ಅಣ್ಣಾ ಕ್ಯಾಂಟೀನ್
- ಸುದ್ಧಿಯಲ್ಲಿ ಏಕಿದೆ? ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ನಾಗರಿಕರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಅಣ್ಣಾ ಕ್ಯಾಂಟೀನ್ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಚಾಲನೆ ನೀಡಿದ್ದಾರೆ.
- ನೂತನವಾಗಿ ಉದ್ಘಾಟನೆಯಾಗಿರುವ ಈ ಕ್ಯಾಂಟೀನ್ಗಳಲ್ಲಿ ಐದು ರೂಪಾಯಿಗಳಿಗೆ ಉಪಹಾರ ಮತ್ತು ಭೋಜನ ನೀಡಲಾಗುತ್ತದೆ. ಮೂರು ಇಡ್ಲಿ/ ಮೂರು ಪೂರಿ/ ಉಪ್ಪಿಟ್ಟು / ಪೊಂಗಲ್ ಅನ್ನು ಉಪಹಾರವಾಗಿ ನೀಡಿದರೆ, ಭೋಜನವಾಗಿ ಅನ್ನ ಸಾಂಬಾರ್, ದಾಲ್, ಉಪ್ಪಿನಕಾಯಿ, ಕರ್ರಿ ಮತ್ತು ಮೊಸರು ನೀಡಲಾಗುತ್ತದೆ.
- ಮೊದಲ ಹಂತದಲ್ಲಿ 203 ಕ್ಯಾಂಟೀನ್ಗಳನ್ನು 110 ಮುನ್ಸಿಪಾಲಿಟಿಗಳಲ್ಲಿ ತೆರೆಯಲಾಗುತ್ತಿದೆ. ಇನ್ನು 25 ಮುನ್ಸಿಪಾಲಿಟಿಗಳಲ್ಲಿ 60 ಕ್ಯಾಂಟೀನ್ಗಳನ್ನು ತೆರಯಲಾಗುತ್ತಿದೆ. ಎರಡನೇ ಹಂತದಲ್ಲಿ 143 ಕ್ಯಾಂಟೀನ್ಗಳನ್ನು 85 ಪ್ರದೇಶಗಳಲ್ಲಿ ತೆರಯಲು ಉದ್ದೇಶಿಸಲಾಗಿದ್ದು ಆಗಸ್ಟ್ ಹೊತ್ತಿಗೆ ಎಲ್ಲ ಕ್ಯಾಂಟೀನ್ಗಳೂ ಆಹಾರ ವಿತರಣಾ ಕಾರ್ಯದಲ್ಲಿ ನಿರತವಾಗಲಿವೆ
- ಹಿನ್ನಲೆ: ತೆಲುಗು ದೇಶಂ ಪಕ್ಷದ ಸಂಸ್ಥಾಪಕರಾದ ಮೇರು ನಟ, ಮಾಜಿ ಮುಖ್ಯಮಂತ್ರಿ ನಂದಮುರಿ ತಾರಕ ರಾಮರಾವ್ ಈ ಹಿಂದೆ ಎರಡು ರೂಪಾಯಿಗಳಿಗೆ ಕೆ.ಜಿ. ಅಕ್ಕಿ ನೀಡುವ ಜನಪ್ರಿಯ ಯೋಜನೆಯನ್ನು ಜಾರಿಗೆ ತಂದಿದ್ದರು.
- ಇದಾದ ನಂತರ ಸದ್ಯ ಚಂದ್ರಬಾಬು ನಾಯ್ಡು ಅವರು ಕಡಿಮೆ ದರದಲ್ಲಿ ಆಹಾರ ಒದಗಿಸುವ ಕಾರ್ಯಕ್ರಮವನ್ನು ರಾಜ್ಯಕ್ಕೆ ಪರಿಚಯಿಸಿದ್ದಾರೆ. ಆರ್ಥಿಕ ದುರ್ಬಲರು, ಬಡವರು ಕೇವಲ 15 ರೂಪಾಯಿಗಳಲ್ಲಿ ದಿನದ ಮೂರು ಹೊತ್ತಿನ ಆಹಾರ ಪಡೆಯಬೇಕು ಎಂಬುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶ.
- ಯೋಜನೆಯ ಉಸ್ತುವಾರಿಯನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ನೀಡಲಾಗಿದೆ. ನಿತ್ಯ 2 ಲಕ್ಷ ಮಂದಿಗೆ ಆಹಾರ ಪೂರೈಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
- ಕಡಿಮೆ ದರದಲ್ಲಿ ಆಹಾರ ಪೂರೈಸುವ ಜನಪ್ರಿಯ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ರಾಜ್ಯ ತಮಿಳುನಾಡು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಕೇವಲ ಐದು ರೂಪಾಯಿಗಳಿಗೆ ಉಪಹಾರ, ಭೋಜನ ನೀಡುವ ಅಮ್ಮಾ ಕ್ಯಾಂಟೀನ್ ಅನ್ನು ಜಾರಿಗೆ ತಂದಿದ್ದರು.
ರಾಜ್ಯಸಭೆ ಕಲಾಪದ ಅಧಿಕೃತ ಭಾಷೆ
- ಸುದ್ಧಿಯಲ್ಲಿ ಏಕಿದೆ? ರಾಜ್ಯಸಭೆ ಕಲಾಪದ ಅಧಿಕೃತ ಭಾಷಾ ಪಟ್ಟಿಗೆ ಕೊಂಕಣಿ, ಡೋಗ್ರಿ, ಕಾಶ್ಮೀರಿ, ಸಂತಾಲಿ, ಸಿಂಧಿ ಭಾಷೆಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಗುರುತಿಸಿರುವ ಎಲ್ಲ 22 ಭಾಷೆಗಳಲ್ಲೂ ಮೇಲ್ಮನೆ ಸದಸ್ಯರು ಅಧಿವೇಶನದಲ್ಲಿ ಮಾತನಾಡಲು ಅವಕಾಶ ನೀಡಲಾಗಿದೆ.
- ಜುಲೈ 18ರಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲೆ ಸದಸ್ಯರು ಈ ಭಾಷೆಗಳಲ್ಲಿ ಮಾತನಾಡಬಹುದು. ಇಂತಹ ಸದಸ್ಯರ ಭಾಷಣವನ್ನು ಭಾಷಾಂತರಿಸಲು ದುಭಾಷಿಗಳನ್ನು ನೇಮಿಸಲಾಗುತ್ತದೆ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.
- ಮೇಲ್ಮನೆ ಯಲ್ಲಿ ಈಗಾಗಲೇ ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ತರ್ಜುಮೆಗಾರರು ಇದ್ದಾರೆ.
- ಬೋಡೋ, ಮೈಥಲಿ, ಮರಾಠಿ, ಮಣಿಪುರಿ, ನೇಪಾಳಿ ಭಾಷೆಗಳ ಭಾಷಣವನ್ನು ತರ್ಜುಮೆ ಮಾಡಲು ಲೋಕಸಭೆಯಲ್ಲಿರುವ ದುಭಾಷಿಗಳನ್ನು ನಿಯೋಜಿಸಿಕೊಳ್ಳಲಾಗುವುದು ಎಂದು ಸಚಿವಾಲಯ ಹೇಳಿದೆ. ಪ್ರಾ
- ದೇಶಿಕ ಭಾಷೆಗಳಲ್ಲಿ ಮಾತನಾಡಲು ಬಯಸುವ ಸದಸ್ಯರು ಮುಂಚಿತವಾಗಿಯೇ ನೋಟಿಸ್ ನೀಡಿದರೆ ದುಭಾಷಿಗಳನ್ನು ಆ ಸಮಯಕ್ಕೆ ಹೊಂದಿಸಲು ಸಾಧ್ಯ ಎಂದು ಸಚಿವಾಲಯ ತಿಳಿಸಿದೆ.
ಆರ್ಥಿಕ ದೇಶಗಳ ಪಟ್ಟಿ
- ಸುದ್ಧಿಯಲ್ಲಿ ಏಕಿದೆ? ವಿಶ್ವದ ಸಶಕ್ತ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನಕ್ಕೆ ಜಿಗಿದಿದೆ.
- 2017ನೇ ಸಾಲಿನಲ್ಲಿ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಪಟ್ಟಿಯನ್ನು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದೆ.
- ಇದರಲ್ಲಿ ಫ್ರಾನ್ಸ್ ಹಿಂದಿಕ್ಕಿ ಆರನೇ ಸ್ಥಾನ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ.
- ಮೊದಲ ಐದು ಸ್ಥಾನಗಳಲ್ಲಿ ಅಮೆರಿಕ, ಚೀನಾ, ಜಪಾನ್, ಜರ್ಮನಿ ಮತ್ತು ಬ್ರಿಟನ್ಗಳಿವೆ.
- 2017ರ ಸಾಲಿನಲ್ಲಿ ಭಾರತದ ಒಟ್ಟಾರೆ ದೇಶಿಯ ಉತ್ಪನ್ನ (ಜಿಡಿಪಿ) ಅಂದಾಜು -ಠಿ; 178.66 ಲಕ್ಷ ಕೋಟಿ ರೂ.(597 ಟ್ರಿಲಿಯನ್ ಡಾಲರ್) ಇದ್ದರೆ, ಫ್ರಾನ್ಸ್ನ ಜಿಡಿಪಿ -ಠಿ; 177.62 ಲಕ್ಷ ಕೋಟಿ (2.582 ಟ್ರಿಲಿಯನ್ ಡಾಲರ್) ಇದೆ ಎಂದು ವಿಶ್ವಬ್ಯಾಂಕ್ ಅಂಕಿಅಂಶ ತಿಳಿಸಿದೆ.
- 2017ರಲ್ಲಿ ಭಾರತದ ಜಿಡಿಪಿ ಶೇ. 7 ಇದ್ದರೆ, ಚೀನಾದ್ದು ಶೇ. 6.8 ಇತ್ತು. ಆದರೆ, 2018ರ ಅಂತ್ಯಕ್ಕೆ ಭಾರತದ ಜಿಡಿಪಿ ಶೇ. 7.4 ಮತ್ತು 2019ಕ್ಕೆ ಶೇ. 7.9ಕ್ಕೆ ಏರಲಿದೆ. ಇದೇ ವೇಳೆಗೆ ಚೀನಾದ ಜಿಡಿಪಿ ಶೇ. 6.6 ಮತ್ತು 6.4ಕ್ಕೆ ಇಳಿದು ಭಾರತಕ್ಕಿಂತ ಹಿಂದೆ ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಳೆದ ಏಪ್ರಿಲ್ನಲ್ಲಿ ಅಂದಾಜು ಮಾಡಿತ್ತು.
ಪಾನ ನಿಷೇಧ ಕಾಯ್ದೆ
- ಸುದ್ಧಿಯಲ್ಲಿ ಏಕಿದೆ? ಸಂಪೂರ್ಣ ಪಾನ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಬಿಹಾರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾಗಿದ್ದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಈಗ ಕಾಯ್ದೆಗೆ ಸ್ವಲ್ಪ ತಿದ್ದುಪಡಿ ಮಾಡಿದ್ದು, ತಿದ್ದುಪಡಿ ಮಸೂದೆಯನ್ನು ರ ಸಚಿವ ಸಂಪುಟ ಅಂಗೀಕರಿಸಿದೆ.
- ತಿದ್ದುಪಡಿ ಕಾಯ್ದೆಯನ್ವಯ ಮೊದಲ ಬಾರಿಗೆ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ 50,000 ದಂಡ ಅಥವಾ 3 ತಿಂಗಳು ಶಿಕ್ಷೆ ವಿಧಿಸಬಹುದು. ಜತೆಗೆ ಈ ಪ್ರಕರಣದಲ್ಲಿ ಜಾಮೀನು ಪಡೆಯಲು ಅವಕಾಶವಿದೆ. ಪ್ರಸ್ತುತ ಪಾನ ನಿಷೇಧ ಕಾಯ್ದೆಯಲ್ಲಿ ಆರೋಪಿಗೆ ಜಾಮೀನು ನೀಡಲು ಅವಕಾಶವಿಲ್ಲ
- ಪಾನ ನಿಷೇಧ ಕಾಯ್ದೆಯನ್ವಯ ರಾಜ್ಯದಲ್ಲಿ ಮದ್ಯ ತಯಾರಿಕೆ, ಮಾರಾಟ ಮತ್ತು ಸೇವನೆ ಶಿಕ್ಷಾರ್ಹ ಅಪರಾಧವಾಗಿದೆ. ಜತೆಗೆ ಮೊದಲ ಬಾರಿಗೆ ಮದ್ಯ ಸೇವಿಸಿ ಸಿಕ್ಕಿಬಿದ್ದವರಿಗೂ ಶಿಕ್ಷೆ ವಿಧಿಸಲಾಗುತ್ತಿದೆ.
Related Posts

50 new taluks from Jan. 1
The proposed 50 new taluks in the State will come into existence from January 1, Revenue Minister Kagodu Thimmappa said on 4th Dec.
President Ram Nath ...
READ MORE
The Union Cabinet has approved the Real Estate (Regulation and Development) Bill, 2015, as reported by the Select Committee of Rajya Sabha. The Bill will now be taken up for ...
READ MORE
Kyasanur Forest Disease or KFD is also known as monkey fever
KFD is a tick-borne viral disease that was first reported in 1957 from Kyasanur, a village in Shivamogga district
It gets transmitted from ...
READ MORE
ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ತನ್ನ ‘ಆಹಾರ ಸುರಕ್ಷತಾ’ ಕಾರ್ಯಕ್ರಮದಡಿಯಲ್ಲಿ ನಕಲಿ ಕೀಟನಾಶಕಗಳ ವಿರುದ್ಧ ವಿತರಕರು ಹಾಗೂ ಮಾರಾಟಗಾರರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ.
ಭಾರತೀಯ ವಾಣಿಜ್ಯೋದ್ಯಮ ಸಂಘಟನೆಗಳ ಮಹಾ ಒಕ್ಕೂಟ (ಫಿಕ್ಕಿ) ನಡೆಸಿದ ಅಧ್ಯಯನದ ಪ್ರಕಾರ, ದೇಶಿ ಕೃಷಿ ರಂಗದಲ್ಲಿ ₹ 25 ಸಾವಿರ ...
READ MORE
ನೃಪತುಂಗ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ ?ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೀಡುವ 2018ನೇ ಸಾಲಿನ 'ನೃಪತುಂಗ ಸಾಹಿತ್ಯ ಪ್ರಶಸ್ತಿ'ಗೆ ಕವಿ ಡಾ. ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನುಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸಿದ್ದಲಿಂಗಯ್ಯ ಅವರನ್ನು ಸರ್ವಾನುಮತದಿಂದ ...
READ MORE
Vikas Engine
Why in news?
All three satellite launch vehicles of the Indian Space Research Organisation (ISRO) are set to add muscle to their spacecraft lifting power in upcoming missions this year. ...
READ MORE
The Karnataka government’s spending on infrastructure development, also called capital expenditure, has declined over the years, mainly on account of shrinking revenue surplus position and slackness in tax efforts.
The capital ...
READ MORE
What India, Cyprus vow to curb money laundering
Why in news?
India and Cyprus signed two agreements on combating money laundering and cooperation in the field of environment as President Ram Nath ...
READ MORE
Karnataka Chief Minister Siddaramaiah launched a comprehensive web-based platform showcasing the government's performance and achievements to the citizens.
Developed as the Chief Minister's dash board, 'Pratibimba,' which means reflection, will serve ...
READ MORE
A recent study by the WHO shows that a significant population of Indian subcontinent breathes air with much higher particulate matter that is lesser than 2.5 micrometre (PM2.5) in size ...
READ MOREKarnataka Current Affairs – KAS/KPSC Exams – 5th
Real Estate (Regulation and Development) Bill, 2015
Kyasanur Forest Disease
ಆಹಾರ ಸುರಕ್ಷತಾ’ ಕಾರ್ಯಕ್ರಮ
“30th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams – 17th
Karnataka Government’s spending on infrastructure comes down
National Current Affairs – UPSC/KAS Exams- 4th September
Karnataka: CM launches ‘Pratibimba’ website to project achievements
Particulate matter