” 06 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ)

1.

ಸುದ್ಧಿಯಲ್ಲಿ ಏಕಿದೆ ?ಬಾಗಿಲು ಮುಚ್ಚುವ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ನಿಯಮಗಳಿಗೆ ಬದಲಾವಣೆ ತರುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಕೇರಳ ಮಾದರಿ:

 • ಸರ್ಕಾರಿ ಶಾಲೆ ಇರುವ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಿದ್ದಲ್ಲಿ ವಿದ್ಯಾರ್ಥಿಗಳು ಆರ್​ಟಿಇ ಅಡಿ ಆ ಶಾಲೆಗಳಿಗೆ ಸೇರಲು ಅವಕಾಶವಿಲ್ಲ. ಬದಲಾಗಿ ಸರ್ಕಾರಿ ಶಾಲೆಗಳಲ್ಲೇ ಕಲಿಕೆ ಮುಂದುವರಿಸಬೇಕಾಗುತ್ತದೆ. ಕೇರಳದಲ್ಲಿ ಜಾರಿಯಲ್ಲಿರುವ ಈ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಈಗ ಏನಿದೆ ನಿಯಮ?

 • 2011ರಲ್ಲಿ ರೂಪಿಸಲಾದ ನಿಯಮದ ಪ್ರಕಾರ, ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಮಕ್ಕಳು ವಾಸಿಸುವ ಒಂದು ಕಿಮೀ ವ್ಯಾಪ್ತಿಯಲ್ಲಿನ ಯಾವುದೇ ಖಾಸಗಿ ಶಾಲೆಗೆ ಆರ್​ಟಿಇ ಕಾಯ್ದೆಯಡಿ ಪ್ರವೇಶ ನೀಡಬಹುದು.
 • 2012ರಲ್ಲಿ ಜಾರಿಗೊಂಡ ಆರ್​ಟಿಇ ಕಾಯ್ದೆಯಡಿ ಪ್ರತಿವರ್ಷ ಸರಾಸರಿ 3 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು.
 • ಮಕ್ಕಳಿಗೆ ಕಡ್ಡಾಯ, ಗುಣಮಟ್ಟದ ಶಿಕ್ಷಣದ ಉದ್ದೇಶದಿಂದ ಜಾರಿಯಾದ ಆರ್​ಟಿಇ ಕಾಯ್ದೆಯಡಿ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಗೆ ತಲಾ ಗರಿಷ್ಠ 12,000 ರೂ.ವರೆಗೆ ಶುಲ್ಕ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿತ್ತು. ಆ ಪ್ರಕಾರ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭರಿಸುವ ಹಣದ ಮೊತ್ತ ವಾರ್ಷಿಕ 1,600 ಕೋಟಿ ರೂ.ಗಳಷ್ಟಾಗುತ್ತದೆ.

ಸರ್ಕಾರಿ ಶಾಲೆ ಉಳಿಸುವ ಉದ್ದೇಶ

 • ಹಾಲಿ ನಿಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅವಕಾಶವಿರುವುದರಿಂದ ಸರ್ಕಾರಿ ಶಾಲೆಗಳು ಕ್ರಮೇಣ ಸೊರಗುತ್ತವೆ ಎಂಬ ಆತಂಕ ವ್ಯಕ್ತವಾಗಿತ್ತು.ಇದರ ಪರಿಣಾಮವಾಗಿ ಆರ್​ಟಿಇ ಕಾಯ್ದೆಯನ್ನೇ ರದ್ದುಪಡಿಸಿ, ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ 1,600 ಕೋಟಿ ರೂ.ಗಳನ್ನು ವಿನಿಯೋಗಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿತ್ತು.

ಬದಲಾವಣೆಗೆ ಕಾರಣ

 • ಆರ್​ಟಿಇ ಅಡಿ ಖಾಸಗಿ ಶಾಲೆಗಳಿಗೆ ಸೇರಿದ ಮಕ್ಕಳ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಇದು ವರ್ಷಕ್ಕೆ ಒಂದೂವರೆ ಸಾವಿರ ಕೋಟಿ ರೂ.ಗಳಷ್ಟಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯಲ್ಲಿ ಇದನ್ನು ಆಕ್ಷೇಪಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆರ್​ಟಿಇಯಲ್ಲಿ ಬದಲಾವಣೆಗೆ ಶಿಫಾರಸು ಮಾಡಿತ್ತು.

ಮುಂದೇನು?

 • ಆರ್​ಟಿಇ ನಿಯಮಗಳ ತಿದ್ದುಪಡಿಯಿಂದಾಗಿ ಇನ್ಮುಂದೆ ರಾಜ್ಯದ ಯಾವುದೇ ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆ ಇರುವ ಸುತ್ತಲಿನ ಒಂದು ಕಿಮೀ ವ್ಯಾಪ್ತಿಯ ಮಕ್ಕಳು ಆರ್​ಟಿಇ ಕಾಯ್ದೆಯಿಂದ ಹೊರಗುಳಿಯಲಿದ್ದಾರೆ. ಅಂದರೆ ಸರ್ಕಾರಿ ಶಾಲೆ ಇರುವ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಇನ್ನು ಖಾಸಗಿ ಶಾಲೆಯಲ್ಲಿ ಆರ್​ಟಿಇ ಅಡಿ ಪ್ರವೇಶ ನೀಡುವುದಿಲ್ಲ. ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ತಿದ್ದುಪಡಿ) ನಿಯಮ 2018ಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಅಥವಾ ಹಕ್ಕುಗಳ ಹಕ್ಕು ಕಾಯಿದೆ (ಆರ್ ಟಿ ಇ)

 • ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಅಥವಾ ಹಕ್ಕುಗಳ ಹಕ್ಕು ಕಾಯಿದೆ (ಆರ್ ಟಿ ಇ) ಗೆ ಮಕ್ಕಳ ಹಕ್ಕು, ಆಗಸ್ಟ್ 4, 2009 ರಂದು ಜಾರಿಗೊಳಿಸಲಾದ ಭಾರತದ ಪಾರ್ಲಿಮೆಂಟ್ನ ಒಂದು ಕಾಯಿದೆ, ಇದು 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಪ್ರಾಮುಖ್ಯತೆಯ ವಿಧಾನಗಳನ್ನು ವಿವರಿಸುತ್ತದೆ. ಭಾರತೀಯ ಸಂವಿಧಾನದ ಅನುಚ್ಛೇದ 21 ರ ಅಡಿಯಲ್ಲಿ ಭಾರತದಲ್ಲಿ 2010 ರ ಏಪ್ರಿಲ್ 1 ರಂದು ಕಾಯಿದೆಯಡಿ ಜಾರಿಗೆ ಬಂದಾಗ ಪ್ರತಿ ಮಗುವಿಗೆ ಶಿಕ್ಷಣವನ್ನು ಮೂಲಭೂತ ಹಕ್ಕನ್ನು ಮಾಡಲು 135 ದೇಶಗಳಲ್ಲಿ ಒಂದಾಗಿದೆ.
 • ಆಕ್ಟ್ 6 ಮತ್ತು 14 ರ ನಡುವಿನ ಪ್ರತಿ ಮಗುವಿಗೆ ಶಿಕ್ಷಣವನ್ನು ಮೂಲಭೂತ ಹಕ್ಕು ಮಾಡುತ್ತದೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಟ ರೂಢಿಗಳನ್ನು ಸೂಚಿಸುತ್ತದೆ. ಎಲ್ಲಾ ಖಾಸಗಿ ಶಾಲೆಗಳು ಮಕ್ಕಳನ್ನು 25% ಸ್ಥಾನಗಳನ್ನು ಮೀಸಲಿಡುವುದಕ್ಕೆ (ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಯೋಜನೆಯ ಭಾಗವಾಗಿ ರಾಜ್ಯವನ್ನು ಮರುಪಾವತಿಸಲು) ಇದು ಅಗತ್ಯವಾಗಿರುತ್ತದೆ. ಮಕ್ಕಳನ್ನು ಆರ್ಥಿಕ ಸ್ಥಿತಿ ಅಥವಾ ಜಾತಿ ಆಧಾರಿತ ಮೀಸಲಾತಿಯ ಆಧಾರದ ಮೇಲೆ ಖಾಸಗಿ ಶಾಲೆಗಳಿಗೆ ಪ್ರವೇಶಿಸಲಾಗುತ್ತದೆ. ಪ್ರಾಥಮಿಕ ಶಿಕ್ಷಣದ ಪೂರ್ಣಗೊಳ್ಳುವವರೆಗೆ ಯಾವುದೇ ಮಗು ಹಿಂದಕ್ಕೆ, ಹೊರಹಾಕಲ್ಪಡುವುದಿಲ್ಲ, ಅಥವಾ ಬೋರ್ಡ್ ಪರೀಕ್ಷೆಯನ್ನು ರವಾನಿಸಬೇಕಾಗಿದೆ ಎಂದು ಆಕ್ಟ್ ನೀಡುತ್ತದೆ. ಅದೇ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ತರಲು ಶಾಲೆಯ ಡ್ರಾಪ್-ಔಟ್ಗಳ ವಿಶೇಷ ತರಬೇತಿಗಾಗಿ ಒಂದು ಅವಕಾಶವಿದೆ.

ಮರಗಳ ಸ್ಥಳಾಂತರ ಬಲು ಸುಲಭ

2.

ಸುದ್ಧಿಯಲ್ಲಿ ಏಕಿದೆ ?ಮರಗಳನ್ನು ವ್ಯವಸ್ಥಿತವಾಗಿ ಸ್ಥಳಾಂತರಿಸಲು ಸಾಧ್ಯವಾಗುವ ವಾಹನವನ್ನು ವೋಲ್ವೊ ಕಂಪನಿಯು ನಗರಕ್ಕೆ ತಂದಿದೆ.

 • ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿದ್ದ 14 ನೇ ಮರ ಪೋಷಣೆ ಸಮ್ಮೇಳನದಲ್ಲಿ ಈ ವಾಹನದ ಪ್ರಾತ್ಯಕ್ಷಿಕೆ ನೀಡಲಾಯಿತು.
 • ಜೆಸಿಬಿಯಂತೆ ಕಾಣುವ ಈ ವಾಹನದ ಹಿಂದೆ ಮರ ಸ್ಥಳಾಂತರಿಸುವ ಹಿಡಿಕೆಯಿದೆ. ಇದರಲ್ಲಿ ಹೂವಿನ ಎಸಳುಗಳಂತೆ ಕಾಣುವ ನಾಲ್ಕು ಕಬ್ಬಿಣದ ಚೂಪಾದ ಬಿಡಿಭಾಗಗಳಿವೆ. ನೆಲದಲ್ಲಿ ಬೇರೂರಿ ನಿಂತ ಮರದ ಬುಡದ ಸುತ್ತ 6 ಅಡಿ ಸುತ್ತಳತೆಯಲ್ಲಿ ನಾಲ್ಕು ಬಿಡಿಭಾಗಗಳನ್ನು ಇಳಿಸಲಾಗುತ್ತದೆ. ಸುಮಾರು 6 ಅಡಿ ಆಳಕ್ಕೆ ಇಳಿಸಿದ ನಂತರ ನಾಲ್ಕು ಬಿಡಿಭಾಗಗಳನ್ನು ಹತ್ತಿರ ತಂದು ಬೇರಿನ ಸಮೇತ ಕಾಂಡವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ಬಿಗಿಗೊಳಿಸಲಾಗುತ್ತದೆ.
 • ಬಳಿಕ ನಿಧಾನವಾಗಿ ಮರವನ್ನು ಎತ್ತಿ ಹಿಡಿದು ಬೇರೆ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ. ಬೇರೆ ಕಡೆ ಮೊದಲೇ ಅಗೆದಿರುವ ಜಾಗದಲ್ಲಿ ಮರವನ್ನು ಕೂರಿಸುವಾಗ ನೀರು ಹಾಗೂ ಔಷಧಿಯನ್ನು ಸಿಂಪಡಿಸಲಾಗುತ್ತದೆ. ಬಿಡಿಭಾಗಗಳಲ್ಲಿ ಅಳವಡಿಸಿರುವ ಪೈಪ್‌ನಿಂದಲೇ ಇದು ಸಿಂಪಡಣೆಯಾಗುತ್ತದೆ. 9 ರಿಂದ 14 ಇಂಚು ವ್ಯಾಸದ ಮರಗಳನ್ನು ಮಾತ್ರ ಇದು ಸ್ಥಳಾಂತರಿಸುತ್ತದೆ.
 • 14 ಇಂಚಿಗಿಂತ ಹೆಚ್ಚು ವ್ಯಾಸದ ಮರಗಳು ನೆಲದಲ್ಲಿ ಅಗಲವಾಗಿ ಬೇರುಗಳನ್ನು ಹರಡಿರುತ್ತವೆ. ಇಂತಹ ಮರಗಳು ಸ್ಥಳಾಂತರಕ್ಕೆ ಯೋಗ್ಯವಲ್ಲ. ಹೆಚ್ಚು ಉದ್ದವಾದ ಮರಗಳನ್ನೂ ಮರಗಳನ್ನೂ ಸ್ಥಳಾಂತರಿಸುವುದು ಕಷ್ಟ. ಇದುವರೆಗೆ ಸುಮಾರು 1,600 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ
 • ಬಿಎಂಆರ್‌ಸಿಎಲ್‌ ಇತ್ತೀಚೆಗೆ ಬನ್ನೇರುಘಟ್ಟ ರಸ್ತೆ ಬಳಿ ಹಲವು ಮರಗಳನ್ನು ಸ್ಥಳಾಂತರಿಸಿದೆ. ಮಣ್ಣಿನಿಂದ ತೆಗೆದ ಮರವನ್ನು ಲಾರಿಯಲ್ಲಿ ಇರಿಸಿ ಒಯ್ಯಲಾಗುತ್ತದೆ. ಸಾಗಾಟದ ವೇಳೆ ಮರ ಅಲುಗಾಡುವುದರಿಂದಲೂ ಸಮಸ್ಯೆಯಾಗುತ್ತದೆ. ಇದರಿಂದ ಮರ ಬದುಕುಳಿಯುವ ಸಾಧ್ಯತೆ ಕಡಿಮೆ. ಆದರೆ ಈ ವಾಹನ ಮಣ್ಣಿನ ಸಮೇತ ಮರವನ್ನು ಎತ್ತುವುದರಿಂದ ಬೇರಿಗೆ ಹಾನಿಯಾಗುವುದಿಲ್ಲ. ಜತೆಗೆ ಯಂತ್ರವು ಮರವನ್ನು ಗಟ್ಟಿಯಾಗಿ ಹಿಡಿಯುವುದರಿಂದ ಸಣ್ಣ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

ಬಿಸಿನೀರ ಬುಗ್ಗೆ ಬೇಂದ್ರ್​ ತೀರ್ಥ

3.

ಸುದ್ಧಿಯಲ್ಲಿ ಏಕಿದೆ ?ಸಾವಿರಾರು ಯಾತ್ರಿಕರನ್ನು ಕೈ ಬೀಸಿ ಕರೆಯುತ್ತಿದ್ದ ಬಿಸಿನೀರಿನ ಬುಗ್ಗೆ ಎಂದೇ ಖ್ಯಾತಿ ಪಡೆದ ಇರ್ದೆ-ಬೆಟ್ಟಂಪಾಡಿ ಗ್ರಾಮದ ಬೆಂದ್ರ್ ತೀರ್ಥ ಖಾಲಿ ಖಾಲಿ!

 • ಬಿಸಿನೀರಿನ ಬುಗ್ಗೆ ಬರುವ ಸ್ಥಳದಲ್ಲಿ ಈಗ ಏನೂ ಇಲ್ಲ. ಕೊಳದಲ್ಲಿ ಶೇ.90 ನೀರು ಖಾಲಿ. ಒಂದು ಕಾಲದಲ್ಲಿ 100ರಿಂದ 106 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬಿಸಿಯಿದ್ದ ಬೆಂದ್ರ್ ತೀರ್ಥ ಆರು ತಿಂಗಳ ಹಿಂದೆಯೇ ಸಾಧಾರಣ ನೀರಂತಾಗಿತ್ತು.
 • ಅಂದು ಅಲ್ಲಿ ಏನು ಇತ್ತೋ ಅದೆಲ್ಲವೂ ಈಗ ಸಂಪೂರ್ಣ ನಾಶವಾಗಿದ್ದು, ಅವಶೇಷ ಮಾತ್ರ ಉಳಿದಿದೆ.

ಏಕೈಕ ಬಿಸಿನೀರಿನ ತಾಣ

 • ಬೆಂದ್ರ್ ತೀರ್ಥ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ತಾಣ ಎಂಬ ವಿಚಾರ ಪ್ರವಾಸೋದ್ಯಮ ಇಲಾಖೆಯಲ್ಲಿ ದಾಖಲಾಗಿದೆ.

ಬೇಂದ್ರ್ ತೀರ್ಥ

 • ಬೇಂದ್ರ್ ತೀರ್ಥವು ನೈಸರ್ಗಿಕ ಬಿಸಿನೀರಿನ ಬುಗ್ಗೆಯಾಗಿದೆ. ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ.  ಚಂದ್ರಗಿರಿಯ ನದಿಯ ಉಪನದಿಯಾದ ಸೀರೆಸುಡೆ ಸಮೀಪದಲ್ಲಿದೆ. ಈಗ ಇದನ್ನು ಕರ್ನಾಟಕ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣವೆಂದು ಪರಿಗಣಿಸಿದೆ.

ನಂಬಿಕೆಯ ಕ್ಷೇತ್ರ

 • ಕೊಳದಲ್ಲಿ ಸ್ನಾನ ಮಾಡಿದರೆ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ ಕಾರಣಕ್ಕೆ ತೀರ್ಥ ಅಮಾವಾಸ್ಯೆಯಂದು ಭಕ್ತರು ಇಲ್ಲಿ ತೀರ್ಥಸ್ನಾನ ಮಾಡುತ್ತಾರೆ. ನೀರು ಬಿಸಿ ಇಲ್ಲದಿದ್ದರೂ ನಂಬಿಕೆ ಕಡಿಮೆಯಾಗಿಲ್ಲ.
 • ಇರ್ದೆ ಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಜಾತ್ರೆಯಂದು ಕೊಳದ ಬಳಿ ದೇವರ ಸವಾರಿ ಬರುತ್ತದೆ. ಪಕ್ಕದಲ್ಲೇ ಇರುವ ಕದಿಕೆ ಚಾವಡಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ನವರಾತ್ರಿ ದಿನ ಶಾರದಾ ಮಾತೆಯ ವಿಸರ್ಜನೆ ಸೀರೆ ನದಿಯಲ್ಲಿ ನಡೆಯುತ್ತದೆ. ಇದಕ್ಕೆ ಮೊದಲು ಬೆಂದ್ರ್ ತೀರ್ಥಕ್ಕೆ ಬಂದು ಪೂಜೆ ಸಲ್ಲಿಸಲಾಗುತ್ತಿದೆ.

ಟ್ರಾಫಿಕ್‌ ನಿಯಂತ್ರಣಕ್ಕೆ ಬರಲಿವೆ ಅಡಾಪ್ಟಿವ್‌ ಸಿಗ್ನಲ್‌ಗಳು

4..

ಸುದ್ಧಿಯಲ್ಲಿ ಏಕಿದೆ ?ಸಿಲಿಕಾನ್‌ ಸಿಟಿಯ ರಸ್ತೆಗಳಲ್ಲಿ ನಿತ್ಯ ಕಂಟಕವಾಗಿರುವ ವಾಹನ ದಟ್ಟಣೆಯನ್ನು ಇನ್ನಷ್ಟು ವೈಜ್ಞಾನಿಕವಾಗಿ ನಿರ್ವಹಿಸಲು ಬಿಇಎಲ್‌ ಸಂಸ್ಥೆ ಸಿದ್ಧಪಡಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ಅಡಾಪ್ಟಿವ್‌ ಸಿಗ್ನಲ್‌ಗಳು ಸರಕಾರದ ಅನುದಾನಕ್ಕಾಗಿ ಕಾಯುತ್ತಿವೆ.

 • ಸದ್ಯ ದಿಲ್ಲಿ ಮತ್ತು ಮುಂಬೈ ಬಿಟ್ಟರೆ ಬೆಂಗಳೂರೇ ಉತ್ತಮ ಸಿಗ್ನಲ್‌ ಮತ್ತು ಸಂಚಾರ ವ್ಯವಸ್ಥೆ ಹೊಂದಿರುವ ದೊಡ್ಡ ನಗರ ಎನ್ನುವ ಖ್ಯಾತಿ ಇದೆ. ಆದರೆ, ಅಡಾಪ್ಟೀವ್‌ ಸಿಗ್ನಲ್‌ಗಳ ಅಳವಡಿಕೆ ಮೂಲಕ ಕರ್ನಾಟಕವೇ ದೇಶದಲ್ಲಿ ನಂಬರ್‌ ಒನ್‌ ಆಗುವ ತವಕದಲ್ಲಿದೆ.
 • ಇದುವರೆಗೂ ದೇಶದ ಯಾವ ದೊಡ್ಡ ನಗರಗಳೂ ಸಂಪೂರ್ಣವಾಗಿ ಅಡಾಪ್ಟಿವ್‌ ಸಿಗ್ನಲ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮಟ್ಟಕ್ಕೆ ಸಿದ್ಧತೆ ನಡೆಸಿಲ್ಲ. ದಿಲ್ಲಿ ಮತ್ತು ಮುಂಬೈನಲ್ಲಿ ಭಾಗಶಃ ಇದ್ದು ಬೆಂಗಳೂರಿನಲ್ಲಿ ಮಾತ್ರ ಸಂಪೂರ್ಣವಾಗಿ 456 ಸಿಗ್ನಲ್‌ಗಳನ್ನು ತಂತ್ರಜ್ಞಾನಕ್ಕೆ ಒಗ್ಗಿಸುವ ಸಂಬಂಧ ಟೆಂಡರ್‌ ಪಡೆದಿರುವ ಬಿಇಎಲ್‌ ಸಂಸ್ಥೆ ಎಲ್ಲಾ ತಯಾರಿಗಳನ್ನು ಮುಗಿಸಿದೆ.

ವ್ಯತ್ಯಾಸ ಏನು ?

 • ಸದ್ಯ ಬೆಂಗಳೂರಿನಲ್ಲಿ ಸ್ವಯಂ ಚಾಲಿತ ಸಮಯ ನಿಗದಿ ಮಾಡಿರುವ ಸಿಗ್ನಲ್‌ ವ್ಯವಸ್ಥೆ ಇದೆ. ಅಂದರೆ ಒತ್ತಡ ಇರುವ ಸಮಯ ಮತ್ತು ಉಳಿದ ಸಮಯಗಳಲ್ಲಿ ಇಂತಿಷ್ಟು ಸೆಕೆಂಡುಗಳಿಗೆ (ಉದಾ: 180, 120, 60, 30 ಸೆಕೆಂಡುಗಳಿಗೆ ಸಿಗ್ನಲ್‌ ಲೈಟ್‌ಗಳು ಬದಲಾಗುವಂತೆ ವ್ಯವಸ್ಥೆ ಮಾಡಲಾಗಿದೆ) ಸಿಗ್ನಲ್‌ ಲೈಟ್‌ಗಳು ಬಣ್ಣ ಬದಲಾಯಿಸಬೇಕು ಎಂದು ಸಮಯ ನಿಗದಿ ಮಾಡಲಾಗಿದೆ.
 • ಅಡಾಪ್ಟಿವ್‌ ಸಿಗ್ನಲ್‌ ವ್ಯವಸ್ಥೆಯಲ್ಲಿ ಇನ್ಫ್ರಾರೆಡ್‌ ಕಿರಣಗಳ ನೆರವಿನಿಂದ ಜಂಕ್ಷನ್‌ನ ಯಾವ ರಸ್ತೆಯಲ್ಲಿ ಅತಿಹೆಚ್ಚು ವಾಹನಗಳು ಬರುತ್ತಿವೆ ಎನ್ನುವುದನ್ನು ಮೊದಲೇ ಗ್ರಹಿಸುವ ತಂತ್ರಜ್ಞಾನ ಆ ರಸ್ತೆಗೆ ಹೆಚ್ಚು ಅವಧಿಯ ಗ್ರೀನ್‌ ಲೈಟ್‌ ಸಿಗ್ನಲ್‌ ನೀಡುತ್ತದೆ. ವಾಹನ ದಟ್ಟಣೆ ಇಲ್ಲದ ರಸ್ತೆಗಳಿಗೆ ಕಡಿಮೆ ಅವಧಿಯ ಗ್ರೀನ್‌ ಸಿಗ್ನಲ್‌ ನೀಡುತ್ತದೆ. ಇದರಿಂದ ವಾಹನ ದಟ್ಟಣೆ ಇಲ್ಲದಿದ್ದರೂ 180, 120 ಸೆಕೆಂಡುಗಳ ವರೆಗೆ ವಾಹನ ಸವಾರರು ಗ್ರೀನ್‌ ಸಿಗ್ನಲ್‌ಗಾಗಿ ಕಾಯುತ್ತಲೇ ಇರಬೇಕಾದ ಹಳೆಯ ಪದ್ದತಿ ಇರುವುದಿಲ್ಲ.

ಮಿತಿ ಏನು ?

 • ಅಡಾಪ್ಟಿವ್‌ ಸಿಗ್ನಲ್‌ ವ್ಯವಸ್ಥೆಗೂ ಒಂದು ಮಿತಿ ಇದೆ. ಜಂಕ್ಷನ್‌ಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ವಾಹನಗಳ ಪ್ರಮಾಣ ಅಸಮತೋಲನ ಇದ್ದಾಗ ಮಾತ್ರ ಇದು ಪರಿಣಾಮಕಾರಿಯಾಗಿ ತನ್ನ ಕರ್ತವ್ಯ ನಿರ್ವಹಿಸುತ್ತದೆ. ಆದರೆ ಎಲ್ಲಾ ರಸ್ತೆಗಳಲ್ಲೂ ಒಂದೇ ಪ್ರಮಾಣದ ವಾಹನ ಹರಿವು, ದಟ್ಟಣೆ ಇದ್ದರೆ ಆಗ ಇದರ ಕೃತಕ ಬುದ್ದಿ ಮತ್ತೆ ಕೈ ಕೊಡುತ್ತದೆ. ಹೀಗಾಗಿ ಅಸಮತೋಲನ ಇದ್ದಲ್ಲಿ ಇದು ಉಪಕಾರಿ ಎನ್ನುತ್ತಾರೆ ತಜ್ಞರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಹಿರಿಯ ಸಾಹಿತಿ ಕೆ.ಜಿ. ನಾಗರಾಜಪ್ಪ ಅವರ ಚಿಂತನಶೀಲ ಬರಹ ಮಾಲಿಕೆ ‘ಅನುಶ್ರೇಣಿ-ಯಜಮಾನಿಕೆ’ ವಿಮರ್ಶಾ ಕೃತಿ 2018-19ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಸಾಹಿತ್ಯ ಕ್ಷೇತ್ರದ ಸಮಗ್ರ ಸಾಧನೆ ಪರಿಗಣಿಸಿ ರಾಜ್ಯದ ಮತ್ತೋರ್ವ ಹಿರಿಯ ಲೇಖಕ, ಭಾಷಾ ಶಾಸ್ತ್ರಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ದಕ್ಷಿಣಭಾರತ ವಿಭಾಗಕ್ಕೆ ನೀಡಲಾಗುವ ‘ಭಾಷಾ ಸಮ್ಮಾನ್’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

 • ಎರಡೂ ಪ್ರಶಸ್ತಿಗಳು ತಲಾ 1 ಲಕ್ಷ ರೂ. ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿವೆ.
 • ವಿಮರ್ಶಾ ವಲಯದಲ್ಲಿ ರೂಢಿಗತ ಪರಿಕಲ್ಪನೆಗಳನ್ನು ಭಗ್ನಗೊಳಿಸಿದ ವಿಮರ್ಶಕ ಎಂದೇ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ಪರಿಚಿತರಾಗಿರುವ ಕೆ.ಜಿ.ನಾಗರಾಜಪ್ಪ, ತುಮಕೂರಿನ ಜಿಲ್ಲೆ, ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮದವರು.
 • ‘ಇಕ್ಕಟ್ಟು ಬಿಕ್ಕಟ್ಟು’, ‘ದೇವಾಂಗ ಸಂಸ್ಕೃತಿ ಒಂದು ಅಧ್ಯಯನ’ ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ. ಇವರ ‘ಮರುಚಿಂತನೆ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ
 • ಪ್ರೊ.ವೆಂಕಟಸುಬ್ಬಯ್ಯ ‘ಪದಬ್ರಹ್ಮಎಂದೇ ಕನ್ನಡ ಜನಮಾನಸದಲ್ಲಿ ಪ್ರಖ್ಯಾತರಾಗಿದ್ದಾರೆ.
 • ಭಾಷಾ ವಿಷಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ದೇಶದ ನಾಲ್ವರಿಗೆ ಮಾತ್ರ ಪ್ರತಿವರ್ಷ ಭಾಷಾ ಸಮ್ಮಾನ್‌ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಅತಿ ಉದ್ದದ ಮೇಲ್ಸೇತುವೆ

6.

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರದ ಅತಿ ಉದ್ದದ ರೈಲು ಮತ್ತು ರಸ್ತೆ ಮೇಲ್ಸೇತುವೆ ಬೋಗಿಬೀಲ್​ನ್ನು ಪ್ರಧಾನಿ ನರೇಂದ್ರ ಮೋದಿ ಡಿ. 25ರಂದು ಲೋಕಾರ್ಪಣೆ ಮಾಡಲಿದ್ದಾರೆ.

 • ಬ್ರಹ್ಮಪುತ್ರ ನದಿಯ ಉತ್ತರ ಮತ್ತು ದಕ್ಷಿಣ ದಡವನ್ನು ಸಂರ್ಪಸುವ 94 ಕಿ.ಮೀ. ಉದ್ದದ ಸೇತುವೆ ಇದಾಗಿದೆ.

ಹಿನ್ನಲೆ

 • 1997 ರ ಜನವರಿಯಲ್ಲಿ ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 2002ರ ಏಪ್ರಿಲ್​ನಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. 16 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದೆ.

ಸಂಪರ್ಕ ಕೊಂಡಿ

 • ಬೋಗಿಬೀಲ್ ರೈಲು-ರಸ್ತೆ ಮೇಲ್ಸೇತುವೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಕ್ಕೆ ಸಂಪರ್ಕ ಒದಗಿಸುವ ಪ್ರಮುಖ ಸೇತುವೆಯಾಗಿದೆ. ಈಶಾನ್ಯ ರಾಜ್ಯಗಳ ಪ್ರಮುಖ ಸಂಪರ್ಕ ಕೊಂಡಿಯೂ ಹೌದು. ಮೇಲ್ಸೇ ತುವೆ ಕೆಳಭಾಗದಲ್ಲಿ ಎರಡು ರೈಲ್ವೆ ಮಾರ್ಗಗಳು ಹಾದು ಹೋಗಿದ್ದರೆ, ಅದರ ಮೇಲೆ ಮೂರು ಪಥಗಳ ರಸ್ತೆ ಇದೆ.

ಬೋಗಿಬೆಲ್ ಸೇತುವೆ

 • ಬೋಗಿಬೆಲ್ ಸೇತುವೆಯು ದಹಜಿ ಜಿಲ್ಲೆಯ ಮತ್ತು ದಿಬ್ರುಗಢ ಜಿಲ್ಲೆಯ ನಡುವೆ ಈಶಾನ್ಯ ಭಾರತದ ಅಸ್ಸಾಂನ ಬ್ರಹ್ಮಪುತ್ರಾ ನದಿಗೆ ಸೇರಿದ ಒಂದು ಸಂಯೋಜಿತ ರಸ್ತೆ ಮತ್ತು ರೈಲು ಸೇತುವೆಯಾಗಿದೆ.
 • ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಯಿಂದ ಕೇವಲ 20 ಕಿ.ಮೀ ದೂರದಲ್ಲಿ ಈ ಸೇತುವೆ ಇದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಸುಮಾರು 5 ಮಿಲಿಯನ್ ಜನರಿಗೆ ಸಂಪರ್ಕ ಕಲ್ಪಿಸುವ ಕೊಜಿಯಾ ಬೊಮೊರ ಸೇತು, ತೇಜ್ಪುರ್ಗೆ ಪರ್ಯಾಯವಾಗಿ ಈ ಸೇತುವೆ ಕಾರ್ಯನಿರ್ವಹಿಸುತ್ತದೆ.
 • ಬೋಗಿಬೀಲ್ ಅಸ್ಸಾಂನ ಬ್ರಹ್ಮಪುತ್ರ ನದಿಯ ನಾಲ್ಕನೇ ರೈಲು-ರಸ್ತೆ ಸೇತುವೆಯಾಗಿದೆ

ಮಹಾರಾಷ್ಟ್ರದಲ್ಲಿ ಎಪಿಎಂಸಿ ಕಾಯಿದೆ ತಿದ್ದುಪಡಿ ವಾಪಸ್‌

7.

ಸುದ್ಧಿಯಲ್ಲಿ ಏಕಿದೆ ? ಮಹಾರಾಷ್ಟ್ರ ಸರಕಾರ ಎಪಿಎಂಸಿ ಕಾಯಿದೆಗೆ ತಂದಿದ್ದ ತಿದ್ದುಪಡಿಯನ್ನು ಒಂದೇ ದಿನದಲ್ಲಿ ದಿಢೀರ್‌ ಹಿಂತೆಗೆದುಕೊಂಡಿದೆ!

ತಿದ್ದುಪಡಿಯಲ್ಲಿ ಏನಿತ್ತು ?

 • ತಿದ್ದುಪಡಿ ಪ್ರಕಾರ ಎಪಿಎಂಸಿ ವ್ಯಾಪ್ತಿಯ ಹೊರಗೆಯೂ ರೈತರಿಗೆ ಎಲ್ಲ ಕೃಷಿ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಎಪಿಎಂಸಿಗಳು ಇದನ್ನು ವಿರೋಧಿಸಿದ್ದವು. ನವೆಂಬರ್‌ 27ರಂದು ತಿದ್ದುಪಡಿಯನ್ನು ಅಂಗೀಕರಿಸಲಾಗಿತ್ತು.
 • ಕೃಷಿ ಉತ್ಪನ್ನ ಮಾರುಕಟ್ಟೆಯ (ಎಪಿಎಂಸಿ) ವಿಕೇಂದ್ರೀಕರಣದ ಉದ್ದೇಶ ಇದಕ್ಕಿತ್ತು.ಆದರೆ ನ.27 ಮತ್ತು 28ರಂದು ರಾಜ್ಯಾದ್ಯಂತ ಎಪಿಎಂಸಿಗಳು ಮುಷ್ಕರದ ಪರಿಣಾಮ ಸ್ಥಗಿತವಾಗಿತ್ತು.

ತಿದ್ದುಪಡಿ ಮಾಡಿದ್ದೇಕೆ?

 • ಅತ್ಯವಶ್ಯಕ ಹಾಗೂ ಮಹತ್ವದ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಕಾಯಿದೆಯಿಂದ ಬೇರ್ಪಡಿಸಿ, ರೈತರಿಗೆ ಎಪಿಎಂಸಿಯಿಂದ ಹೊರಗೆಯೂ ಮುಕ್ತವಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸುವ ಮೂಲಕ ಸುಧಾರಣೆಗೆ ಮಹಾರಾಷ್ಟ್ರ ಸರಕಾರ ಮುಂದಾಗಿತ್ತು. ಇದರಿಂದ ರೈತರ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ದರ ಸಿಗಬಹುದು ಎಂದು ಭಾವಿಸಲಾಗಿತ್ತು.
 • ಈ ನಿಟ್ಟಿನಲ್ಲಿ ಸರಕಾರ ಮಹಾರಾಷ್ಟ್ರ ಕೃಷಿ ಉತ್ಪನ್ನ ಮಾರುಕಟ್ಟೆ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1963ಕ್ಕೆ ತಿದ್ದುಪಡಿ ತರಲು ಮುಂದಾಗಿತ್ತು. ಆದರೆ ವರ್ತಕರು, ಕಮೀಶನ್‌ ಏಜೆಂಟರು, ಕಾರ್ಮಿಕರು ಈ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಲು ತೀವ್ರವಾಗಿ ಒತ್ತಾಯಿಸಿದ್ದರು.

ಎಪಿಎಂಸಿ ಕಾಯಿದೆ ಏಕೆ?

 • ಎಪಿಎಂಸಿ ಕಾಯಿದೆಯು 1963ರಲ್ಲಿ ಜಾರಿಯಾಗಿತ್ತು. ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ, ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದು ಇದರ ಉದ್ದೇಶವಾಗಿತ್ತು. ಎಪಿಎಂಸಿಗಳಲ್ಲಿ ಹರಾಜು ಕೇಂದ್ರ, ಅಳತೆ ಮಾಪನ ವ್ಯವಸ್ಥೆ, ಗೋದಾಮು, ಮೇಲುಸ್ತುವಾರಿ ಇತ್ಯಾದಿ ಮೂಲ ಸೌಕರ್ಯ ಒದಗಿಸಲಾಗುತ್ತಿದೆ.
 • ಹೀಗಿದ್ದರೂ, ಎಪಿಎಂಸಿ ಮಾರುಕಟ್ಟೆಯನ್ನು ವಿಕೇಂದ್ರೀರಣಗೊಳಿಸಬೇಕು ಹಾಗೂ ಮತ್ತಷ್ಟು ಸುಧಾರಣೆ ಮಾಡಬೇಕು ಎಂಬ ಒತ್ತಾಯವೂ ಇತ್ತು. ಎಪಿಎಂಸಿ ಮಾರುಕಟ್ಟೆಗಳಲ್ಲಿ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿಲ್ಲ. ಜತೆಗೆ ರೈತರೂ ಉತ್ಪನ್ನಗಳ ಸಾಗಣೆ ವೆಚ್ಚ ಹೊರತುಪಡಿಸಿ, ನಾನಾ ಶುಲ್ಕ, ಕಮೀಶನ್‌ ಕೊಡಬೇಕಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು. ಎಪಿಎಂಸಿಗಳಲ್ಲಿ ಹಲವು ಸ್ತರಗಳಲ್ಲಿ ನಿರ್ವಹಣೆಯಾಗುತ್ತದೆ. ಮುಕ್ತ ಮಾರುಕಟ್ಟೆ ಒದಗಿಸುವುದರಿಂದ ಸ್ಪರ್ಧಾತ್ಮಕ ದರ ದೊರೆಯಲಿದೆ ಎಂಬ ವಾದವೂ ಇತ್ತು.

ಎಪಿಎಂಸಿ ರದ್ದುಪಡಿಸಿದ ರಾಜ್ಯಗಳು

 • ಬಿಹಾರ 2006ರಲ್ಲಿ ಎಪಿಎಂಸಿ ಕಾಯಿದೆಯನ್ನೇ ರದ್ದುಪಡಿಸಿತ್ತು. ಮಧ್ಯಪ್ರದೇಶ ಮತ್ತು ದಿಲ್ಲಿಯಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇನ್ನೂ ಕೆಲ ರಾಜ್ಯಗಳು ಹಣ್ಣು-ತರಕಾರಿಗಳನ್ನು ಹೊರಗಿಟ್ಟಿವೆ.

ಮಹಾರಾಷ್ಟ್ರದಲ್ಲಿ 305 ಎಪಿಎಂಸಿ ಮಾರುಕಟ್ಟೆ

 • ಮಹಾರಾಷ್ಟ್ರದಲ್ಲಿ 305 ಪ್ರಮುಖ ಎಪಿಎಂಸಿ ಮಾರುಕಟ್ಟೆ ಅಥವಾ ನಿಯಂತ್ರಿತ ಮಂಡಿಗಳಿವೆ. ವಾರ್ಷಿಕ 50,000 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿವೆ.

ಬ್ಯಾಂಕ್​ಗಳಲ್ಲಿ ಏಕರೂಪ ಬಡ್ಡಿದರ ನಿಗದಿ ಸಾಧ್ಯತೆ

8.

ಸುದ್ಧಿಯಲ್ಲಿ ಏಕಿದೆ ?ಮುಂದಿನ ಆರ್ಥಿಕ ವರ್ಷದಿಂದ ಗೃಹ, ವಾಹನ ಹಾಗೂ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿದರ ಎಲ್ಲ ಬ್ಯಾಂಕ್​ಗಳಲ್ಲಿ ಏಕರೂಪಗೊಳ್ಳುವ ಸಾಧ್ಯತೆಯಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಪ್ರಸ್ತಾವನೆ ಮುಂದಿಟ್ಟಿದೆ.

 • ಪ್ರಸ್ತುತ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳು ಗೃಹಸಾಲದ ಮಿತಿ ಮತ್ತು ಬಡ್ಡಿದರವನ್ನು ನಿರ್ಧಾರ ಮಾಡುತ್ತಿವೆ. ಜತೆಗೆ ತೀರಾ ವಿರಳವಾಗಿ ಬಡ್ಡಿದರವನ್ನು ಬದಲಾಯಿಸಲಾಗುತ್ತದೆ. ಆದರೆ ಮಾರುಕಟ್ಟೆ ಆಧಾರಿತ ಬಡ್ಡಿದರ ವ್ಯವಸ್ಥೆ ಜಾರಿಯಾದರೆ, ರಿಟೇಲ್ ಸಾಲ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಏರಿಳಿಕೆ, ದರ ಕಡಿತ ಮತ್ತು ಬೆಲೆ ಏರಿಕೆಯನ್ನು ಆಧರಿಸಿ ಬಡ್ಡಿದರ ಬದಲಾಗಲಿದೆ. ಹೀಗಾಗಿ ಸಾಲಗಳ ಮೇಲಿನ ಬಡ್ಡಿದರ ಮಾರುಕಟ್ಟೆಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.
 • ವಿವಿಧ ಬ್ಯಾಂಕುಗಳು ವಿಭಿನ್ನ ಬಡ್ಡಿದರ ನಿಗದಿ ಮಾಡುತ್ತಿದ್ದು, ಪಾರದರ್ಶಕತೆ ಕೊರತೆ ಇದೆ ಎಂದು ಗ್ರಾಹಕರು ದೂರಿದ್ದರು. ಈ ಹಿನ್ನೆಲೆಯಲ್ಲಿ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ ಲೆಂಡಿಂಗ್ ರೇಟ್ (ಎಂಸಿಎಲ್​ಆರ್) ಬದಲು ಬಾಹ್ಯ ಮಾನದಂಡ (ಎಕ್ಸ್​ಟರ್ನಲ್ ಬೆಂಚ್​ವಾರ್ಕ್) ಆಧಾರಿತವಾಗಿ ಬಡ್ಡಿದರ ನಿಗದಿಪಡಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಲು ಆರ್​ಬಿಐ ಮುಂದಾಗಿದೆ.
 • ಇದರಂತೆ ಆರ್​ಬಿಐನ ರೆಪೋದರ, ಸರ್ಕಾರದ 91 ದಿನಗಳ ಟ್ರೆಷರಿ ಬಿಲ್ ಮೇಲಿನ ಗಳಿಕೆ, ಸರ್ಕಾರದ 182 ದಿನಗಳ ಟ್ರಷರಿ ಬಿಲ್ ಮೇಲಿನ ಗಳಿಕೆ ಇಲ್ಲವೇ ಫೈನಾನ್ಶಿಯಲ್ ಬೆಂಚ್​ವಾರ್ಕ್ಸ್ ಆಫ್ ಇಂಡಿಯಾ ನಿಗದಿಪಡಿಸುವ ಬಡ್ಡಿದರಗಳಲ್ಲಿ ಯಾವುದಾದರೂ ಒಂದು ಬಡ್ಡಿದರವನ್ನು ಎಲ್ಲ ಬ್ಯಾಂಕ್​ಗಳು ಅನುಸರಿಸುವುದು ಕಡ್ಡಾಯವಾಗಲಿದೆ.
 • ಬ್ಯಾಂಕ್​ಗಳ ಮೂಲ ಬೆಲೆ ಆಧರಿಸಿ ಬಡ್ಡಿದರಗಳನ್ನು ನಿಗದಿಪಡಿಸುವ ಪದ್ಧತಿ 2016ರವರೆಗೆ ಜಾರಿಯಲ್ಲಿತ್ತು. ಆನಂತರದಲ್ಲಿ ಇದನ್ನು ಎಂಸಿಎಲ್​ಆರ್ ಆಧರಿತವಾಗಿ ನಿಗದಿಪಡಿಸುವ ಪದ್ಧತಿ ಜಾರಿಗೆ ಬಂದಿತ್ತು.

ಬಾಹ್ಯ ಮಾನದಂಡಗಳ ಅಗತ್ಯತೆ ಏನು?

 • ನಿಧಿ ಆಧಾರಿತ ದರದ ಸಾಲ (ಎಂಸಿಆರ್ಆರ್) ಅಥವಾ ಹಿಂದಿನ ಆಡಳಿತದ ಮೂಲ ದರವು ಪ್ರಸ್ತುತ ಬ್ಯಾಂಕುಗಳ ಆಂತರಿಕ ಅಂಶಗಳ ಆಧಾರದ ಮೇಲೆ ಲೆಕ್ಕಹಾಕಲ್ಪಟ್ಟಿರುವ ಪ್ರಸ್ತುತ ಸಾಲದ ದರ ನಿಯಂತ್ರಣ, ಅಂದರೆ ಹಣದ ವೆಚ್ಚ ಎಂದು ಅಧ್ಯಯನದ ಗುಂಪು ಕಂಡುಹಿಡಿದಿದೆ. ಅವರು ನೀತಿ ಬಡ್ಡಿದರದ ಅಥವಾ ರೆಪೋ ದರದಲ್ಲಿ ಬದಲಾವಣೆಗಳಿಗೆ ಸೂಕ್ಷ್ಮವಲ್ಲದವರಾಗಿದ್ದಾರೆ. ಗುಂಪಿನ ವಿಶ್ಲೇಷಣೆಯು ಬೇಸ್ ದರ ಮತ್ತು MCLR ಅನ್ನು ಬೇಸ್ ದರವನ್ನು ಹೆಚ್ಚಿಸಲು ಅಥವಾ ನಿಧಿಸಂಸ್ಥೆಯ ಬೆಲೆಗೆ ಅನುಗುಣವಾಗಿ ಬೀಳದಂತೆ ತಡೆಗಟ್ಟಲು ನಿಗದಿತ ವಿಧಾನಗಳ ಮೂಲಕ ತಾತ್ಕಾಲಿಕ ವಿಧಾನದಲ್ಲಿ ಬದಲಾವಣೆ ಮಾಡಿದೆ ಎಂದು ಸೂಚಿಸಿದೆ

ನಿಧಿಸಂಸ್ಥೆಗಳ ಆಧಾರದ ಮೇಲೆ ಸಾಲ ದರ (MCLR)

 • ನಿಧಿ ಆಧರಿತ ಸಾಲ ದರ (ಎಮ್ಸಿಆರ್ಆರ್) ನ ಕನಿಷ್ಠ ವೆಚ್ಚವು ಆರ್ಬಿಐ ಅನುಮತಿಸಿದ ಕೆಲವು ಸಂದರ್ಭಗಳಲ್ಲಿ ಹೊರತುಪಡಿಸಿ ಸಾಲ ನೀಡಲು ಸಾಧ್ಯವಿಲ್ಲದ ಬ್ಯಾಂಕ್ನ ಕನಿಷ್ಠ ಬಡ್ಡಿ ದರವನ್ನು ಸೂಚಿಸುತ್ತದೆ. ಇದು ಬ್ಯಾಂಕಿನ ಆಂತರಿಕ ಮಾನದಂಡ ಅಥವಾ ಉಲ್ಲೇಖ ದರವಾಗಿದೆ.
 • MCLR ನಿಜವಾಗಿ ಸಾಲಕ್ಕೆ ಕನಿಷ್ಠ ಬಡ್ಡಿದರವನ್ನು ಬ್ಯಾಂಕು ನಿರ್ಧರಿಸುತ್ತದೆ – ವಿಧಾನವನ್ನು ಕನಿಷ್ಠ ವೆಚ್ಚದ ಆಧಾರದ ಮೇಲೆ ಅಥವಾ ಭವಿಷ್ಯದ ಸಾಲಗಾರನಿಗೆ ಮತ್ತಷ್ಟು ರೂಪಾಯಿ ನಿಗದಿಪಡಿಸುವ ಹೆಚ್ಚುವರಿ ಅಥವಾ ಹೆಚ್ಚಳದ ವೆಚ್ಚವನ್ನು ವಿವರಿಸುತ್ತದೆ.

ಶತ್ರು ರಾಡಾರ್​ಗಳಿಂದ  ಸೈನಿಕರನ್ನು ರಕ್ಷಿಸಲು ವಿಶೇಷ ವಸ್ತು ಅಭಿವೃದ್ಧಿ

ಸುದ್ಧಿಯಲ್ಲಿ ಏಕಿದೆ ?ಶತ್ರುಗಳ ರಡಾರ್​ ಕಣ್ಣಿಗೆ ಕಾಣದಂತೆ ನಮ್ಮ ಸೈನಿಕರು ಮತ್ತು ಸೇನೆಯ ವಾಹನಗಳನ್ನು ರಕ್ಷಿಸುವ ವಿಶೇಷ ವಸ್ತುವೊಂದನ್ನು ಐಐಟಿ ಕಾನ್ಪುರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

 • ಇನ್ಫ್ರಾರೆಡ್​ ಮೆಟಾ ಮೆಟೀರಿಯಲ್​ ಎಂಬ ವಸ್ತು ಬಟ್ಟೆಯಂತಿದ್ದು ಅದರಿಂದ ನಮ್ಮ ಸೈನಿಕರಿಗೆ ಯೂನಿಫಾರ್ಮ್​ ಸಿದ್ಧಪಡಿಸಬಹುದು ಮತ್ತು ಸೇನೆ ಬಳಸುವ ವಾಹನಗಳ ಮೇಲೆ ಅಂಟಿಸಬಹುದು. ಈ ಮೂಲಕ ನಮ್ಮ ಸೈನಿಕರು ಮತ್ತು ವಾಹನಗಳನ್ನು ಮೂಲಕ ಶತ್ರುರಾಷ್ಟ್ರಗಳ ಅತ್ಯಾಧುನಿಕ ರಡಾರ್​ಗಳು, ಮೋಷನ್​ ಡಿಟೆಕ್ಟಿಂಗ್​ ಗ್ರೌಂಡ್​ ಸೆನ್ಸಾರ್ಡ್​ ಮತ್ತು ಥರ್ಮಲ್​ ಇಮೇಜಿಂಗ್​ ಸ್ಟಿಸ್ಟಮ್​ಗಳ ಕಣ್ಣಿಗೆ ಕಾಣದಂತೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
 • ಪಾರದರ್ಶಕ ಮೆಟಾ ಮೆಟೀರಿಯಲ್​ ಅಬ್ಸಾರ್ಬರ್​ಗಳನ್ನು ವಾಹನಗಳ ಕಿಟಕಿ ಗಾಜುಗಳಿಗೆ ಅಂಟಿಸಬಹುದು ಮತ್ತು ಹೆಲಿಕಾಪ್ಟರ್​ಗಳ ಮೇಲ್ಭಾಗದಲ್ಲಿ ಅಂಟಿಸಬಹುದು. ವಿಮಾನಗಳಲ್ಲಿ ಬಳಕೆ ಮಾಡಲು ಮೆಟಾ ಮೆಟೀರಿಯಲ್​ ಅಬ್ಸಾರ್ಬರ್​ಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ವಸ್ತುವನ್ನು ಎಲ್ಲ ವಾತಾವರಣದಲ್ಲಿ ಬಳಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
 • ಈಗಾಗಲೇ ಶತ್ರು ರಾಷ್ಟ್ರಗಳ ರಡಾರ್​ಗಳು ಪತ್ತೆ ಹಚ್ಚಲು ಸಾಧ್ಯವಾಗದಂತಹ ವಿಮಾನಗಳನ್ನು ಬಳಸಾಗುತ್ತಿದೆ. ಆದರೆ ಅದರಲ್ಲಿ ವಿಮಾನ ಮೇಲ್ಭಾಗದಲ್ಲಿ ಬಳಕೆ ಮಾಡುವ ಸೆರಾಮಿಕ್​ ಟೈಲ್ಸ್​ಗಳು ಹೆಚ್ಚು ಭಾರ ಹೊಂದಿರುತ್ತವೆ. ಆದರೆ ಈಗ ಅಭಿವೃದ್ಧಿ ಪಡಿಸಿರುವ ಮೆಟಾ ಮೆಟೀರಿಯಲ್​ ಆಧಾರಿತ ಅಬ್ಸಾರ್ಬರ್​ಗಳು ಹಗುರವಾಗಿದ್ದು, ತೆಳುವಾಗಿದ್ದು ಸುಲಭವಾಗಿ ಬಳಸಬಹುದಾಗಿದೆ. ಪ್ರಯೋಗಾಲಯದಲ್ಲಿ ಈ ವಸ್ತುವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದು, ಫೀಲ್ಡ್​ ಟೆಸ್ಟ್​ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ

ಮೃತಳ ಗರ್ಭಾಶಯದಿಂದ ಮಗು

10.

ಸುದ್ಧಿಯಲ್ಲಿ ಏಕಿದೆ ?ಬ್ರೆಜಿಲ್​ನ ವಿಜ್ಞಾನಿಗಳು ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೃತ ದಾನಿಯಿಂದ ಪಡೆದ ಗರ್ಭಕೋಶವನ್ನು ಇನ್ನೊಂದು ಮಹಿಳೆಗೆ ಕಸಿ ಮಾಡಿದ್ದು, ಈಗ ಹೆಣ್ಣುಮಗುವೊಂದರ ಜನನವಾಗಿದೆ. ಮೃತ ದಾನಿಯ ಗರ್ಭಕೋಶ ಕಸಿ ಮಾಡಿ, ಮಗು ಜನಿಸಿದ ಮೊದಲ ಪ್ರಕರಣ ಇದಾಗಿದೆ.

ಹಿನ್ನಲೆ

 • ಪಾರ್ಶ್ವವಾಯು ಪೀಡಿತರಾಗಿ ಮೃತಪಟ್ಟಿದ್ದ 45 ವರ್ಷದ ಮಹಿಳೆಯ ಗರ್ಭಕೋಶವನ್ನು, ಹುಟ್ಟಿನಿಂದಲೇ ಗರ್ಭಕೋಶ ಹೊಂದಿರದ 32 ವರ್ಷದ ಮಹಿಳೆಗೆ ಕಸಿ ಮಾಡಲಾಗಿತ್ತು.
 • ಧಮನಿ, ಅಪಧಮನಿ, ಅಸ್ಥಿರಜ್ಜು ಮತ್ತು ಯೋನಿನಾಳವನ್ನು ಗರ್ಭಾಶಯ ಧಮನಿ, ಅಪಧಮನಿ, ಅಸ್ಥಿರಜ್ಜು ಮತ್ತು ಯೋನಿನಾಳದೊಂದಿಗೆ ಅತ್ಯಂತ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ ಮೂಲಕ ಜೋಡಣೆ ಮಾಡಲಾಯಿತು ಎಂದು ಲ್ಯಾನ್ಸಟ್ ಮೆಡಿಕಲ್ ಜರ್ನಲ್​ನಲ್ಲಿ ವಿವರಿಸಲಾಗಿದೆ.

10 ಬಾರಿ ವಿಫಲ

 • ಮೃತ ದಾನಿಯಿಂದ ಪಡೆದ ಗರ್ಭ ಕೋಶವನ್ನು ಕಸಿ ಮಾಡಿ, ಮಗುವನ್ನು ಹೊಂದುವಂತೆ ಮಾಡಲು ಈ ಹಿಂದೆ ಅಮೆರಿಕ, ಜೆಕ್ ಗಣರಾಜ್ಯ ಮತ್ತು ಟರ್ಕಿಗಳಲ್ಲಿ 10 ಬಾರಿ ಪ್ರಯತ್ನಿಸಿ, ವಿಫಲವಾಗಿತ್ತು.

ವರದಾನ

 • ಈ ಪ್ರಯೋಗ ಗರ್ಭಕೋಶ ಫಲವತ್ತತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ವರದಾನವಾಗಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ವೈದ್ಯ ಡ್ಯಾನಿ ಜೆಂಬರ್ಗ್ ಹೇಳಿದ್ದಾರೆ.

ಸಾವೊ ಪಾಲೋ ವಿವಿ ಪ್ರಯೋಗ

 • ಬ್ರೆಜಿಲ್​ನ ಸಾವೊ ಪಾಲೋ ವಿಶ್ವವಿದ್ಯಾಲಯದ ವೈದ್ಯ ಡ್ಯಾನಿ ಜೆಂಬರ್ಗ್ ಈ ಪ್ರಯೋಗ ನಡೆಸಿದ್ದರು.
 • 2016ರ ಸೆಪ್ಟೆಂಬರ್​ನಲ್ಲಿ ಮೃತಪಟ್ಟಿದ್ದ ಮಹಿಳೆಯ ಗರ್ಭಾಶಯವನ್ನು 32 ವರ್ಷದ ಮಹಿಳೆಗೆ ಕಸಿ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ 5 ತಿಂಗಳ ನಂತರ ಗರ್ಭಕೋಶ ಚೆನ್ನಾಗಿ ಹೊಂದಿಕೊಂಡಿರುವ ಕುರುಹು ತೋರಿತ್ತು.
 • ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಮಾಡಿದಾಗ ಇದು ಖಚಿತಪಟ್ಟಿತ್ತು. ಈ ಮಹಿಳೆಯ ಅಂಡಾಣು ಪಡೆದು ವೀರ್ಯದೊಂದಿಗೆ ಫಲೀಕರಿಸಲಾಗಿತ್ತು. ಏಳು ತಿಂಗಳು 10 ದಿನಗಳ ಬಳಿಕ ಫಲೀಕರಿಸಲಾಗಿದ್ದ ಅಂಡಾಣುವನ್ನು ಕಸಿ ಮಾಡಲ್ಪಟ್ಟಿದ್ದ ಗರ್ಭಕೋಶದೊಳಗೆ ಇರಿಸಲಾಗಿತ್ತು. 35 ವಾರ ಮತ್ತು ಮೂರು ದಿನಗಳ ಬಳಿಕ ಈ ಮಹಿಳೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣುಮಗುವಿಗೆ ಜನ್ಮ ನೀಡಿದಳು ಎಂದು ಜೆಂಬರ್ಗ್ ತಿಳಿಸಿದ್ದಾರೆ.

ಭಾರತದ ಮೊದಲ ಖಾಸಗಿ ವಾಣಿಜ್ಯ ಸಂಸ್ಥೆ ನಿರ್ಮಿತ ಉಪಗ್ರಹ

11.

ಸುದ್ಧಿಯಲ್ಲಿ ಏಕಿದೆ ? ಎಲನ್ ಮಸ್ಕ್ ನೇತೃತ್ವದ ಅಮೆರಿಕ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್ (SpaceX), ಭಾರತ ಮೊದಲ ಖಾಸಗಿ ನಿರ್ಮಿತ ಎಕ್ಸೀಡ್ ಸ್ಯಾಟ್-1 (Exceed Sat I) ಉಪಗ್ರಹವನ್ನು ಉಡ್ಡಯನಗೊಳಿಸಿತ್ತು.

 • ಇದೇ ಸಂದರ್ಭದಲ್ಲಿ 17 ದೇಶಗಳ ಒಟ್ಟು 63 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸಿತ್ತು.
 • ಇದರೊಂದಿಗೆ ಮುಂಬಯಿ ತಳಹದಿಯ ಎಕ್ಸೀಡ್ ಸಂಸ್ಥೆಯು, ಬಾಹ್ಯಾಕಾಶಕ್ಕೆ ಉಪಗ್ರಹವನ್ನು ರವಾನಿಸಿದ ಭಾರತದ ಮೊದಲ ಖಾಸಗಿ ವಾಣಿಜ್ಯ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ.

ಎಕ್ಸೀಡ್ ಸ್ಯಾಟ್-1

 • ಸಣ್ಣದಾದ ಸಂವಹನ ಉಪಗ್ರಹವಾಗಿರುವ ಎಕ್ಸೀಡ್ ಸ್ಯಾಟ್ 1, ಕೇವಲ ಒಂದು ಕೆ.ಜಿ ಭಾರ ಹಾಗೂ ಕಾಫಿ ಲೋಟದಷ್ಟು ಎತ್ತರವನ್ನು ಮಾತ್ರ ಪಡೆದಿದೆ.
 • ಇದೊಂದು ಓಪನ್ ರೆಡಿಯೋ ಟ್ರಾನ್ಸ್‌ಪಾಂಡರ್ ಆಗಿದ್ದು, ಮುಖ್ಯ ಉದ್ದೇಶ ಹವ್ಯಾಸಿ ರೆಡಿಯೋ ಸಮುದಾಯಕ್ಕೆ ನೆರವಾಗುವುದಾಗಿದೆ. ಪ್ರಮುಖವಾಗಿಯೂ ದುರಂತದ ಸಮಯದಲ್ಲಿ ದೇಶಕ್ಕೆ ನೆರವಾಗಲಿದೆ.
 • ಹೆಚ್ಚು ಖರ್ಚು ವೆಚ್ಚ ಮಾಡದೆ ವಾಣಿಜ್ಯ ಉಪಗ್ರಹ ಸಿದ್ಧ ಮಾಡಬಹುದು ಎಂಬುದನ್ನು ಎಕ್ಸೀಡ್ ನಿರೂಪಿಸಿದೆ.
 • 18 ತಿಂಗಳುಗಳ ಅವಧಿಯಲ್ಲಿ ನಿರ್ಮಿತವಾಗಿರುವ ಉಪಗ್ರಹದ ನೆರವನ್ನು ಜನರು ಟಿವಿ ಟ್ಯೂನರ್ ಸಹಾಯದಿಂದ 9 ಮೆಗಾಹರ್ಟ್ಸ್ ತರಂಗಾರತರದ ಸಿಗ್ನಲ್‌ಗಳಲ್ಲಿ ಪಡೆಯಬಹುದಾಗಿದೆ.

Related Posts
“21 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಂಗಳೂರು, ಹಾಸನಕ್ಕೂ ಕರಾವಳಿ ಕಂಬಳ ಖದರ್ ಸುದ್ಧಿಯಲ್ಲಿ ಏಕಿದೆ ?ಕರಾವಳಿ ಮಣ್ಣಿನ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಇಲ್ಲಿಗಷ್ಟೇ ಸೀಮಿತವಾಗದೆ ರಾಜ್ಯದ ಇತರ ಕಡೆಗಳಲ್ಲೂ ಜನಪ್ರಿಯಗೊಳಿಸಲು ಕಂಬಳ ಅಕಾಡೆಮಿ ಮುಂದಾಗಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿನ ದೊಡ್ಡಾಲದಮರ ಬಳಿ ಕರಾವಳಿ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ 10 ಎಕರೆ ಪ್ರದೇಶದಲ್ಲಿ ...
READ MORE
“1st ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾತ್ಸಲ್ಯ ವಾಣಿ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರಿಗೆ ದೂರವಾಣಿಯಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರಕಾರ ‘ವಾತ್ಸಲ್ಯ ವಾಣಿ- 104’ ಯೋಜನೆ ಜಾರಿಗೆ ತಂದಿತು. ಇದು ...
READ MORE
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ ಚಂದ್ರನ ಮೂಲ ಮತ್ತು ಅದರ ವಿಕಾಸದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್​ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಇತ್ತೀಚೆಗೆ ನಡೆದ ತಜ್ಞರ ಸಭೆಯಲ್ಲಿ ಚಂದ್ರಯಾನ-2 ನೌಕೆಯನ್ನು ಮತ್ತಷ್ಟು ...
READ MORE
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾತೃಪೂರ್ಣ ಯೋಜನೆ  ಸುದ್ಧಿಯಲ್ಲಿ ಏಕಿದೆ ? ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ. ವಿಫಲವಾಗಲು ಕಾರಣ ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ...
READ MORE
ಡಿಜಿಟಲ್ ಇಂಡಿಯಾ
ಡಿಜಿಟಲ್ ಇಂಡಿಯಾ ಸರ್ಕಾರದ ಪ್ರತಿ ಇಲಾಖೆಯನ್ನು ಒಳಗೊಂಡು, ಸಂಪೂರ್ಣ ಅಧುನಿಕರಣ, ತ್ವರಿತ ಸೇವೆಯ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಇಡಿಯಾ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, 1 ಲಕ್ಷ ಕೋಟಿ ರೂಗಳ ಇ ಯೋಜನೆ ...
READ MORE
“23rd ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಸ್ಪೀಡ್‌ ಪೋಸ್ಟ್‌ ಸುದ್ಧಿಯಲ್ಲಿ ಏಕಿದೆ ?ಗ್ರಾಹಕರ ಸಮಯ ಉಳಿತಾಯದೊಂದಿಗೆ ಸುಗಮ ಹಾಗೂ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಅಂಚೆ ಇಲಾಖೆಯು 'ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌' ಅಳವಡಿಕೆ ಮಾಡಿದೆ. ಎಟಿಎಂ ಮಾದರಿಯಲ್ಲಿರುವ 'ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌' ಯಂತ್ರವನ್ನು ದೇಶದಲ್ಲೇ ಮೊದಲ ಬಾರಿಗೆ ನಗರದ ಪ್ರಧಾನ ಅಂಚೆ ...
READ MORE
ಜೈವಿಕ ಇಂಧನ-II
ಕರ್ನಾಟಕದಲ್ಲಿ ಜೈವಿಕ ಇಂಧನ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕುರಿತ ಅಧ್ಯಯನವು ಸುಮಾರು ಎರಡು ದಶಕಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ಸೂತ್ರ ವಿಭಾಗದಿಂದ(Sustainable Transformation of Rural Area SuTRA) ಪ್ರಾರಂಭವಾಗಿತ್ತು. ಕೇಂದ್ರ ಸರ್ಕಾರದ ಯೋಜನಾ ಆಯೋಗದ ಡಾ|| ದೀನಾನಾಥ್ ತಿವಾರಿ ಅವರ ...
READ MORE
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳ್ಳಂದೂರು ಕೆರೆ ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ. ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ...
READ MORE
“5th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ರತ್ನಖಚಿತ ಸಿಂಹಾಸನ ಸುದ್ಧಿಯಲ್ಲಿ ಏಕಿದೆ ?ಪಾರಂಪರಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರೆಯ ಸಂಭ್ರಮ ಕಳೆಗಟ್ಟಲಾರಂಭಿಸಿದ್ದು, ಅರಮನೆಯಲ್ಲಿ ಧಾರ್ವಿುಕ ವಿಧಾನಗಳಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯವೂ ನೆರವೇರಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಸಿಂಹಾಸನದಲ್ಲಿ ವಿರಾಜಮಾನರಾಗಿ ಖಾಸಗಿ ದರ್ಬಾರ್ ...
READ MORE
“10th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಭಾರತೀಯ ಪುರಾತತ್ವ ಇಲಾಖೆ ಸುದ್ದಿಯಲ್ಲಿ ಏಕಿದೆ? ತಾಜ್‌ ಸಂರಕ್ಷಣೆಗೆ ಸಂಬಂಧಿಸಿ ನಡೆದ ವಿಚಾರಣೆಯಲ್ಲಿ ಎಎಸ್‌ಐಯನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ವಿಶ್ವ‍ಪ್ರಸಿದ್ಧ ಪ್ರೇಮ ಸ್ಮಾರಕ, ಅಮೃತಶಿಲೆಯ ತಾಜ್‌ಮಹಲ್‌ನ ಗೋಡೆಗಳಲ್ಲಿ ಕಾಣಿಸಿಕೊಂಡಿರುವ ಪಾಚಿ ಆತಂಕಕ್ಕೆ ಕಾರಣವಾಗಿದೆ. ತಾಜ್‌ಮಹಲ್‌ನ ಇತ್ತೀಚಿನ ಚಿತ್ರಗಳನ್ನು ಪರಿಶೀಲಿಸಿದ ಪೀಠವು, ಗೋಡೆಗಳಲ್ಲಿ ಕ್ರಿಮಿ ...
READ MORE
“21 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“1st ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಡಿಜಿಟಲ್ ಇಂಡಿಯಾ
“23rd ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಜೈವಿಕ ಇಂಧನ-II
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“5th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
“10th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *