12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

 ಏಕತೆ ಪ್ರತಿಮೆ ಪೂರ್ಣ

ಸುದ್ಧಿಯಲ್ಲಿ ಏಕಿದೆ ?ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವರ 143ನೇ ಹುಟ್ಟುಹಬ್ಬದ ದಿನ ಅ. 31ರಂದು ಉದ್ಘಾಟನೆಗೊಳ್ಳಲಿದೆ. ಗುಜರಾತ್​ನ ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟೆ ಸಮೀಪ ಈ ಮೂರ್ತಿ ನಿರ್ಮಾಣವಾಗಿದೆ.

ಉಕ್ಕಿನಷ್ಟೇ ಗಟ್ಟಿ!

 • ರಿಕ್ಟರ್ ಮಾಪಕದಲ್ಲಿ 5 ತೀವ್ರತೆಯ ಭೂಕಂಪ ಹಾಗೂ 220 ಕಿ.ಮೀ ವೇಗದ ಮಾರುತಗಳನ್ನು ಈ ಮೂರ್ತಿ ತಡೆದುಕೊಳ್ಳುವ ಶಕ್ತಿ ಹೊಂದಿದೆ. 10 ಕಿ.ಮೀ ಆಳ ಹಾಗೂ 15 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಭೂಕಂಪನವಾದರೂ ಏಕತೆಯ ವಿಗ್ರಹಕ್ಕೆ ಯಾವುದೆ ಹಾನಿಯಾಗುವುದಿಲ್ಲ.
 • ಮಳೆ ಹಾಗೂ ಸಿಡಿಲಿನಿಂದಲೂ ಯಾವುದೇ ಧಕ್ಕೆಯಾಗದಂತೆ ರೆಡಿಯೋ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಮೋದಿ ಕನಸಿನ ಯೋಜನೆ

 • ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಇದಾಗಿದೆ. ಗುಜರಾತಿನ ಮಣ್ಣಿನ ಮಗ ಎಂದು ಕರೆಯಲ್ಪ ಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ಮೊದಲ ಗೃಹ ಸಚಿವರಾಗಿದ್ದರು.

ಏಕತೆ’ಯ ವಿಶೇಷತೆ

 • ಎತ್ತರ: 182 ಮೀಟರ್
 • ಕಂಚಿನ ಹಾಳೆ: 1850 ಮೆಟ್ರಿಕ್ ಟನ್
 • ಉಕ್ಕು: 24,200 ಮೆಟ್ರಿಕ್ ಟನ್
 • ಯೋಜನಾ ಮೊತ್ತ: 2989 ಕೋಟಿ ರೂ.
 • ಸಿಮೆಂಟ್ ಬಳಕೆ: 22,500 ಮೆಟ್ರಿಕ್ ಟನ್
 • ಎಲ್ಲಿ: ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟೆಯಿಂದ 5 ಕಿ.ಮೀ ದೂರದ ಗರುಡೇಶ್ವರ ಬಳಿಯ ಸಾಧು ದ್ವೀಪ

ಆಕರ್ಷಣೆಯೇನು?

 • ಹೋಟೆಲ್, ಆಟದ ಜಾಗ ಸೇರಿ ಪ್ರವಾಸಿಗರ ಅನುಕೂಲಕ್ಕೆ ಶ್ರೇಷ್ಟ ಭಾರತ ಭವನ ನಿರ್ಮಾಣ
 • ಪಟೇಲರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ಹಾಗೂ ಆಡಿಯೋ-ವಿಡಿಯೋ ಗ್ಯಾಲರಿ
 • ಲೇಸರ್ ಬೆಳಕು ಹಾಗೂ ಧ್ವನಿ ಪ್ರದರ್ಶನ
 • ಸಂಶೋಧನಾ ಕೇಂದ್ರ
 • ಸರ್ದಾರ್ ಸರೋವರ ಅಣೆಕಟ್ಟು ಹಾಗೂ ನರ್ಮದಾ ನದಿಯನ್ನು 400 ಅಡಿ ಎತ್ತರದಲ್ಲಿ ನಿಂತುಕೊಂಡು ನೋಡುವ ಅವಕಾಶ.
 • ಆಗಮಿಸುವ ಪ್ರವಾಸಿಗರಿಗೆ ವಾಹನದ ಬದಲು ಫೆರ್ರಿ ಸೇವೆ ಹಾಗೂ ಪ್ರತ್ಯೇಕ ಬೋಟಿಂಗ್ ಸೌಲಭ್ಯ
 • ಸುಮಾರು 7 ಕಿ.ಮೀ ದೂರದಿಂದ ಈ ಮೂರ್ತಿ ಬರಿ ಕಣ್ಣಿಗೆ ಕಾಣಲಿದೆ
 • ವಿಶ್ವದ ಅತಿ ಎತ್ತರದ ವಿಗ್ರಹ ಎಂಬ ಖ್ಯಾತಿಗೆ ಅಮೆರಿಕದ ನ್ಯೂಯಾಕ್​ನಲ್ಲಿರುವ ಲಿಬರ್ಟಿ ವಿಗ್ರಹ ಪಾತ್ರವಾಗಿದೆ. ಈ ಮೂರ್ತಿಯು ಅದರ ಎರಡು ಪಟ್ಟು ಎತ್ತರವಿದೆ.

ನಿರ್ಮಾಣ ಹಾದಿ…

# 2010: ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯಿಂದ ಯೋಜನೆ ಘೋಷಣೆ.

# 2013: ಮೋದಿಯಿಂದ ಯೋಜನೆಗೆ ಶಿಲಾನ್ಯಾಸ

# 2014: ಎಲ್ ಆಂಡ್ ಟಿ ಕಂಪನಿಗೆ ಯೋಜನೆಯ ಗುತ್ತಿಗೆ

# 2015: ಎಲ್ಲ ರೀತಿಯ ಸಮೀಕ್ಷೆ ಸಂಪೂರ್ಣ

# 2017: ಆಧಾರ ಸ್ತಂಭ ಹಾಗೂ ಪ್ರಾಥಮಿಕ ಕಾಮಗಾರಿ ಅಂತಿಮ

# 2018ರ ಅ.31: ಯೋಜನೆ ಲೋಕಾರ್ಪಣೆ

ಎಲ್ ಆಂಡ್ ಟಿ ನಿರ್ಮಾಣ

 • ಪಟೇಲ್ ಮೂರ್ತಿಯನ್ನು ಚೀನಾ ನಿರ್ವಿುಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ ವಾಸ್ತವಿಕವಾಗಿ ಪ್ರತಿಷ್ಠಿತ ಎಲ್ ಆಂಡ್ ಟಿ ಸಂಸ್ಥೆಯು ಈ ಜವಾಬ್ದಾರಿ ಹೊತ್ತುಕೊಂಡಿದೆ. ಪಟೇಲ್ ಮೂರ್ತಿಗಾಗಿಯೇ 1347 ಕೋಟಿ ರೂ. ಮೀಸಲಿಟ್ಟಿದ್ದು, 15 ವರ್ಷಗಳ ನಿರ್ವಹಣೆಗೆ 657 ಕೋಟಿ ರೂ. ನೀಡಲಾಗಿದೆ.

ಏರೊ ಇಂಡಿಯಾ: ವೈಮಾನಿಕ ಪ್ರದರ್ಶನ

ಸುದ್ಧಿಯಲ್ಲಿ ಏಕಿದೆ ?ನಾಗರಿಕ ಮತ್ತು ರಕ್ಷಣಾ ವಲಯದ ಶಸ್ತ್ರಾಸ್ತ್ರ, ತಂತ್ರಜ್ಞಾನ, ಡ್ರೋನ್‌, ಸರಕು-ಚಾರ್ಟರ್ಡ್‌ ವಿಮಾನಗಳು ಸೇರಿದಂತೆ ರಕ್ಷಣಾ ವಲಯದ ವ್ಯಾಪಾರ ವಹಿವಾಟಿನ ದೊಡ್ಡ ವೇದಿಕೆಯಾಗುವ ಪ್ರತಿಷ್ಠಿತ ‘ಏರೊ ಇಂಡಿಯಾ-2019’ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಯ ವೇಳಾಪಟ್ಟಿಯನ್ನು ಕೇಂದ್ರ ರಕ್ಷಣಾ ಇಲಾಖೆ ಅಪ್‌ಡೇಟ್‌ ಮಾಡಿರುವ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಯಾವಾಗ ಮತ್ತು ಎಲ್ಲಿ ?

 • ಫೆ.20ರಿಂದ 24ರ ನಡುವೆ ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ದೇಶ-ವಿದೇಶಗಳ ಉಕ್ಕಿನ ಹಕ್ಕಿಗಳ ಆರ್ಭಟ ಮೊಳಗಲಿದೆ.

ಉಪಯೋಗಗಳು

 • ಅಂತಾರಾಷ್ಟ್ರೀಯ ವೈಮಾನಿಕ ಕ್ಷೇತ್ರದಲ್ಲಿರುವ ವ್ಯವಹಾರ ಅವಕಾಶಗಳಿಗೆ ಏರೋ ಇಂಡಿಯಾ ಬಹುದೊಡ್ಡ ವೇದಿಕೆಯಾಗಲಿದೆ.
 • ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ರಕ್ಷಣಾ ಕ್ಷೇತ್ರದ ಉತ್ಪನ್ನಗಳ ಉತ್ಪಾದನೆಗೆ ಖಾಸಗಿ ಕ್ಷೇತ್ರಕ್ಕೆ ವಿಪುಲ ಮತ್ತು ವ್ಯಾಪಕ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ.
 • ಈ ಮೂಲಕ ದೇಶದ ರಕ್ಷಣಾ ವಲಯಕ್ಕೆ ಅಗತ್ಯವಿರುವ ಉತ್ಪನ್ನಗಳ ಕೊರತೆಯನ್ನು ದೇಶಿಯ ಕಂಪನಿಗಳು ನೀಗಿಸುತ್ತಿವೆ.
 • ಏರೋ ಇಂಡಿಯಾ ಏಷ್ಯಾದ ಅತಿದೊಡ್ಡ ರಕ್ಷಣಾ ವ್ಯವಹಾರಗಳ ಕೇಂದ್ರವಾಗಿದೆ ಎಂದು ರಕ್ಷಣಾ ಇಲಾಖೆ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
 • ದೇಶ-ವಿದೇಶಗಳ ಐನೂರಕ್ಕೂ ಹೆಚ್ಚು ಕಂಪನಿಗಳು ಪ್ರದರ್ಶನದಲ್ಲಿ ವಿಮಾನ ಮತ್ತು ರಕ್ಷಣಾ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇರಿಸುವ ನಿರೀಕ್ಷೆ ಇದೆ. ಸ್ಟಾಲ್‌ಗಳು ಮತ್ತು ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಎಂದಿನಂತೆ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ.

ಜಾಗತಿಕ ಷೇರು ಮಾರುಕಟ್ಟೆ

ಸುದ್ಧಿಯಲ್ಲಿ ಏಕಿದೆ ?ಅಮೆರಿಕ, ಯುರೋಪ್‌, ಏಷ್ಯಾ ಸೇರಿದಂತೆ ವಿಶ್ವಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಭಾರಿ ಕುಸಿತಕ್ಕೀಡಾಯಿತು. ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಕೂಡ 800 ಅಂಕಗಳ ಪತನಕ್ಕೀಡಾಯಿತು.

 • ಅಮೆರಿಕದ ಷೇರು ಪೇಟೆ ಕಳೆದ 8 ತಿಂಗಳಿನಲ್ಲಿಯೇ ಗರಿಷ್ಠ ಕುಸಿತ ದಾಖಲಿಸಿತು. ಅಮೆರಿಕದ ಸಾಲಪತ್ರಗಳ (ಬಾಂಡ್‌) ಆದಾಯ ಕುಸಿತಕ್ಕೀಡಾಗುವ ಆತಂಕ ಹೂಡಿಕೆದಾರರನ್ನು ತಲ್ಲಣಗೊಳಿಸಿದೆ. ಅಮೆರಿಕ-ಚೀನಾ ಟ್ರೇಡ್‌ ವಾರ್‌ ಕೂಡ ನಕಾರಾತ್ಮಕ ಪ್ರಭಾವ ಬೀರಿದೆ.
 • ನಾಸ್‌ಡಾಕ್‌ ತತ್ತರ: ಅಮೆರಿಕದ ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ನಾಸ್‌ಡಾಕ್‌) ಸೂಚ್ಯಂಕ ಡವ್‌ ಜಾನ್ಸ್‌ ಇಂಡಸ್ಟ್ರಿಯಲ್‌ ಎವರೇಜ್‌, 831 ಅಂಕ ಕುಸಿದಿದ್ದು, ಕಳೆದ 8 ತಿಂಗಳಿನಲ್ಲಿಯೇ ಗರಿಷ್ಠ ಇಳಿಕೆ ಇದಾಗಿದೆ.
 • ಆ್ಯಪಲ್‌, ಗೂಗಲ್‌, ಅಮೆಜಾನ್‌ ಮತ್ತಿತರ ತಂತ್ರಜ್ಞಾನ ದಿಗ್ಗಜಗಳ ಷೇರುಗಳೂ ತೀವ್ರ ಕುಸಿತಕ್ಕೀಡಾಯಿತು. ಆದರೆ ಬಿಕ್ಕಟ್ಟಿಗೆ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸಿರುವುದೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
 • ಚೀನಾದ ಶಾಂಘೈ ಕಂಪೊಸಿಟ್‌ ಇಂಡೆಕ್ಸ್‌ ಶೇ.2 ಕುಸಿದಿದ್ದು, 2014ರ ನವೆಂಬರ್‌ನಿಂದ ಕನಿಷ್ಠ ಮಟ್ಟಕ್ಕಿಳಿದಿದೆ.
 • ಸೆನ್ಸೆಕ್ಸ್‌ ಪತನ: ಪಿಎಸ್‌ಯು ಬ್ಯಾಂಕ್‌, ಲೋಹ, ಆಟೊಮೊಬೈಲ್‌, ಔಷಧ, ಮಾಹಿತಿ ತಂತ್ರಜ್ಞಾನ ಕಂಪನಿಗಳ ಷೇರುಗಳು ಕುಸಿತಕ್ಕೀಡಾಯಿತು. ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ 1,000ಕ್ಕೂ ಹೆಚ್ಚು ಅಂಕ ಕುಸಿಯಿತು. ಹೂಡಿಕೆದಾರರ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಷೇರು ಮೌಲ್ಯ ಕರಗಿತು.

ಜಾಗತಿಕ ಷೇರು ಮಾರುಕಟ್ಟೆ ಕುಸಿದಿದ್ದೇಕೆ?

 • ಅಮೆರಿಕ-ಚೀನಾ ಟ್ರೇಡ್‌ ವಾರ್‌ನ ಭೀತಿ
 • ಅಮೆರಿಕದಲ್ಲಿ ಸರಕಾರಿ ಬಾಂಡ್‌ಗಳ ಮಾರಾಟ ಹೆಚ್ಚಳ
 • ಆದಾಯ ಕುಸಿತದ ಭೀತಿಯಲ್ಲಿ ಬಾಂಡ್‌ ಮಾರಾಟ
 • ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ
 • ಅಮೆರಿಕದ ಷೇರು ಪೇಟೆ ಕುಸಿತಕ್ಕೆ ಯುರೋಪ್‌, ಏಷ್ಯಾದಲ್ಲೂ ತಲ್ಲಣ
 • ಇದುವರೆಗೆ ಅಮೆರಿಕ ಸರಕಾರಿ ಬಾಂಡ್‌ಗಳ ಬಗ್ಗೆ ಅಪರಿಮಿತಿ ವಿಶ್ವಾಸ ಹೂಡಿಕೆದಾರರಲ್ಲಿ ಇತ್ತು. ಆದರೆ ಇದೀಗ ಅದೂ ಬಿರುಕು ಬಿಟ್ಟಿದೆ. ಮುಂದೇನು ಎಂಬ ಆತಂಕ ಹೂಡಿಕೆದಾರರಲ್ಲಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸಿದ್ದ ಪರಿಣಾಮ, ಆರ್ಥಿಕತೆ ಪ್ರಗತಿಯತ್ತ ಸಾಗುತ್ತಿದೆ ಎಂಬ ವಿಶ್ವಾಸ ಇತ್ತು.
 • ಆದರೆ ಯಾವಾಗ ಚೀನಾ-ಅಮೆರಿಕ ಟ್ರೇಡ್‌ ವಾರ್‌ ಆರಂಭವಾಯಿತೊ, ಹೂಡಿಕೆದಾರರು ಕಂಗಾಲಾಗಿದ್ದಾರೆ. ಈ ವಾಣಿಜ್ಯ ಸಮರ ಮುಂದುವರಿದರೆ ಜಾಗತಿಕ ಆರ್ಥಿಕ ಹಿಂಜರಿತ ಕುಸಿಯಲಿದೆ ಎಂದು ಐಎಂಎಫ್‌ ಹೇಳಿರುವುದೂ ಆತಂಕ ಮೂಡಿಸಿದೆ.
 • ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸುತ್ತಿರುವುದರಿಂದ ಉದ್ಯಮಿಗಳಿಗೆ ಸಾಲ ದುಬಾರಿಯಾಗಲಿದ್ದು, ಇದು ಆರ್ಥಿಕ ಹಿನ್ನಡೆಗೂ ಕಾರಣವಾಗಬಹುದು ಎಂಬ ಆತಂಕವೂ ಹೂಡಿಕೆದಾರರಲ್ಲಿದೆ.

ಸ್ಟಾಕ್ ಮಾರ್ಕೆಟ್ಸ್

ಸ್ಟಾಕ್ ಎಕ್ಸ್ಚೇಂಜ್ ಒಂದು ಸಂಸ್ಥೆಯಾಗಿದ್ದು, ಇದು ವ್ಯಾಪಾರದ ಷೇರುಗಳಿಗಾಗಿ ವೇದಿಕೆಯನ್ನು ಒದಗಿಸುತ್ತದೆ – ಭೌತಿಕ ಅಥವಾ ವರ್ಚುವಲ್. ·         ಸ್ಟಾಕ್ನ ಮೂಲ, ಮಾರುಕಟ್ಟೆಯು 1494 ರ ವರ್ಷದಲ್ಲಿ, ಆಂಸ್ಟರ್ಡ್ಯಾಮ್ ಸ್ಟಾಕ್ ಎಕ್ಸ್ಚೇಂಜ್ ಅನ್ನು ಮೊದಲು ಸ್ಥಾಪಿಸಲಾಯಿತು.·          ಸ್ಟಾಕ್ ಎಕ್ಸ್ಚೇಂಜ್ನಲ್ಲಿ, ಸ್ಟಾಕ್ ಬ್ರೋಕರ್ಗಳ ಮೂಲಕ ಹೂಡಿಕೆದಾರರು ಷೇರುಗಳನ್ನು ಖರೀದಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಸ್ಟಾಕ್ ಎಕ್ಸ್ಚೇಂಜ್ನ ಪಟ್ಟಿಯನ್ನು ಅಗತ್ಯವಾಗಿ ಪೂರೈಸುವ ಮತ್ತು ನಿರ್ವಹಿಸುವ ಮೂಲಕ ಒಂದು ಅಥವಾ ಹೆಚ್ಚಿನ ವಿನಿಮಯಗಳಲ್ಲಿ ಒಂದು ನಿರ್ದಿಷ್ಟ ಕಂಪನಿ ಪಟ್ಟಿ ಮಾಡಬಹುದು

ಸ್ಟಾಕ್ ಎಕ್ಸ್ಚೇಂಜ್ಗಳ ಪ್ರಾಮುಖ್ಯತೆ

 • ಆರ್ಥಿಕತೆಯ ಪರಿಣಾಮಕಾರಿ ಕೆಲಸ ಮತ್ತು ಸಾಂಸ್ಥಿಕ ಸ್ವರೂಪದ ಸಂಘಟನೆಯ ಸುಗಮ ಕಾರ್ಯಕ್ಕಾಗಿ, ಸ್ಟಾಕ್ ಎಕ್ಸ್ಚೇಂಜ್ ಅತ್ಯಗತ್ಯ ಸಂಸ್ಥೆಯಾಗಿದೆ.
 • ವ್ಯವಹಾರಕ್ಕಾಗಿ ದೀರ್ಘಕಾಲದ ಸಂಪನ್ಮೂಲಗಳನ್ನು ಬೆಳೆಸುವ ದಕ್ಷ ಮಾಧ್ಯಮ
 • ಈಕ್ವಿಟಿ ಸಾಲ ಬಂಡವಾಳದ ವಿತರಣೆಯ ಮೂಲಕ ಸಾರ್ವಜನಿಕರಿಂದ ಉಳಿತಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
 • ವಿದೇಶಿ ಕರೆನ್ಸಿ ಆಕರ್ಷಿಸಲು
 • ಕಂಪನಿಗಳಲ್ಲಿ ವ್ಯಾಯಾಮ ಮತ್ತು ಅವುಗಳನ್ನು ಲಾಭದಾಯಕವಾಗಿಸಿತ್ತದೆ
 • ಉದ್ಯೋಗ ಸೃಷ್ಟಿಗೆ ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆ
 • ಹೂಡಿಕೆದಾರರ ಉಳಿತಾಯಕ್ಕಾಗಿ ಮತ್ತೊಂದು ವಾಹನ

ಭಾರತದಲ್ಲಿ ಸ್ಟಾಕ್ ಎಕ್ಸ್ಚೇಂಜ್ಗಳು

 • 17 ನೇ ಶತಮಾನದ ಆರಂಭದಲ್ಲಿ (1602) VOC ಅಥವಾ ಡಚ್ ಈಸ್ಟ್ ಇಂಡಿಯಾ ಕಂಪನಿಯು ಷೇರುಗಳನ್ನು ಬಿಡುಗಡೆ ಮಾಡಿದ ಮೊದಲ ಕಂಪನಿಯಾಗಿದೆ.
 • ಇಂದು 25 ಮಿಲಿಯನ್ ಷೇರುದಾರರೊಂದಿಗೆ, ಯುಎಸ್ಎ ಮತ್ತು ಜಪಾನ್ ನಂತರ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಹೂಡಿಕೆದಾರರ ಮೂಲವನ್ನು ಹೊಂದಿದೆ.
 • ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಸುಮಾರು 9,000 ಕ್ಕೂ ಹೆಚ್ಚಿನ ಕಂಪನಿಗಳು ಪಟ್ಟಿ ಮಾಡಲ್ಪಟ್ಟಿವೆ, ಅವುಗಳಲ್ಲಿ ಸುಮಾರು 7,500 ಸ್ಟಾಕ್ಬ್ರೋಕರ್ಗಳು ಸೇವೆ ಸಲ್ಲಿಸುತ್ತಿದ್ದಾರೆ.
 • ಅಭಿವೃದ್ಧಿಯ ಮಟ್ಟ, ವ್ಯಾಪಾರದ ಪರಿಮಾಣ ಮತ್ತು ಅದರ ಪ್ರಚಂಡ ಬೆಳವಣಿಗೆಯ ಸಾಮರ್ಥ್ಯದ ಆಧಾರದಲ್ಲಿ ಭಾರತೀಯ ಬಂಡವಾಳ ಮಾರುಕಟ್ಟೆ ಗಮನಾರ್ಹವಾಗಿದೆ.
 • ಸ್ಟಾಕ್ ಎಕ್ಸ್ಚೇಂಜ್ಗಳು ಭದ್ರತೆ ಮತ್ತು ಇತರ ಸೆಕ್ಯುರಿಟಿಗಳ ವ್ಯವಹಾರಗಳಿಗೆ ಸಂಘಟಿತ ಮಾರುಕಟ್ಟೆಯನ್ನು ಒದಗಿಸುತ್ತವೆ.
 • ದೇಶದಲ್ಲಿ 24 ಸ್ಟಾಕ್ ಎಕ್ಸ್ಚೇಂಜ್ಗಳಿವೆ, ಅವುಗಳಲ್ಲಿ 21 ಹಂಚಿಕೆ ಪ್ರದೇಶಗಳೊಂದಿಗೆ ಪ್ರಾದೇಶಿಕ ವಲಯಗಳು

ಬಿಎಸ್ಇ

 • ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ಅಥವಾ ಬಿಎಸ್ಇ) ಭಾರತದಲ್ಲಿನ ಮುಂಬೈ ದಲಾಲ್ ಸ್ಟ್ರೀಟ್ನಲ್ಲಿರುವ ಏಷ್ಯಾದ ಅತ್ಯಂತ ಹಳೆಯ ಸ್ಟಾಕ್ ಎಕ್ಸ್ಹೇಂಜ್ ಆಗಿದೆ. 1875 ರಲ್ಲಿ ಸ್ಥಾಪಿತವಾದ ಇದು 6,000 ಕ್ಕಿಂತಲೂ ಹೆಚ್ಚು ಪಟ್ಟಿಮಾಡಿದ ಭಾರತೀಯ ಕಂಪೆನಿಗಳೊಂದಿಗೆ ಭಾರತದಲ್ಲಿನ ಅತಿ ದೊಡ್ಡ ಭದ್ರತಾ ವಿನಿಮಯವಾಗಿದೆ. 6 ಟ್ರಿಲಿಯನ್ ಡಾಲರ್ (2011) ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ವಿಶ್ವದಲ್ಲೇ ಐದನೇ ದೊಡ್ಡ ವಿನಿಮಯ ಕೇಂದ್ರವಾಗಿದೆ. ಸುಮಾರು 5000 ಕಂಪನಿಗಳು ಬಿಎಸ್ಇ ಪಟ್ಟಿಯಲ್ಲಿವೆ.

ಸೆನ್ಸೆಕ್ಸ್

 • ಸೆನ್ಸೆಕ್ಸ್ ಅಥವಾ ಸೆನ್ಸಿಟಿವ್ ಇಂಡೆಕ್ಸ್ 1978- 1979 = 100 ರೊಂದಿಗೆ 30 ಕಂಪೆನಿಗಳನ್ನು ಒಳಗೊಂಡಿರುವ ಒಂದು ಮೌಲ್ಯ-ತೂಕದ ಸೂಚಿಯಾಗಿದೆ. ಇದು ಮುಂಬೈ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 30 ಬೃಹತ್ ಮತ್ತು ಅತ್ಯಂತ ಸಕ್ರಿಯವಾಗಿ ವ್ಯಾಪಾರದ ನೀಲಿ ಚಿಪ್ ಸ್ಟಾಕ್ಗಳನ್ನು ಒಳಗೊಂಡಿದೆ, ವಿವಿಧ ವಲಯಗಳ ಪ್ರತಿನಿಧಿಯಾಗಿದೆ.

ಗಂಗಾ ಉಳಿಸಿ ಹೋರಾಟಗಾರ

ಸುದ್ಧಿಯಲ್ಲಿ ಏಕಿದೆ ?ಗಂಗಾ ನದಿಯ ಉಳಿವಿಗಾಗಿ ಜೂನ್‌ 22ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ವಾಮಿ ಜ್ಞಾನ ಸ್ವರೂಪ ಸಾನಂದ್‌ ಎಂದೇ ಹೆಸರುವಾಸಿಯಾಗಿದ್ದ ಐಐಟಿ ಮಾಜಿ ಪ್ರಾಧ್ಯಾಪಕ ಜಿ.ಡಿ.ಅಗರ್ವಾಲ್‌ ಮೃತಪಟ್ಟಿದ್ದಾರೆ.

 • ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್‌ ಆಗಿ ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅಗರ್ವಾಲ್‌ ಅಪ್ಪಟ ಪರಿಸರವಾದಿಯಾಗಿ ತಮ್ಮ ಬದುಕನ್ನು ಗಂಗಾ ನದಿಯ ಉಳಿವಿನ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಅಭಿವೃದ್ಧಿಯ ಹೆಸರಿನಲ್ಲಿ ಗಂಗಾ ನದಿ ತೀರದ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ಅಣೆಕಟ್ಟೆ, ಬ್ಯಾರೇಜ್‌, ಸುರಂಗಗಳನ್ನು ನಿರ್ಮಿಸುವುದರಿಂದ ನದಿಯ ಸರಾಗ ಹರಿವಿಗೆ ಧಕ್ಕೆಯಾಗಿ ಪರಿಸರ ಅಸಮತೋಲನ ಸೃಷ್ಟಿಯಾಗುತ್ತದೆ.

ಹಿನ್ನಲೆ

 • ಈ ಕಾಮಗಾರಿಗಳನ್ನು ಕೈಬಿಡುವುದರ ಜತೆಗೆ ಕೈಗಾರಿಕಾ ತ್ಯಾಜ್ಯ ನದಿ ಸೇರುವುದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕೇಂದ್ರ ಹಾಗೂ ಉತ್ತರಾಖಂಡ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಜೂನ್‌ನಿಂದ ನಿರಶನ ನಡೆಸುತ್ತಿದ್ದರು. ಮಾತುಕತೆ ವಿಫಲಗೊಂಡಿದ್ದರಿಂದ ಅ. 9ರಂದು ನೀರು ಕುಡಿಯುವುದನ್ನೂ ನಿಲ್ಲಿಸಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

Related Posts
ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ತನ್ನ ‘ಆಹಾರ ಸುರಕ್ಷತಾ’ ಕಾರ್ಯಕ್ರಮದಡಿಯಲ್ಲಿ ನಕಲಿ ಕೀಟನಾಶಕಗಳ ವಿರುದ್ಧ   ವಿತರಕರು ಹಾಗೂ ಮಾರಾಟಗಾರರಲ್ಲಿ   ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಭಾರತೀಯ ವಾಣಿಜ್ಯೋದ್ಯಮ ಸಂಘಟನೆಗಳ ಮಹಾ ಒಕ್ಕೂಟ (ಫಿಕ್ಕಿ)   ನಡೆಸಿದ ಅಧ್ಯಯನದ ಪ್ರಕಾರ, ದೇಶಿ ಕೃಷಿ ರಂಗದಲ್ಲಿ   ₹ 25 ಸಾವಿರ ...
READ MORE
Karnataka Current Affairs – KAS / KPSC Exams – 27th July 2017
Kukkarahalli lake revival inches closer to reality Ecological conservation and rejuvenation of the Kukkarahalli lake – as against its beautification from tourism point of view – is inching towards reality. The district ...
READ MORE
PSLV-C31 launches IRNSS-1E
PSLV-C31 successfully put into orbit IRNSS-1E, the fifth satellite of the Indian Regional Navigation Satellite System (IRNSS) after its succesful launch from the Satish Dhawan Space Centre (SDSC), SHAR, Sriharikota PSLV-C31 ...
READ MORE
Karnataka gets Lokayukta after a year – Justice P. Vishwanath Shetty
Former High Court judge Justice P Vishwanath Shetty was sworn in as the Karnataka Lokayukta, a year after the post fell vacant following a bribery scandal that had hit the ...
READ MORE
BWSSB – Existing Water Supply System Scenario & Vision Document Up-To 2050
Till the year 1896, unfiltered water was supplied to Bengaluru city in the Kalyani system from a number of tanks such as Dharmambudhi, Sampangi, Ulsoor, Sankey etc., supplemented by local ...
READ MORE
Bengaluru: Waste figures for 2031 inflated
The Revised Master Plan 2031 has apparently laid the foundation for a perennially bigger garbage scam in the future. The Bengaluru Development Authority (BDA) has projected the city’s population to be ...
READ MORE
Karnataka Current Affairs – KAS/KPSC Exams- 26th April 2018
India is one of the fastest growing Fairtrade markets India is touted to be one of the fastest growing markets for Fairtrade. The proof: in 2017-18, eight new brands made a commitment ...
READ MORE
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಬ್ಲಡ್‌ ಮೂನ್‌ ಸುದ್ಧಿಯಲ್ಲಿ ಏಕಿದೆ?ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ. ವಿಶೇಷತೆಯೇನು? ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ...
READ MORE
Rural Development – Rural Water Supply – KAS/KPSC Exams
Introduction The norm for providing potable drinking water is 55 litres per capita per day (LPCD) with a provision of 3 litres for drinking, 5 litres for cooking, 15 litres for ...
READ MORE
Karnataka Current Affairs – KAS / KPSC Exams – 24th June 2017
Forest dept to take up seed ball dispersal in big afforestation drive The Forest department has decided to rope in citizens in a big way in afforestation to take up seed ...
READ MORE
ಆಹಾರ ಸುರಕ್ಷತಾ’ ಕಾರ್ಯಕ್ರಮ
Karnataka Current Affairs – KAS / KPSC Exams
PSLV-C31 launches IRNSS-1E
Karnataka gets Lokayukta after a year – Justice
BWSSB – Existing Water Supply System Scenario &
Bengaluru: Waste figures for 2031 inflated
Karnataka Current Affairs – KAS/KPSC Exams- 26th April
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Rural Development – Rural Water Supply – KAS/KPSC
Karnataka Current Affairs – KAS / KPSC Exams

Leave a Reply

Your email address will not be published. Required fields are marked *