“22nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಪ್ರವಾಹದ ವಿಪತ್ತು

 • ಸುದ್ದಿಯಲ್ಲಿ ಏಕಿದೆ? ಭಾರಿ ಮಳೆಯಿಂದ ಕೇರಳದಲ್ಲಿ ಅನಾಹುತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಎಲ್ಲರೂ ಹೇಳುತ್ತಿರುವ ಮಾತು. ಆದರೆ, ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ‘ಕೇರಳದ ಈ ಪರಿಸ್ಥಿತಿ ಮಾನವ ನಿರ್ವಿುತ’ ಎಂದು ವಿಶ್ಲೇಷಿಸಿದ್ದಾರೆ.
 • 2011 ರಲ್ಲಿ ಈ ಕುರಿತು ಗಾಡ್ಗೀಳ್ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸುಗಳನ್ನು ಸ್ಥಳೀಯ ಸರ್ಕಾರಗಳು ನಿರ್ಲಕ್ಷಿಸಿರುವುದು ಹಾಗೂ ಕೇಂದ್ರ ಸರ್ಕಾರವೂ ಈ ಕುರಿತು ಕ್ರಮ ವಹಿಸದಿರುವ ಕುರಿತು ಅವರು ಪ್ರಸ್ತಾಪಿಸಿದ್ದಾರೆ.

ಗಾಡ್ಗೀಳ್ ವರದಿ ಹೇಳಿದ್ದೇನು?:

 • ಡಾ.ಮಾಧವ ಗಾಡ್ಗೀಳ್ ಅಧ್ಯಕ್ಷತೆಯ ಒಟ್ಟು 14 ಸದಸ್ಯರಿರುವ (ಐವರು ನಿವೃತ್ತ ಅಧಿಕಾರಿಗಳು, 9 ಜನ ತಜ್ಞರು) ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿ ಕರ್ನಾಟಕ, ಕೇರಳ, ಗೋವಾ ಮಹಾರಾಷ್ಟ್ರ ರಾಜ್ಯಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶಗಳಿಗೆ ಹೋಗಿ ಅಧ್ಯಯನ ನಡೆಸಿ 2011 ರ ಆಗಸ್ಟ್​ನಲ್ಲಿ 522 ಪುಟಗಳ ಸಮಗ್ರ ವರದಿಯನ್ನು ಕೇಂದ್ರ ಪರಿಸರ ಸಚಿವಾಲಯಕ್ಕೆ ನೀಡಿತ್ತು.
 • ಪಶ್ಚಿಮ ಘಟ್ಟದ 134 ತಾಲೂಕುಗಳನ್ನು ಪರಿಸರ ‘ಸೂಕ್ಷ್ಮ ಪ್ರದೇಶಗಳು’ ಎಂದು ಘೊಷಿಸಲು ಈ ವರದಿ ಶಿಫಾರಸು ಮಾಡಿದೆ. ಅಲ್ಲಿ ಹೊಸ ಗಣಿಗಾರಿಕೆಗಳನ್ನು ಪ್ರಾರಂಭಿಸಬಾರದು. ಪರಿಸರ ನಾಶದ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿತ್ತು.
 • ಗಣಿಗಾರಿಕೆ, ಯೋಜನೆಗಳಿಗಾಗಿ ಗುಡ್ಡಗಳನ್ನು ಕಡಿದು ಅಭದ್ರ ಮಾಡುವುದು, ಅರಣ್ಯ ನಾಶ, ನದಿಗಳ ನೀರಿನ ಹರಿವು ತಡೆಯುವುದು ಮುಂದೆ ಪ್ರವಾಹಕ್ಕೆ ಕಾರಣವಾಗಬಹುದು ಎಂದು ವರದಿಯಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿದೆ. ಆದರೆ ಅದನ್ನೆಲ್ಲ ಸರ್ಕಾರಗಳು ಕಡೆಗಣಿಸಿದವು.

ಎಲ್ಲೆಲ್ಲಿ ಗಣಿಗಾರಿಕೆ?

 • ಉತ್ತರ ಗೋವಾ ಜಿಲ್ಲೆಯ ಬಿಚೋಲಿಂ, ದಕ್ಷಿಣ ಗೋವಾ ಜಿಲ್ಲೆಯ ಸತಾರಿ, ಸಾಂಗ್ಯಂ, ಕ್ಯುಪೆಂ ತಾಲೂಕುಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸುಮಾರು 90 ಗಣಿಗಳಿದ್ದು, 150 ರಿಂದ 200 ಚದರ ಕಿಮೀ ವ್ಯಾಪ್ತಿಯಲ್ಲಿ ವಿಸ್ತರಿಸಿವೆ. 2005 ರಿಂದ 2009 ರ ವ್ಯಾಪ್ತಿಯಲ್ಲಿ ಗಣಿಗಾರಿಕೆಗಾಗಿ 169 ಪರಿಸರ ಪರವಾನಗಿಗಳನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಪಡೆಯಲಾಗಿತ್ತು.

ಗೋವಾ ಬಗ್ಗೆ ವರದಿಯಲ್ಲಿ ಹೇಳಿದ್ದು

 • ಗೋವಾ ಧಾರಣಾ ಸಾಮರ್ಥ್ಯವನ್ನು ಮೀರಿದೆ. ಅಲ್ಲಿ ಗಣಿಗಾರಿಕೆಯಿಂದ 1988 ರಿಂದ 1997 ರ ಅವಧಿಯಲ್ಲಿ 2500 ಹೆಕ್ಟೇರ್ ಅರಣ್ಯ ನಾಶವಾಗಿದೆ. ಗೋವಾದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳು ಪರಿಸರ ಪರವಾನಗಿ ಪಡೆಯುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿವೆ.
 • ಗೋವಾದಲ್ಲಿ ಹುಟ್ಟುವ ಹಲವು ಸಣ್ಣ ನದಿ, ಹಳ್ಳಗಳ ಮಾಹಿತಿ ಮುಚ್ಚಿಟ್ಟಿವೆ. ಇದರಿಂದ ತೀವ್ರ ಹಾನಿಯಾಗಿದೆ. ಗೋವಾದ ವಿವಿಧ ನದಿಗಳಿಗೆ ಸೇತುವೆ, ಅಳಿವೆ ಪ್ರದೇಶದಲ್ಲಿ ಜಟ್ಟಿಗಳನ್ನು ನಿರ್ಮಾಣ ಮಾಡಿದ್ದರಿಂದ ನೀರಿನ ಸಹಜ ಹರಿವಿಗೆ ತೊಂದರೆ ಉಂಟಾಗುತ್ತಿದೆ. ಅದಿರು ರಾಶಿಗಳು ಕೊಚ್ಚಿ ಹೋಗಿ ನದಿ ಸೇರಿ ನದಿಗಳಲ್ಲಿ ಹೂಳು ತುಂಬಿದೆ. ಇದರಿಂದ ನೆರೆ ಸಂಭವಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಆದ್ದರಿಂದ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು. ಸಂರಕ್ಷಿತ ಅಭಯಾರಣ್ಯಗಳ ಸುತ್ತ ಗಣಿಗಾರಿಕೆಯನ್ನು ತಕ್ಷಣ ಬಂದ್ ಮಾಡಬೇಕು ಎಂದು ಶಿಫಾರಸು ಮಾಡಲಾದೆ.

ಸಣ್ಣ ರಾಜ್ಯ

 • ಕೇವಲ 3,702 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಗೋವಾ ರಾಜ್ಯ ವಿಸ್ತೀರ್ಣದಲ್ಲಿ ದೇಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಪ್ರವಾಸೋದ್ಯಮದಿಂದ ಇಡೀ ವಿಶ್ವದ ಗಮನ ಸೆಳೆದಿದೆ. 1 ಕೋಟಿ 81 ಲಕ್ಷ ಜನಸಂಖ್ಯೆ ಹೊಂದಿರುವ ಇಲ್ಲಿ ಪ್ರವಾಸೋದ್ಯಮ ಮತ್ತು ಗಣಿಗಾರಿಕೆ ಆದಾಯ ತಂದುಕೊಡುವ ಉದ್ಯಮ. ಆದರೆ, ಇವೆರಡೂ ಉದ್ಯಮಗಳಿಂದ ಪರಿಸರಕ್ಕೆ ತುಂಬ ಹಾನಿಯಾಗುತ್ತಿದೆ. ಮೂರು ದಿಕ್ಕುಗಳಲ್ಲಿ ಸಮುದ್ರವನ್ನೇ ಹೊಂದಿರುವ ಈ ಪುಟ್ಟ ರಾಜ್ಯಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುದು ಪರಿಸರ ತಜ್ಞರ ಅಭಿಮತ.

ಉತ್ತರ ಕನ್ನಡಕ್ಕೂ ಅಪಾಯ ತಪ್ಪಿದ್ದಲ್ಲ

 • ಕೇರಳ, ಮಡಿಕೇರಿಯ ನೆರೆಯ ಪರಿಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಜನರ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಪಶ್ಚಿಮ ಘಟ್ಟಗಳ ಸಾಲು, ಕರಾವಳಿಯ ಸೆರಗನ್ನು ಹೊಂದಿರುವ ಜಿಲ್ಲೆಯಲ್ಲಿಯೂ ಅಂಥದ್ದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು 2009 ರಲ್ಲೇ ಭಾರತೀಯ ವಿಜ್ಞಾನ ಸಂಸ್ಥೆ ಡಾ.ಟಿ.ವಿ.ರಾಮಚಂದ್ರ, ಡಾ.ಎಂ.ಡಿ.ಸುಭಾಷ್​ಚಂದ್ರನ್ ಅವರಿದ್ದ ಸಮಿತಿ ವರದಿ ನೀಡಿತ್ತು.
 • ಸುರಕ್ಷತಾ ಕ್ರಮಗಳನ್ನು ಸೂಚಿಸಿತ್ತು. ಆದರೆ, ಅದ್ಯಾವುದನ್ನೂ ಆಡಳಿತ ಕೈಗೊಳ್ಳದೆ ಮತ್ತಷ್ಟು ಅವೈಜ್ಞಾನಿಕ ಕಾಮಗಾರಿಗಳು ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾಡು ನಾಶ

 • 10,24,679 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 8,13,595 ಹೆಕ್ಟೇರ್ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು. 1956 ರ ನಂತರ 61,860.852 ಹೆಕ್ಟೇರ್ ಅರಣ್ಯ ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಮಂಜೂರು ಮಾಡಲಾಗಿದೆ. 5 ಹೆಕ್ಟೇರ್ ಭೂಮಿ ಸಾಗುವಳಿಗೆ ಮಂಜೂರಾಗಿದ್ದರೆ 30,443.059 ಹೆಕ್ಟೇರ್ ಭೂಮಿ ಕಾಳಿ, ಶರಾವತಿ ನದಿಯ ಅಣೆಕಟ್ಟೆಗಳು, ಕೊಂಕಣ ರೈಲ್ವೆ ಯೋಜನೆ, ಕೈಗಾ ಅಣು ವಿದ್ಯುತ್ ಸ್ಥಾವರ, ಸೀಬರ್ಡ್ ನೌಕಾ ಯೋಜನೆ ಹೀಗೆ ವಿವಿಧ ಯೋಜನೆಗಳು ಹಾಗೂ ಅದರ ಪುನರ್ವಸತಿಗಾಗಿ ನೀಡಲಾಗಿದೆ.

ಮಿತಿ ಮೀರಿದ ಹಸ್ತಕ್ಷೇಪ

 • ತೀವ್ರ ಸ್ವರೂಪದ ವಿಪತ್ತು ಎಂದು ಕೇಂದ್ರ ಸರ್ಕಾರ ಘೊಷಿಸಿರುವ ಕೇರಳದ ಜಲಪ್ರಳಯ, ದೇವರ ಸ್ವಂತ ನಾಡನ್ನು ದಿಕ್ಕಾಪಾಲು ಮಾಡಿದೆ. ರಾಜ್ಯದಲ್ಲಿ 8 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ತೆರೆಯಲಾಗಿರುವ 4 ಸಾವಿರಕ್ಕೂ ಹೆಚ್ಚು ನಿರಾಶ್ರಿತರ ಶಿಬಿರಗಳಲ್ಲಿ ನೆಲೆಸಿದ್ದಾರೆ.
 • 6200 ಮೈಲು ರಸ್ತೆಗೆ ಹಾನಿಯಾಗಿದೆ, ಸಾವಿರಾರು ಮನೆಗಳು ನಾಶವಾಗಿವೆ. ಇಡುಕ್ಕಿ, ಎರ್ನಾಕುಳಂ, ಆಲೆಪ್ಪಿ, ಪತ್ತನಂತಿಟ್ಟ, ಮಲಪ್ಪುರಂ, ಕೋಳಿಕ್ಕೋಡ್, ವಯನಾಡ್, ತೃಶ್ಯೂರ್, ಕೊಲ್ಲಂ, ವಯನಾಡ್ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶ ಸಂರಕ್ಷಣೆಗೆ ಸರ್ಕಾರದ ನಿರ್ಲಕ್ಷ್ಯ ಅನಧಿಕೃತ ನಿರ್ಮಾಣ ಹಾಗೂ ಕಲ್ಲು ಗಣಿಗಾರಿಕೆಗೆ ವ್ಯಾಪಕ ಅನುಮತಿ ನೀಡಿರುವುದು ಭಾರಿ ಭೂಕುಸಿತದಂತಹ ಅನಾಹುತಕ್ಕೆ ಕಾರಣವಾಗಿದೆ

ಗಾಡ್ಗೀಳ್ ಎಚ್ಚರಿಕೆ

 • ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ವಿಪರೀತ ಪರಿಸರ ಹಾನಿ ಮತ್ತು ನೈಸರ್ಗಿಕ ಸಂಪನ್ಮೂಲದ ಅಸಮರ್ಪಕ ನಿರ್ವಹಣೆ ಇದೆ. ಈ ರಾಜ್ಯಗಳು ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ತಜ್ಞರ ಸಮಿತಿ 2011ರಲ್ಲಿ ನೀಡಿರುವ ವರದಿಯ ಶಿಫಾರಸನ್ನು ಕಡೆಗಣಿಸಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ.
 • ಕೇರಳ ಮಾದರಿಯಲ್ಲೆ ಪ್ರವಾಹ, ಭೂಕುಸಿತದ ಭೀತಿ ಎದುರಾಗುತ್ತದೆ ಎಂದು ಆ ಸಮಿತಿಯ ಅಧ್ಯಕ್ಷರೂ ಆಗಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್ ಎಚ್ಚರಿಸಿದ್ದಾರೆ. ಅತಿಯಾಗಿ ಮಳೆಯಾದರೆ ಪ್ರವಾಹ ಮತ್ತು ಭೂಕುಸಿತಗಳನ್ನು ತಡೆಯಲಾಗದಷ್ಟು ಪರಿಸರ ಹಾನಿ ಮಹಾರಾಷ್ಟ್ರದ ಸಹ್ಯಾದ್ರಿ ಶ್ರೇಣಿಯ ರತ್ನಗಿರಿ, ಸಿಂಧುದುರ್ಗ ಜಿಲ್ಲೆಗಳಲ್ಲಿ ಆಗಿದೆ. ಪುಣೆ ಜಿಲ್ಲೆಯ ಮಾಲಿನ್​ನಲ್ಲೂ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾರಣ 2014ರಲ್ಲಿ ದೊಡ್ಡ ಮಟ್ಟದ ಪ್ರವಾಹ, ಭೂಕುಸಿತ ಆಗಿತ್ತು ಎಂದು ಅವರು ನೆನಪಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಅನುಷ್ಠಾನ

 • ಸುದ್ದಿಯಲ್ಲಿ ಏಕಿದೆ? ಕೇರಳ, ಕೊಡಗು ದುರಂತ ಮನುಕುಲಕ್ಕೆ ಎಚ್ಚರಿಕೆ ಪಾಠ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಬೆನ್ನಲ್ಲೇ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.
 • 2017ರಲ್ಲಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿರುವಂತೆ ಕಸ್ತೂರಿ ರಂಗನ್ ವರದಿಯಲ್ಲಿನ 34 ಶಿಫಾರಸುಗಳ ಪೈಕಿ ನಾಲ್ಕು ಅಂಶಗಳನ್ನು ಹೊರತುಪಡಿಸಿ ಉಳಿದ ಅಂಶಗಳ ಅನುಷ್ಠಾನಕ್ಕೆ ಸಮ್ಮತಿಯಿದೆ.

ಸಚಿವ ಸಂಪುಟ ಉಪಸಮಿತಿ ತೀರ್ಮಾನ:

 • ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಮಿತಿ ಉಪಸಮಿತಿ ರಚಿಸಲಾಗಿತ್ತು.
 • ಸಮಿತಿಯಲ್ಲಿ ಅಂದಿನ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಟಿ.ಬಿ.ಜಯಚಂದ್ರ ಕೂಡ ಇದ್ದರು. ಈ ಸಮಿತಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.
 • ಈ ವೇಳೆ ಕೇಂದ್ರದಿಂದ ಅಧಿಕಾರಿಗಳ ನಿಯೋಗ ಬಂದು ಇಲ್ಲಿನ ಜನಪ್ರತಿನಿಧಿಗಳಿಗೆ ಕಸ್ತೂರಿ ರಂಗನ್ ವರದಿಯ ತಪ್ಪು ಗ್ರಹಿಕೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುವುದಾಗಿ ತಿಳಿಸಿತ್ತು.

ಯಾವ ಅಂಶಕ್ಕೆ ವಿರೋಧ

 • ಒಂದು ಗ್ರಾಮದ ಶೇ.20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದರೆ ಅದನ್ನು ಸೂಕ್ಷ್ಮ ಪ್ರದೇಶವೆಂದು ಘೊಷಿಸಬೇಕೆಂಬ ವರದಿಯಲ್ಲಿನ ಉಲ್ಲೇಖಕ್ಕೆ ರಾಜ್ಯ ಸರ್ಕಾರದ ವಿರೋಧ. ಬದಲಾಗಿ ಸೂಕ್ಷ್ಮ ಪ್ರದೇಶವೆಂದು ಘೊಷಿಸಲು ಶೇ.50ಕ್ಕಿಂತ ಹೆಚ್ಚು ಪ್ರದೇಶ ಪರಿಸರ ಸೂಕ್ಷ್ಮವಾಗಿರಬೇಕೆಂಬ ನಿಲುವು ಸರ್ಕಾರದ್ದು.
 • ಸ್ಥಳೀಯವಾಗಿ ಮರಳು ಹಾಗೂ ಗಣಿಗಾರಿಕೆ ನಿಷೇಧಿಸುವ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರದ ಸಮ್ಮತಿಯಿಲ್ಲ.
 • 20 ಸಾವಿರ ಚ.ಮೀ.ಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಹಾಗೂ ನಿರ್ಮಾಣ ಯೋಜನೆಗಳನ್ನು ರದ್ದುಪಡಿಸಬೇಕೆಂಬ ವರದಿಯ ಅಂಶಕ್ಕೆ ಸರ್ಕಾರದ ವಿರೋಧ.
 • ಕಸ್ತೂರಿ ರಂಗನ್ ವರದಿಯಲ್ಲಿ ರಾಜ್ಯದ 05 ಲಕ್ಷ ಹೆಕ್ಟೇರ್ ಪ್ರದೇಶವನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಎಂಬ ಅಂಶ ಸೇರಿಸಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಿದ್ದು, 13.09 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಎಲ್ಲೆಲ್ಲಿ ಅನ್ವಯ?

 • ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟದ ಆರು ರಾಜ್ಯಗಳಿಗೆ ಅನ್ವಯಿಸುತ್ತದೆ. ಕರ್ನಾಟಕದ 10 ಜಿಲ್ಲೆಗಳ 1,573 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಶಿವಮೊಗ್ಗ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಶೃಂಗೇರಿ, ಮೂಡಿಗೆರೆ ತಾಲೂಕು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಭಟ್ಕಳ, ಹೊನ್ನಾವರ, ಜೊಯಿಡಾ, ಕಾರವಾರ, ಕುಮಟಾ, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಿಗೆ ಅನ್ವಯವಾಗುತ್ತದೆ.
 • ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು, ಹಾಸನದ ಅಲೂರು ಮತ್ತು ಸಕಲೇಶಪುರ, ಮೈಸೂರಿನ ಹೆಗ್ಗಡದೇವನಕೋಟೆ, ಚಾಮರಾಜ ನಗರದ ಗುಂಡ್ಲುಪೇಟೆ, ಕೊಡಗು ಜಿಲ್ಲೆಯ 55 ಗ್ರಾಮಗಳು ಪಶ್ಚಿಮಘಟ್ಟ ವ್ಯಾಪ್ತಿಗೆ ಬರುತ್ತವೆ.

ಬೆಂಗಳೂರು ಏರ್‌ಪೋರ್ಟ್‌

 • ಸುದ್ದಿಯಲ್ಲಿ ಏಕಿದೆ? ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌) ವಿಶ್ವದ 2ನೇ ಅತಿ ವೇಗದ ಬೆಳವಣಿಗೆ ಹೊಂದುತ್ತಿರುವ ಏರ್‌ಪೋರ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 • ಪ್ರಸಕ್ತ ಸಾಲಿನ ಜನವರಿಯಿಂದ ಜೂನ್‌ವರೆಗಿನ ವಿಮಾನಯಾನ ಸೇವೆ ಮಾಹಿತಿ ಆಧರಿಸಿ ರೂಟ್ಸ್‌ ಆನ್‌ಲೈನ್‌ ಕಂಪನಿ ನಡೆಸಿದ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ. ಮೊದಲ ಸ್ಥಾನದಲ್ಲಿರುವ ಜಪಾನ್‌ ರಾಜಧಾನಿ ಟೋಕಿಯೊದ ಹನೇಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 28 ಲಕ್ಷ ಪ್ರಯಾಣಿಕರು ಹಾಗೂ ಕೆಐಎಎಲ್‌ನಿಂದ 41.80 ಲಕ್ಷ ಪ್ರಯಾಣಿಕರು ವಾಯುಯಾನ ಮಾಡಿದ್ದಾರೆ.
 • ಅಚ್ಚರಿಯ ಸಂಗತಿ ಎಂದರೆ 25 ಲಕ್ಷಕ್ಕಿಂತ ಅಧಿಕ ಪ್ರಯಾಣಿಕರು ಸಂಚರಿಸಿರುವ ಇಪ್ಪತ್ತು ಏರ್‌ಪೋರ್ಟ್‌ಗಳ ಪಟ್ಟಿಯಲ್ಲಿ ಚೀನಾ ಹಾಗೂ ಭಾರತದ ನಗರಗಳು ಸ್ಥಾನ ಪಡೆದಿವೆ. ಭಾರತದ ಮಟ್ಟಿಗೆ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ದೇಶದ ರಾಜಧಾನಿ ದಿಲ್ಲಿಯನ್ನು ಹಿಂದಿಕ್ಕಿದೆ. ಇದು ಆರ್ಥಿಕ ಬೆಳವಣಿಗೆ ಪೂರಕವಾಗಲಿದೆ.
 • ಪ್ರಯಾಣಿಕರನ್ನು ನಿರ್ವಹಿಸುವ ಶೇಕಡವಾರು ಲೆಕ್ಕದಲ್ಲಿ ಚೀನಾದ ಫ್ಯೂಜಿಯಾನ್‌ ಪ್ರಾಂತ್ಯದ ಕ್ವಾನ್‌ಝೂ ನಗರದ ಜಿಂಜಿಯಾಂಗ್‌ ಏರ್‌ಪೋರ್ಟ್‌ ಪ್ರಥಮ ಸ್ಥಾನ(ಶೇ. 6)ದಲ್ಲಿದೆ. ಕೆಐಎಎಲ್‌ – ಶೇ. 35.8, ಜೈಪುರ – ಶೇ. 32.5, ಲಕ್ನೋ – ಶೇ. 31.4, ಹೈದರಾಬಾದ್‌ – ಶೇ. 23.2 ಕ್ರಮವಾಗಿ ಎಂಟು, ಹತ್ತು, ಹನ್ನೊಂದು ಹಾಗೂ ಇಪ್ಪತ್ತನೇ ಸ್ಥಾನದಲ್ಲಿವೆ.

ಕರ್ನಾಟಕ ಲಾಜಿಸ್ಟಿಕ್‌ ನೀತಿ ಜಾರಿ

 • ಸುದ್ದಿಯಲ್ಲಿ ಏಕಿದೆ? ರಫ್ತು ವಹಿವಾಟಿಗೆ ಉತ್ತೇಜನ ನೀಡಲು ಒಂದು ತಿಂಗಳಲ್ಲಿ ‘ಕರ್ನಾಟಕ ಲಾಜಿಸ್ಟಿಕ್ಸ್‌ (ಸಾಗಣೆ) ನೀತಿ – 2018’ ಜಾರಿಗೆ ತರಲಾಗುವುದು ಎಂದು ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.
 • ಲಾಜಿಸ್ಟಿಕ್ಸ್‌ ನೀತಿಯನ್ನು ಜಾರಿಗೆ ತರುತ್ತಿರುವ ದಕ್ಷಿಣ ಭಾರತದ ಪ್ರಥಮ ಹಾಗೂ ದೇಶದ ಐದನೇ ರಾಜ್ಯನಮ್ಮದಾಗಿದೆ.

ಉಪಯೋಗಗಳು

 • ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೃಷಿ ಆಧರಿತ ಉದ್ದಿಮೆಗಳಿಗೆ ನೆರವು, ಗೋದಾಮು ಹಾಗೂ ಶೀಥಲೀಕರಣ ಘಟಕಗಳ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
 • ಇದರಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಸಂಸ್ಕರಿಸಿ, ಬೇಡಿಕೆ ಮತ್ತು ಬೆಲೆ ಹೆಚ್ಚಿರುವ ಪ್ರದೇಶಗಳಿಗೆ ರಫ್ತು ಮಾಡಬಹುದಾಗಿದೆ.
 • ರಾಜ್ಯಕ್ಕೆ ವಾಲ್‌ಮಾರ್ಟ್‌ನಂತಹ ಬೃಹತ್‌ ಸಂಸ್ಥೆಗಳು ಬಂಡವಾಳ ಹೂಡಲು ಮುಂದಾಗಿವೆ. ಕೃಷಿ ಉತ್ಪನ್ನಗಳ ಸಂಸ್ಕರಣೆಯಲ್ಲಿ ಈ ಸಂಸ್ಥೆಗಳು ಪ್ರಾವೀಣ್ಯತೆ ಹೊಂದಿದ್ದು, ಇವುಗಳ ನೆರವನ್ನು ಸಹ ಪಡೆಯಲಾಗುವುದು. ಇದರಿಂದ ನಮ್ಮ ರೈತರಿಗೆ ಉತ್ತಮ ಆದಾಯ ಸಿಗಲಿದೆ.
 • ಈ ನೀತಿಯು ಆರ್ಥಿಕ ಪ್ರೋತ್ಸಾಹ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕೌಶಲ ಅಭಿವೃದ್ಧಿ, ಹೊಸ ಆವಿಷ್ಕಾರ ಹಾಗೂ ಯಾವುದೇ ಅಡೆತಡೆಯಿಲ್ಲದೆ ವ್ಯಾಪಾರ ವಹಿವಾಟು ನಡೆಸಲು ಉತ್ತೇಜಿಸಲಿದೆ.
 • ಲಾಜಿಸ್ಟಿಕ್‌ ಉದ್ಯಮದಲ್ಲಿ ಸುಮಾರು 500 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದವರಿಗೆ ತೆರಿಗೆ ವಿನಾಯಿತಿ ಜತೆಗೆ ಸುಮಾರು 10 ಕೋಟಿ ರೂ.ಗಳವರೆಗೆ ಹಣ ಹಿಂತಿರುಗಿಸಲಾಗುವುದು. ಜತೆಗೆ ಭೂ ಸ್ವಾಧೀನದ ನಿಯಮಗಳನ್ನು ಸಹ ಸರಳಗೊಳಿಸಲಾಗಿದೆ.

ರಾಜ್ಯಸಭೆ ಚುನಾವಣೆ

 • ಸುದ್ದಿಯಲ್ಲಿ ಏಕಿದೆ? ರಾಜ್ಯಸಭೆ ಚುನಾವಣೆಗಳಲ್ಲಿ ‘ನೋಟಾಮತಗಳಿಗೆ ಅವಕಾಶ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದಕ್ಕೆ ಅವಕಾಶ ನೀಡಿದ್ದ ಚುನಾವಣೆ ಆಯೋಗದ ಅಧಿಸೂಚನೆಯನ್ನು ಕೋರ್ಟ್‌ ವಜಾಗೊಳಿಸಿದೆ.
 • ‘ರಾಜ್ಯಸಭೆ ಚುನಾವಣೆಗಳಲ್ಲಿ ‘ನೋಟಾ’ಗೆ ಅವಕಾಶ ನೀಡುವ ಚುನಾವಣೆ ಆಯೋಗದ ಸೂಚನೆಗೆ ಅನುಮತಿ ನೀಡಲಾಗದು. ಹಾಗೆ ಮಾಡಿದಲ್ಲಿ ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯದ ಅನುಪಾತವನ್ನೇ ನಿರಾಕರಿಸಿದಂತಾಗುತ್ತದೆ’ ಎಂದು ಕೋರ್ಟ್‌ ಹೇಳಿದೆ.

ರಾಜ್ಯಸಭೆಯ ಬಗ್ಗೆ

ರಾಜ್ಯಸಭೆಗೆ ಆಸನಗಳ ಹಂಚಿಕೆ

 • ಸಂವಿಧಾನದ ನಾಲ್ಕನೆಯ ವೇಳಾಪಟ್ಟಿ ರಾಜ್ಯಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಥಾನಗಳನ್ನು ನಿಗದಿಪಡಿಸುತ್ತದೆ. ಪ್ರತಿ ರಾಜ್ಯದ ಜನಸಂಖ್ಯೆಯ ಆಧಾರದ ಮೇರೆಗೆ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ರಾಜ್ಯಗಳ ಮರುಸಂಘಟನೆ ಮತ್ತು ಹೊಸ ರಾಜ್ಯಗಳ ರಚನೆಯ ಪರಿಣಾಮವಾಗಿ, ಸ್ಟೇಟ್ಸ್ ಮತ್ತು ಯೂನಿಯನ್ ಪ್ರಾಂತ್ಯಗಳಿಗೆ ರಾಜ್ಯಸಭೆಗೆ ಚುನಾಯಿತರಾಗಿರುವ ಸ್ಥಾನಗಳ ಸಂಖ್ಯೆ 1952 ರಿಂದ ಕಾಲಕಾಲಕ್ಕೆ ಬದಲಾಗಿದೆ.
 • ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಮತ್ತು ಚುನಾಯಿತರಾಗಿರುವ ಸದಸ್ಯರು ಸೇರಿದಂತೆ ಗರಿಷ್ಠ 250 ಸದಸ್ಯರನ್ನು ಹೊಂದಿರುತ್ತದೆ. ಚುನಾಯಿತ ಸದಸ್ಯರ ಸಂಖ್ಯೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ 238 ಕ್ಕಿಂತ ಹೆಚ್ಚು ಮೀರಬಾರದು. ರಾಷ್ಟ್ರಪತಿಗಳು , ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾಮಾಜಿಕ ಸೇವೆಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಸಾಧಾರಣ ಗುಣಗಳು ಮತ್ತು ಅನುಭವಗಳನ್ನು ಹೊಂದಿರುವ 12 ಸದಸ್ಯರನ್ನು ನೇಮಕ ಮಾಡುತ್ತಾರೆ. ಸದಸ್ಯರು ಪರೋಕ್ಷವಾಗಿ ರಾಜ್ಯಗಳ ಶಾಸನಸಭೆಯ ಸದಸ್ಯರಿಂದ ಚುನಾಯಿತರಾಗುತ್ತಾರೆ, ಒಂದು ವರ್ಗಾವಣೆ ಮಾಡಬಹುದಾದ ಮತದ ಮೂಲಕ ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆಯ ಪ್ರಕಾರ.
 • ರಾಜ್ಯಸಭೆಯು ಶಾಶ್ವತವಾದ ಸಭೆಯಾಗಿದೆ ಮತ್ತು ಅದನ್ನುವಿಸರ್ಜನೆಗೊಳಿಸಲು  ಸಾಧ್ಯವಿಲ್ಲ. ಆದರೆ, ಪ್ರತಿ ಎರಡನೇ ವರ್ಷದ ಕೊನೆಯಲ್ಲಿ ಸದಸ್ಯರಲ್ಲಿ ಮೂರನೇ ಒಂದು ಭಾಗ ನಿವೃತ್ತರಾಗುತ್ತಾರೆ. ಸದರಿ ಸದಸ್ಯರು ಸಭೆಯಲ್ಲಿ  ಆರು ವರ್ಷಗಳ ಅವಧಿಯನ್ನು ಆನಂದಿಸುತ್ತಾರೆ.
 • ಒಂದು ಸದಸ್ಯನು ಭಾರತೀಯನಾಗಿರಬೇಕಾದ ಮೂಲಭೂತ ಅಗತ್ಯವನ್ನು ಹೊಂದಿರಬೇಕು ಮತ್ತು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಆಯ್ಕೆಮಾಡಿದ ಸದಸ್ಯರು ಯಾವುದೇ ಲಾಭದ ಕಚೇರಿಗಳನ್ನು ಹೊಂದಿರುವಂತಿಲ್ಲ . ಸದಸ್ಯರು 60 ದಿನಗಳಿಗಿಂತಲೂ ಹೆಚ್ಚು ದಿನಗಳವರೆಗೆ ಸಭೆಗೆ ಬಾರದಿದ್ದರೆ, ಸ್ಥಾನವನ್ನು ಖಾಲಿಯಾಗಿದೆ ಎಂದು  ಘೋಷಿಸಬಹುದು.

ರಾಜ್ಯಸಭಾ ಚುನಾವಣೆಯಲ್ಲಿ ನೋಟಾದ ಸಮಸ್ಯೆಗಳು ಯಾವುವು?

 • ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಅವಕಾಶ ನೀಡಿದರೆ ಆಯಾ ರಾಜ್ಯಗಳ ಸದಸ್ಯರ ಚುನಾವಣೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪಕ್ಷ ವಿರೋಧಿ ಚಟುವಟಿಕೆಗೆ ಆಯೋಗವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ.
 • ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದರೆ ಅನರ್ಹತೆಯ ಶಿಕ್ಷೆ ಎದುರಿಸಬೇಕಾಗುತ್ತದೆ. ಆದರೆ ನೋಟಾ ಮೂಲಕ ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಿಂದ ಬಚಾವಾಗಬಹುದು. ಇಂತಹ ಸಂವಿಧಾನ ವಿರೋಧಿ ಮತ ಚಲಾವಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ನೋಟಾವನ್ನು  ಬೆಂಬಲಿಸುವ ವಿಚಾರಗಳು  ಯಾವುವು?

 • ಪ್ರತಿಭಟನಾ ಮತದ ತತ್ವವು ಪರೋಕ್ಷ ಚುನಾವಣೆಗಳಿದ್ದರೂ ಸಹ ಅದೇ ಆಗಿರುತ್ತದೆ.
 • ಶಾಸಕರಿಗೆ NOTA ಆಯ್ಕೆಯ ಉಪಸ್ಥಿತಿಯು ವಿರೋಧ ಪಕ್ಷಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡದೆಯೇ ಆಕೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ಉನ್ನತ ಆಜ್ಞೆಯ ವಿರುದ್ಧ ಪ್ರತಿಭಟನೆಯ ಮತದಾನದ ಸಾಧ್ಯತೆಗಳನ್ನು ಅನುಮತಿಸುತ್ತದೆ.
 • ಪಕ್ಷದ ಉನ್ನತ ಆಜ್ಞೆಯು ರಾಜ್ಯಸಭಾ ಅಭ್ಯರ್ಥಿಗಾಗಿ ಚಾವಟಿ ನೀಡಬಹುದು, ಆದರೆ ಪಕ್ಷಾಭಿಪ್ರಾಯ ವಿರೋಧಿ ಕಾನೂನು ನಿಬಂಧನೆಗಳು ಅನ್ವಯಿಸುವುದಿಲ್ಲ, ಮತ್ತು ಪ್ರತಿಭಟನಾ ಶಾಸಕ ಸಭೆಯ ಸದಸ್ಯತ್ವದಿಂದ ಅನರ್ಹರಾಗಿಲ್ಲ.
 • ಆದ್ದರಿಂದ, ಪರೋಕ್ಷ ಚುನಾವಣೆಗಳ ಪ್ರಜಾಪ್ರಭುತ್ವೀಕರಣದ ವಿರುದ್ಧ ಹೋರಾಡುವ ಬದಲು, ನೋಟಾ ಆಯ್ಕೆಯಂತಹ ಸುಧಾರಣೆಗಳ ಮೂಲಕ, ಪಕ್ಷಗಳು ಉತ್ತಮವಾಗುತ್ತವೆ.

ಹಿಮಾಚಲದ 3 ಯೋಜನೆಗಳಿಗೆ ಅಟಲ್‌ ಹೆಸರು

 • ಸುದ್ದಿಯಲ್ಲಿ ಏಕಿದೆ? ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಶಿಮ್ಲಾದಲ್ಲಿ ಸ್ಥಾಪಿಸಲು ಮತ್ತು ಮನಾಲಿಯಲ್ಲಿ ವಾಜಪೇಯಿ ಅವರ ಸ್ಮಾರಕ ನಿರ್ಮಿಸಲು ಹಿಮಾಚಲ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ.
 • ಇದರ ಜತೆಗೆ ರೋಹ್ಟಂಗ್‌ ಸುರಂಗಕ್ಕೆ ಅಟಲ್‌ ಅವರ ಹೆಸರಿಡಲು, ಅಲ್ಲದೇ ರಾಜ್ಯ ಸರಕಾರದ ಮುಖ್ಯಮಂತ್ರಿ ಆದರ್ಶ ವಿದ್ಯಾ ಕೇಂದ್ರ ಯೋಜನೆಯನ್ನು ಅಟಲ್‌ ಆದರ್ಶ ವಿದ್ಯಾ ಕೇಂದ್ರ ಮತ್ತು ಮುಖ್ಯಮಂತ್ರಿ ಆಶೀರ್ವಾದ್‌ ಯೋಜನೆಯನ್ನು ಅಟಲ್‌ ಆಶೀರ್ವಾದ್‌ ಯೋಜನೆ ಎಂದೂ, ಕೋಲ್‌ ದಾಮ್‌ ಯೋಜನೆಗೆ ಅಟಲ್‌ ಹೆಸರಿಡಲೂ ಸಂಪುಟ ತೀರ್ಮಾನಿಸಿದೆ.

ನಯಾ ರಾಯಪುರವೀಗ ‘ಅಟಲ್‌ ನಗರ’

 • ಸುದ್ದಿಯಲ್ಲಿ ಏಕಿದೆ? ಛತ್ತೀಸಗಢದ ನೂತನ ರಾಜಧಾನಿ ನಯಾ ರಾಯಪುರಕ್ಕೆ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಗೌರವಾರ್ಥ ಅಟಲ್‌ ನಗರ ಎಂದು ನಾಮಕರಣ ಮಾಡಲು ರಾಜ್ಯದಲ್ಲಿನ ಬಿಜೆಪಿ ಸರಕಾರ ನಿರ್ಧರಿಸಿದೆ.2000ರಲ್ಲಿ ಛತ್ತೀಸಗಢ ರಾಜ್ಯ ನಿರ್ಮಾಣವಾಗಲು ಅಟಲ್‌ ಅವರ ಕೊಡುಗೆಗಾಗಿ ನಯಾ ರಾಯ್‌ಪುರಕ್ಕೆ ‘ಅಟಲ್‌ ನಗರ’ ಎಂದು ಹೆಸರಿಡಲಾಗಿದೆ.

ಸಿಗರೇಟ್‌ ಪ್ಯಾಕೆಟ್‌ ಮೇಲೆ ಹೊಸ ಎಚ್ಚರಿಕೆ

 • ಸುದ್ದಿಯಲ್ಲಿ ಏಕಿದೆ? ಸಿಗರೇಟ್‌ ಮತ್ತು ಇತರೆ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಹೊಸ ಚಿತ್ರಸಹಿತ ಎಚ್ಚರಿಕೆಯನ್ನು ಪ್ರಕಟಿಸಬೇಕು. ಜತೆಗೆ ಸಿಗರೇಟ್‌ ತೊರೆಯಲು ಬಯಸುವ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಬೇಕು. ಸೆ.1ರಿಂದಲೇ ಈ ಕ್ರಮ ಜಾರಿಗೆ ತರಬೇಕು ಎಂದು ಆರೋಗ್ಯ ಸಚಿವಾಲಯ ಆದೇಶಿಸಿದೆ.

ಯಾವ ಎಚ್ಚರಿಕೆಯ ಸಂದೇಶವಿರಬೇಕು?

 • ತಂಬಾಕಿನಿಂದ ಕ್ಯಾನ್ಸರ್‌ ಬರುತ್ತದೆ‘, ‘ಯಾತನೆಯ ಸಾವಿಗೆ ತಂಬಾಕು ಕಾರಣ ಎನ್ನುವ ಅರ್ಥದ ಇಂಗ್ಲಿಷ್‌ ಸಂದೇಶಗಳನ್ನು ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಬಣ್ಣದಲ್ಲಿ ಪ್ರಕಟಿಸಬೇಕು. ಜತೆಗೆ ‘ಕ್ವಿಟ್‌ ಟುಡೇ ಕಾಲ್‌ 1800ಧಿ11ಧಿ2356’ ಎಂಬುದಾಗಿ ಕಪ್ಪು ಹಿನ್ನೆಲೆಯ ಮೇಲೆ ಬಿಳಿ ಅಕ್ಷರದಲ್ಲಿ ಪ್ರಕಟಿಸಬೇಕು. ಇದು ಕಡ್ಡಾಯವಾಗಿದ್ದು, ಸಿಗರೇಟ್‌ ಮತ್ತು ತಂಬಾಕು ಪ್ಯಾಕೆಟ್‌ಗಳ ಮೇಲೆ ಪ್ರಕಟಿಸಬೇಕು.
 • ತಂಬಾಕು ಬಿಡಬೇಕು ಎಂದು ಬಯಸುವ ಜನರು ಪ್ಯಾಕೆಟ್‌ ಮೇಲಿರುವ ಸಂಖ್ಯೆಗೆ ಕರೆ ಮಾಡಿದರೆ, ಆನ್‌ಲೈನ್‌ ಮೂಲಕ ನೆರವು ನೀಡುವ ವ್ಯವಸ್ಥೆ ರೂಪಿಸಲಾಗಿದೆ
 • ಮೊದಲಿನಿಂದಲೂ ಎಚ್ಚರಿಕೆಯ ಸಂದೇಶಗಳನ್ನು ಪ್ರಕಟಿಸುವ ಪರಿಪಾಠ ಜಾರಿಯಲ್ಲಿದೆ. ಆದರೆ, ಚಿತ್ರಗಳ ಮೂಲಕ ತಂಬಾಕು ಸೇವನೆಯ ಅಪಾಯ ಬಿಂಬಿಸುವ ಕ್ರಮ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿದೆ. ಶೇ.46ರಷ್ಟು ಅನಕ್ಷರಸ್ಥರು ಸಿಗರೇಟ್‌ ಸೇದುತ್ತಾರೆ. ಅದರಲ್ಲಿ ಶೇ.16ರಷ್ಟು ಕಾಲೇಜು ಪದವೀಧರರಿದ್ದಾರೆ. ಹೆಚ್ಚಿನ ಜನರ ಜಾಗೃತಗೊಳಿಸುವ ನಿಟ್ಟಿನಲ್ಲಿ ಚಿತ್ರ ಸಂದೇಶದ ಎಚ್ಚರಿಕೆ ಪದ್ಧತಿ ಜಾರಿಯಲ್ಲಿದೆ. ಇದರ ಜತೆಗೆ ಸಹಾಯವಾಣಿ ಈಗ ಸೇರಿಕೊಂಡಿದೆ. ಪ್ಯಾಕೆಟ್‌ ಮೇಲೆ ದೊಡ್ಡದಾಗಿ ಸಂದೇಶ ಪ್ರಕಟಿಸುವ ಕ್ರಮವನ್ನು ತಂಬಾಕು ಕಂಪನಿಗಳು ವಿರೋಧಿಸಿದ್ದವು. ಆದರೂ, ಕೊನೆಗೆ ಸರಕಾರದ ಕ್ರಮಕ್ಕೆ ಮಣಿದಿವೆ.

ಇ-ವಿಧಾನ್‌ 

 • ಸುದ್ದಿಯಲ್ಲಿ ಏಕಿದೆ? ರಾಜ್ಯ ವಿಧಾನಮಂಡಲ ಉಭಯ ಸದನಗಳನ್ನು ಕಾಗದ ರಹಿತ ಮಾಡುವ ಉದ್ದೇಶದ ಇ-ವಿಧಾನ್‌ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, ಗ್ರಂಥಾಲಯದ ಡಿಜಿಟಲೀಕರಣ ಪ್ರಕ್ರಿಯೆ ನಡೆದಿದೆ. ಜತೆಗೆ, ಪಾರ್ಲಿಮೆಂಟ್‌ ಜರ್ನಲ್‌ ಮಾದರಿಯಲ್ಲಿ ರಾಜ್ಯ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ನಡೆಯುವ ಚರ್ಚೆ, ನಾನಾ ಸಮಿತಿಗಳ ನಡಾವಳಿ, ಸ್ಪೀಕರ್‌ ಮತ್ತು ಸಭಾಧ್ಯಕ್ಷರ ಸಂದೇಶ ಒಳಗೊಂಡ ‘ಶಾಸಕಾಂಗ ಪತ್ರಿಕೆ’ ಹೊರತರಲೂ ನಿರ್ಧಾರ ಕೈಗೊಳ್ಳಲಾಗಿದೆ

ಚಂದ್ರನಲ್ಲಿದೆ ಮಂಜುಗಡ್ಡೆ

 • ಸುದ್ದಿಯಲ್ಲಿ ಏಕಿದೆ? ಚಂದ್ರನ ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಗಳ ರಾಶಿ ಇದೆ ಎಂದು ಭಾರತ ಉಡಾವಣೆ ಮಾಡಿರುವ ಚಂದ್ರಯಾನ-1 ಮಿಷನ್ ಖಾತ್ರಿ ಪಡಿಸಿದೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.

ಉಪಯುಕ್ತತೆ

 • ಚಂದ್ರನ ಅಂಗಳದಲ್ಲಿ ನೀರು ಇರುವುದು ದೃಢವಾಗಿರುವುದರಿಂದ ಮುಂದಿನ ಚಂದ್ರಾನ್ವೇಷಣೆ ಯೋಜನೆಗಳು ಈ ನೀರಿನ ಮೂಲಗಳ ಹೆಚ್ಚಿನ ಅಧ್ಯಯನಕ್ಕೆ ದಾರಿ ಮಾಡಿಕೊಡಲಿದೆ. ಭವಿಷ್ಯದಲ್ಲಿ ಚಂದ್ರನಲ್ಲಿ ಮಾನವ ವಾಸದ ಸಾಧ್ಯತೆಯನ್ನು ಈ ಅಧ್ಯಯನಗಳು ತೆರೆದಿಡಲಿವೆ

ಹಿನ್ನಲೆ

 • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 10 ವರ್ಷ ಗಳ ಹಿಂದೆ ಚಂದ್ರಯಾನ-1 ಗಗನ ನೌಕೆ ಯನ್ನು ಉಡಾವಣೆ ಮಾಡಿತ್ತು. ಈ ನೌಕೆಯ ಅನ್ವೇಷಣೆ ಬಗ್ಗೆ ನಾಸಾದ ವಿಜ್ಞಾನಿಗಳು ಬರೆದ ವಿಶ್ಲೇಷಣಾತ್ಮಕ ಲೇಖನವನ್ನು ಪಿಎನ್​ಎಎಸ್ ನಿಯತ ಕಾಲಿಕೆ ಪ್ರಕಟಿಸಿದೆ.
 • ಈ ಲೇಖನದಲ್ಲಿ ವಿಜ್ಞಾನಿ ಗಳು, ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಚ್ಚಿನ ಮಂಜುಗಡ್ಡೆಗಳ ಆಕರ ಇವೆ. ಉತ್ತರ ಧ್ರುವದಲ್ಲಿ ಮಂಜುಗಡ್ಡೆಗಳು ವಿರಳವಾಗಿವೆ ಎಂದು ಹೇಳಿದ್ದಾರೆ.
 • ಅರ್ಧ ದಾರಿ ಕ್ರಮಿಸಿದ ಇನ್​ಸೈಟ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮಂಗಳ ಗ್ರಹದ ಅನ್ವೇಷಣೆ ಗಾಗಿ 107 ದಿನಗಳ ಹಿಂದೆ ಉಡಾವಣೆ ಮಾಡಿರುವ ‘ಇನ್​ಸೈಟ್’ ಗಗನ ನೌಕೆ ಅರ್ಧ ದಾರಿ (70 ಕೋಟಿ ಕಿ.ಮೀ.) ಕ್ರಮಿಸಿದ್ದು, ಇನ್ನು 98 ದಿನಗಳಲ್ಲಿ ಅಂಗಾರಕನ ಅಂಗಳದ ಎಲಿಸಿಯಂ ಪ್ಲಾನಿಟಿಯಾ ವಲಯದಲ್ಲಿ ಇಳಿಯಲಿದೆ

ಕೌಸರ್ ಜೆಟ್​ ಯುದ್ಧ ವಿಮಾನ

 • ಸುದ್ದಿಯಲ್ಲಿ ಏಕಿದೆ? ಇರಾನ್​ನ ಮೊದಲ ಸಂಪೂರ್ಣವಾಗಿ ಸ್ವದೇಶೀ ನಿರ್ಮಿತ ಫೈಟರ್​ ಜೆಟ್​ ನ್ನು ಪ್ರಧಾನಿ ಹಸ್ಸನ್ ರೌಹಾನಿ ಅವರು ಲೋಕಾರ್ಪಣೆ ಮಾಡಿ, ಶತ್ರು ಸಂಹಾರ ಹಾಗೂ ಶಾಶ್ವತ ಶಾಂತಿ ಸ್ಥಾಪನೆಗಾಗಿ ತೆಹ್ರಾನ್​ ಮಿಲಿಟರಿಯನ್ನು ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
 • ಈ ಕೌಸರ್​ ಯುದ್ಧ ವಿಮಾನವು ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದ್ದು, ತೆಹ್ರಾನ್​ನಲ್ಲಿರುವ ರಾಷ್ಟ್ರೀಯ ರಕ್ಷಣಾ ಕೈಗಾರಿಕಾ ಪ್ರದರ್ಶನದಲ್ಲಿ ಕಾಕ್​ಪಿಟ್​ನಲ್ಲಿ ಅಧ್ಯಕ್ಷ ರೌಹಾನಿ ಕುಳಿತು ಅನಾವರಣಗೊಳಿಸಿದ್ದಾರೆ.
 • ವಿಮಾನದಲ್ಲಿ ಅತ್ಯಾಧುನಿಕ ವೈಮಾನಿಕ ಉಪಕರಣಗಳು (ಏವಿಯಾನಿಕ್ಸ್) ಇವೆ. ಅಲ್ಲದೆ, ದೇಶದಲ್ಲೇ ತಯಾರಾದ ಬಹುಪಯೋಗಿ ರಾಡಾರ್​ ಬಳಕೆ ಮಾಡಲಾಗಿದೆ ಎನ್ನಲಾಗಿದೆ.
Related Posts
“29 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದಕ್ಷಿಣದಲ್ಲಿ ಕುಸಿಯುತ್ತಿದೆ ಲಿಂಗ ಅನುಪಾತ ಪ್ರಮಾಣ ಸುದ್ಧಿಯಲ್ಲಿ ಏಕಿದೆ ?ಉತ್ತರ ಭಾರತದ ಬದಲಿಗೆ ದಕ್ಷಿಣದಲ್ಲಿ ಲಿಂಗಾನುಪಾತ ವ್ಯತ್ಯಾಸ ಹೆಚ್ಚುತ್ತಿದೆ. ಆಶ್ಚರ್ಯಕರ ಬೆಳವಣಿಗೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗೋವಾಗಳಲ್ಲಿ ಜನಿಸುತ್ತಿರುವ ಶಿಶುಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತೀವ್ರ ಕುಸಿತ ಕಂಡಿದೆ. ಅಭಿವೃದ್ಧಿ ಪಥದಲ್ಲಿ ಮುಂದಿರುವ ಈ ...
READ MORE
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ ) ಸುದ್ಧಿಯಲ್ಲಿ ಏಕಿದೆ? ಬೇರೆ ಬೇರೆ ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಐಡಿಯನ್ನು ಬಳಸಿಕೊಂಡು ತಮ್ಮದೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಆಗಸ್ಟ್ 1ರಿಂದ ತಡೆ ಬೀಳಲಿದೆ. ವರ್ಗಾವಣೆಯಾದ ತಕ್ಷಣದಲ್ಲೆ ಹಣ ಪಡೆಯುವ ವ್ಯವಸ್ಥೆಯಾದ ಯುಪಿಐ ಐಡಿ ದುರ್ಬಳಕೆ ತಡೆಯಲು ...
READ MORE
19th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಶಬರಿಮಲೆ ದೇಗುಲ ಸುದ್ಧಿಯಲ್ಲಿ ಏಕಿದೆ? ಸಂಪ್ರದಾಯದ ಹೆಸರಿನಲ್ಲಿ 10-50 ವರ್ಷದವರೆಗಿನ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಪೀಠ, ಮಹಿಳೆಯರಿಗೆ ಏಕೆ ತಾರತಮ್ಯ ತೋರಿಸಬೇಕು ಎಂದು ಪ್ರಶ್ನಿಸಿದೆ. ಪ್ರತಿ ಮನುಷ್ಯನಿಗೂ ಆತನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ, ಅವರ ಹಕ್ಕನ್ನು ದೃಢೀಕರಿಸುವ, ...
READ MORE
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಲಮನ್ನಾ ಮೊತ್ತ ತೀರಿಸಿ ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ. ಉದ್ದೇಶ ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ...
READ MORE
“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪ್ರಮುಖ ಔಷಧಿಗಳ ಬ್ಯಾನ್‌ ಸುದ್ಧಿಯಲ್ಲಿ ಏಕಿದೆ ? 28 ಸ್ಥಿರ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್‌ ಮಾಡಿದೆ. ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದ್ದು, ಇತರೆ 6 ಔಷಧವನ್ನು ನಿರ್ಬಂಧಿಸಿದೆ. ಇದರಿಂದ 2016ರಿಂದ ಸಂಯೋಜನೆಯ ...
READ MORE
10th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚೀನಾ ಗಡಿಯ ಸೈನಿಕರಿಗೂ ಪೂರ್ಣ ಪಿಂಚಣಿ ಭಾರತ–ಚೀನಾ ವಿವಾದಿತ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಅಥವಾ ಗಾಯಗೊಂಡ ಸೈನಿಕರ ಕುಟುಂಬಗಳಿಗೆ ಪೂರ್ತಿ ಪಿಂಚಣಿ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ. ಕಳೆದ ವಾರ ಮಾಜಿ ಸೈನಿಕರ ಕಲ್ಯಾಣ ಇಲಾಖೆಯು 3,488 ಕಿಲೋ ಮೀಟರ್‌ ...
READ MORE
“25th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಒಂದು ವಲಯ ಒಂದು ರಸ್ತೆ’ ಸುದ್ದಿಯಲ್ಲಿ ಏಕಿದೆ? ಚೀನಾದ ‘ಒಂದು ವಲಯ ಒಂದು ರಸ್ತೆ’ (ಒಬಿಒಆರ್) ಯೋಜನೆ ಕುರಿತಂತೆ ಭಾರತದ ನಿಲುವಿಗೆ ನೆದರ್‌ಲೆಂಡ್ ಬೆಂಬಲ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ಯತ್ನಗಳು ಆಯಾ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ರೀತಿಯಲ್ಲಿ ಇರಬೇಕು ಒಂದು ಬೆಲ್ಟ್, ಒಂದು ...
READ MORE
29th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಸೌದಿಯಿಂದ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಯೋಜನೆ ಸೌದಿ ಅರೇಬಿಯಾ 13.03 ಲಕ್ಷ ಕೋಟಿ ರೂ. ವೆಚ್ಚದ ಸೌರಶಕ್ತಿ ಯೋಜನೆ ಆರಂಭಿಸುವ ಸಲುವಾಗಿ ಸಾಫ್ಟ್ ಬ್ಯಾಂಕ್ ಗ್ರೂಪ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ನೂತನ ಯೋಜನೆಯಿಂದಾಗಿ ಸೌದಿ ಅರೇಬಿಯಾ ವಿದ್ಯುತ್​ಗಾಗಿ ತೈಲದ ಮೇಲೆ ಅವಲಂಬಿತವಾಗುವುದು ...
READ MORE
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಭ್ರಷ್ಟಾಚಾರ ತಡೆಗೆ ಬಲಿಷ್ಠ ಕಾಯ್ದೆ ಸುದ್ಧಿಯಲ್ಲಿ ಏಕಿದೆ?30 ವರ್ಷಗಳ ನಂತರ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಲಂಚ ಪಡೆಯುವವರ ಜತೆಗೆ ಲಂಚ ನೀಡುವವರಿಗೂ 3ರಿಂದ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನು ಬಿಗಿಗೊಳಿಸಲಾಗಿದೆ. ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ...
READ MORE
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಾವೇರಿ ಆನ್‌ಲೈನ್ ಸೇವೆ ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದರು. ಉದ್ದೇಶ ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ...
READ MORE
“29 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
19th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
10th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“25th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
29th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *