” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯ ಪೌಷ್ಠಿಕಾಂಶ ಬಳಕೆ

1.

ಸುದ್ಧಿಯಲ್ಲಿ ಏಕಿದೆ ?ಶಾಲಾ ಮಕ್ಕಳಿಗೆ ಪೂರೈಸುವ ಬಿಸಿಯೂಟದಲ್ಲಿ ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯವಾಗಿ ಪೌಷ್ಠಿಕಾಂಶವಿರುವ ಇತರ ತರಕಾರಿಗಳನ್ನು ಬಳಸುವ ಆಹಾರ ಗುಣಮಟ್ಟದ ಬಗ್ಗೆ ಇಸ್ಕಾನ್‌ ಸಂಸ್ಥೆಯ ಅಕ್ಷಯ ಪಾತ್ರೆ ಪ್ರತಿಷ್ಠಾನ ದೃಢೀಕೃತ ಪ್ರಮಾಣ ಪತ್ರ ನೀಡಿದಲ್ಲಿ ಅದಕ್ಕೆ ಆಯೋಗದ ಅಭ್ಯಂತರವಿಲ್ಲ ಎಂದು ರಾಜ್ಯ ಆಹಾರ ಆಯೋಗ ಸ್ಪಷ್ಟಪಡಿಸಿದೆ.

ಆರೋಪವೇನು?

 • ಬೆಂಗಳೂರು ನಗರ, ರಾಮನಗರ, ಮೈಸೂರು, ದಕ್ಷಿಣ ಕನ್ನಡ, ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಗಳ 2,814 ಶಾಲೆಗಳ 4,42,108 ಮಕ್ಕಳಿಗೆ ಅಕ್ಷಯಪಾತ್ರೆ ಪ್ರತಿಷ್ಠಾನ ಬಿಸಿಯೂಟ ಪೂರೈಸುತ್ತಿದೆ. ಆದರೆ, ಬೇರೆಲ್ಲಾ ಸ್ವಯಂಸೇವಾ ಸಂಸ್ಥೆಗಳು ಬಿಸಿಯೂಟದಲ್ಲಿ ಈರುಳ್ಳಿ- ಬೆಳ್ಳುಳ್ಳಿಯನ್ನು ಕಡ್ಡಾಯವಾಗಿ ಬಳಕೆ ಮಾಡುತ್ತಿದ್ದರೂ ಅಕ್ಷಯಪಾತ್ರೆ ಪ್ರತಿಷ್ಠಾನ ಮಾತ್ರ ಉಪಯೋಗಿಸುತ್ತಿಲ್ಲ ಎಂಬುದು ಮಧ್ಯಾಹ್ನ ಉಪಹಾರ ಯೋಜನೆಯ ಅಧಿಕಾರಿಗಳ ಆರೋಪವಾಗಿದೆ.

ಎಂಎಚ್‌ಆರ್‌ಡಿ ಮಾರ್ಗಸೂಚಿ

 • ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈರುಳ್ಳಿ-ಬೆಳ್ಳುಳ್ಳಿ ಬದಲಿಗೆ ಪೌಷ್ಠಿಕಾಂಶವಿರುವ ಇತರ ತರಕಾರಿಗಳನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ದೇಶದ 14 ರಾಜ್ಯಗಳ 17 ಲಕ್ಷ ಮಕ್ಕಳಿಗೆ ಎಂಎಚ್‌ಆರ್‌ಡಿ ಮಾರ್ಗಸೂಚಿ ಅನುಸಾರವೇ ಪೌಷ್ಠಿಕಾಂಶವುಳ್ಳ ಆಹಾರ ಒದಗಿಸುತ್ತಿದ್ದೇವೆ. ಆದರೆ, ಬೇರೆ ಯಾವುದೇ ರಾಜ್ಯಗಳಲ್ಲಿಯೂ ನಮ್ಮ ಬಿಸಿಯೂಟದ ಬಗ್ಗೆ ಆಕ್ಷೇಪಗಳು ಕೇಳಿ ಬಂದಿಲ್ಲ” ಎಂದು ಅಕ್ಷಯಪಾತ್ರೆ ಪ್ರತಿಷ್ಠಾನದ ವಾದವಾಗಿದೆ.

ಆಯೋಗ ಹೇಳುವುದೇನು?:

 • ”ಆಯೋಗವು ರಾಜ್ಯವ್ಯಾಪಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಕ್ಷಯಪಾತ್ರೆ ಪ್ರತಿಷ್ಠಾನದ ಬಿಸಿಯೂಟ ಹಾಗೂ ಹಾಲಿನ ಬಗ್ಗೆ ಮಕ್ಕಳು ಹಾಗೂ ಪೋಷಕರಿಂದ ಆಕ್ಷೇಪಗಳು ಕೇಳಿ ಬಂದಿವೆ.
 • ಪ್ರತಿಷ್ಠಾನದ ಊಟ, ತಣ್ಣನೆಯ ಹಾಲು ಕುಡಿಯಲು ಮಕ್ಕಳು ಇಷ್ಟಪಡುತ್ತಿಲ್ಲ. ಬದಲಿಗೆ, ಮನೆಗಳಿಂದಲೇ ಬುತ್ತಿ ತರುತ್ತಿರುವುದು ಬೆಳಕಿಗೆ ಬಂದಿದೆ. ಹಾಲು ಕುಡಿಯಲು ಮಕ್ಕಳು ಕೂಡ ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶ ಆಯೋಗಕ್ಕೆ ಮನವರಿಕೆಯಾಯಿತು”

ಮಧ್ಯಾಹ್ನದ ಊಟ ಯೋಜನೆ

 • ಮಧ್ಯಾಹ್ನ ಮೀಲ್ ಸ್ಕೀಮ್ ರಾಷ್ಟ್ರವ್ಯಾಪಿ ಶಾಲೆಯ ವಯಸ್ಸಿನ ಮಕ್ಕಳ ಪೌಷ್ಠಿಕಾಂಶದ ಸ್ಥಿತಿಯನ್ನು ಉತ್ತಮಗೊಳಿಸಲು ವಿನ್ಯಾಸಗೊಳಿಸಲಾದ ಭಾರತ ಸರಕಾರದ ಒಂದು ಶಾಲೆಯ ಊಟ ಕಾರ್ಯಕ್ರಮವಾಗಿದೆ.
 • ಈ ಕಾರ್ಯಕ್ರಮವು ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ತರಗತಿಗಳ ಮಕ್ಕಳಿಗೆ ಶಾಲಾ ದಿನಗಳಲ್ಲಿ ಉಚಿತ ಉಪಾಹಾರಗಳನ್ನು ಸರಬರಾಜು ಮಾಡುತ್ತದೆ .
 • ಶಿಕ್ಷಣ, ಗ್ಯಾರಂಟಿ ಯೋಜನೆ ಮತ್ತು ಪರ್ಯಾಯ ನವೀನ ಶಿಕ್ಷಣ ಕೇಂದ್ರಗಳು, ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಬೆಂಬಲಿತವಾದ ಮದರ್ಸ ಮತ್ತು ಮಕ್ತಾಬ್ಗಳು ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಪ್ರಾಜೆಕ್ಟ್ ಶಾಲೆಗಳಿಗೂ ಈ ಯೋಜನೆ ಅನ್ವಯಿಸುತ್ತದೆ . ಎದು ವಿಶ್ವದಲ್ಲೇ ಅತಿ ದೊಡ್ಡ ಯೋಜನೆಯಾಗಿದೆ .
 • ಲೇಖನ 24 ರ ಅಡಿಯಲ್ಲಿ, ಮಕ್ಕಳ ಹಕ್ಕುಗಳ ಕನ್ವೆನ್ಷನ್ನ ಪ್ಯಾರಾಗ್ರಾಫ್ 2 ಸಿ, ಭಾರತವು ಪಕ್ಷವಾಗಿದ್ದು, ಮಕ್ಕಳಿಗೆ “ಸಾಕಷ್ಟು ಪೌಷ್ಟಿಕ ಆಹಾರಗಳನ್ನು” ನೀಡುವಲ್ಲಿ ಭಾರತವು ಬದ್ಧವಾಗಿದೆ.
 • ಈ ಕಾರ್ಯಕ್ರಮವು 1995 ರಲ್ಲಿ ಪ್ರಾರಂಭವಾದಾಗಿನಿಂದ ಅನೇಕ ಬದಲಾವಣೆಗಳಿಗೆ ಒಳಗಾಯಿತು. ಮಧ್ಯಾಹ್ನ ಮೀಲ್ ಸ್ಕೀಮ್ ಅನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರವರಿಂದ ಆವರಿಸಿದೆ.
 • ಭಾರತೀಯ ಶಾಲಾ ಊಟ ಕಾರ್ಯಕ್ರಮಕ್ಕೆ ಕಾನೂನುಬದ್ಧ ಬೆಂಬಲವು ಯುಎಸ್ನಲ್ಲಿ ನ್ಯಾಷನಲ್ ಸ್ಕೂಲ್ ಲಂಚ್ ಆಕ್ಟ್ ಮೂಲಕ ಒದಗಿಸಲಾದ ಕಾನೂನುಬದ್ಧ ಬೆಂಬಲವನ್ನು ಹೋಲುತ್ತದೆ.

ಅಕ್ಷಯ ಪಾತ್ರ  ಫೌಂಡೇಶನ್

 • ಅಕ್ಷಯ ಪಾತ್ರಾ ಫೌಂಡೇಶನ್ ಭಾರತದಲ್ಲಿ ಲಕ್ಷಾಂತರ ಮಕ್ಕಳಿಗೆ ಭೋಜನ ನೀಡುತ್ತಿರುವ ಲಾಭರಹಿತ ಸಂಸ್ಥೆಯಾಗಿದೆ. ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಊಟ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ಮಕ್ಕಳಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎಂಬ ಎರಡು  ಅತ್ಯಂತ ನಿರ್ಣಾಯಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು  ಬದ್ಧವಾಗಿದೆ . ಪ್ರಪಂಚದ ಅತಿದೊಡ್ಡ ಎನ್ಜಿಒ-ನಡೆಸುವ ಆಹಾರ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಅಕ್ಷಯ ಪಾತ್ರಾ ಹಸಿವು ವಿರುದ್ಧ ಹೋರಾಡಲು ಮಾತ್ರವಲ್ಲದೆ ಮಕ್ಕಳನ್ನು ಶಾಲೆಗೆ ತರುವ ಉದ್ದೇಶವನ್ನೂ ಹೊಂದಿದೆ.

ಆನೆ ಹಾವಳಿಗೆ ಶಾಶ್ವತ ಪರಿಹಾರ ಯೋಜನೆ

2.

ಸುದ್ಧಿಯಲ್ಲಿ ಏಕಿದೆ ?ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ರೂಪಿಸಲು ಪ್ರಸ್ತಾಪ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅರಣ್ಯ ಇಲಾಖೆಗೆ ಸೂಚಿಸಿದ್ದು, ರೈಲ್ವೆ ತಡೆಗೋಡೆ ನಿರ್ಮಾಣ ಸಂಬಂಧ ಸದ್ಯದಲ್ಲೇ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

 • ರಾಜ್ಯದಲ್ಲಿ ಸುಮಾರು 6000 ಆನೆಗಳಿದ್ದು, ಇದು ರಾಷ್ಟ್ರದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.

ಆನೆ ಹಾವಳಿ ತಪ್ಪಿಸಲು ಏನು ಮಾಡಬಹುದು ?

 • ತೊಂದರೆಯನ್ನುಂಟು ಮಾಡುತ್ತಿರುವ ಆನೆಗಳನ್ನು ಹಿಡಿದು ಶಿಬಿರಕ್ಕೆ ಕಳುಹಿಸುವುದು, ಹೊರ ರಾಜ್ಯಗಳಿಂದ ತಜ್ಞರನ್ನು ಕರೆಸಿಕೊಳ್ಳುವುದು ಸೇರಿದಂತೆ ಲಭ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಬಳಸಿಕೊಳ್ಳಬಹುದು.

ಬಡವರಿಗೆ ವಿಷದೂಟ!

3.

 ಸುದ್ಧಿಯಲ್ಲಿ ಏಕಿದೆ ?ಬಡವರ ಹಸಿವು ನೀಗಿಸುವ ಸದುದ್ದೇಶದಿಂದ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಅನ್ನಭಾಗ್ಯ ಯೋಜನೆ ಜನರಿಗೆ ವಿಷದ ತುತ್ತಾಗುವ ಆತಂಕ ಎದುರಾಗಿದೆ. ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸಲಾಗುತ್ತಿರುವ ತೊಗರಿ ಬೇಳೆಗೆ ಜೀವಕ್ಕೆ ಸಂಚಕಾರ ತರುವ ಕೇಸರಿ ಬೇಳೆ ಬೆರೆಸಿ ಮಾರಾಟ ಮಾಡುತ್ತಿರುವ ಕಳವಳಕಾರಿ ಸಂಗತಿ  ಬಯಲಾಗಿದೆ.

ಏನಿದು ಕೇಸರಿ ಬೇಳೆ?:

 • ಕೇಸರಿ ಬೇಳೆ ಮೇಲ್ನೋಟಕ್ಕೆ ಚೆನ್ನಂಗಿ ಬೇಳೆಯನ್ನೇ ಹೋಲುತ್ತದೆ ಎಂಬ ಕಾರಣಕ್ಕೆ ಜನರನ್ನು ಸುಲಭವಾಗಿ ವಂಚಿಸಲಾಗುತ್ತಿದೆ. ತೊಗರಿ ಬೇಳೆಯಂತೆ ಬಣ್ಣ ಮತ್ತು ಆಕಾರ ಒಂದೇ ರೀತಿ ಇದ್ದರೂ, ರುಚಿಯಲ್ಲಿ ಕೇಸರಿ ಬೇಳೆ ಅತ್ಯಂತ ಕಹಿ.
 • ಇದು ಫಸಲಿನ ಜತೆ ಕಳೆಯಂತೆ ಬೆಳೆಯುವ ಒಂದು ಸಸ್ಯ ಪ್ರಭೇದ. ಯಾವುದೇ ವಾತಾವರಣದಲ್ಲೂ ಈ ಬೆಳೆ ಹುಲುಸಾಗಿ ಬೆಳೆಯುತ್ತದೆ. ಸಾಕಷ್ಟು ಸಂಶೋಧನೆಗಳ ಬಳಿಕ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕೇಸರಿ ಬೇಳೆ ನಿಷೇಧಿಸಲಾಗಿದೆ.
 • ರಾಜ್ಯ ಸರ್ಕಾರ 1963ರಲ್ಲೇ ಇದನ್ನು ನಿರ್ಬಂಧಿಸಿದೆ. ಆದರೆ ಚಂಡೀಗಢ, ಛತ್ತೀಸ್​ಗಢ, ಮಣಿಪುರ ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಕೆಲ ಆನ್​ಲೈನ್ ಸ್ಟೋರ್​ಗಳು ಕೆಜಿಗೆ 23-30 ರೂ.ನಂತೆ ಮಾರಾಟ ಮಾಡುತ್ತಿವೆ.

ಕಲಬೆರಕೆಗೆ ಕಾರಣ?

 • ತೊಗರಿ ಬೇಳೆ ಬೆಲೆ ಹೆಚ್ಚಿರುವುದರಿಂದ ಕಡಿಮೆ ಬೆಲೆಯ ಕೇಸರಿ ಬೇಳೆ ಕಲಬೆರಕೆ.
 • ವಿಜಯಪುರ, ಬೀದರ್, ಕಲಬುರಗಿ, ಬೆಂಗಳೂರಲ್ಲಿ ಈ ದಂಧೆ ಅವ್ಯಾಹತ.
 • ಕಮೀಷನ್​ಗಾಗಿ ಡೀಲರ್​ಗಳು, ಅಧಿಕಾರಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರು ಭಾಗಿ.

ನರಮಂಡಲಕ್ಕೆ ಅಪಾಯಕಾರಿ

 • ಕೇಸರಿ ಬೇಳೆ ಸೇವನೆಯಿಂದ ಲೆಥರಿಸಂ (A Neurotoxic Disease) ಎಂಬ ನರವಿಷದ ಕಾಯಿಲೆ ಬರುತ್ತದೆ. 50 ವರ್ಷಗಳ ಹಿಂದೆ ಈ ಕಾಯಿಲೆ ಮಧ್ಯವಯಸ್ಸಿನ ಪುರುಷರಲ್ಲಿ ಸಾಮಾನ್ಯವಾಗಿತ್ತು.
 • 15 -35 ವರ್ಷದ ಪುರುಷರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಬೆನ್ನುಹುರಿ ಹಾಗೂ ಅಸಹಜ ಬಿಗಿಯುವಿಕೆ ಲಕ್ಷಣಗಳಿಂದ ಶುರುವಾಗುವ ಈ ಕಾಯಿಲೆ, ಕಾಲುಗಳ ನರ ಹಾಗೂ ಮಾಂಸಖಂಡಗಳ ಮೇಲೆ ಸರಿಪಡಿಸಲಾಗದ ನ್ಯೂನತೆ ಉಂಟುಮಾಡುತ್ತದೆ.
 • ನಡೆಯಲಾಗದೆ ಆಸರೆಗೆ ಕೋಲು ಅವಲಂಬಿಸಬೇಕಾಗುತ್ತದೆ. ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಪಾರ್ಶ್ವವಾಯು ಖಚಿತ. ಕೇಸರಿ ಬೇಳೆ ಪ್ರಾಣಿಗಳಿಗೂ ಅಪಾಯಕಾರಿ.

ಪ್ರಯೋಗಾಲಯ ವರದಿಯಲ್ಲೇ ಉಲ್ಲೇಖ

 • ತೊಗರಿ ಬೇಳೆಯಲ್ಲಿ ವಿಷಕಾರಿ ಕೇಸರಿ ಬೇಳೆ ಕಲಬೆರಕೆ ಮಾಡುತ್ತಿರುವುದು ಕಲಬುರಗಿಯ ಸರ್ಕಾರಿ ಆರೋಗ್ಯ ಪ್ರಯೋಗಾಲಯದಲ್ಲೇ ಸಾಬೀತಾಗಿದೆ.
 • ಅನ್ನಭಾಗ್ಯ ಯೋಜನೆಯಡಿ ಪೂರೈಕೆಯಾಗುತ್ತಿರುವ ತೊಗರಿ ಬೇಳೆ ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ನಿಯಮ (FSSAI) ಪ್ರಕಾರ ಆರೋಗ್ಯಕ್ಕೆ ಹಾನಿಕರ ಎಂದು ಪ್ರಯೋಗಾಲಯ ವರದಿ ದೃಢಪಡಿಸಿದೆ.
 • ಬೆಂಗಳೂರಿನ ಹಲವೆಡೆ ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗುತ್ತಿರುವ ತೊಗರಿ ಬೇಳೆಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಲ್ಲಿಯೂ ಕೂಡ ಸರ್ಕಾರ ಪೂರೈಸುತ್ತಿರುವ ತೊಗರಿ ಬೇಳೆ ದೋಷಪೂರಿತ ಎಂಬ ವಿಚಾರ ದೃಢಪಟ್ಟಿದೆ.

ದೇಶದ ಅತ್ಯಂತ ಭಾರವಾದ ಉಪಗ್ರಹ ಜಿಸ್ಯಾಟ್​-11 ಉಡಾವಣೆ

4.

ಸುದ್ಧಿಯಲ್ಲಿ ಏಕಿದೆ ?ದೇಶದ ಇತಿಹಾಸದಲ್ಲೇ ಅತ್ಯಂತ ಭಾರವಾದ ಜಿಸ್ಯಾಟ್​-11 ಉಪಗ್ರಹವನ್ನು  ಯುರೋಪಿಯನ್​ ಮೂಲದ ಏರಿಯನ್​ ಸ್ಪೇಸ್​ ಸಂಸ್ಥೆಯು ಫ್ರೆಂಚ್​ನ ಗಯಾನಾದ ಕೌರೋ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಇಸ್ರೋ ಒಂದು ದಾಖಲೆ ಬರೆದಂತಾಗಿದೆ.

 • ಇಸ್ರೋ ನಿರ್ಮಿತ 5,854 ಕೆಜಿ ತೂಕವಿರುವ ಜಿಸ್ಯಾಟ್​-11 ಅತ್ಯಾಧುನಿಕ ತಂತ್ರಜ್ಞಾನದ ಉಪಗ್ರಹವಾಗಿದೆ. ಅತಿದೊಡ್ಡ ಹಾಗೂ ಭಾರವಾಗಿದೆ.
 • ಜಿಸ್ಯಾಟ್​-11 ಅಂತರಿಕ್ಷದಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಲಿದ್ದು ಇದು ಮುಂದಿನ ಪೀಳಿಗೆಗೆ ಸಂವಹನ ಅಭಿವೃದ್ಧಿಗೊಳಿಸುವ ಪ್ರಮುಖ ಉಪಗ್ರಹ.
 • ಇಸ್ರೋದ I-6k ಬಸ್​ನಲ್ಲಿ ಸಂಚರಿಸಲಿದೆ. ಉಪಗ್ರಹ 12-14 ಜಿಬಿಪಿಎಸ್​ ವೇಗದ ಇಂಟರ್ ನೆಟ್ ಸೌಲಭ್ಯ ನೀಡುವ ಸಾಮರ್ಥ್ಯ ಹೊಂದಿದೆ.
 • ಏರಿಯನ್​ 5 ವಾಹನವು (ಫ್ಲೈಟ್​-ವಿಎ-246 ) ಜಿಸ್ಯಾಟ್​-11 ಉಪಗ್ರಹದ ಜತೆ ಜಿಯೋ ಕೋಮ್​ ಸ್ಯಾಟ್​-2ಎ ಉಪಗ್ರಹವನ್ನೂ ಕೊಂಡೊಯ್ದಿದೆ. ಇದು 3,507.20 ಕೆಜಿ ತೂಕವಿದ್ದು ಹವಾಮಾನ ಹಾಗೂ ಬಾಹ್ಯಾಕಾಶ ವಾತಾವರಣ ಮೇಲ್ವಿಚಾರಣೆ ಮಾಡುವಂತೆ ಇದನ್ನು ರೂಪಿಸಲಾಗಿದೆ.
 • ಕು ಮತ್ತು ಕಾ ಬ್ಯಾಂಡ್​ಗಳಲ್ಲಿ ಸೇವೆ ಒದಗಿಸುವ ಇದು, ಪ್ರಸ್ತುತ ಸೇವೆಯಲ್ಲಿರುವ ಸಂವಹನ ಉಪಗ್ರಹಗಳಿಗಿಂತ ಮೂರು ಪಟ್ಟು ಹೆಚ್ಚಿನ ಕಾರ್ಯಕ್ಷಮತೆ ಹೊಂದಿದೆ. ಜಿಸ್ಯಾಟ್-11ರ ಜೀವಿತಾವಧಿ 15 ವರ್ಷ.

ಉಪಯೋಗ

 • ಭಾರತ್​ ನೆಟ್​ ಯೋಜನೆಯಡಿ ದೇಶದ ಎಲ್ಲ ಹಳ್ಳಿಗಳು ಹಾಗೂ ಹಿಂದುಳಿದ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್​ಬ್ಯಾಂಡ್​ ಸಂಪರ್ಕ ಒದಗಿಸಲು ಈ ಉಪಗ್ರಹ ತುಂಬ ಸಹಕಾರಿಯಾಗಲಿದೆ.
 • ಈ ದೈತ್ಯ ಉಪಗ್ರಹವು ಬಾಹ್ಯಾಕಾಶದ ಭೂಸಮಕ್ರಮಿಕ (ಜಿಯೋಸಿಂ ಕ್ರೋನಸ್ ಟ್ರಾನ್ಸ್​ಫರ್) ಕಕ್ಷೆಯಲ್ಲಿ ತಾತ್ಕಾಲಿಕವಾಗಿ ಇರಲಿದೆ. ನಂತರ ಇದನ್ನು ಭೂಸ್ಥಾಯಿ (ಜಿಯೋಸ್ಟೇಷನರಿ) ಕಕ್ಷೆಗೆ ರವಾನಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ಯೋಜನೆ ಸಾಕಾರಕ್ಕೆ ಅಂತರ್ಜಾಲ ವೇಗ ವೃದ್ಧಿ ಮೂಲಕ ಈ ಉಪಗ್ರಹ ನೆರವಾಗಲಿದೆ.
 • ‘ಸ್ಪಾಟ್ ಬೀಮ್ (ನಿರ್ದಿಷ್ಟ ಪ್ರದೇಶದಲ್ಲಿ ನಿಖರ ಸಂವಹನಕ್ಕೆ ನೆರವು ನೀಡುವ ಆಂಟೆನಾ) ಮೂಲಕ ಈಡೇರಿಸಲಿದೆ. ಜಿಸ್ಯಾಟ್-11, ತನ್ನ ಅನೇಕ ‘ಸ್ಪಾಟ್ ಬೀಮ್ ಆಂಟೆ ನಾಗಳ ಮೂಲಕ ಭಾರತ ಮತ್ತು ದೇಶದ ದ್ವೀಪಗಳಲ್ಲಿ ಸಂವಹನವನ್ನು ಸರಾಗಗೊಳಿಸಲಿದೆ.
Related Posts
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪುರಂದರದಾಸರು ಸುದ್ದಿಯಲ್ಲಿ ಏಕಿದ್ದಾರೆ? ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ. ಪುರಂದರದಾಸರ ಹುಟ್ಟೂರು ಮಲೆಸೀಮೆ ಎಂಬ ...
READ MORE
“20 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸ್ತ್ರೀಯರಿಗೆ ಕಾಯಕ ಶಕ್ತಿ! ಸುದ್ಧಿಯಲ್ಲಿ ಏಕಿದೆ ?ಬಡವರ ಬಂಧು, ಋಣ ಪರಿಹಾರ ಕಾಯ್ದೆಗಳ ಮೂಲಕ ಬಡವರ ನೆರವಿಗೆ ಬಂದ ಸರ್ಕಾರ, ಮಹಿಳಾ ಮತದಾರರಿಗಾಗಿ ರೂಪಿಸಿರುವ ಕಾಯಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಮುಂದಿನ ಐದು ವರ್ಷಗಳಲ್ಲಿ ಪ್ರತಿ ...
READ MORE
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ದೇವಾಲಯಗಳ ದೇಣಿಗೆ ಕಡ್ಡಾಯವೆಂಬ ಆದೇಶ ತಿದ್ದುಪಡಿ ಸುದ್ಧಿಯಲ್ಲಿ ಏಕಿದೆ ? ರಾಜ್ಯದ 81 ದೇವಾಲಯಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 12.38 ಕೋಟಿ ಹಣ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ಇತ್ಯರ್ಥಗೊಳಿಸಿದೆ. ಹಿನ್ನಲೆ ಸರಕಾರ ಆ.21ರಂದು ಹೊರಡಿಸಿದ್ದ ಆದೇಶದ ಪ್ರಕಾರ ...
READ MORE
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಲೆನಾಡಿನಲ್ಲಿ ಮಂಗನಕಾಯಿಲೆ: ಸುದ್ಧಿಯಲ್ಲಿ ಏಕಿದೆ ?ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಸಿಗೆಯಲ್ಲಿ ತೀರ್ಥಹಳ್ಳಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಬೇಸಿಗೆಗೂ ಮುಂಚೆ ಕಾಣಿಸಿಕೊಂಡಿದೆ. ಜತೆಗೆ ಸಾಗರಕ್ಕೂ ವ್ಯಾಪಿಸಿದೆ. ಮಂಗನಕಾಯಿಲೆ ಹರಡದಂತೆ ಪ್ರತಿವರ್ಷ ಲಸಿಕೆ ಹಾಕಲಾಗುತ್ತಿತ್ತು. ಆದರೆ ...
READ MORE
“7th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಜಿಎಸ್​ಟಿಎನ್​ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಕಂಪನಿಯನ್ನಾಗಿಸಲು ನಿರ್ಧಾರ ಸುದ್ದಿಯಲ್ಲಿ ಏಕಿದೆ ? ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್​ಟಿಎನ್​) ಅನ್ನು ಭವಿಷ್ಯದಲ್ಲಿ ಸರ್ಕಾರಿ ಕಂಪನಿಯನ್ನಾಗಿ ಮಾಡುವ ಕುರಿತು ನಡೆದ 27ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಜಿಎಸ್​ಟಿಎನ್​ನಲ್ಲಿ ಸದ್ಯ ಶೇ. 51ರಷ್ಟು ...
READ MORE
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಡೋಕ್ಲಾಂ ಬಿಕ್ಕಟ್ಟು ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ. ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ...
READ MORE
” 13 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆನ್​ಲೈನಲ್ಲೇ ಆಯುಷ್ಮಾನ್ ಶಿಫಾರಸು! ಸುದ್ಧಿಯಲ್ಲಿ ಏಕಿದೆ ? ಯಶಸ್ವಿನಿ ಯೋಜನೆ ಕೈಬಿಟ್ಟು ಆರೋಗ್ಯ ಕರ್ನಾಟಕ ರೂಪಿಸಿದ್ದ ಸರ್ಕಾರ ಬಡವರಿಗೆ ಆರೋಗ್ಯ ಕಾರ್ಡ್ ಒದಗಿಸಲು ವ್ಯವಸ್ಥಿತ ಜಾಲ ಸೃಷ್ಟಿಸಿದೆ. ಜತೆಗೆ ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಂದ ಪಡೆಯಬೇಕಾದ ಶಿಫಾರಸನ್ನು ...
READ MORE
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ನೌಕಾ ಪಡೆ ಸಮರಾಭ್ಯಾಸ ಮುಕ್ತಾಯ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮೂರು ವಾರಗಳ ಕಾಲ ಕೈಗೊಂಡ ಸಮರಾಭ್ಯಾಸ ಕೊನೆಗೊಂಡಿದೆ. ದೇಶದ ಪಶ್ಚಿಮ ಸಮುದ್ರದಲ್ಲಿರುವ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಕುರಿತು ವ್ಯೂಹ ರಚನೆ ಮತ್ತು ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಯೋಜನೆಗಳ ಬಗ್ಗೆ ನೌಕಾ ಪಡೆ ...
READ MORE
” 4th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕನ್ನಡ  ಸುದ್ಧಿಯಲ್ಲಿ ಏಕಿದೆ?ಎಲ್ಲ ಖಾಸಗಿ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧನೆ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ. ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು 2017-18ನೇ ಸಾಲಿನಲ್ಲಿ ಆದೇಶಿಸಿದ್ದರೂ ...
READ MORE
“2nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆರೋಗ್ಯ ಸೇವೆ ಸುದ್ಧಿಯಲ್ಲಿ ಏಕಿದೆ ? ಕಾಡನ್ನೇ ನಂಬಿಕೊಂಡು ಬದುಕು ನಡೆಸುವ ಬುಡಕಟ್ಟು ಜನರಿಗಾಗಿ ರಾಜ್ಯ ಸರಕಾರ ಸಂಚಾರಿ ಆರೋಗ್ಯ ಘಟಕ ಸೇವೆಯನ್ನು ಪ್ರಾರಂಭಿಸಿದೆ. ಯಾರು ಜಾರಿಗೆ ತರುತ್ತಾರೆ ? ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಆರೋಗ್ಯ ಸೇವೆ ...
READ MORE
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“20 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“7th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
” 13 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
” 4th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“2nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *