9th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ರಾಷ್ಟ್ರೀಯ ಇ- ಮಾರ್ಕೆಟ್‌ ಸವೀರ್‍ಸಸ್‌ ಪ್ರೈ.ಲಿ’ 

ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಎಪಿಎಂಸಿಗಳಲ್ಲಿ ರೈತರಿಂದ ಅವೈಜ್ಞಾನಿಕ ಶುಲ್ಕ ಸಂಗ್ರಹಿಸುತ್ತಿರುವ ‘ರಾಷ್ಟ್ರೀಯ ಇ- ಮಾರ್ಕೆಟ್‌ ಸವೀರ್‍ಸಸ್‌ ಪ್ರೈ.ಲಿ’ (ರೆಮ್ಸ್‌) ಸೇವೆಯನ್ನು ರದ್ದು ಪಡಿಸಲು ಸರಕಾರ ಗಂಭೀರ ಆಲೋಚನೆ ನಡೆಸಿದೆ.

ಏಕೆ ಈ ನಿರ್ಧಾರ ?

 • ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಒಂದೇ ರೀತಿಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ,ಅದಕ್ಕೆ ಬೇಕಾದ ಆನ್‌ಲೈನ್‌ ಸೇವೆ ನೀಡುವ ಜವಾಬ್ದಾರಿ ಹೊತ್ತಿದ್ದ ರೆಮ್ಸ್‌, ಈ ಕೆಲಸವನ್ನು ಸಮರ್ಪಕವಾಗಿ ಮಾಡದೇ ರೈತರಿಂದ ಕಳೆದ ವರ್ಷಗಳ ಅವಧಿಯಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿತ್ತು.
 • ಇದರ ಬೆನ್ನಲ್ಲಿಯೇ ರಾಜ್ಯದ ಎಲ್ಲೆಡೆ ರೈತರು ಹಾಗೂ ರೈತ ಮುಖಂಡರಿಂದ ಭಾರೀ ವಿರೋಧ ವ್ಯಕ್ತವಾಗಲಾರಂಭಿಸಿದ್ದು , ಸ್ವತಃ ಕೃಷಿ ಸಚಿವ ಎನ್‌. ಎಚ್‌. ಶಿವಶಂಕರ್‌ ರೆಡ್ಡಿ ಅವರೇ ರೆಮ್ಸ್‌ ಕಾರ್ಯನಿರ್ವಹಣೆ ಕುರಿತು ಆಕ್ಷೇಪ ಎತ್ತಿದ್ದಾರೆ.
 • ”ರಾಜ್ಯದ ಇ-ಮಾರುಕಟ್ಟೆ ವ್ಯವಸ್ಥೆಯನ್ನು ಅಧ್ಯಯನ ನಡೆಸಿದ ಬಳಿಕ ಕೇಂದ್ರ ಸರಕಾರ ರಾಷ್ಟ್ರಮಟ್ಟದಲ್ಲಿ ಇ ನಾಮ್ಸ್‌ ಜಾರಿಗೆ ತಂದಿದೆ. ಆದರೆ, ಇ ನಾಮ್ಸ್‌ ವ್ಯಾಪ್ತಿ ರಾಷ್ಟ್ರಮಟ್ಟದಲ್ಲಿದ್ದರೆ ರೆಮ್ಸ್‌ ರಾಜ್ಯಕ್ಕೆ ಸೀಮಿತವಾಗಿದೆ.

ಹಿನ್ನಲೆ

 • 2013-14ರಿಂದ 2018ರ ಜೂನ್‌ವರೆಗೆ ಎಪಿಎಂಸಿಗಳಿಗೆ ಬರುವ ರೈತರ ಉತ್ಪನ್ನಗಳ ಮಾಹಿತಿಯನ್ನು ರೆಮ್ಸ್‌ ಸಂಸ್ಥೆಯು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ ಪ್ರತಿ 100 ರೂ. ಮೇಲೆ 10 ಪೈಸೆ ಶುಲ್ಕ ಸಂಗ್ರಹಿಸುತ್ತಿದೆ. ಈ ರೀತಿ ಸಂಗ್ರಹಿಸಿದ ಶುಲ್ಕ 100 ಕೋಟಿ ರೂ. ದಾಟಿರುವ ಅಂದಾಜಿದ್ದು, ವ್ಯವಸ್ಥೆ ಜಾರಿಗೆ ತಂದಿರುವುದರ ಹಿಂದಿನ ಮೂಲ ಉದ್ದೇಶ ಮಾತ್ರ ಈಡೇರಿಲ್ಲ.

ಮುಂದಿನ ಮಾರ್ಗೋಪಾಯ

 • ಹಾಲಿ ವ್ಯವಸ್ಥೆ ನಿರೀಕ್ಷಿತ ರೀತಿಯಲ್ಲಿ ಕಾರ್ಯ ನಿರ್ವಹಿಸದ ಕಾರಣ ಪರ್ಯಾಯ ವ್ಯವಸ್ಥೆ ಕುರಿತು ಚಿಂತನೆ ನಡೆದಿದೆ.
 • ರೈತರ ಕೃಷಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಯಿಂದ ಹಿಡಿದು ಖರೀದಿವರೆಗೆ ‘ಎಂಡ್‌ ಟು ಎಂಡ್‌ ಸಲ್ಯೂಷನ್ಸ್‌’ ಕಲ್ಪಿಸುವುದಾಗಿ ಹೇಳಿ ಖಾಸಗಿ ಕಂಪನಿ ಮುಂದೆ ಬಂದಿದ್ದು, ಈ ಕುರಿತು ಪರಿಶೀಲನೆ ನಡೆದಿದೆ.

ರಾಷ್ಟ್ರೀಯ ಇ- ಮಾರ್ಕೆಟ್‌ ಸವೀರ್‍ಸಸ್‌ ಪ್ರೈ.ಲಿ‘ (ರೆಮ್ಸ್‌)

 • ಕರ್ನಾಟಕ ಸರಕಾರ ಹೆಚ್ಚುವರಿ ಕೃಷಿ ಕಾರ್ಯದರ್ಶಿ, ಸಹಕಾರ ಇಲಾಖೆಯ ಅಧ್ಯಕ್ಷತೆಯಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವ ವಿಧಾನವನ್ನು ಅನ್ವೇಷಿಸಲು, ವಲಯದಲ್ಲಿ ಅಗತ್ಯವಾದ ಮಧ್ಯಸ್ಥಿಕೆಗಳನ್ನು ಗುರುತಿಸಿ ಮತ್ತು ಅಗತ್ಯ ಸುಧಾರಣೆಗಳನ್ನು ಸೂಚಿಸುವಂತೆ ಸಮಿತಿಯನ್ನು ರಚಿಸಿದೆ.
 • ರಾಷ್ಟ್ರದ ಎಲ್ಲ ಎಲೆಕ್ಟ್ರಾನಿಕ್ಸ್ ವಹಿವಾಟುಗಳನ್ನು ಅರ್ಥಮಾಡಿಕೊಳ್ಳಲು ಎಲ್ಲಾ ಮಧ್ಯಸ್ಥಗಾರರ ಮತ್ತು ರಾಜ್ಯದಲ್ಲಿ ನಿಯಂತ್ರಿತ ಮಾರುಕಟ್ಟೆಗಳಿಗೆ ಭೇಟಿ ನೀಡುವ ಮತ್ತು ಮುಂಬೈಯಲ್ಲಿರುವ NEML ಅನ್ನು ಚರ್ಚಿಸಿದ ನಂತರ ಸಮಿತಿಯು ಅದರ ವರದಿಯನ್ನು ಸರಕಾರಕ್ಕೆ 05.2013 ರಂದು ಸಲ್ಲಿಸಿದೆ. ಸರ್ಕಾರವು ಈ ವರದಿಯನ್ನು ಸ್ವೀಕರಿಸಿದೆ ಮತ್ತು ರಾಜ್ಯದಲ್ಲಿ ಅನುಷ್ಠಾನಕ್ಕಾಗಿ ಕೃಷಿ ಮಾರ್ಕೆಟಿಂಗ್ ಪಾಲಿಸಿನ್ನು ಅಳವಡಿಸಿಕೊಂಡಿದೆ.
 • ಕರ್ನಾಟಕ ಸರ್ಕಾರ ಮತ್ತು ನೆಲ್ಎಂಎಲ್ ಶೇಕಡಾ 50 ರಷ್ಟು ಶೇರುಗಳನ್ನು ಹೊಂದಿರುವ ಜಂಟಿ ಉದ್ಯಮ ಕಂಪೆನಿಯಾಗಿ ರೈತರಿಗೆ ಕೃಷಿ ಮಾರ್ಕೆಟಿಂಗ್ ಪಾಲಿಸಿಯನ್ನು ಅಳವಡಿಸಲು ಸ್ಥಾಪಿಸಲಾಯಿತು.

ರಾತ್ರಿ ಸಂಚಾರ ನಿಷೇಧ ತೆರವು

ಸುದ್ಧಿಯಲ್ಲಿ ಏಕಿದೆ ?ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದಕ್ಕೆ ರಾಜ್ಯ ಸರಕಾರ ತೆರೆಮರೆಯಲ್ಲೇ ‘ಉತ್ಸಾಹ’ ತೋರುತ್ತಿದ್ದು, ವನ್ಯಜೀವಿಗಳ ಸಹಜ ಬದುಕಿಗೆ ಕಂಟಕವುಂಟಾಗುವ ಅಪಾಯ ಮತ್ತೊಮ್ಮೆ ಎದುರಾಗಿದೆ.

ಹಿನ್ನಲೆ

 • ರಾತ್ರಿ ಸಂಚಾರ ನಡೆಸುವ ವಾಹನಗಳಿಗೆ ಸಿಲುಕಿ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳು ಅಪಾರ ಪ್ರಮಾಣದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಸರ ಹೋರಾಟಗಾರರು ನಡೆಸಿದ ಪ್ರಯತ್ನದಿಂದಾಗಿ ರಾತ್ರಿ ಸಂಚಾರ ನಿಷೇಧಿಸುವಂತೆ 2010ರಲ್ಲಿ ಸುಪ್ರೀಂಕೋರ್ಟ್‌ ನೀಡಿದ ನಿರ್ದೇಶನವನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಿತ್ತು.
 • ಆದರೆ ಕೇರಳ ಸರಕಾರ, ನಿಷೇಧ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಒಂದು ದಶಕಗಳ ಕಾಲ ಯಾವುದೇ ಆತಂಕವಿಲ್ಲದೇ ನಡೆಯುತ್ತಿದ್ದ ಈ ವ್ಯವಸ್ಥೆಗೆ ಈಗ ಅಡ್ಡಿಯುಂಟಾಗುವ ಸಂಭವ ಇದೆ. ಈ ಹೆದ್ದಾರಿಯಲ್ಲಿ 5 ಎಲಿವೇಟೆಡ್‌ ರಸ್ತೆ ನಿರ್ಮಿಸುವುದಕ್ಕೆ ತೊಂದರೆಯಿಲ್ಲ ಎಂದು ಕೇಂದ್ರ ಭೂ ಸಾರಿಗೆ ಇಲಾಖೆಯು ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದೆ. ಕೇರಳ ಸರಕಾರ ಇದನ್ನು ಸ್ವಾಗತಿಸಿದ್ದು, ರಾಜ್ಯ ಸರಕಾರ ಕೂಡಾ ಒಪ್ಪಿಗೆ ನೀಡಲು ಮುಂದಾಗಿದೆ ಎಂಬ ವರ್ತಮಾನ ವನ್ಯಜೀವಿ ಸಂರಕ್ಷಕರ ಆತಂಕಕ್ಕೆ ಕಾರಣವಾಗಿದೆ.

ಕೇರಳದ ಲಾಬಿ ಏಕೆ ?

 • ಬಂಡಿಪುರ-ಕೇರಳ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ರಾತ್ರಿ ಸಂಚಾರ ಆರಂಭಿಸುವ ವಿಚಾರದಲ್ಲಿ ಕೇರಳ ಸರಕಾರ ಹಿಂದಿನಿಂದಲೂ ಉತ್ಸಾಹ ತೋರುತ್ತಿದೆ. ಇದಕ್ಕೆ ಕಾರಣ ಟ್ರಾನ್ಸ್‌ಪೋರ್ಟ್‌ ಲಾಬಿ. ಅಲ್ಲಿನ ಬಸ್‌ ಮಾಲೀಕರೇ ಈ ಬಗ್ಗೆ ಹೆಚ್ಚು ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಿದರೆ ಖಾಸಗಿ ಬಸ್‌ಗಳಲ್ಲಿ ಲಗೇಜ್‌ ಸಾಗಿಸುವುದಕ್ಕೆ ಅವಕಾಶ ದೊರೆಯುತ್ತದೆ.
 • ಪರ್ಮಿಟ್‌ ಇಲ್ಲದೇ ವಾಹನ ಸಂಚಾರಕ್ಕೂ ಅನುಕೂಲವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕ ಸಂಪರ್ಕಕ್ಕೆ ಇದು ಹತ್ತಿರದ ಮಾರ್ಗವಾಗಿದೆ. 2010ರಿಂದಲೂ ಕೇರಳ ಸರಕಾರ ರಾತ್ರಿ ಸಂಚಾರ ಪುನರಾರಂಭಕ್ಕೆ ಒತ್ತಡ ಹೇರುತ್ತಲೇ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಅಕ್ರಮ ಮರಳು ಹಾಗೂ ಕಲ್ಲುಗಣಿಗಾರಿಕೆ ನಡೆಸುವವರು ಇದರ ಪರವಾಗಿದ್ದಾರೆ.
 • ಕೇರಳದಲ್ಲಿ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮರಳಿಗಾಗಿ ಕರ್ನಾಟಕವನ್ನು ನೆಚ್ಚಿಕೊಳ್ಳಲಾಗಿದ್ದು, ‘ಕಳ್ಳಮಾರ್ಗ’ದಲ್ಲಿ ಮರಳು ಹಾಗೂ ಕಲ್ಲು ಸಾಗಿಸುವುದಕ್ಕೆ ಬಂಡಿಪುರ ಹೆದ್ದಾರಿ ಅತ್ಯಂತ ಪ್ರಶಸ್ತ. ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ನೀಡಿದರೆ ಈ ಎಲ್ಲ ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ

 • ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ.
 • ಪ್ರಾಜೆಕ್ಟ್ ಟೈಗರ್ ಕ್ರಿಯೆಗೆ ಈ ಅಭಯಾರಣ್ಯ ಸಂಬಂಧವನ್ನು ಹೊಂದಿದೆ. ಹುಲಿ, ಆನೆ, ಚಿರತೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
 • ಬಂಡೀಪುರ ರಾಷ್ಟ್ರೀಯ ಉದ್ಯಾನವು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿಮೀಸಲು ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿದೆ. ಇದು ಒಮ್ಮೆ ಮೈಸೂರು ಸಾಮ್ರಾಜ್ಯದ ಮಹಾರಾಜರಿಗೆ ಖಾಸಗಿ ಬೇಟೆಯಾಡಲು ಮೀಸಲಾಗಿತ್ತು, ಆದರೆ ಈಗ ಹುಲಿ ಸಂರಕ್ಷಣಾ ಪ್ರದೇಶವಾಗಿ ಮಾರ್ಪಾಡು ಮಾಡಲಾಗಿದೆ. ಬಂಡೀಪುರವು ತನ್ನ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಅನೇಕ ವಿಧದ ಬಯೋಮ್ಗಳನ್ನು ಹೊಂದಿದೆ, ಆದರೆ ಒಣಪತನಶೀಲ ಅರಣ್ಯವು ಪ್ರಬಲವಾಗಿದೆ.
 • ಉದ್ಯಾನವು 874 ಚದರಕಿಲೋಮೀಟರ್ (337 ಚದರಮೈಲಿ) ಪ್ರದೇಶವನ್ನು ವ್ಯಾಪಿಸಿದೆ. ಇದು ಭಾರತದ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಹಲವಾರು ಜಾತಿಗಳನ್ನು ರಕ್ಷಿಸುತ್ತದೆ. ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನ (643 ಕಿಮಿ.2 (248 ಚದರಮೈಲಿ)), ಮುದುಮಲೈ ರಾಷ್ಟ್ರೀಯ ಉದ್ಯಾನವನ (320 ಕಿಮಿ.2 (120 ಚದರಮೈಲಿ)) ಮತ್ತು ವಯನಾಡ್ವನ್ಯ ಜೀವಿ ಅಭಯಾರಣ್ಯ (344 ಕಿಮಿ.2 (133 ಚದರಮೈಲಿ)) ಜೊತೆಗೆ ನೀಲಗಿರಿ ಜೀವಗೋಳ ರಿಸರ್ವ್ ಒಟ್ಟು 2,183 ಕಿಮಿ.2 (843 ಚದರಮೈಲಿ) ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಪ್ರದೇಶವಾಗಿದೆ ಮತ್ತು ದಕ್ಷಿಣ ಏಷ್ಯಾದ ಕಾಡು ಆನೆಗಳ ದೊಡ್ಡ ವಾಸಸ್ಥಾನವಾಗಿದೆ.

ಜಿಕಾ ವೈರಸ್

ಸುದ್ಧಿಯಲ್ಲಿ ಏಕಿದೆ ?ರಾಜಸ್ತಾನದ ಜೈಪುರದಲ್ಲಿ ಒಟ್ಟು 22 ಜನರಲ್ಲಿ ಜಿಕಾ ವೈರಸ್​ ಪತ್ತೆಯಾಗಿದ್ದು ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಕೇಳಿದೆ.

 • ಗರ್ಭಾವಸ್ಥೆಯಲ್ಲಿರುವಾಗಲೇ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಿರುವ ಜಿಕಾ ವೈರಸ್ (ಸೊಳ್ಳೆಯಿಂದ ಹರಡುವ ರೋಗಾಣು) ​ ಪತ್ತೆಯಾಗಿರುವುದನ್ನು ಭಾರತೀಯ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ಸಂಸ್ಥೆ ಸ್ಪಷ್ಟಪಡಿಸಿದೆ.
 • ಜೈಪುರದಲ್ಲಿ 22 ಜನರ ರಕ್ತ ಪರೀಕ್ಷೆ ಮಾಡಿದಾಗ ಎಲ್ಲರಲ್ಲೂ ಪಾಸಿಟಿವ್​ ಎಂದು ವೈದ್ಯಕೀಯ ವರದಿ ಬಂದಿದೆ. ಕೇಂದ್ರದಿಂದ ಏಳು ಜನರ ತಂಡವನ್ನು ಅಲ್ಲಿಗೆ ಕಳಿಸಲಾಗಿದ್ದು ಅವರು ವೈರಸ್​ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲಿದ್ದಾರೆ.
 • ಜಿಕಾ ವೈರಸ್​ ಭಾರತದಲ್ಲಿ ಮೊದಲ ಬಾರಿಗೆ 2017ರ ಫೆಬ್ರವರಿಯಲ್ಲಿ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಪತ್ತೆಯಾಗಿತ್ತು

ಜಿಕಾ ವೈರಸ್

 • ಝಿಕಾ ವೈರಸ್ (ZIKV) ಫ್ಲೇವಿವಿರಿಡೆ ವೈರಸ್ ಕುಟುಂಬದ ಸದಸ್ಯ. ಎ.ಈಜಿಪ್ಟಿ ಮತ್ತು ಎ ಅಲ್ಬೊಪಿಕ್ಟಸ್ ಮುಂತಾದ ಹಗಲಿನಲ್ಲಿ -ಸಕ್ರಿಯವಾದ ಏಡೆಸ್ ಸೊಳ್ಳೆಗಳು ಇದನ್ನು ಹರಡುತ್ತವೆ.
 • ಉಗಾಂಡಾದ ಝಿಕಾ ಅರಣ್ಯದಿಂದ ಇದರ ಹೆಸರು ಬಂದಿದೆ, ಅಲ್ಲಿ ವೈರಸ್ ಮೊದಲ ಬಾರಿಗೆ 1947 ರಲ್ಲಿ ಪ್ರತ್ಯೇಕಿಸಲ್ಪಟ್ಟಿತು.
 • ಝಿಕಾ ವೈರಸ್ ಡೆಂಗ್ಯೂ, ಕಾಮಾಲೆ ಜ್ವರ, ಜಪಾನ್ ಎನ್ಸೆಫಾಲಿಟಿಸ್ ಮತ್ತು ವೆಸ್ಟ್ ನೈಲ್ ವೈರಸ್ಗಳಿಗೆ ಸಂಬಂಧಿಸಿದೆ.
 • 1950 ರ ದಶಕದಿಂದಲೂ, ಆಫ್ರಿಕಾದಿಂದ ಏಷ್ಯಾಕ್ಕೆ ಕಿರಿದಾದ ಸಮಭಾಜಕ ಬೆಲ್ಟ್ನಲ್ಲಿ ಇದು ಕಂಡುಬರುತ್ತದೆ. 2007 ರಿಂದ 2016 ರವರೆಗೆ, ಈ ವೈರಸ್ ಫೆಸಿಫಿಕ್ ಸಾಗರದಾದ್ಯಂತ ಪೂರ್ವಕ್ಕೆ ಹರಡಿತು, ಇದು 2015-16ರ ಝಿಕ ವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಯಿತು.
 • ಝಿಕಾ ಜ್ವರ ಅಥವಾ ಝಿಕಾ ವೈರಸ್ ರೋಗ ಎಂದು ಕರೆಯಲ್ಪಡುವ ಸೋಂಕು, ಡೆಂಗ್ಯೂ ಜ್ವರದ ತೀಕ್ಷ್ಣವಾದ ರೂಪದಂತೆಯೇ ಸಾಮಾನ್ಯವಾಗಿ ಯಾವುದೇ ಅಥವಾ ಸೌಮ್ಯವಾದ ಲಕ್ಷಣಗಳನ್ನು ಉಂಟುಮಾಡುತ್ತದೆ.
 • ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದಾಗ, ಪ್ಯಾರಸಿಟಮಾಲ್ (ಅಸೆಟಾಮಿನೋಫೆನ್) ಮತ್ತು ಉಳಿದವು ರೋಗಲಕ್ಷಣಗಳಿಗೆ ಸಹಾಯ ಮಾಡುತ್ತವೆ .
 • 2016 ರ ವೇಳೆಗೆ, ಔಷಧಿಗಳ ಅಥವಾ ಲಸಿಕೆಗಳಿಂದ ಅನಾರೋಗ್ಯವನ್ನು ತಡೆಯಲು ಸಾಧ್ಯವಾಗಿಲ್ಲ .
 • ಝಿಕಾ ವೈರಸ್ ಗರ್ಭಿಣಿ ಮಹಿಳೆಯಿಂದ ಮಗುವಿಗೆ ಹರಡಬಹುದು.
 • ಇದು ಮೈಕ್ರೋಸೆಫಾಲಿ, ತೀವ್ರವಾದ ಮಿದುಳಿನ ದೋಷಪೂರಿತ ಮತ್ತು ಇತರ ಜನನ ದೋಷಗಳಿಗೆ ಕಾರಣವಾಗಬಹುದು.
 • ವಯಸ್ಕರಲ್ಲಿ ಝಿಕಾ ಸೋಂಕುಗಳು ಗ್ವಿಲೆನ್-ಬಾರ್ ಸಿಂಡ್ರೋಮ್ನಲ್ಲಿ ವಿರಳವಾಗಿ ಉಂಟಾಗಬಹುದು

ಭೂರಕ್ಷಣೆಗೆ 2030 ಗಡುವು!

ಸುದ್ಧಿಯಲ್ಲಿ ಏಕಿದೆ ?ಇತ್ತೀಚೆಗೆ ಕೇರಳ ಮತ್ತು ಕೊಡಗನ್ನು ಕಾಡಿದ ಭೀಕರ ಪ್ರವಾಹ ಇಡೀ ಭೂಮಂಡಲಕ್ಕೆ ಪ್ರಕೃತಿ ನೀಡಿರುವ ಎಚ್ಚರಿಕೆಯೇ? ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸುವ ವಿಶ್ವಸಂಸ್ಥೆಯ ಅಂತರ ಸರ್ಕಾರಿ ಸಮಿತಿ(ಐಪಿಸಿಸಿ) ಕೂಡ ಈ ಸ್ಪೋಟಕ ಸಂಗತಿಯನ್ನು ಖಚಿತಪಡಿಸುವ ಮೂಲಕ ಭೂತಜ್ಞರು, ವಿಜ್ಞಾನಿಗಳ ಅಭಿಪ್ರಾಯವನ್ನು ಸಮರ್ಥಿಸಿದೆ.

 • ಕೇರಳ, ಕೊಡಗನ್ನೂ ಮೀರಿಸುವ ಭೀಕರ ನೈಸರ್ಗಿಕ ಅವಘಡಗಳು ಭವಿಷ್ಯದಲ್ಲಿ ಪದೇಪದೆ ಮರುಕಳಿಸಲಿದ್ದು, ಜಾಗತಿಕ ತಾಪಮಾನಕ್ಕೆ ತಡೆ ಬೀಳದಿದ್ದಲ್ಲಿ 2030ರ ವೇಳೆಗೆ ಭೂಮಿಯೇ ಸರ್ವನಾಶ ಆಗುವ ಅಪಾಯದ ಬಗ್ಗೆ ಸಮಿತಿ ಎಚ್ಚರಿಸಿದೆ.

ದಶಕದಲ್ಲಿ 1.5 ಡಿಗ್ರಿ ಹೆಚ್ಚಳ!

 • ಅರಣ್ಯನಾಶ, ಜಲ ಮತ್ತು ವಾಯುಮಾಲಿನ್ಯ, ತ್ಯಾಜ್ಯ ಶೇಖರಣೆಯಂಥ ಪ್ರಕೃತಿಗೆ ಮಾರಕವಾದ ಕೃತ್ಯಗಳು ನಿಯಂತ್ರಣವಾಗದಿದ್ದಲ್ಲಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೆ ೖಡ್ ಪ್ರಮಾಣ ಮಿತಿಮೀರಲಿದೆ. ಪರಿಣಾಮ 2030ರ ಹೊತ್ತಿಗೆ ಭೂಮಿಯ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ.
 • ಇದರಿಂದಾಗಿ ತೀವ್ರ ಪ್ರವಾಹ, ಕಾಡ್ಗಿಚ್ಚು, ಆಹಾರದ ಕೊರತೆ ಉಂಟಾಗಿ ಲಕ್ಷಾಂತರ ಜನರು ಜೀವತೆರಬೇಕಾದ ಸ್ಥಿತಿ ಬರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಪಮಾನ ಹೆಚ್ಚಳದ ಪರಿಣಾಮ

 • ಬೇಸಿಗೆಯ ಅವಧಿ ಹೆಚ್ಚಳ
 • ವಿಶ್ವಾದ್ಯಂತ ಬಿಸಿಗಾಳಿ ವಿಸ್ತರಣೆ
 • ಸಮುದ್ರದ ನೀರಿನ ಮಟ್ಟದಲ್ಲಿ ತೀವ್ರ (10 ಸೆಂಮೀ) ಏರಿಕೆ
 • ಭೀಕರ ಬರಗಾಲ
 • ವಿಪರೀತ ಮಳೆ, ಪ್ರವಾಹ
 • ಆಹಾರದ ಕೊರತೆ
 • ಆಹಾರ ಪದಾರ್ಥಗಳ ಬೆಲೆ ತೀವ್ರ ಏರಿಕೆ
 • ಆದಾಯ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ

ಅನಾಹುತ ತಡೆಗೆ ಪರಿಹಾರವೇನು

# ನಿಸರ್ಗದಲ್ಲಿನ ಕಾರ್ಬನ್ ಕಣಗಳನ್ನು ಕಡಿಮೆಗೊಳಿಸುವ ನೈಸರ್ಗಿಕ ಪ್ರಕ್ರಿಯೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು.

# 2030ರೊಳಗೆ ಜಾಗತಿಕವಾಗಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ 45% ಇಳಿಕೆಯಾಗಬೇಕು. ಹಸಿರುಮನೆ ಅನಿಲಗಳ ಪ್ರಮಾಣ 2050ರ ವೇಳೆಗೆ ಶೂನ್ಯಮಟ್ಟಕ್ಕೆ ತಲುಪಬೇಕು

# ಕೈಗಾರಿಕೆಗಳು ಹೊರಸೂಸುವ ಅನಿಲಗಳು, ತ್ಯಾಜಗಳ ನಿಯಂತ್ರಣಕ್ಕೆ ಪ್ಯಾರಿಸ್ ಒಪ್ಪಂದದಲ್ಲಿ ಸೂಚಿಸಲಾಗಿರುವ ಮಿತಿಯ ಪಾಲನೆ.

ಏನಿದೆ ವರದಿಯಲ್ಲಿ?

 • 2030ಕ್ಕೆ ಮುನ್ನ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣಕ್ಕೆ ಬರಲೇಬೇಕು, ತಾಪಮಾನ 5 ಡಿಗ್ರಿ ಸೆಲ್ಸಿಯಸ್ ಮೀರಿದರೆ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ
 • ಭಾರತದ ಕೋಲ್ಕತ, ಪಾಕಿಸ್ತಾನದ ಕರಾಚಿಗೆ ತಟ್ಟಲಿದೆ ಬಿಸಿಗಾಳಿಯ ಹೊಡೆತ, ಭತ್ತ, ಗೋಧಿ, ಜೋಳದ ಇಳುವರಿ ಇಳಿಕೆ, ಕಾಡಲಿದೆ ಆಹಾರದ ಕೊರತೆ
 • ಹವಾಮಾನ ಬದಲಾವಣೆ ತಡೆ ಅಸಾಧ್ಯ, ಅಪಾಯಕಾರಿ ಪರಿಣಾಮಕ್ಕೆ ಬೇಕಿದೆ ಅಂಕುಶ

ಏನಿದು ಪ್ಯಾರಿಸ್ ಒಪ್ಪಂದ?

 • 2015ರಲ್ಲಿ ಫ್ರಾನ್ಸ್​ನ ಪ್ಯಾರಿಸ್​ನಲ್ಲಿ 197 ರಾಷ್ಟ್ರಗಳು ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚು ಏರಿಕೆಯಾಗದಂತೆ ತಡೆಯುವುದಕ್ಕಾಗಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲು ಒಪ್ಪಂದ ಮಾಡಿಕೊಂಡವು.
 • ಅದರಂತೆ ಕೈಗಾರಿಕೆಗಳ ಹೊರಸೂಸುವಿಕೆಯಾದ ಅನಿಲಗಳಿರಬಹುದು ಅಥವಾ ತ್ಯಾಜ್ಯಗಳಿರಬಹುದು, ಅವುಗಳನ್ನು ನಿಯಂತ್ರಿಸುವ ಪಣತೊಟ್ಟವು. ಆದರೆ ಈ ಒಪ್ಪಂದದಿಂದ ದೇಶಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೂವರೆ ವರ್ಷದ ಬಳಿಕ ಒಪ್ಪಂದದಿಂದ ಹೊರನಡೆದರು

ಡಿಎಲ್ 9 ರಾಷ್ಟ್ರಗಳಲ್ಲಿ ಮಾನ್ಯ

ಸುದ್ಧಿಯಲ್ಲಿ ಏಕಿದೆ ?ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನ್ಯೂಜಿಲೆಂಡ್, ಬ್ರಿಟನ್, ಆಸ್ಟ್ರೇಲಿಯಾ ಸೇರಿ ಒಟ್ಟು 9 ರಾಷ್ಟ್ರಗಳು ಸೆಲ್ಪ್ ಡ್ರೖೆವಿಂಗ್ ಹಾಲಿಡೆ ಯೋಜನೆ ಜಾರಿಗೊಳಿಸಿವೆ.

 • ಭಾರತೀಯ ವಾಹನ ಚಾಲನಾ ಪರವಾನಗಿ (ಇಂಡಿಯನ್ ಡ್ರೖೆವಿಂಗ್ ಲೈಸನ್ಸ್) ಹೊಂದಿದವರು ಈ ರಾಷ್ಟ್ರಗಳಲ್ಲಿ ವಾಹನ ಚಾಲನೆ ಮಾಡಬಹುದು.
 • ಆಸ್ಟ್ರೇಲಿಯಾದ ಹಲವು ರಾಜ್ಯಗಳಲ್ಲಿ ಅನ್ಯ ರಾಷ್ಟ್ರಗಳ ಡ್ರೖೆವಿಂಗ್ ಲೈಸನ್ಸ್ ಇದ್ದವರು ವಾಹನ ಚಲಾಯಿಸಬಹುದಾಗಿದೆ. ಆದರೆ, ಡ್ರೖೆವಿಂಗ್ ಲೈಸನ್ಸ್ ಹೊಸದಾಗಿ ಪಡೆದಿರು ವುದು ಕಡ್ಡಾಯವಾಗಿದೆ.
 • ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್​ನಲ್ಲಿ ಕೂಡ ಭಾರತೀಯರು ಒಂದು ವರ್ಷ ಸೆಲ್ಪ್ ಡ್ರೖೆವಿಂಗ್ ಸೌಲಭ್ಯ ಹೊಂದಬಹುದು. ಆದರೆ ಇಲ್ಲಿ ನಿರ್ದಿಷ್ಟ ವಾಹನಗಳ ಚಾಲನೆ ಮಾತ್ರ ಅವಕಾಶವಿದೆ.

ಯಾವ ರಾಷ್ಟ್ರಗಳು?:

 • ಸ್ವಿಜರ್​ಲೆಂಡ್, ನ್ಯೂಜಿಲೆಂಡ್, ಫ್ರಾನ್ಸ್, ಜರ್ಮನಿ, ಅಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್.
 • ಅಮೆರಿಕದಲ್ಲೂ ಅವಕಾಶ: ಅಮೆರಿಕದ ಕೆಲವು ರಾಜ್ಯಗಳಲ್ಲಿ ಭಾರತೀಯ ವಾಹನ ಚಾಲನಾ ಪರವಾನಗಿ ಆಧರಿಸಿ ಡ್ರೖೆವಿಂಗ್ ಮಾಡಬಹುದು. ಆದರೆ, ಇದಕ್ಕೆ ಕೆಲವೊಂದು ಷರತ್ತುಗಳು ಅನ್ವಯಿಸುತ್ತವೆ. ಅಮೆರಿಕ ಪ್ರವೇಶಿಸಿದ ದಿನಾಂಕ ನಮೂದಿಸಿರುವ ಐ-94 ಎಂಬ ಅರ್ಜಿಯ ನಕಲುಪ್ರತಿ ಇರಬೇಕು.
 • ಅನುಮತಿ ಅವಶ್ಯ: ನ್ಯೂಜಿಲೆಂಡ್​ನಲ್ಲಿ ಭಾರತೀಯ ಡಿಎಲ್ ಬಳಸಿ ಡ್ರೖೆವಿಂಗ್ ಹಾಲಿಡೆ ಆಸ್ವಾದಿಸಲು ಸ್ಥಳೀಯ ಸಾರಿಗೆ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ವಾಹನ ಚಾಲನೆ ಮಾಡುವವರಿಗೆ 21 ವರ್ಷ ಆಗಿರುವುದು ಕಡ್ಡಾಯ. ಭಾರತೀಯ ಡಿಎಲ್ ಅಲ್ಲದೆ, ಸ್ಥಳೀಯ ಭಾಷೆಗೆ ಅನುವಾದಿಸಲ್ಪಟ್ಟ ಡಿಎಲ್​ನ ನಕಲು ಪ್ರತಿ ಇರಬೇಕು.
 • ಫ್ರಾನ್ಸ್​ನಲ್ಲಿ 1 ವರ್ಷ ಅವಕಾಶ: ಫ್ರಾನ್ಸ್​ನಲ್ಲಿ ಡ್ರೖೆವಿಂಗ್ ಮಾಡಲು ಭಾರತೀಯ ಡಿಎಲ್ ಹೊಂದಿರುವರಿಗೆ 1 ವರ್ಷ ಅವಕಾಶವಿದೆ. ಇದಕ್ಕಾಗಿ ಫ್ರೆಂಚ್ ಭಾಷೆಗೆ ಅನುವಾದಿಸಲ್ಪಟ್ಟಿರುವ ವಾಹನ ಚಾಲನಾ ಪರವಾನಗಿಯ ನಕಲು ಪ್ರತಿ ಹೊಂದಿರುವುದು ಕಡ್ಡಾಯ.

ಅರ್ಥಶಾಸ್ತ್ರದಲ್ಲಿ ನೊಬೆಲ್‌

 • ಜಾಗತಿಕ ತಾಪಮಾನ ಏರಿಕೆ ಹಾಗೂ ಮ್ಯಾಕ್ರೋಎಕನಾಮಿಕ್‌ ವಿಶ್ಲೇಶಣೆಯ ಮೂಲಕ ತಾಂತ್ರಿಕ ಅನ್ವೇಷಣೆಗಾಗಿ ಯುಎಸ್‌ನ ವಿಲಿಯಂ ನಾರ್ಡಸ್‌ ಹಾಗೂ ಪಾಲ್‌ ರೂಮರ್‌ ಅವರಿಗೆ 2018ನೇ ಸಾಲಿನ ನೊಬೆಲ್‌ ಪ್ರಶಸ್ತಿ ಲಭಿಸಿದೆ.
 • ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್‌ ಸೈನ್ಸ್‌, ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಈರ್ವರು ವಿಜ್ಞಾನಿಗಳ ಮಾರುಕಟ್ಟೆ ಏರಿಳಿತದಿಂದ ನಿಸರ್ಗದ ಮೇಲಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ಪ್ರಶಂಸನೀಯ ಎಂದು ಅಕಾಡೆಮಿ ಹೇಳಿದೆ.
 • 1968ರಿಂದ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, 10 ಲಕ್ಷ ಅಮೆರಿಕನ್‌ ಡಾಲರ್‌ ಬಹುಮಾನ ಕೂಡ ಇದೆ.
Related Posts
Karnataka Current Affairs – KAS/KPSC Exams – 26th March 2018
ಚಿಪ್ಕೋ ಚಳುವಳಿಯ 45ನೇ ವಾಷಿಕೋತ್ಸವಕ್ಕೆ ಗೂಗಲ್​ ಡೂಡಲ್​ ಗೌರವ ಅರಣ್ಯ ನಾಶದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿಪ್ಕೋ ಚಳುವಳಿಯ 45 ವಾರ್ಷಿಕೋತ್ಸವದ ಸಂದರ್ಭದಲ್ಲಿ ಗೂಗಲ್​ ಸಂಸ್ಥೆ ವಿಶಿಷ್ಟವಾದ ಡೂಡಲ್​ ಮೂಲಕ ಚಳುವಳಿಯನ್ನು ನೆನಪಿಸಿಕೊಂಡಿದೆ. ಅಣೆಕಟ್ಟು, ಕಾರ್ಖಾನೆಗಳು ಮತ್ತು ರಸ್ತೆಗಳಿಗಾಗಿ ದೊಡ್ಡ ...
READ MORE
A draft notification by the Karnataka Department of Labour proposes to revise the common minimum wage for workers in 23 industries early next year This includes those working in industries like ...
READ MORE
“6th & 7th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಉನ್ನತಿ ಯೋಜನೆ ಸುದ್ಧಿಯಲ್ಲಿ ಏಕಿದೆ?ದುರ್ಬಲ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಉನ್ನತಿ ಎಂಬ ವಿನೂತನ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ...
READ MORE
Reforming criminals Judgement was given in a majority judgment of the five-judge Constitution Bench led by Chief Justice of India H.L. Dattu observed in the Rajiv Gandhi killers’ remission case. They noted that ...
READ MORE
“27th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾಹನದಟ್ಟಣೆ ಬೆಂಗಳೂರು ನಂ.2 ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಇಡೀ ರಾಷ್ಟ್ರಕ್ಕೆ ವಾರ್ಷಿಕ 1.5 ಲಕ್ಷ ಕೋಟಿ ರೂ. ನಷ್ಟವಾಗುತ್ತದೆ ಎಂಬುದು ಇತ್ತಿಚಿನ ಅಧ್ಯಯನ ವರದಿ ತಿಳಿಸಿದೆ. ಬೆಂಗಳೂರು ಸೇರಿ ರಾಷ್ಟ್ರದ ನಾಲ್ಕು ಪ್ರಮುಖ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತದಲ್ಲಿ ನಡೆಸಲಾದ ಅಧ್ಯಯನದಿಂದ ಈ ...
READ MORE
ಕಿಶೋರಿ ಶಕ್ತಿ ಯೋಜನೆಯು ಸಬಲಾ ಅನುಷ್ಠಾನಗೊಳ್ಳುತ್ತಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 21 ಜಿಲ್ಲೆಗಳ 128 ಸಮಗ್ರ ಶಿಶು ಅಬಿವೃದ್ಧಿ ಯೋಜನೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಪ್ರತಿ ವರ್ಷ ಐಸಿಡಿಎಸ್ ಯೋಜನೆಯಡಿ 180 ಪ್ರಾಯಪೂರ್ವ ಬಾಲಕಿಯರಿಗೆ 5 ದಿನಗಳ ವಸತಿಯುತ ತರಬೇತಿಯನ್ನು ತಾಲ್ಲೂಕುಮಟ್ಟದ ತರಬೇತುದಾರರಿಂದ ...
READ MORE
Karnataka Current Affairs – KPSC/KAS Exams- 19th September 2018
Steps sought to conserve Kappatagudda hills The Natural Committee for the Protection of Natural Resources (NCPNR) has urged the State government to initiate immediate steps to preserve and conserve the biodiversity-rich ...
READ MORE
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾಣಿಜ್ಯ ಜಾಹೀರಾತು ಪ್ರದರ್ಶನ ಸುದ್ಧಿಯಲ್ಲಿ ಏಕಿದೆ ?ಸರಕಾರಿ ಕಾರ್ಯಕ್ರಮಗಳ ಪ್ರಚಾರ ಹೊರತುಪಡಿಸಿ, ಇತರೆ ಎಲ್ಲ ವಾಣಿಜ್ಯ ಜಾಹೀರಾತು ಪ್ರದರ್ಶನಗಳನ್ನು ಶಾಶ್ವತವಾಗಿ ನಿಷೇಧಿಸುವ ಸಂಬಂಧ ಬಿಬಿಎಂಪಿಯು ನೂತನ ಜಾಹೀರಾತು ನೀತಿ ಮತ್ತು ಬೈಲಾ ಸಿದ್ಧಪಡಿಸಿದೆ. ಇದು ಒಂದೆರಡು ತಿಂಗಳಲ್ಲೇ ಜಾರಿಗೆ ಬರಲಿದೆ. ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಉತ್ಪನ್ನಗಳ ...
READ MORE
MLA absenteeism the norm at successive Assembly sessions
The State Assembly Secretariat reveals a stellar performance by just three MLAs, all from the Congress S. Rafeeq Ahmed of Tumakuru city, B.M. Nagaraja of Siraguppa, and Prasanna Kumar K.B. ...
READ MORE
Amendment to CRZ 2011
The amendment to the Coastal Regulation Zone (CRZ) notification 2011 permitting the use of reclaimed land for construction of roads in notified areas has triggered a wave of concern among ...
READ MORE
Karnataka Current Affairs – KAS/KPSC Exams – 26th
Proposal to hike minimum wages in 23 industries
“6th & 7th ಅಕ್ಟೋಬರ್ 2018 ಕನ್ನಡ ಪ್ರಚಲಿತ
SC judgement : Remission of sentences
“27th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಿಶೋರಿ ಶಕ್ತಿ ಯೋಜನೆ
Karnataka Current Affairs – KPSC/KAS Exams- 19th September
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
MLA absenteeism the norm at successive Assembly sessions
Amendment to CRZ 2011

Leave a Reply

Your email address will not be published. Required fields are marked *