“27th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಕಮಾಂಡಿಂಗ್ ಸ್ಟೇಷನ್

ಸುದ್ಧಿಯಲ್ಲಿ ಏಕಿದೆ ? ರಾಮನಗರ ಜಿಲ್ಲೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಇಂಚಿಂಚು ಸಾರ್ವಜನಿಕ ಪ್ರದೇಶದ ಮೇಲೂ ಈಗ ಪೊಲೀಸರ ಕ್ಯಾಮೆರಾ ಕಣ್ಗಾವಲು ಇಡಲಿದೆ.

 • ಈ ಠಾಣಾ ವ್ಯಾಪ್ತಿಯ ಸುಮಾರು 15 ಕಿ. ಮೀ. ಸುತ್ತಳತೆಯಲ್ಲಿ ಯಾವ ರೀತಿಯ ಚಟುವಟಿಕೆ ನಡೆಯುತ್ತಿದೆ ? ಈ ಪ್ರದೇಶಕ್ಕೆ ಯಾರು ಬಂದರು ? ಯಾರು ಹೋದರು ? ಯಾವ ವಾಹನಗಳ ಓಡಾಟ ನಡೆಯುತ್ತಿದೆ- ಎಂಬಿತ್ಯಾದಿ ಸಂಗತಿಗಳನ್ನು ಕ್ಯಾಮೆರಾಗಳು ದಾಖಲು ಮಾಡಿಕೊಳ್ಳಲಿವೆ.
 • ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಈಗ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಆಗಿ ರೂಪುಗೊಂಡಿದ್ದು, ಪೂರ್ಣ ಹೈಟೆಕ್‌ ಆಗಿದೆ. ಸಾರ್ವಜನಿಕ ರಸ್ತೆ, ಸ್ಥಳಗಳು ಸೇರಿದಂತೆ ಎಲ್ಲ ಪ್ರದೇಶಗಳಲ್ಲೂ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಲೈವ್‌ ಮಾನಿಟರಿಂಗ್‌ ವ್ಯವಸ್ಥೆ ಜಾರಿಗೆ ಬಂದಿದೆ.
 • ಸೇಫ್‌ ಸಿಟಿ ಪೈಲಟ್‌ ಪ್ರಾಜೆಕ್ಟ್ನಡಿ ಈ ಠಾಣೆಗೆ ಕಮೀಶನರ್‌ ಕಚೇರಿಯಲ್ಲಿರುವ ತಾಂತ್ರಿಕ ಸೌಲಭ್ಯಗಳು ಬಂದಿಳಿದಿವೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸ್ವಕ್ಷೇತ್ರ ಕುಪ್ಪಂನಲ್ಲಿ ಮಾತ್ರ ಜಾರಿಯಲ್ಲಿರುವ ಈ ಯೋಜನೆ, ರಾಜ್ಯದ ಮಟ್ಟಿಗೆ ಪ್ರಥಮ ಎನ್ನಲಾಗಿದೆ.

ಎಲ್ಲೆಲ್ಲಿ ಕ್ರಿಯಾಶೀಲ?

 • ಬ್ಯಾಂಕ್‌ಗಳ ಹೊರ ಆವರಣ, ಮಹಿಳೆಯರ ಪಿಜಿಗಳು, ಕಾಲೇಜು ಆವರಣದ ಚಲನವಲನದ ಮೇಲೆ ಕ್ಯಾಮೆರಾಗಳು ಕಣ್ಣಿಡಲಿವೆ. ಇದರಿಂದ ಡ್ರಗ್ಸ್‌ ಸೇವನೆ, ಮಾರಾಟ, ಮಹಿಳೆಯರ ಸುರಕ್ಷ ತೆ, ಸರಗಳ್ಳತನದಂತಹ ಕೃತ್ಯಗಳಿಗೆ ತಡೆ ಬೀಳಲಿದೆ. 300 ಮೀ.ವರೆಗೆ ಜೂಮ್‌ ಮಾಡಿ ನೋಡುವ ಈ ಕ್ಯಾಮೆರಾಗಳು ರಾತ್ರಿಯ ಮಬ್ಬುಗತ್ತಲಿನಲ್ಲೂ, ಎಲ್ಲವನ್ನೂ ಸ್ಪಷ್ಟವಾಗಿ ಚಿತ್ರೀಕರಿಸಲಿವೆ.
 • ಪೊಲೀಸ್‌ ಠಾಣೆ ವ್ಯಾಪ್ತಿಯ 47 ಜಂಕ್ಷ ನ್‌ಗಳಲ್ಲಿ 195 ಹೈರೆಸುಲ್ಯೂಷನ್‌ ಆಟೋಮ್ಯಾಟಿಕ್‌ ನಂಬರ್‌ಪ್ಲೇಟ್‌ ರೆಕಗ್ನಿಷನ್‌ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 32 ಜಂಕ್ಷ ನ್‌ಗಳಲ್ಲಿ ಪೂರ್ಣಗೊಂಡಿದೆ. ಅನುಮಾನಾಸ್ಪದ ವಾಹನ ಸಂಖ್ಯೆಯನ್ನು ಸರ್ವರ್‌ನಲ್ಲಿ ನಮೂದಿಸಿದರೆ, ತನ್ನ ಕ್ಯಾಮೆರಾಗಳಲ್ಲಿ ಈ ವಾಹನ ಓಡಾಡಿದ ಮಾರ್ಗವೇ ಗೊತ್ತಾಗಲಿದೆ.
 • ಪಿಟಿಝಡ್‌ ಕ್ಯಾಮೆರಾ: ಮಹಿಳೆಯರು ಹೆಚ್ಚಾಗಿ ಓಡಾಡುವ 12 ಜನ ನಿಬಿಡ ಪ್ರದೇಶಗಳಲ್ಲಿ, ಪಾರ್ಕ್‌ಗಳಲ್ಲಿ ಪ್ಯಾನ್‌ ಟಿಲ್ಟ್‌ ಝೂಮ್‌(ಪಿಟಿಝಡ್‌) ಕ್ಯಾಮೆರಾ ಅಳವಡಿಸಲಾಗಿದೆ. ಇವು 360 ಡಿಗ್ರಿ ತಿರುಗಬಲ್ಲವು. ನಿಖರವಾಗಿ ಅನುಮಾನಾಸ್ಪದ ವ್ಯಕ್ತಿ, ಘಟನೆಯ ಸ್ಥಳದತ್ತ ಜೂಮ್‌ ಮಾಡಿ ಠಾಣೆಯಲ್ಲಿ ಕುಳಿತೇ ಯಾವುದೇ ಅಸಹಜ ಚಟುವಟಿಕೆಗೂ ಪೊಲೀಸರು ಪ್ರತಿಕ್ರಿಯಿಸಲಿದ್ದಾರೆ. ಹೈದರಾಬಾದ್‌ನ ಶಮಯ್‌ ಡೇಟಾ ಸಲ್ಯೂಷನ್‌ ಸಂಸ್ಥೆ ಈ ಸೌಲಭ್ಯಕ್ಕೆ ತಾಂತ್ರಿಕ ನೆರವು ನೀಡಿದೆ.
 • ಟ್ರಾಫಿಕ್‌ ಉಲ್ಲಂಘಿಸುವವರಿಗೆ ಎಚ್ಚರ : ವಾಹನಗಳು ನಿಯಮಗಳನ್ನು ಮೀರಿದರೆ ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸ್ಮಾರ್ಟ್‌ ತಂತ್ರಜ್ಞಾನದ ಕ್ಯಾಮೆರಾಗಳು ತಕ್ಷ ಣ ಮಾಹಿತಿ ರವಾನಿಸುತ್ತವೆ. ನೈಟ್‌ಬೀಟ್‌ ಪೊಲೀಸರು ನಿಗದಿತ ಪ್ರದೇಶಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳ ಮುಂದೆ ಕಾಣಿಸಿಕೊಂಡು ರಿಯಲ್‌ಟೈಂ ಅಟೆಂಡೆನ್ಸ್‌ ತೋರಿಸಲಿದ್ದಾರೆ.
 • ಬೀಗ ಹಾಕಿದ ಮನೆಗೂ ಖಾತ್ರಿ : ಮನೆಗೆ ಬೀಗಹಾಕಿ ಹೊರ ಊರಿಗೆ ಹೋಗುವ ಸಾರ್ವಜನಿಕರಿಗೂ ಮನೆ ಬಗ್ಗೆ ನಿಗಾ ವಹಿಸಿಸುವ ಪೊಲೀಸರು ವಾಟ್ಸ್‌ ಆ್ಯಪ್‌ ಮೂಲಕ ಸುರಕ್ಷ ತೆ ಖಾತ್ರಿಗೊಳಿಸುವ ಸೇವೆಯಿದೆ. ಉಲ್ಲಾಳ, ತಿಗಳರಪಾಳ್ಯ, ಸುಂಕದಕಟ್ಟೆ, ನೈಸ್‌ರಸ್ತೆ ಜಂಕ್ಷ ನ್‌ವರೆಗಿನ ವ್ಯಾಪ್ತಿಯ ಬ್ಯಾಡರಹಳ್ಳಿ ಪೊಲೀಸ್‌ಠಾಣೆ ಅಪರಾಧ ಚಟುವಟಿಕೆಗಳ ನಿಯಂತ್ರಣದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಅಳವಡಿಸಿಕೊಂಡು ಹೈಟೆಕ್‌ ಆಗಿದೆ.
 • ಸೇಫ್‌ ಸಿಟಿ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಿರುವ ತಾಂತ್ರಿಕತೆಯನ್ನು ಬ್ಯಾಡರಹಳ್ಳಿಯಲ್ಲಿ ಅಳವಡಿಸಲಾಗಿದೆ. ಭವಿಷ್ಯದಲ್ಲಿ ರಾಮನಗರ,ಚನ್ನಪಟ್ಟಣಗಳಲ್ಲಿಯೂ ಅಳವಡಿಸಲಾಗುವುದು.

– ರಾಜ್ಯ ಸರಕಾರದ ಸುಪರ್ದಿಗೆ ಶಾಲಾ-ಕಾಲೇಜುಗಳ ಸೌಕರ್ಯಗಳ ಪರಿಶೀಲನೆ ಕೆಲಸ.

ರೈಲ್ವೆ ಫ್ಲೆಕ್ಸಿ-ಫೇರ್‌ ಸ್ಕೀಮ್‌

ಸುದ್ಧಿಯಲ್ಲಿ ಏಕಿದೆ?ಕೆಲವು ಪ್ರೀಮಿಯಂ ರೈಲುಗಳಲ್ಲಿ ವಿಮಾನಕ್ಕಿಂತಲೂ ಹೆಚ್ಚಿನ ದರ ವಿಧಿಸಿ ಪ್ರಯಾಣಿಕರು ಮತ್ತು ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ಕೆಂಗಣ್ಣಿಗೆ ಗುರಿಯಾಗಿರುವ ರೈಲ್ವೆ ಇಲಾಖೆ, ಸದ್ಯದಲ್ಲೇ ಫ್ಲೆಕ್ಸಿ-ಫೇರ್‌ಯೋಜನೆ ಪ್ರಕಟಿಸುವ ಸಾಧ್ಯತೆಯಿದೆ.

 • ಶೇ. 30ಕ್ಕಿಂತಲೂ ಕಡಿಮೆ ಸೀಟುಗಳು ಭರ್ತಿಯಾಗುತ್ತಿರುವ ಕೆಲವೊಂದು ಮಾರ್ಗಗಗಳಲ್ಲಿ ತಾತ್ಕಾಲಿಕವಾಗಿ ‘ಫ್ಲೆಕ್ಸಿ-ಫೇರ್‌’ (ಬೇಡಿಕೆಗೆ ಅನುಗುಣವಾಗಿ ದರ ಏರಿಕೆ ಮತ್ತು ಇಳಿಕೆ) ರದ್ದುಗೊಳಿಸಲು ಇಲಾಖೆ ಮುಂದಾಗಿದೆ. ಅಲ್ಲದೆ, ಅಷ್ಟಾಗಿ ಜನದಟ್ಟಣೆ ಇರದ ಮಾರ್ಗಗಗಳಲ್ಲಿ ಹೊಸ ಯೋಜನೆ ಅಡಿ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ನೀಡುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
 • ಮತ್ತೊಂದೆಡೆ, ಪ್ರಸುತ್ತ ಹಮ್‌ಸಫರ್‌ರೈಲುಗಳಲ್ಲಿ ಅನುಸರಿಸಲಾಗುತ್ತಿರುವ ಟಿಕೆಟ್‌ ದರ ನಿಯಮವನ್ನೇ ಇತರ ಪ್ರೀಮಿಯಂ ರೈಲುಗಳಿಗೂ ಅನ್ವಯಿಸುವ ಆಯ್ಕೆಯೂ ಇಲಾಖೆಯ ಮುಂದಿದೆ. ಹಮ್‌ಸಫರ್‌ ರೈಲುಗಳಲ್ಲಿ ಮೊದಲ ಶೇ. 50ರಷ್ಟು ಬುಕ್ಕಿಂಗ್‌ಗಳನ್ನು ಮೂಲ ದರಕ್ಕಿಂತಲೂ ಶೇ. 15ರಷ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ. ನಂತರ ಪ್ರತಿ 10% ಸೀಟುಗಳು ಭರ್ತಿಯಾದಂತೆ ಪ್ರಯಾಣ ದರದ ಸ್ಪ್ಯಾಬ್‌ ಬದಲಾಗುತ್ತಾ ಹೋಗುತ್ತದೆ.

ನೌಕಾಪಡೆಗೆ ಯುಟಿಲಿಟಿ ಹೆಲಿಕಾಪ್ಟರ್‌

ಸುದ್ಧಿಯಲ್ಲಿ ಏಕಿದೆ? ಭಾರತೀಯ ನೌಕಾಪಡೆಗೆ 111 ಯುಟಿಲಿಟಿ ಹೆಲಿಕಾಪ್ಟರ್‌ಗಳ ಖರೀದಿಗೆ ಕೇಂದ್ರ ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

 • ಹೆಲಿಕಾಪ್ಟರ್‌ಗಳ ಖರೀದಿಗೆ 21,000 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗಲಿದ್ದು, ಇವುಗಳ ಜತೆಗೆ ಇತರೆ 25,000 ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರಗಳ ಖರೀದಿ ಪ್ರಸ್ತಾವನೆಗೂ ರಕ್ಷಣಾ ಸಚಿವಾಲಯ ಹಸಿರು ನಿಶಾನೆ ತೋರಿದೆ.
 • ಖರೀದಿ ವ್ಯವಹಾರಗಳ ಕುರಿತ ಸಚಿವಾಲಯದ ಉನ್ನತ ಮಂಡಳಿ ಎನಿಸಿರುವ ರಕ್ಷಣಾ ಖರೀದಿ ಸಮಿತಿ (ಡಿಎಸಿ)ಯು ಮಹತ್ವದ ಈ ಎರಡು ಪ್ರಸ್ತಾವನೆಗಳಿಗೆ ಸಮ್ಮತಿ ನೀಡಿದೆ.
 • ವಿದೇಶಿ ಶಸ್ತ್ರಾಸ್ತ್ರ ತಯಾರಿಕಾ ಕಂಪನಿ ಮತ್ತು ಸ್ಥಳೀಯ ಖಾಸಗಿ ಕಂಪನಿಯ ವ್ಯೂಹಾತ್ಮಕ ಸಹಭಾಗಿತ್ವ (ಎಸ್‌ಪಿ)ದಲ್ಲಿ ಈ ನೌಕಾ ಹೆಲಿಕಾಪ್ಟರ್‌ಗಳು ಸಿದ್ಧಗೊಳ್ಳಲಿವೆ. ದೇಶದ ಆಯ್ದ ರಕ್ಷಣಾ ನೆಲೆಯೊಂದರಲ್ಲಿ ಇವುಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಇದು ದೇಶದ ಪ್ರಥಮ ರಕ್ಷಣಾ ಸಾಮಗ್ರಿ ತಯಾರಿಕಾ ಮಾದರಿ ಎನಿಸಿದೆ.

ಫಿರಂಗಿ ಗನ್‌ ವ್ಯವಸ್ಥೆ

 • ದೇಶಿಯವಾಗಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿದ 155 ಎಂಎಂ ಆಧುನಿಕ ಪಿರಂಗಿ ಗನ್‌ ವ್ಯವಸ್ಥೆ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳ ಖರೀದಿ ಪ್ರಸ್ತಾವನೆಗೂ ಸಮ್ಮತಿ ದೊರೆತಿದೆ. ಪ್ರತಿ ಪಿರಂಗಿ ಗನ್‌ ವ್ಯವಸ್ಥೆಗೆ ಅಂದಾಜು 3,367.78 ಕೋಟಿ ರೂ. ವೆಚ್ಚ ತಗಲುತ್ತಿದ್ದು, ಇಂತಹ 150 ಶಸ್ತ್ರಾಸ್ತ್ರಗಳನ್ನು ಸೇನೆಯ ಬತ್ತಳಿಕೆಗೆ ಸೇರಿಸಲಾಗುತ್ತಿದೆ. ಒಟ್ಟು 24,879.16 ಕೋಟಿ ರೂ. ಮೊತ್ತದ ಇತರೆ ಶಸ್ತ್ರಾಸ್ತ್ರಗಳ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ.

 ‘ಬೇಟಿ ಬನಾವೋ’ ಯೋಜನೆ

ಸುದ್ಧಿಯಲ್ಲಿ ಏಕಿದೆ? ಮಧ್ಯಪ್ರದೇಶದ ಆಕಳುಗಳಿನ್ನು ಮೇಲೆ ಕೇವಲ ಹೆಣ್ಣು ಕರುಗಳಿಗೆ ಜನ್ಮ ನೀಡಲಿವೆ. ಅಲ್ಲಿನ ರಾಜ್ಯ ಸರಕಾರ ದನಗಳಿಗಾಗಿ ಬೇಟಿ ಬನಾವೋ ಯೋಜನೆಯನ್ನು ಜಾರಿಗೆ ತರುತ್ತಿದ್ದು ಲಿಂಗವನ್ನು ಮೊದಲೇ ನಿರ್ಣಯಿಸಬಹುದಾದ ಲಿಂಗ ವರ್ಗೀಕೃತ ವೀರ್ಯ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

ಉದ್ದೇಶ

 • ಜಾನುವಾರು ಮಾರುಕಟ್ಟೆಯಲ್ಲಿ ಹಸುವಿಗೆ 90% ಕ್ಕಿಂತ ಹೆಚ್ಚು ಬೇಡಿಕೆ ಇದೆ. ಎತ್ತುಗಳನ್ನು ಕೇವಲ ಸಂತಾನೋತ್ಪತ್ತಿಯ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿದ್ದು ಅವುಗಳ ಬೇಡಿಕೆ 10% ಕ್ಕಿಂತ ಕಡಿಮೆ ಇದೆ.
 • ಇದಕ್ಕಾಗಿ ಪ್ರಯೋಗಶಾಲೆ ಸ್ಥಾಪಿಸಲು ಅಮೇರಿಕಾ ಮೂಲದ ಕಂಪನಿಯೊಂದರ ಜತೆ ಸರಕಾರ ಒಪ್ಪಂದ ಮಾಡಿಕೊಂಡಿದ್ದು, ದೇಶದಲ್ಲಿನ ಟಾಪ್ 10 ವೀರ್ಯ ಕೇಂದ್ರಗಳಲ್ಲಿ ಒಂದಾದ ಭೋಪಾಲ್ ಕೇಂದ್ರ ವೀರ್ಯ ಕೇಂದ್ರದಲ್ಲಿ ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.
 • ಲಿಂಗ ವರ್ಗೀಕೃತ ವೀರ್ಯ ತಂತ್ರಜ್ಞಾನವನ್ನು 8 ತಿಂಗಳೊಳಗೆ ರಾಜ್ಯದಲ್ಲಿ ಪರಿಚಯಿಸುತ್ತೇವೆ.

ಉಪಯುಕ್ತತೆ

 • ಇದು ಬೀದಿ ದನಗಳ ನಿಯಂತ್ರಣಕ್ಕೆ ಸಹಾಯಕವಾಗಲಿದೆ. ಜತೆಗೆ ಜಾನುವಾರು ಸಾಕಣೆದಾರರಿಗೆ ಲಿಂಗ ನಿರ್ಧರಿಸುವ ಆಯ್ಕೆಯನ್ನು ನೀಡುತ್ತದೆ. 90% ಜನರು ಎತ್ತುಗಳಿಗಿಂತ ಆಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ವರ್ಷಕ್ಕೆ 2 ಲಕ್ಷ ವರ್ಗೀಕೃತ ವೀರ್ಯ ಅಭಿವೃದ್ಧಿ ಪಡಿಸುವ ಗುರಿ ಇದೆ.

ಮಾನವ ಸಹಿತ ಅಂತರಿಕ್ಷ ಯೋಜನೆ

ಸುದ್ಧಿಯಲ್ಲಿ ಏಕಿದೆ?ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳ ಉಡಾವಣೆ, ಚಂದ್ರಯಾನ-1, ಮಂಗಳಯಾನ ಯೋಜನೆ ಸೇರಿ ಹತ್ತು ಹಲವು ವಿಕ್ರಮಗಳನ್ನು ಸಾಧಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈಗ ಮಾನವ ಸಹಿತ ಅಂತರಿಕ್ಷಯಾನಕ್ಕೆ ಸಜ್ಜಾಗಿದೆ.

 • ಅನ್ವೇಷಣೆಗೆ ದಾರಿ: ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಅನೇಕ ಮಜಲುಗಳನ್ನು ದಾಟಿ ಬಂದಿರುವ ಇಸ್ರೊಗೆ ಇದೊಂದು ಹೊಸ ಕಲಿಕೆಯ ಸವಾಲಾಗಿದೆ. ನೂತನ ಎಂಜಿನಿಯರಿಂಗ್‌ ಮತ್ತು ಜೈವಿಕ ತಂತ್ರಜ್ಞಾನ ಅಭಿವೃದ್ಧಿಯ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ. 2022ರ ಹೊತ್ತಿಗೆ ಮಾನವ ಸಹಿತ ಅಂತರಿಕ್ಷಯಾನ ಕೈಗೊಳ್ಳುವ ಮೂಲಕ ಇಸ್ರೊ ವಿಶ್ವದ ನಾಲ್ಕನೇ ರಾಷ್ಟ್ರವೆನಿಸಿಕೊಳ್ಳುವುದು ಶತಃಸಿದ್ಧ. ವಿಶ್ವದಲ್ಲಿ ಅಮೆರಿಕ, ರಷ್ಯಾ, ಚೀನಾ ಮಾತ್ರ ಇದುವರೆಗೆ ಮಾನವ ಸಹಿತ ಅಂತರಿಕ್ಷಯಾನ ಯೋಜನೆಗಳನ್ನು ಕೈಗೊಂಡಿದೆ.
 • ಕ್ರ್ಯೂ ಎಸ್ಕೇಪ್‌ ಸಿಸ್ಟಮ್‌ ಸೇರಿದಂತೆ ಅನೇಕ ಹಂತದ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಸಂಶೋಧನೆ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಕಂಟ್ರೋಲ್‌ ರೂಮ್‌, ಲ್ಯಾಂಚ್‌ ಪ್ಯಾಡ್‌ ಇತ್ಯಾದಿ ಮೂಲಸೌಕರ್ಯಗಳ ನಿರ್ಮಾಣ ಮತ್ತು ತಾಂತ್ರಿಕ ಸಹಕಾರಕ್ಕೆ ಜಾಗತಿಕ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗಿದ್ದು, ಯಾವುದನ್ನೂ ಅಂತಿಮಗೊಳಿಸಿಲ್ಲ.
 • ಖಗೋಳಯಾನಿಗಳಿಗೆ ತರಬೇತಿ: ಭೂಮಿಯ ಗುರುತ್ವಾಕರ್ಷಣೆ ಬಲ ದಾಟಿ ಅಂತರಿಕ್ಷ ಪ್ರವೇಶಿಸುವ ನೌಕೆಯಲ್ಲಿ ಕಾಲ ಕಳೆಯುವ ಗಗನಯಾನಿಗಳಿಗೆ ದೈಹಿಕ, ಮಾನಸಿಕ ಮತ್ತು ತಾಂತ್ರಿಕ ತರಬೇತಿ ಅಗತ್ಯವಿರುತ್ತದೆ. ಅಲ್ಲಿನ ವಾತಾವರಣಕ್ಕೆ ಸರಿಹೊಂದುವಂತೆ ಜೈವಿಕ ಜೀವ ರಕ್ಷಕ ವ್ಯವಸ್ಥೆ ಕೂಡ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಇದರ ಜತೆಗೆ ಸಮುದ್ರಕ್ಕೆ ಇಳಿಯುವ ನೌಕೆಯಿಂದ ಖಗೋಳಯಾನಿಗಳನ್ನು ಕರೆತರುವ ತಾಂತ್ರಿಕ ಸಾಧನೋಪಕರಣಗಳ ಅಭಿವೃದ್ಧಿ ಇಸ್ರೊದ ಸದ್ಯದ ಆದ್ಯತೆಗಳಲ್ಲಿ ಒಂದಾಗಿದೆ
 • ಕ್ರಾಂತಿ ಮಾಡಲಿದೆ: ಅಂತರಿಕ್ಷದಿಂದ ನೌಕೆಯು ಭೂಮಿಯ ಗುರುತ್ವಬಲ ಪ್ರವೇಶಿಸುವ ವೇಳೆ ಅಪಾರ ಪ್ರಮಾಣದ ಘರ್ಷಣೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಕೂದಲಿಗಿಂತಲೂ ಸಣ್ಣದೊಂದು ಬಿರುಕು ಉಂಟಾದರೂ ನೌಕೆ ಭಸ್ಮಗೊಳ್ಳುತ್ತದೆ. ಇಂತಹ ಘರ್ಷಣೆ ತಾಳಿಕೊಳ್ಳುವ ಅಗ್ನಿ ನಿರೋಧಕ ಕವಚ ಅಭಿವೃದ್ಧಿಪಡಿಸಬೇಕಿದ್ದು, ಇಲ್ಲಿ ಅಗ್ನಿ ನಿರೋಧಕ ಕೆಮಿಕಲ್‌ಗಳು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತವೆ. ಹೊಸ ಸಂಶೋಧನೆಯ ಇಂತಹ ಕೆಮಿಕಲ್‌ಗಳು ಮುಂದೆ ಪೆಟ್ರೋಲಿಯಂ ಉದ್ಯಮದಲ್ಲಿ ದೊಡ್ಡ ಕ್ರಾಂತಿಗೂ ದಾರಿ ಮಾಡಿಕೊಡಲಿದೆ.
 • ಹಿಂದೆ ಇಸ್ರೊದ ರಾಕೆಟ್‌ನಲ್ಲಿ ಬಳಸಿದ್ದ ಲಿಥಿಯಂ ಬ್ಯಾಟರಿ ಇಂದು ಎಲೆಕ್ಟ್ರಿಕ್‌ ವಾಹನಗಳಲ್ಲಿ, ಮೊಬೈಲ್‌ಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ .
 • 10,000 ಕೋಟಿ ರೂ. : ಒಂದು ಅಂದಾಜಿನ ಪ್ರಕಾರ ಈ ಯೋಜನೆಗೆ 10 ಸಾವಿರ ಕೋಟಿ ರೂ. ತಗುಲುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಯೋಜನಾ ನಿರ್ವಹಣಾ ತಂಡ ರಚನೆಯಾಗಲಿದೆ.

ಇಸ್ರೊ ಟಿವಿ ಚಾನೆಲ್‌

 • ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ಬಾಹ್ಯಾಕಾಶ ಸಂಶೋಧನೆ ಬಗ್ಗೆ ಆಸಕ್ತಿ ಹೆಚ್ಚಿಸಲು ಇಸ್ರೊ, ಟಿವಿ ಚಾನೆಲ್‌ ಆರಂಭಿಸುವ ಯೋಜನೆ ಹಾಕಿಕೊಂಡಿದೆ. ಎಲ್ಲ ಸ್ಥಳೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಮುಂದಿನ ವರ್ಷದ ಹೊತ್ತಿಗೆ ಅಂತಿಮಗೊಳ್ಳಲಿದೆ.

ಏನಿದು ಕ್ರ್ಯೂ ಎಸ್ಕೇಪ್ ಸಿಸ್ಟಮ್ ?

 • ಅದು ಉಡಾವಣಾ ಕಾರ್ಯಾಚರಣೆ ಸ್ಥಗಿತಗೊಂಡಾಗ ಗಗನಯಾತ್ರಿಗಳಿಗೆ ಪಾರುಗಾಣಿಕಾ ಕಾರ್ಯವಿಧಾನವನ್ನು ಒದಗಿಸುತ್ತದೆ. ಸಿಬ್ಬಂದಿ ಪಾರುಗಾಣಿಕಾ ವ್ಯವಸ್ಥೆಯನ್ನು ಮಾನವ ಬಾಹ್ಯಾಕಾಶ ಯೋಜನೆ ಪ್ರಸ್ತಾಪಿಸಿದ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದ ಮಾನವನ ಬಾಹ್ಯಾಕಾಶ ಯಾತ್ರೆಗೆ ಇದು ಮೊದಲ ಪ್ಯಾಡ್ ಅಬಾರ್ಟ್ ಪರೀಕ್ಷಾ ವಿಮರ್ಶಾತ್ಮಕವಾಗಿತ್ತು, ಇದು ಉಡಾವಣಾ ಪ್ಯಾಡ್ನಲ್ಲಿಯಾವುದೇ ಆಕಸ್ಮಿಕವಾದ ಸಂದರ್ಭದಲ್ಲಿ ಸಿಬ್ಬಂದಿ ಘಟಕವನ್ನು ಸುರಕ್ಷಿತವಾಗಿ ಹಿಂಪಡೆಯುವಂತೆ ತೋರಿಸಿದೆ.

Related Posts
Get ready for the Budget 2018
Expected big news - Budget expected to focus on direct taxes While there are unlikely to be any major changes in indirect tax as most of them are now under the ...
READ MORE
Karnataka Current Affairs – KAS/KPSC Exams – 17th Nov 2017
Council passes Road Safety Authority Bill The Karnataka State Road Safety Authority Bill, 2017, which seeks to curb accidents by making roads safer was passed in the Council on 16th Nov. The ...
READ MORE
13th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಜಾಗತಿಕ ಆವಿಷ್ಕಾರ ಸೂಚ್ಯಂಕ ಸುದ್ಧಿಯಲ್ಲಿ ಏಕಿದೆ? 2018ರ ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ) ಬಿಡುಗಡೆಯಾಗಿದ್ದು, ಭಾರತ 57ನೇ ಸ್ಥಾನ ಪಡೆದಿದೆ. 2015ರಿಂದ ಜಿಐಐ ಶ್ರೇಯಾಂಕದಲ್ಲಿ ಸತತವಾಗಿ ಹೊಸದಿಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ವರದಿಗಳ ಪ್ರಕಾರ, ಕೇಂದ್ರ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಭಾರತವು ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ...
READ MORE
National Current Affairs – UPSC/KAS Exams- 8th December 2018
Brihadisvara temple Topic: Art and Culture IN NEWS: The Madurai bench of the Madras High Court has ordered an interim stay on a two-day event which was organised by a private body ...
READ MORE
All you need to know about President rule
In News: "A day before confidence vote, President’s Rule imposed" President’s Rule was imposed on Uttarakhand , a day before the Harish Rawat government was to face a test of strength in ...
READ MORE
“2nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆರೋಗ್ಯ ಸೇವೆ ಸುದ್ಧಿಯಲ್ಲಿ ಏಕಿದೆ ? ಕಾಡನ್ನೇ ನಂಬಿಕೊಂಡು ಬದುಕು ನಡೆಸುವ ಬುಡಕಟ್ಟು ಜನರಿಗಾಗಿ ರಾಜ್ಯ ಸರಕಾರ ಸಂಚಾರಿ ಆರೋಗ್ಯ ಘಟಕ ಸೇವೆಯನ್ನು ಪ್ರಾರಂಭಿಸಿದೆ. ಯಾರು ಜಾರಿಗೆ ತರುತ್ತಾರೆ ? ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಆರೋಗ್ಯ ಸೇವೆ ...
READ MORE
Karnataka Current Affairs – KAS/KPSC Exams-15th December 2018
NCBS scientists study carbon cycle in rainforests In the backdrop of climate change, the National Centre for Biological Sciences, a subsidiary of Tata Institute of Fundamental Research, has taken up a study ...
READ MORE
Scientists have set out to explore the medicinal properties of the Ganga water This will help to either use the pristine water or elements isolated from it in clinical therapies. While four ...
READ MORE
National Current Affairs – UPSC/KAS Exams – 10th July 2018
Simultaneous election Context: During recent consultations with the Law Commission of India, as many as nine parties expressed their reservations while four parties supported holding of simultaneous elections. Why we need simultaneous ...
READ MORE
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಂಬಳ ಸುದ್ಧಿಯಲ್ಲಿ ಏಕಿದೆ ? ಕಂಬಳ ಹಾಗೂ ಇತರೆ ಗೂಳಿ ಮತ್ತು ಎತ್ತಿನ ಗಾಡಿ ಸ್ಪರ್ಧೆಗಳಿಗೆ ಅನುಮತಿ ನೀಡಿದ್ದ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ್ದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ - 2017ಕ್ಕೆ ಪೆಟಾ ಮತ್ತೆ ತಗಾದೆ ತೆಗೆದಿದೆ. ರಾಜ್ಯ ...
READ MORE
Get ready for the Budget 2018
Karnataka Current Affairs – KAS/KPSC Exams – 17th
13th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
National Current Affairs – UPSC/KAS Exams- 8th December
All you need to know about President rule
“2nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS/KPSC Exams-15th December 2018
Ganga water for medicinal properties
National Current Affairs – UPSC/KAS Exams – 10th
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *