10th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಮಹಿಳಾ ಸುರಕ್ಷತೆಗೆ ವಿಶೇಷ ಯೋಜನೆ

ಸುದ್ಧಿಯಲ್ಲಿ ಏಕಿದೆ ?ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ ನಾರಿಯರ ಸುರಕ್ಷತೆಗಾಗಿ ಕೇಂದ್ರ ಸರಕಾರ ವಿಶೇಷ ಯೋಜನೆ ಘೋಷಿಸಿದ್ದು, ಇದಕ್ಕಾಗಿ 3,000 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ.

 • ಬೆಂಗಳೂರುದಿಲ್ಲಿಹೈದರಾಬಾದ್‌ ಒಳಗೊಂಡಂತೆ ಪ್ರಮುಖ ಎಂಟು ನಗರಗಳಲ್ಲಿ ಅಪಾಯದ ಕರೆಗಂಟೆ ಮತ್ತು ಸಂಪೂರ್ಣ ಮಹಿಳಾ ಗಸ್ತು ತಂಡಗಳ ರಚನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ಈ ಯೋಜನೆಗಾಗಿ ಅನುದಾನ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.

ಏನೆಲ್ಲಾ ಕ್ರಮಗಳು?

 • ಮಹಿಳಾ ಸುರಕ್ಷತೆಗಾಗಿ ಸಾಧ್ಯವಿರುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಯೋಜನೆಯ ಉದ್ದೇಶ. ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುವ ಪ್ರದೇಶಗಳಲ್ಲಿ ಸುರಕ್ಷಾ ವಲಯಗಳ ಸ್ಥಾಪನೆ, ಅತ್ಯಾಧುನಿಕ ನಿಯಂತ್ರಣ ಕೇಂದ್ರಗಳ ಜತೆ ಸಂಪರ್ಕ ಹೊಂದಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ಭದ್ರತಾ ವ್ಯವಸ್ಥೆ ಇರುವ ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಅಪಾಯ ಕರೆಗಂಟೆಗಳ ಅವಳಡಿಕೆ ಯೋಜನೆಯ ಭಾಗಗಳಾಗಿವೆ.
 • ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳು ಆರಂಭಗೊಳ್ಳಲಿವೆ. ಅಲ್ಲಿ ಆಪ್ತಸಮಾಲೋಚಕರ ಸೇವೆಯೂ ದೊರಕಲಿದೆ. ಹೀಗಾಗಿ ಮಹಿಳೆಯರು ದೂರು ದಾಖಲಿಸುವುದು ಸುಲಭವಾಗಲಿದೆ ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಅವರಿಗೆ ವಿಶೇಷ ನೆರವು ದೊರೆಯಲಿದೆ.
 • ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಆಯಾ ನಗರಗಳ ಮಹಾನಗರಪಾಲಿಕೆ ಮತ್ತು ಪೊಲೀಸ್‌ ಆಯುಕ್ತರ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ. ಯೋಜನೆ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸಲಿವೆ.
 • ಯೋಜನೆಯು 2018-19 ರಿಂದ 2020-21ರ ಅವಧಿಯಲ್ಲಿ ಅನುಷ್ಠಾನಗೊಳ್ಳಲಿದೆ. 2013ರಲ್ಲಿ ಸ್ಥಾಪಿಸಲಾದ ನಿರ್ಭಯಾ ನಿಧಿಯ ಅಡಿಯಲ್ಲಿ ಯೋಜನೆಯನ್ನು ಮಂಜೂರು ಮಾಡಲಾಗಿದೆ.

ಹಿನ್ನಲೆ

 • ವುಮೆನ್ ಸೇಫ್ ಸಿಟಿ ಪ್ರಾಜೆಕ್ಟ್ ಎಂಬ ಮೂರು ಸಾವಿರ ಕೋಟಿ ರೂಪಾಯಿ ವೆಚ್ಚದ ಈ ವಿಶೇಷ ಯೋಜನೆಗೆ ಗೃಹ ಸಚಿವಾಲಯ ಇತ್ತೀಚೆಗೆ ಅನುಮೋದನೆ ನೀಡಿದೆ. ನಿರ್ಭಯ ನಿಧಿಯಿಂದ ಇದಕ್ಕೆ ಅನುದಾನ ಒದಗಿಸಲಾಗುತ್ತಿದೆ. 2018-19ರಿಂದ 2020-21ರ ಹಣಕಾಸು ವರ್ಷದ ನಡುವೆ ಈ ಯೋಜನೆ ಬೆಂಗಳೂರು(ರೂ. 667 ಕೋಟಿ), ಮುಂಬೈ(ರೂ.06 ಕೋಟಿ), ದೆಹಲಿ(ರೂ.252 ಕೋಟಿ), ಕೋಲ್ಕತ(ರೂ. 181.32 ಕೋಟಿ), ಚೆನ್ನೈ(ರೂ.425.06 ಕೋಟಿ), ಹೈದರಾಬಾದ್(ರೂ.282.5ಕೋಟಿ), ಅಹಮದಾಬಾದ್(ರೂ.253 ಕೋಟಿ), ಲಖನೌ(-ರೂ.195 ಕೋಟಿ)ಗಳಲ್ಲಿ ಜಾರಿಗೆ ಬರಲಿದೆ.

ಇತರ ಉಪಕ್ರಮಗಳು

 • ಇದರಂತೆ, ಈ ಯೋಜನೆ ಜಾರಿಗೊಳ್ಳುವ ನಗರಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ, ಸ್ಮಾರ್ಟ್ ಎಲ್​ಇಡಿ ಬೀದಿ ದೀಪ ಅಳವಡಿಕೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಏಕಗವಾಕ್ಷಿ ಬಿಕ್ಕಟ್ಟು ಪರಿಹಾರ ಕೇಂದ್ರ, ಫೋರೆನ್ಸಿಕ್, ಸೈಬರ್ ಅಪರಾಧ ತಡೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಅಭಯಂ ಹೆಸರಿನ ತುರ್ತು ಪ್ರತಿಕ್ರಿಯೆ ವಾಹನಗಳನ್ನೂ ಪೂರೈಸಲಾಗುತ್ತದೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪಬ್ಲಿಕ್ ಪ್ಯಾನಿಕ್ ಬಟನ್ ಅಳವಡಿಕೆ, ಸುರಕ್ಷಿತ ವಲಯಗಳಲ್ಲಿ ಶೌಚಗೃಹ ಸ್ಥಾಪನೆ ಕೂಡ ಯೋಜನೆಯ ಭಾಗವಾಗಿದೆ

ತುಳು ಭಾಷೆ

ಸುದ್ಧಿಯಲ್ಲಿ ಏಕಿದೆ ?ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಲು ರಾಜ್ಯ ಸರಕಾರವು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೋರಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ತುಳುವೆರೆ ಪರ್ಬ’ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

 • ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ರೂಪಿಸಿದ ಸಾಂಸ್ಕೃತಿಕ ನೀತಿಯಲ್ಲಿ ತುಳು ಭಾಷೆಯನ್ನು 8ನೇ ಪರಿಚ್ಛೇಧಕ್ಕೆ ಸೇರಿಸಬೇಕೆಂದು ಉಲ್ಲೇಖಿಸಲಾಗಿದೆ. ಇದನ್ನು ಅಧಿವೇಶನದಲ್ಲಿ ಚರ್ಚೆ ಮಾಡಿ ಒಪ್ಪಿಗೆ ನೀಡಬೇಕು. ಬಳಿಕ ಆ ಅಂಶವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು. ರಾಜ್ಯ ಸರಕಾರ ಒಪ್ಪಿಗೆ ನೀಡಿದ ಬಳಿಕ ಕೇಂದ್ರ ಸರಕಾರ 8ನೇ ಪರಿಚ್ಛೇಧಕ್ಕೆ ಸೇರಿಸಲೇಬೇಕಾಗುತ್ತದೆ. ಇದರ ಜತೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಸದಸ್ಯರ ಜತೆ ಚರ್ಚೆ ಮಾಡಿ ಕೇಂದ್ರದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಒತ್ತಾಯ ಮಾಡಬೇಕು ಎಂದು ತೀರ್ಮಾನಿಸಲಾಯಿತು.

ತುಳು ಭಾಷೆಯ ಬಗ್ಗೆ

 • ತುಳು ಭಾರತ ದೇಶದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚು ಮಾತನಾಡುವ ಭಾಷೆ. ತುಳು ಮಾತಾಡುವವರನ್ನು ತುಳುವರು (ಅಥವಾ ತುಳುವಲ್ಲಿ ತುಳುವೆರ್ ) ಎಂದು ಕರೆಯುತ್ತಾರೆ. ತುಳು ಭಾಷೆಯನ್ನು ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
 • ಹಿಂದೆ ಅಂದರೆ ಸುಮಾರು ೧೦ನೇ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ಉಪಯೋಗಿಸುತ್ತಿದರು. ತುಳುವ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಈ ಲಿಪಿಯನ್ನು ತುಳು ಲಿಪಿ ಎಂದು ಕರೆಯಲಾಗಿದೆ.
 • ಪಕ ಬಳಕೆ ಇಲ್ಲದಿದ್ದ ಕಾರಣ ಕಾಲಕ್ರಮೇಣ ಲಿಪಿ ಬಳಕೆ ನಶಿಸಿ ಹೋಗಿದೆ. ಇತ್ತಿಚೆನ ದಿನಗಳಲ್ಲಿ ಹಳೆಯ ಈ ಲಿಪಿಯ ಪುನರುಜ್ಜೀವನಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆ. ಪುರಾತನ ತಿಗಳಾರಿ ಲಿಪಿ ಮಲೆಯಾಳಂ ಲಿಪಿಯನ್ನು ಹೋಲುತ್ತದೆ.ಪ್ರಸ್ತುತ ತುಳುಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಾರೆ.

ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯಿದೆ-2018

ಸುದ್ಧಿಯಲ್ಲಿ ಏಕಿದೆ ? ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯಿದೆ-2018ಕ್ಕೆ ಹೊಸ ಅಂಶ ಸೇರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ಹೊಸ ಅಂಶ?

 • ಯಾವುದೇ ಕೆಲಸ ಮಾಡಿಸಿಕೊಳ್ಳಲು ಲೈಂಗಿಕ ಸಂಪರ್ಕದ ಬೇಡಿಕೆಯೊಡ್ಡುವುದು ಅಥವಾ ಅಂತಹ ಬೇಡಿಕೆಯನ್ನು ಒಪ್ಪಿಕೊಳ್ಳುವುದನ್ನೂ ಸಹ ಹೊಸ ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಲಂಚವೆಂದೇ ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ಆರೋಪಿಗೆ ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
 • ”ಕಾನೂನುಬದ್ಧವಾದ ಹಣ ಪಾವತಿ ಹೊರತುಪಡಿಸಿ, ದುಬಾರಿ ಕ್ಲಬ್‌ ಸದಸ್ಯತ್ವ, ಆತಿಥ್ಯ ಇತ್ಯಾದಿ ಯಾವುದೇ ಅನರ್ಹ ಅನುಕೂಲತೆಯನ್ನು ಲಂಚ ಎಂದೇ ಹೊಸ ಕಾನೂನು ಪರಿಗಣಿಸುತ್ತದೆ,” ಎಂದು ಅವರು ತಿಳಿಸಿದ್ದಾರೆ.
 • ಮೂವತ್ತು ವರ್ಷಗಳ ಹಿಂದಿನ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ಈಗ ತಿದ್ದುಪಡಿ ತರಲಾಗಿದೆ. ಇದರಲ್ಲಿ ಸರಕಾರಿ ನೌಕರರು ಪಡೆಯುವ ಲಂಚದ ಬಗ್ಗೆ ವಿವರಣೆಗಳಿವೆ.
 • ಅನುಚಿತ ಪ್ರಯೋಜನ ಪಡೆಯುವಿಕೆ ಎಂಬ ಉಪ ಶೀರ್ಷಿಕೆ ಅಡಿ ಹೊಸ ನಿಯಮಗಳನ್ನು ಉಲ್ಲೇಖಿಸಲಾಗಿದೆ.
 • ಲಂಚ ಕೊಟ್ಟರೂ ಶಿಕ್ಷೆ: ಲಂಚ ಕೊಡುವವರಿಗೆ ಸಹ ಗರಿಷ್ಠವಾಗಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಹೊಸ ಕಾಯಿದೆಯಲ್ಲಿ ಅವಕಾಶ ಇದೆ. ಇದಕ್ಕೂ ಮುನ್ನ ಲಂಚ ಪಡೆದವರಿಗಷ್ಟೇ ಶಿಕ್ಷೆಯಾಗುತ್ತಿತ್ತು. ನೀಡುವವರಿಗೆ ಯಾವುದೇ ಕಾನೂನು ಅನ್ವಯ ಆಗುತ್ತಿರಲಿಲ್ಲ.

ರಫೇಲ್‌

ಸುದ್ಧಿಯಲ್ಲಿ ಏಕಿದೆ ?ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನಗಳ ಆಮದು ಸನ್ನಿಹಿತವಾದ ಬೆನ್ನಲ್ಲೇ, ಹೊಸ ವಿಮಾನಗಳನ್ನು ಸ್ವಾಗತಿಸಲು ವಾಯುಪಡೆ ಸದ್ದಿಲ್ಲದೆ ಸಿದ್ಧತೆ ಆರಂಭಿಸಿದೆ.

 • ರಫೇಲ್‌ ಯುದ್ಧ ವಿಮಾನಕ್ಕೆ ಬೇಕಾದ ಮೂಲಸೌಕರ್ಯ ಸೃಷ್ಟಿ, ಪೈಲಟ್‌ಗಳ ತರಬೇತಿ ಸೇರಿದಂತೆ ಹಲವು ಸಿದ್ಧತೆಗಳನ್ನು ಶುರು ಮಾಡಲಾಗಿದೆ. ವಿಶೇಷ ತರಬೇತಿಗಾಗಿ ವರ್ಷಾಂತ್ಯಕ್ಕೆ ಪೈಲಟ್‌ಗಳ ತಂಡವೊಂದನ್ನು ಫ್ರಾನ್ಸ್‌ಗೆ ಕಳುಹಿಸಲೂ ಐಎಎಫ್‌ ನಿರ್ಧರಿಸಿದೆ. ಈಗಾಗಲೇ ವಾಯುಪಡೆಯ ಹಲವು ತಂಡಗಳು ಫ್ರಾನ್ಸ್‌ಗೆ ಭೇಟಿ ನೀಡಿ, ರಫೇಲ್‌ ಯುದ್ಧ ವಿಮಾನದಲ್ಲಿ ಭಾರತಕ್ಕೆ ಬೇಕಾದ ಅಗತ್ಯಗಳ ಬಗ್ಗೆ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್‌ ಏವಿಯೇಷನ್‌ಗೆ ಮಾಹಿತಿ ನೀಡಿವೆ.

ಹಿನ್ನಲೆ

 • 2016ರ ಸೆಪ್ಟೆಂಬರ್‌ನಲ್ಲಿ 58,000 ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನಗಳ ಪೂರೈಕೆಗಾಗಿ ಭಾರತ ಫ್ರಾನ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.
 • ಭಾರತಕ್ಕೆ ರಫ್ತಾಗಲಿರುವ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಫೇಲ್‌ ಯುದ್ಧವಿಮಾನಗಳ ಪ್ರಾಯೋಗಿಕ ಹಾರಾಟವನ್ನೂ ಡಸಾಲ್ಟ್‌ ಏವಿಯೇಷನ್‌ ಈಗಾಗಲೇ ಆರಂಭಿಸಿದ್ದು, 2019ರ ಸೆಪ್ಟೆಂಬರ್‌ ಅಂತ್ಯದೊಳಗೆ ಮೊದಲ ವಿಮಾನ ಪೂರೈಕೆಯಾಗಲಿದೆ.
 • ಭಾರತದ ಬೇಡಿಕೆಗೆ ಅನುಗುಣವಾಗಿ ಇಸ್ರೇಲಿ ಹೆಲ್ಮೆಟ್‌ ಮೌಂಟೆಡ್‌ ಡಿಸ್ಪ್ಲೇ, ರೆಡಾರ್‌ ವಾರ್ನಿಂಗ್‌, ಲೋ ಬ್ಯಾಂಡ್‌ ಜಾಮರ್‌, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇನ್ಫ್ರಾರೆಡ್‌ ಶೋಧ ಮತ್ತು ಟ್ರ್ಯಾಕಿಂಗ್‌ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ರಫೇಲ್‌ ಯುದ್ಧವಿಮಾನದಲ್ಲಿ ಫ್ರಾನ್ಸ್‌ ಅಳವಡಿಸಲಿದೆ.

ಮಾನವ ಸಹಿತ ಗಗನಯಾನ

ಸುದ್ಧಿಯಲ್ಲಿ ಏಕಿದೆ ?ಇಸ್ರೋ ಬಹು ಆಕಾಂಕ್ಷಿತ ಯೋಜನೆಯಾಗಿರುವ ಮಾನವ ಸಹಿತ ಗಗನಯಾನದಲ್ಲಿ ಪಾಲ್ಗೊಳ್ಳುತ್ತಿರುವ ಮೂವರು ಗಗನಯಾತ್ರಿಗಳಿಗೆ ಕೇಸರಿ ಬಣ್ಣದ ವಿಶೇಷ ಹೈಟೆಕ್‌ ಉಡುಪುಗಳು ಸಿದ್ಧಗೊಂಡಿವೆ.

 • ಬೆಂಗಳೂರು ಸ್ಪೇಸ್‌ ಎಕ್ಸ್‌ಪೋದಲ್ಲಿ ಗಗನಯಾತ್ರಿಗಳ ಹೊಸ ಉಡುಗೆಗಳನ್ನು ಅನಾವರಣಗೊಳಿಸಲಾಗಿದೆ. ಈ ವಿಶೇಷ ಉಡುಪುಗಳನ್ನು ತಿರುವನಂತಪುರದಲ್ಲಿರುವ ವಿಕ್ರಮ್‌ ಸಾರಾಬಾಯಿ ಸ್ಪೇಸ್‌ ಸೆಂಟರ್‌ನಲ್ಲಿ ಎರಡು ವರ್ಷಗಳ ಕಾಲ ಸಿದ್ಧಪಡಿಸಲಾಗಿದೆ.
 • ಇಸ್ರೋ ಮಾನವ ಸಹಿತ ಅಂತರಿಕ್ಷಯಾನಕ್ಕೆ ಜತೆಯಾಗಲಿದೆ ಫ್ರಾನ್ಸ್‌
 • ಪ್ರಸ್ತುತ ಎರಡು ಉಡುಪುಗಳು ಸಿದ್ಧಗೊಂಡಿದ್ದು, ಮತ್ತೊಂದು ಉಡುಪನ್ನು ತಯಾರಿಸಲಾಗುತ್ತಿದೆ. 60 ನಿಮಿಷಗಳ ಕಾಲ ಉಸಿರಾಡಬಹುದಾದ ಆಮ್ಲಜನಕ ಸಿಲಿಂಡರ್‌ ಉಡುಗೆಗೆ ಹೊಂದಿಸಲಾಗಿದೆ. 2022ರ ಒಳಗೆ ಮಾನವ ಸಹಿತ ಗಗನಯಾನ ಕೈಗೊಳ್ಳುವ ಗುರಿಯನ್ನು ಇಸ್ರೋ ಹೊಂದಿದೆ.
 • ಗಗನಯಾತ್ರಿಗಳ ಕಾರ್ಯನಿರ್ವಹಣೆ, ಅಪಾಯದ ಹಂತದಲ್ಲಿ ತಪ್ಪಿಸಿಕೊಳ್ಳುವ ವಿಧಾನಗಳ ಬಗ್ಗೆ ಇಸ್ರೋ ಮಾಡೆಲ್‌ಗಳನ್ನು ಅಭಿವೃದ್ಧಿ ಪಡಿಸಿದೆ.
 • ಮೂವರು ಭಾರತೀಯರನ್ನು ಹೊತ್ತ ನೌಕೆ 16 ನಿಮಿಷದಲ್ಲಿ ತಲುಪಲಿದೆ ಬಾಹ್ಯಾಕಾಶ
 • ಭೂಮಿಯ ಮೇಲ್ಮೈನಿಂದ ಸುಮಾರು 400 ಕಿ.ಮೀ. ಕಕ್ಷೆಯಲ್ಲಿ ಮೂವರು ಗಗನಯಾತ್ರಿಗಳು 5-7 ದಿನಗಳ ಕಾಲ ನೆಲೆಸಲಿದ್ದಾರೆ. ಇವರನ್ನು ಹೊತ್ತೊಯ್ಯುವ ಕ್ಯಾಪ್ಸುಲ್‌ (ಗಗನ ನೌಕೆ) ಥರ್ಮಲ್‌ ಶೀಲ್ಡ್‌ನಿಂದ ಆವೃತವಾಗಿದ್ದು, ಅದು ಭೂಮಿಯ ವಾತಾವರಣಕ್ಕೆ ವಾಪಾಸಾಗುವ ಸಂದರ್ಭ ಜ್ವಾಲೆಯನ್ನು ಚಿಮ್ಮುವ ಚೆಂಡಾಗಿ ಪರಿವರ್ತನೆಗೊಳ್ಳುತ್ತದೆ.
 • ಮೂವರು ಗಗನಯಾತ್ರಿಗಳು ಪ್ರತಿ 24 ಗಂಟೆಗೆ 2 ಬಾರಿ ಭೂಮಿಯನ್ನು ವೀಕ್ಷಿಸಲಿದ್ದು, ಅತ್ಯಂತ ಸೂಕ್ಷ ಗುರುತ್ವದಲ್ಲಿ ಪ್ರಯೋಗ ನಡೆಸಲಿದ್ದಾರೆ.
 • ಅಂತರಿಕ್ಷದಿಂದ ನೌಕೆಯು ಭೂಮಿಯ ಗುರುತ್ವಬಲ ಪ್ರವೇಶಿಸುವ ವೇಳೆ ಅಪಾರ ಪ್ರಮಾಣದ ಘರ್ಷಣೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಕೂದಲಿಗಿಂತಲೂ ಸಣ್ಣದೊಂದು ಬಿರುಕು ಉಂಟಾದರೂ ನೌಕೆ ಭಸ್ಮಗೊಳ್ಳುತ್ತದೆ.

ಪ್ರಾಜೆಕ್ಟ್ ಸನ್​ರೈಸ್

ಸುದ್ಧಿಯಲ್ಲಿ ಏಕಿದೆ ?ಪ್ರಾಜೆಕ್ಟ್ ಸನ್​ರೈಸ್’ ಹೆಸರಿನ ಯೋಜನೆಯನ್ನು ಕೈಗೆತ್ತಿಕೊಂಡು ಕ್ಯುಂಟಾಸ್ ಏರ್​ವೇಸ್ ಬೋಯಿಂಗ್ ಮತ್ತು ಏರ್​ಬಸ್ ಕಂಪನಿಗಳಿಗೆ ಸವಾಲಾಗಿ ವಿಶ್ವದಲ್ಲೇ ಅತಿಹೆಚ್ಚು ಅವಧಿ ಪ್ರಯಾಣಿಸಬಲ್ಲ ವಿಮಾನವನ್ನು ತಯಾರಿಸಿದೆ.

 • ಮಾರ್ಗ ಮಧ್ಯೆ ಯಾವ ವಿಮಾನ ನಿಲ್ದಾಣದಲ್ಲಿಯೂ ಇಳಿಯದೇ, ಒಂದೇ ಸಮನೇ 20 ಗಂಟೆಗಳವರೆಗೆ ಹಾರುವ ಸಾಮರ್ಥ್ಯದ ವಿಮಾನ ಅಂತಿಮ ಹಂತದ ಸಿದ್ಧತೆಯಲ್ಲಿದೆ. ಆಸ್ಟ್ರೇಲಿಯಾದ ಸಿಡ್ನಿಯಿಂದ ಹಾರಿ 20 ಗಂಟೆ ಪ್ರಯಾಣಿಸಿ ಬ್ರಿಟನ್​ನ ಲಂಡನ್​ನಲ್ಲಿ ಈ ವಿಮಾನ ಇಳಿಯಲಿದೆ. 2022ರಿಂದ ವಿಮಾನ ಹಾರಾಟ ಆರಂಭಿಸಲಿದೆ. ಪ್ರಯಾಣಿಕರಿಗೆ ಜಿಮ್ ಮಕ್ಕಳ ಆರೈಕೆ ವಿಭಾಗ, ನಿದ್ರೆಗಾಗಿಯೇ ಮೀಸಲಾದ ವ್ಯವಸ್ಥೆ ಸೇರಿದಂತೆ ಅನೇಕ ವೈಶಿಷ್ಟ್ಯಗಳು ಇದರಲ್ಲಿದೆ.
Related Posts
India Celebrate 68th Republic Day – Highlights
The 68th Republic Day parade in New Delhi's Rajpath was a colourful affair tableaux from 17 states and Union Territories showcased the varied historical, art and cultural heritage of the ...
READ MORE
Ministry aims to have a new auction policy for hydrocarbon blocks ready by the end of the current financial year. Marginal field policy In the recently announced marginal field policy, the government ...
READ MORE
A eucalyptus tree on Tasmanian Land Conservancy property.
The Karnataka government took the legislation route to curtail planting of saplings that have adverse effect on environment and ground water. The Legislative Assembly on Thursday passed the Karnataka Preservation of ...
READ MORE
National Current Affairs – UPSC/KAS Exams- 3rd November 2018
Turga Pumped Storage in West Bengal Topic: Infrastructure Development IN NEWS: India and Japan  signed a loan agreement of Rs 1,817 crore for the construction of the Turga Pumped Storage in West ...
READ MORE
Get ready for the Budget 2018
Expected big news - Budget expected to focus on direct taxes While there are unlikely to be any major changes in indirect tax as most of them are now under the ...
READ MORE
Karnataka Current Affairs – KAS/KPSC Exams – 21st March 2018
‘13 amendments to KSP bylaws passed’ Manu Baligar, President of the State unit of the Kannada Sahitya Parishath said recently that the special general body meeting at Kota in Udupi district ...
READ MORE
National Current Affairs – UPSC/KAS Exams – 7th July 2018
Special Category Status (SCS) Context: The Central government filed a counter affidavit in the Supreme Court on Wednesday expressing its inability to give Special Category Status (SCS) to Andhra Pradesh and ...
READ MORE
National Current Affairs – UPSC/KAS Exams- 15th December 2018
India Post launches e-com portal Topic: e-Governance IN NEWS: India Post on Friday launched its own e-commerce website to help sellers, particularly rural artisans and SHGs sell their products across the country. More ...
READ MORE
13th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಜಾಗತಿಕ ಆವಿಷ್ಕಾರ ಸೂಚ್ಯಂಕ ಸುದ್ಧಿಯಲ್ಲಿ ಏಕಿದೆ? 2018ರ ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ) ಬಿಡುಗಡೆಯಾಗಿದ್ದು, ಭಾರತ 57ನೇ ಸ್ಥಾನ ಪಡೆದಿದೆ. 2015ರಿಂದ ಜಿಐಐ ಶ್ರೇಯಾಂಕದಲ್ಲಿ ಸತತವಾಗಿ ಹೊಸದಿಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ವರದಿಗಳ ಪ್ರಕಾರ, ಕೇಂದ್ರ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಭಾರತವು ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ...
READ MORE
What Is Rare Earth Element [REE] Rare earth metals are a set of seventeen chemical elements in the periodic table, specifically the fifteen lanthanides plus scandium and yttrium Why They Are Called ...
READ MORE
India Celebrate 68th Republic Day – Highlights
New auction policy for natural gas
Karnataka: Law to curtail planting of saplings that
National Current Affairs – UPSC/KAS Exams- 3rd November
Get ready for the Budget 2018
Karnataka Current Affairs – KAS/KPSC Exams – 21st
National Current Affairs – UPSC/KAS Exams – 7th
National Current Affairs – UPSC/KAS Exams- 15th December
13th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Rare Earth Element [REE]

Leave a Reply

Your email address will not be published. Required fields are marked *