30th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಝುಗಮಗಿಸುತ್ತಿದೆ ನಮ್ಮ ಕರ್ನಾಟಕ!

 • ಸುದ್ಧಿಯಲ್ಲಿ ಏಕಿದೆ? ದೇಶದಲ್ಲೇ ಅತಿಹೆಚ್ಚು ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
 • ಕಳೆದ ಒಂದು ವರ್ಷದಲ್ಲಿ 3 ಗಿಗಾ ವಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ಮೂಲಕ ತಮಿಳುನಾಡನ್ನು ಹಿಂದಿಕ್ಕಿದೆ. ಯುರೋಪಿಯನ್ ರಾಷ್ಟ್ರಗಳಾದ ಹಾಲೆಂಡ್ ಹಾಗೂ ಡೆನ್ಮಾರ್ಕ್​ನ ಒಟ್ಟಾರೆ ವಿದ್ಯುತ್ ಉತ್ಪಾದನೆಯನ್ನೂ ಕರ್ನಾಟಕ ಮೀರಿಸಿದೆ.
 • ಕರ್ನಾಟಕದಲ್ಲಿ 2013ರ ವೇಳೆಗೆ ಕೇವಲ 4 ಗಿಗಾ ವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಯಾಗುತ್ತಿತ್ತು. ಬಳಿಕ 5 ವರ್ಷಗಳಲ್ಲಿ ಮೂರುಪಟ್ಟು ಹೆಚ್ಚು ವಿದ್ಯುತ್ ಉತ್ಪಾದನೆಯಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡು, ಮಧ್ಯಪ್ರದೇಶ ಹಾಗೂ ಗುಜರಾತ್​ನಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಈ ರಾಜ್ಯಗಳು ಈಗಾಗಲೇ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ನವೀಕರಿಸಬಹುದಾದ ಇಂಧನವನ್ನು ಬೇರೆ ರಾಜ್ಯಗಳಿಗೆ ರವಾನಿಸುವುದು ಸುಲಭವಲ್ಲ. ಹೀಗಾಗಿ ಹೊಸ ಉತ್ಪಾದನೆ ಘಟಕಗಳತ್ತ ಆಸಕ್ತಿ ವಹಿಸುತ್ತಿಲ್ಲ.

ಪರಿಸರ ಸ್ನೇಹಿ ಜತೆಗೆ ಅಗ್ಗ

 • ಕರ್ನಾಟಕದಲ್ಲಿ ಸೌರ ವಿದ್ಯುತ್ ದರ ಪ್ರತಿ ಯೂನಿಟ್​ಗೆ 88 – 3.06 ರೂ. ಇದೆ. ಆದರೆ ಥರ್ಮಲ್ ವಿದ್ಯುತ್​ಗೆ 3-6 ರೂ.ವರೆಗೆ ದರ ಇದೆ. ಹೀಗಾಗಿ ನವೀಕರಿಸಬಹುದಾದ ಇಂಧನಗಳು ಪರಿಸರ ಸ್ನೇಹಿ ಜತೆಗೆ ಅಗ್ಗವೂ ಆಗಿದೆ. ಇದರಿಂದ ರಾಜ್ಯ ಸರ್ಕಾರದ ಖಜಾನೆಯ ಹೊರೆ ತುಸು ಕಡಿಮೆಯಾಗಿದೆ.

ಹೆಚ್ಚಳಕ್ಕೆ ಕಾರಣವೇನು?

 • ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ವಿಶೇಷ ಆಸಕ್ತಿ ಹಾಗೂ ಯೋಜನೆ ಕಾರಣ ವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರೈತರ ಅನುಪಯುಕ್ತ ಭೂಮಿಯಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿತ್ತು. ರೈತರಿಂದ ಖಾಸಗಿ ಕಂಪನಿಗಳು ಭೂಮಿಯನ್ನು ಭೋಗ್ಯಕ್ಕೆ ಪಡೆದು ಘಟಕ ಸ್ಥಾಪಿಸಿದವು. ಇದರಿಂದ ಖಾಸಗಿ ಉದ್ದಿಮೆಗಳಿಗೆ ಸುಲಭವಾಗಿ ಭೂಮಿ ಸಿಗುವಂತಾಯಿತು. ಇಲ್ಲವಾದಲ್ಲಿ ಹಾಲಿ ಭೂ ಸ್ವಾಧೀನ ಕಾಯ್ದೆಯಲ್ಲಿ ಇಷ್ಟು ಸಲೀಸಾಗಿ ಭೂಮಿ ಪಡೆದು ಘಟಕ ಸ್ಥಾಪಿಸಲು ಸಾಧ್ಯವಾಗುತ್ತಿರಲಿಲ್ಲ.

ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ

 • ಥರ್ಮಲ್ ವಿದ್ಯುತ್: 8 ಗಿ.ವಾ
 • ನವೀಕರಿಸಬಹುದಾದ ಇಂಧನ: 3 ಗಿ.ವಾ (ಸೌರ: 5 ಗಿ.ವಾ, ಪವನ: 4.7 ಗಿ.ವಾ, ಜಲ ಹಾಗೂ ಇತರೆ: 2.6 ಗಿ.ವಾ)

175 ಗಿಗಾ ವಾಟ್ ಟಾರ್ಗೆಟ್

 • 2022ರ ವೇಳೆಗೆ 175 ಗಿ.ವಾ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿಯನ್ನು ಭಾರತ ಹಾಕಿಕೊಂಡಿದೆ. ಇದರಲ್ಲಿ 100 ಗಿ.ವಾ.ನ್ನು ಸೌರ ವಿದ್ಯುತ್​ನಿಂದ ಉತ್ಪಾದಿಸಬೇಕು ಹಾಗೂ 40 ಗಿ.ವಾ ಪ್ರಮಾಣವನ್ನು ರೂಫ್​ಟಾಪ್ ಸೋಲಾರ್ ನಿಂದ ತಯಾರಾಗಬೇಕು ಎನ್ನುವುದು ಸರ್ಕಾರದ ಗುರಿ.
 • 75 ಗಿ. ವಾನಲ್ಲಿ 60 ಗಿ.ವಾ.ನ್ನು ಪವನ ವಿದ್ಯುತ್, 10 ಗಿ.ವಾ. ಜೈವಿಕ ಇಂಧನ ಹಾಗೂ 5 ಗಿ.ವಾ.ನ್ನು ಜಲ ವಿದ್ಯುತ್​ನಿಂದ ಪಡೆಯುವ ಗುರಿ ಹೊಂದಲಾಗಿದೆ.

ರಾಷ್ಟ್ರೀಯ ಸೌರ ಮಿಷನ್:

 • ಜವಹರಲಾಲ್ ನೆಹರು ರಾಷ್ಟ್ರೀಯ ಸೌರ ಮಿಷನ್ ಎಂದು ಕೂಡಾ 2010 ರ ಜನವರಿ 11 ರಂದು ಭಾರತ ಸರಕಾರ ಅನುಮೋದಿಸಿತು. 2022 ರಲ್ಲಿ 13 ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ 20,000 ಮೆವ್ಯಾ ಸಾಮರ್ಥ್ಯದ ಸಾಮರ್ಥ್ಯವನ್ನು ಅಳವಡಿಸಲು ಮೂರು ಹಂತಗಳಲ್ಲಿ ಕಾರ್ಯಗತಗೊಳಿಸಲು ದೀರ್ಘಾವಧಿಯ ಶಕ್ತಿ ಮತ್ತು ಪರಿಸರವಿಜ್ಞಾನ ಭದ್ರತೆಯನ್ನು ಸಾಧಿಸುವ ಗುರಿಯನ್ನು ಸೌರ ಮಿಷನ್ ಪ್ರಾರಂಭಿಸಿತು.
 • ಮೂರು ಹಂತಗಳು ಕೆಳಕಂಡಂತಿವೆ: ಸ್ಟೇಜ್- I 2010-2013 1,000-2,000 ಮೆವ್ಯಾ ಗುರಿ.
 • ಹಂತ-II 2013-2017 ಗುರಿ 4,000-10,000 ಮೆವ್ಯಾ.
 • ಹಂತ-III 2017-2022 ಗುರಿ 20,000 ಮೆವ್ಯಾ.

ಮಿಸೈಲ್ ಭದ್ರತೆ

 • ಸುದ್ಧಿಯಲ್ಲಿ ಏಕಿದೆ? ವಿಮಾನ, ಕ್ಷಿಪಣಿ, ಡ್ರೋನ್ ಹಾಗೂ ಇನ್ನಿತರ ಶಸ್ತ್ರಗಳಿಂದ ವಾಯುಮಾರ್ಗದಲ್ಲಿ ದೆಹಲಿ ಮೇಲೆ ನಡೆಯಬಹುದಾದ ದಾಳಿ ಎದುರಿಸಲು ಭಾರತೀಯ ರಕ್ಷಣಾ ಇಲಾಖೆ ಅಣಿಯಾಗುತ್ತಿದೆ.
 • ಸಂಭಾವ್ಯ ದಾಳಿ ಪತ್ತೆಹಚ್ಚಿ, ಧ್ವಂಸಗೊಳಿಸಬಲ್ಲ ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೆಸ್ ಟು ಏರ್ ಮಿಸೈಲ್ ಸಿಸ್ಟಮ್ –2 (ನಾಸಮ್್ಸ-2) ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಭದ್ರತಾ ಸ್ವಾಧೀನ ಸಮಿತಿ ಒಪ್ಪಿಗೆ ನೀಡಿದೆ.
 • ಅಮೆರಿಕ ನಿರ್ವಿುತ ವ್ಯವಸ್ಥೆ ಇದಾಗಿದ್ದು, ಬೆಲೆ 6862 ಕೋಟಿ ರೂ. ಆಗಿದೆ.
 • ಭದ್ರತೆ ಪರಿಷ್ಕರಣೆ: ಅತಿಗಣ್ಯರು ವಾಸವಾಗಿರುವ ‘ವಿಐಪಿ-89’ ಎಂದು ಗುರುತಿಸಲಾಗುವ ನವದೆಹಲಿಯ ರಾಷ್ಟ್ರಪತಿ ಭವನ, ಸಂಸತ್, ನಾರ್ತ್ ಮತ್ತು ಸೌತ್ ಬ್ಲಾಕ್​ಗಳಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆ ಮಾರ್ಪಡಿಸಲೂ ನಿರ್ಧರಿಸಲಾಗಿದೆ.
 • ದೆಹಲಿ ಏರಿಯಾ ಏರ್ ಡಿಫೆನ್ಸ್ ಪ್ಲಾನ್ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹೈಜಾಕ್ ಮಾಡಿರುವ ಅಥವಾ ಕ್ಷಿಪಣಿಯಂತೆ ದಾಳಿಗೆ ಬಳಸಲಾಗುವ ಪ್ರಯಾಣಿಕರ ವಿಮಾನ ಹಾಗೂ ವಾಣಿಜ್ಯ ವಿಮಾನಗಳನ್ನು ಹೊಡೆದುರುಳಿಸಲು ಸರ್ಕಾರ ಶೀಘ್ರ ಅನುಮತಿ ನೀಡಲಿದೆ.

ವಿಶೇಷತೆ ಏನು?

 • 3-ಡಿ ರೆಡಾರ್, ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು, ಉಡಾಹಕಗಳನ್ನು ಹೊಂದಿದೆ.
 • ಯುದ್ಧವಿಮಾನ, ಡ್ರೋನ್, ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ಪತ್ತೆಹಚ್ಚಿ ಹೊಡೆದುರುಳಿಸುತ್ತದೆ.
 • ಅಮೆರಿಕ, ಇಸ್ರೇಲ್, ಐರೋಪ್ಯ ಒಕ್ಕೂಟ ಸೇನೆಯಲ್ಲಿ ಈಗಾಗಲೇ ಬಳಕೆ. ಶತ್ರು ರಾಷ್ಟ್ರಗಳಿಂದ ದಾಳಿ ಸಾಧ್ಯತೆಯಿರುವ ಕಡೆ ನಿಯೋಜನೆ.

ಏನಿದು ನಾಸಮ್ಸ್​?

 • ನುಗ್ಗಿಬರುತ್ತಿರುವ ಕ್ಷಿಪಣಿಗಳನ್ನು ರೆಡಾರ್ ಸಹಾಯದಿಂದ ಪತ್ತೆ ಮಾಡಿ ಅವುಗಳನ್ನು ಹೊಡೆದುರುಳಿಸುವ ಮೂಲಕ ದಾಳಿ ವಿಫಲಗೊಳಿಸುವ ಅತ್ಯಾಧುನಿಕ ವ್ಯವಸ್ಥೆ ಇದು.

ದೇಶೀಯ ರಕ್ಷಕ ಶೀಘ್ರ ಸಿದ್ಧ

 • ಉಗ್ರರು ಮತ್ತು ಶತ್ರು ರಾಷ್ಟ್ರಗಳು ಮಹಾನಗರಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತವೆ. ಜನದಟ್ಟಣೆ ಹೆಚ್ಚಿರುವ ಕಾರಣ ದಾಳಿಯ ತೀವ್ರತೆ ಜೋರಾಗಿರುತ್ತದೆ. ಭಾರತದಲ್ಲಿ ಮುಂಬೈ, ನವದೆಹಲಿ ಮತ್ತು ಬೆಂಗಳೂರು ಹೆಚ್ಚಿನ ಜನಸಂಖ್ಯೆ ಇರುವ ಮಹಾನಗರ.
 • ಈ ದೃಷ್ಟಿಯಿಂದ ಕ್ಷಿಪಣಿ ದಾಳಿ ನಿಗ್ರಹ ವ್ಯವಸ್ಥೆ (ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಶೀಲ್ಡ್ -ಬಿಎಂಡಿ)ಯನ್ನು ದೇಶೀಯವಾಗಿಯೂ ಅಭಿವೃಧಿ್ಧಡಿಸಲಾಗುತ್ತಿದೆ. ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ದಲ್ಲಿ ಹೊಸ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತದಲ್ಲಿದೆ ಎನ್ನಲಾಗಿದೆ.
 • ಭೂಮಿಯ ವಾತಾವರಣದ ಹೊರಗೆ ಮತ್ತು ಒಳಗೆ ಪರಮಾಣು ಕ್ಷಿಪಣಿಗಳನ್ನು ಪತ್ತೆ ಮಾಡಿ ಹೊಡೆದುರುಳಿಸುವ ಸಾಮರ್ಥ್ಯ ಇದಕ್ಕಿದೆ. ಸಾಗರದ ಆಳದಲ್ಲಿನ ಜಲಾಂತರ್ಗಾಮಿಗಳನ್ನು ಹುಡುಕಿ ದಾಳಿ ಮಾಡುವ ಶಕ್ತಿಶಾಲಿ ಹೆಲಿಕಾಪ್ಟರ್ ರೋಮಿಯೋ ಖರೀದಿಗೂ ಭಾರತ ಮುಂದಾಗಿದೆ.
 • ಆದರೆ ಸೆಪ್ಟೆಂಬರ್​ಗೆ ನಿಗದಿಯಾಗಿರುವ 2+2 ಮಾತುಕತೆಯಲ್ಲಿ ರಷ್ಯಾದಿಂದ ಶಸ್ತ್ರಗಳ ಖರೀದಿ ಮತ್ತು ಇರಾನ್​ನಿಂದ ತೈಲ ಆಮದು ಬಗ್ಗೆ ಅಮೆರಿಕದ ನಿಲುವನ್ನು ಗಮನಿಸಿ ಬಳಿಕ ಹೆಲಿಕಾಪ್ಟರ್ ಖರೀದಿಗೆ ಹಸಿರು ನಿಶಾನೆ ತೋರಲು ಸರ್ಕಾರ ತೀರ್ವನಿಸಿದೆ ಎನ್ನಲಾಗಿದೆ.
 • ಎಂಎಚ್-60 ರೋಮಿಯೋ ಹೆಲಿಕಾಪ್ಟರ್​ಗಳ ಖರೀದಿಗಾಗಿ 13,725 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ ರಷ್ಯಾ ನಿರ್ವಿುತ ಕ್ಷಿಪಣಿ ದಾಳಿ ನಿಗ್ರಹ ವ್ಯವಸ್ಥೆ ‘ ಎಸ್-400 ಟ್ರಯಂಫ್ ’ ಖರೀದಿಸಲು ಭಾರತ ಉತ್ಸುಕವಾಗಿದೆ. ಇದಕ್ಕೆ ಸುಮಾರು 39 ಸಾವಿರ ಕೋಟಿ ರೂ. ಖರ್ಚಾಗಲಿದೆ.
Related Posts
National Current Affairs – UPSC/KAS Exams- 11th February 2019
Nirbhaya fund Topic: Social Justice In News: A parliamentary panel, headed by Congress leader P. Chidambaram, has taken strong exception to the utilisation of the Nirbhaya Fund for the construction of buildings, ...
READ MORE
National Current Affairs – UPSC/KAS Exams- 1st January 2019
Central Information Commission (CIC) Topic: Polity and Governance IN NEWS: The government has appointed Sudhir Bhargava the new Chief Information Commissioner. Four new members have also been appointed to the Central Information ...
READ MORE
Karnataka Current Affairs – KAS / KPSC Exams – 14th July 2017
From this year, Kannada is compulsory in all schools Starting this academic year, students will be taught Kannada in all schools in the State, including private, linguistic minority and Central board ...
READ MORE
Karnataka Current Affairs – KAS/KPSC Exams – 29th October 2018
Air quality takes a hit during Dasara The air quality in Mysuru had reached ‘harmful’ levels during the Dasara celebrations in the city. The PM10 (Particulate Matter 10 Micrometers) value had reached ...
READ MORE
Karnataka Current Affairs – KAS / KPSC Exams – 5th June 2017
Community health officers to help mitigate problem of doctors shortage Mysuru Medical College and Research Institute (MMCRI) is one among the two medical institutions in the State selected by the Ministry ...
READ MORE
There are several antiquated, discriminatory provisions in the Indian laws violating the rights of leprosy affected persons. For instance, in the Hindu Marriage Act, 1955 (Section 13 (v)), if one party ...
READ MORE
16th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಸ್ವಚ್ಛ ಗ್ರಾಮ ಸಮೀಕ್ಷೆ ಸುದ್ಧಿಯಲ್ಲಿ ಏಕಿದೆ? ನಗರ ಪ್ರದೇಶಗಳಲ್ಲಿ ಸ್ವಚ್ಛ ಸರ್ವೆಕ್ಷಣೆ ನಡೆಸಿದ್ದ ಕೇಂದ್ರ ಸರ್ಕಾರ ಗ್ರಾಮೀಣ ಭಾರತದಲ್ಲಿಯೂ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ದೇಶದ ಎಲ್ಲ ಜಿಲ್ಲೆಗಳಲ್ಲಿ ಸ್ವತಂತ್ರ ಸಂಸ್ಥೆಯಿಂದ ಆಗಸ್ಟ್ 1ರಿಂದ 31ರವರೆಗೆ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಯ ಫಲಿತಾಂಶವನ್ನು ಅಕ್ಟೋಬರ್ 2ರಂದು ...
READ MORE
India is home to the largest child population in the world, with almost 42 per cent of the total population under eighteen years of age One of the issues marring this ...
READ MORE
National Current Affairs – UPSC/KAS Exams- 1st November 2018
India moves up to 77th rank in Ease of Doing Business Index Topic: Indian Economy IN NEWS: India jumped 23 ranks in the World Bank's Ease of Doing Business Index 2018 to ...
READ MORE
Domestic Efficient Lighting Programme (DELP) and Hosa Belaku scheme
State reaches 8-lakh mark in LED bulb sales As the number of LED bulbs sold in the country under the Domestic Efficient Lighting Programme (DELP) touched the 5-crore mark, Karnataka stood ...
READ MORE
National Current Affairs – UPSC/KAS Exams- 11th February
National Current Affairs – UPSC/KAS Exams- 1st January
Karnataka Current Affairs – KAS / KPSC Exams
Karnataka Current Affairs – KAS/KPSC Exams – 29th
Karnataka Current Affairs – KAS / KPSC Exams
Antiquated Indian laws affecting Leprosy
16th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Protection of Children from Sexual Offences
National Current Affairs – UPSC/KAS Exams- 1st November
Domestic Efficient Lighting Programme (DELP) and Hosa Belaku

Leave a Reply

Your email address will not be published. Required fields are marked *