“5th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “

ರತ್ನಖಚಿತ ಸಿಂಹಾಸನ

ಸುದ್ಧಿಯಲ್ಲಿ ಏಕಿದೆ ?ಪಾರಂಪರಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರೆಯ ಸಂಭ್ರಮ ಕಳೆಗಟ್ಟಲಾರಂಭಿಸಿದ್ದು, ಅರಮನೆಯಲ್ಲಿ ಧಾರ್ವಿುಕ ವಿಧಾನಗಳಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯವೂ ನೆರವೇರಿದೆ.

 • ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಸಿಂಹಾಸನದಲ್ಲಿ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಅರಮನೆ ಆಡಳಿತ ಮಂಡಳಿ ಅಧಿಕಾರಿಗಳು, ರಾಜವಂಶಸ್ಥರ ಪ್ರತಿನಿಧಿಗಳು ಮಾತ್ರ ಹಾಜರಿದ್ದರು.
 • ಮೈಸೂರು ಸಮೀಪದ ಗೆಜ್ಜನಹಳ್ಳಿ ವೀರಶೈವರು ಈ ಸಿಂಹಾಸನದ ಬಿಡಿಭಾಗಗಳನ್ನು ಜೋಡಿಸಲು ನೆರವಾದರು. ಇದಕ್ಕೆ ವಿಧಿವತ್ತಾಗಿ ಪೂಜೆಯನ್ನೂ ಸಲ್ಲಿಸಲಾಯಿತು. ನವರಾತ್ರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಂಹಾಸನದ ದರ್ಶನವಾಗಲಿದೆ.

ಜೋಡಣೆ ಹೇಗೆ?:

 • ಸಿಂಹಾಸನವನ್ನು ಅರಮನೆಯ ಭದ್ರಕೋಣೆ ಯಲ್ಲಿ ಬಿಗಿ ಭದ್ರತೆಯೊಂದಿಗೆ ಇರಿಸಲಾಗಿರುತ್ತದೆ. ಕೋಣೆಯ ತಲಾ ಒಂದೊಂದು ಕೀ ಅರಮನೆ ಆಡಳಿತ ಮಂಡಳಿ ಹಾಗೂ ರಾಜವಂಶಸ್ಥರ ಬಳಿ ಇರುತ್ತದೆ.
 • ಉಭಯರ ಸಮ್ಮುಖದಲ್ಲಿ ಹೊರ ತೆಗೆದು ಟ್ರಾಲಿ ಮೂಲಕ ದರ್ಬಾರ್ ಹಾಲ್​ಗೆ ತರಲಾಯಿತು. ಈ ಸಿಂಹಾಸನದಲ್ಲಿ 3 ಭಾಗಗಳಿವೆ. ಮುಖ್ಯ ಆಸನ, ಮೆಟ್ಟಿಲು ಮತ್ತು ಬಂಗಾರದ ಛತ್ರಿಯಿದೆ. ಮೂಲತಃ ಅಂಜೂರದ ಮರದಿಂದ ತಯಾರಿಸಲಾಗಿರುವ ಈ ರಾಜಗದ್ದುಗೆಗೆ, ಆನೆದಂತ ಪಟ್ಟಿಗಳನ್ನು ಅಳವಡಿಸಲಾಗಿದೆ. ಇವೆಲ್ಲ ಭಾಗಗಳನ್ನು ಬೇರ್ಪಡಿಸಿ ಮತ್ತೆ ಜೋಡಣೆ ಮಾಡುವ ತಾಂತ್ರಿಕತೆ ಇದಕ್ಕೆ ಇದೆ.
 • ಜೋಡಣೆ ಕಾಯಕವೂ ಒಂದು ಕಲೆಯಾಗಿದೆ.

ಐತಿಹಾಸಿಕ ಹಿನ್ನೆಲೆ:

 • ಸಿಂಹಾಸನದ ಛತ್ರಿ ಮೇಲೆ ಮುಮ್ಮಡಿ ಕೃಷ್ಣರಾಜ ಒಡೆಯರ್​ರನ್ನು ಸಂಬೋಧಿಸಿ ಸಂಸ್ಕೃತದ 24 ಶ್ಲೋಕ ಕೆತ್ತಲಾಗಿದೆ. ಈ ಶ್ಲೋಕಗಳ ಪ್ರಕಾರ ಸಿಂಹಾಸನ ಮಹಾಭಾರತದ ಪಾಂಡವರಿಗೆ ಸೇರಿದ್ದು, ಹಸ್ತಿನಾಪುರದಲ್ಲಿ ಇದ್ದ ಇದನ್ನು ಕಂಪಿಲರಾಯನು ಆಂಧ್ರಪ್ರದೇಶದ ಪೆನುಗೊಂಡಕ್ಕೆ ತಂದನಂತೆ. ಕೆಲ ಕಾಲದ ನಂತರ ವಿಜಯನಗರದ ಮಹಾರಾಜರು ಆನೆಗುಂದಿಗೆ ತಂದರು. ಸುಮಾರು ಎರಡು ಶತಮಾನಗಳವರೆಗೆ ಈ ಸಿಂಹಾಸನ ಅಲ್ಲಿತ್ತು.
 • 17ನೇ ಶತಮಾನದ ಆರಂಭದಲ್ಲಿ ವಿಜಯನಗರದ ಗವರ್ನರ್ ಇದನ್ನು ಶ್ರೀರಂಗಪಟ್ಟಣಕ್ಕೆ ತಂದು 1610ರಲ್ಲಿ ರಾಜ ಒಡೆಯರ್ ಅವರಿಗೆ ಹಸ್ತಾಂತರಿಸಿದರು. ಅಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರಕಿತು. ಶಾಸನಗಳಲ್ಲಿ ಉಲ್ಲೇಖಿಸಿರುವಂತೆ 1699ರಲ್ಲಿ ಚಿಕ್ಕ ದೇವರಾಜ ಒಡೆಯರ್ ಕಾಲದಲ್ಲಿಯೂ ಈ ಸಿಂಹಾಸನ ಇತ್ತು.
 • ಟಿಪ್ಪು ಸುಲ್ತಾನ್ ಸಾವಿನ ಬಳಿಕ ಈ ಸಿಂಹಾಸನವನ್ನು ಶ್ರೀರಂಗಪಟ್ಟಣ ಅರಮನೆಯಲ್ಲಿ ಪತ್ತೆ ಹಚ್ಚಲಾಯಿತು. ಅದನ್ನು ದುರಸ್ತಿಗೊಳಿಸಿ, ಯುವರಾಜ ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು. ಆಗಿನಿಂದಲೂ ಮೈಸೂರಿನಲ್ಲಿ ಸ್ವರ್ಣ ಗದ್ದುಗೆ ಉಳಿದುಕೊಂಡಿದೆ. 1940ರಲ್ಲಿ ಸಿಂಹಾಸನವನ್ನು ಕೊಂಚ ಮಟ್ಟಿಗೆ ದುರಸ್ತಿ ಮಾಡಲಾಯಿತು.

ಬಲರಾಮನ ಜೀವನಚರಿತ್ರೆ

 • ಅನೇಕ ಬಾರಿ ದಸರಾ ಜಂಬೂಸವಾರಿಯನ್ನು ಯಶಸ್ವಿಯಾಗಿ ಹೊತ್ತಿರುವ ‘ಬಲರಾಮ’ ಆನೆಯ ಜೀವನ ಚರಿತ್ರೆ ಪುಸ್ತಕ ಅ. 10ರಂದು ಸಂಜೆ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುತ್ತಿದೆ. ವೇದಿಕೆಗೆ ಸ್ವತಃ ಬಲರಾಮನನ್ನು ಕರೆತರಲಾಗುತ್ತಿದೆ. ಅಮೆರಿಕದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಇಂಜಿನಿಯರ್ ಭಾಸ್ಕರ್, ಗಜಗೌರವ-ಬಲರಾಮನ ಕಥೆ’ ಶೀರ್ಷಿಕೆಯಲ್ಲಿ ಬಲರಾಮನ ಜೀವನ ಚರಿತ್ರೆಯನ್ನು ಬರೆದಿದ್ದಾರೆ

ಪೋಲಿಯೊ ಲಸಿಕೆಯಲ್ಲಿ ‘ಟೈಪ್‌ 2 ವೈರಾಣು’

ಸುದ್ಧಿಯಲ್ಲಿ ಏಕಿದೆ?ಮಕ್ಕಳಿಗೆ ನೀಡಲಾಗುವ ಪೋಲಿಯೋ ಲಸಿಕೆಯಲ್ಲಿ ಟೈಪ್‌ 2 ಪೋಲಿಯೋ ವೈರಾಣು ಪತ್ತೆಯಾಗಿರುವ ಕುರಿತು ಇದೀಗ ರಾಜ್ಯದಲ್ಲೂ ಭೀತಿ ಮೂಡಿಸಿದ್ದು , ಲಸಿಕೆ ಹಾಕಿಸಿಕೊಂಡಿರುವ ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ.

 • ಈ ಕುರಿತು ಸ್ಪಷ್ಟನೆ ಹೊರಡಿಸಿರುವ ಆರೋಗ್ಯ ಇಲಾಖೆಯು ‘ಟೈಪ್‌ 2 ಪೋಲಿಯೋ ವೈರಾಣು’ ಪತ್ತೆಯಾಗಿರುವ ಪೋಲಿಯೋ ಲಸಿಕೆಯನ್ನು ರಾಜ್ಯದಲ್ಲಿ ಯಾವ ಮಕ್ಕಳಿಗೂ ಹಾಕಿಲ್ಲ. ಹೀಗಾಗಿ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಹಿನ್ನಲೆ

 • ಪೋಲಿಯೋ ನಿವಾರಣೆಗಾಗಿ ಪ್ರತಿ ವರ್ಷವೂ ಭಾರತ ಸರಕಾರ ಎರಡು ಬಾರಿ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಆದರೆ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಬಯೋಮೆಡ್‌ ಘಟಕದಲ್ಲಿ ಉತ್ಪಾದನೆಯಾಗಿರುವ 5 ಲಕ್ಷ ಬಾಟಲಿ ಲಸಿಕೆಗಳಲ್ಲಿ ಟೈಪ್‌ 2 ಪೋಲಿಯೋ ವೈರಸ್‌ ಪತ್ತೆಯಾಗಿದೆ. ಈ ಲಸಿಕೆಗಳನ್ನು ವಿತರಿಸಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿಆತಂಕ ಮೂಡಿದ್ದು , ಸಮರೋಪಾದಿಯಲ್ಲಿಮನೆಮನೆಗೂ ಸಮೀಕ್ಷೆ ನಡೆಸುವಂತೆ ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯಕ್ಕೆ ಆತಂಕವಿಲ್ಲ

 • ಪೋಲಿಯೋ ಲಸಿಕೆಯಲ್ಲಿಯೇ ಪೋಲಿಯೋ ಕಾರಕ ವೈರಾಣು ಪತ್ತೆಯಾಗಿರುವುದರಿಂದ ರಾಜ್ಯದ ಜನರಲ್ಲಿ ಭೀತಿ ಮೂಡಿಸಿದೆ. ಆದರೆ, ರಾಜ್ಯದಲ್ಲಿಅದಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
 • ”2014ರ ಮಾರ್ಚ್‌ನಲ್ಲಿದೇಶವು ಪೋಲಿಯೋ ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಘೋಷಿಸಲ್ಪಟ್ಟಿತ್ತು.

ಪೋಲಿಯೊ ವಿಧಗಳು

 • ಪೋಲಿಯೋ ರೋಗದಲ್ಲಿಮೂರು ವಿಧಗಳಿದ್ದು ಪಿ1, ಪಿ2, ಪಿ3 ಎಂದು ಗುರುತಿಸಲಾಗಿದೆ. ಆದರೆ, ಸಮರ್ಪಕವಾಗಿ ತೊಲಗದ ಟೈಪ್‌2 ಪೋಲಿಯೋ ನಿವಾರಣೆಗಾಗಿ 2016ರ ಏಪ್ರಿಲ್‌ನಲ್ಲಿಭಾರತ ಸೇರಿದಂತೆ ವಿಶ್ವಾದ್ಯಂತ ಹೊಸ ಲಸಿಕೆ ಪ್ರಾರಂಭಿಸಲಾಗಿತ್ತು.
 • ಇನ್ನು ಪೋಲಿಯೋ ಹನಿಗಳಲ್ಲಿಟ್ರಿವಲೆಂಟ್‌ ಹಾಗೂ ಬಿವಲೆಂಟ್‌ ಒಪಿವಿ ಎಂದು ರಡು ಬಗೆಗಳಿವೆ. ಬಿವಲೆಂಟ್‌ ಒಪಿವಿ ಲಸಿಕೆಯನ್ನು ಪಿ1, ಪಿ3 ಪೋಲಿಯೋ ನಿರ್ಮೂಲನೆಗೆ ಹಾಕಲಾಗುತ್ತದೆ. ಟೈಪ್‌ 2 ಪೋಲಿಯೋ (ಪಿ2) ನಿವಾರಣೆಗಾಗಿ 2016ರಲ್ಲಿಟ್ರಿವಲೆಂಟ್‌ ಟ್ರಿವಲೆಂಟ್‌ ಒಪಿವಿ ಲಸಿಕೆಯನ್ನು ಪರಿಚಯಿಸಲಾಯಿತು. ಇದರಲ್ಲಿಪಿ1, ಪಿ2, ಪಿ3 ಪೊಲೀಯೋ ನಿವಾರಣೆ ಗುಣಗಳಿವೆ ಎಂದು ಹೇಳಲಾಗಿತ್ತು.
 • ”ಬ್ರಿವಲೆಂಟ್‌ ಲಸಿಕೆ 2016ರ ಏಪ್ರಿಲ್‌ನಲ್ಲಿ ಉತ್ತರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಪೂರೈಕೆಯಾಗಿದೆ. ಈ ಬ್ಯಾಚ್‌ನ ಔಷಧ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯದ ಮಕ್ಕಳು ಸರಕ್ಷಿತರಾಗಿದ್ದಾರೆ.

ಮೀನು ಬೇಟೆಯಾಡುವ ಮಿಡತೆ ಪತ್ತೆ!

ಸುದ್ಧಿಯಲ್ಲಿ ಏಕಿದೆ ?ಜೀವವೈವಿಧ್ಯ ಇತಿಹಾಸದಲ್ಲಿ ಹೊಸದೊಂದು ಕೌತುಕ ದಾಖಲಾಗಿದೆ. ಶಿವನಕುದುರೆ ಎಂದೇ ಕರೆಸಿಕೊಳ್ಳುವ ಮಿಡತೆಯು(ಮ್ಯಾಂಟಿಸ್‌) ಮೀನು ಬೇಟೆಯಾಡುವುದನ್ನು ಮೊದಲ ಬಾರಿಗೆ ಸಂಶೋಧಕರು ಪತ್ತೆ ಮಾಡಿದ್ದು ಸಂಶೋಧನಾ ವಲಯದಲ್ಲಿ ಅಚ್ಚರಿ ಮೂಡಿಸಿದೆ.

 • ಸಾಮಾನ್ಯವಾಗಿ ಮಿಡತೆಯು ಸೊಳ್ಳೆ, ನೋಣ, ಜೇನು ಹುಳ ಮುಂತಾದ ಕೀಟಗಳನ್ನು ಬೇಟೆಯಾಡುತ್ತದೆ. ಆದರೆ ವಿಜ್ಞಾನಿಗಳು ಬೆರಗಾಗುವ ವಿದ್ಯಮಾನ ಬೆಂಗಳೂರು ಮಾಗಡಿ ರಸ್ತೆಯ ಕಡಬಗೆರೆಯಲ್ಲಿ ಗೋಚರವಾಗಿದೆ.
 • ಜಲನೈದಿಲೆ, ಅಂತರಗಂಗೆ ಜಲ ಸಸ್ಯಗಳಿಂದ ಕೂಡಿದ ಗಪ್ಪಿ, ಮೊಲ್ಲಿ, ಝಿಬ್ರಾ ಮತ್ತು ಸಕರ್‌ ಜಾತಿಯ 40 ಬಗೆಯ ಮೀನುಗಳಿರುವ ಕೊಳದಲ್ಲಿ ಪ್ರಾರ್ಥನಾ ಮಿಡತೆಯು ಗಪ್ಪಿ ಮೀನನ್ನು ಬೇಟೆಯಾಡುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಅದು ಒಮ್ಮೆಯಲ್ಲ ದಿನಕ್ಕೆ ಎರಡು ಬಾರಿಯಂತೆ ಸತತ ಐದು ದಿನ ಮಿಡತೆಯು ಮೀನು ಬೇಟೆಯಾಡಿದೆ.
 • ನೀರೊಳಗೆ ಅತಿವೇಗದ ಚಲನೆಯಲ್ಲಿರುವ ಗಪ್ಪಿ ಮೀನುಗಳನ್ನು ಬೇಟೆಯಾಡುವುದು ಎಂದರೆ ಸುಲಭದ ಮಾತಲ್ಲ. ತನ್ನದೆ ಹಸಿರು ಬಣ್ಣ ಹೊಂದಿದ ಜಲನೈದಿಲೆ ಮೇಲೆ ಕುಳಿತು ನೀರೊಳಗಿನ ಮೀನು ಬೇಟೆಯಾಡುವ ಮೂಲಕ ಮಿಡತೆಯು ಕೌಶಲ, ತಂತ್ರಗಾರಿಕೆ ಮತ್ತು ಬುದ್ಧಿಮತ್ತೆ ಪ್ರದರ್ಶಿಸುತ್ತದೆ. ಅದರ ತಲೆಯು 280-320 ಡಿಗ್ರಿಗಳವರೆಗೆ ಸುಲಭವಾಗಿ ತಿರುಗಬಲ್ಲ ಸಾಮರ್ಥ್ಯ ಹೊಂದಿದ್ದು ಬೇಟೆ ಹುಡುಕಲು ಸುಲಭವಾಗಿದೆ. ಮುಂಪಾದ ಗರಗಸದಂತಹ ಸೂಕ್ಷ ್ಮ ರಚನೆಗಳನ್ನು ಹೊಂದಿರುವುದರಿಂದ ಸಿಕ್ಕ ಬೇಟೆ ತಪ್ಪಿಸಿಕೊಳ್ಳವುದು ಅಸಾಧ್ಯ.

ಸಂಜೆ ಬೇಟೆ

 • ಈ ಅಧ್ಯಯನದಲ್ಲಿ ಕಂಡುಬಂದ ಇನ್ನೆರಡು ಪ್ರಮುಖ ಸಂಗತಿಗಳೆಂದರೆ ಮಿಡತೆಯು ಮೀನು ಬೇಟೆಗೆ ಪ್ರತಿದಿನ ಮುಸ್ಸಂಜೆಯಲ್ಲಿ ಬರುತ್ತಿತ್ತು. ಮಂದ ಬೆಳಕಿನಲ್ಲೂ ಮೀನು ಬೇಟೆಯಾಡಿ ಮಿಡತೆಯು ತನ್ನ ಕಣ್ಣುಗಳ ದೃಷ್ಟಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅಲ್ಲದೆ ಕೋಳದಲ್ಲಿ ವಿವಿಧ ಜಾತಿಯ ಮೀನುಗಳಿದ್ದರೂ ಅದು ಗಪ್ಪಿ ಮೀನುಗಳನ್ನು ಮಾತ್ರ ಬೇಟೆಯಾಡಿದೆ. ನೈಸರ್ಗಿಕ ಆವಾಸದಲ್ಲಿ ಅಕಶೇರುಕ(ಮೂಳೆಗಳಿಲ್ಲದ) ಕೀಟವು ಕಶೇರುಕ (ಮೂಳೆಗಳಿರುವ) ಗುಂಪಿಗೆ ಸೇರಿದ ಮೀನುಗಳನ್ನು ಭಕ್ಷಿಸುವ ಮೂಲಕ ಮೀನುಗಳ ಸಮುದಾಯದ ಮೇಲೆ ಬಲವಾದ ಪ್ರಭಾವ ಬೀರಿದೆ.

ಮಿಡತೆಗಳ ವಿಶೇಷ

 • ಜಗತ್ತಿನಲ್ಲಿ 2,400ಕ್ಕೂ ಅಧಿಕ ಜಾತಿ ಮಿಡತೆಗಳಿದ್ದು ಅವುಗಳಲ್ಲಿ 178 ಜಾತಿ ಮಿಡತೆಗಳು ಭಾರತದಲ್ಲಿವೆ. ಇವುಗಳಲ್ಲಿ ಏಲಿಯನ್‌ಗೆ ಹೋಲುವ ಮಿಡತೆ(ಏಷ್ಯನ್‌ ದೈತ್ಯ ಮ್ಯಾಂಟಿಸ್‌) ಭಾರತದಲ್ಲಿ ಹೆಚ್ಚಾಗಿವೆ.
 • ರಾಜ್ಯದಲ್ಲಿ ಇದಕ್ಕೆ ಶಿವನಕುದುರೆ, ಸೂರ್ಯನ ಕುದುರೆ ಎಂದೂ ಕರೆಯಲಾಗುತ್ತದೆ. ಮುಂಪಾದಗಳು ಸದಾ ಕೈ ಮುಗಿದು ನಿಂತ ಬಂಗಿಯಲ್ಲಿರುವುದರಿಂದ ಪ್ರಾರ್ಥನಾ ಮಿಡತೆ ಅಂತಲೂ ಕರೆಯುತ್ತಾರೆ.
 • ಮಿಡತೆ ಕೃಷಿಗೆ ಪೀಡಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಜೈವಿಕ ಕೀಟ ನಿಯಂತ್ರಕವಾಗಿ ಕೆಲಸಮಾಡುತ್ತದೆ. ಆಹಾರ ಸರಪಳಿಯಲ್ಲಿ ಪಕ್ಷಿ, ಹಲ್ಲಿಯಂತಹ ಮೇಲ್ತಸರದ ಜೀವಿಗಳಿಗೆ ಆಹಾರವಾಗಿದೆ. ಕೆಲ ಸಂದರ್ಭದಲ್ಲಿ ಮಿಲನವಾದ ನಂತರ ಹೆಣ್ಣು ಮಿಡತೆಯು ಗಂಡು ಮಿಡತೆಯನ್ನು ತಿನ್ನುತ್ತವೆ.
 • 150 ಮಿಲಿಯನ್‌ ವರ್ಷಗಳ ಇತಿಹಾಸ ಇರುವ ಮ್ಯಾಂಟಿಸ್‌ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಈ ಇದರ ಬಗ್ಗೆ ಅಧ್ಯಯನ ನಡೆದಿದ್ದು ಬಹಳ ಕಡಿಮೆ. ಮ್ಯಾಂಟಿಸ್‌ನಂತಹ ಕೀಟಗಳು ಅಧ್ಯಯನದಿಂದ ತಾತ್ಸರಕ್ಕೊಳಪಟ್ಟಿವೆ. ಬೇರೊಂದು ಅಧ್ಯಯನದಲ್ಲಿ ತೊಡಗಿದ್ದ ನಮಗೆ ಜೀವ ವೈವಿಧ್ಯದಲ್ಲಿ ಹೊಸದೊಂದು ಕೌತುಕ ತೋರಿದ್ದು, ಮತ್ತಷ್ಟು ಅಧ್ಯಯನ ನಡೆಸುವ ಕುತೂಕಲ ಮೂಡಿಸಿದೆ

ಎಲೆಕ್ಟ್ರಾನಿಕ್ ಬಿಲ್

ಸುದ್ಧಿಯಲ್ಲಿ ಏಕಿದೆ ?ಬಿಪಿಎಲ್ ಕುಟುಂಬಗಳಿಗೆ ನೀಡುವ ಪಡಿತರ ವಿತರಣೆಯಲ್ಲಿ ಮತ್ತಷ್ಟ್ಟು ಪಾರದರ್ಶಕತೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸಲು ಚಿಂತಿಸಿದೆ.

ಏನಿದು ಎಲೆಕ್ಟ್ರಾನಿಕ್ ಯಂತ್ರದ ಬಿಲ್?

 • ರೇಷನ್ ವಿತರಣೆ ವೇಳೆ ನ್ಯಾಯಬೆಲೆ ಅಂಗಡಿ ಮತ್ತು ಕಾರ್ಡ್​ದಾರರ ನಡುವೆ ಗಲಾಟೆ ಆಗುತ್ತಿತ್ತು, ಕೆಲ ಬಾರಿ ಮಾಲೀಕರು ರೇಷನ್ ನೀಡುತ್ತಿಲ್ಲ ಎಂಬ ದೂರುಗಳು ಇಲಾಖೆಗೆ ಸಾಕಷ್ಟು ಬರುತ್ತಿವೆ. ಪಾರದರ್ಶಕತೆ ತರಲೆಂದು ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಆಧಾರಿತ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಅಳವಡಿಸಿಕೊಳ್ಳುವಂತೆ ಆಹಾರ ಇಲಾಖೆ ಸೂಚಿಸಿದೆ. ಅದರಂತೆ ರಾಜ್ಯಾದ್ಯಂತ ಇರುವ 20,033 ನ್ಯಾಯಬೆಲೆ ಅಂಗಡಿಗಳ ಪೈಕಿ 18,898 ಅಂಗಡಿಗಳು ಪಿಒಎಸ್ ಅಳವಡಿಸಿಕೊಂಡಿವೆ.
 • ಇನ್ನಷ್ಟು ಪಾರದರ್ಶಕತೆ ತರಲೆಂದು ತೂಕ ಮತ್ತು ಬಿಲ್ ನೀಡಲು ಎಲೆಕ್ಟ್ರಾನಿಕ್ ಯಂತ್ರ ಅಳವಡಿಸಲು ಸರ್ಕಾರ ಚಿಂತಿಸಿದೆ. ಇದನ್ನು ಅಳವಡಿಸಿಕೊಂಡರೆ ಪ್ರತಿ ತಿಂಗಳು ಫಲಾನುಭವಿಗಳಿಗೆ ವಿತರಿಸುವ ರೇಷನ್ ಪ್ರಮಾಣ ಸಂಬಂಧ ಎರಡು ಪ್ರತ್ಯೇಕ ಬಿಲ್​ಗಳು ಬರುತ್ತವೆ. ಒಂದು ಮಾಲೀಕನಿಗೆ, ಮತ್ತೊಂದು ಫಲಾನುಭವಿಗೆ. ಇದರಿಂದಾಗಿ ಮೋಸ ತಪ್ಪಿಸಬಹುದು ಎಂಬುದು ಸರ್ಕಾರದ ಆಶಯ.

ಬಯೋಮೆಟ್ರಿಕ್ ಅಳವಡಿಸಿ

 • ರಾಜ್ಯದ ಎಲ್ಲ 229 ಸಗಟು ಮಳಿಗೆಗಳಿಗೆ ಬಯೋ ಮೆಟ್ರಿಕ್ ಯಂತ್ರ ಅಳವಡಿಸಿದರೆ, ಕಳ್ಳ ಮಾರ್ಗದಲ್ಲಿ ಸೋರಿಕೆಯಾಗುವ ರೇಷನ್ ತಡೆಗಟ್ಟ ಬಹುದು. ನಕಲಿ ಅಥವಾ ಬೇರೆ ಯಾರೋ ಬಂದು ರೇಷನ್ ಪಡೆದು ಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಮುಖ ಗುರುತಿಸುವ ಬಯೋಮೆಟ್ರಿಕ್​

ಸುದ್ಧಿಯಲ್ಲಿ ಏಕಿದೆ ?ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇನ್ನು ಅತಿ ಶೀಘ್ರದಲ್ಲೇ ಮುಖವನ್ನು ಗುರುತಿಸುವ ಬಯೋಮೆಟ್ರಿಕ್​ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್​ ಪ್ರಭು ತಿಳಿಸಿದ್ದಾರೆ.

 • ಇದು ವಿಮಾನ ಪ್ರಯಾಣಿಕರಿಗೆ ಐಚ್ಛಿಕವಾಗಿರುತ್ತದೆ. ವಿಮಾನ ನಿಲ್ದಾಣದಲ್ಲಿ ಕಾಗದ ರಹಿತ ಹಾಗೂ ಕಾದಾಟ, ವಿವಾದ ಮುಕ್ತ ವಾತಾವರಣ ಕಲ್ಪಿಸಲು ಈ ಬಯೋಮೆಟ್ರಿಕ್​ ಜಾರಿಗೊಳಿಸಲಾಗುತ್ತಿದೆ.
 • ಬೆಂಗಳೂರು ಮತ್ತು ಹೈದರಾಬಾದ್​ ಏರ್​ಪೋರ್ಟ್​ಗಳಲ್ಲಿ ಮುಖ ಗುರುತಿಸುವಿಕೆಯ ಬಯೋಮೆಟ್ರಿಕ್ ವ್ಯವಸ್ಥೆ​ ಜಾರಿಗೆ ಎಲ್ಲ ಸಿದ್ಧತೆಗಳಾಗಿದ್ದು 2019ರ ಫೆಬ್ರವರಿ ಅಂತ್ಯದೊಳಗೆ ಜಾರಿ ಮಾಡಲಾಗುತ್ತದೆ.
 • ಏಪ್ರಿಲ್​ನಲ್ಲಿ ಕೋಲ್ಕತ, ವಾರಾಣಸಿ, ಪುಣೆ ಮತ್ತು ವಿಜಯವಾಡಾದ ನಿಲ್ದಾಣಗಳಲ್ಲಿ ಪ್ರಾರಂಭಿಸಲು ವಿಮಾನ ನಿಲ್ದಾಣಗಳ ಪ್ರಾಧಿಕಾರ ಯೋಜನೆ ರೂಪಿಸಿದೆ ಎಂದು ಹೇಳಿದರು.

ಹೀಗೆ ಕಾರ್ಯನಿರ್ವಹಿಸಲಿದೆ ಬಯೋಮೆಟ್ರಿಕ್​

 • ಡಿಜಿ ಯಾತ್ರೆ ಯೋಜನೆಯಡಿ ವಿಮಾನಯಾನ ಮಾಡುವವರಿಗಾಗಿ ಒಂದು ಕೇಂದ್ರೀಕೃತ ನೋಂದಣಿ ವ್ಯವಸ್ಥೆ ಇರುತ್ತದೆ. ಅದು ಪ್ರತಿ ಪ್ರಯಾಣಿಕರಿಗೂ ಒಂದು ಐಡಿ ಕೊಡುತ್ತದೆ. ಹೆಸರು, ಇ-ಮೇಲ್​, ಮೊಬೈಲ್​ ನಂಬರ್​, ಆಧಾರ್​ಗಳನ್ನೊಳಗೊಂಡ ಈ ಐಡಿಯನ್ನು ಪ್ರಯಾಣಿಕರು ಏರ್​ಲೈನ್​ನಿಂದ ಟಿಕೆಟ್​ ಖರೀದಿ ಮಾಡುವಾಗ ನೀಡಲಾಗುವುದು.
 • ನಂತರ ಏರ್​ಲೈನ್ ನವರು ಪ್ರಯಾಣಿಕರ ಡಿಜಿ ಯಾತ್ರಾ ಐಡಿಯನ್ನು ಅವರು ಪ್ರಯಾಣಿಸಲಿರುವ ಏರ್​ಪೋರ್ಟ್​ಗೆ ನೀಡುತ್ತಾರೆ. ಪ್ರಯಾಣಿಕರು ವಿಮಾನ ಏರುವುದಕ್ಕೂ ಮೊದಲು ಒಮ್ಮೆ ಮಾತ್ರ ಡಿಜಿ ಐಡಿ ಪರಿಶೀಲಿಸಲಾಗುವುದು. ಭಾವಚಿತ್ರ ಸೆರೆಹಿಡಿದು ಡಿಜಿ ಯಾತ್ರಾ ಐಡಿಯಲ್ಲಿ ಸಂಗ್ರಹಿಸಲಾಗುವುದು.

ಬಯೊಮಿಟ್ರಿಕ್ಸ್

 • ಬಯೊಮಿಟ್ರಿಕ್ಸ್ ಎನ್ನುವುದು ದೇಹ ಮಾಪನಗಳು ಮತ್ತು ಲೆಕ್ಕಾಚಾರಗಳ ತಾಂತ್ರಿಕ ಪದವಾಗಿದೆ. ಇದು ಮಾನವ ಗುಣಲಕ್ಷಣಗಳಿಗೆ ಸಂಬಂಧಿಸಿದ ಮಾಪನಗಳನ್ನು ಸೂಚಿಸುತ್ತದೆ.
 • ಬಯೋಮೆಟ್ರಿಕ್ಸ್ ದೃಢೀಕರಣ (ಅಥವಾ ನೈಜ ಪ್ರಮಾಣೀಕರಣ) ಅನ್ನು ಕಂಪ್ಯೂಟರ್ ಸೈನ್ಸ್ನಲ್ಲಿ ಗುರುತಿಸುವಿಕೆ ಮತ್ತು ಪ್ರವೇಶ ನಿಯಂತ್ರಣದ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಕಣ್ಗಾವಲು ಅಡಿಯಲ್ಲಿ ಇರುವ ಗುಂಪುಗಳಲ್ಲಿ ವ್ಯಕ್ತಿಗಳನ್ನು ಗುರುತಿಸಲು ಬಳಸಲಾಗುತ್ತದೆ.
 • ಬಯೋಮೆಟ್ರಿಕ್ ಗುರುತಿಸುವಿಕೆಗಳು ವ್ಯಕ್ತಿಗಳನ್ನು ಲೇಬಲ್ ಮಾಡಲು ಮತ್ತು ವಿವರಿಸಲು ಬಳಸುವ ವಿಶಿಷ್ಟ, ಅಳೆಯಬಹುದಾದ ಗುಣಲಕ್ಷಣಗಳಾಗಿವೆ.
 • ಬಯೋಮೆಟ್ರಿಕ್ ಗುರುತಿಸುವಿಕೆಗಳನ್ನು ಸಾಮಾನ್ಯವಾಗಿ ಶಾರೀರಿಕ ಮತ್ತು ವರ್ತನೆಯ ಗುಣಲಕ್ಷಣಗಳಾಗಿ ವರ್ಗೀಕರಿಸಲಾಗಿದೆ.
 • ದೈಹಿಕ ಗುಣಲಕ್ಷಣಗಳು ದೇಹದ ಆಕಾರಕ್ಕೆ ಸಂಬಂಧಿಸಿವೆ. ಉದಾಹರಣೆಗಳು ಸೇರಿವೆ, ಆದರೆ ಬೆರಳಚ್ಚು , ಪಾಮ್ ಸಿರೆಗಳು, ಮುಖ ಗುರುತಿಸುವಿಕೆ , ಡಿಎನ್ಎ , ಪಾಮ್ ಮುದ್ರಣ , ಕೈ ಜ್ಯಾಮಿತಿ , ಐರಿಸ್ ಗುರುತಿಸುವಿಕೆ , ರೆಟಿನಾ ಮತ್ತು ವಾಸನೆ / ಪರಿಮಳವನ್ನು ಸೀಮಿತವಾಗಿಲ್ಲ. ವರ್ತನೆಯ ಗುಣಲಕ್ಷಣಗಳು ವ್ಯಕ್ತಿಯ ವರ್ತನೆಯ ಮಾದರಿಯೊಂದಿಗೆ ಸಂಬಂಧಿಸಿವೆ, ಆದರೆ ಟೈಪಿಂಗ್ ಲಯ , ನಡಿಗೆ , ಮತ್ತು ಧ್ವನಿಯನ್ನು ಸೀಮಿತವಾಗಿಲ್ಲ.
 • ಬಯೋಮೆಟ್ರಿಕ್ಸ್ನ ಎರಡನೆಯ ವರ್ಗವನ್ನು ವಿವರಿಸಲು ಕೆಲವು ಸಂಶೋಧಕರು ವರ್ತನೆಯ ಮಾತುಗಳು ಎಂಬ ಪದವನ್ನು ಸೃಷ್ಟಿಸಿದ್ದಾರೆ.

ಬಯೋಮೆಟ್ರಿಕ್ ವ್ಯವಸ್ಥೆಗಳ ಪ್ರಯೋಜನಗಳು:

 • ಸುಧಾರಿತ ಸುರಕ್ಷತೆ
 • ಸುಧಾರಿತ ಗ್ರಾಹಕ ಅನುಭವ
 • ಕಡಿಮೆ ನಿರ್ವಹಣಾ ವೆಚ್ಚಗಳು
 • ಪಾಸ್ವರ್ಡ್ಗಳನ್ನು ಮರೆತು ಅಥವಾ ಕಳವು ಮಾಡಲಾಗಿಲ್ಲ.
 • ಧನಾತ್ಮಕ ಮತ್ತು ನಿಖರ ಗುರುತಿಸುವಿಕೆ
 • ಚಲನಶೀಲತೆ ನೀಡುತ್ತದೆ
 • ಫೋರ್ಜ್ ಮಾಡಲು ಅಸಾಧ್ಯ
 • ವರ್ಗಾವಣೆ ಮಾಡಲಾಗದ ಕೀ ಆಗಿ ಕಾರ್ಯನಿರ್ವಹಿಸುತ್ತದೆ.

ಬಯೋಮೆಟ್ರಿಕ್ ವ್ಯವಸ್ಥೆಗಳ ಅನಾನುಕೂಲಗಳು:

 • ಪರಿಸರ ಮತ್ತು ಬಳಕೆ ಮಾಪನದ ಮೇಲೆ ಪ್ರಭಾವ ಬೀರಬಹುದು
 • ಸಿಸ್ಟಮ್ಸ್ 100% ನಿಖರವಾಗಿಲ್ಲ.
 • ಏಕೀಕರಣ ಮತ್ತು / ಅಥವಾ ಹೆಚ್ಚುವರಿ ಹಾರ್ಡ್ವೇರ್ ಅಗತ್ಯವಿದೆ
 • ರಾಜಿ ಒಮ್ಮೆ ಮರುಹೊಂದಿಸಲು ಸಾಧ್ಯವಿಲ್ಲ

ಮೊದಲ ಎಕ್ಸೋಮೂನ್

ಸುದ್ಧಿಯಲ್ಲಿ ಏಕಿದೆ ?ನಮ್ಮ ಸೌರಮಂಡಲದ ಹೊರಗಿರುವ ಪ್ರತ್ಯೇಕ ಮತ್ತು ಮೊದಲನೆಯದು ಎನ್ನಲಾದ ಚಂದ್ರನನ್ನು ಹಬಲ್ ಮತ್ತು ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಬಳಸಿ ಬಾಹ್ಯಾಕಾಶ ತಜ್ಞರು ಪತ್ತೆಹಚ್ಚಿದ್ದಾರೆ.

 • ಸೌರಮಂಡಲದಿಂದ 8000 ಜ್ಯೋರ್ತಿವರ್ಷ ದೂರವಿರುವ ಪ್ರತ್ಯೇಕ ಎಕ್ಸೋಮೂನ್ ಪತ್ತೆಯಾಗಿರುವ ಬಗ್ಗೆ ಜರ್ನಲ್ ಸೈನ್ಸ್ ಅಡ್ವಾನ್ಸಸ್‌ನಲ್ಲಿ ಲೇಖನ ಪ್ರಕಟವಾಗಿದೆ. ಪ್ರತ್ಯೇಕ ನಕ್ಷತ್ರ ವ್ಯವಸ್ಥೆಯಲ್ಲಿ ಚಂದ್ರನು ಪರಿಭ್ರಮಿಸುತ್ತಿದ್ದಾನೆ ಎನ್ನಲಾಗಿದ್ದು, ನೆಪ್ಚೂನ್‌ನ ವ್ಯಾಸಕ್ಕೆ ಹೋಲಿಸಿದರೆ ತುಸು ದೊಡ್ಡದು ಎನ್ನಲಾಗಿದೆ.
 • ನಮ್ಮ ಸೌರಮಂಡಲದಲ್ಲಿ ಅಂತಹ ಇನ್ಯಾವುದೇ ಮತ್ತೊಂದು ಚಂದ್ರನ ಇರುವಿಕೆ ಪತ್ತೆಯಾಗಿಲ್ಲ. ಪ್ರಸ್ತುತ ಸೌರಮಂಡಲದಲ್ಲಿ 200 ನೈಸರ್ಗಿಕ ಉಪಗ್ರಹಗಳು ಇವೆ ಎಂದು ಅಮೆರಿಕದ ಕೊಲಂಬಿಯಾ ವಿವಿಯ ಸಂಶೋಧಕರು ತಿಳಿಸಿದ್ದಾರೆ. ಹೀಗಾಗಿ ನಮ್ಮ ಸೌರಮಂಡಲಕ್ಕೆ ಹೊರತಾದ ಮತ್ತೊಂದು ನಕ್ಷತ್ರ ವ್ಯವಸ್ಥೆಯಲ್ಲಿ ಪತ್ತೆಯಾದ ಮೊದಲ ಚಂದ್ರ ಅದಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 • ಹಬಲ್ ಮೂಲಕ ನಡೆಸಲಾದ ಪತ್ತೆಕಾರ್ಯಾಚರಣೆಯಲ್ಲಿ ಸೌರಮಂಡಲದಲ್ಲಿ ಚಂದ್ರನ ರೂಪುಗೊಳ್ಳುವಿಕೆ ಕುರಿತಂತೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎನ್ನಲಾಗಿದೆ.

ಎಕ್ಸೋಮೊನ್ ಅಥವಾ ಎಕ್ಸ್ಟ್ರಾಸೊಲಾರ್ ಚಂದ್ರ ಬಗ್ಗೆ

 • ಎಕ್ಸೋಮೊನ್ ಅಥವಾ ಎಕ್ಸ್ಟ್ರಾಸೊಲಾರ್ ಚಂದ್ರ ಎನ್ನುವುದು ಒಂದು ನೈಸರ್ಗಿಕ ಉಪಗ್ರಹವಾಗಿದ್ದು , ಇದು ಹೆಚ್ಚುವರಿ ಗ್ರಹದ ಅಥವಾ ಇತರ ನಾನ್-ಸ್ಟೆಲ್ಲಾರ್ ಹೆಚ್ಚುವರಿ ಸೌರ ದೇಹವನ್ನು ಸುತ್ತುತ್ತದೆ.
 • ಸೌರವ್ಯೂಹದಲ್ಲಿ ನೈಸರ್ಗಿಕ ಉಪಗ್ರಹಗಳ ಪ್ರಾಯೋಗಿಕ ಅಧ್ಯಯನದಿಂದ ಇದು ಗ್ರಹಿಸಲ್ಪಡುತ್ತದೆ , ಅವು ಗ್ರಹಗಳ ವ್ಯವಸ್ಥೆಗಳ ಸಾಮಾನ್ಯ ಅಂಶಗಳಾಗಿವೆ. ಪತ್ತೆಯಾದ ಹೆಚ್ಚುವರಿ ಗ್ರಹ ಬಹುತೇಕ ದೈತ್ಯ ಗ್ರಹಗಳು . ಸೌರವ್ಯೂಹದಲ್ಲಿ ದೈತ್ಯ ಗ್ರಹಗಳು ನೈಸರ್ಗಿಕ ಉಪಗ್ರಹಗಳ ದೊಡ್ಡ ಸಂಗ್ರಹವನ್ನು ಹೊಂದಿವೆ.
 • ಪ್ರಸಕ್ತ ತಂತ್ರಗಳನ್ನು ಬಳಸಿ ಪತ್ತೆಹಚ್ಚಲು ಮತ್ತು ದೃಢೀಕರಿಸಲು ಎಕ್ಸೊಮಿನೂಸ್ ಕಷ್ಟವಾಗಿದ್ದರೂ, ಕೆಪ್ಲರ್ನಂತಹ ಕಾರ್ಯಾಚರಣೆಗಳ ಅವಲೋಕನದಿಂದಾಗಿ ಹಲವಾರು ಅಭ್ಯರ್ಥಿಗಳನ್ನು ವೀಕ್ಷಿಸಲಾಗಿದೆ, ಅವುಗಳಲ್ಲಿ ಕೆಲವು ಭೂಮ್ಯತೀತ ಜೀವನಕ್ಕೆ ಆವಾಸಸ್ಥಾನಗಳು ಮತ್ತು ರಾಕ್ಷಸ ಗ್ರಹವಾಗಿರಬಹುದು .

ಪ್ರಸ್ತಾಪಿತ ಪತ್ತೆ ವಿಧಾನಗಳು

 • ಸ್ಯಾಟರ್ನ್-ತರಹದ ಎಕ್ಸಪ್ಲಾನೆಟ್ ಸುತ್ತಲೂ ಕಾಲ್ಪನಿಕ ಭೂಮಿಯಂತಹ ಚಂದ್ರನ ಕಲಾವಿದನ ಅನಿಸಿಕೆ
 • ಅನೇಕ exoplanets ಸುಮಾರು exomoons ಅಸ್ತಿತ್ವವನ್ನು ಸಿದ್ಧಾಂತ ಇದೆ.
 • ಹೋಸ್ಟ್ ಸ್ಟಾರ್ನ ಡಾಪ್ಲರ್ ಸ್ಪೆಕ್ಟ್ರೋಸ್ಕೋಪಿಯೊಂದಿಗೆ ಗ್ರಹದ ಬೇಟೆಗಾರರ ಹೆಚ್ಚಿನ ಯಶಸ್ಸನ್ನು ಹೊಂದಿದ್ದರೂ ಸಹ, ಈ ವಿಧಾನದಿಂದ ಹೊರಸೂಸುವಿಕೆಯನ್ನು ಕಂಡುಹಿಡಿಯಲಾಗುವುದಿಲ್ಲ. ಇದರ ಪರಿಣಾಮವಾಗಿ ಒಂದು ಗ್ರಹ ಮತ್ತು ಹೆಚ್ಚುವರಿ ಉಪಗ್ರಹಗಳು ಉಪಸ್ಥಿತಿಯಿಂದಾಗಿ ನಕ್ಷತ್ರದ ವರ್ಣಪಟಲವನ್ನು ಬದಲಿಸಿದ ಕಾರಣ ಹೋಸ್ಟ್ ಸ್ಟಾರ್ನ ಕಕ್ಷೆಯಲ್ಲಿ ಚಲಿಸುವ ಏಕೈಕ ಪಾಯಿಂಟ್-ದ್ರವ್ಯರಾಶಿಗೆ ಒಂದೇ ರೀತಿ ವರ್ತಿಸುತ್ತವೆ. ಇದನ್ನು ಗುರುತಿಸುವುದರ ಮೂಲಕ, ಎಮೋಮಿನನ್ಗಳನ್ನು ಪತ್ತೆಹಚ್ಚಲು ಹಲವಾರು
 • ಇತರ ವಿಧಾನಗಳು ಪ್ರಸ್ತಾಪಿಸಿವೆ, ಅವುಗಳೆಂದರೆ:
 • ನೇರ ಚಿತ್ರಣ
 • ಮೈಕ್ರೋಲೆನ್ಸಿಂಗ್
 • ಪಲ್ಸರ್ ಟೈಮಿಂಗ್
 • ಸಾಗಣೆ ಸಮಯ ಪರಿಣಾಮಗಳು
 • ಸಾಗಣೆ ವಿಧಾನ

ಹಬಲ್ ಸ್ಪೇಸ್ ಟೆಲಿಸ್ಕೋಪ್

 • ದಿ ಹಬಲ್ ಸ್ಪೇಸ್ ಟೆಲಿಸ್ಕೋಪ್ ( ಎಚ್ಎಸ್ಟಿ ) 1990 ರಲ್ಲಿ ಕಡಿಮೆ ಭೂ ಕಕ್ಷೆಗೆ ಪ್ರಾರಂಭವಾದ ಬಾಹ್ಯಾಕಾಶ ದೂರದರ್ಶಕ ಮತ್ತು ಕಾರ್ಯಾಚರಣೆಯಲ್ಲಿ ಉಳಿದಿದೆ. ಮೊದಲನೆಯ ಬಾಹ್ಯಾಕಾಶ ದೂರದರ್ಶಕವಲ್ಲವಾದರೂ , ಹಬಲ್ ಅತಿದೊಡ್ಡ ಮತ್ತು ಅತ್ಯಂತ ಬಹುಮುಖವಾದದ್ದು ಮತ್ತು ಖಗೋಳಶಾಸ್ತ್ರಕ್ಕೆ ಸಾರ್ವಜನಿಕ ಸಂಬಂಧಗಳ ವರಮಾನದ ಒಂದು ಪ್ರಮುಖ ಸಂಶೋಧನಾ ಸಾಧನವೆಂದು ಹೆಸರುವಾಸಿಯಾಗಿದೆ.
 • ಎಚ್ಎಸ್ಟಿಗೆ ಖಗೋಳವಿಜ್ಞಾನಿ ಎಡ್ವಿನ್ ಹಬಲ್ ಹೆಸರನ್ನಿಡಲಾಗಿದೆ, ಮತ್ತು ಕಾಂಪ್ಟನ್ ಗಾಮಾ ರೇ ಅಬ್ಸರ್ವೇಟರಿ , ಚಂದ್ರ ಎಕ್ಸರೆ ಅಬ್ಸರ್ವೇಟರಿ , ಮತ್ತು ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್ ಜೊತೆಗೆ ನಾಸಾದ ಗ್ರೇಟ್ ಅಬ್ಸರ್ವೇಟರೀಸ್ಗಳಲ್ಲಿ ಒಂದಾಗಿದೆ.

ಕೆಪ್ಲರ್ (ಬಾಹ್ಯಾಕಾಶ ನೌಕೆ)

 • ಕೆಪ್ಲರ್ ಇತರ ನಕ್ಷತ್ರಗಳನ್ನು ಪರಿಭ್ರಮಿಸುವ ಭೂಮಿಯ ಗಾತ್ರದ ಗ್ರಹಗಳನ್ನು ಕಂಡುಹಿಡಿಯಲು NASA ಪ್ರಾರಂಭಿಸಿದ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ .
 • ಖಗೋಳಶಾಸ್ತ್ರಜ್ಞ ಜೋಹಾನ್ಸ್ ಕೆಪ್ಲರ್ ಹೆಸರಿನ ನಂತರ , ಬಾಹ್ಯಾಕಾಶ ನೌಕೆಯನ್ನು ಮಾರ್ಚ್ 7, 2009 ರಂದು ಭೂ-ಹಿಂದುಳಿದ ಸೂರ್ಯಕೇಂದ್ರಿತ ಕಕ್ಷೆಗೆ ಪ್ರಾರಂಭಿಸಲಾಯಿತು .
 • ಕ್ಷೀರಪಥದ ನಮ್ಮ ಪ್ರದೇಶದ ಒಂದು ಭಾಗವನ್ನು ವಾಸಯೋಗ್ಯ ವಲಯಗಳಲ್ಲಿ ಅಥವಾ ಸಮೀಪವಿರುವ ಭೂಮಿಯ ಗಾತ್ರದ ಎಕ್ಸ್ಪ್ಲೋನೆನೆಟ್ಗಳನ್ನು ಕಂಡುಹಿಡಿಯಲು ವಿನ್ಯಾಸಗೊಳಿಸಿದ ಮತ್ತು ಕ್ಷೀರ ಪಥದಲ್ಲಿ ಎಷ್ಟು ಶತಕೋಟಿ ನಕ್ಷತ್ರಗಳು ಅಂತಹ ಗ್ರಹಗಳನ್ನು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ, ಕೆಪ್ಲರ್ ಒಂದು ಏಕೈಕ ವೈಜ್ಞಾನಿಕ ಸಾಧನವೆಂದರೆ ಫೋಟೊಮೀಟರ್ , ಅದು ನಿಶ್ಚಿತ ಕ್ಷೇತ್ರದಲ್ಲಿ ಸುಮಾರು 150,000 ಮುಖ್ಯ ಅನುಕ್ರಮ ನಕ್ಷತ್ರಗಳ ಹೊಳಪು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.
 • ಈ ಡೇಟಾವನ್ನು ಭೂಮಿಗೆ ಹರಡಲಾಗುತ್ತದೆ, ನಂತರ ಅವರ ಆತಿಥೇಯ ನಕ್ಷತ್ರದ ಮುಂದೆ ಹಾದುಹೋಗುವ exoplanets ಉಂಟಾಗುವ ಆವರ್ತಕ ಮಬ್ಬಾಗಿಸುವುದನ್ನು ಪತ್ತೆಹಚ್ಚಲು ವಿಶ್ಲೇಷಿಸಲಾಗಿದೆ .
 • ಕೆಪ್ಲರ್ ತುಲನಾತ್ಮಕವಾಗಿ ಕಡಿಮೆ-ವೆಚ್ಚದ, ಕೇಂದ್ರೀಕೃತ ಪ್ರಾಥಮಿಕ ವಿಜ್ಞಾನ ಕಾರ್ಯಾಚರಣೆಗಳ ನಾಸಾದ ಡಿಸ್ಕವರಿ ಪ್ರೋಗ್ರಾಂನ ಭಾಗವಾಗಿದೆ
Related Posts
“7th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಜಾಹೀರಾತು ಪ್ರದರ್ಶನ ನಿಷೇಧ ಸುದ್ದಿಯಲ್ಲಿ ಏಕಿದೆ? ಅನಧಿಕೃತ ಫ್ಲೆಕ್ಸ್, ಬ್ಯಾನರ್​ಗಳ ಹಾವಳಿ ತಡೆಯಲು ಮುಂದಿನ ಒಂದು ವರ್ಷದವರೆಗೆ ನಗರದಲ್ಲಿ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಲು ಬಿಬಿಎಂಪಿ ಕೌನ್ಸಿಲ್​ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಿನ್ನಲೆ: ಹಲವು ವರ್ಷಗಳಿಂದ ಸಾಧ್ಯವಾಗದೇ ಇದ್ದ ಕೆಲಸವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ...
READ MORE
India near bottom of intellectual property index
India was ranked 37 out of 38 countries, with only Venezuela scoring lower, in the U.S. Chamber of Commerce-International Intellectual Property Index. The report, comes at a time when the government ...
READ MORE
22nd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಗೌರವ ಭಾರತರತ್ನ ಪುರಸ್ಕೃತ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 102ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ. ಚೆನ್ನೈ ಮೂಲದ ವಿಜಯ್ ಕ್ರಿಶ್ ಎಂಬುವರು ಉಸ್ತಾದ್ ಅವರ ಡೂಡಲ್ ಚಿತ್ರವನ್ನು ರಚಿಸಿದ್ದಾರೆ. ಖಾನ್ ಅವರು 1961ರಲ್ಲಿ  ಜನಿಸಿದರು. ಆರನೇ ...
READ MORE
Urban Development-Central Sponsored Mega City Scheme & Smart City Mission
Government of India has introduced the centrally sponsored Mega City scheme during the year 1995. Under this scheme a sum of Rs.241.75 crore central share and equal share under state grant i.e.Rs.241.75 crore was provided to ...
READ MORE
31st ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ ಸುದ್ದಿಯಲ್ಲಿ ಏಕಿದೆ? ಬಹು ನಿರೀಕ್ಷಿತ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ (ಎನ್‌ಆರ್‌ಸಿ) ಅಂತಿಮ ಕರಡು ಪ್ರಕಟವಾಗಿದ್ದು, ಅಸ್ಸಾಂನ 40 ಲಕ್ಷ ಮಂದಿ ಭಾರತೀಯ ಪ್ರಜೆಗಳೆಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಒಟ್ಟು 29 ಕೋಟಿ ಜನಸಂಖ್ಯೆಯ ಪೈಕಿ 2.9 ಕೋಟಿ ಜನರ ಹೆಸರುಗಳು ...
READ MORE
National framework for malaria elimination launched in Karnataka
National framework for malaria elimination launched in Karnataka The Health Department launched the National Framework for Malaria Elimination in India programme in Karnataka The World Health Organisation is committed to eradicating malaria ...
READ MORE
The Commonwealth Heads of Government Meeting (Chogm), held every two years, was held in Malta It is an association of 53 independent nations The countries of the Commonwealth represent nearly one-third of ...
READ MORE
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬರಪೀಡಿತ ಜಿಲ್ಲೆ  ಸುದ್ದಿಯಲ್ಲಿ ಏಕಿದೆ? ಇನ್ನು ಮುಂದೆ ಯಾವುದೇ ತಾಲೂಕಿನ ಶೇ.75 ರಷ್ಟು ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.50ರಷ್ಟು ತೇವಾಂಶವಿಲ್ಲದೆ ಶೇ.33 ರಷ್ಟು ಬೆಳೆ ನಾಶವಾದರೂ ಆ ಜಿಲ್ಲೆಯನ್ನೂ ಬರಪೀಡಿತ ಎಂದು ಘೋಷಿಸಬಹುದು . ಹಿನ್ನಲೆ ಬರ ಘೋಷಣೆಗೆ ಸಂಬಂಧಿಸಿದ ಕಠಿಣ ಮಾನದಂಡವನ್ನು ಕೇಂದ್ರ ಸರಕಾರ ...
READ MORE
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಯುಷ್ಮಾನ್‌ಭವ  ಸುದ್ಧಿಯಲ್ಲಿ ಏಕಿದೆ ?ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರ ಆರೋಗ್ಯ ಕಾಪಾಡುವ, ಜಗತ್ತಿನ ಅತಿ ದೊಡ್ಡ ಸರಕಾರ ಪ್ರಾಯೋಜಿತ ಹೆಲ್ತ್‌ ಕೇರ್‌ ಯೋಜನೆ 'ಆಯುಷ್ಮಾನ್‌ ಭಾರತ್‌' ಲೋಕಾರ್ಪಣೆಗೊಂಡಿತು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ...
READ MORE
The Legislative Assembly and the Legislative Council secretariats are finding it difficult to maintain records of speeches and statements made by members on the floor of the Houses. With members of ...
READ MORE
“7th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
India near bottom of intellectual property index
22nd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
Urban Development-Central Sponsored Mega City Scheme & Smart
31st ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
National framework for malaria elimination launched in Karnataka
The Commonwealth Heads of Government Meeting
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
State to digitise all legislature proceedings

Leave a Reply

Your email address will not be published. Required fields are marked *