“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Aids: ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

1.

ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಎಚ್‌ಐವಿ/ಏಡ್ಸ್‌ ಸೋಂಕಿತರ ಸಂಖ್ಯೆ ಶೇ. 25ರಷ್ಟು ಕುಸಿದಿದ್ದು, ಆ ಮೂಲಕ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 8 ರಿಂದ 9ನೇ ಸ್ಥಾನಕ್ಕೆ ಇಳಿದಿದೆ.

 • ರಾಜ್ಯದಲ್ಲಿ ಶೇ.38 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಸೋಂಕಿತರ ಪ್ರಮಾಣ ಶೇ. 25ರಷ್ಟು ಇಳಿಕೆಯಾಗಿದ್ದು, ಪ್ರಮುಖವಾಗಿ ಪ್ರಸವ ಪೂರ್ವ ಎಚ್‌ಐವಿ ಪರೀಕ್ಷೆಗೆ ಆಸ್ಪತ್ರೆಗೆ ಬರುವ ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಶೇ.0.06ಕ್ಕೆ ಕುಸಿದಿದೆ.
 • ಎಚ್‌ಐವಿ/ಏಡ್ಸ್‌ ಸೋಂಕಿತರಲ್ಲಿ ಮಿಜೋರಾಂ (ಶೇ. 19) ಮೊದಲನೇ ಸ್ಥಾನದಲ್ಲಿದ್ದು, ನಾಗಾಲ್ಯಾಂಡ್‌ (0.82) 2, ಮೇಘಾಲಯ (0.73) 3, ತ್ರಿಪುರ (0.56) 4, ಮಣಿಪುರಿ (0.57) 5ನೇ ಸ್ಥಾನದಲ್ಲಿದೆ. ಆದರೆ ನಿರಂತರ ಜಾಗೃತಿ ಹಾಗೂ ಚಿಕಿತ್ಸಾ ಕಾರ್ಯಕ್ರಮಗಳ ಯಶಸ್ಸಿನಿಂದಾಗಿ ಕರ್ನಾಟಕ 8ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದಿದ್ದು, ಸೋಂಕಿತರ ಸಂಖ್ಯೆ ಶೇ. 25ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
 • ದಕ್ಷಿಣ ಭಾರತದಲ್ಲಿ ಎಚ್‌ಐವಿ ಸೋಂಕು ಹೆಚ್ಚಿರುವ ನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದು.
 • ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ (ನ್ಯಾಕೋ) ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ 1998ರಿಂದ ಎಚ್‌ಐವಿ ಕಣ್ಗಾವಲು ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆ ಪ್ರಕಾರ ವಯಸ್ಕರಲ್ಲಿನ ಎಚ್‌ಐವಿ ಹರಡುವಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
 • ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಶೇ.06ರಷ್ಟು ಇಳಿಕೆಯಾಗಿದೆ. ಎಆರ್‌ಟಿ ಕೇಂದ್ರಗಳಲ್ಲಿ ಪ್ರಸ್ತುತ 1,61,925 ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 5,743 ಮಂದಿ ಎರಡನೇ ಹಂತದ ಚಿಕಿತ್ಸೆ, 147 ಮಂದಿ ಮೂರನೇ ಹಂತದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 14 ವರ್ಷಗಳಲ್ಲಿ ರಾಜ್ಯದಲ್ಲಿ 67,780 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದ ವಿವರ

 • ಎಚ್‌ಐವಿ/ಏಡ್ಸ್‌ ಸೋಂಕಿತರದಲ್ಲಿ ರಾಜ್ಯದಲ್ಲಿ ಬಾಗಲಕೋಟ (ಶೇ. 41) ಮೊದಲ ಸ್ಥಾನದಲ್ಲಿದ್ದು, ಬೆಳಗಾವಿ (ಶೇ.1.32) 2, ವಿಜಯಪುರ (ಶೇ.1.30) 3, ಯಾದಗಿರಿ (ಶೇ.1.05) 4 ಹಾಗೂ ಚಿತ್ರದುರ್ಗ (ಶೇ.1.04) 5ನೇ ಸ್ಥಾನದಲ್ಲಿದೆ.
 • ಕಳೆದ ಎಂಟು ವರ್ಷಗಳಿಂದ ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದ್ದು, ಅಂಕಿ- ಅಂಶಗಳ ಪ್ರಕಾರ ಪ್ರತೀ ವರ್ಷ ಲಕ್ಷಾಂತರ ಜನ ಮುಂಜಾಗ್ರತಾ ಕ್ರಮವಾಗಿ ಎಚ್‌ಐವಿ ತಪಾಸಣೆಗೊಳಗಾಗುತ್ತಿದ್ದಾರೆ. ಇದರಿಂದ ರಾಜ್ಯ 9ನೇ ಸ್ಥಾನಕ್ಕೆ ಇಳಿಯಲು ಸಾಧ್ಯವಾಗಿದೆ.

Aids Day 2018:

 • ಎಚ್‌ಐವಿ/ಏಡ್ಸ್‌ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಡಿ.1 ಅನ್ನು ‘ವಿಶ್ವ ಏಡ್ಸ್‌ ದಿನ’ವನ್ನಾಗಿ ಘೋಷಿಸಿದ್ದು, ಎಚ್‌ಐವಿ/ಏಡ್ಸ್‌ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಹಲವು ಕಾರ್ಯಕ್ರಮ ರೂಪಿಸುತ್ತಿದೆ.
 • ಜಾಗತಿಕವಾಗಿ ಮಾರಕವಾಗಿರುವ ಏಡ್ಸ್‌ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು, ರೋಗ ಬಾರದಂತೆ ಕೈಗೊಳ್ಳಬೇಕಾದ ಕ್ರಮ, ಚಿಕಿತ್ಸಾ ಕ್ರಮ ಮತ್ತು ಏಡ್ಸ್‌ ಲಕ್ಷಣಗಳ ಕುರಿತು ಅರಿವು ಮೂಡಿಸಲು ಈ ದಿನವನ್ನು ಮೀಸಲಿರಿಸಲಾಗಿದೆ.
 • ಈ ವರ್ಷಕ್ಕೆ ನಿಮ್ಮ ಎಚ್‌ಐವಿ ಸ್ಥಿತಿ ತಿಳಿಯಲು ಕೂಡಲೇ ಎಚ್‌ಐವಿ ಪರೀಕ್ಷೆ ಮಾಡಿಸಿಎಂಬ ಘೋಷಣೆ ಯಡಿ ಏಡ್ಸ್‌ ದಿನ ಆಚರಿಸಲಾಗುತ್ತಿದೆ

ಎಚ್‌ಐವಿ/ಏಡ್ಸ್‌ ಎಂದರೇನು? ತಿಳಿದುಕೊಳ್ಳಬೇಕಾದ ಅಂಶಗಳು

 • ಎಚ್‌ಐವಿ (Human immunodeficiency virus) ಎನ್ನುವುದು ವೈರಸ್ ಮೂಲಕ ಹರಡುವ ಕಾಯಿಲೆಯಾಗಿದೆ. ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹಂತಹಂತವಾಗಿ ನಾಶಗೊಳಿಸಿ, ದುರ್ಬಲಗೊಳಿಸುತ್ತಾ ಹೋಗುತ್ತದೆ. ಇದರಿಂದ ವಿವಿಧ ರೋಗಗಳು ಸುಲಭವಾಗಿ ದೇಹವನ್ನು ಆಕ್ರಮಿಸುತ್ತವೆ. ಪ್ರಮುಖವಾಗಿ ಸಿಡಿ-4 ಕೋಶವನ್ನು ನಾಶಪಡಿಸುತ್ತಾ ಹೋಗುತ್ತದೆ.
 • ಎಚ್‌ಐವಿ ಪೀಡಿತ ವ್ಯಕ್ತಿ ಏಡ್ಸ್‌ (Acquired Immune Deficiency Syndrome)ಗೆ ತುತ್ತಾಗುತ್ತಾನೆ. ಆರೋಗ್ಯವಂತ ವ್ಯಕ್ತಿ ಪ್ರತಿ ಎಂಎಂ3ಗೆ 500-1500 ರವರೆಗೂ ಸಿಡಿ4 ಕೋಶ ಹೊಂದಿರುತ್ತಾನೆ. ಆದರೆ ರೋಗಪೀಡಿತನಿಗೆ ಅವು 200ಕ್ಕಿಂತ ಕಡಿಮೆ ಇರುತ್ತವೆ.
 • ಎಚ್‌ಐವಿ ಪೀಡಿತ ವ್ಯಕ್ತಿಯ ರಕ್ತದ ಸಂಪರ್ಕಕ್ಕೆ ಬಂದರೆ, ವೀರ್ಯ, ಗುಪ್ತ ರೋಗಗಳು, ರೋಗಪೀಡಿತರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ತಾಯಿಗೆ ಎಚ್‌ಐವಿ ಇದ್ದು ಮಗುವಿಗೆ ಮೊಲೆ ಹಾಲು ಕುಡಿಸಿದರೆ ಅದರಿಂದ ರೋಗ ಹರಡುತ್ತದೆ.
 • ಆದರೆ ರೋಗಪೀಡಿತ ವ್ಯಕ್ತಿಗೆ ಶೇಖ್‌ಹ್ಯಾಂಡ್ ನೀಡುವುದರಿಂದ, ತಬ್ಬಿಕೊಳ್ಳುವುದರಿಂದ, ಆಹಾರ, ಬಟ್ಟೆ ಹಂಚಿಕೊಳ್ಳುವುದರಿಂದ ರೋಗ ಹರಡುವುದಿಲ್ಲ.
 • ಎಚ್‌ಐವಿ ಪೀಡಿತರಾದವರಿಗೆ ಆರಂಭದಲ್ಲಿ ಜ್ವರ, ಚರ್ಮದ ಕಾಯಿಲೆ, ಉಬ್ಬಸ, ನೋವು, ತಲೆನೋವು, ಹೊಟ್ಟೆ ಕೆಡುವುದು ಸಹಿತ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ನಿಧಾನವಾಗಿ ಒಂದೊಂದೇ ರೋಗ ಬರಲಾರಂಭಿಸುತ್ತದೆ. ಔ‍ಷಧ ಸೇವಿಸಿದರೂ ಅದರ ಪರಿಣಾಮ ಕಡಿಮೆಯಿರುತ್ತದೆ.
 • ಎಚ್‌ಐವಿ ಪೀಡಿತರ ದೇಹದ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಟಿಬಿ, ವಿವಿಧ ಬ್ಯಾಕ್ಟೀರಿಯ ಸಂಬಂಧಿತ ಕಾಯಿಲೆ, ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳುತ್ತದೆ.
 • ಎಚ್‌ಐವಿಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆಯಿಲ್ಲ. ಆದರೆ ರೋಗದ ಕುರಿತು ಪತ್ತೆಹಚ್ಚಿದರೆ, ಅದರಿಂದ ಮುಕ್ತಿ ಪಡೆಯಲಾಗದಿದ್ದರೂ, ಸ್ವಲ್ಪ ಕಾಲ ಹೆಚ್ಚುವರಿ ಜೀವನ ನಡೆಸಬಹುದು. ಜತೆಗೆ ಎಚ್‌ಐವಿ ಪೀಡಿತರೊಂದಿಗೆ ಇರುವವರಿಗೆ ರೋಗ ಹರಡದಂತೆ ತಡೆಯಬಹುದು. ಅಲ್ಲದೆ ಸೂಕ್ತ ಚಿಕಿತ್ಸೆಯು ರೋಗಿ ಬದುಕಿರುವವರೆಗೆ ಉತ್ತಮ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ.

ನವೋದ್ಯಮಕ್ಕೆ ಪ್ರಾಧಿಕಾರ:

2.

ಸುದ್ಧಿಯಲ್ಲಿ ಏಕಿದೆ ?ತಂತ್ರಜ್ಞಾನ ಆಧಾರಿತ ನವೋದ್ಯಮಗಳ ಉತ್ತೇಜನಕ್ಕೆ ಸರಕಾರ ಹೊಸದಾಗಿ ಆವಿಷ್ಕಾರ ಪ್ರಾಧಿಕಾರ ಸ್ಥಾಪಿಸಲಿದೆ ಎಂದು ಸಿಎಂ ಕುಮಾರಸ್ವಾಮಿ ಘೋಷಿಸಿದರು.

 • ರಾಜ್ಯ ವಿಜ್ಞಾನ-ತಂತ್ರಜ್ಞಾನ ಹಾಗೂ ಐಟಿ-ಬಿಟಿ ಇಲಾಖೆಯು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಬೆಂಗಳೂರು ಟೆಕ್‌ ಸಮ್ಮೇಳನ-2018′ ಉದ್ಘಾಟಿಸಿ ಅವರು ಈ ವಿಷಯ ಪ್ರಕಟಿಸಿದರು.
 • ಬೆಂಗಳೂರು ಐಟಿ-ಬಿಟಿ ಕ್ಷೇತ್ರದಲ್ಲಿ ನಾನಾ ಸಾಧನೆಗಾಗಿ ಮುಂಚೂಣಿಯಲ್ಲಿದೆ. ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರವನ್ನು ಪ್ರೋತ್ಸಾಹಿಸಲು ಸಿಎಂ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆಯಾಗಲಿದೆ. ಇದು ಬೌದ್ಧಿಕ ಆಸ್ತಿ ಹಕ್ಕುಸ್ವಾಮ್ಯದ ಮೂಲಕ ವಾಣಿಜ್ಯ ಚಟುವಟಿಕೆಯನ್ನು ಕಾನೂನು ಸಹಯೋಗದಲ್ಲಿ ಮುಂದುವರಿಸಲು ಸಹಕಾರಿಯಾಗಲಿದೆ.
 • ಸರಕಾರ ನವೋದ್ಯಮ ಆರಂಭಿಸುವವರಿಗೆ 50 ಲಕ್ಷ ರೂ. ನೆರವು ನೀಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 77 ನವೋದ್ಯಮಕ್ಕೆ ನೆರವು ಒದಗಿಸಲು 16 ಕೋಟಿ ರೂ. ಅನುದಾನ ನಿಗದಿಯಾಗಿದೆ. ಹೈ-ಕ ಭಾಗದ ಹತ್ತು ನವೋದ್ಯಮಕ್ಕೆ 11 ಕೋಟಿ ರೂ. ಮೀಸಲಿರಿಸಲಾಗಿದೆ

ಆವಿಷ್ಕಾರ ಕೇಂದ್ರ ಆರಂಭಕ್ಕೆ ಆದ್ಯತೆ

 • ಬೆಂಗಳೂರಿನ ಐಟಿ-ಬಿಟಿ ಉದ್ಯಮಗಳಿಂದ ಹತ್ತ ಲಕ್ಷ ನೇರ ಉದ್ಯೋಗ ಹಾಗೂ 30 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ. 2016ರಲ್ಲಿ 943 ಕಂಪನಿಗಳಿದ್ದಲ್ಲಿ 2017ರಲ್ಲಿ 976ಕ್ಕೆ ಏರಿದೆ. ಇವುಗಳಲ್ಲಿ ಶೇ.65ರಷ್ಟು ಅಮೆರಿಕ ಕಂಪನಿಗಳಾಗಿದ್ದು, ಜಾಗತಿಕ ಮಟ್ಟದ ಕಂಪನಿಗಳಿಗೂ ಬೆಂಗಳೂರು ಹೂಡಿಕೆ ಹಾಗೂ ಉದ್ಯಮ ವಿಸ್ತರಣೆಗೆ ಪ್ರಾಶಸ್ತ್ಯ ತಾಣವಾಗಿ ಮಾರ್ಪಟ್ಟಿದೆ.
 • ಹೊಸ ತಾಂತ್ರಿಕತೆಯನ್ನು ಮುನ್ನೆಲೆಗೆ ತರಲು ಸರಕಾರ ಸಿ-ಕ್ಯಾನ್‌ಸಂಸ್ಥೆಯ ನೆರವಿನೊಂದಿಗೆ ಆವಿಷ್ಕಾರ ಕೇಂದ್ರವನ್ನು ಸ್ಥಾಪಿಸಲಿದೆ. ಈಗಾಗಲೇ 58 ಕನ್‌ಕ್ಯೂಬೇಷನ್‌ ಸೆಂಟರ್‌ ಆರಂಭಗೊಂಡಿದ್ದು, ಕೃಷಿ ಸಂಬಂಧಿತ ಸಂಶೋಧನೆ ಕೇಂದ್ರಗಳನ್ನು ತೆರೆಯಲಾಗುವುದು.

ಕಣ್ಣೂರು ಏರ್‌ಪೋರ್ಟ್‌ ಲೋಕಾರ್ಪಣೆ

3.

ಸುದ್ಧಿಯಲ್ಲಿ ಏಕಿದೆ ?ಹಲವು ಹೊಸತನದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಬಳಕೆಗೆ ಸಜ್ಜಾಗಿದ್ದು, ಡಿ.9 ರಂದು ಲೋಕಾರ್ಪಣೆಯಾಗಲಿದೆ.

 • ಮೊದಲ ವಿಮಾನ ಅಬುಧಾಬಿಗೆ ಹಾರಾಟ ನಡೆಸಲಿದೆ.
 • ಒಟ್ಟು ಆರು ಅಂತಸ್ತಿನ ಟರ್ಮಿನಲ್‌ ಕಟ್ಟಡ, ಎಲ್ಲ ವ್ಯವಸ್ಥೆಯನ್ನು ಒಳಗೊಂಡಿರುವ ಎಟಿಎಸ್‌ನ ಅಂತಿಮ ಕಾಮಗಾರಿ ಪೂರ್ಣಗೊಂಡಿದೆ.
 • ಕೆಲವು ದಿನಗಳಲ್ಲಿ ಆಂತರಿಕ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ. ಬೆಂಗಳೂರು, ಹುಬ್ಬಳ್ಳಿ, ಚೆನ್ನೈ, ಹೈದರಾಬಾದ್‌, ಗೋವಾ, ಮುಂಬಯಿ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಗೆ ಹಾರಾಟ ನಡೆಸಲು ವಿವಿಧ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ. ಅದೇ ರೀತಿ ಸರಕು ಸಾಗಣೆಗೆ ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಹಂತಹಂತವಾಗಿ ಜಾರಿಗೆ ಬರಲಿದೆ.
 • ಆಧುನಿಕ ವ್ಯವಸ್ಥೆ: ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಆಧುನಿಕ ವ್ಯವಸ್ಥೆ ಮಾಡಲಾಗಿದೆ. ನೂತನ ಸ್ಕ್ಯಾ‌ನಿಂಗ್‌ ತಂತ್ರಜ್ಞಾನದಿಂದ ತಪಾಸಣೆ ಶೀಘ್ರವಾಗಿ ಮುಗಿಯಲಿದೆ. ಅಲ್ಲದೇ, ಲಗ್ಗೇಜ್‌ ಡ್ರಾಪಿಂಗ್‌ ಸಿಸ್ಟಮ್‌ ಎಂಬ ತಂತ್ರಜ್ಞಾನ ಕೂಡ ಮಿಂಚಿನ ವೇಗದಲ್ಲಿ ಲಗ್ಗೇಜ್‌ಗಳನ್ನು ಪರಿಶೀಲನೆ ನಡೆಸಲಿದೆ. ಪ್ರತಿ ಗಂಟೆಗೆ 2 ಸಾವಿರ ಮಂದಿ ಪ್ರಯಾಣಿಕರನ್ನು ತಪಾಸಣೆ ಮಾಡಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆ ಇಲ್ಲಿದೆ.
 • ಇದೀಗ 24 ಚೆಕ್‌ ಇನ್‌ ಕೌಂಟರ್‌ಗಳಿದ್ದು, ಬೇಡಿಕೆ ಆಧರಿಸಿ 48 ಕೌಂಟರ್‌ಗಳಿಗೆ ಹೆಚ್ಚಿಸುವ ಅವಕಾಶವನ್ನು ಹೊಂದಿದೆ. ಜನವರಿಯಲ್ಲಿ 13 ವಿಮಾನಗಳ ಹಾರಾಟ ನಡೆಯಲಿದ್ದು, ವಿದೇಶಿ ಸಂಸ್ಥೆಗಳ ವಿಮಾನ ಸೇವೆ ಆರಂಭಿಸಲು ಅನುಮತಿಗಾಗಿ ಕಾಯಲಾಗುತ್ತಿದೆ.

ಕಣ್ಣೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ

 • ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಲಿರುವುದರಿಂದ ಕಣ್ಣೂರು-ವಿರಾಜಪೇಟೆ-ಮೈಸೂರು ಸಂಪರ್ಕ ಮೇಲ್ದರ್ಜೆಗೆ ಏರಲಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ
 • ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಆರು ಪ್ರಮುಖ ರಸ್ತೆಗಳು ಮೇಲ್ದರ್ಜೆಗೆ ಏರಲಿದೆ. ಅದರಲ್ಲಿ ಕಣ್ಣೂರಿನಿಂದ ಕೊಡಗಿನ ವಿರಾಜಪೇಟೆ ಮೂಲಕ ಮೈಸೂರು ಸಂಪರ್ಕ ಕಲ್ಪಿಸುವ ರಸ್ತೆಯೂ ಒಂದು. ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಒಪ್ಪಿಗೆ ನೀಡಿದೆ.

ರಾಜ್ಯಕ್ಕೆ ಏನು ಪ್ರಯೋಜನ?

 • ಕರ್ನಾಟಕ ಗಡಿ ಜಿಲ್ಲೆಗಳಿಗೆ ಹಲವು ರೀತಿಯ ಪ್ರಯೋಜನ ನಿರೀಕ್ಷಿಸಲಾಗಿದೆ. ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನವಾಗುವ ಸಾಧ್ಯತೆ ಇದೆ. ಕೃಷಿ, ಪ್ರವಾಸೋದ್ಯಮ ಹಾಗೂ ಐಟಿ ವಲಯದಲ್ಲಿ ಸಂಚಲನ ಮೂಡಲಿದೆ ಎನ್ನಲಾಗಿದೆ.
 • ಈ ಜಿಲ್ಲೆಗಳಲ್ಲಿ ಬೆಳೆಯುವ ಕೃಷಿ ಹಾಗೂ ಪುಷ್ಪೋದ್ಯಮಕ್ಕೆ ವಿದೇಶದಲ್ಲಿ ಮಾರುಕಟ್ಟೆ ದೊರೆಯಲಿದೆ. ಹೆಚ್ಚಾಗಿ ಹೊರ ರಾಜ್ಯ ಹಾಗೂ ವಿದೇಶದ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ.

ಹವಾಮಾನ ಬದಲಾವಣೆ

4.

ಸುದ್ಧಿಯಲ್ಲಿ ಏಕಿದೆ ?ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಬದಲಾವಣೆಯ ಪ್ರಭಾವದಿಂದ ಕರಾವಳಿ ಪ್ರದೇಶಗಳ ಮೇಲೆ ಅತಿ ಕೆಟ್ಟ ಪರಿಣಾಮಗಳು ಬೀರುತ್ತಿದೆ. ಸಮುದ್ರದಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ದೇಶದ ಹಲವು ಕರಾವಳಿ ತೀರದ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ. ಅಲ್ಲದೆ, ಇನ್ನು ಹಲವು ಪ್ರದೇಶಗಳು ಮುಳುಗಡೆಯಾಗುವ ಭೀತಿಯಲ್ಲಿವೆ.

 • ಪಶ್ಚಿಮ ಬಂಗಾಳದ ಘೋರಾಮಾರ ದ್ವೀಪದ ನಿವಾಸಿಗಳು ಸಹ ಜಾಗತಿಕ ತಾಪಮಾನ ಬದಲಾವಣೆಯಿಂದಾಗಿ ಮುಳುಗಡೆಯಾಗುವ ಭೀತಿಯಲ್ಲಿದ್ದಾರೆ.
 • ಸುಂದರ್‌ಬನ್‌ ಡೆಲ್ಟಾದಲ್ಲಿರುವ ಹಲವು ದ್ವೀಪಗಳಲ್ಲಿ ಘೋರಾಮಾರ ಸಹ ಒಂದಾಗಿದ್ದು, ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ ಹಾಗೂ ಮಣ್ಣಿನ ಸವಕಳಿಯಿಂದಾಗಿ ಆ ದ್ವೀಪಕ್ಕೆ ಹಾನಿಯಾಗಿದೆ. ಅಲ್ಲದೆ, ಪ್ರದೇಶದಲ್ಲಿರುವ ಲೋಹಾಚಾರ ಎಂಬ ಮತ್ತೊಂದು ದ್ವೀಪ ನೀರಿನಿಂದಾಗಿ ಕಣ್ಮರೆಯಾಗಿದ್ದು, ಜನರೆಲ್ಲ ಅಲ್ಲಿಂದ ಕಾಲ್ಕಿತ್ತಿದ್ದು, ಸಾಗರ್‌ ಎಂಬ ಮತ್ತೊಂದು ದ್ವೀಪದಲ್ಲಿ ನೆಲೆಸಿದ್ದಾರೆ.

ಹವಾಮಾನ ಬದಲಾವಣೆಯ ಪರಿಣಾಮಗಳು

 • ಇನ್ನೊಂದೆಡೆ, ವೇಗವಾಗಿ ಮಣ್ಣು ಸವೆತವಾಗುತ್ತಿರುವುದರಿಂದ ಘೋರಾಮಾರ ದ್ವೀಪದ ವಿಸ್ತೀರ್ಣ ಕಳೆದ 4 ದಶಕಗಳಲ್ಲಿ 26 ಚದರ ಕಿ.ಮೀನಿಂದ 7 ಚದರ ಕಿ.ಮೀ. ಗೆ ಇಳಿಕೆಯಾಗಿದೆ. ಅಲ್ಲದೆ, ಪ್ರದೇಶದಲ್ಲಿ ಪ್ರವಾಹ ಅತಿಯಾಗುತ್ತಿದ್ದು, ಮನೆಗಳು, ಜೀವನೋಪಾಯಕ್ಕೆ ತೀವ್ರ ತೊಂದರೆಯಾಗುತ್ತಿದೆ

ನಿಫಾ ವೈರಸ್ ಅಲರ್ಟ್

5.

ಸುದ್ಧಿಯಲ್ಲಿ ಏಕಿದೆ ?ಮಳೆಗಾಲದಲ್ಲಿ ಕೇರಳದಲ್ಲಿ ಕಾಣಿಸಿಕೊಂಡು ಭಾರೀ ತೊಂದರೆ ಉಂಟುಮಾಡಿದ್ದ ನಿಫಾ ವೈರಸ್ ಮತ್ತೆ ಹಲವೆಡೆ ಕಾಣಿಸಿಕೊಂಡಿದ್ದು, ಕೇರಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದೆಲ್ಲೆಡೆ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

 • ಸೋಂಕು ಹರಡುವ ಬಗೆ, ತಡೆಯುವುದು ಹೇಗೆ, ಚಿಕಿತ್ಸಾ ಕ್ರಮ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಮೂಲಕ ಎಲ್ಲ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಮತ್ತು ಜಾಗೃತಿ ಮೂಡಿಸಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮಗಳು

 • ಸಾರ್ವಜನಿಕರು ತರಕಾರಿಗಳು, ಹಣ್ಣುಹಂಪಲುಗಳನ್ನು ಸೇವಿಸುವಾಗ ಜಾಗ್ರತೆ ಪಾಲಿಸಬೇಕು. ಚೆನ್ನಾಗಿ ತೊಳೆದು ಶುಚಿಗೊಳಿಸಿದ ಬಳಿಕ ಇವುಗಳನ್ನು ಸೇವಿಸಬೇಕು.
 • ತೆರೆದ ಸ್ಥಳಗಳಲ್ಲಿ ಬೆಳೆಯುವ ಫಲಗಳನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಈ ವಿಷಯದಲ್ಲಿ ಜನರಿಗೆ ತಿಳಿವಳಿಕೆ ಮೂಡಿಸಲು ಜಾಗ್ರತೆ ನಿರ್ದೇಶನದಲ್ಲಿ ಹೇಳಲಾಗಿದೆ.
 • ಕೆಮ್ಮಿನಂತಹ ನಿಫಾ ಲಕ್ಷಣಗಳೊಂದಿಗೆ ಬರುವವರ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದೂ, ಇಲ್ಲಿ ಹೊಣೆಗಾರಿಕೆ ಇರುವ ವೈದ್ಯರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ತಿಳಿಸಲಾಗಿದೆ.
 • ಕೆಮ್ಮು ಇರುವವರು ಮನೆಯಿಂದ ಹೊರಗೆ ಬರುವಾಗ, ಇತರರೊಂದಿಗೆ ವ್ಯವಹರಿಸುವಾಗ ಮಾಸ್ಕ್‌ ಅಥವಾ ಟವೆಲ್‌ ಉಪಯೋಗಿಸಬೇಕು.

ನಿಪಾ ವೈರಸ್ ಎಂದರೇನು?

 • ನಿಪಾ ವೈರಸ್ ಎಂಬುದು 1998 ಮತ್ತು 1999 ರಲ್ಲಿ ಮಲೇಷಿಯಾ ಮತ್ತು ಸಿಂಗಾಪುರ್ಗಳಲ್ಲಿ ಉಂಟಾದ ಉದಯೋನ್ಮುಖ ಸಾಂಕ್ರಾಮಿಕ ಕಾಯಿಲೆಯಾಗಿದೆ.
 • ಇದು ಮೊದಲು ದೇಶೀಯ ಹಂದಿಗಳಲ್ಲಿ ಕಂಡುಬಂದಿದೆ ಮತ್ತು ನಾಯಿಗಳು, ಬೆಕ್ಕುಗಳು, ಆಡುಗಳು, ಕುದುರೆಗಳು ಮತ್ತು ಕುರಿಗಳೂ ಸೇರಿದಂತೆ ಹಲವು ಪ್ರಭೇದ ಪ್ರಾಣಿಗಳ ನಡುವೆ ಕಂಡುಬಂದಿದೆ. ಈ ಸೋಂಕು ಮಾನವರ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿದುಬರುತ್ತದೆ.
 • ನಿಪಾಹ್ ವೈರಸ್ ಎನ್ಸೆಫಾಲಿಟಿಸ್ ಅನ್ನು ಉಂಟುಮಾಡುವ ಜೀವಿಯು ಕುಟುಂಬದ ಪ್ಯಾರಮೈಕ್ಸೊವಿಡೆ, ಜೆನಿಸ್ ಹೆನಿಪಾವೈರಸ್ನ ಆರ್ಎನ್ಎ ಅಥವಾ ರಿಬೋನ್ಯೂಕ್ಲಿಕ್ ಆಸಿಡ್ ವೈರಸ್, ಮತ್ತು ಇದು ಹೆಂಡ್ರ್ರಾ ವೈರಸ್ಗೆ ನಿಕಟ ಸಂಬಂಧ ಹೊಂದಿದೆ.
 • ನಿಪಾ ವೈರಸ್ ಸೋಂಕಿನಿಂದ ಮಲೇಷಿಯಾದಲ್ಲಿನ ಹಳ್ಳಿಯಿಂದ ತನ್ನ ಹೆಸರನ್ನು ಪಡೆಯುತ್ತದೆ, ಅಲ್ಲಿ ವೈರಸ್ ಮೊದಲು ಪ್ರತ್ಯೇಕಗೊಂಡ ವ್ಯಕ್ತಿಯು ರೋಗಕ್ಕೆ ತುತ್ತಾಗುತ್ತಾನೆ.
 • ವೈರಸ್ ವಿಶ್ವ ಆರೋಗ್ಯ ಸಂಸ್ಥೆ (OIE) ಟೆರೆಸ್ಟ್ರಿಯಲ್ ಅನಿಮಲ್ ಹೆಲ್ತ್ ಕೋಡ್ನಲ್ಲಿ ಪಟ್ಟಿ ಮಾಡಲ್ಪಟ್ಟಿದೆ ಮತ್ತು OIE (OIE ಟೆರೆಸ್ಟ್ರಿಯಲ್ ಅನಿಮಲ್ ಹೆಲ್ತ್ ಕೋಡ್) ಗೆ ವರದಿ ಮಾಡಬೇಕು.

ನಿಪಾ ಹೇಗೆ ಹರಡುತ್ತದೆ?

 • ನಿಪಾ ಮತ್ತು ಹೆಂಡ್ರ ವೈರಸ್ಗಳ ನೈಸರ್ಗಿಕ ಜಲಾಶಯದ ಆಶ್ರಯದಾತರಾದ ಪೀಟೋಪಸ್ನ ಹಣ್ಣಿನ ಬಾವಲಿಗಳು ಅಥವಾ ‘ಫ್ಲೈಯಿಂಗ್ ನರಿಗಳು’ ಮೂಲಕ ರೋಗವು ಹರಡುತ್ತದೆ. ವೈರಸ್ ಬ್ಯಾಟ್ ಮೂತ್ರದಲ್ಲಿ ಮತ್ತು ಸಂಭಾವ್ಯವಾಗಿ, ಬ್ಯಾಟ್ ಮಾಂಸ, ಲಾಲಾರಸ, ಮತ್ತು ಭ್ರೂಣದ ದ್ರವಗಳಲ್ಲಿ ಇರುತ್ತದೆ.

ಹಿಮಾಲಯಕ್ಕೆ ಎಚ್ಚರಿಕೆಯ ಗಂಟೆ: ಭೂಕಂಪ ಸಾಧ್ಯತೆ

6.

ಸುದ್ಧಿಯಲ್ಲಿ ಏಕಿದೆ ?ದೇಶಕ್ಕೆ ಉತ್ತರದಲ್ಲಿ ನೈಸರ್ಗಿಕ ತಡೆಗೋಡೆಯಂತಿರುವ ಹಿಮಾಲಯದಲ್ಲಿಯೇ ಭೂಕಂಪವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

 • ಹಿಮಾಲಯದ ಹಲವಡೆ ಭೂಕಂಪದ ಕೇಂದ್ರಗಳಿದ್ದು, 8.5 ತೀವ್ರತೆಯ ಭೂಕಂಪವಾಗುವ ಸಾಧ್ಯತೆಯಿದೆ. ಹಿಮಾಲಯದಲ್ಲಿ ಭೂಕಂಪವಾದರೆ ಅದರ ಪರಿಣಾಮ ಭೀಕರವಾಗಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
 • ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್‌ ಸೈಂಟಿಫಿಕ್ ರಿಸರ್ಚ್‌ನ ಭೂಕಂಪಶಾಸ್ತ್ರಜ್ಞ ಸಿ ಪಿ ರಾಜೇಂದ್ರನ್ ನೇತೃತ್ವದ ತಜ್ಞರ ತಂಡ, ಹಿಮಾಲಯದಲ್ಲಿ ಮುಂದಿನ ದಿನಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಹೇರಳವಾಗಿವೆ. ಕೇಂದ್ರ ಹಿಮಾಲಯದಲ್ಲಿ ಯಾವಾಗ ಬೇಕಾದರೂ ಭೂಕಂಪ ಸಂಭವಿಸಬಹುದು ಎಂದು ಹೇಳಿದ್ದಾರೆ.
 • ಜಿಯೋಲಾಜಿಕಲ್ ಜರ್ನಲ್‌ನಲ್ಲಿ ತಜ್ಞರ ಅಧ್ಯಯನ ವರದಿ ಪ್ರಕಟವಾಗಿದ್ದು, ಭೂಕಂಪದ ಕೇಂದ್ರ ಹಿಮಾಲಯದಲ್ಲಿ ಪತ್ತೆಯಾಗಿದ್ದು, ಅಲ್ಲಿ ದುರಂತ ಸಂಭವಿಸಿದರೆ ಅದರಿಂದ ಹಿಮದ ರಾಶಿಯೂ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಹೋಗುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಲಿದೆ ಎಂದಿದ್ದಾರೆ.
 • ವಿಜ್ಞಾನಿಗಳು ಸ್ಥಳೀಯ ಭೂಪ್ರದೇಶ ಮತ್ತು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ಗೂಗಲ್ ಅರ್ತ್‌ ಮತ್ತು ಇಸ್ರೋ ಕಾರ್ಟೋಸ್ಯಾಟ್-1 ಉಪಗ್ರಹದ ಸಹಾಯದಿಂದ ಅಧ್ಯಯನ ನಡೆಸಿದ್ದಾರೆ.

ಪಿಒಕೆಯ ಶಾರದಾ ಪೀಠ

7.

ಸುದ್ಧಿಯಲ್ಲಿ ಏಕಿದೆ ?ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಕ್ಕೆ (ಮಂದಿರ) ಭೇಟಿ ನೀಡಲು ಹಿಂದುಗಳಿಗೂ ಅನುವು ಮಾಡಿಕೊಡಬೇಕು ಎಂದು ಕಾಶ್ಮೀರಿ ಪಂಡಿತರು ಒತ್ತಾಯಿಸಿದ್ದಾರೆ.

 • ಪಿಒಕೆಯ ಶಾರದಾ ಗ್ರಾಮದ ಕಿಷನ್​ಗಂಗಾ ನದಿ ದಡದಲ್ಲಿರುವ ಪುರಾತನ ಶಾರದಾ ಮಂದಿರ ಹಿಂದುಗಳಿಗೆ ಪವಿತ್ರ ಕ್ಷೇತ್ರ. ಈ ಮಂದಿರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ.
 • ಈಗ ಕರ್ತಾರ್​ಪುರ ಗುರುದ್ವಾರಕ್ಕೆ ಕಾರಿಡಾರ್ ನಿರ್ಮಾಣ ಆಗುತ್ತಿರುವುದು ಶಾರದಾ ಮಂದಿರ ಭಕ್ತರ ದರ್ಶನಕ್ಕೆ ಮತ್ತೆ ತೆರೆಯುವ ಭರವಸೆ ಮೂಡಿಸಿದೆ ಎಂದು ಕಾಶ್ಮೀರಿ ಪಂಡಿತರು ಹೇಳಿದ್ದಾರೆ.
 • ಪುರಾತನ ಕಾಲದಲ್ಲಿ ಬಹುದೊಡ್ಡ ವೇದ ಅಧ್ಯಯನ ಪೀಠವಾಗಿದ್ದ ಶಾರದಾ ಮಂದಿರಕ್ಕೆ ದಶಕಗಳ ಹಿಂದೆ ಕಾಶ್ಮೀರಿ ಪಂಡಿತರು ಯಾತ್ರೆ ಕೈಗೊಳ್ಳುತ್ತಿದ್ದರು. ಅಲ್ಲಿನ ಭೇಟಿಗೆ ಮತ್ತೆ ಅವಕಾಶ ಕಲ್ಪಿಸಿದರೆ ವಲಸೆ ಹೋಗಿರುವ ಕಾಶ್ಮೀರಿ ಪಂಡಿತ ಸಮುದಾಯಕ್ಕೂ ಒಗ್ಗೂಡಲು ಸಹಾಯವಾಗುತ್ತದೆ ಎಂಬ ಆಶಯವೂ ಇದೆ.

ಶಾರದಾ ಪೀಠ

 • ಶಾರದಾ ಪೀಠವು ತೊರೆದುಹೋದ ಹಿಂದೂ ದೇವಸ್ಥಾನ ಮತ್ತು ನೀಲಾಮ್ ನದಿಯ ಉದ್ದಕ್ಕೂ ಕಲಿಯುವ ಪ್ರಾಚೀನ ಕೇಂದ್ರವಾಗಿದ್ದು, ಪಾಕಿಸ್ತಾನದ ಆಜಾದ್ ಕಾಶ್ಮೀರ ಪ್ರದೇಶದ ಶಾರದಾ  ಹಳ್ಳಿಯಲ್ಲಿದೆ.
 • 6 ನೇ ಮತ್ತು 12 ನೇ ಶತಮಾನಗಳ ನಡುವೆ , ಭಾರತೀಯ ಉಪಖಂಡದಲ್ಲಿ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು, ಕಲ್ಹಣ, ಆದಿ ಶಂಕರ, ವೈರೋಟ್ಸಾನಾ, ಕುಮಾರಜಿವಾ ಮತ್ತು ಥೋನ್ಮಿ ಸಂಭೊಟಾದಂತಹ ವಿದ್ವಾಂಸರು ಅಧ್ಯಯನ ಮಾಡಿದರು.
 • ಪಾಣಿಣಿ ಮತ್ತು ಹೇಮಚಂದ್ರ ತಮ್ಮ ಬರಹಗಳನ್ನು ಸಂಸ್ಕೃತ ವ್ಯಾಕರಣದಲ್ಲಿ ಪೂರ್ಣಗೊಳಿಸಿದ ಮತ್ತು ಸಂಗ್ರಹಿಸಿದ ಸ್ಥಳವೆಂದು ಹೇಳಲಾಗುತ್ತದೆ
 • ಶಾರದಾ ಪೀಠವು 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದೆ – ದಕ್ಷಿಣ ಏಷ್ಯಾದಾದ್ಯಂತ ಹೆಚ್ಚು ಪೂಜ್ಯವಾದ ದೇವಾಲಯಗಳು ಹಿಂದೂ ದೇವತೆ ಸತಿ ಸ್ಥಳದ ದೇಹವನ್ನು ನೆನಪಿಸುತ್ತವೆ.

Related Posts
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೆಜಿಎಫ್‌ ಗಣಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ಕೆಜಿಎಫ್‌ನ ಭಾರತ್‌ ಗೋಲ್ಡ್‌ ಮೈನ್ಸ್‌ ಕಂಪನಿ (ಬಿಜಿಎಂಎಲ್‌) ವಶದಲ್ಲಿರುವ ಸುಮಾರು 10 ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಬಯಸಿದೆ. ''ಗಣಿಗಾರಿಕೆ ಸಂಬಂಧಿಸಿದಂತೆ 2015ರಲ್ಲಿ ಕೇಂದ್ರ ಸರ್ಕಾರ ...
READ MORE
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚಾಲ್ತಿ ಖಾತೆ ಕೊರತೆ ಸುದ್ದಿಯಲ್ಲಿ ಏಕಿದೆ? ಭಾರತದ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ)ದಲ್ಲಿ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ. 5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಚಾಲ್ತಿ ಖಾತೆ ಕೊರತೆಗೆ ಕಾರಣಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಹಿನ್ನಡೆ ...
READ MORE
ಯಾರು ಅಂಗವಿಕಲರು? ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗ ಶೇ.40ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಊನವಾಗಿರುವ ದೈಹಿಕ ಅಂಗವಿಕಲರು, ದೃಷ್ಟಿದೋಷ, ಶ್ರವಣದೋಷ, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು ಇವರನ್ನು ಅಂಗವಿಕಲರೆಂದು ಪರಿಗಣಿಸಲಾಗುತ್ತದೆ. ಅಂಗವೈಕಲ್ಯ ನಿವಾರಣೆ ಶಸ್ತ್ರಚಿಕಿತ್ಸೆಗೆ ಲಕ್ಷ ರೂ.ವರೆಗೆ ವೈದ್ಯಕೀಯ ಪರಿಹಾರ ನಿಧಿ ಈ ಯೋಜನೆಯಲ್ಲಿ ಅಂಗವೈಕಲ್ಯದ ...
READ MORE
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಾವೇರಿ ಆನ್‌ಲೈನ್ ಸೇವೆ ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದರು. ಉದ್ದೇಶ ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ...
READ MORE
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಸ್ವಚ್ಛ ಸರ್ವೆಕ್ಷಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಸುದ್ಧಿಯಲ್ಲಿ ಏಕಿದೆ?ಸ್ವಚ್ಛ ಸರ್ವೆಕ್ಷಣ ಅಭಿಯಾನದಲ್ಲಿ ಬೆಂಗಳೂರಿಗೆ ಉತ್ತಮ ಸ್ಥಾನ ದೊರಕಿಸಿಕೊಡಲು ಬಿಬಿಎಂಪಿ ಈ ಬಾರಿ ಹಲವು ಕ್ರಮ ಕೈಗೊಳ್ಳುತ್ತಿದೆ. ಪ್ರಮುಖವಾಗಿ ಅಭಿಯಾನದಲ್ಲಿ ಬೆಂಗಳೂರಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಮಾಡಲು ಸಾಮಾಜಿಕ ಜಾಲತಾಣ, ಎಫ್​ಎಂ ...
READ MORE
ಜೀವಸತ್ವಗಳು (ವಿಟಮಿನ್‌) ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ (Water Soluble) ಜೀವಸತ್ವಗಳೆಂದು ವಿಂಗಡಿಸಲಾಗಿದೆ. ಜೀವಸತ್ವ ಎ.ಡಿ.ಇ.ಕೆ.ಗಳನ್ನು (ವಿಟಮಿನ್‌ ...
READ MORE
“6th & 7th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಉನ್ನತಿ ಯೋಜನೆ ಸುದ್ಧಿಯಲ್ಲಿ ಏಕಿದೆ?ದುರ್ಬಲ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಉನ್ನತಿ ಎಂಬ ವಿನೂತನ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ...
READ MORE
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಮ್ಯಾಗ್ಸೆಸೆ ಪುರಸ್ಕಾರ  ಸುದ್ಧಿಯಲ್ಲಿ ಏಕಿದೆ? ‘ಏಷ್ಯಾದ ನೊಬೆಲ್ ’ ಎಂದೇ ಖ್ಯಾತಿ ಗಳಿಸಿರುವ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ಸೋನಂ ವಾಂಗ್​ಚುಕ್ ಮತ್ತು ಡಾ. ಭರತ್ ವಟವಾನಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಆಗಸ್ಟ್ 31ರಂದು ಫಿಲಿಪ್ಪೀನ್ಸ್ ನಲ್ಲಿ ನಡೆಯುವ ...
READ MORE
“7th & 8th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
'ಏರೋ ಇಂಡಿಯಾ ಶೋ' ಸುದ್ಧಿಯಲ್ಲಿ ಏಕಿದೆ ?ಬೇರೆ ರಾಜ್ಯಗಳಿಗೆ ಸ್ಥಳಾಂತರವಾಗಲಿದೆ ಎನ್ನಲಾಗಿದ್ದ 'ಏರೋ ಇಂಡಿಯಾ ಶೋ' ಮುಂದಿನ ಫೆ. 20ರಿಂದ 24ರ‌ವರೆಗೆ ಬೆಂಗಳೂರಿನ‌ ಯಲಹಂಕ ವಾಯುನೆಲೆಯಲ್ಲಿಯೇ ನಡೆಯಲಿದೆ. ಹಿನ್ನಲೆ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ 'ಏರೋ ಇಂಡಿಯಾ ವೈಮಾನಿಕ ಪ್ರದರ್ಶನ' ಲಖನೌಗೆ ಸ್ಥಳಾಂತರವಾಗುವ ಸಾಧ್ಯತೆಗಳ ಬಗ್ಗೆ ...
READ MORE
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೊಸ ವಾಹನ ನೋಂದಣಿ 2 ವರ್ಷ ಸ್ಥಗಿತ ಸುದ್ಧಿಯಲ್ಲಿ ಏಕಿದೆ ? ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರದ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ನಿರ್ಧಾರಕ್ಕೆ ಕಾರಣಗಳು ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ...
READ MORE
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಿಕಲಾಂಗರ ನೆರವಿಗೆ ಹಲವು ಯೋಜನೆ
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಜೀವಸತ್ವಗಳು
“6th & 7th ಅಕ್ಟೋಬರ್ 2018 ಕನ್ನಡ ಪ್ರಚಲಿತ
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“7th & 8th ಸೆಪ್ಟೆಂಬರ್ 2018 ಕನ್ನಡ
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *