ಜಾಗತಿಕ ಆವಿಷ್ಕಾರ ಸೂಚ್ಯಂಕ
- ಸುದ್ಧಿಯಲ್ಲಿ ಏಕಿದೆ? 2018ರ ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ) ಬಿಡುಗಡೆಯಾಗಿದ್ದು, ಭಾರತ 57ನೇ ಸ್ಥಾನ ಪಡೆದಿದೆ. 2015ರಿಂದ ಜಿಐಐ ಶ್ರೇಯಾಂಕದಲ್ಲಿ ಸತತವಾಗಿ ಹೊಸದಿಲ್ಲಿ ಏರುಗತಿಯಲ್ಲಿ ಸಾಗುತ್ತಿದೆ.
- ವರದಿಗಳ ಪ್ರಕಾರ, ಕೇಂದ್ರ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಭಾರತವು ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. 2015ರಲ್ಲಿ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81ನೇ ಸ್ಥಾನದಿಂದ 2018ರಲ್ಲಿ 57ನೇ ಸ್ಥಾನಕ್ಕೆ ಏರಿದೆ. 2016ರಲ್ಲಿ 66ನೇ ಸ್ಥಾನ ಪಡೆದಿದ್ದ ಭಾರತ, 2017ರಲ್ಲಿ 60ನೇ ಸ್ಥಾನದಲ್ಲಿದ್ದತ್ತು. ಈ ಮೂಲಕ ದೇಶವು ಸತತವಾಗಿ ಮೂರನೇ ವರ್ಷವೂ ಉನ್ನತ ಶ್ರೇಯಾಂಕಕ್ಕೆ ಜಿಗಿದಿದೆ.
- ಜಾಗತಿಕವಾಗಿ ಗಮನಿಸಿದರೆ, ಜಿಐಐ ಶ್ರೇಯಾಂಕದಲ್ಲಿ ಸ್ವಿಜಲ್ರ್ಯಾಂಡ್ ತನ್ನ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ. ನೆದಲ್ರ್ಯಾಂಡ್, ಸ್ವೀಡನ್, ಬ್ರಿಟನ್, ಸಿಂಗಾಪುರ, ಅಮೆರಿಕ, ಫಿನ್ಲ್ಯಾಂಡ್, ಡೆನ್ಮಾರ್ಕ್, ಜರ್ಮನಿ ಮತ್ತು ಐಲ್ರ್ಯಾಂಡ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 2017ರಲ್ಲಿ 44ನೇ ಸ್ಥಾನದಲ್ಲಿದ್ದ ಚೀನಾ, ಈ ವರ್ಷ 17ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ.
- ವಿಶ್ವದಾದ್ಯಂತ ಆವಿಷ್ಕಾರ ಕ್ಷೇತ್ರವನ್ನು ಒಳನೋಟಕ್ಕೆ ಒಳಪಡಿಸುವ ಉದ್ಯಮ ಕ್ಷೇತ್ರದ ಅಧಿಕಾರಿಗಳು, ನೀತಿ ರೂಪಕರು ಮತ್ತು ಇತರರಿಗೆ ಜಿಐಐ ಶ್ರೇಯಾಂಕ ಪ್ರಮುಖ ಮಾನದಂಡವಾಗಿದೆ. ನಿರಂತರವಾಗಿ ಅಭಿವೃದ್ಧಿಯ ಮೌಲ್ಯಮಾಪನ ಮಾಡಲು ಜಾಗತಿಕ ಆವಿಷ್ಕಾರ ಸೂಚ್ಯಂಕವನ್ನು ಬಳಸಲಾಗುತ್ತಿದೆ.
ಮಾನದಂಡಗಳೇನು?
- ರಾಷ್ಟ್ರಗಳ ಶ್ರೇಯಾಂಕ ನಿರ್ಧರಿಸಲುಜಾಗತಿ.ಕ ಆವಿಷ್ಕಾರ ಸೂಚ್ಯಂಕ80 ಅಂಶಗಳನ್ನು ಪರಿಗಣಿಸುತ್ತದೆ. ಅದರಲ್ಲಿ ಪ್ರಮುಖವಾದವು..
– ಬೌದ್ಧಿಕ ಆಸ್ತಿ ಪ್ರಮಾಣ
– ಮೊಬೈಲ್ ಅಪ್ಲಿಕೇಶನ್ ರಚನೆ
– ಆನ್ಲೈನ್ ಸೃಜನಶೀಲತೆ
– ಕಂಪ್ಯೂಟರ್ ಸಾಫ್ಟವೇರ್ಗಾಗಿ ಖರ್ಚು
– ಶಿಕ್ಷ ಣಕ್ಕಾಗಿ ಖರ್ಚು
– ವ್ಯಾಪಾರ ಪ್ರಾರಂಭಿಸಲು ಸುಲಭ ಅವಕಾಶಗಳು
– ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಕಟಣೆಗಳು
ಯಾರು ಪ್ರಕಟಿಸುತ್ತಾರೆ ?
- ಜಿಐಐ ಶ್ರೇಯಾಂಕವನ್ನು ವಿಶ್ವ ಅಂತಾರಾಷ್ಟ್ರೀಯ ಆಸ್ತಿ ಸಂಸ್ಥೆ(ಡ್ಬ್ಯೂಐಪಿಒ) ಪ್ರಕಟಿಸಲಿದ್ದು, ಈ ಸಂಸ್ಥೆ ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಬಿಸೆನೆಸ್ ಕಾಲೇಜು ‘ಇನ್ಸೀಡ್’ ನೊಂದಿಗೆ ಸೇರಿ ಕೆಲಸ ಮಾಡುತ್ತದೆ. ಐಸಿಐಐ ಸಂಸ್ಥೆ ಜಿಐಐ ತಂಡದೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ವಾರ್ಷಿಕ ಶ್ರೇಯಾಂಕವನ್ನು ತರುವಲ್ಲಿ ಸಹಾಯ ಮಾಡುತ್ತದೆ.
- ವರದಿ ಪ್ರಕಾರ, ಸತತವಾಗಿ ಎಂಟು ವರ್ಷಗಳವರೆಗೆ ತಲಾವಾರು ಜಿಡಿಪಿಗೆ ಹೋಲಿಸಿದರೆ ಆವಿಷ್ಕಾರ ಕ್ಷೇತ್ರದಲ್ಲಿ ಭಾರತ ಅತ್ಯುತ್ತಮವಾಗಿ ಹೊರಹೊಮ್ಮಿದೆ.
- ಈ ಕ್ಷೇತ್ರಗಳಲ್ಲಿ ಭಾರತ ಮುಂದು:
ವಿಜ್ಞಾನ ಮತ್ತು ಎಂಜಿನಿಯರಿಂಗ್ನಲ್ಲಿ ಪದವೀಧರರು, ಪ್ರತಿ ಕಾರ್ಮಿಕರಿಗೆ ಜಿಡಿಪಿ ಬೆಳವಣಿಗೆ ದರ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ) ಹಾಗೂ ಸೇವೆಗಳ ರಫ್ತು, ಉತ್ಪಾದನಾ ಬೆಳವಣಿಗೆ ಮತ್ತು ಸೃಜನಾತ್ಮಕ ಸರಕುಗಳ ರಫ್ತು - ಈ ಕ್ಷೇತ್ರಗಳಲ್ಲಿ ಭಾರತ ಹಿನ್ನಡೆ:
ರಾಜಕೀಯ ಸ್ಥಿರತೆ ಮತ್ತು ಸುರಕ್ಷ ತೆ, ವ್ಯಾಪಾರ ಪ್ರಾರಂಭಿಸಲು ಸುಲಭ ಅವಕಾಶಗಳು, ಒಟ್ಟಾರೆ ಶಿಕ್ಷಣ ಮತ್ತು ಪರಿಸರ ಕಾರ್ಯಕ್ಷಮತೆ - ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ
ವರ್ಷ ಜಿಐಐ ಶ್ರೇಯಾಂಕ
2015 81
2016 66
2017 60
2018 57
ಗಣರಾಜ್ಯೋತ್ಸವದ ಅತಿಥಿ
- ಸುದ್ಧಿಯಲ್ಲಿ ಏಕಿದೆ? ಅಮೆರಿಕ ಅಧ್ಯಕ್ಷಡೊನಾಲ್ಡ್ ಟ್ರಂಪ್ ಅವರನ್ನು ಮುಂದಿನ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ಭಾರತ ಆಹ್ವಾನಿಸಿದೆ. ಟ್ರಂಪ್ ಆಗಮಿಸಿದ್ದೇ ಆದಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ನೀತಿಯಲ್ಲಿ ಇದೊಂದು ಮಹತ್ತರ ಬೆಳವಣಿಗೆಯಾಗಲಿದೆ.
- 2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೀಗ ಟ್ರಂಪ್ ಬಂದರೆ ಮೋದಿ ಸರಕಾರದ ಅವಧಿಯಲ್ಲಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅಮೆರಿಕದ 2ನೇ ಅಧ್ಯಕ್ಷ ಎಂದೆನಿಸಲಿದ್ದಾರೆ.
ತಾಂತ್ರಿಕ ಕಾಲೇಜು ಕ್ಯಾಂಪಸ್ಗಳು ಪ್ಲಾಸ್ಟಿಕ್ ಮುಕ್ತ
- ಸುದ್ಧಿಯಲ್ಲಿ ಏಕಿದೆ? ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಕ್ಯಾಂಪಸ್ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ನಿಷೇಧಿಸಿದೆ.
- ಆ ಮೂಲಕ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಕ್ಯಾಂಪಸ್ಸುಗಳನ್ನು ‘ಪ್ಲಾಸ್ಟಿಕ್ ಮುಕ್ತ‘ ವಲಯಗಳನ್ನಾಗಿಸಲು ಮುಂದಾಗಿದೆ.
- ಕಾಲೇಜು ಆವರಣದಲ್ಲಿರುವ ಕ್ಯಾಂಟೀನ್ ಮತ್ತು ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಪ್ಲೇಟ್ ಮತ್ತು ಕಪ್ಗಳ ಬದಲು ಕಾಗದ ಅಥವಾ ಸ್ಟೀಲ್ ಪ್ಲೇಟ್ ಮತ್ತು ಕಪ್ಗಳನ್ನು ಬಳಸುವಂತೆ ಸೂಚಿಸಿದೆ. ಕಾಲೇಜುಗಳಲ್ಲಿ ನಡೆಯುವ ಯಾವುದೇ ಸಭೆ, ಸಮಾರಂಭದಲ್ಲೂ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಖರೀದಿಸುವಂತಿಲ್ಲ. ಉನ್ನತ ಅಧಿಕಾರಿಗಳು ಮತ್ತು ಗಣ್ಯ ಅತಿಥಿಗಳ ಸತ್ಕಾರಕ್ಕೆ ಸ್ಟೀಲ್ ಪ್ಲೇಟ್, ಕಪ್ ಅಥವಾ ಗಾಜಿನ ಕಪ್ಗಳನ್ನೇ ಬಳಸುವಂತೆ ತಿಳಿಸಲಾಗಿದೆ.
- ಕ್ಯಾಂಪಸ್ಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಸಂಬಂಧ ಪ್ರಾಂಶುಪಾಲರು ಕಾಲೇಜುಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಹಾಗೂ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು.
- ಪ್ಲಾಸ್ಟಿಕ್ ನಿಷೇಧವನ್ನು ಕ್ಯಾಂಪಸ್ಗಳಲ್ಲಿ ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆಯೇ ಎಂಬ ಬಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಿಯಮ ಉಲ್ಲಂಘಿಸುವ ಕಾಲೇಜುಗಳ ವಿರುದ್ಧ ದಂಡ ವಿಧಿಸಲಾಗುತ್ತದೆ.
ಇತಿಹಾಸ ರಚಿಸಿದ ಹಿಮಾ ದಾಸ್
- ಸುದ್ಧಿಯಲ್ಲಿ ಏಕಿದೆ? ಭಾರತದ ಉದಯೋನ್ಮುಖ ಓಟಗಾರ್ತಿ ಹಿಮಾ ದಾಸ್, ಇಲ್ಲಿ ನಡೆಯುತ್ತಿರುವ ಐಎಎಎಫ್ 20ರ ವಯೋಮಿತಿಯ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಮಹಿಳೆಯ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
- ಅಥ್ಲೀಟಿಕ್ಸ್ ವಿಭಾಗದಲ್ಲಿ (ಟ್ರ್ಯಾಕ್ ವಿಭಾಗದಲ್ಲಿ) ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಳು ಎಂಬ ಕೀರ್ತಿಗೆ ಹಿಮಾ ದಾಸ್ ಪಾತ್ರವಾಗಿದ್ದಾರೆ.
- ಫಿನ್ಲೆಂಡ್ನ ಟ್ಯಾಂಪರ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ 18ರ ಹರೆಯದ ಹಿಮಾ 46 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.
- ಇದೇ ವಿಭಾಗದಲ್ಲಿ ಸ್ಪರ್ಧಿಸಿದ ರೊಮನಿಯಾದ ಆಂಡ್ರಿಯಾ ಮಿಕ್ಲೋಸ್ (07 ಸೆಕೆಂಡು) ಬೆಳ್ಳಿ ಹಾಗೂ ಅಮೆರಿಕದ ಟೇಲರ್ ಮ್ಯಾನ್ಸನ್ (52.28 ಸೆಕೆಂಡು) ಕಂಚಿನ ಪದಕಕ್ಕೆ ಅರ್ಹವಾದರು.
ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ ಬಗ್ಗೆ
- ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕಾಗಿ ಅಂತರಾಷ್ಟ್ರೀಯ ಆಡಳಿತ ಮಂಡಳಿಯು ಅಥ್ಲೆಟಿಕ್ಸ್ ಫೆಡರೇಶನ್ಸ್ ( IAAF ) ಅಂತರಾಷ್ಟ್ರೀಯ ಆಡಳಿತ ಸಂಸ್ಥೆಯಾಗಿದೆ . ಸ್ವೀಡನ್ನ ಸ್ಟಾಕ್ಹೋಮ್ನಲ್ಲಿನ ಸಂಸ್ಥೆಯ ಮೊದಲ ಕಾಂಗ್ರೆಸ್ನಲ್ಲಿ 17 ರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ನ ಪ್ರತಿನಿಧಿಗಳ ಮೂಲಕ 17 ಜುಲೈ 1912 ರಂದು ಇಂಟರ್ನ್ಯಾಷನಲ್ ಅಮ್ಯಾಚ್ಯರ್ ಅಥ್ಲೆಟಿಕ್ ಫೆಡರೇಶನ್ ಆಗಿ ಇದನ್ನು ಸ್ಥಾಪಿಸಲಾಯಿತು.
- ಅಕ್ಟೋಬರ್ 1993 ರಿಂದ, ಇದು ಮೊನಾಕೊದಲ್ಲಿ ಪ್ರಧಾನ ಕಚೇರಿಯಾಗಿದೆ.
Related Posts
Edutrac is a mobile phone-based real time data collection system. The Union government in association with UNICEF is trying out Edutrac that helps monitoring affairs in schools
Dakshina Kannada is among the three districts ...
READ MORE
Urban Slums
The population living in urban slums in Karnataka has raised from 14.02 lakh (2001) to 32.91 lakh (2011) in a decade.
This is a rise from 7.8 per cent of the total urban population ...
READ MORE
Southern Zonal Council
Why in news?
The 28th meeting of the Southern Zonal Council was recently held under the Chairmanship of the Union Home Minister Shri Rajnath Singh in Bengaluru.
About zonal councils
Zonal ...
READ MORE
Second unit of Yeramarus power plant commissioned
The second 800-MW unit of Yeramarus thermal plant in Raichur district was commissioned on 30th March.
The first unit of the 2x800 MW plant was ...
READ MORE
Construction of individual household toilets for families in the rural areas who do not have toilets.
To improve the standard of living of the rural people and reformation in the health ...
READ MORE
Excise Department moves from paper to polyester
The Excise Department’s move from paper Excise Adhesive Label (EAL) on Indian Made Liquor (IML) bottles to non-biodegradable polyester ones has the green activists ...
READ MOREGanga Task Force deployed Ganga Gram Yojana launched
As a major initiative towards fast track implementation of Namami Gange Programme the first company of Ganga Task force Battalion was deployed at ...
READ MORE
Swachh Survekshan Grameen, 2018
Why in news?
The Centre has launched the Swachh Survekshan Grameen, 2018, a nationwide survey of rural India to rank the cleanest and dirtiest States and districts on ...
READ MORE
Self Employment Programme
The Government of India, Ministry of Rural Development has restructured SGSY as “Aajeevika”- National Rural Livelihoods Mission (NRLM) and being implemented from 2010-2011.
The State Government is implementing this ...
READ MORE
30% bonanza for State employees
In a big bonus for 5.2 lakh State government employees and 5.73 lakh pensioners ahead of the polls, the 6th Pay Commission has suggested a 30% ...
READ MOREEdutrac- Monitoring attendance in schools
Karnataka-Urban Development-Urban Slums
National Current Affairs – UPSC/KAS Exams- 20th September
Current Affairs – Karnataka – KAS / KPSC
Rural Development- Objectives of Swachha Bharat
Karnataka Current Affairs – KAS/KPSC Exams – 7th
Implementation Of Namami Gange programme
National Current Affairs – UPSC/KAS Exams- 14th July
Rural Development-Self Employment Programme
Karnataka Current Affairs – KAS/KPSC Exams- 1st –