27th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಚಿರತೆ ಗಣತಿ

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸುಮಾರು ಎರಡುವರೆ ಸಾವಿರ ಚಿರತೆಗಳು ಇರುವುದನ್ನು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ನೇತೃತ್ವದ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ ಪತ್ತೆ ಹಚ್ಚಿದೆ.

 • ದೇಶದಲ್ಲೇ ಮೊದಲ ಬಾರಿ ಚಿರತೆಗಳನ್ನು ಅಂದಾಜು ಮೂಲಕ ಗಣತಿ ನಡೆಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಚಿರತೆಗಳ ಗಣತಿ ಕುರಿತು ನಡೆಸಿರುವ ವರದಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ.
 • 2012ರಿಂದ ರಾಜ್ಯದ ವಿವಿಧೆಡೆ ಈ ಅಧ್ಯಯನ ನಡೆಸಲಾಗಿದ್ದು, ವಿವಿಧ ರಕ್ಷಿತಾರಣ್ಯಗಳು, ಕಾಯ್ದಿಟ್ಟ ಅರಣ್ಯಗಳು, ಕಲ್ಲುಬಂಡೆಗಳ ಗುಡ್ಡಗಳು, ಖಾಸಗಿ ಜಮೀನು ಸೇರಿದಂತೆ ಚಿರತೆಗಳ ಆವಾಸ ಸ್ಥಾನಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ಚಿರತೆಗಳ ಮೇಲೆ ದೊಡ್ಡ ಕಾರ್ಯವ್ಯಾಪ್ತಿಯಲ್ಲಿ ಕೈಗೊಂಡ ಅಧ್ಯಯನ ದೇಶದಲ್ಲೇ ಮೊದಲು.
 • ಈ ಅಧ್ಯಯನಗಳಿಂದ ಕರ್ನಾಟಕದಲ್ಲೇ ಮೊದಲ ಬಾರಿಗೆ 2016ರ ರಲ್ಲಿ ತರಕರಡಿಯ ಇರುವಿಕೆ ದಾಖಲಾಗಿದೆ. ಜತೆಗೆ ದಕ್ಷಿಣ ಕರ್ನಾಟಕದಲ್ಲಿ ಸಣ್ಣ ಹುಲ್ಲೆಯ ಉಪಸ್ಥಿತಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಹೆಚ್ಚು ಪ್ರಚಲಿತವಲ್ಲದ, ಆದರೆ ವನ್ಯಜೀವಿಗಳ ದೃಷ್ಟಿಕೋನದಲ್ಲಿ ಪ್ರಮುಖವಾದ ಹಲವು ತಾಣಗಳನ್ನು ಈ ಅಧ್ಯಯನದಿಂದ ಗುರುತಿಸಲಾಗಿದೆ.

ವನ್ಯಜೀವಿಧಾಮ ಮಾಡಲು ಪ್ರಸ್ತಾವ

 • ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಚಿರತೆಗಳ ಸಾಂದ್ರತೆ ಹೆಚ್ಚಿರುವ ಭದ್ರಾವತಿ ವಿಭಾಗದ ಕೆಲ ಆಯ್ದ ಕಾಡುಗಳಾದ ಕುಕ್ಕಾವಾಡಿ-ಉಬ್ರಾಣಿಹಾದಿಕೆರೆಹಣ್ಣೇರಂಗಯ್ಯನಗಿರಿ ಮತ್ತಿತರ ಪ್ರದೇಶಗಳು, ತುಮಕೂರು ವಿಭಾಗದಲ್ಲಿ ಸಣ್ಣ ಹುಲ್ಲೆ, ಚಿರತೆ, ಕತ್ತೆಕಿರುಬ, ಕೊಂಡು ಕುರಿಗಳಿರುವ ಬುಕ್ಕಾಪಟ್ಟಣ, ಮುತ್ತಗದಹಳ್ಳಿ, ಸುವರ್ಣಾವತಿ ಮತ್ತು ಇತರೆ ಕಾಡುಗಳನ್ನು ವನ್ಯಜೀವಿಧಾಮಗಳನ್ನಾಗಿ ಘೋಷಿಸಲು ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಗಣತಿ ಹೇಗೆ ?

 • ಪ್ರತಿ ಚಿರತೆಯ ಮೈಮೇಲಿರುವ ವಿಶಿಷ್ಟ ಚುಕ್ಕೆಗಳ ಆಧಾರದಿಂದ ಚಿರತೆಗಳನ್ನು ಗುರುತಿಸಿ, ಸಂಖ್ಯಾಶಾಸ್ತ್ರ ವಿಧಾನಗಳನ್ನು ಬಳಸಿ ಒಂದು ಪ್ರದೇಶದಲ್ಲಿನ ಚಿರತೆಗಳ ಸಂಖ್ಯೆ ಮತ್ತು ಅವುಗಳ ಸಾಂದ್ರತೆಯನ್ನು ಅಂದಾಜಿಸಲಾಗಿದೆ.
 • ಫೋಟೋಗಳ ಮೂಲಕ ಸೆರೆ ಹಿಡಿ-ಮರು ಸೆರೆಹಿಡಿ ವಿಧಾನವನ್ನು ಅನುಸರಿಸಿ ಚಿರತೆಗಳ ಸಾಂದ್ರತೆಯನ್ನು ಅಂದಾಜಿಸಲಾಗಿದೆ. ಈ ವಿಧಾನವನ್ನು ಉತ್ತರ ಅಮೇರಿಕಾದಲ್ಲಿ ಮೀನುಗಳ ಸಂಖ್ಯೆಯನ್ನು ಅಂದಾಜಿಸಲು ಮೊದಲು ಉಪಯೋಗಿಸಲಾಗಿತ್ತು.

ಚಿರತೆಗಳು ಕಂಡು ಬಂದಿರುವ ಪ್ರದೇಶಗಳು

 • ಮಲೈ ಮಹದೇಶ್ವರ, ಕಾವೇರಿ, ಬಿಳಿಗಿರಿರಂಗನ ಬೆಟ್ಟ, ತಿಮ್ಮಲಾಪುರ ವನ್ಯಜೀವಿಧಾಮಗಳು, ಜಯಮಂಗಲಿ ಸಂರಕ್ಷಿತ ಪ್ರದೇಶ, ತುಮಕೂರು, ರಾಮನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಭದ್ರಾವತಿ, ಬಳ್ಳಾರಿ ಮತ್ತು ಚಿತ್ರದುರ್ಗ ವಿಭಾಗಗಳಲ್ಲಿ ಅಧ್ಯಯನ ನಡೆಸಿದಾಗ ಚಿರತೆಗಳ ಇರುವಿಕೆ ಕಂಡು ಬಂದಿದೆ.

ವಿಶ್ವ ಪ್ರವಾಸೋದ್ಯಮ ದಿನ

ಸುದ್ಧಿಯಲ್ಲಿ ಏಕಿದೆ ? ಒಂದು ರಾಜ್ಯಹಲವು ಜಗತ್ತು…’ ಇದು ರಾಜ್ಯ ಪ್ರವಾಸೋದ್ಯಮ ಇಲಾಖೆ ಘೊಷವಾಕ್ಯ. ಅದಕ್ಕೆ ತಕ್ಕಂತೆ ಕರ್ನಾಟಕದಲ್ಲಿ ರಾಜ, ಮಹಾರಾಜರಾಳಿದ ಕುರುಹುಗಳು, ಗಿರಿ-ಕಂದರಗಳು, ನದಿ-ಸಾಗರಗಳು, ಹಸಿರು ಹೊದ್ದ ಪ್ರದೇಶಗಳು… ಹೀಗೆ ನೂರಾರು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರಿಗೆ ಒಂದೇ ರಾಜ್ಯದಲ್ಲಿ ಹಲವು ಜಗತ್ತನ್ನು ತೋರಿಸುತ್ತಿವೆ. ಈ ಜಗತ್ತುಗಳಲ್ಲಿ ಪ್ರವಾಸಿಗರಿಗೆ ಇನ್ನಷ್ಟು ವಿಶಿಷ್ಟ ಅನುಭವ ನೀಡುವ ಸಲುವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಲವು ಯೋಜನೆ ರೂಪಿಸಿ ಅನುಷ್ಠಾನ ತರುತ್ತಿದೆ.

 • 319 ಪ್ರವಾಸಿ ತಾಣಗಳು: ರಾಜ್ಯ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವಂತೆ ರಾಜ್ಯದಲ್ಲಿ 319 ಪ್ರವಾಸಿ ತಾಣಗಳಿವೆ. ಅದರಲ್ಲಿ ಹಂಪಿ ಮತ್ತು ಪಟ್ಟದಕಲ್ಲು ಪಾರಂಪರಿಕ ತಾಣಗಳು ಸೇರಿವೆ. ಅವುಗಳೊಂದಿಗೆ ಸಮುದ್ರ ತೀರ, ದೇವಸ್ಥಾನಗಳು, ಪರಿಸರ, ಸಾಹಸ ತಾಣಗಳು ಸೇರಿ ಇನ್ನಿತರ ಸ್ಥಳಗಳನ್ನು ಸೇರಿಸಲಾಗಿದೆ.
 • ದೇಶಿ ಪ್ರವಾಸಿಗರು ಹೆಚ್ಚು: ಮೈಸೂರು ದಸರಾ, ಹಂಪಿ, ಪಟ್ಟದಕಲ್ಲು, 20ಕ್ಕೂ ಹೆಚ್ಚಿನ ಜಲಪಾತ, 1 ಲಕ್ಷ ಕಿ.ಮೀ.ಗೂ ಹೆಚ್ಚಿನ ಉದ್ದದ ಕರಾವಳಿ ಪ್ರದೇಶ ಹೀಗೆ ವೈವಿಧ್ಯಮಯ ತಾಣಗಳು ರಾಜ್ಯದಲವಲಿದೆ. ಅವುಗಳಿಗೆ ಪ್ರತಿವರ್ಷ ಕೋಟ್ಯಾಂತರ ಪ್ರವಾಸಿಗರು ಬರುತ್ತಾರೆ. ಅವರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. 2014ರಲ್ಲಿ 82 ಕೋಟಿ ದೇಶೀ ಪ್ರವಾಸಿಗರು ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರೆ, 5.62 ಲಕ್ಷ ವಿದೇಶಿ ಪ್ರವಾಸಿಗರು ಬಂದಿದ್ದರು.

ರಾಜ್ಯದ ಪ್ರವಾಸಿ ತಾಣಗಳು ವಿಶ್ವದರ್ಜೆಗೆ

 • ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ರಾಜ್ಯದ 20 ಸ್ಮಾರಕ ಹಾಗೂ ಪಾರಂಪರಿಕ ತಾಣಗಳನ್ನು ವಿಶ್ವದರ್ಜೆಗೆ ಏರಿಸಲು ಪ್ಲಾನ್ ಮಾಡಲಾಗಿದೆ. ರಾಜ್ಯದಲ್ಲಿ ಪ್ರಾಚೀನ ಇತಿಹಾಸ ನೆನಪಿಸುವ ಹಲವು ಸ್ಮಾರಕ ಹಾಗೂ ಪಾರಂಪರಿಕ ತಾಣಗಳಲ್ಲಿ ಸಮರ್ಪಕ ಮೂಲ ಸೌಕರ್ಯ ನೀಡಲು ಯೋಜನೆ ರೂಪಿಸಲಾಗಿದೆ.
 • ಯಾವ್ಯಾವ ಸ್ಥಳಗಳಲ್ಲಿ ಸೌಕರ್ಯ?: ಬೀದರ್ ಕೋಟೆ, ಕಲಬುರಗಿ ಕೋಟೆ, ಮಳಖೇಡ ಕೋಟೆ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭೀಮಾ ನದಿ ದಡದಲ್ಲಿರುವ ಸನ್ನತಿ, ಗೋಲಗುಂಬಜ್, ಬಾದಾಮಿ- ಐಹೊಳೆ- ಪಟ್ಟದಕಲ್ಲು, ಹಂಪಿ, ನಂದಿಬೆಟ್ಟ, ಚಿತ್ರದುರ್ಗ ಕೋಟೆ, ಶ್ರೀರಂಗಪಟ್ಟಣ ಕೋಟೆ, ಚಾಮುಂಡಿಬೆಟ್ಟ, ಮೇಲುಕೋಟೆ, ಶ್ರವಣಬೆಳಗೊಳ, ಬೇಲೂರು- ಹಳೇಬಿಡು, ದೇವನಹಳ್ಳಿ ಕೋಟೆ, ಬನವಾಸಿ, ಲಕ್ಕುಂಡಿ, ತಲಕಾವೇರಿ, ಯಾದಗಿರಿ ಕೋಟೆ, ಹಾಗೂ ಚೌಡದಾನಾಪುರ.

ವಿದೇಶಿ ಪ್ರವಾಸಿಗರ ಆಕರ್ಷಣೆಗೆ ಕ್ರಮ

 • ದೇಶಿ ಪ್ರವಾಸಿಗರ ಜತೆಗೆ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸಲು ಈಗಾಗಲೆ ಪ್ಯಾರಿಸ್, ಲಂಡನ್ ಸೇರಿ ಇನ್ನಿತರ ಪ್ರಮುಖ ನಗರಗಳಲ್ಲಿ ಪ್ರವಾಸೋದ್ಯಮ ರೋಡ್ ಶೋ ನಡೆಸಲಾಗುತ್ತಿದೆ. ಅಲ್ಲಿನ ಮೇಳಗಳಲ್ಲಿ ರಾಜ್ಯ ಪ್ರವಾಸಿ ತಾಣಗಳ ಕುರಿತು ಅಲ್ಲಿನ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ.

ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್

 • ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಿಸಲು ರಾಜ್ಯ ಪ್ರವಾಸೋದ್ಯಮ ಹಲವು ಕ್ರಮ ಕೈಗೊಳ್ಳುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ ಪ್ರವಾಸೋದ್ಯಮದ ಚಿತ್ರಣವನ್ನೇ ಬದಲಿಸಲಾಗುತ್ತಿದೆ. ಅದರಂತೆ ಪ್ರವಾಸಿಗರಿಗೆ ರಾಜ್ಯ ಪ್ರವಾಸಿ ತಾಣಗಳ ಸಮಗ್ರ ಚಿತ್ರಣ ಸಿಗುವಂತೆ ಮಾಡಲು ‘ಡಿಜಿಟಲ್ ಟೆಕ್ನಾಲಜಿ ಪ್ಲಾಟ್​ಫಾರಂ’ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
 • ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗೋವಾ ವಿಮಾನ ನಿಲ್ದಾಣದಲ್ಲಿ ಅತಿಥಿಗಳನ್ನು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಲಾಗುತ್ತಿದ್ದು, ವಿವಿಧ ಭಾಗಗಳಲ್ಲಿ ಅನೇಕ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಶ್ವ ಪ್ರವಾಸೋದ್ಯಮ ದಿನದ ಬಗ್ಗೆ

 • ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು 1980 ರಲ್ಲಿ ಯುನೈಟೆಡ್ ನೇಷನ್ಸ್ ವರ್ಲ್ಡ್ ಟೂರಿಸಮ್ ಆರ್ಗನೈಸೇಶನ್ ಪ್ರಾರಂಭಿಸಿತು, ಇದನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಈ ನಿರ್ದಿಷ್ಟ ದಿನದಂದು ಯುಎನ್ಡಬ್ಲ್ಯುಟಿಒ ಕಾನೂನುಗಳು 1970 ರಲ್ಲಿ ಜಾರಿಗೆ ಬಂದವು.
 • ಇದು ಜಾಗತಿಕ ಪ್ರವಾಸೋದ್ಯಮಕ್ಕೆ ದೊಡ್ಡ ಹೆಗ್ಗುರುತಾಗಿ ಪರಿಗಣಿಸಲ್ಪಟ್ಟಿದೆ. ಏಕೆಂದರೆ ಅಂತರರಾಷ್ಟ್ರೀಯ ಸಮುದಾಯದ ಪ್ರವಾಸೋದ್ಯಮದ ಮಹತ್ವಪೂರ್ಣ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತದೆ. ಜೊತೆಗೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಮೌಲ್ಯಗಳು ಜಾಗತಿಕವಾಗಿ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ತೋರಿಸುತ್ತದೆ.
 • 2018 ರ ಥೀಮ್ “ಪ್ರವಾಸ ಮತ್ತು ಸಂಸ್ಕೃತಿಯ ರಕ್ಷಣೆ” ಆಗಿದೆ.

ಬಿಬಿಎಂಪಿ ರೋಶಿನಿ ಯೋಜನೆ

ಸುದ್ಧಿಯಲ್ಲಿ ಏಕಿದೆ ?ಬಿದ್ದು ಹೋಗುವ ಸ್ಥಿತಿಯಲ್ಲಿರುವ ಕಟ್ಟಡಗಳ ಕೆಳಗೆ ಕುಳಿತು, ಭಯದಲ್ಲಿಯೇ ಪಾಠ ಕೇಳುತ್ತಿದ್ದ ಮಕ್ಕಳು ಇನ್ನು ಮುಂದೆ ಹೈಕ್ಲಾಸ್ ಸೌಕರ್ಯ ಪಡೆಯಲಿದ್ದಾರೆ. ಕಪು್ಪ ಹಲಗೆಯ ಮೇಲೆ ಚಾಕ್​ಪೀಸ್​ನಿಂದ ಬರೆದಿದ್ದನ್ನು ನೋಟ್ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಇನ್ನು ಆನ್​ಲೈನ್ ರೋಶಿನಿ ಯೋಜನೆ ಮೂಲಕ ಪಾಠ ಕೇಳಲಿದ್ದಾರೆ.

ಇದೆಲ್ಲ ಸಾಧ್ಯ ವಾಗು ತ್ತಿರುವುದು ಮೈಕ್ರೋಸಾಫ್ಟ್ ಸಂಸ್ಥೆ ಜತೆಗೆ ಬಿಬಿಎಂಪಿ ಮಾಡಿ ಕೊಂಡಿರುವ ಒಪ್ಪಂದದಿಂದ. ಕಾಪೋರೇಟ್ ಸಾಮಾಜಿಕ ಕಳಕಳಿ ಅಡಿಯಲ್ಲಿ ಮೈಕ್ರೋಸಾಫ್ಟ್ ಬಿಬಿಎಂಪಿಯ 156 ಶಾಲೆ ಮತ್ತು ಕಾಲೇಜುಗಳ 

Related Posts
Karnataka Current Affairs – KAS/KPSC Exams – 11th September 2017
VTU asks colleges to incubate startups Following in the footsteps of the Indian Institute of Management Bangalore and other institutes that support fledgling entrepreneurs, Visvesvaraya Technological University (VTU) has instructed all ...
READ MORE
Karnataka: KAS personality test ratio goes up, 1:5
The state Cabinet on 22nd Feb decided to increase the ratio in shortlisting the number of candidates for personality test for gazetted probationers’ examination conducted by the Karnataka Public Service ...
READ MORE
ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ ಬಗ್ಗೆ ಪರಿಚಯ: ಒಂದು ಪ್ರಮುಖ ಹೊಸ ರಾಷ್ಟ್ರೀಯ ಕಾರ್ಯಕ್ರಮ. ಇದನ್ನು ಹೂಡಿಕೆಗೆ  ಅನುಕೂಲಕರವಾಗಿ ವಿನ್ಯಾಸಗೊಳಿಸಲಾಗಿದೆ. ನಾವೀನ್ಯತೆಯ ಪ್ರೋತ್ಸಾಹ, ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು, ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ಮತ್ತು ಅತ್ಯುತ್ತಮ ದರ್ಜೆಯ ಉತ್ಪಾದನ ಸೌಕರ್ಯವನ್ನು ನಿರ್ಮಿಸಲು ಜಾಗತಿಕ ಉತ್ಪಾದನೆಯ ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೇರಿಸುವ ...
READ MORE
National Current Affairs – UPSC/KAS Exams- 18th January 2019
Lokpal Topic: Governance IN NEWS: The Supreme Court on Thursday gave the Lokpal search committee time till February-end to short-list a panel of names for chairperson and members of the Lokpal to ...
READ MORE
National Current Affairs – UPSC/KAS Exams- 7th February 2019
RBI unlikely to transfer contingency fund to govt. Topic: Economy In News: The Reserve Bank of India (RBI) is unlikely to give in to the government’s demand of transferring funds that was ...
READ MORE
Karnataka Current Affairs – KAS / KPSC Exams – 25th June 2017
Degradation seeing forest landscape disappear: CAG-commissioned study A staggering 3,660 sq.km. of evergreen and deciduous forests have disappeared over the past four decades, while 267 sq.km of built-up area and buildings ...
READ MORE
Karnataka Current Affairs – KAS/KPSC Exams – 16th Jan 2018
Flag committee may submit report soon The committee set up to design a flag for Karnataka is preparing to submit a report to the government soon. A nine-member team had been set ...
READ MORE
Urban Development – Integrated Housing & Slum Development Programme (IHSDP)
Integrated Housing & Slum Development Programme (IHSDP) For taking up Housing and Slum up gradation programme in Non-BSUP cities, Integrated Housing & Slum Development Programme (IHSDP) was launched along with BSUP in December 2005. This programme combines ...
READ MORE
The Indian Railways will join hands with the Indian Space Research Organisation (ISRO) to get online satellite imagery for improving safety and enhancing efficiency. a massive exercise of GIS [Geographical Information ...
READ MORE
Karnataka Current Affairs – KAS / KPSC Exams – 21st April 2017
ISRO: After Mars, it’s time for Venus The Indian Space Research Organisation (ISRO) has invited scientists to suggest studies for a potential orbiter mission to Venus - somewhat similar to the ...
READ MORE
Karnataka Current Affairs – KAS/KPSC Exams – 11th
Karnataka: KAS personality test ratio goes up, 1:5
ಮೇಕ್ ಇನ್ ಇಂಡಿಯಾ
National Current Affairs – UPSC/KAS Exams- 18th January
National Current Affairs – UPSC/KAS Exams- 7th February
Karnataka Current Affairs – KAS / KPSC Exams
Karnataka Current Affairs – KAS/KPSC Exams – 16th
Urban Development – Integrated Housing & Slum Development
ISRO to help put railway safety back on
Karnataka Current Affairs – KAS / KPSC Exams

Leave a Reply

Your email address will not be published. Required fields are marked *