“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಮಲೆನಾಡಿನಲ್ಲಿ ಮಂಗನಕಾಯಿಲೆ:

11.

ಸುದ್ಧಿಯಲ್ಲಿ ಏಕಿದೆ ?ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 • ಬೇಸಿಗೆಯಲ್ಲಿ ತೀರ್ಥಹಳ್ಳಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಬೇಸಿಗೆಗೂ ಮುಂಚೆ ಕಾಣಿಸಿಕೊಂಡಿದೆ. ಜತೆಗೆ ಸಾಗರಕ್ಕೂ ವ್ಯಾಪಿಸಿದೆ.
 • ಮಂಗನಕಾಯಿಲೆ ಹರಡದಂತೆ ಪ್ರತಿವರ್ಷ ಲಸಿಕೆ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಲಸಿಕೆ ಹಾಕುವ ಮುನ್ನವೇ ನಾಲ್ವರು ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಏನಿದು ಮಂಗನಕಾಯಿಲೆ?

 • ಮಂಗಗಳಿಗೆ ಜ್ವರ ಬಂದು ಸತ್ತಾಗ ಆ ಮಂಗಗಳಲ್ಲಿದ್ದ ಉಣ್ಣೆಗಳು ಬಂದು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ.
 • ನಾಲ್ಕು ದಶಕಗಳ ಹಿಂದೆ ಮೊದಲಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಬಳಿಕ ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾಗರ ತಾಲೂಕಿಗೂ ವ್ಯಾಪಿಸಿದೆ. ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗುತ್ತಿತ್ತು.

ಹವಾಮಾನ ನ್ಯಾಯ

12.

ಸುದ್ಧಿಯಲ್ಲಿ ಏಕಿದೆ ?ಹವಾಮಾನ ವೈಪರೀತ್ಯದ ಬಗ್ಗೆ ಪೊಲೆಂಡ್​ನಲ್ಲಿ 200ಕ್ಕೂ ಹೆಚ್ಚು ದೇಶಗಳು ಒಟ್ಟು ಸೇರಿದ ಇಣಕ24 ಎಂದೇ ಕರೆಯಲ್ಪಡುವ ಯುಎನ್ ಕ್ಲೈಮೇಟ್ ಚೇಂಜ್ ಕಾನ್​ಫೆರೆನ್ಸ್​ ನಲ್ಲಿ ಹವಾಮಾನ ನ್ಯಾಯದ ಕುರಿತು ಚರ್ಚಿಸಲಾಯಿತು.

 • ಕೈಗಾರೀಕರಣದಿಂದಾಗಿ ಸರಾಸರಿ ಜಾಗತಿಕ ತಾಪಮಾನ ಏರುತ್ತಿದೆ. ಇದರ ಪರಿಣಾಮ ಈಗಾಗಲೇ ಗೋಚರಕ್ಕೆ ಬಂದಿದೆ. ಸೈಕ್ಲೋನ್, ಚಂಡಮಾರುತಗಳು ಹೆಚ್ಚಾಗಿವೆ. ಬರ ಮೇಲಿಂದ ಮೇಲೆ ಎರಗುತ್ತಿದೆ. ಮರುಭೂಮಿಯ ವಿಸ್ತಾರ ಹೆಚ್ಚುತ್ತಿದೆ. ಇವೆಲ್ಲವೂ ಹವಾಮಾನದಲ್ಲುಂಟಾದ, ಆಗುತ್ತಿರುವ ಬದಲಾವಣೆಗಳು. ಈ ಬದಲಾವಣೆಯ ಮೊದಲ ದುಷ್ಪರಿಣಾಮ ಆಗೋದು ಕೃಷಿಕ್ಷೇತ್ರದ ಮೇಲೆ. ಜತೆಗೆ ಆರೋಗ್ಯ, ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ.

ಶೃಂಗದಲ್ಲಿ ಏನನ್ನು ಚರ್ಚಿಸಲಾಗುತ್ತದೆ?

 • ಏರುತ್ತಿರುವ ಜಾಗತಿಕ ತಾಪಮಾನ, ಬದಲಾಗುತ್ತಿರುವ ಕೃಷಿಚಕ್ರ, ಹೆಚ್ಚುತ್ತಿರುವ ಹವಾಮಾನ ಬದಲಾವಣೆ, ಇವಕ್ಕೆಲ್ಲ ಮೂಲ ಇಂಗಾಲದ ಬಳಕೆ ಹೆಚ್ಚುತ್ತಿರುವುದು. ಅದಕ್ಕಾಗಿ, ಪ್ರತಿವರ್ಷ ನಡೆಯುವ ಈ ಶೃಂಗಸಭೆಯಲ್ಲಿ, ಇಂಗಾಲದ ಬಳಕೆಯನ್ನು ಪ್ರತಿ ದೇಶವೂ ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ರ್ಚಚಿಸುವುದಲ್ಲದೆ, ಇಂತಿಷ್ಟೇ ಬಳಸಬೇಕೆಂದು ಅದರ ಪ್ರಮಾಣವನ್ನೂ ನಿಶ್ಚಯಿಸುತ್ತವೆ.
 • ಆದರೆ, ಬಡರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ ಎಂದು ಯೋಚಿಸುತ್ತಿವೆ. ಶೇಕಡ 25ರಷ್ಟು ವಾಯುಮಾಲಿನ್ಯ ಅಮೆರಿಕದಿಂದ ಆಗುತ್ತದೆ ಎಂದಾದರೆ, ಭಾರತದ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ. ಆದರೆ, ಭಾರತ ವೇಗವಾಗಿ ಬೆಳೆಯುತ್ತಿದೆ. 2 ಡಿಗ್ರಿ ಸೆಲ್ಷಿಯಸ್ ತಾಪಮಾನ ಜಾಸ್ತಿ ಆದರೂ ತೊಂದರೆಗೆ ಸಿಲುಕುತ್ತೇವೆ. ಅಂಟಾರ್ಟಿಕ, ಆರ್ಕ್ಟಿಕಗಳು ಕರಗಿದರೆ, ಆಗ ಸಮುದ್ರ ಮೇಲೇರಿ ದ್ವೀಪರಾಷ್ಟ್ರಗಳೆಲ್ಲ ಮುಳುಗಿಹೋಗುವ ಅಪಾಯಗಳಿವೆ.

ಭಾರತಕ್ಕೇನು ಧಕ್ಕೆ?:

 • ಈ ಹವಾಮಾನ ಬದಲಾವಣೆ ಮತ್ತು ಬಡತನಕ್ಕೆ ನೇರ ಸಂಬಂಧವಿದೆ. ಕೃಷಿಚಕ್ರದ ಬದಲಾವಣೆಯಿಂದಾಗಿ ಜೀವನೋಪಾಯಕ್ಕೆ ಸಮಸ್ಯೆಯಾಗುತ್ತದೆ. ಈಗ ಮಾನ್ಸೂನ್ ಯಾವಾಗ ಬರುತ್ತದೆಂದು ಅಂದಾಜಿಸಲು ಸಾಧ್ಯವೇ ಇಲ್ಲದಂಥ ಕಾಲದಲ್ಲಿದ್ದೇವೆ. ಇಂಥ ಸಮಯದಲ್ಲಿ ಇತರ ಶಕ್ತಿಯ ಆಧಾರಗಳಾದ ಸೋಲಾರ್, ಬಯೋಗ್ಯಾಸ್ ಮುಂತಾದ ಹೊಸಶೋಧಗಳಿಂದ ಆದಾಯ ಬರುವಂಥ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದರೆ ರೈತರ ಜೀವನಕ್ಕೊಂದು ಆಧಾರವಾಗುವುದು.
 • ಕಾಪ್​ನಲ್ಲಿ ಈ ಬಾರಿ ಬ್ರೆಜಿಲ್ ಮತ್ತು ಟರ್ಕಿ ಎರಡು ದೇಶಗಳು ಬಿಟ್ಟರೆ ಮಿಕ್ಕ 200 ದೇಶಗಳು ಒಮ್ಮತ ಅಭಿಪ್ರಾಯಕ್ಕೆ ಬಂದಿದ್ದು, 2015ರ ಕಾಪ್ ಸಮಾವೇಶದ ಒಪ್ಪಂದಕ್ಕೆ ಸಮ್ಮತಿ ವ್ಯಕ್ತಪಡಿಸಿವೆ.
 • ಬ್ರೆಜಿಲ್ ಜನಸಂಖ್ಯೆ 10 ಕೋಟಿಯಷ್ಟಿದೆ. ಆದರೆ ಬ್ರೆಜಿಲ್ ಇಡೀ ವಿಶ್ವದ ಶ್ವಾಸಕೋಶ (ಲಂಗ್ಸ್ ಆಫ್ ದ ವರ್ಲ್ಡ್). ಅಲ್ಲಿರುವುದು ಇಡೀ ವಿಶ್ವದ ಹಸಿರು ಸರಪಳಿಯನ್ನು ಹಿಡಿದಿಡುವ ಅಮೇಜಾನ್ ಕಾಡು. ಅಮೆಜಾನ್ ಕಾಡುಗಳನ್ನು ಕತ್ತರಿಸಿದರೆ ಅದರ ನೇರ ಪರಿಣಾಮ ಆಫ್ರಿಕಾ, ಭಾರತ ಮುಂತಾದ ದೇಶಗಳ ಮೇಲಾಗುತ್ತದೆ. ಆದರೆ ಬ್ರೆಜಿಲ್, ‘ಇದು ನಮ್ಮ ಜಾಗ, ನಾವು ಮರ ಕತ್ತರಿಸುತ್ತೇವೆ’ ಎಂಬ ಧಾಷ್ಟ್ಯ ತಳೆದಿದೆ.

ಈ ವಿಪ್ಲವವನ್ನು ಎದುರಿಸುವ ಬಗೆ ಹೇಗೆ?:

 • ನಿಧಾನಕ್ಕೆ ಏರುತ್ತಿರುವ ಈ ತಾಪಮಾನದ ಬಗ್ಗೆ, ವಿಸ್ತರಿಸಿಕೊಳ್ಳುತ್ತಿರುವ ಮರುಭೂಮಿಯ ಬಗ್ಗೆ ನಮಗೆ ಅರಿವಾಗುತ್ತಿಲ್ಲ. ಹಾಗಾಗಿ ವಾತಾವರಣದ ಕುರಿತಾಗಿ ನಮ್ಮಲ್ಲಿ ದೂರದೃಷ್ಟಿತ್ವ ಇರಬೇಕು.
 • ಮಹಾರಾಷ್ಟ್ರದಲ್ಲಿ ಬರಬಂದಾಗ ನೀರಿಲ್ಲದೆ ರೈತ ಆತ್ಮಹತ್ಯೆ ಮಾಡಿಕೊಳ್ತಾನೆ ಎಂದರೆ, ಅದೇ ರೀತಿ ಕರ್ನಾಟಕದಲ್ಲಿ ಆದರೆ ಏನು ಮಾಡಬೇಕು? ಮಳೆ ಬರದಿದ್ದರೆ ಅವರ ಜೀವನಕ್ಕೆ ಏನು? ಎಂಬುದರ ಕುರಿತು ತಂತ್ರಗಾರಿಕೆಯನ್ನು ನಾವು ಮೊದಲೇ ಸಿದ್ಧಪಡಿಸಿಕೊಳ್ಳಬೇಕು.
 • .ಈ ನಿಟ್ಟಿನಲ್ಲಿ ಕಾನೂನು ಇನ್ನಷ್ಟು ಬಿಗಿ ಆಗಬೇಕು.
 • ದೇಶ, ರಾಜ್ಯ, ಜಿಲ್ಲೆ, ತಾಲೂಕು ಸೇರಿದಂತೆ ಪ್ರತಿ ಪಂಚಾಯ್ತಿಯಲ್ಲೂ ವಾತಾವರಣ ಬದಲಾವಣೆ ಕುರಿತು ಒಂದು ತಂತ್ರಗಾರಿಕೆಯ ಯೋಜನೆ ಇರಬೇಕು.
 • ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯುವಜನತೆ ವಾತಾವರಣದ ಕುರಿತು ಕಾಳಜಿಯಿಂದ ಪ್ರತಿಭಟಿಸುವಂತಾಗಬೇಕು.
 • ಮುಂದಿನ ಕಾಪ್ ಸಮಾವೇಶಕ್ಕೆ ಭಾರತ ನಮ್ಮ ಯುವಕರನ್ನು ಕಳಿಸಬೇಕು. ಏಕೆಂದರೆ, ಇವತ್ತಿನ ನಮ್ಮ ಯಾವುದೇ ನಿರ್ಧಾರದಲ್ಲಿ ಅವರ ಮುಂದಿನ ಭವಿಷ್ಯ ಅಡಗಿದೆ..

ಭಾರತೀಯ ವಿಜ್ಞಾನ ಸಮ್ಮೇಳನ ಉದ್ಘಾಟನೆ

ಸುದ್ಧಿಯಲ್ಲಿ ಏಕಿದೆ ?ಪಂಜಾಬ್‌ನ ಜಲಂಧರ್‌ನಲ್ಲಿ ಐದು ದಿನಗಳ ಕಾಲ ನಡೆಯಲಿರುವ ಭಾರತೀಯ ವಿಜ್ಞಾನ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

 • ಸಮ್ಮೇಳನದ ವಿಷಯ :‘ಭವಿಷ್ಯದ ಭಾರತ-ವಿಜ್ಞಾನ ಮತ್ತು ತಂತ್ರಜ್ಞಾನ’, ಈ ಬಾರಿಯ ಸಮ್ಮೇಳನದ ವಿಷಯವಾಗಿದೆ.
 • ಜಲಂಧರ್‌ನ ಲವ್ಲಿ ಪ್ರೊಫೆಷ್ನಲ್‌ ವಿಶ್ವವಿದ್ಯಾಲಯದಲ್ಲಿ ಜ. 3ರಿಂದ 7ರವರೆಗೆ ಈ ಸಮಾವೇಶ ನಡೆಯಲಿದೆ.
 • ಭಾಗವಹಿಸುವವರು: ವಿಜ್ಞಾನಿಗಳು, ಡಿಆರ್‌ಡಿಒ, ಇಸ್ರೋ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಏಮ್ಸ್‌, ಯುಜಿಸಿ, ಎಐಸಿಟಿಇ ಅಧಿಕಾರಿಗಳು ಹಾಗೂ ಅಮೆರಿಕ, ಬ್ರಿಟನ್‌ ಸೇರಿದಂತೆ ದೇಶ ಮತ್ತು ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ವಿಜಯ, ಬರೋಡಾ, ದೇನಾ ವಿಲೀನ

14.

ಸುದ್ಧಿಯಲ್ಲಿ ಏಕಿದೆ ?ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯ ಹಾಗೂ ದೇನಾ ಬ್ಯಾಂಕ್ ಸಂಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.

 • ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್​ಗಳಿಂದ ಬರೋಡಾ ಬ್ಯಾಂಕ್​ಗೆ ಹಣಕಾಸು ವ್ಯವಹಾರ ವರ್ಗಾವಣೆಯಾಗಲಿದೆ.
 • ಮೂಲ ಬ್ಯಾಂಕ್, ಶಾಖೆ, ಸಿಬ್ಬಂದಿ ಹಾಗೂ ಸಂಬಳದ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
 • ಈ ಸಂಯೋಜನೆಯು ಏ.1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಷೇರುಗಳ ಮುಖಬೆಲೆ ಹಾಗೂ ಇಕ್ವಿಟಿಯನ್ನು ಈಗಾಗಲೇ ಬ್ಯಾಂಕ್ ಆಫ್ ಬರೋಡಾ ಘೋಷಿಸಿದೆ.
 • ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಈ ಮೂರು ಬ್ಯಾಂಕ್​ಗಳಲ್ಲಿ ಜಾರಿಯಲ್ಲಿರುವ ಉತ್ತಮ ಸೇವೆ, ಬಡ್ಡಿ ಹಾಗೂ ಇತರ ವಿಚಾರಗಳು ಈ ಸಂಯೋಜಿತ ಬ್ಯಾಂಕ್​ನಲ್ಲಿ ಜಾರಿಗೆ ಬರಲಿದೆ. ದೇಶದಲ್ಲಿ
 • ಇದೇ ಮೊದಲ ಬಾರಿಗೆ ಮೂರು ಆಯಾಮದ ಬ್ಯಾಂಕ್ ಸಂಯೋಜನೆಯಾಗಿದ್ದು, ಸಾರ್ವಜನಿಕ ಕ್ಷೇತ್ರದ ಎರಡನೇ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆಯಲಿದೆ. ಮೊದಲ ಸ್ಥಾನದಲ್ಲಿ ಎಸ್​ಬಿಐ ಇದೆ. ಸುಮಾರು 47 ಲಕ್ಷ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ. ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು ಹೋಲಿಸಿದಾಗ ಈ ಸಂಯೋಜಿತ ಬ್ಯಾಂಕ್ ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ.

ಸಂಯೋಜನೆಯ ಲಾಭ?

 • ಬ್ಯಾಂಕ್​​ಗಳ ಸಾಲ ಹಂಚಿಕೆ ಸಾಮರ್ಥ್ಯ ಹೆಚ್ಚಲಿದೆ.
 • ಎನ್​ಪಿಎ ಸುಳಿಯಲ್ಲಿ ಸಿಲುಕಿರುವ ದೇನಾ ಬ್ಯಾಂಕ್​ಗೆ ಮರುಜೀವ
 • ಜಾಗತಿಕ ಬ್ಯಾಂಕ್​ಗಳ ಜತೆ ಸ್ಪರ್ಧೆ

ಭಾರತದ ವಿದೇಶಿ ಸಾಲ ಇಳಿಕೆ

15.

ಸುದ್ಧಿಯಲ್ಲಿ ಏಕಿದೆ ?ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಇತ್ತೀಚಿನ ವರದಿ ಪ್ರಕಾರ, 2018ರ ಮಾರ್ಚ್‌ ಅಂತ್ಯಕ್ಕೆ 52,970 ಕೋಟಿ ಡಾಲರ್‌ನಷ್ಟಿದ್ದ ವಿದೇಶಿ ಸಾಲದ ಮೊತ್ತವು ಸೆಪ್ಟೆಂಬರ್‌ ಅಂತ್ಯದ ವೇಳೆಗೆ, 51,040 ಕೋಟಿ ಡಾಲರ್‌ಗೆ ( ಅಂದಾಜು 35.7 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ. ಅಂದರೆ 6 ತಿಂಗಳಿನಲ್ಲಿ ಶೇ.3.6 ಇಳಿಕೆಯಾಗಿದೆ.

 • ವಿಶ್ವದ ಪ್ರಗತಿಶೀಲ ದೇಶಗಳ ಪೈಕಿ ಭಾರತದ ವಿದೇಶಿ ಸಾಲದ ನಿರ್ವಹಣೆ ಉತ್ತಮ ಸ್ಥಿತಿಯಲ್ಲಿದೆ ಎಂದು ಐಎಂಎಫ್‌ ಇತ್ತೀಚೆಗೆ ಹೇಳಿತ್ತು.
 • ಜಗತ್ತಿನ ಒಟ್ಟಾರೆ ಜಿಡಿಪಿ ಮತ್ತು ಸಾಲದ ಅನುಪಾತವನ್ನು ಹೋಲಿಸಿದರೆ, ಭಾರತದ ಸಾಲದ ಪ್ರಮಾಣ ಗಣನೀಯ ಕಡಿಮೆ

ಕಾರಣಗಳು

 • ಭಾರತವು ವಿದೇಶಿ ಮೂಲಗಳಿಂದ ಸಾಲ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
 • ಸಾಲದ ಪ್ರಮಾಣ ಇಳಿಮುಖವಾಗಿರುವುದು ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸಹಕಾರಿ.
 • ರೂಪಾಯಿ ಸೇರಿದಂತೆ ನಾನಾ ಕರೆನ್ಸಿಗಳೆದುರು ಡಾಲರ್‌ ಮೌಲ್ಯ ವೃದ್ಧಿಸಿರುವುದು ಕೂಡ ಭಾರತದ ಸಾಲ ಇಳಿಕೆಗೆ ಮತ್ತೊಂದು ಕಾರಣವಾಗಿದೆ.

ಏನಿದು ವಿದೇಶಿ ಸಾಲ?

 • ದೇಶವೊಂದು ವಿದೇಶಗಳ ಬ್ಯಾಂಕ್‌ಗಳಿಂದ, ಐಎಂಎಫ್‌, ವಿಶ್ವಬ್ಯಾಂಕ್‌, ಎಡಿಬಿ ಇತ್ಯಾದಿ ಅಂತಾರಾಷ್ಟ್ರೀಯ ಸಂಸ್ಥೆ, ವಿದೇಶಿ ಸರಕಾರಗಳಿಂದ ಪಡೆಯುವ ಸಾಲಗಳು ವಿದೇಶಿ ಸಾಲ ವರ್ಗಕ್ಕೆ ಸೇರುತ್ತದೆ.
 • ಇಲ್ಲೂ ಅಲ್ಪಾವಧಿ ಹಾಗೂ ದೀರ್ಘಾವಧಿಯ ಸಾಲ ಸಿಗುತ್ತದೆ.

ಪಾಕಿಸ್ತಾನಕ್ಕಾಗಿ ಚೀನಾದಿಂದ ಅತ್ಯಾಧುನಿಕ ಯುದ್ಧನೌಕೆ ನಿರ್ಮಾಣ

ಸುದ್ಧಿಯಲ್ಲಿ ಏಕಿದೆ ?ಪಾಕಿಸ್ತಾನಕ್ಕಾಗಿ ಚೀನಾ ಅತ್ಯಾಧುನಿಕ ಮತ್ತು ಅತ್ಯಂತ ಶಕ್ತಿಶಾಲಿ ಯುದ್ಧನೌಕೆ ನಿರ್ಮಾಣ ಮಾಡಿಕೊಡಲು ಮುಂದಾಗಿದೆ.

 • ಈ ಮೂಲಕ ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಹಿಂದೂ ಮಹಾ ಸಾಗರದಲ್ಲಿ ಭಾರತಕ್ಕೆ ಎದುರಾಗಿ ನಿಲ್ಲಲು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚೀನಾ ಕುಮ್ಮಕ್ಕು ನೀಡಿದೆ.
 • ಉಭಯ ದೇಶಗಳ ರಕ್ಷಣಾ ಒಪ್ಪಂದದಂತೆ ಬೀಜಿಂಗ್‌ನ ಸರಕಾರಿ ಸ್ವಾಮ್ಯದ ಚೀನಾ ಸ್ಟೇಟ್‌ ಶಿಪ್‌ಬಿಲ್ಡಿಂಗ್‌ ಕಾರ್ಪೊರೇಶನ್‌(ಸಿಎಸ್‌ಎಸ್‌ಸಿ) ಈ ಶಕ್ತಿಶಾಲಿ ಯುದ್ಧನೌಕೆಯ ನಿರ್ಮಾಣದ ಹೊಣೆ ಹೊತ್ತಿದೆ.
 • ಸರ್ವಋುತುಗಳಿಗೂ ಹೊಂದಿಕೊಂಡು ಎದುರಾಳಿಗಳ ವಿರುದ್ಧ ಸೆಣಸುವ ಸಾಮರ್ಥ್ಯ ಹೊಂದಿರುವ ಈ ನೌಕೆ , ವಾಯು ಮತ್ತು ಜಲ ದಾಳಿಗಳನ್ನುಮತ್ತು ವಾಯು ರಕ್ಷ ಣಾ ಕಾರ್ಯಾಚರಣೆಗಳಲ್ಲಿ ಬಳಕೆಗೆ ಯೋಗ್ಯವಾಗಿದೆ.
 • ಶಾಂಗೈ ನಲ್ಲಿರುವ ಹುಡೋಂಗ್‌-ಜೂಂಗ್ಹುವಾ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಅತ್ಯಾಧುನಿಕ ನೌಕೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಶಕ್ತಿಶಾಲಿ ಕ್ಷಿಪಣಿಗಳನ್ನು ಅಳವಡಿಸಲಾಗಿದೆ. ಅಲ್ಲದೇ ಅತ್ಯಾಧುನಿಕ ವಿಚಕ್ಷ ಣ ಮತ್ತು ರಾಡಾರ್‌ ವ್ಯವಸ್ಥೆಯನ್ನು ನೌಕೆ ಹೊಂದಿದೆ.
 • ಚೀನಾ ಪಾಕಿಸ್ತಾನದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿದೆ.
 • ಈಗಾಗಲೇ ಉಭಯ ದೇಶಗಳು ಜಂಟಿಯಾಗಿ ಅತ್ಯಾಧುನಿಕ ಜೆಎಫ್‌-ಥಂಡರ್‌ ಯುದ್ಧ ವಿಮಾನವನ್ನು ತಯಾರಿಸುತ್ತಿವೆ.
 • ಇದರೊಂದಿಗೆ ಪಾಕಿಸ್ತಾನದ ಜಲ ಗಡಿಯ ರಕ್ಷ ಣೆಯಲ್ಲೂ ಪಾಕ್‌ ನೌಕಾ ಸೇನೆಯೊಂದಿಗೆ ಚೀನಾ ಕೈಜೋಡಿಸಿದೆ.
 • ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಚೀನಾ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದೆ.

ಸೌರಮಂಡಲದ ತುತ್ತತುದಿ ತಲುಪಿದ ನಾಸಾ ಸ್ಪೇಸ್‌ ಪ್ರೋಬ್‌!

17.

ಸುದ್ಧಿಯಲ್ಲಿ ಏಕಿದೆ ?ಸೌರಮಂಡಲದ ತುದಿಯಲ್ಲಿರುವ ಮಂಜುಗಟ್ಟಿದ ಕಲ್ಲಿನ ಬಗ್ಗೆ ಸಂಶೋಧನೆ ನಡೆಸಲು ತೆರಳಿರುವ ನಾಸಾದ ಸ್ಪೇಸ್‌ ಪ್ರೋಬ್‌ ಮೊದಲ ಸಿಗ್ನಲ್‌ ಕಳುಹಿಸಿದೆ. ಇದುವರೆಗೆ ಯಾವ ಉಪಗ್ರಹವೂ ಇಷ್ಟು ದೂರ ಕ್ರಮಿಸಿದ ಉದಾಹರಣೆಗಳಿಲ್ಲ.

 • ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ.
 • ಪರಮಾಣು ಚಾಲಿತ ಸ್ಪೇಸ್‌ ಪ್ರೋಬ್‌ ಬರೋಬ್ಬರಿ 640 ಕೋಟಿ ಕಿಲೋ ಮೀಟರ್‌ ಕ್ರಮಿಸಿದ್ದು, ಕೈಪರ್‌ ಬೆಲ್ಟ್‌ನಲ್ಲಿರುವ ಮಂಜಿನ ಕಲ್ಲನ್ನು ಸಮೀಪಿಸಲು ಕೇವಲ 3,540 ಕಿ.ಮೀ. ಬಾಕಿಯಿದೆ.
 • ಕಡಲೆಕಾಯಿ ಆಕಾರದಲ್ಲಿರುವ ಅಜ್ಞಾತ ಬಾಹ್ಯಾಕಾಶ ವಸ್ತುವಿನ ಮೇಲೆ ಸ್ಪೇಸ್‌ ಪ್ರೋಬ್‌ ಸಂಶೋಧನೆ ನಡೆಸಲಿದೆ.
 • ನೆಪ್ಚೂನ್‌ ಕಕ್ಷೆಯ ಹೊರಭಾಗದಲ್ಲಿ ಮಂಜಿನಿಂದ ಕೂಡಿದ ಕೈಪರ್‌ ಬೆಲ್ಟ್‌ನ ಹೃದಯ ಭಾಗದಲ್ಲಿ ಈ ಮಂಜಿನ ಕಲ್ಲಿದೆ. ಇದನ್ನು ವೈಜ್ಞಾನಿಕವಾಗಿ ಅಲ್ಟಿಮಾ ಥುಲೆ (Ultima Thule) ಎಂದು ಹೆಸರಿಡಲಾಗಿದೆ.
 • (486958) 2014 MU69 ಎಂಬ ಸಂಜ್ಞೆಯಿಂದ ಗುರುತಿಸಲಾಗುತ್ತದೆ.
 • ನ್ಯಾಷನಲ್‌ ಏರೋನಾಟಿಕ್‌ ಆ್ಯಂಡ್‌ ಸ್ಪೇಸ್‌ ಏಜೆನ್ಸಿ ಸ್ಪೇಸ್‌ ಪ್ರೋಬ್‌ನಿಂದ ಬಂದ ಮೊದಲ ಸಿಗ್ನಲ್‌ಅನ್ನು ಸ್ವೀಕರಿಸಿತು. ಈ ಉಪಗ್ರಹವನ್ನು 2006ರ ಜನವರಿಯಲ್ಲಿ ಉಡ್ಡಯನ ಮಾಡಲಾಗಿತ್ತು.
 • ಕಡಲೆಕಾಯಿ ಆಕಾರದಂತೆ ಕಾಣುವ ಮಂಜಿನ ಕಲ್ಲು ಏಕಮಾತ್ರವೇ? ಅಥವಾ ಎರಡು ಮಂಜಿನ ಕಲ್ಲುಗಳು ಪರಸ್ಪರ ಸುತ್ತುತ್ತಿವೆಯೇ ಎಂಬ ಅಚ್ಚರಿ ಬಯಲಾಗಲಿದೆ. ಪ್ರಸ್ತುತ ಕಳುಹಿಸಿರುವ ಚಿತ್ರದಲ್ಲಿ ಬ್ಲರ್‌ ಆಗಿ ಕಾಣಿಸುತ್ತಿದ್ದು, ಪ್ರೋಬ್‌ ಮತ್ತಷ್ಟು ಸಮೀಪಿಸಿದ ನಂತರ ಮತ್ತಷ್ಟು ಚಿತ್ರಗಳನ್ನು ಮಾಹಿತಿಗಳನ್ನು ಕಳುಹಿಸಲಿದೆ ಎಂದು ನಾಸಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಸೂರ್ಯನನ್ನೇ ಟಚ್‌ ಮಾಡುತ್ತಾ ನಾಸಾ?

 • 2015ರಲ್ಲಿ ಪ್ಲೂಟೋ ಗ್ರಹವು ನಾವು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ದೊಡ್ಡದಾಗಿದೆ ಎಂಬ ಮಾಹಿತಿ ಮೊದಲು ಕೈಪರ್‌ ಬೆಲ್ಟ್‌ ಬಾಹ್ಯಾಕಾಶ ಯೋಜನೆಯಲ್ಲಿ ತಿಳಿದುಬಂದಿತ್ತು. ಹಿಮದಿಂದ ಕೂಡಿದ ಕುಬ್ಜ ಗ್ರಹದ ಮೇಲ್ಮೈನಲ್ಲಿ ಮೀಥೇನ್‌ ಭರಿತ ದಿಬ್ಬಗಳನ್ನು ಪತ್ತೆ ಮಾಡಿತ್ತು.
 • ಇದೀಗ ಕೈಪರ್‌ ಬೆಲ್ಟ್‌ ಸಮೀಪಿಸಿರುವ 2ನೇ ಸ್ಪೇಸ್‌ ಪ್ರೋಬ್‌ ಉಪಗ್ರಹವು ಪ್ಲೂಟೋ ಗ್ರಹದಿಂದ ಸುಮಾರು 164 ಕೋಟಿ ಕಿ.ಮೀ. ದೂರ ಸಾಗಿದೆ.
 • 1977ರಲ್ಲಿ ವೋಯೇಜರ್‌ 1 ಮತ್ತು 2 ಎಂಬ ಉಪಗ್ರಹಗಳನ್ನು ನಾಸಾ ಉಡ್ಡಯನ ಮಾಡಿತ್ತು. ಇವುಗಳು ಅತ್ಯಂತ ದೂರವನ್ನು ಕ್ರಮಿಸಿ ದಾಖಲೆ ಮಾಡಿದ್ದವು. ಪ್ರಸ್ತುತ ಎರಡೂ ಉಪಗ್ರಹಗಳು ಕಾರ್ಯ ನಿರ್ವಹಿಸುತ್ತಿವೆ.
Related Posts
“02 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅಂಕ ನೀಡಿಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆಗಳಿಗೆ ತಮ್ಮ ಪೋಷಕರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸಿದ ವಿದ್ಯಾರ್ಥಿಗಳಿಗೆ "ಶೈಕ್ಷಣಿಕ ಯೋಜನೆ (ಪ್ರಾಜೆಕ್ಟ್) ವಿಷಯಕ್ಕೆ ತಲಾ ಎರಡು ಹೆಚ್ಚುವರಿ ಅಂಕ ಹಾಗೂ ವಿಶೇಷ ಬಹುಮಾನಗಳನ್ನು ನೀಡಲು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ...
READ MORE
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೋಷಿಯಲ್‌ ಮಿಡಿಯಾ ಬಳಕೆಗೆ ಕಠಿಣ ನಿರ್ಬಂಧ ಸುದ್ಧಿಯಲ್ಲಿ ಏಕಿದೆ ?ಮತದಾರರ ಮೇಲೆ ಸಾಮಾಜಿಕ ಜಾಲತಾಣಗಳು ಬೀರುವ ಪ್ರಭಾವ ಅರಿತು ಚುನಾವಣಾ ಆಯೋಗ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಷಿಯಲ್‌ ಮಿಡಿಯಾಗಳ ಬಳಕೆ ಕುರಿತು ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ...
READ MORE
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿದ್ಯುತ್ ಕಡಿತಕ್ಕೆ ಸೋಲಾರ್ ಪರಿಹಾರ ಸುದ್ಧಿಯಲ್ಲಿ ಏಕಿದೆ ?ಬೇಸಗೆ ಬಂದರೆ ಲೋಡ್‌ ಶೆಡ್ಡಿಂಗ್‌ ಜತೆಗೆ ವಿದ್ಯುತ್‌ ಬಿಲ್‌ ಕೂಡ ದುಬಾರಿ. ಇದಕ್ಕೆ ಪರ್ಯಾಯವೆಂದರೆ ನಮ್ಮ ಮನೆಯಲ್ಲಿ ನಾವೇ ವಿದ್ಯುತ್‌ ಉತ್ಪಾದಿಸಿಕೊಳ್ಳುವುದು. ಒಂದು ಬಾರಿಯ ಹೂಡಿಕೆಯಿಂದ ಆಗುವ ಸಾಕಷ್ಟು ಲಾಭವೇ ಸೋಲಾರ್‌ ವಿದ್ಯುತ್‌ನತ್ತ ಹೆಚ್ಚು ...
READ MORE
“01 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬಾಲ ಕಾರ್ಮಿಕ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಇಳಿಕೆ ಸುದ್ಧಿಯಲ್ಲಿ ಏಕಿದೆ ?ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವ್ಯಾಪಕ ಕ್ರಮ ಕೈಗೊಳ್ಳುತ್ತಿರುವುದರ ಪರಿಣಾಮ, ಹೆಚ್ಚಿನ ಪ್ರಮಾಣದಲ್ಲಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ. ಆದರೆ ನಾನಾ ಕಾರಣಗಳಿಂದ ಆ ಪ್ರಕರಣಗಳಲ್ಲಿ ವಿಚಾರಣೆ ...
READ MORE
“27 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮುಖ್ಯ ಚುನಾವಣಾ ಆಯುಕ್ತ ಸುದ್ಧಿಯಲ್ಲಿ ಏಕಿದೆ ?ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಸುನೀಲ್ ಅರೋರಾ ಅವರನ್ನು ನೇಮಕ ಮಾಡಲಾಗಿದೆ. ಅರೋರಾ ಅವರು ಡಿಸೆಂಬರ್‌ 2ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಡಿ.7ರಂದು ನಡೆಯುವ ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಹಾಗೂ ...
READ MORE
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೆಜಿಎಫ್‌ ಗಣಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ಕೆಜಿಎಫ್‌ನ ಭಾರತ್‌ ಗೋಲ್ಡ್‌ ಮೈನ್ಸ್‌ ಕಂಪನಿ (ಬಿಜಿಎಂಎಲ್‌) ವಶದಲ್ಲಿರುವ ಸುಮಾರು 10 ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಬಯಸಿದೆ. ''ಗಣಿಗಾರಿಕೆ ಸಂಬಂಧಿಸಿದಂತೆ 2015ರಲ್ಲಿ ಕೇಂದ್ರ ಸರ್ಕಾರ ...
READ MORE
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವ ಕನ್ನಡ ಸಮ್ಮೇಳನ ಸುದ್ಧಿಯಲ್ಲಿ ಏಕಿದೆ ? ನಾವಿಕ ಸಂಸ್ಥೆಯು ಅಮೆರಿಕದ ಓಹಾಯೋ ರಾಜ್ಯದಲ್ಲಿ ಆ. 30 ರಿಂದ ಸೆ. 1ರವರೆಗೆ '5ನೇ ವಿಶ್ವ ಕನ್ನಡ ಸಮ್ಮೇಳನ' ಆಯೋಜಿಸಿದೆ. ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು.ಕನ್ನಡದ ನಾಟಕಗಳು,ಕವಿ ಗೋಷ್ಠಿಗಳು, ಕನ್ನಡ ಗೀತಗಾಯನ,ಸಂಗೀತ ಸಂಜೆ,ಸ್ವಾತಂತ್ರ್ಯದ ...
READ MORE
“10 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಚ್​ಟಿಟಿ 40 ಸ್ಪಿನ್ ಟೆಸ್ಟ್ ಯಶಸ್ವಿ ಸುದ್ಧಿಯಲ್ಲಿ ಏಕಿದೆ ?ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ತಯಾರಿಸಿರುವ ಎಚ್​ಟಿಟಿ 40 (ತರಬೇತಿ ಯುದ್ಧವಿಮಾನ) ಯಶಸ್ವಿಯಾಗಿ ಸ್ಪಿನ್ ಟೆಸ್ಟ್ ನಡೆಸಿದೆ. ಎಚ್​ಟಿಟಿ 40 ಹಾರಾಟದ ಸಂದರ್ಭದಲ್ಲೇ ಸ್ಪಿನ್ ಟೆಸ್ಟ್ ನಡೆಸಿ ನಂತರ ಯಥಾಸ್ಥಿತಿಯಲ್ಲಿ ಹಾರಾಡುವಲ್ಲಿ ಯಶಸ್ವಿಯಾಗಿದೆ. ಗ್ರೂಪ್ ಕ್ಯಾಪ್ಟನ್​ಗಳಾದ ...
READ MORE
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ...
READ MORE
“26 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರ್ನಾಟಕ ಹೈಕೋರ್ಟ್‌ಗೆ ಹೊಸ ನ್ಯಾಯಮೂರ್ತಿಗಳ ನೇಮಕ   ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಹೈಕೋರ್ಟ್‌ಗೆ 8 ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂ ನಿರ್ಧರಿಸಿದೆ. ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ವಕೀಲರಾಗಿರುವ ಸವನೂರು ವಿಶ್ವನಾಥ್‌ ಶೆಟ್ಟಿ, ಸಿಂಗಾಪುರಂ ರಾಘವಾಚಾರ್‌ ಕೃಷ್ಣಕುಮಾರ್‌, ...
READ MORE
“02 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“01 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“26 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

2 thoughts on ““03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು””

  1. Kannada current affairs is up to date… please refer our daily current affairs section or follow us by submitting your email or follow us on Facebook or watsapp

Leave a Reply

Your email address will not be published. Required fields are marked *