11th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಆರೋಗ್ಯ ಕರ್ನಾಟಕದಲ್ಲಿ ಯಶಸ್ವಿನಿ

 • ಸುದ್ದಿಯಲ್ಲಿ ಏಕಿದೆ? ಬಡರೋಗಿಗಳ ಪಾಲಿನ ಆಶಾಕಿರಣವಾಗಿರುವ ಯಶಸ್ವಿನಿ ಯೋಜನೆ ಕೊನೆಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನವಾಗಿದೆ. ಇದರಿಂದಾಗಿ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿಯೇ ಯಶಸ್ವಿನಿ ಯೋಜನೆಯಲ್ಲಿ ಪಡೆಯುತ್ತಿದ್ದ ಎಲ್ಲ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ.
 • ಒಂದೇ ಸೂರಲ್ಲಿ ಚಿಕಿತ್ಸೆ: ರಾಜ್ಯದಲ್ಲಿ ಜಾರಿಯಲ್ಲಿದ್ದ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ಯೋಜನೆ ಜಾರಿಗೆ ತರಲಾಗಿದೆ. ಹೀಗಾಗಿ ಈ ಎಲ್ಲ ಯೋಜನೆಯಡಿಯಲ್ಲಿ ದೊರೆಯುವ ಆರೋಗ್ಯ ಸೇವೆಯನ್ನು ಹೆಲ್ತ್ ಕಾರ್ಡ್ ತೋರಿಸಿ ಪಡೆಯಬಹದು.
 • 10 ರೂ.ಗೆ ಕಾರ್ಡ್!: ರೋಗಿಗಳಿಗೆ ನೋಂದಣಿ ಕೌಂಟರ್​ನಲ್ಲಿ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಆಧರಿಸಿ, ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ. ಇದಕ್ಕೆ 10 ರೂ. ಪಾವತಿಸಬೇಕಾಗುತ್ತದೆ.

ಏನಿದು ಯೋಜನೆ?

 • ಎಲ್ಲ ನಾಗರಿಕರಿಗೂ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದ ಆರೋಗ್ಯ ಕರ್ನಾಟಕಯೋಜನೆಯನ್ನು ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ಜಾರಿಗೊಳಿಸಿದೆ. ಇದು ದೇಶದಲ್ಲೇ ಮೊದಲು. ಯೋಜನೆಯಡಿ 5 ಕೋಟಿ ಜನರಿಗೆ 1516 ನಿರ್ದಿಷ್ಟ ಚಿಕಿತ್ಸೆ ಒದಗಿಸಲಾಗುತ್ತದೆ. ಬಿಪಿಎಲ್ ಹೊಂದಿದವರಿಗೆ ಬಹುತೇಕ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಯೋಜನೆಯ ಪ್ಯಾಕೇಜ್ ದರದ ಶೇ.30ನ್ನು ಸರ್ಕಾರ ಭರಿಸುತ್ತದೆ. ಯಾವುದೇ ಪಡಿತರ ಚೀಟಿ ಹೊಂದಿಲ್ಲದವರೂ ಈ ವರ್ಗಕ್ಕೆ ಸೇರುತ್ತಾರೆ.

ಚಿಕಿತ್ಸಾ ವೆಚ್ಚದ ವಿವರ

 • 5 ಸದಸ್ಯರಿರುವ ಒಂದು ಕುಟುಂಬಕ್ಕೆ ನಿರ್ದಿಷ್ಟ ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ವರ್ಷಕ್ಕೆ 30 ಸಾವಿರ ರೂ.ವರೆಗೆ ವೆಚ್ಚ ಭರಿಸಲಾಗುತ್ತದೆ. ತೃತೀಯ ಹಂತದ ಆರೋಗ್ಯ ಚಿಕಿತ್ಸೆಗೆ 5 ಲಕ್ಷ ರೂ.ವರೆಗೆ ಒದಗಿಸಲಾಗುತ್ತದೆ. ತೃತೀಯ ಹಂತದ ತುರ್ತಚಿಕಿತ್ಸಾ ಸಂದರ್ಭದಲ್ಲಿ ಇನ್ನೂ ಹೆಚ್ಚಿನ 50 ಸಾವಿರ ರೂ. ಆರ್ಥಿಕ ನೆರವನ್ನು ನೀಡಲಾಗುತ್ತದೆ. ಬಿಪಿಎಲ್ ರೋಗಿಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರೆನ್ಸ್ ಪಡೆದು, ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ನಂತರ ಯಾವುದೇ ಪಾವತಿ ಮಾಡಬೇಕಿಲ್ಲ. ಸಾಮಾನ್ಯ ರೋಗಿಗೆ ಸಹ ಪಾವತಿ ಆಧಾರದ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಯೋಜನೆಯ ಪ್ಯಾಕೇಜ್ ದರದ ಶೇ.30 ಸರ್ಕಾರ ಪಾವತಿಸುತ್ತದೆ. 

ಚಿಕಿತ್ಸೆಗೆ ಷರತ್ತು ಅನ್ವಯ

 • ರೋಗಿಯು ಮೊದಲು ಹೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಆರೋಗ್ಯ ಕರ್ನಾಟಕ ಯೋಜನೆ ಅಡಿ ನೋಂದಾಯಿತ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ರೆಫರೆನ್ಸ್ ಅನ್ನು ಯಾವುದೇ ಒಂದು ನಿರ್ದಿಷ್ಟ ಖಾಸಗಿ ಆಸ್ಪತ್ರೆಗೆ ನೀಡುವಂತಿಲ್ಲ. ರೋಗಿ ತನ್ನ ಇಚ್ಛಾನುಸಾರ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಸಾರ್ವಜನಿಕ ಆಸ್ಪತ್ರೆ ಪಟ್ಟಿಯನ್ನು ಎಲ್ಲ ಆರೋಗ್ಯ ಸಂಸ್ಥೆಯಲ್ಲಿ ಪ್ರದರ್ಶಿಸಲಾಗುತ್ತದೆ.

ಎಲ್ಲೆಲ್ಲಿ ಸಿಗುತ್ತೆ ಕಾರ್ಡ್?

 • ಪಿಎಂಎಸ್​ಎಸ್​ವೈ ಬೆಂಗಳೂರು, ಕೆ.ಸಿ.ಜನರಲ್ ಆಸ್ಪತ್ರೆ ಬೆಂಗಳೂರು, ಜಯದೇವ ಆಸ್ಪತ್ರೆ ಬೆಂಗಳೂರು, ಮಿಮ್್ಸ ಮಂಡ್ಯ, ಮೆಗ್ಗಾನ್ ಶಿವಮೊಗ್ಗ, ವೆನ್​ಲಾಕ್ ಮಂಗಳೂರು, ಕಿಮ್್ಸ ಹುಬ್ಬಳ್ಳಿ, ವಿಮ್್ಸ ಬಳ್ಳಾರಿ, ಜಿಮ್್ಸ ಕಲಬುರಗಿ, ಎಸ್​ಎನ್​ಆರ್ ಆಸ್ಪತ್ರೆ ಕೋಲಾರ, ಟಿ.ನರಸೀಪುರ ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಉಳಿದಂತೆ ಇತರ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆ.31ರೊಳಗೆ ಆರಂಭವಾಗುತ್ತದೆ.

ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿ 

 • ಸುದ್ಧಿಯಲ್ಲಿ ಏಕಿದೆ? ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವ ರಾಜ್ಯಗಳ ಪೈಕಿ 2016ರಲ್ಲಿ 13ರಲ್ಲಿದ್ದಕರ್ನಾಟಕ 8ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಉತ್ತಮ ಪ್ರಗತಿ ದಾಖಲಿಸಿದೆ.
 • ಆಂಧ್ರಪ್ರದೇಶಕ್ಕೆ 2017ನೇ ಸಾಲಿನಲ್ಲಿ ಮೊದಲ ಸ್ಥಾನ ಲಭ್ಯವಾಗಿದ್ದು, ತೆಲಂಗಾಣ ಎರಡನೇ ಸ್ಥಾನ ಪಡೆದುಕೊಂಡಿದೆ.
 • 2017ನೇ ಸಾಲಿನ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ವಿಶೇಷವೆಂದರೆ ಉದ್ಯಮ ಸ್ಥಾಪನೆ ಮತ್ತು ನಿರ್ವಹಣೆಗೆ ಅನುಕೂಲಕರ ವಾತಾವರಣ ಕಲ್ಪಿಸುವ ಹಾಗೂ ಹೂಡಿಕೆಗೆ ಅವಕಾಶ ವಿಸ್ತರಿಸುವಲ್ಲಿ ವಿಚಾರದಲ್ಲಿ ರಾಜ್ಯಗಳ ಪ್ರಗತಿಯನ್ನು ಆಧರಿಸಿ ಕೇಂದ್ರದ ಉದ್ಯಮ ನೀತಿ ಇಲಾಖೆ ಈ ಪಟ್ಟಿ ಬಿಡುಗಡೆ ಮಾಡಿದೆ.
 • ಉದ್ಯಮಸ್ನೇಹಿ ರಾಜ್ಯ ರ‍್ಯಾಂಕಿಂಗ್ ನೀಡುವ ಮೂಲಕ ರಾಜ್ಯಗಳ ಮಧ್ಯೆ ಕೇಂದ್ರ ಸರಕಾರ ಸ್ಪರ್ಧೆ ನಡೆಸುತ್ತಿದ್ದು, ಹೂಡಿಕೆ ಆಕರ್ಷಿಸಲು ರಾಜ್ಯಗಳಿಗೂ ನೆರವಾಗುತ್ತಿದೆ. ಉದ್ಯಮ ಸ್ಥಾಪನೆಗೆ ಪರವಾನಗಿ, ನಿರ್ಮಾಣ ಅನುಮತಿ, ಕಾರ್ಮಿಕ ನೀತಿ, ಪರಿಸರ ಸಂಬಂಧಿತ ನೋಂದಣಿ, ಮಾಹಿತಿ ಲಭ್ಯತೆ, ಭೂಮಿ ಮತ್ತು ಇತರ ಮೂಲಸೌಕರ್ಯ ಲಭ್ಯತೆ ಸಹಿತ ವಿವಿಧ ಮಾನದಂಡಗಳನ್ನು ಅನುಸರಿಸಿ ರ‍್ಯಾಂಕಿಂಗ್ ನೀಡಲಾಗುತ್ತದೆ.
 • ಸುಗಮ ವ್ಯವಹಾರಕ್ಕೆ ಸುಧಾರಣೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿದ್ದ 405 ಶಿಫಾರಸುಗಳನ್ನು ಯಾವ ರಾಜ್ಯ ಎಷ್ಟರ ಮಟ್ಟಿಗೆ ಜಾರಿಗೆ ತಂದಿದೆ ಎಂಬುದರ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗುತ್ತದೆ.
 • ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ 8ನೇ ಸ್ಥಾನ ಪಡೆದುಕೊಂಡಿದ್ದರೆ, 36ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಮೇಘಾಲಯ ಕೊನೆಯ ಸ್ಥಾನದಲ್ಲಿದೆ.

ವಿಶ್ವ ಜನಸಂಖ್ಯಾ ದಿನ

 • ಸುದ್ಧಿಯಲ್ಲಿ ಏಕಿದೆ? ಪ್ರತಿ ವರ್ಷದ ಜು.11 ಅನ್ನು ‘ವಿಶ್ವಜನಸಂಖ್ಯಾ ದಿನ’ವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1989ರಿಂದ ಈ ಆಚರಣೆಗೆ ಚಾಲನೆ ನೀಡಿದೆ. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
 • ಈ ವರ್ಷದ ಥೀಮ್‌ :ಕುಟುಂಬ ಯೋಜನೆಯು ಮಾನವ ಹಕ್ಕು
 • ವಿಶ್ವದ ಜನಸಂಖ್ಯೆ: 748,50,53,615
 • 1,000 ಕೋಟಿ: 2055ರ ಹೊತ್ತಿಗೆ ವಿಶ್ವದ ಜನಸಂಖ್ಯೆ
 • ಭಾರತದ ಜನಸಂಖ್ಯೆ:129,68,34,042

ಜುಲೈ 11 ಏಕೆ ವಿಶ್ವ ಜನಸಂಖ್ಯಾ ದಿನ?

 • 1987ರ ಜುಲೈ 11ಕ್ಕೆ ವಿಶ್ವದ ಜನಸಂಖ್ಯೆ 500 ಕೋಟಿಗೆ ತಲುಪಿತು. ಹೀಗಾಗಿ ಇದನ್ನು ‘ಫೈವ್ ಬಿಲಿಯನ್ ಡೇ’ ಎನ್ನಲಾಯಿತು. ಇದೇ ಸಮಯದಲ್ಲಿ ಜನಸಂಖ್ಯಾಸ್ಪೋಟ ತಡೆಯಲು ಯಾವುದಾದರೂ ಕಾರ್ಯಕ್ರಮ ವಿಶ್ವದಾದ್ಯಂತ ಹಮ್ಮಿಕೊಳ್ಳಬೇಕು ಎಂಬ ತುಡಿತದಲ್ಲಿದ್ದ ಯುಎನ್​ಡಿಪಿಗೆ ‘ಫೈವ್ ಬಿಲಿಯನ್ ಡೇ’ ಪ್ರೇರೇಪಣೆಯಾಗಿ 1989ರಲ್ಲಿ ಜುಲೈ 11 ಅನ್ನು ವಿಶ್ವ ಜನಸಂಖ್ಯಾ ದಿನವೆಂದು ಘೋಷಿಸಿತು.
 • ಸಂಪನ್ಮೂಲಗಳ ಮೇಲೆ ಒತ್ತಡ
  ನಿನ್ನೆಗೆ ಹೋಲಿಸಿದರೆ ಇಂದು 2 ಲಕ್ಷ ಜನರು ಜಗತ್ತಿನಲ್ಲಿ ಜಾಸ್ತಿಯಾಗಿದ್ದಾರೆ. ಈ ಲೆಕ್ಕಾಚಾರದಲ್ಲಿಯೇ ಜಗತ್ತಿನ ಜನಸಂಖ್ಯೆ ವೃದ್ಧಿಸುತ್ತಿದೆ. ಈ ಸ್ಫೋಟದಿಂದ ಭಾರತದ ಸಂಪನ್ಮೂಲಗಳ ಮೇಲೆ ಒತ್ತಡ ಸೃಷ್ಟಿಯಾಗಿದೆ.
 • ವಿಶ್ವದ ಆರ್ಥಿಕತೆಯು ಈ ಶತಮಾನದಲ್ಲಿ 26 ಪಟ್ಟು ವೃದ್ಧಿಯಾಗಿದೆ. ಇದರಿಂದಾಗಿ ಭೂಮಿ ಮೇಲಿನ ಸಂಪನ್ಮೂಲಗಳ ಮೇಲೆ ಒತ್ತಡ ಬಿದ್ದಿದೆ. ನಾವು ಈಗಾಗಲೇ ಶೇ.160 ಪಟ್ಟು ಹೆಚ್ಚಿನದಾಗಿಯೇ ಬಳಸಿಕೊಂಡಿದ್ದೇವೆ.
 • ಶೇ.12: 2017ರಲ್ಲಿ ಜನಸಂಖ್ಯೆ ವೃದ್ಧಿ
  ಈಗ ಜನಸಂಖ್ಯೆ ಎಷ್ಟಿದೆಯೋ ಅದರ ಅರ್ಧದಷ್ಟು ಜನಸಂಖ್ಯೆ 1970ರಲ್ಲಿ ಇತ್ತು. ಇದೇ ರೀತಿ ಈಗಿನ ಜನಸಂಖ್ಯೆಯ ದ್ವಿಗುಣವಾಗಲು 200 ವರ್ಷಗಳು ಬೇಕು ಅನ್ನುವುದು ಒಂದು ಅಂದಾಜು.

ಇಂದು ಏನು ಮಾಡಬಹುದು? 

 • ಕುಟುಂಬ ಯೋಜನೆಗಳ ಪ್ರಚಾರ,
 • ಯುವಕ, ಯುವತಿಯರ ಸಬಲೀಕರಣದ ದಿನವಾಗಿ ಆಚರಿಸಬಹುದು
 • ಬೇಡದ ಗರ್ಭಧಾರಣೆ ತಡೆಯ ಶಿಕ್ಷಣ ನೀಡಬೇಕು
 • ಸಮಾಜದಲ್ಲಿ ಲಿಂಗ ಅಸಮಾನತೆ ನಿವಾರಣೆಗೆ ಪೂರಕವಾಗಿ ಶಿಕ್ಷಣ ಒದಗಿಸುವುದು.

ಜನಸಂಖ್ಯೆ ಸಮಸ್ಯೆ 

 • ಜನಸಂಖ್ಯೆ ಹೆಚ್ಚಳದಿಂದ ಆಹಾರ, ನಿರುದ್ಯೋಗ, ಶಿಕ್ಷಣದ ಸಮಸ್ಯೆ, ವಲಸೆ, ಅನಾರೋಗ್ಯ, ಅಪೌಷ್ಟಿಕತೆ, ತ್ಯಾಜ್ಯ ನಿರ್ವಹಣೆ, ಜಲ, ನೆಲ ಮತ್ತಿತರ ಸಮಸ್ಯೆಗಳು.

ಜನಸಂಖ್ಯೆಯ ಲಾಭ 

 • ಉದ್ಯೋಗಿಗಳ ಕೊರತೆ ಇರುವುದಿಲ್ಲ, ಜನರು ಸಹ ದೇಶದ ಸಂಪನ್ಮೂಲವೇ ಆಗಿದ್ದು, ಅಭಿವೃದ್ಧಿಗೆ ಕೊಡುಗೆ. ಹೊಸ ಆಲೋಚನೆ, ಕೆಲಸದ ಹಂಚಿಕೆಗೆ ಅನುಕೂಲ.

2050ಕ್ಕೆ ಚೀನಾದ ಜನಸಂಖ್ಯೆ ಭಾರತದ ಶೇ.65ಕ್ಕೆ ಇಳಿಕೆ! 

 • ಚೀನಾದ ಜನಸಂಖ್ಯಾ ತಜ್ಞರ ಪ್ರಕಾರ 2050ರ ವೇಳೆಗೆ ಚೀನಾದ ಜನಸಂಖ್ಯೆಯು ಭಾರತದ ಜನಸಂಖ್ಯೆಯ ಶೇ.65ಕ್ಕೆ ಇಳಿಯಲಿದೆ! ಹೀಗಾಗಿ ಚೀನಾ ತನ್ನ ಕುಟುಂಬ ಯೋಜನೆ ನೀತಿಯನ್ನು ಅಂತ್ಯಗೊಳಿಸಬೇಕು ಎನ್ನುವ ಒತ್ತಾಯ ಅಲ್ಲಿ ಉಂಟಾಗಿದೆ.
 • ಚೀನಾದಲ್ಲಿ 1979ರಲ್ಲಿ ಒಂದು ಕುಟುಂಬಕ್ಕೆ ಒಂದು ಮಗು ನೀತಿ ಜಾರಿಯಾಗಿತ್ತು.
  ನಂತರ 2016ರಲ್ಲಿ ಒಂದು ಕುಟುಂಬಕ್ಕೆ 2 ಮಗು ಎಂದು ಬದಲಿಸಿತ್ತು. ಆದರೆ ಈಗಿನ ಪರಿಸ್ಥಿತಿಯೇ ಮುಂದುವರಿದರೆ, 2050ಕ್ಕೆ ಭಾರತದ ಜನಸಂಖ್ಯೆಯ ಶೇ.65ಕ್ಕೆ ಹಾಗೂ 2,100ಕ್ಕೆ ಶೇ.32ಕ್ಕೆ ತಗ್ಗಲಿದೆ. ಇದರಿಂದ ನಾನಾ ಸಮಸ್ಯೆಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ
 • ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಇದೆ. ಯುವಜನತೆಯನ್ನು ಕೇವಲ ಕಾರ್ಮಿಕ ಬಲದ ದೃಷ್ಟಿಯಿಂದ ನೋಡಬಾರದು. ಅವರಿಗೆ ಸಮರ್ಪಕವಾದ ಉದ್ಯೋಗಾವಕಾಶಗಳನ್ನು ಕಲ್ಪಿಸಿದರೆ ದೇಶದ ಆರ್ಥಿಕ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆ ಲಭಿಸಲಿದೆ. ದೇ
 • ಶದ ಜನಸಂಖ್ಯಾ ನೀತಿಯು ವಿದೇಶಿ ನೀತಿಯನ್ನು ಅನುಕರಿಸಿದ್ದು, ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುಎನ್‌ಎಫ್‌ಪಿಎ ಇದನ್ನು ರೂಪಿಸುತ್ತಿದೆ. ಆದರೆ ಭಾರತದಲ್ಲಿ ಯುವಜನರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುವ ಜನಸಂಖ್ಯಾ ನೀತಿಯ ಅಗತ್ಯ ಇದೆ. ಭಾರತಕ್ಕೆ ಜನಸಂಖ್ಯೆ ಈಗ ಅತ್ಯಂತ ಅನುಕೂಲಕರವಾಗಿ ಪರಿಣಮಿಸಬಲ್ಲುದು.

ಸೆಕ್ಷನ್ 377

 • ಸುದ್ಧಿಯಲ್ಲಿ ಏಕಿದೆ? ಸಲಿಂಗಕಾಮ ಅಪರಾಧ ಎಂದು ಘೊಷಿಸುವ ಐಪಿಸಿ ಸೆಕ್ಷನ್ 377 ರದ್ದುಗೊಳಿಸುವ ಕುರಿತ ಇನ್ನೊಂದು ಹಂತದ ಕಾನೂನು ಹೋರಾಟ ಸುಪ್ರೀಂ ಕೋರ್ಟ್​ನಲ್ಲಿ ಆರಂಭವಾಗಿದೆ.
 • ವ್ಯಕ್ತಿಯ ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್​ನ ಸಂವಿಧಾನ ಪೀಠ ಆದೇಶಿಸಿದ ಬೆನ್ನಲ್ಲೇ ಐವರು ನ್ಯಾಯಮೂರ್ತಿಗಳ ಇನ್ನೊಂದು ಸಂವಿಧಾನ ಪೀಠದಿಂದ ಕ್ಯುರೇಟಿವ್ ಅರ್ಜಿ ವಿಚಾರಣೆ ಆರಂಭವಾಗಿದೆ. ತೀರಾ ಅಪರೂಪವೆಂಬಂತೆ ಕ್ಯುರೇಟಿವ್ ಅರ್ಜಿ ವಿಚಾರಣೆಯು ನ್ಯಾಯಮೂರ್ತಿಗಳ ಕಚೇರಿ ಬದಲು ನ್ಯಾಯ ಕೊಠಡಿಯಲ್ಲಿ ನಡೆಯುತ್ತಿದೆ.
 • ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದ್ದು, ನಿತ್ಯ ಕಲಾಪಕ್ಕೆ ನ್ಯಾಯಪೀಠ ಸಮ್ಮತಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್​ನಲ್ಲಿ ಎರಡು ಬಾರಿ ಐಪಿಸಿ ಸೆಕ್ಷನ್ 377 ಕಾನೂನು ಬದ್ಧ ಹಾಗೂ ಸಲಿಂಗಕಾಮವು ಅಪರಾಧ ಎಂಬ ತೀರ್ಪು ಬಂದಿದೆ. ಮೇಲ್ಮನವಿ ಅರ್ಜಿ, ಮರು ಪರಿಶೀಲನಾ ಅರ್ಜಿ ತಿರಸ್ಕೃತವಾದ ಬಳಿಕ ಕ್ಯುರೇಟಿವ್ ಅರ್ಜಿಯ ವಿಚಾರಣೆ ಈಗ ನಡೆಯುತ್ತಿದೆ.
 • ಸುಪ್ರೀಂ ಕೋರ್ಟ್​ನಲ್ಲಿ ಏನಾಯಿತು?: ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ದರು. ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಅರ್ಜಿಗೆ ಇನ್ನಷ್ಟು ಶಕ್ತಿ ತುಂಬಿದೆ. ಹೀಗಾಗಿ ಕ್ಯುರೇಟಿವ್ ಅರ್ಜಿ ಪರಿಶೀಲಿಸಿ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಬೇಕು. ಸಲಿಂಗಕಾಮ ಕೂಡ ಸಹಜ ಪ್ರಕ್ರಿಯೆ. ಇದು ಲೈಂಗಿಕತೆಗಿಂತ ಇಬ್ಬರು ವ್ಯಕ್ತಿಗಳ ಖಾಸಗಿತನ, ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರ ಪ್ರತಿ ವ್ಯಕ್ತಿಗೂ ತನ್ನ ಜತೆಗಾರರನ್ನು  ಆಯ್ಕೆ ಮಾಡುವ ಅಧಿಕಾರವಿದೆ. ಐಪಿಸಿ ಸೆಕ್ಷನ್ 377 ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಪೀಠ, ಸೆ. 377 ಸಂವಿಧಾನ ವಿರೋಧಿಯೇ ಎನ್ನುವುದನ್ನಷ್ಟೇ ಕೋರ್ಟ್ ಪರಿಗಣಿಸಲಿದೆ. ಈ ವಿಚಾರ ಕುರಿತ ತೀರ್ಪು ಬಂದ ಬಳಿಕ ಉಳಿದ ಅಂಶಗಳ ವಿಚಾರಣೆ ನಡೆಯಲಿ ಎಂದು ಅಭಿಪ್ರಾಯಪಟ್ಟಿದೆ.

 ಕ್ಯುರೇಟಿವ್ ಅರ್ಜಿ ಎಂದರೇನು ?

 • ರುಪ ಅಶೋಕ್ ಹರ್ರಾ ವರ್ಸಸ್ ಅಶೋಕ್ ಹರಾ ಮತ್ತು ಅನರ್ವರ ವಿಷಯದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವು ಪರಿಷ್ಕರಣೆ ಅರ್ಜಿಯನ್ನು ಪರಿಕಲ್ಪನೆಗೊಳಿಸಿತು   ವಿಮರ್ಶೆ ಅರ್ಜಿಯನ್ನು ವಜಾಗೊಳಿಸಿದ ನಂತರ, ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು / ಆದೇಶದ ವಿರುದ್ಧ ಯಾವುದೇ ಪರಿಹಾರಕ್ಕೆ ವ್ಯತಿರಿಕ್ತ ವ್ಯಕ್ತಿಯು ಅರ್ಹರಾಗಿದ್ದಾರೆ  ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಪ್ರಕ್ರಿಯೆಯ ದುರುಪಯೋಗವನ್ನು ತಡೆಗಟ್ಟಲು ಮತ್ತು ನ್ಯಾಯದ ಸಮಗ್ರ ವಿಫಲತೆಯನ್ನು ಗುಣಪಡಿಸುವ ಸಲುವಾಗಿ, ಅದರ ಅಂತರ್ಗತ ಅಧಿಕಾರಗಳ ವ್ಯಾಯಾಮದಲ್ಲಿ ಅದರ ತೀರ್ಪುಗಳನ್ನು ಮರುಪರಿಶೀಲಿಸುತ್ತದೆ.
 • ಈ ಉದ್ದೇಶಕ್ಕಾಗಿ, ನ್ಯಾಯಾಲಯವು “ಚಿಕಿತ್ಸಕ” ಅರ್ಜಿಯೆಂದು ಕರೆಯಲ್ಪಡುವದನ್ನು ರೂಪಿಸಿದೆ. ಕ್ಯುರೇಟಿವ್ ಅರ್ಜಿಯಲ್ಲಿ, ಅರ್ಜಿದಾರನು ಅದರಲ್ಲಿ ಉಲ್ಲೇಖಿಸಲಾದ ಆಧಾರಗಳನ್ನು ಮೊದಲು ಸಲ್ಲಿಸಿದ ಪರಿಶೀಲನಾ ಅರ್ಜಿಯಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಅದನ್ನು ಪರಿಚಲನೆ ಮೂಲಕ ವಜಾಗೊಳಿಸಲಾಗಿದೆ ಎಂದು ನಿರ್ದಿಷ್ಟವಾಗಿ ಹೇಳಬೇಕಾಗುತ್ತದೆ.
 • ಹಿರಿಯ ವಕೀಲರಿಂದ ಇದನ್ನು ಪ್ರಮಾಣೀಕರಿಸಬೇಕು. ಕ್ಯುರೇಟಿವ್ ಅರ್ಜಿಯನ್ನು ನಂತರ ಮೂರು ಹಿರಿಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರು ಪ್ರಸಕ್ತ ತೀರ್ಮಾನಕ್ಕೆ ಒಳಪಡಿಸಿದ್ದಲ್ಲಿ ಲಭ್ಯವಿದ್ದಲ್ಲಿ ಹಂಚಲಾಗುತ್ತದೆ . ಕ್ಯುರೇಟಿವ್  ಅರ್ಜಿ ಸಲ್ಲಿಸಲು ಯಾವುದೇ ಸಮಯ ಮಿತಿಯನ್ನು ನೀಡಲಾಗಿಲ್ಲ

ಶೀಘ್ರ 3 ಹೊಸ ಕೃಷಿ ಯೋಜನೆ

 • ಸುದ್ಧಿಯಲ್ಲಿ ಏಕಿದೆ? ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ.
 • ದರ ಕೊರತೆ ಯೋಜನೆ :ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ.
 • ಮಾರುಕಟ್ಟೆ ಖಾತ್ರಿ ಯೋಜನೆ:ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ.
 • ಖಾಸಗಿ ಸಂಗ್ರಹಣೆ ಯೋಜನೆ:ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.

ಜಿಎಸ್​ಟಿ ನಿಯಮ

 • ಸುದ್ಧಿಯಲ್ಲಿ ಏಕಿದೆ? ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ನಿಯಮಗಳನ್ನು ಇನ್ನಷ್ಟು ಸರಳ ಗೊಳಿಸುವ ಮೂಲಕ ನೈಜ ವಹಿವಾಟು ನಡೆಸುವ ಸಂಸ್ಥೆಗಳ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರ ಬಯಸಿದೆ.
 • ಈ ನಿಟ್ಟಿನಲ್ಲಿ ಟ್ಯಾಕ್ಸ್ ಕ್ರೆಡಿಟ್ ನಿಯಮ ಸರಳೀಕರಣ ಗೊಳಿಸಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪ್ರಯೋಜನ ದೊರೆಯುವಂತೆ ಮಾಡುವ ಪ್ರಸ್ತಾವವನ್ನು ಸರ್ಕಾರ ಪರಿಶೀಲಿಸುತ್ತಿದೆ. ಇದು ನೈಜ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶಿತ ತಿದ್ದುಪಡಿ.
 • ಇದು ಜಾರಿಯಾದರೆ ಸಣ್ಣ ಪ್ರಮಾಣದ ಇ-ಕಾಮರ್ಸ್ ಉದ್ದಿಮೆಗಳು ಕಲಂ 52ರಂತೆ ಮೂಲದಲ್ಲೆ ತೆರಿಗೆ ಕಡಿತ ಮಾಡಿಕೊಳ್ಳುವ ಪ್ರಮೇಯ ಇರುವುದಿಲ್ಲ. ಅವು ಕಾರ್ವಿುಕರಿಗೆ ಒದಗಿಸುವ ಸೌಕರ್ಯಗಳನ್ನು ಆಧರಿಸಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.
 • ಕರಡು ಪ್ರಸ್ತಾವನೆ ಅಂಶಗಳು: ಆಹಾರ, ಪಾನೀಯ, ಆರೋಗ್ಯ ಸೇವೆ, ಜೀವ ವಿಮೆ, ಪ್ರವಾಸ ಭತ್ಯೆ, ಕಾರು ಬಾಡಿಗೆಗೆ ಪಡೆಯುವಿಕೆಯಂತಹ ಸೌಕರ್ಯವನ್ನು ಉದ್ಯೋಗಿಗೆ ನೀಡುವ ಸಂಸ್ಥೆಗಳು ಐಟಿಸಿ ಸೌಲಭ್ಯ ಪಡೆದುಕೊಳ್ಳಬಹುದು ಎಂಬ ಅಂಶ ಕರಡು ಪ್ರಸ್ತಾವನೆಯಲ್ಲಿದೆ.
 • ಇದೇ ರೀತಿ ಮಾತೃತ್ವ ಸೌಲಭ್ಯ ಕಾಯ್ದೆಯಡಿ ಶಿಶುಪಾಲನಾ ಕೇಂದ್ರವನ್ನು ಹೊರಗುತ್ತಿಗೆ ಮೂಲಕ ಒದಗಿಸಿರುವ ಕಂಪನಿಗಳು ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳಬಹುದು.
Related Posts
Elephant Census to be held in April-May 2017
GPS to be used for next year's elephant census Global Positioning System (GPS) will be used for the first time to count and map elephants in the pachyderm census to be ...
READ MORE
What Is Rare Earth Element [REE] Rare earth metals are a set of seventeen chemical elements in the periodic table, specifically the fifteen lanthanides plus scandium and yttrium Why They Are Called ...
READ MORE
8th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಲಕ್ಷದ್ವೀಪ ಬಳಿ ಹಡಗಿಗೆ ಬೆಂಕಿ ಲಕ್ಷದ್ವೀಪದ ಬಳಿಯ ಅರಬ್ಬಿ ಸಮುದ್ರದಲ್ಲಿ ಮಾರ್ಸಕ್ ಹೊನಮ್‌ ಎನ್ನುವ ವಾಣಿಜ್ಯ ಹಡಗಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. 13 ಭಾರತೀಯರು ಸೇರಿದಂತೆ 27 ಸಿಬ್ಬಂದಿ ಹಡಗಿನಲ್ಲಿದ್ದರು. ನಾಲ್ವರು ನಾಪತ್ತೆಯಾಗಿದ್ದು, ಉಳಿದವರನ್ನು ರಕ್ಷಿಸಲಾಗಿದೆ. 330 ಮೀಟರ್‌ ಉದ್ದದ ಹಡಗು ಮಾರ್ಚ್‌ 1ರಂದು ...
READ MORE
Trade Facilitation agreement TFA is divided into three parts. Section 1 contains provisions on simplification of border clearance procedures and adoption of new transparency measures and consists of 12 Articles. These 12 ...
READ MORE
February 2018 Mahithi Monthly Current affairs Magazine
Dear Aspirants,  NammaKPSC has released February 2018 Mahithi Monthly current affairs magazine. Mahithi Monthly Magazine is the Best Current affairs Magazine for all civil services competitive examinations. It is the only magazine that ...
READ MORE
KAS Prelims results 2017
TO download click here Congratulation to all those who have cleared.  Join the nammaKPSC movement and clear the mains with us. Here is the simplest approach to get you started. NammaKPSC test series. ...
READ MORE
“18th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಅಂತಾರಾಜ್ಯ ಜಲವಿವಾದ ಕೋಶ  ಸುದ್ದಿಯಲ್ಲಿ ಏಕಿದೆ?  ಕೇಂದ್ರ ಜಲ ಆಯೋಗದ ನಿರಂತರ ಎಚ್ಚರಿಕೆಯ ಬಳಿಕವೂ ರಾಜ್ಯದಲ್ಲಿನ ಅಂತಾರಾಜ್ಯ ಜಲವಿವಾದ ಕೋಶವನ್ನು (ಐಎಸ್‌ಡಬ್ಲ್ಯುಡಿ) ಅತಂತ್ರ ಸ್ಥಿತಿಯಲ್ಲೇ ಇಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಡಿ (ಡಬ್ಲ್ಯುಆರ್‌ಡಿಒ) ಅಂತಾರಾಜ್ಯ ಜಲವಿವಾದ ಕೋಶವಿದೆ. ನೆರೆ ರಾಜ್ಯಗಳೊಂದಿಗಿನ ನದಿ ನೀರು ...
READ MORE
ANTI-COUNTERFEITING TRADE AGREEMENT Introduction The Anti-Counterfeiting Trade Agreement (ACTA), is a multinational treaty for the purpose of establishing international standards for intellectual property rights enforcement. The agreement aims to establish an international legal ...
READ MORE
Answer the following questions in not more than 200 words each:  Sakala has assured a new era of accountability in governance in Karnataka. Comment.  Discuss the various measures taken by the government ...
READ MORE
Elephant Census to be held in April-May 2017
Rare Earth Element [REE]
8th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
Trade Facilitation agreement- details and implementation
February 2018 Mahithi Monthly Current affairs Magazine
KAS Prelims results 2017
“18th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
S & T Related Intellectual Property Rights
Public Administration and Management-2 + International Relations
TEST SERIES SCHEDULE

Leave a Reply

Your email address will not be published. Required fields are marked *