“6th & 7th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಉನ್ನತಿ ಯೋಜನೆ

ಸುದ್ಧಿಯಲ್ಲಿ ಏಕಿದೆ?ದುರ್ಬಲ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಉನ್ನತಿ ಎಂಬ ವಿನೂತನ ಯೋಜನೆ ಪ್ರಾರಂಭಿಸಿದೆ.

 • ಈ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ಆರಂಭಿಕ ಅಗತ್ಯತೆ ಪೂರೈಸುವ ಪರಿಕಲ್ಪನೆ ಹೊಂದಲಾಗಿದೆಯಲ್ಲದೆ, ಆಯ್ಕೆಗೊಳ್ಳುವ ಉದ್ಯಮಿಗೆ ಗರಿಷ್ಠ 50 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
 • ತಂತ್ರಜ್ಞಾನ ಕ್ಷೇತ್ರದಲ್ಲಿನ ನವೋದ್ಯಮಗಳನ್ನು ಆರಂಭಿಸಲು ಬಯಸುವವರಿಗೆ ಉದ್ಯಮಗಳ ಬಗ್ಗೆ ಮಾಹಿತಿ, ಉತ್ಪನ್ನಗಳ ಪ್ರಾಯೋಗಿಕ ಪರಿಶೀಲನೆ, ವಿಚಾರ ದೃಢೀಕರಣ, ಮೂಲ ಬಂಡವಾಳ ನೀಡಿಕೆ ಹಾಗೂ ಅಂತಿಮವಾಗಿ ಮಾರುಕಟ್ಟೆ ಪ್ರವೇಶವನ್ನು ಒದಗಿಸುವ ಮಹತ್ತರ ಆಶಯವನ್ನು ಉನ್ನತಿ ಹೊಂದಿದೆ. ಈ ವಿನೂತನ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆ 20 ಕೋಟಿ ರೂ. ಅನುದಾನ ಒದಗಿಸಲಿದೆ.
 • ನವೋದ್ಯಮಗಳನ್ನು ಆರಂಭಿಸುವ ಘಟಕವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಪ್ರಧಾನ ಹೂಡಿಕೆದಾರರ ಭಾಗಿತ್ವ ಹೊಂದಿರಬೇಕು. ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯ ಉನ್ನತ ಆಯ್ಕೆ ಸಮಿತಿ ಮೂರು ಹಂತದ ಮೌಲ್ಯಮಾಪನಗಳೊಂದಿಗೆ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಿದೆ.

ಆಲ್ಫಾನ್ಸೋ ಮಾವಿನ ಹಣ್ಣಿಗೆ ಜಿಐ ಟ್ಯಾಗ್

ಸುದ್ಧಿಯಲ್ಲಿ ಏಕಿದೆ ?ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗದಲ್ಲಿ ಹೆಚ್ಚಾಗಿ ಬೆಳೆಯುವ ಸ್ವಾದಿಷ್ಟಆಲ್ಫಾನ್ಸೋ ತಳಿಯ ಮಾವಿನ ಹಣ್ಣಿಗೆ ಭೌಗೋಳಿಕ ವಿಶೇಷತೆಯ ಗುರುತು ( ಜಿಯೋಗ್ರಫಿಕಲ್ ಇಂಡಿಕೇಷನ್‌ ಟ್ಯಾಗ್ ) ನೀಡಲಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

 • ಕೆಲವೇ ಕೆಲವು ಪ್ರದೇಶಗಳಲ್ಲಿ ಬೆಳೆಯುವ ಹಣ್ಣುಗಳಿಗೆ ಇಂತಹ ಜಿಯೋಗ್ರಫಿಕಲ್ ಟ್ಯಾಗ್ ನೀಡಲಾಗುತ್ತದೆ.

ಜಿಐ ಬಗ್ಗೆ

 • ಭಾರತದಲ್ಲಿನ ಭೌಗೋಳಿಕ ಸೂಚನೆಗಳ ರಕ್ಷಣೆಗಾಗಿ ಭಾರತ ಸಂಸತ್ತಿನ ಸುಯಿ ಜೆನೆರಿಸ್ ಆಕ್ಟ್ (ಜಿಐ ಆಕ್ಟ್) ಗೂಡ್ಸ್ ಭೌಗೋಳಿಕ ಸೂಚನೆಗಳು (ನೋಂದಣಿ ಮತ್ತು ರಕ್ಷಣೆ) ಕಾಯಿದೆ ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲುಟಿಒ) ಸದಸ್ಯರಾಗಿರುವ ಭಾರತ, ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳ ಒಪ್ಪಂದಕ್ಕೆ ಅನುಗುಣವಾಗಿ ಆಕ್ಟ್ ಅನ್ನು ಜಾರಿಗೊಳಿಸಿತು.
 • GI ಟ್ಯಾಗ್ ಅಧಿಕೃತ ಬಳಕೆದಾರರಾಗಿ ನೋಂದಾಯಿಸಲ್ಪಟ್ಟಿರುವ ಯಾವುದೇ (ಅಥವಾ ಭೌಗೋಳಿಕ ಪ್ರದೇಶದೊಳಗಿರುವ ಕನಿಷ್ಠ) ಜನಪ್ರಿಯ ಉತ್ಪನ್ನದ ಹೆಸರನ್ನು ಬಳಸಲು ಅನುಮತಿಸುವುದಿಲ್ಲ ಎಂದು ಖಚಿತಪಡಿಸುತ್ತದೆ.
 • 2004-05ರಲ್ಲಿ ಡಾರ್ಜಿಲಿಂಗ್ ಚಹಾ ಭಾರತದಲ್ಲಿ ಮೊದಲ ಜಿಐ ಟ್ಯಾಗ್ ಮಾಡಿದ ಉತ್ಪನ್ನವಾಗಿದೆ, ಅಂದಿನಿಂದ ಆಗಸ್ಟ್ 2018 ರವರೆಗೆ 323 ಸರಕುಗಳನ್ನು ಸೇರಿಸಲಾಯಿತು.

ಭೌಗೋಳಿಕ ಸೂಚನೆ

 • ಆಕ್ಟ್ ನ ವಿಭಾಗ 2 (1) (ಇ) ಪ್ರಕಾರ, ಭೌಗೋಳಿಕ ಸೂಚನೆಯನ್ನು “ಕೃಷಿ ಸರಕುಗಳು, ನೈಸರ್ಗಿಕ ಸರಕುಗಳು ಅಥವಾ ಉತ್ಪಾದಿತ ಸರಕುಗಳು ಹುಟ್ಟಿದ ಅಥವಾ ಒಂದು ದೇಶದ ಪ್ರಾಂತ್ಯದಲ್ಲಿ ತಯಾರಿಸಲಾದಂತಹ ಸರಕುಗಳನ್ನು ಗುರುತಿಸುವ ಸೂಚಕ” ಎಂದು ವ್ಯಾಖ್ಯಾನಿಸಲಾಗಿದೆ. ಆ ಪ್ರದೇಶದಲ್ಲಿನ ಪ್ರದೇಶ ಅಥವಾ ಪ್ರದೇಶ, ಅಲ್ಲಿ ನಿರ್ದಿಷ್ಟ ಗುಣಮಟ್ಟ, ಖ್ಯಾತಿ ಅಥವಾ ಅಂತಹ ಸರಕುಗಳ ಇತರ ವಿಶಿಷ್ಟ ಲಕ್ಷಣಗಳು ಅದರ ಭೌಗೋಳಿಕ ಮೂಲಕ್ಕೆ ಮೂಲಭೂತವಾಗಿ ಕಾರಣವಾಗಿದೆ ಮತ್ತು ಅಂತಹ ಸರಕುಗಳು ಸರಕುಗಳನ್ನು ಉತ್ಪಾದಿಸಿದಲ್ಲಿ ಉತ್ಪಾದನೆ ಅಥವಾ ಸಂಸ್ಕರಣೆ ಅಥವಾ ತಯಾರಿಕೆಯ ಚಟುವಟಿಕೆಗಳಲ್ಲಿ ಒಂದನ್ನು ತಯಾರಿಸಲಾಗುತ್ತದೆ. ಸರಕು ಸಂಬಂಧಪಟ್ಟ ವಸ್ತುಗಳು ಅಂತಹ ಭೂಪ್ರದೇಶ, ಪ್ರದೇಶ ಅಥವಾ ಪ್ರದೇಶಗಳಲ್ಲಿ ನಡೆಯುತ್ತದೆ,
 • ನೋಂದಾಯಿತ ಭೌಗೋಳಿಕ ಸೂಚನೆಗಳು ಕೆಲವು ಸೇರಿವೆ, ಡಾರ್ಜಿಲಿಂಗ್ ಚಹಾ, ಮಲಬಾರ್ ಪೆಪ್ಪರ್, ಬೆಂಗಳೂರು ಬ್ಲೂ ದ್ರಾಕ್ಷಿಗಳು, ಪೊಚಂಪಳ್ಳಿ ಇಕಾಟ್, ಕಾಂಚೀಪುರಂ ಸಿಲ್ಕ್, ಸೊಪಾಪುರಿ ಚದರಗಳು ಬಾಗ್ ಪ್ರಿಂಟ್ಸ್, ಮಧುಬಾನಿ ವರ್ಣಚಿತ್ರಗಳು ಮುಂತಾದ ಕೃಷಿ ಸಾಮಗ್ರಿಗಳು ಒಳಗೊಂಡಿದೆ.

ಸಂಪೂರ್ಣ ಪ್ಲಾಸ್ಟಿಕ್‌ ಬಳಕೆ ನಿಷೇಧ 

ಸುದ್ಧಿಯಲ್ಲಿ ಏಕಿದೆ ?ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧ ತೀರ್ಮಾನವನ್ನು ಮರುಪರಿಶೀಲನೆ ಮಾಡಲು ಸರಕಾರ ಬಯಸಿದ್ದು, ಈ ಸಂಬಂಧದ ಆದೇಶದಿಂದ ಕೆಲವೊಂದು ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ತಾತ್ಕಾಲಿಕವಾಗಿ ವಿನಾಯಿತಿ ನೀಡುವ ಚಿಂತನೆ ನಡೆಸಿದೆ.

 • 50 ಮೈಕ್ರಾನ್‌ಗಿಂತ ದಪ್ಪ ಹಾಗೂ ಮರುಬಳಕೆ ಮಾಡಬಹುದಾದ ಕ್ಯಾರಿಬ್ಯಾಗ್‌, ಸ್ಟ್ರಾ, ಚಮಚ, ಹಾಲಿನ ಉತ್ಪನ್ನಗಳ ಕವರ್‌ ಮತ್ತಿತರ ಪ್ಲಾಸ್ಟಿಕ್‌ ವಸ್ತುಗಳಿಗೆ ನಿಷೇಧ ಆದೇಶದಿಂದ ಒಂದು ವರ್ಷ ವಿನಾಯಿತಿ ನೀಡಲು ಸರಕಾರ ಬಯಸಿದೆ. ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧ ಆದೇಶದ ಸಾಧಕ -ಬಾಧಕಗಳನ್ನು ಪರಾಮರ್ಶಿಸಿ ಶೀಘ್ರ ವರದಿ ನೀಡಲು ಪರಿಸರ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸರಕಾರ ತಜ್ಞರ ಸಮಿತಿ ರಚನೆ ಮಾಡಿದೆ.
 • ಅರಣ್ಯ ಸಚಿವ ಆರ್‌.ಶಂಕರ್‌ ಅಧ್ಯಕ್ಷತೆಯಲ್ಲಿ ನಡೆದ ಪ್ಲಾಸ್ಟಿಕ್‌ ಉತ್ಪಾದಕರ ಸಂಘದ ಪದಾಧಿಕಾರಿಗಳು, ಕಾಸಿಯಾ ಪ್ರತಿನಿಧಿಗಳು ಹಾಗೂ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ಪರ್ಯಾಯ ಉತ್ಪನ್ನಗಳು ಲಭ್ಯವಾಗುವ ವರೆಗೆ ಕೆಲವು ಪ್ಲಾಸ್ಟಿಕ್‌ ಸಾಮಗ್ರಿಗಳಿಗೆ ವಿನಾಯಿತಿ ನೀಡಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.
 • ಪರಿಸರ ಮಾಲಿನ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಕಾರಣವಾಗಿರುವ ಪ್ಲಾಸ್ಟಿಕ್‌ ನಿಷೇಧಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಈ ಹಿಂದೆ ತೀರ್ಮಾನಿಸಿ ಆದೇಶ ಹೊರಡಿಸಲಾಗಿತ್ತು. ಈ ಸಂಬಂಧ 2015ರ ಅಕ್ಟೋಬರ್‌ 28 ರಂದು ರಾಜ್ಯ ಸರಕಾರ ವಿಶೇಷ ರಾಜ್ಯಪತ್ರ ಪ್ರಕಟಿಸಿತ್ತು. ಪ್ಲಾಸ್ಟಿಕ್‌ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ ಮಾಡಲಾಗಿತ್ತು.

ಫೇಸ್​ಬುಕ್ ದುರ್ಬಳಕೆ ತಡೆ

ಸುದ್ಧಿಯಲ್ಲಿ ಏಕಿದೆ ?ಲೋಕಸಭೆ ಚುನಾವಣೆ (2019) ವೇಳೆ ಸಾಮಾಜಿಕ ಜಾಲತಾಣ ಫೇಸ್​ಬುಕ್ ದುರ್ಬಳಕೆಯಾಗದಂತೆ ವಿಶೇಷ ಕಾರ್ಯಪಡೆ ರಚಿಸುವುದಾಗಿ ಫೇಸ್​ಬುಕ್​ನ ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ವಿಭಾಗದ ಉಪಾಧ್ಯಕ್ಷ ರಿಚರ್ಡ್ ಆಲನ್ ತಿಳಿಸಿದ್ದಾರೆ.

 • ಕಾರ್ಯಪಡೆಯಲ್ಲಿ 100 ಸದಸ್ಯರು ಇರಲಿದ್ದಾರೆ. ಅಂತರ್ಜಾಲ ಭದ್ರತೆ, ಹ್ಯಾಕ್ ನಿಯಂತ್ರಣ, ಖಾಸಗಿ ಮಾಹಿತಿಗೆ ಕನ್ನ ಹಾಕುವುದಕ್ಕೆ ನಿರ್ಬಂಧ ಸೇರಿದಂತೆ ಅನೇಕ ವಿಷಯಗಳಲ್ಲಿನ ಪರಿಣಿತರು ಕಾರ್ಯಪಡೆಯಲ್ಲಿ ಬಳಕೆದಾರರ ಮೇಲೆ ನಿಗಾ ಇರಿಸಲಿದ್ದಾರೆ. ರಾಜಕೀಯ ಪಕ್ಷಗಳ ಐಟಿ ಸೆಲ್ ಹಾಗೂ ಮುಖಂಡರೊಂದಿಗೆ ಹಲವು ಸಭೆಗಳನ್ನು ನಡೆಸಿ ಕಾರ್ಯಪಡೆ ಸದಸ್ಯರು ವದಂತಿಗಳನ್ನು ಹರಡದಂತೆ ತಡೆಯಲಿದ್ದಾರೆ.
 • ಡಿಲೀಟ್​ಗೆ 30 ದಿನ: ಬಳಕೆದಾರರು ಫೇಸ್​ಬುಕ್ ಖಾತೆ ಯನ್ನು ಡಿಲೀಟ್ ಮಾಡಲು ಬಯಸಿದರೆ 30 ದಿನಗಳ ಹೆಚ್ಚುವರಿ ಅವಧಿಯನ್ನು ಕಂಪನಿ ನೀಡಲಿದೆ. ಪ್ರಸ್ತುತ 14 ದಿನ ಕಾಲಾವಕಾಶವನ್ನು ಫೇಸ್​ಬುಕ್ ನೀಡುತ್ತಿದೆ. ಹಲವು ಬಳಕೆದಾರರು ಡಿಲೀಟ್​ಗೆ ಸೂಚನೆ ನೀಡಿ, 14 ದಿನಗಳ ಬಳಿಕ ಮತ್ತೆ ತಮ್ಮ ಖಾತೆಯಲ್ಲಿ ಲಾಗಿನ್ ಆಗಲು ಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಖಾತೆ ನೀಡುವಂತೆ ಮನವಿ ಕೂಡ ಮಾಡುತ್ತಿದ್ದಾರೆ. ಹಾಗಾಗಿ ಖಾತೆ ಡಿಲೀಟ್ ಅವಧಿಯನ್ನು 30 ದಿನಗಳಿಗೆ ಹೆಚ್ಚಿಸಲಾಗಿದೆ . ಬಳಕೆದಾರ ಖಾತೆ ಡಿಲೀಟ್ ಮಾಡಿದ ಬಳಿಕವೂ ಸರ್ವರ್​ನಿಂದ ಖಾಸಗಿ ಮಾಹಿತಿಗಳು ಸಂಪೂರ್ಣ ಅಳಿಸಿ ಹೋಗಲು 90 ದಿನಗಳಾಗುತ್ತದೆ ಎಂದು ಕಂಪನಿ ಹೇಳಿದೆ.

ಕ್ಯಾನಿನ್ ಡಿಸ್ಟಂಪರ್ ವೈರಸ್ 

ಸುದ್ಧಿಯಲ್ಲಿ ಏಕಿದೆ ?ಪೂರ್ವ ಆಫ್ರಿಕಾದಲ್ಲಿ ಒಟ್ಟು ಸಿಂಹಗಳ ಸಂಖ್ಯೆಯ ಶೇ. 30 ರಷ್ಟು ಸಿಂಹಗಳನ್ನು ಬಲಿ ಪಡೆದಿದ್ದ ಮಾರಣಾಂತಿಕ ಕ್ಯಾನಿನ್ ಡಿಸ್ಟಂಪರ್ ವೈರಸ್ ಸೋಂಕಿನಿಂದಾಗಿ ಗಿರ್​ ಅರಣ್ಯದಲ್ಲಿ ಸಿಂಹಗಳು ಮೃತಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಹಿನ್ನಲೆ

 • ಸೆಪ್ಟೆಂಬರ್​ 12 ರಿಂದ ಗುಜರಾತ್​ನ ಗಿರ್​ ಅರಣ್ಯ ಪ್ರದೇಶದಲ್ಲಿ ಒಟ್ಟು 23 ಸಿಂಹಗಳು ಮೃತಪಟ್ಟಿದ್ದವು. ಇವುಗಳ ಪೈಕಿ 5 ಸಿಂಹಗಳು ಕ್ಯಾನಿನ್ ಡಿಸ್ಟಂಪರ್ ವೈರಸ್ ಸೋಂಕಿನಿಂದ ಮೃತಪಟ್ಟಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ವೈರಸ್​ ಪೂರ್ವ ಆಫ್ರಿಕಾದಲ್ಲಿ ಸಿಂಹಗಳ ಸಾವಿಗೆ ಕಾರಣವಾಗಿದೆ ಎಂದು ಸಂಶೋಧನಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮಗಳು

 • ಅವನತಿಯ ಅಂಚಿನಲ್ಲಿರುವ ಸಿಂಹಗಳನ್ನು ರಕ್ಷಿಸಲು ಸಿಡಿವಿ ವ್ಯಾಕ್ಸಿನ್​ ಅನ್ನು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಗುಜರಾತ್​ ಸರ್ಕಾರ ಅಮೆರಿಕದಿಂದ 300 ಸಿಡಿವಿ ವ್ಯಾಕ್ಸಿನ್​ ಆಮದು ಮಾಡಿಕೊಂಡಿದೆ.
 • ಅರಣ್ಯ ಇಲಾಖೆ ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮ ತೆಗೆದುಕೊಂಡಿದ್ದು, 36 ಸಿಂಹಗಳಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವುಗಳ ಪೈಕಿ 3 ಸಿಂಹಗಳ ಸ್ಥಿತಿ ಗಂಭೀರವಾಗಿದೆ.
 • ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹಗಳ ಸರಣಿ ಸಾವು ಬೆನ್ನಲ್ಲೇ ಗುಜರಾತ್ ಸರಕಾರ ಎಚ್ಚೆತ್ತುಕೊಂಡಿದೆ. ಗಿರ್ ಸಿಂಹಗಳನ್ನು ಪೋರಬಂದರ್‌ನ ಬರ್ದಾ ದುಂಗಾರ್ ಅಭಯಾರಣ್ಯಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದೆ.
 • ”ಗಿರ್ ಅರಣ್ಯ ಭಾಗದಲ್ಲಿ ಸಿಡಿವಿ ಹಾಗೂ ಬೇಬಿಸಿಯಾಸಿಸ್‌ ಸೋಂಕಿನಿಂದಾಗಿ 23 ಸಿಂಹಗಳು ಮೃತಪಟ್ಟಿದ್ದವು. ಹೀಗಾಗಿ, ತುರ್ತಾಗಿ ಬರ್ದಾ ದುಂಗಾರ್‌ ಅಭಯಾರಣ್ಯಕ್ಕೆ ಸಿಂಹಗಳನ್ನು ಸಾಗಿಸಲಾಗುವುದು. ರಾಜ್ಯದಲ್ಲಿ ಇದು ಸಿಂಹಗಳಿಗೆ ಎರಡನೇ ಮನೆಯಿದ್ದಂತೆ”

ಬರ್ದಾ ದುಂಗಾರ್‌ ಅಭಯಾರಣ್ಯ ಬಗ್ಗೆ

 • ಬರ್ದಾ ದುಂಗಾರ್‌ 343 ಕಿ.ಮೀ ಅರಣ್ಯ ವಿಸ್ತೀರ್ಣ ಹೊಂದಿದ್ದು ಪೋರಬಂದರ್ ಜಿಲ್ಲೆಯಲ್ಲಿದೆ.
 • ಅಲ್ಲದೆ, ಗಿರ್‌ನಿಂದ ಕೇವಲ 80 ಕಿ.ಮೀ ದೂರದಲ್ಲಿರುವ ಬರ್ದಾ ದುಂಗಾರ್‌ ಅನ್ನು 1995ರಲ್ಲೇ ಎರಡನೇ ಮನೆಯನ್ನಾಗಿ ಮಾಡಲು ನಿರ್ಧರಿಸಿತ್ತು.
 • ಅಲ್ಲದೆ, ಮಧ್ಯಪ್ರದೇಶದಲ್ಲಿರುವ ಕುನೋ ಪಾಲ್ಪುರ ಹಾಗೂ ಎರಡು ಇತರೆ ಅಭಯಾರಣ್ಯಗಳನ್ನು ಆಯ್ಕೆಗೊಳಿಸಲಾಗಿತ್ತು. ಆದರೆ, 2013ರಲ್ಲಿ ಗಿರ್‌ ಅರಣ್ಯದಲ್ಲಿರುವ ಸಿಂಹಗಳನ್ನು ಕುನೋ ಪಾಲ್ಪುರ್‌ಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ನಿರ್ದೇಶಿಸಿದ ಬಳಿಕ ಎರಡನೇ ಮನೆಯನ್ನಾಗಿ ತಮ್ಮ ರಾಜ್ಯದಲ್ಲೇ ಇರುವ ಬರ್ದಾ ದುಂಗಾರ್‌ ಸೇರಿ ಇತರೆ ಅಭಯಾರಣ್ಯಗಳನ್ನು ಅಭಿವೃದ್ಧಿಗೊಳಿಸಲು ಗುಜರಾತ್ ಸರಕಾರ ಸಂಕಲ್ಪ ತೊಟ್ಟಿತ್ತು.
 • ಇನ್ನು, ಮಧ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ನಿರ್ದೇಶಿಸಿದ್ದರೂ ಸಹ ಗುಜರಾತ್ ಸರಕಾರ ಅದಕ್ಕೆ ವಿರೋಧ ವ್ಯಕ್ತಪಡಿಸಿ ಬೇಕೆಂದೇ ವಿಳಂಬಮಾಡಿತ್ತು.

ಕ್ಯಾನಿನ್ ಡಿಸ್ಟಂಪರ್ ವೈರಸ್

 • ಕ್ಯಾನಿನ್ ಡಿಸ್ಟಂಪರ್ ವೈರಸ್ ಸಾಮಾನ್ಯವಾಗಿ ನಾಯಿಗಳಲ್ಲಿ ಕಂಡುಬರುತ್ತದೆ. ನಾಯಿಗಳು ಈ ವೈರಸ್​ನ ವಾಹಕಗಳು ಎಂದು ತಿಳಿದುಬಂದಿದೆ. ಈ ವೈರಸ್​ ತೋಳ, ನರಿ, ರಕ್ಕೂನ್ಸ್​, ರೆಡ್​ ಪಾಂಡಾಗಳು, ಫೆರ್ರಿಟ್ಸ್​, ಹೈನಾ, ಸಿಂಹ ಮತ್ತು ಹುಲಿಗಳಲ್ಲಿ ಕಂಡು ಬರುತ್ತದೆ.

Related Posts
Karnataka Current Affairs – KAS / KPSC Exams – 22nd March 2017
Cauvery dispute: SC directs Karnataka to release 2000 cusecs of water to Tamil Nadu, to begin final hearing from July 11 The Supreme Court on 21st March directed the Karnataka government ...
READ MORE
The country is witnessing a start-up revolution and to harness the potential of India’s innovators and entrepreneurs a vibrant financial ecosystem is essential. India’s is at number three in terms of Start-ups ...
READ MORE
Karnataka Current Affairs for KAS / KPSC Exams – 10th April 2017
Bannerghatta park ‘buffer’ zone shrinks Initially proposed ESZ area was 269 sq. km, now it is 181 sq. km The ‘safe’ area around the city’s lung spaces seems to getting smaller by ...
READ MORE
20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಮನೆಗೊಬ್ಬರು ಯೋಗಪಟು ಯೋಜನೆ ದೇಶದ 500 ಗ್ರಾಮಗಳನ್ನು ‘ಸಂಪೂರ್ಣ ಯೋಗ ಗ್ರಾಮ’ಗಳಾಗಿ ರೂಪಿಸುವ ಉಪಕ್ರಮವೊಂದನ್ನು ಆಯುಷ್‌ ಸಚಿವಾಲಯ ಹಮ್ಮಿಕೊಂಡಿದೆ. ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಬೇಕು ಎಂಬುದು ಈ ಯೋಜನೆಯ ತಿರುಳು. ಜೂನ್‌ 21ರ ಅಂತರರಾಷ್ಟ್ರೀಯ ಯೋಗ ದಿನಕ್ಕೂ ...
READ MORE
ಜೀವಸತ್ವಗಳು (ವಿಟಮಿನ್‌) ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ (Water Soluble) ಜೀವಸತ್ವಗಳೆಂದು ವಿಂಗಡಿಸಲಾಗಿದೆ. ಜೀವಸತ್ವ ಎ.ಡಿ.ಇ.ಕೆ.ಗಳನ್ನು (ವಿಟಮಿನ್‌ ...
READ MORE
Urban Development-Karnataka
Urban  Development Department is responsible for all matters relating to urban areas in the State. Urbanization gives rise to various issues like (i) urban poverty and Slum Improvement (ii) increased pressure on basic services/civic amenities of housing, ...
READ MORE
A total of 87 infrastructure projects with a combined value of Rs.87,518.77 crore are underway in Karnataka and transportation projects are leading the way with around 52 projects worth Rs.36,237 ...
READ MORE
Urban Development – Urban Environment
The physical expansion and demographic growth of urban areas have exerted an adverse impact on the urban environment. The large scale conversion of agricultural land in the urban periphery for urban uses like industries, housing ...
READ MORE
Reforming criminals Judgement was given in a majority judgment of the five-judge Constitution Bench led by Chief Justice of India H.L. Dattu observed in the Rajiv Gandhi killers’ remission case. They noted that ...
READ MORE
Introduction ∗ Cogeneration is the use of a heat engine or a power station to simultaneously generate both electricity and useful heat. ∗ Co-generation is defined as the combined generation of electric ...
READ MORE
Karnataka Current Affairs – KAS / KPSC Exams
Start ups ecosystem in India
Karnataka Current Affairs for KAS / KPSC Exams
20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಜೀವಸತ್ವಗಳು
Urban Development-Karnataka
Infrastructure projects underway in Karnataka
Urban Development – Urban Environment
SC judgement : Remission of sentences
COGENERATION PROJECT

Leave a Reply

Your email address will not be published. Required fields are marked *