” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ

1.

ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ.

 • ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ.

ಉದ್ದೇಶ

 • ಕೃಷಿ ಭೂಮಿ ಗುತ್ತಿಗೆ ನೀಡುವುದಕ್ಕೆ ಕಾನೂನಿನ ಮಾನ್ಯತೆ, ಒಪ್ಪಂದ ಕೃಷಿಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದ್ದು, ಅದಕ್ಕಾಗಿ ಎರಡು ಕಾಯ್ದೆ ತರಲಾಗುತ್ತಿದೆ.
 • ಈ ಕಾಯ್ದೆ ತರುವುದಕ್ಕಾಗಿಯೇ ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಆರಂಭವಾಗಿದೆ.
 • ಎಷ್ಟಿದೆ ಆದಾಯ?: ರಾಜ್ಯದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರ ಕೃಷಿ ಆದಾಯ ವಾರ್ಷಿಕ 12 ಸಾವಿರ ರೂ.ಗಳಿಗಿಂತ ಕಡಿಮೆ ಇದೆ. ಈ ರೈತರು ಕೃಷಿಯನ್ನಷ್ಟೇ ನಂಬಿಕೊಳ್ಳದೆ ಕಾರ್ವಿುಕರಾಗಿಯೂ ದುಡಿದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
 • ಬೇರೆಬೇರೆ ಇಲಾಖೆ: 3 ಕಾಯ್ದೆಗಳು 3 ಪ್ರತ್ಯೇಕ ಇಲಾಖೆಯಿಂದ ಮಂಡನೆಯಾಗಬೇಕಾಗಿದೆ. ಭೂಮಿ ಗುತ್ತಿಗೆ ನೀಡುವುದಕ್ಕೆ ತಿದ್ದುಪಡಿ ತರುವುದು ಕಂದಾಯ ಇಲಾಖೆಯ ಜವಾಬ್ದಾರಿ, ಒಪ್ಪಂದ ಕೃಷಿ ಕಾಯ್ದೆ ಕೃಷಿ ಇಲಾಖೆ ಹಾಗೂ ಕೃಷಿ ಮಾರುಕಟ್ಟೆ ಇಲಾಖೆ ವ್ಯಾಪ್ತಿಯಲ್ಲಿದೆ.
 • ಪರಿವರ್ತನೆ ಹೆಚ್ಚು: ಒಂದೆಡೆ ಕೃಷಿಕರ ಆದಾಯ ಕಡಿಮೆ ಇದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಪ್ರತಿ ವರ್ಷ ಅಂದಾಜು 5 ಲಕ್ಷ ಎಕರೆ ಭೂಮಿ ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತನೆಯಾಗುತ್ತಿದೆ. ಇದಲ್ಲದೆ, ಈಗಾಗಲೇ 21 ಲಕ್ಷ ಹೆಕ್ಟೇರ್ ಭೂಮಿ ಉಪಯೋಗವಿಲ್ಲದಂತೆ ಬೀಳು ಬಿದ್ದಿದೆ. ಈ ಭೂಮಿ ಕೃಷಿ ಚಟುವಟಿಕೆಗೆ ಬಳಕೆಯಾಗುವಂತೆ ಮಾಡುವ ಉದ್ದೇಶದಿಂದಲೇ ಮೂರು ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ.

ಕಾಯ್ದೆಗಳಲ್ಲಿ ಏನಿರಲಿದೆ?:

1.ಗುತ್ತಿಗೆ ಕಾಯ್ದೆ: ಬೀಳು ಬಿದ್ದಿರುವ ಭೂಮಿಯ ಸದ್ಬಳಕೆ ಗುತ್ತಿಗೆ ಕಾಯ್ದೆ ಜಾರಿಗೆ ತರಲು ಪ್ರಮುಖ ಕಾರಣ. ಬೀಳು ಬಿಟ್ಟಿರುವ ರೈತರು ಗುತ್ತಿಗೆ ನೀಡಲು ಭಯಪಡುವ ವಾತಾವರಣ ಇದೆ. ಆದ್ದರಿಂದಲೇ ರೈತರು ಹಾಗೂ ಗುತ್ತಿಗೆ ಪಡೆಯುವವರ ನಡುವೆ ಕಾನೂನು ತೊಡಕಾಗದಂತೆ ಎಚ್ಚರವಹಿಸುವುದು ಈ ಕಾನೂನಿನ ಉದ್ದೇಶವಾಗಿದೆ.

 • ರೈತರ ಭೂ ಮಾಲೀಕತ್ವಕ್ಕೆ ಯಾವುದೇ ತೊಡಕಾಗುವುದಿಲ್ಲ. ಕೃಷಿಗೆ ಉತ್ತೇಜನ, ಬಿತ್ತನೆಗೆ ಮುನ್ನವೇ ಒಪ್ಪಂದ ಮಾಡಿಕೊಳ್ಳುವುದು, ಗುತ್ತಿಗೆ ಮಾಡಿಕೊಂಡ ಭೂಮಿಯಲ್ಲಿ ಶಾಶ್ವತ ಕಟ್ಟಡ ನಿರ್ವಣಕ್ಕೆ ಅವಕಾಶ ಇಲ್ಲ- ಇವು ಗುತ್ತಿಗೆ ಕಾಯ್ದೆಯ ಪ್ರಮುಖ ಅಂಶಗಳಾಗಿವೆ.

2.ಒಪ್ಪಂದ ಕೃಷಿ: ಯಾವುದೇ ರೈತರ ಭೂಮಿಯಲ್ಲಿ ಮತ್ತೊಬ್ಬ ರೈತ ಅಥವಾ ಯಾವುದೇ ಸಂಸ್ಥೆಯ ಜತೆಗೆ ಒಪ್ಪಂದ ಕೃಷಿಯನ್ನು ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಬಿತ್ತನೆಗೆ ಮೊದಲೇ ಒಪ್ಪಂದ ಮಾಡಿಕೊಂಡು, ಆ ಪ್ರಕಾರ ದರವನ್ನು ನೀಡಲೇಬೇಕು. ಒಪ್ಪಂದ ಗುತ್ತಿಗೆ ಕೃಷಿ ಪ್ರಾಧಿಕಾರದಲ್ಲಿ ನೋಂದಣಿಯಾಗಬೇಕು. ಒಪ್ಪಂದ ಮಾಡಿಕೊಳ್ಳುವವರು ಠೇವಣಿಯನ್ನಿಡಬೇಕು. ಪೂರ್ಣ ಖರೀದಿ ಮಾಡದಿದ್ದರೆ ಅಥವಾ ಒಪ್ಪಂದದಂತೆ ಹಣ ನೀಡದೆ ಹೋದರೆ ಠೇವಣಿ ಇಟ್ಟ ಹಣ ಮುಟ್ಟುಗೋಲು ಹಾಕಿಕೊಂಡು ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ.

3.ಕೃಷಿ ಮಾರುಕಟ್ಟೆ ಕಾಯ್ದೆ: ಒಪ್ಪಂದ ಕೃಷಿಯನ್ನು ಎಪಿಎಂಸಿ ಕಾಯ್ದೆಯಿಂದ ಹೊರಗಡೆ ಇಡಬೇಕಾಗುತ್ತದೆ. ಹೀಗಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ.

ಏನಿದು ಪ್ರಾಧಿಕಾರ?

 • ಒಪ್ಪಂದ ಕೃಷಿ ಹಾಗೂ ಭೂಮಿ ಗುತ್ತಿಗೆ ವಿಚಾರದಲ್ಲಿ ರೈತರು ಹಾಗೂ ಒಪ್ಪಂದ ಮಾಡಿಕೊಳ್ಳುವವರಿಗೆ ಅನ್ಯಾಯವಾಗದಂತೆ ತಡೆಯಲು ಗುತ್ತಿಗೆ ಕೃಷಿ ಪ್ರಾಧಿಕಾರ ರಚನೆಗೆ ಕಾಯ್ದೆಯಲ್ಲಿ ಅವಕಾಶ ಮಾಡಲಾಗುತ್ತದೆ. ಅದಕ್ಕೆ ಅಧ್ಯಕ್ಷರು, ಇಬ್ಬರು ಸದಸ್ಯ ರಿರುತ್ತಾರೆ. ಸ್ವಯಂಪ್ರೇರಿತವಾಗಿ ನೋಟಿಸ್ ನೀಡುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ. ಆರಂಭದಲ್ಲಿ ರಾಜ್ಯ ಮಟ್ಟದಲ್ಲಿ, ನಂತರ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ.

ಕಡ್ಲೆಕಾಯಿ ಪರಿಷೆ

2.

ಸುದ್ಧಿಯಲ್ಲಿ ಏಕಿದೆ?ಪ್ರಸಿದ್ಧ ಕಡ್ಲೆಕಾಯಿ ಪರಿಷೆಗೆ ನಾಳೆ ಚಾಲನೆ ಸಿಗಲಿದ್ದು, ಇಂದಿನಿಂದಲೇ ಬಸವನಗುಡಿಯಲ್ಲಿ ಜನಸಾಗರ ಹರಿದು ಬರುತ್ತಿದೆ.

ಕಡಲೆಕಾಯಿ ಪರಿಷೆ

 • ಕಡಲೆಕಾಯಿ ಪರಿಷೆ , ಬೆಂಗಳೂರಿನಲ್ಲಿ ನಡೆಯುವ ವಾರ್ಷಿಕ ಕಡಲೆಕಾಯಿ ಜಾತ್ರೆಯಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಾಲಯದ ಸಮೀಪ ಈ ಎರಡು ದಿನಗಳ ಉತ್ಸವ ನಡೆಯುತ್ತದೆ.ಪ್ರತಿ ವರ್ಷ,ಕಡಲೆ  ಕಾಯಿ ಪರಿಷೆ  ಕಾರ್ತಿಕ ಮಾಸದ  ಕೊನೆಯ ಸೋಮವಾರ ನಡೆಯುತ್ತದೆ.

ಹಿನ್ನಲೆ

 • ಒಂದು ಎತ್ತು ಬೆಳೆಗಳನ್ನು ತಿಂದು  ಹಾನಿ ಮಾಡುತಿತ್ತು  . ಆಗ ಆತಂಕಗೊಂಡ  ರೈತರು ಈ ಹಾವಳಿಯನ್ನು ನಿಲ್ಲಿಸಲು ಬಸವ (ನಂದಿ) ಗೆ ಪ್ರಾರ್ಥನೆಗಳನ್ನು ಸಲ್ಲಿಸಿದರು ಮತ್ತು ತಮ್ಮ ಮೊದಲ ಬೆಳೆ ನೀಡುವ  ವಾಗ್ದಾನ ಮಾಡಿದರು. ಆಗ ಆ ಎತ್ತು ಕಲ್ಲಿನ ಬಸವ ಆಯಿತು ಎಂದು  ಹೇಳಲಾಗುತ್ತದೆ ಮತ್ತು ಇಂದಿಗೂ ಸಹ ಅದನ್ನು  ಕಾಣಬಹುದು. ನಂತರ, ಕೆಂಪೇಗೌಡರ ಆಡಳಿತದಲ್ಲಿ, ಬೆಂಗಳೂರಿನ ಸುತ್ತಮುತ್ತಲಿನ ರೈತರು ನೇರವಾಗಿ ಕಡಲೆಕಾಯಿ  ಜನರಿಗೆ ಮಾರಲು  ರೈತರಿಗೆ ಅನುಕೂಲವಾಗುವಂತೆ ಈ ಮೇಳವನ್ನು ರಚಿಸಿದರು ಮತ್ತು ಇದರಿಂದ ಅವರು ರೈತರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಿಕೊಟ್ಟರು .
 • ಈ ಸಂಪ್ರದಾಯವನ್ನು ಇಂದು ಕೂಡ ಅಭ್ಯಾಸ ಮಾಡಲಾಗುತ್ತಿದೆ, ಇಲ್ಲಿ ವಾರ್ಷಿಕ ಕಡಲೆಕಾಯಿ ಜಾತ್ರೆ ಸಾವಿರಾರು ಜನರನ್ನು ಆಕರ್ಷಿಸುತ್ತದೆ

ಬಾಂಬೆ ಬ್ಲಡ್

3.

ಸುದ್ಧಿಯಲ್ಲಿ ಏಕಿದೆ ?ಕರ್ನಾಟಕದ ಬ್ಲಡ್ ಬ್ಯಾಂಕ್​ನಲ್ಲಿ ಸಂಗ್ರಹವಾಗಿದ್ದ ಬಾಂಬೆ ಬ್ಲಡ್​ಅನ್ನು ಕೊರಿಯರ್ ಮಾಡುವ ಮೂಲಕ ಮ್ಯಾನ್ಮಾರ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರ ಜೀವ ಉಳಿದಿದೆ.

ಹಿನ್ನಲೆ

 • ಬಾಂಬೆ ರಕ್ತ ವಿಶ್ವದಲ್ಲೇ ಅಪರೂಪದ ಗುಂಪಿನ ರಕ್ತವಾಗಿದ್ದು, ಇದು ಮ್ಯಾನ್ಮಾರ್ ಯಾಂಗಾನ್ ಜನರಲ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆಗೆ ತುರ್ತಾಗಿ ಬೇಕಿತ್ತು. ಹೀಗಾಗಿ 2 ಯೂನಿಟ್ ರಕ್ತವನ್ನು ಬ್ಲಡ್ ಬ್ಯಾಂಕಿನ ಸಿಬ್ಬಂದಿ 2-8 ಡಿಗ್ರಿ ಸೆಲ್ಸಿಯಸ್​ನಲ್ಲಿ ಸಂರಕ್ಷಿಸಿ ಕೊರಿಯರ್ ಮೂಲಕ ದಾವಣಗೆರೆಯಿಂದ ಮ್ಯಾನ್ಮಾರ್​ಗೆ 3 ದಿನದಲ್ಲಿ ತಲುಪಿಸಿದ್ದಾರೆ.

ಬಾಂಬೆ ರಕ್ತ ಗುಂಪು ಎಂದರೇನು ?

 • ಭಾರತದಲ್ಲಿ 10-17 ಸಾವಿರ ಜನರಲ್ಲಿ ಒಬ್ಬರಷ್ಟೇ ಬಾಂಬೆ ಬ್ಲಡ್ ಹೊಂದಿರುತ್ತಾರೆ. ಈ ರಕ್ತದ ಗುಂಪು ಮೊದಲ ಬಾರಿ 1952ರಲ್ಲಿ ಮುಂಬೈನಲ್ಲಿ ಬೆಳಕಿಗೆ ಬಂದಿತ್ತು
 • ಬಾಂಬೆ ರಕ್ತ ಗುಂಪನ್ನು ಅರ್ಥಮಾಡಿಕೊಳ್ಳಲು ನಾವು ರಕ್ತ ಗುಂಪಿನ ವಿವರಗಳನ್ನು ಅರ್ಥಮಾಡಿಕೊಳ್ಳಬೇಕು. ಯಾರಾದರೂ ರಕ್ತ ಗುಂಪನ್ನು ಹೊಂದಿದ್ದಾರೆ ಎಂದು ನಾವು ಹೇಳಿದಾಗ, ಆ ವ್ಯಕ್ತಿಗೆ ‘A’ ವಿಧದ ಪ್ರತಿಜನಕ ಮತ್ತು ಅವನ / ಅವಳ ರಕ್ತದಲ್ಲಿ ‘B’ ರೀತಿಯ ಪ್ರತಿಕಾಯವಿದೆ ಎಂದು ಅರ್ಥ.
Blood Groups (Antigens and Antibodies)
Blood Group Antigens Antibodies
A A,H B
B B,H A
AB A,B,H
O H A,B
Bombay Blood Group A,B,H

ಕೊಲಿಜಿಯಂಗೆ ಮತ್ತೆ ಸುಪ್ರೀಂ ಮುದ್ರೆ

4.

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಕಾಯಿದೆಯನ್ನು ರದ್ದುಪಡಿಸುವ 2015ರ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ನೇತೃತ್ವದ ಸುಪ್ರೀಂಕೋರ್ಟ್‌ ಪೀಠ ವಜಾಗೊಳಿಸಿದೆ. ಈ ಮೂಲಕ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ವ್ಯವಸ್ಥೆಯನ್ನು ಮರುಸ್ಥಾಪಿಸಿದ್ದನ್ನು ಎತ್ತಿಹಿಡಿದಂತಾಗಿದೆ.

ಹಿನ್ನಲೆ

 • 2014ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಕಾಯಿದೆಯನ್ನು ತರಲಾಗಿತ್ತು. ಹೊಸ ಕಾಯಿದೆಯು ನ್ಯಾಯಮೂರ್ತಿಗಳ ನೇಮಕದಲ್ಲಿ ಸರಕಾರಕ್ಕೆ ಪ್ರಧಾನ ಪಾತ್ರವನ್ನು ನೀಡಿತ್ತು. ಇದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂಬ ವಾದ ಎದ್ದಿತು.
 • ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಾದ ವಿವಾದ ನಡೆದು ಅಂತಿಮವಾಗಿ 2015ರ ಅಕ್ಟೋಬರ್‌ 16ರಂದು 2014ರ ಕಾಯಿದೆ ಅಸಾಂವಿಧಾನಿಕ ಎಂದು ತೀರ್ಪು ನೀಡಲಾಯಿತು. ಈ ಮೂಲಕ 22 ವರ್ಷ ಹಳೆಯ ಕೊಲಿಜಿಯಂ ವ್ಯವಸ್ಥೆಯನ್ನೇ ಮರುಸ್ಥಾಪಿಸಿದಂತಾಯಿತು.
 • ಪಂಚ ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ನಾಲ್ವರು ಎನ್‌ಜೆಎಸಿ ಕಾಯಿದೆ ಮತ್ತು ಸಂವಿಧಾನದ 99ನೇ ತಿದ್ದುಪಡಿಯನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿದರೆ, ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ಅವರು ತಿದ್ದುಪಡಿ ಸರಿ ಎಂದು ವಾದಿಸಿದ್ದರು. ಕೊಲಿಜಿಯಂ ವ್ಯವಸ್ಥೆ ಸುಪ್ರೀಂಕೋರ್ಟ್‌ನೊಳಗಿನ ಸಾಮ್ರಾಜ್ಯವಾಗಿ ರೂಪುಗೊಂಡಿದೆ ಎಂದು ಕೇಂದ್ರ ಸರಕಾರ ಅಂದು ಟೀಕಿಸಿತ್ತು.

ಕೊಲ್ಜಿಯಂ ಸಿಸ್ಟಮ್ ಎಂದರೇನು?

 • ಕೊಲ್ಜಿಯಂ ಸಿಸ್ಟಮ್ ಎಂಬುದು ನ್ಯಾಯಾಧೀಶರು / ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ಗೆ ಮತ್ತು ಹೈಕೋರ್ಟ್ ಮತ್ತು ಅಪೆಕ್ಸ್ ಕೋರ್ಟ್ನ ನ್ಯಾಯಮೂರ್ತಿಗಳ ವರ್ಗಾವಣೆಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ನ ನಾಲ್ಕು ಹಿರಿಯ ನ್ಯಾಯಾಧೀಶರ ವೇದಿಕೆಯ ಮೂಲಕ ನಿರ್ಧರಿಸುತ್ತದೆ. . ‘ಭಾರತದ ಮೂಲ ಸಂವಿಧಾನದಲ್ಲಿ ಅಥವಾ ಸತತ ತಿದ್ದುಪಡಿಗಳಲ್ಲಿ ಕೊಲ್ಜಿಯಂ ಬಗ್ಗೆ ಉಲ್ಲೇಖವಿಲ್ಲ.
 • ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲ್ಜಿಯಂ ವ್ಯವಸ್ಥೆ “ಮೂರು ನ್ಯಾಯಾಧೀಶರ ಪ್ರಕರಣ” ದಿಂದ ಜನಿಸಿತು, ಇದು ಅಕ್ಟೋಬರ್ 28, 1998 ರಂದು ಸಾಂವಿಧಾನಿಕ ಲೇಖನಗಳನ್ನು ವ್ಯಾಖ್ಯಾನಿಸಿತು.
 • ಕಾಲೇಜಿಯಮ್ ನ್ಯಾಯಾಧೀಶರ / ವಕೀಲರ ಹೆಸರನ್ನು ಎರಡನೇ ಬಾರಿಗೆ ಸರ್ಕಾರಕ್ಕೆ ಕಳುಹಿಸಿದರೆ ಕೊಲ್ಜಿಯಂನ ಶಿಫಾರಸುಗಳು ಕೇಂದ್ರ ಸರ್ಕಾರವನ್ನು ಬಂಧಿಸುತ್ತವೆ; .

                ಸೇನೆಗೆ ಶಸ್ತ್ರಾಸ್ತ್ರ ಬಲ

5.

ಸುದ್ಧಿಯಲ್ಲಿ ಏಕಿದೆ ?ಅತ್ಯಾಧುನಿಕ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಹೊತ್ತು ಕಾರ್ಯಾಚರಿಸುವ ಎರಡು ಯುದ್ಧ ನೌಕೆಗಳು ಮತ್ತು ಭೂ ಸೇನೆಗೆ ಶಸ್ತ್ರಸಜ್ಜಿತ ಬೆಂಗಾವಲು ವಾಹನಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಧ್ಯಕ್ಷರಾಗಿರುವ ರಕ್ಷಣಾ ಖರೀದಿ ಮಂಡಳಿ(ಡಿಎಸಿ) ಅಸ್ತು ಎಂದಿದೆ.

 • 1ಖರೀದಿಸಲು ಉದ್ದೇಶಿಸಿರುವ ಬೆಂಗಾವಲು ವಾಹನವನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕ ವಲಯದ ರಕ್ಷಣಾ ಉದ್ಯಮ ಬಿಇಎಂಎಲ್‌ ಉತ್ಪಾದಿಸಲಿದೆ.
 • ಮುಂದುವರಿದ ಬಲವರ್ಧನೆ: ಭಾರತೀಯ ಸೇನೆಯ ಬಲವರ್ಧನೆಯ ಭಾಗವಾಗಿ ಇತ್ತೀಚೆಗಷ್ಟೇ ಭಾರತ ರಷ್ಯಾದಿಂದ ಟ್ರಯುಂಫ್‌ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುತ್ತಿದೆ. ಫಿರಂಗಿ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಅಮೆರಿಕ, ದಕ್ಷಿಣ ಕೊರಿಯಾ ಜತೆ ಫಿರಂಗಿಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು.
 • ಜಪಾನ್‌ ಜತೆಗೂ ಡೀಲ್‌: ಇತ್ತೀಚೆಗೆ ಪ್ರಧಾನಿ ಮೋದಿ ಜಪಾನ್‌ ಭೇಟಿ ವೇಳೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳು ರಷ್ಯಾದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ ಜತೆ ಸತತ ಸಂಪರ್ಕದಲ್ಲಿರುವುದು, ರಕ್ಷಣಾ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಉಭಯ ದೇಶಗಳ ಸಹಕಾರ ಸೇರಿದಂತೆ ಹಲವು ವ್ಯೂಹಾತ್ಮಕ ಒಪ್ಪಂದಳಿಗೆ ಸಹಿ ಹಾಕಲಾಗಿದೆ.
 • ವಜ್ರ ಬಲ: ಇತ್ತೀಚೆಗೆಷ್ಟೇ ಸಮರ ಕಣದಲ್ಲಿ ಶೆಲ್‌ಗಳನ್ನು ಪ್ರಯೋಗಿಸಲು ಬಳಸಲಾಗುವ ಮೂರು ಕೆ-9 ವಜ್ರಾ‘, ಹತ್ತು ಎಂ777 ಹೊವಿಟ್ಸರ್‌ಗಳು ಮತ್ತು ಕಾಮನ್‌ ಗನ್‌ ಟವರ್‌ಗಳು ಸೇರಿದಂತೆ ಅತ್ಯಾಧುನಿಕ ಫಿರಂಗಿಗಳು ಹಾಗೂ ಯುದ್ಧ ಸಲಕರಣೆಗಳು ಭಾರತೀಯ ಸೇನೆಯ ಬತ್ತಳಿಕೆ ಸೇರಿವೆ.

ಏನೇನು ಖರೀದಿ? 

 • ನೌಕಾಪಡೆಗೆ 2 ಯುದ್ಧ ನೌಕೆ:ಅತ್ಯಂತ ಗೌಪ್ಯವಾಗಿ ಕಾರ್ಯಾಚರಿಸಬಲ್ಲ ಎರಡು ಅತ್ಯಾಧುನಿಕ ಯುದ್ಧ ನೌಕೆಗಳಲ್ಲಿ ಈಗಾಗಲೇ ಶಕ್ತಿಶಾಲಿ ಎಂದು ಸಾಬೀತಾಗಿರುವ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ.
 • ಅರ್ಜುನನಿಗೆ ಬೆಂಗಾವಲು ಪಡೆ :ಭೂಸೇನೆಯ ಯುದ್ಧ ಟ್ಯಾಂಕ್‌ ‘ಅರ್ಜುನ್‌’ ಕೆಟ್ಟು ನಿಂತಾಗ, ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಾಗ ಅಲ್ಲಿಂದ ಹೊರತರಲು ಬಳಸುವ ಶಸ್ತ್ರಸಜ್ಜಿತ ಬೆಂಗಾವಲು ವಾಹನ(ಆರ್ಮ್‌ಡ್‌ ರಿಕವರಿ ವೆಹಿಕಲ್‌)ಗಳನ್ನು ಖರೀದಿಸಲಾಗುತ್ತದೆ. ಇವು 20 ಟನ್‌ ಎಳೆಯುವ ಸಾಮರ್ಥ್ಯ‌ ಮತ್ತು 8 ಟನ್‌ ಭಾರ ಎತ್ತುವ ಸಾಮರ್ಥ್ಯ‌ ಹೊಂದಿವೆ.

ಬ್ರಹ್ಮೋಸ್ ವಿಶೇಷ

 • ಬ್ರಹ್ಮೋಸ್ ಸರಣಿಯಲ್ಲಿ ಶಬ್ದಕ್ಕಿಂತ ವೇಗವಾಗಿ ಚಲಿಸುವ ಕ್ಷಿಪಣಿ ಮಹತ್ವದ್ದಾಗಿದೆ. ಇದನ್ನು ಯುದ್ಧ ನೌಕೆ, ಜಲಾಂತರ್ಗಾಮಿ, ವಿಮಾನ ಮತು ಭೂಮೇಲ್ಮೈನಿಂದಲೂ ಹಾರಿಸಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. 3,400ರಿಂದ 3,700 ಕಿ.ಮೀ. ಗುರಿಯನ್ನು ಭೇದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಗಂಟೆಗೆ 2,100ರಿಂದ 2,300 ಕಿ.ಮಿ.ವೇಗದಲ್ಲಿ ಮುನ್ನುಗ್ಗುತ್ತದೆ. ಇಂತಹ ಒಂದು ಕ್ಷಿಪಣಿಗೆ ಅಂದಾಜು -ಠಿ; 19 ಕೋಟಿ ವೆಚ್ಚ ತಗುಲುತ್ತದೆ.

ಅಗಸ್ತ್ಯ ಪರ್ವತ 

6.

ಸುದ್ಧಿಯಲ್ಲಿ ಏಕಿದೆ ?ಕೇರಳದ 2ನೇ ಅತಿ ಎತ್ತರದ ಪರ್ವತ ಶ್ರೇಣಿ ಅಗಸ್ತ್ಯರ್‌ಕೂಟಂಗೆ (ಅಗಸ್ತ್ಯ ಪರ್ವತ) ಮಹಿಳೆಯರು ಚಾರಣ ಮಾಡಬಹುದು ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ.

 • ತಿರುವನಂತಪುರದ ನೆಯ್ಯಾರ್ ವನ್ಯಜೀವಿಧಾಮದಲ್ಲಿರುವ ಪರ್ವತದಲ್ಲಿ ಮಹಿಳೆಯರಿಗೆ ಚಾರಣ ಮಾಡಲು ಅವಕಾಶ ಇರಲಿಲ್ಲ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಅನು ಶಿವರಾಮನ್‌, ಚಾರಣದ ವೇಳೆ ಅನುಸರಿಸಬೇಕಾದ ನಿಯಮಗಳನ್ನು ರಾಜ್ಯ ಸರಕಾರ ಶೀಘ್ರ ರೂಪಿಸುವಂತೆ ಸೂಚಿಸಿದ್ದಾರೆ.

ಹಿನ್ನಲೆ  

 • ಮಹಿಳೆಯರನ್ನೂ ಸೇರಿದಂತೆ 14 ಮಕ್ಕಳು ಅಗಸ್ತ್ಯರ್‌ಕೂಟಂನಲ್ಲಿ ಚಾರಣ ಮಾಡುವುದಕ್ಕೆ ಅನುಮತಿ ಇಲ್ಲ ಎಂದು ವನ್ಯಜೀವಿ ಇಲಾಖೆ ಆದೇಶಿಸಿತ್ತು.
 • 2017ರ ಜನವರಿಯಲ್ಲಿ ಸಚಿವಾಲಯ ಸಭೆ ನಡೆಸಿ, ಅಗಸ್ತ್ಯರ್‌ಕೂಟಂನಿಂದ 8 ಕಿ.ಮೀ ದೂರದಲ್ಲಿರುವ ಅತ್ರಿಮಲೆ ವರೆಗೆ ಸಾಗಲು ಅನುಮತಿ ನೀಡಿತ್ತು. ಅಲ್ಲದೆ ಸೂಕ್ತ ನಿಯಮಗಳನ್ನು ರೂಪಿಸುವಂತೆ ಸಚಿವಾಲಯ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿತ್ತು. ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.
 • ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆ ಹಕ್ಕಿಗೆ ಧಕ್ಕೆಯಾಗಿರುವುದಾಗಿ ಸಂಘ ಸಂಸ್ಥೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅಗಸ್ತ್ಯರ್ಕುಡಮ್

 • ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕೇರಳದ ನೆಯಾರ್ ವನ್ಯಜೀವಿ ಅಭಯಾರಣ್ಯದಲ್ಲಿ 1,898 ಮೀಟರ್ (6,129 ಅಡಿ) ಎತ್ತರವಿರುವ ಅಗಸ್ತ್ಯರ್ಕುಡಮ್. ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿ ಈ ಶಿಖರವಿದೆ. ಈ ಶಿಖರವು ಭಾರತದ ರಾಜ್ಯಗಳಾದ ಕೇರಳದ (ಪಥನಂತಿಟ್ಟ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ) ಮತ್ತು ತಮಿಳುನಾಡು (ಕನ್ಯಾಕುಮಾರಿ ಜಿಲ್ಲೆಯ, ತಿರುನೆಲ್ವೇಲಿ ಜಿಲ್ಲೆಯ) ಗಡಿಭಾಗದಲ್ಲಿರುವ ಅಗಸ್ತ್ಯಮಲೇ ಜೀವಗೋಳ ಮೀಸಲು ಪ್ರದೇಶದ ಒಂದು ಭಾಗವಾಗಿದೆ. ದೀರ್ಘಕಾಲಿಕ ಥಮಿರಾಬರಾನಿ ನದಿಯು ಶ್ರೇಣಿಯ ಪೂರ್ವ ಭಾಗದಿಂದ ಹುಟ್ಟಿಕೊಂಡಿದೆ ಮತ್ತು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯೊಳಗೆ ಹರಿಯುತ್ತದೆ.
 • ಹಿಂದೂ ಪುರಾಣಗಳ ಏಳು ಋಷಿಗಳು (ಸಪ್ತರಿಶಿ) ಎಂದು ಪರಿಗಣಿಸಲ್ಪಟ್ಟಿರುವ ಹಿಂದೂ ಋಷಿ ಅಗಸ್ತ್ಯ -ಭಕ್ತರಿಗೆ ಅಗಸ್ತ್ಯರ್ಕುಡಂ ಒಂದು ತೀರ್ಥಯಾತ್ರಾ ಕೇಂದ್ರವಾಗಿದೆ. ತಮಿಳು ಭಾಷೆ ಅಗಾಸ್ತ್ಯದಿಂದ ಹುಟ್ಟಿದೆ ಎಂದು ಪರಿಗಣಿಸಲಾಗಿದೆ.
 • ಮಾರ್ಚ್ 2016 ರಲ್ಲಿ ಬಯೋಸ್ಫಿಯರ್ ರಿಸರ್ವ್ಸ್ನ ವರ್ಲ್ಡ್ ನೆಟ್ವರ್ಕ್ಗೆ ಯುನೆಸ್ಕೋ ಸೇರಿಸಿದ 20 ಹೊಸ ತಾಣಗಳಲ್ಲಿ ಅಗಾಸ್ತ್ಯಮಲಾ ಜೀವಗೋಳ ಮೀಸಲು ಇದೆ.

ವಿಸ್ಟಾಡೋಮ್‌ ಕೋಚ್‌-23

7.

ಸುದ್ಧಿಯಲ್ಲಿ ಏಕಿದೆ ?ಭಾರತದಲ್ಲಿ ಹೊ-ಹೊ ಮಾದರಿಯ ಮೊದಲ ರೈಲು ಎಂಬ ಹಿರಿಮೆ ,ಕುಳಿತಲ್ಲಿಯೇ ಭೂಮಿ ಮತ್ತು ಆಕಾಶ ದರ್ಶನ,ವಿಶಿಷ್ಟ ಮಾದರಿಯ ವಿಸ್ಟಾಡೋಮ್‌ಕೋಚ್‌ ಹೊಂದಿದ ರೈಲು ಕಲ್ಕ-ಶಿಮ್ಲಾ ಮಾರ್ಗ ಮಧ್ಯೆ ಇನ್ನು ಸಂಚಾರ ಆರಂಭಿಸಲಿದೆ.

 • ಪಾರದರ್ಶಕ ಗ್ಲಾಸ್‌ ಹೊದಿಕೆಯಿಂದ ನಿರ್ಮಾಣಗೊಂಡ ಕೋಚ್‌ಗಳಲ್ಲಿ ಸಂಚಾರ ಕೈಗೊಳ್ಳುವ ಪ್ರವಾಸಿಗರಿಗೆ ಈ ಮಾರ್ಗದಲ್ಲಿ ಸುರಿಯುವ ಹಿಮ ಮತ್ತು ಮಳೆಯ ಮೋಜು ದಕ್ಕಲಿದೆ. ಕುಳಿತಲ್ಲಿಯೇ ಗಗನ ಚುಂಬಿ ಶಿಖರಗಳನ್ನು, ಆಳ ಪ್ರಪಾತಗಳನ್ನು ನೋಡಬಹುದಾಗಿದೆ. ಚಿರತೆ ಮತ್ತಿತರ ಪ್ರಾಣಿಗಳನ್ನು ಅತ್ಯಂತ ಸಮೀಪದಿಂದ ನೋಡಬಹುದು.
 • ಇದಲ್ಲದೇ ಈ ಪ್ರವಾಸಿ ಋುತುವಿನಲ್ಲಿ ಕಲ್ಕಾ-ಶಿಮ್ಲಾ ಮಾರ್ಗದಲ್ಲಿ ಹೊ-ಹೊ (ಹಾಪ್‌ ಆನ್‌ ಹಾಪ್‌ ಆಫ್‌) ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಆ ಮೂಲಕ ಭಾರತೀಯ ರೈಲ್ವೆಯ ಮೊದಲ ಹೊ-ಹೊ ಮಾರ್ಗ ಎಂಬ ಹಿರಿಮೆಗೂ ಈ ಮಾರ್ಗ ಪಾತ್ರವಾಗಲಿದೆ. ವಿಸ್ಟಾಡೋಮ್‌ ರೈಲು ಸೇರಿ ಒಟ್ಟು ಏಳು ರೈಲುಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಪ್ರಯಾಣದ ಅವಧಿ 5 ಗಂಟೆ 40 ನಿಮಿಷ.
 • ಈ ವಿಶೇಷ ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ವಿಸ್ಟಾಡೋಮ್ ಹವಾನಿಯಂತ್ರಿತ ಭೋಗಿ ಸಿ.ಟಿ –15,ನಿಹಾರ್ ಎಂದು ಸಹ  ಕರೆಯಲ್ಪಡುತ್ತದೆ, ಈ ಕಲ್ಕಾ-ಶಿಮ್ಲಾ ರೈಲ್ವೆ ವಿಭಾಗದಲ್ಲಿ ಅದರ ಮೊದಲ-ರೀತಿಯ ರೈಲು ಇದಾಗಿದೆ

ವಿಸ್ಟಾಡೋಮ್‌ ಮಾರ್ಗಗಳು

 • ಮುಂಬಯಿ-ಗೋವಾ ಮತ್ತು ವಿಶಾಖಪಟ್ಟಣಂ -ಅರಕು ವ್ಯಾಲಿ ನಡುವೆ ಬ್ರಾಡ್‌ಗೇಜ್‌ ಮಾರ್ಗದಲ್ಲಿ ವಿಸ್ಟಾಡೋಮ್‌ ಕೋಚ್‌ ಹೊಂದಿದ ರೈಲುಗಳು ಸಂಚರಿಸುತ್ತಿವೆ. ಜಮ್ಮು-ಕಾಶ್ಮೀರದಲ್ಲಿಯೂ ಇಂತಹ ರೈಲು ಸಂಚಾರ ಆರಂಭಿಸುವ ಯೋಜನೆ ಇದೆ.

ಟಿ-18 ರೈಲು

8.

ಸುದ್ಧಿಯಲ್ಲಿ ಏಕಿದೆ ?ಭಾರಿ ನಿರೀಕ್ಷೆ ಸೃಷ್ಟಿಸಿರುವ ಎಂಜಿನ್‌ರಹಿತ ರೈಲು ‘ಟ್ರೈನ್‌-18’ ಪರೀಕ್ಷಾರ್ಥ ಸಂಚಾರದ ವೇಳೆ ಗಂಟೆಗೆ 180 ಕಿ.ಮೀ ವೇಗ ಮಿತಿ ದಾಟುವ ಮೂಲಕ ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರಕ್ಕೆ ಮತ್ತೊಂದು ಮುನ್ನುಡಿ ಬರೆದಿದೆ.

 • ನಿಯಮಿತ ಸಂಚಾರಕ್ಕೆ ಸಜ್ಜುಗೊಂಡಿರುವ 100 ಕೋಟಿ ರೂ. ವೆಚ್ಚದ ಸ್ವದೇಶಿ ನಿರ್ಮಿತ ಈ ರೈಲು ದೇಶದ ಶರವೇಗದ ರೈಲು ಎನ್ನುವ ಹೆಗ್ಗಳಿಕೆ ಪಡೆಯಲಿದೆ.
 • ಕೋಟ-ಸವಾಯಿ ಮಾಧೋಪುರ ನಡುವೆ ನಡೆದ ಪರೀಕ್ಷಾರ್ಥ ಸಂಚಾರದ ವೇಳೆ ಟ್ರೈನ್‌-18 ಗಂಟೆಗೆ 180 ಕಿ.ಮೀ ವೇಗ ದಾಟಿತು. ಇದರ ಪ್ರಮುಖ ಪರೀಕ್ಷೆಗಳೆಲ್ಲ ಮುಕ್ತಾಯಗೊಂಡಿದ್ದು ಸಣ್ಣಪುಟ್ಟ ಹೊಂದಾಣಿಕೆಗಳು ಮಾತ್ರ ಬಾಕಿ ಉಳಿದಿವೆ. ವರದಿಗಳನ್ನು ಆಧರಿಸಿ ಕೊನೆ ಹಂತದ ಸುಧಾರಣೆ ಮಾಡಲಾಗುತ್ತಿದೆ. ಇದುವರೆಗೆ ಪ್ರಮುಖ ತಾಂತ್ರಿಕ ಸಮಸ್ಯೆಗಳಾವೂ ಗೋಚರಿಸಿಲ್ಲ.
 • ಎಲ್ಲವೂ ಅಂದುಕೊಂಡಂತೆ ಮುಗಿದರೆ, ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿಗೆ ಪರ್ಯಾಯವಾಗಿ ಸಂಚಾರ ಆರಂಭಿಸಲಿದೆ.
 • ಟೋಲ್ಗೋ ಟ್ರೇನ್: ಈ ಹಿಂದೆ ಭಾರತದಲ್ಲಿ ಟೋಲ್ಗೋ ಟ್ರೇನ್ ಗಂಟೆಗೆ 180 ಕಿ.ಮೀ. ವೇಗವಾಗಿ ಸಂಚರಿಸಿತ್ತು. ಆದರೆ ಇದು ಸ್ಪೇನ್ ನಿರ್ವಿುತ ರೈಲಾಗಿದೆ. ಹಾಗಾಗಿ ಅತಿವೇಗವಾಗಿ ಸಂಚರಿಸಿದ ಭಾರತದ ಮೊದಲ ರೈಲು ಎಂಬ ಹೆಗ್ಗಳಿಕೆ ಟ್ರೇನ್ 18ನದ್ದಾಗಿದೆ. ದೆಹಲಿ ಮತ್ತು ಝಾನ್ಸಿ ನಡುವೆ ಗತಿಮಾನ್ ಎಕ್ಸ್​ಪ್ರೆಸ್ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗವಾಗಿ ಸಂಚರಿಸುತ್ತದೆ. ಈಗ ಟ್ರೇನ್ 18 ಇದನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದೆ.

ಟ್ರೈನ್‌-18 ವಿಶೇಷ

 • ಸ್ವಯಂ ಚಾಲಕ ಶಕ್ತಿ (ಸೆಲ್ಫ್‌ ಪ್ರಪಲ್ಷನ್‌) ಹೊಂದಿರುವ ಟ್ರೈನ್‌ 18 ಅಥವಾ ಟಿ18ಗೆ ಎಂಜಿನ್‌ ಅಗತ್ಯ ಇಲ್ಲ.
 • ಚೆನ್ನೈ ಮೂಲದ ಐಸಿಎಫ್‌ ತಯಾರಿಸಿರುವ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ.
 • ರೈಲಿನ ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್‌ ಬೋಗಿಗಳನ್ನು ಹೊಂದಿದ್ದು, ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳು.
 • ಜಿಪಿಎಸ್‌ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಹಾಗೂ ಮೆಟ್ಟಿಲು ವ್ಯವಸ್ಥೆ

ಎಕ್ಸ್ ಕೋಪ್ ಇಂಡಿಯಾ 2018

9.

ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ವಾಯುಪಡೆ ಯೋಧರು ಜಂಟಿ ಸಮರಾಭ್ಯಾಸ ನಡೆಸಲಿದ್ದಾರೆ.

 • ಎಕ್ಸ್ ಕೋಪ್ ಇಂಡಿಯಾ 2018 ಹೆಸರಿನ ಜಂಟಿ ಸಮರಾಭ್ಯಾಸದ 4ನೇ ಆವೃತ್ತಿ ಇದಾಗಿದೆ. ಇದೇ ಮೊದಲ ಬಾರಿಗೆ ವಾಯುನೆಲೆಯಲ್ಲಿ ಸಮರಾಭ್ಯಾಸ ಆಯೋಜನೆಗೊಳ್ಳುತ್ತಿದೆ.
 • ಅಮೆರಿಕ ವಾಯುಪಡೆ ಯೋಧರು 12 ಎಕ್ಸ್ ಎಫ್15 ಸಿ/ಡಿ ಮತ್ತು 03 ಎಕ್ಸ್ ಸಿ-130 ಯುದ್ಧವಿಮಾನಗಳೊಂದಿಗೆ ಆಗಮಿಸಿದ್ದರೆ, ಭಾರತ ಎಸ್​ಯುು 30 ಎಂಕೆಐ, ಜಾಗ್ವಾರ್, ಮಿರಾಜ್ 2000, ಸಿ-130ಜೆ ಮತ್ತು ಅವಾಕ್ಸ್ ಯುದ್ಧವಿಮಾನಗಳೊಂದಿಗೆ ಸಮರಾಭ್ಯಾಸ ನಡೆಸಲಿದೆ.
Related Posts
5th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚುನಾವಣಾ ಸಿಬ್ಬಂದಿ ಮೇಲೆ ‘ಲೈಫ್’ ಕಣ್ಗಾವಲು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿರುವ ಸೆಕ್ಟರ್ ಮತ್ತು ಫ್ಲೈಯಿಂಗ್ ಅಧಿಕಾರಿಗಳ ಮೇಲೆ ನಿಗಾ ಇಡಲು ‘ಲೈಫ್‌– 360’ ಎಂಬ ಆ್ಯಪ್‌ ಸಿದ್ಧಗೊಳಿಸಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಹುಣಸೂರು ಉಪವಿಭಾಗಾಧಿಕಾರಿ ಕೆ.ನಿತೀಶ್‌, ಪ್ರಭಾರಿ ...
READ MORE
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚಾಲ್ತಿ ಖಾತೆ ಕೊರತೆ ಸುದ್ದಿಯಲ್ಲಿ ಏಕಿದೆ? ಭಾರತದ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ)ದಲ್ಲಿ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ. 5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಚಾಲ್ತಿ ಖಾತೆ ಕೊರತೆಗೆ ಕಾರಣಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಹಿನ್ನಡೆ ...
READ MORE
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಡೋಕ್ಲಾಂ ಬಿಕ್ಕಟ್ಟು ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ. ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ...
READ MORE
14 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ನಕಲಿ ಹೂಡಿಕೆ ಸ್ಕೀಮ್‌ಗಳ ನಿಷೇಧಕ್ಕೆ ವಿಧೇಯಕ ಮಂಡನೆ ಸುದ್ಧಿಯಲ್ಲಿ ಏಕಿದೆ ? ನಕಲಿ ಹೂಡಿಕೆ ಯೋಜನೆಗಳನ್ನು ನಿಷೇಧಿಸುವ ಹಾಗೂ ಇಂಥ ಯೋಜನೆಗಳಲ್ಲಿ ವಂಚಿತರಾಗಿರುವ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅನಿಯಂತ್ರಿತ ಠೇವಣಿ ಸಂಗ್ರಹ ಸ್ಕೀಮ್‌ಗಳ ನಿಷೇಧ ವಿಧೇಯಕವನ್ನು ಹಣಕಾಸು ಸಚಿವ ಪಿಯೂಷ್‌ ...
READ MORE
“3rd July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ ತ್ಯಾಜ್ಯ ಸಂಸ್ಕರಣಾ ಘಟಕ ಸುದ್ದಿಯಲ್ಲಿ ಏಕಿದೆ? ದೇಶದ ಮೊದಲ 'ಇ-ತ್ಯಾಜ್ಯ ಸಂಸ್ಕರಣಾ ಘಟಕ' ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಕೇಂದ್ರೀಯ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್‌)ಯಿಂದ ನಾಲ್ಕು ತಿಂಗಳಲ್ಲಿ ಘಟಕ ಸ್ಥಾಪನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ...
READ MORE
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌ ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಬೇಕೇ? ಅದು ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ, ಆ ಜಾಗ ಸರ್ಕಾರಕ್ಕೇ ಸೇರಿದ್ದೇ,  ಗೋಮಾಳವೇ, ಅದು ಒತ್ತುವರಿ ಜಾಗವೇ ಎಂಬ ವಿವರಗಳನ್ನು ತಿಳಿದುಕೊಳ್ಳಲು ಕಂದಾಯ ಇಲಾಖೆ ಪರಿಚಯಿಸಿರುವ ‘ದಿಶಾಂಕ್‌’ ...
READ MORE
2nd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಸಮುದ್ರದಲ್ಲಿ ಪತನ ಟಿಯಾಂಗಾಂಗ್ -1 ಹೆಸರಿನ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಪೆಸಿಫಿಕ್​ ಸಾಗರದಲ್ಲಿ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ದೃಢಪಡಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶದ ಪ್ರಯೋಗಗಳಿಗೆ ಬಳಸಿಕೊಳ್ಳಲು 2011ರಲ್ಲಿ ಟಿಯಾಂಗಾಂಗ್​-1 ಅನ್ನು ಕಕ್ಷೆಗೆ ...
READ MORE
9th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ತ್ರಿವರ್ಣ ನಾಡಧ್ವಜಕ್ಕೆ ಒಪ್ಪಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ತ್ರಿವರ್ಣ ಕನ್ನಡ ಧ್ವಜಕ್ಕೆ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಾಹಿತಿಗಳು ಮತ್ತು ...
READ MORE
ಇನ್ಮುಂದೆ ‘ಕಾಮಗಾರಿ ನಿಷೇಧ’ ವಲಯ ಹಸಿರು ಪ್ರದೇಶ ರಕ್ಷಿಸುವ ಸಲುವಾಗಿ ಶ್ರೀನಗರ – ಜಮ್ಮು ನಡುವಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳನ್ನು ‘ಕಾಮಗಾರಿ ನಿಷೇಧ ವಲಯ’ (ನಿರ್ಮಾಣ ರಹಿತ ವಲಯ) ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಘೋಷಣೆ ಮಾಡಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ...
READ MORE
20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಮನೆಗೊಬ್ಬರು ಯೋಗಪಟು ಯೋಜನೆ ದೇಶದ 500 ಗ್ರಾಮಗಳನ್ನು ‘ಸಂಪೂರ್ಣ ಯೋಗ ಗ್ರಾಮ’ಗಳಾಗಿ ರೂಪಿಸುವ ಉಪಕ್ರಮವೊಂದನ್ನು ಆಯುಷ್‌ ಸಚಿವಾಲಯ ಹಮ್ಮಿಕೊಂಡಿದೆ. ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಬೇಕು ಎಂಬುದು ಈ ಯೋಜನೆಯ ತಿರುಳು. ಜೂನ್‌ 21ರ ಅಂತರರಾಷ್ಟ್ರೀಯ ಯೋಗ ದಿನಕ್ಕೂ ...
READ MORE
5th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
14 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“3rd July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
2nd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ
9th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
4th – 5th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

Leave a Reply

Your email address will not be published. Required fields are marked *