“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಓಝೋನ್​ ಪದರ ರಂಧ್ರ ಕ್ರಮೇಣ ಕ್ಷೀಣ

1.

ಸುದ್ಧಿಯಲ್ಲಿ ಏಕಿದೆ ?ಭೂಮಿಯನ್ನು ಸೂರ್ಯನ ನೇರಳೆ ಕಿರಣಗಳಿಂದ ರಕ್ಷಣೆ ಮಾಡುವ ಓಝೋನ್​ ಪದರ ಸವಕಳಿ ಸುಧಾರಿಸುತ್ತಿದ್ದು ಪದರಕ್ಕೆ ಆಗಿದ್ದ ಹಾನಿ ಕ್ರಮೇಣ ಸರಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಹಿನ್ನೆಲೆ

 • ಓಝೋನ್​ ಪದರ 1970ನೇ ಇಸ್ವಿಯಿಂದೀಚೆಗೆ ತೆಳುವಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿ, ಅದರಿಂದ ಮುಂದಾಗಬಹುದಾದ ಕೆಟ್ಟ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪದರಕ್ಕೆ ಧಕ್ಕೆಯುಂಟುಮಾಡುವ ಏರೋಸೆಲ್​ ಸಿಂಪಡಣೆ, ಶೈತ್ಯಕಾರಕ ವಸ್ತುಗಳ ಬಳಕೆಯನ್ನು ವಿಶ್ವದಾದ್ಯಂತ ಹಂತಹಂತವಾಗಿ ಸ್ಥಗಿತಗೊಳಿಸಲು ಸೂಚಿಸಿದ್ದರು.
 • ಪರಿಣಾಮವಾಗಿ ಓಝೋನ್​ ಪದರಕ್ಕಾದ ಹಾನಿ ಸರಿಯಾಗುತ್ತಿದ್ದು 2030ರ ವೇಳೆಗೆ ಉತ್ತರಾರ್ಧಗೋಳದ ಮೇಲ್ಮೈನ ಪದರ ಸಂಪೂರ್ಣವಾಗಿ ಮೊದಲಿನಂತೆ ಸರಿಹೋಗುತ್ತದೆ. ಅಂಟಾರ್ಕ್ಟಿಕ್ ಓಝೋನ್ ರಂಧ್ರವು 2060ರ ವೇಳೆಗೆ ತುಂಬಿಕೊಳ್ಳುತ್ತದೆ ಎಂದು ಕ್ವಿಟೊ, ಈಕ್ವೆಡಾರ್​ನಲ್ಲಿ ನಡೆದ ಸಮ್ಮೇಳನದಲ್ಲಿ ವಿಜ್ಞಾನಿಗಳು ಮೌಲ್ಯಮಾಪನದ ವರದಿ ಬಿಡುಗಡೆ ಮಾಡಿದ್ದಾರೆ. ಇದರ ಅನ್ವಯ ದಕ್ಷಿಣಾರ್ಧಗೋಳದ ಓಝೋನ್​ ಪದರಕ್ಕಾದ ಹಾನಿ ಸರಿಯಾಗಲು ವಿಳಂಬವಾಗುತ್ತದೆ ಎನ್ನಲಾಗಿದೆ.
 • ಒಂದೊಮ್ಮೆ ಓಝೋನ್​ ಪದರ ಸವಕಳಿ ಮುಂದುವರಿದಿದ್ದರೆ ನಾವೆಲ್ಲ ತುಂಬ ಕೆಟ್ಟ ಪರಿಣಾಮ ಅನುಭವಿಸಬೇಕಾಗಿತ್ತು. ಈಗ ನಾವದನ್ನು ತಡೆದಿದ್ದೇವೆ ಎಂದು ನಾಸಾದ ಗೊಡ್ಡಾರ್ಡ್​ ಆಕಾಶ ಉಡ್ಡಯನ ಕೇಂದ್ರದ ಸಹ ಅಧ್ಯಕ್ಷ, ಭೂ ವಿಜ್ಞಾನಿ ಪೌಲ್​ ನ್ಯೂಮನ್​ ಹೇಳಿದ್ದಾರೆ.

ಓಜೋನ್ ರಂದ್ರದ ಪರಿಣಾಮ

 • ಚರ್ಮ ಕ್ಯಾನ್ಸರ್​, ಬೆಳೆ ಹಾನಿ ಮತ್ತಿತರ ಗಂಭೀರ ಪರಿಸ್ಥಿತಿಗೆ ಕಾರಣವಾಗುವ ಸೂರ್ಯನ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಓಝೋನ್​ ಪದರಕ್ಕೆ ಮನುಷ್ಯರು ಬಳಕೆ ಮಾಡುತ್ತಿದ್ದ ಕ್ಲೋರೋಫ್ಲೋರೋ ಕಾರ್ಬನ್​ (ಸಿಎಫ್​ಸಿಎಸ್​)ಗಳಿಂದ ಧಕ್ಕೆಯುಂಟಾಗಿತ್ತು.
 • ಇದನ್ನು ಮನಗಂಡು ವಿಶ್ವಾದ್ಯಂತ 1987ರಿಂದ ಕ್ಲೋರೋಫ್ಲೋರೋ ಕಾರ್ಬನ್​ ಗಳ ಬಳಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದರ ಪರಿಣಾಮವಾಗಿ 1990ರ ವೇಳೆಗೆ 10 ಪರ್ಸೆಂಟ್​ನಷ್ಟು ಪದರ ಸರಿಯಾಗಿತ್ತು.

ನಗರವಾಸಿ ಯುವಕರು ದ್ವಿಭಾಷಿಕರು

2.

ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿರುವ ಸುಮಾರು ಅರ್ಧಕ್ಕೂ ಅಧಿಕ ಯುವಕರು ಒಂದಕ್ಕಿಂತ ಹೆಚ್ಚು ಭಾಷೆ ಬಲ್ಲವರಾಗಿದ್ದಾರೆ. ಅದರಲ್ಲೂ ನಗರದಲ್ಲಿ ವಾಸಿಸುವ ಯುವ ಜನರು ಕನಿಷ್ಠ 2 ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಇನ್ನು ಶೇ.18ರಷ್ಟು ಯುವ ಸಮುದಾಯ ಮೂರು ಭಾಷೆಗಳನ್ನು ತಿಳಿದುಕೊಂಡಿದ್ದಾರೆ ಎಂದು ಗೊತ್ತಾಗಿದೆ.

 • ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಇಂದಿನ ಪೀಳಿಗೆ ಭಾಷಾ ವಿಚಾರದಲ್ಲಿ ಹೆಚ್ಚು ತಿಳಿದುಕೊಳ್ಳುತ್ತಿದ್ದು, 15-49 ವರ್ಷದೊಳಗಿನ ವರ್ಗದ ನಗರವಾಸಿಗಳು ಕನಿಷ್ಠ 2 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು, ಬರೆಯಲು ಶಕ್ತರಾಗಿದ್ದಾರೆ ಎಂಬುದು ತಿಳಿದು ಬಂದಿದೆ.
 • ಗ್ರಾಮೀಣ ಭಾಗದಲ್ಲೂ ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರುವವರ ಸಂಖ್ಯೆ ಹೆಚ್ಚಿತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಯುವ ಪೀಳಿಗೆ ಭಾಷಾ ಜ್ಞಾನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಕೊಳ್ಳಲಾಗಿದೆ.
 • ದತ್ತಾಂಶಗಳ ಪ್ರಕಾರ, ದೇಶದ ಅರ್ಧಕ್ಕಿಂತಲೂ ಹೆಚ್ಚು ಮಂದಿ 2 ಭಾಷೆ ಬಲ್ಲವರಾದರೆ, ಶೇ.7 ಮಂದಿಗೆ ಮೂರು ಭಾಷೆಯ ಬಗ್ಗೆ ಜ್ಞಾನವಿದೆ. ಆದರೆ ಗ್ರಾಮೀಣ ಭಾಗದಲ್ಲಿ ಶೇ.22 ಮಂದಿಯಷ್ಟೇ 2 ಭಾಷೆ ಬಲ್ಲವರಾದರೆ, ಶೇ.5 ರಷ್ಟು ಜನರು ಮೂರು ಭಾಷೆ ತಿಳಿದಿರುತ್ತಾರೆ. ನಗರ ಪ್ರದೇಶದಲ್ಲಿ ಶೇ.44ರಷ್ಟು ಜನ ಎರಡು ಭಾಷೆ ಹಾಗೂ ಶೇ.15 ರಷ್ಟು ಜನ ಮೂರು ಭಾಷೆ ತಿಳಿದುಕೊಂಡಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಭಾಷಾ ಜ್ಞಾನಕ್ಕೆ ಕಾರಣಗಳು

 • ಪ್ರಮುಖವಾಗಿ ಉದ್ಯೋಗದ ನಿಮಿತ್ತ ತಮ್ಮ ರಾಜ್ಯದಿಂದ ಬೇರೊಂದು ರಾಜ್ಯಕ್ಕೆ ಹೋಗಬೇಕಾಗಿರುವುದರಿಂದ ಬೇರೊಂದು ಭಾಷಾ ಜ್ಞಾನವನ್ನು ಯುವಕರು ಪಡೆಯುತ್ತಿದ್ದಾರೆ. 14 ವರ್ಷದ ವರೆಗಿನ ಯುವ ಸಮುದಾಯಕ್ಕೆ ಮಾತೃಭಾಷೆಗ ಪ್ರಾಮುಖ್ಯತೆ ಕೊಟ್ಟಿದ್ದರೆ, 15 ವರ್ಷದ ಮೇಲ್ಪಟ್ಟವರಲ್ಲಿ ಒಂದುಕ್ಕಿಂತ ಹೆಚ್ಚು ಭಾಷೆ ತಿಳಿದುಕೊಂಡಿದ್ದಾರೆ.
 • ಇದಲ್ಲದೆ ಯುವತಿಯರಿಗಿಂತ ಯುವಕರಲ್ಲೇ ಬಹುಭಾಷೆಯ ಜ್ಞಾನ ಹೆಚ್ಚಿರುತ್ತದೆ. 20-24 ಪ್ರಾಯದ ವಿಭಾಗದಲ್ಲಿ ಶೇ.25 ರಷ್ಟು ಯುವಕರಿಗೆ ಹಾಗೂ ಶೇ.16ರಷ್ಟು ಮಹಿಳೆಯರಿಗೆ ಕನಿಷ್ಠ ಎರಡು ಭಾಷಾ ಜ್ಞಾನ ಉಳ್ಳವರಾಗಿರುತ್ತಾರೆ.
 • ಒಟ್ಟಾರೆ ಈ ವಿಭಾಗದಲ್ಲಿ ದೇಶದ ಶೇ.52ರಷ್ಟು ಜನರಿಗೆ ಕನಿಷ್ಠ 2 ಭಾಷೆಗಳ ಜ್ಞಾನವಿರುವುದಾಗಿ ಸಮೀಕ್ಷೆಯಲ್ಲಿ ತಿಳಿಯಲಾಗಿದೆ.

ಬಿಲ್‌ ಗೇಟ್ಸ್‌ ಪೌಂಡೇಷನ್‌

3.

ಸುದ್ಧಿಯಲ್ಲಿ ಏಕಿದೆ ?ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಶೌಚಗೃಹದ ಕೊರತೆ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಮೈಕ್ರೋಸಾಫ್ಟ್‌ ಸೃಷ್ಟಿಕರ್ತ ಬಿಲ್‌ ಗೇಟ್ಸ್‌ ವಿಭಿನ್ನ ಮಾದರಿಯ ಟಾಯ್ಲೆಟ್‌ ಪರಿಚಯ ಮಾಡಿದ್ದಾರೆ.

 • ಬೀಜಿಂಗ್‌ನಲ್ಲಿ ನಡೆದ ಟಾಯ್ಲೆಟ್‌ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ಬಿಲೆನಿಯರ್‌ ಬಿಲ್‌ ಗೇಟ್ಸ್‌ ಕಂಪನಿ ಚರಂಡಿ ವ್ಯವಸ್ಥೆಯೇ ಇಲ್ಲದ, ದೀರ್ಘಾವಧಿ ಬಾಳಿಕೆ ಬರುವ ಮಾಯಾವಿ ಟಾಯ್ಲೆಟ್‌ಅನ್ನು ಅಭಿವೃದ್ಧಿ ಪಡಿಸಿರುವ ಬಗ್ಗೆ ತಿಳಿಸಿದ್ದಾರೆ.
 • ನೂತನ ಮಾದರಿಯ ಟಾಯ್ಲೆಟ್‌ ಅಭಿವೃದ್ಧಿಯ ಸಂಶೋಧನೆಗಾಗಿ ಬಿಲ್‌ ಗೇಟ್ಸ್‌ ಬರೋಬ್ಬರಿ 200 ದಶಲಕ್ಷ ಡಾಲರ್‌ ವ್ಯಯಿಸಿದ್ದಾರೆ. ಪೂರ್ಣ ಸಿದ್ಧಗೊಳ್ಳಲು ಕನಿಷ್ಠ 200 ದಶಲಕ್ಷ ಡಾಲರ್‌ಅನ್ನು ಮತ್ತೆ ಖರ್ಚು ಮಾಡಬೇಕಾದೀತು ಎಂದು ಅಂದಾಜಿಸಲಾಗಿದೆ.

ಕಾರಣಗಳು

 • ಪ್ರತೀ ವರ್ಷ 5 ವರ್ಷಕ್ಕಿಂತ ಕೆಳಗಿನ 50,000 ಮಕ್ಕಳು ಕಳಪೆ ನೈರ್ಮಲ್ಯ ವ್ಯವಸ್ಥೆಯಿಂದ ಸಾಯುತ್ತಿವೆ. ಕಳಪೆ ನೈರ್ಮಲ್ಯ ವ್ಯವಸ್ಥೆಯಿಂದಾಗಿ ವಿಶ್ವದಾದ್ಯಂತ ವಾರ್ಷಿಕ 200 ಬಿಲಿಯನ್‌ ಡಾಲರ್ ನಷ್ಟವಾಗುತ್ತಿದೆ. ಆದಾಯ ನಷ್ಟವಾಗುತ್ತಿದೆ ಎಂದು ಸಂಕ್ಷಿಪ್ತವಾಗಿ ವಿವರಿಸಿದರು.

ನೂತನ ಟಾಯ್ಲೆಟ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ?

 • ಸದ್ಯದ ಶೌಚಗೃಹದ ವ್ಯವಸ್ಥೆಯಲ್ಲಿ ಮಲವು ನೀರಿನಲ್ಲಿ ಹೊರಗೆ ಹೋಗುತ್ತದೆ. ಆದರೆ ಈ ಟಾಯ್ಲೆಟ್‌ಗೆ ನೀರಿನ ಮೂಲಕ ಹೊರಗೆ ಹೋಗುವ ವ್ಯವಸ್ಥೆಯೇ ಇರುವುದಿಲ್ಲ. ಹಾಗಾದರೆ ಮಲ ಏನಾಗುತ್ತದೆ? ಎಂಬ ಪ್ರಶ್ನೆಗೆ ಬಿಲ್‌ ಗೇಟ್ಸ್‌ ನೀಡುವ ಉತ್ತರ, ದ್ರವ ರೂಪ ಮತ್ತು ಘನ ರೂಪದ ಮಾನವ ತ್ಯಾಜ್ಯದ ಮೇಲೆ ರಾಸಾಯನಿಕ ಕೆಲಸ ನಡೆಯುತ್ತದೆ.
 • ಹೆಚ್ಚಿನ ಸಂದರ್ಭಗಳಲ್ಲಿ ತ್ಯಾಜ್ಯವು ಉರಿದು ಹೋಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಇಲೆಕ್ಟ್ರೋಕೆಮಿಕಲ್‌ ಕಿಯಾಕ್ಟರ್‌ ಅಳವಡಿಸಲಾಗಿರುತ್ತದೆ. ಇದು ಮಾನವ ತ್ಯಾಜ್ಯವನ್ನು ತೋಟಗಳಿಗೆ ಬಳಸಬಹುದಾದ ಫಲವತ್ತಾದ ಗೊಬ್ಬರವನ್ನಾಗಿ ಪರಿವರ್ತಿಸುತ್ತದೆ.
 • ಹೈಡೋಜನ್‌ ಇಂಧನವಾಗಿಯೂ ಪರಿವರ್ತನಗೊಳ್ಳುತ್ತದೆ. ಇದನ್ನು ಹಸಿರು ಇಂಧನವಾಗಿಯೂ ಬಳಸಬಹುದು. ನೂತನ ಟಾಯ್ಲೆಟ್‌ನಲ್ಲಿ ಫ್ಲಶ್‌ಗಾಗಿ ಸ್ವಲ್ಪ ನೀರು ಬಳಕೆಯಾಗುತ್ತದಂತೆ. ಜತಗೆ ಅದು ಮರು ಬಳಕೆಯಾಗುತ್ತದಂತೆ.
 • ನೂತನ ಮಾದರಿ ಟಾಯ್ಲೆಟ್‌ಗಳು ದುಬಾರಿಯಾಗಿರುವುದರಿಂದ ಆರಂಭದಲ್ಲಿ ಆಸ್ಪತ್ರೆ, ಶಾಲೆ ಮತ್ತು ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ.

ಪಾಕಿಸ್ತಾನದಿಂದ ಚೀನಾಕ್ಕೆ ಖಾಸಗಿ ಬಸ್​ ಸಂಚಾರ ಪ್ರಾರಂಭ

4.

ಸುದ್ಧಿಯಲ್ಲಿ ಏಕಿದೆ ?ಪಾಕಿಸ್ತಾನದ ಲಾಹೋರ್​ ಮತ್ತು ಚೀನಾದ ಕಶ್ಗರ್​ ನಡುವೆ ಖಾಸಗಿ ಬಸ್​ ಸಂಚಾರ ಪ್ರಾರಂಭಗೊಂಡಿದ್ದು ಉದ್ಘಾಟನೆಗೊಂಡಿದೆ.

 • ಮೊದಲ ಬಸ್ಸು ಲಾಹೋರ್​ನ ಗುಲ್ಬರ್ಗ್​ ಪ್ರದೇಶದಿಂದ ಹೊರಟಿದ್ದು ಏಕಮುಖ ಮಾರ್ಗದಲ್ಲಿ 30 ತಾಸು ಪ್ರಯಾಣ ಮಾಡಲಿದೆ.
 • ಈ ಬಸ್​ ಪಾಕ್​ ಆಕ್ರಮಿತ ಕಾಶ್ಮೀರದ ಗಿಲ್ಗಿತ್​-ಬಲ್ತಿಸ್ತಾನ್​ ಪ್ರದೇಶದ ಮೂಲಕ ಹಾದುಹೋಗಲಿದ್ದು, ಇದನ್ನು ಭಾರತ ಬಲವಾಗಿ ವಿರೋಧಿಸಿದೆ.
 • ಪಾಕ್​ ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನ-ಚೀನಾ ನಡುವಿನ ಬಸ್​ ಸಂಚಾರ ಮಾಡುವುದು ಭಾರತದ ಸಾರ್ವಭೌಮತ್ವ, ಪ್ರಾದೇಶಿಕತೆಯ ನಿಯಮಕ್ಕೆ ವಿರುದ್ಧ.
 • ಚೀನಾ ಹಾಗೂ ಪಾಕಿಸ್ತಾನ ನಡುವೆ 1963ರಲ್ಲಿ ನಡೆದ ಗಡಿ ಒಪ್ಪಂದ ಅಕ್ರಮ ಮತ್ತು ಅಮಾನ್ಯ. ಭಾರತದ ಸರ್ಕಾರ ಅದನ್ನು ಒಪ್ಪಿಕೊಳ್ಳುವುದಿಲ್ಲ.
 • ಬಸ್​ ಸಂಚಾರವನ್ನು ನ.3ರಿಂದಲೇ ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ಭದ್ರತಾ ಕಾರಣಗಳಿಂದ ಮುಂದೂಡಲ್ಪಟ್ಟಿದ್ದು ಶುರುವಾಗಿದೆ.
 • ಲಾಹೋರ್​ನಿಂದ ಕಶ್ಗರ್​ಗೆ ತೆರಳಿ ಮತ್ತೆ ಅಲ್ಲಿಂದ ವಾಪಸ್​ ಬರುವ ಪ್ರಯಾಣಿಕರು ಒಂದು ಟಿಕೆಟ್​ಗೆ 23,000ರೂ.ಪಾಕಿಸ್ತಾನಿ ಹಣ ನೀಡಬೇಕು. ಬರೀ ಒನ್​ ವೇ ಪ್ರಯಾಣವಾದರೆ ಒಂದು ಟಿಕೆಟ್​ಗೆ 13,000ರೂ.ನೀಡಬೇಕು.
 • ಪ್ರಯಾಣಿಕರು ವೀಸಾ, ಪಾಸ್​ಪೋರ್ಟ್​, ಪ್ರಯಾಣಕ್ಕೆ ಸಂಬಂಧಪಟ್ಟ ಇತರ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಹಾಗೇ ಬಸ್​ನಲ್ಲಿ 20 ಕೆಜಿಗಿಂತ ಜಾಸ್ತಿ ಲಗೇಜ್​ ಹಾಕುವಂತಿಲ್ಲ ಎನ್ನಲಾಗಿದೆ.
Related Posts
“2nd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸ್ವಚ್ಛ ಕ್ಯಾಂಪಸ್’ ಸುದ್ಧಿಯಲ್ಲಿ ಏಕಿದೆ ?ದೇಶದ ವಿಶ್ವವಿದ್ಯಾಲಯಗಳ ‘ಸ್ವಚ್ಛ ಕ್ಯಾಂಪಸ್’ ರ‍್ಯಾಂಕಿಂಗ್ ಪಟ್ಟಿ ಯಲ್ಲಿ ಕೆಎಲ್​ಇ ಸಂಸ್ಥೆಯ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಸಂಶೋಧನೆ ಕೇಂದ್ರಕ್ಕೆ (ಕೆಎಲ್​ಇ ವಿವಿ) 3ನೇ ಸ್ಥಾನ ದೊರಕಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಲ್​ಇ ಸಂಸ್ಥೆಯ ಉನ್ನತ ಶಿಕ್ಷಣ ಅಕಾಡೆಮಿ ...
READ MORE
“22nd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ತುಳು ಸಂಸ್ಕೃತಿ ಸುದ್ಧಿಯಲ್ಲಿ ಏಕಿದೆ ?ಜಗತ್ತಿನ ಅತಿ ದೊಡ್ಡ ಗಾಳಿಪಟ ಉತ್ಸವವ ಫ್ರಾನ್ಸ್‌ನ ಡೀಪಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ತುಳುನಾಡಿನ ಸಂಸ್ಕೃತಿ ರಾರಾಜಿಸಿದೆ. ಕರಾವಳಿಯ ಪಂಚೆ, ಮುಟ್ಟಾಲೆ, ಜುಬ್ಬಾಕ್ಕೆ ವಿದೇಶಿಯರು ಮಾರುಹೋಗಿದ್ದಾರೆ. ಸೆಪ್ಟೆಂಬರ್ 8ರಿಂದ 16ರವರೆಗೆ ಡೀಪಿ ನಗರದಲ್ಲಿ ಜರಗಿದ ಉತ್ಸವದಲ್ಲಿ 48 ದೇಶಗಳಿಂದ ...
READ MORE
“11th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಹಸಿರು ಕರ್ನಾಟಕ ಸುದ್ದಿಯಲ್ಲಿ ಏಕಿದೆ?  ಹಸಿರು ಕರ್ನಾಟಕ ಯೋಜನೆಗೆ ಆಗಸ್ಟ್‌ 15 ರಂದು ಚಾಲನೆ ನೀಡಲಾಗುವುದು. ಈ ಬಾರಿ 50 ಕೋಟಿ ಸಸಿ ನೆಡುವ ಗುರಿಯಿದೆ. ಜನರಿಗೂ ಗಿಡ ವಿತರಿಸಲಾಗುವುದು. ಸರಕಾರಿ, ಖಾಸಗಿ ಜಮೀನಿನಲ್ಲಿ ಗಿಡ ನೆಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ...
READ MORE
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗಂಗಾ ಕಲ್ಯಾಣ  ಸುದ್ಧಿಯಲ್ಲಿ ಏಕಿದೆ ? ಪರಿಶಿಷ್ಟ ಜಾತಿ (ಎಸ್ಸಿ) ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಂಬೇಡ್ಕರ್ ನಿಗಮದ ಮೂಲಕ ಜಾರಿಗೆ ತಂದಿರುವ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆ ಅನ್ನದಾತರ ಬದಲು ಅಧಿಕಾರಿಗಳು, ಬೋರ್​ವೆಲ್ ಏಜೆನ್ಸಿದಾರರ ಆರ್ಥಿಕ ಕಲ್ಯಾಣಕ್ಕೆ ದಾರಿ ...
READ MORE
” 12 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಸ್ಥಗಿತ  ಸುದ್ಧಿಯಲ್ಲಿ ಏಕಿದೆ? ಸರಕಾರಿ ಒಡೆತನದ ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಬಗ್ಗೆ ವಿವರ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತು. ಮೈಸೂರು ಲ್ಯಾಂಫ್ಸ್‌ ಕಾರ್ಖಾನೆಯ ಕಾರ್ಮಿಕರ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಸಿಜೆ ದಿನೇಶ್‌ ಮಹೇಶ್ವರಿ ...
READ MORE
“19 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶೀಘ್ರವೇ ನೋವಿಲ್ಲದ ಚಿಕಿತ್ಸೆ! ಸುದ್ಧಿಯಲ್ಲಿ ಏಕಿದೆ ?ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಕೊನೆಯ ದಿನಗಳನ್ನು ಎಣಿಸುತ್ತಿರುವ ರೋಗಿಗಳಿಗಾಗಿ ನೋವುರಹಿತ ಚಿಕಿತ್ಸಾ ಪದ್ಧತಿ ಜಾರಿಗೆ ತರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ. ಯೋಜನೆಯ ಉದ್ದೇಶ ಕ್ಯಾನ್ಸರ್, ಏಡ್ಸ್ ಸೇರಿ ಗುಣಪಡಿಸಲಾಗದ ಕಾಯಿಲೆಗೆ ಒಳಪಟ್ಟವರು ಹಾಗೂ ...
READ MORE
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಏಷ್ಯಾ ಮಾಧ್ಯಮ ಶೃಂಗಸಭೆ ಸುದ್ದಿಯಲ್ಲಿ ಏಕಿದೆ? ಮಾಧ್ಯಮ ಕ್ಷೇತ್ರದ ಅವಲೋಕನ ನಡೆಸುವ ನಿಟ್ಟಿನಲ್ಲಿ ಮೇ 10ರಿಂದ ಎರಡು ದಿನಗಳ ಕಾಲ 15ನೇ ಏಷ್ಯಾ ಮಾಧ್ಯಮ ಶೃಂಗಸಭೆ ಹೊಸದಿಲ್ಲಿಯಲ್ಲಿ ನಡೆಯಲಿದೆ. ಧ್ಯೇಯ ವಾಕ್ಯ: 'ಟೆಲ್ಲಿಂಗ್‌ ಅವರ್‌ ಸ್ಟೋರಿಸ್‌ -ಏಷ್ಯಾ ಅಂಡ್‌ ಮೋರ್‌' ಆಯೋಜಕರು: ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಮಾಸ್‌ ಕಮ್ಯೂನಿಕೇಷನ್‌ ...
READ MORE
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ರಾಷ್ಟ್ರಪತಿ ಗೌರವ ಸುದ್ಧಿಯಲ್ಲಿ ಏಕಿದೆ? ಕನ್ನಡದ ಖ್ಯಾತ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಶಸ್ತಿ ಸಂದಿದೆ. ಶಾಸ್ತ್ರೀಯ ಕನ್ನಡ ಭಾಷೆಯಲ್ಲಿ ಅವರು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಶಾಸ್ತ್ರೀಯ ತೆಲುಗು, ಸಂಸ್ಕೃತ, ಪರ್ಷಿಯಾ, ಅರೇಬಿಕ್‌, ...
READ MORE
ಯಾರು ಅಂಗವಿಕಲರು? ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗ ಶೇ.40ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಊನವಾಗಿರುವ ದೈಹಿಕ ಅಂಗವಿಕಲರು, ದೃಷ್ಟಿದೋಷ, ಶ್ರವಣದೋಷ, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು ಇವರನ್ನು ಅಂಗವಿಕಲರೆಂದು ಪರಿಗಣಿಸಲಾಗುತ್ತದೆ. ಅಂಗವೈಕಲ್ಯ ನಿವಾರಣೆ ಶಸ್ತ್ರಚಿಕಿತ್ಸೆಗೆ ಲಕ್ಷ ರೂ.ವರೆಗೆ ವೈದ್ಯಕೀಯ ಪರಿಹಾರ ನಿಧಿ ಈ ಯೋಜನೆಯಲ್ಲಿ ಅಂಗವೈಕಲ್ಯದ ...
READ MORE
“3rd July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ ತ್ಯಾಜ್ಯ ಸಂಸ್ಕರಣಾ ಘಟಕ ಸುದ್ದಿಯಲ್ಲಿ ಏಕಿದೆ? ದೇಶದ ಮೊದಲ 'ಇ-ತ್ಯಾಜ್ಯ ಸಂಸ್ಕರಣಾ ಘಟಕ' ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಕೇಂದ್ರೀಯ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್‌)ಯಿಂದ ನಾಲ್ಕು ತಿಂಗಳಲ್ಲಿ ಘಟಕ ಸ್ಥಾಪನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ...
READ MORE
“2nd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“22nd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“11th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 12 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಿಕಲಾಂಗರ ನೆರವಿಗೆ ಹಲವು ಯೋಜನೆ
“3rd July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *