“08 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಎಲೆಕ್ಟ್ರಿಕ್ ಬಸ್ ಯೋಜನೆ

1.

ಸುದ್ಧಿಯಲ್ಲಿ ಏಕಿದೆ ?ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ ಮಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಫೇಮ್ ಅನುದಾನದಲ್ಲಿ ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಹೊಂದಲಿದೆ. ಕಳೆದ ಸರ್ಕಾರದ ಅವಧಿಯಲ್ಲಿ ನಿಗಮ ಕರೆದಿದ್ದ ಟೆಂಡರ್​ನಲ್ಲಿ ಹೈದರಾಬಾದ್ ಮೂಲದ ಒಲೆಕ್ಟ್ರಾ ಕಂಪನಿ ಗುತ್ತಿಗೆ ಪಡೆದುಕೊಂಡಿತ್ತು.

 • ಗುತ್ತಿಗೆ ಆಧಾರದಲ್ಲಿ ಅತಿಕಡಿಮೆ ದರದಲ್ಲಿ ನಿಗಮಕ್ಕೆ ಎಲೆಕ್ಟ್ರಿಕ್ ಬಸ್ ದೊರೆಯಲಿದೆ ಎಂದು ಬಿಎಂಟಿಸಿ ವಾದಿಸಿದ್ದರೆ, ಖಾಸಗಿ ಕಂಪನಿಗೇಕೆ ಲಾಭ ಮಾಡಿಕೊಡಬೇಕು ಎನ್ನುವುದು ಸಚಿವರ ಅಭಿಪ್ರಾಯವಾಗಿತ್ತು.

ಮೊದಲ ಹಂತದಲ್ಲಿ 80 ಬಸ್

 • ಮೊದಲ ಹಂತದಲ್ಲಿ 80 ಬಸ್​ಗಳನ್ನು ಗುತ್ತಿಗೆ ಆಧಾರದಲ್ಲಿ ನಿಗಮ ಪಡೆಯಲಿದೆ. ಇದರಲ್ಲಿ 12 ಮೀಟರ್ ಉದ್ದದ 39 ಸೀಟು ಸಾಮರ್ಥ್ಯದ 60 ಎಸಿ ಬಸ್​ಗಳು ಹಾಗೂ 9 ಮೀ. ಉದ್ದದ 31 ಸೀಟಿನ 20 ಎಸಿರಹಿತ ಬಸ್ ಇರಲಿವೆ. ಕಂಪನಿಯೇ ಎಲೆಕ್ಟ್ರಿಕ್ ಬಸ್​ಗಳನ್ನು ನಿರ್ವಹಣೆ ಮಾಡಲಿದ್ದರೆ, ಪರ್ವಿುಟ್ ಮತ್ತು ವಿದ್ಯುತ್ ದರದ ಜವಾಬ್ದಾರಿಯನ್ನು ಬಿಎಂಟಿಸಿ ವಹಿಸಲಿದೆ.

ಫೇಮ್ ಇಂಡಿಯಾ ಯೋಜನೆ

 • ಭಾರತ ಸರ್ಕಾರವು 2011 ರಲ್ಲಿ ರಾಷ್ಟ್ರೀಯ ಮಿಷನ್ ಆನ್ ಎಲೆಕ್ಟ್ರಿಕ್ ಮೊಬಿಲಿಟಿಗೆ ಅನುಮೋದನೆ ನೀಡಿತು ಮತ್ತು ತರುವಾಯ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲಾನ್ 2020 ಅನ್ನು 2013 ರಲ್ಲಿ ಅನಾವರಣಗೊಳಿಸಲಾಯಿತು.
 • ಮಿಷನ್ ಭಾಗವಾಗಿ, ಹೆವಿ ಇಂಡಸ್ಟ್ರಿ ಇಲಾಖೆಯು ಫೇಮ್-ಇಂಡಿಯಾ (ಭಾರತದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗವಾದ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್) ಎಂಬ ಯೋಜನೆಯನ್ನು ರೂಪಿಸಿದೆ.
 • ಇದನ್ನು ಹೆವಿ ಇಂಡಸ್ಟ್ರೀಸ್ ಸಚಿವಾಲಯವು ನಿರ್ವಹಿಸುತ್ತಿದೆ.
 • 2020 ರ ವರೆಗೆ 6 ವರ್ಷಗಳ ಅವಧಿಯಲ್ಲಿ ಒಟ್ಟಾರೆ ಯೋಜನೆಯನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ, ಇದರಲ್ಲಿ ಹೈಬ್ರಿಡ್ / ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಅಭಿವೃದ್ಧಿ ಮತ್ತು ಅದರ ಉತ್ಪಾದನಾ ಪರಿಸರ-ವ್ಯವಸ್ಥೆಯನ್ನು ನಿಗದಿತ ಅವಧಿಯ ಅಂತ್ಯದಲ್ಲಿ ಸ್ವಯಂ-ಜೀವಿತಾವಧಿಯನ್ನು ಸಾಧಿಸಲು ನೆರವಾಗುತ್ತದೆ.
 • ಯೋಜನೆಯು 4 ಕೇಂದ್ರಿತ ಪ್ರದೇಶಗಳನ್ನು ಹೊಂದಿದೆ ಅಂದರೆ ತಂತ್ರಜ್ಞಾನ ಅಭಿವೃದ್ಧಿ, ಬೇಡಿಕೆ ಸೃಷ್ಟಿ, ಪೈಲಟ್ ಯೋಜನೆಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯ.
 • ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವ ಗುರಿಯೊಂದಿಗೆ, 2015 ರಲ್ಲಿ ವಿದ್ಯುತ್ ಮತ್ತು ಹೈಬ್ರಿಡ್ ವಾಹನಗಳ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ 38 ಲಕ್ಷ ರೂ.
 • ಈ ಯೋಜನೆಯು ಪ್ರಸ್ತುತ ವರ್ಷದಲ್ಲಿ ಮೊದಲ ಎರಡು ಹಣಕಾಸಿನ ವ್ಯವಹಾರಗಳಲ್ಲಿ 795 ಕೋಟಿ ರೂಪಾಯಿಗಳನ್ನು ಬೆಂಬಲಿಸುತ್ತದೆ.
 • ಫೇಮ್ ಇಂಡಿಯಾ ಯೋಜನೆ ಅಡಿಯಲ್ಲಿ ಸೌಮ್ಯ ಹೈಬ್ರಿಡ್ ವಾಹನಗಳಿಗೆ ಸರಕಾರ ಪ್ರೋತ್ಸಾಹ ನೀಡಿದೆ.
 • ಫೇಮ್ ಇಂಡಿಯಾ ಯೋಜನೆಯಡಿ 11 ಲಕ್ಷ ವಿದ್ಯುತ್ ಮತ್ತು ಹೈಬ್ರಿಡ್ ವಾಹನಗಳು ಖರೀದಿಸಲು 127.77 ಕೋಟಿ ಮೌಲ್ಯದ ಬೇಡಿಕೆ ಪ್ರೋತ್ಸಾಹವನ್ನು ಸರ್ಕಾರ ವಿಸ್ತರಿಸಿದೆ.

ದೀಪಾವಳಿ ಸ್ಟ್ಯಾಂಪ್‌ ಬಿಡುಗಡೆ

2.

ಸುದ್ಧಿಯಲ್ಲಿ ಏಕಿದೆ ?ವಿಶ್ವಸಂಸ್ಥೆಯ ಅಂಚೆ ಆಡಳಿತ ವಿಭಾಗವು ದೀಪಾವಳಿ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.

 • 15 ಡಾಲರ್‌ ಮುಖಬೆಲೆಯ 10 ಅಂಚೆ ಚೀಟಿಗಳು ದೀಪಾವಳಿ ಹಬ್ಬದ ಮಹತ್ವ ಸಾರುವ ವಿಶೇಷ ಚಿತ್ರಗಳನ್ನು ಒಳಗೊಂಡಿವೆ. ವಿಶ್ವಸಂಸ್ಥೆಯ ಈ ಕ್ರಮವನ್ನು ಭಾರತ ಅಭಿನಂದಿಸಿದೆ.
 • ”ವಿಶ್ವಸಂಸ್ಥೆಯಲ್ಲಿ ನಿತ್ಯವೂ ಒಳಿತು-ಕೆಡುಕಿನ ನಡುವೆ ಕದನ ನಡೆಯುತ್ತಲೇ ಇದೆ. ಒಳಿತು ಗೆಲ್ಲಬೇಕು ಎನ್ನುವ ನಮ್ಮ ಹಂಬಲಕ್ಕೆ ಸ್ಟ್ಯಾಂಪ್‌ ಮೂಲಕ ಸಾಥ್‌ ನೀಡಿದ ವಿಶ್ವಸಂಸ್ಥೆಗೆ ಅಭಿನಂದನೆಗಳು,” ಎಂದು ಭಾರತದ ಕಾಯಂ ಪ್ರತಿನಿಧಿ ಸಯ್ಯದ್‌ ಅಕ್ಬರುದ್ದಿನ್‌ ಟ್ವೀಟ್‌ ಮಾಡಿದ್ದಾರೆ.

ಫೈಜಾಬಾದ್ ಆಯ್ತು ಅಯೋಧ್ಯೆ

3.

ಸುದ್ಧಿಯಲ್ಲಿ ಏಕಿದೆ ?ಫೈಜಾಬಾದ್‌ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದಾರೆ.

 • ಶ್ರೀರಾಮನ ಹೆಸರಲ್ಲಿ ಹೊಸ ವಿಮಾನ ನಿಲ್ದಾಣ ಮತ್ತು ಶ್ರೀರಾಮನ ತಂದೆ ದಶರಥ ಮಹಾರಾಜನ ಹೆಸರಲ್ಲಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಸಹ ಅವರು ಘೋಷಿಸಿದ್ದಾರೆ.
 • ಇಲ್ಲಿಯವರೆಗೆ ಅಯೋಧ್ಯೆ ಫೈಜಾಬಾದ್‌ನಲ್ಲಿರುವ ಒಂದು ನಗರವಾಗಿತ್ತು. ಮತ್ತೀಗ ಜಿಲ್ಲೆಯನ್ನೇ ಫೈಜಾಬಾದ್ ಬದಲಾಗಿ ಅಯೋಧ್ಯೆ ಎಂದು ಕರೆಯಲಾಗುತ್ತದೆ.
 • ಅಲಹಾಬಾದನ್ನು ಪ್ರಯಾಗ್ ರಾಜ್ ಎಂದು ನಾಮಕರಣ ಮಾಡಿದ ಬೆನ್ನಲ್ಲೇ ( ಒಂದು ತಿಂಗಳ ಬಳಿಕ) ಫೈಜಾಬಾದ್ ಹೆಸರನ್ನು ಸಹ ಬದಲಾಯಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಅಹಮದಾಬಾದ್‌ಗೆ ಕರ್ಣಾವತಿ ಎಂದು ಹೆಸರಿಡಲು ಗುಜರಾತ್ ಸರ್ಕಾರ ಸಿದ್ಧ

 • ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಫೈಜಾಬಾದ್‌ಗೆ ಅಯೋಧ್ಯೆ ನಾಮಕರಣ ಮಾಡಿದ ಬೆನ್ನಲ್ಲೇ ಗುಜರಾತ್‌ ಸರ್ಕಾರವು ಕೂಡ ಯಾವುದೇ ಕಾನೂನು ಅಡೆತಡೆಗಳು ಇಲ್ಲದಿದ್ದರೆ ಅಹಮದಾಬಾದ್‌ಗೆ ಕರ್ಣಾವತಿ ಎಂದು ಹೆಸರಿಡಲು ಸಿದ್ಧ ಎಂದು ಘೋಷಿಸಿದೆ.

ಹಿನ್ನಲೆ

 • ಐತಿಹಾಸಿಕವಾಗಿ ಅಹಮದಾಬಾದ್ ಸುತ್ತಲಿನ ಪ್ರದೇಶವು 11 ನೇ ಶತಮಾನದಿಂದಲೂ ಅಶಾವಾಲ್ ಎಂದು ಕರೆಯಲ್ಪಡುತ್ತಿತ್ತು.
 • ಚಾಲುಕ್ಯರ ದೊರೆ ಕರ್ಣ ಸಬರಿಮತಿ ದಂಡೆಯ ಮೇಲೆ ಕರ್ಣವತಿ ನಗರವನ್ನು ಸ್ಥಾಪಿಸಿದ್ದ. ನಂತರ ಸುಲ್ತಾನ ಅಹಮದ್‌ ಶಾ ಕ್ರಿ.ಶ. 1411ರಲ್ಲಿ ಕರ್ಣವತಿ ನಗರವನ್ನು ಮರುನಾಮಕರಣ ಮಾಡಿ ಅಹಮದಾಬಾದ್‌ ಎಂದು ಹೆಸರಿಟ್ಟಿದ್ದನು.
 • ಹಾಗಾಗಿ ಸರಿಯಾದ ಸಮಯದಲ್ಲಿ ಅಹಮದಾಬಾದ್‌ನ ಹೆಸರನ್ನು ಬದಲಾಯಿಸಲು ಯೋಚಿಸುತ್ತಿದ್ದೇವೆ ಎಂದು ಹೇಳಿದರು.

ಭಾರತದ ರಕ್ಷಣಾ ವ್ಯವಸ್ಥೆಗೆ ಅರಿಹಂತ್‌

4.

ಸುದ್ಧಿಯಲ್ಲಿ ಏಕಿದೆ ?ಭಾರತದ ಚೊಚ್ಚಲ ಪರಮಾಣು ಚಾಲಿತ, ಬ್ಯಾಲಿಸ್ಟಿಕ್‌ ಕ್ಷಿಪಣಿ ಹೊತ್ತೊಯ್ಯಬಲ್ಲ ಜಲಾಂತರ್ಗಾಮಿ ನೌಕೆ ಐಎನ್‌ಎಸ್‌ ಅರಿಹಂತ್‌ ತನ್ನ ಪ್ರಥಮ ರಹಸ್ಯ ಗಸ್ತನ್ನು ಯಶಸ್ವಿಯಾಗಿ ಪೂರೈಸಿದೆ. ಇದರೊಂದಿಗೆ ಚೀನಾ ಮತ್ತು ಪಾಕಿಸ್ತಾನ ಒಡ್ಡಿದ್ದ ‘ಅಣು’ ಭೀತಿ ಸವಾಲನ್ನು ಭಾರತ ಯಶಸ್ವಿಯಾಗಿ ಮೆಟ್ಟು ನಿಂತಿದೆ.

 • ‘ಒಂದು ವಿಶ್ವಾಸಾರ್ಹ ಪರಮಾಣು ಪ್ರತಿರೋಧವು ಇಂದಿನ ತುರ್ತು ಅಗತ್ಯವಾಗಿದೆ. ಶತ್ರು ದೇಶಗಳ ‘ಅಣ್ವಸ್ತ್ರ’ ಬೆದರಿಕೆಗೆ ಭಾರತದ ದಿಟ್ಟ ಉತ್ತರ ಇದಾಗಿದೆ. ಹೆಸರಿಗೆ ತಕ್ಕಂತೆ ಅರಿಹಂತ್‌, 130 ಕೋಟಿ ಭಾರತೀಯರನ್ನು ರಕ್ಷಣೆ ಮಾಡಲಿದೆ. ಈ ಭಾಗದಲ್ಲಿ ಶಾಂತಿಯ ವಾತಾವರಣ ನೆಲೆಗೊಳ್ಳಲು ನೆರವಾಗಲಿದೆ
 • ರಹಸ್ಯ ಯೋಜನೆಗೆ ಪ್ರಧಾನಿ ನೇತೃತ್ವ: ಅತ್ಯಂತ ಗುಪ್ತ ಯೋಜನೆಯಡಿ ಅಭಿವೃದ್ದಿಪಡಿಸಲಾದ ‘ಅರಿಹಂತ್‌ ಸಬ್‌ಮೆರಿನ್‌’ ನೇರವಾಗಿ ಪ್ರಧಾನಿ ಮೋದಿ ಅವರ ನಿಯಂತ್ರಣಕ್ಕೆ ಒಳಪಟ್ಟಿದೆ. ಪ್ರಧಾನಿ ಅವರ ನಿಯಂತ್ರಣದಲ್ಲಿರುವ ‘ನ್ಯೂಕ್ಲಿಯರ್‌ ಕಮಾಂಡ್‌ ಅಥಾರಿಟಿ’ ಅಡಿಯಲ್ಲಿ ಈ ನೌಕೆ ಕಾರ್ಯನಿರ್ವಹಿಸುತ್ತದೆ.
 • ಚೊಚ್ಚಲ ಹಿರಿಮೆ: ‘ಅರಿಹಂತ್‌’- ಹೆಸರೇ ಸೂಚಿಸುವಂತೆ ಅರ್ಥ ಶತ್ರು ಸಂಹಾರಕ. ಇದು ದೇಶೀಯವಾಗಿ ತಯಾರಿಸಿದ ಭಾರತದ ಮೊದಲ ಅಣ್ವಸ್ತ್ರಚಾಲಿತ ಬ್ಯಾಲೆಸ್ಟಿಕ್‌ ಕ್ಷಿಪಣಿ ಹೊತ್ತೊಯ್ಯಬಲ್ಲ ಜಲಾಂತರ್ಗಾಮಿ ನೌಕೆ.

ಹಿನ್ನಲೆ

 • 30 ವರ್ಷಗಳ ಕನಸಿದು. ರಷ್ಯಾದ ಚಾರ್ಲಿ-1 ವಿನ್ಯಾಸವನ್ನು ಆಧರಿಸಿ ಇದನ್ನು ಅಭಿವೃದ್ಧಿಡಿಸಲಾಗಿದೆ. 1970ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ತಯಾರಿಸುವಂತೆ ಡಿಆರ್‌ಡಿಒಗೆ ಸೂಚಿಸುವುದರೊಂದಿಗೆ ಇದರ ಈ ಕನಸು ಆರಂಭವಾಗಿತ್ತು.
 • ಇದುವರೆಗೂ ಭಾರತ ರಷ್ಯಾ ಸಹಯೋಗದೊಂದಿಗೆ ತಯಾರಿಸಿದ ಐಎನ್‌ಎಸ್‌ ಚಕ್ರಾ ಸಬ್‌ಮೆರಿನ್‌ಗಳನ್ನು ಬಳಸುತ್ತಿತ್ತು. 2012ರಿಂದ 10 ವರ್ಷಗಳಿಗೆ ಇವುಗಳನ್ನು ಭೋಗ್ಯಕ್ಕೆ ಪಡೆಯಲಾಗಿದೆ.

ಶತ್ರುದೇಶಗಳ ಮಹಾನಗರವೇ ನಾಶ!

 • ‘ಐಎನ್‌ಎಸ್‌ ಅರಿಹಂತ್‌’ ಶತ್ರು ದೇಶಗಳ ಮಹಾನಗರಗಳನ್ನೇ ಸರ್ವನಾಶ ಮಾಡಬಲ್ಲ ಸಾಮರ್ಥ್ಯ‌ವುಳ್ಳ ಕ್ಷಿಪಣಿಗಳನ್ನು ಸಮುದ್ರದ ಯಾವುದೇ ಮೂಲೆಯಿಂದ ಪ್ರಯೋಗಿಸಬಲ್ಲದು.
 • ಶತ್ರು ದೇಶಗಳ ಸಾಗರ ತೀರಗಳಲ್ಲಿ ಸದ್ದಿಲ್ಲದೆ ಸುದೀರ್ಘ ಕಾಲ ಲಂಗರು ಹಾಕಬಲ್ಲದು, ಇದರ ಉಪಸ್ಥಿತಿಯನ್ನು ಗುರುತಿಸುವುದು ಕಷ್ಟ.
 • ಭೂಮಿಯಿಂದ ಭೂಮಿಗೆ ಹಾರಿಸಬಲ್ಲ ದೂರಗಾಮಿ ಕ್ಷಿಪಣಿಗಳಿಂದ ತಲುಪಲಾಗದ ಶತ್ರು ದೇಶಗಳ ಪ್ರದೇಶಕ್ಕೂ ಇದು ಕ್ಷಿಪಣಿ ಹಾರಿಸಬಲ್ಲದು. ಶತ್ರು ದೇಶಗಳ ಸಾಗರ ತೀರಕ್ಕೆ ತೆರಳಿ ಅಲ್ಲಿಂದ ಕ್ಷಿಪಣಿ ಪ್ರಯೋಗಿಸುವುದರಿಂದ ಇದು ಸಾಧ್ಯವಾಗಲಿದೆ.
 • ಇದುವರೆಗೂ ಭಾರತ ಭೂಮಿಯಿಂದ ಮತ್ತು ಆಗಸದಿಂದ ಮಾತ್ರ ಅಣ್ವಸ್ತ್ರ ಪ್ರಯೋಗಿಸುವ ಸಾಮರ್ಥ್ಯ‌ ಹೊಂದಿತ್ತು. ‘ಅರಿಹಂತ್‌’ ಯಶಸ್ಸಿನೊಂದಿಗೆ ನೀರಿನಿಂದಲೂ ಅಣ್ವಸ್ತ್ರ ಪ್ರಯೋಗ ಸಾಮರ್ಥ್ಯ‌ ಪಡೆದಿದೆ.

ಐಎನ್‌ಎಸ್‌ ಅರಿಹಂತ್‌ ವಿಶೇಷತೆ

 • 3,500 ಕಿ.ಮೀ: ದಾಳಿ ನಡೆಸಬಲ್ಲ ಪ್ರದೇಶ ವ್ಯಾಪ್ತಿ
 • 6000 ಟನ್‌: ನೌಕೆಯ ಒಟ್ಟು ತೂಕ
 • 28 ಕಿ.ಮೀ/ಗಂಟೆಗೆ ನೀರಿನ ಮೇಲ್ಮೈಮೇಲೆ ವೇಗ
 • 44 ಕಿ.ಮೀ./ಗಂಟೆಗೆ: ಆಳ ಸಾಗರದಲ್ಲಿ ನೌಕೆಯ ವೇಗ
 • 100: ಜಲಾಂತರ್ಗಾಮಿಯ ಒಟ್ಟು ಸಿಬ್ಬಂದಿ
 • 30 ವರ್ಷ: ಐಎನ್‌ಎಸ್‌ ಅರಿಹಂತ್‌ ಕನಸು ನನಸಾಗಲು ಹಿಡಿದ ಸಮಯ
 • 2009, ಜು.26: ಕಾರ್ಗಿಲ್‌ ವಿಜಯ್‌ ದಿವಸ್‌ನಂದು ಲೋಕಾರ್ಪಣೆ
 • 2016 ಆಗಸ್ಟ್‌: ಸುದೀರ್ಘ ಪರೀಕ್ಷೆಯ ಬಳಿಕ ನೌಕಾಪಡೆ ಸೇವೆಗೆ ಸೇರ್ಪಡೆ

ನೋಟು ಅಮಾನ್ಯೀಕರಣ

5.

ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಸಂಚಲನ ಮೂಡಿಸಿದ್ದ ನೋಟು ಅಮಾನ್ಯೀಕರಣ ಘೋಷಣೆಗೆ ಇಂದಿಗೆ 2 ವರ್ಷ.

ಹಿನ್ನಲೆ

 • ನ.8ರಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರ ಘೋಷಿಸಿದರು. ಮಧ್ಯರಾತ್ರಿ 12 (ನ.9)ಕ್ಕೆ ಈ ಘೋಷಣೆ ಜಾರಿಯಾಗಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳು ಮಾನ್ಯತೆ ಕಳೆದುಕೊಂಡವು.

ಪ್ರಯೋಜನಗಳು

 • ಕಪ್ಪು ಹಣ ಹಾವಳಿ ತಡೆ, ಭ್ರಷ್ಟಾಚಾರಕ್ಕೆ ನಿಯಂತ್ರಣ, ತೆರಿಗೆ ಹಾಗೂ ಡಿಜಿಟಲ್ ಪಾವತಿ ಹೆಚ್ಚಳ ಉದ್ದೇಶದಿಂದ ಕೇಂದ್ರ ಈ ಮಧ್ಯರಾತ್ರಿ ಸರ್ಜರಿ ನಡೆಸಿತ್ತು.
 • ಭಾರತೀಯ ಮಾರುಕಟ್ಟೆಯಲ್ಲಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ 41 ಲಕ್ಷ ಕೋಟಿ ರೂ. ಮೊತ್ತದ ನೋಟುಗಳಿದ್ದವು. ಈ ಪೈಕಿ 15.31 ಲಕ್ಷ ಕೋಟಿ ರೂ. ಹಿಂತಿರುಗಿ ಆರ್​ಬಿಐಗೆ ಬಂದಿತ್ತು.
 • ನೋಟು ಅಮಾನ್ಯೀಕರಣ ಬಳಿಕ ಆದಾಯ ತೆರಿಗೆ 8 ಲಕ್ಷ ಕೋಟಿ ರೂ.ಗಳಿಂದ 6.86 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳಗೊಂಡರೆ, ಡಿಜಿಟಲ್ ಪಾವತಿ ಪ್ರಮಾಣ ಶೇ.2.5ರಿಂದ ಶೇ.7.5ಕ್ಕೆ ಏರಿಕೆಯಾಯಿತು.
 • ಹಾಗೆಯೇ 5 ಲಕ್ಷಕ್ಕೂ ಅಧಿಕ ಬೇನಾಮಿ ಕಂಪನಿಗಳ ಮಾಹಿತಿ ಸಿಕ್ಕಿತು.
 • ಇದರ ಜತೆಗೆ ಬ್ಯಾಂಕಿಂಗ್ ವಲಯಕ್ಕೆ ಹಣ ಬಂದಿರುವುದರಿಂದ ಹಣದ ಮೂಲ ಹುಡುಕುವುದು ಸುಲಭ ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿದೆ.

ಕಾಂಗ್ರೆಸ್ ಪ್ರತಿಭಟನೆ: ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ನೋಟು ಅಮಾನ್ಯೀಕರಣ ಸಹಕಾರ ನೀಡಲಿಲ್ಲ ಎಂದು ವಿರೋಧಿಸುತ್ತಿರುವ ಕಾಂಗ್ರೆಸ್, ಆರ್​ಬಿಐ ಕಚೇರಿಗಳೆದುರು ನ.9ರಂದು ಪ್ರತಿಭಟಿಸಲು ನಿರ್ಧರಿಸಿದೆ.

Related Posts
“18 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತ್ರಿವೇಣಿಸಂಗಮದಲ್ಲಿ ಕುಂಭಮೇಳ ಸುದ್ಧಿಯಲ್ಲಿ ಏಕಿದೆ ?ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ, ಕಪಿಲಾ,ಸ್ಪಟಿಕ ಸಂಗಮದ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರದಲ್ಲಿ ಮೂರು ದಿನಗಳ 11ನೇ ಕುಂಭಮೇಳಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ದೊರೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಮೊದಲ ದಿನವೇ ತ್ರಿವೇಣಿ ಸಂಗಮದಲ್ಲಿ ...
READ MORE
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ನ.22 ಚಾಲನೆ ಸಿಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ...
READ MORE
“1st ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸುಲಲಿತ ವ್ಯವಹಾರ: ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲಿ ವ್ಯವಹಾರ ನಡೆಸುವುದು ಅತ್ಯಂತ ಸುಲಲಿತ. ಅತ್ಯಂತ ಸುಲಲಿತ ವ್ಯವಹಾರ ದೇಶಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನಕ್ಕೇರಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಭಾರತ ಭಾರಿ ಪ್ರಗತಿ ಕಂಡಿದೆ. 190 ದೇಶಗಳ ಪಟ್ಟಿಯಲ್ಲಿ ಕಳೆದ ಬಾರಿ 30 ...
READ MORE
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
 ಏಕತೆ ಪ್ರತಿಮೆ ಪೂರ್ಣ ಸುದ್ಧಿಯಲ್ಲಿ ಏಕಿದೆ ?ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವರ 143ನೇ ಹುಟ್ಟುಹಬ್ಬದ ದಿನ ಅ. 31ರಂದು ಉದ್ಘಾಟನೆಗೊಳ್ಳಲಿದೆ. ಗುಜರಾತ್​ನ ನರ್ಮದಾ ನದಿಯ ...
READ MORE
“13 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಂಚಾರ ಕಣ್ಗಾವಲಿಗೆ ಎಫ್‌ಟಿವಿಆರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಸಂಚಾರ ಪೊಲೀಸರು ಇನ್ನಷ್ಟು ಡಿಜಿಟಲೀಕರಣಕ್ಕೆ ಮುಂದಾಗಿದ್ದಾರೆ. ಸಾರಿಗೆ ನಿಯಮ ಉಲ್ಲಂಘನೆ ಕೇಸ್‌ಗಳನ್ನು ತ್ವರಿತ ಮತ್ತು ಸರಳವಾಗಿ ದಾಖಲಿಸಲು ಶೀಘ್ರದಲ್ಲಿಯೇ ಫೀಲ್ಡ್‌ ಟ್ರಾಫಿಕ್‌ ವೈಲೇಷನ್‌ ರಿಪೋರ್ಟ್‌ (ಎಫ್‌ಟಿವಿಆರ್‌) ಸ್ಮಾರ್ಟ್‌ಫೋನ್‌ ಸಾಧನ ಹಿಡಿಯಲಿದ್ದಾರೆ. ರಾಜ್ಯ ಸಂಚಾರ ಮತ್ತು ರಸ್ತೆ ...
READ MORE
ವಾಕ್ ಸ್ವಾತಂತ್ರ್ಯದ ಹಕ್ಕು ಸ್ವೇಚ್ಛಾನುಸಾರವಲ್ಲ, ಆದ್ದರಿಂದ ಮಾನಹಾನಿಗೆ ಸಂಬಂಧಿಸಿದ ಐಪಿಸಿಯ ದಂಡನಾರ್ಹ ಕಲಂಗಳಿಗೆ ಸಾಂವಿಧಾನಿಕ ಸಿಂಧುತ್ವ ಇದೆ ಎಂದು  ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಮಾನಹಾನಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 499 ಮತ್ತು 500 ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ...
READ MORE
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಭ್ರಷ್ಟಾಚಾರ ತಡೆಗೆ ಬಲಿಷ್ಠ ಕಾಯ್ದೆ ಸುದ್ಧಿಯಲ್ಲಿ ಏಕಿದೆ?30 ವರ್ಷಗಳ ನಂತರ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಲಂಚ ಪಡೆಯುವವರ ಜತೆಗೆ ಲಂಚ ನೀಡುವವರಿಗೂ 3ರಿಂದ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನು ಬಿಗಿಗೊಳಿಸಲಾಗಿದೆ. ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ...
READ MORE
10th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಮಹಿಳಾ ಸುರಕ್ಷತೆಗೆ ವಿಶೇಷ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ ನಾರಿಯರ ಸುರಕ್ಷತೆಗಾಗಿ ಕೇಂದ್ರ ಸರಕಾರ ವಿಶೇಷ ಯೋಜನೆ ಘೋಷಿಸಿದ್ದು, ಇದಕ್ಕಾಗಿ 3,000 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಬೆಂಗಳೂರು, ದಿಲ್ಲಿ, ಹೈದರಾಬಾದ್‌ ಒಳಗೊಂಡಂತೆ ...
READ MORE
10th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಿಶ್ವಾಸ ಕಿರಣ ಯೋಜನೆ ಸುದ್ಧಿಯಲ್ಲಿ ಏಕಿದೆ ?ದಸರಾ ರಜೆ ವೇಳೆ, ವಿಶ್ವಾಸ ಕಿರಣ ಯೋಜನೆಯಡಿ ಪರಿಹಾರ ಬೋಧನೆಯ ಕಾರ್ಯಕ್ರಮಕ್ಕೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು, ಈ ಬಾರಿ ಮಧ್ಯಾಹ್ನದ ಬಿಸಿಯೂಟ ಸವಿಯಲಿದ್ದಾರೆ. ವಿಶ್ವಾಸ ಕಿರಣ ಯೋಜನೆ ಕಲಿಕೆಯಲ್ಲಿ ಹಿಂದುಳಿದ ಸರಕಾರಿ ಪ್ರೌಢಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ...
READ MORE
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಬ್ಲಡ್‌ ಮೂನ್‌ ಸುದ್ಧಿಯಲ್ಲಿ ಏಕಿದೆ?ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ. ವಿಶೇಷತೆಯೇನು? ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ...
READ MORE
“18 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“1st ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“13 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾನಹಾನಿಯ ಸ್ವರೂಪ ಆಗಲಿ ಪುನರ್‌ವಿಮರ್ಶೆ
26th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
10th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
10th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

Leave a Reply

Your email address will not be published. Required fields are marked *