26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಭ್ರಷ್ಟಾಚಾರ ತಡೆಗೆ ಬಲಿಷ್ಠ ಕಾಯ್ದೆ

 • ಸುದ್ಧಿಯಲ್ಲಿ ಏಕಿದೆ?30 ವರ್ಷಗಳ ನಂತರ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಲಂಚ ಪಡೆಯುವವರ ಜತೆಗೆ ಲಂಚ ನೀಡುವವರಿಗೂ 3ರಿಂದ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನು ಬಿಗಿಗೊಳಿಸಲಾಗಿದೆ.
 • ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿದ್ದು, ಲೋಕಸಭೆ ಅಂಗೀಕರಿಸಿದೆ. ಶೀಘ್ರದಲ್ಲೆ ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ಸಿಗಲಿದೆ.
 • ಸರ್ಕಾರಿ ಅಧಿಕಾರಿಗಳನ್ನು (ಜಂಟಿ ಕಾರ್ಯದರ್ಶಿ ಮತ್ತು ಮೇಲಿನ ಅಧಿಕಾರಿ) ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧಿಸಬೇಕಿದ್ದರೆ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಎಲ್ಲ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ. ಪ್ರಾ
 • ಮಾಣಿಕ ಅಧಿಕಾರಗಳ ವಿರುದ್ಧ ಸುಳ್ಳು ಕೇಸು ದಾಖಲಾಗುವುದನ್ನು ತಡೆಯುವ ಉದ್ದೇಶದಿಂದ ಹೊಸ ಅಂಶ ಸೇರಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಯಾವ ದರ್ಜೆಯ ನೌಕರ/ಅಧಿಕಾರಿಗೆ ಯಾವುದು ಸಕ್ಷಮ ಪ್ರಾಧಿಕಾರ ಎನ್ನುವು ಬಗ್ಗೆ ಸರ್ಕಾರ ಮಾರ್ಗಸೂಚಿಯನ್ನು ಶೀಘ್ರದಲ್ಲಿ ಪ್ರಕಟಿಸಲಿದೆ.

ಮಸೂದೆಯಲ್ಲಿ ಹೊಸದೇನು?

 • ಲಂಚ ನೀಡುವುದು ಶಿಕ್ಷಾರ್ಹ ಅಪರಾಧ. 3ರಿಂದ 7 ವರ್ಷ ಸಜೆ ಹಾಗೂ ದಂಡವನ್ನೂ ವಿಧಿಸಬಹುದು.
 • ಲಂಚ ನೀಡುವಂತೆ ಬಲವಂತ ಮಾಡುವುದು ಅಥವಾ ಅಂತಹ ವಾತಾವರಣ ಸೃಷ್ಟಿಸಿದರೆ, ಇದನ್ನು 7 ದಿನಗಳ ಒಳಗೆ ಲಂಚ ತಡೆ ಘಟಕಕ್ಕೆ ತಿಳಿಸಿದರೆ ರಕ್ಷಣೆ ದೊರೆಯುತ್ತದೆ.

ತನಿಖೆಗೂ ಅನುಮತಿ ಅಗತ್ಯ

 • ಭ್ರಷ್ಟಾಚಾರ ಆರೋಪಿಯಾದ ಸರ್ಕಾರಿ ನೌಕರನ ವಿರುದ್ಧ ತನಿಖೆಗೆ ಮುನ್ನ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಅಗತ್ಯ (ಲಂಚ ಪಡೆಯುವಾಗ ಖುದ್ದು (ರೆಡ್​ಹ್ಯಾಂಡ್) ಸಿಕ್ಕಿಬಿದ್ದ ಪ್ರಕರಣ ಹೊರತು ಪಡಿಸಿ). ಇದು ಜಂಟಿ ಕಾರ್ಯದರ್ಶಿ ಮತ್ತು ಮೇಲಿನ ಅಧಿಕಾರಿಗಳಿಗೆ ಮಾತ್ರ ಅನ್ವಯ ಆಗುತ್ತಿತ್ತು. ತಿದ್ದುಪಡಿಯಲ್ಲಿ ಎಲ್ಲ ಅಧಿಕಾರಿಗಳಿಗೂ ಇದನ್ನು ವಿಸ್ತರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ವಾಣಿಜ್ಯ ಸಂಸ್ಥೆಗಳ ಅಧಿಕಾರಿಗಳಿಗೂ ಇದು ಅನ್ವಯ.
 • ನಿವೃತ್ತ ಅಧಿಕಾರಿ ವಿರುದ್ಧ ಲಂಚ ಆರೋಪವಿದ್ದರೂ ಪ್ರಕರಣ ದಾಖಲಿಸಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಅಗತ್ಯ.
 • ಪ್ರಕರಣದ ವಿಚಾರಣೆಗೆ ಕೋರಿದ ಅರ್ಜಿಯನ್ನು 3 ತಿಂಗಳೊಳಗೆ ಇತ್ಯರ್ಥ ಮಾಡಬೇಕು. ಹೆಚ್ಚೆಂದರೆ ಇನ್ನೊಂದು ತಿಂಗಳು ಅವಧಿ ಪಡೆಯಬಹುದು.

ಆಸ್ತಿ ಮುಟ್ಟುಗೋಲು

 • ಭ್ರಷ್ಟಾಚಾರದ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ. ಇದರಿಂದ ಆರೋಪಿಗಳು ಅಕ್ರಮವಾಗಿ ಗಳಿಸಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಹೊಸದಾಗಿ ಪ್ರಕ್ರಿಯೆ ನಡೆಯುವುದು ತಪು್ಪತ್ತದೆ. ವಿಶೇಷ ನ್ಯಾಯಾಲಯಗಳಿಗೆ ಈ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಇರುತ್ತದೆ.

ಅಪರಾಧದ ಸ್ವರೂಪ

 • ಭ್ರಷ್ಟಾಚಾರವನ್ನು ಕಾನೂನು ಬದ್ಧವಲ್ಲದ ಗಳಿಕೆ ಆದಾಯವೆಂದು ವ್ಯಾಖ್ಯಾನ.
 • ಭ್ರಷ್ಟಾಚಾರವನ್ನು ಎರಡು ರೀತಿಯ ಅಪರಾಧವೆಂದು ಗುರುತಿಸಲಾಗಿದೆ.
 • ಸರ್ಕಾರಿ ನೌಕರನಿಂದ ಸಾರ್ವಜನಿಕ ಆಸ್ತಿಯ ದುರುಪಯೋಗ
 • ಅಕ್ರಮ ಆದಾಯ

ಕಾಟ್ಸಾ ಕಾಯ್ದೆ

 • ಸುದ್ಧಿಯಲ್ಲಿ ಏಕಿದೆ?ಭಾರತ ಹಾಗೂ ರಷ್ಯಾ ನಡುವಿನ ರಕ್ಷಣಾ ಒಪ್ಪಂದಕ್ಕೆ ಅಡ್ಡಗಾಲಾಗಿದ್ದ ಕಾಟ್ಸಾ ಕಾಯ್ದೆಯಿಂದ ಭಾರತಕ್ಕೆ ವಿನಾಯಿತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಭಾರತ ಹಾಗೂ ರಷ್ಯಾ ನಡುವಿನ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿಗೆ ಅಮೆರಿಕದ ತಗಾದೆ ಅಂತ್ಯವಾಗುವ ಲಕ್ಷಣ ಗೋಚರಿಸಿದೆ.
 • ಕಾಟ್ಸಾ ಕಾಯ್ದೆಯಲ್ಲಿನ ವಿವಾದಿತ ಅಂಶದಿಂದ ಭಾರತಕ್ಕೆ ವಿನಾಯಿತಿ ನೀಡಲು ಅಮೆರಿಕದ ಕಾಂಗ್ರೆಸ್ ಸಮಿತಿಯು ಸಂಸತ್ತಿಗೆ ಶಿಫಾರಸು ಮಾಡಿದೆ.

ವಿನಾಯಿತಿ ಏನು?

 • ಭಾರತದೊಂದಿಗೆ ಅಮೆರಿಕವು ದೊಡ್ಡ ಪ್ರಮಾಣದ ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಹೊಂದಿದೆ. ಚೀನಾವನ್ನು ಎದುರಿಸಬೇಕಾದಲ್ಲಿ ಭಾರತದ ಸಹಾಯ ಅನಿವಾರ್ಯ. ಹೀಗಾಗಿ ಕಾಟ್ಸಾ ಕಾಯ್ದೆಯಲ್ಲಿನ 231ನೇ ಸೆಕ್ಷನ್​ಗೆ ಭಾರತಕ್ಕೆ ವಿನಾಯಿತಿ ನೀಡಲಾಗಿದೆ. ತನ್ನ ಮಿತ್ರ ರಾಷ್ಟ್ರಗಳಿಗೆ ಈ ರೀತಿಯ ವಿನಾಯಿತಿ ನೀಡುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲು ಪ್ರಸ್ತಾವಿತ ತಿದ್ದುಪಡಿಯಲ್ಲಿ ಶಿಫಾರಸು ಮಾಡಲಾಗಿದೆ. ಒಂದೊಮ್ಮೆ ತಿದ್ದುಪಡಿಗೆ ಒಪ್ಪಿಗೆ ದೊರೆತಲ್ಲಿ ಭಾರತವು ರಷ್ಯಾದೊಂದಿಗೆ ರಕ್ಷಣಾ ಒಪ್ಪಂದ ಮುಂದುವರಿಸಬಹುದಾಗಿದೆ.

ಏನಿದು ಕಾಟ್ಸಾ?

 • ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಎನ್ನುವುದು ಅಮೆರಿಕದ ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಇರುವ ಕಾಯ್ದೆಯಾಗಿದೆ.
 • ಅಮೆರಿಕದ ತಂತ್ರಜ್ಞಾನಗಳ ಮೇಲೆ ಸೈಬರ್ ದಾಳಿಗಳನ್ನು ತಡೆಯುವುದು ಕೂಡ ಇದರ ಪ್ರಮುಖ ಆದ್ಯತೆಯಾಗಿದೆ.
 • ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿರುವ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರವು ಅಮೆರಿಕಕ್ಕೆ ಈ ಕಾಯ್ದೆ ಮೂಲಕ ನೀಡಲಾಗಿದೆ.

ಟ್ರಂಪ್​ನಿಂದ ಟ್ರಂಫ್​ನತ್ತ!

 • ಕಾಟ್ಸಾ ತಿದ್ದುಪಡಿ ಮುಂಚೆಯೇ ಭಾರತವು ರಷ್ಯಾದೊಂದಿಗೆ 5 ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಭಾರತವು 5 ಬಿಲಿಯನ್ ಡಾಲರ್ ಹಣ ವ್ಯಯಿಸುತ್ತಿದೆ.
 • ಇರಾನ್ ಹಾಗೂ ಅಮೆರಿಕ ತಿಕ್ಕಾಟ ತಾರಕಕ್ಕೇರಿದ್ದಾಗ ಈ ಒಪ್ಪಂದಕ್ಕೆ ಅಮೆರಿಕ ವಿರೋಧವ್ಯಕ್ತಪಡಿಸಿತ್ತು. ಆದರೆ ಕಳೆದೊಂದು ದಶಕಗಳಲ್ಲಿ ಭಾರತ ಹಾಗೂ ರಷ್ಯಾ ರಕ್ಷಣಾ ಖರೀದಿ ಕಡಿಮೆಯಾಗಿ ಅಮೆರಿಕದತ್ತ ವಾಲುತ್ತಿದೆ. ಈ ಸಂದರ್ಭದಲ್ಲಿನ ಕಠಿಣ ನಿರ್ಧಾರಗಳು ಅಮೆರಿಕಕ್ಕೆ ನಷ್ಟ ಮಾಡಬಹುದು ಎನ್ನುವ ಕಾರಣಕ್ಕೆ ಈ ಯೂ-ಟನ್ ಹೊಡೆಯಲಾಗುತ್ತಿದೆ ಎಂದು ಹೇಳಲಾಗಿದೆ.
Related Posts
Karnataka Current Affairs – KAS / KPSC Exams – 11th June 2017
Karnataka to borrow $350 million from ADB for road development  The government has decided to borrow $350 million from the Asian Development Bank (ADB) for developing a core road network of ...
READ MORE
National Current Affairs – UPSC/KAS Exams- 20th February 2019
National Electronics Policy Topic: Science and Technology In News: The Union Cabinet  approved the new National Electronics Policy 2019 that aims to achieve a turnover of $400 billion (about Rs. 26 lakh ...
READ MORE
“3rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸುಳ್ಳು ಸುದ್ದಿ ಪ್ರಕಟಿಸಿದರೆ ಪತ್ರಕರ್ತರ ಮಾನ್ಯತೆ ರದ್ದು: ಕೇಂದ್ರ ಸುಳ್ಳು ಸುದ್ದಿ ಸೃಷ್ಟಿಸುವ ಮತ್ತು ಹರಡುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ತಪ್ಪಿಗೆ ಆರು ತಿಂಗಳ ಮಟ್ಟಿಗೆ ...
READ MORE
Cabinet approves amendment in Modified Special Incentive Package Scheme
To boost electronic manufacturing in the country, the Union Cabinet on Wednesday approved incentives to the tune of Rs 10,000 crore for investors by amending the Modified Special Incentive Package ...
READ MORE
Karnataka Current Affairs – KAS / KPSC Exams – 17th April 2017
KLCDA for declaring 176 ‘live’ lakes in Bengaluru as wetlands The Karnataka Lake Conservation and Development Authority (KLCDA) has sought for the declaration of 176 ‘live’ lakes in the city as ...
READ MORE
National Current Affairs – UPSC/KAS Exams – 10th October 2018
IMF projects India's growth at 7.3% in 2018 & at 7.4% in 2019 Topic: Indian Economy IN NEWS: India's growth is expected to increase to 7.3 percent in 2018 and to 7.4 percent ...
READ MORE
Karnataka Current Affairs – KAS / KPSC Exams – 7th July 2017
Metro signage: Union Minister backs tri-language policy In the backdrop of protests to remove Hindi signage from Namma Metro stations, Union Minister D.V. Sadananda Gowda on 6th July expressed support for the ...
READ MORE
High Court: Prepare plan for recruiting women police
The High Court of Karnataka recently expressed displeasure over the dwindling number of policewomen in the state. Justice A N Venugopala Gowda, who is monitoring the recruitment of police personnel in ...
READ MORE
Four-day World Congress on Disaster Management concluded on Sunday with the unanimous adoption of ‘Visakhapatnam Declaration’ calling for a comprehensive action plan for a disaster-resilient society The declaration was drafted after ...
READ MORE
Get ready for the Budget 2018
Expected big news - Budget expected to focus on direct taxes While there are unlikely to be any major changes in indirect tax as most of them are now under the ...
READ MORE
Karnataka Current Affairs – KAS / KPSC Exams
National Current Affairs – UPSC/KAS Exams- 20th February
“3rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Cabinet approves amendment in Modified Special Incentive Package
Karnataka Current Affairs – KAS / KPSC Exams
National Current Affairs – UPSC/KAS Exams – 10th
Karnataka Current Affairs – KAS / KPSC Exams
High Court: Prepare plan for recruiting women police
Visakhapatnam Declaration
Get ready for the Budget 2018

Leave a Reply

Your email address will not be published. Required fields are marked *