“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ

1.

ಸುದ್ಧಿಯಲ್ಲಿ   ಏಕಿದೆ ?ಈ ವರ್ಷ ನೀವು ನೋಡಲೇಬೇಕಾದ ಜಗತ್ತಿನ 52 ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದ ಪಾರಂಪರಿಕ ನಗರಿ ಹಂಪಿ ಟಾಪ್ 2 ಸ್ಥಾನ ಪಡೆದಿದೆ.

 • ದಿ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2019ರ ಟಾಪ್ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹಂಪಿ, ದೇಶದ ಏಕೈಕ ನಗರಿ ಎನ್ನುವುದು ವಿಶೇಷ.

ಹಂಪಿಯ ವಿಶೇಷತೆಗಳು

 • ರಾಜ್ಯದ ಹೊಸಪೇಟೆಯಲ್ಲಿರುವ ಹಂಪಿ, ವಿಜಯನಗರ ಸಾಮ್ರಾಜ್ಯದಲ್ಲಿ ಅತ್ಯಂತ ವೈಭವೋಪೇತ ನಗರಿಯಾಗಿತ್ತು
 • ಶ್ರೀಮಂತ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದ ಹಂಪಿಗೆ, ಪರ್ಶಿಯಾ ಮತ್ತು ಪೋರ್ಚುಗಲ್‌ನಿಂದ ವ್ಯಾಪಾರಕ್ಕೆ ಬರುತ್ತಿದ್ದರು.
 • ಅಲ್ಲದೆ ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳಿಗೆ ಹಂಪಿ ಸಾಕ್ಷಿಯಾಗಿದ್ದು, ವಿಶಾಲವಾದ ಬೀದಿ, ಸುಂದರ ಕೆತ್ತನೆ ಹೊಂದಿರುವ ದೇಗುಲ, ನೂರಕ್ಕೂ ಅಧಿಕ ಮಂದಿರ, ಮಂಟಪಗಳು ಅಂದಿನ ವೈಭವದ ಕಥೆ ಹೇಳುತ್ತವೆ.
 • ಹೀಗಾಗಿ ಹಂಪಿ ಈ ವರ್ಷ ನೀವು ಭೇಟಿ ನೀಡಲೇಬೇಕಾದ ಪಟ್ಟಿಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದಿರುವುದು ದೇಶಕ್ಕೇ ಹೆಮ್ಮೆ ತಂದಿದ್ದು, ಜತೆಗೆ ದೇಶದ ಏಕೈಕ ನಗರಿ ಎನ್ನುವುದು ಕೂಡ ರಾಜ್ಯಕ್ಕೆ ಪ್ರತಿಷ್ಠೆ ತಂದಿದೆ.

ಹಂಪೆ

 • ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಊರು. 1336ರಿಂದ 1565ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು ಪಂಪಾ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂದು ಕರೆಯಲ್ಪಟ್ಟಿತು.
 • ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
 • ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.
 • ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.

ಕಪ್ಪತಗುಡ್ಡ ಈಗ ವನ್ಯಧಾಮ

2.

ಸುದ್ಧಿಯಲ್ಲಿ   ಏಕಿದೆ ?ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧ ಸಸ್ಯಗಳ ಕಾಶಿ, ಜೀವವೈವಿಧ್ಯತೆಯ ತಾಣ ಕಪ್ಪತಗುಡ್ಡ ಈಗ ವನ್ಯಧಾಮವಾಗಿ ಘೋಷಣೆಯಾಗಿದೆ.

 • ರಾಜ್ಯ ಸರಕಾರದ ಈ ನಿರ್ಧಾರ ಕಪ್ಪತಗುಡ್ಡ ರಕ್ಷಣೆ ಸಂಬಂಧ ದಶಕಗಳಿಂದ ಅನೇಕ ಮಠಾಧೀಶರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರ ಪ್ರಿಯರು ನಡೆಸಿದ್ದ ಹೋರಾಟ, ಪತ್ರ ಚಳವಳಿಗೆ ಸಿಕ್ಕಿದ ಜಯ. ಸರಕಾರ ತೀರ್ಮಾನ ಶೀಘ್ರವೇ ಅನುಷ್ಠಾನಗೊಳ್ಳುವುದನ್ನು ಈ ಭಾಗದ ಜನರು ಎದುರು ನೋಡುವಂತಾಗಿದೆ.
 • ಸರಕಾರದ ಘೋಷಣೆ : ಔಷಧೀಯ ಸಸ್ಯಗಳ ಕಾಶಿ ಕಪ್ಪತಗುಡ್ಡವು ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ ಹರಡಿಕೊಂಡಿದೆ. ಈ ಹಿಂದಿನಂತೆ ಗದಗ ತಾಲೂಕಿನ 811 ಹೆಕ್ಟೇರ್‌, ಮುಂಡರಗಿ ತಾಲೂಕಿನ 15,453.673 ಹೆಕ್ಟೇರ್‌, ಶಿರಹಟ್ಟಿ ತಾಲೂಕಿನ 2,016.764 ಹೆಕ್ಟೇರ್‌ ಸಹಿತ ಒಟ್ಟು 330 ಚದರ ಕಿ.ಮೀ. ವ್ಯಾಪ್ತಿಯನ್ನು ವನ್ಯಧಾಮ/ಅಭಯಾರಣ್ಯ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ.
 • ಮಹತ್ವದ ನಿರ್ಧಾರ: ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಕಪ್ಪತಗುಡ್ಡಕ್ಕೆ ವನ್ಯಧಾಮ ಸ್ಥಾನಮಾನ ಕಲ್ಪಿಸುವ ಜೊತೆಗೆ ತುಮಕೂರ ವಿಭಾಗದ ಬುಕ್ಕಾ ಪಟ್ಟಣ ಮೀಸಲು ಅರಣ್ಯ ಪ್ರದೇಶವನ್ನೂ ವನ್ಯಧಾಮವಾಗಿ ಘೋಷಿಸಿದೆ.
 • ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಬಳ್ಳಾರಿ ಜಿಲ್ಲೆಯ ಗುಡಿಕೋಟೆ ಕರಡಿಧಾಮವನ್ನು 4500 ಹೆಕ್ಟೇರ್‌ ನಿಂದ 15000 ಹೆಕ್ಟೇರ್‌ಗೆ ವಿಸ್ತರಣೆ ಹಾಗೂ ಕೈಗಾ ಅಣು ವಿದ್ಯುತ್‌ ಯೋಜನೆಯ 5 ಮತ್ತು 6 ನೇ ಘಟಕ ಸ್ಥಾಪನೆಗೆ ನಿರಪೇಕ್ಷ ಣಾ ಪತ್ರ ನೀಡಲು ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
 • ರಕ್ಷಣೆ ಅಗತ್ಯ: ಮಧ್ಯ ಕರ್ನಾಟಕದ ಪರಿಸರ ಸಮತೋಲನದಲ್ಲಿ ಕಪ್ಪತಗುಡ್ಡವು ಪ್ರಮುಖ ಪಾತ್ರ ವಹಿಸಿದೆ. ಗದಗ, ಧಾರವಾಡ, ಹಾವೇರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಮಳೆ-ಬೆಳೆ ಕಪ್ಪತಗುಡ್ಡದ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಕಪ್ಪತಗುಡ್ಡ ಕರಗಿ ಹೋದರೆ ಐದು ಜಿಲ್ಲೆಗಳ ವಾತಾವರಣವೇ ಏರುಪೇರಾಗುತ್ತದೆ. ಅದರಿಂದಾಗುವ ದುಷ್ಪರಿಣಾಮಗಳನ್ನು ಊಹಿಸುವುದು ಕಷ್ಟ.
 • ಪರಿಸರ ಸಮತೋಲನವಾಗಿರಲು ವೈಜ್ಞಾನಿಕವಾಗಿ ಒಟ್ಟು ಭೂಪ್ರದೇಶದ ಶೇ.33 ರಷ್ಟು ಅರಣ್ಯ ಇರಬೇಕು. ಆದರೆ, ಜಿಲ್ಲೆಯಲ್ಲಿ ಕಪ್ಪತಗುಡ್ಡ ಸೇರಿದಂತೆ ಕೇವಲ ಶೇ.7 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಒಂದು ವೇಳೆ ಕಪ್ಪತಗುಡ್ಡ ಕರಗಿದರೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಇಲ್ಲದಂತಾಗುತ್ತದೆ, ಮಳೆ ಪ್ರಮಾಣ ತೀವ್ರ ಕುಸಿಯುತ್ತದೆ. ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ.

ವನ್ಯಜೀವಿ ಅಭಯಾರಣ್ಯವನ್ನು ಹೇಗೆ ಘೋಷಿಸಲಾಗುತ್ತದೆ ?

 • ವನ್ಯಜೀವಿ ಅಭಯಾರಣ್ಯವನ್ನು ರಾಜ್ಯ ಸರ್ಕಾರವು ಅಧಿಸೂಚನೆ ಮೂಲಕ ವ್ಯಾಖ್ಯಾನಿಸುತ್ತದೆ. ವನ್ಯಜೀವಿ ಅಭಯಾರಣ್ಯವನ್ನು ಘೋಷಿಸಲು ರಾಜ್ಯ ವಿಧಾನಸಭೆಯ ಮೂಲಕ ಶಾಸನವನ್ನು ಜಾರಿಗೊಳಿಸುವ ಅಗತ್ಯವಿಲ್ಲ. ಪರಿಮಿತಿಯ ಸ್ಥಿರೀಕರಣ ಮತ್ತು ಪರ್ಯಾಯಗಡಿರೇಖೆಗಳಿಗೆ ರಾಜ್ಯದ ಶಾಸಕಾಂಗವು ನಿರ್ಣಯದ ಮೂಲಕ ಮಾಡಬಹುದಾಗಿದೆ. ಎನ್ಬಿಡಬ್ಲ್ಯೂಎಲ್ (ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ಲೈಫ್) ಅನುಮತಿಯಿಲ್ಲದೇ ವನ್ಯಜೀವಿ ಅಭಯಾರಣ್ಯಗಳಲ್ಲಿ ಯಾವುದೇ ಗಡಿರೇಖೆಗಳಲ್ಲಿ ಬದಲಾವಣೆ  ಮಾಡಲಾಗದು .  ನಿಸರ್ಗಧಾಮದಲ್ಲಿ ಸೀಮಿತ ಮಾನವ ಚಟುವಟಿಕೆಗಳನ್ನು ಅನುಮತಿಸಲಾಗಿದೆ.

ಮಂಜು ಇದ್ದರೂ ವಿಮಾನ ಹಾರಾಟಕ್ಕೆ ಅಂಜಬೇಕಿಲ್ಲ!

3.

ಸುದ್ಧಿಯಲ್ಲಿ   ಏಕಿದೆ ?ಚಳಿಗಾಲದ ಮಂಜು ಇನ್ನು ಮುಂದೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಸಮಸ್ಯೆಯಾಗುವುದಿಲ್ಲ!

 • ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌ (ಐಎಲ್‌ಎಸ್‌) ಸಿಎಟಿ-3ಬಿ ಸಿಸ್ಟಮ್‌ ಹೊಂದಿರುವ ಎರಡನೇ ರನ್‌ ವೇ ಅಕ್ಟೋಬರ್‌ 1ರಿಂದ ಕಾರ್ಯಾರಂಭ ಮಾಡಲಿದೆ. ಈ ವ್ಯವಸ್ಥೆಯಲ್ಲಿ ದಟ್ಟ ಮಂಜು ಇದ್ದಾಗಲೂ ವಿಮಾನಗಳ ಹಾರಾಟ ಸಾಧ್ಯವಾಗಲಿದೆ.
 • ಜತೆಗೆ, ಏರ್‌ಬಸ್‌ 380, ಬೋಯಿಂಗ್‌ 747 ಲ್ಯಾಂಡಿಂಗ್‌ ಹಾಗೂ ಬೃಹತ್‌ ಕಾರ್ಗೋ ವಿಮಾನಗಳ ಟೇಕಾಫ್‌, ಲ್ಯಾಂಡಿಂಗ್‌ಗೂ ಸಾಧ್ಯವಾಗಲಿದೆ. ಎರಡು ಸಮನಾಂತರ ರನ್‌ ವೇ ಇರುವುದರಿಂದ ಏಕಕಾಲದಲ್ಲಿ 2 ವಿಮಾನಗಳ ಟೇಕಾಫ್‌ ಮತ್ತು ಲ್ಯಾಂಡಿಂಗ್‌ ಮಾಡಬಹುದು.

ವಿಮಾನಗಳಲ್ಲೂ ಇರಬೇಕು

 • ಐಎಲ್‌ಎಸ್‌ ಸಿಎಟಿ-3ಬಿ ಸಿಸ್ಟಮ್‌ ಕೇವಲ ನಿಲ್ದಾಣಗಳಲ್ಲಿ ಇದ್ದರೆ ಸಾಲದು, ವಿಮಾನಗಳಲ್ಲೂ ಇರಬೇಕಾಗುತ್ತದೆ. ಒಂದು ವೇಳೆ ವಿಮಾನದಲ್ಲಿ ನೂತನ ಸಿಸ್ಟಮ್‌ ಇಲ್ಲದಿದ್ದರೆ ಮಂಜು ಆವರಿಸಿದ ಸಂದರ್ಭದಲ್ಲಿ ಲ್ಯಾಂಡಿಂಗ್‌ ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಏರ್‌ಲೈನ್‌ಗಳಿಗೆ ಸೇರ್ಪಡೆಯಾಗುತ್ತಿರುವ ವಿಮಾನಗಳಲ್ಲಿ ಈ ಸಿಸ್ಟಮ್‌ ಇವೆ. ಇಲ್ಲದೇ ಇರುವ ವಿಮಾನಗಳಿಗೆ ಆಧುನಿಕ ಸಿಸ್ಟಮ್‌ ಅಳವಡಿಸಿಕೊಳ್ಳುವಂತೆ ಡಿಜಿಸಿಎ ನಿರ್ದೇಶನ ನೀಡಿದೆ.

ಏನಿದು ಐಎಲ್‌ಎಸ್‌ ಸಿಎಟಿ-3ಬಿ?

 • ವಿಮಾನಗಳು ಲ್ಯಾಂಡಿಂಗ್‌ ಆಗುವ ಕಡೆ ರನ್‌ ವೇ ಕೊನೆಯಲ್ಲಿ ಐಎಲ್‌ಎಸ್‌ ಸಿಎಟಿ-3ಬಿ ಸಿಸ್ಟಮ್‌ ಅನ್ನು ಅಳವಡಿಸಲಾಗುತ್ತಿದೆ. ವಿಮಾನವೂ ಲ್ಯಾಂಡಿಂಗ್‌ಗೆ ಸಿದ್ಧವಾದಾಗ, ಐಎಲ್‌ಎಸ್‌ನಿಂದ 2 ರೇಡಿಯೊ ಸಿಗ್ನಲ್‌ಗಳನ್ನು ವಿಮಾನಕ್ಕೆ ರವಾನಿಸುತ್ತವೆ. ವಿಮಾನದಲ್ಲಿನ ರೇಡಿಯೊ ಸಿಸ್ಟಮ್‌, ಈ ಸಿಗ್ನಲ್‌ ಸ್ವೀಕರಿಸುತ್ತದೆ. ಅದರಲ್ಲಿನ ಒಂದು ಸಿಗ್ನಲ್‌ ವಿಮಾನ ಮತ್ತು ನೆಲದ ನಡುವಿನ ಎತ್ತರ ಅಂತರದ ಕುರಿತು ಮಾಹಿತಿ ರವಾನಿಸಿದರೆ, ಇನ್ನೊಂದು ಸಿಗ್ನಲ್‌ ರನ್‌ ವೇನ ಸೆಂಟರ್‌ ಲೈನ್‌ ನಿಖರತೆ ತಿಳಿಸುತ್ತದೆ. ಈ ಎರಡು ಅಂಶಗಳು ಹೋಲಿಕೆಯಾದ ಬಳಿಕ ಲ್ಯಾಂಡಿಂಗ್‌ ಮಾಡಲು ಸಾಧ್ಯವಾಗುತ್ತದೆ. ಟೇಕಾಫ್‌ಗೂ ಇದೇ ಸಿಸ್ಟಮ್‌ ಅನ್ವಯವಾಗುತ್ತದೆ.

ಹೊಸ ಶಿಕ್ಷಣ ನೀತಿ:

4.

ಸುದ್ಧಿಯಲ್ಲಿ   ಏಕಿದೆ ?ದೇಶಾದ್ಯಂತ 8 ನೇ ತರಗತಿವರೆಗೂ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿ ಮೂರು-ಭಾಷೆಯ ಸೂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೆ. ಕಸ್ತೂರಿ ರಂಗನ್ ನೇತೃತ್ವದ 9 ಜನ ಸದಸ್ಯರಿರುವ ಹೊಸ ಶಿಕ್ಷಣ ನೀತಿ(ಎನ್ಇಪಿ) ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

 • 2018 ರ ಡಿ. 31 ರಂದು ಅವಧಿ ಕೊನೆಗೊಳ್ಳುವ ಮುಂಚೆ ಸಮಿತಿಯು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿತ್ತು.

ಯಾವ ರಾಜ್ಯಗಳಲ್ಲಿ ಹಿಂದಿ ಕಡ್ಡಾಯವಲ್ಲ ?

 • ಸದ್ಯಕ್ಕೆ ಹಿಂದಿಯೇತರ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಹಿಂದಿ ಕಡ್ಡಾಯ ಭಾಷೆಯಾಗಿಲ್ಲ. ಒಂದು ವೇಳೆ ಹಿಂದಿಯನ್ನು ಕಡ್ಡಾಯ ಭಾಷೆಯನ್ನಾಗಿ ಮಾಡಿದರೆ ಈ ಎಲ್ಲ ರಾಜ್ಯಗಳ ಶಾಲೆಗಳಲ್ಲೂ ಕಡ್ಡಾಯವಾಗಿ ಹಿಂದಿ ಹೇರಿಕೆಯಾದಂತಾಗುತ್ತದೆ.

ಇತರೆ ಪ್ರಮುಖ ಶಿಫಾರಸುಗಳು

 • ಹೊಸ ಶಿಕ್ಷಣ ನೀತಿ(NEP) ಕುರಿತಾಗಿ ತಯಾರಿಸಿರುವ ಕರಡು ವರದಿಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಪಠ್ಯವನ್ನು ದೇಶಾದ್ಯಂತ ಏಕರೂಪಗೊಳಿಸುವುದು
 • ಬುಡಕಟ್ಟು ಉಪಭಾಷೆಗಳಿಗೆ ದೇವನಾಗರಿಯಲ್ಲಿ ಒಂದು ಲಿಪಿಯನ್ನು ಅಭಿವೃದ್ಧಿಪಡಿಸುವುದು
 • ಕೌಶಲಾಧಾರಿತ ಶಿಕ್ಷಣ ಕ್ರಮವನ್ನು ಉತ್ತೇಜಿಸುವುದು ಸೇರಿ ಹಲವು ಶಿಫಾರಸುಗಳನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದ್ದು, ಶಾಲೆಗಳಲ್ಲಿ “ಭಾರತ-ಕೇಂದ್ರಿತ” ಮತ್ತು “ವೈಜ್ಞಾನಿಕ” ಕಲಿಕಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವಂತೆ ಸೂಚಿಸಲಾಗಿದೆ.

ಮೂರು-ಭಾಷೆಯ ಸೂತ್ರ

 • ಅರವತ್ತರ ದಶಕದಲ್ಲಿ, ಭಾಷೆಯ ನೀತಿಯು ಒರಟಾದ ವಾತಾವರಣಕ್ಕೆ ಬಂದಾಗ, ಮೂರು-ಭಾಷೆಯ ಸೂತ್ರವನ್ನು ಮೋಡೆಸ್ ವೈವೆಂಡಿ (ಸ್ವೀಕಾರಾರ್ಹ ಪರಿಹಾರ) ಎಂದು ಪರಿಕಲ್ಪನೆ ಮಾಡಲಾಯಿತು. 1968 ರಲ್ಲಿ ಸಂಸತ್ತಿನ ಅಧಿಕೃತ ಭಾಷೆಯ ನಿರ್ಣಯವನ್ನು ಜಾರಿಗೊಳಿಸಲಾಯಿತು,ಹಿಂದಿ-ಮಾತನಾಡುವ ಪ್ರದೇಶಗಳಲ್ಲಿ “ಆಧುನಿಕ ಭಾರತೀಯ ಭಾಷೆ, ಮೇಲಾಗಿ ದಕ್ಷಿಣದ ಭಾಷೆಗಳಲ್ಲಿ ಒಂದು” (ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ) ಅಧ್ಯಯನ ಮಾಡಲಾಗುವುದು ಮತ್ತು ಹಿಂದಿ ಮಾತನಾಡದೆ  ಇರುವ ಪ್ರದೇಶಗಳಲ್ಲಿ ಹಿಂದಿ ಅಧ್ಯಯನ ಮಾಡಬೇಕು  (ಪ್ರಾದೇಶಿಕ ಭಾಷೆಗಳು ಮತ್ತು ಇಂಗ್ಲೀಷ್ ಜೊತೆಗೆ).
 • ಇಡೀ ದೇಶಕ್ಕೆ ಮೂರು-ಭಾಷೆಯ ನೀತಿಯನ್ನು ಅರ್ಥೈಸಲಾಗಿತ್ತು. ಹಿಂದಿ-ಮಾತನಾಡದ ರಾಜ್ಯಗಳು (ತಮಿಳುನಾಡನ್ನು   ಹೊರತುಪಡಿಸಿ) ಮೂರು-ಭಾಷೆಯ ನೀತಿಯನ್ನು ಅನುಸರಿಸುವಾಗ, ಹಿಂದಿ-ಮಾತನಾಡುವ ಸಂಸ್ಥಾನಗಳು U- ಟರ್ನ್ ಅನ್ನು ತೆಗೆದುಕೊಂಡಿವೆ: ಅವರು ತಮ್ಮ ಶಾಲೆಗಳಲ್ಲಿ ಹಿಂದಿ-ಅಲ್ಲದ ಭಾಷೆಯನ್ನು ಬೋಧಿಸುವುದನ್ನು ಬಿಟ್ಟುಬಿಟ್ಟರು

ವಾಹನದ ಮೂಲಸಂರಚನೆ ಬದಲಿಸಿದರೆ ನೋಂದಣಿ ಇಲ್ಲ!

5.

ಸುದ್ಧಿಯಲ್ಲಿ   ಏಕಿದೆ ?ವಾಹನಗಳ ಮೂಲ ಸಂರಚನೆಯಲ್ಲಿ ಮಾರ್ಪಾಡುಗಳನ್ನು ಮಾಡಿದರೆ (ಮಾಡಿಫಿಕೇಷನ್) ಅಂತಹ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳು ನೋಂದಣಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

 • ಮೋಟಾರು ವಾಹನ ಕಾಯ್ದೆಯ ಪರಿಚ್ಛೇದ 52 (1) ಅನ್ವಯ ತಯಾರಕರು ಮೂಲ ತಪಶೀಲಿನ ಪ್ರಕಾರ ತಯಾರಿಸಿರುವ ವಾಹನದ ಮೂಲಸಂರಚನೆಯನ್ನು ಯಾವುದೇ ಕಾರಣಕ್ಕೂ ಮಾರ್ಪಾಡು ಮಾಡುವಂತಿಲ್ಲ.
 • ವಿಶೇಷವಾಗಿ ನೋಂದಣಿ ಪ್ರಮಾಣಪತ್ರದಲ್ಲಿ ದಾಖಲಿಸಲ್ಪಟ್ಟಿರುವ ವಾಹನದ ಮೂಲಸಂರಚನೆ ಅಂಶಗಳಲ್ಲಂತೂ ಮಾರ್ಪಾಡು ಮಾಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
 • ಮೋಟಾರು ವಾಹನ ಕಾಯ್ದೆಯನ್ವಯ ಸಣ್ಣಪುಟ್ಟ ಫಿಟ್​ವೆುಂಟ್ ಮಾಡಬಹುದು. ವಾಹನದ ಬಾಡಿ ಅಥವಾ ಛಾಸಿಸ್​ನ ಮೂಲಸಂರಚನೆಯಲ್ಲಿ ಮಾರ್ಪಾಡು ಮಾಡಿದರೆ ಅಂತಹ ವಾಹನಗಳು ನೋಂದಣಿಗೆ ಅನರ್ಹಗೊಳ್ಳುತ್ತವೆ ಎಂದು ಕೋರ್ಟ್ ತಿಳಿಸಿದೆ.

ಹಿನ್ನೆಲೆ

 • ಮೂಲಸಂರಚನೆಯನ್ನು ಮಾರ್ಪಾಡು ಮಾಡಿದ್ದರೂ, ಅಂತಹ ವಾಹನಗಳ ನೋಂದಣಿಯನ್ನು ಮಾಡಬಹುದಾಗಿದೆ ಎಂದು ಕೇರಳ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಸರಣ್ ಅವರಿದ್ದ ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿದೆ.

ಅನರ್ಹ ಏಕೆ?:

 • ವಾಹನದ ಮೂಲಸಂರಚನೆಯಲ್ಲಿ ಸಣ್ಣ ಬದಲಾವಣೆಯಾದರೂ ಚಾಲಕರ ಸುರಕ್ಷತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಇಂಥ ವಾಹನಗಳು ನೋಂದಣಿಗೆ ಅನರ್ಹಗೊಳ್ಳುತ್ತವೆ ಎಂದು ಕೋರ್ಟ್ ಹೇಳಿದೆ.

ಕೇರಳ ಹೈಕೋರ್ಟ್ ತೀರ್ಪು..

 • ಕೇರಳ ಮೋಟಾರು ವಾಹನ ನಿಯಮ ಪ್ರಕಾರ ವಾಹನಗಳ ಸೈಲೆನ್ಸರ್ ಬದಲಿಸುವುದು, ಅವುಗಳ ಶಬ್ದದ ಮಿತಿ ಹೆಚ್ಚಿಸುವುದು, ಹೆಚ್ಚಿನ ಹೊಗೆ ಉಗುಳುವಂತೆ ಮಾಡುವುದು, ವಾಹನದ ಬಣ್ಣ, ಟೈರ್ ಗಾತ್ರ ಬದಲಿಸುವುದು ಸ್ಪಾಯ್ಲರ್ ಬದಲಿಸುವುದು ಇನ್ನಿತರ ಮಾರ್ಪಾಡುಗಳಿಗೆ ಕಾನೂನಿನ್ವಯ ಅವಕಾಶ ಇದೆ ಎಂದು ಹೇಳಿದ್ದ ಕೇರಳ ಹೈಕೋರ್ಟ್, ವಾಹನಗಳ ಮೂಲಸಂರಚನೆ ಮಾರ್ಪಾಡುಗೊಳಿಸಿದ ಹೊರತಾಗಿಯೂ ಅವುಗಳನ್ನು ನೋಂದಣಿ ಮಾಡಬಹುದಾಗಿದೆ ಎಂದು ತೀರ್ಪು ನೀಡಿತ್ತು.

71ನೇ ಸೇನಾ ದಿನ

ಸುದ್ಧಿಯಲ್ಲಿ   ಏಕಿದೆ ?ಜನವರಿ 15ರಂದು ನಡೆಯಲಿರುವ ಸೇನಾ ದಿನದ ಪರೇಡ್‌ನಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸೇನೆ ತಂಡವನ್ನು ಮುನ್ನಡೆಸಲಿದ್ದಾರೆ. ಲೆಫ್ಟಿನೆಂಟ್‌ ಭಾವನ ಕಸ್ತೂರಿ ಅವರು 71ನೇ ಸೇನಾ ದಿನದಂದು 144 ಸಿಬ್ಬಂದಿಯುಳ್ಳ ಪರೇಡ್‌ನ ಮುಂದಾಳತ್ವ ವಹಿಸಲಿದ್ದಾರೆ.

 • 2015ರಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳು ಗಣರಾಜ್ಯೋತ್ಸವದ ದಿನ 148 ಸಿಬ್ಬಂದಿಯಿದ್ದ ಪರೇಡ್‌ಅನ್ನು ಮುನ್ನಡೆಸಿದ್ದರು. ಆದರೆ ಸೇನಾ ದಿನದ ಪರೇಡ್‌ನಲ್ಲಿ ಇದುವರೆಗೆ ಯಾವುದೆ ಮಹಿಳಾ ಅಧಿಕಾರಿಗೆ ಪರೇಡ್‌ ಮುನ್ನಡೆಸುವ ಅವಕಾಶ ಸಿಕ್ಕಿರಲಿಲ್ಲ.
 • ಭಾರತೀಯ ಸೇನಾ ಸೇವಾ ಕಾರ್ಪ್ಸ್‌(ಎಎಸ್‌ಸಿ) ನೇತೃತ್ವ ವಹಿಸಲಿರುವ ಭಾವನ ಕಸ್ತೂರಿ ಅವರಿಗೆ ಇದು ವಿಶೇಷ ಸಂದರ್ಭವೂ ಹೌದು. ಎರಡು ದಶಕಗಳ ನಂತರ ಎಎಸ್‌ಸಿ ಪರೇಡ್‌ನಲ್ಲಿ ಭಾಗವಹಿಸುತ್ತಿದೆ.

ಸೇನಾ ದಿನ

 • ಸೇನಾ ದಿನವನ್ನು ಪ್ರತಿ ವರ್ಷ ಜನವರಿ 15ಕ್ಕೆ ಆಚರಿಸಲಾಗುತ್ತದೆ. 1949ರ ಜನವರಿಯಲ್ಲಿ ಭಾರತದ ಕಮಾಂಡರ್‌ ಇನ್‌ ಚೀಫ್‌ ಆಗಿ ಜನರಲ್‌ ಲೆಫ್ಟಿನೆಂಟ್‌ ಜನರಲ್‌ ಕೆಎಂ ಕಾರ್ಯಪ್ಪ ಅಧಿಕಾರ ಪಡೆದ ದಿನದ ಸ್ಮರಣೆಯಾಗಿ ಆಚರಿಸಲಾಗುತ್ತದೆ. ಈ ಮೊದಲು ಭಾರತದ ಕಮಾಂಡರ್‌ ಇನ್‌ ಚೀಫ್‌ ಆಗಿ ಬ್ರಿಟಿಷ್‌ ಅಧಿಕಾರಿ ಸರ್‌ ಫ್ರಾನ್ಸಿಸ್‌ ಬುಚರ್‌ ಕಾರ್ಯ ನಿರ್ವಹಿಸುತ್ತಿದ್ದರು.
 • ಈ ದಿನ ರಾಷ್ಟ್ರದ ಭದ್ರತೆ ಮತ್ತು ನಾಗರಿಕರ ಸುರಕ್ಷತೆಗೆ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.

ಹೊಸ ಡಿಜಿಟಲ್ ಟೋಕನ್ ಪದ್ಧತಿ

7.

ಸುದ್ಧಿಯಲ್ಲಿ   ಏಕಿದೆ ?ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ಗಳ ಸುರಕ್ಷತೆಗೆ ಅನುಕೂಲವಾಗುವ ಹೊಸ ಪದ್ಧತಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಅನುಮತಿ ನೀಡಿದೆ.

 • ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ನಡೆಸುವ ಹಣಕಾಸು ವರ್ಗಾವಣೆಗಳ ಸುರಕ್ಷತೆಗೆ ಹೊಸ ಡಿಜಿಟಲ್‌ ಟೋಕನ್‌ ಪದ್ಧತಿಯನ್ನು ಅಳವಡಿಸಲು ಆರ್‌ಬಿಐ ಅನುಮತಿ ನೀಡಿದೆ.
 • ಇದು ನಿರಾತಂಕವಾಗಿ ಕಾರ್ಡ್‌ ಬಳಕೆಗೆ ಹಾದಿ ಸುಗಮಗೊಳಿಸಲಿದ್ದು, ನಗದುರಹಿತ ವರ್ಗಾವಣೆಗಳಿಗೆ ಪುಷ್ಟಿ ನೀಡಲಿದ್ದು, ಗೇಮ್‌ ಚೇಂಜರ್‌ ಆಗುವ ಸಾಧ್ಯತೆ ಇದೆ.

ಉಪಯೋಗ

 • ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ವರ್ಗಾವಣೆ ವೇಳೆ, ಕಾರ್ಡ್‌ ಸಂಖ್ಯೆಯ ಬದಲಿಗೆ ಬ್ಯಾಂಕ್‌ಗಳು ಬಿಡುಗಡೆಗೊಳಿಸುವ 16 ಅಂಕಿಗಳ ಕೋಡ್‌ ಬಳಕೆಯಾಗಲಿದೆ. ಇದರಿಂದಾಗಿ ಕಾರ್ಡ್‌ನ ಮಾಹಿತಿ ಸೋರಿಕೆಯಾಗುವ ಅಪಾಯ ಇರುವುದಿಲ್ಲ. ಕಾರ್ಡ್‌ಗಳು ಸೈಬರ್‌ ದಾಳಿಗೆ ಗುರಿಯಾಗುವ ಅಪಾಯವನ್ನೂ ತಡೆಯಬಹುದು.
 • ಮುಖ್ಯವಾಗಿ ಥಾಯ್ಲೆಂಡ್‌ನಂಥ ರಾಷ್ಟ್ರಗಳಿಗೆ ಪ್ರಯಾಣ ಮಾಡುವ ಸಂದರ್ಭ ಇದು ಸಹಕಾರಿ. ಥಾಯ್ಲೆಂಡ್‌ ಹಾಗೂ ಇತರ ಕೆಲ ರಾಷ್ಟ್ರಗಳಲ್ಲಿ ಪಬ್‌, ಹೋಟೆಲ್‌ಗಳಲ್ಲಿ ಕಾರ್ಡ್‌ಗಳ ಡೇಟಾ ಕಳ್ಳತನದ ಪ್ರಕರಣಗಳಿಗೆ ಕುಖ್ಯಾತಿ ಗಳಿಸಿವೆ. ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳ ಮೂಲಕ ಇ-ಸಿಗರೇಟ್‌, ದುಬಾರಿ ಸೈಕಲ್‌ಗಳ ಬಿಡಿ ಭಾಗ, ದ್ರೋನ್‌ ಇತ್ಯಾದಿಗಳ ಖರೀದಿಯ ವೇಳೆ ನಡೆಸುವ ಡಿಜಿಟಲ್‌ ಪೇಮೆಂಟ್‌ ಕೆಲವು ಸಲ ಸಮಸ್ಯೆ ಸೃಷ್ಟಿಸಬಹುದು. ಆದರೆ ಇದನ್ನು ತಪ್ಪಿಸಲು ಡಿಜಿಟಲ್‌ ಟೋಕನ್‌ ಸಹಕಾರಿ ಎನ್ನುತ್ತಾರೆ ತಜ್ಞರು.
 • ಈ ಡಿಜಿಟಲ್‌ ಟೋಕನ್‌ಗಳು ಅತ್ಯಧಿಕ ಭದ್ರತೆಯ ಅಂಶಗಳನ್ನು ಒಳಗೊಂಡಿದ್ದು, ಒಂದು ಸಲ ಟೋಕನ್‌ ಬಿಡುಗಡೆಯಾದ ನಂತರ ಬಳಕೆದಾರ ಹೊರತುಪಡಿಸಿ, ಬ್ಯಾಂಕ್‌ ಸಿಬ್ಬಂದಿ ಸೇರಿ ಬೇರೆ ಯಾರಿಗೂ ಅದನ್ನು ಭೇದಿಸಿ, ಮೂಲ ಕಾರ್ಡ್‌ನ ಸಂಖ್ಯೆ ಪತ್ತೆ ಹಚ್ಚಲು ಸಾಧ್ಯವಿಲ್ಲ. ಜತೆಗೆ ಪ್ರತಿ ವರ್ಗಾವಣೆಯಲ್ಲೂ ಈ 16 ಅಂಕಿಗಳು ಬದಲಾಗುತ್ತಿರುತ್ತವೆ.
 • ಇದುವರೆಗೆ ಯುಪಿಐ ಮತ್ತು ಐಎಂಪಿಎಸ್‌ ವಿಧಾನದಲ್ಲಿ ಇಂಥ ಸುರಕ್ಷತಾ ಕ್ರಮ ಇತ್ತು. ಇದೀಗ ಕಾರ್ಡ್‌ ಬಳಕೆಯಲ್ಲೂ ಲಭಿಸಲಿದೆ.
 • ಇಎಂವಿ ಕಾರ್ಡ್‌ ಪಿನ್‌ ಬಳಕೆಯಿಂದ ಎಟಿಎಂಗಳಲ್ಲಿ ಸೈಬರ್‌ ದಾಳಿ ಅಪಾಯ ಕಡಿಮೆಯಾಗಿದೆ. ಆನ್‌ಲೈನ್‌ ಸಾಧನಗಳಲ್ಲಿ ಕಾರ್ಡ್‌ ಬಳಕೆಯ ವೇಳೆ ಸುರಕ್ಷತೆಗೆ ಈ ಟೋಕನ್‌ ಪದ್ಧತಿ ಉಪಯುಕ್ತವಾಗಲಿದೆ.

ಜಿಎಸ್‌ಟಿ: ಸಣ್ಣ ಉದ್ದಿಮೆ, ವರ್ತಕರಿಗೆ ಭಾರಿ ವಿನಾಯಿತಿ

ಸುದ್ಧಿಯಲ್ಲಿ   ಏಕಿದೆ ?ದೇಶದ ಸಣ್ಣ ಉದ್ಯಮಿಗಳು ಹಾಗೂ ವರ್ತಕರಿಗೆ ಏಪ್ರಿಲ್‌ 1ರಿಂದ ವಾರ್ಷಿಕ 40 ಲಕ್ಷ ರೂ. ತನಕ ವಹಿವಾಟು ಮಾಡುವವರಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

 • ಜಿಎಸ್‌ಟಿಯಿಂದ ವಿನಾಯಿತಿಗೆ ಈಗಿರುವ ವಾರ್ಷಿಕ 20 ಲಕ್ಷ ರೂ. ವಹಿವಾಟಿನ ಮಿತಿಯನ್ನು 40 ಲಕ್ಷ ರೂ.ಗೆ ಏರಿಸಲಾಗಿದೆ. ಜಿಎಸ್‌ಟಿ ಮಂಡಳಿ ತೆಗೆದುಕೊಂಡಿರುವ ಈ ನಿರ್ಧಾರದಿಂದ ಸಣ್ಣ ಉದ್ಯಮ ವಲಯಕ್ಕೆ ತೆರಿಗೆ ಹೊರೆ ಇಳಿದಿದ್ದು, ನಿರಾಳವಾಗಿದೆ.
 • ಜತೆಗೆ ಸಣ್ಣ ವ್ಯಾಪಾರ, ಉದ್ಯಮಗಳಿಗೆ ಜಿಎಸ್‌ಟಿಯ ಕಂಪೊಸಿಶನ್‌ (ಸಂಯೋಜಿತ) ಸ್ಕೀಮ್‌ ಅಡಿಯಲ್ಲಿ ವಾರ್ಷಿಕ ವಹಿವಾಟು ಮಿತಿಯನ್ನು 1ರಿಂದ 5 ಕೋಟಿ ರೂ.ಗೆ ಏರಿಸಲಾಗಿದೆ. ಇದರಿಂದ 1.5 ಕೋಟಿ ರೂ. ತನಕದ ವಹಿವಾಟಿಗೆ ಕೇವಲ ಶೇ.1ರ ಅತ್ಯಲ್ಪ ತೆರಿಗೆ ಪಾವತಿಸಿದರೆ ಸಾಕಾಗುತ್ತದೆ.
 • ಸೇವೆಗಳನ್ನು ಪೂರೈಸುವವರಿಗೂ 50 ಲಕ್ಷ ರೂ. ತನಕದ ವಹಿವಾಟಿಗೆ ಜಿಎಸ್‌ಟಿಯ ಕಂಪೊಸಿಶನ್‌ ಸ್ಕೀಮ್‌ ಅಡಿಯಲ್ಲಿ ಶೇ.6ರ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸೇವಾ ವಲಯದ ಸಣ್ಣ ಉದ್ಯಮಿಗಳಿಗೆ ತೆರಿಗೆ ಹೊರೆ ಇಳಿಯಲಿದೆ.
 • ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ್ದ ಕೇರಳಕ್ಕೆ 2 ವರ್ಷಗಳ ತನಕ ಅಂತರಾಜ್ಯ ಸರಕು ಮತ್ತು ಸೇವೆಗಳ ವಹಿವಾಟಿನಲ್ಲಿ ಶೇ.1ರಷ್ಟು ಪ್ರಾಕೃತಿಕ ವಿಪತ್ತು ಸೆಸ್‌ ವಿಧಿಸಲು ಜಿಎಸ್‌ಟಿ ಮಂಡಳಿ ಅನುಮೋದಿಸಿದೆ. ಇದರಿಂದ ಪುನರ್ವಸತಿ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ನೆರವಾಗಲಿದೆ.
 • ಈಶಾನ್ಯ ರಾಜ್ಯಗಳಿಗೆ ಜಿಎಸ್‌ಟಿ ವಿನಾಯಿತಿ ಮಿತಿಯಲ್ಲಿ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗೆ ವಿಸ್ತರಿಸಲಾಗಿದೆ.
 • ಉಚಿತ ಬಿಲ್ಲಿಂಗ್: ಎಷ್ಟು ಜಿಎಸ್​ಟಿ ಕಟ್ಟಬೇಕು ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆ ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೆ ನೆರವಾಗಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಎಸ್​ಟಿ ಜಾಲಕ್ಕೆ (ಜಿಎಸ್​ಟಿಎನ್) ನೋಂದಾಯಿತರಾಗಿರುವ ಸಣ್ಣ ಪ್ರಮಾಣದ ತೆರಿಗೆ ಪಾವತಿದಾರರಿಗೆ ಹಣಕಾಸು ಲೆಕ್ಕಾಚಾರ ಮತ್ತು ಬಿಲ್ಲಿಂಗ್ ಸಾಫ್ಟ್​ವೇರ್ ಉಚಿತವಾಗಿ ನೀಡಲು ಜಿಎಸ್​ಟಿ ಮಂಡಳಿ ತೀರ್ವನಿಸಿದೆ.

ಏನಿದು ಜಿಎಸ್​ಟಿ ಸಂಯೋಜಿತ ಯೋಜನೆ?

 • ತೆರಿಗೆ ಪಾವತಿದಾರರಿಗೆ ಜಿಎಸ್​ಟಿ ಅನ್ವಯ ಲಭ್ಯವಿರುವ ಅತಿ ಸುಲಭ ಮತ್ತು ಸರಳ ಯೋಜನೆ ಇದಾಗಿದೆ. ಜಿಎಸ್​ಟಿ ವ್ಯವಸ್ಥೆಯಲ್ಲಿರುವ ಹಲವು ಕ್ಲಿಷ್ಟಕರ ಸಂಪ್ರದಾಯಗಳನ್ನು ಬದಿಗೆ ಸರಿಸಿ ನಿಗದಿತ ವಹಿವಾಟು ಮೊತ್ತಕ್ಕೆ ಜಿಎಸ್​ಟಿಯನ್ನು ವಾರ್ಷಿಕವಾಗಿ ಪಾವತಿಸುವ ಯೋಜನೆ ಇದಾಗಿದೆ. 1 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ಇರುವ ತೆರಿಗೆ ಪಾವತಿದಾರರು ಈ ಯೋಜನೆಗೆ ಸೇರ್ಪಡೆಗೊಳ್ಳಲು ಅವಕಾಶ ಇದೆ.
 • ಕಂಪೊಸಿಶನ್‌ ಸ್ಕೀಮ್‌ ಅಡಿಯಲ್ಲಿ ವರ್ತಕರು ವರ್ಷಕ್ಕೆ ಒಂದೇ ಸಲ ತೆರಿಗೆ ರಿಟರ್ನ್‌ ಸಲ್ಲಿಸಿದರೆ ಸಾಕು. ಆದರೆ ತೆರಿಗೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನೀಡಬೇಕು. ಜಿಎಸ್‌ಟಿಯಡಿಯಲ್ಲಿ ಇದುವರೆಗೆ 17 ಕೋಟಿಗೂ ಅಧಿಕ ಉದ್ದಿಮೆ, ಬಿಸಿನೆಸ್‌ಗಳು ನೋಂದಣಿಯಾಗಿವೆ.

Related Posts
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ತಲಕಾವೇರಿಯಲ್ಲಿ ತೀರ್ಥೋದ್ಭವ ಸುದ್ಧಿಯಲ್ಲಿ ಏಕಿದೆ ?ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಕಂಡು ಭಕ್ತರು ಪುಳಕಿತರಾದರು. ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕುವುದನ್ನು ಕಂಡು ಹಾಗೂ ಪುರೋಹಿತರು ತೀರ್ಥವನ್ನು ಚೆಲ್ಲಿದ ನಂತರ ಭಕ್ತರು ಸಂತೃಪ್ತಗೊಂಡರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಅಭೂತಪೂರ್ವ ...
READ MORE
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪೌರತ್ವ ವಿಧೇಯಕ ಸುದ್ಧಿಯಲ್ಲಿ ಏಕಿದೆ ?ಅಕ್ರಮ ವಲಸಿಗರ ಪಿಡುಗಿಗೆ ತಡೆ ಹಾಕುವ ಮಹತ್ವದ ಪೌರತ್ವ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ. ಏನಿದು ಪೌರತ್ವ ವಿಧೇಯಕ? ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ...
READ MORE
“05 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕದಂಬೋತ್ಸವ ಮುಂದೂಡಿಕೆ ಸುದ್ಧಿಯಲ್ಲಿ ಏಕಿದೆ ?ಮಂಗನ ಕಾಯಿಲೆ ಭೀತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ. ಹಿನ್ನಲೆ ಫೆಬ್ರವರಿ 9 ಮತ್ತು 10ರಂದು ಕದಂಬೋತ್ಸವನ್ನು ನಡೆಸಲು ಜಿಲ್ಲಾಡಳಿತ ಈಗಾಗಲೇ ಅಂತಿಮ ಹಂತದ ಸಿದ್ಧತೆಗಳನ್ನು ...
READ MORE
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇವಸ್ಥಾನಕ್ಕೂ ಬಂತು ವಸ್ತ್ರ ಸಂಹಿತೆ, ಗುರುತಿನ ಚೀಟಿ ಸುದ್ಧಿಯಲ್ಲಿ ಏಕಿದೆ ?ದೇವಸ್ಥಾನಗಳಲ್ಲಿ ಪ್ರಸಾದ ದುರಂತ ಘಟನೆಗಳಿಂದ ಎಚ್ಚೆತ್ತ ಸರಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ. ಸೂಚನೆಗಳೇನು ? ಪ್ರಸಾದ ತಯಾರಕರಿಂದ ಹಿಡಿದು ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಸರಕಾರ ನಿಗದಿಪಡಿಸಿದ ಮಾರ್ಗ ಸೂಚಿಯನ್ವಯ ಸಮವಸ್ತ್ರ ...
READ MORE
” 20 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಕ್ಯಾಂಟೀನ್​ಗೆ ಬಯೋಗ್ಯಾಸ್ ಸುದ್ಧಿಯಲ್ಲಿ ಏಕಿದೆ ?ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಪೋರ್ಟೆಬಲ್ ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನಾ ಘಟಕ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಅದರಿಂದ ಉತ್ಪಾದನೆಯಾಗುವ ಗ್ಯಾಸ್ ಇಂದಿರಾ ಕ್ಯಾಂಟೀನ್​ಗಳಿಗೆ ಪೂರೈಕೆ ಮಾಡುವ ನೂತನ ಪ್ರಯೋಗಕ್ಕೆ ಪಾಲಿಕೆ ...
READ MORE
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಡ್ಜ್​ಗಳ ಕೊರತೆ ಪಟ್ಟಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಸುದ್ಧಿಯಲ್ಲಿ ಏಕಿದೆ ? ನ್ಯಾಯಾಧೀಶರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು 2, 3ನೇ ಸ್ಥಾನದಲ್ಲಿವೆ. ಕರ್ನಾಟಕ 7ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 1,188 ಹುದ್ದೆಗಳು ...
READ MORE
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೈಗಾ ಅಣು ವಿದ್ಯುತ್ ಸ್ಥಾವರ ಸುದ್ಧಿಯಲ್ಲಿ  ಏಕಿದೆ ? ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ...
READ MORE
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಗಿಡ ಬೆಳೆಸಿ ಅಂಕ ಗಳಿಸಿ! ಯೋಜನೆ ಸುದ್ಧಿಯಲ್ಲಿ ಏಕಿದೆ ?ಇನ್ನು ಮುಂದೆ 8ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಚೆನ್ನಾಗಿ ಪೋಷಿಸಿದರೆ ಅಂಕಗಳನ್ನು ಪಡೆಯಬಹುದು. ಅರಣ್ಯ, ಪರಿಸರ ಮತ್ತು ಜೈವಿಕ ಇಲಾಖೆ ಈ ಸಂಬಂಧ ಸದ್ಯದಲ್ಲಿಯೇ ...
READ MORE
“23rd ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಸ್ಪೀಡ್‌ ಪೋಸ್ಟ್‌ ಸುದ್ಧಿಯಲ್ಲಿ ಏಕಿದೆ ?ಗ್ರಾಹಕರ ಸಮಯ ಉಳಿತಾಯದೊಂದಿಗೆ ಸುಗಮ ಹಾಗೂ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಅಂಚೆ ಇಲಾಖೆಯು 'ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌' ಅಳವಡಿಕೆ ಮಾಡಿದೆ. ಎಟಿಎಂ ಮಾದರಿಯಲ್ಲಿರುವ 'ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌' ಯಂತ್ರವನ್ನು ದೇಶದಲ್ಲೇ ಮೊದಲ ಬಾರಿಗೆ ನಗರದ ಪ್ರಧಾನ ಅಂಚೆ ...
READ MORE
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹಂಪಿ ಉತ್ಸವ ಸುದ್ಧಿಯಲ್ಲಿ ಏಕಿದೆ ? ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವವು ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಸಕಲ ಸಿದ್ಧತೆಯಾಗಿದೆ. ಮಾ.2ರಂದು ಕಲಾ ತಂಡಗಳಿಂದ ಶೋಭಾಯಾತ್ರೆ ಜರುಗಲಿದ್ದು, ಸಿಎಂ ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡುವರು. ವಿಶೇಷ ಆಹ್ವಾನಿತರಾಗಿ ನಟ ದರ್ಶನ್, ...
READ MORE
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“05 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 20 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“23rd ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *