18th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಎನ್​ಸಿಸಿ ರೀತಿ ಎನ್-ಯೆಸ್

 • ಸುದ್ಧಿಯಲ್ಲಿ ಏಕಿದೆ? ಯುವ ಸಮುದಾಯದಲ್ಲಿ ಶಿಸ್ತುಬದ್ಧ ಜೀವನಕ್ರಮ ಮತ್ತು ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 10 ಲಕ್ಷ ಯುವಕರು ಮತ್ತು ಯುವತಿಯರಿಗೆ ತರಬೇತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.
 • ರಾಷ್ಟ್ರೀಯ ಯುವ ಸಬಲೀಕರಣ ಯೋಜನೆ (ಎನ್-ವೈಇಎಸ್) ಎಂಬ ಈ ಯೋಜನೆ ಅನ್ವಯ ತರಬೇತಿಗೆ ದಾಖಲಾಗುವ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಒಂದು ವರ್ಷದವರೆಗೆ ಪ್ರತಿ ತಿಂಗಳು ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದೆ.
 • ಈ ಯೋಜನೆಯ ಫಲಾನುಭವಿಗಳು ರಕ್ಷಣಾ ಪಡೆ, ಅರೆಸೈನಿಕ ಪಡೆ ಮತ್ತು ಪೊಲೀಸ್ ಇಲಾಖೆ ಸೇರುವುದಕ್ಕೆ ಅಗತ್ಯ ಅರ್ಹತೆಯನ್ನು ಪಡೆಯಲಿದ್ದಾರೆ. ನೇಮಕಾತಿ ವೇಳೆ ಈ ತರಬೇತಿ ಪಡೆದವರಿಗೆ ಆದ್ಯತೆ ಕೂಡ ನೀಡಲಾಗುತ್ತದೆ.
 • ಉದ್ದೇಶಿತ ಎನ್-ವೈಇಎಸ್ ತರಬೇತಿ

# ಯುವ ಸಮುದಾಯದಲ್ಲಿ ದೇಶಪ್ರೇಮ, ಶಿಸ್ತು, ಆತ್ಮಾಭಿಮಾನ ಹೆಚ್ಚಿಸುವ ಯೋಜನೆ

# ಗ್ರಾಮೀಣ ಯುವಜನರಿಗೆ ಆದ್ಯತೆ, ವರ್ಷಪೂರ್ತಿ ತರಬೇತಿ

# 2022ರಲ್ಲಿ ನವಭಾರತ ನಿರ್ವಣದ ಪ್ರಧಾನಿ ಸಂಕಲ್ಪಕ್ಕೆ ಪೂರಕ ಯುವ ಪಡೆ ರಚನೆ

# ವಿಪತ್ತು ನಿರ್ವಹಣೆ, ಐಟಿ ಮತ್ತು ವೃತ್ತಿಪರ ಕೌಶಲಗಳ ತರಬೇತಿ, ಯೋಗ ಕಲಿಕೆ,

# ಸನಾತನ ಭಾರತದ ಸಿದ್ಧಾಂತಗಳ ಬಗ್ಗೆ ತಿಳಿವಳಿಕೆ

# ಯೋಜನೆ ಜಾರಿಗೆ ಎನ್​ಸಿಸಿ, ನ್ಯಾಷನಲ್ ಸರ್ವೀಸ್ ಸ್ಕೀಮ್ (ಎನ್​ಎಸ್​ಎಸ್), ಕೌಶಲ ಅಭಿವೃದ್ಧಿ ಸಚಿವಾಲಯ, ನರೇಗಾ ಅನುದಾನ ಬಳಕೆ.

ಬ್ರಿಗೇಡಿಯರ್ ಹುದ್ದೆ ರದ್ದು?

 • ಸೇನೆಯಲ್ಲಿ ಬಹುವರ್ಷಗಳಿಂದ ಇರುವ ಕೆಲ ಹುದ್ದೆಗಳನ್ನು ತೆಗದುಹಾಕಲು ತೀರ್ವನಿಸಲಾಗಿದೆ. ಉನ್ನತ ದರ್ಜೆಯ ಒಟ್ಟು ಒಂಭತ್ತು ಶ್ರೇಣಿಯ ಹುದ್ದೆಗಳನ್ನು ಆರು ಅಥವಾ ಏಳಕ್ಕೆ ಇಳಿಕೆ ಮಾಡುವ ಬಗ್ಗೆ ಕಳೆದ ತಿಂಗಳು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ನವೆಂಬರ್ ಅಂತ್ಯಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ವನಿಸಲಾಗಿದೆ.
 • ಬ್ರಿಗೇಡಿಯರ್ ಹುದ್ದೆ ರದ್ದುಗೊಳಿಸಿ, ಬಡ್ತಿ ಪಡೆದ ಕರ್ನಲ್​ಗಳಿಗೆ ಮೇಜರ್ ಜನರಲ್ ಹುದ್ದೆ ನೀಡಲಾಗುವುದು. ಭಾರತೀಯ ಮಿಲಿಟರಿ ಅಕಾಡೆಮಿಯಿಂದ ತರಬೇತಿ ಮುಗಿಸಿದ ಯೋಧರಿಗೆ ಲೆಫ್ಟಿನೆಂಟ್ ಹುದ್ದೆ ನೀಡುವುದು. ಜತೆಗೆ ಸೇನೆಗೆ ಅವರು ಭರ್ತಿಯಾದ ಕೂಡಲೇ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಕೊಡುವ ಬಗ್ಗೆಯೂ ಕರಡು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪುಣೆಯಲ್ಲಿ ಸೇನೆಯ ಕಾನೂನು ಕಾಲೇಜು

 • ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವರು ಮತ್ತು ನಿವೃತ್ತ ಯೋಧರ ಮಕ್ಕಳಿಗಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ಕಾನೂನು ಕಾಲೇಜು ಆರಂಭವಾಗಿದೆ. ಸಾವಿತ್ರಿಬಾಯಿ ಫುಲೆ ಪುಣೆ ವಿವಿಯಿಂದ ಮಾನ್ಯತೆ ನೀಡಲಾಗಿದೆ. ವಸತಿ ಸಹಿತ ಐದು ವರ್ಷಗಳ ಬಿಬಿಎ-ಎಲ್​ಎಲ್​ಬಿ ಪದವಿ ಶಿಕ್ಷಣ ನೀಡುವ ಕಾಲೇಜು ಇದಾಗಿದೆ.
 • ಪ್ರಸ್ತುತ ಶೈಕ್ಷಣಿಕ ಸಾಲಿಗೆ ಕೇವಲ ಯೋಧರು ಮತ್ತು ನಿವೃತ್ತ ಸೇನಾಧಿಕಾರಿಗಳ ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಮುಂದಿನ ವರ್ಷದಿಂದ ಸಾಮಾನ್ಯ ಜನರಿಗೂ ಪ್ರವೇಶಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ತಿಳಿಸಿದ್ದಾರೆ.

ಸುಪ್ರೀಂ ಮಾರ್ಗಸೂಚಿ

 • ಸುದ್ಧಿಯಲ್ಲಿ ಏಕಿದೆ? ಸಾಮೂಹಿಕ ಹಲ್ಲೆ ಹಾಗೂ ಹತ್ಯೆಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಇದನ್ನು ಅಪರಾಧ ಎಂದು ಪರಿಗಣಿಸಿ ಕಾನೂನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
 • ಹಾಗೆಯೇ ಇಂಥ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ 23 ಮಾರ್ಗಸೂಚಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೊರಡಿಸಿ, 4 ವಾರಗಳೊಳಗೆ ಅನುಷ್ಠಾನ ವರದಿ ನೀಡುವಂತೆ ಕಟ್ಟಪ್ಪಣೆ ಹೊರಡಿಸಿದೆ.
 • ಸಾಮಾಜಿಕ ಹೋರಾಟಗಾರ ತೆಹಸೀನ್ ಪೂನಾವಾಲಾ ಅವರ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಸಾಮೂಹಿಕ ಹಲ್ಲೆ ಹಾಗೂ ಹತ್ಯೆ ವಿರುದ್ಧ ಕಿಡಿಕಾರಿದೆ.
 • ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ದೇಶದಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ತನ್ನದೇ ಆದ ಗೌರವ ಹಾಗೂ ಹಕ್ಕುಗಳಿವೆ. ಇದನ್ನು ಕಸಿದುಕೊಳ್ಳಲು ಅವಕಾಶ ನೀಡಬಾರದು. ಪ್ರಜಾಪ್ರಭುತ್ವದಲ್ಲಿ ದೊಂಬಿ ಪ್ರಭುತ್ವಕ್ಕೆ ಅವಕಾಶವಿಲ್ಲ. ನೈತಿಕ ಪೊಲೀಸ್​ಗಿರಿ ಹೆಸರಲ್ಲಿ ಇಂಥ ವಿಚಾರಗಳು ಸಾಮಾನ್ಯ ಪ್ರಕ್ರಿಯೆಯಾಗುವುದನ್ನು ಸಹಿಸಲು ಅಸಾಧ್ಯ.

ಪ್ರಕರಣದ ಹಿನ್ನೆಲೆ

 • ದೇಶಾದ್ಯಂತ ಗೋ ರಕ್ಷಣೆ ಹೆಸರಲ್ಲಿ ನೈತಿಕ ಪೊಲೀಸ್​ಗಿರಿ ನಡೆಯುತ್ತಿದ್ದು, ಮುಸ್ಲಿಂ ಹಾಗೂ ದಲಿತ ಸಮುದಾಯವನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ತೆಹಸೀನ್ ಪೂನಾವಾಲಾ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಕ್ರಮಕ್ಕೆ ಕೋರ್ಟ್ ಆದೇಶಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಯಾವುದೇ ಜಾತಿ ಹಾಗೂ ಧರ್ಮಕ್ಕೆ ಸೀಮಿತಗೊಳಿಸದೇ ಈಗ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಸೂಚನೆಯೇನು?

# ಸಾಮೂಹಿಕವಾಗಿ ನಡೆಸುವ ಹಲ್ಲೆ ಹಾಗೂ ಹತ್ಯೆಯನ್ನು ಅಪರಾಧ ಎಂದು ಪರಿಗಣಿಸಿ ವಿಶೇಷ ಕಾನೂನು ರಚನೆಗೆ ಸೂಚನೆ

# ಸುಪ್ರೀಂ ಕೋರ್ಟ್​ನ 23 ಮಾರ್ಗಸೂಚಿ ಸೂತ್ರ ಅನುಷ್ಠಾನ ಕುರಿತು ಎಲ್ಲ ರಾಜ್ಯ, ಕೇಂದ್ರ ಸರ್ಕಾರಗಳು 4 ವಾರಗಳಲ್ಲಿ ವರದಿ ಸಲ್ಲಿಸಬೇಕು. ಆ.20ಕ್ಕೆ ಅರ್ಜಿಯ ಮರು ವಿಚಾರಣೆ

ಮಾರ್ಗಸೂಚಿ ಏನು?

ಮುಂಜಾಗ್ರತಾ ಕ್ರಮ

# ಪ್ರತಿ ಜಿಲ್ಲೆಯಲ್ಲೂ ಎಸ್​ಪಿ ರ್ಯಾಂಕ್​ಗೂ ಕಡಿಮೆಯಲ್ಲದ ನೋಡಲ್ ಅಧಿಕಾರಿ ನೇಮಕ.

# ಈ ಅಧಿಕಾರಿಗೆ ಸಹಕರಿಸಲು ಕನಿಷ್ಠ ಒಬ್ಬ ಡಿಎಸ್​ಪಿ ರ್ಯಾಂಕ್ ಅಧಿಕಾರಿ

# ಪ್ರತಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಿ ಸಾಮೂಹಿಕ ಹಲ್ಲೆ, ಹತ್ಯೆಗೆ ಪ್ರಚೋದಿಸುವ ಭಾಷಣ, ಹೇಳಿಕೆ, ಸುಳ್ಳು ಸುದ್ದಿ, ವಿಡಿಯೋಗಳ ಬಗ್ಗೆ ಗುಪ್ತಚರ ಮಾಹಿತಿ ಪಡೆದು ಕಾರ್ಯನಿರ್ವಹಣೆಯ ಹೊಣೆ.

# ಕಳೆದ 5 ವರ್ಷಗಳ ಅಂಕಿಸಂಖ್ಯೆ ಗಮನಿಸಿ ಪ್ರತಿ ರಾಜ್ಯ ಸರ್ಕಾರವು ಇಂತಹ ಘಟನೆ ನಡೆಯುವ ಜಿಲ್ಲೆ, ಉಪ ವಿಭಾಗ, ಗ್ರಾಮಗಳನ್ನು ಗುರುತಿಸಿ ಪಟ್ಟಿ ಮಾಡಬೇಕು. ಆದೇಶ ಪ್ರತಿ ದೊರೆತ 3 ವಾರದೊಳಗೆ ಈ ಕೆಲಸವಾಗಬೇಕು.

# ಎಲ್ಲ ನೋಡಲ್ ಅಧಿಕಾರಿಗಳ ಜತೆ ಪೊಲೀಸ್ ಮಹಾನಿರ್ದೇಶಕರು, ಗೃಹ ಇಲಾಖೆ ಕಾರ್ಯದರ್ಶಿ ನಿರಂತರ ಸಭೆ ನಡೆಸಿ ಜಿಲ್ಲೆಗಳ ಬೆಳವಣಿಗೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.

# ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಇನ್ನಷ್ಟು ಪರಿಣಾಮಕಾರಿಗೊಳಿಸಲು ಡಿಜಿಪಿ ಸುತ್ತೋಲೆ ಹೊರಡಿಸಬೇಕು.

# ಸಾಮೂಹಿಕ ಹಲ್ಲೆ ಹಾಗೂ ಹತ್ಯೆ ಕುರಿತು ರೇಡಿಯೋ, ಟಿವಿ, ಮುದ್ರಣ ಮಾಧ್ಯಮ ಹಾಗೂ ಸರ್ಕಾರಿ ವೆಬ್​ಸೈಟ್​ಗಳಲ್ಲಿ ಮುನ್ನೆಚ್ಚರಿಕೆ ಜಾಹೀರಾತು ಪ್ರಕಟಿಸಬೇಕು.

# ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಇನ್ಯಾವುದೇ ರೀತಿಯ ಸಲಹೆ, ಸೂಚನೆ ನೀಡಬಹುದು.

ಪರಿಹಾರ ಕ್ರಮ

# ಎಲ್ಲ ಮುಂಜಾಗ್ರತಾ ಕ್ರಮದ ಹೊರತಾಗಿಯೂ ಸಾಮೂಹಿಕ ಹಲ್ಲೆ ಹಾಗೂ ಹತ್ಯೆಯಾಗಿದ್ದರೆ ತಕ್ಷಣ ಎಫ್​ಐಆರ್ ದಾಖಲು.

# ಕೂಡಲೇ ನೋಡಲ್ ಅಧಿಕಾರಿಗೆ ಮಾಹಿತಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು.

# ಈ ಪ್ರಕರಣಗಳ ವಿಚಾರಣೆಯ ಮೇಲುಸ್ತುವಾರಿಯನ್ನು ನೋಡಲ್ ಅಧಿಕಾರಿಯೇ ವಹಿಸಿಕೊಳ್ಳಬೇಕು.

# ಪ್ರಕರಣದಲ್ಲಿ ಕೋರ್ಟ್ ಆದೇಶ ಬಂದ 1 ತಿಂಗಳೊಳಗೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕ ನೀತಿ ರೂಪಿಸಬೇಕು. ಈ ಪರಿಹಾರವು ಕಾನೂನು ಹೋರಾಟ ಹಾಗೂ ವೈದ್ಯಕೀಯ ವೆಚ್ಚವನ್ನು ಕೂಡ ಒಳಗೊಂಡಿರಬೇಕು.

# ಮಧ್ಯಂತರ ಪರಿಹಾರದ ಭಾಗವಾಗಿ ಘಟನೆ ನಡೆದ 30 ದಿನದೊಳಗೆ ಅಲ್ಪ ಪ್ರಮಾಣದ ಪರಿಹಾರ ಮೊತ್ತ ಒದಗಿಸಬೇಕು.

# ಹಾಲಿ ಪ್ರಕರಣ ಸೇರಿದಂತೆ ಇಂತಹ ಅಪರಾಧಗಳ ವಿಚಾರಣೆಗೆ ವಿಶೇಷ ಫಾಸ್ಟ್​ಟ್ರಾ್ಯಕ್ ಕೋರ್ಟ್ ಸ್ಥಾಪಿಸಬೇಕು. ವಿಚಾರಣೆಯನ್ನು 6 ತಿಂಗಳೊಳಗೆ ಮುಗಿಸಲೇಬೇಕು.

# ಐಪಿಸಿ ಸೆಕ್ಷನ್​ನಲ್ಲಿ ಲಭ್ಯವಿರುವ ಗರಿಷ್ಠ ಶಿಕ್ಷೆಯನ್ನು ಅಪರಾಧಿಗೆ ವಿಧಿಸಬೇಕು.

# ಆರೋಪಿ ಜಾಮೀನು, ದೋಷಮುಕ್ತ, ಬಿಡುಗಡೆ, ಪೆರೋಲ್ ಸೇರಿ ಇನ್ನಿತರ ಕಾನೂನು ಪ್ರಕ್ರಿಯೆ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬ ಸದಸ್ಯರಿಗೆ ಮೊದಲೇ ಮಾಹಿತಿ ನೀಡಬೇಕು.

# ಸಂತ್ರಸ್ತ ಕುಟುಂಬವು ಯಾವುದೇ ವಕೀಲರನ್ನು ನಿಯೋಜಿಸಲು ಬಯಸಿದರೆ ಸರ್ಕಾರವೇ ಇದಕ್ಕೆ ಹಣ ಭರಿಸಿ ವ್ಯವಸ್ಥೆ ಮಾಡಬೇಕು.

ದಂಡನಾ ಕ್ರಮ

# ಯಾವುದೇ ಅಧಿಕಾರಿ ಈ ಅಪರಾಧ ನಿಯಂತ್ರಣಕ್ಕೆ ವಿಫಲವಾದರೆ ಶಿಸ್ತು ಕ್ರಮ ಜರುಗಿಸಬೇಕು.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) 

 • ಸುದ್ಧಿಯಲ್ಲಿ ಏಕಿದೆ? ಅಂತರ್ಜಾಲ, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್​ಗಳಿಂದ ಮಾಹಿತಿ (ಡೇಟಾ) ಕಳವು ಪ್ರಕರಣ ಹೆಚ್ಚಿರುವ ಬೆನ್ನಿಗೆ ಬಳಕೆದಾರರ ಖಾಸಗಿತನ, ಡೇಟಾ ಒಡೆತನ ಮತ್ತು ಸುರಕ್ಷತೆ ವಿಷಯದಲ್ಲಿ ಸರ್ಕಾರ ಸಮರ್ಪಕವಾದ ನಿಯಂತ್ರಣ ನೀತಿ ರೂಪಿಸಬೇಕು. ಏಕೆಂದರೆ ಮಾಹಿತಿಯ ನೈಜ ಮಾಲೀಕರು ಮತ್ತು ಮೂಲಹಕ್ಕನ್ನು ಹೊಂದಿರುವವರು ಈ ಸೇವೆಗಳನ್ನು ಬಳಸುವಂತಹ ಗ್ರಾಹಕರು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸರ್ಕಾರಕ್ಕೆ ಸಲಹೆ ನೀಡಿದೆ.

ಟ್ರಾಯ್ ಹೇಳಿದ್ದೇನು?

 • ಡೇಟಾ ಒಡೆತನ ಗ್ರಾಹಕರಿಗೆ ಸೇರಿದ್ದು. ಸೇವಾದಾತ ಟೆಲಿಕಾಂ ಕಂಪನಿ, ಇಂಟರ್​ನೆಟ್ ಆಧಾರಿತ ಸೇವಾ ಸಂಸ್ಥೆಗಳು ಅಥವಾ ಸ್ಮಾರ್ಟ್ ಫೋನ್ ತಯಾರಕರಿಗೆ ಸೇರಿದ್ದಲ್ಲ ಎಂದು ಟ್ರಾಯ್ ಹೇಳಿದೆ. ಮಾಹಿತಿ ಸುರಕ್ಷತೆಗೆ ಪ್ರಸ್ತುತ ಅನುಸರಿಸುತ್ತಿರುವ ಕ್ರಮ ಗ್ರಾಹಕರಿಗೆ ಪರಿಪೂರ್ಣ ಸುರಕ್ಷತೆಯನ್ನು ಒದಗಿಸುತ್ತಿಲ್ಲ ಎಂದಿದೆ. ಯಾವುದೇ ಸೇವೆಯಲ್ಲಿ ಏಕಪಕ್ಷೀಯ ಒಪ್ಪಂದವು ಸಂಕೀರ್ಣವಾಗಿರುತ್ತದೆ ಮತ್ತು ಅರ್ಥ ಮಾಡಿಕೊಳ್ಳುವುದೂ ಕಷ್ಟಕರ. ಆದರೂ ಅನೇಕ ಆಪ್​ಗಳು ಮತ್ತು ಮೊಬೈಲ್ ತಯಾರಕರು ಇದನ್ನೇ ಅನುಸರಿಸುತ್ತಿದ್ದಾರೆ. ಇದನ್ನು ಕೊನೆಗಾಣಿಸಲು ಮೊಬೈಲ್ ಸೆಟ್ ಮತ್ತು ಆಪ್​ಗಳನ್ನು ಡೇಟಾ ಖಾಸಗಿತನ ಕಾಯ್ದೆ ವ್ಯಾಪ್ತಿಗೆ ತರಬೇಕು. ಗ್ರಾಹಕರಿಂದ ಅನಗತ್ಯವಾಗಿ ಮತ್ತು ಸಂಬಂಧಿಸದ ಡೇಟಾ ಸಂಗ್ರಹಿಸುವುದನ್ನು ನಿರ್ಬಂಧಿಸಬೇಕು ಎಂದು ಟ್ರಾಯ್ ಶಿಫಾರಸು ಮಾಡಿದೆ.

ಮಾಹಿತಿ ಕನ್ನ ತಡೆಯಿರಿ

 • ಪ್ರತಿಯೊಬ್ಬ ಬಳಕೆದಾರರಿಗೂ ವೈಯಕ್ತಿಕ ಮಾಹಿತಿ ಸಂಗ್ರಹ ಇರುತ್ತದೆ. ಅದರ ಮೇಲೆ ಅವರಿಗೆ ಪರಿಪೂರ್ಣ ಹಕ್ಕು ಇರುತ್ತದೆ. ಅವರ ಅನುಮತಿ ಇಲ್ಲದೆ ಬೇರೆಯವರು ಈ ಮಾಹಿತಿಯನ್ನು ಪಡೆಯಲಾಗದು. ಆದರೆ, ಈಗ ಈ ಮಾಹಿತಿಗೆ ನಾಜೂಕಿನಿಂದ ಕನ್ನ ಹಾಕಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮೊಬೈಲ್ ಸೆಟ್, ನಿರ್ವಹಣಾ ವ್ಯವಸ್ಥೆ, ಅಂತರ್ಜಾಲ ಹುಡುಕಾಟ (ಬ್ರೌಸರ್ಸ್) ಮತ್ತು ಆಪ್​ಗಳನ್ನು ನಿಯಂತ್ರಿಸುವ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಟ್ರಾಯ್ ಸಲಹೆ ನೀಡಿದೆ. ಡೇಟಾದ ಖಾಸಗಿತನ ಕುರಿತಂತೆ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಸಮಿತಿ ವರದಿ ಬೆನ್ನಿಗೆ ಟ್ರಾಯ್ ಈ ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ.

ಯಾವುದರ ಮೇಲೆ ಪರಿಣಾಮ?

 • ಟ್ರಾಯ್ ನೀಡಿರುವ ಸಲಹೆಯಿಂದ ಸಾಮಾಜಿಕ ಜಾಲತಾಣ ಫೇಸ್​ಬುಕ್, ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ದಿಗ್ಗಜಗಳಾದ ಆಪಲ್, ಸ್ಯಾಮ್ಂಗ್, ಗೂಗಲ್​ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಮುಖ ಶಿಫಾರಸು

# ವೈಯಕ್ತಿಕ ಡೇಟಾ ಸಂಗ್ರಹ ಮತ್ತು ಪರಿಶೀಲನೆಗೂ ಮೊದಲು ಗ್ರಾಹಕರಿಂದ ಅನುಮತಿ ಪಡೆದುಕೊಳ್ಳಬೇಕು

# ಅನಗತ್ಯ ಮತ್ತು ಸಂಬಂಧಿಸದ ಡೇಟಾ ಸಂಗ್ರಹಕ್ಕೆ ನಿರ್ಬಂಧ

# ಮೊಬೈಲ್ ತಯಾರಕರು ಮತ್ತು ಆಪ್​ಗಳ ಏಕಪಕ್ಷೀಯ ಒಪ್ಪಂದ ಕೊನೆಯಾಗಬೇಕು

# ಆಪ್ ಮತ್ತು ಮೊಬೈಲ್ ತಯಾರಕರನ್ನೂ ಡೇಟಾ ಖಾಸಗಿತನ ಕಾಯ್ದೆ ವ್ಯಾಪ್ತಿಗೆ ತರಬೇಕು

ನಿರ್ಭಯಾ ಸ್ಕ್ವಾಡ್‌ 

 • ಸುದ್ಧಿಯಲ್ಲಿ ಏಕಿದೆ? ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ಮೊದಲ ನಿರ್ಭಯಾ ಸ್ಕ್ವಾಡ್‌ ಅನ್ನು ಏಪ್ರಿಲ್‌ನಲ್ಲಿ ರಚಿಸಲಾಗಿದೆ. ಸ್ಕ್ವಾಡ್‌ನಲ್ಲಿರುವ ಮಹಿಳಾ ಪೊಲೀಸರು ಕಳೆದ 3 ತಿಂಗಳಿನಿಂದ ನರ್ಮದಾ ಜಿಲ್ಲೆಯ ಶಾಲೆ ಹಾಗೂ ಕಾಲೇಜುಗಳಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ಪುಂಡರ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ರೋಮಿಯೋಗಳು ಬಂಧನದ ಭೀತಿಯಿಂದ ಕಾಲೇಜುಗಳ ಬಳಿ ಸುಳಿಯುತ್ತಿಲ್ಲ. ಇದರಿಂದ ನರ್ಮದಾ ಜಿಲ್ಲೆಯ ಯುವತಿಯರು ಹಾಗೂ ಮಹಿಳೆಯರು ಸುರಕ್ಷತೆಯಿಂದ ಇದ್ದಾರೆ.
 • ನಿರ್ಭಯಾ ಸ್ಕ್ವಾಡ್‌ನಿಂದಾಗಿ ಏಪ್ರಿಲ್‌ನಿಂದ ನರ್ಮದಾ ಜಿಲ್ಲೆಯ ಹಲವು ಗ್ರಾಮಗಳ ಹುಡುಗಿಯರನ್ನು ಚುಡಾಯಿಸಿದ ಬಗ್ಗೆ ಒಂದು ದೂರು ಸಹ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ನಿರ್ಭಯಾ ಸ್ಕ್ವಾಡ್ ರಚನೆಯಾದ ಬಳಿಕ ಲೈಂಗಿಕ ಕಿರುಕುಳ ಪ್ರಕರಣಗಳು ಕಡಿಮೆಯಾಗಿದೆ.
 • ಸರ್ದಾರ್ ಪಟೇಲರ ಏಕತಾ ಪ್ರತಿಮೆ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಲಿದ್ದು, ಇದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಲಿದೆ. ಈ ವೇಳೆ, ಮಹಿಳೆಯರಿಗೆ ಹಾಗೂ ವಿದೇಶಿ ಪ್ರವಾಸಿಗರಿಗೆ ಭದ್ರತೆ ನೀಡುವುದು ಮುಖ್ಯವಾಗಿದ್ದು, ನಿರ್ಭಯಾ ಸ್ಕ್ವಾಡ್ ಈ ಕೆಲಸವನ್ನು ಮಾಡಲಿರುವುದರಿಂದ ತುಂಬ ಸಹಾಯವಾಗಲಿದೆ ಜತೆಗೆ, ಅವರು ಬಟನ್ ಕ್ಯಾಮೆರಾವನ್ನು ಹೊಂದಿದ್ದು, ಪೊಲೀಸರ ಮೇಲೆ ಆರೋಪ ಮಾಡುವವರ ವಿರುದ್ಧ ಸಾಕ್ಷ್ಯ ಒದಗಿಸಲು ದಾಖಲೆ ನೀಡಲು ಸಹಾಯವಾಗುತ್ತದೆ
 • ನಿರ್ಭಯಾ ಸ್ಕ್ವಾಡ್‌ಗೆ ಎಫ್‌ಐಆರ್‌ ದಾಖಲಿಸಲು ಸೇರಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವಿರುವುದಿಲ್ಲ. ಆದರೆ, ತಂಟೆಕೋರ ಹುಡುಗರ ಪೋಷಕರು ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ.
 • ಇದರಿಂದ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ ಹಾಗೂ ಪೊಲೀಸ್ ಇಲಾಖೆಯಿಂದ ಇತರೆ ಸರ್ಟಿಫಿಕೇಟ್‌ಗಳನ್ನು ಪಡೆಯಲು ತೀವ್ರ ಕಷ್ಟವಾಗುತ್ತದೆ ಎಂದು ಕುಟುಂಬದವರಿಗೆ ಮಹಿಳಾ ಪೊಲೀಸರು ಎಚ್ಚರಿಕೆ ನೀಡುತ್ತಾರೆ. ಮತ್ತೊಂದೆಡೆ, ಶಾಲೆ ಹಾಗೂ ಕಾಲೇಜುಗಳ ಹುಡುಗಿಯರು ಸ್ವತ: ನಿರ್ಭಯಾ ಸ್ಕ್ವಾಡ್‌ನ ಪೊಲೀಸರಿಗೆ ಕರೆ ಮಾಡಿ ಪುಂಡರ ಬಗ್ಗೆ ಮಾಹಿತಿ ನೀಡುತ್ತಿರುವುದರ ಜತೆಗೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ದೂರಿನ ಪೆಟ್ಟಿಗೆಯನ್ನು ಸಹ ಇಡಲಾಗಿದೆ.

ಜಿಪಿಎಸ್‌, ಫಾಸ್ಟ್‌ ಟ್ಯಾಗ್‌ 

 • ಸುದ್ಧಿಯಲ್ಲಿ ಏಕಿದೆ? ರಾಷ್ಟ್ರೀಯ ಪರವಾನಗಿ (ನ್ಯಾಷನಲ್‌ ಪರ್ಮಿಟ್‌) ಪಡೆಯುವ ಎಲ್ಲಾ ವಾಣಿಜ್ಯ ವಾಹನಗಳಿಗೆ ಜಿಪಿಎಸ್‌ ಮತ್ತು ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹಕ್ಕಾಗಿ ಫಾಸ್‌ಟ್ಯಾಗ್‌ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.

ಉಪಯೋಗ

 • ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಇದನ್ನು ಜಾರಿಗೊಳಿಸಲಾಗುವುದು. ಫಾಸ್‌ಟ್ಯಾಗ್‌ನಿಂದ ಟೋಲ್‌ಗಳಲ್ಲಿ ತ್ವರಿತವಾಗಿ ಶುಲ್ಕ ಪಾವತಿಸಲು ಸಾಧ್ಯವಾಗಲಿದೆ. ಜಿಪಿಎಸ್‌ನಿಂದ ವಾಹನಗಳ ಸಂಚಾರದ ಮೇಲೆ ನಿಗಾ ಇಡಲು ನೆರವಾಗಲಿದೆ.
 • ಎನ್‌/ಪಿ ಕಡ್ಡಾಯ:ಪ್ರಸ್ತುತ ಕರಡು ರೂಪದಲ್ಲಿರುವ ಹೊಸ ನಿಯಮದ ಜಾರಿ ಬಳಿಕ, ರಾಷ್ಟ್ರೀಯ ಪರಿಮಿತಿ ಪಡೆಯುವ ಎಲ್ಲಾ ವಾಹನಗಳೂ ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿ ‘ಎನ್‌/ಪಿ’ (ನ್ಯಾಷನಲ್‌ ಪರ್ಮಿಟ್‌) ಎಂದು ದಪ್ಪ ಅಕ್ಷರಗಳಲ್ಲಿ ನಮೂದಿಸುವುದು ಕಡ್ಡಾಯವಾಗಲಿದೆ.
 • ಎಫ್‌.ಸಿ ನಿಯಮ ಬದಲು:ಶೀಘ್ರದಲ್ಲೇ ಹೊಸ ವಾಹನದ ನೋಂದಣಿ ವೇಳೆ ಫಿಟ್‌ನೆಸ್‌ ಪ್ರಮಾಣ ಪತ್ರ‘ (ಎಫ್‌.ಸಿ) ಸಲ್ಲಿಕೆ ಅಗತ್ಯವೂ ತಪ್ಪಲಿದೆ. ಮೊದಲ ಎರಡು ವರ್ಷಗಳ ಅವಧಿಗೆ ವಾಹನಗಳು ‘ಫಿಟ್‌’ ಎಂದು ಪರಿಗಣಿಸಲಾಗುವುದು. ನೋಂದಣಿಯಾಗಿ ಎಂಟು ವರ್ಷದವರೆಗೂ ವಾಹನದ ‘ಎಫ್‌.ಸಿ’ ಅನ್ನು 2 ವರ್ಷಕ್ಕೊಮ್ಮೆ ನವೀಕರಿಸಿದರೆ ಸಾಕು. 8 ವರ್ಷಕ್ಕಿಂತ ಹಳೆಯ ವಾಹನಗಳನ್ನು ಪ್ರತಿ ವರ್ಷವೂ ನವೀಕರಿಸಬೇಕು. ಅಲ್ಲದೆ, ಡಿಜಿಟಲ್‌ ರೂಪದ ಡಿ.ಎಲ್‌ ಮತ್ತು ಮಾಲಿನ್ಯ ತಪಾಸಣೆ ಪತ್ರಗಳನ್ನು ಡಿಜಿಟಲ್‌ ರೂಪದಲ್ಲಿ ಸಲ್ಲಿಸಬೇಕು.

ಹೊಸತೇನು 

 • ವಾಹನ ಟ್ರ್ಯಾಕಿಂಗ್‌, ಫಾಸ್ಟ್‌ ಟ್ಯಾಗ್‌ ಅಳವಡಿಕೆ ಕಡ್ಡಾಯ
 • ವಾಹನದ ಮೇಲೆ ‘ಎನ್‌/ಪಿ’ ಎಂದು ನಮೂದಿಸಬೇಕು
 • ಡಿಜಿಟಲ್‌ ರೂಪದ ಡಿ.ಎಲ್‌./ಎಮಿಷನ್‌ ಟೆಸ್ಟ್‌ ಪತ್ರಕ್ಕೆ ಮಾನ್ಯತೆ
 • ನೋಂದಣಿ ವೇಳೆ ಎಫ್‌.ಸಿ. ಸಲ್ಲಿಕೆಗೆ ವಿನಾಯಿತಿ.

ಫಾಸ್ಟಾಗ್

 • FASTAG ಎನ್ನುವುದು ನೇರವಾಗಿ ಪಾವತಿಸುವ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಟೋಲ್ ಪಾವತಿಗಳನ್ನು ಮಾಡಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (RFID) ತಂತ್ರಜ್ಞಾನವನ್ನು ಬಳಸುವ ಸಾಧನವಾಗಿದೆ.
 • ಇದು ವಾಹನದ ವಿಂಡ್ಸ್ಕ್ರೀನ್ನಲ್ಲಿ ಅಂಟಿಕೊಂಡಿರುತ್ತದೆ ಮತ್ತು ನಗದು ವಹಿವಾಟುಗಳನ್ನು ನಿಲ್ಲಿಸದೆ ಟೋಲ್ ಪ್ಲಾಜಾಗಳ ಮೂಲಕ ಓಡಿಸಲು ಪ್ರಯಾಣಿಕರನ್ನು ಶಕ್ತಗೊಳಿಸುತ್ತದೆ.
 • ಟೋಲ್ ಪ್ಲಾಜಾಗಳ ಮೂಲಕ ವಾಹನಗಳು ಹಾದುಹೋಗುವ ನಂತರ ಟೋಲ್ ಪ್ಲಾಜಾಗಳ ಮೀಸಲಾದ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ಲೇನ್ಗಳಲ್ಲಿ ಅಳವಡಿಸಲಾಗಿರುವ ಓದುಗರಿಂದ ವಿಂಡ್ ಷೀಲ್ಡ್ನ ಟ್ಯಾಗ್ ಅನ್ನು ಓದುವುದು.
 • ಟೋಲ್ ಟ್ರಾನ್ಸಾಕ್ಷನ್ಸ್, ಕಡಿಮೆ ಸಮತೋಲನ ಮತ್ತು ಎಲ್ಲಾ ಇತರ ಬೆಳವಣಿಗೆಗಳಿಗಾಗಿ ಬಳಕೆದಾರರಿಗೆ SMS ಎಚ್ಚರಿಕೆಗಳನ್ನು ಸ್ವೀಕರಿಸಲಾಗುತ್ತದೆ. FASTAGG ಯು ಐದು ವರ್ಷಗಳ ಅವಧಿಯನ್ನು ಹೊಂದಿದೆ ಮತ್ತು ಅದನ್ನು ಖರೀದಿಸಿದ ನಂತರ ಅವಶ್ಯಕತೆಯಂತೆ ಪುನರ್ಭರ್ತಿ ಅಥವಾ ಮೇಲಕ್ಕೆ ಹಿಂತಿರುಗಬೇಕಾಗಿರುತ್ತದೆ.
 • ಅದರ ಪ್ರಮುಖ ಪ್ರಯೋಜನಗಳೆಂದರೆ ಟೋಲ್ ವಹಿವಾಟುಗಳಿಗೆ, ಸಮಯ ಉಳಿತಾಯಕ್ಕೆ, ನಗದು ಸಾಗಿಸುವ ವಾಹನಗಳ ಬಳಿ ಇತರ ಇಂಧನ ವೆಚ್ಚಗಳಿಗೆ ಕಾರಣವಾಗುವ ಹಣವನ್ನು ಸಾಗಿಸುವ ಅಗತ್ಯವಿಲ್ಲ.
 • ಪ್ರಸ್ತುತ, ರಾಷ್ಟ್ರೀಯ ಹೆದ್ದಾರಿಗಳಾದ್ಯಂತ ಸುಮಾರು 370 ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯು ಇಂಟರ್-ಆಪರೇಬಲ್ ಆಗಿರುತ್ತದೆ ಮತ್ತು ನ್ಯಾಷನಲ್ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್ಇಟಿಸಿ) ಪ್ರೋಗ್ರಾಂನ ಅಡಿಯಲ್ಲಿ ಟೋಲ್ ಪ್ಲ್ಯಾಜಸ್ಗಳಲ್ಲಿ ಅದೇ FASTAG ಅನ್ನು ಬಳಸಬಹುದು

ಮುಕ್ತ ವ್ಯಾಪಾರ ಒಪ್ಪಂದ

 • ಸುದ್ಧಿಯಲ್ಲಿ ಏಕಿದೆ? ಅಮೆರಿಕ ಭಾರಿ ಸುಂಕ ವಿಧಿಸಿ ವ್ಯಾಪಾರ ಸಮರದ ಬೆದರಿಕೆ ಹಾಕುತ್ತಿರುವ ನಡುವೆಯೇ ಯುರೋಪ್‌ ಹಾಗೂ ಜಪಾನ್‌ ಬೃಹತ್‌ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ ಸಹಿ ಹಾಕಿದವು.
 • ಯುರೋಪ್‌ ಇತಿಹಾಸದಲ್ಲೇ ಅಭೂತಪೂರ್ವ ಒಪ್ಪಂದ ಸರಣಿ ಎಂದು ಬಣ್ಣಿಸಲಾಗಿರುವ ಈ ಒಡಂಬಡಿಕೆಗಳಿಗೆ ಯೂರೋಪ್‌ನ ಉನ್ನತ ಅಧಿಕಾರಿಗಳು ಹಾಗೂ ಜಪಾನ್‌ ಪ್ರಧಾನಿ ಶಿಂಜೊ ಅಬೆ ಟೋಕಿಯೊದಲ್ಲಿ ಅಂಕಿತ ಹಾಕಿದರು.
 • ಈ ಒಪ್ಪಂದ ಸರಣಿ ಜಗತ್ತಿನ ಜಿಡಿಪಿಯ ಮೂರನೇ ಒಂದು ಭಾಗವನ್ನೊಳಗೊಂಡಮುಕ್ತ ವ್ಯಾಪಾರವಲಯವನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ. ‘‘ಸ್ವದೇಶಿ ಕೈಗಾರಿಕೆಗಳನ್ನು ವಿದೇಶೀಯ ಪೈಪೋಟಿಯಿಂದ ರಕ್ಷಿಸಲು ವಿದೇಶೀ ಉತ್ಪನ್ನಗಳ ಮೇಲೆ ಭಾರಿ ಸುಂಕ ಹೇರುವ ಆರ್ಥಿಕ ನೀತಿ ವಿರುದ್ಧ ನಾವು ಒಗ್ಗಟ್ಟಾಗಿದ್ದೇವೆ ಎಂದು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ,’’

ಮುಕ್ತ ವ್ಯಾಪಾರ ಒಪ್ಪಂದಗಳು ಯಾವುವು?

 • ಎಫ್ಟಿಎಗಳು ಎರಡು ಅಥವಾ ಅದಕ್ಕಿಂತ ಹೆಚ್ಚಿನ ದೇಶಗಳ ಅಥವಾ ವ್ಯಾಪಾರದ ಬ್ಲಾಕ್ಗಳ ನಡುವಿನ ವ್ಯವಸ್ಥೆಗಳಾಗಿವೆ, ಮುಖ್ಯವಾಗಿ ಕಸ್ಟಮ್ಸ್ ಸುಂಕ ಮತ್ತು ಅವುಗಳ ನಡುವೆ ಗಣನೀಯ ವ್ಯಾಪಾರದ ಮೇಲೆ ಸುಂಕದ ತಡೆಗಳನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕಲು ಒಪ್ಪಿಕೊಳ್ಳುತ್ತವೆ, ಆದರೆ (ಸಾಮಾನ್ಯ ಮಾರುಕಟ್ಟೆಗೆ ವಿರುದ್ಧವಾಗಿ) ಬಂಡವಾಳ ಅಥವಾ ಕಾರ್ಮಿಕರ ಸ್ವತಂತ್ರವಾಗಿ ಚಲಿಸುವುದಿಲ್ಲ.
 • ಎಫ್ಟಿಎಗಳು ಸಾಮಾನ್ಯವಾಗಿ ಸರಕುಗಳಲ್ಲಿ (ಕೃಷಿ ಅಥವಾ ಕೈಗಾರಿಕಾ ಉತ್ಪನ್ನಗಳಂತಹವು) ಅಥವಾ ಸೇವೆಗಳಲ್ಲಿ ವ್ಯಾಪಾರ (ಬ್ಯಾಂಕಿಂಗ್, ನಿರ್ಮಾಣ, ವ್ಯಾಪಾರ ಇತ್ಯಾದಿ) ವ್ಯಾಪಾರವನ್ನು ಒಳಗೊಂಡಿರುತ್ತವೆ.
 • ಎಫ್ಟಿಎಗಳು ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್ಗಳು), ಹೂಡಿಕೆ, ಸರ್ಕಾರಿ ಸಂಗ್ರಹಣೆ ಮತ್ತು ಸ್ಪರ್ಧೆಯ ನೀತಿ, ಇತ್ಯಾದಿಗಳಂತಹ ಇತರ ಕ್ಷೇತ್ರಗಳನ್ನು ಸಹ ಒಳಗೊಳ್ಳಬಹುದು.

ಎಫ್ಟಿಎ ವಿಧಗಳು

 • ಆದ್ಯತಾ ವ್ಯಾಪಾರ ಒಪ್ಪಂದ (ಪಿಟಿಎ): ಪಿಟಿಎ ಯಲ್ಲಿ, ಎರಡು ಅಥವಾ ಅದಕ್ಕಿಂತ ಹೆಚ್ಚು ಪಾಲುದಾರರು ಒಪ್ಪಿದ ಸಂಖ್ಯೆಯ ಸುಂಕದ ರೇಖೆಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ಒಪ್ಪುತ್ತಾರೆ. ಕರ್ತವ್ಯವನ್ನು ಕಡಿಮೆ ಮಾಡಲು ಪಾಲುದಾರರು ಒಪ್ಪಿಕೊಳ್ಳುವ ಉತ್ಪನ್ನಗಳ ಪಟ್ಟಿಯನ್ನು ಧನಾತ್ಮಕ ಪಟ್ಟಿ ಎಂದು ಕರೆಯಲಾಗುತ್ತದೆ. ಭಾರತ ಮೆರ್ಕೋಸರ್ ಪಿಟಿಎ ಅಂತಹ ಉದಾಹರಣೆಯಾಗಿದೆ. ಆದಾಗ್ಯೂ, ಸಾಮಾನ್ಯ ಪಿ.ಟಿ.ಎ.ಗಳು ಎಲ್ಲಾ ವ್ಯಾಪಾರವನ್ನು ಗಣನೀಯವಾಗಿ ಒಳಗೊಂಡಿರುವುದಿಲ್ಲ.
 • ಎಫ್ಟಿಎ ಮತ್ತು ಪಿಟಿಎ ನಡುವಿನ ಪ್ರಮುಖ ವ್ಯತ್ಯಾಸವೇನೆಂದರೆ ಪಿಟಿಎಯಲ್ಲಿದ್ದಾಗ ಉತ್ಪನ್ನಗಳ ಸಕಾರಾತ್ಮಕ ಪಟ್ಟಿಯು  ಕಡಿಮೆಗೊಳಿಸುವುದು; ಒಂದು ಎಫ್ಟಿಎ ಯಲ್ಲಿ ಋಣಭಾರದ ಪಟ್ಟಿಯನ್ನು ಕಡಿತಗೊಳಿಸಲಾಗುವುದಿಲ್ಲ ಅಥವಾ ತೆಗೆದುಹಾಕಲಾಗುವುದಿಲ್ಲ.
 • ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ) : ಒಪ್ಪಂದದ ಪಾಲುದಾರ ದೇಶದಲ್ಲಿ ಹೂಡಿಕೆ ಮಾಡುವಾಗ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ) ಹೂಡಿಕೆದಾರರಿಗೆ ವಿವಿಧ ಗ್ಯಾರಂಟಿಗಳನ್ನು ಒದಗಿಸುತ್ತದೆ.
 • ಆರ್ಥಿಕ ಸಹಭಾಗಿತ್ವ ಒಪ್ಪಂದ (ಇಪಿಎ) ಅಥವಾ ಸಮಗ್ರ ಆರ್ಥಿಕ ಸಹಭಾಗಿತ್ವ (ಸಿಇಪಿ) : ಇಪಿಎ / ಸಿಇಪಿ ಒಪ್ಪಂದಗಳು ವ್ಯಾಪ್ತಿಯಲ್ಲಿ ಸಮಗ್ರವಾಗಿವೆ, ಸರಕುಗಳಲ್ಲಿ ವ್ಯಾಪಾರ, ವ್ಯಾಪಾರದಲ್ಲಿ ಸೇವೆಗಳು, ಹೂಡಿಕೆ ಮತ್ತು ಆರ್ಥಿಕ ಸಹಕಾರ
 • ವಿದೇಶಿ ಹೂಡಿಕೆ ಮತ್ತು ರಕ್ಷಣಾ ಒಪ್ಪಂದ (FIPA) : ವಿದೇಶಿ ಹೂಡಿಕೆ ಮತ್ತು ಸಂರಕ್ಷಣಾ ಒಪ್ಪಂದದ ಪ್ರಮುಖ ನಿಬಂಧನೆಗಳು ಆತಿಥೇಯ ದೇಶದಿಂದ ವಿದೇಶಿ ಹೂಡಿಕೆಗಳನ್ನು ನಿರ್ವಹಿಸುವುದು, ಬಂಡವಾಳ ಮತ್ತು ಬಂಡವಾಳದ ಆದಾಯದ ವರ್ಗಾವಣೆ, ವಂಚನೆಗಾಗಿ ಪರಿಹಾರ ಮತ್ತು ವಿವಾದಗಳನ್ನು ಪರಿಹರಿಸುವ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ.
 • ಕಸ್ಟಮ್ ಯೂನಿಯನ್ : ಕಸ್ಟಮ್ಸ್ ಒಕ್ಕೂಟದಲ್ಲಿ, ಪಾಲುದಾರ ದೇಶಗಳು ತಮ್ಮಲ್ಲಿ ಶೂನ್ಯ ಕರ್ತವ್ಯವನ್ನು ವ್ಯಾಪಾರ ಮಾಡಲು ನಿರ್ಧರಿಸಬಹುದು, ಆದಾಗ್ಯೂ ಅವರು ಪ್ರಪಂಚದ ಉಳಿದ ಭಾಗಗಳ ವಿರುದ್ಧ ಸಾಮಾನ್ಯ ಸುಂಕವನ್ನು ನಿರ್ವಹಿಸುತ್ತಾರೆ. ದಕ್ಷಿಣ ಆಫ್ರಿಕಾ, ಲೆಸೋಥೊ, ನಮೀಬಿಯಾ, ಬೊಟ್ಸ್ವಾನಾ ಮತ್ತು ಸ್ವಾಜಿಲ್ಯಾಂಡ್ ನಡುವೆ ದಕ್ಷಿಣ ಆಫ್ರಿಕನ್ ಕಸ್ಟಮ್ಸ್ ಯೂನಿಯನ್ (SACU) ಉದಾಹರಣೆಯಾಗಿದೆ. ಯುರೋಪಿಯನ್ ಒಕ್ಕೂಟ ಕೂಡ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
 • ಕಾಮನ್ ಮಾರ್ಕೆಟ್ : ಕಾಮನ್ ಮಾರುಕಟ್ಟೆಯಿಂದ ಒದಗಿಸಲ್ಪಟ್ಟ ಏಕೀಕರಣವು ಕಸ್ಟಮ್ಸ್ ಯೂನಿಯನ್ನಿಂದ ಒಂದು ಹೆಜ್ಜೆ ಆಳವಾಗಿದೆ. ಒಂದು ಸಾಮಾನ್ಯ ಮಾರುಕಟ್ಟೆ ಕಾರ್ಮಿಕ ಮತ್ತು ಬಂಡವಾಳದ ಮುಕ್ತ ಚಲನೆಗಳನ್ನು ಒದಗಿಸುವ ನಿಬಂಧನೆಗಳೊಂದಿಗಿನ ಕಸ್ಟಮ್ಸ್ ಯೂನಿಯನ್ ಆಗಿದೆ, ಸದಸ್ಯರಲ್ಲಿ ತಾಂತ್ರಿಕ ಗುಣಮಟ್ಟವನ್ನು ಸಮನ್ವಯಗೊಳಿಸುತ್ತದೆ. ಯುರೋಪಿಯನ್ ಕಾಮನ್ ಮಾರ್ಕೆಟ್ ಒಂದು ಉದಾಹರಣೆಯಾಗಿದೆ.
 • ಸಹಭಾಗಿತ್ವ ಸಹಕಾರ ಒಪ್ಪಂದ (ಪಿಸಿಎ) : ರಾಜಕೀಯ, ವಾಣಿಜ್ಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಹಕಾರವನ್ನು ಉತ್ತೇಜಿಸುವುದು ಪಾಲುದಾರಿಕೆ ಮತ್ತು ಸಹಕಾರ ಒಪ್ಪಂದ (ಪಿಸಿಎ) ಗುರಿಯಾಗಿದೆ. ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಿಗೆ ಗಮನ ಹರಿಸುವುದರಿಂದ, ಪಿಸಿಎ ಅನೇಕ ಇತರ ವ್ಯಾಪಾರ ಒಪ್ಪಂದಗಳನ್ನು ಮೀರಿ ಚಲಿಸುತ್ತದೆ.
Related Posts
National Current Affairs – UPSC/KAS Exams – 13th November 2018
National body set up to study Monogenic diabetes Topic: Statutory, regulatory and various quasi-judicial bodies and issues related to health. IN NEWS:A National Monogenic Diabetes Study Group has been formed to identify ...
READ MORE
IMD urges govt to encourage farmers to register on portal
The officials of the India Meteorological Department (IMD) on Tuesday met the state government officials and urged them to speed up the process of making farmers register on M-Kisan portal. Union ...
READ MORE
The new simplified “Guidelines Governing Adoption of Children 2015” notified by the Central Government on 17th July 2015 became operational form August 2015. Along with it, the fully revamped IT application ...
READ MORE
Gram Swaraj Panchayat Raj bill, 2015
The State Cabinet gave its nod for incorporating several changes in the panchayat raj legislation Amendments are based on the recommendations made by a committee headed by former speaker K R Ramesh Kumar. The ...
READ MORE
Karnataka: Kambala buffaloes may get breed status
The State government, which made an earlier attempt to secure the breed status in 2016, is expected to make another pitch before the National Bureau of Animal Genetics (NBAG)-Karnal seeking ...
READ MORE
Karnataka MobileOne bags award
Karnataka MobileOne, the flagship application launched by the State government in 2014, bagged the Gold award at the World Governance Summit in Dubai Secretary, Department of e-Governance, Srivatsa Krishna, received the ...
READ MORE
Karnataka: Rural Wi-Fi for ‘digital inclusion’ of village entrepreneurs
The Karnataka government on Monday launched rural Wi-Fi services in 11 gram panchayats, with Chief Minister Siddaramaiah saying such a ‘digital inclusion’ will give village-level entrepreneurs ready access to online market ...
READ MORE
High Court: Prepare plan for recruiting women police
The High Court of Karnataka recently expressed displeasure over the dwindling number of policewomen in the state. Justice A N Venugopala Gowda, who is monitoring the recruitment of police personnel in ...
READ MORE
Karnataka Current Affairs – KAS/KPSC Exams – 29th Aug 2017
Rs. 574-crore makeover for Bengaluru roads The State Cabinet on 28th Aug approved release of Rs. 574 crore for development of roads of Bengaluru. Briefing on the Cabinet’s decisions, Law and Parliamentary ...
READ MORE
Karnataka Current Affairs – KAS/KPSC Exams – 25th – 26th Oct 2017
Kittur Fort to become tourist spot Kittur Utsav that celebrates Queen Kittur Channamma’s victory over the East India company’s troupes in 1824, was organised in Channammana Kittur on Monday. The three-day ...
READ MORE
National Current Affairs – UPSC/KAS Exams – 13th
IMD urges govt to encourage farmers to register
CARINGS
Gram Swaraj Panchayat Raj bill, 2015
Karnataka: Kambala buffaloes may get breed status
Karnataka MobileOne bags award
Karnataka: Rural Wi-Fi for ‘digital inclusion’ of village
High Court: Prepare plan for recruiting women police
Karnataka Current Affairs – KAS/KPSC Exams – 29th
Karnataka Current Affairs – KAS/KPSC Exams – 25th

Leave a Reply

Your email address will not be published. Required fields are marked *