“20th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಕೃಷಿ ಯಂತ್ರಧಾರ ಯೋಜನೆ

 • ಸುದ್ಧಿಯಲ್ಲಿ ಏಕಿದೆ?ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆ ಪುನರಾರಂಭವಾಗುತ್ತಿದ್ದು, ಶೀಘ್ರದಲ್ಲೇ ರೈತರಿಗೆ ಸಹಾಯಧನ ಲಭ್ಯವಾಗಲಿದೆ.

ಹಿನ್ನಲೆ

 • ಕೂಲಿಕಾರ್ಮಿಕರ ಕೊರತೆ ನೀಗಿಸಲು ರಾಜ್ಯ ತೋಟಗಾರಿಕೆ ಇಲಾಖೆಯು ‘ತೋಟಗಾರಿಕೆಯಲ್ಲಿ ಯಾಂತ್ರೀಕರಣ’ ಯೋಜನೆಯನ್ನು ಜಾರಿಗೆ ತಂದಿತ್ತು. ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ)ಯಡಿ ಯಂತ್ರಗಳ ಖರೀದಿಗೆ ಸಹಾಯಧನ ನೀಡಲಾಗುತ್ತಿತ್ತು. ಆದರೆ, ಯೋಜನೆಯನ್ನು ಮತ್ತಷ್ಟು ಲಾಭದಾಯಕಗೊಳಿಸುವ ಉದ್ದೇಶದಿಂದ ಅದರಲ್ಲಿ ಕೆಲವು ಬದಲಾವಣೆಗಳೊಂದಿಗೆ ಕೃಷಿ ಯಂತ್ರಧಾರ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿತು. ಅದರಂತೆ ಈ ವರ್ಷ ಕೇಂದ್ರ ಸರಕಾರ ಆರಂಭಿಕ ಹಂತದಲ್ಲಿ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ.

ಅನುಕೂಲಗಳು

 • ಜಿಲ್ಲಾ ಮಟ್ಟದಲ್ಲಿ ರೈತರಿಗೆ ಸಹಾಯಧನ ಪಡೆಯುವ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೋಟಗಾರಿಕೆ ಇಲಾಖೆ ತೊಡಗಿದೆ. ‘ತೋಟಗಾರಿಕೆಯಲ್ಲಿ ಯಂತ್ರೋಪಕರಣ’ ಬಳಕೆಯಿಂದ ಬೇಸಾಯ ವೆಚ್ಚವನ್ನು ತಗ್ಗಿಸುವುದಲ್ಲದೆ, ಮಾನವನ ದೈಹಿಕ ಶ್ರಮವನ್ನು ಕಡಿಮೆಗೊಳಿಸಿ ಹೆಚ್ಚು ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಇಳುವರಿ ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ.

ಸಹಾಯಧನದ ಪ್ರಮಾಣ ಎಷ್ಟು?:

 • ”ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಉಪಕರಣ ದರದ ಶೇ.40ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಶೇ.60ರಂತೆ ಸಹಾಯಧನ ನೀಡಲಾಗುವುದು.
 • ಕನಿಷ್ಠ 1 ಸಾವಿರ ರೂ.ನಿಂದ ಗರಿಷ್ಠ 25 ಲಕ್ಷ ರೂ.ವರೆಗೆ ನೀಡಲಾಗುವುದು”.

ಯಾವುದಕ್ಕೆ ಸಹಾಯಧನ ಅನ್ವಯ:

 • ತೆಂಗು, ಅಡಕೆ ಸುಲಿಯುವ ಹಾಗೂ ಮೆಣಸು ಬಿಡಿಸುವ , ಕಳೆ ಕೀಳುವ , ಗಿಡ ನೆಡಲು ಗುಂಡಿ ತೋಡುವ , ಮರ ಕತ್ತರಿಸುವ ಹಾಗೂ ಜೋಳ ಸುಲಿಯುವ ಯಂತ್ರಗಳು ಸೇರಿದಂತೆ ಕೃಷಿ-ತೋಟಗಾರಿಕೆ ಕಾರ್ಯಗಳಿಗೆ ಬೇಕಾದ ಯಂತ್ರಗಳನ್ನು ಖರೀದಿಸಲು ಯೋಜನೆಯಡಿ ಸಹಾಯಧನ ಸಿಗಲಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:

 • ಆರ್ಕೆವಿವೈ 2007 ರಲ್ಲಿ ಪ್ರಾರಂಭವಾದ ಒಂದು ವಿಶೇಷ ಹೆಚ್ಚುವರಿ ಕೇಂದ್ರ ನೆರವು ಯೋಜನೆಯಾಗಿದೆ. ಇದು ಕೃಷಿ ವಲಯದಲ್ಲಿ 4% ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.
 • ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸಲು ಯೋಜನೆಯನ್ನು ಯೋಜಿಸಿ ಮತ್ತು ಕಾರ್ಯಗತಗೊಳಿಸಲು ರಾಜ್ಯಕ್ಕೆ ಗಣನೀಯ ಪ್ರಮಾಣದ ನಮ್ಯತೆ ಮತ್ತು ಸ್ವಾಯತ್ತತೆಯನ್ನು ಈ ಯೋಜನೆಯು ಒದಗಿಸಿದೆ.
 • ಕೃಷಿ-ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಜಿಲ್ಲೆಯ ಕೃಷಿ ಯೋಜನೆಗಳು (ಡಿಎಪಿಗಳು) ಮತ್ತು ರಾಜ್ಯ ವ್ಯವಸಾಯ ಯೋಜನೆ (ಎಸ್ಎಪಿ) ತಯಾರಿಕೆಯ ಮೂಲಕ, ಸೂಕ್ತವಾದ ತಂತ್ರಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ, ಸ್ಥಳೀಯ ಅಗತ್ಯತೆಗಳು, ಬೆಳೆ ಮಾದರಿಯನ್ನು, ಆದ್ಯತೆಗಳು ಇತ್ಯಾದಿಗಳನ್ನು ಖಾತ್ರಿಪಡಿಸಿಕೊಳ್ಳಲು ವಿಕಾಸವಾದ ಯೋಜನೆಯನ್ನು ಕೃಷಿಯಲ್ಲಿ ಮತ್ತು ಸಂಬಂಧಪಟ್ಟ ಚಟುವಟಿಕೆಗಳು.
 • ಕೃಷಿ ರಾಜ್ಯ ದೇಶೀಯ ಉತ್ಪನ್ನವನ್ನು ಹೆಚ್ಚಿಸುವಲ್ಲಿ ಈ ಯೋಜನೆಯು ಯಶಸ್ವಿಯಾಗಿದೆ.

ಯಾಂತ್ರಾಧಾರ – ಕಸ್ಟಮ್ ಬಾಡಿಗೆ ಸೇವೆ ಕೇಂದ್ರಗಳು

 • ಕೃಷಿ ಯಂತ್ರೋಪಕರಣ ಖರೀದಿ ಮಾಡಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರೂ ಕೈಗೆಟುಕುವ ಬಾಡಿಗೆ ದರದಲ್ಲಿ ಯಾಂತ್ರಿಕ ಕೃಷಿ ಕೈಗೊಳ್ಳಬಹುದು. ಕೂಲಿಯಾಳುಗಳ ಕೊರತೆ ನೀಗಿಸಿಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಬೇಸಾಯ ಕೈಗೊಂಡು ಹೆಚ್ಚು ಉತ್ಪಾದನೆ ಪಡೆಯಬಹುದು.
 • ಇದು ಸಾಧ್ಯವಾದದ್ದು ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ಪೂರೈಸುವ ಕೃಷಿ ಯಂತ್ರಧಾರೆ ಕೇಂದ್ರಗಳಿಂದ.
 • ರೈತರು ಹೆಚ್ಚೆಚ್ಚು ಕೃಷಿಯಲ್ಲಿ ತೊಡಗುವಂತೆ ಮಾಡುವುದು, ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ ನೀಡುವುದು ಕೃಷಿಯಂತ್ರ ಧಾರೆ ಕೇಂದ್ರಗಳ ಉದ್ದೇಶ.

ಎಲ್ಲೆಲ್ಲಿವೆ ಕೃಷಿ ಯಂತ್ರಧಾರೆ ಕೇಂದ್ರಗಳು?

 • ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ಕೃಷಿ ಯಂತ್ರಧಾರೆಕೇಂದ್ರಗಳು ಕಾರಾರಯರಂಭವಾದದ್ದು 2014-15ರಿಂದ. ರಾಜ್ಯ ಕೃಷಿ ಇಲಾಖೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಇವುಗಳನ್ನು ನಡೆಸುತ್ತಿದೆ. ಸದ್ಯ ರಾಜ್ಯದ 490 ಹೋಬಳಿ ಸ್ಥಳಗಳಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
 • ಆಯಾ ಜಿಲ್ಲೆ, ತಾಲೂಕಿನಲ್ಲಿರುವ ಬೆಳೆಗಳ ಬಗ್ಗೆ ಅಧ್ಯಯನ ನಡೆಸಿ ಅಲ್ಲಿನ ರೈತರಿಗೆ ಬೇಕಾಗುವ ಯಂತ್ರೋಪಕರಣಗಳನ್ನು ದೊರೆಯುವಂತೆ ಮಾಡಿರುವುದು ‘ಕೃಷಿ ಯಂತ್ರಧಾರೆ’ ವಿಶೇಷ.

ಯಾವೆಲ್ಲ ಯಂತ್ರೋಪಕರಣಗಳು ಲಭ್ಯ?

 • ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ಎಂ.ಬಿ.ನೇಗಿಲು, ರೋಟಾವೇಟರ್, ಡಿಸ್ಕ್ ನೇಗಿಲು, ಡಿಸ್ಕ್ ಹ್ಯಾರೋ, ನೇಗಿಲು, ಕಬ್ಬಿನ ಸ್ಟಬಲ್ ಶೇವರ್ ಮತ್ತು ನೇಗಿಲು, ಲೆವೆಲ್ಲರ್ ಬ್ಲೇಡ್, ಕೇಜ್ ವೀಲ್, ಬ್ಲೇಡ್ ಕುಂಟೆ, ಲೇಸರ್ ಆಧಾರಿತ ಸಮತಟ್ಟು ಯಂತ್ರ, ಗುಂಡಿ ತೆಗೆಯುವ ಯಂತ್ರ, ಬದು ನಿರ್ಮಾಣ ಯಂತ್ರ, ಭತ್ತ ನಾಟಿ ಯಂತ್ರ, ಬದು ಮತ್ತು ಸಾಲು ತೆಗೆಯುವ ಯಂತ್ರ, ಬಿತ್ತನೆ ಮತ್ತು ರಸಗೊಬ್ಬರ ಕೂರಿಗೆ ಯಂತ್ರ, ಶೂನ್ಯ ಬೇಸಾಯ ಕೂರಿಗೆ, ನರ್ಸರಿ ಟ್ರೇ, ಕಳೆ ತೆಗೆಯುವ ಯಂತ್ರ, ಹೊದಿಕೆ ಯಂತ್ರ, ಸಿಂಪರಣಾ ಯಂತ್ರಗಳು (ನ್ಯಾಪ್ ಸ್ಯಾಕ್, ಬ್ಯಾಟರಿ ಚಾಲಿತ, ವಿದ್ಯುತ್ ಚಾಲಿತ, ಗಟಾರ್, ಹೆಚ್ಟಿಪಿ), ಬಹು ಬೆಳೆ ಒಕ್ಕಣೆ ಯಂತ್ರ, ತೂರುವ ಯಂತ್ರ, ನೆಲಗಡಲೆ ಸುಲಿಯುವ/ಒಕ್ಕಣೆ ಯಂತ್ರ, ಕಬ್ಬು ಸ್ಟ್ರೀಪ್ಪರ್, ಅಡಿಕೆ ಸುಲಿಯುವ ಯಂತ್ರ, ಕಟಾವು ಯಂತ್ರ, ಬಹುಬೆಳೆ ಕಟಾವು ಯಂತ್ರ, ಕಾಳು ಮೆಣಸು ಬಿಡಿಸುವ ಯಂತ್ರ, ತೆಂಗಿನ ಕಾಯಿ ಸುಲಿಯುವ ಯಂತ್ರ, ಹತ್ತಿ ಹೆಕ್ಕುವ ಯಂತ್ರ, ಬೈಲರ್, ರಾಗಿ ಶುದ್ಧೀಕರಿಸುವ ಯಂತ್ರ, ಕಬ್ಬು ತುಂಡರಿಸುವ ಯಂತ್ರ, ಕಬ್ಬಿನ ರಸ ತೆಗೆಯುವ ಯಂತ್ರ, ಪಂಪ್ ಸೆಟ್, ನೀರಿನ ಟ್ಯಾಂಕರ್, ಅಲ್ಯುಮಿನಿಯಂ, ಪೈಪುಗಳು, ಸ್ಟ್ರಿಂಕ್ಲರ್ಗಳು, ತಳ್ಳು ಗಾಡಿ, ಅಡಿಕೆ/ ತೆಂಗಿನ ಮರ ಹತ್ತುವ ಯಂತ್ರ, ಅಲ್ಯುಮಿನಿಯಂ ಏಣಿ, ಟ್ರಾಲಿಗಳು, ಗರಗಸ ಹೀಗೆ 44 ಬಗೆಯ ಯಂತ್ರ/ ಉಪಕರಣಗಳು ಲಭ್ಯ. ಆಯಾ ಭಾಗದ ಕೃಷಿ ಅವಶ್ಯಕತೆಗೆ ಅನುಗುಣವಾಗಿ ಉಪಕರಣಗಳು ಕೇಂದ್ರದಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ.

ಬಾಡಿಗೆಗೆ ಪಡೆಯುವುದು ಹೇಗೆ?

 • ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕಾದಲ್ಲಿ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಹೋಗಿ ಬೇಕಾದ ಯಂತ್ರವನ್ನು ಮುಂಗಡ ಹಣ ಪಾವತಿಸಿ ಕಾದಿರಿಸಬಹುದು. ಏಕಕಾಲದಲ್ಲಿ ಅಲ್ಲಿನ ಎಲ್ಲಾ ರೈತರಿಗೆ ಒಂದೇ ಬಗೆಯ ಯಂತ್ರಗಳು ಬೇಕಾಗುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಯಂತ್ರಗಳ ಲಭ್ಯತೆಯನ್ನು ನೋಡಿಕೊಂಡು ಬೇಕಾದ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ಯವಿದೆ. ಯಂತ್ರೋಪಕರಣ ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಪ್ರಕಟಿಸಲಾಗಿರುತ್ತದೆ. ಇತರ ಕಡೆಗಳಲ್ಲಿ ದೊರೆಯುವ ಯಂತ್ರಗಳಿಗೆ ಹೋಲಿಸಿದರೆ ಇಲ್ಲಿ ಬಾಡಿಗೆ ಕಡಿಮೆ.

ಉಪಯೋಗ ಹೇಗೆ?

 • ಬಾಡಿಗೆ ಕೇಂದ್ರದಿಂದ ಯಂತ್ರ ಕಳಿಸಿಕೊಡುವಾಗ ಜತೆಗೆ ನುರಿತ ಸಿಬ್ಬಂದಿಯೂ ಬಂದಿರುತ್ತಾರೆ. ಗದ್ದೆ, ತೋಟಕ್ಕೆ ಯಂತ್ರ ಕೆಲಸಕ್ಕೆ ಇಳಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಸಮಯದ ಲೆಕ್ಕಚಾರವನ್ನು ಆ ಯಂತ್ರವನ್ನು ಚಾಲನೆ ಅಥವಾ ಬಳಸುವವರೇ ನೋಡಿಕೊಳ್ಳುತ್ತಾರೆ. ಪ್ರತ್ಯೇಕವಾಗಿ ಚಾಲಕನಿಗೆ ಸಂಬಳ ನೀಡಬೇಕಾದ ಅಗತ್ಯಲ್ಲ. ಕೆಲವೊಂದು ಚಾಲಕ ರಹಿತ ಯಂತ್ರಗಳನ್ನು ನೇರವಾಗಿ ರೈತರಿಗೆ ನೀಡಲಾಗುತ್ತದೆ. ಬಳಕೆ ಮಾಡಿದ ನಂತರ ಕೇಂದ್ರಕ್ಕೆ ಹಿಂದಿರುಗಿಸುವ ಜವಾಬ್ದಾರಿ ರೈತ ಗ್ರಾಹಕರದ್ದು.
 • ನಿಯಮಗಳು: ಯಂತ್ರಗಳನ್ನು ನೋಂದಾಯಿಸಿದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು.ದುರುಪಯೋಗಪಡಿಸಿಕೊಂಡರೆ ಸಮಿತಿಯ ನಿರ್ಧಾರದಂತೆ ರೈತರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು, ತಕರಾರು/ಸರಕಾರಿ ಸ್ಥಳದಲ್ಲಿ ಯಂತ್ರಗಳನ್ನು ಬಳಕೆ ಮಾಡುವಂತಿಲ್ಲ. ಅನುಮತಿ ಇಲ್ಲದೇ ಯಂತ್ರವನ್ನು ಇತರರಿಗೆ ವರ್ಗಾಯಿಸುವಂತಿಲ್ಲ.

ಏಷ್ಯನ್ ಗೇಮ್ಸ್‌

 • ಸುದ್ಧಿಯಲ್ಲಿ ಏಕಿದೆ?ಇಂಡೋನೇಷ್ಯಾದ ಪಾಲೆಂಬಾಗ್‌ನಲ್ಲಿ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಪ್ರತಿಷ್ಠಿತ ಏಷ್ಯನ್ ಕ್ರೀಡಾಕೂಟ ಆರಂಭಗೊಂಡಿದೆ.
 • ಭಾರತದ 569 ಆಟಗಾರರು ದೇಶದ ಧ್ವಜ ಹಿಡುದು ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಮೂಲಕ ಅಲ್ಲಿ ನೆರೆದವರ ಗಮನ ಸೆಳೆದರು.
 • ಜಾವಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಅವರು ಈ ತಂಡದ ನಾಯಕತ್ವ ವಹಿಸಿದ್ದರು.

ಏಷ್ಯನ್ ಗೇಮ್ಸ್ ಬಗ್ಗೆ

 • ಏಷ್ಯನ್ ಗೇಮ್ಸ್ ಕೂಡ ಏಶಿಯಾಡ್ ಎಂದು ಕರೆಯಲ್ಪಡುತ್ತದೆ, ಇದು ಏಷ್ಯಾದ ಎಲ್ಲಾ ಕ್ರೀಡಾಪಟುಗಳ ಪೈಕಿ ಒಂದು ಪ್ಯಾಂಕೊಂಟಿನೆಂಟಲ್ ಮಲ್ಟಿ-ಸ್ಪೋರ್ಟ್ ಈವೆಂಟ್ (44 ಕ್ರೀಡಾಕೂಟಗಳು).
 • ಇದು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು 1982 ರಿಂದ OCA ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಆಯೋಜಿಸಲಾಗಿದೆ.
 • ಇದನ್ನು ಮೊದಲ ಬಾರಿಗೆ 1951 ರಲ್ಲಿ ಇಂಡಿಯಾ ನವದೆಹಲಿಯಲ್ಲಿ ಏಷ್ಯನ್ ಗೇಮ್ಸ್ ಫೆಡರೇಶನ್ (ಎಜಿಎಫ್) ನೇತೃತ್ವದಲ್ಲಿ ಆಯೋಜಿಸಲಾಯಿತು. OCA ಗೆ ಸೇರಿದ 46 ಸದಸ್ಯ ರಾಷ್ಟ್ರಗಳು ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಇದನ್ನು ಒಲಂಪಿಕ್ ಕ್ರೀಡಾಕೂಟದ ನಂತರ ಹೆಚ್ಚಾಗಿ ಎರಡನೇ ದೊಡ್ಡ ಬಹು ಕ್ರೀಡಾ ಪಂದ್ಯವೆಂದು ವರ್ಣಿಸಲಾಗುತ್ತದೆ.
 • ಇಂಚೆಯಾನ್, ದಕ್ಷಿಣ ಕೊರಿಯಾದ ನಗರವು ಕಳೆದ ಏಶಿಯನ್ ಕ್ರೀಡಾಕೂಟಗಳನ್ನು 2014 ರಲ್ಲಿ ಆಯೋಜಿಸಿತ್ತು.

ಇಸ್ರೊದ ಐದು ಉಪಗ್ರಹಗಳು

 • ಸುದ್ಧಿಯಲ್ಲಿ ಏಕಿದೆ?ಪ್ರವಾಹಪೀಡಿತ ಕೇರಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಇಸ್ರೊದ ಐದು ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತಿವೆ.
 • ಪ್ರವಾಹ ಸ್ಥಿತಿ ಗತಿಯ ನಿಗಾ ವಹಿಸುವ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಉಪಗ್ರಹಗಳು ನೆರವಾಗುತ್ತಿವೆ. ಒಶನ್‌ಸ್ಯಾಟ್‌-2, ರಿಸೋರ್ಸ್‌ ಸ್ಯಾಟ್‌-2, ಕಾರ್ಟೊ ಸ್ಯಾಟ್‌-2, ಕಾರ್ಟೊ ಸ್ಯಾಟ್‌-2, ಇನ್‌ ಸ್ಯಾಟ್‌ 3 ಡಿಆರ್‌ ಉಪಗ್ರಹಗಳು ಸೂಕ್ತ ಸಮಯದಲ್ಲಿ ವಾಸ್ತವಿಕ ಸ್ಥಿತಿಗತಿಗಳ ಚಿತ್ರಗಳನ್ನು ತೆಗೆದು ಕಳಿಸುತ್ತವೆ.
 • ಈ ಚಿತ್ರ ಸಹಿತ ಮಾಹಿತಿಗಳನ್ನು ಆಧರಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ಲಾನ್‌ಗಳನ್ನು ರೂಪಿಸಲಾಗುತ್ತದೆ.
 • ಈ ಉಪಗ್ರಹಗಳು ನೀಡುವ ಡೇಟಾ ಆಧರಿಸಿ ಪ್ರವಾಹಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ , ಮಳೆಯ ಬಳಿಕ ಮುಳುಗಡೆಯಾಗಬಹುದಾದ ಪ್ರದೇಶಗಳು ಮತ್ತು ಹವಾಮಾನದ ವಿವರಗಳನ್ನು ಪ್ರಕಟಿಸುತ್ತೇವೆ.
 • ಉಪಗ್ರಹಗಳು ನೀಡುವ ಡೇಟಾ ಹೈದರಾಬಾದ್‌ನಲ್ಲಿರುವ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ನ ಡಿಸಿಷನ್‌ ಸಪೋರ್ಟ್‌ ಸೆಂಟರ್‌ನಲ್ಲಿ ಸಂಗ್ರಹಗೊಂಡಿರುತ್ತದೆ. ಅದನ್ನು ನಿಯತವಾಗಿ ಇಸ್ರೊ ಕೇಂದ್ರ ಮತ್ತು ರಾಜ್ಯದ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ಸಪೋರ್ಟ್‌ ಪ್ರೋಗ್ರಾಂನಲ್ಲಿ ಪ್ರಸಾರ ಮಾಡಲಾಗುತ್ತದೆ.
 • ಇನ್‌ಸ್ಯಾಟ್‌-3ಡಿಆರ್‌ ಹವಾಮಾನಕ್ಕೆ ಸಂಬಂಧಿಸಿದಂತೆ ಸುಧಾರಿತ ಉಪಗ್ರಹವಾಗಿದ್ದು, ಇಮೇಜಿಂಗ್‌ ಸಿಸ್ಟಂ ಮತ್ತು ಅಟೊಮ್ಸ್‌ಪೆರಿಕ್‌ ಸೌಂಡರ್‌ , ಟೆಂಪರೇಚರ್‌, ಹವಾಮಾನದ ಆರ್ದ್ರತೆ ಕುರಿತಂತೆ ಮಾಹಿತಿ ಒದಗಿಸುತ್ತದೆ.
 • ಕಾರ್ಟೊ ಸ್ಯಾಟ್‌ ಮತ್ತು ರಿಸೋರ್ಸ್‌ ಸ್ಯಾಟ್‌ ಬಹಳಷ್ಟು ಸ್ಪಷ್ಟವಾಗಿ ಪೋಟೊಗಳನ್ನು ತೆಗೆಯಬಲ್ಲ ಸಾಮರ್ಥ್ಯದ ಕ್ಯಾಮೆರಾಗಳನ್ನು ಒಳಗೊಂಡಿವೆ. ಪ್ರವಾಹಪೀಡಿತ ಪ್ರದೇಶಗಳ ಮ್ಯಾಪ್‌ ಮಾಡುವ ಜತೆಗೆ ಮುಂಚೆಯೇ ಪ್ರವಾಹದ ಮಾಹಿತಿ ಒದಗಿಸುತ್ತದೆ.
 • ಕಾರ್ಟೊ ಸ್ಯಾಟ್‌2 ಮತ್ತು ಕಾರ್ಟೊ ಸ್ಯಾಟ್‌ 2ಎ 45 ಡಿಗ್ರಿ ಕೋನದಲ್ಲಿ ನಿರ್ದಿಷ್ಟ ಪ್ರದೇಶದ ಪೋಟೊಗಳನ್ನು ಸತತವಾಗಿ ಕಳಿಸುತ್ತಿರುತ್ತದೆ.
 • ಉಪಗ್ರಹಗಳು ಸಮುದ್ರದಲ್ಲಿ ಆಗುತ್ತಿರುವ ಬದಲವಾಣೆಗಳ ಬಗ್ಗೆ ನಿಗಾ ವಹಿಸಿ ಪಶ್ಚಿಮ ಕರಾವಳಿಯಲ್ಲಿ ಆಗುವ ಬದಲಾವಣೆಗಳನ್ನು ದಾಖಲಿಸುತ್ತವೆ. ಬೃಹತ್‌ ಅಲೆಗಳ ಮಾಹಿತಿಯು ಮೊದಲೇ ದೊರೆಯುವ ಕಾರಣ ಮೂರು ದಿನಗಳ ಮುಂಚೆಯೇ ಈ ಬಗ್ಗೆ ಎಚ್ಚರಿಕೆ ಪ್ರಕಟಿಸಲು ಸಾಧ್ಯವಾಗುತ್ತದೆ. ಅದರಲ್ಲಿ ಅಲೆಗಳ ಅಬ್ಬರದ ಸಮಯ, ದಿಕ್ಕು, ಅವಧಿ, ಎತ್ತರ ಸೇರಿದಂತೆ ಎಲ್ಲ ಮಾಹಿತಿಗಳು ಸಿಗುತ್ತವೆ.

ಆಧಾರ್ ಮುಖ ದೃಢೀಕರಣ ಸೌಲಭ್ಯ

 • ಸುದ್ಧಿಯಲ್ಲಿ ಏಕಿದೆ?ಕಳೆದ ಕೆಲ ಕಾಲದಿಂದ ಮುಂದೂಡುತ್ತಾ ಬಂದಿದ್ದ ಆಧಾರ್ ಮುಖ ದೃಢೀಕರಣ (face authentication) ಸೌಲಭ್ಯವನ್ನು ಕೊನೆಗೂ ಮುಂದಿನ ತಿಂಗಳಿಂದ ಜಾರಿಗೆ ತರಲು ಭಾರತ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ನಿರ್ಧರಿಸಿದೆ.
 • ಸೆಪ್ಟೆಂಬರ್ 15ರಿಂದ ಹಂತಹಂತವಾಗಿ ಜಾರಿಗೆ ತರಲಾಗುತ್ತದೆ ಎಂದು ಯುಐಡಿಎಐ ತಿಳಿಸಿದೆ.
 • ಮೊದಲು ಟೆಲಿಕಾಂ ಸರ್ವೀಸ್ ಪ್ರೊವೈಡರ್‌ಗಳ ಜತೆಗೆ ಈ ಸೌಲಭ್ಯವನ್ನು ಪ್ರಾರಂಭಿಸುವುದಾಗಿ ಹೇಳಿದೆ. ಆಧಾರ್‌ಗಾಗಿ ಸದ್ಯಕ್ಕೆ ಕಣ್ಣಿನ ಪಾಪೆ (ಐರಿಸ್), ಬೆರಳು ಮುದ್ರೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಖ ದೃಢೀಕರಣ ಸಹ ಸೇರಿಸಬೇಕೆಂದು ಕಳೆದ ವರ್ಷ ಯುಐಡಿಎಐ ನಿರ್ಧರಿಸಿದ್ದು ಮೊದಲು ಜುಲೈ 1ರಿಂದ ಈ ಸೌಲಭ್ಯ ಜಾರಿಗೊಳಿಸಲು ಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಆಗಸ್ಟ್ 1ಕ್ಕೆ ಮುಂದೂಡಲಾಗಿತ್ತು.

ಕಾರಣಗಳು 

 • ಫಿಂಗರ್ ಪ್ರಿಂಟ್‌ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳ ಜತೆಗೆ ಮೋಸ ಮಾಡುವ ಸಾಧ್ಯತೆಗಳೂ ಇರುವ ಕಾರಣ ಯುಐಡಿಎಐ ಈ ಹೊಸ ಸೌಲಭ್ಯವನ್ನು ಜಾರಿಗೆ ತರುತ್ತಿದೆ. ಫಿಂಗರ್ ಪ್ರಿಂಟ್, ಐರಿಸ್‌ಗಳ ಜತೆಗೆ ಆಧಾರನ್ನು ದೃಢೀಕರಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಈ ಮುಖ ದೃಢೀಕರಣ ಸೌಲಭ್ಯ ಬಳಸಿಕೊಳ್ಳಬಹುದು.
 • ಸಿಮ್ ಖರೀದಿ ವೇಳೆ ನಡೆಯುವ ಹಲವು ಅಕ್ರಮಗಳಿಗೆ ಇದರಿಂದ ಕಡಿವಾಣ ಹಾಕಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಹೈದರಾಬಾದ್​ನಲ್ಲಿ ವ್ಯಕ್ತಿಯೊಬ್ಬ ಒಂದೇ ಆಧಾರ್ ಕಾರ್ಡ್ ಮೂಲಕ ಅಕ್ರಮವಾಗಿ ಸಾವಿರಾರು ಮೊಬೈಲ್ ಸಿಮ್ಳನ್ನು ಆಕ್ಟಿವ್​ಗೊಳಿಸಿದ್ದ. ಈ ಪ್ರಕರಣ ಬಳಿಕ ಎಚ್ಚೆತ್ತುಕೊಂಡ ಆಧಾರ್ ಪ್ರಾಧಿಕಾರ ಹೊಸ ಕ್ರಮ ಅಳವಡಿಕೆಗೆ ಮುಂದಾಗಿತ್ತು.

ಕೋಫಿ ಅನ್ನಾನ್‌ ನಿಧನ

 • ಸುದ್ಧಿಯಲ್ಲಿ ಏಕಿದೆ?ನೋಬೆಲ್‌ ಪ್ರಶಸ್ತಿ ವಿಜೇತ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
 • ಕೋಫಿ ಅನ್ನಾನ್‌ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸ್ಸ್ವಿಟ್ಝರ್‌ಲ್ಯಾಂಡ್‌ನ‌ ಜೆನವಾದಲ್ಲಿನ ಕೋಫಿ ಅನ್ನಾನ್‌ ಕೊನೆಯುಸಿರೆಳೆದಿದ್ದಾರೆ.
 • ವಿಶ್ವಸಂಸ್ಥೆಯ ಮೊದಲ ಕಪ್ಪು ಪ್ರಧಾನ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರಿಗೆ 2001ರಲ್ಲಿ ನೋಬೆಲ್‌ ಪ್ರಶಸ್ತಿ ಸಿಕ್ಕಿತ್ತು.
 • 1938ರ ಏಪ್ರಿಲ್‌ 8ರಂದು ಜನಿಸಿ ಅನ್ನಾನ್‌, ಸಿರಿಯಾ ಬಿಕ್ಕಟ್ಟು ಸೇರಿದಂತೆ ಅನೇಕ ಜಾಗತಿಕ ವಿದ್ಯಮಾನಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿಯಾಗಿದ್ದರು. ಯುಎನ್‌ ಎಕಾನಾಮಿಕ್‌ ಕಮಿಷನ್‌ ಫಾರ್‌ ಆಫ್ರಿಕಾ, ಜೆನವಾ ನಿರಾಶ್ರಿತರ ಕಚೇರಿ ಹೈ ಕಮಿಷನರ್‌ ಆಗಿಯೂ ಅವರು ಕೆಲಸ ಮಾಡಿದ್ದರು.
 • ಜಾಗತಿಕ ಮಟ್ಟದಲ್ಲಿ ಏಡ್ಸ್‌ ವಿರುದ್ಧ ಹೋರಾಡಲು ವಿಶ್ವ ಏಡ್ಸ್‌ ನಿಧಿ, ಯುಎನ್‌ನಿಂದ ಮೊತ್ತ ಮೊದಲ ಬಾರಿ ಭಯೋತ್ಪಾದನೆ ನಿಗ್ರಹಕ್ಕೆ ಯೋಜನೆ, ಕ್ಷಯ ಹಾಗೂ ಮಲೇರಿಯಾ ರೋಗ ತಡೆಗೆ ಯೋಜನೆಗಳನ್ನು ರೂಪಿಸಿದ್ದರು.
 • 2006ರಲ್ಲಿ ಇಸ್ರೇಲ್‌ ಹಾಗೂ ಹೆಜ್‌ಬೊಲ್ಲ ಸುರಕ್ಷತೆಗೆ ಕೋಫಿ ಅನ್ನಾನ್‌ ಮಧ್ಯಸ್ಥಿಕೆ ವಹಿಸಿದ್ದರು. ಅಂತೆಯೇ ಕ್ಯಾಮ್‌ರೂನ್‌ ಹಾಗೂ ನೈಜೀರಿಯಾ ನಡುವೆ ಬಕಾಸಿ ಪೆನಿನ್ಸುಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಅವರ ಕೊನೆಯ ಕಾರ್ಯ ಇದಾಗಿತ್ತು.

ಹೆಲಿನಾ ಕ್ಷಿಪಣಿ

 • ಸುದ್ಧಿಯಲ್ಲಿ ಏಕಿದೆ? ಭಾರತದಲ್ಲೇ ಅಭಿವೃದ್ಧಿ ಪಡಿಸಲಾಗಿರುವ ಹೆಲಿಕ್ಯಾಪ್ಟರ್​ನಿಂದ ಉಡಾಯಿಸಬಹುದಾದ ಆ್ಯಂಟಿ ಟ್ಯಾಂಕ್​ ಗೈಡೆಡ್​ ‘ಹೆಲಿನಾ’ ಕ್ಷಿಪಣಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಪರೀಕ್ಷಿಸಿದೆ.
 • ರಾಜಸ್ಥಾನದ ಪೋಖ್ರಾನ್​ನಲ್ಲಿ ಭಾರತೀಯ ಸೇನೆ ಪರೀಕ್ಷೆ ನಡೆಸಿದೆ. ಕ್ಷಿಪಣಿ ನಿಖರವಾಗಿ ಗುರಿಯನ್ನು ತಲುಪಿದೆ. ಈ ಕ್ಷಿಪಣಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇದು ವಿಶ್ವದ ಅತ್ಯಾಧುನಿಕ ಆ್ಯಂಟಿ ಟ್ಯಾಂಕ್​ ಗೈಡೆಡ್​ ಕ್ಷಿಪಣಿಗಳಲ್ಲಿ ಒಂದಾಗಿದೆ.
 • ನಾಗ್​ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಹೆಲಿನಾ ಕ್ಷಿಪಣಿಯನ್ನು ನಿರ್ಮಿಸಲಾಗಿದೆ. ಈ ಕ್ಷಿಪಣಿ 7-8 ಕಿ.ಮೀ. ದೂರದ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯ ಹೊಂದಿದ್ದು, ಎಚ್​ಎಎಲ್​ ನಿರ್ಮಿತ ಧ್ರುವ ಹೆಲಿಕ್ಯಾಪ್ಟರ್​ ಮೂಲಕ ಉಡಾಯಿಸಬಹುದಾಗಿದೆ

ಗಂಗೆಯಲ್ಲಿ ಅಲಕನಂದಾ

 • ಸುದ್ಧಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಇದೇ ಮೊದಲ ಬಾರಿಗೆ ಗಂಗೆಯಲ್ಲಿ ಐಷಾರಾಮಿ ಕ್ರೂಸ್ ಸಂಚಾರ ಸೇವೆ ಸ್ವಾತಂತ್ರ್ಯದಿನದಂದು ಆರಂಭವಾಗಿದೆ.
 • 2 ಮಹಡಿಯ ಆಸನ ವ್ಯವಸ್ಥೆ ಹೊಂದಿದೆ ಈ ಡಬ್ಬಲ್ ಡೆಕ್ಕರ್ ಕ್ರೂಸ್.
 • ‘ಚತುರ್ಯುಗ ನಗರ’ ಎಂಬ ಖ್ಯಾತಿಯ ಕಾಶಿಯಲ್ಲಿ ಹರಿಯುವ ಗಂಗಾ ನದಿಯಲ್ಲಿ ಚಲಿಸುವ ಕ್ರೂಸ್​ಗೆ ‘ಅಲಕನಂದಾ’ ಎಂದು ಹೆಸರಿಡಲಾಗಿದೆ. 90 ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯದ ಅಲಕನಂದಾ ಕ್ರೂಸನ್ನು ಕೋಲ್ಕತ ಮೂಲದ ನಾರ್ಡಿಕ್ ಕ್ರೂಸ್​ಲೈನ್ ಕಂಪನಿ ನಿರ್ಮಾಣ ಮಾಡಿದೆ.

ಉದ್ದೇಶವೇನು?

 • ನಾಲ್ಕು ಯುಗಗಳ ಇತಿಹಾಸವುಳ್ಳ ನಗರ ‘ವಾರಾಣಸಿ’ಯ ಧಾರ್ವಿುಕ, ಸಾಮಾಜಿಕ, ಪಾರಂಪರಿಕ ಮಹತ್ವ ಸಾರುವುದು. ಗಂಗಾ ತೀರದಲ್ಲಿನ ಪ್ರಸಿದ್ಧ ‘ಘಾಟ್’ಗಳನ್ನು ನೋಡುವುದು ಹಾಗೂ ಅದರ ಬಳಕೆ ಬಗ್ಗೆ ಪರಿಚಯ.

ಹೈಟೆಕ್ ಅಲಕಾ!

 • ಹವಾ ನಿಯಂತ್ರಣ ವ್ಯವಸ್ತೆ
 • ವೈಫೈ ವ್ಯವಸ್ಥೆ
 • ಸಸ್ಯಾಹಾರ ಮತ್ತು ಆಯ್ದ ಮಾಂಸಾಹಾರ ಖಾದ್ಯಗಳು
 • ವಿಡಿಯೋ, ಧ್ವನಿವರ್ಧಕ ವ್ಯವಸ್ಥೆ (ಪಾರ್ಟಿ, ಕಂಪನಿ ಸಮಾರಂಭಗಳ ಅನುಕೂಲಕ್ಕಾಗಿ)
 • ಬಯೋ ಟಾಯ್ಲೆಟ್ (ಗಂಗಾ ಮಾಲಿನ್ಯ ತಡೆಗೆ)
 • ಲೈಫ್​ಗಾರ್ಡ್​ಗಳು , ಲೈಫ್ ಜಾಕೆಟ್​ಗಳು (ಪ್ರಯಾಣಿಕರ ಸುರಕ್ಷತೆಗೆ)
 • ಸಂಜೆ ವೇಳೆ ವಿಶೇಷ ಪ್ರಯಾಣ (ಗಂಗಾ ಆರತಿ ವೀಕ್ಷಣೆಗೆ)

ನಮೋ ಸ್ಟಾರ್ಟಪ್ ಇಂಡಿಯಾ ನನಸು

 • ಕೋಲ್ಕತದಲ್ಲಿ ನಿರ್ವಿುತವಾದ ಕ್ರೂಸ್, 1400 ಕಿ.ಮೀ. ಸಮುದ್ರ ಮಾರ್ಗವಾಗಿ ಸಂಚರಿಸಿ ಬಳಿಕ ಕ್ರೇನ್ ಸಹಾಯದಿಂದ ವಾರಾಣಸಿಗೆ ತರಲಾಗಿದೆ. ಪ್ರಧಾನಿ ಮೋದಿ ಸ್ಟಾರ್ಟಪ್ ಯೋಜನೆ ಅನ್ವಯ ನೀಡಿದ ಪ್ರೇರಣೆಯಿಂದ ಕ್ರೂಸ್ ನಿರ್ವಣಕ್ಕೆ ಅನುಕೂಲವಾಯಿತು ಎಂದು ನಿರ್ಮಾಣ ಕಂಪನಿ ಹೇಳಿದೆ.
Related Posts
National Current Affairs – UPSC/KAS Exams- 8th December 2018
Brihadisvara temple Topic: Art and Culture IN NEWS: The Madurai bench of the Madras High Court has ordered an interim stay on a two-day event which was organised by a private body ...
READ MORE
14th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಎಲ್‌ಒಯು’ ನೀಡಿಕೆಗೆ ಆರ್‌ಬಿಐ ನಿರ್ಬಂಧ ಆಮದು ವಹಿವಾಟಿಗೆ ನೀಡಲಾಗುವ ಸಾಲಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ವಿತರಿಸುತ್ತಿದ್ದ ಸಾಲ ಮರುಪಾವತಿ ಖಾತರಿ ಪತ್ರಗಳಿಗೆ (ಎಲ್‌ಒಯು) ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಷೇಧ ವಿಧಿಸಿದೆ. ‘ಎಲ್‌ಒಯು’ಗಳ ದುರ್ಬಳಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ. ವಜ್ರಾಭರಣ ...
READ MORE
Karnataka Current Affairs – KAS/KPSC Exams – 5th Sep 2017
Rise in butterfly species Despite the chaos marking the ‘development’ of the city, and erratic rainfall, the number of butterfly species being observed has steadily gone up. In 2013, if 117 species ...
READ MORE
Health Ministry – AIIMS to set up National Death Registry
The Health Ministry in collaboration with the All India Institute of Medical Sciences (AIIMS) will start a National Death Registry for information about each and every death in hospitals across ...
READ MORE
Urban Governance & Constitution of a District Planning
The reality of urban governance in Karnataka and in India general, in the context of a local government, stands in contrast to the philosophy of the Constitution. The colonial authoritarian structure of city governance continues to ...
READ MORE
“6th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪ್ರವಾಸೋದ್ಯಮದಲ್ಲಿ ಪ್ರಾಚ್ಯವಸ್ತು ವಿಲೀನ ಸುದ್ದಿಯಲ್ಲಿ ಏಕಿದೆ ? ರಾಜ್ಯದ ಪ್ರವಾಸಿ ತಾಣಗಳಲ್ಲಿರುವ ಇತಿಹಾಸ ಪಳೆಯುಳಿಕೆಗಳಾದ ಸ್ಮಾರಕಗಳ ರಕ್ಷಣೆ ಹಾಗೂ ಆ ಸ್ಥಳದ ಅಭಿವೃದ್ಧಿ ಕೈಗೊಳ್ಳಲು ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರಾ ಇಲಾಖೆಯನ್ನು ಸರ್ಕಾರ ಪ್ರವಾಸೋದ್ಯಮ ಇಲಾಖೆಯಲ್ಲಿ ವಿಲೀನಗೊಳಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿದ್ದ ...
READ MORE
Tumakuru, Belagavi & Dharwad districts to soon get piped gas
Piped natural gas and compressed natural gas will soon be available in Tumakuru, Belagavi and Dharwad districts. Work on the City Gas Distribution (CGD) project has already begun in these districts. Petroleum ...
READ MORE
There are several antiquated, discriminatory provisions in the Indian laws violating the rights of leprosy affected persons. For instance, in the Hindu Marriage Act, 1955 (Section 13 (v)), if one party ...
READ MORE
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪುರಂದರದಾಸರು ಸುದ್ದಿಯಲ್ಲಿ ಏಕಿದ್ದಾರೆ? ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ. ಪುರಂದರದಾಸರ ಹುಟ್ಟೂರು ಮಲೆಸೀಮೆ ಎಂಬ ...
READ MORE
“8th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಕಲ್ಯಾಣ ಕೇಂದ್ರ’  ಸುದ್ದಿಯಲ್ಲಿ ಏಕಿದೆ?  ಪರಿಶಿಷ್ಟರ ದುಃಖ -ದುಮ್ಮಾನಗಳಿಗೆ ದನಿಯಾಗಬಲ್ಲ 24/7 ಮಾದರಿಯಲ್ಲಿ ಕಾರ್ಯಾಚರಿಸುವ ಸಹಾಯವಾಣಿಗೆ ಸಮಾಜ ಕಲ್ಯಾಣ ಇಲಾಖೆ ಚಾಲನೆ ನೀಡಿದೆ. ನಗರದ ಯವನಿಕ ಆವರಣದಲ್ಲಿ ಸ್ಥಾಪಿಸಿರುವ ‘ಕಲ್ಯಾಣ ಕೇಂದ್ರ’ ಸಹಾಯವಾಣಿಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ...
READ MORE
National Current Affairs – UPSC/KAS Exams- 8th December
14th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka Current Affairs – KAS/KPSC Exams – 5th
Health Ministry – AIIMS to set up National
Urban Governance & Constitution of a District Planning
“6th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Tumakuru, Belagavi & Dharwad districts to soon get
Antiquated Indian laws affecting Leprosy
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“8th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *