“28th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಕನ್ನಡ ಸಾಹಿತ್ಯ ಸಮ್ಮೇಳನ

ಸುದ್ಧಿಯಲ್ಲಿ ಏಕಿದೆ ?84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಡಿ. 7, 8 ಮತ್ತು 9ರಂದು ನಡೆಸಲು ತೀರ್ಮಾನಿಸಲಾಗಿದೆ.

 • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರನ್ನು ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು ಎಂದರು.

ಆರನೇ ಅಧ್ಯಕ್ಷ

 • ಧಾರವಾಡ ಜಿಲ್ಲೆಯಲ್ಲಿ ಈ ಹಿಂದೆ 5 ಬಾರಿ ಸಮ್ಮೇಳನ ಜರುಗಿದೆ. ಧಾರವಾಡದಲ್ಲಿ 1918- ಆರ್. ನರಸಿಂಹಾಚಾರ್, ಹುಬ್ಬಳ್ಳಿಯಲ್ಲಿ 1933- ವೈ. ನಾಗೇಶ ಶಾಸ್ತ್ರಿ, ಧಾರವಾಡದಲ್ಲಿ 1940- ವೈ. ಚಂದ್ರಶೇಖರ ಶಾಸ್ತ್ರಿ, ಧಾರವಾಡದಲ್ಲಿ 1957- ಕುವೆಂಪು ಹಾಗೂ ಹುಬ್ಬಳ್ಳಿಯಲ್ಲಿ 1990- ಆರ್.ಸಿ. ಹಿರೇಮಠ ಅಧ್ಯಕ್ಷರಾಗಿದ್ದರು. 28 ವರ್ಷಗಳ ನಂತರ ಧಾರವಾಡ ಜಿಲ್ಲೆ ಮತ್ತೆ ಆತಿಥ್ಯ ವಹಿಸಿಕೊಂಡಿದ್ದು, ಡಾ. ಚಂದ್ರಶೇಖರ ಕಂಬಾರರು ಈಗ ಅಧ್ಯಕ್ಷರಾಗಿದ್ದಾರೆ.

ಅಗಾಧ ಪಾಂಡಿತ್ಯಕ್ಕೆ ಅಧಿಪತ್ಯ

 • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಕವಿ, ನಾಟಕಕಾರ, ಕಥೆಗಾರ, ಕಾದಂಬರಿಕಾರ, ಹಾಡುಗಾರ, ಜಾನಪದ ತಜ್ಞ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ. ಮಾತ್ರವಲ್ಲ ಆಡಳಿತಗಾರ, ಅಧ್ಯಾಪಕ, ವಿಧಾನಪರಿಷತ್ ಮಾಜಿ ಸದಸ್ಯ ಕೂಡ.
 • ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಜನಿಸಿದ್ದು 1937ರ ಜ. 2ರಂದು ಬೆಳಗಾವಿ ಜಿಲ್ಲೆ ಘೋಡಗೇರಿಯಲ್ಲಿ. ಗೋಕಾಕದಲ್ಲಿ ಹೈಸ್ಕೂಲ್ ಶಿಕ್ಷಣ, ಬೆಳಗಾವಿಯಲ್ಲಿ ಬಿಎ, ಕರ್ನಾಟಕ ವಿವಿಯಿಂದ ಎಂ.ಎ., ಪಿಎಚ್.ಡಿ. ಪಡೆದಿದ್ದಾರೆ.
 • ಜಾನಪದ ಅಕಾಡೆಮಿ ಅಧ್ಯಕ್ಷ, ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ, ಚಿಕಾಗೊ ವಿವಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ, ಸಿನಿಮಾ, ಸಂಶೋಧನೆ

 • ಕಂಬಾರರು ಅವರ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ, ಸಿಂಗಾರೆವ್ವ ಮತ್ತು ಅರಮನೆ ಇವುಗಳಲ್ಲಿ ಪ್ರಮುಖವಾದವು.
 • ಅವುಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಇವರ ಸಂಗೀತ ನಿರ್ದೇಶನದ ‘ಕಾಡು ಕುದುರೆ ಓಡಿಬಂದಿತ್ತಾ..’ ಹಾಡಿಗಾಗಿ ಶಿವಮೊಗ್ಗ ಸುಬ್ಬಣ್ಣಗೆ ರಾಷ್ಟ್ರಪತಿಗಳ ಫಲಕ ಸಿಕ್ಕಿದೆ.
 • 10 ಕವನ ಸಂಕಲನ, 25 ನಾಟಕಗಳು, ಒಂದು ಮಹಾಕಾವ್ಯ, 6 ಕಾದಂಬರಿ ಅಲ್ಲದೆ 17 ಗದ್ಯ ಸಂಪಾದನೆಗಳು, ಸಂಗ್ರಹಗಳು, ಪ್ರಬಂಧ ಸಂಕಲನಗಳು, ಸಂಶೋಧನಾ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
 • ಸಿರಿಸಂಪಿಗೆ ಅವರ ಅಭಿನಂದನಾ ಗ್ರಂಥ.
 • ಪದ್ಮಶ್ರೀ, ಕಾಳಿದಾಸ್ ಸಮ್ಮಾನ್, ಟಾಗೋರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ.. ಹೀಗೆ ಹಲವಾರು ಗೌರವಗಳಿಗೆ ಭಾಜನರಾಗಿದ್ದಾರೆ.

ಧಾರವಾಡ ಶೈಲಿ

 • ಬರವಣಿಗೆಯಲ್ಲಿ ಧಾರವಾಡ ಭಾಷೆ ಯನ್ನು ಅತ್ಯಂತ ಪ್ರಭಾವಶಾಲಿಯಾಗಿ ಬಳಸಿಕೊಂಡಿದ್ದಾರೆ. ಯಾವುದೇ ಸಭೆ- ಸಮಾರಂಭದಲ್ಲೂ ಧಾರವಾಡ ಶೈಲಿಯ ಭಾಷೆಯನ್ನೇ ಮಾತನಾಡುವ ಅವರು, ಜಾನಪದ ಸೊಗಡಿನ ಹಿರಿಯ ಸಾಹಿತಿಗಳಲ್ಲೊಬ್ಬರಾಗಿದ್ದಾರೆ.

ಈ-ಕ್ಷಣ

ಸುದ್ಧಿಯಲ್ಲಿ ಏಕಿದೆ ?ಜಾತಿ, ಆದಾಯ ಮತ್ತು ವಾಸದ ಪ್ರಮಾಣಪತ್ರಗಳನ್ನು ಸಾರ್ವಜನಿಕರಿಗೆ ತಕ್ಷಣವೇ ನೀಡುವ ‘ಈ-ಕ್ಷಣ’ ವ್ಯವಸ್ಥೆಯನ್ನು ರಾಜ್ಯದ ನಗರ ಪ್ರದೇಶಗಳಿಗೂ ವಿಸ್ತರಿಸಲಾಗಿದೆ.

 • ವಿವಿಧ ಪ್ರಮಾಣಪತ್ರಗಳನ್ನು ಆನ್​ಲೈನ್ ಹಾಗೂ ತತ್​ಕ್ಷಣವೇ (ಓವರ್ ದಿ ಕೌಂಟರ್) ನೀಡುವಂತಹ ‘ಈ-ಕ್ಷಣ’ ವ್ಯವಸ್ಥೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸುವುದಾಗಿ ಆಯವ್ಯಯದಲ್ಲಿ ಘೊಷಿಸಲಾಗಿತ್ತು. ಅದರಂತೆ, ನಗರ ಪ್ರದೇಶಗಳಲ್ಲೂ ಲಭ್ಯವಾಗುವಂತೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
 • ‘ಈ’ ಯೋಜನೆ ಇದುವರೆಗೆ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಜಾರಿಯಲ್ಲಿತ್ತು. ಇನ್ನುಮುಂದೆ ನಗರ ಪ್ರದೇಶಗಳ ಅಟಲ್​ಜೀ ಜನಸ್ನೇಹಿ ಕೇಂದ್ರಗಳಲ್ಲೂ ಸಿಗಲಿವೆ ಎಂದು ಹೇಳಿದ್ದಾರೆ.

ಯೋಜನೆಯ ಉದ್ದೇಶ

 • ಸಾರ್ವಜನಿಕರಿಗೆ ಜಾತಿ, ಆದಾಯ ಮತ್ತು ವಾಸಸ್ಥಳದ ಪ್ರಮಾಣಪತ್ರಗಳು ಹೆಚ್ಚಿನ ಸಂದರ್ಭಗಳಲ್ಲಿ ಬೇಕಾಗುತ್ತದೆ. ಇದನ್ನು ಗಮನಿಸಿ, ತ್ವರಿತವಾಗಿ ಈ ಪ್ರಮಾಣಪತ್ರಗಳು ಸಿಗಬೇಕು ಎಂಬ ಆಶಯದಿಂದ ಈ-ಕ್ಷ ಣ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

ಲೋಕಪಾಲರ ಶೋಧನೆ ಸಮಿತಿ

ಸುದ್ಧಿಯಲ್ಲಿ ಏಕಿದೆ ?ಲೋಕಪಾಲರ ಹುದ್ದೆಗೆ ಅರ್ಹರ ಹೆಸರನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರ ಎಂಟು ಸದಸ್ಯರ ಶೋಧನಾ ಸಮಿತಿಯನ್ನು ರಚಿಸಿದೆ.

 • ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಸಮಿತಿಯಲ್ಲಿ ಇಬ್ಬರು ಕನ್ನಡಿಗರೂ ಇದ್ದಾರೆ.
 • ಕರ್ನಾಟಕದ ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯಪ್ರಕಾಶ್ ಮತ್ತು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್​ಕುಮಾರ್, ಎಸ್​ಬಿಐನ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಅಲಹಾಬಾದ್ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಸುಖರಾಂ ಸಿಂಗ್ ಯಾದವ್, ಗುಜರಾತ್ ಪೊಲೀಸ್ ಇಲಾಖೆಯ ಮಾಜಿ ಮುಖ್ಯಸ್ಥ ಹಬ್ಬಿರ್​ಹುಸೈನ್ ಎಸ್. ಖಾಂಡ್ವಾವಾಲಾ, ರಾಜಸ್ಥಾನ ಕೇಡರ್​ನ ನಿವೃತ್ತ ಐಎಎಸ್ ಅಧಿಕಾರಿ ಲಲಿತ್ ಕೆ. ಪನ್ವಾರ್ ಮತ್ತು ರಣಜಿತ್ ಕುಮಾರ್ ಈ ಶೋಧನಾ ಸಮಿತಿಯಲ್ಲಿ ಇದ್ದಾರೆ

ಲೋಕಪಾಲ್ ಮತ್ತು ಲೋಕಾಯುಕ್ತ

 • ‘ಲೋಕಪಾಲ್’ ಭ್ರಷ್ಟಾಚಾರದ ಸಂದರ್ಭದಲ್ಲಿ ಪಾರ್ಲಿಮೆಂಟ್ ಮತ್ತು ಕೇಂದ್ರ ಸರಕಾರಿ ನೌಕರರ ಎಲ್ಲಾ ಸದಸ್ಯರ ಅಧಿಕಾರ ವ್ಯಾಪ್ತಿಯ ಕೇಂದ್ರ ಆಡಳಿತ ಮಂಡಳಿಯಾಗಿದೆ. ಆದರೆ, ‘ಲೋಕಾಯುಕ್ತ’ ಲೋಕಪಾಲ್ಗೆ ಹೋಲುತ್ತದೆ, ಆದರೆ ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ‘ಲೋಕಪಾಲ’ದ ವ್ಯಾಪ್ತಿಯು ರಾಷ್ಟ್ರೀಯ ಸರ್ಕಾರದ ಮಟ್ಟ ಆಧಾರದ ಮೇಲೆ ಮತ್ತು’ ಲೋಕಾಯುಕ್ತ’ದ ವ್ಯಾಪ್ತಿ ರಾಜ್ಯ ಮಟ್ಟದ ಮೇಲೆ ಅವಲಂಬಿತವಾಗಿದೆ.
 • ಕೇಂದ್ರ ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ತಡೆಯುವಲ್ಲಿ ಸಹಾಯ ಮಾಡುವ ಜವಾಬ್ದಾರಿ ಹೊಂದಿರುವ ಭ್ರಷ್ಟಾಚಾರದ ದೂರುಗಳನ್ನು, ವಿಚಾರಣೆಗಳನ್ನು, ತನಿಖೆಗಳನ್ನು ಮಾಡಲು ಮತ್ತು ಆಯಾ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಪ್ರಯೋಗಗಳನ್ನು ನಡೆಸುವುದು ಮುಖ್ಯ ಕಾರ್ಯವಾಗಿದೆ

ಲೋಕಪಾಲ್ ಶೋಧನಾ ಸಮಿತಿ

 • ಲೋಕಪಾಲ್ ಅಧ್ಯಕ್ಷ ಮತ್ತು ಸದಸ್ಯರಾಗಿ ಅವರು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
 • ವೃತ್ತಿಪರ ಸಮಿತಿಗಳನ್ನು (ಒಟ್ಟು 8 ಜನರು) ಅನುಸರಿಸುವುದರಿಂದ ಶೋಧನಾ ಸಮಿತಿಯು 1 ಅಧ್ಯಕ್ಷ + 7 ಸದಸ್ಯರನ್ನು ಹೊಂದಿರುತ್ತದೆ.
 • ನಿರ್ವಾಹಕರು
 • ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳು
 • ಬ್ಯಾಂಕರ್ಗಳು
 • ನ್ಯಾಯಾಂಗ ಅಧಿಕಾರಿಗಳು
 • ಕಾನೂನು ವೃತ್ತಿಪರರು
 • ಸಾರ್ವಜನಿಕ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳು
 • ಕನಿಷ್ಠ 50% ಶೋಧನಾ ಸಮಿತಿಯ ಸದಸ್ಯರು SC, ST, OBC, ಅಲ್ಪಸಂಖ್ಯಾತರು ಮತ್ತು ಮಹಿಳೆಯರು.

ಲೋಕ್ಪಾಲ್ ಶೋಧನೆ ಸಮಿತಿಯ ನ್ಯೂನತೆಗಳು

 • ನಿಯಮಗಳ ಪ್ರಕಾರ, ಸರ್ಕಾರಿ ಸಮಿತಿಯು ಪಟ್ಟಿಯಿಂದ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶೋಧನಾ ಸಮಿತಿಗೆ ಸಾಧ್ಯವಿದೆ.
 • ಆದ್ದರಿಂದ ಹುಡುಕಾಟದಲ್ಲಿ ಯಾವುದೇ ಸ್ವಾತಂತ್ರ್ಯವಿಲ್ಲ!
 • ಆಡಳಿತ ಪಕ್ಷದ ‘ಉತ್ತಮ ಪುಸ್ತಕಗಳಲ್ಲಿ’ ಇರುವವರು ಮಾತ್ರ ಆಯ್ಕೆಯಾಗುತ್ತಾರೆ.
 • ಅಂತಹ ಅಭ್ಯರ್ಥಿಗಳಲ್ಲಿ ಲೋಕಪಾಲರನ್ನು ಆಯ್ಕೆ ಮಾಡಿದಾಗ, ರಾಜಕೀಯ ಭ್ರಷ್ಟಾಚಾರದ ವಿರುದ್ಧ ವ್ಯವಹರಿಸುವಾಗ ಅವರು ನಿಷ್ಪಕ್ಷಪಾತ ಮತ್ತು ಕಟ್ಟುನಿಟ್ಟಾಗಿರುವುದು ಕಡಿಮೆ.
 • ಹೀಗಾಗಿ, ಇಡೀ ಪ್ರಕ್ರಿಯೆಯು ಕಾನೂನುಬಾಹಿರ ಮತ್ತು ಸಂವಿಧಾನದ 14 ನೇ ವಿಧಿಯ ವಿರುದ್ಧ ಕಾನೂನುಬಾಹಿರವಾಗಿದೆ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ

ಸುದ್ಧಿಯಲ್ಲಿ ಏಕಿದೆ ?ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಮಹಿಳೆಯರ ದೇಗುಲ ಪ್ರವೇಶಕ್ಕೆ ಅಸ್ತು ಎಂದಿದೆ.

 • ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಪೀಠವು, ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಶಬರಿಮಲೆ ದೇವಸ್ಥಾನವು ಪ್ರವೇಶವನ್ನು ನೀಡಬೇಕು ಎಂದು ಮಹತ್ವದ ತೀರ್ಪು ನೀಡಿದೆ.

ತೀರ್ಪಿನಲ್ಲೇನಿದೆ ?

 • ಮಹಿಳೆಯ ಕುರಿತ ಗ್ರಹಿಕೆ ಬದಲಾಗಬೇಕು. ಸಾಮಾಜಿಕ ಬದಲಾವಣೆ ಅಗತ್ಯವಿದೆ. ಮಹಿಳೆಯರನ್ನು ಸಮಾನವಾಗಿ ಪರಿಗಣಿಸಬೇಕು. ಮಹಿಳೆ ಬಗೆಗಿನ ದೃಷ್ಟಿಕೋನ ಬದಲಾಗಬೇಕು. ಮಹಿಳೆ ಬಗೆಗಿನ ತಾರತಮ್ಯ ನಿವಾರಣೆ ಆಗಬೇಕು. ಮಹಿಳೆಯರು ಅಬಲೆಯರಲ್ಲ. ಮಹಿಳೆಯರ ಬಗೆಗಿನ ಪೂಜ್ಯ ಭಾವನೆಗೆ ಧಕ್ಕೆ ಆಗಬಾರದು. ಧರ್ಮದಲ್ಲೂ ಪುರುಷ ಪ್ರಧಾನವಾಗಬಾರದು ಎಂದು ನ್ಯೂಯಾಧೀಶರಾದ ಮಿಶ್ರಾ, ಖಾನ್ವಿಲ್ಕರ್ ಜಂಟಿ ತೀರ್ಪು ನೀಡಿದ್ದಾರೆ.

ಹಿನ್ನಲೆ

 • ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ನಿತ್ಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.
 • ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮಹಿಳೆಯರ ನಿಷೇಧ ಕ್ರಮವನ್ನು ಪ್ರಶ್ನಿಸಿದ್ದ ಸಂವಿಧಾನ ಪೀಠ, ಮಹಿಳೆಯರ ಧಾರ್ವಿುಕ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿತ್ತು.
 • 2006ರಲ್ಲಿ ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಶನ್‌ ಹಾಗೂ ಇತರರು ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. 2016ರ ಜನವರಿಯಲ್ಲಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್ 13ರಂದು ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು

ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ

 • ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಲಲಿತಕಲಾ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಗೆ ಮೈಸೂರಿನ ಎಸ್‌.ಎಂ.ಜಂಬುಕೇಶ್ವರ, ಧಾರವಾಡದ ಮಧು ದೇಸಾಯಿ ಹಾಗೂ ಉಡುಪಿಯ ಉಪಾಧ್ಯಾಯ ಮೂಡುಬೆಳ್ಳೆ ಭಾಜನರಾಗಿದ್ದಾರೆ. ಗೌರವ ಪ್ರಶಸ್ತಿಯು 50 ಸಾವಿರ ರೂ. ನಗದು ಬಹುಮಾನ ಸೇರಿದಂತೆ ಸ್ಮರಣ ಫಲಕ ಒಳಗೊಂಡಿದೆ.

Related Posts
Karnataka – State Update- KAS / KPSC Exams – 27th March 2017
Karnataka Govt planning to hike quota ceiling to 72% Chief Minister Siddaramaiah on 26th March said that his government was exploring the possibility of increasing the reservation ceiling in education and employment ...
READ MORE
A total of 87 infrastructure projects with a combined value of Rs.87,518.77 crore are underway in Karnataka and transportation projects are leading the way with around 52 projects worth Rs.36,237 ...
READ MORE
National Current Affairs – UPSC/KAS Exams -12th July 2018
Eat Right Movement  "The Eat Right Movement" aims to empower the citizens by improving their health and wellbeing. Led by the FSSAI, it is a collective effort, to nudge the citizens ...
READ MORE
“8th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಹೇಗ್ ಸಮಾವೇಶ ಸುದ್ದಿಯಲ್ಲಿ ಏಕಿದೆ? ಅಂತರ-ದೇಶ ಪೋಷಕರ ಮಗು ಅಪಹರಣದ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಲು ಕೇಂದ್ರವು ಸ್ಥಾಪಿಸಿದ ಸಮಿತಿಯು ಹೇಗ್ ಕನ್ವೆನ್ಷನ್ನ ಮೂಲಭೂತ ತತ್ವಗಳನ್ನು ಪ್ರಶ್ನಿಸಿದೆ. ಪೋಷಕರ  ಅಥವಾ ಪೋಷಕರ ಆವಾಸಸ್ಥಾನಕ್ಕೆ ಮಗು ಹಿಂದಿರುಗುವುದು ಮಗುವಿನ ಹಿತಾಸಕ್ತಿಗೆ ಅಗತ್ಯವಾಗಿರಲೇಬೇಕು ಎಂಬುದು ನಿಯಮವಾಗಿರಬಾರದು  ...
READ MORE
Integrated farming
Integrated Farming (IF) is a whole farm management system which aims to deliver more sustainable agriculture. It can be applied to any farming system around the world. It involves attention to ...
READ MORE
Karnataka Rural Infrastructure Development Ltd & Western Ghats Development Programme
The Karnataka Land Army Corporation Limited was established as an undertaking of the Government of Karnataka in August 1974. The name of the Organization was changed from Karnataka Land Army Corporation ...
READ MORE
National Current Affairs – UPSC/KAS Exams- 9th September 2018
Nutrition guidelines approved by Niti Aayog Why in news? The NITI Aayog has approved the supplementary nutrition guidelines, prepared by the Ministry for Women and Child Development, bypassing Minister for Women and ...
READ MORE
National Current Affairs – UPSC/KAS Exams- 29th December 2018
New clarifications regarding FDI in e commerce Topic: Indian Economy IN NEWS: The new clarification issued by the government regarding FDI in e-commerce has created a furore among firms in the sector ...
READ MORE
Karnataka: Aircraft to spray seeds and fertilisers?
State-owned aviation major, Hindustan Aeronautics Ltd (HAL) thought so when it produced 39 Basant aircraft but stopped building them after 1980. Now, the Aussies want rich Indian farmers to check out ...
READ MORE
India-UAE ties: A roadmap for deeper cooperation
In a departure from protocol, Prime Minister Narendra Modi received Abu Dhabi’s Crown Prince Sheikh Mohamed bin Zayed Al Nahyan at the airport as he arrived in New Delhi for ...
READ MORE
Karnataka – State Update- KAS / KPSC Exams
Infrastructure projects underway in Karnataka
National Current Affairs – UPSC/KAS Exams -12th July
“8th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
Integrated farming
Karnataka Rural Infrastructure Development Ltd & Western Ghats
National Current Affairs – UPSC/KAS Exams- 9th September
National Current Affairs – UPSC/KAS Exams- 29th December
Karnataka: Aircraft to spray seeds and fertilisers?
India-UAE ties: A roadmap for deeper cooperation

Leave a Reply

Your email address will not be published. Required fields are marked *