19th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

ಶಬರಿಮಲೆ ದೇಗುಲ

 • ಸುದ್ಧಿಯಲ್ಲಿ ಏಕಿದೆಸಂಪ್ರದಾಯದ ಹೆಸರಿನಲ್ಲಿ 10-50 ವರ್ಷದವರೆಗಿನ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಪೀಠ, ಮಹಿಳೆಯರಿಗೆ ಏಕೆ ತಾರತಮ್ಯ ತೋರಿಸಬೇಕು ಎಂದು ಪ್ರಶ್ನಿಸಿದೆ.
 • ಪ್ರತಿ ಮನುಷ್ಯನಿಗೂ ಆತನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ, ಅವರ ಹಕ್ಕನ್ನು ದೃಢೀಕರಿಸುವ, ಧರ್ಮವನ್ನು ಪ್ರಚಾರ ಪಡಿಸುವ ಹಾಗೂ ಅದನ್ನು ಅನುಷ್ಠಾನಕ್ಕೆ ತರುವ ಹಕ್ಕು ಇದೆ. ಅಂದ ಮೇಲೆ ಮಹಿಳೆಯರ ಪೂಜೆಯ ಹಕ್ಕು ಕಾನೂನನ್ನು ಹೇಗೆ ಅವಲಂಬಿಸಿರುತ್ತದೆ? ಅದು ಸಾಂವಿಧಾನಿಕ ಹಕ್ಕು ಎಂದಿದ್ದಾರೆ. ಅಲ್ಲದೆ, ಮಹಿಳೆಯರ ಋತುಚಕ್ರದ ಜತೆ ಅವರ ಧಾರ್ಮಿಕ ಭಾವನೆಯನ್ನು ಸೇರಿಸುವುದು ಅಸಂಬದ್ಧ ಎನಿಸುತ್ತದೆ ಎಂದೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಿನ್ನಲೆ

 • ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿದ್ದು ಆತ ನೆಲೆಸಿರುವ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಾರದು. ಮುಟ್ಟಾಗುವ ಮಹಿಳೆಯರು ಶಬರಿಮಲೆಗೆ ಹೋಗುವುದು ಅಪಚಾರ. ಹಾಗಾಗಿ 10-50 ವರ್ಷದ ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ಕಡ್ಡಾಯ ಮಾಡಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಮಹಿಳಾ ಪರ ತೀರ್ಪನ್ನು ಎತ್ತಿ ಹಿಡಿದಿದೆ.

ಸಾಂವಿಧಾನಿಕ ದೃಷ್ಟಿಕೋನ

 • ಮಹಿಳೆಯರಿಗೆ ಪ್ರವೇಶ ನಿಷೇಧ ಹೇರಿರುವುದು ಮೂಲಭೂತ ಹಕ್ಕಿನ ಉಲ್ಲಂಘನೆ .ಅಸ್ಪೃಶ್ಯತೆಯನ್ನು ನಿಷೇಧಿಸುವ ಸಂವಿಧಾನದ 17 ನೇ ವಿಧಿಯ ಅನ್ವಯವು ಇದು ತಪ್ಪು .ಋತುಸ್ರಾವದ ಕಾರಣಕ್ಕೆ ಮಹಿಳೆಯರನ್ನು ತಾರತಮ್ಯದಿಂದ ನೋಡಲಾಗಿದೆ ಎಂದು ಹ್ಯಾಪಿ ಟು ಬ್ಲೀಡ್ ಅಭಿಯಾನದ ಪರವಾಗಿ ವಾದಿಸಿದ ವಕೀಲೆ ಹೇಳಿದರು
 • ಪ್ರಾರ್ಥನೆ, ದೇವರ ಪೂಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಅದು ಕಾನೂನಿನ ಮೇಲೆ ಅವಲಂಬಿತವಾಗಿಲ್ಲ ಎಂದು ಸುಪ್ರೀಂಕೋರ್ಟ್​ ಇಂದು ಸ್ಪಷ್ಟಪಡಿಸಿದೆ.

ಸೆನ್ಸಾರ್ ವ್ಯವಸ್ಥೆ

 • ಸುದ್ಧಿಯಲ್ಲಿ ಏಕಿದೆಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸೆನ್ಸಾರ್ ವ್ಯವಸ್ಥೆ ಆರಂಭವಾಗಿ 100 ವರ್ಷ ಪೂರ್ಣಗೊಳ್ಳುತ್ತಿದೆ. ಚಿತ್ರರಂಗದ ಆರಂಭದ ದಿನಗಳಿಂದ ಹಿಡಿದು ಇತ್ತೀಚಿನ ಬಾಲಿವುಡ್ ಚಿತ್ರ ಪದ್ಮಾವತಿ ವರೆಗೆ ಅದೆಷ್ಟೋ ಬಾರಿ ಸೆನ್ಸಾರ್ ಮಂಡಳಿ ವಿವಾದಕ್ಕೆ ಗುರಿಯಾಗಿದೆ.

ಮೊದಲ ಮಂಡಳಿ

 • 1920ರಲ್ಲಿ ಅಂದಿನ ಬಾಂಬೆಮದ್ರಾಸ್ಕಲ್ಕತ್ತಾ ಹಾಗೂ ರಂಗೂನ್​ಗಳಲ್ಲಿ ಸೆನ್ಸಾರ್ ಮಂಡಳಿಗಳನ್ನು ಸ್ಥಾಪಿಸಲಾಗಿತ್ತು. ದೇಶ, ವಿದೇಶದ ಸಿನಿಮಾಗಳನ್ನೂ ಸೆನ್ಸಾರ್ ಮಾಡಿದ ಬಳಿಕವೇ ಪ್ರದರ್ಶನ ಮಾಡಲಾಗುತ್ತಿತ್ತು.
 • ಇದಕ್ಕಾಗಿ ಕೆಲ ನಿಯಮಗಳನ್ನೂ ಜಾರಿಗೆ ತರಲಾಯಿತು. 1927-28ರಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯ ಸಿನಿಮಾಟೊಗ್ರಾಫ್ ಸಮಿತಿ ರಚಿಸಿ, ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಟಿ. ರಾಗಾಚಾರಿಯರ್ ಸಮಿತಿ ಮುಖ್ಯಸ್ಥರಾಗಿದ್ದರು.
 • ಸಿನಿಮಾಗಳನ್ನು ವರ್ಗೀಕರಣ ಮಾಡಬೇಕು. ಯು, ಎ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ಶಿಫಾರಸು ಮಾಡಿತು. ಆದರೆ ಪ್ರಮಾಣಪತ್ರ ನೀಡಿಕೆ ಶಿಫಾರಸನ್ನು ಬ್ರಿಟಿಷ್ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. 1940ರ ವೇಳೆಗೆ 1,774 ಚಿತ್ರಗಳನ್ನು ವೀಕ್ಷಿಸಿದ್ದ ಸೆನ್ಸಾರ್ ಮಂಡಳಿ, 25ಕ್ಕೂ ಅಧಿಕ ಚಿತ್ರಗಳಿಗೆ ಸೂಕ್ತ ತಿದ್ದುಪಡಿ ಮಾಡಿ ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು.

ಆರಂಭವಾಗಿದ್ದು ಹೀಗೆ

 • ಪ್ಯಾರಿಸ್​ನ ಬಾಜಾರ್ ಆಫ್ ಚಾರಿಟಿಯಲ್ಲಿ ಚಲನಚಿತ್ರ ಪ್ರದರ್ಶನ ಅಂದಿನ ಕಾಲದಲ್ಲಿ ಪ್ರಮುಖ ಆಕರ್ಷಣೆ. ಇಂದಿನ ಚಿತ್ರಮಂದಿರದ ರೀತಿ ಸೌಲಭ್ಯಗಳು ಅಂದು ಇರಲಿಲ್ಲ. ಮರದ ಹಲಗೆಗಳಿಂದ ನಿರ್ವಿುಸಲಾದ ಕೊಠಡಿಯಲ್ಲಿ ಸಿನಿಮಾ ಪ್ರದರ್ಶಿಸಲಾಗುತ್ತಿತ್ತು. 1897ರಲ್ಲಿ ಚಿತ್ರಪ್ರದರ್ಶನ ವೇಳೆ ನೈಟ್ರೇಟ್ ರಾಸಾಯನಿಕದಿಂದ ಬೆಂಕಿ ಅನಾಹುತ ಸಂಭವಿಸಿ 126 ಜನರು ಮೃತಪಟ್ಟರು. ಈ ಘಟನೆ ಬಳಿಕ ಸಿನಿಮಾ ಪ್ರದರ್ಶನಕ್ಕೆ ಮೊದಲ ಬಾರಿಗೆ ಕಾನೂನು ರೂಪಿಸಲಾಯಿತು.

ಬೆಳೆದು ಬಂದಿದ್ದು ಹೀಗೆ

 • 1918ರ ಕಾಯ್ದೆ ಪ್ರಕಾರ ಸಿನಿಮಾಗಳ ಪ್ರದರ್ಶನಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳು ಪರವಾನಗಿ ಬೇಕಿತ್ತು. ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳು ಪರವಾನಗಿ ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಇನ್​ಸ್ಪೆಕ್ಟರ್​ಗಳನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಯಾವ ಅಂಶಗಳನ್ನು ಪ್ರದರ್ಶಿಸಬೇಕು, ಯಾವ ಅಂಶಗಳನ್ನು ತೋರಿಸಬಾರದು ಎಂಬ ಕುರಿತು ಯಾವುದೇ ಸ್ಪಷ್ಟತೆ ಇರಲಿಲ್ಲ.

ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್

 • ಮೊದಲು ಭದ್ರತೆಗೆ ಮಾತ್ರ ಸೀಮಿತವಾಗಿದ್ದ ನಿಯಮಗಳು ನಂತರದ ದಿನಗಳಲ್ಲಿ ಸಿನಿಮಾದಲ್ಲಿರುವ ದೃಶ್ಯಾವಳಿಗೂ ವಿಸ್ತರಣೆ ಯಾಯಿತು. 1912ರಲ್ಲಿ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್ ಸ್ಥಾಪನೆಯಾಯಿತು.

ಕೆಲ ಚಿತ್ರಗಳು ಬ್ಯಾನ್

 • ಗಾಂಧಿ ಐತಿಹಾಸಿಕ ಯಾತ್ರೆ ಸಹಿತ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಹಲವು ಚಿತ್ರಗಳ ಪ್ರದರ್ಶನಕ್ಕೆ ಅಂದಿನ ಬ್ರಿಟಿಷ್ ಸರ್ಕಾರ ನಿಷೇಧ ಹೇರಿತ್ತು.

ಭಾರತದಲ್ಲೂ ಆರಂಭ

 • ಭಾರತದಲ್ಲಿ ಆರಂಭದ ದಿನಗಳಲ್ಲಿ ಸುದ್ದಿ, ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ವಿುಸಲಾಗುತ್ತಿತ್ತು. 1913ರಲ್ಲಿ ರಾಜಾ ಹರಿಶ್ಚಂದ್ರ ಪೂರ್ಣ ಪ್ರಮಾಣದ ಸಿನಿಮಾ ಬಿಡುಗಡೆಯಾಯಿತು. 1918ರಲ್ಲಿ ಸಿನಿಮಾಟೊಗ್ರಾಫ್ ಕಾಯ್ದೆ ಜಾರಿಗೆ ಬಂತು. ಸಿನಿಮಾಗಳ ಸೆನ್ಸಾರ್​ಶಿಪ್ ಕೂಡ ಆರಂಭವಾಯಿತು.

ಹಲವು ಸವಾಲುಗಳು

 • ಸ್ವಾತಂತ್ರ್ಯ ನಂತರ ಸಾಕಷ್ಟು ಬದಲಾವಣೆ, ವಿವಾದಕ್ಕೆ ಸಾಕ್ಷಿಯಾಗಿರುವ ಸೆನ್ಸಾರ್ ಮಂಡಳಿ, ಈಗ ಮುಂದುವರಿದ ತಂತ್ರಜ್ಞಾನದ ಪರಿಣಾಮ ಅಷ್ಟೇ ಸವಾಲುಗಳನ್ನೂ ಎದುರಿಸುತ್ತಿದೆ. ಅಂತರ್ಜಾಲ ತಾಣಗಳಲ್ಲೇ ನೇರವಾಗಿ ಸಿನಿಮಾಗಳನ್ನು ಬಿಡುಗಡೆ ಮಾಡಬಹುದಾಗಿದೆ. ಕೆಲ ಆಪ್, ವೆಬ್​ಸೈಟ್​ಗಳಿಗೆ ಚಂದಾದಾರರಾಗಿ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಇವುಗಳಲ್ಲಿನ ಆಕ್ಷೇಪಾರ್ಹ ಅಂಶ ನಿಯಂತ್ರಣ ಸೆನ್ಸಾರ್ ಮಂಡಳಿಗೆ ಸವಾಲಾಗಿದೆ.

ಮೇಲ್ಸೇತುವೆಗೆ ಪ್ರಸ್ತಾಪ

 • ಸುದ್ಧಿಯಲ್ಲಿ ಏಕಿದೆಕರ್ನಾಟಕ -ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 212 ಹಾದುಹೋಗುವ ಮಾರ್ಗದಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗದಂತೆ ಸುಮಾರು ಐದು ಕಿ.ಮೀ. ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಬಯಸಿದ್ದಾರೆ.
 • ದಟ್ಟ ಅರಣ್ಯ ಹಾಗೂ ವನ್ಯಜೀವಿ ಹೆಚ್ಚಿರುವ ಪ್ರದೇಶದಲ್ಲಿ ಹೆದ್ದಾರಿ ಹಾದುಹೋಗಲಿರುವುದು ವಿವಾದಕ್ಕೆ ಸಿಲುಕಿರುವ ಕಾರಣ ಕೇಂದ್ರ ಸಚಿವರು ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
 • ”ರಾಷ್ಟ್ರೀಯ ಹೆದ್ದಾರಿ 212 ಕಾಮಗಾರಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದು, ಕರ್ನಾಟಕ ಮತ್ತು ಕೇರಳ ಸರಕಾರಗಳು ಚರ್ಚಿಸಿ ಒಮ್ಮತಾಭಿಪ್ರಾಯಕ್ಕೆ ಬಂದು ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದರೆ ಪರ್ಯಾಯ ಪರಿಹಾರಕ್ಕೆ ಕೇಂದ್ರ ಸರಕಾರ ಸಿದ್ಧವಿದೆ.
 • ಈ ಮಾರ್ಗದಲ್ಲಿ ಸುಮಾರು 5 ಕಿ.ಮೀ. ಮೇಲ್ಸೇತುವೆ ಹೆದ್ದಾರಿ ನಿರ್ಮಿಸಿ, ಕೆಳಭಾಗದಲ್ಲಿ ಪ್ರಾಣಿಗಳು ಅಡಚಣೆ ಇಲ್ಲದಂತೆ ಸಂಚರಿಸಲು ಅನುವು ಮಾಡಿಕೊಡಲಾಗುವುದು.
 • ಬೆಂಗಳೂರು – ಹಾಸನ ರಾಷ್ಟ್ರೀಯ ಹೆದ್ದಾರಿ 48 ಈಗಾಗಲೇ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

ಇದನ್ನು ತಡೆಯಲು ಈ ರಾಷ್ಟ್ರೀಯ ಹೆದ್ದಾರಿಯನ್ನು ಆಕ್ಸಸ್‌ ಕಂಟ್ರೋಲ್‌ ಹಾಗೂ ಎರಡೂ ಬದಿಗಳಲ್ಲಿ ಸವೀರ್‍ಸ್‌ ರಸ್ತೆಗಳನ್ನು ನಿರ್ಮಿಸಿಕೊಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಭಾಷಾ ಅಲ್ಪ ಸಂಖ್ಯಾತ ಕೋಟಾ

 • ಸುದ್ಧಿಯಲ್ಲಿ ಏಕಿದೆಕರ್ನಾಟಕದಲ್ಲಿ ವೈದ್ಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಭಾಷಾ ಅಲ್ಪಸಂಖ್ಯಾತ ಕೋಟಾದಡಿ ಪ್ರವೇಶ ಪಡೆಯಲು ರಾಜ್ಯದಲ್ಲಿ 10 ವರ್ಷ ಕಡ್ಡಾಯವಾಗಿ ವ್ಯಾಸಂಗ ಮಾಡಿರಬೇಕೆಂಬ ಸರಕಾರದ ಹೊಸ ನಿಯಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.
 • ಭಾಷಾ ಅಲ್ಪಸಂಖ್ಯಾತರೆಂದು ಹಕ್ಕು ಮಂಡಿಸಬೇಕಾದ ವ್ಯಕ್ತಿಯು ಸಾಮಾನ್ಯವಾಗಿ ರಾಜ್ಯದಲ್ಲಿ ವಾಸಿಸುತ್ತಿರಬೇಕು. ಭಾಷಾ ಅಲ್ಪಸಂಖ್ಯಾತ ಕೋಟಾದಡಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕಾದವರು ರಾಜ್ಯದಲ್ಲಿ ಕನಿಷ್ಠ 10 ವರ್ಷ ಕಡ್ಡಾಯವಾಗಿ ವ್ಯಾಸಂಗ ಮಾಡಿರಬೇಕೆಂಬ ನಿಯಮ ಕಾನೂನು ಬದ್ಧವಾಗಿದೆ. ಇದರಲ್ಲಿ ಸರಕಾರ ಸಂವಿಧಾನಿಕ ಅಂಶಗಳನ್ನು ಅಥವಾ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ,”ಎಂದು ಹೈಕೋರ್ಟ್‌ ಹೇಳಿದೆ.

ಭಾಷಾ ಅಲ್ಪಸಂಖ್ಯಾತರು

 • ಬಹುಪಾಲು ರಾಜ್ಯಗಳು ಪ್ರಾದೇಶಿಕ ಭಾಷೆಯೆಂದು ಕರೆಯಲ್ಪಡುವ ಬಹುಪಾಲು ಜನರು ಮಾತನಾಡುವ ಪ್ರಬಲ ಭಾಷೆಯನ್ನು ಹೊಂದಿವೆ.
 • ಯಾರು ಪ್ರಾದೇಶಿಕ ಭಾಷೆ ಮಾತನಾಡುವುದಿಲ್ಲವೋ ಅವರೆಲ್ಲ ಭಾಷಾ ಅಲ್ಪಸಂಖ್ಯಾತರು

ಮೂರು ವಿಧದ ಭಾಷಾ ಅಲ್ಪಸಂಖ್ಯಾತರನ್ನು ಭಾರತದಲ್ಲಿ ಗುರುತಿಸಬಹುದು ಮತ್ತು ಅವುಗಳೆಂದರೆ:

 • ಭಾಷಾ ಅಲ್ಪಸಂಖ್ಯಾತರು
 • ಬುಡಕಟ್ಟು ಸಂಬಂಧ ಹೊಂದಿರುವ ಭಾಷಾ ಅಲ್ಪಸಂಖ್ಯಾತರು
 • ಧಾರ್ಮಿಕ ಅಂಗೀಕಾರದೊಂದಿಗೆ ಭಾಷಾವಾರು ಅಲ್ಪಸಂಖ್ಯಾತರು
 • ಭಾರತದ 2 ಶತಕೋಟಿ ಜನಸಂಖ್ಯೆಯ ಸುಮಾರು 36.3 ಮಿಲಿಯನ್ ಜನಗಣತಿ (ಜನಗಣತಿ 2011) ಭಾರತದಲ್ಲಿ 28 ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿರುವ ಒಂದು ಭಾಷೆಯನ್ನು “ಸಂಪೂರ್ಣ ಅಲ್ಪಸಂಖ್ಯಾತ ಭಾಷೆ” ಎಂದು ಹೇಳುತ್ತದೆ. ಆ ಭಾಷೆಗಳಲ್ಲಿ ಹೆಚ್ಚಿನವು ಆದಿವಾಸಿ ಭಾಷೆಗಳು.
 • ಭಾಷಾವಾರು ಅಲ್ಪಸಂಖ್ಯಾತರ ರಕ್ಷಣೆಗಾಗಿ:
 • ಜಿಲ್ಲೆಯ ಅಥವಾ ಉಪ-ಜಿಲ್ಲೆಯ ಮಟ್ಟದಲ್ಲಿ ಒಟ್ಟು ಜನಸಂಖ್ಯೆಯ ಕನಿಷ್ಠ 15% ಮಾತನಾಡುವ ಪ್ರಮುಖ ನಿಯಮಗಳು, ನಿಯಮಗಳು, ಪ್ರಕಟಣೆಗಳು, ಇತ್ಯಾದಿಗಳ ಅನುವಾದ ಮತ್ತು ಪ್ರಕಟಣೆ ಎಲ್ಲ ಭಾಷೆಗಳಿಗೆ.
 • ಅಲ್ಪಸಂಖ್ಯಾತ ಭಾಷೆಗಳ ಘೋಷಣೆ ಜಿಲ್ಲೆಗಳಲ್ಲಿ ಎರಡನೆಯ ಅಧಿಕೃತ ಭಾಷೆಯಾಗಿರುವುದರಿಂದ, ಇಂತಹ ಭಾಷೆಗಳಲ್ಲಿ ಮಾತನಾಡುವ ವ್ಯಕ್ತಿಗಳು 60% ಅಥವಾ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದಾರೆ.
 • ಅಲ್ಪಸಂಖ್ಯಾತ ಭಾಷೆಗಳಲ್ಲಿ ಪ್ರತಿನಿಧಿತ್ವಗಳನ್ನು ಸ್ವೀಕರಿಸಿ ಮತ್ತು ಪ್ರತ್ಯುತ್ತರ ನೀಡಿ; ರಕ್ಷಣೋಪಾಯಗಳ ಯೋಜನೆ.
 • ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ / ಅಲ್ಪಸಂಖ್ಯಾತರ ಭಾಷೆಗಳ ಮೂಲಕ ಸೂಚನೆ.

ಶಿಕ್ಷಣದ ಮಾಧ್ಯಮಿಕ ಹಂತದಲ್ಲಿ ಅಲ್ಪಸಂಖ್ಯಾತ ಭಾಷೆಗಳ ಮೂಲಕ ಸೂಚನೆ.

 • ಭಾಷಾಶಾಸ್ತ್ರದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆದ್ಯತೆಯ ನೋಂದಣಿ ಮತ್ತು ಅಂತರ್-ಶಾಲಾ ಹೊಂದಾಣಿಕೆಗಳನ್ನು ಮುಂದೂಡುವುದು ಅಡ್ವಾನ್ಸ್.
 • ಅಲ್ಪಸಂಖ್ಯಾತ ಭಾಷೆಗಳಲ್ಲಿ ಪಠ್ಯ ಪುಸ್ತಕಗಳು ಮತ್ತು ಶಿಕ್ಷಕರಿಗೆ ಅವಕಾಶ; ರಕ್ಷಣೋಪಾಯಗಳ ಯೋಜನೆ.
 • ಮೂರು-ಭಾಷೆಯ ಫಾರ್ಮುಲಾ ಅಳವಡಿಸುವುದು.

ನೇಮಕಾತಿಯ ಸಮಯದಲ್ಲಿ ರಾಜ್ಯ ಅಧಿಕೃತ ಭಾಷೆಯ ಜ್ಞಾನದ ಮೇಲೆ ಯಾವುದೇ ಒತ್ತಾಯವಿಲ್ಲ. ಪರೀಕ್ಷೆ ಪೂರ್ಣಗೊಳ್ಳುವ ಮೊದಲು ರಾಜ್ಯ ಅಧಿಕೃತ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪರೀಕ್ಷಿಸುವುದು.

 • ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ರಕ್ಷಣೆಯನ್ನು ವಿವರಿಸುವ ಅಲ್ಪಸಂಖ್ಯಾತ ಭಾಷೆಗಳಲ್ಲಿ ಕರಪತ್ರಗಳ ಸಂಚಿಕೆ.
 • ರಾಜ್ಯ ಮತ್ತು ಜಿಲ್ಲೆಯ ಮಟ್ಟದಲ್ಲಿ ಸರಿಯಾದ ಯಂತ್ರಗಳನ್ನು ಸ್ಥಾಪಿಸುವುದು.

ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (ಸಿಐಐಎಲ್), ಮೈಸೂರು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನ ಕಚೇರಿಯಲ್ಲಿ 10000 ಕ್ಕಿಂತ ಕಡಿಮೆ ಜನರು ಮಾತನಾಡುವ ಭಾಷೆಗಳ ಸಂರಕ್ಷಣೆ ಮತ್ತು ರಕ್ಷಣೆಗಾಗಿ ಒಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿಯಲ್ಲಿ, ವ್ಯಾಪಾರಿ ವಿವರಣೆಗಳು, ಏಕಭಾಷಿಕ ಮತ್ತು ದ್ವಿಭಾಷಾ ನಿಘಂಟುಗಳು, ಭಾಷೆಯ ಪ್ರೈಮರ್ಗಳು, ಜಾನಪದ ಕಥೆಯ ಸಂಕಲನಗಳು, ವಿಶ್ವಕೋಶಗಳು, ಇತ್ಯಾದಿಗಳು ಅಳಿವಿನಂಚಿನಲ್ಲಿರುವ ಎಲ್ಲಾ ಭಾಷೆಗಳು / ಮಾತೃಭಾಷೆಗಳು, ವಿಶೇಷವಾಗಿ 10000 ಕ್ಕಿಂತ ಕಡಿಮೆ ಜನರು ಮಾತನಾಡುತ್ತಾರೆ.

Related Posts
Rural Development-Self Employment Programme
Self Employment Programme The Government of India, Ministry of Rural Development has restructured SGSY as “Aajeevika”- National Rural Livelihoods Mission (NRLM) and being implemented from 2010-2011. The State Government is implementing this ...
READ MORE
National Current Affairs – UPSC/KAS Exams- 13th October 2018
India elected to influential UN rights council with highest number of votes Topic: International Relations IN NEWS: India was elected with the highest number of votes by the General Assembly to ...
READ MORE
Karnataka Current Affairs – KAS / KPSC Exams – 22nd July 2017
125 Indira Canteens by I-Day, 73 more by Gandhi Jayanti The difficulty in finding ideal plots of land for Indira Canteens in several wards has forced the State government to climb ...
READ MORE
The Union Cabinet has approved the Real Estate (Regulation and Development) Bill, 2015, as reported by the Select Committee of Rajya Sabha. The Bill will now be taken up for ...
READ MORE
Aviation MRO in the country is currently worth $ 700 million and is set to reach $ 2 billion by 2020 Maintenance, repair and operations(MRO)  involves fixing any sort of mechanical, ...
READ MORE
Karnataka: Mysuru Railway Division Intensifies Track Patrolling
The Mysuru Division of South Western Railways has initiated additional precautionary measures to beef up rail safety following the recent train accident near Kanpur that claimed nearly 150 lives. This includes ...
READ MORE
Karnataka Current Affairs – KAS / KPSC Exams – 29th July 2017
Malware affects thousands of BSNL broadband modems At least 60,000 BSNL broadband modems have become dysfunctional after a malware attack since Wednesday night across the Karnataka Telecom Circle. Bharat Sanchar Nigam Ltd. ...
READ MORE
Karnataka Current Affairs – KAS/KPSC Exams – 28th October 2018
Harvesters make it easy for farmers Agricultural fields which otherwise would have been left unploughed are being cultivated now Agricultural fields that otherwise would have been left uncultivated are being worked on ...
READ MORE
Karnataka Current Affairs – KAS/KPSC Exams – 22nd March 2018
‘Forest Cell should not be under the BBMP’ One of the ideas proposed by the Forest Department to counter the loss of greenery in Bengaluru is taking back the Forest Cell ...
READ MORE
ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ  ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸಾಂತ್ವನ ಯೋಜನೆಯನ್ನು   2000-2001 ನೇ ಸಾಲಿನಲ್ಲಿ ಮಂಜೂರು ಮಾಡಲಾಯಿತು. ಇಂತಹ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆರ್ಥಿಕ  ಪರಿಹಾರ, ಹಾಗೂ ತರಬೇತಿ  ...
READ MORE
Rural Development-Self Employment Programme
National Current Affairs – UPSC/KAS Exams- 13th October
Karnataka Current Affairs – KAS / KPSC Exams
Real Estate (Regulation and Development) Bill, 2015
Maintenance, repair and operations(MRO) industry
Karnataka: Mysuru Railway Division Intensifies Track Patrolling
Karnataka Current Affairs – KAS / KPSC Exams
Karnataka Current Affairs – KAS/KPSC Exams – 28th
Karnataka Current Affairs – KAS/KPSC Exams – 22nd
ಸಾಂತ್ವನ

Leave a Reply

Your email address will not be published. Required fields are marked *