“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಪ್ರಮುಖ ಔಷಧಿಗಳ ಬ್ಯಾನ್‌

ಸುದ್ಧಿಯಲ್ಲಿ ಏಕಿದೆ ? 28 ಸ್ಥಿರ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್‌ ಮಾಡಿದೆ.

 • ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದ್ದು, ಇತರೆ 6 ಔಷಧವನ್ನು ನಿರ್ಬಂಧಿಸಿದೆ. ಇದರಿಂದ 2016ರಿಂದ ಸಂಯೋಜನೆಯ ಔಷಧಿಗಳು ಹಾಗೂ ಆರೋಗ್ಯ ಸಚಿವಾಲಯದ ನಡುವೆ ನಡೆಯುತ್ತಿದ್ದ ಸುದೀರ್ಘ ಕಾನೂನು ಸಮರಕ್ಕೆ ಅಂತ್ಯ ಹಾಡಿದೆ.
 • ಈ ಬ್ಯಾನ್‌ನಿಂದಾಗಿ ಸುಮಾರು 6 ಸಾವಿರ ಬ್ರ್ಯಾಂಡ್‌ಗಳಿಗೆ ನಿಷೇಧದ ಎಫೆಕ್ಟ್‌ ತಗುಲಲಿದೆ೩. ಈ ಪೈಕಿ ನೋವು ನಿವಾರಕ ಸ್ಯಾರಿಡಾನ್, ಚರ್ಮದ ಕ್ರೀಮ್‌ ಪ್ಯಾಂಡರ್ಮ್, ಸಂಯೋಜನೆಯ ಡಯಾಬಿಟಿಸ್ ಡ್ರಗ್ ಗ್ಲುಕೋನಾರ್ಮ್ ಪಿಜಿ ಸೇರಿ ಪ್ರಮುಖ ಡೋಸ್‌, ಕ್ರೀಮ್‌ಗಳಿಗೆ ನಿಷೇಧ ಹೇರಲಾಗಿದೆ.

ಹಿನ್ನಲೆ

 • ಮಾರ್ಚ್ 10, 2016ರಂದು ಕೇಂದ್ರ ಸರಕಾರ ಸ್ಥಿರ ಸಂಯೋಜನೆಯ 344 ಡ್ರಗ್ಸ್‌ಗಳನ್ನು ಬ್ಯಾನ್‌ ಮಾಡಿತ್ತು. ನಂತರ, ಮತ್ತೆ 5 ಔಷಧಿಯನ್ನು ಆ ಪಟ್ಟಿಗೆ ಸೇರಿಸಿತ್ತು. ಆದರೆ, ಆ ಔಷಧ ತಯಾರಕರು ಹಲವು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಿದ್ದರು. ನಂತರ, ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿ ಈ ವಿಚಾರವನ್ನು ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟ್ ಡಿಸೆಂಬರ್ 15, 2017ರಂದು ಸೂಚನೆ ನೀಡಿತ್ತು. ಈ ಸಂಯೋಜಿತ ಔಷಧಗಳಿಂದ ಜನರಿಗೆ ತೊಂದರೆಯಾಗಬಹುದು. ಹೀಗಾಗಿ, 328 ಸ್ಥಿರ ಸಂಯೋಜನೆಯ ಡ್ರಗ್ಸ್‌ಗಳನ್ನು ಬ್ಯಾನ್‌ ಮಾಡಬಹುದೆಂದು ಶಿಫಾರಸು ಮಾಡಿತ್ತು.
 • ಇನ್ನು, 6 ಡ್ರಗ್ಸ್‌ಗಳ ತಯಾರಿಕೆ, ಮಾರಾಟವನ್ನು ನಿರ್ಬಂಧ ವಿಧಿಸಲು ಸಹ ಶಿಫಾರಸು ಮಾಡಿತ್ತು. ಇನ್ನೊಂದೆಡೆ, 15 ಔಷಧಗಳು ಭಾರತದಲ್ಲಿ 1988ಕ್ಕಿಂತ ಮೊದಲಿನಿಂದಲೇ ಭಾರತದಲ್ಲಿ ತಯಾರಾಗುತ್ತಿದೆ. ಹೀಗಾಗಿ ಅವುಗಳಿಗೆ ನಿಬಂಧ ವಿಧಿಸುವುದು ಸರಿಯಲ್ಲ ಎಂದು ಆದೇಶ ನೀಡಿತ್ತು. ಆದರೂ, ಅವುಗಳ ಸುರಕ್ಷತೆ ಬಗ್ಗೆ ಪರಿಶೀಲಿಸಿ ಎಂದು ಆರೋಗ್ಯ ಸಚಿವಾಲಯಕ್ಕೆ ತಿಳಿಸಿತ್ತು.
 • ಸೆಕ್ಷನ್ 26 ಎ ಮತ್ತು 2017ರ ಔಷಧ ಮತ್ತು ಕಾಸ್ಮೇಟಿಕ್ ಕಾಯಿದೆ ಅಡಿಯಲ್ಲಿ ಇಂತಹ ಎಫ್​ಡಿಸಿ ಔಷಧಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ಅವಶ್ಯಕವಾಗಿ ನಿಷೇಧಿಸಬೇಕು ಎಂದು ಮಂಡಳಿ ಸಲಹೆ ನೀಡಿತ್ತು.
 • ಮತ್ತೊಂದು ಪರಿಣಿತರ ಸಮಿತಿಯೂ ಈ ಬಗ್ಗೆ ತನ್ನ ಶಿಫಾರಸು ನೀಡಿ, ಇಂತಹ ಔಷಧಗಳು ಅಸಂಬದ್ಧವಾಗಿದ್ದು, ಇದರಲ್ಲಿ ಯಾವುದೇ ರಕ್ಷಣೆಯಿಲ್ಲ. ಅಲ್ಲದೆ, ಇವು ಚಿಕಿತ್ಸಕ ಸಮರ್ಥನೆಯ ಕೊರತೆಯನ್ನು ಎದುರಿಸುತ್ತಿವೆ ಎಂದು ಔಷಧ ತಾಂತ್ರಿಕ ಸಲಹಾ ಮಂಡಳಿ ಶಿಫಾರಸಿಗೆ ಸಹಮತ ವ್ಯಕ್ತಪಡಿಸಿತ್ತು.

ಪರಿಣಾಮ

 • ಒಟ್ಟಾರೆ 328 ಸ್ಥಿರ ಸಂಯೋಜನೆಯ ಔಷಧಿಗಳ ಬ್ಯಾನ್‌ನಿಂದಾಗಿ ಔಷಧ ಮಾರುಕಟ್ಟೆಗೆ 2500 ಕೋಟಿ ರೂ. ಗಳಷ್ಟು ಹೊಡೆತ ಬೀಳಲಿದೆ ಎಂದು ತಿಳಿದುಬಂದಿದೆ. ಆದರೆ, ಬ್ಯಾನ್‌ ಬಗ್ಗೆ ಮಾತನಾಡಿರುವ ಔಷಧ ತಯಾರಕ ಕಂಪನಿಗಳು, ಕಳೆದ 2 ವರ್ಷಗಳಿಂದ ಬಹುತೇಕ ಔಷಧಗಳ ಸಂಯೋಜನೆಯನ್ನು ನಾವು ಈಗಾಗಲೇ ಬದಲಾವಣೆ ಮಾಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಎಫ್​ಡಿಸಿ(FDC- Fixed Dose Combination)

 • ಎರಡು ಮೂರು ಔಷಧಗಳನ್ನು ಸೇರಿಸಿ ಒಂದೇ ಔಷಧವನ್ನಾಗಿ ಮಾಡುವುದನ್ನು ಎಫ್​ಡಿಸಿ ಎಂದು ಕರೆಯಲಾಗುತ್ತದೆ.
 • ಉದಾಹರಣೆಗೆ ಎಚ್ಐವಿ ಔಷಧಿ ಅಟ್ರಿಪ್ಲಾದಲ್ಲಿ ಇಫವೈರೆನ್ಜ್, ಎಮ್ಟ್ರಿಟೈಟೈನ್ ಮತ್ತು ಟೆನೋಫೋವಿರ್ ಡಿಸ್ಪ್ರೊಕ್ಸಿಲ್ ಫ್ಯೂಮರೇಟ್ ಸಂಯೋಜನೆಗೊಂಡಿರುತ್ತದೆ. ಒಬ್ಬ ವ್ಯಕ್ತಿ ಪ್ರತಿದಿನ ತೆಗೆದುಕೊಳ್ಳುವ ಮಾತ್ರೆಗಳ ಪ್ರಮಾಣವನ್ನು ಕಡಿಮೆ ಮಾಡಲು ಎಫ್​ಡಿಸಿ ಬಳಕೆ ಮಾಡಲಾಯಿತು

ಮೈಸೂರಿನ ಇಡ್ಲಿ-ವಡೆ

ಸುದ್ಧಿಯಲ್ಲಿ ಏಕಿದೆ ?ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನದಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ಸಾಂಬಾರ್‌ ಸವಿಯಲಿದ್ದಾರೆ!

 • ಬಾಹ್ಯಾಕಾಶದಲ್ಲೇ ಗಗನಯಾತ್ರಿಗಳ ಉಪಾಹಾರ ಸೇವನೆಯ ಮ್ಯಾಜಿಕ್‌ಗೆ ರಕ್ಷಣಾ ಇಲಾಖೆಯ ಆಹಾರ ಸಂಶೋಧನಾ ಪ್ರಯೋಗಾಲಯ(ಡಿಎಫ್‌ಆರ್‌ಎಲ್‌) ಪ್ರಮುಖ ಪಾತ್ರ ವಹಿಸುತ್ತಿದೆ.
 • ಸಾಂಪ್ರದಾಯಿಕ ಆಹಾರವಾದ ಇಡ್ಲಿ-ಸಾಂಬಾರ್‌, ಮಾವಿನ ಹಣ್ಣಿನ ರಸ, ಶೈತ್ಯೀಕರಿಸಿದ ಹಣ್ಣಿನ ಜ್ಯೂಸ್‌ ಮತ್ತಿತರ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್‌ ಮಾಡಿ ಪೂರೈಸುವ ಬಗ್ಗೆ ಇಸ್ರೋ ಜತೆಗೆ ಡಿಎಫ್‌ಆರ್‌ಎಲ್‌ ಮಾತುಕತೆ ನಡೆಸಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2022ಕ್ಕೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ವಡೆ, ಹಣ್ಣಿನ ರಸವನ್ನು ಸೇವಿಸಲಿದ್ದಾರೆ.
 • 1984ರಲ್ಲಿ ರಷ್ಯಾದ ಸೊಯುಜ್‌ ಟಿ-11 ಅಂತರಿಕ್ಷ ಯೋಜನೆ ಕೈಗೊಂಡ ವೇಳೆ ಡಿಎಫ್‌ಆರ್‌ಎಲ್‌ ಗಗನಯಾತ್ರಿಗಳಿಗೆ ಆಹಾರ ಪೂರೈಸಿತ್ತು. ಇದೀಗ ಇಸ್ರೋ ಹಮ್ಮಿಕೊಂಡಿರುವ 2022ರ ಮಾನವಸಹಿತ ಗಗನಯಾನಕ್ಕೆ ಆಹರ ಪೂರೈಸಲು ಸಿದ್ಧತೆ ನಡೆಸುತ್ತಿದೆ.

ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ ( ಡಿಎಫ್ಆರ್ಎಲ್ )

 • ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ ( ಡಿಎಫ್ಆರ್ಎಲ್ ) ಎಂಬುದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಯ ಭಾರತೀಯ ರಕ್ಷಣಾ ಪ್ರಯೋಗಾಲಯವಾಗಿದೆ. ಕರ್ನಾಟಕದ ಮೈಸೂರು ನಲ್ಲಿದೆ, ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ವಿಭಿನ್ನವಾದ ಆಹಾರ ಸವಾಲುಗಳನ್ನು ಪೂರೈಸಲು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಗಳನ್ನು ನಡೆಸುತ್ತದೆ. DRDRL ಅನ್ನು ಡಿಆರ್ಡಿಓ ಲೈಫ್ ಸೈನ್ಸಸ್ ಡೈರೆಕ್ಟರೇಟ್ ಅಡಿಯಲ್ಲಿ ಆಯೋಜಿಸಲಾಗಿದೆ.
 • ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ (ಡಿಎಫ್ಆರ್ಎಲ್) 1961 ರ ಡಿಸೆಂಬರ್ 28 ರಂದು ಭಾರತದ ಸರ್ಕಾರದ ರಕ್ಷಣಾ ಸಚಿವಾಲಯ, ಡಿಪಾರ್ಟ್ಮೆಂಟ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಓ) ನೇತೃತ್ವದಲ್ಲಿ ಮೈಸೂರು ನಲ್ಲಿ ವಿಶೇಷವಾಗಿ ಭಾರತೀಯ ಸೇನೆಯ ವಿವಿಧ ಆಹಾರ ಸವಾಲುಗಳನ್ನು ಪೂರೈಸಲು ಪ್ರಾರಂಭಿಸಿತು. , ನೌಕಾಪಡೆ, ಏರ್ಫೋರ್ಸ್ ಮತ್ತು ಇತರ ಅರೆಸೈನಿಕ ಪಡೆಗಳು

ಕೆಲಸಗಳು

 • ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ
 • ಅನುಕೂಲಕರ ಆಹಾರಗಳ ಅಭಿವೃದ್ಧಿ, ಆಹಾರದ ಸಂರಕ್ಷಣೆ, ಆಹಾರ ಸುರಕ್ಷತೆ, ಆಹಾರ ಪ್ಯಾಕಿಂಗ್ ಮತ್ತು ಆಹಾರದ ಹಾಳೆಯಲ್ಲಿನ ಅಧ್ಯಯನ ಮತ್ತು ಸಂಸ್ಕರಿತ ಆಹಾರಗಳ ಸುರಕ್ಷತೆ
 • ಸಂಸ್ಕರಿಸಿದ ಆಹಾರಗಳ ಉತ್ಪಾದನೆ ಮತ್ತು ಸರಬರಾಜು ಸೀಮಿತ ಪ್ರಮಾಣದ ಮೇಲೆ ಸಶಸ್ತ್ರ ಪಡೆಗಳಿಗೆ ಮತ್ತು ರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಇತರ ಸಂಸ್ಥೆಗಳಿಗೆ
 • ವಿಷವೈದ್ಯ ಶಾಸ್ತ್ರ, ಪೌಷ್ಟಿಕಾಂಶ, ಮತ್ತು ಜೀವರಾಸಾಯನಿಕ ಅಧ್ಯಯನಗಳು
 • ಪ್ಯಾಕ್ ಪಡಿತರ ಅಭಿವೃದ್ಧಿ, ಅವರ ಗುಣಮಟ್ಟದ ಭರವಸೆ ವಿಧಾನಗಳು
 • ಹಾಳಾಗುವ ಉತ್ಪನ್ನಗಳ ದೀರ್ಘಾವಧಿಯ ಸಾಗಣೆಗಾಗಿ ಸಂರಕ್ಷಣೆ ಮತ್ತು ಪ್ಯಾಕೇಜಿಂಗ್ ವಿಧಾನಗಳು
 • ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ನಿಯೋಜಿಸಲಾದ ಪಡೆಗಳ ಪೌಷ್ಟಿಕಾಂಶದ ಅಗತ್ಯತೆಗಳ ಮೌಲ್ಯಮಾಪನ

ದೇಶದ ನೂತನ ಮುಖ್ಯನ್ಯಾಯಮೂರ್ತಿ

ಸುದ್ಧಿಯಲ್ಲಿ ಏಕಿದೆ ?ನ್ಯಾ. ರಂಜನ್ ಗೊಗೊಯಿ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.

 • ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಂಜನ್‌ ಗೊಗೊಯಿ ನೇಮಕ ಆದೇಶಕ್ಕೆ ಸಹಿ ಹಾಕಿದರು.
 • ನ್ಯಾ. ದೀಪಕ್ ಮಿಶ್ರಾ ಅವರ ಅಧಿಕಾರಾವಧಿ ಅಕ್ಟೋಬರ್‌ 3ರಂದು ಕೊನೆಯಾಗುತ್ತಿದ್ದು, ನ್ಯಾ. ರಂಜನ್ ಗೊಗೊಯಿ ಅವರಿಗೆ ಅ. 3ರಂದು ರಾಷ್ಟ್ರಪತಿ ಪ್ರಮಾಣವಚನ ಬೋಧಿಸಲಿದ್ದಾರೆ. ನ. 17, 2019ರವರೆಗೆ ರಂಜನ್ ಗೊಗೊಯಿ ಅವರ ಅಧಿಕಾರಾವಧಿ ಇರಲಿದೆ.
 • ಸೆ. 4ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸಿಜೆ ಹುದ್ದೆಗೆ ನ್ಯಾ. ರಂಜನ್ ಗೊಗೊಯಿ ಅವರ ಹೆಸರನ್ನು ಸೂಚಿಸಿದ್ದರು. ನ್ಯಾ. ಗೊಗೊಯಿ ಅವರು ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದು, ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಬಳಿಕ 2012ರ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿದ್ದರು.
 • ಮೂಲತಃ ಅಸ್ಸಾಂನವರಾದ ರಂಜನ್ ಗೊಗೊಯಿ ಅವರು ಅಸ್ಸಾಂನ ಮಾಜಿ ಸಿಎಂ ಕೇಶವ್ ಚಂದ್ರ ಗೊಗೊಯಿ ಅವರ ಪುತ್ರರಾಗಿದ್ದು, ಈಶಾನ್ಯ ರಾಜ್ಯದ ಮೊದಲ ಸಿಜೆ ಆಗಿದ್ದಾರೆ.
 • ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಕಳೆದ ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದ ನಾಲ್ವರು ನ್ಯಾಯಾಧೀಶರಲ್ಲಿ ನ್ಯಾ. ರಂಜನ್ ಗೊಗೊಯಿ ಕೂಡ ಒಬ್ಬರಾಗಿದ್ದರು.

ಮಕ್ಕಳ ಸುರಕ್ಷತೆ ನಿಯಮ

ಸುದ್ಧಿಯಲ್ಲಿ ಏಕಿದೆ ?ಶಾಲಾ ಕ್ಯಾಂಪಸ್‌ ಹಾಗೂ ಹೊರಗಡೆ ಮಕ್ಕಳ ಸುರಕ್ಷತೆ ಹಾಗೂ ಭದ್ರತೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಹಲವು ಕಠಿಣ ನಿಯಮಗಳನ್ನು ರೂಪಿಸಿದೆ.

 • ಶಾಲಾ ಆವರಣ ಹಾಗೂ ಬಸ್‌ಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಪೊಲೀಸ್‌ ದೃಢೀಕರಣದ ನಂತರವೇ ಚಾಲಕರನ್ನು ನೇಮಿಸುವಂತೆ ಸೂಚಿಸಿದೆ.
 • ಬಸ್‌ಗಳಲ್ಲಿ ಮಕ್ಕಳ ಮೇಲೆ ನಿಗಾ ವಹಿಸಲು ಮಹಿಳಾ ಸಿಬ್ಬಂದಿಯೊಬ್ಬರನ್ನು ನಿಯೋಜಿಸಬೇಕು. ಅಲ್ಲದೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ಶಾಲೆಯಲ್ಲೂ ಸಾರಿಗೆ ವ್ಯವಸ್ಥಾಪಕರು ಅಥವಾ ಸಂಯೋಜಕರನ್ನು ನೇಮಿಸುವಂತೆ ಸಲಹೆ ಮಾಡಲಾಗಿದೆ.
 • ”ಬಸ್‌ ಕೊನೇ ಪಾಯಿಂಟ್‌ ತಲುಪುವವರೆಗೆ ಪ್ರತಿ ಬಸ್‌ನಲ್ಲಿ ಒಬ್ಬ ಶಿಕ್ಷಕ/ ಶಿಕ್ಷಕಿ ಇರಬೇಕು. ಕಂಡಕ್ಟರ್‌, ಶಿಕ್ಷಕರು ಅಥವಾ ಮಕ್ಕಳ ಪೋಷಕರ ಪೈಕಿ ಒಬ್ಬರನ್ನು ಮಾತ್ರ ಬಸ್‌ನೊಳಗೆ ಪ್ರವೇಶಿಸಲು ಅನುಮತಿ ನೀಡಬೇಕು. ಉಳಿದಂತೆ ಯಾರನ್ನೂ ಬಸ್ಸಿನೊಳಗೆ ಬರಲು ಅವಕಾಶ ನೀಡಬಾರದು ಎಂದು ನಿಯಮ ಹೇಳಿದೆ. ಅಲ್ಲದೆ, ವರ್ಷಕ್ಕೊಮ್ಮೆ ಕಡ್ಡಾಯವಾಗಿ ವಾಹನ ಚಾಲಕನ ದೈಹಿಕ ಹಾಗೂ ನೇತ್ರ ತಪಾಸಣೆ ನಡೆಸಬೇಕು,” ಎಂದು ಪ್ರಸ್ತಾಪಿಸಲಾಗಿದೆ.

ಅಗ್ನಿ ಸುರಕ್ಷತಾ ಪ್ರಮಾಣ ಪತ್ರ:

 • ಪ್ರತಿ ಶಾಲೆಯು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಕಾಲಕಾಲಕ್ಕೆ ನೀಡುವ ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ತುರ್ತು ಸಂದರ್ಭದಲ್ಲಿ ಅಗ್ನಿ ಅನಾಹುತಗಳನ್ನು ಎದುರಿಸಲು ಶಾಲೆಗಳು ಸದಾ ಸನ್ನದ್ಧವಾಗಿರಬೇಕು.

ಪ್ರತ್ಯೇಕ ಶೌಚಾಲಯ:

 • ಆರ್‌ಟಿಇ ಕಾಯಿದೆ-2009ರ ಅನ್ವಯ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಶೌಚಾಲಯಗಳ ನಿರ್ಮಾಣ ಕುರಿತು ರಾಜ್ಯ ಸರಕಾರಗಳಿಗೆ ಸೂಚನೆಗಳನ್ನು ನೀಡಿದೆ.
 • ಶಾಲಾ ಆವರಣದಲ್ಲಿಯೇ ಶೌಚಾಲಯಗಳನ್ನು ನಿರ್ಮಿಸಬೇಕು. ಅದರಲ್ಲೂ ಬಾಲಕ,ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು. ಮಕ್ಕಳು, ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು. ಮಕ್ಕಳ ಶೌಚಾಲಯಗಳನ್ನು ಎಲ್ಲರಿಗೂ ಕಾಣುವಂತೆ ನಿರ್ಮಿಸಬೇಕು ಎಂದು ಸೂಚಿಸಲಾಗಿದೆ.

ಶ್ರೀರಾಮ ವಿಗ್ರಹ

ಸುದ್ಧಿಯಲ್ಲಿ ಏಕಿದೆ ?ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 151 ಅಡಿ ಎತ್ತರದ ಶ್ರೀರಾಮ ದೇವರ ವಿಗ್ರಹಕ್ಕೆ ಈ ವರ್ಷದ ದೀಪಾವಳಿ ವೇಳೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.

 • ಸರೆಯು ನದಿ ತೀರದಲ್ಲಿ ಸ್ಥಾಪನೆಯಾಗಲಿರುವ ವಿಗ್ರಹವನ್ನು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯಡಿ ನಿರ್ಮಿಸಲಾಗುತ್ತದೆ.
 • ವಿಗ್ರಹ ಸ್ಥಾಪನೆಯ ಸ್ಥಳದ ಆಯ್ಕೆಗಾಗಿ ಫಾಜಿಯಾಬಾದ್‌ ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಕ್ವೀನ್‌ ಹು ಸ್ಮರಣಾರ್ಥ ಇರುವ ಜಾಗದಲ್ಲಿ ವಿಗ್ರಹ ನಿರ್ಮಿಸಲು ಸಮಿತಿ ಶಿಫಾರಸು ನೀಡಿದೆ ಎನ್ನಲಾಗಿದೆ.
 • ನವ್ಯ ಆಯೋಧ್ಯ ಯೋಜನೆಯಡಿ ಶ್ರೀರಾಮ ದೇವರ ಬೃಹತ್‌ ವಿಗ್ರಹ ಸ್ಥಾಪನೆಗೆ ಈಗಾಗಲೇ ತಯಾರಿ ಆರಂಭವಾಗಿದ್ದು, ನ.6ರಂದು ಭೂಮಿ ಪೂಜೆ ನಡೆಸಲು ತೀರ್ಮಾನಿಸಲಾಗಿದೆ.

ಪರಮಾಣು ಪೂರೈಕೆದಾರರ ಒಕ್ಕೂಟ

ಸುದ್ಧಿಯಲ್ಲಿ ಏಕಿದೆ ?ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ(ಎನ್‌ಎಸ್‌ಜಿ) ಭಾರತವನ್ನು ಸೇರಿಸಲು ಚೀನಾ ತಗಾದೆ ತೆಗೆದಿದೆ ಎಂದು ಅಮೆರಿಕ ತಿಳಿಸಿದೆ.

 • 48 ಮಂದಿಯ ಪರಮಾಣು ಕ್ಲಬ್‌ನಿಂದ ಪರಮಾಣು ವ್ಯಾಪಾರ, ವ್ಯವಹಾರಗಳನ್ನು ನಿಯಂತ್ರಿಸಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳ ಸದಸ್ಯರು ಭಾರತವನ್ನು ಒಕ್ಕೂಟಕ್ಕೆ ಸೇರಿಸಲು ಯಾವುದೇ ತಗಾದೆ ತೆಗೆದಿಲ್ಲ. ಆದರೆ ಚೀನಾ ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆಗೆ (ಎನ್‌ಪಿಟಿ) ಸದಸ್ಯರು ಸಹಿ ಹಾಕಬೇಕು ಎಂದು ಪಟ್ಟು ಹಿಡಿದಿದ್ದು, ಇದರಿಂದ ಭಾರತವನ್ನು ಒಕ್ಕೂಟದ ಒಳಕ್ಕೆ ಸೇರಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ತಿಳಿದು ಬಂದಿದೆ.
 • ಈ ಒಕ್ಕೂಟವು ಒಮ್ಮತದ ಅಭಿಪ್ರಾಯದ ಮೇರೆಗೆ ಕಾರ್ಯನಿರ್ವಹಿಸುವುದರಿಂದ ಕಷ್ಟದ ಸ್ಥಿತಿ ತಲುಪಲಾಗಿದೆ. ಭಾರತ ಎನ್‌ಪಿಟಿ ಒಡಂಬಡಿಕೆಗೆ ಸಹಿ ಹಾಕುವುದಿಲ್ಲ ಎಂದಿರುವ ಕಾರಣ ಕಷ್ಟಕರ ವಾತಾವರಣ ನಿರ್ಮಾಣ ವಾಗಿದೆ ಎಂದು ಹೇಳಲಾಗಿದೆ.
 • ಸೌತ್‌ ಮತ್ತು ಸೆಂಟ್ರಲ್‌ ಏಷ್ಯಾದ ಪ್ರಿನ್ಸಿಪಲ್‌ ಡೆಪ್ಯುಟಿ ಅಸಿಸ್ಟೆಂಟ್‌ ಸೆಕ್ರೆಟರಿ ಅಲೈಸ್‌ ವೆಲ್ಸ್‌ ಈ ಸಂಬಂಧ, ಚೀನಾ ತನ್ನ ಹಠಕ್ಕೆ ಬದ್ಧವಾಗಿ ನಿಂತಿದೆ. ಹಾಗೆಂದು ನಾವು ಭಾರತಕ್ಕೆ ನೀಡುವ ಬೆಂಬಲದಲ್ಲಿ ಯಾವುದೇ ಕೊರತೆ ಮಾಡೆವು.
 • ಎಸ್‌ಟಿ-1 (ಸ್ಟ್ರಾಟಿಜಿಕ್‌ ಟ್ರೇಡ್‌ ಅಥರೈಸೇಷನ್‌) ಅನುಮತಿ ಸಂಬಂಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಒಕ್ಕೂಟಕ್ಕೆ ಭಾರತವನ್ನು ಸೇರಿಸುವುದಕ್ಕೆ ಎಲ್ಲ ಪ್ರಯತ್ನ ಮಾಡಲಾಗುವುದು.

ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್

 • ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ ( ಎನ್ಎಸ್ಜಿ ) ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಬಹುದಾದ ವಸ್ತುಗಳ, ಉಪಕರಣಗಳು ಮತ್ತು ತಂತ್ರಜ್ಞಾನದ ರಫ್ತುಗಳನ್ನು ನಿಯಂತ್ರಿಸುವ ಮೂಲಕ ಪರಮಾಣು ಪ್ರಸರಣವನ್ನು ತಡೆಯಲು ಪ್ರಯತ್ನಿಸುವ ಒಂದು ಬಹುಪಕ್ಷೀಯ ರಫ್ತಿ ನಿಯಂತ್ರಣ ನಿಯಂತ್ರಣ ವ್ಯವಸ್ಥೆ ಮತ್ತು ಒಂದು ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪು.
 • ಪರಮಾಣು ಪೂರೈಕೆದಾರರ ಗುಂಪು (ಎನ್ಎಸ್ಜಿ) ಗೆ ಪ್ರವೇಶಿಸಲು ಭಾರತ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಅಣುಶಕ್ತಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ಖಾತ್ರಿಪಡಿಸುವ ಉದ್ದೇಶದಿಂದ 1974 ರ ಭಾರತ ಪರಮಾಣು ಪರೀಕ್ಷೆಯ ನಂತರ ರಚನೆಯಾದ 48 ಸದಸ್ಯರ ಗುಂಪು ತಂತ್ರಜ್ಞಾನ. ಭಾರತದ ದೃಷ್ಟಿಕೋನದಿಂದ, ಭಾರತವು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಪ್ರವೇಶವನ್ನು ನಿರಾಕರಿಸುವ ಸಲುವಾಗಿ ರಚನೆಯಾಯಿತು.
 • ಎನ್ಎಸ್ಜಿಯ 48 ಸದಸ್ಯರು ಐದು ಪರಮಾಣು ಶಸ್ತ್ರಾಸ್ತ್ರಗಳ ರಾಜ್ಯಗಳು, ಯುಎಸ್, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ರಷ್ಯಾಗಳನ್ನು ಸೇರಿದ್ದಾರೆ. ಇತರ 43 ಅಣುಗಳ ಪ್ರಸರಣ ಒಪ್ಪಂದಕ್ಕೆ (ಎನ್ಪಿಟಿ) ಸಹಿ ಹಾಕಿದವು. ಎನ್.ಪಿ.ಟಿಗೆ ಭಾರತವು ಸಹಿ ಹಾಕುತ್ತಿಲ್ಲ, ಇದು ತಾರತಮ್ಯವನ್ನುಂಟು ಮಾಡುತ್ತದೆ.

ಎನ್ಎಸ್ಜಿ ಸದಸ್ಯತ್ವ ಭಾರತಕ್ಕೆ ಏಕೆ ಮುಖ್ಯವಾಗಿದೆ ?

 • ಎನ್ಎಸ್ಜಿ ಯಿಂದ ಭಾರತಕ್ಕೆ ಪರಮಾಣು ಶಕ್ತಿ ಸ್ಥಾವರಗಳನ್ನು ನಿರ್ಮಿಸಲು ಔಷಧಿಗಳಿಂದ ಬಳಸಲಾಗುವ ಒಂದು ಶ್ರೇಣಿಯ ತಂತ್ರಜ್ಞಾನಕ್ಕೆ ಪ್ರವೇಶಿಸುವುದು ಮುಖ್ಯವಾಗಿ ವ್ಯಾಪಾರಿಗಳ ಕಾರ್ಟೆಲ್ ಆಗಿದೆ. ಭಾರತ ತನ್ನದೇ ಆದ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವನ್ನು ಹೊಂದಿದೆ ಆದರೆ ಎನ್ಎಸ್ಜಿಯೊಳಗಿನ ದೇಶಗಳು ಕಲೆಯ ತಂತ್ರಜ್ಞಾನದ ರಾಜ್ಯದಲ್ಲಿ ತನ್ನ ಕೈಗಳನ್ನು ಪಡೆಯಲು, ಅದು ಗುಂಪಿನ ಭಾಗವಾಗಿರಬೇಕಾಗುತ್ತದೆ.
 • ಭಾರತವು ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬನೆಯನ್ನು ತಗ್ಗಿಸಲು ಮತ್ತು ಅದರ ಶಕ್ತಿಯನ್ನು 40% ನವೀಕರಿಸಬಹುದಾದ ಮತ್ತು ಸ್ವಚ್ಛ ಮೂಲಗಳಿಂದ ಪಡೆಯುವುದನ್ನು ಖಾತ್ರಿಪಡಿಸುತ್ತದೆ, ಪರಮಾಣು ವಿದ್ಯುತ್ ಉತ್ಪಾದನೆಯನ್ನು ಅಳೆಯುವ ಅಗತ್ಯತೆ ಇದೆ. ಭಾರತವು ಎನ್ಎಸ್ಜಿಗೆ ಪ್ರವೇಶವನ್ನು ಪಡೆದರೆ ಮಾತ್ರ ಇದು ಸಂಭವಿಸಬಹುದು. ಜಾಗತಿಕ ಮಾರುಕಟ್ಟೆಯ ಧನ್ಯವಾದಗಳು ರಿಂದ ಭಾರತದಲ್ಲಿ ಇಂದು ಒಂದು ಸಮಯದಲ್ಲಿ ಎನ್ಎಸ್ಜಿ ಮನ್ನಾ ಗೆ ವಿದ್ಯುತ್ ಸ್ಥಾವರಗಳು ಖರೀದಿಸಬಹುದು ಸಹ 2008, ಇನ್ನೂ ಅನೇಕ ರೀತಿಯ ತಂತ್ರಜ್ಞಾನಗಳನ್ನು ಭಾರತ ಎನ್ಎಸ್ಜಿ ಹೊರಗೆ ಎಂದು ನಿರಾಕರಿಸಬಹುದು.
 • ಭಾರತವು ಅಣ್ವಸ್ತ್ರ ಪ್ರಸರಣ ಒಪ್ಪಂದಕ್ಕೆ ಸಹಿ ಹಾಕಬಹುದು ಮತ್ತು ಎಲ್ಲರಿಗೂ ಪ್ರವೇಶವನ್ನು ಪಡೆಯುವುದು ಹೇಗೆ ಎಂಬುದು ಆದರೆ ಅದರ ಸಂಪೂರ್ಣ ಪರಮಾಣು ಶಸ್ತ್ರಾಸ್ತ್ರವನ್ನು ಬಿಟ್ಟುಬಿಡುವುದು ಎಂದಾಗುತ್ತದೆ. ಇದು ಅಸ್ಥಿರ ಮತ್ತು ಅನಿರೀಕ್ಷಿತ ನೆರೆಹೊರೆಯಲ್ಲಿ ನೆಲೆಗೊಂಡಿದೆ ಎಂಬ ಕಾರಣದಿಂದಾಗಿ ಭಾರತವು NPT ಗೆ ಸಹಿ ಹಾಕಲು ಅಥವಾ ಯಾವುದೇ ಪರಮಾಣು ಪರೀಕ್ಷೆಗಳಿಗೆ ನಿರ್ಬಂಧಗಳನ್ನು ಹಾಕುವ ಸಮಗ್ರ ಪರೀಕ್ಷೆ ನಿಷೇದ ಒಪ್ಪಂದಕ್ಕೆ (CTBT) ಸೇರ್ಪಡೆಗೊಳ್ಳಲು ಅಸಂಭವವಾಗಿದೆ.
 • ಇತ್ತೀಚಿನ ತಂತ್ರಜ್ಞಾನದ ಪ್ರವೇಶದೊಂದಿಗೆ, ಭಾರತ ಪರಮಾಣು ವಿದ್ಯುತ್ ಉಪಕರಣಗಳ ಉತ್ಪಾದನೆಯನ್ನು ವಾಣಿಜ್ಯೀಕರಿಸಬಹುದು. ಇದು ಭಾರತದಲ್ಲಿ ನಾವೀನ್ಯತೆ ಮತ್ತು ಹೈಟೆಕ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಮತ್ತು ಕೌಶಲ್ಯದ ಲಾಭಗಳಿಗೆ ಅನುಕೂಲವಾಗಲಿದೆ.
 • ಉದಾಹರಣೆಗೆ, ಶ್ರೀಲಂಕಾದೊಂದಿಗೆ ಭಾರತವು ನಾಗರಿಕ ಪರಮಾಣು ಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಸ್ತುತ, ಇದು ರೇಡಿಯೋಐಸೊಟೋಪ್ಗಳ ಬಳಕೆ, ಪರಮಾಣು ಸುರಕ್ಷತೆ, ವಿಕಿರಣ ಸುರಕ್ಷತೆ, ಪರಮಾಣು ಸುರಕ್ಷತೆ, ವಿಕಿರಣ ತ್ಯಾಜ್ಯ ನಿರ್ವಹಣೆ ಮತ್ತು ಪರಮಾಣು ಮತ್ತು ವಿಕಿರಣಾತ್ಮಕ ವಿಪತ್ತು ತಗ್ಗಿಸುವಿಕೆ ಸೇರಿದಂತೆ ಅಣು ಶಕ್ತಿಯ ಶಾಂತಿಯುತ ಬಳಕೆಗಳಲ್ಲಿ ತರಬೇತಿ ಜನರನ್ನು ಒಳಗೊಳ್ಳುತ್ತದೆ. ಭಾರತವು ಮುಂದುವರಿದ ಪರಮಾಣು ತಂತ್ರಜ್ಞಾನಗಳಿಗೆ ಪ್ರವೇಶ ಪಡೆಯಬೇಕೇ, ಅದು ತನ್ನದೇ ಆದ ವೇಗದ ಬ್ರೀಡರ್ ರಿಯಾಕ್ಟರಿನ ನವೀಕರಿಸಿದ ಆವೃತ್ತಿಗಳನ್ನು ನಿರ್ಮಿಸಲು ಪ್ರಾರಂಭಿಸಬಹುದು ಮತ್ತು ಶ್ರೀಲಂಕಾ ಅಥವಾ ಬಾಂಗ್ಲಾದೇಶದಂತಹ ದೇಶಗಳಿಗೆ ಮಾರಾಟ ಮಾಡಬಹುದು. ಬಾಂಗ್ಲಾದೇಶ ಪ್ರಸ್ತುತ ವಿದ್ಯುತ್ ಉತ್ಪಾದನೆಗೆ ರಷ್ಯಾದ ರಿಯಾಕ್ಟರ್ ಖರೀದಿಸುತ್ತಿದೆ.
 • ತನ್ನದೇ ಆದ ಪರಮಾಣು ವಿದ್ಯುತ್ ಸ್ಥಾವರಗಳನ್ನು ಜಗತ್ತಿನಾದ್ಯಂತ ಒದಗಿಸುವ ಸಾಮರ್ಥ್ಯವು ಸಂಪೂರ್ಣ ಪರಮಾಣು ಉದ್ಯಮ ಮತ್ತು ಅದರ ಸಂಬಂಧಿತ ತಂತ್ರಜ್ಞಾನ ಅಭಿವೃದ್ಧಿಗೆ ದಾರಿ ಕಲ್ಪಿಸುತ್ತದೆ. ಇದು ಮೇಕ್ ಇನ್ ಇಂಡಿಯಾ ಪ್ರೋಗ್ರಾಂಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ

ಜೀರೋ ಗ್ರಾವಿಟಿ

ಸುದ್ಧಿಯಲ್ಲಿ ಏಕಿದೆ ?ವಿಶ್ವದ ಅತ್ಯಂತ ವೇಗದ ಓಟಗಾರ ಎಂದೇ ಖ್ಯಾತರಾಗಿರುವ ಮತ್ತು ಒಲಂಪಿಕ್ಸ್​ನಲ್ಲಿ 8 ಚಿನ್ನದ ಪದಕ ಗೆದ್ದಿರುವ ಉಸೇನ್​ ಬೋಲ್ಟ್​ ಈಗ ಮತ್ತೊಂದು ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ.

 • ಹೌದು ಭೂಮಿಯ ಮೇಲಿನ ಶರವೇಗದ ಸರದಾರ ಅಂತರಿಕ್ಷದಲ್ಲೂ ತಮ್ಮ ಕಾಲ್ಚಳಕವನ್ನು ತೋರಿದ್ದು, ಜೀರೋ ಗ್ರಾವಿಟಿಯಲ್ಲಿ ನಡೆದ ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ. ಗುರುತ್ವಾಕರ್ಷಣ ಬಲ ಇಲ್ಲದ ವಾತಾವರಣದ ಅನುಭವ ಪಡೆಯಲು ವಿಶೇಷವಾಗಿ ನಿರ್ಮಿಸಿರುವ ಏರ್​ಬಸ್​ ಜೀರೋ ಗ್ರಾವಿಟಿ ಪ್ಲೇನ್​ನಲ್ಲಿ ಉಸೇನ್​ ಬೋಲ್ಟ್​ ರೇಸ್​ನಲ್ಲಿ ಪಾಲ್ಗೊಂಡಿದ್ದರು.
 • ಫ್ರಾನ್ಸ್​ನ ಅಂತರಿಕ್ಷಯಾತ್ರಿ ಜೇನ್​ ಫ್ರಾಂಕೋಯಿಸ್​ ಕ್ಲರ್ವೆ ಮತ್ತು ನೋವೆಸ್ಪೇಸ್​ನ ಸಿಇಒ ಹಾಗೂ ಫ್ರಾನ್ಸ್​ನ ಇಂಟೀರಿಯರ್​ ಡಿಸೈನರ್​ ಆಕ್ಟೇವ್ ದೆ ಗೌಲೆ ಅವರೊಂದಿಗೆ ಉಸೇನ್​ ರೇಸ್​ನಲ್ಲಿ ಪಾಲ್ಗೊಂಡಿದ್ದರು.

ಝೀರೋ ಗುರುತ್ವಮತ್ತುಝೀರೋಜಿ

 • ತೂಕದ ಸಂವೇದನೆಯ ಸಂಪೂರ್ಣ ಅಥವಾ ಹತ್ತಿರದ ಸಂಪೂರ್ಣ ಅನುಪಸ್ಥಿತಿಯಲ್ಲಿ ತೂಕವಿಲ್ಲದಿರುವುದು . ಇದನ್ನು ಶೂನ್ಯ-ಜಿ ಎಂದೂ ಕರೆಯುತ್ತಾರೆ, ಆದಾಗ್ಯೂ ಈ ಪದವು ಹೆಚ್ಚು ಸರಿಯಾಗಿ “ಶೂನ್ಯ ಗ್ರಾಂ-ಶಕ್ತಿ” ಆಗಿದೆ. ಮಾನವ ದೇಹವೂ ಸೇರಿದಂತೆ ಯಾವುದೇ ಸಂಪರ್ಕ ಪಡೆಗಳ ಅನುಪಸ್ಥಿತಿಯಲ್ಲಿ ಇದು ಸಂಭವಿಸುತ್ತದೆ.
 • ತುಲನಾತ್ಮಕವಾಗಿ ಬಲವಾದ ಗುರುತ್ವಾಕರ್ಷಣೆಯ ಕ್ಷೇತ್ರದಲ್ಲಿ (ಭೂಮಿಯ ಮೇಲ್ಮೈಯಲ್ಲಿ) ಉಳಿದಿರುವ ದೇಹಗಳನ್ನು ಬೆಂಬಲಿಸುವ ಪಡೆಗಳು ಸಾಮಾನ್ಯವಾಗಿ ತೂಕ ಎಂದು ಗ್ರಹಿಸಲಾಗುತ್ತದೆ. ಈ ತೂಕದ-ಸಂವೇದನೆಗಳು ಬೆಂಬಲಿತ ಮಹಡಿಗಳು, ಆಸನಗಳು, ಹಾಸಿಗೆಗಳು, ಮಾಪಕಗಳು ಮತ್ತು ಹಾಗೆ ಸಂಪರ್ಕದಿಂದ ಹುಟ್ಟಿಕೊಳ್ಳುತ್ತವೆ. ಗುರುತ್ವಾಕರ್ಷಣೆಯ ಕ್ಷೇತ್ರವು ಶೂನ್ಯವಾಗಿದ್ದರೂ, ಸಂಪರ್ಕ ಪಡೆಗಳು ವರ್ತಿಸಿದಾಗ ಮತ್ತು ಯಾಂತ್ರಿಕ, ಗುರುತ್ವಾಕರ್ಷಣೆಯ ಶಕ್ತಿಗಳ ಮೂಲಕ ಕೇಂದ್ರಾಪಗಾಮಿ , ತಿರುಗುವ ಬಾಹ್ಯಾಕಾಶ ನಿಲ್ದಾಣ , ಅಥವಾ ವೇಗವರ್ಧಿತ ವಾಹನಗಳಲ್ಲಿನ ದೇಹದ ಜಡತ್ವವನ್ನು ಹೊರಬಂದಾಗ ಸಹ ತೂಕದ ಸಂವೇದನೆಯನ್ನು ಸಹ ಉತ್ಪಾದಿಸಲಾಗುತ್ತದೆ. .
Related Posts
National Current Affairs – UPSC/KAS Exams- 3rd November 2018
Turga Pumped Storage in West Bengal Topic: Infrastructure Development IN NEWS: India and Japan  signed a loan agreement of Rs 1,817 crore for the construction of the Turga Pumped Storage in West ...
READ MORE
National Current Affairs – UPSC/KAS Exams- 10th April 2019
Arunachal Pradesh service voters cast first vote of 2019 General Elections Topic: Governance In News: Soldiers of Indo-Tibetan-Border-Police [ITBP] cast their first votes of the 2019 Lok Sabha elections. More on the Topic: ...
READ MORE
Not many takers in state for free LPG connections for poor
Why in News: The Centre’s flagship scheme to distribute free liquefied petroleum gas (LPG) connections to the Below Poverty Line (BPL) families, has received a lacklustre response in the state. In the ...
READ MORE
National Current Affairs – UPSC/KAS Exams – 5th November 2018
Water ATMs may help in bridging safe water gap For thousands of communities across India, the process of getting drinking water is now the same as the process of getting cash: ...
READ MORE
National Court of Appeal 1. What is a National Court of Appeal? The National Court Appeal with regional benches in Chennai, Mumbai and Kolkata is meant to act as final court of ...
READ MORE
National Current Affairs – UPSC/KAS Exams- 17th January 2019
NREGA gets additional Rs. 6,084 cr Topic: Government Policies IN NEWS: After exhausting 99% of its annual allocation three months ahead of time, the National Rural Employment Guarantee (NREGA) scheme has been ...
READ MORE
Karnataka Current Affairs – KAS/KPSC Exams – 10th November 2018
NTCA rejects Hubballi-Ankola railway line proposal again The National Tiger Conservation Authority (NTCA), in its second site inspection report, has recommended for “complete abatement” of the Hubballi–Ankola railway line project. This is ...
READ MORE
The Negotiable Instruments (Amendment) Bill, 2015 was passed by the Parliament recently The provisions of the Negotiable Instruments (Amendment) Act, 2015 shall be deemed to have come into force on the ...
READ MORE
Karnataka Current Affairs – KAS/KPSC Exams – 3rd Oct 2017
76% of rural Karnataka ‘open defecation-free’ The State government has declared 76% of the rural population of Karnataka as not dependent on open defecation anymore. The authorities have set an ambitious target ...
READ MORE
National Current Affairs – UPSC/KAS Exams – 4th & 5th November 2018
Competition Commission of India Topic: Indian Economy                                        IN NEWS:‘National Conference on Public Procurement & Competition ...
READ MORE
National Current Affairs – UPSC/KAS Exams- 3rd November
National Current Affairs – UPSC/KAS Exams- 10th April
Not many takers in state for free LPG connections
National Current Affairs – UPSC/KAS Exams – 5th
All you need to know about National Court
National Current Affairs – UPSC/KAS Exams- 17th January
Karnataka Current Affairs – KAS/KPSC Exams – 10th
Negotiable Instruments (Amendment) Bill, 2015 notified
Karnataka Current Affairs – KAS/KPSC Exams – 3rd
National Current Affairs – UPSC/KAS Exams – 4th

Leave a Reply

Your email address will not be published. Required fields are marked *