” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಎನ್​ಪಿಎಸ್

1.

ಸುದ್ಧಿಯಲ್ಲಿ ಏಕಿದೆ ?ಎನ್​ಪಿಎಸ್ (ಹೊಸ ಪಿಂಚಣಿ ಯೋಜನೆ) ರದ್ದತಿ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವಂತೆಯೇ, ಆ ನೌಕರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಕೆಲವೊಂದು ಸೌಲಭ್ಯ ನೀಡಲು ಸಮ್ಮತಿಸಿದೆ.

 • ಎನ್​ಪಿಎಸ್ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ನೌಕರರು, ಅದರ ಜತೆಗೆ ಬೇರೆ ಬೇಡಿಕೆಗಳನ್ನೂ ಸರ್ಕಾರದ ಮುಂದಿಡುತ್ತಿದ್ದರು. ಎನ್​ಪಿಎಸ್ ರದ್ದತಿ ಕೇಂದ್ರ ಸರ್ಕಾರಕ್ಕೆ ಸೇರಿದ ವಿಷಯವಾಗಿರುವ ಕಾರಣ ಅಲ್ಲಿ ನಿರ್ಧಾರವಾಗುವ ತನಕ ಬೇರೆ ಬೇರೆ ಸೌಲಭ್ಯಗಳು ಸಿಗಬೇಕು ಎಂಬುದು ನೌಕರರ ಬೇಡಿಕೆ.

ಯಾವ್ಯಾವ ಬೇಡಿಕೆಗಳಿಗೆ ಸಮ್ಮತಿ?

 1. ಮರಣ ಮತ್ತು ನಿವೃತ್ತಿ ಉಪಧನ (ಡಿಸಿಆರ್​ಜಿ) ಈ ಮೊದಲು 2018ರ ಏ.1 ರಿಂದ ಜಾರಿಗೆ ತರಲು ಸರ್ಕಾರ ಒಪ್ಪಿತ್ತು. ಆದರೆ ನೌಕರರು ಸೇವೆಗೆ ಸೇರಿದ (2006 ಏ.1 ರಿಂದಲೇ)ದಿನದಿಂದಲೇ ಜಾರಿಗೆ ತರಬೇಕು ಎಂಬ ಬೇಡಿಕೆಯಿಟ್ಟಿದ್ದರು. ಅದಕ್ಕೀಗ ಹಣಕಾಸು ಇಲಾಖೆ ಒಪ್ಪಿದೆ. ಇದರಿಂದಾಗಿ 30 ವರ್ಷ ಕಾರ್ಯನಿರ್ವಹಿಸುವ ಸಿ ದರ್ಜೆ ನೌಕರನಿಗೆ ಕನಿಷ್ಠ 15 ಲಕ್ಷ ರೂ. ನಿವೃತ್ತಿ ನಂತರ ಸಿಗಲಿದೆ.
 2. ಮರಣ ಹೊಂದಿದ ನೌಕರರ ಕುಟುಂಬ ಪಿಂಚಣಿಯನ್ನು 2018 ಏ.1 ರಿಂದ ನೀಡಲು ಸರ್ಕಾರ ಹಿಂದೆ ಒಪ್ಪಿಗೆ ನೀಡಿತ್ತು. ಆದರೆ 2006 ಏಪ್ರಿಲ್​ನಿಂದಲೇ ಜಾರಿಗೆ ಕೊಡಬೇಕು ಎಂಬುದು ನೌಕರರ ಒತ್ತಡವಾಗಿತ್ತು. ಎನ್​ಪಿಎಸ್​ನಡಿ ನೇಮಕವಾಗಿರುವ ನೌಕರರ ಪೈಕಿ 98 ಜನ ಮೃತರಾಗಿದ್ದಾರೆ. ಆ ಕುಟುಂಬಗಳು ಸೇರಿದಂತೆ ಕುಟುಂಬ ಪಿಂಚಣಿಯನ್ನು 2006 ಏ.1 ರಿಂದಲೇ ಅನ್ವಯ ಮಾಡಲು ಸಮ್ಮತಿಸಲಾಗಿದೆ.
 3. ಎನ್​ಪಿಎಸ್ ನೌಕರರಿಗೆ ಭವಿಷ್ಯನಿಧಿ ಸೌಲಭ್ಯ ಇರಲಿಲ್ಲ. ಈ ನೌಕರರಿಗೂ ಜಿಪಿಎಫ್ ನೀಡುವ ಸಲುವಾಗಿ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಒಪ್ಪಿದೆ.
 4. ಕರ್ನಾಟಕ ವಿಮಾ ಯೋಜನೆ (ಕೆಜಿಐಡಿ) ಪ್ರೀಮಿಯಂ ಮೆಚ್ಯುರಿಟಿಗೆ ವಯೋಮಿತಿ 55 ವರ್ಷವಿತ್ತು. ಆದರೆ ನಿವೃತ್ತಿ ವಯಸ್ಸನ್ನು ಸರ್ಕಾರ 2012ರಲ್ಲಿ 60 ವರ್ಷಕ್ಕೆ ಏರಿಸಿದೆ. ಆದ್ದರಿಂದ ಪ್ರೀಮಿಯಂ ಮೆಚ್ಯುರಿಟಿಯ ವಯೋಮಿತಿಯನ್ನು 60 ವರ್ಷಕ್ಕೆ ಏರಿಸಲು ಹಣಕಾಸು ಇಲಾಖೆ ಸಮ್ಮತಿಸಿದೆ.

ಖಾಸಗಿ ಸಂಸ್ಥೆ ನಿರ್ವಹಣೆ

 • ಎನ್​ಪಿಎಸ್ ಅನ್ನು ಖಾಸಗಿ ಸಂಸ್ಥೆಯೊಂದು ನಿರ್ವಹಣೆ ಮಾಡುತ್ತಿದೆ. ಖಾಸಗಿ ಸ್ವಾಮ್ಯದ ಬ್ಯಾಂಕ್ ಹಣಕಾಸಿನ ಉಸ್ತುವಾರಿ ನೋಡುತ್ತಿದ್ದು, ಯಾವ ಖಾತ್ರಿಯೂ ಇಲ್ಲ, ಅದೇ ಹಣವನ್ನು ಸರ್ಕಾರ ಕೆಜಿಐಡಿಯಲ್ಲಿ ಹಾಕಿದರೆ ಗ್ಯಾರೆಂಟಿ ಇರುತ್ತದೆ ಎಂಬುದು ಎನ್​ಪಿಎಸ್ ನೌಕರರ ಅಭಿಪ್ರಾಯ.

ದಿಟ್ಟ ಹೆಜ್ಜೆ

 • ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ನೀಡಿದ್ದ ಭರವಸೆಯಂತೆ ದೆಹಲಿ ಸರ್ಕಾರ ವಿಧಾನಮಂಡಲದಲ್ಲಿ ಎನ್​ಪಿಎಸ್ ರದ್ದತಿಗೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಪ್ರತಿಭಟನೆಗೆ ಸಿದ್ಧತೆ

 • ಕರ್ನಾಟಕದಲ್ಲೂ ಎನ್​ಪಿಎಸ್ ರದ್ದತಿ ನಿರ್ಣಯಕ್ಕೆ ಒತ್ತಾಯಿಸಿ ನೌಕರರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಹೊಸ ಪಿಂಚಣಿ ವ್ಯವಸ್ಥೆ

 • ಹೊಸದಾಗಿ ನೇಮಕಗೊಂಡ ನೌಕರರಿಗೆ (ಸಶಸ್ತ್ರ ಪಡೆಗಳ ಸಿಬ್ಬಂದಿಗಳನ್ನು ಹೊರತುಪಡಿಸಿ) ಕಡ್ಡಾಯವಾಗಿ 2004 ರಲ್ಲಿ ಭಾರತ ಸರ್ಕಾರವು ಹೊಸ ಪಿಂಚಣಿ ವ್ಯವಸ್ಥೆಯನ್ನು ಪರಿಚಯಿಸಿತು. ಈ ಯೋಜನೆಯು ಏಪ್ರಿಲ್ 1, 2008 ರಂದು ಕಾರ್ಯರೂಪಕ್ಕೆ ಬಂದಿತು. ಆಗಸ್ಟ್ 2008 ರಲ್ಲಿ, ಭಾರತದ ಎಲ್ಲಾ ನಾಗರಿಕರಿಗೆ ಎನ್ಪಿಎಸ್ ನೀಡಲು ಸರ್ಕಾರವು ಒಂದು ನಿರ್ಧಾರವನ್ನು ತೆಗೆದುಕೊಂಡಿತು. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಎಲ್ಲಾ ನಾಗರಿಕರಿಗೆ ಈ ಯೋಜನೆಯು ಮೇ 1, 2009 ಪ್ರಾರಂಭಿಸಿತು.

ಹೊಸ ಪಿಂಚಣಿ ಯೋಜನೆ ಯಾವುದು?

 • ಹೊಸ ಪಿಂಚಣಿ ಯೋಜನೆ ಶುದ್ಧ ವ್ಯಾಖ್ಯಾನಿತ ಕೊಡುಗೆ ಉತ್ಪನ್ನವಾಗಿದೆ. ಒಂದು ಚಂದಾದಾರರು ನಿಧಿ ಆಯ್ಕೆ ಮತ್ತು ನಿಧಿ ವ್ಯವಸ್ಥಾಪಕರನ್ನು ಆಯ್ಕೆ ಮಾಡಬಹುದು. ಚಂದಾದಾರನಿಗೆ ಅವನು / ಅವಳು 60 ವರ್ಷವಾಗಿದ್ದಾಗ ನಿವೃತ್ತಿಯ ಕಾರ್ಪಸ್ ಪಡೆಯುತ್ತದೆ.

ಖಾಯಂ ನಿವೃತ್ತಿ ಖಾತೆ ಸಂಖ್ಯೆ: (ಪಿಎಆರ್ಡಿಎ)

 • ಪಿಎಫ್ಆರ್ಡಿಎ ಮುಖ್ಯವಾಗಿ ಬ್ಯಾಂಕುಗಳು ಮತ್ತು 6 ಪೆನ್ಷನ್ ಫಂಡ್ ಮ್ಯಾನೇಜರ್ಗಳಾದ 22 ಪಾಯಿಂಟ್ಗಳ ಉಪಸ್ಥಿತಿಯನ್ನು (ಪಿಒಪಿ) ನೇಮಿಸಿದೆ. (ನೇಮಕಾತಿಗಳ ತನಕ ಮಧ್ಯಂತರ ವ್ಯವಸ್ಥೆಗಳನ್ನು ಮಾಡಲಾಗಿದೆ) ಪಿಒಪಿಗಳ ಶಾಖೆಗಳನ್ನು ಪೋಪ್ ಸರ್ವಿಸ್ ಪ್ರೊವೈಡರ್ಸ್ ಎಂದು ಕರೆಯಲಾಗುತ್ತದೆ.ಈ ಪೋಪ್ ಸೇವಾ ಪೂರೈಕೆದಾರರು ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯನ್ನು ಪಡೆಯಬೇಕಾದ ಎಲ್ಲ ನಾಗರಿಕರಿಗೆ ಆರಂಭಿಕ ಹಂತದ ಸಂಪರ್ಕ ಮತ್ತು ಸಂಗ್ರಹ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಾರೆ. ಅಥವಾ PRAN ಈ ಸಂಖ್ಯೆ ಎನ್ಪಿಎಸ್ ಅಡಿಯಲ್ಲಿ ಅಗತ್ಯವಿದೆ

ಅಂತರ್ಜಲದಲ್ಲಿ ಶೇ.1 ಬಳಕೆಯೋಗ್ಯ

2.

ಸುದ್ಧಿಯಲ್ಲಿ ಏಕಿದೆ ?ಕೈಗಾರಿಕೆಗಳು ಹೊರಬಿಡುತ್ತಿರುವ ರಾಸಾಯನಿಕ ತ್ಯಾಜ್ಯಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ಮುಂದಿನ 8 ವರ್ಷಗಳಲ್ಲಿ ಉದ್ಯಾನನಗರಿ ಭೂಒಡಲು ವಿಷಮಯಗೊಂಡು ಕೇವಲ ಶೇ.1 ಅಂತರ್ಜಲ ಮಾತ್ರವೇ ಕುಡಿಯಲು ಲಭ್ಯವಾಗುವ ಆತಂಕಕಾರಿ ವರದಿಯನ್ನು ತಜ್ಞರು ನೀಡಿದ್ದಾರೆ.

 • ಕಾರ್ಖಾನೆಗಳಿಂದ ವಿಷಯುಕ್ತ ಸೀಸ, ಪಾದರಸದಂತಹ ರಾಸಾಯನಿಕ ಅಂತರ್ಜಲ ಸೇರುತ್ತಿದೆ. ಈ ಸೀಸದ ಅಂಶ ಮಾನವನ ದೇಹ ಸೇರಿದರೆ ರ್ಪಾನ್​ಸನ್, ಮಾನಸಿಕ ಅಸ್ವಸ್ಥತೆ, ವಯಸ್ಸಾದಂತೆ ಕಾಣುವ ಗಂಭೀರ ಕಾಯಿಲೆಗಳಿಗೆ ಬೆಂಗಳೂರಿಗರು ತುತ್ತಾಗಬಹುದು ಎಂಬ ಅಂಶ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಬ್ಲೆಸ್ಸಿ ವಿನಯ್ ನಡೆಸಿರುವ ಸಂಶೋಧನೆಯಿಂದ ಪತ್ತೆಯಾಗಿದೆ.

ಎಲ್ಲಿ ಮತ್ತು ಹೇಗೆ ಗೊತ್ತಾಯಿತು?

 • ಪೀಣ್ಯ ಕೈಗಾರಿಕಾ ಪ್ರದೇಶದ 28 ಕಡೆ ಅಂತರ್ಜಲ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ.
 • ಎಲ್ಲ ಕಡೆ ಅಂತರ್ಜಲದಲ್ಲಿ ಕನಿಷ್ಠ 02 ಮಿಲಿ ಗ್ರಾಂನಿಂದ ಗರಿಷ್ಠ 0.05 ಮಿಲಿ ಗ್ರಾಂ ಸೀಸದ ಅಂಶ ಪತ್ತೆಯಾಗಿದೆ.
 • ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಶುದ್ಧ ಕುಡಿಯುವ ನೀರಿನಲ್ಲಿ ಸೀಸದ ಅಂಶ ಇರಲೇಬಾರದು. ಆದರೆ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಪೀಣ್ಯದಲ್ಲಿ ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದೆ ಎಂಬುದನ್ನು ತಮ್ಮವರದಿಯಲ್ಲಿ ಹೇಳಿದ್ದಾರೆ.

ಕಾರಣಗಳೇನು?

 • ಪರಿಸರ ಸಂರಕ್ಷಣೆ ನಿಯಮ ಪಾಲಿಸುವುದಾಗಿ ಪ್ರಮಾಣಪತ್ರ ಸಲ್ಲಿಸುವ ಖಾಸಗಿ ಕಾರ್ಖಾನೆಗಳು ಅವನ್ನು ಪಾಲಿಸುತ್ತಿಲ್ಲ.
 • ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ.
 • ಇದರ ಪರಿಣಾಮ ಬೆಂಗಳೂರಿನ ಅಂತರ್ಜಲ ಕಲುಷಿತವಾಗುತ್ತಿದೆ.

ಕೆಎಸ್​ಪಿಸಿಬಿ ನಿರ್ಲಕ್ಷ್ಯ

 • ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕಗಳನ್ನು ಭೂಮಿಗೆ ಬಿಡುವಂತಿಲ್ಲ. ಅಂತಹ ಕಾರ್ಖಾನೆಗಳನ್ನು ಪತ್ತೆಹಚ್ಚಿ ಪರವಾನಗಿ ರದ್ದುಪಡಿಸುವ ಅಧಿಕಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ)ಗಿದೆ. ಆದರೆ, ರಾಜಾರೋಷವಾಗಿ ಕಾರ್ಖಾನೆಗಳು ನಿಯಮ ಉಲ್ಲಂಘಿಸುತ್ತಿದ್ದರೂ ಯಾವುದೇ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಿಲ್ಲ.

ಕಲುಷಿತ ಅಂತರ್ಜಲದ ಅಪಾಯಗಳು:

ಆರೋಗ್ಯದ ಮೇಲೆ:

 • ಕಲುಷಿತ ಅಂತರ್ಜಲವನ್ನು ಕುಡಿಯುವುದು ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಬೀರಬಹುದು.
 • ಹೆಪಟೈಟಿಸ್ ಮತ್ತು ಡಿಸೆಂಟ್ರಿಗಳಂತಹ ರೋಗಗಳು ಸೆಪ್ಟಿಕ್ ಟ್ಯಾಂಕ್ ತ್ಯಾಜ್ಯದ ಮಾಲಿನ್ಯದಿಂದ ಉಂಟಾಗಬಹುದು.
 • ವಿಷಯುಕ್ತ ನೀರು ಸರಬರಾಜುಗೆ ಕಾರಣವಾಗುವ ವಿಷಗಳಿಂದ ಉಂಟಾಗಬಹುದು.
 • ಕಲುಷಿತ ಅಂತರ್ಜಲದಿಂದ ಕೂಡಾ ವನ್ಯಜೀವಿಗಳನ್ನು ಹಾನಿಗೊಳಿಸಬಹುದು.
 • ಕೆಲವು ರೀತಿಯ ಕ್ಯಾನ್ಸರ್ನಂತಹ ಇತರ ದೀರ್ಘಕಾಲೀನ ಪರಿಣಾಮಗಳು ಮಾಲಿನ್ಯ ನೀರಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗಬಹುದು.

ಆರ್ಥಿಕತೆ ಮೇಲೆ:

 • ಅಂತರ್ಜಲ ಕಲುಷಿತಗೊಂಡಾಗ, ಆರ್ಥಿಕತೆಯು ಸಹ ಸುಲಭವಾಗಿ ಬಳಲಬಹುದು:
 • ಭೂಮಿ ಮೌಲ್ಯಕುಸಿಯುತ್ತದೆ . ನಿರ್ದಿಷ್ಟ ಪ್ರದೇಶಗಳಲ್ಲಿ ಅಂತರ್ಜಲವು ಹೆಚ್ಚು ಕಲುಷಿತಗೊಂಡಾಗ, ಆ ಪ್ರದೇಶವು ಮಾನವ, ಪ್ರಾಣಿ ಮತ್ತು ಸಸ್ಯ ಜೀವಿತಾವಧಿಯನ್ನು ಉಳಿಸಿಕೊಳ್ಳಲು ಕಡಿಮೆ ಸಾಮರ್ಥ್ಯವನ್ನು ಹೊಂದಿದೆ.
 • ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರೆ ಮತ್ತು ಆ ಪ್ರಕೃತಿಯು ಮಾಲಿನ್ಯದ ಪರಿಣಾಮಗಳನ್ನು ಎದುರಿಸಲಾರಂಭಿಸಿದರೆ, ಅಲ್ಲಿ ವಾಸಿಸಲು ಬಯಸುವ ಜನರ ಸಾಧ್ಯತೆಗಳು ಇನ್ನೂ ಕಡಿಮೆಯಾಗುತ್ತವೆ.
 • ಇದು ಅಂತರ್ಜಲ ಮಾಲಿನ್ಯದ ತಕ್ಷಣದ ಪರಿಣಾಮವಾಗಿರದಿದ್ದರೂ ಸಹ, ಭೂಮಿಯ ಮೌಲ್ಯದ ಸವಕಳಿ ಖಂಡಿತವಾಗಿಯೂ ಒಂದು ಸಂಭವನೀಯ ಅಡ್ಡ ಪರಿಣಾಮವಾಗಿದೆ.
 • ಕಡಿಮೆ ಸ್ಥಿರ ಉದ್ಯಮ.
 • ಅನೇಕ ಕೈಗಾರಿಕೆಗಳು ತಮ್ಮ ಉತ್ಪನ್ನಗಳನ್ನು ಉತ್ಪಾದಿಸಲು ಮತ್ತು ತಮ್ಮ ಕಾರ್ಖಾನೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಅಂತರ್ಜಲವನ್ನು ಅವಲಂಬಿಸಿವೆ. ನಿರ್ದಿಷ್ಟ ಪ್ರದೇಶದಿಂದ ಪಿಹೆಚ್ ಮತ್ತು ನೀರಿನ ಅಂತರ್ಜಲದ ಗುಣಮಟ್ಟ ವಿರಳವಾಗಿ ಬದಲಾಗುವುದರಿಂದ, ಇದು ಅನೇಕ ಉದ್ಯಮಗಳ ಒಂದು ಪ್ರಮುಖ ಭಾಗವಾಗಿದ್ದು, ಅವು ನಿರಂತರವಾಗಿ ಪರೀಕ್ಷಿಸಬೇಕಾದ ನೀರನ್ನು ಅವಲಂಬಿಸಿವೆ.

ಪರಿಸರ ಮೇಲೆ:

 • ಕೊನೆಯದಾಗಿ ಆದರೆ ಖಚಿತವಾಗಿಲ್ಲ, ಅಂತರ್ಜಲವು ಮಾಲಿನ್ಯಗೊಂಡಾಗ ಪರಿಸರವನ್ನು ಗಂಭೀರವಾಗಿ ಬದಲಾಯಿಸಬಹುದು. ಇದು ಸಂಭವಿಸುವ ಕೆಲವು ವಿಧಾನಗಳು ಇಲ್ಲಿವೆ.
 • ಪೌಷ್ಟಿಕ ಮಾಲಿನ್ಯ:ಅಂತರ್ಜಲ ಮಾಲಿನ್ಯವು ಕೆಲವು ವಿಧದ ಪೋಷಕಾಂಶಗಳಿಗೆ ಕಾರಣವಾಗಬಹುದು, ಇದು ಒಂದು ನಿರ್ದಿಷ್ಟ ಪರಿಸರ ವ್ಯವಸ್ಥೆಯಲ್ಲಿ ಸಾಮಾನ್ಯ ಜೀವನವನ್ನು ಉಳಿಸಿಕೊಳ್ಳಲು ಸಣ್ಣ ಪ್ರಮಾಣದಲ್ಲಿ ಅವಶ್ಯಕವಾಗಿರುವಷ್ಟು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮೀನುಗಳು ತಮ್ಮ ನೀರಿನ ಸರಬರಾಜಿನಲ್ಲಿ ಇನ್ನು ಮುಂದೆ ನೀರು ಸಂಸ್ಕರಿಸಲು ಸಾಧ್ಯವಾಗದ ಕಾರಣ ಮೀನುಗಳು ಬೇಗನೆ ಸಾಯುವಿಕೆಯನ್ನು ಪ್ರಾರಂಭಿಸಬಹುದು, ಮತ್ತು ಅವುಗಳು ಕುಡಿಯುವ ನೀರಿನಲ್ಲಿನ ಹೆಚ್ಚಿನ ಪೌಷ್ಟಿಕ ದ್ರವ್ಯಗಳಿಂದ ಇತರ ಪ್ರಾಣಿಗಳು ರೋಗಿಗಳಾಗಬಹುದು.
 • ಪರಿಸರ ವ್ಯವಸ್ಥೆಗಳಲ್ಲಿ ವಿಷಯುಕ್ತ ನೀರು:ಸರೋವರಗಳು, ನದಿಗಳು, ಹೊಳೆಗಳು, ಕೊಳಗಳು ಮತ್ತು ಜೌಗುಗಳನ್ನು ಸರಬರಾಜು ಮಾಡುವ ಅಂತರ್ಜಲವು ಕಲುಷಿತಗೊಂಡಾಗ, ಇದು ನಿಧಾನವಾಗಿ ಮೇಲ್ಮೈ ನೀರಿನ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತದೆ.

ವಾಹನಗಳ ಮೇಲೆ ಜಾಹೀರಾತಿಗೆ ಬ್ರೇಕ್

3.

ಸುದ್ಧಿಯಲ್ಲಿ ಏಕಿದೆ ? ರಾಜ್ಯಾದ್ಯಂತ ಸಾರಿಗೆ ವಾಹನಗಳ ಮೇಲೆ ಜಾಹೀರಾತು ಪ್ರದರ್ಶನ ನಿಷೇಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

 • ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ ರಸ್ತೆ ಮೇಲೆ ಸಂಚರಿಸುವ ಯಾವುದೇ ಸಾರಿಗೆ ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
 • ಆಟೋರಿಕ್ಷಾ, ಸರಕು ಸಾಗಣೆ ವಾಹನ, ಬಸ್, ಟ್ಯಾಕ್ಸಿ ಇನ್ನಿತರ ವಾಹನಗಳ ಮಾಲೀಕರು ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸಿದ್ದಲ್ಲಿ ತಕ್ಷಣವೇ ತೆರವುಗೊಳಿಸಬೇಕು ಎಂದು ಸಾರಿಗೆ ಆಯುಕ್ತರು ಸೂಚಿಸಿದ್ದಾರೆ.
 • ಜಾಹೀರಾತು ಪ್ರದರ್ಶಿಸಬೇಕಿದ್ದಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (ಡಿಆರ್​ಟಿಎ) ಅನುಮತಿ ಕಡ್ಡಾಯ. ಅನುಮತಿ ಪಡೆಯದೆ ಜಾಹೀರಾತು ಪ್ರದರ್ಶಿಸಿದಲ್ಲಿ ಅಂತಹ ವಾಹನಗಳ ವಿರುದ್ಧ ಮೋಟಾರು ವಾಹನ ನಿಯಮದಂತೆ ಕ್ರಮ ಜರುಗಿಸಲಾಗುತ್ತದೆ.

ಕಾರಣಗಳು

 • ಆಪ್ ಆಧಾರಿತ ಟ್ಯಾಕ್ಸಿ, ಆಟೋ ಸೇರಿ ವಾಣಿಜ್ಯ ವಾಹನಗಳ ಮೇಲೆ ಜಾಹೀರಾತುಗಳಿಗೆ ಕಡಿವಾಣ ಹಾಕಲು ಉಪಸಮಿತಿ ರಚಿಸಲು ಆರ್​ಟಿಎ ನಿರ್ಧರಿಸಿತ್ತು.
 • ವಾಹನಗಳ ಮೇಲಿನ ಜಾಹೀರಾತು ಇತರೆ ವಾಹನ ಚಾಲಕರಿಗೆ ಅಡ್ಡಿಯಾಗುತ್ತಿದ್ದು, ಚಾಲನೆ ಏಕಾಗ್ರತೆ ತಪ್ಪಿಸುತ್ತದೆ ಎನ್ನುವ ದೃಷ್ಟಿಯಿಂದ ಜಾಹೀರಾತು ತೆರವಿಗೆ ನಿರ್ಧರಿಸಲಾಗಿತ್ತು.
 • ಚಾಲಕರಿಗೆ ಚಾಲನೆಗೆ ಅಡ್ಡಿ ಪಡಿಸದಂತಹ ಜಾಹೀರಾತು, ಜಾಹಿರಾತು ಗಾತ್ರ ಮುಂತಾದವುಗಳ ಬಗ್ಗೆ ಪ್ರತ್ಯೇಕ ನೀತಿ, ನಿಯಮ ಜಾರಿ ಕುರಿತು ಸಮಿತಿ ನಿರ್ಧರಿಸಲಿದೆ

ವಾಹನಕ್ಕೆ ಇಂಧನ ಕೋಡ್

4.

ಸುದ್ಧಿಯಲ್ಲಿ ಏಕಿದೆ ?ಮುಂದಿನ ಆರ್ಥಿಕ ವರ್ಷದಿಂದ ದೇಶಾದ್ಯಂತ ಮಾರಾಟವಾಗುವ ಕಾರುಗಳ ವಿಂಡ್​ಶೀಲ್ಡ್ (ಮುಂಭಾಗದ ಗಾಜು) ಮೇಲೆ ಅವುಗಳಲ್ಲಿ ಬಳಸುವ ಇಂಧನ ಮಾದರಿಯನ್ನು ಸೂಚಿಸುವ ಬಾರ್​ಕೋಡ್​ಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಕೇಂದ್ರ ಸಾರಿಗೆ ಸಚಿವಾಲಯ ಈ ಬಗ್ಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆಯಲ್ಲಿ ಏನಿದೆ ?

 • 2019ರ ಏಪ್ರಿಲ್​ನಿಂದ ವಾಹನಗಳಿಗೆ ಹೈ ಸಕ್ಯೂರಿಟಿ ನಂಬರ್​ಪ್ಲೇಟ್​ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
 • ವಾಹನಗಳ ಒಟ್ಟು ಮಾರಾಟ ಬೆಲೆಯಲ್ಲೇ ನಂಬರ್ ಪ್ಲೇಟ್​ಗಳ ಬೆಲೆಯನ್ನೂ ಸೇರಿಸಿ ಗ್ರಾಹಕರು ಪಾವತಿಸಬೇಕಾಗುತ್ತದೆ.
 • 5 ವರ್ಷದ ಹಿಂದೆ ವಾಹನ ಖರೀದಿಸಿದ್ದರೆ ಕಂಪನಿಗಳೇ ಉಚಿತವಾಗಿ ನಂಬರ್​ಪ್ಲೇಟ್​ಗಳನ್ನು ಬದಲಿಸಿಕೊಡಬೇಕಾಗುತ್ತದೆ.
 • ವಾಹನ ಮಾರಾಟ 5 ವರ್ಷ ಮೀರಿದ್ದರೆ, ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಿ ಹೈಸೆಕ್ಯೂರಿಟಿ ನಂಬರ್ ಪ್ಲೇಟ್​ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
 • ತಿಳಿನೀಲಿ ಸ್ಟಿಕ್ಕರ್: ಪೆಟ್ರೋಲ್ ಮತ್ತು ಸಿಎನ್​ಜಿ ಬಳಸುವ ವಾಹನಗಳ ವಿಂಡ್​ಶೀಲ್ಡ್ ಮೇಲೆ ತಿಳಿನೀಲಿ ಬಣ್ಣದ ಬಾರ್​ಕೋಡ್ ಅಳವಡಿಸಲಾಗಿರುತ್ತದೆ.
 • ಡೀಸೆಲ್ ಇಂಧನ ಬಳಸುವ ವಾಹನಗಳಿಗೆ ಕಿತ್ತಳೆ ರಂಗಿನ ಸ್ಟಿಕ್ಕರ್ ಅಳವಡಿಸಲಾಗಿರುತ್ತದೆ. ವಾಯುಮಾಲಿನ್ಯ ಸಮಸ್ಯೆ ತೀವ್ರವಾದ ಸಂದರ್ಭದಲ್ಲಿ ಸ್ಟಿಕ್ಕರ್​ಗಳ ಬಣ್ಣಗಳನ್ನು ಆಧರಿಸಿ ವಾಹನಗಳ ಸಂಚಾರವನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ನಿರ್ಧಾರಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗುತ್ತದೆ.

ಹತ್ತೇ ನಿಮಿಷದಲ್ಲಿ ಎಲ್ಲಾ ಕ್ಯಾನ್ಸರ್‌ ರೋಗಗಳ ಪತ್ತೆ

5.

ಸುದ್ಧಿಯಲ್ಲಿ ಏಕಿದೆ ?ದೇಹದ ಯಾವುದೇ ಮೂಲೆಯಲ್ಲಿ ಕ್ಯಾನ್ಸರ್‌ ಪೀಡಿತ ಅಥವಾ ಮಾರಣಾಂತಿಕ ಜೀವಕೋಶಗಳಿದ್ದರೆ ತಕ್ಷಣ ಬಣ್ಣ ಬದಲಿಸಿ ಪತ್ತೆ ಮಾಡುವ ದ್ರವರೂಪದ ರಾಸಾಯನಿಕವಿರುವ ಯೂನಿವರ್ಸಲ್‌ ಕ್ಯಾನ್ಸರ್‌ ಟೆಸ್ಟ್‌ಅನ್ನು ಆಸ್ಟ್ರೇಲಿಯಾದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಪರಿಣಾಮಗಳು

 • ಈ ಪರೀಕ್ಷೆಗೆ ಕೇವಲ 10 ನಿಮಿಷ ಸಾಕು ಎನ್ನುತ್ತಾರೆ ಯೂನಿವರ್ಸಿಟಿ ಆಫ್‌ ಕ್ವೀನ್ಸ್‌ಲ್ಯಾಂಡ್‌ನ ಸಂಶೋಧಕರು.
 • ಈ ಸಂಶೋಧನೆಯ ಪರಿಣಾಮ ಬಹಳ ಬೇಗನೆ ಮತ್ತು ಕಡಿಮೆ ಖರ್ಚಲ್ಲಿ ಪರೀಕ್ಷೆ ಮಾಡಿಸಬಹುದು. ಯಾವುದೇ ರೀತಿಯ ಕ್ಯಾನ್ಸರ್‌ ರೋಗಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
 • ಈ ಪರೀಕ್ಷೆಯಲ್ಲಿ ಸಾಮಾನ್ಯ ಡಿಎನ್‌ಎ ಮತ್ತು ಕ್ಯಾನ್ಸರ್‌ ಡಿಎನ್‌ಎಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಕ್ಯಾನ್ಸರ್‌ ಪೀಡಿತ ಜೀವಕೋಶಗಳು ರಕ್ತದ ಮೂಲಕ ದೇಹದೆಲ್ಲೆಡೆ ಚಲಿಸುತ್ತವೆ. ಹಾಗಾಗಿ ಅತ್ಯಂತ ಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ.
 • ರಕ್ತದಲ್ಲಿ ಇರಬಹುದಾದ ಯಾವುದೇ ಮಾರಣಾಂತಿಕ ಕೋಶಗಳ ಸಣ್ಣ ಕುರುಹುಗಳನ್ನು ಪತ್ತೆ ಮಾಡಬಹುದು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
 • ಈ ಪರೀಕ್ಷೆಗೆ ಅನುಮೋದನೆ ಸಿಗಬೇಕಷ್ಟೆ. ಪ್ರಸ್ತುತ ಶೇಕಡ 90ರಷ್ಟು ನಿಖರವಾಗಿದೆ. ಅಂದರೆ 100 ಪ್ರಕರಣಗಳ ಪೈಕಿ 90 ಅನ್ನು ಪತ್ತೆ ಮಾಡುತ್ತದೆ.

ಮುಖ್ಯ ಆರ್ಥಿಕ ಸಲಹೆಗಾರ

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕವಾಗಿದ್ದಾರೆ.

 • ನೋಟು ಅಮಾನ್ಯೀಕರಣದ ಸಮರ್ಥಕ ಹಾಗೂ ಬ್ಯಾಂಕಿಂಗ್ ಆಧುನೀಕರಣದ ಹಿನ್ನೆಲೆ ಹೊಂದಿರುವ ಕೃಷ್ಣಮೂರ್ತಿ ಅವರನ್ನು ಅರವಿಂದ ಸುಬ್ರಮಣಿಯನ್ ಜಾಗಕ್ಕೆ ಸರ್ಕಾರ ನೇಮಕ ಮಾಡಿದೆ.
 • ಮುಂದಿನ 3 ವರ್ಷದವರೆಗೆ ಅಥವಾ ಸರ್ಕಾರದ ಹೊಸ ಆದೇಶದವರೆಗೆ ಕೃಷ್ಣಮೂರ್ತಿ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
 • ಅರವಿಂದ ಸುಬ್ರಮಣಿಯನ್ ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ್ದರಿಂದ ಹುದ್ದೆ ತೆರವಾಗಿತ್ತು.
 • ಹೈದರಾಬಾದ್​ನ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್​ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಕೃಷ್ಣಮೂರ್ತಿ ಮೇಲೆ ಹಲವು ನಿರೀಕ್ಷೆಗಳಿವೆ.

ಭಾರತದ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ

 • ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಭಾರತದ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದಾರೆ.
 • ಸಿಇಎ ಎಂಬುದು ಭಾರತೀಯ ಆರ್ಥಿಕ ಸೇವೆಯ ಅಧಿಕಾರಿಗಳ  ನಿಯಂತ್ರಣ ಪ್ರಾಧಿಕಾರವಾಗಿದೆ.
 • ಸಿಇಎ ಹಣಕಾಸು ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ

ಬ್ರಿಟನ್ ‘ಗೋಲ್ಡನ್ ವೀಸಾ’ ಬಂದ್

7.

ಸುದ್ಧಿಯಲ್ಲಿ ಏಕಿದೆ ?ಶ್ರೀಮಂತರಿಗೆ ಮಾತ್ರ ನೀಡಲಾಗುವ ‘ಗೋಲ್ಡನ್ ವೀಸಾ’ (ಟೈರ್ 1)ವನ್ನು ಬ್ರಿಟನ್ ಸರ್ಕಾರ ಸ್ಥಗಿತಗೊಳಿಸಿದೆ.

 • ಹಣ ಅಕ್ರಮ ವರ್ಗಾವಣೆ ಮತ್ತು ಸಂಘಟಿತ ಅಪರಾಧಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಂಡಿರುವುದಾಗಿ ಥೆರೇಸಾ ಮೇ ನೇತೃತ್ವದ ಸರ್ಕಾರ ಹೇಳಿದೆ.
 • 2008ರಲ್ಲಿ ಜಾರಿಗೆ ಬಂದ ‘ಟೈರ್ 1’ ಹೂಡಿಕೆದಾರರ ವೀಸಾ ಅನ್ವಯ ರಷ್ಯಾ, ಚೀನಾ ಹಾಗೂ ಭಾರತದ ಉದ್ಯಮಿಗಳಿಗೆ ಹೂಡಿಕೆ ಆಧರಿಸಿ ವೀಸಾ ನೀಡಲಾಗುತ್ತಿತ್ತು.
 • ಕನಿಷ್ಠ 18 ಕೋಟಿ ರೂ. ಹೂಡಿಕೆ ಮಾಡುವವರಿಗೆ ಆರ್ಥಿಕತೆಗೆ ಉತ್ತೇಜನ ಸಿಗುವ ಉದ್ದೇಶದಿಂದ ಬ್ರಿಟನ್​ಗೆ ವಲಸೆ ಬರಲು ಅನುಮತಿ ನೀಡಲಾಗುತ್ತಿತ್ತು.
 • 2017ರವರೆಗೆ ಭಾರತದ 76 ಕೋಟ್ಯಧಿಪತಿಗಳು ಕುಟುಂಬ ಸಮೇತ ಟೈರ್ 1 ವೀಸಾ ಪಡೆದು ಬ್ರಿಟನ್​ನಲ್ಲಿ ನೆಲೆಸಿದ್ದಾರೆ. 2015ರ ಏಪ್ರಿಲ್​ನಿಂದ ಇದುವರೆಗೂ ಒಟ್ಟು 3 ಸಾವಿರ ವಿದೇಶಿ ಕೋಟ್ಯಧಿಪತಿಗಳು ಬ್ರಿಟನ್ ವೀಸಾ ಪಡೆದುಕೊಂಡಿದ್ದಾರೆ.

ಏನಿದು ಗೋಲ್ಡನ್ ವೀಸಾ?

 • ಹೂಡಿಕೆ ಉತ್ತೇಜನಕ್ಕಾಗಿ ವಿದೇಶಿ ಉದ್ಯಮಿಗಳನ್ನು ಗುರಿಯಾಗಿಸಿ ಬ್ರಿಟನ್ ಸರ್ಕಾರ ಜಾರಿಗೆ ತಂದ ವೀಸಾ ಯೋಜನೆಯಿದು. ಕನಿಷ್ಠ 9 ಕೋಟಿ ರೂ. ಹೂಡಿಕೆಯೊಂದಿಗೆ ಪ್ರಾಥಮಿಕ ಹಂತದಲ್ಲಿ ವೀಸಾ ನೀಡಲಾಗುತ್ತಿತ್ತು.
 • ಬಳಿಕ 45 ಕೋಟಿ ರೂ. 90 ಕೋಟಿ ರೂ. ವರೆಗೆ ಹೂಡಿಕೆ ಮಾಡಿದವರಿಗೆ ಕ್ರಮವಾಗಿ 3,2 ವರ್ಷಗಳ ಪೌರತ್ವವನ್ನು ನೀಡಲಾಗುತ್ತಿತ್ತು.

ವೀಸಾ ದುರುಪಯೋಗ

 • ವಿವಿಧ ದೇಶಗಳ ಉದ್ಯಮಿಗಳು ಸ್ವದೇಶದಲ್ಲಿ ಭಾರಿ ಅವ್ಯವಹಾರ ನಡೆಸಿ ಟೈರ್ 1 ವೀಸಾ ಮೂಲಕ ಬ್ರಿಟನ್​ನಲ್ಲಿ ನೆಲೆಸುತ್ತಿರುವುದು 2015ರಲ್ಲಿ ಸರ್ಕಾರದ ಗಮನಕ್ಕೆ ಬಂದಿತು. ಇದರ ಕಡಿವಾಣಕ್ಕಾಗಿ ವೀಸಾ ಯೋಜನೆಯ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಆದರೂ ಕಪು್ಪ ಹಣ (ಹಣ ಅಕ್ರಮ ವರ್ಗಾವಣೆ )ದೇಶದ ಆರ್ಥಿಕತೆ ಪ್ರವೇಶಿಸುತ್ತಿರುವ ಬಗ್ಗೆ ತಜ್ಞರು ಎಚ್ಚರಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ವೀಸಾ ಯೋಜನೆ ಸ್ಥಗಿತಕ್ಕೆ ಬ್ರಿಟನ್ ಸರ್ಕಾರ ನಿರ್ಧರಿಸಿದೆ.

Related Posts
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏಪ್ರಿಲ್‌ಗೆ ಕರ್ನಾಟಕ ಪೂರ್ತಿ ಉಜ್ವಲ! ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ವಿಸ್ತರಿತ ಪ್ರಧಾನಮಂತ್ರಿ ಉಜ್ವಲ ಯೋಜನೆ-2(ಇಪಿಎಂಯುವೈ) ಅಡಿ ಹೊಸದಾಗಿ ಐದು ಲಕ್ಷ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಭಾರತೀಯ ತೈಲ ನಿಗಮ ಮುಂದಾಗಿದೆ. 2019ರ ಜ.1ರಿಂದ ಉಜ್ವಲ-2ರ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ...
READ MORE
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪೌರತ್ವ ವಿಧೇಯಕ ಸುದ್ಧಿಯಲ್ಲಿ ಏಕಿದೆ ?ಅಕ್ರಮ ವಲಸಿಗರ ಪಿಡುಗಿಗೆ ತಡೆ ಹಾಕುವ ಮಹತ್ವದ ಪೌರತ್ವ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ. ಏನಿದು ಪೌರತ್ವ ವಿಧೇಯಕ? ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ...
READ MORE
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆಯುಷ್ಮಾನ್ ಆರೋಗ್ಯ ಸುದ್ಧಿಯಲ್ಲಿ ಏಕಿದೆ ?ಬಡ ಹಾಗೂ ಮಧ್ಯಮವರ್ಗದ ನಾಗರಿಕರಿಗೆ ಆರೋಗ್ಯ ಸೇವೆಯಲ್ಲಿ ಖಾತ್ರಿ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ್ದ ಎರಡು ಪ್ರತ್ಯೇಕ ಯೋಜನೆಗಳನ್ನು ವಿಲೀನಗೊಳಿಸುವ ಮೂಲಕ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಕೋ-ಬ್ರಾ್ಯಂಡಿಂಗ್​ನಲ್ಲಿ ಎರಡೂ ಯೋಜನೆಗಳನ್ನು ...
READ MORE
27 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಕರ್ನಾಟಕದ ಕಾರ್ಖಾನೆಯಲ್ಲಿ ಟೊಯೋಟಾದಿಂದ ಪರಿಸರಸ್ನೇಹಿ ವ್ಯವಸ್ಥೆ ಸುದ್ಧಿಯಲ್ಲಿ ಏಕಿದೆ ?ಇಂಗಾಲದ ಮಾಲಿನ್ಯವನ್ನು ಉತ್ಪಾದನಾ ಸ್ಥಳದಲ್ಲಿ ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಜಪಾನ್‌ ಮೂಲದ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌(ಟಿಕೆಎಂ) ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿ ಯಶಸ್ಸನ್ನೂ ಪಡೆದಿದೆ. ಕರ್ನಾಟಕದ ಬಿಡದಿಯಲ್ಲಿರುವ ತನ್ನ ಕಾರ್ಖಾನೆಯಲ್ಲಿ ಪರಿಸರಸ್ನೇಹಿ ವ್ಯವಸ್ಥೆಯನ್ನು ...
READ MORE
“05 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮತದಾನ ಪದ್ಧತಿ ಹುಟ್ಟಿದ್ದೇ ಮೈಸೂರಲ್ಲಿ ! ಸುದ್ಧಿಯಲ್ಲಿ ಏಕಿದೆ ?ದೇಶದಲ್ಲೇ ಮೊದಲಿಗೆ ಮತದಾನ ವ್ಯವಸ್ಥೆ ಜಾರಿಯಾಗಿದ್ದು ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1951ರಲ್ಲಿ ಅಲ್ಲ. ಅದಕ್ಕೂ 60 ವರ್ಷಗಳ ಮೊದಲೇ ಮೈಸೂರಿನಲ್ಲಿ ಮತದಾನ ನಡೆದಿತ್ತು ! ಆದರೆ ಆಗ ನಡೆದ ಮತದಾನ, ಅಲ್ಲಿನ ...
READ MORE
“24 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಮಾನ ಪತ್ತೆಗೆ ಉಪ್ಪಿನ ಉಪಾಯ ಸುದ್ಧಿಯಲ್ಲಿ ಏಕಿದೆ ? ತಾಂತ್ರಿಕ ದೋಷಗಳಿಂದ ಪತನಗೊಂಡು ಸಮುದ್ರಕ್ಕೆ ಬೀಳುವ ವಿಮಾನಗಳನ್ನು ಪತ್ತೆ ಮಾಡಲು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್​ಆರ್​ಎಲ್) ‘ಉಪ್ಪಿನ ಉಪಾಯ’ ಕಂಡುಕೊಂಡಿದೆ. ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಯೋಧರು, ಅಂತರಿಕ್ಷಯಾನಿಗಳಿಗೆ ಆಹಾರ ಸಿದ್ಧಪಡಿಸುವಲ್ಲಿ (ಡಿಎಫ್​ಆರ್​ಎಲ್) ...
READ MORE
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಗಿಡ ಬೆಳೆಸಿ ಅಂಕ ಗಳಿಸಿ! ಯೋಜನೆ ಸುದ್ಧಿಯಲ್ಲಿ ಏಕಿದೆ ?ಇನ್ನು ಮುಂದೆ 8ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಚೆನ್ನಾಗಿ ಪೋಷಿಸಿದರೆ ಅಂಕಗಳನ್ನು ಪಡೆಯಬಹುದು. ಅರಣ್ಯ, ಪರಿಸರ ಮತ್ತು ಜೈವಿಕ ಇಲಾಖೆ ಈ ಸಂಬಂಧ ಸದ್ಯದಲ್ಲಿಯೇ ...
READ MORE
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಕ್ರಾಂತಿಗೆ ಹೊಸ ನೀತಿ ಸುದ್ಧಿಯಲ್ಲಿ ಏಕಿದೆ ?ಬರಗಾಲ, ಬೆಳೆ ಸಾಲದಂತಹ ಸರಣಿ ಸಂಕಷ್ಟಗಳಿಗೆ ಸಿಲುಕಿ ಕೃಷಿ ಮೇಲೆ ವೈರಾಗ್ಯ ಹೊಂದುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬಿತ್ತಿ, ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರ ಬೆಳೆಗೆ ...
READ MORE
“24 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವ ತುಳು ಸಮ್ಮೇಳನ ಸುದ್ಧಿಯಲ್ಲಿ ಏಕಿದೆ ?ಕಡಲಾಯೆರೆದ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟ ಸಹಕಾರದಲ್ಲಿ ದುಬೈಯ ಅಲ್ ನಾಸರ್ ಎರಡು ದಿನಗಳ ವಿಶ್ವ ತುಳು ಸಮ್ಮೇಳನ ಲೀಸರ್ ಲ್ಯಾಂಡ್ ಐಸ್‌ರಿಂಕ್ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಉದ್ಘಾಟನಾ ಸಮಾರಂಭ ...
READ MORE
“18 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತ್ರಿವೇಣಿಸಂಗಮದಲ್ಲಿ ಕುಂಭಮೇಳ ಸುದ್ಧಿಯಲ್ಲಿ ಏಕಿದೆ ?ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ, ಕಪಿಲಾ,ಸ್ಪಟಿಕ ಸಂಗಮದ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರದಲ್ಲಿ ಮೂರು ದಿನಗಳ 11ನೇ ಕುಂಭಮೇಳಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ದೊರೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಮೊದಲ ದಿನವೇ ತ್ರಿವೇಣಿ ಸಂಗಮದಲ್ಲಿ ...
READ MORE
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
27 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“05 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“24 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“24 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“18 ಫೆಬ್ರವರಿ 2019 ರ ಕನ್ನಡ ಪ್ರಚಲಿತ

2 thoughts on “” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು””

Leave a Reply

Your email address will not be published. Required fields are marked *