“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

‘ಬಡವರ ಬಂಧು’ ನಿಯಮಾವಳಿ ಸಡಿಲ

1.

ಸುದ್ಧಿಯಲ್ಲಿ ಏಕಿದೆ ?ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ‘ಬಡವರ ಬಂಧು’ ಯೋಜನೆ ಅನುಷ್ಠಾನದಲ್ಲಿ ತೊಡಕಾಗಿದ್ದ ಕೆಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ.

ಯಾವ ನಿಯಮವನ್ನು ಸಡಿಲಿಸಲಾಗಿದೆ ?

 • ‘ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ಹಾಗೂ ರೇಷನ್‌ ಕಾರ್ಡ್‌ ದಾಖಲೆಯಾಗಿ ತೋರಿಸುವುದು ಕಡ್ಡಾಯವಾಗಿತ್ತು. ಈಗ ಆ ನಿಯಮವನ್ನು ಕೈಬಿಡಲು ಆದೇಶಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಿರುವುದರ ಫೋಟೊ ಪಡೆದು ಅದರ ಆಧಾರದ ಮೇಲೆ ಸಾಲ ವಿತರಿಸುವಂತೆ ಸಹಕಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಏನಿದು ಬಡವರ ಬಂಧು ಯೋಜನೆ ?

 • ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ಯೋಜನೆ ಇದಾಗಿದ್ದು, ಕನಿಷ್ಠ 2 ಸಾವಿರು ರೂ.ಗಳಿಂದ 10 ಸಾವಿರ ರೂ.ಗಳ ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ.

ಯಾರು ಈ ಯೋಜನೆಗೆ ಒಳಪಡುತ್ತಾರೆ ?

 • ತಳ್ಳುವ ಗಾಡಿ ಹೊಂದಿರುವ ವ್ಯಾಪಾರಿಗಳು, ಮೋಟಾರ್ ವಾಹನದಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹಣ್ಣು, ಹೂವು, ತರಕಾರಿ ಮಾರುವವರು, ರಸ್ತೆ ಬದಿ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಚರ್ಮದ ಉತ್ಪನ್ನಗಳ ರಿಪೇರಿ ಮತ್ತು ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.

ಎಚ್‌ಎಎಲ್‌ನಿಂದ ಪವನ ವಿದ್ಯುತ್‌ ಘಟಕ ಸ್ಥಾಪನೆ

2.

ಸುದ್ಧಿಯಲ್ಲಿ ಏಕಿದೆ ?ಹಸಿರು ಇಂಧನ ಉತ್ಪಾದನೆ ಹಾಗೂ ಇಂಧನ ಸ್ವಾವಲಂಬನೆ ಹೊಂದುವಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), ಬಾಗಲಕೋಟ ಜಿಲ್ಲೆಯ ಇಳಕಲ್‌ನಲ್ಲಿ 8.4 ಮೆಗಾವ್ಯಾಟ್‌ ಸಾಮರ್ಥ್ಯದ ಪವನ್‌ ವಿದ್ಯುತ್‌ ಘಟಕ ಆರಂಭಿಸಿದೆ.

 • ನಾಲ್ಕು ಟರ್ಬೈನ್‌ಗಳಿರುವ ಘಟಕಕ್ಕೆ ಚಾಲನೆ ನೀಡಿ ಉತ್ಪಾನೆಯಾಗುವ ವಿದ್ಯುತ್‌ ಅನ್ನು ಬೆಂಗಳೂರಿನಲ್ಲಿರುವ ಎಚ್‌ಎಎಲ್‌ನ ವಿವಿಧ ವಿಭಾಗಗಳಿಗೆ ಬಳಕೆ ಮಾಡಲಾಗುತ್ತದೆ.

ಇದರಿಂದಾಗುವ ಪ್ರಯೋಜನಗಳು

 • ಹಸಿರು ಇಂಧನ ಉಪಕ್ರಮದಿಂದಾಗಿ ವಾರ್ಷಿಕ 25 ಸಾವಿರ ಟನ್‌ ಕಾರ್ಬನ್‌ ಡೈ ಆಕ್ಸೈಡ್‌ ವಾತಾವರಣಕ್ಕೆ ಸೇರುವುದನ್ನು ಎಚ್‌ಎಎಲ್‌ ಕಡಿತಗೊಳಿಸಿದಂತಾಗುತ್ತದೆ.
 • ಈ ಯೋಜನೆಯು ಬೆಂಗಳೂರು ಮೂಲದ ವಿವಿಧ ವಿಭಾಗಗಳ ವಿದ್ಯುತ್‌ ಬೇಡಿಕೆಯ ಶೇ.25ರಷ್ಟನ್ನು ಪೂರೈಕೆ ಮಾಡಲಿದೆ.
 • ಸುಜ್ಲಾನ್‌ ಎನರ್ಜಿ ಲಿಮಿಟೆಡ್‌ ಕಂಪನಿಯ ಸಹಯೋಗದಲ್ಲಿ ನಾಲ್ಕು ಗಾಳಿ ಟರ್ಬೈನ್‌ಗಳನ್ನು ಸ್ಥಾಪಿಸಲಾಗಿದ್ದು, ವಾರ್ಷಿಕ ಸುಮಾರು 260 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವನ್ನು ನೂತನ ಘಟಕ ಹೊಂದಿದೆ. ಇದರಿಂದ ಎಚ್‌ಎಎಲ್‌ಗೆ ವಾರ್ಷಿಕ ಸುಮಾರು 18 ಕೋಟಿ ರೂ. ಉಳಿತಾಯವಾಗಲಿದೆ.

ಪವನ ಶಕ್ತಿ

 • ಗಾಳಿ ಶಕ್ತಿಯು ನವೀಕರಿಸಬಹುದಾದ ಶಕ್ತಿಯ ಒಂದು ರೂಪವಾಗಿದೆ, ಗಾಳಿಯಲ್ಲಿ ಚಲನೆಯ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ ಉತ್ಪತ್ತಿಯಾಗುತ್ತದೆ, ಅದು ಪ್ರತಿಯಾಗಿ ವಿದ್ಯುತ್ ಆಗಿ ಪರಿವರ್ತನೆಗೊಳ್ಳುತ್ತದೆ.
 • ಗಾಳಿ ಶಕ್ತಿಯು ಒಂದು ರೀತಿಯ ಸೌರಶಕ್ತಿಯಾಗಿದ್ದು, ಭೂಮಿಯ ವಾಯುಮಂಡಲದ ಅಸಮ ತಾಪವನ್ನು ಗಾಳಿಯಿಂದ ಉಂಟಾಗುತ್ತದೆ. ಗಾಳಿಯ ಹರಿವಿನ ಪರಿಣಾಮವಾಗಿ ಉಂಟಾಗುವ ವಿಭಿನ್ನ ತಾಪಮಾನಗಳಲ್ಲಿ ಎರಡು ಬಿಂದುಗಳ ನಡುವಿನ ಒತ್ತಡದ ವ್ಯತ್ಯಾಸವನ್ನು ಅದು ಉಂಟುಮಾಡುತ್ತದೆ.

ಭಾರತದ ಪವನ  ವಿದ್ಯುತ್ ಉತ್ಪಾದನೆಯ ಬಗ್ಗೆ

 • 1986 ರಲ್ಲಿ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಗುಜರಾತಿನ ಓಖಾ ಮತ್ತು ತಮಿಳುನಾಡಿನ ಟುಟಿಕಾರಿನ್ನಲ್ಲಿ ಮೊದಲ ಗಾಳಿ ವಿದ್ಯುತ್ ಸ್ಥಾಪಿಸಲಾಯಿತು.
 • ವೇಗವಾದ ಅಭಿವೃದ್ಧಿಯಿಂದಾಗಿ (ಭಾರತದಲ್ಲಿ ಗಾಳಿ ಶಕ್ತಿ), ಪ್ರಸ್ತುತ, ಭಾರತ ವಿಶ್ವದ ನಾಲ್ಕನೇ ದೊಡ್ಡ ಪವನ  ವಿದ್ಯುತ್ ಸ್ಥಾಪಿತ ದೇಶವಾಗಿದೆ.
 • ಪ್ರಸ್ತುತ, ಸ್ಥಾಪಿತ ಗಾಳಿಯ ಸಾಮರ್ಥ್ಯವು ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲಿದೆ. ಭಾರತದ ಪೂರ್ವ ಮತ್ತು ಈಶಾನ್ಯಕ್ಕೆ ಯಾವುದೇ ಗ್ರಿಡ್-ಸಂಪರ್ಕಿತ ಪವನ ವಿದ್ಯುತ್ ಸ್ಥಾವರಗಳಿಲ್ಲ.
 • ದಕ್ಷಿಣ ಭಾರತವು ಗರಿಷ್ಠ ಮತ್ತು ಗ್ರಿಡ್-ಸಂಪರ್ಕ ಹೊಂದಿದ ಗಾಳಿ ಸಾಮರ್ಥ್ಯವನ್ನು ಹೊಂದಿದ್ದು,ನಂತರ ಪಶ್ಚಿಮ ಮತ್ತು ಉತ್ತರದ ರಾಜ್ಯಗಳಿವೆ .
 • ತಮಿಳುನಾಡುನಂತರ ಮಹಾರಾಷ್ಟ್ರ, ಗುಜರಾತ್, ಮತ್ತು ರಾಜಸ್ಥಾನ್ ಪ್ರಮುಖ ಗಾಳಿ ಶಕ್ತಿ ಉತ್ಪಾದಕ ರಾಜ್ಯವಾಗಿದೆ.
 • ಭಾರತದ ಗಾಳಿ ವಿದ್ಯುತ್ ಉತ್ಪಾದನೆಯ 75% ನಷ್ಟು ಭಾಗವು ಮೇ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅಂದರೆ ನೈರುತ್ಯ ಮಾನ್ಸೂನ್ ಋತುವಿನಲ್ಲಿ ಸಂಭವಿಸುತ್ತದೆ.

ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ

3.

ಸುದ್ಧಿಯಲ್ಲಿ ಏಕಿದೆ ?ದಕ್ಷಿಣ ಏಷ್ಯಾದ ಸಾಹಿತ್ಯ ಕೃತಿಗಳಿಗೆ ನೀಡಲಾಗುವ ಪ್ರತಿಷ್ಠಿತ ಡಿಎಸ್‌ಸಿ ಸಾಹಿತ್ಯ ಪುರಸ್ಕಾರ-2018 ಕನ್ನಡದ ಹಿರಿಯ ಕತೆಗಾರ, ಚಿತ್ರಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಒಲಿದಿದೆ.

 • ಕಾಯ್ಕಿಣಿ ಅವರ ಮುಂಬಯಿ ಕೇಂದ್ರಿತ ಕನ್ನಡ ಕತೆಗಳ ಇಂಗ್ಲಿಷ್‌ ಅನುವಾದ ಸಂಕಲನ ನೋ ಪ್ರೆಸೆಂಟ್ಸ್‌ ಪ್ಲೀಸ್‌ಗೆ ಈ ಪ್ರಶಸ್ತಿ ದೊರೆತಿದೆ.
 • ಮೊದಲ ಬಾರಿಗೆ ಅನುವಾದಿತ ಕೃತಿಯೊಂದಕ್ಕೆ ಈ ಪುರಸ್ಕಾರ ನೀಡಲಾಗುತ್ತಿದ್ದು, ಕೃತಿಕಾರ ಜಯಂತ್‌ ಹಾಗೂ ಅನುವಾದಕಿ ತೇಜಸ್ವಿನಿ ನಿರಂಜನ ಅವರು ಬಹುಮಾನದ ಮೊತ್ತ 25,000 ಡಾಲರ್‌(ಸುಮಾರು 17 ಲಕ್ಷ ರೂ.)ಗಳನ್ನು ಹಂಚಿಕೊಳ್ಳಲಿದ್ದಾರೆ. ಕೋಲ್ಕೊತಾದಲ್ಲಿ ನಡೆದ ಟಾಟಾ ಸ್ಟೀಲ್‌ ಸಾಹಿತ್ಯ ಸಮ್ಮಿಲನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
 • ರುದ್ರಾಂಶು ಮುಖರ್ಜಿ, ನಂದನಾ ಸೇನ್‌ ಮುಂತಾದವರು ತೀರ್ಪುಗಾರರಾಗಿದ್ದರು.
 • ಹಾರ್ಪರ್‌ಕಾಲಿನ್ಸ್‌ ಸಂಸ್ಥೆ ನೋ ಪ್ರೆಸೆಂಟ್ಸ್‌ ಪ್ಲೀಸ್‌ಕೃತಿಯನ್ನು ಪ್ರಕಟಿಸಿದೆ.

ಜಯಂತ್ ಕಾಯ್ಕಿಣಿಯವರ ಇತರ ಕೃತಿಗಳು

 • ಕನ್ನಡದಲ್ಲಿ ಜಯಂತ್‌ ಅವರ ಬೊಗಸೆಯಲ್ಲಿ ಮಳೆ‘, ‘ಶಬ್ದತೀರಅಂಕಣಬರಹಗಳು, ‘ಚಾರ್‌ಮಿನಾರ್‌‘, ‘ದಗಡೂ ಪರಬನ ಅಶ್ವಮೇಧಮುಂತಾದ ಕಥಾಸಂಕಲನಗಳು, ಕೋಟಿತೀರ್ಥ, ಒಂದು ಜಿಲೇಬಿ ಮುಂತಾದ ಕವನ ಸಂಕಲನಗಳು ಜನಪ್ರಿಯವಾಗಿವೆ.
 • ಮುಂಗಾರು ಮಳೆ ಚಲನಚಿತ್ರದ ಹಾಡುಗಳ ನಂತರ ಜಯಂತ್‌ ಕನ್ನಡದ ಜನಪ್ರಿಯ ಚಿತ್ರಗೀತರಚನಕಾರರೂ ಆಗಿದ್ದಾರೆ.

ಡಿಎಸ್‌ಸಿ ಪ್ರಶಸ್ತಿ ಬಗ್ಗೆ

 • 2010ರಲ್ಲಿ ಸ್ಥಾಪನೆಯಾದ ಡಿಎಸ್‌ಸಿ ಪ್ರಶಸ್ತಿ, ದಕ್ಷಿಣ ಏಷ್ಯಾದ ಕೃತಿಕಾರರ ಸೃಜನಶೀಲ ಕೃತಿಗಳಿಗೆ ಮೀಸಲಾಗಿದೆ.

ಉಡಾನ್‌- 3 ಘೋಷಣೆ

4.

ಸುದ್ಧಿಯಲ್ಲಿ ಏಕಿದೆ ?ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆ ಉಡಾನ್‌ ಅಡಿಯಲ್ಲಿ ಮತ್ತೆ 235 ಮಾರ್ಗಗಳನ್ನು ಕೇಂದ್ರ ಸರಕಾರ ಘೋಷಿಸಿದೆ.

 • ಮೂರನೇ ಹಂತದ ಯೋಜನೆ ಇದಾಗಿದ್ದು, ಸ್ಪೈಸ್‌ಜೆಟ್‌, ಜೆಟ್‌ ಏರ್‌ವೇಸ್‌, ಏರ್‌ ಇಂಡಿಯಾದ ಸಬ್ಸಿಡರಿ ಅಲೈಯನ್ಸ್‌, ಟರ್ಬೊ ಏವಿಯೆಶನ್‌ ಇತ್ಯಾದಿ ಏರ್‌ಲೈನ್‌ಗಳು ನಾನಾ ವಿಮಾನ ಮಾರ್ಗಗಳಲ್ಲಿ ಹಾರಾಟಕ್ಕೆ ಅನೊಮೋದನೆ ಪಡೆದಿವೆ.
 • ಒಟ್ಟು 11 ಏರ್‌ಲೈನ್‌ ಕಂಪನಿಗಳಿಗೆ 235 ಮಾರ್ಗಗಳನ್ನು ಮಂಜೂರು ಮಾಡಲಾಗಿದೆ.

ಏನಿದು ಉಡಾನ್ ಯೋಜನೆ ?

 • ದೇಶಾದ್ಯಂತ ಪ್ರಾದೇಶಿಕ ಮಟ್ಟದ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ ವಿಮಾನ ಹಾರಾಟದ ಸೌಲಭ್ಯ ಕಲ್ಪಿಸುವುದು, ಜನ ಸಾಮಾನ್ಯರಿಗೂ ಅಗ್ಗದ ದರದಲ್ಲಿ ವಿಮಾನಯಾನ ಕಲ್ಪಿಸುವುದು ಉಡಾನ್‌ ಯೋಜನೆಯ ಉದ್ದೇಶವಾಗಿದೆ.
 • (ಉಡೇ ದೇಶ್‌ ಕಾ ಆಮ್‌ ನಾಗರಿಕ್‌) ಈ ಯೋಜನೆಯಡಿಯಲ್ಲಿ ಏರ್‌ ಟಿಕೆಟ್‌ ದರಗಳಿಗೆ ಮಿತಿ ಇರುವುದರಿಂದ ಜನ ಸಾಮಾನ್ಯರಿಗೆ ಅಗ್ಗದ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. 2017ರಲ್ಲಿ ಈ ಮಹತ್ತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಲಾಗಿತ್ತು.

ದಿವಾಳಿ ಕಾಯ್ದೆ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

5.

ಸುದ್ಧಿಯಲ್ಲಿ ಏಕಿದೆ ?ಋುಣಬಾಧ್ಯತೆ ಮತ್ತು ದಿವಾಳಿತನ ಕಾಯ್ದೆಗಳ(ಐಬಿಸಿ) ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌, ಈ ಸಂಬಂಧಿ ಅರ್ಜಿಗಳನ್ನು ತಳ್ಳಿ ಹಾಕಿದೆ. ಇದರಿಂದಾಗಿ ಸುಸ್ತಿದಾರರ ಕಾನೂನು ಸಮರಕ್ಕೆ ಹಿನ್ನಡೆಯಾಗಿದೆ.

 • ಕಾಯ್ದೆ ಅನುಸಾರ, 90 ದಿನಗಳ ಕಾಲ ಪಾವತಿಯಾಗದೆ ಉಳಿದ ಸಾಲವನ್ನು ಅನುತ್ಪಾದಕ ಸೊತ್ತುಗಳೆಂದು ವರ್ಗೀಕರಿಸಲಾಗುತ್ತದೆ.

ಹಿನ್ನಲೆ

 • 2016ರ ಮೇನಲ್ಲಿ ದಿವಾಳಿ ಕಾಯ್ದೆಯನ್ನು ಸರಕಾರವು ರೂಪಿಸಿತ್ತು.
 • ಹೊಸದಾಗಿ ಕೇಂದ್ರ ಸರಕಾರ ಜಾರಿಗೊಳಿಸಿದದ್ದ ಈ ಕಾಯ್ದೆಯಿಂದ ಸುಸ್ತಿದಾರ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದ್ದವು.
 • ಸುಮಾರು 50,800 ಕೋಟಿ ರೂ. ಸುಸ್ತಿಸಾಲ ಹೊಂದಿರುವ ಎಸ್ಸಾರ್‌ ಸ್ಟೀಲ್‌ನಂಥ ಸಾಲದ ಹೊರೆ ಹೊತ್ತ ಕಂಪನಿಗಳು ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದವು. ಆದರೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆರ್‌.ಎಫ್‌.ನಾರಿಮನ್‌ ನೇತೃತ್ವದ ನ್ಯಾಯಪೀಠವು ಅರ್ಜಿಗಳನ್ನು ತಿರಸ್ಕರಿಸಿದೆ.

ಈ ಕಾಯ್ದೆಯಿಂದಾದ ಪ್ರಯೋಜನಗಳು

 • ಈ ಕಾಯ್ದೆ ಭೀತಿಯಿಂದಾಗಿ ಕಂಪನಿಗಳ ಪ್ರವರ್ತಕರು ಬಾಕಿ ಉಳಿಸಿಕೊಂಡ 83,000 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದಾರೆ.
 • ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, 2,100ಕ್ಕೂ ಹೆಚ್ಚು ಕಂಪನಿಗಳು ಹಳೆ ಬಾಕಿಗಳನ್ನೆಲ್ಲ ಚುಕ್ತಾ ಮಾಡಿದ್ದವು.

ಭಾರತದ ಮುಡಿಗೆ ತ್ರಿರತ್ನ

6.

ಸುದ್ಧಿಯಲ್ಲಿ ಏಕಿದೆ ?ಗಣರಾಜ್ಯೋತ್ಸವದ ಮುನ್ನಾದಿನ ಕೇಂದ್ರ ಸರ್ಕಾರ ಮೂವರು ಗಣ್ಯರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಘೋಷಿಸಿದೆ.

 • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಜನಸಂಘ ಮುಖಂಡ ನಾನಾಜಿ ದೇಶ್​ವುುಖ್ ಹಾಗೂ ಹಿರಿಯ ಸಂಗೀತಗಾರ ಭೂಪೇನ್ ಹಝಾರಿಕಾ ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರ ಲಭಿಸಿದೆ.
 • ದೇಶ್​ವುುಖ್ ಹಾಗೂ ಹಝಾರಿಕಾ ಅವರಿಗೆ ಮರಣೋತ್ತರವಾಗಿ ಭಾರತರತ್ನ ದಕ್ಕಿದೆ.
 • ಸರ್ಕಾರದ ಶಿಫಾರಸು ಮೇರೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಈ ಪುರಸ್ಕಾರ ಘೋಷಿಸಿದ್ದಾರೆ.
 • 2015ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತರತ್ನ ಘೋಷಿಸಲಾಗಿತ್ತು.
 • ಒಂದು ಸರ್ಕಾರದ ಅವಧಿಯಲ್ಲಿ ಐವರಿಗೆ ಭಾರತರತ್ನ ದೊರೆಯುತ್ತಿರುವುದು ಇದೇ ಮೊದಲು.
 • ಇದರೊಂದಿಗೆ, ಒಟ್ಟಾರೆ ಭಾರತ ರತ್ನ ಪುರಸ್ಕೃತರ ಸಂಖ್ಯೆ 48ಕ್ಕೆ ಏರಿಕೆ ಆಗಿದೆ.

ಪ್ರಣಬ್ ಮುಖರ್ಜಿ

 • ಜನನ: 1935ರ ಡಿ.11,ಜನ್ಮಸ್ಥಳ: ಪಶ್ಚಿಮಬಂಗಾಳದ ಮಿರಾತಿ
 • ಹುದ್ದೆ: ರಾಷ್ಟ್ರಪತಿ, ಹಣಕಾಸು ಸಚಿವ, ವಿದೇಶಾಂಗ ಸಚಿವ, ರಕ್ಷಣಾ ಸಚಿವ, ಲೋಕಸಭಾ ಹಾಗೂ ರಾಜ್ಯಸಭಾ ನಾಯಕ

ನಾನಾಜಿ ದೇಶ್​ವುುಖ್

 • ಜನನ: 1916ರ ಅ.11, ನಿಧನ: 2010ರ ಫೆ.27, ಜನ್ಮಸ್ಥಳ: ಮಹಾರಾಷ್ಟ್ರದ ಕಡೋಲಿ
 • ಹುದ್ದೆ: ಆರ್​ಎಸ್​ಎಸ್ ಪ್ರಚಾರಕ, ಜನಸಂಘದ ಕಾರ್ಯದರ್ಶಿ
 • ಪರಿಚಯ: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ನಾನಾಜಿ, ಆರಂಭದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು.
 • ಉತ್ತರಪ್ರದೇಶದಲ್ಲಿ ಆರ್​ಎಸ್​ಎಸ್ ಪ್ರಚಾರಕರಾಗಿದ್ದ ಅವರು, ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು. ಮಹಾರಾಷ್ಟ್ರದಲ್ಲಿ ಜನಿಸಿದ್ದರೂ ರಾಜಕೀಯವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡಿದ್ದರು.
 • ತುರ್ತು ಪರಿಸ್ಥಿತಿ ದಿನಗಳಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
 • 1999ರಿಂದ 2005ರವರೆಗೆ ಎನ್​ಡಿಎ ಸರ್ಕಾರದಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ರಾಜಕೀಯದಿಂದ ನಿವೃತ್ತರಾದ ಬಳಿಕ ದೀನ್​ದಯಾಳ್ ಸಂಶೋಧನಾ ಸಂಸ್ಥೆ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡರು.

ಭೂಪೇನ್ ಹಝಾರಿಕಾ

 • ಜನನ: 1926ರ ಸೆ.8, ನಿಧನ: 2011ರ ನ.5, ಜನ್ಮಸ್ಥಳ: ಅಸ್ಸಾಂನ ಸಾದಿಯಾ
 • ಹುದ್ದೆ: ಗಾಯಕ, ಸಂಗೀತಗಾರ, ಕವಿ, ಚಿತ್ರ ನಿರ್ಮಾಪಕ
 • ಪರಿಚಯ: ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಇವರು ಅಸ್ಸಾಮಿ ಸಂಗೀತದಲ್ಲಿ ಮೇರುಹೆಸರು. ಅಸ್ಸಾಂ ಜಾನಪದವನ್ನು ದೇಶಕ್ಕೆ ಪರಿಚಯಿಸಿದ ಹಝಾರಿಕಾ ಅವರು ಸುಧಾಕಾಂತ್ ಎಂದು ಚಿರಪರಿಚಿತರು. ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು.

ಭಾರತ ರತ್ನ ಪ್ರಶಸ್ತಿ

 • ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ.
 • ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ.
 • ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ.
 • 1955 ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು.

ಪದ್ಮ ಪ್ರಶಸ್ತಿ: 112 ಮಂದಿಗೆ ಗೌರವ

ಸುದ್ಧಿಯಲ್ಲಿ ಏಕಿದೆ ? ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಒಟ್ಟು 112 ಮಂದಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

 • ಸಾಲು ಮರಗಳನ್ನು ನೆಟ್ಟು ಬೆಳೆಸಿ ಇತಿಹಾಸ ಸೃಷ್ಟಿಸಿದ ಬೆಂಗಳೂರು ಹೊರವಲಯದ ಮಹಾ ಸಾಧಕಿ ಸಾಲು ಮರದ ತಿಮ್ಮಕ್ಕ, ಖ್ಯಾತ ನೃತ್ಯಪಟು ಪ್ರಭುದೇವ, ಖ್ಯಾತ ಸರೋದ್‌ ವಾದಕ ರಾಜೀವ್‌ ತಾರಾನಾಥ್‌, ಕಲೆ ಮತ್ತು ಪುರಾತತ್ವ ಶಾಸ್ತ್ರವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಸಾಧಕಿ ಶಾರದಾ ಶ್ರೀನಿವಾಸನ್‌, ಬೆಂಗಳೂರಿನ ಐಐಎಸ್‌ಸಿಯಲ್ಲಿ ಪರಮಾಣು ಭೌತಶಾಸ್ತ್ರ ಪ್ರೊಫೆಸರ್‌ ಆಗಿರುವ ರೋಹಿಣಿ ಗೋಡ್ಬೋಳೆ ಪದ್ಮಶ್ರೀ ಪ್ರಶಸ್ತಿ ಪಡೆದ ಕನ್ನಡಿಗರು.
 • ರಾಜ್ಯಕ್ಕೆ ಈ ಬಾರಿ ಪದ್ಮವಿಭೂಷಣ, ಪದ್ಮಭೂಷಣ ವಿಭಾಗದಲ್ಲಿ ಯಾವುದೇ ಪ್ರಶಸ್ತಿ ಬಂದಿಲ್ಲ.
 • ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿಯ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ 21 ಮಂದಿ ಮಹಿಳೆಯರು ಇದ್ದಾರೆ. ಜತೆಗೆ ಒಟ್ಟು 112 ಮಂದಿಯಲ್ಲಿ 11 ಮಂದಿ ವಿದೇಶಿಯರು ಇದ್ದು, 3 ಮರಣೋತ್ತರ ಗೌರವ, ಓರ್ವ ತೃತೀಯಲಿಂಗಿ ಕೂಡಾ ಇದ್ದಾರೆ.
Related Posts
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮತ್ತೆ ಕರೆನ್ಸಿ ಎಮರ್ಜೆನ್ಸಿ! ನೋಟು ಅಮಾನ್ಯೀಕರಣದ ಆರಂಭಿಕ ದಿನಗಳಲ್ಲಾದಂತೆ ಈಗ ಮತ್ತೆ ಹಲವು ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದೆ. ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಕರ್ನಾಟಕ ಸೇರಿ 9ಕ್ಕೂ ಹೆಚ್ಚು ರಾಜ್ಯಗಳ ಎಟಿಎಂಗಳು ಖಾಲಿಯಾಗಿದ್ದು, ಹಣವಿಲ್ಲ ಎಂಬ ಬೋರ್ಡ್​ಗಳು ರಾರಾಜಿಸುತ್ತಿವೆ. ಕೇಂದ್ರ ಸರ್ಕಾರದ ಆರ್ಥಿಕ ಅವ್ಯವಸ್ಥೆಯೇ ...
READ MORE
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಸಾಕ್ಷಿಗಳ ರಕ್ಷಣಾ ಯೋಜನೆ’ ಜಾರಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ?ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ 'ಸಾಕ್ಷಿಗಳ ರಕ್ಷಣಾ ಯೋಜನೆ' ದೇಶಾದ್ಯಂತ ಜಾರಿಯಾಗುತ್ತಿದೆ. ಸುಪ್ರೀಂಕೋರ್ಟ್‌ ಇತ್ತೀಚೆಗೆ ಸಾಕ್ಷಿಗಳ ರಕ್ಷಣಾ ಯೋಜನೆ ಕುರಿತು ...
READ MORE
30th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಝುಗಮಗಿಸುತ್ತಿದೆ ನಮ್ಮ ಕರ್ನಾಟಕ! ಸುದ್ಧಿಯಲ್ಲಿ ಏಕಿದೆ? ದೇಶದಲ್ಲೇ ಅತಿಹೆಚ್ಚು ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಕಳೆದ ಒಂದು ವರ್ಷದಲ್ಲಿ 3 ಗಿಗಾ ವಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ಮೂಲಕ ತಮಿಳುನಾಡನ್ನು ಹಿಂದಿಕ್ಕಿದೆ. ಯುರೋಪಿಯನ್ ರಾಷ್ಟ್ರಗಳಾದ ಹಾಲೆಂಡ್ ಹಾಗೂ ಡೆನ್ಮಾರ್ಕ್​ನ ಒಟ್ಟಾರೆ ...
READ MORE
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ ) ಸುದ್ಧಿಯಲ್ಲಿ ಏಕಿದೆ? ಬೇರೆ ಬೇರೆ ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಐಡಿಯನ್ನು ಬಳಸಿಕೊಂಡು ತಮ್ಮದೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಆಗಸ್ಟ್ 1ರಿಂದ ತಡೆ ಬೀಳಲಿದೆ. ವರ್ಗಾವಣೆಯಾದ ತಕ್ಷಣದಲ್ಲೆ ಹಣ ಪಡೆಯುವ ವ್ಯವಸ್ಥೆಯಾದ ಯುಪಿಐ ಐಡಿ ದುರ್ಬಳಕೆ ತಡೆಯಲು ...
READ MORE
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಾವೇರಿ ಆನ್‌ಲೈನ್ ಸೇವೆ ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದರು. ಉದ್ದೇಶ ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ...
READ MORE
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾತೃಪೂರ್ಣ ಯೋಜನೆ  ಸುದ್ಧಿಯಲ್ಲಿ ಏಕಿದೆ ? ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ. ವಿಫಲವಾಗಲು ಕಾರಣ ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ...
READ MORE
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ರಾಷ್ಟ್ರಪತಿ ಗೌರವ ಸುದ್ಧಿಯಲ್ಲಿ ಏಕಿದೆ? ಕನ್ನಡದ ಖ್ಯಾತ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಶಸ್ತಿ ಸಂದಿದೆ. ಶಾಸ್ತ್ರೀಯ ಕನ್ನಡ ಭಾಷೆಯಲ್ಲಿ ಅವರು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಶಾಸ್ತ್ರೀಯ ತೆಲುಗು, ಸಂಸ್ಕೃತ, ಪರ್ಷಿಯಾ, ಅರೇಬಿಕ್‌, ...
READ MORE
“3rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸುಳ್ಳು ಸುದ್ದಿ ಪ್ರಕಟಿಸಿದರೆ ಪತ್ರಕರ್ತರ ಮಾನ್ಯತೆ ರದ್ದು: ಕೇಂದ್ರ ಸುಳ್ಳು ಸುದ್ದಿ ಸೃಷ್ಟಿಸುವ ಮತ್ತು ಹರಡುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ತಪ್ಪಿಗೆ ಆರು ತಿಂಗಳ ಮಟ್ಟಿಗೆ ...
READ MORE
“5th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸ್ವಚ್ಚ ಭಾರತ್‌’ ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿ ಅನುಷ್ಠಾನಗೊಂಡಿರುವ 'ಸ್ವಚ್ಚ ಭಾರತ್‌' ಯೋಜನೆಯ ನೈಜತೆ ತಿಳಿಯಲು 76ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ(ಎನ್‌ಎಸ್‌ಎಸ್‌)ಗೆ ಚಾಲನೆ ದೊರೆತಿದೆ. ಎಲ್ಲಿ ಮತ್ತು ಯಾವುದರ ಬಗ್ಗೆ ಮಾಹಿತಿ ಸಂಗ್ರಹ ? ದೇಶಾದ್ಯಂತ ಜು.1ರಿಂದ ಆರಂಭವಾಗಿರುವ ಸಮೀಕ್ಷೆ ಕರ್ನಾಟಕದಲ್ಲಿ ಸದ್ಯದಲ್ಲೇ ಅಧಿಕೃತವಾಗಿ ಕಾರ್ಯಾಚರಣೆ ನಡೆಸಲಿದೆ. ...
READ MORE
“21 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಯೋಜನೆಗೆ ಚಾಲನೆ ಸುದ್ಧಿಯಲ್ಲಿ ಏಕಿದೆ ? 'ಇಂದಿರಾ ಯೋಜನೆ'ಗೆ ಸಚಿವೆ ಡಾ. ಜಯಮಾಲಾ ಚಾಲನೆ ನೀಡಿದರು. ಏನಿದು ಇಂದಿರಾ ಯೋಜನೆ ? ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗೆ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ಬಡ್ಡಿ ರಹಿತ ಸಾಲ ನೀಡುವ ಯೋಜನೆಯೇ ...
READ MORE
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
30th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“3rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“5th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“21 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *