ಸಾಹಿತ್ಯ ಸಮ್ಮೇಳನಕ್ಕೆ ಪೇಢಾನಗರಿ ಸಜ್ಜು
ಸುದ್ಧಿಯಲ್ಲಿ ಏಕಿದೆ ?ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ 1957ರ ನಂತರ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಆತಿಥ್ಯ ವಹಿಸಿಕೊಂಡಿರುವ ಧಾರವಾಡದಲ್ಲೀಗ ಕನ್ನಡ ಜಾತ್ರೆಯ ವಾತಾವರಣ ನಿರ್ವಣವಾಗಿದೆ.
- ಧಾರವಾಡ ಜಿಲ್ಲೆಯಲ್ಲಿ ಈವರೆಗೆ 1918ರಲ್ಲಿ ಆರ್. ನರಸಿಂಹಾಚಾರ್ (ಧಾರವಾಡ), 1933ರಲ್ಲಿ ವೈ. ನಾಗೇಶಶಾಸ್ತ್ರಿ (ಹುಬ್ಬಳ್ಳಿ), 1940ರಲ್ಲಿ ವೈ. ಚಂದ್ರಶೇಖರಶಾಸ್ತ್ರಿ (ಧಾರವಾಡ), 1957ರಲ್ಲಿ ಕೆ.ವಿ. ಪುಟ್ಟಪ್ಪ (ಧಾರವಾಡ), 1990ರಲ್ಲಿ ಆರ್.ಸಿ. ಹಿರೇಮಠ (ಹುಬ್ಬಳ್ಳಿ) ಅಧ್ಯಕ್ಷತೆಯಲ್ಲಿ ಸಮ್ಮೇಳನಗಳು ಜರುಗಿವೆ.
- ಧಾರವಾಡ ನಗರದಲ್ಲಿ 62 ವರ್ಷಗಳ ನಂತರ ಸಮ್ಮೇಳನ ಜರುಗುತ್ತಿದ್ದು, ಡಾ. ಚಂದ್ರಶೇಖರ ಕಂಬಾರ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಕರ್ನಾಟಕದವರೇ ಆದ ಕಂಬಾರರು ಅಧ್ಯಕ್ಷ ಸ್ಥಾನ ವಹಿಸಿರುವುದು ಸಾಹಿತ್ಯ ವಲಯದಲ್ಲಿ ಅಭಿಮಾನ ಮೂಡಿಸಿದೆ. ಅಂತೆಯೇ, ಹಿರಿ- ಕಿರಿಯ ಸಾಹಿತಿಗಳು ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
- ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಆವರಣದ ಫುಟ್ಬಾಲ್ ಮೈದಾನದಲ್ಲಿ ಮುಖ್ಯ ವೇದಿಕೆ, ರೈತರ ಜ್ಞಾನಾಭಿವೃದ್ಧಿ ಕೇಂದ್ರ ಹಾಗೂ ಪ್ರೇಕ್ಷಾಗೃಹದಲ್ಲಿ ಸಮಾನಾಂತರ ವೇದಿಕೆ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ರಂಗಾಯಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ.
- ಸಾಹಿತ್ಯಿಕ ಚಿಂತನೆ: ಸಮ್ಮೇಳನ ಕೇವಲ ಊಟ, ವಸತಿ, ಪುಸ್ತಕ ಖರೀದಿ, ಸಾಹಿತಿಗಳೊಂದಿಗೆ ಭೇಟಿ- ಕುಶಲೋಪರಿಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡದ ಅಸ್ಮಿತೆಗೆ ಮೂರು ದಿನಗಳ ಕಾಲ ಅರ್ಥಪೂರ್ಣ ಸಂವಾದ, ಗೋಷ್ಠಿಗಳ ಆಯೋಜನೆಗೆ ಒತ್ತು ನೀಡಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನ
- ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ 1915ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ.
- ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ.
ಸಂವಿಧಾನ ದಿನಾಚರಣೆ
ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜ.26ರ ಒಳಗೆ ‘ಸಂವಿಧಾನ ದಿನವನ್ನು’ ಆಚರಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
- ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆದೇಶದ ಮೇರೆಗೆ ಈ ಸುತ್ತೋಲೆ ಹೊರಡಿಸಲಾಗಿದ್ದು, ನಮ್ಮ ಸಂವಿಧಾನದ ಆಶಯಗಳನ್ನು ಪಾಲಿಸುವುದು ಮತ್ತು ಈಡೇರಿಸುವುದು ಎಲ್ಲರ ಕರ್ತವ್ಯವಾಗಿದೆ.
ಉದ್ದೇಶ
- ಸಾರ್ವಜನಿಕರಲ್ಲಿ ಸಾಕಷ್ಟು ಜನರಿಗೆ ತಮಗಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದಿಲ್ಲ. ಮತ್ತು ನಮ್ಮ ಸಂವಿಧಾನದ ಪ್ರಸ್ತಾವನೆಯ ಉದ್ದೇಶ ಹಾಗೂ ತತ್ವಗಳ ಬಗ್ಗೆ ತಿಳಿದಿಲ್ಲ.
- ಸಂವಿಧಾನದ ಮೂಲ ತತ್ವಗಳಾದ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ಸಮಾನತೆ ಹಾಗೂ ಬ್ರಾತೃತ್ವವನ್ನು ಎತ್ತಿ ಹಿಡಿಯಬೇಕಾಗಿದೆ. ಹಾಗಾಗಿ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಗಣರಾಜ್ಯೋತ್ಸವ ದಿನದ ಒಳಗೆ ಸಂವಿಧಾನ ದಿನವನ್ನು ಆಚರಿಸಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದಂತೆ ಸೂಚಿಸಿದೆ.
ಆಚರಣೆ ಹೇಗೆ?
- ಸಂವಿಧಾನದ ಪ್ರಸ್ತಾವನೆಯನ್ನು ಶಾಲಾ ಪ್ರಾರ್ಥನಾ ಸಮಯದಲ್ಲಿ ಜೋರಾಗಿ ಓದಬೇಕು. ಸಂವಿಧಾನದ ಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸ್ವಾತಂತ್ರ್ಯ, ನ್ಯಾಯ, ಮುಕ್ತತೆ, ಸಮಾನತೆ, ಬ್ರಾತೃತ್ವ ವಿಷಯಗಳಿಗೆ ಸಂಬಂಧಿಸಿದ ಫಲಕಗಳನ್ನು (ಪ್ಲೆಕಾರ್ಡ್) ಪ್ರದರ್ಶಿಸಬೇಕು. ಮತ್ತು ‘ನನ್ನ ದೈನಂದಿನ ಜೀವನದಲ್ಲಿ ನನ್ನ ಸಂವಿಧಾನ’ ಎಂಬ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಬೇಕು.
ಸಂವಿಧಾನ ದಿವಸ
- ಸಂವಿಧಾನ ದಿವಸ ಎಂದೂ ಕರೆಯಲ್ಪಡುವ ಸಂವಿಧಾನದ ದಿನ (ನ್ಯಾಶನಲ್ ಲಾ ಡೇ) ಅನ್ನು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸಲುವಾಗಿ ಪ್ರತಿವರ್ಷ ನವೆಂಬರ್ 26 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. 26 ನವೆಂಬರ್ 1949 ರಂದು, ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಳವಡಿಸಿಕೊಂಡಿತು, ಮತ್ತು ಇದು 26 ಜನವರಿ 1950 ರಂದು ಜಾರಿಗೆ ಬಂದಿತು.
- ಭಾರತ ಸರಕಾರ ನವೆಂಬರ್ 26 ರಂದು ಸಂವಿಧಾನದ ದಿನವಾಗಿ ನವೆಂಬರ್ 19, 2015 ರಂದು ಗೆಜೆಟ್ ಪ್ರಕಟಣೆಯ ಮೂಲಕ ಘೋಷಿಸಿತು. ಮುಂಬೈಯ ಬಿ. ಆರ್. ಅಂಬೇಡ್ಕರ್ ಸ್ಮಾರಕದ ಅಡಿಪಾಯವನ್ನು ಹಾಕಿದಾಗ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 11 ಅಕ್ಟೋಬರ್ 2015 ರಂದು ಘೋಷಣೆ ಮಾಡಿದರು. 2015 ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆ ಅಂಬೇಡ್ಕರ್ ರವರು ಸಂವಿಧಾನದ ಅಸೆಂಬ್ಲಿಯ ಕರಡು ಸಮಿತಿ ಅಧ್ಯಕ್ಷರಾಗಿ ಮತ್ತು ಸಂವಿಧಾನದ ಕರಡು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
- ಈ ದಿನವನ್ನು ಕಾನೂನು ದಿನದಂದು ಆಚರಿಸಲಾಗುತ್ತಿತ್ತು. ಸಂವಿಧಾನದ ಪ್ರಾಮುಖ್ಯತೆಯನ್ನು ಹರಡಲು ಮತ್ತು ಅಂಬೇಡ್ಕರ್ನ ಆಲೋಚನೆಗಳು ಮತ್ತು ವಿಚಾರಗಳನ್ನು ಹರಡಲು ನವೆಂಬರ್ 26 ರಂದು ಆಯ್ಕೆ ಮಾಡಲಾಯಿತು
ಕ್ಷಯ ರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನ
ಸುದ್ಧಿಯಲ್ಲಿ ಏಕಿದೆ ?ರಾಜ್ಯಾದ್ಯಂತ ಎರಡನೇ ಸುತ್ತಿನ ಕ್ಷಯ ರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನವನ್ನು ಕೈಗೊಳ್ಳಲಾಗಿದ್ದು, ಜ.2ರಿಂದ 12ರವರೆಗೆ ನಡೆಯಲಿದೆ.
- ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿಶ್ವದಾದ್ಯಂತ 67ಲಕ್ಷ ಕ್ಷಯ ರೋಗಿಗಳಿದ್ದಾರೆ. ಈ ಪೈಕಿ ಭಾರತದಲ್ಲಿ 28ಲಕ್ಷ ಕ್ಷಯ ರೋಗಿಗಳು ಇರುವುದು ತಿಳಿದು ಬಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಂದೋಲನ ಆರಂಭವಾಗಲಿದ್ದು, 31,139 ಸದಸ್ಯರನ್ನು ಒಳಗೊಂಡ 15,519 ತಂಡ ಕಾರ್ಯಪ್ರವೃತವಾಗಲಿದೆ. ನಿಗದಿತ ಅವಧಿಯಲ್ಲಿ ಸದಸ್ಯರ ತಂಡ 1,06,21,101 ಮಂದಿಯನ್ನು ತಲುಪುವ ಗುರಿ ಹೊಂದಲಾಗಿದೆ.
- ಮೊದಲನೇ ಸುತ್ತಿನ ಕ್ಷಯ ರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನದಲ್ಲಿ 99,900 ಮಂದಿಗೆ ತಪಾಸಣೆ ನಡೆಸಿ, 2,957 ಹೊಸ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಂಗ್ಲ ಮಾಧ್ಯಮಕ್ಕೆ ಅಂತಿಮ ತಯಾರಿ
ಸುದ್ಧಿಯಲ್ಲಿ ಏಕಿದೆ ?ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜತೆಯಲ್ಲೇ ಇಂಗ್ಲಿಷ್ ಮಾಧ್ಯಮವನ್ನೂ ಆರಂಭಿಸುವ ಪ್ರಯತ್ನವನ್ನು ಸದ್ದಿಲ್ಲದೆ ಆರಂಭಿಸಿದ್ದ ಸರ್ಕಾರದ ನಡೆಗೆ ಪೂರಕವಾಗಿ ಶಿಕ್ಷಣ ಇಲಾಖೆ ಕೂಡ ಈಗಾಗಲೇ ಶಾಲೆಗಳಲ್ಲಿ ಅಗತ್ಯ ಪೂರ್ವತಯಾರಿ ಆರಂಭಿಸಿದೆ.
ಹಿನ್ನಲೆ
- 2018-19ನೇ ಸಾಲಿನ (ಜುಲೈ) ಆಯವ್ಯಯ ಭಾಷಣದಲ್ಲೇ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿ ಜತೆಗೆ ಆಂಗ್ಲ ಮಾಧ್ಯಮ ಆರಂಭಿಸುವ ತೀರ್ಮಾನ ಪ್ರಕಟಿಸಲಾಗಿತ್ತು.
- ಆರಂಭಿಕವಾಗಿ ಒಂದು ಸಾವಿರ ಶಾಲೆಗಳಲ್ಲಿ ಈ ಪ್ರಯೋಗ ನಡೆಸುವುದಾಗಿಯೂ ತಿಳಿಸಿತ್ತು. ಜುಲೈನಲ್ಲಿ ಈ ಘೋಷಣೆ ಆಗಿ, ಶಿಕ್ಷಣ ಇಲಾಖೆಯಿಂದ ಅ.26ರಂದೇ ಆದೇಶವೂ ಹೊರಬಿದ್ದಿತ್ತು. ಇದೀಗ ಸರ್ಕಾರದ ನಿರ್ಧಾರದ ಬಗ್ಗೆ ಸಾಹಿತ್ಯ ವಲಯದಲ್ಲಿ ಏಕಾಏಕಿ ಆಕ್ಷೇಪ ವ್ಯಕ್ತವಾಗಿದೆ.
ಕ್ರಿಯಾಯೋಜನೆ ವಿವರ
- ದಕ್ಷಿಣ ಭಾರತ ಪ್ರಾದೇಶಿಕ ಆಂಗ್ಲಭಾಷಾ ತರಬೇತಿ ಸಂಸ್ಥೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಬಗ್ಗೆ ವಿಸ್ತೃ ವರದಿ ನೀಡಿತ್ತು.
- ಆಂಗ್ಲಭಾಷೆಯಲ್ಲಿ ಪರಿಣಾಮಕಾರಿಯಾಗಿ ಬೋಧಿಸಬಲ್ಲ ಶಿಕ್ಷಕರನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡಿ ಪ್ರಾಯೋಗಿಕವಾಗಿ ಒಂದು ಸಾವಿರ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲಿಸಲಾಗಿತ್ತು.
- ಈ ಪ್ರಸ್ತಾವನೆ ಆಧರಿಸಿ, ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಆಯ್ಕೆ ಮಾಡಲು ಸೂಚನೆ ನೀಡಲಾಗಿದೆ.
- ಪ್ರಸ್ತುತ 1ನೇ ತರಗತಿಗೆ ಮಾತ್ರ ಆಂಗ್ಲ ಮಾಧ್ಯಮ ಆರಂಭಿಸಿ, ಮುಂದಿನ ವರ್ಷಗಳಲ್ಲಿ ಮುಂದಿನ ತರಗತಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
- ಈಗಾಗಲೇ 6 ಮತ್ತು 7ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತಿರುವ ಶಾಲೆಗಳಲ್ಲಿ 1ನೇ ತರಗತಿಯಿಂದ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ.
- ಹೆಚ್ಚಿನ ದಾಖಲಾತಿ ಹೊಂದಿರುವ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಆದ್ಯತೆ ನೀಡಲು ನಿರ್ದೇಶನ ನೀಡಲಾಗಿದೆ.
- ಈಗಾಗಲೇ ಇಂಗ್ಲಿಷ್ ಬೋಧನೆಯಲ್ಲಿ ಪರಿಣತಿ ಹೊಂದಿರುವ ಕಾರ್ಯನಿರತ ಶಿಕ್ಷಕರಿಗೆ ಆಯ್ಕೆ ಪರೀಕ್ಷೆ ನಡೆಸಿ ಆಂಗ್ಲ ಮಾಧ್ಯಮ ತರಗತಿಗೆ ನಿಯೋಜಿಸಲು ಸೂಚಿಸಲಾಗಿದೆ.
- ಆಯ್ಕೆಗೊಂಡ ಶಿಕ್ಷಕರಿಗೆ ಪ್ರಾದೇಶಿಕ ಆಂಗ್ಲಭಾಷಾ ತರಬೇತಿ ಸಂಸ್ಥೆಯ ಮೂಲಕ 15 ದಿನಗಳ ಪ್ರವೇಶ ತರಬೇತಿ ನೀಡಬೇಕು ಮತ್ತು ಪ್ರತಿ ತಿಂಗಳು ಸಂಸ್ಥೆಯೊಂದಿಗೆ ವಿಡಿಯೋ ಸಮ್ಮೇಳನಕ್ಕೆ ವ್ಯವಸ್ಥೆ ಮಾಡಬೇಕೆಂದು ಹೇಳಲಾಗಿದೆ.
- ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಲು ಅಗತ್ಯವಾದ ಪಠ್ಯಪುಸ್ತಕಗಳು ಹಾಗೂ ಸ್ಮಾರ್ಟ್ ತರಗತಿಗಳಲ್ಲಿ ಬೋಧಿಸಲು ಅನುಕೂಲವಾಗುವಂತೆ ಧ್ವನಿ ಮತ್ತು ದೃಶ್ಯಗಳನ್ನೊಳಗೊಂಡ ಇ-ಕಂಟೆಂಟ್ಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಡಿಎಸ್ಆರ್ಟಿಇಗೆ (ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ) ನೀಡಲಾಗಿದೆ.
ಪ್ರಯಾಗ್ರಾಜ್ ಹೆಸರು ನಾಮಕರಣ
ಸುದ್ಧಿಯಲ್ಲಿ ಏಕಿದೆ ?ಅಲಹಾಬಾದ್ಗೆ ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡುವ ಉತ್ತರಪ್ರದೇಶದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ.
- ಅಲಹಾಬಾದ್ ರೈಲು ನಿಲ್ದಾಣ, ಹೈಕೋರ್ಟ್, ವಿಶ್ವ ವಿದ್ಯಾಲಯದ ಹೆಸರು ಬದಲಾವಣೆ ಆಗಲಿದೆ.
- ಕೇಂದ್ರ ಗೃಹ ಸಚಿವಾಲಯ ಮರುನಾಮ ಕರಣದ ಪ್ರಸ್ತಾವನೆಗೆ ನಿರಾಕ್ಷೇಪಣ ಪತ್ರ ನೀಡಿದೆ.
- ದೇಶದಲ್ಲಿ 14 ಸ್ಥಳಗಳನ್ನು ಪ್ರಯಾಗವೆಂದು ಕರೆಯಲಾಗುತ್ತದೆ. ಅಲಹಾಬಾದನ್ನು ಎಲ್ಲ ಪ್ರಯಾಗಗಳಿಗೂ ರಾಜ ಅಂದರೆ ಪ್ರಯಾಗ್ರಾಜ್ ಎಂದೇ ಹೇಳಲಾಗಿದೆ ಎಂದು ಗ್ರಂಥಗಳ ಪರಿಶೀಲನೆ ವೇಳೆ ತಿಳಿದುಬಂತು ಸರ್ಕಾರ ತಿಳಿಸಿದೆ.
ಹೆಸರುಗಳಲ್ಲಿನ ಬದಲಾವಣೆಗೆ ಅನುವು ಮಾಡಿಕೊಡುವ ವಿಶಾಲ ತತ್ವಗಳು ಯಾವುವು?
- ಹೆಸರುಗಳು ಬದಲಾವಣೆಗೆ ಪ್ರಸ್ತಾಪಗಳನ್ನು ಮಾಡುವಾಗ ರಾಜ್ಯ ಸರ್ಕಾರಗಳು ಈ ಕೆಳಗಿನ ಐದು (5) ವಿಶಾಲ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
- ಕೆಲವು ವಿಶೇಷವಾದ ಕಾರಣವಿಲ್ಲದಿದ್ದರೆ, ಜನರು ಬಳಸಿದ ಸ್ಥಳದ ಹೆಸರನ್ನು ಬದಲಾಯಿವುದು ಅಪೇಕ್ಷಣೀಯವಲ್ಲ.
- ಒಂದು ಐತಿಹಾಸಿಕ ಸಂಪರ್ಕವನ್ನು ಹೊಂದಿರುವ ಹಳ್ಳಿಗಳ ಹೆಸರುಗಳು ಇತ್ಯಾದಿಯನ್ನು ಸಾಧ್ಯವಾದಷ್ಟು ಬದಲಾಯಿಸಬಾರದು.
- ಸ್ಥಳೀಯ ದೇಶಭಕ್ತಿಯ ಆಧಾರದ ಮೇಲೆ ಅಥವಾ ಕೇವಲ ಭಾಷಾವಾರು ಕಾರಣಗಳಿಗಾಗಿ ಬದಲಾವಣೆಗಳನ್ನು ಮಾಡಬಾರದು, ಉದಾ., ಗ್ರಾಮಗಳು ಇತ್ಯಾದಿ.
- ರಾಷ್ಟ್ರೀಯ ನಾಯಕರ ನಂತರ ಅವರ ಹೆಸರನ್ನು ಗೌರವಿಸಲು ಅಥವಾ ಭಾಷೆಯ ವಿಷಯದಲ್ಲಿ ಸ್ಥಳೀಯ ಮನೋಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಮರುನಾಮಕರಣ ಮಾಡಬಾರದು.
- ಆದಾಗ್ಯೂ, ಹುತಾತ್ಮರ ವಿಷಯದಲ್ಲಿ ಈ ಹೆಸರನ್ನು ಸೂಕ್ತವಾಗಿ ಸೇರಿಸಲ್ಪಡಬಹುದು, ಇದರಿಂದಾಗಿ ಬದಲಾಯಿಸಬೇಕೆಂದಿರುವ ಸ್ಥಳದ ಹೆಸರುಗೆ ಸೂಕ್ತವಾದ ಹೆಸರನ್ನು ಸೇರಿಸಬಹುದಾಗಿದೆ, ವಿನಂತಿಯನ್ನು ರಾಜ್ಯ ಸರ್ಕಾರವು ಮಾಡಿದಲ್ಲಿ ಮತ್ತು ರಾಷ್ಟ್ರೀಯದಲ್ಲಿ ಹುತಾತ್ಮರ ಪಾತ್ರವನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತದೆ.
- ಹೊಸ ಹೆಸರುಗಳನ್ನು ಆಯ್ಕೆಮಾಡುವಲ್ಲಿ, ರಾಜ್ಯದ ಮತ್ತು ನೆರೆಹೊರೆಯಲ್ಲಿ ಅದೇ ಹೆಸರಿನ ಯಾವುದೇ ಗ್ರಾಮ ಅಥವಾ ಪಟ್ಟಣ ಇತ್ಯಾದಿ ಇಲ್ಲ ಎಂದು ಖಾತರಿಪಡಿಸಿಕೊಳ್ಳಬೇಕು ಇದ್ದರೇ ಅದು ಗೊಂದಲಕ್ಕೆ ಕಾರಣವಾಗಬಹುದು ಎಂಬ ಎಚ್ಚರ ವಹಿಸಬೇಕು.
- ಯಾವುದೇ ಬದಲಾವಣೆಯನ್ನು ಶಿಫಾರಸು ಮಾಡುತ್ತಿರುವಾಗ, ರಾಜ್ಯ ಸರ್ಕಾರವು ಹೆಸರಿನಲ್ಲಿ ಬದಲಾವಣೆಯನ್ನು ಪ್ರಸ್ತಾಪಿಸಲು ಮತ್ತು ಹೊಸ ಹೆಸರನ್ನು ಆಯ್ಕೆ ಮಾಡಲು ವಿವರವಾದ ಕಾರಣಗಳನ್ನು ಒದಗಿಸಬೇಕು.
‘ವಿಮೆನ್ ಆನ್ ವ್ಹೀಲ್ಸ್…’
ಸುದ್ಧಿಯಲ್ಲಿ ಏಕಿದೆ ?ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ಹೈದರಾಬಾದ್ ಪೊಲೀಸರು ವಿನೂತನ ಪ್ರಯೋಗವೊಂದನ್ನು ಕೈಗೊಂಡಿದ್ದಾರೆ. ‘ವಿಮೆನ್ ಆನ್ ವ್ಹೀಲ್ಸ್’ ಎಂಬ ಹೆಸರಲ್ಲಿ ಮಹಿಳಾ ಪೊಲೀಸರ ಗಸ್ತು ವ್ಯವಸ್ಥೆಯನ್ನು ಅಲ್ಲಿನ ಪೊಲೀಸರು ಜಾರಿಗೆ ತಂದಿದ್ದಾರೆ.
- ವಿಮೆನ್ ಆನ್ ವ್ಹೀಲ್ಸ್ ಕಾರ್ಯದ ಮೂಲಕ ಎರಡು ಉದ್ದೇಶಗಳನ್ನು ಸಾಕಾರ ಮಾಡಲಾಗಿದೆ.
- ಸಮಾಜದಲ್ಲಿನ ಮಹಿಳೆಯರಿಗೆ ಭದ್ರತೆ ಒದಗಿಸುವುದು ಮೊದಲ ಪ್ರಮುಖ ಉದ್ದೇಶವಾಗಿದ್ದರೆ, ಪುರುಷ ಪೊಲೀಸ್ ಸಿಬ್ಬಂದಿಯಂತೇ ಮಹಿಳಾ ಪೊಲೀಸರೂ ಎಲ್ಲ ಕಾರ್ಯಗಳನ್ನು ನಿಭಾಯಿಸಬಲ್ಲರು ಎಂಬುದನ್ನು ಸಾಬೀತುಪಡಿಸುವುದು ಇನ್ನೊಂದು ಉದ್ದೇಶ.
ಪ್ರಯೋಜನಗಳು
- ಈ ಕಾರ್ಯಕ್ರಮದಿಂದ ಮಹಿಳಾ ಪೊಲೀಸರ ಸಬಲೀಕರಣವಾಗುತ್ತಿದೆ. ಈ ಮೂಲಕ ಪೊಲೀಸ್ ಪಡೆಯಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ನಾವು ಪುರುಷರಿಗಿಂತಲೂ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತಿದೆ,”
- ಸದ್ಯ ಹೈದರಾಬಾದ್ನ 17 ಉಪ ವಿಭಾಗಗಲ್ಲಿ 20 ಮಹಿಳಾ ಗಸ್ತು ಪಡೆ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದೆ. ಅವರಿಗೆಲ್ಲ ದ್ವಿಚಕ್ರ ವಾಹನಗಳನ್ನು ಪೂರೈಸಲಾಗಿದೆ. ಇದಕ್ಕಾಗಿ ಮಹಿಳಾ ಪೊಲೀಸರಿಗೆ 2 ತಿಂಗಳ ತರಬೇತಿಯನ್ನೂ ನೀಡಲಾಗಿದೆ.
ರಕ್ಷಣಾ ಯೋಜನೆಗೆ ಸಮ್ಮತಿ
ಸುದ್ಧಿಯಲ್ಲಿ ಏಕಿದೆ ?ಮೇಕ್ ಇನ್ ಇಂಡಿಯಾ ಯೋಜನೆಗೆ ರಕ್ಷಣಾ ಸಚಿವಾಲಯ ಆದ್ಯತೆ ನೀಡಿದ್ದು, ಕಳೆದ 3 ವರ್ಷಗಳಲ್ಲಿ -ಠಿ; 1.78 ಲಕ್ಷ ಕೋಟಿ ಮೊತ್ತದ 111 ಯೋಜನೆಗಳಿಗೆ ಸಮ್ಮತಿ ನೀಡಿದೆ.
- ‘ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸಾಧನ- ಸಲಕರಣೆಗಳ ಉತ್ಪಾದನೆಯನ್ನು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಕೈಗೊಳ್ಳಲಾಗಿದೆ.
- ಇದಕ್ಕಾಗಿ 2015-16, 2106-17 ಮತ್ತು 2017-18ರಲ್ಲಿ ಸರ್ಕಾರ -ಠಿ; 1,78,900 ಕೋಟಿ ವೆಚ್ಚದ 111 ಪ್ರಸ್ತಾವನೆಗಳಿಗೆ ಅನುಮತಿ ನೀಡಿದೆ.
- ಭದ್ರತೆಗೆ ಸಂಬಂಧಿಸಿದ ಹೆಚ್ಚಿನ ಸಾಧನ- ಸಲಕರಣೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ
- 111 ಪ್ರಸ್ತಾವನೆಗಳ ಪೈಕಿ -ಠಿ; 65,471.28 ಕೋಟಿ ವೆಚ್ಚದ 99 ಯೋಜನೆಗಳ ಒಪ್ಪಂದವನ್ನು ಭಾರತದ ಕಂಪನಿಗಳ ಜತೆಗೆ ಮಾಡಿಕೊಳ್ಳಲಾಗಿದೆ.
- ಹಿಂದೂಸ್ಥಾನ್ ಏರೋನಾಟಿಕಲ್ಸ್ ಸಂಸ್ಥೆ ತೇಜಸ್ ಹೆಸರಿನ ಹಗುರ ಯುದ್ಧ ವಿಮಾನ (ಐಒಸಿ) ತಯಾರಿಸುತ್ತಿದ್ದು, 10 ವಿಮಾನಗಳು ಈಗಾಗಲೇ ವಾಯುಪಡೆಗೆ ಸೇರ್ಪಡೆಯಾಗಿವೆ. ಉಳಿದ ಆರು ವಿಮಾನಗಳು ಮುಂದಿನ ಮಾರ್ಚ್ ಒಳಗೆ ಸಿದ್ಧವಾಗಲಿವೆ
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಏನೆಲ್ಲಾ ತಯಾರಿಸಲಾಗುತ್ತಿದೆ ?
- ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಹೆಲಿಕಾಪ್ಟರ್, ಯುದ್ಧ ಯುದ್ಧವಿಮಾನಗಳು, ಜಲಾಂತರ್ಗಾಮಿಗಳನ್ನು ತಯಾರಿಸ ಲಾಗುತ್ತಿದ್ದು, ಇವು ಭಾರತದಲ್ಲಿ ಸಿದ್ಧಗೊಳ್ಳುವ ಕಾರಣ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಹೆಚ್ಚುತ್ತದೆ ಮತ್ತು ಭಾರತೀಯ ಉದ್ದಿಮೆಗಳಿಗೆ ಉತ್ತೇಜನ ದೊರೆಯಲಿದೆ.
ಇಂಡೋ-ಪೆಸಿಫಿಕ್ ಪ್ರದೇಶ
ಸುದ್ಧಿಯಲ್ಲಿ ಏಕಿದೆ ?ಇಂಡೋ-ಪೆಸಿಫಿಕ್ ವಿಚಾರವಾಗಿ ಭಾರತದ ಜತೆಗಿನ ಬಾಂಧವ್ಯ ವೃದ್ಧಿ ಜತೆಗೆ ಈ ವಲಯದಲ್ಲಿ ಅಮೆರಿಕದ ನಾಯಕತ್ವ ಬಲಪಡಿಸುವ ಕಾಯಿದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
- ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸಲು ಭಾರತ ಮತ್ತು ಅಮೆರಿಕ ನಡುವಿನ ವ್ಯೂಹಾತ್ಮಕ ಬಾಂಧವ್ಯ ಪ್ರಮುಖ ಪಾತ್ರ ವಹಿಸುತ್ತದೆ.
- ಇದನ್ನು ಗುರುತಿಸಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ, ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸುವುದು ಕಾಯಿದೆಯ ಉದ್ದೇಶವಾಗಿದೆ.
- ಜತೆಗೆ, ಭಾರತ ಮತ್ತು ಅಮೆರಿಕ ನಡುವೆ ಪರಸ್ಪರ ರಕ್ಷ ಣಾ ವ್ಯಾಪಾರ ಮತ್ತು ತಂತ್ರಜ್ಞಾನದ ವಿನಿಮಯ ಹೆಚ್ಚಿಸಲು ಅನುವು ಮಾಡುತ್ತದೆ.
- 2005 ರ ಯುಎಸ್-ಇಂಡಿಯಾ ಡಿಫೆನ್ಸ್ ರಿಲೇಶನ್ಶಿಪ್, ಡಿಫೆನ್ಸ್ ಟೆಕ್ನಾಲಜಿ ಮತ್ತು ಟ್ರೇಡ್ ಇನಿಶಿಯೇಟಿವ್ಗಾಗಿ ಹೊಸ ಫ್ರೇಮ್ವರ್ಕ್ಗೆ ಬದ್ಧತೆಯನ್ನು ಈ ಕಾಯಿದೆ ಪುನರುಚ್ಚರಿಸುತ್ತದೆ. ಇಂಡೋ-ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಪ್ರದೇಶಕ್ಕೆ 2015 ರ ಜಂಟಿ ಸ್ಟ್ರಾಟೆಜಿಕ್ ವಿಷನ್ ಮತ್ತು 2017 ಸಹಭಾಗಿತ್ವದ ಮೂಲಕ ಸಮೃದ್ಧಿ ಕುರಿತು ಜಂಟಿ ಹೇಳಿಕೆ.
- ಭಾರತವು ಪ್ರಮುಖ ರಕ್ಷಣಾ ಪಾಲುದಾರನಾಗಿರುವುದನ್ನು ವಿವರಿಸುತ್ತಾ, ಈ ಹೆಸರಿನ ಪ್ರಕಾರ, ಈ ರಾಷ್ಟ್ರಗಳ ನಡುವಿನ ರಕ್ಷಣಾ ವ್ಯವಹಾರ ಮತ್ತು ತಂತ್ರಜ್ಞಾನದ ಹಂಚಿಕೆಗೆ ಅನುಕೂಲವಾಗುವ ಪ್ರಗತಿಯನ್ನು ಈ ಪದನಾಮವು ಸಂಸ್ಥಾಪಿಸುತ್ತದೆ, ಯು.ಎಸ್.ನ ಹತ್ತಿರದ ಮಿತ್ರರಾಷ್ಟ್ರ ಮತ್ತು ಪಾಲುದಾರರೊಂದಿಗೆ ಮಟ್ಟದ ವಹಿವಾಟುಗೆ ರಕ್ಷಣಾ ವ್ಯಾಪಾರ ಮತ್ತು ತಂತ್ರಜ್ಞಾನದ ಸಹಕಾರವನ್ನು ಹೆಚ್ಚಿಸುತ್ತದೆ.
ಇಂಡೋ ಪೆಸಿಫಿಕ್ ಪ್ರದೇಶ
- ಇಂಡೋ-ಪೆಸಿಫಿಕ್ ಒಂದು ಜೈವಿಕ ಭೂಗೋಳ ಪ್ರದೇಶವಾಗಿದ್ದು, ಇದು ದಕ್ಷಿಣ ಚೀನಾ ಸಮುದ್ರ, ಹಿಂದೂ ಮಹಾಸಾಗರ ಹಾಗೂ ಪಶ್ಚಿಮ ಮತ್ತು ಮಧ್ಯ ಶಾಂತ ಸಾಗರವನ್ನು ಒಳಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿಯೂ ಈ ವಲಯದಲ್ಲಿ ಅನೇಕ ಕ್ರಮಗಳನ್ನು ಅದು ಕೈಗೊಂಡಿದೆ.








