“5th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ಸ್ವಚ್ಚ ಭಾರತ್‌’

 • ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ‘ಸ್ವಚ್ಚ ಭಾರತ್‌’ ಯೋಜನೆಯ ನೈಜತೆ ತಿಳಿಯಲು 76ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ(ಎನ್‌ಎಸ್‌ಎಸ್‌)ಗೆ ಚಾಲನೆ ದೊರೆತಿದೆ.

ಎಲ್ಲಿ ಮತ್ತು ಯಾವುದರ ಬಗ್ಗೆ ಮಾಹಿತಿ ಸಂಗ್ರಹ ?

 • ದೇಶಾದ್ಯಂತ ಜು.1ರಿಂದ ಆರಂಭವಾಗಿರುವ ಸಮೀಕ್ಷೆ ಕರ್ನಾಟಕದಲ್ಲಿ ಸದ್ಯದಲ್ಲೇ ಅಧಿಕೃತವಾಗಿ ಕಾರ್ಯಾಚರಣೆ ನಡೆಸಲಿದೆ. ಈ ಬಾರಿ ಕುಡಿಯುವ ನೀರು, ಸ್ವಚ್ಚತೆ, ಮನೆಗಳ ಸ್ಥಿತಿ ಹಾಗೂ ವಿಶೇಷಚೇತನರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.
 • ಕರ್ನಾಟಕದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲಿದೆ. ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಆಯ್ದ ತಲಾ 410 ಹಳ್ಳಿಗಳಲ್ಲಿ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಲಾಗುತ್ತದೆ.

ಏಕೆ ಈ ಮಾಹಿತಿ ಸಂಗ್ರಹ?

 • ಕಳೆದ ಆರು ವರ್ಷದಿಂದೀಚಿಗೆ ಸ್ವಚ್ಚ ಭಾರತ್‌ ಅಭಿಯಾನ ಯೋಜನೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಯೋಜನೆಯಿಂದ ಜನರ ಜೀವನದ ಸುಧಾರಣೆ ಹಾಗೂ ಶೌಚಾಲಯಗಳ ಬಳಕೆ ಕುರಿತು ಸ್ಪಷ್ಟ ಮಾಹಿತಿ ಸಂಗ್ರಹಿಸಲಾಗುತ್ತದೆ.
 • ಎರಡೂ ಸರಕಾರಗಳು ನೈರ್ಮಲ್ಯಕ್ಕೆ ಒತ್ತು ನೀಡಿರುವುದರಿಂದ ಜನರಿಗೆ ಅಗತ್ಯ ಸೌಕರ್ಯ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬ ಅಂಶವನ್ನು ಸಂಗ್ರಹಿಸಲಾಗುತ್ತದೆ.

ಮಾರ್ಚ್‌ನಲ್ಲಿ ವರದಿ ಬಿಡುಗಡೆ 

 • ವರ್ಷಾಂತ್ಯದೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ. ಮುಂದಿನ ಮಾರ್ಚ್‌ ವೇಳೆಗೆ ವರದಿ ಸಿದ್ಧಗೊಂಡು ನಂತರ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಕ್ರೋಡೀಕೃತ ವರದಿಯನ್ನು ಕೇಂದ್ರವೇ ಅಧಿಕೃತವಾಗಿ ಬಿಡುಗಡೆ ಮಾಡಲಿದೆ

ಹಿನ್ನಲೆ

 • ‘2011-12ರಲ್ಲಿ ಕೈಗೊಂಡಿದ್ದ ಸಮೀಕ್ಷೆ ವೇಳೆ ನೈರ್ಮಲ್ಯದ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು. ಅದರನ್ವಯ ಗ್ರಾಮೀಣ ಪ್ರದೇಶದ ಶೇ.59ರಷ್ಟು ಹಾಗೂ ನಗರ ಪ್ರದೇಶದ ಶೇ.8ರಷ್ಟು ಕುಟುಂಬಗಳಲ್ಲಿ ಶೌಚಾಲಯ ಸೌಲಭ್ಯದಿಂದ ವಂಚಿತವಾಗಿದ್ದವು. ಜತೆಗೆ ಗ್ರಾಮೀಣದಲ್ಲಿ ಶೇ.20 ಹಾಗೂ ನಗರದಲ್ಲಿ ಶೇ. 2.3ರಷ್ಟು ಕುಟುಂಬಗಳಲ್ಲಿ ವಿದ್ಯುತ್‌ ಸೌಲಭ್ಯ ಇರಲಿಲ್ಲ ಎಂಬುದು ಪತ್ತೆಯಾಗಿತ್ತು.

ಪಾರ್ಕರ್‌ ಸೋಲಾರ್‌ ಪ್ರೋಬ್‌

 • ಸುದ್ದಿಯಲ್ಲಿ ಏಕಿದೆ? ವಿಶ್ವದಲ್ಲೇ ಮೊದಲ ಬಾರಿಗೆ ಸೂರ್ಯನನ್ನು ಸ್ಪರ್ಶಿಸುವ ಬಾಹ್ಯಾಕಾಶ ಯಾನವನ್ನು ನಾಸಾ ಕೈಗೊಂಡಿದೆ. ಮುಂದಿನ ವಾರದಲ್ಲೇ ಬಾಹ್ಯಾಕಾಶ ನೌಕೆ ಉಡಾವಣೆಗೊಳಲ್ಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
 • ಈ ಯೋಜನೆಗೆ ಪಾರ್ಕರ್‌ ಸೋಲಾರ್‌ ಪ್ರೋಬ್‌ ಎಂದು ಹೆಸರಿಸಲಾಗಿದ್ದು, ಸೂರ್ಯನ ಮೇಲ್ಮೈ ಲಕ್ಷಣಗಳ ಅಧ್ಯಯನದ ಗುರಿ ಹೊಂದಲಾಗಿದೆ.
 • ಬಹಳ ಹಿಂದಿನಿಂದಲೂ ಇಂತಹದೊಂದು ಮಹತ್ವಾಕಾಂಕ್ಷಿ ಯೋಜನೆಗೆ ವಿಜ್ಞಾನಿಗಳು ಯೋಜನೆ ರೂಪಿಸುತ್ತಿದ್ದರು. ಸೂರ್ಯನ ತಾಪಮಾನವನ್ನು ಸಹಿಸಿ ಮುನ್ನುಗ್ಗಲು ನೌಕೆಗೆ ಶಕ್ತಿಶಾಲಿ ಶೀಲ್ಡ್‌ ಸೇರಿದಂತೆ ಮತ್ತಿತರ ಉಪಕರಣಗಳ ಅಗತ್ಯವಿತ್ತು.

ಬಾಹ್ಯಾಕಾಶ ನೌಕೆಯ  ವಿವರಣೆ

 • ಬಾಹ್ಯಾಕಾಶ ನೌಕೆಯು ಒಂದು ಕಾರಿನ ಗಾತ್ರದಷ್ಟು ದೊಡ್ಡದಾಗಿದ್ದು, ನೇರವಾಗಿ ಸೂರ್ಯನ ಕಕ್ಷೆಯನ್ನು ಪ್ರವೇಶಿಸಲಿದೆ.
 • ಕಕ್ಷೆಯೊಳಗೆ ಸುಮಾರು 40 ಲಕ್ಷ ಮೈಲಿಯಷ್ಟು ಒಳನುಸುಳಲಿದೆ. ಎಷ್ಟು ಸಮೀಪಿಸಲಿದೆ ಎಂದರೆ, ಇದುವರೆಗೆ ಸೂರ್ಯನ ಅತ್ಯಂತ ಸಮೀಪಕ್ಕೆ ತಲುಪಿದ ನೌಕೆಗಳ 7 ಪಟ್ಟು ಹೆಚ್ಚು ಸೂರ್ಯನ ಹತ್ತಿರಕ್ಕೆ ತಲುಪಲಿದೆ.
 • ಅತ್ಯಂತ ಉತ್ಕೃಷ್ಟ ಶೀಲ್ಡ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಥರ್ಮಲ್‌ ಪ್ರೊಟೆಕ್ಷನ್‌ ವ್ಯವಸ್ಥೆಯಲ್ಲಿ ಇದೊಂದು ಕ್ರಾಂತಿ ಎಂದೆನಿಸಲಿದೆ.
 • ಆಗಸ್ಟ್‌ 11ಕ್ಕೆ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ಯೋಜನೆ ರೂಪಿಸಲಾಗಿದೆ. ಜುಲೈ 30ರಂದು ಬಾಹ್ಯಾಕಾಶ ನೌಕೆಯನ್ನು ಕೇಪ್‌ ಕನವೆರಲ್‌ನ ಲಾಂಚ್‌ ಕಾಂಪ್ಲೆಕ್ಸ್‌ 37′ ಉಡಾವಣಾ ನಿಲ್ದಾಣಕ್ಕೆ ತರಲಾಗಿದೆ

ಉದ್ದೇಶ 

 • ಪ್ರಕಾಶಮಾನವಾಗಿ ಬೆಳಗುವ ಸೂರ್ಯನಿಗೆ ಚಂದ್ರನು ಸಂಪೂರ್ಣವಾಗಿ ಅಡ್ಡ ಬಂದಾಗ, ಅಂದರೆ ಪೂರ್ಣ ಸೂರ್ಯ ಗ್ರಹಣ ಸಂಭವಿಸಿದಾಗ ಮಾತ್ರ ಭೂಮಿಯಿಂದ ವೀಕ್ಷಿಸಲು ಸಾಧ್ಯವಾಗುವ ಸೂರ್ಯನ ಮೇಲ್ಮೈ (ಕೊರೊನಾ) ಬಗ್ಗೆ ಮಹತ್ವದ ಸಂಗತಿಗಳನ್ನು ಪಾರ್ಕರ್‌ ಸೋಲಾರ್‌ ಪ್ರೋಬ್‌ ಬಯಲು ಮಾಡಲಿದೆ.

ಕ್ಲೌಡ್ ಸ್ಟೋರೇಜ್‌ ಡೇಟಾ ಕರಡು ನೀತಿ

 • ಸುದ್ದಿಯಲ್ಲಿ ಏಕಿದೆ? ಭಾರತದಲ್ಲಿ ಉತ್ಪಾದಿಸಲಾದ ಡೇಟಾಗಳನ್ನು ದೇಶದೊಳಗೇ ಸಂಗ್ರಹಿಸಿ ಇಡಬೇಕು ಎಂದು ಸರಕಾರದ ಕ್ಲೌಡ್ ಕಂಪ್ಯೂಟಿಂಗ್‌ ನೀತಿಯ ಕರಡಿನಲ್ಲಿ ಸ್ಪಷ್ಟಪಡಿಸಲಾಗಿದೆ.
 • ಸರಕಾರ ಡೇಟಾ ಸುರಕ್ಷತಾ ಕಾಯ್ದೆಯನ್ನು ಅಂತಿಮಗೊಳಿಸುತ್ತಿದ್ದು, ದೇಶದೊಳಗಿನ ಡೇಟಾವನ್ನು ಸ್ಥಳೀಯವಾಗಿಯೇ ಸಂಗ್ರಹಿಸಿಡುವ ಅನಿವಾರ್ಯತೆ ಸೃಷ್ಟಿಸಲಿದೆ. ಡಿಜಿಟಲ್‌ ಪಾವತಿಗಳು ಮತ್ತು ಇ-ಕಾಮರ್ಸ್‌ ವಲಯಗಳಿಗೂ ಸ್ಥಳೀಯವಾಗಿಯೇ ಡೇಟಾ ಸಂಗ್ರಹಿಸಿಡುವುದನ್ನು ಕಡ್ಡಾಯಗೊಳಿಸಲು ಸರಕಾರ ಉದ್ದೇಶಿಸಿದೆ.
 • ಸ್ಥಳೀಯವಾಗಿಯೇ (ದೇಶದ ಒಳಗೆ) ಡೇಟಾ ಸಂಗ್ರಹವಾಗಿದ್ದರೆ, ಅಪರಾಧ ತನಿಖೆಗಳ ಸಂದರ್ಭದಲ್ಲಿ ಅಧಿಕಾರಿಗಳು ಸುಲಭವಾಗಿ ಅವುಗಳನ್ನು ಪಡೆಯಬಹುದಾಗಿದೆ.

ಕಾರಣ

 • ಕಂಪನಿಗಳು ಬಳಕೆದಾರರ ಡೇಟಾವನ್ನು ಯಾವ ರೀತಿ ಸಂಗ್ರಹಿಸುತ್ತವೆ ಮತ್ತು ಬಳಸಿಕೊಳ್ಳುತ್ತವೆ ಎಂಬುದರ ಮೇಲೆ ಜಾಗತಿಕವಾಗಿ ನಿಗಾವಣೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಭಾರತ ಸರಕಾರ ಸ್ಥಳೀಯವಾಗಿ ಡೇಟಾ ಸಂಗ್ರಹಣೆಗೆ ಮುಂದಾಗಿದೆ.
 • ಕೇಂಬ್ರಿಡ್ಜ್‌ ಅನಾಲಿಟಿಕಾ ಮತ್ತು ಫೇಸ್‌ಬುಕ್‌ಗಳು ಬಳಕೆದಾರರ ಡೇಟಾವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಅಮೆರಿಕದ ಫೆಡರಲ್ ಪೊಲೀಸರು ತನಿಖೆ ಆರಂಭಿಸಿರುವಂತೆಯೇ, ಭಾರತೀಯ ಬಳಕೆದಾರರ ಡೇಟಾ ಕೂಡ ಸೋರಿಕೆಯಾಗಿರುವ ಬಗ್ಗೆ ಸರಕಾರ ಸಂದೇಹ ವ್ಯಕ್ತಪಡಿಸಿದೆ.

ಶೀಘ್ರ ವರದಿ ಸಲ್ಲಿಕೆ:

 • ಇನ್ಫೋಸಿಸ್‌ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್‌ ಅಧ್ಯಕ್ಷತೆಯ ಕ್ಲೌಡ್‌ ಕಂಪ್ಯೂಟಿಂಗ್‌ ಕುರಿತ ನೀತಿ ರಚನಾ ಸಮಿತಿ ತನ್ನ ಕರಡು ವರದಿಯನ್ನು ಶೀಘ್ರವೇ ಸರಕಾರಕ್ಕೆ ಸಲ್ಲಿಸಲಿದೆ.
 • ಭಾರತದ ಐಟಿ ಕಾಯ್ದೆಯಲ್ಲಿ ಪ್ರಸ್ತುತ ಕ್ಲೌಡ್‌ ಕಂಪ್ಯೂಟಿಂಗ್‌ ಕುರಿತ ಸುರಕ್ಷತಾ ನಿಯಮಗಳು ಸೇರ್ಪಡೆಯಾಗಿಲ್ಲ. ಹೀಗಾಗಿ ಡೇಟಾ ಸಂರಕ್ಷಣೆ ಬಗ್ಗೆ ಮುನ್ನೋಟದ ನೀತಿ ಅಗತ್ಯವಿದೆ ಎಂದು ಸಮಿತಿ ಪ್ರತಿಪಾದಿಸಿದೆ.
 • ‘ಭಾರತದಲ್ಲೇ ಸೃಷ್ಟಿಸಲಾದ ಡೇಟಾಗಳು ಅಥವಾ ಭಾರತೀಯ ಕಂಪನಿಗಳ ಡೇಟಾಗಳು ಭಾರತದಲ್ಲೇ ಸಂಗ್ರಹಣೆಯಾಗಬೇಕು. ಕ್ಲೌಡ್ ಕಂಪ್ಯೂಟಿಂಗ್‌ ವ್ಯವಸ್ಥೆಯನ್ನು ಸ್ಥಳೀಯವಾಗಿಸಬೇಕು. ತನಿಖಾ ಸಂಸ್ಥೆಗಳು ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆಗಳಿಗೆ ಅಗತ್ಯ ಬಿದ್ದಾಗ ತನಿಖೆಗೆ ಈ ಡೇಟಾ ಲಭ್ಯವಾಗಬೇಕು’ ಎಂದು ಸಮಿತಿ ಶಿಫಾರಸು ಮಾಡಿದೆ.

ಏನಿದು ಕ್ಲೌಡ್ ಕಂಪ್ಯೂಟಿಂಗ್‌?:

 • ಬಳಕೆದಾರರು ದೂರದ ಡೇಟಾ ಸೆಂಟರ್‌ಗಳಿಂದಲೇ ಸ್ಟೋರೇಜ್‌ ಮತ್ತು ಇತರ ಸೇವೆಗಳನ್ನು ಪಡೆದುಕೊಳ್ಳುವ ಒಂದು ಸಾಫ್ಟ್‌ವೇರ್ ಆಧರಿತ ತಂತ್ರಜ್ಞಾನವಾಗಿದೆ. ಗ್ರಾಹಕರ ಸ್ವಂತ ಕಂಪ್ಯೂಟರ್‌ಗಳಲ್ಲಿ ಪ್ರೋಗ್ರಾಂಗಳು ಮತ್ತು ಡೇಟಾ ಸಂಗ್ರಹವಾಗದ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದಲ್ಲಿ ಪ್ರೋಗ್ರಾಂಗಳನ್ನು ಬಳಸಿಕೊಳ್ಳಲು ಇದು ಅವಕಾಶ ನೀಡುತ್ತದೆ.
 • ಪ್ರಸ್ತುತ ಭಾರತದ ಹಲವು ಉದ್ಯಮ ಸಂಸ್ಥೆಗಳು ತಮ್ಮ ಡೇಟಾವನ್ನು ದೇಶದ ಹೊರಗಿನ ಕ್ಲೌಡ್ ಸರ್ವರ್‌ಗಳಲ್ಲಿ ಸಂಗ್ರಹಿಸಿ ಇಡುತ್ತಿವೆ. ಸ್ಥಳೀಕರಣವನ್ನು ಕಡ್ಡಾಯಗೊಳಿಸಿದ ಬಳಿಕ ಈ ಕಂಪನಿಗಳು ದೇಶದೊಳಗೆ ಡೇಟಾ ಸಂಗ್ರಹಣಾ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ.

ಮೂಲಸೌಕರ್ಯದ ಸವಾಲು:

 • 2022ರ ವೇಳೆಗೆ ಭಾರತದ ಸಾರ್ವಜನಿಕ ಕ್ಲೌಡ್ ಸೇವೆಗಳ ಮಾರುಕಟ್ಟೆ ವಹಿವಾಟು 700 ಕೋಟಿ ಡಾಲರ್‌ಗಳಿಗೆ ತಲುಪುವ ನಿರೀಕ್ಷೆಯಿದೆ. ಉದ್ಯಮ ವಲಯವು ಮೂಲ ಸೌಕರ್ಯದ ಸಾಫ್ಟ್‌ವೇರ್‌ಗಳಿಗೆ ಮಾಡುವ ವೆಚ್ಚ 2018ರ ಅಂತ್ಯದ ವೇಳೆಗೆ ಶೇ 10ರಷ್ಟು ಏರಿಕೆಯಾಗಲಿದ್ದು, 360 ಕೋಟಿ ಡಾಲರ್‌ ತಲುಪಲಿದೆ ಎಂದು ಗಾರ್ಟನರ್‌ ಎಸ್ಟಿಮೇಟ್ಸ್‌ ಸಂಶೋಧನಾ ಸಂಸ್ಥೆ ಅಂದಾಜಿಸಿದೆ.

ವಾಹನ ಕಾಯ್ದೆ

 • ಸುದ್ದಿಯಲ್ಲಿ ಏಕಿದೆ? ಮಧ್ಯವರ್ತಿಗಳ ಹಾವಳಿ ಹಾಗೂ ಇಲಾಖೆಯಲ್ಲಿ ಬೇರೂರಿರುವ ಭಾರಿ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ.

ಹೊಸ ತಿದ್ದುಪಡಿ ಮಸೂದೆಯಲ್ಲಿ ಏನಿದೆ?

 • ಚಾಲನಾ ಪರವಾನಗಿಗೆ (ಡಿಎಲ್) ಸ್ಥಳೀಯ ಆರ್​ಟಿಒ ಕಚೇರಿಗೆ ತೆರಳುವುದು ಬೇಡ. ರಾಜ್ಯದ ಯಾವುದೇ ಮೂಲೆಯಿಂದ ಬೇಕಾದರೂ ಡಿಎಲ್ ಪಡೆಯಬಹುದು.
 • ಕಲಿಕೆ ಪರವಾನಗಿ (ಎಲ್​ಎಲ್​ಆರ್) ಆನ್​ಲೈನ್​ನಿಂದ ಪಡೆಯಬಹುದು. ಪರೀಕ್ಷೆ ಸಂದರ್ಭ ಮಾತ್ರ ವಾಹನದೊಂದಿಗೆ ಖುದ್ದು ಹಾಜರಾದರೆ ಸಾಕು.
 • ಹೊಸ ವಾಹನಗಳನ್ನು ರಾಜ್ಯದ ಯಾವ ನಗರದಲ್ಲಿ ಬೇಕಾದರೂ ನೋಂದಣಿ ಮಾಡಿಸಬಹುದು. ವಾಹನದ ಡೀಲರ್ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
 • 18 ವರ್ಷಕ್ಕಿಂತ ಕಡಿಮೆ ವಯಸ್ಕರು ಅಥವಾ ಡಿಎಲ್ ಇಲ್ಲದವರು ವಾಹನ ಚಾಲನೆ ವೇಳೆ ಟ್ರಾಫಿಕ್ ಪೊಲೀಸ್​ಗೆ ಸಿಕ್ಕಿಬಿದ್ದರೆ ಕಡ್ಡಾಯವಾಗಿ ವಾಹನದ ನೋಂದಣಿ ರದ್ದು. ವಾಹನ ಅಪಘಾತವಾದರೆ ಭಾರಿ ದಂಡ ಹಾಗೂ ನೋಂದಣಿ ಒಂದು ವರ್ಷದವರೆಗೆ ರದ್ದು.
 • ಸಿಗ್ನಲ್​ಗಳಲ್ಲಿ ಪಾದಚಾರಿ ಮಾರ್ಗದ ಮೇಲೆ ಮೋಟಾರ್ ವಾಹನ ನಿಂತಿದ್ದರೆ ಭಾರಿ ದಂಡ.
 • ಟ್ರಾಫಿಕ್​ನ ವಿರುದ್ಧ ದಿಕ್ಕಿಗೆ ವಾಹನ ಚಲಾಯಿಸಿಕೊಂಡು ಬರುವವರಿಗೆ ದಂಡ.

Related Posts
What Is Rare Earth Element [REE] Rare earth metals are a set of seventeen chemical elements in the periodic table, specifically the fifteen lanthanides plus scandium and yttrium Why They Are Called ...
READ MORE
National Current Affairs – UPSC/KAS Exams- 26th July 2018
Voter Verifiable Paper Audit Trail (VVPAT) Why in new? The Election Commission said all VVPATs would be delivered well within the time required for preparations ahead of the 2019 Lok Sabha poll. About ...
READ MORE
Karnataka Current Affairs – KAS / KPSC Exams – 24th June 2017
Forest dept to take up seed ball dispersal in big afforestation drive The Forest department has decided to rope in citizens in a big way in afforestation to take up seed ...
READ MORE
Doctor giving an injection to a farmer, Hasanpur, Haryana, India
Govt's plan worked: Specialist doctors bid for rural service The government’s attempt to get specialist doctors to name their price to work in the villages is yielding good results. The Health department ...
READ MORE
“14th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ರಾಜ್ಯ ಯೋಜನಾ ಆಯೋಗ ಸುದ್ದಿಯಲ್ಲಿ ಏಕಿದೆ? ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರನ್ನು ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ರಾಜ್ಯ ಯೋಜನಾ ಮಂಡಳಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ರಾಜ್ಯ ಯೋಜನಾ ಆಯೋಗದ ಕಾರ್ಯಗಳು ಸಂಪನ್ಮೂಲಗಳ ಮೌಲ್ಯಮಾಪನ ಮತ್ತು ...
READ MORE
Karnataka Budget 2017- 2018 – Highlights
Siddaramaiah, who presented the state budget proposals for 2017-18 in the Assembly on 15th March, tried to explain the financial constraints his government faces because of a sluggish economy. This has ...
READ MORE
Karnataka Current Affairs – KAS / KPSC Exams 20th May 2017
BDA to maintain 379.22 acres as public space The Cabinet has given approval for handing over to BDA 379.22 acres of land comprising tankbed, gomal and government land in Arkavathy and ...
READ MORE
Kerala becomes first State in India to roll out LNG-powered bus
A new chapter in the country’s transport sector has been initiated which moves towards clean fuel, India’s first liquefied natural gas-driven bus was launched in Kerala. Union Petroleum and Natural Gas ...
READ MORE
National Current Affairs – UPSC/KAS Exams- 31st August 2018
Project Navlekha Why in news? Google has unveiled Project Navlekha to make online content relevant for more Indian users especially in local languages. About Project Navlekha Google is using its expertise in artificial ...
READ MORE
Bank consolidation India’s largest lender State Bank of India (SBI) formally started merger of 5 associative banks and Bharatiya Mahila Bank with itself. The merged entity will have India’s one-fourth of ...
READ MORE
Rare Earth Element [REE]
National Current Affairs – UPSC/KAS Exams- 26th July
Karnataka Current Affairs – KAS / KPSC Exams
Karnataka Current Affairs – KAS / KPSC Exams
“14th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Budget 2017- 2018 – Highlights
Karnataka Current Affairs – KAS / KPSC Exams
Kerala becomes first State in India to roll
National Current Affairs – UPSC/KAS Exams- 31st August
All you need to know- Bank consolidation

Leave a Reply

Your email address will not be published. Required fields are marked *