುಷ್ಠಾನಗೊಳ್ಳುವ ಸೂಕ್ಷ್ಮ ಸನ್ನಿವೇಶದಲ್ಲೇ ಈ ಬದಲಾವಣೆ ಕಂಡುಬಂದಿದೆ.
- ಅದೇ ರೀತಿ ಸುಧಾರಿತ ಮಧ್ಯಮ ಸಮರ ವಿಮಾನ(ಎಎಂಸಿಎ) ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಎಚ್ಎಎಲ್ನ ಬೆಂಗಳೂರು ಸಂಕೀರ್ಣವನ್ನು ಐಎಎಫ್ಗೆ ಹಸ್ತಾಂತರಿಸುವಂತೆ ಸರ್ಕಾರ ಸೂಚಿಸಿದೆ. ಇದರೊಂದಿಗೆ ಎಚ್ಎಎಲ್ನ ವಿಮಾನ ನಿರ್ಮಾಣ ವಿಭಾಗ ಐಎಎಫ್ ಅಧೀನಕ್ಕೆ ಸೇರ್ಪಡೆಯಾದಂತಾಗಿದೆ.







