“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಪೌರತ್ವ ವಿಧೇಯಕ

1.

ಸುದ್ಧಿಯಲ್ಲಿ ಏಕಿದೆ ?ಅಕ್ರಮ ವಲಸಿಗರ ಪಿಡುಗಿಗೆ ತಡೆ ಹಾಕುವ ಮಹತ್ವದ ಪೌರತ್ವ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ.

ಏನಿದು ಪೌರತ್ವ ವಿಧೇಯಕ?

 • ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955 ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ಪೌರತ್ವ ವಿಧೇಯಕವನ್ನು 2016ರಲ್ಲಿ ಪ್ರಸ್ತಾಪಿಸಲಾಯಿತು.
 • ಇದರ ಮೂಲಕ ಅಕ್ರಮ ವಲಸಿಗ ವ್ಯಾಖ್ಯಾನವನ್ನು ಬದಲಾಯಿಸಲು ಸರಕಾರ ಪ್ರಯತ್ನಿಸುತ್ತಿದೆ.
 • ಸೂಕ್ತ ಪಾಸ್‌ಪೋರ್ಟ್‌ ಮತ್ತು ವೀಸಾ ಇಲ್ಲದೆ ಅಥವಾ ನಕಲಿ ದಾಖಲೆ ಹೊಂದಿ ದೇಶ ಪ್ರವೇಶಿಸಿದ, ಅಥವಾ ವೀಸಾ ಅವಧಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿದವರನ್ನು ಅಕ್ರಮ ವಲಸಿಗ ಎಂದು ಪರಿಗಣಿಸಲಾಗುತ್ತದೆ.
 • ಹೊಸ ಕಾಯಿದೆ ಜಾರಿಯಾದರೆ, 2014ರ ಡಿ.31ರ ಒಳಗೆ ಅಫಘಾನಿಸ್ತಾನ, ಬಾಂಗ್ಲಾ ಮತ್ತು ಪಾಕಿಸ್ತಾನಗಳಿಂದ ಆಗಮಿಸಿ ಇಲ್ಲಿ ನೆಲೆಸಿರುವ ಹಿಂದೂ, ಬೌದ್ಧ, ಜೈನ, ಸಿಖ್‌, ಪಾರ್ಸಿ ಅಥವಾ ಕ್ರೈಸ್ತ ಮತದವರು ಭಾರತೀಯ ಪೌರರೆನಿಸುತ್ತಾರೆ.
 • ಈ ತನಕ 12 ವರ್ಷಗಳಿಂದ ದೇಶದಲ್ಲಿ ನೆಲೆಸಿದ ವಿದೇಶಿಗರಿಗೆ ಪೌರತ್ವ ಪ್ರಾಪ್ತಿ ಆಗುತ್ತಿತ್ತು. ಹೊಸ ಕಾಯಿದೆ ಜಾರಿಯಾದರೆ ಅದು 6 ವರ್ಷಕ್ಕಿಳಿಯಲಿದೆ.

ವಿರೋಧ ಯಾಕೆ?

 • ಮುಖ್ಯವಾಗಿ, ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿರುವುದು ಅಸ್ಸಾಂನಲ್ಲಿ. ಪಕ್ಕದ ಬಾಂಗ್ಲಾದೇಶದಲ್ಲಿ ಧಾರ್ಮಿಕ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಬಂದು ಅಸ್ಸಾಂನಲ್ಲಿ ಬೀಡು ಬಿಟ್ಟಿದ್ದಾರೆ.
 • ಅಸ್ಸಾಂ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಮುಂತಾದ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳು ಹಾಗೂ ಕ್ರೈಸ್ತಮತೀಯರ ಸಂಖ್ಯೆ ಅಧಿಕವಾಗಿದೆ. ಹೊಸ ಜಾಯಿದೆ ಜಾರಿಗೆ ಬಂದರೆ, ದೊಡ್ಡ ಸಂಖ್ಯೆಯ ವಲಸಿಗ ಹಿಂದೂಗಳು ಇಲ್ಲಿ ಶಾಶ್ವತ ನೆಲೆ ಕಂಡುಕೊಳ್ಳಲಿದ್ದಾರೆ. ಈ ರಾಜ್ಯಗಳ ಬುಡಕಟ್ಟು ಸಮುದಾಯ, ಸ್ಥಳೀಯ ಸಮುದಾಯಗಳು ಹೊರಗಿನವರಿಗೆ ಪೌರತ್ವ ಕೊಡುವುದನ್ನು ಇಷ್ಟಪಡುತ್ತಿಲ್ಲ.
 • ವಲಸಿಗರು ಪೌರರಾಗುವುದರಿಂದ ರಾಜ್ಯದ ಪ್ರಾದೇಶಿಕ ಅಸ್ಮಿತೆ, ಸಂಸ್ಕೃತಿಯೇ ಮಾಯವಾಗಬಹುದು ಎಂಬುದು ಇವರ ಆತಂಕ. ಈ ವಿಧೇಯಕದ ಜಾರಿಯಿಂದ ಈಶಾನ್ಯ ಭಾರತೀಯರು ಸಂತ್ರಸ್ತರಾಗುತ್ತಾರೆ ಎಂಬುದು ಪ್ರತಿಪಕ್ಷಗಳ ವಾದ.

ಮುಸ್ಲಿಮರು ಯಾಕಿಲ್ಲ?

 • ವಿಧೇಯಕದಲ್ಲಿ ಮುಸ್ಲಿಂ ವಲಸಿಗರ ಪ್ರಸ್ತಾಪವಿಲ್ಲ. ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದಿಂದ ಸಂತ್ರಸ್ತರಾದ ರೋಹಿಂಗ್ಯಾ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಭಾರತ ಸೇರಿದ್ದಾರೆ. ಆದರೆ ಈ ಕಾಯಿದೆಯ ಮೂಲಭೂತ ಉದ್ದೇಶ, ಭಾರತವೇ ಮೂಲ ಮಾತೃಭೂಮಿಯಾಗಿದ್ದು, ಇಂದು ಸಂತ್ರಸ್ತರಾದವರಿಗೆ ನೆಲೆ ಒದಗಿಸುವುದು.
 • ಹಿಂದೂ, ಬೌದ್ಧ, ಜೈನ ಮುಂತಾದ ವಲಸಿಗರಿಗೆ ಭಾರತ ಹೊರತುಪಡಿಸಿ ಹೋಗಲು ಬೇರೆ ದೇಶಗಳೇ ಇಲ್ಲ ಎಂಬುದನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ವಿಧೇಯಕದಲ್ಲಿ ಕ್ರೈಸ್ತ ವಲಸಿಗರ ಪ್ರಸ್ತಾಪವಿದೆ; ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಸಾಕಷ್ಟು ಸಂಖ್ಯೆಯ ಕ್ರಿಶ್ಚಿಯನ್ನರಿದ್ದರು. ಬಾಂಗ್ಲಾ ಹಾಗೂ ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರಾಗಿ ಬಂದ ಮುಸ್ಲಿಮರಲ್ಲಿ ಅನೇಕರು ದೇಶದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಯಾರು ಪೌರರು?

 • 1950ರ ಜ.26ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದವರು; ತಂದೆತಾಯಿಗಳಿಬ್ಬರೂ ಭಾರತದ ಪೌರರಾಗಿದ್ದು 2004ರ ಡಿ.3ರ ಮೊದಲು ಜನಿಸಿದವರು; 1950 ಜ.26ರಿಂದ 1992 ಡಿ.10ರ ನಡುವೆ ವಿದೇಶದಲ್ಲಿ ಜನಿಸಿದ್ದರೂ ಆ ವೇಳೆಗೆ ತಂದೆ ಭಾರತದ ಪೌರನಾಗಿದ್ದರೆ; 1992ರ ಡಿ.10ರ ನಂತರ ವಿದೇಶದಲ್ಲಿ ಜನಿಸಿದ್ದರೂ ಆ ವೇಳೆಗೆ ತಂದೆತಾಯಿಗಳಿಬ್ಬರೂ ಭಾರತೀಯ ಪೌರರಾಗಿದ್ದರೆ- ಅಂಥವರು ಭಾರತೀಯರಾಗಿರುತ್ತಾರೆ.
 • 2004ರ ಡಿ.3ರ ಬಳಿಕ, ಭಾರತೀಯ ತಂದೆತಾಯಿಗೆ ವಿದೇಶದಲ್ಲಿ ಜನಿಸಿದ್ದರೂ, ಒಂದು ವರ್ಷದೊಳಗೆ ದೂತಾವಾಸದ ಮುಖೇನ ಜನನ ನೋಂದಣಿ ಆಗಿರಬೇಕು. ಇದಲ್ಲದೆ 1955ರ ಪೌರತ್ವ ಕಾಯಿದೆಯಲ್ಲಿ ತಿಳಿಸಿರುವಂತೆ ಭಾರತೀಯ ಮೂಲದವನಾಗಿದ್ದು ಭಾರತದಲ್ಲಿ 7 ವರ್ಷಗಳಿಂದ ನೆಲೆಸಿದ್ದರೆ; ಅವಿಭಜಿತ ಭಾರತದವನಾಗಿದ್ದು ಇತರೆಡೆ ನೆಲೆಸಿದ್ದರೆ; ಭಾರತೀಯ ವ್ಯಕ್ತಿಯನ್ನು ಮದುವೆಯಾಗಿ ಏಳು ವರ್ಷಗಳಿಂದ ಇಲ್ಲಿ ನೆಲೆಸಿದ್ದರೆ; ಈಗಾಗಲೇ ಭಾರತೀಯ ಪೌರತ್ವ ಪಡೆದಿರುವ ಪೋಷಕರ ಮಕ್ಕಳಾಗಿದ್ದರೆ- ಅಂಥವರು ಅರ್ಜಿ ಸಲ್ಲಿಸಿ ಪೌರತ್ವ ಪಡೆಯಬಹುದು.

ಎನ್‌ಆರ್‌ಸಿ ಮತ್ತು ಪೌರತ್ವ

 • ಮುಖ್ಯವಾಗಿ, ಈ ಕಾಯಿದೆಯ ದೊಡ್ಡ ಪರಿಣಾಮ ಕಾಣಿಸಲಿರುವುದು ಅಸ್ಸಾಂನಲ್ಲಿ. ಪ್ರಸ್ತುತ ಇಲ್ಲಿ ಅಸ್ಸಾಂ ಒಪ್ಪಂದ-1985 ಜಾರಿಯಲ್ಲಿದ್ದು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಡೆಯುತ್ತಿದೆ. ಅದರ ಪ್ರಕಾರ, 1971ರ ಮಾರ್ಚ್‌ವರೆಗೆ ವಲಸಿಗರಾಗಿ ಇಲ್ಲಿಗೆ ಆಗಮಿಸಿದವರಿಗಷ್ಟೇ ಇಲ್ಲಿನ ಪೌರತ್ವ ಕೊಡಬಹುದು. ಈ ಸಂದರ್ಭದಲ್ಲಿ ಸಾಕಷ್ಟು ಹಿಂದೂಗಳೂ ಮುಸ್ಲಿಮರೂ ಆಗಮಿಸಿದ್ದಾರೆ.
 • ಹೊಸ ಕಾಯಿದೆಯ ಪ್ರಕಾರ, 1971ರ ನಂತರ 2014ರವರೆಗೆ ಬಂದ ಮುಸ್ಲಿಮೇತರರಿಗೆ ಪೌರತ್ವ ಸಿಗಲಿದೆ. ಮುಸ್ಲಿಮರ ಪ್ರಸ್ತಾಪವಿಲ್ಲ. ಇದು ವಲಸಿಗ ಮುಸ್ಲಿಂ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಇವರನ್ನು ಗಡೀಪಾರು ಮಾಡಲು ಈ ಕಾಯಿದೆ ರೂಪಿಸಲಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ.

ಪೌರತ್ವ ಹೇಗೆ?

 • ನಿರ್ದಿಷ್ಟ ಆರು ಧಾರ್ಮಿಕ ಅಲ್ಪಸಂಖ್ಯಾತ ಕೋಮುಗಳ ಹಿಂದೂ, ಜೈನ್‌, ಕ್ರಿಶ್ಚಿಯನ್‌, ಸಿಖ್‌, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರು ಅಕ್ರಮ ವಲಸಿಗರು ಶಾಶ್ವತ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
 • ಮೊದಲ ಹಂತದಲ್ಲಿ ಜಿಲ್ಲಾಡಳಿತ ಅವರ ದಾಖಲೆಗಳನ್ನು ಪರಿಶೀಲಿಸಿ, ನಂತರ ರಾಜ್ಯ ಸರಕಾರದ ಸಮ್ಮತಿಗೆ ಕಳಿಸಿಕೊಡಲಾಗುತ್ತದೆ. ಈ ಎರಡೂ ಕಡೆಯಿಂದ ಒಪ್ಪಿಗೆ ಪಡೆದ ವಲಸಿಗರಿಗೆ ಕೇಂದ್ರದಿಂದ ಪೌರತ್ವ ಮಂಜೂರಾಗುತ್ತದೆ.

ಯಾವ ರಾಜ್ಯಗಳಿಗೆ ಅನ್ವಯ?

 • ಈ ತಿದ್ದುಪಡಿ ವಿಧೇಯಕ ಕಾನೂನು ಆಗಿ ಪರಿವರ್ತನೆಗೊಂಡರೆ ಎಲ್ಲ ರಾಜ್ಯಗಳು ಇದನ್ನು ಪರಿಪಾಲಿಸಬೇಕಾಗುತ್ತದೆ.

ಮೇಲ್ಜಾತಿ ಮೀಸಲು ವಿಧೇಯಕ 

2.

ಸುದ್ಧಿಯಲ್ಲಿ ಏಕಿದೆ ?ಮೇಲ್ಜಾತಿಗಳ ಹಾಗೂ ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲು ಒದಗಿಸುವ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.

ಸಿನ್ಹೊ ಸಮಿತಿ ಶಿಫಾರಸು

 • ಒಬಿಸಿ ಅಥವಾ ಇಬಿಸಿ ಸಮುದಾಯಗಳಿಗೆ ನೀಡಲಾಗಿರುವ ಮೀಸಲು ಸವಲತ್ತನ್ನೇ ಅನುಸರಿಸಿ ಮೇಲ್ಜಾತಿಗಳ ಬಡವರಿಗೂ ಅದರ ಅನುಕೂಲ ಕಲ್ಪಿಸಬಹುದೇ ಎನ್ನುವ ಕುರಿತು 2006ರಲ್ಲೇ ಕೇಂದ್ರ ಸರಕಾರ ಚಿಂತನೆ ನಡೆಸಿತ್ತು. ಅದರ ರೂಪುರೇಷಗಳ ಸಿದ್ಧತೆಗಾಗಿ ಎಸ್‌.ಆರ್‌.ಸಿನ್ಹೊ ಆಯೋಗ ರಚಿಸಲಾಯಿತು. ಈ ಆಯೋಗ 2010ರಲ್ಲಿ ತನ್ನ ಶಿಫಾರಸು ಸಲ್ಲಿಸಿತ್ತು. ಈ ಶಿಫಾರಸಿನ ಅನೇಕ ಅಂಶಗಳನ್ನು ಸೇರಿಸಿಕೊಂಡು ಈಗಿನ ವಿಧೇಯಕ ರೂಪುಗೊಂಡಿದೆ ಎಂದು ಮೂಲಗಳು ಹೇಳಿವೆ.

ಯಾರಿಗೆ ಅನುಕೂಲ?

 • ಬ್ರಾಹ್ಮಣ, ರಜಪೂತ (ಠಾಕೂರ್‌ಗಳು), ಜಾಟ್‌, ಮರಾಠ, ಭೂಮಿಹಾರ್‌, ಕಾಪು ಮತ್ತು ಕಮ್ಮ ಸೇರಿದಂತೆ ಅನೇಕ ವ್ಯಾಪಾರಿ ಸಮುದಾಯಗಳಿಗೆ ಇದರ ಲಾಭ ದಕ್ಕಲಿದೆ.
 • ಒಟ್ಟಾರೆಯಾಗಿ ಮೇಲ್ಜಾತಿಯ ಅಭ್ಯರ್ಥಿಗಳಲ್ಲಿ ಯಾರು ಯಾರಿಗೆ ಇದು ಅನ್ವಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.
 • ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆರ್ಥಿಕ ವರಮಾನ ಹೊಂದಿರುವವರು
 • 5 ಎಕರೆಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವವರು
 • 1000 ಚದರಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿರುವವರು.
 • 200 ಯಾರ್ಡ್‌ಗಿಂತ ಕಡಿಮೆ ಅಳತೆಯುಳ್ಳ ಪುರಸಭೆ ವ್ಯಾಪ್ತಿಯಲ್ಲಿರುವ ನಿವೇಶನ ಹೊಂದಿರುವವರು.

ಮೀಸಲು ಯಾವಾಗ ದೊರೆಯಲಿದೆ ?

 • ಸಂಸತ್​ನ ಉಭಯ ಸದನಗಳು 2/3ರ ಬಹುಮತದಲ್ಲಿ ಸಂವಿಧಾನದ 14, 15ನೇ ಪರಿಚ್ಛೇದದ ತಿದ್ದುಪಡಿಗೆ ಅನುಮೋದನೆ ನೀಡಿದಲ್ಲಿ ಮೇಲ್ವರ್ಗಗಳ ಬಡವರಿಗೆ ಸರ್ಕಾರಿ ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.10 ಮೀಸಲು ದೊರೆಯಲಿದೆ.
 • ಹಾಲಿ ವ್ಯವಸ್ಥೆಯಲ್ಲಿ ಶೇ.5 ಪ್ರಮಾಣ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾಗಿದೆ. ನೂತನ ನೀತಿ ಜಾರಿಗೆ ಬಂದಲ್ಲಿ ಸಾಮಾನ್ಯ ವರ್ಗದ ಕೋಟಾದಲ್ಲಿ ಶೇ. 40.5 ಪ್ರಮಾಣ ಉಳಿಯಲಿದೆ.

ಸುಪ್ರೀಂಕೋರ್ಟ್ ಏನು ಹೇಳಿತ್ತು?

 • ಮೀಸಲು ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸದಂತೆ 1992ರಲ್ಲಿ ಸುಪ್ರೀಂ ಸಾಂವಿಧಾನಿಕ ಪೀಠ ಹೇಳಿತ್ತು. ನಿವೃತ್ತ ಮು.ನ್ಯಾ.ಕರ್ನಾಟಕದ ಎಂ.ಎನ್.ವೆಂಕಟಾಚಾಲಯ್ಯ ಅವರೂ ಈ ಪೀಠದಲ್ಲಿದ್ದರು. ಒಂದು ವೇಳೆ ಮೀಸಲು ಪ್ರಮಾಣ ಶೇ.50ರ ಮಿತಿ ದಾಟಿದಲ್ಲಿ ಅದು ಸಂವಿಧಾನಬಾಹಿರ ಎಂದು ಕೋರ್ಟ್ ಹೇಳಿತ್ತು.
 • ಈ ಮಿತಿ ದಾಟಲೇಬೇಕಿದ್ದರೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮೂಲಕ ಸಂವಿಧಾನಕ್ಕೆ ತಿದ್ದುಪಡಿ ತರಲು ಅವಕಾಶ ನೀಡಲಾಗಿತ್ತು. ಈ ಆದೇಶದ ಬಳಿಕವೇ ತಮಿಳುನಾಡಿನಲ್ಲಿ ಮೀಸಲು ಪ್ರಮಾಣವನ್ನು ಶೇ.69ಕ್ಕೆ ಏರಿಸಿ 9ನೇ ಶೆಡ್ಯೂಲ್​ಗೆ ಸೇರಿಸಲಾಗಿತ್ತು. ಆದರೆ ಈ ಶೆಡ್ಯೂಲನ್ನೂ ಪರಾಮಶಿಸಬಹುದು ಎಂದು ಇತ್ತೀಚೆಗೆ ಸುಪ್ರೀಂ ಹೇಳಿರುವುದರಿಂದ ಕೇಂದ್ರದ ನಿರ್ಧಾರ ಕುತೂಹಲ ಕೆರಳಿಸಿದೆ.

ಆರ್​ಬಿಐ ಡಿಜಿಟಲ್ ಪಾವತಿ ಸಮಿತಿ

3.

ಸುದ್ಧಿಯಲ್ಲಿ ಏಕಿದೆ ?ಡಿಜಿಟಲ್‌ ಪೇಮೆಂಟ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗ ಮತ್ತೊಂದು ಸಮಿತಿ ರಚಿಸಿದೆ.

 • ಐವರು ಸದಸ್ಯರ ಈ ಸಮಿತಿಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
 • ಡಿಜಿಟಲ್‌ ಪೇಮೆಂಟ್‌ ಮತ್ತು ಆರ್ಥಿಕತೆಯ ಡಿಜಟಲೀಕರಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಿದೆ.
 • ಸಮಿತಿಯು ಮೊದಲ ಸಭೆ ಸೇರಿದ ನಂತರ 90 ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಆರ್‌ಬಿಐ ತಿಳಿಸಿದೆ.
 • ಸಮಿತಿಯ ಉಳಿದ ಸದಸ್ಯರೆಂದರೆ ಆರ್‌ಬಿಐ ಮಾಜಿ ಉಪ ಗವರ್ನರ್‌ ಎಚ್‌.ಆರ್‌. ಖಾನ್‌, ವಿಜಯ್‌ ಬ್ಯಾಂಕ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಸಾನ್ಸಿ, ಮಾಹಿತಿ ತಂತ್ರಜ್ಞಾನ ಇಲಾಖೆ ಮಾಜಿ ಕಾರ್ಯದರ್ಶಿ ಅರುಣ ಶರ್ಮ ಮತ್ತು ಐಐಎಂ ಅಹಮದಾಬಾದ್‌ನ ಕ್ರಿಯಾಶೀಲ ವಿಭಾಗದ ಮುಖ್ಯಸ್ಥರಾದ ಸಂಜಯ್‌ ಜೈನ್‌.

ಸಮಿತಿಯ ಕೆಲಸಗಳು

 • ಡಿಜಿಟಲ್‌ ಪೇಮೆಂಟ್‌ಗಳಿಂದ ಗ್ರಾಹಕರಿಗೆ ಆಗುವ ಉಪಯೋಗಗಳು ಹಾಗೂ ಆರ್ಥಿಕತೆಗೆ ಇದರಿಂದಾಗುವ ಪರಿಣಾಮಗಳ ಕುರಿತು ಈ ಸಮಿತಿಯು ಕೆಲವು ಮಾರ್ಗಸೂಚಿಗಳನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ.
 • ಡಿಜಿಟಲ್ ಪಾವತಿಯ ಸುರಕ್ಷತೆಯನ್ನು ಇನ್ನಷ್ಟು ಬಲಗೊಳಿಸಲು ಆರ್​ಬಿಐಗೆ ಅಗತ್ಯ ಸಲಹೆಗಳನ್ನು ಸಮಿತಿ ನೀಡಲಿದೆ

ಪ್ರತಿಭೆಗಳಿಗೆ ಪ್ರಧಾನಿ ಫೆಲೋಷಿಪ್

4.

ಸುದ್ಧಿಯಲ್ಲಿ ಏಕಿದೆ ?ವರ್ಷದಿಂದ ವರ್ಷಕ್ಕೆ ಭಾರತದಿಂದ ಪ್ರತಿಭಾ ಪಲಾಯನ ಹೆಚ್ಚುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಳ್ಳಲು ವಿದೇಶಗಳಲ್ಲಿ ಹೇರಳ ಅವಕಾಶ ಇರುವ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೂಡ ಹೆಚ್ಚಿಗೆ ಸಿಗುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಹಾರುವವರೇ ಹಲವರು. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದೆ ‘ಪ್ರಧಾನಮಂತ್ರಿ ರಿಸರ್ಚ್ ಫೆಲೋಷಿಪ್’.

ಏನಿದು ಯೋಜನೆ?

 • ಈ ಯೋಜನೆಯ ಹೆಸರು ‘ಪ್ರಧಾನಮಂತ್ರಿ ರಿಸರ್ಚ್ ಫೆಲೋಷಿಪ್. 2018ರಲ್ಲಿ ಈ ಯೋಜನೆ ಜಾರಿಗೆ ಬಂದಿದೆ.
 • ಯೋಜನೆಯ ಅಡಿ ಪ್ರತಿಭಾನ್ವಿತ ಸಂಶೋಧನಾ (ಪಿ.ಎಚ್​ಡಿ) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ (ಸ್ಕಾಲರ್​ಷಿಪ್) ಸಿಗಲಿದೆ.
 • ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ಸೇರಿದಂತೆ ದೇಶದ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಸಂಶೋಧನೆ ನಡೆಸಲು ಈ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ 70 ಸಾವಿರದಿಂದ 80 ಸಾವಿರ ರೂಪಾಯಿ ಶಿಷ್ಯವೇತನ ಮತ್ತು ಆಯ್ದ ವಿದ್ಯಾರ್ಥಿಗಳಿಗೆ 10 ಲಕ್ಷದವರೆಗೆ ವಿದ್ಯಾರ್ಥಿವೇತನ ಸಿಗಲಿದೆ. ಇದಕ್ಕಾಗಿ 2020ರ ಅವಧಿಯವರೆಗೆ -ಠಿ; 1,650 ಕೋಟಿ ಅನುದಾನವನ್ನೂ ಕೇಂದ್ರ ಸರ್ಕಾರ ಮೀಸಲಿಟ್ಟಿದೆ.

ಯಾರು ಅರ್ಹರು?

 • ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಕೆಳಗಿನ ಅರ್ಹತೆ ಇರಬೇಕು:
 • ಮಾನ್ಯತೆ ಪಡೆದಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ-
 • ನಾಲ್ಕು (ಅಥವಾ ಐದು) ವರ್ಷಗಳ ಪದವಿಪೂರ್ವ ಕೋರ್ಸ್​ನ ಅಂತಿಮ ವರ್ಷವನ್ನು ಪೂರೈಸಿರಬೇಕು ಅಥವಾ ಕಲಿಯುತ್ತಿರಬೇಕು.
 • ಐದು ವರ್ಷಗಳ ಇಂಟಿಗ್ರೇಟೆಡ್ ಎಂ.ಟೆಕ್ ಅಥವಾ ಐದು ವರ್ಷಗಳ ಎಂ.ಎಸ್ಸಿಯ ಅಂತಿಮ ವರ್ಷ ಪೂರೈಸಿರಬೇಕು ಅಥವಾ ಅಂತಿಮ ವರ್ಷದಲ್ಲಿರಬೇಕು.
 • ಎಂ.ಎಸ್ಸಿಯ ಎರಡು ವರ್ಷಗಳು ಪೂರೈಸಿರಬೇಕು.
 • ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಐದು ವರ್ಷಗಳ ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರೈಸಿರಬೇಕು.
 • ವಿದ್ಯಾರ್ಥಿಗಳು ಸಿಜಿಪಿಎ/ಸಿಪಿಐನಲ್ಲಿನ 10-ಪಾಯಿಂಟ್ ಸ್ಕೇಲ್​ಗೆ ಕನಿಷ್ಠ 0 ಅಂಕ ಪಡೆದಿರಬೇಕು.
 • ‘ಗೇಟ್’ ಪರೀಕ್ಷೆಯಲ್ಲಿ ಕನಿಷ್ಠ 750 ಅಂಕಗಳನ್ನು ಗಳಿಸಬೇಕು.

ಇವರು ಅರ್ಹರು

 • ದೇಶದ ಕೆಲವೊಂದು ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ ಯುವಕ/ಯುವತಿಯರು ಈ ವೇತನ ಪಡೆಯಲು ಅರ್ಹರು. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ರೀಸರ್ಚ್ (ಐಐಎಸ್​ಇಆರ್), ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್​ಐಟಿ), ಇಂಟರ್​ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಇನ್​ಫಾಮೇಷನ್ ಟೆಕ್ನಾಲಜಿ (ಐಐಐಟಿ) ಹಾಗೂ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್​ಸಿ) ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಸ್ಕಾಲರ್​ಷಿಪ್ ಪಡೆಯಲು ಅರ್ಹತೆ ಹೊಂದಿರುತ್ತಾರೆ.
 • ಇದರ ಹೊರತಾಗಿ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಇತರ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಅವರ ಅರ್ಜಿಗಳನ್ನೂ ಪರಿಶೀಲಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಎಷ್ಟು ಮೊತ್ತ?

 • ಮೊದಲ ಎರಡು ವರ್ಷಗಳು ಮಾಸಿಕ ತಲಾ -ಠಿ;70ಸಾವಿರ, ಮೂರನೆಯ ವರ್ಷ ಮಾಸಿಕ -ಠಿ; 75ಸಾವಿರ, ನಾಲ್ಕು ಮತ್ತು ಐದನೆಯ ವರ್ಷ ಮಾಸಿಕ -ಠಿ;80ಸಾವಿರ. ಇದರ ಹೊರತಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ ‘ರೀಸರ್ಚ್ ಗ್ರಾ್ಯಂಟ್’ ಎಂದು ವರ್ಷಕ್ಕೆ -ಠಿ;2ಲಕ್ಷ ವೇತನ ನೀಡಲಾಗುವುದು (ಗರಿಷ್ಠ -ಠಿ;10ಲಕ್ಷ).

ಆಯ್ಕೆ ಹೇಗೆ?

 • ಬರುವ ಫೆಬ್ರುವರಿಯಲ್ಲಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೇ ತಿಂಗಳಿನಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು. ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಕಠಿಣವೂ ಆಗಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಮೊದಲು ವಿದ್ಯಾರ್ಥಿಗಳ ಸ್ಕ್ರೀನಿಂಗ್ ನಡೆಯುತ್ತದೆ. ಆನಂತರ ಆಯ್ಕೆ ಸಮಿತಿಯು ಲಿಖಿತ ಮತ್ತು ಮೌಖಿಕವಾಗಿ ವಿದ್ಯಾರ್ಥಿಗಳ ಅರ್ಹತೆಯನ್ನು ಅಳೆಯುತ್ತದೆ. ಇದರ ಜತೆಗೆ, ಮಹತ್ವದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಮಿತಿಯ ಸದಸ್ಯರು ಚರ್ಚೆ, ಸಂವಾದಗಳನ್ನು ಕೂಡ ನಡೆಸಿ ವಿದ್ಯಾರ್ಥಿಯ ಶಿಕ್ಷಣ ಮಟ್ಟವನ್ನು ಅಳೆಯಲಿದ್ದಾರೆ.

ಶಸ್ತ್ರಸಹಿತ ತೇಜಸ್‌ ಉತ್ಪಾದನೆಗೆ ಎಚ್‌ಎಎಲ್‌ಗೆ ಹಸಿರು ನಿಶಾನೆ

5.

ಸುದ್ಧಿಯಲ್ಲಿ ಏಕಿದೆ ?ಶಸ್ತ್ರಸಹಿತ ಸರಣಿಯ ಲಘು ಯುದ್ಧ ವಿಮಾನ ‘ತೇಜಸ್‌’ ಉತ್ಪಾದನೆಗೆ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ಗೆ (ಎಚ್‌ಎಎಲ್‌) ಸೆಂಟರ್‌ ಫಾರ್‌ ಮಿಲಿಟರಿ ಏರ್‌ವರ್ಥಿನೆಸ್‌ ಆ್ಯಂಡ್‌ ಸರ್ಟಿಫಿಕೇಷನ್‌ನಿಂದ (ಸಿಇಎಂಐಎಲ್‌ಎಸಿ) ಹಸಿರು ನಿಶಾನೆ ದೊರಕಿದೆ.

 • ಅಂತಿಮ ಕಾರ್ಯಾಚರಣೆ ಯೋಗ್ಯ ಪರವಾನಗಿ (ಎಫ್‌ಒಸಿ) ಅರ್ಹತೆಗಳ ಅನುಸಾರ ತೇಜಸ್‌ ಎಂಕೆ1 ಉತ್ಪಾದನೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ತೀವ್ರ ಪ್ರಮಾಣದ ಪರೀಕ್ಷೆಗಳು ಮತ್ತು ಟ್ರಯಲ್‌ಗಳು ನಡೆಸಿದ ನಂತರವೇ ನಿಜವಾದ ಎಫ್‌ಒಸಿ ಸಿಗಲಿದೆ.

ಮಾನದಂಡಗಳೇನು ?

 • ವಿಮಾನವು ಯುದ್ಧ ಸಂದರ್ಭ ಹಾರಾಟ ನಡೆಸುವಾಗಲೇ ಇಂಧನ ತುಂಬಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಕಡ್ಡಾಯವಾಗಿ ಹೊಂದಿರಬೇಕು. ಉಳಿದಂತೆ ರಾಡಾರ್‌, ಎಲೆಕ್ಟ್ರಾನಿಕ್‌ ಯುದ್ಧ ಸಮರ್ಥ ಸೂಟ್‌ಗಳು, ವಿವಿಧ ಮಾದರಿಯ ಬಾಂಬ್‌ ಮತ್ತು ಇತರ ಶಸ್ತ್ರಗಳ ಒಳಗೊಂಡ ಪರೀಕ್ಷೆಗಳು ನಡೆಯಬೇಕು. ಎಚ್‌ಎಎಲ್‌ನ ಎಡಿಎ ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿರುವ ಕುರಿತು ಒದಗಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ಸಿಇಎಂಐಎಲ್‌ಎಸಿ ಒಪ್ಪಿಗೆ ನೀಡಿದೆ.

ತೇಜಸ್ ವಿಮಾನದ ಬಗ್ಗೆ

 • ಎಚ್ಎಎಲ್ ತೇಜಸ್ ಇಂಡಿಯನ್ ಏರ್ ಫೋರ್ಸ್ ಮತ್ತು ಇಂಡಿಯನ್ ನೌಕಾಪಡೆಗೆ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಮತ್ತು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿನ್ಯಾಸಗೊಳಿಸಿದ ಭಾರತೀಯ ಸಿಂಗಲ್ ಸೀಟ್, ಸಿಂಗಲ್-ಜೆಟ್ ಇಂಜಿನ್, ಮಲ್ಟಿರೋಲ್ ಲೈಟ್ ಫೈಟರ್.
 • ಇದು ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಪ್ರೋಗ್ರಾಂನಿಂದ ಬಂದಿದೆ, ಇದು 1980 ರ ದಶಕದಲ್ಲಿ ಭಾರತದ ವಯಸ್ಸಾದ ಮಿಗ್ –21 ರನ್ನು ಬದಲಿಸಿತು. 2003 ರಲ್ಲಿ, ಎಲ್ಸಿಎ ಅಧಿಕೃತವಾಗಿ “ತೇಜಸ್” ಎಂದು ಹೆಸರಿಸಲ್ಪಟ್ಟಿತು.
 • ತೇಜಸ್ ಬಾಲವಿಲ್ಲದ ಕಾಂಪೌಂಡ್ ಡೆಲ್ಟಾ-ವಿಂಗ್ ಸಂರಚನೆಯನ್ನು ಒಂದೇ ಡೋರ್ಸಲ್ ಫಿನ್ ಹೊಂದಿದೆ. ಇದು ಹೆಚ್ಚಿನ ಕುಶಲತೆಯನ್ನು ಒದಗಿಸುತ್ತದೆ. ಇದು ಶಾಂತ ಸ್ಥಿರ ಸ್ಥಿರತೆ, ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್, ಮಲ್ಟಿ-ಮೋಡ್ ರೆಡಾರ್, ಇಂಟಿಗ್ರೇಟೆಡ್ ಡಿಜಿಟಲ್ ಏವಿಯಾನಿಕ್ಸ್ ಸಿಸ್ಟಮ್, ಸಮ್ಮಿಶ್ರ ವಸ್ತು ರಚನೆಗಳು ಮತ್ತು ಫ್ಲ್ಯಾಟ್ ರೇಟ್ ಎಂಜಿನ್ ಮುಂತಾದ ತಂತ್ರಜ್ಞಾನಗಳನ್ನು ಸಂಯೋಜಿಸುತ್ತದೆ. ಇದು ಸಮಕಾಲೀನ ಸೂಪರ್ಸಾನಿಕ್ ಕದನ ವಿಮಾನದ ಅದರ ವರ್ಗದಲ್ಲಿನ ಚಿಕ್ಕ ಮತ್ತು ಹಗುರವಾದದ್ದು.
 • ತೇಜಸ್ HAL HF-24 ಮಾರುತ್ ನಂತರ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿದ ಎರಡನೇ ಸೂಪರ್ಸಾನಿಕ್ ಫೈಟರ್ ಆಗಿದೆ. 2016 ರ ವೇಳೆಗೆ ತೇಜಸ್ ಮಾರ್ಕ್ 1 ಭಾರತೀಯ ವಾಯುಪಡೆಯ (ಐಎಎಫ್) ಉತ್ಪಾದನೆಯಲ್ಲಿದೆ ಮತ್ತು ನೌಕಾಪಡೆಯು ಭಾರತೀಯ ನೌಕಾಪಡೆಯ (ಐಎನ್) ವಿಮಾನ ಪರೀಕ್ಷೆಗೆ ಒಳಗಾಗುತ್ತಿದೆ.

ಡಬ್ಲ್ಯುಇಎಫ್‌

6.

ಸುದ್ಧಿಯಲ್ಲಿ ಏಕಿದೆ ?ಗೋಮಾಂಸಕ್ಕೆ ಬದಲಾಗಿ ಬದಲಿ ಪ್ರೋಟೀನ್ ಮೂಲಗಳನ್ನು ಬಳಸಿದರೆ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಅಷ್ಟೇ ಅಲ್ಲ, ಹಸಿರುಮನೆ ಅನಿಲ ಪರಿಣಾಮ (ಜಾಗತಿಕ ತಾಪಮಾನ ) ವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಹೇಳಿದೆ.

 • ಆಕ್ಸ್‌ಫರ್ಡ್ ಮಾರ್ಟಿನ್ ಸ್ಕೂಲ್ ನಡೆಸಿದ ಹೊಸ ಸಂಶೋಧನೆ ಪ್ರಕಾರ, ಮಾಂಸ ಹಾಗೂ ಅದರಲ್ಲೂ ವಿಶೇಷವಾಗಿ ಗೋಮಾಂಸಕ್ಕೆ ಬದಲಿ ಪ್ರೋಟೀನ್ ಮೂಲಗಳನ್ನು ಬಳಸಿದರೆ ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಯೋಜನೆಯಾಗಲಿದೆ ಎಂದು ತಿಳಿದುಬಂದಿದೆ.
 • ದಾವೋಸ್‌ನ ಐಷಾರಾಮಿ ಸ್ವಿಸ್‌ ಸ್ಕಿ ರೆಸಾರ್ಟ್‌ನಲ್ಲಿ ಪ್ರತಿ ವರ್ಷ ಜನವರಿಯಲ್ಲಿ ಪ್ರತಿಷ್ಠಿತ ಡಬ್ಲ್ಯುಇಎಫ್‌ ಸಭೆ ನಡೆಯುತ್ತದೆ. ಈ ಬಾರಿಯ ಸಭೆಯಲ್ಲಿ, ಜಾಗತಿಕ ಆಹಾರ ಸಂಬಂಧಿ ಸಾವುಗಳ ಪೈಕಿ ಶೇ 4ರಷ್ಟು ಸಾವುಗಳನ್ನು ಗೋಮಾಂಸ ಸೇವನೆ ತ್ಯಜಿಸುವ ಮೂಲಕ ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಡಲಾಗಿದೆ.

ವಿಶ್ವ ಆರ್ಥಿಕ ವೇದಿಕೆ

 • ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್‌ ಇಕನಾಮಿಕ್‌ ಫೋರಮ್‌-WEF ) ಎಂಬುದು ಜಿನಿವಾ-ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಪ್ರತಿಷ್ಠಾನವಾಗಿದ್ದು, ಸ್ವಿಜರ್‌ಲೆಂಡ್‌‌‌ನ ದಾವೋಸ್‌‌ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ
 • ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತರರಾಷ್ಟ್ರೀಯ ರಾಜಕೀಯ ನಾಯಕರು, ಆಯ್ದ ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ.
 • ಸಭೆಗಳು ಮಾತ್ರವೇ ಅಲ್ಲದೇ, ಸಂಶೋಧನಾ ವರದಿಗಳ ಒಂದು ಸರಣಿಯನ್ನೇ WEF ರೂಪಿಸುತ್ತದೆ ಮತ್ತು ವಲಯ-ಉದ್ದೇಶಿತ ಉಪಕ್ರಮಗಳಲ್ಲಿ ತನ್ನ ಸದಸ್ಯರನ್ನು ತೊಡಗಿಸುತ್ತದೆ.

ಚಂದ್ರನ ಮೇಲೆ ಇಳಿದ ಚೀನಾದ ನೌಕೆ

7.

ಸುದ್ಧಿಯಲ್ಲಿ ಏಕಿದೆ ?ಅಮೆರಿಕಕ್ಕೆ ಸೆಡ್ಡು ಹೊಡೆದು ವಿಶ್ವಾದ್ಯಂತ ಪ್ರಾಬಲ್ಯ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಚೇಂಜ್ ಇ-4 ಯೋಜನೆ ಭಾಗವಾಗಿ ಚಂದ್ರನ ಮೇಲೆ ಗಗನನೌಕೆಯನ್ನು ಯಶಸ್ವಿಯಾಗಿ ಇಳಿಸಿದೆ.

 • ಈಗಾಗಲೇ ಅಮೆರಿಕ ಚಂದ್ರನ ಮೇಲೆ ಮಾನವಸಹಿತ ಗಗನನೌಕೆ ಇಳಿಸಿದೆ. ಆದರೆ ಭೂಮಿಗೆ ಗೋಚರಿಸದ ಚಂದ್ರನ ಗೋಳಾರ್ಧದಲ್ಲಿ ಗಗನನೌಕೆಯನ್ನು ಇಳಿಸಿರುವುದು ಚೀನಾದ ಹಿರಿಮೆ.
 • ಡಿಸೆಂಬರ್ ಆರಂಭದಲ್ಲಿ ಉಡಾಯಿಸಲ್ಪಟ್ಟ ರಾಕೆಟ್ ಮೂರು ದಿನಗಳ ಬಳಿಕ ಚಂದ್ರನ ಕಕ್ಷೆಯನ್ನು ತಲುಪಿತ್ತು. ಆದರೆ ನಿಗದಿಯಂತೆ ಚಂದ್ರನ ಮೇಲಿನ ವೋನ್ ಕರ್ವನ್ ಹೊಂಡದಲ್ಲಿ ಗಗನನೌಕೆ ಇಳಿಸಲು ಚೀನಾ ವಿಜ್ಞಾನಿಗಳಿಗೆ ಒಂದು ವಾರ ಸಮಯ ತಗುಲಿದೆ.
 • ಈ ಹೊಂಡ ಭೂಮಿಗೆ ಗೋಚರಿಸದ ಚಂದ್ರನ ಭಾಗ (ಫಾರ್ ಸೈಡ್ ಅಥವಾ ಡಾರ್ಕ್ ಸೈಡ್)ದಲ್ಲಿ ಇದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫಾರ್ ಸೈಡ್​ನಲ್ಲಿ ಗಗನನೌಕೆ ಇಳಿಸಿದ ಕೀರ್ತಿಗೆ ಚೀನಾ ಪಾತ್ರವಾಗಿದೆ.
 • ಫಾರ್ ಸೈಡ್ ತಾಂತ್ರಿಕ ಸವಾಲು: ಗಗನನೌಕೆಯನ್ನು ಫಾರ್ ಸೈಡ್​ನಲ್ಲಿ ಇಳಿಸಲು ಅಮೆರಿಕ ವಿಜ್ಞಾನಿಗಳು ಚಿಂತಿಸಿದ್ದರಾದರೂ, ನೇರ ಸಂವಹನಕ್ಕೆ ಅವಕಾಶವಿರದ ಕಾರಣ ಹಿಂಜರಿದಿದ್ದರು. ಕಳೆದ ಮೇನಲ್ಲಿ ಚೀನಾ ಬಾಹ್ಯಾಕಾಶ ವಿಜ್ಞಾನಿಗಳು ಸಂವಹನ ಅಡಚಣೆ ನಿವಾರಿಸಲು ರಿಲೇ ಉಪಗ್ರಹವೊಂದನ್ನು ಚಂದ್ರ ಕಕ್ಷೆಗೆ ರವಾನಿಸಿದ್ದರು. ಬಳಿಕ ಚೇಂಜ್ ಇ-4 ಉಡಾವಣೆ ಮಾಡಿದ್ದರು. ಫಾರ್ ಸೈಡ್ ಲ್ಯಾಂಡಿಂಗ್ ಮಾಡಿ ಯಶಸ್ಸು ಸಾಧಿಸಿರುವ ಚೀನಾ ವಿಜ್ಞಾನಿಗಳು ಜಾಗತಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನಿದು ಚೇಂಜ್ ಇ- 4 ?

 • ಚಂದ್ರನ ಮೇಲೆ ಕಾಲಿರಿಸುವ ಉದ್ದೇಶದಿಂದ ಚೀನಾ ಸರ್ಕಾರ 1976ರಲ್ಲಿ ಚೇಂಜ್ ಇ-3 ಯೋಜನೆ ಸಿದ್ಧಗೊಳಿಸಿತ್ತು. ಇದರ ಯಶಸ್ಸಿನ ಎರಡು ವರ್ಷಗಳ ಬಳಿಕ ಭಾರಿ ಹೂಡಿಕೆಯೊಂದಿಗೆ ಚೇಂಜ್ ಇ-4 ಯೋಜನೆಗೆ ಚಾಲನೆ ನೀಡಲಾಯಿತು. ಹಿಂದಿನ ಯೋಜನೆಯಲ್ಲಿನ ಜೇಡ್ ರ್ಯಾಬಿಟ್ ರೋವರ್ ಲ್ಯಾಂಡರ್ ಬಳಸಿಕೊಂಡು ಅಧಿಕ ತೂಕದ ಸಾಧನಗಳನ್ನು ಚಂದ್ರನಲ್ಲಿಗೆ ಹೊತ್ತೊಯ್ಯಲು ವಿಜ್ಞಾನಿಗಳು ಸಿದ್ಧತೆ ನಡೆಸತೊಡಗಿದರು. ಚಂದ್ರನಲ್ಲಿನ ದೇವತೆಯನ್ನು ಚೇಂಜ್ ಇ ಎಂದು ಚೀನಿಯರು ಕರೆಯುತ್ತಾರೆ. ಅದರ ಸೂಚಕವಾಗಿ ಯೋಜನೆಗೆ ಅದೇ ಹೆಸರಿಡಲಾಗಿದೆ.

ಸುದ್ಧಿಯಲ್ಲಿರುವ ವ್ಯಕ್ತಿಗಳು

 • ಗೀತಾ ಗೋಪಿನಾಥ್‌: ಮೈಸೂರು ಮೂಲದ ಗೀತಾ ಗೋಪಿನಾಥ್‌ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್‌) ಮುಖ್ಯ ಆರ್ಥಿಕ ತಜ್ಞೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹುದ್ದೆ ಸ್ವೀಕರಿಸಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಅವರದಾಗಿದೆ.ಐಎಂಎಫ್‌ಗೆ ನೇಮಕವಾಗುವ ಮೊದಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಹಣಕಾಸು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಸಹ ಐಎಂಎಫ್‌ನಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿ ಸೇವೆ ಸಲ್ಲಿಸಿದ್ದರು.
 • ಅಪ್ಸರಾ ರೆಡ್ಡಿ: ಮಾಜಿ ಪತ್ರಕರ್ತೆ, ಮಂಗಳಮುಖಿ ಅಪ್ಸರಾ ರೆಡ್ಡಿ ಅವರನ್ನು ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಬಾನುಲಿಯಲ್ಲಿ ಪತ್ರಕರ್ತೆಯಾಗಿದ್ದ ಅವರು ತನಿಖಾ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದರು.
 • ಅಲೋಕ್ ವರ್ಮಾ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯಲ್ಲಿನ ಆಂತರಿಕ ಕಿತ್ತಾಟಕ್ಕೆ ಸುಪ್ರೀಂಕೋರ್ಟ್ ತಾತ್ಕಾಲಿಕ ತೆರೆ ಎಳೆದಿದ್ದು, ಅಲೋಕ್ ವರ್ಮಾ ರನ್ನು ನಿರ್ದೇಶಕ ಹುದ್ದೆಗೆ ಮರುನೇಮಕ ಮಾಡಿದೆ. ಸಿಬಿಐ ಹಿರಿಯ ಅಧಿಕಾರಿಗಳ ನಡುವಿನ ಕಿತ್ತಾಟದ ಹಿನ್ನೆಲೆಯಲ್ಲಿ ಅ.23ರ ಮಧ್ಯರಾತ್ರಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ, ಕೂಡಲೇ ಸಿಬಿಐ ನಿರ್ದೇಶಕ ಹುದ್ದೆ ವಹಿಸಿಕೊಳ್ಳುವಂತೆ ವರ್ಮಾಗೆ ಸೂಚಿಸಿದೆ. ವರ್ಮಾರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕ್ರಮ ಕಾನೂನು ಬಾಹಿರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆಯ್ಕೆ ಸಮಿತಿ ಹೊರತಾಗಿ ಕೇಂದ್ರ ಸರ್ಕಾರ ಅಥವಾ ಕೇಂದ್ರೀಯ ವಿಚಕ್ಷಣ ದಳಕ್ಕೆ(ಸಿವಿಸಿ) ಈ ರೀತಿಯ ಆದೇಶ ಹೊರಡಿಸುವ ಅಧಿಕಾರವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
 • ವಿಜಯ್​ಮಲ್ಯ: ಉದ್ಯಮಿ ವಿಜಯ್​ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಮುಂಬೈ ನ್ಯಾಯಾಲಯ ಘೋಷಿಸಿದೆ.ಈ ಮೂಲಕ ವಿಜಯ್​ ಮಲ್ಯ, ಮನಿ ಲ್ಯಾಂಡರಿಂಗ್​ ನಿಯಂತ್ರಣಾ ನ್ಯಾಯಾಲಯದ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ 2018ರ ಅನ್ವಯ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿದ್ದಾರೆ.
 • ಯಾರು ವಿತ್ತಾಪರಾಧಿ?
 • ನೂತನ ಕಾಯಿದೆಯ ಪ್ರಕಾರ 100 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಆರ್ಥಿಕ ಅಪರಾಧಗಳಲ್ಲಿ ತೊಡಗಿಸಿಕೊಂಡವರು, ಕೋರ್ಟ್‌ ವಿಚಾರಣೆಗಳಿಂದ ನುಣುಚಿಕೊಳ್ಳಲು ತಲೆ ಮರೆಸಿಕೊಂಡವರು, ಇದೇ ಉದ್ದೇಶಕ್ಕೆ ದೇಶದಿಂದ ಪರಾರಿಯಾದವರು ವಿತ್ತಾಪರಾಧಿಗಳಾಗುತ್ತಾರೆ.
 • ಅರುಣಿಮಾ ಸಿನ್ಹಾ: ಕೃತಕ ಕಾಲಿನ ಮೂಲಕ ಅತಿ ಅಪಾಯಕಾರಿ, ಹಿಮಚ್ಛಾದಿತ ಹಾಗೂ ಅಂಟಾರ್ಟಿಕಾದ ಅತಿ ಎತ್ತರದ ಶಿಖರ ಏರಿದ ಮಹಿಳೆ ಎಂಬ ಖ್ಯಾತಿಗೆ ಭಾರತದ ಪರ್ವತಾರೋಹಿ ಅರುಣಿಮಾ ಸಿನ್ಹಾ ಪಾತ್ರರಾಗಿದ್ದಾರೆ. ವಿಶ್ವದ ಎಲ್ಲ ದೊಡ್ಡ ಶಿಖರಗಳನ್ನು ಏರಿರುವ ಆರುಣಿಮಾ, ಅಂಟಾರ್ಟಿಕಾ ಮೌಂಟ್ ವಿನ್ಸನ್ ಏರುವ ಕನಸು ಹೊಂದಿದ್ದರು. 5 ವರ್ಷಗಳ ಸತತ ತಾಲೀಮು ನಡೆಸಿದ ಬಳಿಕ ಈಗ ಅವರ ಕನಸು ನನಸಾಗಿದೆ.
 • ವಿಕ್ರಂ ಮಿಶ್ರಿ: ಭಾರತದ ನೂತನ ಚೀನಾ ರಾಯಭಾರಿಯಾಗಿ ವಿಕ್ರಂ ಮಿಶ್ರಿ ಅವರು ನೇಮಕಗೊಂಡಿದ್ದಾರೆ .ವಿಕ್ರಂ ಮಿಶ್ರಿ1989ನೇ ಬ್ಯಾಚ್​ನ ಐಎಫ್​ಎಸ್​ ಅಧಿಕಾರಿ. ಈ ಹಿಂದೆ ರಾಯಭಾರಿಯಾಗಿದ್ದ ಗೌತಮ್​ ಬಾಂಬಾವಾಲೆ ನವೆಂಬರ್​ನಲ್ಲಿ ನಿವೃತ್ತರಾಗಿದ್ದರು.ಮಿಶ್ರಿ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯಕಚೇರಿಗಳಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಪ್ರಧಾನಿ ಕಚೇರಿಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.
 • ಜಿಮ್​ಯಾಂಗ್ ಕಿಮ್: ಜಿಮ್ ಯಾಂಗ್ ಕಿಮ್ , ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಯಿಂದ ಮುಂದಿನ ತಿಂಗಳು ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಕಿಮ್ ಅಧಿಕಾರ ಸ್ವೀಕರಿಸಿ ಫೆ. 1ಕ್ಕೆ 19 ತಿಂಗಳು ಆಗಲಿದೆ. ಖಾಸಗಿ ಸಂಸ್ಥೆಯನ್ನು ಸೇರ್ಪಡೆಯಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮೂಲಸೌಕರ್ಯ ವಲಯದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತು ನೀಡಲು ಕಿಮ್ ಮುಂದಾಗಿದ್ದಾರೆ. ಆಡಳಿತ ಅವಧಿ ಮುಗಿಯಲು ಮೂರು ವರ್ಷ ಬಾಕಿಯಿರುವಾಗಲೇ ಅವರು ಈ ನಿರ್ಧಾರ ಘೋಷಿಸಿದ್ದಾರೆ.
Related Posts
“06 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಐಬಿಪಿಎಸ್‌ನಲ್ಲಿ ಪ್ರಾದೇಶಿಕ ನೇಮಕ ಪದ್ಧತಿ ಸುದ್ಧಿಯಲ್ಲಿ ಏಕಿದೆ ?ಐಬಿಪಿಎಸ್‌ನ ಕೇಂದ್ರೀಕೃತ ಪದ್ಧತಿ ರದ್ದುಪಡಿಸಿ ಹಿಂದಿನ ಪ್ರಾದೇಶಿಕ ನೇಮಕ ಪದ್ಧತಿ ಜಾರಿ, ಪ್ರಾದೇಶಿಕ ಭಾಷೆಗಳಿಗೆ ಒತ್ತು ಸೇರಿದಂತೆ ನಾನಾ ಬೇಡಿಕೆಯನ್ನು ಕೇಂದ್ರದ ಗಮನ ಸೆಳೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಸಾಹಿತಿಗಳ ನಿಯೋಗ ಕೇಂದ್ರ ...
READ MORE
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕೃಷಿ ಕಲ್ಯಾಣ ಅಭಿಯಾನ ಸುದ್ದಿಯಲ್ಲಿ ಏಕಿದೆ? ರೈತರ ಆದಾಯ ದುಪ್ಪಟ್ಟು ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಗ್ರಾಮಗಳಲ್ಲಿ ಆಯ್ಕೆಯಾಗುವ ರೈತರಿಗೆ ಸೂಕ್ತ ನೆರವು ನೀಡುವ ಕೃಷಿ ಕಲ್ಯಾಣ್ ಅಭಿಯಾನ ಶೀಘ್ರ ಆರಂಭವಾಗಲಿದೆ. ಮುಂದಿನ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಜೂನ್ ...
READ MORE
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ...
READ MORE
“6th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಜನತಾ ದರ್ಶನ’ ಸುದ್ಧಿಯಲ್ಲಿ ಏಕಿದೆ?ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಜನರು ನೇರವಾಗಿ ಬರುವಂತಿಲ್ಲ. ಜಿಲ್ಲೆಯ ಮಟ್ಟದಲ್ಲಿ ಪರಿಹಾರ ಸಿಗದೇ ಇದ್ದರೆ ಮಾತ್ರ ಬರಬೇಕೆಂಬ ನಿಯಮಗಳನ್ನು ರೂಪಿಸಲಾಗಿದೆ. ಏಕೆ ಈ ನಿರ್ಧಾರ ? ಸಿಎಂ ಜನತಾ ದರ್ಶನಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಆಗಮಿಸುವುದಾದರೆ ಆಡಳಿತ ಯಂತ್ರ, ಅಧಿಕಾರಿ ವರ್ಗ ...
READ MORE
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾಣಿಜ್ಯ ಜಾಹೀರಾತು ಪ್ರದರ್ಶನ ಸುದ್ಧಿಯಲ್ಲಿ ಏಕಿದೆ ?ಸರಕಾರಿ ಕಾರ್ಯಕ್ರಮಗಳ ಪ್ರಚಾರ ಹೊರತುಪಡಿಸಿ, ಇತರೆ ಎಲ್ಲ ವಾಣಿಜ್ಯ ಜಾಹೀರಾತು ಪ್ರದರ್ಶನಗಳನ್ನು ಶಾಶ್ವತವಾಗಿ ನಿಷೇಧಿಸುವ ಸಂಬಂಧ ಬಿಬಿಎಂಪಿಯು ನೂತನ ಜಾಹೀರಾತು ನೀತಿ ಮತ್ತು ಬೈಲಾ ಸಿದ್ಧಪಡಿಸಿದೆ. ಇದು ಒಂದೆರಡು ತಿಂಗಳಲ್ಲೇ ಜಾರಿಗೆ ಬರಲಿದೆ. ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಉತ್ಪನ್ನಗಳ ...
READ MORE
16th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಸ್ವಚ್ಛ ಗ್ರಾಮ ಸಮೀಕ್ಷೆ ಸುದ್ಧಿಯಲ್ಲಿ ಏಕಿದೆ? ನಗರ ಪ್ರದೇಶಗಳಲ್ಲಿ ಸ್ವಚ್ಛ ಸರ್ವೆಕ್ಷಣೆ ನಡೆಸಿದ್ದ ಕೇಂದ್ರ ಸರ್ಕಾರ ಗ್ರಾಮೀಣ ಭಾರತದಲ್ಲಿಯೂ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ದೇಶದ ಎಲ್ಲ ಜಿಲ್ಲೆಗಳಲ್ಲಿ ಸ್ವತಂತ್ರ ಸಂಸ್ಥೆಯಿಂದ ಆಗಸ್ಟ್ 1ರಿಂದ 31ರವರೆಗೆ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಯ ಫಲಿತಾಂಶವನ್ನು ಅಕ್ಟೋಬರ್ 2ರಂದು ...
READ MORE
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್ ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ. ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ...
READ MORE
17th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ16th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಹಿರಿಯ ನಾಗರಿಕರ ಜೀವನನಿರ್ವಹಣೆ ವಿಶೇಷ ಕಾಯ್ದೆ ಸುದ್ಧಿಯಲ್ಲಿ ಏಕಿದೆ? ಮಕ್ಕಳು ಕಿರುಕುಳ ನೀಡಿದರೆ ಅಥವಾ ಆರೈಕೆಯನ್ನು ಕಡೆಗಣಿಸಿದರೆ ಉಡುಗೊರೆಯಾಗಿ ನೀಡಿದ್ದ ಆಸ್ತಿಯ ಭಾಗವನ್ನು ವೃದ್ಧ ಪಾಲಕರು ಹಿಂಪಡೆಯಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ರಂಜಿತ್ ಮೊರೆ ಮತ್ತು ಅನುಜಾ ...
READ MORE
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬರಪೀಡಿತ ಜಿಲ್ಲೆ  ಸುದ್ದಿಯಲ್ಲಿ ಏಕಿದೆ? ಇನ್ನು ಮುಂದೆ ಯಾವುದೇ ತಾಲೂಕಿನ ಶೇ.75 ರಷ್ಟು ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.50ರಷ್ಟು ತೇವಾಂಶವಿಲ್ಲದೆ ಶೇ.33 ರಷ್ಟು ಬೆಳೆ ನಾಶವಾದರೂ ಆ ಜಿಲ್ಲೆಯನ್ನೂ ಬರಪೀಡಿತ ಎಂದು ಘೋಷಿಸಬಹುದು . ಹಿನ್ನಲೆ ಬರ ಘೋಷಣೆಗೆ ಸಂಬಂಧಿಸಿದ ಕಠಿಣ ಮಾನದಂಡವನ್ನು ಕೇಂದ್ರ ಸರಕಾರ ...
READ MORE
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
“06 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“6th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
16th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
17th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ16th ಜುಲೈ 2018
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *