10th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ವಿಶ್ವಾಸ ಕಿರಣ ಯೋಜನೆ

ಸುದ್ಧಿಯಲ್ಲಿ ಏಕಿದೆ ?ದಸರಾ ರಜೆ ವೇಳೆ, ವಿಶ್ವಾಸ ಕಿರಣ ಯೋಜನೆಯಡಿ ಪರಿಹಾರ ಬೋಧನೆಯ ಕಾರ್ಯಕ್ರಮಕ್ಕೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು, ಈ ಬಾರಿ ಮಧ್ಯಾಹ್ನದ ಬಿಸಿಯೂಟ ಸವಿಯಲಿದ್ದಾರೆ.

ವಿಶ್ವಾಸ ಕಿರಣ ಯೋಜನೆ

 • ಕಲಿಕೆಯಲ್ಲಿ ಹಿಂದುಳಿದ ಸರಕಾರಿ ಪ್ರೌಢಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ರಾಜ್ಯ ಸರಕಾರ, ವಿಶ್ವಾಸ ಕಿರಣ ಯೋಜನೆ ಜಾರಿಗೊಳಿಸಿದೆ.
 • ದಸರಾ ರಜೆ ಸೇರಿ ಪ್ರತಿ ಶನಿವಾರ ವಿಶೇಷ ಬೋಧನಾ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಮಕ್ಕಳು ವಾರ್ಷಿಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ.
 • ಈ ರಜಾ ದಿನಗಳಂದು ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಬೋಧನಾ ತರಬೇತಿಗಳನ್ನು ನಡೆಸಲಾಗುತ್ತದೆ.
 • ಕಲಿಕೆಯಲ್ಲಿ ಹಿಂದುಳಿದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕಲಿಕಾಂಶಗಳ ವಿಷಯ ಪರಿಕಲ್ಪನೆ ಅರ್ಥಮಾಡಿಸಲು ಹಾಗೂ ಪರೀಕ್ಷೆ ಎದುರಿಸುವಲ್ಲಿ ಆತ್ಮ ವಿಶ್ವಾಸ ತುಂಬುವ ವಿಶೇಷ ತರಬೇತಿ ಇದಾಗಿದೆ.
 • ಫಲಿತಾಂಶ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ ಉದ್ದೇಶ ಹೊಂದಿರುವ ವಿಶ್ವಾಸ ಕಿರಣ ಯೋಜನೆಯ ವಿಶೇಷ ಬೋಧನಾ ತರಗತಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಕಲ್ಪಿಸಲಾಗಿದೆ.

ನದಿಗಳ ರಕ್ಷಣೆ

ಸುದ್ಧಿಯಲ್ಲಿ ಏಕಿದೆ ?ಇತ್ತೀಚೆಗಷ್ಟೇ ನದಿಗಳು ದಿಢೀರ್ ಬತ್ತುತ್ತಿರುವ ವಿದ್ಯಮಾನದ ನಡುವೆಯೇ ನದಿಗಳ ರಕ್ಷಣೆ ಮಾಡದಿದ್ದರೆ ಅಪಾಯ ಕಾದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

 • ಮಲೆನಾಡು-ಕರಾವಳಿಯಲ್ಲಿ ಹರಡಿರುವ ನೇತ್ರಾವತಿ (ಫಲ್ಗುಣಿ ನದಿಯನ್ನೊಳಗೊಂಡಂತೆ) ನದಿ ವ್ಯಾಪ್ತಿಯಲ್ಲಿ ಧಾರಣಾ ಸಾಮರ್ಥ್ಯ ಅಧ್ಯಯನ ಕೈಗೊಂಡಿದ್ದು, ಯಾವೆಲ್ಲ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎನ್ನುವ ವಿಸ್ತೃತ ವರದಿ ಸಿದ್ಧಪಡಿಸಿದ್ದಾರೆ.

ಹಿನ್ನಲೆ

 • ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಿರಂತರವಾಗಿ ನದಿಗಳು, ಜೀವವೈವಿಧ್ಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಐಐಎಸ್‌ಸಿಯ ಜೀವವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಹಾಗೂ ಅವರ ತಂಡ ನೇತ್ರಾವತಿ ನದಿಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸಿದೆ.
 • ಇದುವರೆಗೆ ಹಲವು ರೀತಿಯ ಮಾನವ ಚಟುವಟಿಕೆಗಳಿಂದ ದಣಿದಿರುವ ನೇತ್ರಾವತಿಯನ್ನು ಇನ್ನಾದರೂ ಸಂರಕ್ಷಿಸುವ ಅಗತ್ಯವಿದೆ ಎನ್ನುವುದು ಅವರ ಅಧ್ಯಯನದ ಮುಖ್ಯ ಶಿಫಾರಸು.
 • ಧಾರಣಾ ಸಾಮರ್ಥ್ಯ ಅಧ್ಯಯನ ಕೈಗೊಂಡಿರುವುದಲ್ಲದೆ, ನೇತ್ರಾವತಿ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅವುಗಳಲ್ಲಿ ಯಾವೆಲ್ಲ ಚಟುವಟಿಕೆ ನಿಷಿದ್ಧ ಹಾಗೂ ಯಾವುದನ್ನು ಕೈಗೊಳ್ಳಬಹುದು ಎನ್ನುವ ಮಾಹಿತಿ ವರದಿಯಲ್ಲಿದೆ.

ಧಾರಣಾ ಸಾಮರ್ಥ್ಯ ಎಂದರೆ?

 • ಪರಿಸರದ ಯಾವುದೇ ಜೀವಿಯ ಬದುಕಿನ ಸಮತೋಲನ ತಪ್ಪದಂತೆ ಮಾನವ ಕೈಗೊಳ್ಳಬಹುದಾದ ಗರಿಷ್ಠ ಅಭಿವೃದ್ಧಿ, ಕೃಷಿ, ಕೈಗಾರಿಕಾ, ವಾಣಿಜ್ಯ ಚಟುವಟಿಕೆಗಳು ಹಾಗೂ ಇತರ ಜೀವಿಗಳ ಕ್ರಿಯೆಗಳನ್ನು ಇಲ್ಲಿ ಧಾರಣಾ ಸಾಮರ್ಥ್ಯ ಎನ್ನಬಹುದು. ನೇತ್ರಾವತಿ ನದಿ ವ್ಯಾಪ್ತಿಯಲ್ಲಿ ನಕ್ಷೆ, ಪ್ರಾಣಿ-ಗಿಡಗಳ ಮೇಲಿನ ನಿಗಾ ಮೂಲಕ ತಜ್ಞರು ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿದ್ದಾರೆ.
 • ಈ ಮೂಲಕ ಪರಿಸರದ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುತ್ತಾ ನಿಯಂತ್ರಿತ ಹಾಗೂ ನ್ಯಾಯಯುತ ಸಂಪನ್ಮೂಲ ಬಳಕೆ ಮಾಡಿದರೆ ನದಿಗಳು, ಅರಣ್ಯವನ್ನು ಮುಂದಿನ ಜನಾಂಗಕ್ಕೆ ಕಾಪಿಡಬಹುದು ಎನ್ನುವುದು ತಜ್ಞರ ನಿಲುವು.

ಜಲಾರಣ್ಯಗಳು!

 • ನೇತ್ರಾವತಿ, ಫಲ್ಗುಣಿ-ಎರಡೂ ನದಿ ಉಗಮವಾಗುವುದು ಪಶ್ಚಿಮ ಘಟ್ಟಗಳಲ್ಲಿ. ಇದರ ವ್ಯಾಪ್ತಿಯಲ್ಲಿನ ಜೀವ ಸೂಕ್ಷ್ಮಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ನಾಲ್ಕಾಗಿ ಪ್ರತ್ಯೇಕಿಸಲಾಗಿದೆ.
 • ಇಕೊಲಾಜಿಕಲಿ ಸೆನ್ಸಿಟಿವ್ ರೀಜನ್ಸ್ (ಇಎಸ್‌ಆರ್) –1,2,3,4.
 • ಇಎಸ್‌ಆರ್ 1 ಹಾಗೂ 2 ಅತಿ ಸೂಕ್ಷ್ಮ ಪ್ರದೇಶ, ಇಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವಂತಿಲ್ಲ. ಬದಲಾಗಿ ಈ ಪ್ರದೇಶಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು.
 • ಅದೆಷ್ಟೋ ತೊರೆ ತೋಡುಗಳನ್ನೊಳಗೊಂಡ ಪಶ್ಚಿಮ ಘಟ್ಟದ ಅರಣ್ಯ ಕಾರ್ಬನ್ ಸ್ಟಾಕಿಂಗ್(ಕಾರ್ಬನ್ ಹೀರಿಕೊಳ್ಳುವ ಪ್ರಮಾಣ)ಗೆ ನೆರವಾಗುತ್ತದೆ.
 • ಈ ಜಲಾರಣ್ಯಗಳು ಜೀವವೈವಿಧ್ಯದಲ್ಲಿ ಶ್ರೀಮಂತವಷ್ಟೇ ಅಲ್ಲ ಇಂಗಾಲಾಮ್ಲ ಇಳಿಸುವಲ್ಲಿ ನೆರವಾಗಿ ಜಾಗತಿಕ ತಾಪಮಾನ ಇಳಿಕೆಗೆ ತಮ್ಮ ಕೊಡುಗೆ ನೀಡುತ್ತವೆ ಎನ್ನುತ್ತದೆ ತಜ್ಞರ ವರದಿ.
 • ನೇತ್ರಾವತಿ ಹರವು: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬಳಿಯ ಎಳನೀರು ಘಾಟಿಯ ಬಂಗ್ರಬಲಿಕೆ ನೇತ್ರಾವತಿ ನದಿಯ ಉಗಮ ಸ್ಥಾನ. 4409 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿರುವ ಈ ನದಿ, ಐದು ಜಿಲ್ಲೆಗಳಲ್ಲಿ ಹರಡಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 • ನದಿ ತಿರುಗಿಸದಿರಿ: ಹಿಂದೆಯೂ ಎತ್ತಿನಹೊಳೆ ನದಿ ತಿರುವು ಯೋಜನೆ ಪೊಳ್ಳೆಂಬುದನ್ನು ರಾಮಚಂದ್ರ ವರದಿಯಲ್ಲಿ ಹೇಳಿದ್ದರು. ಆದರೆ ಅವರ ವರದಿಯನ್ನು ಸರ್ಕಾರ ಆಗ ತಳ್ಳಿ ಹಾಕಿತ್ತು. ಕೆಲವರ್ಷ ಹಿಂದೆ ಕೊಡಗು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯವನ್ನೂ ದಾಖಲಿಸಿದ್ದರು. ಪ್ರಸ್ತುತ ಎತ್ತಿನಹೊಳೆ ಯೋಜನಾ ಪ್ರದೇಶ, ಕೊಡಗು ಜಿಲ್ಲೆ ಎರಡೂ ಕಡೆ ಭೂಕುಸಿತ ಸಂಭವಿಸಿದೆ.
 • ಈಗಿನ ವರದಿಯಲ್ಲೂ(ಜನವರಿ 2018ರಲ್ಲಿ ಪ್ರಕಟಿತ) ನದಿ ತಿರುಗಿಸುವ ಕೆಲಸಕ್ಕೆ ಹೋಗಲೇಬಾರದು ಎಂದು ತಜ್ಞರು ಹೇಳಿದ್ದಾರೆ. ಇದರಿಂದಾಗಿ ಅರಣ್ಯಗಳ ನೀರು ಹಿಡಿದಿರಿಸಿಕೊಳ್ಳುವ ಸಾಮರ್ಥ್ಯ ಅಳಿಯುವ ಸಾಧ್ಯತೆ ಇದೆ. ಆ ಮೂಲಕ ತೋಡುಗಳಲ್ಲಿ ನೀರು ಹರಿಯುವುದು ನಿಂತು ಹೋಗಬಹುದು ಎಂದು ಎಚ್ಚರಿಸಿದ್ದಾರೆ.

ಎಷ್ಟೆಷ್ಟು ಗ್ರಾಮಗಳಿವೆ?:

 • ದ.ಕ(307), ಉಡುಪಿ(22), ಚಿಕ್ಕಮಗಳೂರು(16), ಹಾಸನ(78) ಮತ್ತು ಕೊಡಗು (10) ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 433 ಗ್ರಾಮಗಳು ಇಎಸ್‌ಆರ್ ವ್ಯಾಪ್ತಿಯಲ್ಲಿವೆ.
 • ಇದರಲ್ಲಿ ಇಎಸ್‌ಆರ್ 4ರಲ್ಲಿ ಮಾತ್ರವೇ ಅಭಿವೃದ್ಧಿ ಕೆಲಸಗಳನ್ನು ಸೂಕ್ತ ಪರಿಶೀಲನೆ ಬಳಿಕ ಬಿಡಬಹುದು ಎನ್ನುತ್ತಾರೆ ತಜ್ಞರು.

ಎಲ್ಲಿ ಯಾವುದು ನಿಷೇಧ?: 

 • ಸೋಲಾರ್ ಪವರ್ ಹಾಕುವುದಕ್ಕೆ ಎಲ್ಲ ವಲಯಗಳಲ್ಲೂ ಅವಕಾಶ ಇದೆ.
 • ಗಾಳಿಯಂತ್ರಗಳಿಗೆ ಇಎಸ್‌ಆರ್ 1ರಲ್ಲಿ ಬಿಟ್ಟು ಉಳಿದ ಕಡೆ ಬಿಡಬಹುದು.
 • ಉಷ್ಣವಿದ್ಯುತ್ ಸ್ಥಾವರ, ದೊಡ್ಡ ಪ್ರಮಾಣದ ಜಲವಿದ್ಯುತ್ ಯೋಜನೆಗಳಿಗೆ ಎಲ್ಲ ವಲಯಗಳಲ್ಲೂ ನಿಷೇಧವಿದೆ.
 • ಚಿಕ್ಕ ಜಲವಿದ್ಯುತ್ ಯೋಜನೆಗಳಿಗೆ ವಲಯ 4ರಲ್ಲಿ ಮಾತ್ರವೇ ಬಿಡಬಹುದು.
 • ಎಲ್ಲ ನಾಲ್ಕು ವಲಯದಲ್ಲೂ ಅರಣ್ಯವನ್ನು ಅರಣ್ಯೇತರ ಆಗಿ ಪರಿವರ್ತಿಸುವಂತಿಲ್ಲ. ಅಲ್ಲದೆ ಏಕಜಾತಿಯ ಸಸ್ಯಗಳ ತೋಟ ಮಾಡುವುದಕ್ಕೆ ನಿಷೇಧ.
 • ವೈದ್ಯಕೀಯ ಉದ್ದೇಶಕ್ಕೆ ಗಿಡಗಳನ್ನು ತೆಗೆಯುವುದನ್ನು ವಲಯ 3, 4ರಲ್ಲಿ ಕಠಿಣ ನಿಯಮಾವಳಿಯೊಂದಿಗೆ ಬಿಡಬಹುದು.
 • ಎಲ್ಲ ನಾಲ್ಕು ವಲಯದಲ್ಲೂ ಗ್ರಾಮಮಟ್ಟದ ಅರಣ್ಯ ಸಮಿತಿಯೊಂದಿಗೆ ಅಭಿವೃದ್ಧಿಪಡಿಸುವುದಕ್ಕೆ ಅವಕಾಶ ನೀಡಬಹುದು.
 • ಕೃಷಿ ಸಂಸ್ಕರಣಾ ಕೈಗಾರಿಕೆಗಳಿಗೆ ಎಲ್ಲ ವಲಯದಲ್ಲಿ ಅವಕಾಶ ಕೊಡಬಹುದು.
 • ಐಟಿಗೆ ವಲಯ 3, 4ರಲ್ಲಿ ಅವಕಾಶ. ಮಾಲಿನ್ಯಕಾರಕ ಕೆಂಪು ಉದ್ದಿಮೆಗಳಿಗೆ ನಾಲ್ಕೂ ಕಡೆ ನಿಷೇಧ.
 • ಪ್ರವಾಸೋದ್ಯಮ ತೆಗೆದುಕೊಂಡರೆ ಇಕೋಟೂರಿಸಂಗೆ ವಲಯ 1 ಬಿಟ್ಟು ಉಳಿದೆಡೆ ಅವಕಾಶ.
 • ಸಾವಯವ ಹೋಮ್‌ಸ್ಟೇಗೆ ನಾಲ್ಕೂ ಕಡೆ ಬಿಡಬಹುದು.
 • ಮರಳು ಗಣಿಗಾರಿಕೆ ವಲಯ 4ರಲ್ಲಿ ಮಾತ್ರವೇ ಬಿಡಬಹುದು. ಆದರೆ ರಫ್ತು ತಡೆಗಟ್ಟಲೇಬೇಕು.
 • ಕಬ್ಬಿಣ, ಮ್ಯಾಂಗನೀಸ್ ಬಾಕ್ಸೈಟ್ ಗಣಿಗಾರಿಕೆ ಎಲ್ಲ ಕಡೆ ನಿಷೇಧ.
 • ಸುಣ್ಣದ ಕಲ್ಲು ಗಣಿಗಾರಿಕೆ ವಲಯ 3, 4ರಲ್ಲಿ ಮಾತ್ರ ಬಿಡಬಹುದು.
 • ತ್ಯಾಜ್ಯ ವಿಲೇವಾರಿ ಘಟಕಗಳಿಗೆ ನಾಲ್ಕನೇ ವಲಯದಲ್ಲಿ ಅವಕಾಶ ಕೊಟ್ಟಿದೆ. ಆದರೆ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಅವಕಾಶ ಇಲ್ಲ.
 • ನಾಲ್ಕನೇ ವಲಯದಲ್ಲಿ ಹೆದ್ದಾರಿ/ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣಕ್ಕೆ ಸೂಕ್ತವಾದ ಪರಿಸರ ಪರಿಣಾಮ ಅಧ್ಯಯನದ ಬಳಿಕವಷ್ಟೇ ಅನುಮತಿ ನೀಡಬಹುದು.
 • ರಾಜ್ಯಮಟ್ಟದ ಇಎಸ್‌ಆರ್ ಸರ್ವೇ: ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಸೂಚನೆ ಮೇರೆಗೆ ಡಾ.ಟಿ.ವಿ.ರಾಮಚಂದ್ರ ತಂಡ ಇಡೀ ರಾಜ್ಯದಲ್ಲೇ ಪರಿಸರ ಸೂಕ್ಷ್ಮ ಪ್ರದೇಶಗಳ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಕೇಂದ್ರ ಸಚಿವಾಲಯವೇ ಮುಂದೆ ಪ್ರಕಟಿಸಲಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೊವಲ್​

ಸುದ್ಧಿಯಲ್ಲಿ ಏಕಿದೆ ?ತಮ್ಮ ಮೊದಲ ಅಧಿಕಾರವಧಿಯ ಅಂತ್ಯಭಾಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಕಾರ್ಯತಂತ್ರ ನೀತಿ ನಿರೂಪಣಾ ಸಮಿತಿ ( Strategic Policy Group -SPG)ಯನ್ನು ರಾಷ್ಟ್ರೀಯ ಭದ್ರತಾ ಮಂಡಿಳಿಗೆ ಸಹಕಾರ ನೀಡುವಂತೆ ಪುನಾರಚನೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸದ್ಯ ರಾಷ್ಟ್ರೀಯ ಭದ್ರತಾ (ಎನ್​ಎಸ್​ಎ) ಸಲಹೆಗಾರರಾಗಿರುವ ಅಜಿತ್​ ದೊವಲ್ ಅವರು, ಎಸ್​ಪಿಜಿಯ ಮುಖ್ಯಸ್ಥರಾಗಲಿದ್ದಾರೆ. ಈ ಮೂಲಕ ದೇಶದ ಅತ್ಯಂತ ಪ್ರಭಾವಿ ಅಧಿಕಾರಿಯಾಗಿ ದೊವಲ್​ ಹೊರಹೊಮ್ಮಿದ್ದಾರೆ.

ರಕ್ಷಣಾ ಕಾರ್ಯತಂತ್ರ ನೀತಿ ನಿರೂಪಣಾ ಸಮಿತಿ ಕಾರ್ಯವ್ಯಾಪ್ತಿ

 • ರಾಷ್ಟ್ರೀಯ ಭದ್ರತಾ ಮಂಡಳಿಯೊಂದಿಗೆ ಸಹಕರಿಸುವ, ಮತ್ತು ದೀರ್ಘಕಾಲೀನ ರಕ್ಷಣಾ ಕಾರ್ಯತಂತ್ರಗಳನ್ನು ಪರಾಮರ್ಶೆಗೆ ಒಳಪಡಿಸುವ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಎಸ್​ಪಿಜಿ, ಸಚಿವಾಲಯಗಳ ಸಮನ್ವಯತೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
 • ರಾಷ್ಟ್ರೀಯ ಭದ್ರತಾ ನೀತಿ ನಿರೂಪಣೆಯಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ಮುಖ್ಯಸ್ಥರು

 • ಇದಕ್ಕೂ ಹಿಂದೆ ಎಸ್​ಜಿಪಿಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದ ಕ್ಯಾಬಿನೆಟ್​ ಕಾರ್ಯದರ್ಶಿ ಮುಖ್ಯಸ್ಥರಾಗಿದ್ದರು. ಸದ್ಯ ಎಸ್​ಪಿಜಿಯನ್ನು ಬಲಪಡಿಸಿ, ಅದರ ಮುಖ್ಯಸ್ಥರನ್ನಾಗಿ ಅಜಿತ್​ ದೊವಲ್​ ಅವರನ್ನು ನೇಮಿಸಿರುವುದರಿಂದ ಇನ್ನು ಮುಂದೆ ಕ್ಯಾಬಿನೆಟ್​ ಕಾರ್ಯದರ್ಶಿಗಳೂ ಅಜಿತ್​ ದೊವಲ್​ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ.
 • ಸದ್ಯ ಎಸ್​ಪಿಜಿ ಅಡಿಯಲ್ಲೇ ನೀತಿ ಆಯೋಗವೂ ಬರಲಿದ್ದು, ಅಜಿತ್​ ದೊವಲ್​ ನೀತಿ ಆಯೋಗದ ಮುಖ್ಯಸ್ಥರಿಗೂ ಹೆಚ್ಚಿನ ಅಧಿಕಾರ ಉಳ್ಳವರಾಗಲಿದ್ದಾರೆ.
 • ಅಜಿತ್​ ದೊವಲ್​ ಈ ಎಲ್ಲರಿಗಿಂತಲೂ ಹೆಚ್ಚಿನ ಅಧಿಕಾರವನ್ನು ಹೊಂದಲಿದ್ದಾರೆ. ತಾವು ಬಯಸಿದಾಗ ನಡೆಸುವ ಸಭೆಗಳಿಗೆ ಈ ಎಲ್ಲರೂ ಬರಬೇಕಾದ ಜರೂರಿರುತ್ತದೆ.

ಕಾರ್ಯತಂತ್ರದ ನೀತಿ ಗುಂಪು (ಎಸ್ಪಿಜಿ)

 • 1998ರಲ್ಲಿ ಯುಪಿಎ ಅಧಿಕಾರವಧಿಯಲ್ಲಿ ಎಸ್​ಪಿಜಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು
 • ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ಗೆ ನೆರವಾಗಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ನೇತೃತ್ವದ ಸ್ಟ್ರಾಟೆಜಿಕ್ ಪಾಲಿಸಿ ಗ್ರೂಪ್ (ಎಸ್ಪಿಜಿ) ಕೇಂದ್ರ ಸರ್ಕಾರವನ್ನು ಸ್ಥಾಪಿಸಿದೆ.
 • ಎಸ್ಪಿಜಿಯ ಇತರ ಸದಸ್ಯರು ಎನ್ಐಟಿಐ ಆಯೋಗ್ ಉಪಾಧ್ಯಕ್ಷ, ಕ್ಯಾಬಿನೆಟ್ ಕಾರ್ಯದರ್ಶಿ, ಮೂರು ರಕ್ಷಣಾ ಸೇವೆಗಳ ಮುಖ್ಯಸ್ಥರು, ಆರ್ಬಿಐ ಗವರ್ನರ್, ವಿದೇಶಾಂಗ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯದರ್ಶಿ ಸೇರಿದ್ದಾರೆ.
 • ರಕ್ಷಣಾ ಉತ್ಪಾದನೆ ಮತ್ತು ಸರಬರಾಜು ಇಲಾಖೆಯ ಕಾರ್ಯದರ್ಶಿ, ರಕ್ಷಣಾ ಮಂತ್ರಿ ಮತ್ತು ಕಾರ್ಯದರ್ಶಿ (ಆರ್) ಗೆ ವೈಜ್ಞಾನಿಕ ಸಲಹೆಗಾರ ಕೂಡ ಸಮಿತಿಯ ಸದಸ್ಯರಾಗಿದ್ದಾರೆ.
 • ಈ ಗುಂಪು ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಹಾಯ ಮಾಡುತ್ತದೆ ಮತ್ತು ದೇಶದ ಭದ್ರತಾ ವ್ಯವಹಾರಗಳ ದೀರ್ಘಕಾಲೀನ ಕಾರ್ಯತಂತ್ರದ ವಿಮರ್ಶೆಯನ್ನು ಇತರ ಕಾರ್ಯಗಳಲ್ಲಿ ಕೈಗೊಳ್ಳಲಿದೆ.
 • ಇತರ ಸಚಿವಾಲಯಗಳು ಮತ್ತು ಇಲಾಖೆಗಳ ಪ್ರತಿನಿಧಿಗಳು ಸಮೂಹದ ಸಭೆಗಳಿಗೆ ಮತ್ತು ಅಗತ್ಯವಿದ್ದಾಗ ಆಮಂತ್ರಣವನ್ನು ಆಹ್ವಾನಿಸಲಾಗುತ್ತದೆ.

ಎಸ್ಪಿಜಿಗೆ ನಿಯೋಜಿಸಲಾದ ಕಾರ್ಯಗಳು

 • ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ನ ಮೂರು ಹಂತದ ರಚನೆಯ ಮೊದಲ ಹಂತವೆಂದರೆ ಸ್ಟ್ರಾಟೆಜಿಕ್ ಪಾಲಿಸಿ ಗ್ರೂಪ್.
 • ಇದು NSC ಯ ನಿರ್ಧಾರ-ತಯಾರಿಕಾ ಉಪಕರಣದ ನ್ಯೂಕ್ಲಿಯಸ್ ಅನ್ನು ರೂಪಿಸುತ್ತದೆ.
 • ಮುಂಚಿನ, ಕ್ಯಾಬಿನೆಟ್ ಕಾರ್ಯದರ್ಶಿ ಅದರ ಅಧ್ಯಕ್ಷರಾಗಿದ್ದರು, ಆದರೆ ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ಗುಂಪಿನ ಅಧ್ಯಕ್ಷರಾಗಿದ್ದಾರೆ.
 • ಎಸ್ಪಿಜಿ ರಾಷ್ಟ್ರೀಯ ಭದ್ರತಾ ಮಂಡಳಿಗೆ ನೆರವಾಗಲಿದೆ ಮತ್ತು ದೇಶದ ಭದ್ರತಾ ವ್ಯವಹಾರಗಳ ದೀರ್ಘಾವಧಿಯ ಕಾರ್ಯತಂತ್ರದ ವಿಮರ್ಶೆಯನ್ನು ಇತರ ಕಾರ್ಯಗಳಲ್ಲಿ ಕೈಗೊಳ್ಳಲಿದೆ.
 • ಇದು ರಾಷ್ಟ್ರೀಯ ಭದ್ರತಾ ನೀತಿಗಳನ್ನು ರೂಪಿಸುವಲ್ಲಿನ ಅಂತರ-ಮಂತ್ರಿಗಳ ಸಮನ್ವಯ ಮತ್ತು ಸೂಕ್ತ ಒಳಹರಿವಿನ ಏಕೀಕರಣಕ್ಕೆ ಪ್ರಮುಖ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ.
 • ಎನ್ಎಸ್ಎ ಎಸ್ಪಿಜಿಯ ಸಭೆಗಳನ್ನು ನಡೆಸುತ್ತದೆ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ಯೂನಿಯನ್ ಸಚಿವಾಲಯಗಳು ಮತ್ತು ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳ ಗುಂಪಿನ ನಿರ್ಧಾರಗಳನ್ನು ಅನುಷ್ಠಾನಗೊಳಿಸುತ್ತದೆ.

ಗೂಗಲ್ ಪ್ಲಸ್

ಸುದ್ಧಿಯಲ್ಲಿ ಏಕಿದೆ ?ಬಳಕೆದಾರರ ಮಾಹಿತಿ ಸೋರಿಕೆ ಆರೋಪದ ಹಿನ್ನೆಲೆ ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ.

ಹಿನ್ನಲೆ

 • ಕಳೆದ ಮಾರ್ಚ್​ನಲ್ಲಿಯೇ ಮಾಹಿತಿ ಸೋರಿಕೆಗೆ ಪೂರಕವಾದ ಬಗ್ ಸೇರಿಕೊಂಡಿರುವುದು ಗೂಗಲ್​ಗೆ ತಿಳಿದುಬಂದಿತ್ತು. ಆದರೆ ಬಳಕೆದಾರರಿಗೆ ಈ ಕುರಿತು ಮಾಹಿತಿ ನೀಡಿರಲಿಲ್ಲ. ಆದರೆ ಈ ವಿಷಯವನ್ನು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿ, ಸಾವಿರಾರು ಬಳಕೆದಾರರ ಮಾಹಿತಿ ಸಾರ್ವಜನಿಕಗೊಂಡಿದೆ ಎಂದು ಹೇಳಿತ್ತು.
 • ಹೀಗಾಗಿ ಮುಂದಿನ 10 ತಿಂಗಳವರೆಗೆ ಗೂಗಲ್ ಪ್ಲಸ್ ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ.
 • ಆರ್ಕಟ್ ಬಳಿಕ ಹೊಸ ಸಾಮಾಜಿಕ ಜಾಲತಾಣವನ್ನಾಗಿ ಗೂಗಲ್ ಪ್ಲಸ್​ನ್ನು ಗೂಗಲ್ ಪರಿಚಯಿಸಿತ್ತು. ಆದರೆ ಫೇಸ್​ಬುಕ್​ನಷ್ಟು ಖ್ಯಾತಿ ಗಳಿಸಿರಲಿಲ್ಲ.

ಗೂಗಲ್ ಪ್ಲಸ್

 • Google ಪ್ಲಸ್ (Google+ ನಂತೆ ಶೈಲೀಕೃತಗೊಳಿಸಲ್ಪಟ್ಟಿದೆ) ಎಂಬುದು Google ನಿಂದ ಸ್ವಾಮ್ಯದ ಮತ್ತು ನಿರ್ವಹಿಸಲ್ಪಡುವ ಇಂಟರ್ನೆಟ್ ಆಧಾರಿತ ಸಾಮಾಜಿಕ ನೆಟ್ವರ್ಕ್ ಆಗಿದೆ.
 • ಸೇವೆಯ ವ್ಯಾಖ್ಯಾನವನ್ನು ಅವಲಂಬಿಸಿ, ಬಳಕೆಯ ಅಂಕಿಅಂಶಗಳು ಬದಲಾಗುತ್ತಾ ಹೋದರೂ, ಸಾಮಾಜಿಕ ನೆಟ್ವರ್ಕಿಂಗ್ಗೆ ಗೂಗಲ್ನ ನಾಲ್ಕನೇ ಆಕ್ರಮಣವು ತನ್ನ ಆರಂಭಿಕ ವರ್ಷಗಳಲ್ಲಿ ಬಲವಾದ ಬೆಳವಣಿಗೆಯನ್ನು ಅನುಭವಿಸಿತು.
 • ಗೂಗಲ್ ಬಝ್ (2010 ರಲ್ಲಿ ಪ್ರಾರಂಭವಾಯಿತು, 2011 ರಲ್ಲಿ ನಿವೃತ್ತರಾದರು), ಗೂಗಲ್ ಫ್ರೆಂಡ್ (ಮಾರ್ಚ್ 1, 2012 ರೊಳಗೆ ನಿವೃತ್ತಿಯಾದದ್ದು 2008, ಪ್ರಾರಂಭಿಸಿದೆ), ಮತ್ತು ಆರ್ಕುಟ್ (2004 ರಲ್ಲಿ ಬಿಡುಗಡೆಯಾದಂತೆ, 2013 ರ ಹೊತ್ತಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ Google+ ಸಾಮಾಜಿಕ ನೆಟ್ವರ್ಕಿಂಗ್ಗೆ ಕಂಪನಿಯ ನಾಲ್ಕನೇ ಹಂತವಾಗಿದೆ ಅಂಗಸಂಸ್ಥೆ ಗೂಗಲ್ ಬ್ರೆಜಿಲ್ – ಸೆಪ್ಟೆಂಬರ್ನಲ್ಲಿ ನಿವೃತ್ತಿ 2014).
 • ಮೂರು ಗೂಗಲ್ ಕಾರ್ಯನಿರ್ವಾಹಕರು ಈ ಸೇವೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ, ಇದು ನವೆಂಬರ್ 2015 ರಲ್ಲಿ ಪುನರ್ ವಿನ್ಯಾಸಕ್ಕೆ ಕಾರಣವಾದ ಗಣನೀಯ ಬದಲಾವಣೆಗಳಿಗೆ ಒಳಪಟ್ಟಿದೆ.
 • ಜೂನ್ 2011 ರಲ್ಲಿ Google+ ಪ್ರಾರಂಭವಾಯಿತು. ವೈಶಿಷ್ಟ್ಯಗಳು ಫೋಟೋಗಳು ಮತ್ತು ಸ್ಥಿತಿ ನವೀಕರಣಗಳನ್ನು ಸ್ಟ್ರೀಮ್ ಅಥವಾ ಆಸಕ್ತಿ ಆಧಾರಿತ ಸಮುದಾಯಗಳು, ಗುಂಪಿನ ವಿವಿಧ ರೀತಿಯ ಸಂಬಂಧಗಳು (ಸರಳವಾಗಿ “ಸ್ನೇಹಿತರು” ಬದಲಿಗೆ) ವಲಯಗಳಲ್ಲಿ, ಬಹು-ವ್ಯಕ್ತಿ ಇನ್ಸ್ಟೆಂಟ್ ಮೆಸೇಜಿಂಗ್, ಪಠ್ಯ ಮತ್ತು ಪಠ್ಯವನ್ನು ಪೋಸ್ಟ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿತ್ತು.
 • ಹ್ಯಾಂಗೌಟ್ಸ್, ಈವೆಂಟ್ಗಳು, ಸ್ಥಳ ಟ್ಯಾಗಿಂಗ್ ಮತ್ತು ಖಾಸಗಿ ಕ್ಲೌಡ್-ಆಧಾರಿತ ಆಲ್ಬಮ್ಗಳಿಗೆ ಫೋಟೋಗಳನ್ನು ಸಂಪಾದಿಸುವ ಮತ್ತು ಅಪ್ಲೋಡ್ ಮಾಡುವ ಸಾಮರ್ಥ್ಯದ ವೀಡಿಯೊ ಚಾಟ್.

ಡ್ರೋನ್ ಮಾರಾಟ

ಸುದ್ಧಿಯಲ್ಲಿ ಏಕಿದೆ ?ಅತ್ಯಾಧುನಿಕ ತಂತ್ರಜ್ಞಾನದ ಸೇನಾ ಬಳಕೆಯ 48 ಡ್ರೋನ್​ಗಳನ್ನು ಚೀನಾ ಸರ್ಕಾರ ಪಾಕಿಸ್ತಾನಕ್ಕೆ ಪೂರೈಕೆ ಮಾಡಲಿದೆ.

 • ಎಲ್ಲ ರೀತಿಯ ಹವಾಮಾನದಲ್ಲಿಯೂ ನಿಖರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಈ ಡ್ರೋನ್​ಗಳಿಗಿದೆ. ಈ ಒಪ್ಪಂದವು ಚೀನಾ-ಪಾಕ್ ಮಧ್ಯದ ಅತಿ ದೊಡ್ಡ ಮಿಲಿಟರಿ ವಾಣಿಜ್ಯ ವ್ಯವಹಾರ ಎನ್ನಲಾಗಿದೆ. ಆದರೆ, ಡ್ರೋನ್​ಗಳನ್ನು ಎಷ್ಟು ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬುದು ಬಹಿರಂಗವಾಗಿಲ್ಲ.
 • ಬಹೋಪಯೋಗಿ ಮಾನವ ರಹಿತ (ಯುಎವಿ) ಉಡಾವಣೆಯ ಈ ಡ್ರೋನ್​ಗಳಿಗೆ ‘ವಿಂಗ್ ಲಾಂಗ್- 2’ ಎಂದು ಹೆಸರಿಸಲಾಗಿದೆ.
 • ಭಾರತ ಮತ್ತು ರಷ್ಯಾ ನಡುವೆ ‘ಎಸ್- 400 ಟ್ರಯಂಫ್’ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿ ಒಪ್ಪಂದ ಏರ್ಪಟ್ಟ ಬೆನ್ನಿಗೆ ಈ ಡ್ರೋನ್ ಖರೀದಿ ವ್ಯವಹಾರ ನಡೆದಿರುವುದು ಮಹತ್ವ ಬೆಳವಣಿಗೆ.
Related Posts
“3rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮತಗಟ್ಟೆ ಮಾಹಿತಿಗೆ ಚುನಾವಣಾ ಆ್ಯಪ್! ನಿಮ್ಮ ಹಕ್ಕು ಚಲಾಯಿಸುವ ಮತಗಟ್ಟೆ ಎಲ್ಲಿದೆ? ಅದನ್ನು ತಲುಪುವ ಮಾರ್ಗ ಯಾವುದು? ಸಂಚಾರ ದಟ್ಟಣೆ ಕಿರಿಕಿರಿ ಇಲ್ಲದೆ ಸುಲಭವಾಗಿ ತಲುಪಲು ಇರುವ ಮಾರ್ಗಗಳು ಯಾವುವು? ಸರತಿಯಲ್ಲಿ ಎಷ್ಟು ಜನರಿದ್ದಾರೆ? ಇಂತಹ ಹಲವು ಮಾಹಿತಿಯನ್ನು ಈಗ ಬೆರಳ ತುದಿಯಲ್ಲೇ ...
READ MORE
National Current Affairs – UPSC/KAS Exams- 1st January 2019
Central Information Commission (CIC) Topic: Polity and Governance IN NEWS: The government has appointed Sudhir Bhargava the new Chief Information Commissioner. Four new members have also been appointed to the Central Information ...
READ MORE
Karnataka Current Affairs – KAS-KPSC Exams – 9th – 10th Feb 2018
Karnataka HC gets five more judges The Karnataka High Court will get five new additional judges. The President appointed Dixit Krishna Shripad, Shankar Ganapathi Pandit, Ramakrishna Devdas, Bhotanhosur Mallikarjuna Shyam Prasad and ...
READ MORE
PSLV-C31 launches IRNSS-1E
PSLV-C31 successfully put into orbit IRNSS-1E, the fifth satellite of the Indian Regional Navigation Satellite System (IRNSS) after its succesful launch from the Satish Dhawan Space Centre (SDSC), SHAR, Sriharikota PSLV-C31 ...
READ MORE
The Central Data Centre, Army Cloud and Digi-Locker were launched as a part of the Digital Army programme The facility under the Army Cloud includes a Central Data Centre, a Near ...
READ MORE
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಡೋಕ್ಲಾಂ ಬಿಕ್ಕಟ್ಟು ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ. ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ...
READ MORE
Bengaluru’s tomato varieties get researchers national award
Bengaluru’s very own high-yielding tomato varieties of Arka Rakshak and Arka Samrat have helped their researchers bag a prestigious national award. A team of horticultural scientists from the Hessarghatta-based Indian Institute ...
READ MORE
Karnataka: Govt may stop supplying PDS sugar
Food and Civil Supplies Minister U T Khader on 27th Feb said that the state government will have to discontinue supply of sugar through PDS if the Centre does not restore its ...
READ MORE
Get ready for the Budget 2018
Expected big news - Budget expected to focus on direct taxes While there are unlikely to be any major changes in indirect tax as most of them are now under the ...
READ MORE
Rural Development-Rural Infrastructure-Thirteenth Finance Commission Grants & Grama Swaraj Project
The Thirteenth Finance Commission has recommended a five year tenure from 2010-11 to 2014-15 for the utilisation of its grants. The grants are released in 2 instalments annually, based on the ...
READ MORE
“3rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 1st January
Karnataka Current Affairs – KAS-KPSC Exams – 9th
PSLV-C31 launches IRNSS-1E
Digital Army programme
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Bengaluru’s tomato varieties get researchers national award
Karnataka: Govt may stop supplying PDS sugar
Get ready for the Budget 2018
Rural Development-Rural Infrastructure-Thirteenth Finance Commission Grants & Grama

Leave a Reply

Your email address will not be published. Required fields are marked *