“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ಸಿವಿಜಿಲ್’ ಮೊಬೈಲ್ ಆಪ್

ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ.

 • ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ.

ಹಿನ್ನಲೆ

 • ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗಿತ್ತು. ಆಗ ಸರಿಯಾದ ಫಲ ಕೊಟ್ಟಿರಲಿಲ್ಲ.
 • ಈಗ ಅದನ್ನು ಮತ್ತಷ್ಟು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರಿನಲ್ಲಿ ಈ ಆಪ್ ರೂಪುಗೊಂಡಿದ್ದು, ಕೇಂದ್ರ ಚುನಾವಣಾ ಆಯೋಗ ಮುಂಬರುವ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಿದೆ. ಪ್ರ
 • ಸ್ತುತ ರಾಜ್ಯದಲ್ಲಿ ನಡೆಯಲಿರುವ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಈ ಮೊಬೈಲ್ ಆಪ್ ಬಳಕೆಯಾಗುತ್ತದೆ. 1-2 ದಿನಗಳಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

ಸಿವಿಜಿಲ್ನ ವೈಶಿಷ್ಟ್ಯಗಳು

 • ಸಿವಿಜಿಲ್ನ ವೈಶಿಷ್ಟ್ಯಗಳು ನಡವಳಿಕೆಯ ಮಾದರಿ ಕೋಡ್ ಉಲ್ಲಂಘನೆಗಳನ್ನು ವರದಿ ಮಾಡಲು ಚುನಾವಣಾ-ಹೊಂದುವ ರಾಜ್ಯದಲ್ಲಿ ಯಾರಿಗೂ ಅವಕಾಶ ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ಬಳಸುವ ಮೂಲಕ, ಜಾಗರೂಕ ನಾಗರಿಕರು ಅನಾಮಧೇಯವಾಗಿ ಮತ್ತು ನೈಜ ಸಮಯದಲ್ಲಿ ಎರಡು ನಿಮಿಷಗಳವರೆಗೆ ಚಿತ್ರ ಅಥವಾ ರೆಕಾರ್ಡ್ ವೀಡಿಯೊವನ್ನು ಕ್ಲಿಕ್ ಮಾಡುವುದರ ಮೂಲಕ ಮತ್ತು ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡುವುದರ ಮೂಲಕ ವರದಿ ಮಾಡಬಹುದು.
 • ದೂರುದಾರನ ಗುರುತನ್ನು ಗೌಪ್ಯವಾಗಿರಿಸಲಾಗುವುದು ಮತ್ತು ಮೊಬೈಲ್ನಲ್ಲಿ ಫಾಲೋ ಅಪ್ ನವೀಕರಣಗಳನ್ನು ಟ್ರ್ಯಾಕ್ ಮಾಡಲು ಮತ್ತು ಸ್ವೀಕರಿಸಲು ಅನನ್ಯ ID ಯನ್ನು ಒದಗಿಸಲಾಗುತ್ತದೆ. ಅಪ್ಲಿಕೇಶನ್ ದುರ್ಬಳಕೆಯನ್ನು ತಡೆಯಲು ಅಂತರ್ಗತ ವೈಶಿಷ್ಟ್ಯಗಳನ್ನು ಹೊಂದಿದೆ. ಚುನಾವಣೆ ಘೋಷಿಸಲ್ಪಟ್ಟ ರಾಜ್ಯಗಳಲ್ಲಿ ಮಾತ್ರ ಇದು ಸಕ್ರಿಯವಾಗಿರುತ್ತದೆ
 • ಅಪ್ಲಿಕೇಶನ್ ಕಳುಹಿಸುವವರ ಗುರುತನ್ನು ಬಹಿರಂಗಪಡಿಸದೆ ಭೌಗೋಳಿಕ-ಟ್ಯಾಗ್ ಮಾಡಲಾದ ಛಾಯಾಗ್ರಹಣ ಮತ್ತು ವೀಡಿಯೋ ಸಾಕ್ಷ್ಯಗಳ ಹಂಚಿಕೆಯನ್ನು ಸಹ ಸುಲಭಗೊಳಿಸುತ್ತದೆ. ಅಪ್ಲೋಡ್ ಮಾಡಿದ ಮಾಹಿತಿಯನ್ನು ಕಂಟ್ರೋಲ್ ಕೋಣೆಗೆ ಮತ್ತು ಅಲ್ಲಿಂದ ಕ್ಷೇತ್ರ ವಿಭಾಗಗಳು ಅಥವಾ ಫ್ಲೈಯಿಂಗ್ ಸ್ಕ್ವಾಡ್ಗಳಿಗೆ ವರ್ಗಾವಣೆ ಮಾಡಲಾಗುವುದು, ಜಿಯೋಗ್ರಫಿಕ್ ಇನ್ಫರ್ಮೇಷನ್ ಸಿಸ್ಟಮ್ (ಜಿಐಎಸ್) ನಲ್ಲಿ ಮತ್ತಷ್ಟು ಕ್ರಿಯೆಗಾಗಿ ಮ್ಯಾಪ್ ಮಾಡಲಾಗುವುದು.

ಸ್ಮೋಕಿಂಗ್‌ ಕ್ವಿಟ್‌ಲೈನ್‌ ಸಹಾಯವಾಣಿ 

ಸುದ್ಧಿಯಲ್ಲಿ ಏಕಿದೆ ?ಧೂಮಪಾನ ತ್ಯಜಿಸಲು ಪ್ರೇರೇಪಿಸುವ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಆರಂಭಿಸಿದ್ದ ‘ಕ್ವಿಟ್‌ ಲೈನ್‌’ ಸಹಾಯವಾಣಿ ಸ್ತಬ್ಧವಾಗಿದೆ.

 • ಆ ನಂಬರ್‌ಗೆ ಕರೆ ಮಾಡಿದರೆ ಒಂದೋ ಬ್ಯುಸಿ ಎಂದೋ, ಇಲ್ಲವೇ ಕನೆಕ್ಟ್ ಆಗುವುದೇ ಇಲ್ಲ ಅಥವಾ ಇದು ವ್ಯಾಲಿಡ್‌ ನಂಬರ್‌ ಅಲ್ಲ ಎಂಬ ಉತ್ತರ ಬರುತ್ತದೆ.

ಹಿನ್ನಲೆ

 • ಕೇಂದ್ರ ಆರೋಗ್ಯ ಸಚಿವಾಲಯ 2016ರ ಮೇ 31ರಂದು 1800-11-2356 ಕ್ವಿಟ್‌ಲೈನ್‌ ರಾಷ್ಟ್ರೀಯ ಸಹಾಯವಾಣಿಯನ್ನು ಆರಂಭಿಸಿತ್ತು.ವಾರದ ಏಳೂ ದಿನ ಬೆಳಿಗ್ಗೆ 8 ರಿಂದ ರಾತ್ರಿ 8ವರೆಗೆ ಹಿಂದಿ ಅಥವಾ ಇಂಗ್ಲೀಷ್‌ನಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಈ ಸಹಾಯವಾಣಿ ಧೂಮಪಾನ ತ್ಯಜಿಸಲು ಸಾಕಷ್ಟು ಜನರಿಗೆ ಸಹಕಾರ ನೀಡಿತ್ತು.
 • ಆರಂಭವಾದ ಐದೇ ತಿಂಗಳಲ್ಲಿ ಸುಮಾರು 16ಸಾವಿರ ಕರೆಗಳು ಬಂದಿದ್ದವು ಮತ್ತು ಅವರಲ್ಲಿ ಶೇ.40ರಷ್ಟು ಮಂದಿ ಧೂಮಪಾನವನ್ನು ಶಾಶ್ವತವಾಗಿ ತ್ಯಜಿಸುವ ಇಚ್ಚೆ ತೋರಿದ್ದಲ್ಲದೆ, ಅದಕ್ಕೆ ಅಗತ್ಯ ಮಾರ್ಗದರ್ಶವನ್ನೂ ಸಹ ಪಡೆದಿದ್ದರು. ಬಹುತೇಕ ಮಂದಿ ಧೂಮಪಾನ ತ್ಯಜಿಸುವ ಶಿಬಿರಗಳ ಬಗ್ಗೆ ವಿಚಾರಿಸಿ ಅಲ್ಲಿಗೆ ಹೋಗುವ ಆಸಕ್ತಿ ತೋರುತ್ತಿದ್ದರು. ದಿನೇದಿನೆ ಆ ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರತೊಡಗಿದ್ದವು.

ಸೆ.1ರಿಂದ ನಂಬರ್‌ ಕಡ್ಡಾಯ:

 • ಕೇಂದ್ರ ಆರೋಗ್ಯ ಸಚಿವಾಲಯ 2018ರ ಸೆ.1ರಿಂದ ಜಾರಿಗೆ ಬರುವಂತೆ ಸಿಗರೇಟ್‌ ಪ್ಯಾಕ್‌ ಸೇರಿ ಎಲ್ಲ ಬಗೆಯ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ನ ಎರಡೂ ಬದಿಯಲ್ಲಿ ಶೇ.85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶದ ಜತೆಗೆ ಕ್ವಿಟ್‌ ಲೈನ್‌ ಸಂಖ್ಯೆ ಉಲ್ಲೇಖಿಸುವುದನ್ನು ಕಡ್ಡಾಯಗೊಳಿಸಿ ಏಪ್ರಿಲ್‌ನಲ್ಲೇ ಆದೇಶ ಹೊರಡಿಸಿತ್ತು.
 • ಅದರಂತೆ ಸಿಗರೇಟು ತಯಾರಿಕಾ ಕಂಪನಿಗಳು ಸಿಗರೇಟು ಉತ್ಪನ್ನಗಳ ಮೇಲೆ ಸಹಾಯವಾಣಿ ನಂಬರ್‌ ಮುದ್ರಿಸಿವೆ. ಮಾರುಕಟ್ಟೆಯಲ್ಲಿ ದೊರಕುವ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಟೋಲ್‌ ಫ್ರೀ ನಂಬರ್‌ ಉಲ್ಲೇಖವಿದೆ ಎನ್ನುತ್ತಾರೆ ತಂಬಾಕು ನಿಯಂತ್ರಣ ಹೋರಾಟದ ಕಾರ‍್ಯಕರ್ತರು.

ಪ್ರಾದೇಶಿಕ ಭಾಷೆಗಳಲ್ಲಿ ಸಲಹೆಗಳಿಲ್ಲ:

 • ಸಹಾಯವಾಣಿ ಆರಂಭಿಸುವಾಗ ಕೇಂದ್ರ ಸರಕಾರ ಹಿಂದಿ ಮತ್ತು ಇಂಗ್ಲೀಷ್‌ ಭಾಷೆಯಲ್ಲದೆ, ಪ್ರಾದೇಶಿಕ ಭಾಷೆಗಳಲ್ಲೂ ಸಹಾಯವಾಣಿ ನೆರವು ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದ್ದರೂ, ಅದಿನ್ನೂ ಕಾರ‍್ಯಗತವಾಗಿಲ್ಲ. ಇದೀಗ ಇರುವ ಸಹಾಯವಾಣಿಯೂ ನಿಷ್ಕ್ರಿಯವಾಗಿರುವುದರಿಂದ ಧೂಮಪಾನ ನಿಯಂತ್ರಣ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಸದಾಶಿವ ಆಯೋಗದ ವರದಿ

ಸುದ್ಧಿಯಲ್ಲಿ ಏಕಿದೆ ?ಪರಿಶಿಷ್ಟರಿಗೆ ಒಳಮೀಸಲು ಕಲ್ಪಿಸುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನದ ಬಗ್ಗೆ ಸಮುದಾಯದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಸಾಧಕ -ಬಾಧಕ ಚರ್ಚಿಸಿ ಅಂತಿಮ ನಿರ್ಣಯಕ್ಕೆ ಬರುವುದಾಗಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

 • ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿದ್ದು, ಮೀಸಲು ಸೌಲಭ್ಯ ಕೆಲವು ಗುಂಪಿನ ಪಾಲಾಗುತ್ತಿದೆ ಮತ್ತು ಬಹಳಷ್ಟು ಉಪಜಾತಿಗಳು ಸೌಲಭ್ಯದಿಂದ ಹೊರಗುಳಿದಿವೆ. ಈ ಹಿನ್ನೆಲೆಯಲ್ಲಿ ಒಳಮೀಸಲು ಕಲ್ಪಿಸುವಂತೆ ದಶಕಗಳಿಂದ ಹೋರಾಟ ನಡೆದ ಫಲವಾಗಿ ನ್ಯಾ.ಸದಾಶಿವ ಆಯೋಗ ರಚಿಸಿ ವರದಿ ಪಡೆದುಕೊಂಡರೂ, ಹಿಂದಿನ ಸರಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಕಾಲಮಿತಿಯಲ್ಲಿ ವರದಿ ಒಪ್ಪಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು

ಸದಾಶಿವ ಆಯೋಗದ ವರದಿ

 • ಪರಿಶಿಷ್ಟ ಜಾತಿಗಳಿಗೆ ನೀಡಲಾಗುತ್ತಿರುವ 15 ಶೇ. ಒಟ್ಟಾರೆ ಮೀಸಲಾತಿಗೆ ಸಮರ್ಪಕ ವಿತರಣೆಗಾಗಿ ಎಲ್ಲಾ ಪರಿಶಿಷ್ಟ ಜಾತಿಗಳನ್ನು ರೈಟ್ ಕಮ್ಯುನಿಟಿ, ಎಡ ಸಮುದಾಯ, ಟಚ್ಬಬಲ್ಗಳು ಮತ್ತು ಇತರ ಪರಿಶಿಷ್ಟ ಜಾತಿಯ ಸಮುದಾಯಗಳಾಗಿ ಮರುಸಂಗ್ರಹಿಸಲು ಕಮಿಷನ್ ಶಿಫಾರಸು ಮಾಡಿದೆ.
 • 15% ರಷ್ಟು ಈ ಮೀಸಲಾತಿಯಲ್ಲಿ, ಆಯೋಗವು 6% ರಷ್ಟು ಎಡ ಸಮುದಾಯಕ್ಕೆ, 5% ರೈಟ್ ಸಮುದಾಯಕ್ಕೆ, 3% ಟಚ್ಬಬಲ್ಗಳಿಗೆ ಮತ್ತು ಶೇ. 1 ರಷ್ಟು ಇತರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಶಿಫಾರಸು ಮಾಡಿದೆ.
 • ಪರಿಶಿಷ್ಟ ಜಾತಿಗೆ ಸೇರಿದ 60 ಲಕ್ಷ ಜನರಿಗೆ ಬಾಗಿಲು-ಬಾಗಿಲಿನ ಸಮೀಕ್ಷೆಯ ಮೂಲಕ ತಮ್ಮ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ನು ಮೌಲ್ಯಮಾಪನ ಮಾಡಿದ ನಂತರ ನಾಲ್ಕು ಗುಂಪುಗಳಿಗೆ ಮೀಸಲಾತಿ ಪ್ರಯೋಜನಗಳ ಮೇಲಿನ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ 1.58 ಲಕ್ಷ ಜನರು ಯೂನಿಯನ್ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
 • ಪ್ರಸ್ತಾವಿತ ಗುಂಪುಗಳ ಜನಸಂಖ್ಯೆಯ ವಿಘಟನೆಗೆ ಅವರು ಒಟ್ಟು 96 ಲಕ್ಷ ಜನಸಂಖ್ಯೆಯ ಪರಿಶಿಷ್ಟ ಜಾತಿಗಳಿದ್ದಾರೆ. ಎಡ ಸಮುದಾಯವು 47 ಶೇಕಡಾ, ಬಲ ಸಮುದಾಯ 32 ಶೇಕಡಾ, ಟಚ್ಬಬಲ್ಸ್ 23.64 ಶೇಕಡಾ ಮತ್ತು ಇತರ ಪರಿಶಿಷ್ಟ ಜಾತಿ ಸಮುದಾಯಗಳು 4.65 ಪ್ರತಿ ಶೇಕಡಾ. ಪರಿಶಿಷ್ಟ ಜಾತಿಗಳಲ್ಲಿ 6 ಲಕ್ಷ ಸದಸ್ಯರು ಈ ಸಮೀಕ್ಷೆಯಲ್ಲಿ ಅವರ ಜಾತಿಗಳನ್ನು ಉಲ್ಲೇಖಿಸದಂತೆ ಬಿಟ್ಟುಬಿಟ್ಟಿದ್ದಾರೆ ಎಂದು ಅಂಕಿ ಅಂಶಗಳು 100% ವರೆಗೆ ಸೇರಿಸಿಕೊಳ್ಳುವುದಿಲ್ಲ.
 • ಇತರ ಪರಿಶಿಷ್ಟ ಜಾತಿ ಸಮುದಾಯಗಳಿಗಿಂತಲೂ ರೈಟ್ ಸಮುದಾಯವು ಮೀಸಲಾತಿಗಿಂತ ಹೆಚ್ಚು ಪ್ರಯೋಜನಗಳನ್ನು ಪಡೆದಿದೆ ಎಂದು ಸಮೀಕ್ಷೆಯ ಫಲಿತಾಂಶಗಳು ತಿಳಿಸಿವೆ. ಅವರು ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ಉತ್ತಮ ಪರಿಸ್ಥಿತಿಯಲ್ಲಿದ್ದಾರೆ.
 • ಪರಿಶಿಷ್ಟ ಜಾತಿ ಕಲ್ಯಾಣ ಕ್ರಮಗಳ ಅನುಷ್ಠಾನವು ಪರಿಣಾಮಕಾರಿಯಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಅವರು, ಈ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗೆ ಮಾತ್ರವಲ್ಲ, ಪರಿಣಾಮಕಾರಿ ಎಂದು ಕಂಡುಕೊಳ್ಳಲು ಆಯೋಗವು ಜಾರಿ ಮತ್ತು ಮೌಲ್ಯಮಾಪನ ರೆಕ್ಕೆಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.

ಹಿನ್ನಲೆ

 • ಸಂವಿಧಾನದ ಲೇಖನಗಳು 15 ಮತ್ತು 16 ರ ಅಡಿಯಲ್ಲಿ ಪ್ರಯೋಜನಗಳ ವಿತರಣೆಯಲ್ಲಿ ಯಾವುದೇ ವ್ಯತ್ಯಾಸಗಳಿವೆಯೆ ಎಂದು ಖಚಿತಪಡಿಸಿಕೊಳ್ಳಲು ಧರಮ್ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ 2005 ರಲ್ಲಿ ಆಯೋಗವನ್ನು ರಚಿಸಿತು ಮತ್ತು ಈ ಪ್ರಯೋಜನಗಳನ್ನು ಎಲ್ಲಾ ಜಾತಿಗಳ ಮತ್ತು ಗುಂಪುಗಳ ನಡುವೆ ಸಮನಾಗಿ ವಿತರಿಸಲಾಗಿದೆಯೇ ಎಂದು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿದೆ. ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳು ದಲಿತರಲ್ಲಿ ಕೆಲವು ಜಾತಿಗಳು ಎಲ್ಲ ಮೀಸಲಾತಿ ಪ್ರಯೋಜನಗಳನ್ನು ಮೂಡಿಸಿವೆ, ಆದರೆ ಇತರರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದ್ದಾರೆ ಎಂದು ಆಯೋಗವು ದೂರುಗಳನ್ನು ಅನುಸರಿಸಿತು.

ಆಧಾರ್‌ ಮಾಡೆಲ್‌: ಮಲೇಷ್ಯಾ ಒಲವು

ಸುದ್ಧಿಯಲ್ಲಿ ಏಕಿದೆಆಧಾರ್‌ ಅನುಷ್ಠಾನದಿಂದ ಭಾರತಕ್ಕೆ ಆಗಿರುವ ಅನುಕೂಲಗಳನ್ನು ಗಮನಿಸಿರುವ ಮಲೇಷಿಯಾ, ಈಗ ಆಧಾರ್‌ ಮಾಡೆಲ್‌ ಅನುಸರಿಸಲುಚಿಂತನೆ ನಡೆಸಿದೆ.

 • ಸಬ್ಸಿಡಿ ವಿತರಣೆ ಮತ್ತು ಸರಕಾರದ ಜನಪರ ಯೋಜನೆಗಳ ಜಾರಿಯಲ್ಲಿ ಸೋರಿಕೆ ತಡೆಯಲು ಆಧಾರ್‌ ವ್ಯವಸ್ಥೆ ಸೂಕ್ತ ಎನ್ನುವ ಅಂಶವು ಮಲೇಷ್ಯಾ ಸರಕಾರವನ್ನು ಆಕರ್ಷಿಸಿದೆ.
 • ಪ್ರಧಾನಿ ನರೇಂದ್ರ ಮೋದಿ ಅವರು ಮೇನಲ್ಲಿ ಕೌಲಾಲಂಪುರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಆಧಾರ್‌ ಸೇರಿದಂತೆ ನಾನಾ ವಿಷಯಗಳಲ್ಲಿಆಧಾರ್‌ ಮಾಡೆಲ್‌ ಮಲೇಷ್ಯಾ ಒಲವುಮಲೇಷಿಯಾಗೆ ಭಾರತ ನೆರವು ನೀಡಲಿದೆ ಎಂದು ಘೋಷಿಸಿದ್ದರು. ಈ ಸಂಬಂಧ ಸಂಬಂಧಿಸಿದ ಭಾರತದ ನೆರವು ಪಡೆಯಲಿದ್ದೇವೆ ಎಂದು ಅಲ್ಲಿನ ಸರಕಾರ ಹೇಳಿದೆ.

ಪ್ರತ್ಯೇಕ ಪ್ರಾಧಿಕಾರ ರಚನೆ

ಸುದ್ಧಿಯಲ್ಲಿ ಏಕಿದೆ?ಕರ್ನಾಟಕದ ಕೃಷ್ಣಾ, ಕಾವೇರಿ ಸೇರಿದಂತೆ ದೇಶದ 13 ಪ್ರಮುಖ ನದಿ ಕೊಳ್ಳದ ನಿರ್ವಹಣೆಗಾಗಿ ಮತ್ತು ಅಂತಾರಾಜ್ಯ ಜಲವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಪ್ರತ್ಯೇಕ ಕಾನೂನು ರೂಪಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

 • ಉದ್ದೇಶಿತ ನದಿ ಕೊಳ್ಳ ನಿರ್ವಹಣಾ ವಿಧೇಯಕವನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸುವ ಸಾಧ್ಯತೆ ಇದೆ. ಈ ಕಾನೂನು ರೂಪುಗೊಂಡ ಬಳಿಕ 1956ರ ನದಿ ಮಂಡಳಿ ಕಾಯಿದೆ ಅಸ್ತಿತ್ವದಲ್ಲಿ ಇರುವುದಿಲ್ಲ.
 • ನದಿ ಕೊಳ್ಳ ನಿರ್ವಹಣಾ ಪ್ರಾಧಿಕಾರಗಳು ಗರ್ವನಿಂಗ್‌ ಕೌನ್ಸಿಲ್‌ ಮತ್ತು ಕಾರ್ಯಕಾರಿ ಮಂಡಳಿಗಳನ್ನು ಒಳಗೊಂಡಿರುತ್ತದೆ. ಗವರ್ನಿಂಗ್‌ ಕೌನ್ಸಿಲ್‌ನಲ್ಲಿ ಅಚ್ಚುಕಟ್ಟು ಪ್ರದೇಶದ ಮುಖ್ಯಮಂತ್ರಿಗಳು ಸದಸ್ಯರು.
 • ರೊಟೇಶನ್‌ ಪದ್ಧತಿಯಲ್ಲಿ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಲಿದ್ದಾರೆ. ವರ್ಷಕ್ಕೆ ಎರಡು ಸಲ ಕೌನ್ಸಿಲ್‌ ಸಭೆ ನಡೆಸುವುದು ಕಡ್ಡಾಯವಾಗಲಿದೆ.
 • ಈಗಾಗಲೇ ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದಗಳು ಇತ್ಯರ್ಥವಾಗದೇ ಹಾಗೆಯೇ ಉಳಿದಿರುವುದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಪ್ರತ್ಯೇಕ ಪ್ರಾಧಿಕಾರ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದೆ

ದೇಶಾದ್ಯಂತ ಏಕರೂಪದ ಡಿಎಲ್‌, ಆರ್‌ಸಿ

ಸುದ್ಧಿಯಲ್ಲಿ ಏಕಿದೆ ?ಮುಂದಿನ ಜುಲೈನಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು (ಆರ್‌ಸಿ) ವಿತರಣೆಯಾಗಲಿವೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಈ ಪ್ರಮಾಣಪತ್ರಗಳ ನೋಟ, ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.

 • ದೇಶಾದ್ಯಂತ ಪ್ರತಿದಿನ ಸುಮಾರು 32,000 ಡಿಎಲ್‌ಗಳ ವಿತರಣೆ/ ನವೀಕರಣ ನಡೆಯುತ್ತಿದ್ದು, 43,000 ವಾಹನಗಳ ನೋಂದಣಿ ನಡೆಯುತ್ತದೆ. ಇನ್ನು ಮುಂದೆ ನವೀಕರಣಗೊಳ್ಳುವ ಎಲ್ಲ ಡಿಎಲ್‌ ಮತ್ತು ಆರ್‌ಸಿಗಳನ್ನು ಹೊಸದಕ್ಕೆ ಬದಲಾಯಿಸಲಾಗುತ್ತದೆ.
 • ಸಾರಿಗೆ ಇಲಾಖೆ ಈಗಾಗಲೇ ಈ ಪ್ರಕ್ರಿಯೆ ಆರಂಭಿಸಿದ್ದು, ಟ್ರಾಫಿಕ್ ಪೊಲೀಸರಿಗೆ ಚಾಲಕನ ದಾಖಲೆಗಳ ತಪಾಸಣೆಗೆ ಹಲವು ಆಯ್ಕೆಗಳು ದೊರೆಯುತ್ತವೆ. ತಮ್ಮ ಕೈಯಲ್ಲಿರುವ ಸಾಧನದ ಮೂಲಕ ಡಿಎಲ್‌ ಅಥವಾ ಆರ್‌ಸಿ ನಂಬರ್ ನಮೂದಿಸಿ, ಅಥವಾ ಸ್ಮಾರ್ಟ್ ಕಾರ್ಡ್‌ ಅನ್ನು ಸಾಧನದೊಳಗೆ ತುರುಕಿಸಿ ಅಥವಾ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಎಲ್ಲ ವಿವರಗಳನ್ನು ಪಡೆಯಬಹುದಾಗಿದೆ.
 • ಎನ್‌ಎಫ್‌ಸಿ ವೈಶಿಷ್ಟ್ಯದ ಮೂಲಕ ಡಿಎಲ್‌ ಅಥವಾ ಆರ್‌ಸಿಯನ್ನು ಪೊಲೀಸರ ಬಳಿಯಿರುವ ಸಾಧನಕ್ಕೆ ಸ್ಪರ್ಶಿಸಿದ ಕೂಡಲೇ ವಿವರ ದೊರೆಯುತ್ತದೆ.
 • ನಿರ್ದಿಷ್ಟ ವಾಹನದ ಅಥವಾ ಚಾಲಕನ ವಿವರ ಹೊಂದಿರುವ ಯುಆರ್‌ಎಲ್‌ಗೆ ನೇರ ಸಂಪರ್ಕಿಸುವುದರಿಂದ ವಾಹನ ಮತ್ತು ಸಾರಥಿ ಡೇಟಾಬೇಸ್‌ಗಳಿಂದ ಕ್ಷಿಪ್ರವಾಗಿ ವಿವರ ಪಡೆಯಬಹುದು
 • ಪ್ರತಿ ಡಿಎಲ್‌ ಅಥವಾ ಆರ್‌ಸಿಗೆ ಈ ವೈಶಿಷ್ಟ್ಯಗಳನ್ನು ಅಳವಡಿಸಲು 15-20 ರೂ.ಗಳಿಗಿಂತ ಹೆಚ್ಚು ವೆಚ್ಚವಾಗದು.
 • ರಾಜ್ಯಗಳು ನಿಗದಿತ ಕಾಲಮಿತಿಯೊಳಗೆ ಈ ಕಾರ್ಯವನ್ನು ಮಾಡಿ ಮುಗಿಸಬಹುದು
 • ದೇಶಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರ (ಆರ್​ಸಿ) ವಿತರಿಸಲು ಕೇಂದ್ರ ಮಹತ್ವದ ಹೆಜ್ಜೆ ಇರಿಸಿದೆ. 2019ರ ಜುಲೈನಿಂದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ವಿನ್ಯಾಸ, ಬಣ್ಣದ ಡಿಎಲ್ ಕಾರ್ಡ್ ವಿತರಿಸ ಲಾಗುತ್ತದೆ.

20 ರೂ. ಖರ್ಚು

 • ಹೊಸ ಡಿಎಲ್ ಅಥವಾ ಆರ್​ಸಿ ಹೊಂದಲು ಕೇವಲ 15ರಿಂದ 20 ರೂ. ಖರ್ಚು ಬರುತ್ತದೆ. ಆದ್ದರಿಂದ, ನಿರ್ದಿಷ್ಟ ಅವಧಿಯಲ್ಲಿ ಈ ಕಾರ್ಡ್ ವಿತರಣೆ ಕಾರ್ಯ ಪೂರ್ಣಗೊಳಿಸ ಬಹುದು ಎನ್ನಲಾಗಿದೆ.

ಸ್ಮಾರ್ಟ್ ಕಾರ್ಡ್

 • ಹೊಸದಾಗಿ ವಿತರಿಸಲಾಗುವ ಡಿಎಲ್, ಆರ್​ಸಿ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುತ್ತವೆ. ಮೈಕ್ರೋಚಿಪ್ ಜತೆಗೆ ಕ್ಯೂಆರ್ ಕೋಡ್ ಕೂಡ ಅಳವಡಿಕೆ ಆಗಿರುತ್ತದೆ. ಮೆಟ್ರೋ ರೈಲು, ಎಟಿಎಂ ಕಾರ್ಡ್​ಗಳಲ್ಲಿರುವಂತೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್​ಎಫ್​ಸಿ; ಕಾರ್ಡ್ ಅನ್ನು ಗುರುತಿಸುವ ಯಂತ್ರಕ್ಕೆ 4 ಸೆಂ.ಮೀ. ಹತ್ತಿರ ತಂದಾಗ ಅದರಲ್ಲಿನ ವಿವರಗಳು ಯಂತ್ರದಲ್ಲಿ ಕಾಣಿಸುವುದು) ವ್ಯವಸ್ಥೆಯನ್ನು ಹೊಂದಿರುತ್ತದೆ.
 • ಏನೆಲ್ಲ ವಿವರ ಅಡಕ: ಹೊಸ ಡಿಎಲ್​ನಲ್ಲಿ ಕೇಂದ್ರ, ರಾಜ್ಯಸರ್ಕಾರಗಳ ಲಾಂಛನ, ಅದನ್ನು ನೀಡಿದ ಪ್ರಾದೇಶಿಕ ಸಾರಿಗೆ ಕಚೇರಿ ವಿವರ, ವಿತರಿಸಿದ ದಿನಾಂಕ ಮತ್ತು ಮಾನ್ಯತೆ ಹೊಂದಿರುವ ಅವಧಿ, ವಾಹನ ಚಾಲಕರ ರಕ್ತದ ಗುಂಪು, ಅಂಗಾಂಗ ದಾನಕ್ಕೆ ಸಮ್ಮತಿ ಇರುವ ಕುರಿತು ಮಾಹಿತಿ, ಅಪಘಾತದ ಸಂದರ್ಭದಲ್ಲಿ ತುರ್ತಾಗಿ ಕರೆ ಮಾಡಬಹುದಾದ ದೂರವಾಣಿ ಸಂಖ್ಯೆ ದಾಖಲಾಗಿರುತ್ತದೆ. ಆರ್​ಸಿಯಲ್ಲೂ ಈ ಮಾಹಿತಿಗಳ ಜತೆಗೆ ವಾಹನ ವಾಣಿಜ್ಯ ಬಳಕೆಯದ್ದೋ ಅಥವಾ ವೈಯಕ್ತಿಕ ಬಳಕೆಯದ್ದೋ, ವಾಹನದ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಮಾಲಿನ್ಯ ನಿಯಮ ಪಾಲನೆಯ ವಿವರ ಇರುತ್ತದೆ.
 • ಭದ್ರತಾ ರೇಖೆ, ವಿವರಗಳ ಮೈಕ್ರೋ ಮುದ್ರಣ, ಮೈಕ್ರೋ ಗೆರೆ, ಹಾಲೋಗ್ರಾಮ್ ಮತ್ತು ವಾಟರ್​ವಾರ್ಕ್ ಎರಡೂ ಕಾರ್ಡ್​ಗಳಲ್ಲಿ ಸಾಮಾನ್ಯವಾಗಿರಲಿದೆ.
 • ಬದಲಾವಣೆಗೆ ಅವಕಾಶ: ಹೊಸದಾಗಿ ಡಿಎಲ್ ಮಾಡಿಸುವವರ ಜತೆಗೆ ಡಿಎಲ್ ಮತ್ತು ವಾಹನ ನೋಂದಣಿ ನವೀಕರಣದ ಸಂದರ್ಭದಲ್ಲೂ ಹೊಸ ಕಾರ್ಡ್ ಬದಲಿಸಿ ಕೊಡಲಾಗುತ್ತದೆ. ಸದ್ಯ ದೇಶಾದ್ಯಂತ ಪ್ರತಿದಿನ 32 ಸಾವಿರ ಡಿಎಲ್​ಗಳನ್ನು ಹೊಸದಾಗಿ ವಿತರಿಸಲಾಗುತ್ತಿದೆ ಇಲ್ಲವೇ ನವೀಕರಿ ಸಲಾಗುತ್ತದೆ. ಅಂತೆಯೇ ಪ್ರತಿದಿನ 43 ಸಾವಿರ ವಾಹನಗಳನ್ನು ಹೊಸದಾಗಿ ನೋಂದಣಿ ಮಾಡಿಸಲಾಗುತ್ತಿದೆ ಇಲ್ಲವೇ ನವೀಕರಿಸಲಾಗುತ್ತಿದೆ.

Related Posts
National Current Affairs – UPSC/KAS Exams- 26th July 2018
Voter Verifiable Paper Audit Trail (VVPAT) Why in new? The Election Commission said all VVPATs would be delivered well within the time required for preparations ahead of the 2019 Lok Sabha poll. About ...
READ MORE
High Court: Prepare plan for recruiting women police
The High Court of Karnataka recently expressed displeasure over the dwindling number of policewomen in the state. Justice A N Venugopala Gowda, who is monitoring the recruitment of police personnel in ...
READ MORE
Karnataka Current Affairs – KAS/KPSC Exams – 27th September 2017
Karnataka Cabinet clears anti-superstition bill The Karnataka Cabinet today cleared the much-awaited anti-superstition bill to prevent and eradicate "inhuman evil practices" and said it would be tabled in the next state ...
READ MORE
Urban Development-Sanitation (Including Sewerage and Drainage)
The Ministry of Urban Development, GOI brought out a National Sanitation Policy in 2008. The vision for urban sanitation in India is set forth thus:“All Indian cities and towns become totally sanitized, healthy and ...
READ MORE
 ವರದಿಯಲ್ಲಿ ಏನಿದೆ? ಪರಿಶಿಷ್ಟ ಜಾತಿಯಲ್ಲೂ ತೀರಾ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ; ಕೆಲವೇ ಜಾತಿಗಳು ಮಾತ್ರ ಈ ಸೌಲಭ್ಯ ಪಡೆಯುತ್ತಿವೆ ಎಂಬ ದೂರು ಕೇಳಿ ಬಂದಿದ್ದರಿಂದ 2005ರ ಸೆಪ್ಟೆಂಬರ್‌ನಲ್ಲಿ  ಸದಾಶಿವ ಆಯೋಗ ರಚಿಸಲಾಗಿತ್ತು. ಆಯೋಗವು 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಪರಿಶಿಷ್ಟ ಜಾತಿಯ ವರಿಗೆ ...
READ MORE
Karnataka Current Affairs – KAS / KPSC Exams – 8th September 2017
49 new taluks formed The State government has issued an order for formation of 49 new taluks to take the administration to the doorsteps of the people. The State Budget for 2017-18 ...
READ MORE
Air quality remained abysmal on Dec 1st , with four of the seven monitoring stations reporting the “severe” warning during the morning. The situation improved slightly by 7 p.m. due to ...
READ MORE
National Current Affairs – UPSC/KAS Exams- 18th February 2019
International Court of Justice Topic: Important international organizations In News: The International Court of Justice (ICJ) will hold public hearings in the Kulbhushan Jadhav case  at The Hague during which India and ...
READ MORE
Rebooting ties with Iran- Modi’s visit to Iran
Rebooting ties with Iran Prime Minister Narendra Modi’s visit to Tehran on May 22-23 will be an important marker in New Delhi’s attempt to instill momentum in bilateral ties. India's interests in ...
READ MORE
National Current Affairs – UPSC/KAS Exams – 5th November 2018
Water ATMs may help in bridging safe water gap For thousands of communities across India, the process of getting drinking water is now the same as the process of getting cash: ...
READ MORE
National Current Affairs – UPSC/KAS Exams- 26th July
High Court: Prepare plan for recruiting women police
Karnataka Current Affairs – KAS/KPSC Exams – 27th
Urban Development-Sanitation (Including Sewerage and Drainage)
ಸದಾಶಿವ ಆಯೋಗ ವರದಿ
Karnataka Current Affairs – KAS / KPSC Exams
Poor AQI in Delhi
National Current Affairs – UPSC/KAS Exams- 18th February
Rebooting ties with Iran- Modi’s visit to Iran
National Current Affairs – UPSC/KAS Exams – 5th

Leave a Reply

Your email address will not be published. Required fields are marked *